Maha Shivaratri 2023: ಬೆಂಗಳೂರಿನ ಪುರಾತನ ಶಿವ ದೇವಾಲಯಗಳಲ್ಲೊಂದು ಸುತ್ತು! - Vistara News

ಧಾರ್ಮಿಕ

Maha Shivaratri 2023: ಬೆಂಗಳೂರಿನ ಪುರಾತನ ಶಿವ ದೇವಾಲಯಗಳಲ್ಲೊಂದು ಸುತ್ತು!

ಬೆಂಗಳೂರು ಉದ್ಯಾನಗಳ ನಗರಿ ಹೇಗೋ ಹಾಗೆಯೇ, ದೇವಸ್ಥಾನಗಳ ನಗರಿಯೂ ಹೌದು. ಇಲ್ಲಿ ಶತಶತಮಾನಗಳಷ್ಟು ಹಳೆಯ, ಪುರಾತನ ದೇಗುಲಗಳು ಮೌನವಾಗಿ ಕೂತು ತಮ್ಮ ಕಥೆಗಳನ್ನು ಹೇಳುತ್ತವೆ. ಮಹಾಶಿವರಾತ್ರಿಯ (Maha Shivaratri 2023) ನೆಪದಲ್ಲಿ ಬೆಂಗಳೂರಿನ ಇಂಥ ಪುರಾತನ ಶಿವ ದೇವಸ್ಥಾನಗಳ (shiva temples) ಸಮುಚ್ಛಯಗಳಲ್ಲೊಮ್ಮೆ ಸುತ್ತು ಹಾಕಿಕೊಂಡು ಬರೋಣ.

VISTARANEWS.COM


on

Maha Shivaratri 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರಿನಂಥ ಮಹಾನಗರದಲ್ಲಿದ್ದೂ ಎಷ್ಟೋ ಬಾರಿ ನಮಗೆ ನಮ್ಮದೇ ಊರಿನ ಐತಿಹ್ಯಗಳು ಗೊತ್ತಿರುವುದಿಲ್ಲ.‌ ನಮ್ಮ ಪಕ್ಕದ ಬೀದಿಯಲ್ಲೇ ಇರುವ ದೇವಸ್ಥಾನವೊಂದರ ವಿಶೇಷತೆಯ ಅರಿವಿರುವುದಿಲ್ಲ. ಎಷ್ಟೋ ಬಾರಿ ಅದೇ ಗಲ್ಲಿಯಲ್ಲಿ ಹಾದುಹೋದರೂ ಒಳಗೊಮ್ಮೆ ಹೋಗಿ ಅನುಭವಿಸಿ ಬರುವುದಿಲ್ಲ. ವಿಶೇಷವೆಂದರೆ, ಬೆಂಗಳೂರು ಉದ್ಯಾನಗಳ ನಗರಿ ಹೇಗೋ ಹಾಗೆಯೇ, ದೇವಸ್ಥಾನಗಳ ನಗರಿಯೂ ಹೌದು. ಇಲ್ಲಿ ಶತಶತಮಾನಗಳಷ್ಟು ಹಳೆಯ, ಪುರಾತನ ದೇಗುಲಗಳು ಮೌನವಾಗಿ ಕೂತು ತಮ್ಮ ಕಥೆಗಳನ್ನು ಹೇಳುತ್ತವೆ. ಮಹಾಶಿವರಾತ್ರಿಯ (Maha Shivaratri 2023) ನೆಪದಲ್ಲಿ ಬೆಂಗಳೂರಿನ ಇಂಥ ಪುರಾತನ ಶಿವ ದೇವಸ್ಥಾನದ (shiva temples) ಸಮುಚ್ಛಯಗಳಲ್ಲೊಮ್ಮೆ ಸುತ್ತು ಹಾಕಿಕೊಂಡು ಬರೋಣ.

kote jalakanteshwara

೧. ಕೋಟೆ ಜಲಕಂಠೇಶ್ವರ ಸ್ವಾಮಿ ದೇವಸ್ಥಾನ: ಕಲಾಸಿಪಾಳ್ಯ ಬಸ್‌ ನಿಲ್ದಾಣದ ಬಳಿ ಇರುವ ಕೋಟೆ ಜಲಕಂಠೇಶ್ವರ ಸ್ವಾಮಿ ದೇವಸ್ಥಾನ ಬೆಂಗಳೂರಿನ ಹಳೆಯ ದೇವಸ್ಥಾನಗಳಲ್ಲಿ ಒಂದು. ಇದು ಚೋಳರ ಕಾಲದ್ದು. ಕೆಂಪೇಗೌಡರ ಕಾಲದಲ್ಲಿ ಇದು ಜೀರ್ಣಾಭಿವೃದ್ಧಿ ಹೊಂದಿದ ಇದು ಸುಮಾರು ೪೦೦ ವರ್ಷಗಳಿಂದ ಹಾಗೆಯೇ ಇದೆ. ಜಲಕಂಠೇಶ್ವರ, ಪಾರ್ವತಿ ಹಾಗೂ ಕೈಲಾಸನಾಥ ದೇಗುಲಗಳು ಈ ಸಮುಚ್ಛಯದೊಳಗಿದ್ದು ಸಾವಿರಾರು ಭಕ್ತರನ್ನು ಸೆಳೆಯುತ್ತದೆ. ಒಂಭತ್ತು ಸ್ತಂಭಗಳು ನವಗ್ರಹಗಳನ್ನು ಹೊಂದಿದೆ. ಮುಖ್ಯದ್ವಾರದಿಂದ ಪ್ರವೇಶ ಮಾಡುವಾಗಲೇ ಅರ್ಧ ನಾರೀಶ್ವರ ವಿಗ್ರಹ ಕಣ್ಣಿಗೆ ಬೀಳುವ ಹಾಗಿದ್ದು, ಇದರಲ್ಲಿ ಪಾರ್ವತಿಯ ಮುಖವಷ್ಟೇ ಒಂದು ಬದಿಯಿಂದ ಮುಖ್ಯವಾಗಿ ಕಾಣುವುದು ವಿಶೇಷ.

gavi gangadhareshwara

೨. ಗವಿಗಂಗಾಧರೇಶ್ವರ ದೇವಸ್ಥಾನ: ಕೆಂಪೇಗೌಡನಗರದ ಗವಿಪುರಂ ಬಡಾವಣೆಯ ಬಹುಮುಖ್ಯ ಆಕರ್ಷಣೆ ಎಂದರೆ ಗವಿಗಂಗಾಧರೇಶ್ವರ ದೇವಾಲಯ. ಗವಿಪುರಂನ ಗುಹಾ ದೇವಾಲಯ ಎಂದೇ ಖ್ಯಾತಿವೆತ್ತಿರುವ ಇದು ಏಕಶಿಲಾ ಕಂಬಗಳಿಂದ ಮಾಡಲ್ಪಟ್ಟಿದೆ. ೧೬ನೇ ಶತಮಾನದಲ್ಲಿ ಕೆಂಪೇಗೌಡರು ಇದನ್ನು ನಿರ್ಮಿಸಿದರೆಂದು ಇತಿಹಾಸ ಹೇಳುತ್ತದೆ. ಮಕರ ಸಂಕ್ರಾಂತಿಯಂದು ದೇವಾಲಯದೊಳಕ್ಕೆ ನೇರವಾಗಿ ಮೊದಲ ಸೂರ್ಯರಶ್ಮಿ ಪ್ರತಿಫಲಿಸುವುದರಿಂದ ಹಿಡಿದು ಈ ದೇವಾಲಯಕ್ಕೆ ಅದರದ್ದೇ ಆದ ವಿಶೇಷತೆಗಳಿವೆ. ಹಾಗಾಗಿ ಗವಿಪುರಂ ಬೆಂಗಳೂರಿನ ಅತ್ಯಂತ ಪ್ರಮುಖ ಹಾಗೂ ಹಳೆಯ ದೇವಾಲಯಗಳಲ್ಲಿ ಒಂದಾಗಿ ಭಕ್ತರಿಗೆ ಪ್ರಿಯವಾಗಿದೆ.

kadu malleshwara

೩. ಕಾಡು ಮಲ್ಲೇಶ್ವರ ದೇವಸ್ಥಾನ: ಈ ದೇವಸ್ಥಾನ ೧೭ನೇ ಶತಮಾನಕ್ಕೆ ಸೇರಿದ್ದು. ಮರಾಠಾ ರಾಜರುಗಳಲ್ಲಿ ಒಬ್ಬರಾದ ವೆಂಕೋಜಿ (ಶಿವಾಜಿಯ ದಾಯಾದಿ) ನಿರ್ಮಿಸಿದನೆಂದು ಹೇಳಲಾಗುತ್ತದೆ. ದ್ರಾವಿಡ ಶೈಲಿಯಲ್ಲಿರುವ ಈ ದೇವಸ್ಥಾನದಲ್ಲಿ ಶಿವನನ್ನು ಮಲ್ಲಿಕಾರ್ಜುನನ ರೂಪದಲ್ಲಿ ಪೂಜಿಸಲಾಗುತ್ತದೆ. ದೇವಾಲಯದ ಮುಂಭಾಗವನ್ನು ನಂದೀಶ್ವರ ತೀರ್ಥ ಅಥವಾ ಬಸವ ತೀರ್ಥವೆಂದೂ ಹೇಳಲಾಗುತ್ತದೆ. ಇದೇ ಬೆಂಗಳೂರಿನ ವೃಷಭಾವತಿ ನದಿಯ ಹುಟ್ಟು ಎಂಬ ನಂಬಿಕೆ. ಮಲ್ಲೇಶ್ವರ ಎಂಬ ಹೆಸರು ಬರಲು ಕಾರಣವೂ ಇದೇ ದೇವಾಲಯ.

ಇದನ್ನೂ ಓದಿ: Maha Shivaratri 2023 : ಶಿವನ ಮಹಾ ಮಹೋತ್ಸವ ಮಹಾ ಶಿವರಾತ್ರಿ

halasuru someshwara

೪. ಹಲಸೂರು ಸೋಮೇಶ್ವರ ದೇವಸ್ಥಾನ: ಹಲಸೂರು ರಸ್ತೆಯ ಸೋಮೇಶ್ವರಪುರದಲ್ಲಿರುವ ಈ ದೇವಸ್ಥಾನ ಬೆಂಗಳೂರಿನ ಅತ್ಯಂತ ಹಳೆಯ ದೇವಸ್ಥಾನಗಳಲ್ಲಿ ಬಹುಮುಖ್ಯವಾದದ್ದು. ಚೋಳರು ನಿರ್ಮಿಸಿದರೆಂದು ಹೇಳಲಾದರೂ ಈ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ವಿಜಯನಗರ ಕಾಲದಲ್ಲಿ ಮಾಡಲಾಯಿತೆಂದು ಹೇಳಲಾಗುತ್ತದೆ. ಇನ್ನೊಂದು ಕಥೆಯ ಪ್ರಕಾರ ಕೆಂಪೇಗೌಡರು ಬೇಟೆಯಾಡುತ್ತಾ ಯಲಹಂಕದ ಬಳಿ ಬಂದಾಗ ಸುಸ್ತಾಘಿ ಮರದ ಕೆಳಗೆ ವಿಶ್ರಾಂತಿ ಪಡೆದಾಗ, ಕನಸಿನಲ್ಲಿ ಬಂದ ಸೋಮೇಶ್ವರ ದೇವರು ಇಂಥ ಜಾಗದಲ್ಲಿ ದೇವಾಲಯ ನಿರ್ಮಿಸೆಂದು ಹೇಳಿದ ಕಾರಣ ನಿರ್ಮಿತವಾದ ದೇಗುಲ ಎಂಬ ವಿವರಣೆಯೂ ಸಿಗುತ್ತದೆ.

old madiwala temple

೫. ಹಳೆ ಮಡಿವಾಳ ಸೋಮೇಶ್ವರ ದೇವಸ್ಥಾನ: ಇದೂ ಕೂಡಾ ಬೆಂಗಳೂರಿನ ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದು. ಚೋಳರ ಕಾಲದಲ್ಲಿ ಇದು ೧೨೪೭ರಲ್ಲಿ ನಿರ್ಮಿತವಾಯಿತು ಎನ್ನುತ್ತದೆ ಇತಿಹಾಸ. ಈ ದೇವಸ್ಥಾನದ ಶಿವಲಿಂಗ ʻಸ್ವಯಂಭುʼ ಅಂದರೆ, ನೈಸರ್ಗಿಕವಾಗಿ ಉದ್ಭವವಾದ ಲಿಂಗವಾದ್ದರಿಂದ ವಿಶೇಷ ಎಂಬ ನಂಬಿಕೆ ಇದೆ. ದೇವಸ್ಥಾನದ ಗೋಡೆಗಳಲ್ಲಿ ಇಂದಿಗೂ ೧೨೪೭ರ ಕಾಲದ ಶಾಸನಗಳನ್ನು ಕಾಣಬಹುದು.

ಇದನ್ನೂ ಓದಿ: Maha Shivaratri 2023 : ಪೂಜೆ ಮಾಡುವಾಗ ಅರಿಶಿನ-ಕುಂಕುಮ ಶಿವನಿಗೇಕೆ ಬೇಡ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಶಿವಮೊಗ್ಗ

Shivamogga News: ವಿಜೃಂಭಣೆಯ ರಿಪ್ಪನ್‌ಪೇಟೆ ಶ್ರೀ ಸಿದ್ಧಿವಿನಾಯಕ ಸ್ವಾಮಿಯ ರಥೋತ್ಸವ

Shivamogga News: ರಿಪ್ಪನ್‌ಪೇಟೆಯ ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ಸ್ವಾಮಿಯ ಪ್ರಥಮ ವರ್ಷದ ಶ್ರೀಮನ್ಮಹಾರಥೋತ್ಸವವು ಗುರುವಾರ ಅಪಾರ ಭಕ್ತರ ಮಧ್ಯೆ ವಿಜೃಂಭಣೆಯಿಂದ ಜರುಗಿತು.

VISTARANEWS.COM


on

Sri Siddhivinayaka Swami SrimanMaharathotsava in Ripponpet
Koo

ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ಸ್ವಾಮಿಯ ಪ್ರಥಮ ವರ್ಷದ ಶ್ರೀಮನ್ಮಹಾರಥೋತ್ಸವವು ಗುರುವಾರ ಅಪಾರ ಭಕ್ತರ ಮಧ್ಯೆ ವಿಜೃಂಭಣೆಯಿಂದ ಜರುಗಿತು. ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಆಭಿನವ ಚನ್ನಬಸವ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿ, ಈ ವರ್ಷ ನಾಡಿಗೆ ಸಮೃದ್ಧ ಮಳೆ-ಬೆಳೆಯಾಗಿ ರೈತರ ಬದುಕು ಹಸನಾಗಲೆಂದು ಮತ್ತು ಜಗತ್ತಿನಲ್ಲೆಡೆ ಶಾಂತಿ, ನೆಮ್ಮದಿಯನ್ನು ಕರುಣಿಸುವಂತಾಗಲಿ ಎಂದು ಸಿದ್ಧಿವಿನಾಯಕ ದೇವರಲ್ಲಿ ಶ್ರೀಗಳು ಪ್ರಾರ್ಥಿಸಿದರು.

ಇದನ್ನೂ ಓದಿ: IPL 2024 : ಐಪಿಎಲ್​ ಮಧ್ಯದಲ್ಲಿಯೇ ಕೆಕೆಆರ್​ ತಂಡ ತೊರೆದ ಆರಂಭಿಕ ಆಟಗಾರ

ಮನ್ಮಹಾರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಶಿವಮೊಗ್ಗದ ವಸಂತ ಭಟ್ ಮತ್ತು ಚಂದ್ರಶೇಖರ ಭಟ್ ಹಾಗೂ ಗುರುರಾಜ ಭಟ್ ಅವರ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಭಕ್ತಾಧಿಗಳು ಶ್ರದ್ಧಾ ಭಕ್ತಿಯಿಂದ ರಥವನ್ನು ಎಳೆದು ಇಷ್ಠಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಭಕ್ತರಿಗೆ ಉಚಿತವಾಗಿ ಕಬ್ಬಿನ ಹಾಲು ಮತ್ತು ಐಸ್‌ಕ್ರೀಮ್, ಕುಡಿಯುವ ನೀರಿನ ವ್ಯವಸ್ಥೆಯನ್ನು ವಿವಿಧ ಸಂಘಟನೆಗಳಿಂದ ಆಯೋಜಿಸಲಾಗಿತ್ತು.

ಇದನ್ನೂ ಓದಿ: Karnataka Weather : ರಾಜ್ಯದಲ್ಲಿ ಮುಂದುವರಿಯಲಿದೆ ಶಾಖದ ಹೊಡೆತ; ಕೋಲಾರದಲ್ಲಿ ಮೊದಲ ಮಳೆಯ ಸಿಂಚನ

ಈ ಸಂದರ್ಭದಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಈಶ್ವರಶಟ್ಟಿ, ಎನ್. ಸತೀಶ್, ಗಣೇಶ್ ಎನ್. ಕಾಮತ್, ಎಂ.ಡಿ. ಇಂದ್ರಮ್ಮ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ತುಳೋಜಿರಾವ್, ಸ್ವಾಮಿ ದೊಡ್ಡಿನಕೊಪ್ಪ, ವೈ.ಜೆ. ಕೃಷ್ಣ, ಉಮೇಶ್ ಆರ್., ಮಂಜನಾಯ್ಕ್, ಎಂ.ಬಿ. ಮಂಜುನಾಥ, ಎಂ. ಸುರೇಶ್‌ ಸಿಂಗ್, ಸುಧೀರ್ ಪಿ., ರವೀಂದ್ರ ಕೆರೆಹಳ್ಳಿ, ನಾಗರತ್ನ ದೇವರಾಜ್, ಎಸ್.ಎನ್. ಬಾಲಚಂದ್ರ, ಕುಸುಮಾ ಬಾಲಚಂದ್ರ, ಪದ್ಮಾ ಸುರೇಶ್, ನಿವೃತ್ತ ಶಿಕ್ಷಕ ರಾಧಾಕೃಷ್ಣ, ಜಯಲಕ್ಷ್ಮಿ ಮೋಹನ್ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

Continue Reading

ಧಾರ್ಮಿಕ

Ballari News: ಬಾಯಿಯೊಳಗೆ ತ್ರಿಶೂಲ; ಬೆನ್ನಿಗೆ ಕೊಕ್ಕೆ ಕಟ್ಟಿಕೊಂಡು ಕಾರು, ರಿಕ್ಷಾ ಎಳೆದ ಭಕ್ತರು!

Ballari News: ಕಂಪ್ಲಿ ಕೋಟೆಯ ಮೀನುಗಾರರ ಕಾಲೋನಿಯಲ್ಲಿ ಮೀನುಗಾರ ಸಮುದಾಯದ ಆರಾಧ್ಯ ದೈವ ಶ್ರೀ ಕಾಳಮ್ಮ ದೇವಿಯ ಪೂಜಾ ಮಹೋತ್ಸವವು ಮಂಗಳವಾರ ಅದ್ಧೂರಿಯಾಗಿ ಜರುಗಿತು. ಹರಕೆ ತೀರಿಸುವ ಭಕ್ತರ ಆಚರಣೆಗಳು ಗಮನ ಸೆಳೆದವು.

VISTARANEWS.COM


on

Kalamma Devi Pooja Mahotsava in Kampli
Koo

ಕಂಪ್ಲಿ: ಕಂಪ್ಲಿ ಕೋಟೆಯ ಮೀನುಗಾರರ ಕಾಲೋನಿಯಲ್ಲಿ ಮೀನುಗಾರ ಸಮುದಾಯದ ಆರಾಧ್ಯ ದೈವ ಶ್ರೀ ಕಾಳಮ್ಮ ದೇವಿಯ ಪೂಜಾ ಮಹೋತ್ಸವವು ಮಂಗಳವಾರ ಅದ್ಧೂರಿಯಾಗಿ (Ballari News) ಜರುಗಿತು.

ಸೋಮವಾರ ಸಂಜೆ ಗಂಗೆಸ್ಥಳ ಮತ್ತು ಅಗ್ನಿ ಕುಂಭೋತ್ಸವ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ಮೆರವಣಿಗೆಯಲ್ಲಿ ಮೂವರು ಭಕ್ತಾದಿಗಳು ಬಾಯಿಗೆ 12 ಅಡಿ ಉದ್ದದ ತ್ರಿಶೂಲ ಅಸ್ತ್ರವನ್ನು ಹಾಕಿಸಿಕೊಂಡು ಕಲ್ಲುಗುಂಡು, ಇಬ್ಬರು ಭಕ್ತಾದಿಗಳು ಆಟೋರಿಕ್ಷಾ, ಇಬ್ಬರು ಭಕ್ತರು ಕಾರುಗಳನ್ನು ತಮ್ಮ ಬೆನ್ನುಗಳಿಗೆ ಹಾಕಿದ್ದ ಕಬ್ಬಿಣದ ಕೊಕ್ಕೆಗಳಿಂದ ಎಳೆದು ತಮ್ಮ ಹರಕೆ ತೀರಿಸಿದರು. ಟ್ರ್ಯಾಕ್ಟರ್‌ಗೆ ಹಾಕಲಾಗಿದ್ದ ಬೊಂಬುಗಳಿಗೆ ತಮ್ಮ ಬೆನ್ನಿಗೆ ಹಾಕಲಾಗಿದ್ದ ಕೊಕ್ಕೆಯಿಂದ ಜೋತು ಬೀಳುವ ಮೂಲಕ ಭಕ್ತಿ ಸಮರ್ಪಿಸಿದರು.

ಇದನ್ನೂ ಓದಿ: Job Alert: ನೈವೇಲಿ ಲಿಗ್ನೈಟ್ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಪದವಿ ಪಡೆದವರು ಅರ್ಜಿ ಸಲ್ಲಿಸಿ

ಮೆರವಣಿಗೆಯು ಶ್ರೀ ಕಾಳಮ್ಮ ದೇವಸ್ಥಾನದಿಂದ ಶ್ರೀ ಸುಂಕಲಮ್ಮ ದೇವಸ್ಥಾನದ ವರೆಗೂ ಜರುಗಿತು. ಭಕ್ತಾದಿಗಳು ರಸ್ತೆಯುದ್ದಕ್ಕೂ ತಮ್ಮ ಬೆನ್ನಿಗೆ ಹಾಕಲಾಗಿದ್ದ ಕೊಕ್ಕೆಯಿಂದ ತಮ್ಮ ಹರಕೆಯಂತೆ ಸುಡು ಬಿಸಿಲ ಮಧ್ಯೆಯು ಗುಂಡು, ಆಟೋ, ಕಾರುಗಳನ್ನು ಎಳೆದೊಯ್ದು ಭಕ್ತಿ ಸಮರ್ಪಿಸಿದರು.

ಪಟ್ಟಣದ ಸೇರಿದಂತೆ ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದಂತಹ ಭಕ್ತರು ವಿಶೇಷ ಆಚರಣೆಯನ್ನು ನೋಡಿ ಕಣ್ ತುಂಬಿಕೊಳ್ಳುವ ಮೂಲಕ ಆಶ್ಚರ್ಯ ಚಕಿತರಾದರು. ಕಾರ್ಯಕ್ರಮದ ಪೌರೋಹಿತ್ಯವನ್ನು ಮಾರೆಪ್ಪ ಪೂಜಾರಿ ವಹಿಸಿದ್ದರು.

ಇದನ್ನೂ ಓದಿ: Koppala News: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸಿಗುವಂತೆ ಕ್ರಮ ಕೈಗೊಳ್ಳಲು ಜಿ.ಪಂ ಸಿಇಒ ಸೂಚನೆ

ಈ ಸಂದರ್ಭದಲ್ಲಿ ಮೀನುಗಾರ ಸಹಕಾರ ಸಂಘದ ಅಧ್ಯಕ್ಷ ಚೆನ್ನರಾಜು, ಉಪಾಧ್ಯಕ್ಷ ಷಣ್ಮುಖಪ್ಪ, ಮುಖಂಡರಾದ ಮಾರೆಪ್ಪ ಪೂಜಾರಿ, ಸ್ವಾಮಿ ದೊರೆ, ಎ. ಗಣೇಶ್, ಎಸ್.ಜಿ.ಪೂಜಾರಿ, ಗುರುಮೂರ್ತಿ, ಪಣಿಯಪ್ಪ, ಆರ್. ಕೃಷ್ಣ ಪೂಜಾರಿ, ಎಸ್.ಆರ್. ಸುರೇಶ್ ಸೇರಿದಂತೆ ಸರ್ವ ಸಮುದಾಯಗಳ ಸದ್ಭಕ್ತರು ಪಾಲ್ಗೊಂಡಿದ್ದರು.

Continue Reading

ಬೆಂಗಳೂರು

Sadhguru Jaggi Vasudev: ಮೆದುಳಿನ ಶಸ್ತ್ರಚಿಕಿತ್ಸೆಯ ತಿಂಗಳ ಬಳಿಕ ಕಾಂಬೋಡಿಯಾಗೆ ಸದ್ಗುರು ಪ್ರವಾಸ

Sadhguru Jaggi Vasudev: ಕಾಂಬೋಡಿಯಾದ ಸಾಂಸ್ಕೃತಿಕ ಮತ್ತು ಅಧ್ಯಾತ್ಮಿಕತೆಯ ಅನ್ವೇಷಣೆಗಾಗಿ ಸದ್ಗುರು ಜಗ್ಗಿ ವಾಸುದೇವ್‌ ಅವರು ತೆರಳಿದ್ದಾರೆ. ಇದು ಶಸ್ತ್ರಚಿಕಿತ್ಸೆಯ ಒಂದು ತಿಂಗಳ ನಂತರ ಸದ್ಗುರುಗಳ ಮೊದಲ ಪ್ರಯಾಣವಾಗಿದೆ.

VISTARANEWS.COM


on

Sadhguru Jaggi Vasudev
Koo

ಸೀಮ್‌ ರೀಪ್‌(ಕಾಂಬೋಡಿಯಾ): ಮೆದುಳಿನ ಶಸ್ತ್ರಚಿಕಿತ್ಸೆಯ ಒಂದು ತಿಂಗಳ ನಂತರ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕತೆಯ ಆಳದ ಅನ್ವೇಷಣೆಗಾಗಿ ಆಧ್ಯಾತ್ಮಿಕ ಗುರು ಹಾಗೂ ಈಶ ಫೌಂಡೇಶನ್‌ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ (Sadhguru Jaggi Vasudev) ಅವರು ಕಾಂಬೋಡಿಯಾಗೆ ತೆರಳಿದ್ದಾರೆ. ಕಾಂಬೋಡಿಯಾ ಪ್ರವಾಸೋದ್ಯಮ ಸಚಿವ ಎಚ್.ಇ. ಎಸ್ಒಕೆ ಸೋಕೆನ್ ಅವರು ಸೀಮ್ ರೀಪ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸದ್ಗುರುಗಳನ್ನು ಆತ್ಮೀಯತೆಯಿಂದ ಸ್ವಾಗತಿಸಿದರು.

ಗಮನಾರ್ಹ ಆತಿಥ್ಯದ ಜತೆಗೆ ಸಚಿವರು, ಕಾಂಬೋಡಿಯಾದ ಪ್ರಧಾನ ಮಂತ್ರಿಯವರ ವೈಯಕ್ತಿಕ ಪತ್ರವನ್ನು ಸದ್ಗುರುಗಳಿಗೆ ಪ್ರಸ್ತುತಪಡಿಸಿದರು. ಸಚಿವರೊಂದಿಗೆ ಅವರ ಪತ್ನಿ, ಕಾಂಬೋಡಿಯಾದ ಪ್ರವಾಸೋದ್ಯಮ ಸಚಿವಾಲಯದ ಅಧಿಕಾರಿಗಳು ಮತ್ತು ಭಾರತದ ಕಾನ್ಸುಲೇಟ್ ಜನರಲ್ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಇದು ಶಸ್ತ್ರಚಿಕಿತ್ಸೆಯ ಒಂದು ತಿಂಗಳ ನಂತರ ತಮ್ಮ ಚಟುವಟಿಕೆಗಳಿಗೆ ಮರಳಿರುವ ಸದ್ಗುರುಗಳ ಮೊದಲ ಪ್ರಯಾಣ. ಅಲ್ಲಿ ಅವರು ಸ್ಥಳೀಯ ಸಂಸ್ಕೃತಿ ಮತ್ತು ದೇವಾಲಯಗಳ ಹಿಂದಿನ ವಿಜ್ಞಾನವನ್ನು ಅನ್ವೇಷಿಸಲಿದ್ದಾರೆ. ಅವರ ಕಾರ್ಯಕ್ರಮವು ಏಪ್ರಿಲ್ 30 ರವರೆಗೆ ಜರುಗಲಿದ್ದು, ಈ ಸಮಯದಲ್ಲಿ ಅಲ್ಲಿನ ಸ್ಥಳೀಯ ಸಂಸ್ಕೃತಿಯಲ್ಲಿ ಮಿಂದೇಳುವುದರ ಜತೆಗೆ, ಕಾಂಬೋಡಿಯಾದ ಸೀಮ್ ರೀಪ್‌ನಲ್ಲಿರುವ ಬೇಯಾನ್ ಮತ್ತು ಅಂಕೋರ್ ವಾಟ್ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ.

ಯಾವುದೇ ಬೋಧನೆ, ತತ್ವಶಾಸ್ತ್ರ, ಮತಧರ್ಮ ಅಥವಾ ನಂಬಿಕೆಯ ವ್ಯವಸ್ಥೆಗಳಿಗೆ ಒಳಗಾಗದ ಸದ್ಗುರುಗಳು, ತಮ್ಮ ಆಧ್ಯಾತ್ಮಿಕ ಮತ್ತು ಸಾಮಾಜಿಕ ಪ್ರಯತ್ನಗಳು, ಪರಿಸರ ಕಾರ್ಯಗಳು, ಗ್ರಾಮೀಣ ಶಿಕ್ಷಣ ಮತ್ತು ಇನ್ನೂ ಹೆಚ್ಚಿನವುಗಳ ಮೂಲಕ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ತಲುಪಿದ್ದಾರೆ. ಪ್ರಪಂಚದಾದ್ಯಂತ ಮೂವತ್ತು ಲಕ್ಷ ಜನರು ಅವರ ಪ್ರಮುಖ ಕಾರ್ಯಕ್ರಮವಾದ ಇನ್ನರ್ ಎಂಜಿನಿಯರಿಂಗ್ ಕಾರ್ಯಕ್ರಮದ ಪ್ರಯೋಜನ ಪಡೆದಿದ್ದಾರೆ. ಆ ಮೂಲಕ ಜನರು ತಮ್ಮ ಜೀವನದ ಗ್ರಹಿಕೆಯಲ್ಲಿ ಹೆಚ್ಚಿನ ಸಮತೋಲನ ಮತ್ತು ಗಮನಾರ್ಹ ಸ್ಪಷ್ಟತೆಯನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ | Prerane : ಗೆಲುವಿಗೆ ಸೂತ್ರಗಳಿವೆಯೇ? ಸದ್ಗುರು ಹೀಗೆನ್ನುತ್ತಾರೆ!

2023 ರಲ್ಲಿ ಸದ್ಗುರುಗಳ ಸಾಮಾಜಿಕ ಮಾಧ್ಯಮವು 4.37 ಶತಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿತ್ತು. ಈ ಹಿನ್ನೆಲೆಯಲ್ಲಿ ಕಾಂಬೋಡಿಯಾದ ಅವರ ಅನ್ವೇಷಣೆಯು, ಆ ದೇಶದ ಬಗೆಗಿನ ಅವರ ಒಳನೋಟಗಳಿಂದ ಪ್ರಯೋಜನ ಪಡೆಯಲು ಜಗತ್ತಿಗೆ ಒಂದು ವಿಶಿಷ್ಟ ಅವಕಾಶವನ್ನು ಒದಗಿಸಲಿದೆ.

Continue Reading

ಬೆಂಗಳೂರು

Bengaluru Karaga: ವೈಭವದ ಕರಗ ಮಹೋತ್ಸವ ಸಂಪನ್ನ; ಲಕ್ಷಾಂತರ ಭಕ್ತರ ನಡುವೆ ಮಸ್ತಾನ್ ಸಾಬ್ ದರ್ಗಾಗೆ ಭೇಟಿ

Bengaluru Karaga: ಸಂಪ್ರದಾಯದಂತೆ ಹಜರತ್ ತವಕಲ್ ಮಸ್ತಾನ್ ಷಾ ದರ್ಗಕ್ಕೆ ಕರಗ ಭೇಟಿ ನೀಡಿತು. ಹಜರತ್ ತವಕಲ್‌ ಮಸ್ತಾನ್ ಷಾನಲ್ಲಿ ಕರಗದ ಆಗಮನಕ್ಕಾಗಿ ಸಕಲ‌ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿದ್ಯುತ್ ದೀಪಗಳಿಂದ ಕಂಗೊಳಿಸಿತು. ದರ್ಗದಲ್ಲಿ ಕರಗಕ್ಕೆ ‌ಪೂಜೆ ಸಲ್ಲಿಸಲಾಗಿದ್ದು, ನಂತರ ದರ್ಗಾವನ್ನು ಪ್ರದಕ್ಷಿಣೆ ಮಾಡಿ ಅಣ್ಣಮ್ಮ ದೇವಸ್ಥಾನದತ್ತ ತೆರಳಿತು.

VISTARANEWS.COM


on

bengaluru karaga in darga
Koo

ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ (Bengaluru karaga Festival) ಮಂಗಳವಾರ ರಾತ್ರಿ ಅದ್ಧೂರಿಯಾಗಿ ನೆರವೇರಿತು. ನಗರ್ತಪೇಟೆಯಲ್ಲಿ ಧರ್ಮರಾಯಸ್ವಾಮಿ (Dharmaraya swamy) ರಥೋತ್ಸವ ಬಳಿಕ ರಾತ್ರಿ 2 ಗಂಟೆಗೆ ಕರಗ ಶಕ್ತ್ಸೋತ್ಸವಕ್ಕೆ (Bangalore Karaga) ಚಾಲನೆ ನೀಡಲಾಯಿತು. ಮುಂಜಾನೆ ಹಾಜಿ ಮಸ್ತಾನ್‌ ಸಾಬ್‌ ದರ್ಗಾಗೂ (Haji Mastan Saab Darga) ಭೇಟಿ ಕೊಟ್ಟು 5.45ರ ವೇಳೆಗೆ ಧರ್ಮರಾಯ ಸ್ವಾಮಿ ದೇವಸ್ಥಾನದೊಳಗೆ ಕರಗ ಸೇರಿಕೊಂಡಿತು. ವೈಭವದ ಕರಗ ಕಣ್ತುಂಬಿಕೊಳ್ಳಲು ವಿವಿಧೆಡೆಯಿಂದ ಲಕ್ಷಾಂತರ ಜನರು ಆಗಮಿಸಿದ್ದರು.

ನಿನ್ನೆ ರಾತ್ರಿ ಧರ್ಮರಾಯ ಸ್ವಾಮಿ ದೇವಾಲಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ತೇಜಸ್ವಿ ಸೂರ್ಯ, ಶಾಸಕ ಹ್ಯಾರಿಸ್‌, ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯ ರೆಡ್ಡಿ ಮುಂತಾದವರು ಭೇಟಿ ನೀಡಿದರು. ಬೆಳಗ್ಗೆಯಿಂದಲೇ ತಾಯಿಗೆ ಬಳೆ ಶಾಸ್ತ್ರ, ತಾಳಿ ಶಾಸ್ತ್ರ, ಹೂ ಶಾಸ್ತ್ರ ವಿಶೇಷ ಪೂಜೆ ಸಲ್ಲಿಸಲಾಯಿತು. ಮಂಗಳವಾರ ರಾತ್ರಿ 10.30ಕ್ಕೆ ಕಲ್ಯಾಣಿಗೆ ಹೋಗಿ ಪೂಜೆ ಸಲ್ಲಿಸಲಾಯಿತು. ಅಲ್ಲಿಂದ ವಾಪಸ್ ಬಂದು ಧರ್ಮರಾಯ ದೇವಸ್ಥಾನದಲ್ಲಿ ಪೂಜೆ ಮಾಡಲಾಯಿತು. ರಥೋತ್ಸವದ ಬಳಿಕ ಭಕ್ತರ ಗೋವಿಂದ… ಗೋವಿಂದ… ಎಂಬ ಘೋಷಣೆಗಳ ನಡುವೆ ಅರ್ಚಕ ಜ್ಞಾನೇಂದ್ರ ಅವರು ಕರಗ ಹೊತ್ತು ಸಾಗಿದರು.

ಮುಖ್ಯ ರಥ ಧರ್ಮರಾಯಸ್ವಾಮಿ ರಥದಲ್ಲಿ ಅರ್ಜುನ‌ ಮತ್ತು ದ್ರೌಪದಿ ದೇವಿ ವಿರಾಜಮಾನರಾಗಿದ್ದರು. ಚಿಕ್ಕ ರಥದಲ್ಲಿ ಗ್ರಾಮದೇವಿ ಮುತ್ಯಾಲಮ್ಮ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಪಾಂಡವರ ಮೂರ್ತಿಗಳು ಸೇರಿ ಒಟ್ಟು ಒಂಬತ್ತು ಮೂರ್ತಿಗಳಿಗೆ ವೀರಕುಮಾರರಿಂದ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥಗಳು ಮುಂದೆ ಸಾಗುತ್ತಿದ್ದಂತೆ ದೇಗುಲದಿಂದ ದ್ರೌಪದಿ ದೇವಿ ಕರಗ ಹೊರಬಂದಿತು.

ಕರಗ ಸಾಗುವ ರಾಜಬೀದಿಗಳೆಲ್ಲಾ ಬಣ್ಣ ಬಣ್ಣದ ಲೈಟಿಂಗ್‌ ಹಾಗೂ ಜನರಿಂದ ಕಂಗೊಳಿಸಿದವು. ಸಾಂಪ್ರದಾಯಿಕವಾಗಿ ಎ. ಜ್ಞಾನೇಂದ್ರ 14ನೇ ಬಾರಿ ಕರಗ ಹೊತ್ತರು. ಒಂದು ರಥದಲ್ಲಿ ಮುತ್ಯಾಲಮ್ಮ ಮೂರ್ತಿ ಪ್ರತಿಷ್ಠಾಪನೆಯಾಗಿದ್ದು, ಪಾಂಡವರ ಮೂರ್ತಿಗಳು ಸೇರಿದಂತೆ ಒಟ್ಟು ಒಂಬತ್ತು ಮೂರ್ತಿಗಳಿಗೆ ವೀರಕುಮಾರರಿಂದ ಪೂಜೆ ಸಂದಿತು. ಪೂಜೆ ನಂತರ ಮತ್ತೊಂದು ರಥದಲ್ಲಿ ದ್ರೌಪದಿ ಮತ್ತು ಅರ್ಜುನ ಮೂರ್ತಿ ಪ್ರತಿಷ್ಠಾಪನೆಯಾಯಿತು. ನಂತರ ರಥಗಳ ಮೆರವಣಿಗೆ ಆರಂಭವಾಯಿತು. ಖಡ್ಗಗಳನ್ನು ಹಿಡಿದು ನೂರಾರು ವೀರಕುಮಾರರು ಮೆರವಣಿಗೆಯಲ್ಲಿ ತೆರಳಿದರು. ರಥಗಳು ಮುಂದೆ ಸಾಗುತ್ತಿದ್ದಂತೆ ದ್ರೌಪದಿ ದೇವಿ ಕರಗ ದೇಗುಲದಿಂದ ಹೊರ ಬಂದಿದ್ದು, ಅದನ್ನು ಕಂಡು ಭಕ್ತರು ಹರ್ಷೋದ್ಗಾರ ಮಾಡಿದರು.

ಸಂಪ್ರದಾಯದಂತೆ ಹಜರತ್ ತವಕಲ್ ಮಸ್ತಾನ್ ಷಾ ದರ್ಗಕ್ಕೆ ಕರಗ ಭೇಟಿ ನೀಡಿತು. ಹಜರತ್ ತವಕಲ್‌ ಮಸ್ತಾನ್ ಷಾನಲ್ಲಿ ಕರಗದ ಆಗಮನಕ್ಕಾಗಿ ಸಕಲ‌ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿದ್ಯುತ್ ದೀಪಗಳಿಂದ ಕಂಗೊಳಿಸಿತು. ದರ್ಗದಲ್ಲಿ ಕರಗಕ್ಕೆ ‌ಪೂಜೆ ಸಲ್ಲಿಸಲಾಗಿದ್ದು, ನಂತರ ದರ್ಗಾವನ್ನು ಪ್ರದಕ್ಷಿಣೆ ಮಾಡಿ ಅಣ್ಣಮ್ಮ ದೇವಸ್ಥಾನದತ್ತ ತೆರಳಿತು. ಒಟ್ಟು 11-12 ಕಿಲೋಮೀಟರ್ ಕರಗದ ಮೆರವಣಿಗೆ ಸಾಗಿದೆ.

ಕರಗ ಮೆರವಣಿಗೆ ಮಾರ್ಗ

ರಥೋತ್ಸವದ ನಂತರ ಮಧ್ಯರಾತ್ರಿ 1 ಗಂಟೆಯಿಂದ ಕರಗ ಮಹೋತ್ಸವದ ಮೆರವಣಿಗೆ ಸಾಗಿತು. ನಗರ್ತಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಕರಗ ಮೆರವಣಿಗೆ ಆರಂಭವಾಗಿ ಕಬ್ಬನ್​ಪೇಟೆ, ಗಾಣಿಗರಪೇಟೆ, ಅವೆನ್ಯೂ ರಸ್ತೆ ಮೂಲಕ ಸಾಗಿ ನಂತರ ಕೆ.ಆರ್. ರಸ್ತೆಯಲ್ಲಿರುವ ಕೋಟೆ ಆಂಜನೇಯ ದೇಗುಲಕ್ಕೆ ತೆರಳಿತು. ಬಳಿಕ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ರಸ್ತೆಯ ರಾಣಾಸಿಂಗ್​ಪೇಟೆ, ಅಕ್ಕಿಪೇಟೆ, ಅರಳಿಪೇಟೆ, ಒಟಿಸಿ ರಸ್ತೆ, ಮಸ್ತಾನ್ ಸಾಹೇಬ್ ದರ್ಗಾ, ಬಳೆಪೇಟೆ ಮುಖ್ಯ ರಸ್ತೆ, ಕೆ.ಜಿ.ರಸ್ತೆ, ಎಸ್​ಪಿ ರಸ್ತೆ ಮೂಲಕ ಸಾಗಿ ಅಣ್ಣಮ್ಮ ದೇಗುಲಕ್ಕೆ ಬಂದು ಅದೇ ಮಾರ್ಗದಲ್ಲಿ ವಾಪಸಾಯಿತು. ಬೆಳಗ್ಗೆ 5.45 ಗಂಟೆಗೆ ಧರ್ಮರಾಯಸ್ವಾಮಿ ದೇವಾಲಯ ಸೇರಿತು. ಬೆಳಗ್ಗೆ 8 ಗಂಟೆಗೆ ತಾಯಿಗೆ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಕರಗಕ್ಕೆ ತೆರೆ ಬೀಳಲಿದೆ.

ಇದನ್ನೂ ಓದಿ | Bengaluru Karaga 2024: ಬೆಂಗಳೂರು ಕರಗ ಶಕ್ತ್ಸೋತ್ಸವಕ್ಕೆ ಕೌಂಟ್‌ ಡೌನ್‌; 8 ಲಕ್ಷ ಜನ ಭಾಗಿ!

Continue Reading
Advertisement
International Firefighters Day 2024
ಪ್ರಮುಖ ಸುದ್ದಿ9 mins ago

International Firefighters Day 2024: ಇಂದು ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನ; ಜೀವ ರಕ್ಷಕರಿಗೊಂದು ಸಲಾಂ

Nijjar Killling
ವಿದೇಶ10 mins ago

Nijjar Killing: ನಿಜ್ಜರ್‌ ಹಂತಕರ ಫೊಟೋ ರಿಲೀಸ್‌; ಭಾರತದತ್ತ ಮತ್ತೆ ಬೊಟ್ಟು ಮಾಡಿದ ಕೆನಡಾ

Vettaiyan Movie Rajinikanth And Amitabh Bachchan Poses Together
ಸಿನಿಮಾ13 mins ago

Vettaiyan Movie: ಸೂಟು ಬೂಟು ಹಾಕಿಕೊಂಡು ಸ್ಟೈಲಿಶ್‌ ಆಗಿ ಪೋಸ್‌ ಕೊಟ್ಟ ರಜನಿ!

Accident news
ಮಳೆ17 mins ago

Accident News: ಬಿರುಗಾಳಿಗೆ ಕೂಲಿಂಗ್ ಶೀಟ್ ತಲೆ ಮೇಲೆ ಬಿದ್ದು ವ್ಯಕ್ತಿ ಸಾವು; ಬಿಸಿಲಾಘಾತಕ್ಕೆ ಇಬ್ಬರು ಬಲಿ

cm siddaramaiah
ಕ್ರೈಂ30 mins ago

CM Siddaramaiah: ಸಿಎಂ ಸಿದ್ದರಾಮಯ್ಯ ಬಗ್ಗೆ ಪೋಸ್ಟ್:‌ ಮಹೇಶ್‌ ವಿಕ್ರಂ ಹೆಗ್ಡೆ, ವಸಂತ್‌ ಗಿಳಿಯಾರ್ ಬಂಧನವಿಲ್ಲ

Urfi Javed magical butterflies dress Samantha reacts
ಬಾಲಿವುಡ್32 mins ago

Urfi Javed: ಉರ್ಫಿ ʻಮ್ಯಾಜಿಕ್ʼ ಡ್ರೆಸ್‌ಗೆ ಸಮಂತಾ ಮೆಚ್ಚುಗೆ; ಗೌನ್‌ನಿಂದ ಹಾರಿತು ಬಣ್ಣದ ಚಿಟ್ಟೆ!

IPL 2024
ಕ್ರೀಡೆ42 mins ago

IPL 2024: ಬರೋಬ್ಬರಿ 12 ವರ್ಷಗಳ ಬಳಿಕ ವಾಂಖೆಡೆಯಲ್ಲಿ ಗೆಲುವು ಸಾಧಿಸಿದ ಕೆಕೆಆರ್​

Drama Artist
ಕರ್ನಾಟಕ43 mins ago

Drama Artist: ಶಕುನಿಯಾಗಿ ಗರ್ಜಿಸುತ್ತಿರುವಾಗಲೇ ಹೃದಯಾಘಾತ; ಮೊಬೈಲ್‌ನಲ್ಲಿ ಸೆರೆಯಾಯ್ತು ಕಲಾವಿದನ ಕೊನೆಯ ಕ್ಷಣ

Amith Shah
ದೇಶ53 mins ago

Amit Shah: ತೆಲಂಗಾಣದಲ್ಲಿ ಗೃಹಸಚಿವ ಅಮಿತ್ ಶಾ ವಿರುದ್ಧ FIR ದಾಖಲು

Porbandar Tour
ಪ್ರವಾಸ58 mins ago

Porbandar Tour: ಪೋರ್ ಬಂದರಿನಲ್ಲಿ ನೋಡಲೇಬೇಕಾದ ಅದ್ಭುತ ಸ್ಥಳಗಳಿವು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ7 hours ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ19 hours ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ1 day ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ2 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20245 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20246 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

ಟ್ರೆಂಡಿಂಗ್‌