Haldwani Demolition | ರೈಲ್ವೆ ಇಲಾಖೆ ಭೂಮಿ ಅತಿಕ್ರಮಣದಾರರಿಗೆ ಬಿಗ್​ ರಿಲೀಫ್​ ಕೊಟ್ಟ ಸುಪ್ರೀಂಕೋರ್ಟ್ - Vistara News

ದೇಶ

Haldwani Demolition | ರೈಲ್ವೆ ಇಲಾಖೆ ಭೂಮಿ ಅತಿಕ್ರಮಣದಾರರಿಗೆ ಬಿಗ್​ ರಿಲೀಫ್​ ಕೊಟ್ಟ ಸುಪ್ರೀಂಕೋರ್ಟ್

ರಾಜ್ಯ ಸರ್ಕಾರದ ರೈಲ್ವೆ ಇಲಾಖೆಗೆ ಸೇರಿದ 29 ಎಕರೆ ಭೂಮಿಯನ್ನು ಅತಿಕ್ರಮಣ ಮಾಡಿದವರನ್ನು ಅಲ್ಲಿಂದ ತೆರವುಗೊಳಿಸಬೇಕು. ಆ ಭೂಮಿಯನ್ನು ವಾಪಸ್​ ಇಲಾಖೆಗೆ ಬಿಟ್ಟುಕೊಡಬೇಕು ಎಂದು ಹೈಕೋರ್ಟ್​​ಗೆ ಪಿಐಎಲ್​ ಸಲ್ಲಿಕೆಯಾಗಿತ್ತು.

VISTARANEWS.COM


on

Haldwani demolition
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹಲ್ದ್ವಾನಿ: ಇನ್ನೇನು ನಮ್ಮ ಮನೆಗಳೆಲ್ಲ ನೆಲಸಮ ಆಗಿಯೇ ಬಿಡುತ್ತವೆ ಎಂಬ ಆತಂಕದಲ್ಲಿದ್ದ ಉತ್ತರಾಖಂಡ್​​ನ ಹಲ್ದ್ವಾನಿ ಜನರು, ಈಗ ಸುಪ್ರೀಂಕೋರ್ಟ್​​ನಿಂದಾಗಿ ನಿಟ್ಟುಸಿರುಬಿಡುವಂತಾಗಿದೆ. ಹಲ್ದ್ವಾನಿಯಲ್ಲಿ ರೈಲ್ವೆ ಇಲಾಖೆಗೆ ಸೇರಿದ 29 ಎಕರೆ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡು ಕಟ್ಟಲಾದ 4,365 ಮನೆಗಳು, ಶಾಲೆಗಳು, ಖಾಸಗಿ ಬ್ಯಾಂಕ್​, ದೇವಾಲಯಗಳು, ಮಸೀದಿ, ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಬೇಕು ಎಂದು ಉತ್ತರಾಖಂಡ್​ ಹೈಕೋರ್ಟ್​ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್​ ತಡೆ ನೀಡಿದೆ. ಹೀಗಾಗಿ ಆ ಸ್ಥಳದಲ್ಲಿರುವ 50 ಸಾವಿರಕ್ಕೂ ಹೆಚ್ಚಿನ ಹೆಚ್ಚು ಮಂದಿ ಸದ್ಯ ಬಚಾವ್​ ಆಗಿದ್ದಾರೆ.

ರಾಜ್ಯ ಸರ್ಕಾರದ ರೈಲ್ವೆ ಇಲಾಖೆಗೆ ಸೇರಿದ 29 ಎಕರೆ ಭೂಮಿಯನ್ನು ಅತಿಕ್ರಮಣ ಮಾಡಿದವರನ್ನು ಅಲ್ಲಿಂದ ತೆರವುಗೊಳಿಸಬೇಕು. ಆ ಭೂಮಿಯನ್ನು ವಾಪಸ್​ ಇಲಾಖೆಗೆ ಬಿಟ್ಟುಕೊಡಬೇಕು ಎಂದು ಹೈಕೋರ್ಟ್​​ಗೆ ಪಿಐಎಲ್​ ಸಲ್ಲಿಕೆಯಾಗಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್​​ 2022ರ ಡಿಸೆಂಬರ್​ 20ರಂದು ಆದೇಶ ನೀಡಿ, ‘ಇನ್ನು 7 ದಿನಗಳಲ್ಲಿ ಹಲ್ದ್ವಾನಿಯಲ್ಲಿ ಒತ್ತುವರಿಯಾದ ಭೂಪ್ರದೇಶಗಳಲ್ಲಿ ತೆರವು ಕಾರ್ಯಾಚರಣೆ ಪ್ರಾರಂಭವಾಗಬೇಕು’ ಎಂದು ಹೇಳಿತ್ತು. ಅದರಂತೆ ಅಲ್ಲಿನ ನಿವಾಸಿಗಳಿಗೆ ಸ್ಥಳೀಯ ಅಧಿಕಾರಿಗಳು ನೋಟಿಸ್ ಕೂಡ ಕೊಟ್ಟಿದ್ದರು. ಜನವರಿ 10ರಿಂದ ಒತ್ತುವರಿ ತೆರವು ಕಾರ್ಯಾಚರಣೆಯೂ ನಡೆಯಬೇಕಿತ್ತು.

ಈ ಮಧ್ಯೆ ಸ್ಥಳೀಯರಿಂದ ವಿಪರೀತ ಪ್ರತಿಭಟನೆಯೂ ಪ್ರಾರಂಭವಾಗಿತ್ತು. ಆ ಪ್ರದೇಶದಲ್ಲಿ ಮುಸ್ಲಿಮರೂ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರೂ ದೊಡ್ಡಮಟ್ಟದಲ್ಲೇ ಪ್ರತಿಭಟನೆ ಶುರು ಮಾಡಿದ್ದರು. ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್​​ಗೆ ಮೇಲ್ಮನವಿಯೂ ಸಲ್ಲಿಕೆಯಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ ನ್ಯಾಯಮೂರ್ತಿ ಎಸ್​.ಕೆ.ಕೌಲ್​ ಮತ್ತು ಅಭಯ್​​ ಎಸ್​. ಓಕಾ ಅವರು ಇಂದು ಮಧ್ಯಂತರ ಆದೇಶ ನೀಡಿದ್ದಾರೆ.

‘ಇದು ಮಾನವರ ಭಾವನೆ ಮತ್ತು ಮೂಲ ಸೌಕರ್ಯಕ್ಕೆ ಸಂಬಂಧಪಟ್ಟ ವಿಚಾರ. ಈಗ ಏಳು ದಿನಗಳ ಒಳಗೆ ಏಕಾಏಕಿ 50 ಸಾವಿರಕ್ಕೂ ಅಧಿಕ ಜನರನ್ನು ಸ್ಥಳಾಂತರ ಮಾಡಲು ಸಾಧ್ಯವೇ ಇಲ್ಲ’ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
‘ರೈಲ್ವೆ ಇಲಾಖೆಗೆ ಅಗತ್ಯವನ್ನು ಪರಿಗಣಿಸುವ ಜತೆ, ಈಗ ಅಲ್ಲಿರುವ ಜನರ ಪುನರ್ವಸತಿ ಮತ್ತು ಮೂಲಭೂತ ಹಕ್ಕು ರಕ್ಷಣೆಯ ಬಗ್ಗೆಯೂ ಸರ್ಕಾರ ಗಮನ ಕೊಟ್ಟು, ಅದಕ್ಕಾಗಿ ಯೋಜನೆಯನ್ನು ರೂಪಿಸಬೇಕು. ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕು ಎಂದು ಹೇಳಿರುವ ಸುಪ್ರೀಂಕೋರ್ಟ್ ಪೀಠ, ಫೆಬ್ರವರಿ 7ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದೆ.

ಇದನ್ನೂ ಓದಿ: PM Modi | ಉತ್ತರಾಖಂಡ್​​ನಲ್ಲಿ ಪ್ರಧಾನಿ ಮೋದಿ; ಕೇದಾರನಾಥದಲ್ಲಿ ಪೂಜೆ, ವಿವಿಧ ಯೋಜನೆಗಳ ಉದ್ಘಾಟನೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Covishield: ಭಾರತದಲ್ಲಿ ಕೋವಿಶೀಲ್ಡ್‌ ಸೈಡ್‌ ಎಫೆಕ್ಟ್‌ನ ಎಲ್ಲ ಮಾಹಿತಿ ಬಹಿರಂಗ ಎಂದ ಕಂಪನಿ, ಉತ್ಪಾದನೆಯೂ ಸ್ಥಗಿತ!

Covishield: ಅಸ್ಟ್ರಾಜೆನಿಕಾ ಸಹಯೋಗದಲ್ಲಿಯೇ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಕೋವಿಶೀಲ್ಡ್‌ಅನ್ನು ಭಾರತದಲ್ಲಿ ಉತ್ಪಾದನೆ ಮಾಡಿದೆ. ಜಾಗತಿಕವಾಗಿ ಅಡ್ಡ ಪರಿಣಾಮದ ಕುರಿತು ಚರ್ಚಿಸುತ್ತಿರುವ ಬೆನ್ನಲ್ಲೇ ಕಂಪನಿಯು ಸ್ಪಷ್ಟನೆ ನೀಡಿದೆ. ಲಸಿಕೆಯ ಅಡ್ಡ ಪರಿಣಾಮಗಳ ಕುರಿತು ಲಸಿಕೆ ವಿತರಿಸುವಾಗಲೇ ಮಾಹಿತಿ ನೀಡಲಾಗಿದೆ. ಈಗ ಯಾವುದೇ ಮಾಹಿತಿ ಹಂಚಿಕೊಳ್ಳಲು ಬಾಕಿ ಇಲ್ಲ ಎಂಬುದಾಗಿ ಕಂಪನಿ ತಿಳಿಸಿದೆ.

VISTARANEWS.COM


on

Covishield
Koo

ಪುಣೆ: ಲಸಿಕೆಯ ಅಡ್ಡಪರಿಣಾಮದ ಕುರಿತು ಭಾರತ ಸೇರಿ ಜಗತ್ತಿನಾದ್ಯಂತ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಬ್ರಿಟಿಷ್ ಔಷಧೀಯ ದೈತ್ಯ ಅಸ್ಟ್ರಾಜೆನಿಕಾ (AstraZeneca) ಕಂಪನಿಯು ಕೊರೊನಾ ನಿರೋಧಕ ಲಸಿಕೆ ಕೋವಿಶೀಲ್ಡ್ (Covishield Vaccine)‌ ಅನ್ನು ಜಾಗತಿಕ ಮಟ್ಟದಲ್ಲಿ ಹಿಂಪಡೆಯಲು ಮುಂದಾಗಿದೆ. ಇದರ ಬೆನ್ನಲ್ಲೇ, ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆಯನ್ನು ಉತ್ಪಾದಿಸಿದ್ದ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (SII) ಕಂಪನಿಯು, “ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆಯ ಅಡ್ಡ ಪರಿಣಾಮದ ಕುರಿತು ಇದಕ್ಕೂ ಮೊದಲೇ ಬಹಿರಂಗಪಡಿಸಲಾಗಿದೆ” ಎಂದು ಸ್ಪಷ್ಟಪಡಿಸಿದೆ.

ಅಸ್ಟ್ರಾಜೆನಿಕಾ ಸಹಯೋಗದಲ್ಲಿಯೇ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಕೋವಿಶೀಲ್ಡ್‌ಅನ್ನು ಭಾರತದಲ್ಲಿ ಉತ್ಪಾದನೆ ಮಾಡಿದೆ. ಜಾಗತಿಕವಾಗಿ ಅಡ್ಡ ಪರಿಣಾಮದ ಕುರಿತು ಚರ್ಚಿಸುತ್ತಿರುವ ಬೆನ್ನಲ್ಲೇ ಕಂಪನಿಯು ಸ್ಪಷ್ಟನೆ ನೀಡಿದೆ. “ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (Thrombosis with Thrombocytopenia Syndrome – TTS ಸೇರಿ ಎಲ್ಲ ವಿರಳ ಅಡ್ಡ ಪರಿಣಾಮಗಳ ಕುರಿತು ಈಗಾಗಲೇ ಮಾಹಿತಿ ಬಹಿರಂಗಪಡಿಸಲಾಗಿದೆ” ಎಂದು ಸೀರಂ ಸಂಸ್ಥೆಯ ವಕ್ತಾರರೊಬ್ಬರು ಪ್ರಕಟಣೆ ತಿಳಿಸಿದ್ದಾರೆ.

2021ರಲ್ಲೇ ಉತ್ಪಾದನೆ ಸ್ಥಗಿತ

ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ದೇಶದಲ್ಲಿ ಕೋವಿಶೀಲ್ಡ್‌ ಲಸಿಕೆಯನ್ನು ಕೋಟ್ಯಂತರ ಡೋಸ್‌ಗಳನ್ನು ಜನರಿಗೆ ನೀಡಲಾಗಿದೆ. ಕೊರೊನಾ ಬಿಕ್ಕಟ್ಟಿನ ಬಳಿಕ ಅಂದರೆ, 2021ರ ಡಿಸೆಂಬರ್‌ನಿಂದಲೇ ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆಯ ಉತ್ಪಾದನೆಯನ್ನು ನಿಲ್ಲಿಸಲಾಗಿದೆ ಎಂಬುದಾಗಿ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಮಾಹಿತಿ ನೀಡಿದೆ. ಅಷ್ಟೇ ಅಲ್ಲ, ಲಸಿಕೆಯ ಬಾಟಲಿ ಮೇಲೆಯೇ ಅಡ್ಡ ಪರಿಣಾಮದ ಕುರಿತು ಎಚ್ಚರಿಕೆ ನೀಡಿತ್ತು.

ಕೋವಿಶೀಲ್ಡ್‌ ಲಸಿಕೆ ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (Thrombosis with Thrombocytopenia Syndrome – TTS) ಎಂಬ ಅಪರೂಪದ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂಬುದನ್ನು ಈ ಹಿಂದೆ ಕೋರ್ಟ್‌ನಲ್ಲಿ ಒಪ್ಪಿಕೊಂಡಿದ್ದ ಅಸ್ಟ್ರಾಜೆನಿಕಾ ಕಂಪನಿಯು ಈಗ ವ್ಯಾಪಾರ ಉದ್ದೇಶದಿಂದ ಎಲ್ಲ ಮಾರುಕಟ್ಟೆಗಳಿಂದ ತನ್ನ ಈ ಲಸಿಕೆಯನ್ನು ತೆಗೆದು ಹಾಕುವುದಾಗಿ ಘೋಷಿಸಿದೆ.

ತಜ್ಞರು ಹೇಳುವುದಿಷ್ಟು

ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆ ತೆಗೆದುಕೊಂಡವರಲ್ಲಿ ರಕ್ತ ಹೆಪ್ಪುಗಟ್ಟುವ ಅಡ್ಡ ಪರಿಣಾಮದ ಅಪಾಯದ ಸಾಧ್ಯತೆಗಳು ತೀರಾ ಕಡಿಮೆ ಎಂದು ಭಾರತದ ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ, ಮಾಜಿ ICMR ವಿಜ್ಞಾನಿ ಡಾ. ರಾಮನ್ ಗಂಗಾಖೇಡ್ಕರ್ ಅವರು ಕೆಲ ದಿನಗಳ ಹಿಂದಷ್ಟೇ ಹೇಳಿದ್ದಾರೆ. ಕೋವಿಶೀಲ್ಡ್ ಅನ್ನು ಸ್ವೀಕರಿಸುವ 10 ಲಕ್ಷ ಜನರಲ್ಲಿ ಏಳರಿಂದ ಎಂಟು ವ್ಯಕ್ತಿಗಳು ಮಾತ್ರ ಥ್ರಂಬೋಸಿಸ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ಎಂದು ಕರೆಯಲ್ಪಡುವ ಅಪರೂಪದ ಅಡ್ಡ ಪರಿಣಾಮವನ್ನು ಅನುಭವಿಸುತ್ತಾರೆ. ಭಾರತದಲ್ಲಿ ಇದರ ಪ್ರಮಾಣ ಇನ್ನೂ ಕಡಿಮೆ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: Covishield vaccine: ಕೋವಿಶೀಲ್ಡ್‌ ಲಸಿಕೆಯಿಂದ ಸೈಡ್‌ ಎಫೆಕ್ಟ್‌ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

Continue Reading

ದೇಶ

Zomato: ಜೊಮ್ಯಾಟೊ ಹೊಸ ತಂತ್ರಜ್ಞಾನ; ಮನೆ ಹೊರಗೆ ಕಾಲಿಡುವ ಮುನ್ನ ಇದನ್ನು ನೋಡಲೇಬೇಕು!

Zomato: ಜೊಮ್ಯಾಟೊದ ಹೊಸ ವೆಬ್‌ಸೈಟ್‌ ಎಲ್ಲರಿಗೂ ಉಚಿತವಾಗಿ ಲಭ್ಯವಿದೆ. ಜೊಮ್ಯಾಟೊ ಫುಡ್‌ ಡೆಲಿವರಿ ಅಗ್ರಿಗೇಟರ್‌ ಆಗಿದ್ದು, ಇಂತಹ ಅಗ್ರಿಗೇಟರ್‌ಗಳು ದೇಶಾದ್ಯಂತ ಜೊಮ್ಯಾಟೊದ ವೆಬ್‌ಸೈಟ್‌ ಮೂಲಕ ಹವಾಮಾನದ ಕುರಿತ ಮಾಹಿತಿಯನ್ನು ಅರಿತುಕೊಂಡು, ತಮ್ಮ ವ್ಯಾಪಾರ, ಡೆಲಿವರಿ ಮುಂದುವರಿಸಲು ಭಾರಿ ಅನುಕೂಲವಾಗಲಿದೆ ಎಂದು ತಿಳಿದುಬಂದಿದೆ.

VISTARANEWS.COM


on

Zomato
Koo

ನವದೆಹಲಿ: ಆನ್‌ಲೈನ್‌ ಮೂಲಕ ಆಹಾರ ಪೂರೈಕೆ ಮಾಡುವಲ್ಲಿ ದೇಶಾದ್ಯಂತ ಖ್ಯಾತಿಯಾಗಿರುವ ಜೊಮ್ಯಾಟೊ ಕಂಪನಿ ಈಗ ಹೊಸ ಸಾಹಸಕ್ಕೆ ಮುಂದಾಗಿದೆ. ಹೌದು, ಹವಾಮಾನದ ಕುರಿತು ನಿಖರ ಮಾಹಿತಿ ನೀಡುವ, ದೇಶದ ಮೊದಲ ಕ್ರೌಡ್‌-ಸಪೋರ್ಟೆಡ್‌ ವೆದರ್‌ ಇನ್‌ಫ್ರಾಸ್ಟ್ರಕ್ಚರ್‌ಗೆ (First Crowd-Supported Weather Infrastructure) ಜೊಮ್ಯಾಟೊ (Zomato) ಸಿಇಒ ದೀಪಿಂದರ್‌ ಗೋಯಲ್‌ (Deepinder Goyal) ಚಾಲನೆ ನೀಡಿದ್ದಾರೆ. ಇದರಿಂದ ದೇಶದ ಪ್ರಮುಖ ನಗರಗಳ ಹವಾಮಾನವನ್ನು ಪರಿಶೀಲನೆ ಮಾಡಬಹುದಾಗಿದೆ.

ವೆದರ್‌ಯುನಿಯನ್.ಕಾಮ್‌ (ಇಲ್ಲಿ ಕ್ಲಿಕ್‌ ಮಾಡಿ-Weatherunion.com) ಎಂಬ ವೆಬ್‌ಸೈಟ್‌ಗೆ ದೀಪಿಂದರ್‌ ಗೋಯಲ್‌ ಬುಧವಾರ (ಮೇ 8) ಚಾಲನೆ ನೀಡಿದ್ದಾರೆ. ದೇಶಾದ್ಯಂತ 650 ಹವಾಮಾನ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದ್ದು, ಇದು ದೇಶದಲ್ಲಿಯೇ ಹವಾಮಾನ ಕುರಿತು ಮಾಹಿತಿ ಒದಗಿಸುವ ಮೊದಲ ಖಾಸಗಿ ಮೂಲ ಸೌಕರ್ಯ ಎಂದು ಹೇಳಲಾಗುತ್ತಿದೆ. ಇದು ಸಾಮಾನ್ಯ ಜನರ ಜತೆಗೆ ಉದ್ಯಮಿಗಳಿಗೆ, ಸ್ಟಾರ್ಟ್‌ಅಪ್‌ಗಳಿಗೆ ಭಾರಿ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.

45 ನಗರಗಳಲ್ಲಿ ಈಗ ಲಭ್ಯ

“ಜೊಮ್ಯಾಟೊ ಚಾಲನೆ ನೀಡಿರುವ ವೆದರ್‌ ವೆಬ್‌ಸೈಟ್‌ ಈಗ ಬೆಂಗಳೂರು ಸೇರಿ ದೇಶದ ಪ್ರಮುಖ 45 ನಗರಗಳಲ್ಲಿ ಲಭ್ಯವಿದೆ. Weatherunion.comಗೆ ಭೇಟಿ ನೀಡುವ ಮೂಲಕ ತಾಪಮಾನ, ಮಳೆ ಪ್ರಮಾಣ, ಸೆಕೆ, ಗಾಳಿಯ ವೇಗ, ಮಳೆ ಮುನ್ಸೂಚನೆ ಸೇರಿ ಹವಾಮಾನಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಒದಗಿಸಲಿದೆ. ಸದ್ಯ, 45 ನಗರಗಳಲ್ಲಿ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ದೇಶಾದ್ಯಂತ ವಿಸ್ತರಣೆ ಮಾಡುವ ಯೋಜನೆ ಇದೆ” ಎಂದು ಜೊಮ್ಯಾಟೊ ಸಂಸ್ಥಾಪಕರೂ ಆದ ದೀಪಿಂದರ್‌ ಗೋಯಲ್‌ ಮಾಹಿತಿ ನೀಡಿದ್ದಾರೆ.

ಎಲ್ಲರಿಗೂ ಫ್ರೀ ಫ್ರೀ

ಜೊಮ್ಯಾಟೊದ ಹೊಸ ವೆಬ್‌ಸೈಟ್‌ ಎಲ್ಲರಿಗೂ ಉಚಿತವಾಗಿ ಲಭ್ಯವಿದೆ. ಜೊಮ್ಯಾಟೊ ಫುಡ್‌ ಡೆಲಿವರಿ ಅಗ್ರಿಗೇಟರ್‌ ಆಗಿದ್ದು, ಇಂತಹ ಅಗ್ರಿಗೇಟರ್‌ಗಳು ದೇಶಾದ್ಯಂತ ಜೊಮ್ಯಾಟೊದ ವೆಬ್‌ಸೈಟ್‌ ಮೂಲಕ ಹವಾಮಾನದ ಕುರಿತ ಮಾಹಿತಿಯನ್ನು ಅರಿತುಕೊಂಡು, ತಮ್ಮ ವ್ಯಾಪಾರ, ಡೆಲಿವರಿ ಮುಂದುವರಿಸಲು ಭಾರಿ ಅನುಕೂಲವಾಗಲಿದೆ ಎಂದು ತಿಳಿದುಬಂದಿದೆ. ಈಗಾಗಲೇ ಹವಾಮಾನ ಕುರಿತು ಮಾಹಿತಿ ಒದಗಿಸುವ ಅಪ್ಲಿಕೇಶನ್‌ಗಳು, ವೆಬ್‌ಸೈಟ್‌ಗಳು ಇದ್ದರೂ, ವಿಭಿನ್ನವಾದ ಹಾಗೂ ವೇಗವಾದ ಮಾಹಿತಿ ನೀಡಲು ಜೊಮ್ಯಾಟೊ ವೆಬ್‌ಸೈಟ್‌ ಅಭಿವೃದ್ಧಿಪಡಿಸಿದೆ ಎನ್ನಲಾಗಿದೆ. ಒಂದು ನಿಮಿಷಕ್ಕೊಮ್ಮೆ ಹವಾಮಾನದ ಕುರಿತು ಮಾಹಿತಿ ಒದಗಿಸುವ ಸೌಲಭ್ಯವಿದ್ದು, ವೆದರ್‌ ಸ್ಟೇಷನ್‌ಗಳ ಸಂಖ್ಯೆಯನ್ನೂ ಇನ್ನಷ್ಟು ಹೆಚ್ಚಿಸುವ ಗುರಿ ಹೊಂದಿದೆ.

ಇದನ್ನೂ ಓದಿ: Zomato Pure Veg: ʼಜೊಮ್ಯಾಟೋ ಪ್ಯೂರ್‌ ವೆಜ್‌ʼ ಡೆಲಿವರಿಗೆ ಅಪಹಾಸ್ಯ? ʼಜಾಹೀರಾತು ಮಾಲೀಕ ನಾನಲ್ಲʼ ಎಂದ ಸ್ವಿಗ್ಗಿ!

Continue Reading

ದೇಶ

Hindu Population: ಹಿಂದೂಗಳ ಜನಸಂಖ್ಯೆ ಶೇ.7.8 ಕುಸಿತ; ಮುಸ್ಲಿಮರ ಸಂಖ್ಯೆ ಶೇ.43.15 ಏರಿಕೆ!

ಭಾರತದ ಬಹುಸಂಖ್ಯಾತ ಹಿಂದೂಗಳ ಜನಸಂಖ್ಯೆ (Hindu Population) ಕಳೆದ 65 ವರ್ಷಗಳಲ್ಲಿ ಶೇ. 7.8ರಷ್ಟು ಕುಸಿತವಾಗಿದ್ದು, ಅಲ್ಪಸಂಖ್ಯಾತರ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. 1950 ಮತ್ತು 2015ರ ನಡುವೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯ ಪಾಲು ಶೇ. 43.15ರಷ್ಟು ಹೆಚ್ಚಾಗಿದೆ. ಕ್ರಿಶ್ಚಿಯನ್ನರು ಶೇ.5.38, ಸಿಖ್ಖರು ಶೇ.6.58 ಮತ್ತು ಬೌದ್ಧರ ಜನಸಂಖ್ಯೆ ಪ್ರಮಾಣದಲ್ಲಿ ಸ್ವಲ್ಪ ಹೆಚ್ಚಳವಾಗಿದೆ.

VISTARANEWS.COM


on

By

Hindu population
Koo

ಭಾರತದ ಬಹುಸಂಖ್ಯಾತ ಹಿಂದೂಗಳ ಜನಸಂಖ್ಯೆ (Hindu Population) 1950 ಮತ್ತು 2015ರ ನಡುವೆ ಶೇ. 7.8ರಷ್ಟು ಕುಸಿತವಾಗಿದೆ ಎಂದು ಪ್ರಧಾನಮಂತ್ರಿಯ ( Prime Minister) ಆರ್ಥಿಕ ಸಲಹಾ ಮಂಡಳಿ (Economic Advisory Council) (EAC- PM) ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.

ಭಾರತದಲ್ಲಿ ಹಿಂದೂ ಜನಸಂಖ್ಯೆಯು ಕುಗ್ಗಿದರೆ, ಮುಸ್ಲಿಂ (muslim), ಕ್ರಿಶ್ಚಿಯನ್ (Christian), ಬೌದ್ಧ (Buddhist) ಮತ್ತು ಸಿಖ್ಖರು (Sikhs) ಸೇರಿದಂತೆ ಅಲ್ಪಸಂಖ್ಯಾತರ ಜನಸಂಖ್ಯೆ ಬಹುತೇಕ ಹೆಚ್ಚಾಗಿದೆ. ಆದರೆ ಜೈನ (jain) ಮತ್ತು ಪಾರ್ಸಿಗಳ (Parsis ) ಸಂಖ್ಯೆ ಕುಸಿತವಾಗಿದೆ.

1950 ಮತ್ತು 2015ರ ನಡುವೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯ ಪಾಲು ಶೇ. 43.15ರಷ್ಟು ಹೆಚ್ಚಾಗಿದೆ. ಕ್ರಿಶ್ಚಿಯನ್ನರು ಶೇ.5.38, ಸಿಖ್ಖರು ಶೇ.6.58 ಮತ್ತು ಬೌದ್ಧರ ಜನಸಂಖ್ಯೆ ಪ್ರಮಾಣದಲ್ಲಿ ಸ್ವಲ್ಪ ಹೆಚ್ಚಳವಾಗಿದೆ.

ಪ್ರಧಾನಮಂತ್ರಿಯ ಆರ್ಥಿಕ ಸಲಹಾ ಮಂಡಳಿ ಪ್ರಕಾರ 65 ವರ್ಷಗಳಲ್ಲಿ ಭಾರತದ ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು 1950ರಲ್ಲಿ ಶೇ. 84ರಿಂದ 2015ರಲ್ಲಿ ಶೇ.78ಕ್ಕೆ ಕುಸಿತವಾಗಿದೆ. ಆದರೆ ಮುಸ್ಲಿಮರ ಸಂಖ್ಯೆ ಇದೇ ಅವಧಿಯಲ್ಲಿ ಶೇ.9.84ರಿಂದ ಶೇ.14.09ಕ್ಕೆ ಏರಿಕೆಯಾಗಿದೆ.


ಮ್ಯಾನ್ಮಾರ್‌, ನೇಪಾಳದಲ್ಲೂ ಕುಸಿತ

ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳ ಜನಸಂಖ್ಯೆಯ ಕುಗ್ಗುವಿಕೆ ಶೇ. 7.8ರಷ್ಟಿದ್ದರೆ, ಮ್ಯಾನ್ಮಾರ್‌ನಲ್ಲಿ ಶೇ. 10ರಷ್ಟು ಕುಸಿತವಾಗಿದೆ. ಇದು ನೆರೆಹೊರೆಯ ರಾಷ್ಟ್ರದಲ್ಲಿ ಎರಡನೇ ಅತ್ಯಂತ ಮಹತ್ವದ ಕುಸಿತವಾಗಿದೆ. ಭಾರತವನ್ನು ಹೊರತುಪಡಿಸಿ, ನೇಪಾಳದ ಬಹುಸಂಖ್ಯಾತ ಸಮುದಾಯವಾದ ಹಿಂದೂಗಳ ಜನಸಂಖ್ಯೆಯ ತನ್ನ ಪಾಲಿನಲ್ಲಿ ಶೇ. 3.6ರಷ್ಟು ಕುಸಿತವನ್ನು ಕಂಡಿದೆ.

167 ದೇಶಗಳ ಮೌಲ್ಯಮಾಪನ

ಮೇ 2024ರಲ್ಲಿ ಬಿಡುಗಡೆಯಾದ ಈ ಅಧ್ಯಯನವು ಪ್ರಪಂಚದಾದ್ಯಂತ 167 ದೇಶಗಳಲ್ಲಿನ ಪ್ರವೃತ್ತಿಯನ್ನು ಮೌಲ್ಯಮಾಪನ ಮಾಡಿದೆ. ಭಾರತದ ಕಾರ್ಯಕ್ಷಮತೆಯು ದೊಡ್ಡ ಜಾಗತಿಕ ಪ್ರವೃತ್ತಿಗಳೊಂದಿಗೆ ಸ್ಥಿರವಾಗಿದೆ ಎನ್ನುತ್ತಾರೆ ಅಧ್ಯಯನಕಾರರು. ಅಲ್ಪಸಂಖ್ಯಾತರು ಭಾರತದಲ್ಲಿ ಕೇವಲ ರಕ್ಷಿಸಲ್ಪಟ್ಟಿಲ್ಲ, ನಿಜವಾಗಿಯೂ ಬೆಳೆಯುತ್ತಿದ್ದಾರೆ ಎಂಬುದನ್ನು ಈ ಅಂಕಿ ಅಂಶಗಳು ತೋರಿಸಿವೆ ಎನ್ನುತ್ತಾರೆ ತಜ್ಞರು.

ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಹೆಚ್ಚಳ

ಭಾರತದ ಜನಸಂಖ್ಯೆಯ ಬೆಳವಣಿಗೆಯ ಕಥೆಯು ಅದರ ನೆರೆಹೊರೆಯ ದೇಶಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. 1950 ಮತ್ತು 2015ರ ನಡುವೆ ಭಾರತ ದೇಶದ ಜನಸಂಖ್ಯೆಯಲ್ಲಿ ಭಾರತೀಯ ಬಹುಸಂಖ್ಯಾತ ಸಮುದಾಯವಾದ ಹಿಂದೂಗಳ ಪಾಲು ಶೇ. 7.8ರಷ್ಟು ಕಡಿಮೆಯಾಗಿದೆ. ಆದರೆ ಮುಸ್ಲಿಮರು ಬಹುಸಂಖ್ಯಾತರಾಗಿರುವ ನೆರೆಯ ದೇಶಗಳಲ್ಲಿ ಮುಸ್ಲಿಂ ಸಮುದಾಯದ ಪಾಲು ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಮುಸ್ಲಿಮರ ಜನಸಂಖ್ಯೆಯಲ್ಲಿ ಬಾಂಗ್ಲಾದೇಶವು ಶೇ. 18.5ರಷ್ಟು ಏರಿಕೆಯನ್ನು ಕಂಡಿದ್ದು, ಅನಂತರ ಪಾಕಿಸ್ತಾನದಲ್ಲಿ ಶೇ. 3.75 ಮತ್ತು ಅಫ್ಘಾನಿಸ್ತಾನದಲ್ಲಿ 0.29ರಷ್ಟು ಹೆಚ್ಚಳವಾಗಿದೆ.

1971ರಲ್ಲಿ ಬಾಂಗ್ಲಾದೇಶದ ರಚನೆಯ ಹೊರತಾಗಿಯೂ ಪಾಕಿಸ್ತಾನವು ಬಹುಸಂಖ್ಯಾತ ಧಾರ್ಮಿಕ ಪಂಗಡದ (ಹನಾಫಿ ಮುಸ್ಲಿಂ) ಪಾಲನ್ನು ಶೇ. 3.75ರಷ್ಟು ಹೆಚ್ಚಿಸಿಕೊಂಡಿದೆ ಮತ್ತು ಒಟ್ಟು ಮುಸ್ಲಿಂ ಜನಸಂಖ್ಯೆಯ ಪಾಲಿನಲ್ಲಿ ಶೇ.10ರಷ್ಟು ಹೆಚ್ಚಾಗಿದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಮ್ಯಾನ್ಮಾರ್‌ನಲ್ಲಿ ಥೇರವಾಡ ಬೌದ್ಧರ ಬಹುಪಾಲು ಜನಸಂಖ್ಯೆಯು 65 ವರ್ಷಗಳಲ್ಲಿ ಶೇ. 10ರಷ್ಟು ಕುಸಿದಿದೆ.

ನೇಪಾಳದಲ್ಲಿ ಬಹುಸಂಖ್ಯಾತ ಹಿಂದೂ ಜನಸಂಖ್ಯೆಯಲ್ಲಿ ಶೇ. 3.6 ಕುಸಿತವನ್ನು ಕಂಡಿದೆ. ಮಾಲ್ಡೀವ್ಸ್‌ನಲ್ಲಿ ಬಹುಪಾಲು ಗುಂಪಿನ (ಶಾಫಿ ಸುನ್ನಿಗಳು) ಪಾಲು ಶೇ.1.47ರಷ್ಟು ಕುಸಿದಿದೆ.

ಬೌದ್ಧ ಜನಸಂಖ್ಯೆಯಲ್ಲಿ ಏರಿಕೆ

ಬಹುಪಾಲು ಬೌದ್ಧ ಜನಸಂಖ್ಯೆಯನ್ನು ಹೊಂದಿರುವ ಭಾರತದ ನೆರೆಯ ದೇಶಗಳಾದ ಭೂತಾನ್ ಮತ್ತು ಶ್ರೀಲಂಕಾ ಕ್ರಮವಾಗಿ ಶೇ. 17.6 ಮತ್ತು ಶೇ. 5.25ರಷ್ಟು ಏರಿಕೆ ಕಂಡಿವೆ.

ಇದನ್ನೂ ಓದಿ: Viral Video: ಅಂಬಾನಿಗಿಂತಲೂ ರಿಚ್‌ ಈತ.. ಗದ್ದೆ ಉಳುಮೆಗೆ 20 ಲಕ್ಷದ ಕಾರೇ ಬೇಕು..!

ಒಟ್ಟು ಜನಸಂಖ್ಯೆಯ ಪಾಲಿನ ಅಲ್ಪಸಂಖ್ಯಾತರ ಅನುಪಾತದಲ್ಲಿನ ಬದಲಾವಣೆಯು ದೇಶದಲ್ಲಿ ಅಲ್ಪಸಂಖ್ಯಾತರ ಸ್ಥಾನಮಾನಕ್ಕೆ ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಇದು ಅಲ್ಪಸಂಖ್ಯಾತರನ್ನು ವ್ಯಾಖ್ಯಾನಿಸುವುದು ಸೇರಿದಂತೆ ನೀತಿಗಳ ಮೂಲಕ ಪೋಷಿಸಲು ಕಾರಣವಾಗುತ್ತದೆ. ಜಾಗತಿಕವಾಗಿ ಇದೊಂದು ಅಪರೂಪದ ಘಟನೆ ಎಂದು ಅಧ್ಯಯನ ಹೇಳಿದೆ.

Continue Reading

ದೇಶ

Jan Aushadhi: ಪ್ರಯಾಣಿಕರಿಗೆ ಗುಡ್‌ ನ್ಯೂಸ್; ರೈಲು ನಿಲ್ದಾಣಗಳಲ್ಲೂ ಸಿಗಲಿವೆ ಕಡಿಮೆ ಬೆಲೆಗೆ ಔಷಧ!

Jan Aushadhi: ರೈಲು ನಿಲ್ದಾಣಗಳನ್ನು ಮತ್ತಷ್ಟು ಪ್ರಯಾಣಿಕರ ಸ್ನೇಹಿಯಾಗಿ ರೂಪಿಸಲು ರೈಲ್ವೆ ಇಲಾಖೆಯು ಚಿಂತನೆ ನಡೆಸಿದೆ. ಅದರಲ್ಲೂ, ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ದೇಶಾದ್ಯಂತ ನಿರ್ಮಿಸಲಾಗಿದ್ದು, ಕಡಿಮೆ ಬೆಲೆಗೆ ಔಷಧಗಳನ್ನು ಮಾರಾಟ ಮಾಡಲಾಗುತ್ತಿದೆ. ಈಗ ರೈಲು ನಿಲ್ದಾಣಗಳಲ್ಲೂ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲು ರೈಲ್ವೆ ಇಲಾಖೆಯು ಚಿಂತನೆ ನಡೆಸಿದೆ.

VISTARANEWS.COM


on

Jan Aushadhi
Koo

ನವದೆಹಲಿ: ರೈಲುಗಳಲ್ಲಿ ಪ್ರಯಾಣ ಮಾಡುವಾಗ ಊಟ, ತಿಂಡಿ, ಪಾನೀಯಗಳ ಪೂರೈಕೆಯಾಗುತ್ತದೆ. ಆದರೆ, ತುರ್ತು ಸಂದರ್ಭಗಳಲ್ಲಿ ರೈಲು ನಿಲ್ದಾಣಗಳಲ್ಲಿ ಮೆಡಿಕಲ್‌ ಶಾಪ್‌ಗಳು ಸಿಗದೆ, ಔಷಧ ಸಿಗದೆ ರೈಲು ಪ್ರಯಾಣಿಕರು ತೊಂದರೆ ಅನುಭವಿಸುತ್ತಾರೆ. ದಿಢೀರನೆ ಜ್ವರ, ತಲೆನೋವು ಕಾಣಿಸಿಕೊಂಡರೆ ಔಷಧಗಳಿಗಾಗಿ ಪರದಾಡಬೇಕಾಗುತ್ತದೆ. ಇದನ್ನು ಮನಗಂಡಿರುವ ಕೇಂದ್ರ ಸರ್ಕಾರವು, ದೇಶಾದ್ಯಂತ ರೈಲು ನಿಲ್ದಾಣಗಳಲ್ಲಿ (Railway Stations) 100 ಜನೌಷಧಿ ಕೇಂದ್ರಗಳನ್ನು (Jan Aushadhi Kendra) ಸ್ಥಾಪಿಸಲು ತೀರ್ಮಾನಿಸಿದೆ. ಇದರಿಂದ ರೈಲ್ವೆ ಪ್ರಯಾಣಿಕರಿಗೆ ಭಾರಿ ಅನುಕೂಲವಾಗಲಿದೆ.

ಹೌದು, ರೈಲು ನಿಲ್ದಾಣಗಳನ್ನು ಮತ್ತಷ್ಟು ಪ್ರಯಾಣಿಕರ ಸ್ನೇಹಿಯಾಗಿ ರೂಪಿಸಲು ರೈಲ್ವೆ ಇಲಾಖೆಯು ಚಿಂತನೆ ನಡೆಸಿದೆ. ಅದರಲ್ಲೂ, ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ದೇಶಾದ್ಯಂತ ನಿರ್ಮಿಸಲಾಗಿದ್ದು, ಕಡಿಮೆ ಬೆಲೆಗೆ ಔಷಧಗಳನ್ನು ಮಾರಾಟ ಮಾಡಲಾಗುತ್ತಿದೆ. ರೈಲು ನಿಲ್ದಾಣಗಳಲ್ಲೂ ಜನೌಷಧಿ ಕೇಂದ್ರಗಳನ್ನು ನಿರ್ಮಿಸುವುದರಿಂದ ಪ್ರಯಾಣಿಕರಿಗೆ ಸುಲಭವಾಗಿ ರೈಲು ನಿಲ್ದಾಣಗಳಲ್ಲಿ ಔಷಧ ಸಿಗುವ ಜತೆಗೆ ಹಣವೂ ಉಳಿತಾಯವಾಗಲಿದೆ.

50 ರೈಲು ನಿಲ್ದಾಣಗಳ ನಿಗದಿ

“ಆರಂಭಿಕ ಹಂತದಲ್ಲಿ ದೇಶಾದ್ಯಂತ 100ಕ್ಕೂ ಅಧಿಕ ರೈಲು ನಿಲ್ದಾಣಗಳಲ್ಲಿ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಿರುವ ರೈಲ್ವೆ ಇಲಾಖೆಯು ಈಗಾಗಲೇ 50 ರೈಲು ನಿಲ್ದಾಣಗಳನ್ನು ಗುರುತಿಸಿದೆ. ರೈಲು ನಿಲ್ದಾಣದಲ್ಲಿ ಒಂದು ಜನೌಷಧಿ ಕೇಂದ್ರವನ್ನು ಸ್ಥಾಪಿಸಲು ಸುಮಾರು 12.53 ಲಕ್ಷ ರೂ. ಬೇಕಾಗುತ್ತದೆ. ಇನ್ನೂ 61 ರೈಲು ನಿಲ್ದಾಣಗಳನ್ನು ನಿಗದಿಪಡಿಸಬೇಕಿದೆ. ಮೊದಲು ರೈಲು ನಿಲ್ದಾಣಗಳನ್ನು ಗುರುತಿಸಿ, ಬಳಿಕ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸುವವರಿಗೆ ಪರವಾನಗಿ ನೀಡಲಾಗುತ್ತದೆ” ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

“ರೈಲು ನಿಲ್ದಾಣಗಳಲ್ಲಿ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸುವುದರಿಂದ ಲಕ್ಷಾಂತರ ಪ್ರಯಾಣಿಕರಿಗೆ ಹಾಗೂ ರೈಲು ನಿಲ್ದಾಣಕ್ಕೆ ಭೇಟಿ ನೀಡುವವರಿಗೆ ಕಡಿಮೆ ಬೆಲೆಗೆ ಔಷಧಗಳು ಸಿಗುತ್ತವೆ. ಹಾಗೆಯೇ, ಜನರಿಗೆ ಗುಣಮಟ್ಟದ ಔಷಧಗಳು ದೊರೆಯುವ ಜತೆಗೆ ಉದ್ಯೋಗ ಸೃಷ್ಟಿಯಾಗುತ್ತದೆ. ಉದ್ಯಮಿಗಳು ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ” ಎಂದು ಅಧಿಕಾರಿಯು ತಿಳಿಸಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ದೇಶದಲ್ಲಿ 10 ಸಾವಿರಕ್ಕೂ ಅಧಿಕ ಜನೌಷಧಿ ಕೇಂದ್ರಗಳಿದ್ದು, ಸಾವಿರಾರು ಔಷಧಿಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ: Gratuity: ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್;‌ ಗ್ರಾಚ್ಯುಟಿ, ಶಿಕ್ಷಣ ಭತ್ಯೆ ಶೀಘ್ರವೇ 25% ಹೆಚ್ಚಳ!

Continue Reading
Advertisement
Covishield
ದೇಶ2 mins ago

Covishield: ಭಾರತದಲ್ಲಿ ಕೋವಿಶೀಲ್ಡ್‌ ಸೈಡ್‌ ಎಫೆಕ್ಟ್‌ನ ಎಲ್ಲ ಮಾಹಿತಿ ಬಹಿರಂಗ ಎಂದ ಕಂಪನಿ, ಉತ್ಪಾದನೆಯೂ ಸ್ಥಗಿತ!

RCB vs PBKS
ಕ್ರೀಡೆ23 mins ago

RCB vs PBKS: ಪಂಜಾಬ್​-ಆರ್​ಸಿಬಿ ಸೆಣಸಾಟ; ಸೋತವರು ಟೂರ್ನಿಯಿಂದ ಔಟ್​

Prajwal Revanna Case JDS delegation moves Womens Commission to arrest pen drive allottees
ಕ್ರೈಂ38 mins ago

Prajwal Revanna Case: ಪೆನ್‌ಡ್ರೈವ್ ಹಂಚಿಕೆದಾರರ ಬಂಧಿಸಿ; ಸಿಎಂ, ಡಿಸಿಎಂ ವಿರುದ್ಧ ಮಹಿಳಾ ಜೆಡಿಎಸ್‌ ಗರಂ!

Zomato
ದೇಶ39 mins ago

Zomato: ಜೊಮ್ಯಾಟೊ ಹೊಸ ತಂತ್ರಜ್ಞಾನ; ಮನೆ ಹೊರಗೆ ಕಾಲಿಡುವ ಮುನ್ನ ಇದನ್ನು ನೋಡಲೇಬೇಕು!

Hindu population
ದೇಶ41 mins ago

Hindu Population: ಹಿಂದೂಗಳ ಜನಸಂಖ್ಯೆ ಶೇ.7.8 ಕುಸಿತ; ಮುಸ್ಲಿಮರ ಸಂಖ್ಯೆ ಶೇ.43.15 ಏರಿಕೆ!

Rain News
ಪ್ರಮುಖ ಸುದ್ದಿ43 mins ago

Rain News: ರಾಜ್ಯದ ವಿವಿಧೆಡೆ ಗುಡುಗು ಸಹಿತ ಭಾರಿ ಮಳೆ; ಬೆಂಗಳೂರಿನಲ್ಲಿ ಹೊಳೆಯಂತಾದ ರಸ್ತೆಗಳು!

BJP Karnataka State police issues notices to JP Nadda and Amit Malviya and BY Vijayendra
ಕ್ರೈಂ1 hour ago

BJP Karnataka: ಜೆ.ಪಿ. ನಡ್ಡಾ, ಅಮಿತ್‌ ಮಾಳವೀಯಾಗೆ ರಾಜ್ಯ ಪೊಲೀಸರ ನೋಟಿಸ್‌; 7 ದಿನದೊಳಗೆ ವಿಚಾರಣೆಗೆ ಹಾಜರಾಗಲು ಸೂಚನೆ

Sam Pitroda
ಪ್ರಮುಖ ಸುದ್ದಿ1 hour ago

Sam Pitroda: ಭಾರತೀಯರ ಬಣ್ಣದ ಕುರಿತು ಮಾತಾಡಿದ ಸ್ಯಾಮ್‌ ಪಿತ್ರೋಡಾ ತಲೆದಂಡ; ಕಾಂಗ್ರೆಸ್‌ ಸ್ಥಾನಕ್ಕೆ ರಾಜೀನಾಮೆ!

Neeraj Chopra
ಕ್ರೀಡೆ2 hours ago

Neeraj Chopra: 3 ವರ್ಷದ ಬಳಿಕ ದೇಶೀಯ ಕ್ರೀಡಾಕೂಟದಲ್ಲಿ ನೀರಜ್​ ಚೋಪ್ರಾ ಸ್ಪರ್ಧೆ

Cancer Risk
ಆರೋಗ್ಯ2 hours ago

Cancer Risk: ಕ್ಯಾನ್ಸರ್ ಅಪಾಯದಿಂದ ಪಾರಾಗಲು ಯಾವ ಆಹಾರ ಸೇವಿಸಬಾರದು? ಯಾವ ಆಹಾರ ಸೇವಿಸಬೇಕು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ16 hours ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ24 hours ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ1 day ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ1 day ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ2 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ2 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ2 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ3 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ3 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌