ಛತ್ತೀಸ್​ಗಢ್​​ನ ಸುಕ್ಮಾದಲ್ಲಿ ಮೂವರು ಪೊಲೀಸರನ್ನು ಹತ್ಯೆಗೈದ ನಕ್ಸಲರು; ಹೊಂಚು ಹಾಕಿ ದಾಳಿ ಮಾಡಿದ ದುಷ್ಟರು - Vistara News

ದೇಶ

ಛತ್ತೀಸ್​ಗಢ್​​ನ ಸುಕ್ಮಾದಲ್ಲಿ ಮೂವರು ಪೊಲೀಸರನ್ನು ಹತ್ಯೆಗೈದ ನಕ್ಸಲರು; ಹೊಂಚು ಹಾಕಿ ದಾಳಿ ಮಾಡಿದ ದುಷ್ಟರು

ಇಂದು ಮುಂಜಾನೆ ಜಾಗರ್​ಗುಂಡಾ ಮತ್ತು ಕುಂಡೇಡ್​ ನಡುವೆ ನಕ್ಸಲರು ಇರುವುದಾಗಿ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ, ನಮ್ಮ ರಕ್ಷಣಾ ತಂಡ ಅಲ್ಲಿಗೆ ಹೋಗಿತ್ತು ಎಂದು ಐಜಿ ಸುಂದರ್​ರಾಜ್ ತಿಳಿಸಿದ್ದಾರೆ.

VISTARANEWS.COM


on

3 security personnel Killed By Naxals in Chhattisgarh
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಛತ್ತೀಸ್​ಗಢ್​​ನ ಸುಕ್ಮಾದಲ್ಲಿ ನಕ್ಸಲರ ದಾಳಿಗೆ, ಜಿಲ್ಲಾ ಮೀಸಲು ಪಡೆ (DRG)ಯ ಸಹಾಯಕ ಸಬ್​ ಇನ್​ಸ್ಪೆಕ್ಟರ್​ ಸೇರಿ ಮೂವರು ಹತರಾಗಿದ್ದಾರೆ. ಸುಕ್ಮಾ ಸದಾ ನಕ್ಸಲ್​ ಪೀಡಿತ ಪ್ರದೇಶವಾಗಿದೆ (Naxals in Chhattisgarh). ಇಲ್ಲಿನ ಜಾಗರ್​ಗುಂಡಾ ಮತ್ತು ಕುಂಡೇಡ್​​ ಪ್ರದೇಶಗಳ ನಡುವಿನ ಸ್ಥಳದಲ್ಲಿ ಇಂದು ಬೆಳಗ್ಗೆ 9ಗಂಟೆ ಹೊತ್ತಿಗೆ ಭದ್ರತಾ ಪಡೆ ಸಿಬ್ಬಂದಿ ಮತ್ತು ನಕ್ಸಲರ ನಡುವೆ ಎನ್​ಕೌಂಟರ್​ ನಡೆದಿತ್ತು. ಈ ವೇಳೆ ಡಿಆರ್​ಜಿಯ ಮೂವರು ಪೊಲೀಸರು ಹತ್ಯೆಯಾಗಿದ್ದಾರೆ ಎಂದು ಬಸ್ತಾರ್​ ವಲಯದ ಐಜಿ ಪಿ.ಸುಂದರ್​ರಾಜ್​ ತಿಳಿಸಿದ್ದಾರೆ. ಅಸಿಸ್ಟೆಂಟ್​ ಸಬ್​ ಇನ್​ಸ್ಪೆಕ್ಟರ್​ ರಾಮುರಾಮ್​ ನಾಗ್​, ಸಹಾಯಕ ಕಾನ್​ಸ್ಟೆಬಲ್​ ಕುಂಜಮ್​ ಜೋಗಾ ಮತ್ತು ಸೈನಿಕ್​ ವಂಜಮ್ ಭೀಮಾ ಮೃತರು.

ಘಟನೆ ಬಗ್ಗೆ ವಿವರಿಸಿದ ಐಜಿ ಸುಂದರ್​ರಾಜ್​ ‘ಇಂದು ಮುಂಜಾನೆ ಜಾಗರ್​ಗುಂಡಾ ಮತ್ತು ಕುಂಡೇಡ್​ ನಡುವೆ ನಕ್ಸಲರು ಇರುವುದಾಗಿ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ, ನಮ್ಮ ರಕ್ಷಣಾ ತಂಡ ಅಲ್ಲಿಗೆ ಹೋಗಿತ್ತು. ಪೊಲೀಸ್ ಸಿಬ್ಬಂದಿ ನಕ್ಸಲರಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ ಅವರು ಹೊಂಚು ಹಾಕಿ ದಾಳಿ ಮಾಡಿದ್ದಾರೆ. ಈ ಎನ್​ಕೌಂಟರ್​ನಲ್ಲಿ ಮೂವರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಇನ್ನು ನಮ್ಮ ಪೊಲೀಸ್ ಪಡೆ ನಕ್ಸಲರ ಮೇಲೆ ಪ್ರತಿದಾಳಿ ನಡೆಸಿದೆ. ಆದರೆ ಅವರ ಕಡೆ ಯಾರಾದರೂ ಸತ್ತಿದ್ದಾರಾ? ಗಾಯಗೊಂಡವರು ಎಷ್ಟು ಮಂದಿ ಎಂಬ ಬಗ್ಗೆ ಖಚಿತ ಮಾಹಿತಿ ಇನ್ನೂ ಸಿಕ್ಕಿಲ್ಲ’ ಎಂದು ತಿಳಿಸಿದ್ದಾರೆ.

ದೇಶದಲ್ಲಿ 2024ರ ಲೋಕಸಭೆ ಚುನಾವಣೆ ಪೂರ್ವ ನಕ್ಸಲರನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಅವರು ಈಗೊಂದು ತಿಂಗಳ ಹಿಂದೆ ಹೇಳಿದ್ದರು. ಅದರಂತೆ ಛತ್ತೀಸ್​ಗಢ, ಜಾರ್ಖಂಡ್ ಸೇರಿ ಎಲ್ಲ ನಕ್ಸಲ್​ ಪೀಡಿತ ಪ್ರದೇಶಗಳಲ್ಲೂ ಚುರುಕಿನ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಕ್ಸಲರನ್ನು ಬಂಧಿಸಲಾಗುತ್ತಿದೆ. ಅವರ ಮೇಲೆ ವೈಮಾನಿಕ ದಾಳಿಯನ್ನೂ ಮಾಡಲಾಗುತ್ತಿದೆ. ಆದರೆ ಮತ್ತೊಂದೆಡೆ ನಕ್ಸಲರ ಉಪಟಳವೂ ಹೆಚ್ಚುತ್ತಿದೆ. ಛತ್ತೀಸ್​ಗಢ್​ನಲ್ಲಿ ನಾರಾಯಣಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಾಗರ್ ಸಾಹುನನ್ನು ಫೆ.10ರಂದು ನಕ್ಸಲರು ಕೊಂದಿದ್ದರು. ಮರುದಿನ ಫೆ.11ರಂದು ಮಾಜಿ ಸರ್​ಪಂಚ್​ ರಾಮಧರ್ ಅಲಾಮಿ ಎಂಬುವರನ್ನು ಹತ್ಯೆಗೈದಿದ್ದರು. ಅದಕ್ಕೂ ಪೂರ್ವ ಫೆ.5ರಂದು ಬಿಜಾಪುರದ ಅವಾಪಲ್ಲಿ ಮಂಡಲ್​ ಬಿಜೆಪಿ ಮುಖ್ಯಸ್ಥ ನೀಲಕಾಂತ್ ಕಾಕೇಮ್​ ಕೂಡ ನಕ್ಸಲರ ಗುಂಡಿಗೆ ಬಲಿಯಾಗಿದ್ದರು.

ಇದನ್ನೂ ಓದಿ: Maoists Killed BJP Leader: ಕುಟುಂಬಸ್ಥರ ಎದುರೇ ಬಿಜೆಪಿ ನಾಯಕನ ಶಿರಚ್ಛೇದ ಮಾಡಿದ ನಕ್ಸಲರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

World Bank: ಅಮೆರಿಕದ ತಲಾ ಆದಾಯದ ಕಾಲು ಭಾಗ ತಲುಪಲು ಭಾರತಕ್ಕೆ 75 ವರ್ಷ ಬೇಕು: ವಿಶ್ವ ಬ್ಯಾಂಕ್‌

World Bank: ಅಮೆರಿಕದ ತಲಾ ಆದಾಯದ ಕಾಲು ಭಾಗವನ್ನು ತಲುಪಲು ಭಾರತಕ್ಕೆ ಸುಮಾರು 75 ವರ್ಷಗಳು ಬೇಕಾಗಬಹುದು. ಭಾರತದ ಪ್ರತಿಸ್ಪರ್ಧಿ ಚೀನಾ ಈ ಸಾಧನೆಯನ್ನು 10 ವರ್ಷಗಳಲ್ಲಿ ಸಾಧಿಸಲಿದೆ. ಇಂಡೋನೇಷ್ಯಾಕ್ಕೆ ಸುಮಾರು 70 ವರ್ಷ ಬೇಕಾಗಬಹುದು ಎಂದು ವಿಶ್ವ ಬ್ಯಾಂಕ್ ತಿಳಿಸಿದೆ.

VISTARANEWS.COM


on

World Bank
Koo

ನವದೆಹಲಿ: ವಿವಿಧ ದೇಶಗಳ ಆರ್ಥಿಕ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿದ ವಿಶ್ವ ಬ್ಯಾಂಕ್ (World Bank) ಕೆಲವೊಂದು ಗಂಭೀರ ವಿಚಾರಗಳನ್ನು ಹಂಚಿಕೊಂಡಿದೆ. ಮುಂದಿನ ಕೆಲವು ದಶಕಗಳಲ್ಲಿ ಭಾರತ ಸೇರಿದಂತೆ 100ಕ್ಕೂ ಹೆಚ್ಚು ದೇಶಗಳು ತಲಾ ಆದಾಯ (Per Capita Income)ವನ್ನು ಹೆಚ್ಚಿಸಿಕೊಳ್ಳಲು ಅನೇಕ ಸವಾಲು, ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಅಮೆರಿಕದ ತಲಾ ಆದಾಯದ ಕಾಲು ಭಾಗವನ್ನು ತಲುಪಲು ಭಾರತಕ್ಕೆ ಸುಮಾರು 75 ವರ್ಷಗಳು ಬೇಕಾಗಬಹುದು. ಭಾರತದ ಪ್ರತಿಸ್ಪರ್ಧಿ ಚೀನಾ ಈ ಸಾಧನೆಯನ್ನು 10 ವರ್ಷಗಳಲ್ಲಿ ಸಾಧಿಸಲಿದೆ. ಇಂಡೋನೇಷ್ಯಾಕ್ಕೆ ಸುಮಾರು 70 ವರ್ಷ ಬೇಕಾಗಬಹುದು ಎಂದು ತಿಳಿಸಿದೆ.

ವಿಶ್ವ ಅಭಿವೃದ್ಧಿ ವರದಿ 2024: ದಿ ಮಿಡಲ್ ಇನ್‌ಕಮ್‌ ಟ್ರ್ಯಾಪ್‌ (World Development Report 2024: The Middle Income Trap)ನಲ್ಲಿ ಈ ವಿವರಗಳನ್ನು ಹಂಚಿಕೊಳ್ಳಲಾಗಿದೆ.

2023ರ ಅಂತ್ಯದ ವೇಳೆಗೆ 108 ದೇಶಗಳನ್ನು ಮಧ್ಯಮ ಆದಾಯದ ದೇಶಗಳು ಎಂದು ವರ್ಗೀಕರಿಸಲಾಗಿದೆ. ಈ ದೇಶಗಳ ಜಿಡಿಪಿ ಆಧರಿಸಿ ತಲಾ ಆದಾಯ 1,136 ಡಾಲರ್‌ರಿಂದ 13,845 ಡಾಲರ್ (95,189.98 ರೂ. – 1,160,127.93 ರೂ.) ವ್ಯಾಪ್ತಿಯಲ್ಲಿದೆ. ಈ ದೇಶಗಳಲ್ಲಿ ಸುಮಾರು 600 ಕೋಟಿ ಜನರಿದ್ದಾರೆ. ಅಂದರೆ ಜಾಗತಿಕ ಜನಸಂಖ್ಯೆಯ ಶೇ. 75ರಷ್ಟು. ಇಲ್ಲಿ ವಾಸಿಸುವ ಪ್ರತಿ ಮೂವರಲ್ಲಿ ಇಬ್ಬರು ತೀವ್ರ ಬಡತನದಲ್ಲಿದ್ದಾರೆ ಎಂದು ವರದಿ ವಿವರಿಸಿದೆ.

ವಯಸ್ಸಾಗುತ್ತಿರುವವರ ಜನಸಂಖ್ಯೆಯಲ್ಲಿ ಹೆಚ್ಚಳ ಮತ್ತು ಬೆಳೆಯುತ್ತಿರುವ ಸಾಲ ಆರ್ಥಿಕ ಪ್ರಗತಿಗೆ ಕಠಿಣ ಸವಾಲಾಗಿ ಪರಿಣಮಿಸಿದೆ. ಇನ್ನೂ ಅನೇಕ ಮಧ್ಯಮ ಆದಾಯದ ದೇಶಗಳು ಪ್ಲೇಬುಕ್ ಅನ್ನು ಬಳಸುತ್ತವೆ. ಇದು ಕಾರನ್ನು ಫಸ್ಟ್‌ ಗೇರ್‌ನಲ್ಲಿ ವೇಗವಾಗಿ ಓಡಿಸುವುದಕ್ಕೆ ಸಮ ಎಂದು ವಿಶ್ವ ಬ್ಯಾಂಕ್‌ ವರದಿ ತಿಳಿಸಿದೆ. ʼʼಅಭಿವೃದ್ಧಿಶೀಲ ದೇಶಗಳು ಇನ್ನೂ ಹಳೆಯ ಪ್ಲೇಬುಕ್‌ಗೆ ಅಂಟಿಕೊಂಡರೆ ಅಭಿವೃದ್ಧಿಯ ಓಟದಲ್ಲಿ ಹಿಂದುಳಿಯಬೇಕಾಗುತ್ತದೆʼʼ ಎಂದು ವಿಶ್ವ ಬ್ಯಾಂಕ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಮತ್ತು ಅಭಿವೃದ್ಧಿ ಅರ್ಥಶಾಸ್ತ್ರದ ಹಿರಿಯ ಉಪಾಧ್ಯಕ್ಷ ಇಂದರ್ಮಿತ್ ಗಿಲ್ ಹೇಳಿದ್ದಾರೆ.

ತಮ್ಮ ಅಭಿವೃದ್ಧಿಯ ಹಂತವನ್ನು ಅವಲಂಬಿಸಿ ಎಲ್ಲ ದೇಶಗಳು ಅತ್ಯಾಧುನಿಕ ನೀತಿಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. 1990ರಿಂದ 34 ಮಧ್ಯಮ-ಆದಾಯದ ದೇಶಗಳು ಮಾತ್ರ ಹೆಚ್ಚಿನ ಆದಾಯದ ಗಳಿಸುವ ಆರ್ಥಿಕತೆಯಾಗಿ ಬದಲಾಗಿವೆ. ಆ ಪೈಕಿ ಮೂರನೇ ಒಂದು ಭಾಗದಷ್ಟು ಯುರೋಪಿಯನ್ ಒಕ್ಕೂಟ ಏಕೀಕರಣದ ಫಲಾನುಭವಿಗಳು ಅಥವಾ ತೈಲ ರಫ್ತು ದೇಶಗಳು ಎನ್ನುವುದು ವಿಶೇಷ ಎಂದು ವಿಶ್ವ ಬ್ಯಾಂಕ್ ತಿಳಿಸಿದೆ.

ಇದನ್ನೂ ಓದಿ: Per capita income : 2030ಕ್ಕೆ ಭಾರತದ ತಲಾ ಆದಾಯ 3.28 ಲಕ್ಷ ರೂ.ಗೆ ಏರಿಕೆ

ತಲಾ ಆದಾಯ ಎಂದರೇನು?

ತಲಾ ಆದಾಯವು ದೇಶದಲ್ಲಿ ವಾಸಿಸುವ ಜನರ ಸರಾಸರಿ ಆದಾಯವಾಗಿದೆ. ಇದನ್ನು ಲೆಕ್ಕಾಚಾರ ಮಾಡಲು ಆ ದೇಶದ ಜಿಡಿಪಿಯನ್ನು ಅದರ ಒಟ್ಟು ಜನಸಂಖ್ಯೆಯಿಂದ ಭಾಗಿಸಲಾಗುತ್ತದೆ. ಇದು ಯಾವುದೇ ದೇಶ ಅಥವಾ ರಾಜ್ಯದ ಜನರ ಆದಾಯದ ಸ್ಥಿತಿ ಏನೆಂಬುದನ್ನು ತೋರಿಸುತ್ತದೆ. ಜನರು ಏನನ್ನು ಖರೀದಿಸಲು ಹಣವನ್ನು ಖರ್ಚು ಮಾಡುತ್ತಿದ್ದಾರೆ ಎಂಬುದನ್ನು ಇದು ಹೇಳುತ್ತದೆ.

Continue Reading

ದೇಶ

Lion & Lioness Name: ಅಕ್ಬರ್‌-ಸೀತಾ ಸಿಂಹಗಳಿಗೆ ಹೊಸ ಹೆಸರು; ವಿವಾದಕ್ಕೆ ತೆರೆ ಎಳೆದ ದೀದಿ ಸರ್ಕಾರ

Lion & Lioness Name: ಪಶ್ಚಿಮ ಬಂಗಾಳದ ಸಫಾರಿ ಪಾರ್ಕ್‌ನಲ್ಲಿದ್ದ ಸಿಂಹದ ಜೋಡಿಗೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಅಕ್ಬರ್, ಸೀತಾ ಎಂದು ಈ ಹಿಂದೆ ನಾಮಕರಣ ಮಾಡಿತ್ತು. ಆದರೆ ಈ ನಾಮಕರಣಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿಶ್ವ ಹಿಂದೂ ಪರಿಷತ್ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಹಿನ್ನೆಲೆಯಲ್ಲಿ ಈಗ ಈ ನಾಮಕರಣ ವಿಚಾರದಲ್ಲಿ ಕೋಲ್ಕತ್ತಾ ಹೈಕೋರ್ಟ್ ಮಧ್ಯಪ್ರವೇಶ ಮಾಡಿದ್ದು, ಸಿಂಹದ ಜೋಡಿಗೆ ಅಕ್ಬರ್-ಸೀತಾ ಬದಲು ಸೂರಜ್ ತಾನ್ಯಾ ಎಂದು ಹೆಸರಿಡಲಾಗಿದೆ.

VISTARANEWS.COM


on

Lion & Lioness Name
Koo

ಕೋಲ್ಕತ್ತಾ: ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಗುರಿಯಾಗಿದ್ದ ಪಶ್ಚಿಮ ಬಂಗಾಳ ಮೃಗಾಲಯದ ಸಿಂಹ(Lion) ಮತ್ತು ಸಿಂಹಿಣಿ(Lioness) ಹೆಸರು ಕೊನೆಗೂ ಬದಲಾಗಿದೆ (Lion & Lioness Name). ಅಕ್ಬರ್‌(Akbar) ಮತ್ತು ಸೀತಾ(Seetha) ಸಿಂಹಗಳ ಹೆಸರನ್ನು ಬದಲಿಸಬೇಕೆಂದು ಪಟ್ಟು ಹಿಡಿದಿದ್ದ ವಿಶ್ವ ಹಿಂದೂ ಪರಿಷದ್‌(VHP)ಗೆ ಕೊನೆಗೂ ಜಯ ಸಂದಿದ್ದು, ಈ ಸಿಂಹ ಜೋಡಿಗಳ ಹೆಸರನ್ನು ಸೂರಜ್‌ ಮತ್ತು ತಾನ್ಯಾ ಎಂದು ಬದಲಿಸಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದೆ.

ಪಶ್ಚಿಮ ಬಂಗಾಳದ ಸಫಾರಿ ಪಾರ್ಕ್‌ನಲ್ಲಿದ್ದ ಸಿಂಹದ ಜೋಡಿಗೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಅಕ್ಬರ್, ಸೀತಾ ಎಂದು ಈ ಹಿಂದೆ ನಾಮಕರಣ ಮಾಡಿತ್ತು. ಆದರೆ ಈ ನಾಮಕರಣಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿಶ್ವ ಹಿಂದೂ ಪರಿಷತ್ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಹಿನ್ನೆಲೆಯಲ್ಲಿ ಈಗ ಈ ನಾಮಕರಣ ವಿಚಾರದಲ್ಲಿ ಕೋಲ್ಕತ್ತಾ ಹೈಕೋರ್ಟ್ ಮಧ್ಯಪ್ರವೇಶ ಮಾಡಿದ್ದು, ಸಿಂಹದ ಜೋಡಿಗೆ ಅಕ್ಬರ್-ಸೀತಾ ಬದಲು ಸೂರಜ್ ತಾನ್ಯಾ ಎಂದು ಹೆಸರಿಡಲಾಗಿದೆ.

ಸಿಂಹ ಹಾಗೂ ಸಿಂಹಿಣಿಯನ್ನು ತ್ರಿಪುರಾದಿಂದ ಪಶ್ಚಿಮ ಬಂಗಾಳ ರಾಜ್ಯದ ಸಿಲಿಗುರಿಯಲ್ಲಿ ಇರುವ ಉತ್ತರ ಬಂಗಾಳ ವನ್ಯ ಮೃಗಗಳ ಉದ್ಯಾನಕ್ಕೆ ಕರೆ ತಂದ ಬಳಿಕ ಈ ವಿವಾದ ಭುಗಿಲೆದ್ದಿತ್ತು. ಈ ಪ್ರಕರಣ ಸಂಬಂಧ ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ವಿಶ್ವ ಹಿಂದೂ ಪರಿಷತ್ ಪಶ್ಚಮ ಬಂಗಾಳ ಘಟಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿತ್ತು. ಪಶ್ಚಿಮ ಬಂಗಾಳದ ಜಲ್‌ಪೈಗುರಿಯಲ್ಲಿ ಇರುವ ಕೋಲ್ಕತ್ತಾ ಹೈಕೋರ್ಟ್‌ ಸಂಚಾರಿ ಪೀಠದಲ್ಲಿ ಫೆಬ್ರವರಿ 21 ರಂದು ಈ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಸಿಂಹ ಹಾಗೂ ಸಿಂಹಿಣಿ ಹೆಸರನ್ನು ಈ ಕೂಡಲೇ ಬದಲಿಸುವಂತೆ ಆದೇಶ ನೀಡಿತ್ತು.

ಕೋರ್ಟ್‌ ಹೇಳಿದ್ದೇನು?

ಸಿಂಹಗಳನ್ನು ಕರೆತರಲಾದ ತ್ರಿಪುರಾದಿಂದಲೇ ಅವುಗಳಿಗೆ ವಿವಾದಾತ್ಮಕ ಹೆಸರುಗಳನ್ನು ನೀಡಲಾಗಿತ್ತು ಎಂದು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ. ಗುರುವಾರ, ಹೆಚ್ಚುವರಿ ಅಡ್ವೊಕೇಟ್ ಜನರಲ್ ಜೋಯ್ಜಿತ್ ಚೌಧರಿ ಈ ಬಗ್ಗೆ ತೀರ್ಪು ಪ್ರಕಟಿಸಿದ್ದು, ಈ ಪ್ರಕರಣವನ್ನು ವಿಲೇವಾರಿ ಮಾಡಲಾಗಿದೆ. ರಾಜ್ಯ ಸರಕಾರವೇ ಆ ಹೆಸರನ್ನು ಇಟ್ಟಿದೆ ಎಂಬ ಅಸಮಾಧಾನ ವ್ಯಕ್ತವಾಗಿತ್ತು. ಇದು ನಿಜವಲ್ಲ ಎಂದು ನಾವು ಸಾಬೀತಾಗಿದೆ. ಇದನ್ನು ತ್ರಿಪುರಾ ಅಧಿಕಾರಿಗಳು ನೀಡಿದ್ದಾರೆ. ಈ ಬಗ್ಗೆ ನಮಗೆ ತಿಳಿದಾಗ ಬಂಗಾಳ ಅರಣ್ಯ ಇಲಾಖೆ ಯಾವುದೇ ವಿವಾದವಾಗದಂತೆ ಅವರ ಹೆಸರನ್ನು ಬದಲಿಸಿದೆ. ಹೆಸರುಗಳನ್ನು ಬದಲಿಸಿ ಸಕ್ಷಮ ಪ್ರಾಧಿಕಾರಕ್ಕೆ ಕಳುಹಿಸಲಾಗಿದೆ. ವಿಷಯವನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: NEET: ಕರ್ನಾಟಕ ಬಳಿಕ ಪಶ್ಚಿಮ ಬಂಗಾಳದಲ್ಲೂ ನೀಟ್‌ ಪರೀಕ್ಷೆ ವಿರುದ್ಧ ನಿರ್ಣಯ; ಹೆಚ್ಚಾಯ್ತು ಆಕ್ರೋಶ

Continue Reading

ವೈರಲ್ ನ್ಯೂಸ್

ಜಯಾ ಬಚ್ಚನ್‌ ಯೂಟರ್ನ್‌; ಮೊನ್ನೆ ಅಮಿತಾಭ್‌ ಹೆಸರಿನಿಂದ ಗುರುತಿಸಿದ್ದಕ್ಕೆ ಗರಂ ಆಗಿದ್ದವರು ಸ್ವತಃ ಪತಿಯ ಹೆಸರು ಉಲ್ಲೇಖಿಸಿದರು!

Jaya Bachchan: ಸಂಸತ್‌ನಲ್ಲಿ ಮೂರನೇ ಮೋದಿ ಸರ್ಕಾರದ ಮೊದಲ ಬಜೆಟ್‌ ಅಧಿವೇಶನ ನಡೆಯುತ್ತಿದ್ದು, ಈ ವೇಳೆ ರಾಜ್ಯಸಭೆಯಲ್ಲಿ ಅಪರೂಪದ ಪ್ರಸಂಗವೊಂದು ನಡೆದಿದೆ. ಕೆಲವು ದಿನಗಳ ಹಿಂದೆ ಹಿರಿಯ ನಟಿ, ರಾಜಕಾರಣಿ, ಸಮಾಜವಾದಿ ಪಾರ್ಟಿಯ ಜಯಾ ಬಚ್ಚನ್ ಅವರು ರಾಜ್ಯಸಭೆಯಲ್ಲಿ ಪತಿಯ ಹೆಸರು ಹೇಳಿ ತಮ್ಮನ್ನು ಕರೆದುದಕ್ಕೆ ಕೋಪಗೊಂಡಿದ್ದರು. ಆದರೆ ಶುಕ್ರವಾರ ಅವರೇ ತಮ್ಮನ್ನು ʼಜಯಾ ಅಮಿತಾಭ್‌ ಬಚ್ಚನ್‌ʼ ಎಂದು ಕರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ

VISTARANEWS.COM


on

Jaya Bachchan
Koo

ನವದೆಹಲಿ: ಸಂಸತ್‌ನಲ್ಲಿ ಮೂರನೇ ಮೋದಿ ಸರ್ಕಾರದ ಮೊದಲ ಬಜೆಟ್‌ ಅಧಿವೇಶನ ನಡೆಯುತ್ತಿದ್ದು, ಈ ವೇಳೆ ರಾಜ್ಯಸಭೆಯಲ್ಲಿ ಅಪರೂಪದ ಪ್ರಸಂಗವೊಂದು ನಡೆದಿದೆ. ಕೆಲವು ದಿನಗಳ ಹಿಂದೆ ಹಿರಿಯ ನಟಿ, ರಾಜಕಾರಣಿ, ಸಮಾಜವಾದಿ ಪಾರ್ಟಿಯ ಜಯಾ ಬಚ್ಚನ್ (Jaya Bachchan) ಅವರು ರಾಜ್ಯಸಭೆಯಲ್ಲಿ ಪತಿಯ ಹೆಸರು ಹೇಳಿ ತಮ್ಮನ್ನು ಕರೆದುದಕ್ಕೆ ಕೋಪಗೊಂಡಿದ್ದರು. ಆದರೆ ಶುಕ್ರವಾರ ಅವರೇ ತಮ್ಮನ್ನು ʼಜಯಾ ಅಮಿತಾಭ್‌ ಬಚ್ಚನ್‌ʼ ಎಂದು ಕರೆದುಕೊಂಡಿದ್ದಾರೆ. ಊಹಿಸಿರದ ಈ ಬೆಳವಣಿಗೆಯಿಂದ ಒಂದುಕ್ಷಣ ಅಚ್ಚರಿಗೊಳಗಾದ ರಾಜ್ಯಸಭಾ ಅಧ್ಯಕ್ಷ, ಉಪರಾಷ್ಟ್ರಪತಿ ಜಗದೀಪ್ ಧನ್ಕರ್ (Jagdeep Dhankhar) ಬಳಿಕ ಜೋರಾಗಿ ನಗಾಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ (Viral Video).

ಈ ವೇಳೆ ಹಾಜರಿದ್ದ ಪ್ರತಿಪಕ್ಷಗಳ ಸದಸ್ಯರಾದ ಕಾಂಗ್ರೆಸ್‌ನ ಜೈರಾಂ ರಮೇಶ್‌ ಮತ್ತು ಆಮ್‌ ಆದ್ಮಿ ಪಾರ್ಟಿಯ ರಾಘವ್‌ ಛಡ್ಡಾ ಅವರ ಮುಖದಲ್ಲಿಯೂ ನಗು ಅರಳಿದೆ.

ರಾಜ್ಯಸಭೆಯಲ್ಲಿ ಏನಾಯ್ತು?

ಜಯಾ ಬಚ್ಚನ್ ಮತ್ತು ಜಗದೀಪ್ ಧನ್ಕರ್ ನಡುವೆ ತಮಾಷೆಯ ಮಾತುಕತೆ ನಡೆಯಿತು. “ನಾನು ಜಯಾ ಅಮಿತಾಭ್‌ ಬಚ್ಚನ್‌ ಮಾತನಾಡುತ್ತಿದ್ದೇನೆ. ಇಂದು ನಿಮಗೆ ಊಟದ ವಿರಾಮ ಸಿಕ್ಕಿದೆಯೇ? ಇಲ್ಲ? ಅದಕ್ಕಾಗಿಯೇ ನೀವು ಜೈರಾಮ್ ಜಿ ಅವರ ಹೆಸರನ್ನು ಪದೇ ಪದೆ ಹೇಳುತ್ತಿದ್ದೀರಿ. ಅವರ ಹೆಸರನ್ನು ಉಲ್ಲೇಖಿಸದೆ ನಿಮಗೆ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಜಯಾ ಬಚ್ಚನ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಧನ್ಕರ್, “ನಾನು ಇಂದು ಊಟಕ್ಕೆ ವಿರಾಮ ತೆಗೆದುಕೊಳ್ಳಲಿಲ್ಲ. ಆದರೆ ನಾನು ಜೈರಾಮ್‌ ಅವರೊಂದಿಗೆ ಊಟ ಮಾಡಿದೆʼʼ ಎಂದರು. ಜತೆಗೆ ತಾವು ಜಯಾ ಬಚ್ಚನ್‌ ಮತ್ತು ಅಮಿತಾಭ್‌ ಬಚ್ಚನ್‌ ಅವರ ಅಭಿಮಾನಿ ಎಂದೂ ತಿಳಿಸಿದರು. ಇದಕ್ಕೆ ಕೈಮುಗಿದು ಜಯಾ ಬಚ್ಚನ್‌ ಕೃತಜ್ಞತೆ ಸಲ್ಲಿಸಿದರು. ಒಟ್ಟಿನಲ್ಲಿ ಬಿಸಿ ಬಿಸಿ ಚರ್ಚೆಯಿಂದ ಕಾವೇರುತ್ತಿದ್ದ ರಾಜ್ಯಸಭೆ ಕೆಲ ಹೊತ್ತು ನಗೆಗಡಲಲ್ಲಿ ತೇಲಿ ಹಗುರವಾಯಿತು.

ಈ ಹಿಂದೆ ಜಯಾ ಬಚ್ಚನ್‌ ಹೇಳಿದ್ದೇನು?

ಜುಲೈ 29ರಂದು  ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಅವರು ʼʼಜಯಾ ಅಮಿತಾಭ್ ಬಚ್ಚನ್ ಜೀ, ದಯವಿಟ್ಟು ಮಾತನಾಡಿʼʼ ಎಂದು ಸದನದಲ್ಲಿ ಜಯಾ ಬಚ್ಚನ್ ಅವರನ್ನು ಕರೆದಿದ್ದರು. ಇದರಿಂದ ಕೆರಳಿದ ಜಯಾ ಬಚ್ಚನ್‌ ಅವರು, ʼʼಸರ್ ನನ್ನನ್ನು ಕೇವಲ ಜಯಾ ಬಚ್ಚನ್ ಎಂದು ಕರೆದರೆ ಸಾಕಿತ್ತುʼʼ ಎಂದು ಗರಂ ಆಗಿ ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ: Parliament Session: ಪತಿ ಅಮಿತಾಬ್‌ ಹೆಸರು ಜಯಾ ಬಚ್ಚನ್‌ಗೆ ಅಲರ್ಜಿ! ಸಂಸತ್‌ನಲ್ಲಿ ಆ ಹೆಸರು ಹೇಳಬೇಡಿ ಎಂದ ನಟಿ!

ಆಗ ಹರಿವಂಶ್ ನಾರಾಯಣ್ ಸಿಂಗ್ ಅವರು ʼʼಸಂಸತ್ತಿನ ದಾಖಲೆಗಳಲ್ಲಿ ಅಧಿಕೃತವಾಗಿ ಜಯಾ ಅಮಿತಾಭ್‌ ಬಚ್ಚನ್ ಎಂದು ನಿಮ್ಮ ಹೆಸರನ್ನು ನೋಂದಾಯಿಸಲಾಗಿದೆʼʼ ಎಂದು ತಿಳಿಸಿದ್ದರು. ʼʼಇದು ಹೊಸ ಸಂಗತಿಯಾಗಿದೆ. ಮಹಿಳೆಯರು ತಮ್ಮ ಗಂಡನ ಹೆಸರಿನಿಂದ ಗುರುತಿಸಲ್ಪಡುತ್ತಾರೆ. ಮಹಿಳೆಯರು ತಮ್ಮದೇ ಆದ ಅಸ್ತಿತ್ವ ಅಥವಾ ಸಾಧನೆಗಳನ್ನು ಹೊಂದಿಲ್ಲ ಏಕೆ?ʼʼ ಎಂದು ಜಯಾ ಬಚ್ಚನ್ ತೀಕ್ಷ್ಣವಾಗಿ ಪ್ರಶ್ನಿಸಿದ್ದರು. ಈ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ಹುಟ್ಟು ಹಾಕಿತ್ತು. ಇದೀಗ ಮತ್ತೊಮ್ಮೆ ಜಯಾ ಬಚ್ಚನ್‌ ತಮ್ಮ ಹೆಸರಿನ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.

Continue Reading

ದೇಶ

Wayanad Landslide: ಇಲ್ಲಿಗೇಕೆ ಬಂದ್ರಿ? ಕಾರ್ಯಾಚರಣೆಗೆ ಅಡ್ಡಿ ಮಾಡೋಕಾ?- ರಾಹುಲ್‌ ಗಾಂಧಿ ಮೇಲೆ ಕೂಗಾಡಿದ ವ್ಯಕ್ತಿ-ವಿಡಿಯೋ ಇದೆ

Wayanad Landslide: ದುರಂತ ಸ್ಥಳ ವಯನಾಡಿಗೆ ರಾಹುಲ್‌ ಗಾಂಧಿ ಭೇಟಿ ನೀಡಿದ್ದರು. ಈ ವೇಳೆ ಅವರು ವಾಹನದಲ್ಲಿ ಕುಳಿತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಸ್ಥಳೀಯ ವ್ಯಕ್ತಿಯೊಬ್ಬ ರಾಹುಲ್‌ ಭೇಟಿ ಭಾರೀ ವಿರೋಧ ವ್ಯಕ್ತಪಡಿಸಿದ್ದಾನೆ.

VISTARANEWS.COM


on

wayanad Landslide
Koo

ವಯನಾಡ್‌: ಭಾರಿ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಭೀಕರ ಭೂಕುಸಿತಕ್ಕೆ ಕೇರಳದ ವಯನಾಡು ಈಗ ಸೂತಕದ ಮನೆಯಂತಾಗಿದೆ. ಭೂಕುಸಿತದಲ್ಲಿ (Wayanad Landslide) ಮೃತಪಟ್ಟವರ ಸಂಖ್ಯೆ ಈಗ 300 ದಾಟಿದೆ. ಇನ್ನು ಈ ಮಧ್ಯೆಯೇ, ಕಾಂಗ್ರೆಸ್‌ ನಾಯಕರೂ ಆಗಿರುವ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ವಯನಾಡಿಗೆ ಭೇಟಿ ನೀಡಿದ್ದರು. ಈ ವೇಳೆ ಸ್ಥಳೀಯರಿಂದ ರಾಹುಲ್‌ ಗಾಂಧಿಯವರಿಗೆ ಭಾರೀ ವಿರೋಧ ವ್ಯಕ್ತವಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ವಿಡಿಯೋದಲ್ಲೇನಿದೆ?

ದುರಂತ ಸ್ಥಳ ವಯನಾಡಿಗೆ ರಾಹುಲ್‌ ಗಾಂಧಿ ಭೇಟಿ ನೀಡಿದ್ದರು. ಈ ವೇಳೆ ಅವರು ವಾಹನದಲ್ಲಿ ಕುಳಿತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಸ್ಥಳೀಯ ವ್ಯಕ್ತಿಯೊಬ್ಬ ರಾಹುಲ್‌ ಭೇಟಿ ಭಾರೀ ವಿರೋಧ ವ್ಯಕ್ತಪಡಿಸಿದ್ದಾನೆ. ವಾಹನದಲ್ಲಿ ಬಂದು ಪರಿಸ್ಥಿತಿ ಅವಲೋಕಿಸುವ ಅವಶ್ಯಕತೆ ಏನಿದೆ? ಇದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತದೆ. ಅವರಿಗೆ ನಿಜವಾಗಿಗೆ ಕಾಳಜಿ ಇದ್ದರೆ ವಾಹನದಿಂದ ಕೆಳಗಿಳಿಯಲಿ. ಕಾಲಿಗೆ ಮಣ್ಣಾಗುತ್ತದೆ ಎಂಬಚಿಂತೆಯೇ ಹಾಗಿದ್ದರೆ ಇಲ್ಲಿಗೆ ಬಂದಿದ್ದೇಕೆ? ಏನನ್ನು ನೋಡಲು ಆತ ಬಂದಿದ್ದಾರೆ ಎಂದು ವ್ಯಕ್ತಿಯೊಬ್ಬ ಕೋಪದಲ್ಲಿ ಕಿರುಚುತ್ತಾ ರಾಹುಲ್‌ ಇದ್ದ ವಾಹನವನ್ನು ತಡೆಯುವ ಪ್ರಯತ್ನ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಅದಾಗಿಯೂ ಆತನನ್ನು ರಾಹುಲ್‌ ಗಾಂಧಿ ಲೆಕ್ಕಿಸಲೇಇಲ್ಲ. ವಾಹನ ಹಾಗೇ ಮುಂದಕ್ಕೆ ಚಲಿಸಿದೆ. ಆಗ ಆವ್ಯಕ್ತಿ ಮತ್ತಷ್ಟು ಕೋಪದಿಂದ ಕೂಗಾಡಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗಿದ್ದು, ಎಲ್ಲರೂ ರಾಹುಲ್‌ ಗಾಂಧಿಯನ್ನು ಪ್ರವಾಸಿಗ ಎಂದು ವ್ಯಂಗ್ಯವಾಡಿದ್ದಾರೆ.

ವಯನಾಡು ಜಿಲ್ಲೆಯ ಮೆಪ್ಪಾಡಿ ಹಾಗೂ ಚೂರಲ್‌ಮಲ ಪ್ರದೇಶಗಳ ಗ್ರಾಮಗಳು ಸಂಪೂರ್ಣವಾಗಿ ಮಸಣದಂತಾಗಿವೆ. ಈ ಪ್ರದೇಶಗಳಿಗೆ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರು ಭೇಟಿ ನೀಡಿದ್ದಾರೆ. ಪ್ರವಾಹದಲ್ಲಿ ಕುಟುಂಬಸ್ಥರನ್ನು ಕಳೆದುಕೊಂಡಿರುವ, ನೀರಿನಲ್ಲಿ ಮನೆಗಳು ಕೊಚ್ಚಿ ಹೋಗಿ ನಿರಾಶ್ರಿತರಾಗಿರುವ ಸಂತ್ರಸ್ತರನ್ನು ಭೇಟಿಯಾದ ಅವರು, ಆತ್ಮಸ್ಥೈರ್ಯ ತುಂಬಿದರು. ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಹಾನಿಯ ವೀಕ್ಷಣೆ ಮಾಡಿದರು.

ಇದನ್ನೂ ಓದಿ: Wayanad Landslide: ವಯನಾಡ್‌ ಅಕ್ಷರಶಃ ಸ್ಮಶಾನ; ಭೂಕುಸಿತ ಸ್ಥಳಕ್ಕೆ ರಾಹುಲ್‌, ಪ್ರಿಯಾಂಕಾ ಭೇಟಿ ಸ್ಥಗಿತ

Continue Reading
Advertisement
Neeraj Chopra
ಕ್ರೀಡೆ2 seconds ago

Neeraj Chopra: ನೀರಜ್​ ಚಿನ್ನ ಗೆದ್ದರೆ ನೀವು ಕೂಡ ಉಚಿತ ವಿದೇಶ ಪ್ರವಾಸ ಕೈಗೊಳ್ಳಬಹುದು; ಇದು ಹೇಗೆ ಸಾಧ್ಯ?

World Bank
ವಾಣಿಜ್ಯ6 mins ago

World Bank: ಅಮೆರಿಕದ ತಲಾ ಆದಾಯದ ಕಾಲು ಭಾಗ ತಲುಪಲು ಭಾರತಕ್ಕೆ 75 ವರ್ಷ ಬೇಕು: ವಿಶ್ವ ಬ್ಯಾಂಕ್‌

Rakshit Shetty Richard Anthony Produce By Hombale
ಅವಿಭಾಗೀಕೃತ10 mins ago

ಇರಾನ್, ಹಮಾಸ್, ಹೆಜ್ಬುಲ್ಲಾ ದಾಳಿಯಿಂದ ಇಸ್ರೇಲ್ ರಕ್ಷಿಸಲು ಭದ್ರಕೋಟೆ ನಿರ್ಮಿಸಿದ ಅಮೆರಿಕ

Jr NTR -Janhvi Kapoor Devara Song take centre stage
ಟಾಲಿವುಡ್29 mins ago

Jr NTR -Janhvi Kapoor: ರೊಮ್ಯಾಂಟಿಕ್​ ಆಗಿ ಕಾಣಿಸಿಕೊಂಡ ಜ್ಯೂನಿಯರ್‌ ಎನ್‌ಟಿಆರ್- ಜಾಹ್ನವಿ; ಆ.5ಕ್ಕೆ ಚಿತ್ರತಂಡದಿಂದ ಗಿಫ್ಟ್‌!​

IND vs SL
ಕ್ರೀಡೆ30 mins ago

IND vs SL: ಭಾರತ-ಲಂಕಾ ಏಕದಿನ ಪಂದ್ಯ ಟೈ ಆದರೂ ಸೂಪರ್​ ಓವರ್​ ಏಕೆ ಆಡಿಸಲಿಲ್ಲ?; ಇಲ್ಲಿದೆ ಉತ್ತರ

UGCET 2024
ಪ್ರಮುಖ ಸುದ್ದಿ50 mins ago

UGCET 2024: ಆ.7ರಂದು ಮಧ್ಯಾಹ್ನ 2 ಗಂಟೆಗೆ ಸಿಇಟಿ ಅಣಕು ಸೀಟು ಹಂಚಿಕೆ ಪ್ರಕಟ; ಆಪ್ಶನ್ ಎಂಟ್ರಿಗೆ ನಾಳೆ ಲಾಸ್ಟ್ ಡೇಟ್

Lion & Lioness Name
ದೇಶ59 mins ago

Lion & Lioness Name: ಅಕ್ಬರ್‌-ಸೀತಾ ಸಿಂಹಗಳಿಗೆ ಹೊಸ ಹೆಸರು; ವಿವಾದಕ್ಕೆ ತೆರೆ ಎಳೆದ ದೀದಿ ಸರ್ಕಾರ

Kamala Harris
ವಿದೇಶ1 hour ago

Kamala Harris: ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಹೆಸರು ಅಂತಿಮ

Kannada New Movie Tenant sonu gowda First look out
ಸ್ಯಾಂಡಲ್ ವುಡ್1 hour ago

Kannada New Movie: ʻಟೆನೆಂಟ್’ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ಔಟ್‌; ಸೋನು ಗೌಡ ನಾಯಕಿ!

Rohit Sharma
ಕ್ರೀಡೆ1 hour ago

Rohit Sharma: ಲಂಕಾ ವಿರುದ್ಧ ಅರ್ಧಶತಕ ಬಾರಿಸಿ ಹಲವು ದಾಖಲೆ ಬರೆದ ರೋಹಿತ್​ ಶರ್ಮ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Rain
ಮಳೆ2 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ4 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ4 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ5 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ5 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ5 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ6 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌