Oscars 2023: RRRನ ʼನಾಟು ನಾಟುʼ ಡ್ಯಾನ್ಸ್‌ ಎಲ್ಲರ ಮನ ಗೆದ್ದದ್ದು ಹೇಗೆ? - Vistara News

Oscars 2023

Oscars 2023: RRRನ ʼನಾಟು ನಾಟುʼ ಡ್ಯಾನ್ಸ್‌ ಎಲ್ಲರ ಮನ ಗೆದ್ದದ್ದು ಹೇಗೆ?

ಆರ್‌ಆರ್‌ಆರ್‌ ಸಿನಿಮಾ ಜನಪ್ರಿಯವಾದ ನಂತರ ಈ ಹಾಡು ಎಲ್ಲ ಕಡೆ ವೈರಲ್‌ ಆಗಿತ್ತು. ಅಸಂಖ್ಯ ಇನ್‌ಸ್ಟಾಗ್ರಾಂ ರೀಲ್‌ಗಳಿಗೂ ಸೋಶಿಯಲ್‌ ಮೀಡಿಯಾದ ಟ್ರೆಂಡ್‌ಗಳಿಗೂ ಕಾರಣವಾಗಿತ್ತು. ಬ್ರಿಟನ್‌ನಲ್ಲೂ ಕಳೆದ ವರ್ಷ ಬಿಡುಗಡೆಯಾದ ಈ ಸಿನಿಮಾ ಹವಾ ಎಬ್ಬಿಸಿತ್ತು.

VISTARANEWS.COM


on

Natu Natu Song
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಾಸ್‌ ಏಂಜಲೀಸ್:‌ ರಾಜಮೌಳಿ ನಿರ್ದೇಶನದ ಭಾರತೀಯ ಚಿತ್ರ “ಆರ್‌ಆರ್‌ಆರ್‌ʼನ ʼನಾಟು ನಾಟುʼ ಹಾಡು ಮತ್ತು ಡ್ಯಾನ್ಸ್‌ ಪ್ರತಿಷ್ಠಿತ ಆಸ್ಕರ್‌ನ ʼಅತ್ಯುತ್ತಮ ಹಾಡುʼ ವಿಭಾಗದ ಪ್ರಶಸ್ತಿ ಗೆದ್ದಿದೆ. 19 ತಿಂಗಳುಗಳಿಂದ ಈ ಹಾಡು ದೇಶ ವಿದೇಶದ ಎಲ್ಲರ ಗಮನ ಸೆಳೆಯುತ್ತ, ಒಂದಾದ ಮೇಲೊಂದರಂತೆ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತ ಹೋಗಿದೆ.

ಹಾಡಿನ ಕಂಪೋಸರ್‌ ಕೀರವಾಣಿ ಆಸ್ಕರ್‌ ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಮಾತ್ರವಲ್ಲ, ನಾಟು ನಾಟು ಹಾಡಿನ ಪರ್‌ಫಾರ್ಮೆನ್ಸ್‌ ಕೂಡ ಆಸ್ಕರ್‌ ವೇದಿಕೆಯಲ್ಲಿ ನಡೆದಿದೆ.

ಆರ್‌ಆರ್‌ಆರ್‌ ಸಿನಿಮಾ ಜನಪ್ರಿಯವಾದ ನಂತರ ಈ ಹಾಡು ಎಲ್ಲ ಕಡೆ ವೈರಲ್‌ ಆಗಿತ್ತು. ಅಸಂಖ್ಯ ಇನ್‌ಸ್ಟಾಗ್ರಾಂ ರೀಲ್‌ಗಳಿಗೂ ಸೋಶಿಯಲ್‌ ಮೀಡಿಯಾದ ಟ್ರೆಂಡ್‌ಗಳಿಗೂ ಕಾರಣವಾಗಿತ್ತು. ಬ್ರಿಟನ್‌ನಲ್ಲೂ ಕಳೆದ ವರ್ಷ ಬಿಡುಗಡೆಯಾದ ಈ ಸಿನಿಮಾ ಹವಾ ಎಬ್ಬಿಸಿತ್ತು.

ನಾಟು ನಾಟು ಹಾಡನ್ನು ಬರೆದವರು ಚಂದ್ರಬೋಸ್.‌ ನೃತ್ಯ ಕಂಪೋಸ್‌ ಮಾಡಿದವರು ಕೀರವಾಣಿ. ಜನವರಿಯಲ್ಲಿ ಈ ಹಾಡು ʼಗೋಲ್ಡನ್‌ ಗ್ಲೋಬ್‌ʼ ಪ್ರಶಸ್ತಿ ಗೆದ್ದಿತ್ತು. ಅಲ್ಲಿ ರಿಹಾನಾ, ಟೇಯ್ಲರ್‌ ಸ್ವಿಫ್ಟ್‌, ಲೇಡಿ ಗಾಗಾ ಮುಂತಾದ ಘಟಾನುಘಟಿ ರ್ಯಾಪರ್‌ಗಳನ್ನೇ ಮಣಿಸಿತ್ತು. ಅದೇ ತಿಂಗಳಲ್ಲಿ ಕ್ರಿಟಿಕ್ಸ್‌ ಚಾಯ್ಸ್‌ ಅವಾರ್ಡ್‌ ಕೂಡ ಪಡೆದಿತ್ತು.

ʼʼಇದು ಕೇವಲ ಈ ಹಾಡಿನ ಮ್ಯೂಸಿಕ್‌ ಅಥವಾ ನೃತ್ಯಕ್ಕೆ ಮಾತ್ರವಲ್ಲ. ಆರ್‌ಆರ್‌ಆರ್‌ನ ಇಡೀ ಕಥೆಯನ್ನೇ 10 ನಿಮಿಷಗಳ ನಾಟು ನಾಟು ಹಾಡು ಅಭಿವ್ಯಕ್ತಿಸುತ್ತದೆ. ಇದು ಸಿನಿಮಾದ ಕಥೆಯೊಳಗಿನ ಕಥೆʼʼ ಎಂದು ನಿರ್ದೇಶಕ ರಾಜಮೌಳಿ ಒಂದು ಸಂದರ್ಶನದಲ್ಲಿ ಹೇಳಿದ್ದರು.

ಆರ್‌ಆರ್‌ಆರ್‌ ಚಾರಿತ್ರಿಕ ವ್ಯಕ್ತಿಗಳ ಕಥೆಯನ್ನು ಹೊಂದಿದ ಚಿತ್ರ. ಭಾರತದಲ್ಲಿ ವಸಾಹತುಶಾಹಿ ಬ್ರಿಟಿಷ್‌ ಆಡಳಿತದ ವಿರುದ್ಧ ಹೋರಾಡಿದ ಇಬ್ಬರು ಕ್ರಾಂತಿಕಾರಿಗಳ ಕಥೆಯನ್ನು ಈ ಚಿತ್ರ ಸಾರುತ್ತದೆ. ʼನಾಟು ನಾಟುʼ ಹಾಡಿನಲ್ಲಿ ಬ್ರಿಟಿಷ್‌ ಅಧಿಕಾರಿಗಳನ್ನು ನೃತ್ಯದ ಮೂಲದ ಇವರಿಬ್ಬರು ಮಣಿಸುವುದನ್ನು ಕಾಣಬಹುದಾಗಿದೆ.

2020ರಲ್ಲಿ ಚಿತ್ರ ನಿರ್ಮಿಸುತ್ತಿದ್ದಾಗ ಕೀರವಾಣಿಗೆ ರಾಜಮೌಳಿ ಅವರು, ಚಿತ್ರದ ಹೀರೋಗಳ ಡ್ಯಾನ್ಸಿಂಗ್‌ ಪ್ರತಿಭೆ ತೋರಿಸುವ ಹಾಡು ಬೇಕೆಂದು ಕೇಳಿದ್ದರಂತೆ. ಆಗ ಚಂದ್ರಬೋಸ್‌ ಅವರಿಗೆ ಕೀರವಾಣಿ ʼʼಏನು ಬೇಕಾದರೂ ಬರಿ, ಆದರೆ ಇದು 1920ರ ಕಾಲದ ಕಥೆ. ಆಗಿನ ಕಾಲದ ಶಬ್ದಗಳನ್ನು ಹಾಕಿ ಬರಿʼʼ ಎಂದಿದ್ದರಂತೆ. ಆ ಸಂದರ್ಭದಲ್ಲಿ ಯಾವುದೇ ಮೆಲೊಡಿ ಇಲ್ಲವಾದುದರಿಂದ ʼಡ್ಯಾನ್ಸ್‌, ಡ್ಯಾನ್ಸ್‌ʼ ಎಂದು ಅರ್ಥ ಬರುವ ʼನಾಟು ನಾಟುʼ ಪದಗಳನ್ನಿಟ್ಟುಕೊಂಡು ಕುಣಿಯುವ ಲಯದ ಮೂಲಕ ಚಂದ್ರಬೋಸ್‌ ಹಾಡನ್ನು ಆವಿಷ್ಕರಿಸಿದ್ದರು.

ಇದನ್ನು ಅತಿವೇಗದ ಬೀಟ್‌ನಲ್ಲಿ ಸಂಯೋಜಿಸಲಾಯಿತು. ಆಂಧ್ರ ಹಾಗೂ ತೆಲಂಗಾಣಗಳ ಜಾನಪದ ಹಾಡು ಕುಣಿತಗಳಲ್ಲಿ ಇದುಇ ಸಾಮಾನ್ಯವಾಗಿದೆ. ತೆಲಂಗಾಣದ ತಮ್ಮ ಬಾಲ್ಯದಿಂದ ಪಡೆದ ಕೆಲ ಜಾನಪದ ಉಲ್ಲೇಖಗಳನ್ನು ಚಂದ್ರಬೋಸ್‌ ಇಲ್ಲಿ ಪ್ರಯೋಗಿಸಿದರು. ಎರಡು ದಿನಗಳಲ್ಲಿ ಹಾಡನ್ನು ಬರೆದರು. ಆದರೆ ಡ್ಯಾನ್ಸ್‌ ಚಿತ್ರೀಕರಣ ತಿಂಗಳುಗಟ್ಟಲೆ ತೆಗೆದುಕೊಂಡಿತು.

ಈ ಹಾಡಿನ ಬಹಳಷ್ಟು ಕ್ರೆಡಿಟ್‌ ಇದರ ಕೊರಿಯೊಗ್ರಾಫರ್‌ ಪ್ರೇಮ್‌ ರಕ್ಷಿತ್‌ಗೂ ಹೋಗುತ್ತದೆ. ನೃತ್ಯದಲ್ಲಿ 95 ಸ್ಟೆಪ್‌ಗಳನ್ನು ಅವರು ಸಂಯೋಜಿಸಿದ್ದಾರೆ. ಜೂ.ಎನ್‌ಟಿಆರ್‌ ಹಾಗೂ ರಾಮ್‌ಚರಣ್‌ ಇಬ್ಬರೂ ಸ್ವಂತ ಶೈಲಿ ಹೊಂದಿದವರು. ಇಬ್ಬರಿಗೂ ಸೂಕ್ತವೆನಿಸುವ ಹೆಜ್ಜೆಗಳು ಬೇಕಿದ್ದವು. ಹಾಗೆ ಅವು ಸೃಷ್ಟಿಯಾದವು.

ಮಧ್ಯೆ ರಾಮ್‌ಚರಣ್‌, ತಮ್ಮ ಕಾಸ್ಟ್ಯೂಮ್‌ ಅನ್ನೂ ಡ್ಯಾನ್ಸ್‌ನಲ್ಲಿ ಒಳಗೊಳಿಸಿಕೊಳ್ಳುವ ಬಗ್ಗೆ ಪ್ಲಾನ್‌ ಕೊಟ್ಟರು. ಹಾಗೆಯೇ ಇಬ್ಬರೂ ತಮ್ಮ ಪ್ಯಾಂಟ್‌ನ ಸ್ಟ್ರಿಪ್‌ಗಳನ್ನು ಬಳಸಿಕೊಳ್ಳುವ ದೃಶ್ಯವೂ ಅಡಕವಾಯಿತು.

ಇದನ್ನೂ ಓದಿ: Oscars 2023: ಯಾರ್ಯಾರು ಯಾವ ಪ್ರಶಸ್ತಿ ಪುರಸ್ಕೃತರು? ಇದುವರೆಗಿನ ಪಟ್ಟಿ

ಒಟ್ಟಾರೆ ಹಾಡಿನಲ್ಲಿ ಇಬ್ಬರೂ ಹೀರೋಗಳು ಬ್ರಿಟಿಷರನ್ನು ಡ್ಯಾನ್ಸ್‌ ಮೂಲಕ ಎದುರಿಸುತ್ತಾರೆ. ಉಳಿದೆಲ್ಲರೂ ಕುಣಿದು ಸುಸ್ತಾಗಿ ಬಿದ್ದುಹೋಗುತ್ತಾರೆ. ಕೊನೆಗೆ ಹೀರೋಗಳ ನಡುವೆಯೇ ಸ್ಪರ್ಧೆ ಉಂಟಾಗುತ್ತದೆ. ಇದು ಸ್ನೇಹ, ಸ್ಪರ್ಧೆ, ವೈಮನಸ್ಸು ಇತ್ಯಾದಿಗಳ ಕಥೆಯನ್ನೇ ಚಿತ್ರಿಸುತ್ತದೆ.

ವಿಶೇಷವೆಂದರೆ ಈ ಹಾಡನ್ನು ಚಿತ್ರೀಕರಿಸಿದ ತಾಣ ಉಕ್ರೇನ್.‌ ಅಲ್ಲಿನ ಮಾರಿನ್‌ಸ್ಕಿ ಪ್ಯಾಲೇಸ್‌ನ ಮುಂದೆ ಇದನ್ನು ಚಿತ್ರೀಕರಿಸಲಾಗಿದೆ. ಇಲ್ಲಿ ಭಾರತೀಯ ಗ್ರಾಮದ ಚಿತ್ರಣವನ್ನೂ ತರಲು ರಾಜಮೌಳಿ ಪ್ರಯತ್ನಿಸಿದ್ದಾರೆ. ಯುದ್ಧದ ಆತಂಕದ ನಡುವೆಯೂ ಇಲ್ಲಿ ಚಿತ್ರೀಕರಿಸಿದ್ದ ರಾಜಮೌಳಿ ಅವರನ್ನು ಜನ ಕ್ರೇಜಿ ಎಂದು ಕರೆದಿದ್ದರು.

ಸುಮಾರು 15 ದಿನಗಳ ಕಾಲ, ದಿನಕ್ಕೆ 12 ಗಂಟೆಗಳ ಕಾಲ ಚಿತ್ರೀಕರಿಸಿ, 150 ಡ್ಯಾನ್ಸರ್‌ಗಳ ಹಾಗೂ 200 ಸಿಬ್ಬಂದಿಗಳ ನಡುವೆ ಈ ಹಾಡು ಜೀವ ಪಡೆದಿದೆ. ಚಿತ್ರೀಕರಣದಲ್ಲಿ ರಕ್ಷಿತ್‌ ಪ್ರತಿಬಾರಿ ಟೇಕ್‌ ಒಕೆ ಎಂದಾಗಲೂ ʼಇನ್ನೊಂದು ಶಾಟ್‌ʼ ಎಂದು ರಾಜಮೌಳಿ ಹೇಳುತ್ತಿದ್ದರಂತೆ.

ಬಿಡುಗಡೆಯಾಗಿ ಒಂದು ವರ್ಷ ಕಳೆದರೂ ಈ ಹಾಡು ಚಿತ್ರರಸಿಕರಿಗೆ ಹುಚ್ಚು ಹಿಡಿಸುತ್ತಲೇ ಇದೆ ಎಂದರೆ ಅತಿಶಯೋಕ್ತಿಯಲ್ಲ. ʼʼಈ ಹಾಡು ಇಂದು ನಮ್ಮದಲ್ಲ. ಅದು ಜನರದಾಗಿದೆ. ಎಲ್ಲ ವಯಸ್ಸು, ಎಲ್ಲ ಸಂಸ್ಕೃತಿಗಳ ಜನತೆ ಅದನ್ನು ತಮ್ಮದಾಗಿಸಿಕೊಂಡಿದ್ದಾರೆʼʼ ಎಂದು ಚರಣ್‌ ಹೇಳಿದ್ದು ಕೂಡ ನಿಜವಾಗಿದೆ. ಜಪಾನ್ ಮತ್ತಿತರ ದೇಶಗಳ ಹಲವರೂ ಈ ಹಾಡಿನ ರೀಲ್‌ಗಳನ್ನು ಮಾಡಿ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: Oscars 2023 ಗೆದ್ದ RRR ಸಿನಿಮಾದ ನಾಟು ನಾಟು ಹಾಡು ಚಿತ್ರೀಕರಣ ಆಗಿದ್ದ ಜಾಗ ಈಗ ಯುದ್ಧದ ಸ್ಥಳ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Oscars 2023

ಜಪಾನ್‌ನಲ್ಲಿ 80 ಕೋಟಿ ರೂ. ಗಳಿಸಿದ RRR Movie; ದಾಖಲೆಗಳ ಮೇಲೆ ದಾಖಲೆಗಳ ಸೃಷ್ಟಿ

ಆರ್‌ಆರ್‌ಆರ್‌ ಸಿನಿಮಾ (RRR Movie) ಜಪಾನ್‌ನಲ್ಲಿ 20ನೇ ವಾರದ ಪ್ರದರ್ಶನಕ್ಕೆ ಕಾಲಿಟ್ಟಿದೆ. ಜಪಾನ್‌ ದೇಶವೊಂದರಲ್ಲೇ ಬರೋಬ್ಬರಿ 80 ಕೋಟಿ ರೂ. ಗಳಿಕೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

VISTARANEWS.COM


on

Koo

ಹೈದರಾಬಾದ್:‌ ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾ (RRR Movie) ಜಪಾನ್‌ನಲ್ಲಿ ಕಳೆದ ವರ್ಷ ಅಕ್ಟೋಬರ್‌ 21ರಂದು ಬಿಡುಗಡೆಯಾಗಿತ್ತು. ಇದೀಗ 20ನೇ ವಾರದ ಪ್ರದರ್ಶನಕ್ಕೆ ಕಾಲಿಟ್ಟಿರುವ ಸಿನಿಮಾ ಜಪಾನ್‌ನಲ್ಲಿ ಬರೋಬ್ಬರಿ 80 ಕೋಟಿ ರೂ. ಗಳಿಸಿ ದಾಖಲೆ ಬರೆದಿದೆ. ಮೊನ್ನೆಯಷ್ಟೇ ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ಆರ್‌ಆರ್‌ಆರ್‌ ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಕೂಡ ಬಂದಿದೆ.

ಇದನ್ನೂ ಓದಿ: MM Keeravani : ಆಸ್ಕರ್‌ ಗೆದ್ದ ಕೀರವಾಣಿಗೆ ಶುಭ ಹಾರೈಸಿದ ಖ್ಯಾತ ಪಿಯಾನಿಸ್ಟ್ ಕಾರ್ಪೆಂಟರ್; ಕಣ್ಣೀರಿಟ್ಟ ಸಂಗೀತ ನಿರ್ದೇಶಕ
ಆರ್‌ಆರ್‌ಆರ್‌ ಸಿನಿಮಾ ಜಪಾನ್‌ನ 44 ನಗರಗಳ 209 ಸಿನಿಮಾ ಮಂದಿರಗಳಲ್ಲಿ, 31 ಐಮ್ಯಾಕ್ಸ್‌ ತೆರೆಗಳಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾ 80 ಕೋಟಿಗೂ ಅಧಿಕ ರೂ. ಸಂಪಾದನೆ ಮಾಡಿದ್ದು, ಜಪಾನ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿಕೊಂಡ ಮೊದಲ ಭಾರತೀಯ ಸಿನಿಮಾ ಎನ್ನುವ ಖ್ಯಾತಿಯನ್ನೂ ಪಡೆದುಕೊಂಡಿದೆ.


ಈ ಬಗ್ಗೆ ಟ್ವಿಟರ್‌ನಲ್ಲಿ ಸಿನಿಮಾದ ಅಧಿಕೃತ ಖಾತೆಯಾದ ʼಆರ್‌ಆರ್‌ಆರ್‌ʼನಿಂದ ಟ್ವೀಟ್‌ ಮಾಡಿ ಮಾಹಿತಿ ನೀಡಲಾಗಿದೆ. “ಆರ್‌ಆರ್‌ಆರ್‌ ಸಿನಿಮಾ ಕ್ರಮೇಣವಾಗಿ ಜಪಾನ್‌ನ ಬೇರುಗಳಲ್ಲಿ ತೂರಿಕೊಳ್ಳುತ್ತಿದೆ. ಚಿತ್ರವು ಅಸಾಧಾರಣ ಹೆಜ್ಜೆಗಳನ್ನು ಇಡುತ್ತಿದೆ. 20ನೇ ವಾರಕ್ಕೆ ಕಾಲಿಟ್ಟಿರುವ ಸಿನಿಮಾ 202 ಚಿತ್ರಮಂದಿರಗಳಲ್ಲಿ ಪ್ರದರ್ಶನ ನೀಡುತ್ತಿದೆ” ಎಂದು ಸಿನಿತಂಡ ಹೇಳಿದೆ.

ಇದನ್ನೂ ಓದಿ: Oscars 2023: ದಿ ಎಲಿಫೆಂಟ್​ ವಿಸ್ಪರರ್ಸ್, ಆರ್‌ಆರ್‌ಆರ್‌ ತಂಡವನ್ನು ಶ್ಲಾಘಿಸಿದ ಪ್ರಿಯಾಂಕ ಚೋಪ್ರಾ
ಜಪಾನ್‌ನಲ್ಲಿ ಈಗಾಗಲೇ 80 ಕೋಟಿ ರೂ. ಗಳಿಸಿಕೊಂಡಿರುವ ಆರ್‌ಆರ್‌ಆರ್‌ ಸಿನಿಮಾ ಶೀಘ್ರವೇ 100 ಕೋಟಿ ರೂ. ಗಳಿಕೆ ದಾಟುವ ಸಾಧ್ಯತೆಯಿದೆ. ವಿಶ್ವಾದ್ಯಂತ ಸಿನಿಮಾ ಸಾವಿರ ಕೋಟಿ ರೂ.ಗೂ ಅಧಿಕ ಸಂಪಾದನೆ ಮಾಡಿಕೊಂಡಿದೆ.

Continue Reading

Oscars 2023

Actor Jr NTR: ಆಸ್ಕರ್‌ ಕಾರ್ಯಕ್ರಮಕ್ಕೆ ದುಬಾರಿ ವಾಚ್ ತೊಟ್ಟಿದ್ದ ಜೂ. ಎನ್‌ಟಿಆರ್‌! ಆ ವಾಚ್ ಬೆಲೆ ಎಷ್ಟು?

ಟಾಲಿವುಡ್‌ ಹೀರೋ ಜೂ. ಎನ್‌ಟಿಆರ್‌ ಅವರು ಆಸ್ಕರ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ದುಬಾರಿ ಬೆಲೆಯ ವಾಚ್‌ ಧರಿಸಿದ್ದರು. ಅದರ ಬಗ್ಗೆ ಎಲ್ಲೆಡೆ ಚರ್ಚೆಗಳು ನಡೆಯುತ್ತಿವೆ.

VISTARANEWS.COM


on

Koo

ಹೈದರಾಬಾದ್:‌ ರಾಜಮೌಳಿ ಅವರ ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡು ಆಸ್ಕರ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಸಿನಿಮಾ ರಂಗದ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುವ ಸಂತಸದಲ್ಲಿ ಚಿತ್ರತಂಡವಿದೆ. ಅಂದ ಹಾಗೆ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಜೂನಿಯರ್‌ ಎನ್‌ಟಿಆರ್‌ ಅವರು ತೊಟ್ಟಿದ್ದ ವಾಚ್‌ ಇದೀಗ ಭಾರೀ ಸುದ್ದಿಯಲ್ಲಿದೆ.

ಇದನ್ನೂ ಓದಿ: Jr NTR: ಆಸ್ಕರ್‌ನಿಂದ ಹಿಂತಿರುಗಿದ ಬಳಿಕ ಜ್ಯೂ. ಎನ್‌ಟಿಆರ್‌ಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ
ಆಸ್ಕರ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ತೆರಳಿದ್ದ ಜೂ .ಎನ್‌ಟಿಆರ್‌ ಮತ್ತು ರಾಮ್‌ ಚರಣ್‌ ಅವರು ಸೆಮಿ ವೆಸ್ಟರ್ನ್‌ ಶೈಲಿಯ ಸೂಟ್‌ಗಳನ್ನು ಧರಿಸಿದ್ದರು. ಹಾಗೆಯೇ ಸಿನಿಮಾದ ನಿರ್ದೇಶಕ ರಾಜಮೌಳಿ ಅವರು ಕುರ್ತಾ ಹಾಗೂ ಲೇಯರ್ಡ್‌ ಪ್ಯಾಂಟ್‌ ಧರಿಸಿ ಭಾರತದ ಸಂಸ್ಕೃತಿಯನ್ನು ಪ್ರತಿಬಿಂಬಿಸಿದ್ದರು. ವಿಶೇಷವಾಗಿ ಜೂ. ಎನ್‌ಟಿಆರ್‌ ಅವರು ಪಟೇಕ್‌ ಫಿಲ್ಲಿಪೆ ನೌಟಿಲಸ್‌ ಟ್ರಾವೆಲ್‌ ಟೈಮ್‌ ಕಂಪನಿಯ ವಾಚ್‌ ಅನ್ನು ತೊಟ್ಟಿದ್ದರು. ಈ ವಾಚ್‌ನ ಬೆಲೆ ಬರೋಬ್ಬರಿ 1,90,000 ಡಾಲರ್‌ ಅಂದರೆ 1.56 ಕೋಟಿ ರೂಪಾಯಿ!‌

ಜೂ. ಎನ್‌ಟಿಆರ್‌ ಅವರು ತೊಟ್ಟಿದ್ದ ಈ ವಾಚ್‌ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಅಂದ ಹಾಗೆ ಜೂ. ಎನ್‌ಟಿಆರ್‌ ಅವರು ಬ್ರಾಂಡೆಡ್‌ ವಾಚ್‌ಗಳನ್ನು ಇಷ್ಟಪಡುವ ವ್ಯಕ್ತಿ. ಈ ಹಿಂದೆಯೂ ಕೂಡ ಅನೇಕ ಕಾರ್ಯಕ್ರಮಗಳಿಗೆ ಅವರು ಭಾರೀ ಬೆಲೆ ಬಾಳುವ ವಾಚ್‌ಗಳನ್ನು ತೊಟ್ಟು ಬಂದಿದ್ದರು. ಅವರ ವಾಚ್‌ ಕಲೆಕ್ಷನ್‌ ಬಗ್ಗೆಯೂ ಹಲವು ಬಾರಿ ಚರ್ಚೆಗಳು ನಡೆದಿವೆ.

Continue Reading

Oscars 2023

Oscars 2023: ಎಲ್ಲೇ ಹೋದರೂ ಸಣ್ಣ ದೇವಾಲಯ ಸ್ಥಾಪಿಸುವ ರಾಮ್ ಮತ್ತು ಪತ್ನಿ ಉಪಾಸನಾ!

Oscars 2023: ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ಆಸ್ಕರ್‌ ಗೆದ್ದ ಆರ್‌ಆರ್‌ಆರ್‌ (RRR Movie)ಚಿತ್ರದ ನಟ ರಾಮ್ ಚರಣ್ (Ram Charan) ಹಾಗೂ ಅವರ ಪತ್ನಿ ಉಪಾಸನಾ ಅವರ ಧಾರ್ಮಿಕ ಮನೋಭಾವನೆಗೆ ಮತ್ತೊಂದು ಸಾಕ್ಷ್ಯ ದೊರೆತಿದೆ.

VISTARANEWS.COM


on

Oscars 2023: Ram and his wife set up a small temple Whenever the go
Koo

ನವದೆಹಲಿ: ಸೋಮವಾರ ಆಸ್ಕರ್ ಘೋಷಣೆಯಾಗುವ ಸ್ಥಳಕ್ಕೆ ಹೋಗುವ ಮುನ್ನ ರಾಮ್ ಚರಣ್ (Ram Charan) ಮತ್ತು ಅವರ ಪತ್ನಿ ಉಪಾಸನಾ ಅವರು ತಮ್ಮ ಮನೆಯಲ್ಲಿರುವ ಚಿಕ್ಕ ದೇಗುಲದಲ್ಲಿ ಪ್ರಾರ್ಥನೆ ಮಾಡಿ ಬಂದಿದ್ದರಂತೆ. ಈ ಜೋಡಿ ಎಲ್ಲೇ ಹೋದರೂ, ತಾವಿರುವಲ್ಲೇ ಚಿಕ್ಕ ದೇವಾಲಯವನ್ನು ರೆಡಿ ಮಾಡಿ, ಪೂಜಿಸುತ್ತಾರಂತೆ. ಇದು ಅವರಿಗೆ ಭಾರತದ ಜತೆ ಸಂಪರ್ಕ ಹೊಂದಲು ಸಹಾಯ ಮಾಡುತ್ತದಂತೆ. ಈ ಮಾಹಿತಿಯನ್ನು ರಾಮ್ ಚರಣ್ ಅವರು ಹಂಚಿಕೊಂಡಿದ್ದು, ಲಾಸ್ ಏಂಜಲೀಸ್‌ನಲ್ಲಿರುವ ತಮ್ಮ ಮನೆಯಲ್ಲಿ ರೂಪಿಸಿದ ಚಿಕ್ಕ ದೇಗುಲದ ಫೋಟೋ ತೆಗೆಯಲು ಮಾಧ್ಯಮದವರಿಗೆ ಅವಕಾಶ ಮಾಡಿಕೊಟ್ಟರೆನ್ನಲಾಗಿದೆ(Oscars 2023:).

ಆಸ್ಕರ್‌ಗಾಗಿ ಡಾಲ್ಬಿ ಥಿಯೇಟರ್‌ಗೆ ಹೊರಡುವ ಮೊದಲು ದಂಪತಿಗಳು ಹೇಗೆ ತಯಾರಿ ನಡೆಸಿದ್ದಾರೆ ಎಂಬುದನ್ನು ನೋಡಲು ವ್ಯಾನಿಟಿ ಫೇರ್ ಮ್ಯಾಗ್‌ಜಿನ್ ತಂಡವು ರಾಮ್ ಅವರ ಇರುವ ಮನೆಗೆ ಆಗಮಿಸಿತ್ತು. ಈ ತಂಡವನ್ನು ರಾಮ್ ಅವರು ಸ್ವಾಗತಿಸಿದರು. ಕ್ಯಾಮೆರಾಗಳಿಗೆ ತಮ್ಮ ಬಟ್ಟೆಗಳನ್ನು ತೋರಿಸುವುದರ ಜೊತೆಗೆ, ಅವರು ಪ್ರಪಂಚದ ಎಲ್ಲೇ ಇದ್ದರೂ ಅವರು ಅನುಸರಿಸುವ ಆಚರಣೆಯ ಮಾಹಿತಿಯನ್ನು ರಾಮ್ ಅವರು ಹಂಚಿಕೊಂಡರು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಆಸ್ಕರ್‌ ಗೆಲುವು ಆರೋಗ್ಯಕರ ಸ್ಪರ್ಧೆಗೆ ನಾಂದಿಯಾಗಲಿ

ಈ ವೇಳೆ ವ್ಯಾನಿಟಿ ಫೇರ್ ಮ್ಯಾಗ್‌ಜಿನ್ ಜತೆ ಮಾತನಾಡಿದ ರಾಮ್ ಚರಣ್ ಅವರು, ನಾನು ಎಲ್ಲಿಗೆ ಹೋದರೂ, ನನ್ನ ಹೆಂಡತಿ ಮತ್ತು ನಾನು ಈ ಸಣ್ಣ ದೇವಾಲಯವನ್ನು ಸ್ಥಾಪಿಸುತ್ತೇವೆ. ಈ ಆಚರಣೆಯು ನಮ್ಮ ಶಕ್ತಿಗಳು ಮತ್ತು ಭಾರತದೊಂದಿಗೆ ನಮ್ಮನ್ನು ಸಂಪರ್ಕಿಸುತ್ತದೆ. ಇಲ್ಲಿರಲು ನಮಗೆ ಸಹಾಯ ಮಾಡಿದ ಎಲ್ಲದಕ್ಕೂ ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ಕೃತಜ್ಞತೆ ಸಲ್ಲಿಸುವುದು ಮುಖ್ಯ ಎಂದು ಹೇಳಿದರು. ರಾಮ್ ಮತ್ತು ಉಪಾಸನಾ ಸಮಾರಂಭಕ್ಕೆ ಹೊರಡುವ ಮೊದಲು ಒಂದು ಸಣ್ಣ ಪ್ರಾರ್ಥನೆಯನ್ನು ಮಾಡಿದರು ಎಂದು ವರದಿಯಾಗಿದೆ.

Continue Reading

Oscars 2023

Budget Session 2023: ಮೋದಿ, ಆರ್‌ಆರ್‌ಆರ್ ಆಸ್ಕರ್ ಗೆದ್ದಿರುವ ಕ್ರೆಡಿಟ್ ತೆಗೆದುಕೊಳ್ಳಬೇಡಿ! ಖರ್ಗೆ ವ್ಯಂಗ್ಯ

Budget Session 2023: ಪ್ರಧಾನಿ ನರೇಂದ್ರ ಮೋದಿ ಅವರೇ, ಆರ್ ಆರ್ ಆರ್ ಮತ್ತು ದಿ ಎಲಿಫೆಂಟ್ ವಿಸ್ಪರರ್ಸ್ ಆಸ್ಕರ್ ಗೆದ್ದಿದ್ದು, ಅವುಗಳ ಕ್ರೆಡಿಟ್ ತೆಗೆದುಕೊಳ್ಳಲು ಹೋಗಬೇಡಿ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ವ್ಯಂಗ್ಯವಾಡಿದ್ದಾರೆ.

VISTARANEWS.COM


on

Don't take credit oscar winning films, Kharge requested to Modi at Budget Session 2023
Koo

ನವದೆಹಲಿ: ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ಆರ್‌ಆರ್‌ಆರ್ ಸಿನಿಮಾ ಮತ್ತು ಡ್ಯಾಕುಮೆಂಟರಿ ಶಾರ್ಟ್ ಫಿಲ್ಮ್ ದಿ ಎಲಿಫೆಂಟ್ ವಿಸ್ಪರರ್ಸ್ ಆಸ್ಕರ್ ಗೆದಿದ್ದು, ಅದರ ಕ್ರೆಡಿಟ್ ಅನ್ನು ನರೇಂದ್ರ ಮೋದಿ ಅವರು ತೆಗೆದುಕೊಳ್ಳಬಾರದು ಎಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ವ್ಯಂಗ್ಯ ಮಾಡಿದ್ದಾರೆ(Budget Session 2023).

ಆರ್‌ಆರ್‌ಆರ್ ಸಿನಿಮಾ ತೆಲುಗು ಸಿನಿಮಾವಾದ್ರೆ, ಎಲಿಫೆಂಟ್ ವಿಸ್ಪರರ್ಸ್ ತಮಿಳು ಸಾಕ್ಷ್ಯ ಚಿತ್ರವಾಗಿದ್ದು, ಎರಡೂ ದೇಶದ ಸಿನಿಮಾ ಕ್ಷೇತ್ರಕ್ಕೆ ಕಾಣಿಕೆ ನೀಡಿವೆ ಎಂದು ಖರ್ಗೆ ಅವರು ಹೇಳಿದರು. ನಾವು (ಬಿಜೆಪಿ) ನಿರ್ದೇಶನ ಮಾಡಿದ್ದೇವೆ, ನಾವು (ಬಿಜೆಪಿ) ಹಾಡು ಬರೆದಿದ್ದೇವೆ ಎಂದೋ ಅಥವಾ ಮೋದಿಜಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ ಎಂದು ಆಡಳಿತ ಪಕ್ಷವು ಕ್ರೆಡಿಟ್ ತೆಗೆದುಕೊಳ್ಳಬಾರದು. ಇದು ನನ್ನ ವಿನಂತಿ ಮಾತ್ರ. ಇವು ದೇಶದ ಕೊಡುಗೆಯಾಗಿದೆ ಎಂದು ಖರ್ಗೆ ಸಂಸತ್ತಿನಲ್ಲಿ ಹೇಳಿದರು.

ಇದನ್ನೂ ಓದಿ: Oscars 2023 : ಆರ್‌ಆರ್‌ಆರ್, ದಿ ಎಲಿಫೆಂಟ್ ವಿಸ್ಪರರ್ಸ್ ತಂಡಗಳಿಗೆ ಪಿಎಂ ಮೋದಿ, ರಾಹುಲ್ ಶುಭಾಶಯ

ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು, ಆರ್ ಆರ್ ಆರ್ ಚಿತ್ರದ ಕತೆ ಬರೆದವರು ವಿ ವಿಜಯೇಂದ್ರ ಪ್ರಸಾದರು. ಅವರನ್ನು ಮೋದಿ ನೇತೃತ್ವದ ಸರ್ಕಾರವೇ ಸಂಸತ್ತಿಗೆ ನಾಮನಿರ್ದೇಶನ ಮಾಡಿದೆ ಎಂಬುದು ವಾಸ್ತವಾಂಶ ಎಂದರು. ಗೋಯಲ್ ಅವರು ಈ ಮಾತಿಗೆ ತೀವ್ರ ವಿರೋಧ ವ್ಯಕ್ತವಾಯಿತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖ ನಾಯಕರೆಲ್ಲರೂ ಆಸ್ಕರ್ ವಿಜೇತ ಆರ್ ಆರ್ ಆರ್ ಹಾಗೂ ಸಾಕ್ಷ್ಯ ಚಿತ್ರ ದಿ ಎಲೆಫೆಂಟ್ ವಿಸ್ಪರರ್ಸ್ ಚಿತ್ರ ತಂಡಗಳಿಗೆ ಶಭಾಶಯ ಕೋರಿದ್ದಾರೆ.

Continue Reading
Advertisement
drowned 4 death in kolhapur
ಕ್ರೈಂ5 mins ago

Drowned: ಬಟ್ಟೆ ತೊಳೆಯಲು ಹೋಗಿ ನಾಲ್ವರು ಜಲ ಸಮಾಧಿ

Virat kohli
ಪ್ರಮುಖ ಸುದ್ದಿ11 mins ago

Virat kohli : ಆರ್​ಸಿಬಿ ಆಟಗಾರರಿಗೆ ಬ್ಯಾಟಿಂಗ್ ಅಭ್ಯಾಸ ನಡೆಸಲು ನೆರವಾದ ಕೊಹ್ಲಿ; ಇಲ್ಲಿದೆ ವಿಡಿಯೊ

Crime News
ಕ್ರೈಂ21 mins ago

Crime News: ಪತ್ನಿಯನ್ನು ಕೊಂದು ಶವದ ಫೋಟೊ ಸಂಬಂಧಿಕರಿಗೆ ಕಳುಹಿಸಿ ನೇಣಿಗೆ ಶರಣಾದ ಪತಿ; ಅನಾಥವಾಯ್ತು ಹೆಣ್ಣು ಮಗು

RCB vs CSK
ಕ್ರೀಡೆ26 mins ago

RCB vs CSK: ವಾಹನ ಸವಾರರೇ ಗಮನಿಸಿ, ಇಂದು ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ

sarjapura boy murder case
ಕ್ರೈಂ57 mins ago

Murder Case: ಬಾಲಕನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್‌, ಮೊಬೈಲ್‌ ಗೀಳಿಗಾಗಿ ಅಣ್ಣನೇ ಕೊಂದ

Skin Care Tips
ಆರೋಗ್ಯ1 hour ago

Skin Care Tips: ಬಿಸಿಲಿನಿಂದ ಚರ್ಮ ಕಪ್ಪಾಗಿದೆಯಾ? ಇಲ್ಲಿದೆ ಸರಳ ಮನೆಮದ್ದು

karnataka Weather Forecast
ಮಳೆ2 hours ago

Karnataka Weather : ಈ 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌; ಬಿರುಗಾಳಿ ಸಹಿತ ಭಾರಿ ಮಳೆ ಎಚ್ಚರಿಕೆ

Food Tips Kannada
ಆರೋಗ್ಯ2 hours ago

Food Tips Kannada: ಶಕ್ತಿವರ್ಧಕಗಳಲ್ಲ, ನಿಮ್ಮ ಶಕ್ತಿಯನ್ನೇ ಬಸಿದು ತೆಗೆಯುವ ಆಹಾರಗಳಿವು!

World Aids Vaccine Day
ದೇಶ3 hours ago

World Aids Vaccine Day: ಇಂದು ವಿಶ್ವ ಏಡ್ಸ್ ಲಸಿಕೆ ದಿನ; ಈ ದಿನದ ಹಿನ್ನೆಲೆ ಏನು?

Dina Bhavishya
ಭವಿಷ್ಯ3 hours ago

Dina Bhavishya : ಈ ರಾಶಿಯವರ ಬೆನ್ನ ಹಿಂದೆ ನಡೆಯುತ್ತೆ ಪಿತೂರಿ..ಎಚ್ಚರವಾಗಿರಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ12 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ1 day ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌