ಡಾ.ಬಿ.ಆರ್. ಅಂಬೇಡ್ಕರ್‌ ಜನ್ಮದಿನ: ಮಹಾನಾಯಕನ 17 ನುಡಿಮುತ್ತುಗಳು - Vistara News

ಕಲೆ/ಸಾಹಿತ್ಯ

ಡಾ.ಬಿ.ಆರ್. ಅಂಬೇಡ್ಕರ್‌ ಜನ್ಮದಿನ: ಮಹಾನಾಯಕನ 17 ನುಡಿಮುತ್ತುಗಳು

ಸಂವಿಧಾನ ನಿರ್ಮಾತೃ ಡಾ.ಬಿ.ಆರ್. ಅಂಬೇಡ್ಕರ್‌ ಅವರ ಜಯಂತಿ ಇಂದು (ಏ.14). ಸ್ವತಂತ್ರ ಆಧುನಿಕ ಭಾರತದ ಶಿಲ್ಪಿಗಳಲ್ಲಿ ಒಬ್ಬರಾದ ಅವರ ಮನನೀಯ ಮಾತುಗಳು ಇಲ್ಲಿವೆ.

VISTARANEWS.COM


on

Dr.B.R.Ambedkar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

1. ಧರ್ಮ ಇರಬೇಕಾದುದು ತತ್ವವಾಗಿ, ಹೊರತು ನಿಯಮಾವಳಿಯಾಗಿ ಅಲ್ಲ. ಅದು ಕಡ್ಡಾಯ ನಿಯಮಗಳಾಗಿ ಮಾರ್ಪಾಡಾದ ಕೂಡಲೇ ಧರ್ಮ ಎನಿಸುವ ಅರ್ಹತೆ ಕಳೆದುಕೊಳ್ಳುತ್ತದೆ. ನೈಜ ಧರ್ಮದ ಆಂತರಂಗಿಕ ಸ್ಫೂರ್ತಿಯನ್ನೇ ಕಳೆದುಕೊಳ್ಳುತ್ತದೆ.


2. ಸಾಗರದಲ್ಲಿ ಒಂದಾಗಿ ಅಸ್ತಿತ್ವ ಕಳೆದುಕೊಳ್ಳುವ ಹನಿಯಂತಲ್ಲ ಮನುಷ್ಯ. ಆತ ಸಮಾಜದಲ್ಲಿ ಬೆರೆತಿದ್ದರೂ ತನ್ನ ಅನನ್ಯತೆ ಕಾಪಾಡಿಕೊಳ್ಳುತ್ತಾನೆ. ಆತ ಸಮಾಜದ ಬೆಳವಣಿಗೆಗಾಗಿ ಹುಟ್ಟುವುದಲ್ಲ, ತನ್ನ ಬೆಳವಣಿಗೆಗಾಗಿ.


3. ಪ್ರಜಾಪ್ರಭುತ್ವ ಎಂದರೆ ಕೇವಲ ಆಡಳಿತದ ವಿಧಾನವಲ್ಲ. ಅದೊಂದು ಜತೆಯಾಗಿ ಬಾಳುವ ವಿಧಾನ, ಸಮಗ್ರ ಬದುಕಿನ ಅನುಭವ. ಜೊತೆಯಲ್ಲಿರುವ ಮನುಷ್ಯರಿಗೆ ಘನತೆ, ಗೌರವ ನೀಡುವ ಕ್ರಮ.


4. ನಾನು ಒಂದು ಸಮುದಾಯದ ಬೆಳವಣಿಗೆಯನ್ನು ಅಳೆಯುವುದು ಅಲ್ಲಿರುವ ಮಹಿಳೆಯರು ಎಷ್ಟು ಪ್ರಮಾಣದ ಪ್ರಗತಿ ಸಾಧಿಸಿದ್ದಾರೆ ಎಂಬುದರ ಮೇಲೆ.


5. ನಾವು ನಮ್ಮ ಹಕ್ಕುಗಳಿಗಾಗಿ ಹೋರಾಡಲೇಬೇಕು. ಅದರಿಂದಲೇ ನಮಗೆ ಅಧಿಕಾರ, ಘನತೆ ದೊರೆಯುತ್ತದೆ. ಹೋರಾಡದವನಿಗೆ ಏನೂ ದೊರೆಯುವುದಿಲ್ಲ.


6. ಮನುಷ್ಯರು ಸಾವಿಗೆ ಈಡಾಗುವವರು. ಚಿಂತನೆಗಳೂ ಹಾಗೆಯೇ. ಸಸಿಗಳಿಗೆ ನೀರು ಎರೆಯುವಂತೆ ಚಿಂತನೆಗಳಿಗೂ ಬೆಳೆಯಲು ಪೋಷಣೆ ಬೇಕು.


7. ಸಂಪೂರ್ಣ ಸಮಾನತೆ ಎಂಬುದು ಕಲ್ಪನೆಯೇ ಇರಬಹುದು. ಆದರೆ ಅದನ್ನು ಆಡಳಿತ ತತ್ವವಾಗಿ ನಾವು ಅಂಗೀಕರಿಸಲೇಬೇಕು.


8. ಎಲ್ಲರೂ ಮೊತ್ತಮೊದಲಿಗೆ ಭಾರತೀಯರಾಗಿರಬೇಕು, ಕೊನೆಗೂ ಭಾರತೀಯರಾಗಿರಬೇಕು, ಭಾರತೀಯರಲ್ಲದೆ ಇನ್ನೇನೂ ಆಗಿರಬೇಕಿಲ್ಲ.


9. ವಿಜ್ಞಾನದ ಕ್ಷೇತ್ರದಲ್ಲಿ ಭಾವನೆಗಳನ್ನು ದೂರವಿಡಬೇಕು. ಅಲ್ಲಿ ವಸ್ತುನಿಷ್ಠ ನೆಲೆಯಿಂದ ಸಂಗತಿಗಳನ್ನು ಪರಾಮರ್ಶಿಸಬೇಕು.


10. ಸಾಮಾಜಿಕ ಸ್ವಾತಂತ್ರ್ಯವನ್ನು ಪಡೆಯದೇ ಹೋದರೆ, ನಾವು ಕಾನೂನಾತ್ಮಕವಾಗಿ ಎಂಥ ಸ್ವಾತಂತ್ರ್ಯವನ್ನು ಪಡೆದರೂ ಉಪಯೋಗವಿಲ್ಲ.


11. ಸಂವಿಧಾನದ ದುರುಪಯೋಗ ಆಗುವಂತಿದೆ ಎನಿಸಿದರೆ, ಅದನ್ನು ಸುಟ್ಟುಹಾಕುವಲ್ಲಿ ನಾನೇ ಮೊದಲಿಗನಾಗಿರುತ್ತೇನೆ.


12. ಇತಿಹಾಸವನ್ನು ಮರೆಯುವವರು ಇತಿಹಾಸವನ್ನು ಸೃಷ್ಟಿಸಲಾರರು.


13. ವ್ಯಕ್ತಿಯ ಜೀವನ ಸುದೀರ್ಘವಾಗಿರಬೇಕಿಲ್ಲ. ಆದರೆ ಅತ್ಯುತ್ತಮವಾಗಿರಬೇಕು.


14. ಸ್ವಾತಂತ್ರ್ಯ, ಸಮಾನತೆ ಹಾಗೂ ಸಾಹೋದರ್ಯವನ್ನು ಪ್ರತಿಪದಿಸುವ ಧರ್ಮವನ್ನು ನಾನು ಇಷ್ಟಪಡುತ್ತೇನೆ.


15. ಮನಸ್ಸಿನ ಸಂಸ್ಕೃತಿಯ ಉನ್ನತಿಯೇ ಮಾನವನ ಅಸ್ತಿತ್ವದ ಪರಮ ಗುರಿಯಾಗಿರಬೇಕು.


16. ಅಸ್ಪೃಶ್ಯತೆಯು ಮನುಷ್ಯರನ್ನು ಬಾಧಿಸಬಹುದಾದ ಅತೀ ಕೆಟ್ಟ ಕಾಯಿಲೆ.


17. ಧರ್ಮ ಹಾಗೂ ಜೀತಗಳು ಜೊತೆಯಾಗಿ ಇರಲಾರವು.

ಹೆಚ್ಚಿನ ಓದಿಗಾಗಿ: ಇದು ಮನುಷ್ಯರನ್ನು ಓದೋ ‌ಹ್ಯೂಮನ್‌ ಲೈಬ್ರರಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: “ನೀವು ಭಾರತೀಯರೋ, ರಾಷ್ಟ್ರೀಯರೋ?”

ನನ್ನ ದೇಶ ನನ್ನ ದನಿ ಅಂಕಣ: ಇದೆಲ್ಲಾ ನಡೆದು ನಲವತ್ತೇಳು ವರ್ಷಗಳೇ ಉರುಳಿವೆ. ಕರಾಳ ತುರ್ತುಪರಿಸ್ಥಿತಿಯ ನೂರೆಂಟು ನೆನಪುಗಳು ಕಣ್ಮುಂದೆ ಸುತ್ತುತ್ತವೆ. ಇಡೀ ದೇಶದಲ್ಲಿ ಈ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಒಬ್ಬನೇ ಒಬ್ಬ MP, MLA, MLC ಸತ್ಯಾಗ್ರಹ ಮಾಡಲಿಲ್ಲ, ಪ್ರತಿಭಟಿಸಲಿಲ್ಲ, ಬಂಧನಕ್ಕೆ ಒಳಗಾಗಲಿಲ್ಲ. ನಾವೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆವು, ಬ್ರಿಟಿಷರಿಂದ ನಾವೇ ಸ್ವಾತಂತ್ರ್ಯವನ್ನು ಪಡೆದೆವು, ಎಂದು ದಶಕಗಳಿಂದ ಸುಳ್ಳು ಹೇಳಿಕೊಂಡೇ ಬಂದ ಕಾಂಗ್ರೆಸ್ಸಿನವರಿಗೆ ಇದು ಪ್ರಜಾದ್ರೋಹ, ಇದು ಸ್ವಾತಂತ್ರ್ಯಹರಣ, ಈ ತುರ್ತುಪರಿಸ್ಥಿತಿಯು ಅನ್ಯಾಯದ ಪರಮಾವಧಿ ಎಂದು ಅನ್ನಿಸಲೇ ಇಲ್ಲ!

VISTARANEWS.COM


on

ನನ್ನ ದೇಶ ನನ್ನ ದನಿ ಅಂಕಣ indira gandhi
Koo

ಇಂದು ತುರ್ತುಪರಿಸ್ಥಿತಿಯ ಹೇರಿಕೆಯ ʼಚಿನ್ನದ “ಹಬ್ಬʼ !

ajjampura manjunath ನನ್ನ ದೇಶ ನನ್ನ ದನಿ

ನನ್ನ ದೇಶ ನನ್ನ ದನಿ ಅಂಕಣ: ಅವು ತುರ್ತುಪರಿಸ್ಥಿತಿಯ (internal Emergency) ದಿನಗಳು. ತಮ್ಮ ಅಧಿಕಾರ ಉಳಿಸಿಕೊಳ್ಳುವ ಏಕೈಕ ದುರುದ್ದೇಶದಿಂದ ಇಂದಿರಾ ಗಾಂಧಿಯವರು (Indira Gandhi) ದೇಶದಾದ್ಯಂತ ಆಂತರಿಕ ತುರ್ತುಪರಿಸ್ಥಿತಿ ಹೇರಿದ್ದರು. ಎಲ್ಲ ಮಾಧ್ಯಮದವರು, ಓರಾಟಗಾರರು, ಬುದ್ಧಿಜೀವಿಗಳು, ಬಹುತೇಕ ವಿರೋಧ ಪಕ್ಷಗಳವರು ಶರಣಾಗತರಾಗಿಬಿಟ್ಟಿದ್ದರು, ಅಷ್ಟೇ ಅಲ್ಲ, ಮನೆಯಲ್ಲಿ ಮಂಚದ ಅಡಿಯಲ್ಲಿ ಅಡಗಿಕೊಂಡುಬಿಟ್ಟಿದ್ದರು. ತುರ್ತುಪರಿಸ್ಥಿತಿಯನ್ನು ರಾಷ್ಟೀಯ ಸ್ವಯಂಸೇವಕ ಸಂಘ (RSS) ಮತ್ತು ಅದರ ಪರಿವಾರ ಸಂಘಟನೆಗಳು ಮಾತ್ರವೇ ವಿರೋಧಿಸುತ್ತಿದ್ದುದರಿಂದ ಇಂದಿರಾ ಗಾಂಧಿಯವರು ಆರೆಸ್ಸೆಸ್ ಎಂದರೆ ಸಿಡಿಮಿಡಿಗೊಳ್ಳುತ್ತಿದ್ದರು.

1975ರ ಆ ವರ್ಷದ ಗಾಂಧೀ ಜಯಂತಿ (Gandhi Jayanthi) ಒಂದು ವಿಶೇಷ ಸಂದೇಶ ಹೊತ್ತು ತಂದಿತು. ಆದರೆ ಆ ಸಂದೇಶ, ಸರಕಾರದ ಕಾರ್ಯಕ್ರಮಗಳ ಭಾಗವಾಗಿ ಮೂಡಿಬಂದಿರಲಿಲ್ಲ. ಆ ದಿನಗಳಲ್ಲಿ ಗಾಂಧೀಜಯಂತಿ ಆಚರಿಸಿದವರು ಸಂಘದ ಭೂಗತ ಕಾರ್ಯಕರ್ತರು. ಎದೆಯ ಮೇಲೆ ಧರಿಸಲು ಗಾಂಧೀ ಬಿಲ್ಲೆಗಳು, ಗೋಡೆಗಳನ್ನು ಅಲಂಕರಿಸಲು ಗಾಂಧೀ ಭಿತ್ತಿಚಿತ್ರಗಳು. ಎರಡರಲ್ಲೂ ಗಾಂಧೀ ಚಿತ್ರದ ಕೆಳಗೆ “ಅಸತ್ಯ, ಅನ್ಯಾಯ, ದಬ್ಬಾಳಿಕೆಗಳಿಗೆ ತಲೆಬಾಗುವುದು ಹೇಡಿತನ” ಎನ್ನುವ ಗಾಂಧೀ ಉಕ್ತಿ. ಆದರೆ ಅಂದಿನ ಇಂದಿರಾ – ದೇವರಾಜ ಅರಸು ಅವರ ಕಾಂಗ್ರೆಸ್ ಸರ್ಕಾರಗಳಿಗೆ ಗಾಂಧಿಯ ಚಿತ್ರ, ಗಾಂಧಿಯ ಉಕ್ತಿ, ಗಾಂಧಿಯ ನೆನಪು ಎಲ್ಲಾ ನಿಷಿದ್ಧವಾಗಿತ್ತು.

ಗಾಂಧೀ ಭಿತ್ತಿಪತ್ರ ಅಂಟಿಸುತ್ತಿದ್ದ ಹಲವಾರು ಜನರನ್ನು ಪೊಲೀಸರು ಬಂಧಿಸಿದರು. ಅಹಿಂಸೆ, ಅಹಿಂಸೆ ಎಂದವರ ಚಿತ್ರ ಹಿಡಿದಿದ್ದಕ್ಕೆ ಹೊಡೆದು ಬಡಿದು ಬಂಧಿಸಿ, ಅವರ ಮೇಲೆ ಮೊಕದ್ದಮೆ ಹೂಡಲಾಯಿತು. ಆಪಾದಿತರನ್ನು ಪೊಲೀಸರು ನ್ಯಾಯಾಧೀಶರ ಮುಂದೆ ತಂದು ನಿಲ್ಲಿಸಿದಾಗ, ನ್ಯಾಯಾಧೀಶರು ತಮ್ಮ ಕಣ್ಣು – ಕಿವಿಗಳನ್ನು ನಂಬದಾದರು. “ಏನು, ಈ ದೇಶದಲ್ಲಿ ಗಾಂಧೀ ಚಿತ್ರ ಅಂಟಿಸುವುದು ಕ್ರಿಮಿನಲ್ ಅಪರಾಧವಾಯಿತೇ?” ಎಂದು ಪ್ರಶ್ನಿಸಿದರು. ಇದಕ್ಕೆ ಪೊಲೀಸಿನವರು ಏನು ಹೇಳಿಯಾರು! “ಇವರೆಲ್ಲಾ ಆರೆಸ್ಸೆಸ್ ಕಾರ್ಯಕರ್ತರು” ಎಂಬ ನೆಪ ಹೇಳಿದರು. “ಇರಬಹುದು, ಆದರೆ ಇವರು ಮಾಡಿದ ಅಪರಾಧವೇನು?” ಎಂದ ನ್ಯಾಯಾಧೀಶರ ಪ್ರಶ್ನೆಗಳಿಗೆ ಪೊಲೀಸರು ನಿರುತ್ತರರಾದರು. ನ್ಯಾಯಾಧೀಶರು (ಕೆಲವೆಡೆ) ಪೊಲೀಸರಿಗೆ ಛೀಮಾರಿ ಹಾಕಿ ಬಂಧಿತರನ್ನು ಬಿಡುಗಡೆ ಮಾಡಿದರು.

ಹಿಂದೆ ಉಪ್ಪಿನ ಸತ್ಯಾಗ್ರಹದಲ್ಲಿ, ಭಾರತ್ ಛೋಡೋ ಚಳವಳಿಯಲ್ಲಿ ಭಾಗವಹಿಸಿ ‘ವಂದೇ ಮಾತರಂ’, ‘ಮಹಾತ್ಮಾ ಗಾಂಧೀ ಕೀ ಜೈ’, ‘ಬೋಲೋ ಭಾರತ್ ಮಾತಾ ಕೀ ಜೈ’ ಎಂದು ಘೋಷಿಸುತ್ತಿದ್ದವರ ಮೇಲೆ ಬ್ರಿಟಿಷ್ ಪೊಲೀಸರ ಲಾಠಿಯೇಟು, ಬೂಟಿನೇಟು ಬೀಳುತ್ತಿತ್ತು. ‘ಸ್ವಾತಂತ್ರ್ಯ’ ಬಂದ ಮೇಲೂ ಹಾಗೆ ಘೋಷಣೆ ಕೂಗಿದವರ ಮೇಲೆ, ಕಾಂಗ್ರೆಸ್ ಸರಕಾರದ ಪೊಲೀಸರ ಲಾಠಿಯೇಟು ಬಿದ್ದುದು, ಬರಿಯ ವಿಸ್ಮಯದ – ವಿಷಾದಭಾವದ ಮಾತಲ್ಲ. ಸ್ವಾತಂತ್ರ್ಯದ ಪರಿಕಲ್ಪನೆಯನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳದೆಯೇ, ಕಾಂಗ್ರೆಸ್ಸಿನಂತಹ ಪಕ್ಷಗಳನ್ನು ಬೆಂಬಲಿಸಿ ಮತ ಹಾಕುವುದರ ದುಷ್ಪರಿಣಾಮಗಳ ಅಂತಿಮ ಹಂತವಿದು.

1975ರ ನವೆಂಬರ್ 14ರಿಂದ ದೇಶಾದ್ಯಂತ ಪ್ರತಿಭಟನೆಯನ್ನು ಆರೆಸ್ಸೆಸ್ ಪರಿವಾರ ಸಂಘಟನೆಗಳು ಹಮ್ಮಿಕೊಂಡಿದ್ದವು. ಬಹುಪಾಲು ರಾಜಕಾರಣಿಗಳು, ನಾಯಕರು ಸೆರೆಮನೆಯಲ್ಲಿದ್ದರು. ಪ್ರತಿಭಟನೆಯನ್ನು ವಿಫಲಗೊಳಿಸಲು ಅಂದಿನ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆಯ ಬಂಧನಗಳಿಗೆ (Preventive Arrests) ಆಜ್ಞೆ ಮಾಡಿತ್ತು. ಆ ಕಾರಣಕ್ಕೆ ನಾವೆಲ್ಲಾ ಬಂಧನಕ್ಕೆ ಒಳಗಾದುದು ನವೆಂಬರ್ 13ರಂದು. ಪೊಲೀಸರು “ನೀವು ಭಾರತೀಯರೋ ರಾಷ್ಟ್ರೀಯರೋ?” ಎಂದು ಪ್ರಶ್ನೆ ಹಾಕಿದಾಗ ನಾನೂ ನನ್ನ ಉಳಿದ ಸ್ವಯಂಸೇವಕ ಬಂಧುಗಳೂ ಕಕ್ಕಾಬಿಕ್ಕಿಯಾದೆವು. ನಮ್ಮ ಮುಂದೆ PSR (Prisoners’ Search Register) ಹರಡಿಕೊಂಡಿತ್ತು. ಏನು ಹೇಳಬೇಕೆಂಬುದೇ ತಿಳಿಯಲಿಲ್ಲ. ಮುಗ್ಧತೆಯಿಂದ “ನಾವೆಲ್ಲಾ ಭಾರತೀಯರೂ ಹೌದು, ರಾಷ್ಟ್ರೀಯರೂ ಹೌದು” ಎಂದೆವು. “ಎರಡರಲ್ಲಿ ಒಂದು ಹೇಳ್ರೀ” ಎಂದು ಅವರು ಅಬ್ಬರಿಸಿದಾಗ ಇನ್ನಷ್ಟು ಗೊಂದಲ. ಕೊನೆಗೆ ಆ ಪ್ರಶ್ನೆ ನಾವು ರಾಷ್ಟೀಯ ಸ್ವಯಂಸೇವಕ ಸಂಘಕ್ಕೆ ಸಂಬಂಧಿಸಿದವರೋ, ಭಾರತೀಯ ಜನಸಂಘಕ್ಕೆ ಸಂಬಂಧಿಸಿದವರೋ ಎಂಬುದಾಗಿತ್ತು ಎಂದು ತಿಳಿದಾಗ, ಗೊಂದಲದಿಂದ ಪರಿಹಾರ. ನಾವೆಲ್ಲಾ ಒಕ್ಕೊರಲಿನಿಂದ “ನಾವು ರಾಷ್ಟೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು” ಎಂದೆವು. ಅಂದಿನ ದಿನಮಾನಗಳಲ್ಲಿ ರಾಷ್ಟೀಯ ಸ್ವಯಂಸೇವಕ ಸಂಘದ ಹೆಸರನ್ನು ಸರಿಯಾಗಿ ಉಚ್ಚರಿಸಲು, ಉಲ್ಲೇಖಿಸಲು ಬಹಳ ಜನರಿಗೆ ಬರುತ್ತಿರಲಿಲ್ಲ (ಕೆಲವರಿಗೆ ಈಗಲೂ ಗೊಂದಲ!).

ಇದೆಲ್ಲಾ ನಡೆದು ನಲವತ್ತೇಳು ವರ್ಷಗಳೇ ಉರುಳಿವೆ. ಕರಾಳ ತುರ್ತುಪರಿಸ್ಥಿತಿಯ ನೂರೆಂಟು ನೆನಪುಗಳು ಕಣ್ಮುಂದೆ ಸುತ್ತುತ್ತವೆ. ಇಡೀ ದೇಶದಲ್ಲಿ ಈ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಒಬ್ಬನೇ ಒಬ್ಬ MP, MLA, MLC ಸತ್ಯಾಗ್ರಹ ಮಾಡಲಿಲ್ಲ, ಪ್ರತಿಭಟಿಸಲಿಲ್ಲ, ಬಂಧನಕ್ಕೆ ಒಳಗಾಗಲಿಲ್ಲ ಎಂಬುದು ಇಂದಿಗೂ ಪ್ರಶ್ನೆಯಾಗಿ ಕಾಡುತ್ತದೆ. ಎಂತಹ ಪಕ್ಷವಿದು. ನಾವೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆವು, ಬ್ರಿಟಿಷರಿಂದ ನಾವೇ ಸ್ವಾತಂತ್ರ್ಯವನ್ನು ಪಡೆದೆವು, ಎಂದು ದಶಕಗಳಿಂದ ಸುಳ್ಳು ಹೇಳಿಕೊಂಡೇ ಬಂದ ಕಾಂಗ್ರೆಸ್ಸಿನವರಿಗೆ ಇದು ಪ್ರಜಾದ್ರೋಹ, ಇದು ಸ್ವಾತಂತ್ರ್ಯಹರಣ, ಈ ತುರ್ತುಪರಿಸ್ಥಿತಿಯು ಅನ್ಯಾಯದ ಪರಮಾವಧಿ ಎಂದು ಅನ್ನಿಸಲೇ ಇಲ್ಲ! ಕಾಂಗ್ರೆಸ್ಸಿನ ಒಬ್ಬನೇ ಒಬ್ಬ MP ,MLA, MLC ತನ್ನ ಸ್ಥಾನಕ್ಕೆ ರಾಜೀನಾಮೆ ಕೊಡಲೇ ಇಲ್ಲ. ಕಾಸು ಮಾಡಿಕೊಳ್ಳುವ ಧಂಧೆಯನ್ನು ಎಲ್ಲ ಕಾಂಗ್ರೆಸ್ಸಿಗರೂ ಇನ್ನಷ್ಟು ನಿರಾಳವಾಗಿ ಮುಂದುವರಿಸಿಕೊಂಡುಹೋದರು. ಕಳೆದ ಏಳೆಂಟು ದಶಕಗಳ ಭಾರತೀಯ ಇತಿಹಾಸವನ್ನು ಅವಲೋಕಿಸಿದರೆ ಈ ಕಾಂಗ್ರೆಸ್ ಎನ್ನುವುದು ಕೇವಲ ಒಂದು ರಾಜಕೀಯ ಪಕ್ಷವಾಗಿರದೆ, ದೇಶಕ್ಕೆ ಅಂಟಿದ ಒಂದು ಶಾಪ, ಒಂದು ರೋಗ ಎಂಬುದು ಖಚಿತವಾಗುತ್ತದೆ.

ಗಾಂಧೀಜಿಯವರ ಕಾರ್ಯದರ್ಶಿಯಾಗಿದ್ದ ಪ್ಯಾರೇಲಾಲರು, ‘Mahatma Gandhi : The Last Phase’ ಎನ್ನುವ ಬೃಹತ್ ಗ್ರಂಥ ರಚಿಸಿದ್ದಾರೆ. ಅದನ್ನು ಗಾಂಧೀವಾದಿ ಕೆ.ವಿ.ಶಂಕರಗೌಡರು ‘ಮಹಾತ್ಮಾಗಾಂಧಿ: ಅಂತಿಮ ಹಂತ’ ಎಂದು ಅನುವಾದಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯವು ಹೊರತಂದಿರುವ ಈ ಸಂಪುಟಗಳು ಓದಲೇಬೇಕಾದ ಅಪೂರ್ವ ಮಾಹಿತಿಗಳನ್ನು ದಾಖಲೆಗಳನ್ನು ಸಂಗತಿಗಳನ್ನು ಒಳಗೊಂಡಿದೆ.

“ವಿಧಾನ ಪರಿಷತ್ತು ಮತ್ತು ವಿಧಾನಸಭೆಯ ಸದಸ್ಯರನೇಕರು, ಗಾಳಿ ಬಂದಾಗ ತೂರಿಕೋ ಎನ್ನುವ ರೀತಿಯಲ್ಲಿ ಹಣ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್‍ನಲ್ಲಿ ತಲೆದೋರಿರುವ ಗುಂಪುಗಾರಿಕೆ ಮತ್ತು ಮಂತ್ರಿಗಳ ದೌರ್ಬಲ್ಯವನ್ನು ಕಂಡ ಜನರಲ್ಲಿ ಒಂದು ಬಗೆಯ ದಂಗೆಯ ಮನೋಭಾವ ಮೂಡುತ್ತಿದೆ. ಜನರು ಬ್ರಿಟಿಷ್ ಸರ್ಕಾರವೇ ವಾಸಿಯಾಗಿತ್ತು ಎನ್ನುತ್ತಿದ್ದಾರಲ್ಲದೆ, ಕಾಂಗ್ರೆಸ್ಸನ್ನು ಹಳಿಯುತ್ತಿದ್ದಾರೆ” ಎಂದರು. ಗಾಂಧೀಜಿ. ಸರಿಯಾಗಿ ಗಮನಿಸಿ. ಇದು ಸ್ವಾತಂತ್ರ್ಯ ಬಂದ ಕೆಲವೇ ದಿನಗಳ ಅನಂತರ ಗಾಂಧೀಜಿಯವರು ಹೇಳಿದ ಮಾತುಗಳು. ಡಿಸೆಂಬರ್ 1947ರಲ್ಲಿ ಮತ್ತೆ ಗಾಂಧೀಜಿ ಹೇಳಿದರು “ಕಾಂಗ್ರೆಸ್‍ನಂತಹ ಬೃಹತ್ ಸಂಸ್ಥೆಗಳಿಂದ ಭ್ರಷ್ಟಾಚಾರ, ಅಸತ್ಯ ಮುಂತಾದ ಪೀಡೆಗಳನ್ನು ಉಚ್ಚಾಟಿಸದೇ ಹೋದರೆ, ನಾಲ್ಕೂ ಕಡೆಗಳಿಂದ ಸ್ವಾರ್ಥಿಗಳು ಕಾಂಗ್ರೆಸ್ಸನ್ನು ಮುತ್ತಿ, ಈ ಸಂಸ್ಥೆಯು ಧೂಳೀಪಟವಾಗುತ್ತದೆ ಮತ್ತು ಹಾಗಾದಾಗ ನಾನು ಒಂದು ತೊಟ್ಟು ಕಣ್ಣೀರನ್ನೂ ಸುರಿಸುವುದಿಲ್ಲ. ದೊಡ್ಡ ರೋಗದಿಂದ ಬಳಲುತ್ತಿರುವ ರೋಗಿಯನ್ನು ಗುಣಮಾಡಲು ಸಾಧ್ಯವಿಲ್ಲದೆ ಹೋದರೆ, ರೋಗಿ ಸಾಯುವುದು ಮೇಲು” (ಪುಟ 721).

ಈ ಪರಿಪ್ರೇಕ್ಷ್ಯದಲ್ಲಿ, ತುರ್ತುಪರಿಸ್ಥಿತಿಯ ಹೇರಿಕೆಯ (25/6/1975) ವಾರ್ಷಿಕೋತ್ಸವದ ಕಹಿನೆನಪುಗಳ ಹಿನ್ನೆಲೆಯಲ್ಲಿ, ಸ್ವಾತಂತ್ರ್ಯದ ಪರಿಕಲ್ಪನೆಯ ಮೂಲದ್ರವ್ಯವು ನಮ್ಮಲ್ಲಿ ಅರ್ಥಪೂರ್ಣ ವಿಚಾರಗಳನ್ನು ಹೊಮ್ಮಿಸಲಿ.

ಇತಿಹಾಸ, ಸ್ವಾತಂತ್ರ್ಯ ಹೋರಾಟಗಳ ಸರಿಯಾದ ವಿಮರ್ಶಾತ್ಮಕ ವಿಶ್ಲೇಷಣೆಗಳು ನಮ್ಮ ಮೇಲೆ ಬೆಳಕು ಚೆಲ್ಲಲಿ, ನಮ್ಮನ್ನು ಕವಿದಿರುವ ಕತ್ತಲನ್ನು ಮತ್ತೊಮ್ಮೆ ನೀಗಲಿ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ʼಹಿಂದೂಗಳೇ ಕೊಲೆಗಾರರುʼ ಎಂಬ ಭಾರತ ವಿರೋಧಿ ಬಹುಸಂಖ್ಯಾತ-ವಾದ

Continue Reading

ವಾಣಿಜ್ಯ

JioMart: ಕುಶಲಕರ್ಮಿಗಳು, ನೇಕಾರರ ಉತ್ತೇಜನಕ್ಕೆ ಜಿಯೋಮಾರ್ಟ್‌ನಿಂದ ಮತ್ತೊಂದು ಘೋಷಣೆ

JioMart: ಜಿಯೋಮಾರ್ಟ್‌ನಿಂದ ಸೋಮವಾರ ಮಹತ್ತರವಾದ ಸಹಭಾಗಿತ್ವವನ್ನು ಘೋಷಣೆ ಮಾಡಲಾಗಿದ್ದು, ಸಣ್ಣ ಪ್ರಮಾಣದ ಮಾರಾಟಗಾರರು, ಕುಶಲಕರ್ಮಿಗಳು ಹಾಗೂ ಸಾಂಪ್ರದಾಯಿಕರರು ಒಳಗೊಂಡಂತೆ ಅವರ ಬೆಳವಣಿಗೆಗೆ ಸಹಕರಿಸಬೇಕು ಹಾಗೂ ಅವರನ್ನು ಸಬಲಗೊಳಿಸಬೇಕು ಎಂಬ ದೃಷ್ಟಿಕೋನದ ಹಿನ್ನೆಲೆಯಲ್ಲಿ JASCOLAMPF ಹಾಗೂ JHARCRAFT ಜತೆಗೆ ಸಹಭಾಗಿತ್ವ ವಹಿಸಲಾಗಿದೆ.

VISTARANEWS.COM


on

Jiomart partnership with JASCOLAMPF and JHARCRAFT
Koo

ಮುಂಬೈ: ರಿಲಯನ್ಸ್ ರೀಟೇಲ್‌ನ ಇ-ಮಾರ್ಕೆಟ್ ಪ್ಲೇಸ್ ಅಂಗವಾದ ಜಿಯೋಮಾರ್ಟ್‌ನಿಂದ (JioMart) ಸೋಮವಾರ ಮಹತ್ತರವಾದ ಸಹಭಾಗಿತ್ವವನ್ನು ಘೋಷಣೆ ಮಾಡಲಾಗಿದ್ದು, ಸಣ್ಣ ಪ್ರಮಾಣದ ಮಾರಾಟಗಾರರು, ಕುಶಲಕರ್ಮಿಗಳು ಹಾಗೂ ಸಾಂಪ್ರದಾಯಿಕ ವೃತ್ತಿಯವರು ಒಳಗೊಂಡಂತೆ ಅವರ ಬೆಳವಣಿಗೆಗೆ ಸಹಕರಿಸಬೇಕು ಹಾಗೂ ಅವರನ್ನು ಸಬಲಗೊಳಿಸಬೇಕು ಎಂಬ ಉದ್ದೇಶದಿಂದ JASCOLAMPF ಹಾಗೂ JHARCRAFT ಜತೆಗೆ ಸಹಭಾಗಿತ್ವ ವಹಿಸಲಾಗಿದೆ.

ಅಂದ ಹಾಗೆ ಮೊದಲನೆಯದು ಜಾರ್ಖಂಡ್‌ನ ರಾಜ್ಯ ಸರ್ಕಾರಿ ಎಂಪೋರಿಯಂ ಹಾಗೂ ಎರಡನೆಯದು ಜಾರ್ಖಂಡ್ ರಾಜ್ಯ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುವಂಥದ್ದು. ಜಾರ್ಖಂಡ್‌ನಲ್ಲಿನ ಕುಶಲಕರ್ಮಿಗಳ ಬದುಕಿನಲ್ಲಿ ಬಹುದೊಡ್ಡ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಈ ಜಂಟಿ ಉಪಕ್ರಮವು ಬಹಳ ದೊಡ್ಡ ಮೈಲುಗಲ್ಲಾಗಿದೆ. ಮತ್ತು ಇದರೊಂದಿಗೆ ಜಿಯೋಮಾರ್ಟ್ ಮೂಲಕ ದೇಶದಾದ್ಯಂತ ತಲುಪುವುದಕ್ಕೆ ಅನುಕೂಲ ಆಗುತ್ತದೆ.

ಇದನ್ನೂ ಓದಿ: Team India : ಜಿಂಬಾಬ್ವೆ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟ, ಶುಭ್​ಮನ್ ಗಿಲ್​ಗೆ ನಾಯಕತ್ವ

ಜಾರ್ಖಂಡ್‌ನ ಪಟ್ಟಣ ಮತ್ತು ನಗರಗಳಾದ ಗುಮ್ಲಾ, ಸರೈಕೆಲಾ ಹಾಗೂ ಪಲಮೌ ಸೇರಿದಂತೆ ಇತರೆಡೆಗಳಿಂದ ಅಪಾರ ಸಂಖ್ಯೆಯ ಕುಶಲಕರ್ಮಿಗಳನ್ನು ಜಿಯೋಮಾರ್ಟ್ ವೇದಿಕೆಗೆ ಕರೆತರುವಲ್ಲಿ ಈ ಸಹಯೋಗ ನೆರವಾಗಿದೆ. ಇದೀಗ ಈ ಕುಶಲಕರ್ಮಿಗಳು ತನ್ನ ಅದ್ಭುತ ಕರಕುಶಲ ವಸ್ತುಗಳನ್ನು ಪ್ರದರ್ಶಿಸುವುದಕ್ಕೆ ಮಾತ್ರವಲ್ಲ, ಅದರ ಜತೆಗೆ ದೇಶದಾದ್ಯಂತ ಇರುವಂಥ ಗ್ರಾಹಕರನ್ನು ತಲುಪುವುದಕ್ಕೆ ಮತ್ತು ತಮ್ಮ ವ್ಯಾಪಾರ- ವ್ಯವಹಾರವನ್ನು ವಿಸ್ತರಿಸುವುದಕ್ಕೆ ಸಹಾಯ ಆಗುತ್ತದೆ.

ಜಾರ್ಖಂಡ್‌ನ ರಾಜ್ಯ ಸರ್ಕಾರದ ಎಂಪೋರಿಯಂ ಅನ್ನು JASCOLAMPF ಎಂದು ಕರೆಯಲಾಗುತ್ತದೆ. ತಮ್ಮ ವ್ಯವಹಾರವನ್ನು ಆರಂಭಿಸುವುದಕ್ಕೆ ಯಾವುದೇ ಸಮಸ್ಯೆ ಆಗದಂಥ, ಗ್ರಾಹಕರಿಗೆ ಸಂಪೂರ್ಣ ಪಾರದರ್ಶಕವಾದಂಥ ಹಾಗೂ ಜತೆಗೆ ಮೀಸಲು ಇರಿಸಿದಂಥ ಮಾರ್ಕೆಟಿಂಗ್ ಬೆಂಬಲದೊಂದಿಗೆ ಇನ್ನು ಲಭ್ಯವಿರುತ್ತದೆ.

ಈ ಸಹಯೋಗದ ಮೂಲಕ ಜಿಯೋಮಾರ್ಟ್‌ನ ಲಕ್ಷಾಂತರ ಸಂಖ್ಯೆಯ ಗ್ರಾಹಕರು ಜಿಐ- ಟ್ಯಾಗ್ ಆದಂಥ ಮರದ ಉತ್ಪನ್ನಗಳು, ಬಿದಿರಿನ ವಸ್ತುಗಳು, ಧೋಕ್ರಾ ಕಲಾಕೃತಿಗಳು, ಟೆರಾಕೋಟಾ ವಸ್ತುಗಳು, ಲ್ಯಾಕ್ ಬಳೆಗಳು, ಹತ್ತಿ ಕೈಮಗ್ಗ, ಅಪ್ಲಿಕ್ ವರ್ಕ್, ಝರ್ಡೋಜಿ ವರ್ಕ್, ತಸರ್ ಕೈ ಮಗ್ಗ ಸೀರೆಗಳು, ಪುರುಷರ ಅಂಗಿಗಳು, ಹೊಲಿಗೆ ಹಾಕಿರದಂಥ ಡ್ರೆಸ್ ಮಟಿರೀಯಲ್ ಗಳು, ಕರಕುಶಲ ಬ್ಯಾಗ್, ಬೆಡ್ ಶೀಟ್ ಗಳು, ಪೇಂಟಿಂಗ್ ಗಳು, ಗೃಹಾಲಂಕಾರ ವಸ್ತುಗಳು, ಮತ್ತು ಇನ್ನೂ ಹಲವು ಕೈಯಿಂದ ಸಿದ್ಧಪಡಿಸಲಾದ ಹಲವು ವಿಧದ ಕಲಾ ವಸ್ತುಗಳು ದೊರೆಯುತ್ತವೆ.

ಇದರಿಂದಾಗಿ ಕೇವಲ ಸ್ಥಳೀಯ ಕರಕುಶಲತೆ ಜತೆಗೆ ನಿಕಟ ಬಂಧವನ್ನು ಮಾತ್ರ ಸೃಷ್ಟಿಸುವುದಲ್ಲದೆ “ವೋಕಲ್ ಫಾರ್ ಲೋಕಲ್”ಎಂಬ ಸ್ಥಳೀಯ ವಸ್ತುಗಳಿಗೆ ಉತ್ತೇಜನ ನೀಡಬೇಕು ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ಭಾರತ್ ದೃಷ್ಟಿಕೋನದೊಂದಿಗೆ ಸಾಗುತ್ತದೆ.

ಇದನ್ನೂ ಓದಿ: Pralhad Joshi: ಮಾತೃಭಾಷೆ, ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಚಿವ ಪ್ರಲ್ಹಾದ್‌ ಜೋಶಿ

ಈ ಕುರಿತು ಜಾರ್ಖಂಡ್ ಸ್ಟೇಟ್ ಕೋ-ಆಪರೇಟಿವ್ ಲ್ಯಾಕ್ ಮಾರ್ಕೆಟಿಂಗ್ ಅಂಡ್ ಪ್ರೊಕ್ಯೂರ್‌ಮೆಂಟ್ ಫೆಡರೇಷನ್ ಲಿಮಿಟೆಡ್ (JASCOLAMPF) ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಕುಮಾರ್ ಸಿಂಗ್ ಮಾತನಾಡಿ, “ಜಾರ್ಖಂಡ್‌ನ ಕರಕುಶಲ ಕಲಾವಿದರು, ಕೈಮಗ್ಗ ನೇಕಾರರು ಮತ್ತು ಕುಶಲಕರ್ಮಿಗಳು ಈ ಪ್ರದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಾಕಾರಗೊಳಿಸುವ ಅದ್ಭುತ ಕೌಶಲಗಳನ್ನು ಹೊಂದಿದ್ದಾರೆ.

ಅವರೊಂದಿಗೆ ಸಹಯೋಗವು ಜಾರ್ಖಂಡ್‌ನ ರೋಮಾಂಚಕ ಕರಕುಶಲತೆ ಮತ್ತು ಕಾಲಾತೀತ ಸಂಪ್ರದಾಯಗಳಲ್ಲಿ ಆಳವಾದ ತೊಡಗುಕೊಳ್ಳುವಿಕೆಗೆ ಭರವಸೆ ನೀಡುತ್ತದೆ. ಆದರೆ ಇದು ಜಾರ್ಖಂಡ್‌ನ ಇತರ ಎಂಎಸ್‌ಎಂಇ (ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ತಯಾರಕರಿಗೆ ಸಹ ಪ್ರಯೋಜನಗಳನ್ನು ನೀಡುತ್ತದೆ. ಆದರೂ ಹಂಚಿಕೆಯ ಜ್ಞಾನ ಮತ್ತು ಅವಕಾಶಗಳ ಮೂಲಕ, ಈ ಬಾಂಧವ್ಯದ ಬೆಳವಣಿಗೆ, ನಾವೀನ್ಯತೆ ಮತ್ತು ಜಾರ್ಖಂಡ್‌ನ ಗುರುತನ್ನು ವ್ಯಾಖ್ಯಾನಿಸುವ ಸಂಕೀರ್ಣವಾದ ಕರಕುಶಲತೆಗೆ ಗಹನವಾದ ಮೆಚ್ಚುಗೆಯನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.

ಜಾರ್ಖಂಡ್ ಸಿಲ್ಕ್ ಟೆಕ್ಸ್‌ಟೈಲ್ ಮತ್ತು ಕರಕುಶಲ ಅಭಿವೃದ್ಧಿ ನಿಗಮ ಲಿಮಿಟೆಡ್ (JHARCRAFT) ನ ಉಪ ಪ್ರಧಾನ ವ್ಯವಸ್ಥಾಪಕಿ ಅಶ್ವಿನಿ ಸಹಾಯ್ ಮಾತನಾಡಿ, “ದೇಶೀಯ ಉತ್ಪನ್ನಗಳ ವಿಶಿಷ್ಟ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುವ ಜಿಯೋಮಾರ್ಟ್ ನಂತಹ ಸ್ಥಳೀಯ ವೇದಿಕೆಯಲ್ಲಿ ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ. ನಮಗೆ, ಈ ಬಿಡುಗಡೆಯು ಜಾರ್ಖಂಡ್‌ನ ವೈವಿಧ್ಯಮಯ ಕಲಾ ಪ್ರಕಾರಗಳೊಂದಿಗೆ ಜಿಯೋಮಾರ್ಟ್ ಮಾರುಕಟ್ಟೆಯನ್ನು ಶ್ರೀಮಂತಗೊಳಿಸುವ ಬದ್ಧತೆಯ ಸಂಕೇತವಾಗಿದೆ. ಆ ಮೂಲಕ ಕುಶಲಕರ್ಮಿಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಕಾಪಾಡುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: Artificial Colours Ban: ರಾಜ್ಯದಲ್ಲಿ ಚಿಕನ್‌, ಫಿಶ್‌ ಕಬಾಬ್‌ನಲ್ಲಿ ಕೃತಕ ಬಣ್ಣ ಬಳಕೆ ನಿಷೇಧ!

2022ರಲ್ಲಿ ಪ್ರಾರಂಭ ಆದಾಗಿನಿಂದ ಜಿಯೋಮಾರ್ಟ್ ದೇಶವ್ಯಾಪಿ 20 ಸಾವಿರ ಕುಶಲಕರ್ಮಿಗಳು ಮತ್ತು ನೇಕಾರರಿಗೆ ಬಲ ತುಂಬಿದೆ. ಇಂಥ ಸರ್ಕಾರಿ ಸಂಸ್ಥೆಗಳ ಜತೆಗೆ ಸಹಭಾಗಿತ್ವ ವಹಿಸುವ ಮೂಲಕ ಡಿಜಿಟಲ್ ವಿಭಜನೆಯಿಂದ ಸೃಷ್ಟಿ ಆಗಿರುವ ಕಂದಕದ ಮಧ್ಯೆ ಸೇತುವೆ ನಿರ್ಮಿಸುವುದಕ್ಕೆ ಹಾಗೂ ಕುಶಲಕರ್ಮಿ ಸಮುದಾಯದ ಏಳ್ಗೆಗೆ ಸಹಕಾರಿ ಆಗುತ್ತದೆ. ಇನ್ನೂ ಮುಂದುವರಿದು ಕರಕುಶಲ ಮೇಳದಂಥ ಉಪಕ್ರಮಗಳು ಮತ್ತು ಇತರ ಕ್ರಮಗಳು ಸ್ಥಳೀಯ ಕಲೆಯನ್ನು ಪ್ರೋತ್ಸಾಹಿಸುವ ಬದ್ಧತೆಯನ್ನು ಒತ್ತಿ ಹೇಳುತ್ತದೆ.

Continue Reading

ಬೆಂಗಳೂರು

Music Academy Bangalore : ಮ್ಯೂಜಿಗಲ್​ನಿಂದ ಅಮೃತಹಳ್ಳಿಯಲ್ಲಿ ಮ್ಯೂಸಿಕ್ ಅಕಾಡೆಮಿ ಪ್ರಾರಂಭ

Music Academy Bangalore : ಮ್ಯೂಜಿಗಲ್ ಸಂಗೀತ ಶಿಕ್ಷಣದಲ್ಲಿ 360-ಡಿಗ್ರಿ ಫ್ರೇಮ್ ವರ್ಕ್ ಅನ್ನು ಪೂರೈಸುತ್ತಿದ್ದು ಸಂಗೀತ ಕಲಿಕೆ ಮತ್ತು ಬೋಧನೆಯ ವ್ಯವಸ್ಥೆಯನ್ನು ಆನ್ಲೈನ್, ಆಫ್ಲೈನ್ ಮತ್ತು ಸಂಗೀತ ಸಾಧನಗಳ ಮಳಿಗೆಯನ್ನು ಒಂದೇ ಪ್ಲಾಟ್ ಫಾರಂಗೆ ಅಳವಡಿಸುವ ಮೂಲಕ ಸುವರ್ಣ ಮಾನದಂಡ ರೂಪಿಸುತ್ತಿದೆ.

VISTARANEWS.COM


on

Music Academy Bangalore
Koo

ಬೆಂಗಳೂರು: ಭಾರತದ ಅತ್ಯಂತ ದೊಡ್ಡ ಸಂಗೀತ ಶಿಕ್ಷಣದ ಪ್ಲಾಟ್ ಫಾರಂ ಮ್ಯೂಜಿಗಲ್, ಬೆಂಗಳೂರಿನ ಜಕ್ಕೂರು ಲೇಔಟಿನ ಅಮೃತಹಳ್ಳಿಯಲ್ಲಿ ತನ್ನ 11ನೇ ಅತ್ಯಾಧುನಿಕ ಮ್ಯೂಸಿಕ್ ಅಕಾಡೆಮಿ ಪ್ರಾರಂಭಿಸಿದೆ (Music Academy Bangalore). ಈ ಅಕಾಡೆಮಿಯು 2200 ಚದರ ಅಡಿ ವಿಸ್ತೀರ್ಣ ಹೊಂದಿದೆ ಮತ್ತು ಗಾಯನ ಮತ್ತು ಇನ್ಸ್ ಟ್ರುಮೆಂಟಲ್ ಸಂಗೀತ ಕಲಿಯಲು ಪೂರಕ ವಾತಾವರಣ ಹೊಂದಿದೆ. ಖ್ಯಾತ ಹಿನ್ನೆಲೆ ಗಾಯಕ ನಾಗರಂಜನಿ ರಘು ಮುಖ್ಯ ಅತಿಥಿಯಾಗಿದ್ದರು ಮತ್ತು ಮ್ಯೂಜಿಗಲ್ ಸಂಸ್ಥಾಪಕ ಡಾ.ಲಕ್ಷ್ಮೀನಾರಾಯಣ ಯೆಲೂರಿ ಗೌರವ ಅತಿಥಿಗಳಾಗಿದ್ದರು.

500 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಹಲವು ಬ್ಯಾಚ್ ಗಳನ್ನು ಹೊಂದಿರುವ ಈ ಮ್ಯೂಸಿಕ್ ಅಕಾಡೆಮಿಯು ಪಿಯಾನೊ, ಕೀಬೋರ್ಡ್, ಗಿಟಾರ್, ಡ್ರಮ್ಸ್, ಕರ್ನಾಟಕ ಸಂಗೀತ, ಹಿಂದೂಸ್ಥಾನಿ, ಪಾಶ್ಚಿಮಾತ್ಯ, ವಯೊಲಿನ್ ಮತ್ತು ಉಕುಲೆಲೆಯಲ್ಲಿ ಪಾಠಗಳನ್ನು ನೀಡುತ್ತದೆ. ಉದ್ಘಾಟನಾ ತಿಂಗಳಲ್ಲಿ ಮ್ಯೂಜಿಗಲ್ ನೋಂದಾಯಿತರಾದ ಎಲ್ಲರಿಗೂ 1 ತಿಂಗಳು ಉಚಿತ ಸಂಗೀತ ಶಿಕ್ಷಣ ನೀಡುತ್ತದೆ.

ಮ್ಯೂಜಿಗಲ್ ಸಂಗೀತ ಶಿಕ್ಷಣದಲ್ಲಿ 360-ಡಿಗ್ರಿ ಫ್ರೇಮ್ ವರ್ಕ್ ಅನ್ನು ಪೂರೈಸುತ್ತಿದ್ದು ಸಂಗೀತ ಕಲಿಕೆ ಮತ್ತು ಬೋಧನೆಯ ವ್ಯವಸ್ಥೆಯನ್ನು ಆನ್ಲೈನ್, ಆಫ್ಲೈನ್ ಮತ್ತು ಸಂಗೀತ ಸಾಧನಗಳ ಮಳಿಗೆಯನ್ನು ಒಂದೇ ಪ್ಲಾಟ್ ಫಾರಂಗೆ ಅಳವಡಿಸುವ ಮೂಲಕ ಸುವರ್ಣ ಮಾನದಂಡ ರೂಪಿಸುತ್ತಿದೆ.

ಇದನ್ನೂ ಓದಿ: Olympic Day : 900 ಮಕ್ಕಳೊಂದಿಗೆ ಒಲಿಂಪಿಕ್ ದಿನ ಸಂಭ್ರಮಿಸಿದ ರಿಲಯನ್ಸ್​ಫೌಂಡೇಶನ್​

ಮ್ಯೂಜಿಗಲ್ ಅಕಾಡೆಮಿ ಪ್ರಾರಂಭ ಕುರಿತು ಅಕಾಡೆಮಿ ಸಂಸ್ಥಾಪಕ ಡಾ.ಲಕ್ಷ್ಮೀನಾರಾಯಣ ಯೆಲೂರಿ, “ಮ್ಯೂಜಿಗಲ್ ಅಕಾಡೆಮಿಯು ಸಂಗೀತ ಶಿಕ್ಷಣವನ್ನು ಅತ್ಯಾಧುನಿಕ ಕಲಿಕಾ ಕೇಂದ್ರದ ಮೂಲಕ ಪ್ರಜಾಸತ್ತೀಯಗೊಳಿಸುವ ಉದ್ದೇಶ ಹೊಂದಿದೆ. ಇದು ಸಂಗೀತದಲ್ಲಿ ಅತ್ಯುತ್ತಮ ಕಲಿಕೆ ಮತ್ತು ಬೋಧನೆಯ ಅನುಭವ ನೀಡುತ್ತದೆ. ಇದು ಪರಿಣಿತ ಶಿಕ್ಷಕರಿಂದ ಭಾರತೀಯ ಶಾಸ್ತ್ರೀಯ ಮತ್ತು ಪಾಶ್ಚಿಮಾತ್ಯ ಸಂಗೀತದಲ್ಲಿ ಕಲಿಕೆ ಮತ್ತು ಬೋಧನೆ ನೀಡುತ್ತದೆ. ಇದರೊಂದಿಗೆ ರಚನಾತ್ಮಕ ಪಠ್ಯಕ್ರಮ, ನಿಯಮಿತ ಮೌಲ್ಯಮಾಪನ, ಪ್ರಮಾಣೀಕರಣ, ಅನುಕೂಲಕರ ಶುಲ್ಕತ ಪಾವತಿ, ತರಬೇತಿ ಪಡೆದ ಶಿಕ್ಷಕರು ಮತ್ತು ಸುಲಭ ಲಭ್ಯತೆ ಇದನ್ನು ಕಲಿಯುವವರ ಕೇಂದ್ರವಾಗಿಸಿದೆ” ಎಂದರು.
ಭಾರತ, ಯು.ಎಸ್.ಎ., ಯು.ಕೆ., ಆಸ್ಟ್ರೇಲಿಯಾ ಮತ್ತು ಯು.ಎ.ಇ.ಗಳಲ್ಲಿ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ 400+ ತರಬೇತಿ ಪಡೆದ ಸಂಗೀತ ಶಿಕ್ಷಕರನ್ನು ಹೊಂದಿದ್ದು 40,000ಕ್ಕೂ ಹೆಚ್ಚು ತರಗತಿಗಳನ್ನು ಯಶಸ್ವಿಯಾಗಿ ಪೂರೈಸಿರುವ ಮ್ಯೂಜಿಗಲ್ ವಿದ್ಯಾರ್ಥಿಗಳಿಗೆ ಅವರ ಸಂಗೀತದ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ನೆರವಾಗುತ್ತದೆ.

ಭಾರತದಲ್ಲಿ ಸಾಂಪ್ರದಾಯಿಕ ಸಂಗೀತ ಶಿಕ್ಷಣವು ನರೆಹೊರೆಯ ಸಂಗೀತ ಶಿಕ್ಷಣ ಕೇಂದ್ರಗಳಿಗೆ ಸೀಮಿತವಾಗಿದೆ ಮತ್ತು ಕೆಲವೇ ಪ್ರದೇಶಗಳಿಗೆ ಮೀಸಲಾಗಿದೆ. ಮ್ಯೂಜಿಗಲ್ ಅದನ್ನು ಮೀರಿ ಎಲ್ಲರಿಗೂ ಸಂಗೀತ ಶಿಕ್ಷಣ ದೊರೆಯುವಂತೆ ಮಾಡುತ್ತಿದೆ. ಮ್ಯೂಜಿಗಲ್ ಆನ್ಲೈನ್ ಮತ್ತು ಆಫ್ಲೈನ್ ತರಗತಿಗಳಿಂದ ಮತ್ತು ಪರಿಣಿತ ಶಿಕ್ಷಕರಿಂದ ಸಮಗ್ರವಾದ ಸಂಗೀತ ಶಿಕ್ಷಣ ನೀಡುತ್ತದೆ.

Continue Reading

ಕರ್ನಾಟಕ

Kamala Hampana: ಶಿಕ್ಷಕಿಯಿಂದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆವರೆಗೆ; ಡಾ.ಕಮಲಾ ಹಂಪನಾ ಅವರ ಸಾಹಿತ್ಯ ಕೃಷಿ ಸಾಗಿ ಬಂದ ಹಾದಿ

Kamala Hampana: ಕನ್ನಡದ ಹಿರಿಯ ಲೇಖಕಿ, ಸಂಶೋಧಕಿ ಪ್ರೊ. ಕಮಲಾ ಹಂಪನಾ ಇನ್ನಿಲ್ಲ. 60 ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ತೊಡಗಿಸಿಕೊಂಡಿದ್ದ ಡಾ. ಕಮಲಾ ಹಂಪನಾ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಇಲ್ಲಿದೆ ಕಮಲಾ ಹಂಪನಾ ಅವರ ಸಾಹಿತ್ಯ ಕೃಷಿಯ ಕಿರು ಪರಿಚಯ.

VISTARANEWS.COM


on

Kamala Hampana
Koo

ಬೆಂಗಳೂರು: ನಾಡಿನ ಖ್ಯಾತ ಸಾಹಿತಿ, ನಾಡೋಜ ಪ್ರೊ. ಕಮಲಾ ಹಂಪನಾ (Kamala Hampana) ಅವರು ಇಂದು (ಜೂನ್‌ 22) ನಿಧನ ಹೊಂದಿದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ನಾಡಿನ ಅಗ್ರಗಣ್ಯ ಮಹಿಳಾ ಸಾಹಿತಿಯಾಗಿ ಗುರುತಿಸಿಕೊಂಡಿದ್ದ ಕಮಲಾ ಹಂಪನಾ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ʼʼಹಿರಿಯ ಸಾಹಿತಿ ಡಾ.ಕಮಲಾ ಹಂಪನಾ ಅವರ ಅನಿರೀಕ್ಷಿತ ಸಾವಿನಿಂದ ದುಃಖಿತನಾಗಿದ್ದೇನೆ. ಸಾಹಿತ್ಯ ಕೃಷಿಯ ಜತೆ ಸಂಶೋಧನೆ ಮತ್ತು ಬೋಧನೆಗಳಿಂದಲೂ ಜನಪ್ರಿಯರಾಗಿದ್ದ ಡಾ.ಕಮಲಾ ಅವರದ್ದು ಸರ್ವರಿಗೂ ಒಳಿತನ್ನು ಬಯಸಿದ ಜೀವ. ಡಾ.ಹಂಪ ನಾಗರಾಜಯ್ಯ ಮತ್ತವರ ಕುಟುಂಬದ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ.
ಮೃತರ ಆತ್ಮಕ್ಕೆ ಶಾಂತಿ ಕೋರುವೆ” ಎಂದು ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭ

ಡಾ.ಕಮಲಾ ಹಂಪನಾ ಅವರು 1935ರಲ್ಲಿ ದೇವನಹಳ್ಳಿಯಲ್ಲಿ ಸಿ.ರಂಗಧಾನಮನಾಯಕ್‌ ಮತ್ತು ಲಕ್ಷ್ಮಮ್ಮ ದಂಪತಿಗೆ ಜನಿಸಿದರು. ಕನ್ನಡ ಸಾಹಿತ್ಯ ಲೋಕದಲ್ಲಿ, ಸಂಶೋಧನಾ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವ ಅವರು 1959ರಲ್ಲಿ ಕನ್ನಡ ಶಿಕ್ಷಕಿಯಾಗಿ ತಮ್ಮ ವೃತ್ತಿಜೀವನ ಆರಂಭಿಸಿದರು. ಮೈಸೂರು, ಬೆಂಗಳೂರು ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ ಅವರು ನಂತರ ಬೆಂಗಳೂರಿನ ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡಿದರು. ನಿವೃತ್ತರಾದ ನಂತರವೂ ತಮ್ಮ ನೆಚ್ಚಿನ ಅಧ್ಯಾಪನ ಕೆಲಸ ಮುಂದುವರಿಸಿದರು. ಮೈಸೂರು ವಿವಿ ಜೈನಶಾಸ್ತ್ರ, ಪ್ರಾಕೃತ ಅಧ್ಯಯನದ ಅಧ್ಯಕ್ಷರಾಗಿ, ಹಂಪಿ ಕನ್ನಡ ವಿವಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು.

ತಮ್ಮ ಅಧ್ಯಯನ, ಅಧ್ಯಾಪನ, ಲೇಖನ, ಭಾಷಣ ಮತ್ತು ಸಂಶೋಧನೆಗಳಿಂದ 60 ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ತೊಡಗಿಸಿಕೊಂಡಿದ್ದ ಡಾ. ಕಮಲಾ ಹಂಪನಾ ಅವರು ಸಮಕಾಲೀನ ಕನ್ನಡ ಸಾಹಿತ್ಯದ ಹಿರಿಯ ಬರಹಗಾರ್ತಿಯಾಗಿದ್ದರು. ಅವರ ಪತಿ ಪತಿ ಹಂ.ಪ.ನಾಗರಾಜಯ್ಯ ಅವರೂ ಸಾಹಿತಿ, ಸಂಶೋಧಕರಾಗಿ ಗುರುತಿಸಿಕೊಂಡಿದ್ದಾರೆ.

ಹಲವು ಕೃತಿ

ಕಮಲಾ ಹಂಪನಾ ಅವರ ಲೇಖನಿಯಿಂದ ಹಲವು ಕೃತಿ, ಸಂಶೋಧನಾ ಬರಹಗಳು ಮೂಡಿ ಬಂದಿವೆ. ಕಥಾ ಸಂಕಲನ, ಕಾದಂಬರಿಯಿಂದ ಹಿಡಿದು ಸಂಶೋಧನಾ ಕೃತಿಗಳ ವರೆಗೆ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ. ʼನಕ್ಕಿತು ಹಾಲಿನ ಬಟ್ಟಲುʼ, ʼರೆಕ್ಕೆ ಮುರಿದಿತ್ತುʼ, ʼಚಂದನಾʼ, ʼಬಣವೆʼ ಕಥಾ ಸಂಲನಗಳು. ʼಬುಗುಡಿʼ, ʼಬಿಂದಲಿʼ ವಚನ ಸಂಕಲನ. ʼತುರಂಗ ಭಾರತ – ಒಂದು ಅಧ್ಯಯನʼ, ʼಶಾಂತಿನಾಥʼ, ʼಆದರ್ಶ ಜೈನ ಮಹಿಳೆಯರುʼ, ʼಅನೇಕಾಂತವಾದʼ, ʼನಾಡು ನುಡಿ ನಾವುʼ, ʼಜೈನ ಸಾಹಿತ್ಯ ಪರಿಸರʼ, ʼಬದ್ದವಣʼ, ʼರೋಣದ ಬಸದಿʼ, ʼಮಹಾಮಂಡಲೇಶ್ವರಿ ರಾಣಿ ಚೆನ್ನಭೈರಾದೇವಿ ಮತ್ತು ಇತರ ಕರಾವಳಿ ರಾಣಿಯರುʼ ಇತ್ಯಾದಿ ಸಂಶೋಧನಾ ಲೇಖನಗಳು.

ʼಅಕ್ಕ ಮಹಾದೇವಿʼ, ʼಹೆಳವನಕಟ್ಟೆ ಗಿರಿಯಮ್ಮʼ, ʼವೀರವನಿತೆ ಓಬವ್ವʼ, ʼಜನ್ನʼ, ʼಚಿಕ್ಕವರಿಗಾಗಿ ಚಿತ್ರದುರ್ಗಾʼ, ʼಡಾ.ಬಿ.ಆರ್. ಅಂಬೇಡ್ಕರ್‌ʼ, ʼಮಳಬಾಗಿಲುʼ, ʼಮಕ್ಕಳೊಡನೆ ಮಾತುಕತೆʼ ಶಿಶು ಸಾಹಿತ್ಯ. ʼಬಕುಳʼ, ʼಬಾನಾಡಿʼ, ʼಬೆಳ್ಳಕ್ಕಿʼ ಆಕಾಶವಾಣಿ ನಾಟಕ ರೂಪಕಗಳು. ಇತರ ಭಾಷೆಗಳಿಂದ ʼಬೀಜಾಕ್ಷರ ಮಾಲೆʼ, ʼಜಾತಿ ನಿರ್ಮೂಲನೆʼ, ʼಭಾರತದಲ್ಲಿ ಜಾತಿಗಳುʼ, ʼಏಷಿಯಾದ ಹಣತೆಗಳುʼ, ʼಜಾತಿ ಮೀಮಾಂಸೆʼ ಸೇರಿದಂತೆ ಅನೇಕ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಜತೆಗೆ ಆತ್ಮಕಥೆ, ವಿಮರ್ಶೆಗಳನ್ನೂ ಬರೆದಿದ್ದಾರೆ.

ಸಂದ ಪ್ರಶಸ್ತಿಗಳು

ಕಮಲಾ ಹಂಪನಾ ಅವರನ್ನು ಹುಡುಕಿಕೊಂಡು ಹಲವು ಪ್ರಶಸ್ತಿಗಳು ಬಂದಿವೆ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬಾಬಾ ಆಮ್ಟೆ ರಾಷ್ಟ್ರೀಯ ಪ್ರಶಸ್ತಿ, ಸಾಹಿತ್ಯ ವಿಶಾರದೆ ಪ್ರಶಸ್ತಿ, ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿ, ವರ್ಷದ ಲೇಖಕಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ದಾನ ಚಿಂತಾಮಣಿ ಪ್ರಶಸ್ತಿ ಈ ಪೈಕಿ ಪ್ರಮುಖವಾದವು. ಅಲ್ಲದೆ 2003ರಲ್ಲಿ ಮೂಡುಬಿದಿರೆಯಲ್ಲಿ ನಡೆದ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ದೇಹ ದಾನ

ಕಮಲಾ ಹಂಪನಾ ಅವರ ಇಚ್ಛೆಯಂತೆ ರಾಮಯ್ಯ ಮೆಡಿಕಲ್ ಕಾಲೇಜಿಗೆ ಕಣ್ಣು ಮತ್ತು ದೇಹ ದಾನ ಮಾಡಲಾಗುವುದು.ಸಂಜೆ 5ರ ತನಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ರಾಮಯ್ಯ ಮೆಡಿಕಲ್ ಕಾಲೇಜಿಗೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಕೇಂದ್ರ ಸಚಿವ ವಿ.ಸೋಮಣ್ಣ ಮತ್ತಿತರರು ಈಗಾಗಲೇ ಅಂತಿಮ ದರ್ಶನ ಪಡೆದಿದ್ದಾರೆ.

ʼʼ2 – 3 ದಿನಗಳ ಹಿಂದೆಯಷ್ಟೇ ಅವರು ತಮ್ಮ ಅಂತಿಮ ಆಸೆಯನ್ನು ತಿಳಿಸಿದ್ದರು. ನಿಧನದ ನಂತರ ರಾಜಾಜಿನಗರ ಮನೆಯಲ್ಲೇ ಅಂರಿತಿಮ ದರ್ಶನಕ್ಕೆ ವ್ಯವಸ್ಥೆ ಮಾಡಬೇಕು ಎಂದು ಹೇಳಿದ್ದರು. ನೇತ್ರದಾನ ಮಾತ್ರವಲ್ಲದೇ ಇತರ ಅಂಗಗಳನ್ನೂ ದಾನ ಮಾಡಬೇಕು ಎಂದು ಬರೆಸಿಕೊಂಡಿದ್ದರುʼʼ ಎಂದು ಅವರ ಪುತ್ರಿ ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ.

ಇದನ್ನೂ ಓದಿ: Kamala Hampana: ಖ್ಯಾತ ಸಾಹಿತಿ ನಾಡೋಜ ಕಮಲಾ ಹಂಪನಾ ಇನ್ನಿಲ್ಲ

Continue Reading
Advertisement
cm siddaramaiah DK Shivakumar power fight
ಪ್ರಮುಖ ಸುದ್ದಿ4 mins ago

CM Siddaramaiah: ಡಿಸಿಎಂ ವಿಚಾರದಲ್ಲಿ ಮತ್ತೆ ಒಡೆದುಹೋದ ಕಾಂಗ್ರೆಸ್‌; ಸಿದ್ದು- ಡಿಕೆಶಿ ಬಣದ ನಡುವೆ ಡಿಶುಂ ಡಿಶುಂ

Viral Video
Latest6 mins ago

Viral Video: ವೃದ್ಧ ರೋಗಿಯ ಮೇಲೆ ದರ್ಪ ತೋರಿದ ಆಸ್ಪತ್ರೆ ಸಿಬ್ಬಂದಿ; ಆಘಾತಕಾರಿ ವಿಡಿಯೊ

LeT Associate killed
ದೇಶ13 mins ago

LeT Associate killed: ಪ್ರಚೋದನಕಾರಿ ಧರ್ಮ ಪ್ರಚಾರಕ ಖ್ವಾರಿ ಇದ್ರಿಸ್‌ ಹತ್ಯೆ; ವಿಷಪೂರಿತ ಸೂಜಿಯಿಂದ ದಾಳಿ!

Udhayanidhi Stalin
ಕರ್ನಾಟಕ40 mins ago

Udhayanidhi Stalin: ಸನಾತನ ಧರ್ಮದ ವಿರುದ್ಧ ಹೇಳಿಕೆ; ಇಂದು ಬೆಂಗಳೂರು ಕೋರ್ಟ್‌ನಲ್ಲಿ ಉದಯನಿಧಿ ಸ್ಟಾಲಿನ್‌ ವಿಚಾರಣೆ

AFG vs BAN
ಕ್ರೀಡೆ43 mins ago

AFG vs BAN: ರೋಚಕ ಗೆಲುವು ಸಾಧಿಸಿ ಸೆಮಿಫೈನಲ್​ಗೆ ಲಗ್ಗೆಯಿಟ್ಟ ಆಫ್ಘನ್​; ಟೂರ್ನಿಯಿಂದ ಹೊರಬಿದ್ದ ಆಸೀಸ್​

Mamata Banerjee
ದೇಶ1 hour ago

Mamata Banerjee: ಬಾಂಗ್ಲಾದೇಶದೊಂದಿಗೆ ಜಲ ಹಂಚಿಕೆಯ ಮಾತುಕತೆ: ಮಮತಾ ಬ್ಯಾನರ್ಜಿ ವಿರೋಧ; ಪ್ರಧಾನಿಗೆ ಪತ್ರ

physical abuse mandya
ಕ್ರೈಂ1 hour ago

Physical Abuse: ಅಪ್ರಾಪ್ತ ಮಗಳನ್ನು ಗರ್ಭಿಣಿ ಮಾಡಿದ ಕಾಮಪಿಶಾಚಿ ಅಪ್ಪನಿಗೆ ಗೂಸಾ

Paris Olympics 2024
ಕ್ರೀಡೆ2 hours ago

Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಕರ್ನಾಟಕದ ಅದಿತಿ ಅಶೋಕ್

Hunger Strike
ದೇಶ2 hours ago

Hunger Strike: ಉಪವಾಸ ಸತ್ಯಾಗ್ರಹ ಮಾಡ್ತಿದ್ದ ದಿಲ್ಲಿ ಸಚಿವೆ ಆಸ್ಪತ್ರೆಗೆ ದಾಖಲು

Suraj Revanna Case
ಪ್ರಮುಖ ಸುದ್ದಿ2 hours ago

Suraj Revanna Case: ತಮ್ಮನಿಗೆ ಮೂರು ಸಲ; ಈಗ ಅಣ್ಣನಿಗೂ ಪುರುಷತ್ವ ಪರೀಕ್ಷೆ! ಇದೇ ಬೇರೆ ಥರ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ17 hours ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ4 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ4 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ5 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌