ದೇಶ
‘ನನ್ನ ಇನಿಂಗ್ಸ್ ಮುಕ್ತಾಯವಾಗಬಹುದು’: ರಾಜಕೀಯ ನಿವೃತ್ತಿ ಸುಳಿವು ನೀಡಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ
ದೇಶದಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ಗಳು ಪ್ರತಿಯೊಂದು ಸಂಸ್ಥೆಗಳನ್ನೂ ಹಿಡಿದಿಟ್ಟುಕೊಂಡು, ಇಡೀ ವ್ಯವಸ್ಥೆಯನ್ನು ಬುಡಮೇಲು ಮಾಡಿವೆ. ಇದು ಕಾಂಗ್ರೆಸ್ ಮತ್ತು ಇಡೀ ದೇಶಕ್ಕೆ ಸವಾಲಿನ ಸಮಯ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
ನವ ದೆಹಲಿ: ಛತ್ತೀಸ್ಗಢ್ನ ರಾಯ್ಪುರದಲ್ಲಿ ನಡೆದ ಕಾಂಗ್ರೆಸ್ 85ನೇ ಮಹಾ ಅಧಿವೇಶನ (Congress Plenary Session)ದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi), ‘ಡಾ. ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ 2004 ಮತ್ತು 2009ರಲ್ಲಿ ಕಾಂಗ್ರೆಸ್ ಗಳಿಸಿದ್ದ ಗೆಲುವು ನನಗೆ ವೈಯಕ್ತಿಕವಾಗಿ ತುಂಬ ತೃಪ್ತಿ ತಂದುಕೊಟ್ಟಿದೆ. ಅದಕ್ಕಿಂತಲೂ ಹೆಚ್ಚಾಗಿ, ಕಾಂಗ್ರೆಸ್ಗೆ ಮಹತ್ವದ ತಿರುವು ಕೊಟ್ಟಿರುವ ಈ ಭಾರತ್ ಜೋಡೋ ಯಾತ್ರೆಯೊಂದಿಗೆ ನನ್ನ ಇನ್ನಿಂಗ್ಸ್ ಕೂಡ ಕೊನೆಯಾಗಬಹುದು. ಹೀಗಾಗುವುದು ಕೂಡ ನನಗೆ ಅತ್ಯಂತ ತೃಪ್ತಿ ತರುವ ಸಂಗತಿಯೇ ಆಗಿದೆ’ ಎಂದು ಹೇಳಿದರು. ಇಲ್ಲಿ ಅವರು ನನ್ನ ಇನ್ನಿಂಗ್ಸ್ ಮುಕ್ತಾಯ ಆಗಬಹುದು ಎನ್ನುವ ಮೂಲಕ ಅವರು ರಾಜಕೀಯ ನಿವೃತ್ತಿಯ ಸುಳಿವು ನೀಡಿದರು.
ಮುಂದುವರಿದ ಮಾತನಾಡಿದ ಅವರು ‘ದೇಶದಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ಗಳು ಪ್ರತಿಯೊಂದು ಸಂಸ್ಥೆಗಳನ್ನೂ ಹಿಡಿದಿಟ್ಟುಕೊಂಡು, ಇಡೀ ವ್ಯವಸ್ಥೆಯನ್ನು ಬುಡಮೇಲು ಮಾಡಿವೆ. ಇದು ಕಾಂಗ್ರೆಸ್ ಮತ್ತು ಇಡೀ ದೇಶಕ್ಕೆ ಸವಾಲಿನ ಸಮಯ. ಬಿಜೆಪಿಗರು ಕೆಲವೇ ಕೆಲವು ಉದ್ಯಮಿಗಳಿಗೆ ಅನುಕೂಲ ಮಾಡಿಕೊಟ್ಟು, ಇಡೀ ಆರ್ಥಿಕತೆಯನ್ನು ಹಾಳುಗೆಡವಿದ್ದಾರೆ’ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: Congress Plenary Session: ಕಾಂಗ್ರೆಸ್ ಮಹಾ ಅಧಿವೇಶನದಲ್ಲಿ ಇಂದು ಸೋನಿಯಾ ಗಾಂಧಿ ಭಾಷಣ, ರಾಹುಲ್ ಗಾಂಧಿ ಉಪಸ್ಥಿತಿ
ಅದೇನೇ ಇರಲಿ ಸೋನಿಯಾ ಗಾಂಧಿ ಇತ್ತೀಚೆಗೆ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಅಧ್ಯಕ್ಷರಾದ ನಂತರ ಸಂಪೂರ್ಣ ಅಧಿಕಾರವನ್ನು ಅವರಿಗೇ ನೀಡಲಾಗಿದೆ. ಈಗ ಕಾರ್ಯಕಾರಿ ಸಮಿತಿಯ ಸದಸ್ಯರ ನೇಮಕಾತಿ ಜವಾಬ್ದಾರಿಯೂ ಪೂರ್ಣವಾಗಿ ಮಲ್ಲಿಕಾರ್ಜುನ್ ಖರ್ಗೆ ಅವರದ್ದೇ ಎಂದು ಹೇಳಲಾಗಿದೆ. ಅದರ ಬೆನ್ನಲ್ಲೇ ಸೋನಿಯಾ ಗಾಂಧಿ ಈ ಮಾತುಗಳನ್ನು ಆಡಿದ್ದು ಕುತೂಹಲ ಮೂಡಿಸಿದೆ.
ದೇಶ
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
UNGA Speech: 78ನೇ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರು ಪಾಲ್ಗೊಂಡು ದೇಶದ ವಾದವನ್ನು ಮಂಡಿಸಿದರು.
ವಿಶ್ವ ಸಂಸ್ಥೆ: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವುದು(Respect for territorial integrity), ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಷೇರಿದಂತೆ ಅನೇಕ ವಿಷಯಗಳನ್ನು ಭಾರತದ ವಿದೇಶಾಂಗ ಸಚಿವ ಎಸ್ ಜೈ ಶಂಕರ್ (External affairs minister S Jaishankar) ಅವರು, ಮಂಗಳವಾ ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದರು. ”ನಮಸ್ತೆ, ನಾನು ಭಾರತದಿಂದ ಬಂದಿದ್ದೇನೆ(Bharat)” ಎಂದು ಮಾತು ಆರಂಭಿಸಿದ ಜೈ ಶಂಕರ್ ಅವರು, ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಮತ್ತು ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದರು. ಇದೇ ವೇಳೆ, ಪರೋಕ್ಷವಾಗಿ ಕೆನಡಾಕ್ಕೆ ಕುಟುಕಿದ ಜೈ ಶಂಕರ್ ಅವರು, ಭಯೋತ್ಪಾದನೆಯ ಪ್ರತಿಕ್ರಿಯೆಯು ರಾಜಕೀಯ ಅನುಕೂಲಕ್ಕಾಗಿ ನಿರ್ಧರಿಸಬಾರದು ಎಂದು ಹೇಳಿದರು(UNGA Speech).
ಲಸಿಕೆ ವರ್ಣಭೇದ ನೀತಿಯಂತಹ ಅನ್ಯಾಯವನ್ನು ಮರುಕಳಿಸಲು ನಾವು ಎಂದಿಗೂ ಅವಕಾಶವನ್ನು ನೀಡಬಾರದು. ಹವಾಮಾನ ಕ್ರಿಯೆಯು ಸಹ ಐತಿಹಾಸಿಕ ಜವಾಬ್ದಾರಿಗಳ ತಪ್ಪಿಸಿಕೊಳ್ಳುವಿಕೆಗೆ ಸಾಕ್ಷಿಯಾಗಲು ಸಾಧ್ಯವಿಲ್ಲ. ಆಹಾರ ಮತ್ತು ಶಕ್ತಿಯನ್ನು ಅಗತ್ಯವಿರುವವರಿಂದ ಶ್ರೀಮಂತರಿಗೆ ಸಾಗಿಸಲು ಮಾರುಕಟ್ಟೆಯ ಶಕ್ತಿಯನ್ನು ಬಳಸಬಾರದು ಎಂದು ಭಾರತೀಯ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರು ಹೇಳಿದರು.
ರಾಜಕೀಯ ಅನುಕೂಲವು ಭಯೋತ್ಪಾದನೆ, ಉಗ್ರವಾದ ಮತ್ತು ಹಿಂಸೆಗೆ ಪ್ರತಿಕ್ರಿಯೆಗಳನ್ನು ನಿರ್ಧರಿಸುತ್ತದೆ ಎಂದು ನಾವು ಪರಿಗಣಿಸಬಾರದು. ಅದೇ ರೀತಿ, ಪ್ರಾದೇಶಿಕ ಸಮಗ್ರತೆಗೆ ಗೌರವ ಮತ್ತು ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರುವುದು ಒಳ್ಳೆಯದು ಎಂದು ಭಾರತೀಯ ವಿದೇಶಾಂಗ ಸಚಿವರು ಹೇಳಿದರು.
78 ನೇ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರ ಭಾಷಣವು ಗಮನ ಸೆಳೆಯಿತು. ನ್ಯಾಯಯುತ, ಸಮಾನ ಮತ್ತು ಪ್ರಜಾಪ್ರಭುತ್ವದ ವಿಶ್ವ ಕ್ರಮಕ್ಕಾಗಿ ಕರೆ ನೀಡಿದರು. ನಮ್ಮ ಚರ್ಚೆಗಳಲ್ಲಿ, ನಾವು ಸಾಮಾನ್ಯವಾಗಿ ನಿಯಮಾಧಾರಿತ ಆದೇಶದ ಪ್ರಚಾರವನ್ನು ಪ್ರತಿಪಾದಿಸುತ್ತೇವೆ. ಕಾಲಕಾಲಕ್ಕೆ, ಯುಎನ್ ಚಾರ್ಟರ್ಗೆ ಗೌರವವನ್ನು ಸಹ ಒಳಗೊಂಡಿರುತ್ತದೆ. ಆದರೆ ಎಲ್ಲಾ ಚರ್ಚೆಗಾಗಿ, ಇನ್ನೂ ಕೆಲವು ರಾಷ್ಟ್ರಗಳು ಕಾರ್ಯಸೂಚಿಯನ್ನು ರೂಪಿಸುತ್ತವೆ ಮತ್ತು ರೂಢಿಗಳನ್ನು ವ್ಯಾಖ್ಯಾನಿಸಲು ಪ್ರಯತ್ನಿಸುತ್ತವೆ. ಇದು ಅನಿರ್ದಿಷ್ಟವಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ: ಯುರೋಪ್ ದೇಶಗಳಿಗೆ ತಮ್ಮ ಸಮಸ್ಯೆ ಜಗತ್ತಿನ ಸಮಸ್ಯೆ ಎಂಬ ಭ್ರಮೆ: ವಿದೇಶಾಂಗ ಸಚಿವ ಜೈ ಶಂಕರ್ ಖಡಕ್ ಮಾತು
ಮಹಿಳಾ ಮಸೂದೆ ಪ್ರಸ್ತಾಪ
ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕರಿಸಲಾದ ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆಯೂ ವಿದೇಶಾಂಗ ಸಚಿವರು ಮಾತನಾಡಿದರು. “ನಮ್ಮ ಇತ್ತೀಚಿನ ಸಮರ್ಥನೆಯು ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡುವ ಶಾಸನ ಮಾಡಿದ್ದೇವೆ. ಪ್ರಜಾಪ್ರಭುತ್ವದ ಪ್ರಾಚೀನ ಸಂಪ್ರದಾಯಗಳು ಆಳವಾದ ಆಧುನಿಕ ಬೇರುಗಳನ್ನು ಹೊಂದಿರುವ ಸಮಾಜ ಪರವಾಗಿ ನಾನು ಮಾತನಾಡುತ್ತಿದ್ದೇನೆ. ಪರಿಣಾಮವಾಗಿ, ನಮ್ಮ ಆಲೋಚನೆಗಳು, ವಿಧಾನಗಳು ಮತ್ತು ಕಾರ್ಯಗಳು ಹೆಚ್ಚು ಆಧಾರವಾಗಿವೆ ಮತ್ತು ಅಧಿಕೃತವಾಗಿವೆ ಎಂದು ಸಚಿವರು ಪ್ರತಿಪಾದಿಸಿದರು.
ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ದೇಶ
Manipur Horror: ಅಪಹರಿಸಿ ಕೊಂದ್ರಲ್ಲಾ… ನಮ್ಮ ಮಕ್ಕಳು ಮಾಡಿದ ತಪ್ಪಾದ್ರೂ ಏನು? ಹತ್ಯೆಗೀಡಾದ ವಿದ್ಯಾರ್ಥಿಗಳ ಪೋಷಕರ ಪ್ರಶ್ನೆ
Manipur Horror: ಹದಿ ಹರಿಯದ ಇಬ್ಬರ ವಿದ್ಯಾರ್ಥಿಗಳನ್ನು ಅಪಹರಿಸಿದ ದುಷ್ಕರ್ಮಿಗಳು, ಅವರನ್ನು ಹತ್ಯೆ ಮಾಡಿದ್ದಾರೆ. ಈ ಸಂಬಂಧ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ನವದೆಹಲಿ: ನನ್ನ ಮಗ ಅಥವಾ ಆ ಹುಡುಗಿ ಮಾಡಿದ ಅಪರಾಧವಾದರೂ ಏನು? (done anything wrong?) ಅವರನ್ನು ಅಪಹರಿಸಿದ ವೇಳೆ ಅವರು ಪ್ರಯಾಣಿಸುತ್ತಿರುವುದೇ ತಪ್ಪಾಯ್ತಾ ಎಂದು ಶಸ್ತ್ರ ಸಜ್ಜಿತ ದುಷ್ಕರ್ಮಿಗಳಿಂದ ಹತ್ಯೆಗೀಡಾದ 17 ವರ್ಷದ ವಿದ್ಯಾರ್ಥಿಯ ತಂದೆ ಫಿಜಾಮ್ ಇಬುಂಗೋಬಿ ಅವರು ಪ್ರಶ್ನಿಸಿದ್ದಾರೆ(Parents Of Manipur Teens). ಶಸ್ತ್ರಸಜ್ಜಿತ ದುಷ್ಕರ್ಮಿಗಳಿಂದ ಹತ್ಯೆಗೀಡಾದ 17 ವರ್ಷದ ವಿದ್ಯಾರ್ಥಿಯ ಪೋಷಕರು ಎರಡು ತಿಂಗಳಿನಿಂದ ಪ್ರತಿದಿನ ಬೆಳಿಗ್ಗೆ ತಿಂಡಿಯ ತಟ್ಟೆಯನ್ನು ಅವನ ಟೇಬಲ್‌ಗೆ ಹಾಕುತ್ತಿದ್ದರು, ಅವನು ಮನೆಗೆ ಮರಳುತ್ತಾನೆ ಎಂದು ಆಶಿಸುತ್ತಿದ್ದರು. ಅವರು ಈಗ ಟೇಬಲ್‌ನಲ್ಲಿ ಆಹಾರ ತಟ್ಟೆ ಹಾಕುವುದನ್ನು ನಿಲ್ಲಿಸಿದ್ದಾರೆ. ಈ ವಿಷಯವನ್ನು ಕಣ್ಣೀರು ಹಾಕುತ್ತಲೇ ಅವರು ತಿಳಿಸಿದರು(Manipur Horror).
ಜುಲೈನಲ್ಲಿ ನಾಪತ್ತೆಯಾಗಿದ್ದ ಮೈತಿ ಸಮುದಾಯದ ಇಬ್ಬರು ವಿದ್ಯಾರ್ಥಿಗಳಾದ ಹಿಜಾಮ್ ಲಿಂಥೋಯಿಂಗಾಂಬಿ (17) ಮತ್ತು ಫಿಜಾಮ್ ಹೇಮ್ಜಿತ್ (20) ಅವರ ಕೊಲೆಯಾಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ವೈರಲ್ ಆಗಿರುವ ಫೋಟೋವೊಂದರಲ್ಲಿ ಸಶಸ್ತ್ರ ಗುಂಪೊಂದರ ಮುಂದೆ ಹುಲ್ಲುಗಾವಲಿನ ಕಾಂಪೌಂಡ್‌ನಲ್ಲಿ ವಿದ್ಯಾರ್ಥಿಗಳಿಬ್ಬರು ಕುಳಿತಿದ್ದಾರೆ. ಲಿಂಥೋಯಿಂಗಾಂಬಿ ಬಿಳಿ ಟೀ ಶರ್ಟ್ ಧರಿಸಿದ್ದರೆ, ಹೇಮ್ಜಿತ್ ಚೆಕ್ಸ್ ಶರ್ಟ್ ಧರಿಸಿದ್ದಾರೆ. ಅವರ ಹಿಂದೆ ಬಂದೂಕುಗಳನ್ನು ಹಿಡಿದುಕೊಂಡಿರುವ ಇಬ್ಬರು ನಿಂತಿದ್ದಾರೆ. ಇನ್ನೊಂದು ಫೋಟೋದಲ್ಲಿ ವಿದ್ಯಾರ್ಥಿಗಳ ದೇಹಗಳು ನೆಲದ ಮೇಲೆ ಬಿದ್ದಿರುವುದು ಕಾಣಬಹುದು.
ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ಭಾರೀ ಆಕ್ರೋಶವಾಗಿದ್ದು, ಸಿಬಿಐ ಈ ಪ್ರಕರಣದ ತನಿಖೆಯನ್ನು ಕೈಗೊಂಡಿದೆ. ಈ ಮಧ್ಯೆ, ಹತರಾದ ವಿದ್ಯಾರ್ಥಿಯ ತಂದೆ ಎನ್‌ಡಿ ಟಿವಿಯೊಂದಿಗೆ ಮಾತನಾಡಿ, ತಮ್ಮ ಅಳಲನ್ನು ಹೊರ ಹಾಕಿದ್ದಾರೆ.
17ರ ಹರೆಯದ ಬಾಲಕಿ ಜುಲೈ 6ರಂದು ಬೆಳಗ್ಗೆ ಕೆಲ ಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಿದಾಗ ವೈದ್ಯಕೀಯ ಪೂರ್ವ ವ್ಯಾಸಂಗಕ್ಕೆ ಪ್ರವೇಶಕ್ಕಾಗಿ ನೀಟ್ ತರಗತಿಗಳಿಗೆ ಹಾಜರಾಗಲು ಮನೆಯಿಂದ ತೆರಳಿದ್ದಳು. ಆಕೆಯನ್ನು ಅವಳ ಸ್ನೇಹಿತ ಮೋಟಾರು ಸೈಕಲ್‌ನಲ್ಲಿ ಕರೆದುಕೊಂಡು ಹೋಗಿದ್ದ. ಪರಿಸ್ಥಿತಿ ಸುಧಾರಿಸಿದೆ ಎಂದು ಭಾವಿಸಿ, ಇಬ್ಬರೂ ಚುರಚಂದಪುರ ಮತ್ತು ಬಿಷ್ಣುಪುರ ಜಿಲ್ಲೆಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆಗೆ ಹೋಗಿದ್ದರು. ಈ ಪ್ರದೇಶದಲ್ಲಿ ಮೇ ಮತ್ತು ಜೂನ್ ತಿಂಗಳಲ್ಲಿ ಭಾರೀ ಸಂಘರ್ಷ ನಡೆದಿತ್ತು. ಬಳಿಕ ಅವರು ಕಾಣೆಯಾಗಿದ್ದರು. ವಿದ್ಯಾರ್ಥಿಗಳಿಬ್ಬರ ತಂದೆ-ತಾಯಿ ಮಕ್ಕಳ ಕಾಣೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದದ್ರು.
ಈ ಸುದ್ದಿಯನ್ನೂ ಓದಿ: Manipur Horror: ಮೈತಿ ವಿದ್ಯಾರ್ಥಿಗಳಿಬ್ಬರ ಶವಗಳ ಫೋಟೊ ವೈರಲ್; ಮಣಿಪುರ ಮತ್ತೆ ಉದ್ವಿಗ್ನ?
ಮಗಳು ಮನೆಗೆ ಬರಲಿಲ್ಲ. ಆಗ ಅವಳಿಗೆ ಕರೆ ಮಾಡಿದೆ. ಕರೆ ಸ್ವೀಕರಿಸಿದಳು. ಆದರೆ, ಭಯಭೀತಳಂತೆ ಕಂಡಳು. ಅಲ್ಲದೇ ನಂಬೋಲ್‌ನಲ್ಲಿದ್ದೇನೆ ಎಂದು ಹೇಳಿದಳು. ಅಲ್ಲಿಗೆ ಯಾಕೆ ಹೋಗಿರುವೆ ಎಂದು ಪ್ರಶ್ನಿಸಿದೆ. ಅಲ್ಲದೇ, ನಂಬೋಲ್‌ನಲ್ಲಿ ಎಲ್ಲಿದ್ದಿಯಾ ಸ್ಥಳ ಮಾಹಿತಿ ನೀಡು ಎಂದು ಕೇಳಿದೆ. ಅವಳು ಖೌಪುಮ್ (ನಂಬೋಲ್‌ನಿಂದ 20 ಕಿಮೀ) ಎಂದು ಗೊಣಗಿದಳು ಮತ್ತು ಅವಳ ಫೋನ್ ಸ್ವಿಚ್ ಆಫ್ ಆಯಿತು ಎಂದು ವಿದ್ಯಾರ್ಥಿನಿಯ ತಾಯಿ ಜಯಶ್ರೀ ಆಗಸ್ಟ್ 2 ರಂದು ಎನ್‌ಡಿಟಿವಿಗೆ ತಿಳಿಸಿದ್ದರು. ನಮಗೆ ನ್ಯಾಯ ದೊರೆಯಬೇಕು. ಕೊಲೆಗಾರರಿ ಶಿಕ್ಷೆಯಾಗಬೇಕು. ನಾನು ಈ ದಿನಗಳನ್ನು ಹೇಗೆ ಕಳೆದಿದ್ದೇನೆ ಎಂದು ನನಗೆ ಗೊತ್ತು ಎಂದು ಬಾಲಕಿಯ ತಂದೆ ಹಿಜಾಮ್ ಕುಲ್ಲಜಿತ್ ಹೇಳುತ್ತಾ ಕಣ್ಣೀರಾದರು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ದೇಶ
GST Evasion: ಜಿಎಸ್‌ಟಿ ವಂಚಿಸಿದ ಬಿಜೆಪಿ ನಾಯಕಿಯ ಸಕ್ಕರೆ ಕಾರ್ಖಾನೆಯ 19 ಕೋಟಿ ರೂ. ಮೌಲ್ಯದ ಸೊತ್ತು ಜಪ್ತಿ!
GST Evasion: ಮಹಾರಾಷ್ಟ್ರದ ಬಿಜೆಪಿ ನಾಯಕಿಯೊಬ್ಬರ ಕಾರ್ಖಾನೆಯು ಸಕ್ಕರೆ ಮಾರಾಟದ ಸಂಬಂಧ ಜಿಎಸ್‌ಟಿ ವಂಚಿಸಿತ್ತು. ಈ ಹಿನ್ನೆಲೆಯಲ್ಲಿ ಕಾರ್ಖಾನೆಯ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ.
ಮುಂಬೈ: ಜಿಎಸ್‌ಟಿ ವಂಚನೆ (GST Evasion) ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಪಂಕಜಾ ಮುಂಡೆ (BJP national secretary Pankaja Munde) ಒಡೆತನದ, ಬೀಡ್ ಜಿಲ್ಲೆಯಲ್ಲಿರುವ (Beed District) ವೈದ್ಯನಾಥ್ ಸಹಕಾರಿ ಸಕ್ಕರೆ ಕಾರ್ಖಾನೆಗೆ (Vaidyanath Co-operative sugar factory) ಸೇರಿದ 19 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸರಕು ಮತ್ತು ಸೇವಾ ತೆರಿಗೆ ಕಮಿಷನರೇಟ್ (Goods and Services Tax Commissionerate) ಸೋಮವಾರ ವಶಪಡಿಸಿಕೊಂಡಿದೆ. ಸಕ್ಕರೆ ಮಾರಾಟಕ್ಕೆ ಸಂಬಂಧಿಸಿದಂತೆ ಜಿಎಸ್‌ಟಿ ವಂಚನೆ ಹಿನ್ನೆಲೆಯಲ್ಲಿ ಕಮಿಷನರೇಟ್ ಈ ಕ್ರಮ ಕೈಗೊಂಡಿದೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ವೈದ್ಯನಾಥ್ ಸಹಕಾರಿ ಸಕ್ಕರೆ ಕಾರ್ಖಾನೆಯು ಜಿಎಸ್‌ಟಿ ಪಾವತಿಸಲು ವಿಫಲವಾಗಿತ್ತು. ವಶಪಡಿಸಿಕೊಂಡ ಸೊತ್ತುಗಳಲ್ಲಿ 19 ಕೋಟಿ ರೂ. ಮೌಲ್ಯದ ಕಾರ್ಖಾನೆಯ ಬಾಯ್ಲರ್ ಮತ್ತು ಇತರ ಸಂಬಂಧಿತ ಯಂತ್ರೋಪಕರಣಗಳು ಸೇರಿವೆ.
ಹಣದ ಕೊರತೆಯಿಂದಾಗಿ ನಮ್ಮ ಕಾರ್ಖಾನೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ನಾವು ಮೊದಲು ರೈತರ ಬಾಕಿ ಪಾವತಿಸಲು ನಿರ್ಧರಿಸಿದ್ದೇವೆ. ನಮಗೆ ಸರ್ಕಾರದಿಂದ ಆರ್ಥಿಕ ನೆರವು ಬೇಕಿತ್ತು. ಇನ್ನು ಕೆಲವು ಕಾರ್ಖಾನೆಗಳ ಜತೆಗೆ ನಮ್ಮ ಸಕ್ಕರೆ ಕಾರ್ಖಾನೆಯ ಹೆಸರೂ ಮೊದಲ ಪಟ್ಟಿಯಲ್ಲಿದ್ದು, ಸರ್ಕಾರದಿಂದ ಅನುಮೋದನೆಗೆ ಕಳುಹಿಸಲಾಗಿತ್ತು. ಆದರೆ ನಮ್ಮ ಕಾರ್ಖಾನೆಯನ್ನು ಹೊರತುಪಡಿಸಿ ಉಳಿದೆಲ್ಲ ಕಾರ್ಖಾನೆಗಳು ಆರ್ಥಿಕ ನೆರವು ಪಡೆದಿವೆ. ಆ ಸಮಯದಲ್ಲಿ ನಮಗೆ ನೆರವು ಸಿಕ್ಕಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಪಂಕಜಾ ಮುಂಡೆ ಅವರು ಹೇಳಿದ್ದಾರೆ.
ಮುಂಡೆ ಅವರು ಜುಲೈ 7 ರಿಂದ ಎರಡು ತಿಂಗಳ ರಾಜಕೀಯ ವಿರಾಮ ತೆಗೆದುಕೊಂಡಿದ್ದರು. ಅದಾದ ಬಳಿಕ ಶಿವಶಕ್ತಿ ಯಾತ್ರೆಗಾಗಿ ಸುಮಾರು 10 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದರು. ಈ ಪ್ರವಾಸವನ್ನು ಅವರು ಬಿಜೆಪಿಯ ಬ್ಯಾನರ್‌ನ ಅಡಿ ಮಾಡಿರಲಿಲ್ಲ. ಸ್ವಂತ ರಾಜಕೀಯ ಪ್ರವಾಸ ಕೈಗೊಂಡಿದ್ದರು. ಈ ಹಂತದಲ್ಲಿ ಮುಂಡೆ ನೇತೃತ್ವದ ಸಕ್ಕರೆ ಕಾರ್ಖಾನೆಯ ಸೊತ್ತುಗಳನ್ನು ಜಫ್ತಿ ಮಾಡಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಈ ಸುದ್ದಿಯನ್ನೂ ಓದಿ: NCP Crisis: ಎನ್‌ಸಿಪಿ-ಬಿಜೆಪಿ ದೋಸ್ತಿ; ‘ಮಹಾ’ ಕಮಲ ಶಾಸಕರ ಅಸಮಾಧಾನ! ಪಂಕಜಾ ಮುಂಡೆ ಬಹಿರಂಗ ಆಕ್ರೋಶ
2019ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಸಿಪಿಯ ತಮ್ಮ ಸೋದರಸಂಬಂಧಿ ಧನಂಜಯ್ ಮುಂಡೆ ವಿರುದ್ಧ ಪಂಕಾಜ ಮುಂಡೆ ಅವರು ಸೋಲು ಅನುಭವಿಸಿದ್ದರು. ಆ ಬಳಿಕ ಅವರನ್ನು ಬಿಜೆಪಿಯಲ್ಲಿ ಪೂರ್ತಿಯಾಗಿ ಪಕ್ಕಕ್ಕೆ ತಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಪಂಕಜಾ ಮುಂಡೆ ಅವರು ಮಹಾರಾಷ್ಟ್ರದಲ್ಲಿ ಪಕ್ಷದ ನಾಯಕತ್ವದ ವಿರುದ್ಧ, ವಿಶೇಷವಾಗಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ವಿರುದ್ಧ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.
ಕ್ರೀಡೆ
VISTARA TOP 10 NEWS : ಕಾವೇರಿ ಹೋರಾಟಕ್ಕೆ ಸ್ವಯಂಪ್ರೇರಿತ ಬೆಂಬಲ, ಮತ್ತೆ ಕೇಂದ್ರ-ಸುಪ್ರೀಂ ಜಟಾಪಟಿ ಮತ್ತಿತರ ದಿನದ ಪ್ರಮುಖ ಸುದ್ದಿಗಳು
VISTARA TOP 10 NEWS: ದೇಶ, ವಿದೇಶಗಳ ಸುದ್ದಿಗಳು, ದಿನವಿಡೀ ನಡೆದ ಪ್ರಮುಖ ಬೆಳವಣಿಗೆಗಳ ಸುತ್ತುನೋಟವೇ Vistara Top10 News
1. ಬೆಂಗಳೂರು ಬಂದ್ ಸಕ್ಸಸ್; ಕಾವೇರಿ ಹೋರಾಟಕ್ಕೆ ಜನತೆ ಸ್ವಯಂಪ್ರೇರಿತ ಬೆಂಬಲ
ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದರೂ ತಮಿಳುನಾಡಿಗೆ ನೀರು ಬಿಡುಗಡೆ (Cauvery Water Dispute) ಮಾಡಲೇಬೇಕು ಎಂದು ಆದೇಶ ನೀಡಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery Water Management authority) ಮತ್ತು ಅದು ಹೇಳಿದಂತೆ ನೀರು ಬಿಡುಗಡ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮಗಳನ್ನು ಖಂಡಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ (Karnataka Jala samrakshana samiti) ಕರೆ ನೀಡಿದ್ದ ಮಂಗಳವಾರದ (ಸೆ. 26) ಬೆಂಗಳೂರು ಬಂದ್ (Bangalore bandh) ಯಶಸ್ವಿಯಾಗಿದೆ. ಯಾವುದೇ ಗೊಂದಲ, ಗಲಾಟೆ, ಹಿಂಸಾತ್ಮಕ ಘಟನೆಗಳಿಲ್ಲದೆ ಅದು ಸಫಲತೆಯನ್ನು ಕಂಡಿದೆ. ಆದರೆ, ಇದು ಸರ್ಕಾರದ ನಿರ್ಧಾರಗಳ ಮೇಲೆ ಪರಿಣಾಮ ಬೀರುತ್ತದೆಯೇ ಕಾದು ನೋಡಬೇಕು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ :ಕೇಳಿದ್ದಕ್ಕಿಂತಲೂ ಹೆಚ್ಚು ನೀರು ಕೊಡುತ್ತಿದೆ ಕರ್ನಾಟಕ! ಈಗ ಹರಿಯುತ್ತಿರುವುದು 6300 ಕ್ಯೂಸೆಕ್!
2. CWRCಯಿಂದ ಮತ್ತೆ ಹೊಡೆತ, ಇನ್ನೂ 18 ದಿನ 3000 ಕ್ಯೂಸೆಕ್ ನೀರು ಬಿಡಲು ಆದೇಶ
ನವದೆಹಲಿ: ಕಾವೇರಿ ನೀರು ನಿಯಂತ್ರಣ ಸಮಿತಿ (Cauvery Water Regulation Committee) ಮಂಗಳವಾರ ನಡೆಸಿದ ಮಹತ್ವದ ಸಭೆಯಲ್ಲಿ ಕರ್ನಾಟಕಕ್ಕೆ ಇನ್ನೊಂದು ಹೊಡೆತ ಬಿದ್ದಿದೆ.ಈವರೆಗೆ ಪ್ರತಿದಿನವೂ ಐದು ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಬೇಕು ಎಂದು ಸೂಚನೆ ಕೊಟ್ಟಿದ್ದ ಸಮಿತಿ ಸೆ. 28ರಿಂದ ಅಕ್ಟೋಬರ್ 15ರವರೆಗೆ ಪ್ರತಿದಿನ 3000 ಕ್ಯೂಸೆಕ್ ನೀರು ಬಿಡುವಂತೆ ಆದೇಶ ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : ಕಾವೇರಿ ನೀರು ಬಿಡದಂತೆ ಸುಗ್ರೀವಾಜ್ಞೆ; ಸರ್ಕಾರಕ್ಕೆ ಹೋರಾಟಗಾರರಿಂದ ಮೂರು ದಿನ ಗಡುವು
3. ಬೆಂಗಳೂರು ಬಂದ್ ಹತ್ತಿಕ್ಕಲು ಪೊಲೀಸ್ ಬಲ ಪ್ರಯೋಗ ನಡೆಯಿತೇ? ಕಮಿಷನರ್ ಹೇಳಿದ್ದೇನು?
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ (Cauvery water Dispute) ಕರ್ನಾಟಕ ಜಲ ಸಂರಕ್ಷಣಾ ಸಮಿತಿ (Karnataka Jala Samrakshana Samiti) ಕರೆ ನೀಡಿದ್ದ ಒಂದು ದಿನದ ಬೆಂಗಳೂರು ಬಂದ್ (Bangalore Bandh) ಸಾಂಗವಾಗಿ ಮುಕ್ತಾಯಗೊಂಡಿದೆ. ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ನಡೆದ ಪ್ರತಿಭಟನೆಯ ವೇಳೆ ಗಮನೀಯ ಅನಾಹುತಕಾರಿ ಘಟನೆಗಳು ಇಲ್ಲದೆ ಬಂದ್ ಬಹುತೇಕ ಶಾಂತಿಯುತವಾಗಿ ನಡೆಯಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. ಜಡ್ಜ್ ನೇಮಕಾತಿ, ಮತ್ತೆ ಕೇಂದ್ರ-ಸುಪ್ರೀಂ ಜಟಾಪಟಿ! 10 ತಿಂಗಳಾದ್ರೂ ಶಿಫಾರಸು ಕ್ಲಿಯರ್ ಮಾಡಿಲ್ಲ ಸರ್ಕಾರ
ಜಡ್ಜ್‌ಗಳ ನೇಮಕಾತಿ ವಿಷಯಕ್ಕೆ (Appointment of Judges) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Supreme Court) ಹಾಗೂ ಕೇಂದ್ರ ಸರ್ಕಾರ (Central Government) ನಡುವೆ ಮತ್ತೊದು ಸುತ್ತಿನ ಜಟಾಪಟಿ ಶುರುವಾಗುವ ಸಾಧ್ಯತೆಗಳಿವೆ. ಹೈಕೋರ್ಟ್ ಶಿಫಾರಸಗಳನ್ನು (High court Recommendations) ಕೊಲಿಜಿಯಂಗೆ (Collegium) ಏಕೆ ಕಳುಹಿಸಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಮಂಗಳವಾರ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಹೈಕೋರ್ಟ್ ನ್ಯಾಯಮೂರ್ತಿಗಳ ಹೆಸರು ಅಂತಿಮಗೊಳಿಸುವ ಸಂಬಂಧ ಕೇಂದ್ರ ಸರ್ಕಾರವು ವಿಳಂ ಧೋರಣೆಯನ್ನು ಅನುಸರಿಸುತ್ತಿದೆ ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರಿದ್ದ ಪೀಠವು ಹೇಳಿದೆ. ಅಲ್ಲದೇ ಈ ವಿಷಯವನ್ನು ಸುಪ್ರೀಂ ಕೋರ್ಟ್ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ತಿಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. ಮೈತಿ ವಿದ್ಯಾರ್ಥಿಗಳಿಬ್ಬರ ಶವಗಳ ಫೋಟೊ ವೈರಲ್; ಮಣಿಪುರ ಮತ್ತೆ ಉದ್ವಿಗ್ನ?
ಜುಲೈನಲ್ಲಿ ನಾಪತ್ತೆಯಾಗಿದ್ದ ಮೈತಿ ಸಮುದಾಯದ ಇಬ್ಬರು ವಿದ್ಯಾರ್ಥಿಗಳ ಶವಗಳ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಮಣಿಪುರದಲ್ಲಿ ಮತ್ತೆ ಜನಾಕ್ರೋಶ ಭುಗಿಲೇಳುವ ಸಂಭವ ಕಂಡುಬರುತ್ತಿದೆ. ಬಂದೂಕು ಹಿಡಿದಿರುವ ಇಬ್ಬರು ದುಷ್ಕರ್ಮಿಗಳು ಕೂಡ ಈ ಫೋಟೋದಲ್ಲಿದ್ದಾರೆ. ಇವರು ಕುಕಿ ಸಮುದಾಯದವರು ಎಂದು ಹೇಳಲಾಗಿದೆ.
6. ಮನ ಕಲಕುವ ವಿಡಿಯೊ; ಜಿಮ್ನಾಸ್ಟಿಕ್ಸ್‌ನಲ್ಲಿ ಗೆದ್ದ ಬಾಲಕಿಗೆ ಕಪ್ಪು ಬಣ್ಣದವಳೆಂದು ಪದಕ ನೀಡದ ಆಯೋಜಕರು!
7. ಚಾಟ್‌ಜಿಪಿಟಿ ಜತೆ ನೀವಿನ್ನು ಮಾತನಾಡಬಹುದು! ಹೊಸ ಫೀಚರ್ ಪರಿಚಯಿಸಿದ ಓಪನ್ಎಐ
8. ಹೌದು, ನಾನು ಈಗಲೂ ರಶ್ಮಿಕಾ ಜತೆ ಸಂಪರ್ಕದಲ್ಲಿದ್ದೇನೆ! ರಕ್ಷಿತ್ ಶೆಟ್ಟಿ ಹೇಳಿಕೆ
9. Dadasaheb Phalke Award: ವಹೀದಾ ರೆಹಮಾನ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
10. ಪೊಲೀಸರಿಗೆ ಕೊಟ್ಟ ಊಟದಲ್ಲಿ ಸಿಕ್ಕಿತು ಫ್ರೈಡ್ ಇಲಿ!
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
-
Live News20 hours ago
Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!
-
ವಿದೇಶ11 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
ದೇಶ3 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
South Cinema14 hours ago
Heart attack : ಹಿರಿಯ ನಟ ಬ್ಯಾಂಕ್ ಜನಾರ್ದನ್ಗೆ ಹೃದಯಾಘಾತ?
-
ಕರ್ನಾಟಕ14 hours ago
Bengaluru Bandh : ಪೊಲೀಸರಿಗೆ ಕೊಟ್ಟ ಊಟದಲ್ಲಿ ಸಿಕ್ಕಿತು ಫ್ರೈಡ್ ಇಲಿ!
-
ಆಟೋಮೊಬೈಲ್10 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
-
ಕರ್ನಾಟಕ11 hours ago
Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
-
ಕ್ರಿಕೆಟ್14 hours ago
ರಾಜ್ಕೋಟ್ನಲ್ಲಿ ಈಡೇರಲಿ ಭಾರತದ ಕ್ಲೀನ್ ಸ್ವೀಪ್ ಯೋಜನೆ; ನಾಳೆ ಅಂತಿಮ ಏಕದಿನ