ಗರ್ಭಿಣಿಯರೇ, ನಿಮ್ಮ ಸೌಂದರ್ಯ ಸಮಸ್ಯೆಗಳಿಗೆ ಇಲ್ಲಿದೆ ಉತ್ತರ - Vistara News

ಮಹಿಳೆ

ಗರ್ಭಿಣಿಯರೇ, ನಿಮ್ಮ ಸೌಂದರ್ಯ ಸಮಸ್ಯೆಗಳಿಗೆ ಇಲ್ಲಿದೆ ಉತ್ತರ

ಗರ್ಭ ಧರಿಸಿದ ನಂತರ ಮೈಯ ಚರ್ಮದಲ್ಲೂ ಬದಲಾವಣೆಗಳು ಉಂಟಾಗತೊಡಗುತ್ತವೆ. ಸೌಂದರ್ಯದ ಬಗೆಗ ಚಿಂತೆ ಆರಂಭವಾಗುತ್ತದೆ. ಚರ್ಮದ ಸಮಸ್ಯೆಗಳನ್ನು ನಿವಾರಿಸಿಕೊಂಡು ಚೆಲುವು ಉಳಿಸಿಕೊಳ್ಳುವುದು ಹೇಗೆ?

VISTARANEWS.COM


on

beauty pregnancy
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ತಾಯ್ತನ ಪ್ರತಿ ಮಹಿಳೆಯ ಬದುಕಿನಲ್ಲೂ ಬರುವ ಮಹತ್ವದ ಘಟ್ಟ, ಹಾಗೆಯೇ ಸುಂದರವಾದ ಅಧ್ಯಾಯ. ಮಗುವನ್ನು ಹೊತ್ತಿರುವ 9 ತಿಂಗಳ ಅವಧಿಯಿಂದಲೇ ಆಂತರಿಕವಾಗಿ ಹಾಗೂ ಬಾಹ್ಯವಾಗಿ ಮಹಿಳೆಯ ದೇಹ ಹಲವಾರು ಬದಲಾವಣೆಗಳಿಗೆ ಒಡ್ಡಿಕೊಳ್ಳುವ ಕಾಲ ಇದು. ಹಾರ್ಮೋನುಗಳ ವೈಪರೀತ್ಯದಿಂದಾಗಿ ಚರ್ಮವೂ ಈ ಸಂದರ್ಭ ಸಾಕಷ್ಟು ಬದಲಾವಣೆಯನ್ನು ಕಾಣುತ್ತದೆ. ಇದ್ದಕ್ಕಿದ್ದಂತೆ ಆಗುವ ಈ ಬದಲಾವಣೆಗಳೆಲ್ಲವೂ ಮಹಿಳೆಯನ್ನು ಕಳವಳಕ್ಕೀಡುಮಾಡುತ್ತದೆ. ಹಾಗಾಗಿ ಗರ್ಭಿಣಿ ಸ್ತ್ರೀಯರಲ್ಲಿ ಕಂಡು ಬರುವ ಚರ್ಮದ ತೊಂದರೆಗಳು ಹಾಗೂ ಅವುಗಳ ಪರಿಹಾರೋಪಾಯಗಳು ಇಲ್ಲಿವೆ. (beauty in pregnancy)

ಸ್ಟ್ರೆಚ್‌ ಮಾರ್ಕ್:‌ ಶೇಕಡಾ 90ರಷ್ಟು ಮಹಿಳೆಯರು ತಮ್ಮ ತಾಯ್ತನದ ಸಂದರ್ಭ ಅನುಭವಿಸುವ ಸಮಸ್ಯೆ ಇದು. ಕೆಂಪಗಿನ, ನೇರಳೆಯ ಉದ್ದುದ್ದ ಕಲೆಗಳು ಗರ್ಭಿಣಿ ಸ್ತ್ರೀಯ ಚರ್ಮದ ಮೇಲೆ ಕಾಣಿಸಿಕೊಳ್ಳಲಾರಂಭಿಸುತ್ತದೆ. ಚರ್ಮ ಹಿಗ್ಗುವಾಗ ಆಗುವ ಸಮಸ್ಯೆಯಿದು. ಮುಖ್ಯವಾಗಿ ಹೊಟ್ಟೆ ತನ್ನ ಗಾತ್ರವನ್ನು ಹೆಚ್ಚು ಮಾಡುತ್ತಾ ಹೋದಂತೆ ಈ ಕಲೆಗಳು ಅಧಿಕವಾಗುತ್ತಾ ಹೋಗುತ್ತದೆ. ಹೆರಿಗೆಯ ನಂತರ ಈ ಕಲೆಗಳು ಬಿಳಿಯ ಬಣ್ಣಕ್ಕೆ ತಿರುಗಿದರೂ ಅಷ್ಟು ಸುಲಭವಾಗಿ ಹಲವು ವರ್ಷಗಳೇ ಕಳೆದರೂ ಮಾಸುವುದಿಲ್ಲ.

1.. ಸಮಸ್ಯೆ ಶುರುವಾಗುವ ಮೊದಲೇ ತಡೆದರೆ ಸಮಸ್ಯೆ ಅಷ್ಟು ದೊಡ್ಡದಾಗಿರುವುದಿಲ್ಲ ಎಂಬುದು ಅರಿತವರ ಮಾತು. ಹಾಗಾಗಿ, ಗರ್ಭಿಣಿ ಸ್ತ್ರೀಯರು ಪ್ರತಿದಿನವೂ ಕೋಕೋ ಬಟರ್‌ ಹಾಗೂ ಶಿಯಾ ಬಟರ್‌ಯುಕ್ತ ಮಾಯ್‌ಶ್ಚರೈಸರ್‌ ಹಚ್ಚುತ್ತಿದ್ದರೆ ಈ ಸಮಸ್ಯೆಗೆ ಆರಂಭದಲ್ಲೇ ಪರಿಹಾರ ಕಂಡುಕೊಳ್ಳಬಹುದು. ಗರ್ಭಿಣಿಯಾಗಿದ್ದಾಗಲೂ, ಹೆರಿಗೆಯ ನಂತರವೂ ಹಚ್ಚುವುದು ಬಹಳ ಮುಖ್ಯ.

2. ಮಸಾಜ್ ಕೂಡಾ ಇದಕ್ಕೆ ಅತ್ಯುತ್ತಮ ಪರಿಹಾರ. ಆದರೆ, ಮೃದುವಾಗಿ ಮಾಡಿ. ಹೆಚ್ಚು ಒತ್ತಡ ಬೇಡ.

3. ಆರಂಭದಲ್ಲಿ ಈ ಸ್ಟ್ರೆಚ್‌ ಮಾರ್ಕ್‌ಗಳು ಕೆಂಬಣ್ಣದಲ್ಲಿ ಗೋಚರಿಕೊಳ್ಳುವಾಗಲೇ ಇದರ ಮೇಲೆ ಗಮನ ನೀಡಿದರೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು.

4. ಮುಂದಿನ ದಿನಗಳಲ್ಲಿ ಚರ್ಮದ ತಜ್ಞರನ್ನು ಸಂಪರ್ಕಿಸಿ ಪಿಆರ್ಪಿ, ಮೈಕ್ರೋನೀಡಲಿಂಗ್‌ ಮತ್ತಿತರ ಕಾಸ್ಮೆಟಿಕ್‌ ಚಿಕಿತ್ಸೆಗಳ ಮೂಲಕ ಕಲೆಗಳನ್ನು ಕಡಿಮೆಗೊಳಿಸಬಹುದು.

ಮೊಡವೆ: ಮೊಡವೆ ಸಮಸ್ಯೆಯೂ ಕೂಡ ಗರ್ಭಿಣಿ ಸ್ತ್ರೀಯರಲ್ಲಿ ಹೆಚ್ಚಾಗಿ ಕಂಡುಬರುವ ಸಮಸ್ಯೆ. ಕೆಲವರಿಗೆ ಮೊಡವೆಯ ತೊಂದರೆ ಗರ್ಭಿಣಿಯಾದ ಮೇಲೆ ಕಡಿಮೆಯಾದರೆ, ಇನ್ನೂ ಕೆಲವರಿಗೆ ಇದು ಉಲ್ಬಣಿಸುತ್ತದೆ. ಇದು ಹಾರ್ಮೋನುಗಳಲ್ಲಿ ಬದಲಾವಣೆಯೇ ಈ ಸಮಸ್ಯೆಯ ಮೂಲ ಕಾರಣ.

1.. ಹೆಚ್ಚು ಹೆಚ್ಚು ನೀರು ಕುಡಿಯಿರಿ. ಇದರಿಂದ ಕಲ್ಮಶಗಳು ದೇಹದಿಂದ ಹೊರತಳ್ಳಲ್ಪಡುತ್ತದೆ.

2. ಮೇಕಪ್‌ ಮಾಡಿದ್ದರೆ, ಮಲಗುವ ಮುನ್ನ ಅವನ್ನು ಸಂಪೂರ್ಣವಾಗಿ ತೆಗೆಯಿರಿ, ಚರ್ಮವನ್ನು ಸ್ವಚ್ಛವಾಗಿಡಿ. ಪದೇ ಪದೇ ಮುಖವನ್ನು ಮುಟ್ಟುತ್ತಿರಬೇಡಿ.

3. ಬೆಂಜೈಲ್‌ ಪೆರಾಕ್ಸೈಡ್‌ ಇರುವ ಸೌಂದರ್ಯವರ್ಧಕ ಬಳಸಿ. ಇದು ಮುಖದ ಸೂಕ್ಷ್ಮ ರಂಧ್ರಗಳಲ್ಲಿರುವ ಕೊಳೆಯನ್ನು ತೆಗೆದುಹಾಕುತ್ತದೆ.

4. ರೆಟಿನಾಲ್‌ ಇರುವ ಸೌಂದರ್ಯ ವರ್ಧಕಗಳು ಮೊಡವೆಗೆ ಒಳ್ಳೆಯದಾದರೂ, ಗರ್ಭಿಣಿಯರಿಗೆ ಹಾಗೂ ಹಾಲುಣಿಸುವ ತಾಯಂದಿರಿಗೆ ಇದು ಒಳ್ಳೆಯದಲ್ಲ.

ಇದನ್ನೂ ಓದಿ: Skin care: ಪುರುಷರೇ ನಿಮ್ಮ ಚರ್ಮ ನಿರ್ಲಕ್ಷಿಸಬೇಡಿ!

ಕಪ್ಪು ಚುಕ್ಕಿಗಳು: ಗರ್ಭಿಣಿ ಸ್ತ್ರೀಯರು ಸೌಂದರ್ಯದ ವಿಚಾರದಲ್ಲಿ ಅನುಭವಿಸುವ ಇನ್ನೊಂದು ಸಾಮಾನ್ಯ ತೊಂದರೆ ಎಂದರೆ ಮುಖದ ಮೇಲಿನ ಕಪ್ಪು ಚುಕ್ಕೆಗಳು.  ಅನುವಂಶಿಕವಾಗಿಯೋ, ಬಿಸಿಲಿನ ಪರಿಣಾಮವೋ ಚರ್ಮದ ಮೇಲೆ ಚುಕ್ಕೆಗಳು ಈ ಸಂದರ್ಭ ಹೆಚ್ಚು ಗೋಚರಿಸಲಾರಂಭಿಸುತ್ತವೆ. ಹಣೆಯ ಮೇಲೆ, ಕೆನ್ನೆ, ಮೂಗು ಮತ್ತಿತರ ಭಾಗಗಳಲ್ಲಿ ಇವುಗಳ ಸಮಸ್ಯೆ ಇನ್ನೂ ಹೆಚ್ಚಿರುತ್ತದೆ.

1.. ಬಿಸಿಲಿನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸಿಕೊಳ್ಳುವುದು ಬಹಳ ಮುಖ್ಯವಾದದ್ದು. ಇದು ನಿಮ್ಮ ಈ ತೊಂದರೆಯನ್ನು ಇನ್ನಷ್ಟು ಹೆಚ್ಚಾಗಿಸುತ್ತದೆ. ಬಿಸಿಲಲ್ಲಿ ಹೊರಹೋಗಬೇಕಾಗಿ ಬಂದಾಗ ಛತ್ರಿ, ಸ್ಕಾರ್ಫ್‌ ಧರಿಸಿಕೊಳ್ಳಿ.

2. ಹೊರಗೆ ಬಿಸಿಲಿನಲ್ಲಿ ಕಾಲಿಡುವ 15 ನಿಮಿಷಕ್ಕೂ ಮೊದಲು ಎಸ್‌ಪಿಎಫ್‌ ೩೦ಕ್ಕೂ ಹೆಚ್ಚಿನ ಪ್ರಮಾಣವನ್ನು ಹೊಂದಿದ ಸನ್‌ಸ್ಕ್ರೀನ್‌ ಲೋಷನ್‌ ಹಚ್ಚಿಕೊಳ್ಳಿ. ಬಿಸಿಲುಗಾಲದಲ್ಲಿ ಹೊರಗೆ ಕಾಲಿಡುವಾಗ ಮಾತ್ರವಲ್ಲ. ಮನೆಯ ಒಳಗೂ ಹಚ್ಚಿಕೊಳ್ಳುವುದು ಒಳ್ಳೆಯದು.

3. ವಿಟಮಿನ್‌ ಸಿ, ಇ ಮತ್ತು ಎ ಇರುವ ಸ್ಕಿನ್‌ ಲೈಟನಿಂಗ್‌ ಲೋಷನ್‌ ಹಚ್ಚಿಕೊಳ್ಳುವುದರಿಂದ ಈ ಸಮಸ್ಯೆಗೆ ಕೊಂಚ ಮಟ್ಟಿನ ಪರಿಹಾರ ಸಿಗಬಹುದು.

ಇದನ್ನೂ ಓದಿ: ಮನೆಯಲ್ಲೇ ಮಾಡಬಹುದಾದ ಈ 5 ಪಾನೀಯಗಳಿಂದ ಬೊಜ್ಜು ಕರಗಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

ಮಹಿಳಾ ಮೀಸಲು ಮಸೂದೆ ಕಾಂಗ್ರೆಸ್‌ ಪಕ್ಷದ ಕನಸು ಮತ್ತು ಕೂಸು: ಡಿ.ಕೆ.ಶಿವಕುಮಾರ್

VISTARANEWS.COM


on

ಬೆಂಗಳೂರು, ಏ.19: ತರಾತುರಿಯಲ್ಲಿ ಸಂವಿಧಾನ ತಿದ್ದುಪಡಿ ಮಾಡಲು ಹೋದ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಮುಖಭಂಗವಾಗಿದೆ. ಇಂಡಿಯಾ ಒಕ್ಕೂಟಕ್ಕೆ ಜಯವಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಪ್ರತಿಕ್ರಿಯಿಸಿದರು.
ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರು ಹಾಗೂ ಕ್ಷೇತ್ರ ವಿಂಗಡಣೆ ವಿರುದ್ದ ಪ್ರತಿಭಟಿಸಿದ ದಕ್ಷಿಣ ಭಾರತದ ಎಲ್ಲಾ ಮುಖ್ಯಮಂತ್ರಿಗಳ ಹೋರಾಟಕ್ಕೆ, ಪ್ರಜಾಪ್ರಭುತ್ವಕ್ಕೆ ಸಿಕ್ಕಂತಹ ದೊಡ್ಡ ಜಯ. ಮಹಿಳೆಯರ ಪರವಾಗಿ ಕಾಂಗ್ರೆಸ್ ಪಕ್ಷ ಹಾಗೂ ಇಂಡಿಯಾ ಒಕ್ಕೂಟ ನಿಂತಿದೆ. ಇಲ್ಲಿ ಯಾರಿಗೂ ಅವಮಾನವಾಗಿಲ್ಲ” ಎಂದರು.
ಸಂವಿಧಾನ ತಿದ್ದುಪಡಿ ಮಾಡುವಾಗ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಮಹಿಳಾ ಮೀಸಲಾತಿ ಕಾಯ್ದೆ ಕಾಂಗ್ರೆಸ್ ಪಕ್ಷದ ಕನಸು ಮತ್ತು ಕೂಸು. ಇದರ ಪರವಾಗಿ ಕೆಲಸ ಮಾಡಿದ್ದು ಕಾಂಗ್ರೆಸ್ ಪಕ್ಷ. ಆದರೆ ಈಗ ಬಿಜೆಪಿ ಸರ್ಕಾರ ಮಾಡಿರುವ ನಿರ್ಧಾರ ಸರಿಯಾದ ಸಮಯವಲ್ಲ. ನಮ್ಮದು ಹಿಟ್ಲರ್ ಆಡಳಿತವಲ್ಲ” ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳ ಜೊತೆ ಚರ್ಚೆ ನಡೆಸಬೇಕಿತ್ತು. ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲೇ ತರುವ ಪ್ರಮೇಯವೇನಿತ್ತು. ಇಂಡಿಯಾ ಒಕ್ಕೂಟದ ಎಲ್ಲಾ ಸದಸ್ಯರಿಗೆ ನಾನು ಶುಭಾಶಯಗಳನ್ನು ತಿಳಿಸುತ್ತೇನೆ ಎಂದೂ ಶಿವಕುಮಾರ್‌ ಹೇಳಿದ್ದಾರೆ.
ಸೋಲುತ್ತದೆ ಎಂದರೂ ಬಿಲ್ ತಂದಿದ್ದು ಬಿಜೆಪಿ
ವಿಪಕ್ಷಗಳ ವಿರುದ್ದ ಬಿಜೆಪಿ ಪ್ರತಿಭಟನೆ ಬಗ್ಗೆ ಕೇಳಿದಾಗ, “ಬಿಲ್ ಸೋಲುತ್ತದೆ ಎಂದು ಗೊತ್ತಿದ್ದರೂ ತಂದವರು ಅವರು. ಅವರುಗಳು ಮಹಿಳಾ ವಿರೋಧಿಗಳು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲರೂ ಪ್ರತಿನಿಧಿಗಳಲ್ಲವೇ? ಇವರುಗಳು ಜನರಿಂದ ಗೆದ್ದಿಲ್ಲವೇ? ಅವರುಗಳು ಇದರ ಬಗ್ಗೆ ಮಾತನಾಡಬೇಕಿತ್ತು, ಚರ್ಚೆ ಮಾಡಬೇಕಿತ್ತು. ಮಹಿಳಾ ಮೀಸಲಾತಿ ಬಿಲ್ ಅವರ ಆಸ್ತಿಯಲ್ಲ. ದೇಶದ ಆಸ್ತಿ” ಎಂದರು.
“ಈ ಹಿಂದೆ ರಾಜೀವ್ ಗಾಂಧಿಯವರು ಶೇ 50 ರಷ್ಟು ಮೀಸಲಾತಿ ತಂದಿದ್ದರು. ಸೋನಿಯಾಗಾಂಧಿ ಅವರ ನೇತೃತ್ವದಲ್ಲಿ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸ್ ಆಗಿತ್ತು. ಈ ಬಿಲ್ ಅಡಿಯಲ್ಲಿ ದಕ್ಷಿಣ ಭಾರತದ ಕ್ಷೇತ್ರಗಳನ್ನು ಕತ್ತರಿಸಿ ಉತ್ತರ ಭಾರತದ ಕ್ಷೇತ್ರಗಳನ್ನು ಹೆಚ್ಚು ಮಾಡಲು ಹೊರಟಿರುವುದು ಸರಿಯಲ್ಲ. ಇದನ್ನು ಸಹಿಸಲು ಸಾಧ್ಯವಿಲ್ಲ. ನಮ್ಮನ್ನೆಲ್ಲಾ ಕರೆದು ಚರ್ಚೆ ಮಾಡಬೇಕಿತ್ತು” ಎಂದು ಹೇಳಿದರು.

Continue Reading

Latest

ಮೋದಿ-ಸಿದ್ದರಾಮಯ್ಯ ಗುಸುಗುಸು: ಇಬ್ಬರೂ ಮಾತನಾಡಿದ ವಿಷಯ ಬಹಿರಂಗ

VISTARANEWS.COM


on

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿದಾಗ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದ್ದು ಸರಿಯಷ್ಟೇ. ಈ ಸಂದರ್ಭದಲ್ಲಿ ಮೋದಿ ಅವರು ಸಿದ್ದರಾಮಯ್ಯ ಅವರ ಕಿವಿಯಲ್ಲಿ ಪಿಸುಗುಟ್ಟಿದ ಫೋಟೋ ಭಾರಿ ವೈರಲ್‌ ಆಗಿದ್ದು, ತೀವ್ರ ಕುತೂಹಲ ಮೂಡಿಸಿತ್ತು. ಮೋದಿ ಅವರು ಸಿದ್ದರಾಮಯ್ಯ ಅವರ ಕಿವಿಯಲ್ಲಿ ಏನು ಹೇಳಿರಬಹುದು ಎಂದು ಕುತೂಹಲ ಮೂಡಿದ್ದು ಮಾತ್ರವಲ್ಲದೆ, ಊಹಾಪೋಹಗಳಿಗೂ ಕಾರಣವಾಗಿತ್ತು.
ಇದೀಗ ಮೋದಿ-ಸಿದ್ದರಾಮಯ್ಯ ಅವರ ಮಾತಿನ ರಹಸ್ಯ ಬಹಿರಂಗವಾಗಿದೆ. ಸ್ವತಃ ಸಿದ್ದರಾಮಯ್ಯ ಅವರೇ ಗುಟ್ಟನ್ನು ಬಹಿರಂಗಗೊಳಿಸಿದ್ದಾರೆ.
ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ನಾನು ಮೋದಿ ಇಬ್ಬರು ಗುಟ್ಟಾಗಿ ಏನನ್ನೂ ಮಾತನಾಡಿಲ್ಲ. ಮಹಿಳಾ ಮೀಸಲಾತಿ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳೀದರು. ನಾನು ಮಹಿಳಾ ಮೀಸಲಾತಿ ಪರವಾಗಿದ್ದೇನೆ ಎಂದು ಉತ್ತರಿಸಿದೆ. ಇಷ್ಟು ವಿಚಾರ ಬಿಟ್ಟು ಬೇರೆ ಏನೂ ಇಲ್ಲ ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ.

Continue Reading

ಬೆಂಗಳೂರು

Bengaluru News: ಮಹಿಳೆಗೆ ಮಾತ್ರ ಅಸಾಧ್ಯವಾದುದನ್ನು ಸಾಧಿಸುವ ಶಕ್ತಿಯಿದೆ; ದಿವ್ಯಾ ರಂಗೇನಹಳ್ಳಿ

Bengaluru News: ಮಹಿಳೆಗೆ ಮಾತ್ರ ಎಲ್ಲವನ್ನೂ ನಿಭಾಯಿಸುವ ಶಕ್ತಿಯಿದೆ. ಆಕೆ ಎಲ್ಲಾ ಕ್ಷೇತ್ರಗಳಲ್ಲೂ ಇಂದು ತಲೆ ಎತ್ತಿ ನಿಂತಿದ್ದಾಳೆ. ಮಹಿಳೆಯರ ಸ್ಥೈರ್ಯ, ಸ್ಫೂರ್ತಿಯೇ ಇಂದು ಆಕೆಯ ಶಕ್ತಿಯನ್ನು ಜಗತ್ತಿಗೆ ಪರಿಚಯಿಸುವಂತೆ ಮಾಡಿದೆ. ಇದೊಂದು ಉತ್ತಮ ಅವಕಾಶಗಳನ್ನು ಒದಗಿಸುವ ಉಪಯುಕ್ತ ವೇದಿಕೆಯಾಗಲಿ ಎಂದು ಮೀಡಿಯಾ ಕನೆಕ್ಟ್‌ ಸಂಸ್ಥಾಪಕಿ ಹಾಗೂ ಸಿಇಒ ದಿವ್ಯಾ ರಂಗೇನಹಳ್ಳಿ ಹೇಳಿದರು.

VISTARANEWS.COM


on

Glittering Entrepreneurs vedike inauguration in bengaluru

ಬೆಂಗಳೂರು: ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಮುಂದುವರಿದಿದ್ದಾಳೆ. ಆಕೆಗೆ ಮಾತ್ರ ಎಲ್ಲವನ್ನೂ ನಿಭಾಯಿಸುವ ಶಕ್ತಿಯಿದೆ ಎಂದು ಮೀಡಿಯಾ ಕನೆಕ್ಟ್‌ ಸಂಸ್ಥಾಪಕಿ ಹಾಗೂ ಸಿಇಒ ದಿವ್ಯಾ ರಂಗೇನಹಳ್ಳಿ (Bengaluru News) ಹೇಳಿದರು.

ನಗರದಲ್ಲಿ ವರ್ಲ್ಡ್‌ ಆರ್ಯವೈಶ್ಯ ಮಹಸಭಾ ವತಿಯಿಂದ ಆಯೋಜಿಸಲಾದ ಗ್ಲಿಟರಿಂಗ್‌ ಎಂಟರ್‌ಪ್ರಿನರ್ಸ್‌ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಮಹಿಳೆಗೆ ಮಾತ್ರ ಎಲ್ಲವನ್ನು ನಿಭಾಯಿಸುವ ಶಕ್ತಿಯಿದೆ. ಆಕೆ ಎಲ್ಲಾ ಕ್ಷೇತ್ರಗಳಲ್ಲೂ ಇಂದು ತಲೆ ಎತ್ತಿ ನಿಂತಿದ್ದಾಳೆ. ಮಹಿಳೆಯರ ಸ್ಥೈರ್ಯ, ಸ್ಫೂರ್ತಿಯೇ ಇಂದು ಆಕೆಯ ಶಕ್ತಿಯನ್ನು ಜಗತ್ತಿಗೆ ಪರಿಚಯಿಸುವಂತೆ ಮಾಡಿರುವುದು. ಇದೊಂದು ಉತ್ತಮ ಅವಕಾಶಗಳನ್ನು ಒದಗಿಸುವ ಉಪಯುಕ್ತ ವೇದಿಕೆಯಾಗಲಿ ಎಂದು ಆಶಿಸಿದರು.

ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಂಜುಳಾ ಶಂಕರ್‌ ಮಾತನಾಡಿ, ಮಹಿಳೆಯರು ಬೆಳೆಯುವುದನ್ನು ನಾವು ಪ್ರೋತ್ಸಾಹಿಸುತ್ತೇವೆ. ನೀವು ಯಾವುದೇ ರೀತಿಯ ಸಹಾಯಗಳನ್ನು ಕೋರಿದ್ದಲ್ಲಿ ಖಂಡಿತಾ ನಾವು ಸಹಾಯ ಮಾಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: Samsung Galaxy: ಎಐ ಆಧರಿತ ಗ್ಯಾಲಕ್ಸಿ ಝಡ್ ಫೋಲ್ಡ್ 6, ಝಡ್ ಫ್ಲಿಪ್6 ಹೇಗಿದೆ? ದರ ಎಷ್ಟು?

ಕಾರ್ಯಕ್ರಮದಲ್ಲಿ ವರ್ಲ್ಡ್‌ ಆರ್ಯವೈಶ್ಯ ಮಹಾಸಭಾ ಸಮಾಜದ ಜಾಗತಿಕ ಅಧ್ಯಕ್ಷ ರಾಮಕೃಷ್ಣ ಟಂಗುಟೂರಿ ಮಾತನಾಡಿ, ಇಂದಿನ ಯುಗದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರಿದಿದ್ದಾಳೆ. ಪುರುಷರಿಗಿಂತ ಮಹಿಳಾ ಉದ್ಯಮಿಗಳೇ ಹೆಚ್ಚಾಗಿದ್ದಾರೆ. ಅವರ ಆತ್ಮಸ್ಥೈರ್ಯದಿಂದ ಇಂದು ಜಗತ್ತಿನೆಲ್ಲೆಡೆ ದಾಪುಗಲನ್ನು ಇಟ್ಟಿದ್ದಾರೆ. ಇದಕ್ಕೆ ವರ್ಲ್ಡ್‌ ಆರ್ಯವೈಶ್ಯ ಮಹಾಸಭಾ ಕೂಡ ಪ್ರೋತ್ಸಾಹಿಸುತ್ತಾ ಬಂದಿದೆ. ಈ ವೇದಿಕೆ ಮಹಿಳಾ ಉದ್ಯಮಿಗಳಿಗೆ ಇನ್ನಷ್ಟು ಭರವಸೆಗಳನ್ನು ನೀಡಲು ಎಂದು ಹೇಳಿದರು.

ಇದನ್ನೂ ಓದಿ: Media Connect: ಚೆಸ್‌ ಹಬ್ಬದಲ್ಲಿ ಮೀಡಿಯಾ ಕನೆಕ್ಟ್‌ ಸಂಸ್ಥಾಪಕಿ ಡಾ. ದಿವ್ಯಾ ರಂಗೇನಹಳ್ಳಿಗೆ ಸನ್ಮಾನ

ಈ ಸಂದರ್ಭದಲ್ಲಿ ವರ್ಲ್ಡ್‌ ಆರ್ಯವೈಶ್ಯ ಮಹಸಭಾ ಅಧ್ಯಕ್ಷೆ ಲಕ್ಷ್ಮಿ ಸಿ.ಪಿ, ಕಾರ್ಯದರ್ಶಿ ಪ್ರತಿಭಾ ಪ್ರಸಾದ್, ಪ್ರವೀಣ, ಅಶ್ವಿನಿ, ದೀಪಶ್ರೀ, ಶಿಲ್ಪಾ ಉಮೇಶ್, ಕವಿತಾ ಪಣಿರಾಜ್, ಸ್ನೇಹಾ ಕಾರ್ತಿಕ್, ಗೌರಿ ದತ್ತ, ಸುಬ್ಬಲಕ್ಷ್ಮಿ, ಸುನಿತಾ ಪ್ರಸಾದ್, ಸಿಂಧು ಸಫರಂ ಮತ್ತು ವರ್ಲ್ಡ್‌ ಆರ್ಯವೈಶ್ಯ ಮಹಸಭಾ ಸದಸ್ಯರು ಉಪಸ್ಥಿತರಿದ್ದರು.

Continue Reading

ಲೈಫ್‌ಸ್ಟೈಲ್

Tips For Happy Mother: ತಾಯ್ತನವನ್ನು ಸಂಭ್ರಮಿಸಿ; ನಿರಂತರ ಸಂತೋಷವಾಗಿರಲು ಈ 10 ಅಭ್ಯಾಸಗಳನ್ನು ಪಾಲಿಸಿ

ತಾಯಂದಿರು ದೈನಂದಿನ ಜಂಜಾಟದಲ್ಲಿ ಸಿಕ್ಕಿಹಾಕಿಕೊಳ್ಳುವುದು ಮತ್ತು ಸ್ವಂತ ಸಂತೋಷವನ್ನು ಕಳೆದುಕೊಳ್ಳುವುದು ಸುಲಭ. ಈ ಸರಳ ಅಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ತಾಯಂದಿರು ಸಂತೋಷವನ್ನು (Tips For Happy Mother) ಬೆಳೆಸಿಕೊಳ್ಳಬಹುದು ಮತ್ತು ತಮಗಾಗಿ, ತಮ್ಮ ಮನೆಯವರಿಗಾಗಿ ತಾಯ್ತನದ ಸಂಪೂರ್ಣ ಅನುಭವವನ್ನು ಕೊಡಬಹುದು.

VISTARANEWS.COM


on

By

Tips For Happy Mother

ತಾಯಿತನ (Tips For Happy Mother) ಎನ್ನುವುದು ಅತ್ಯಂತ ಸುಂದರ ಅನುಭವ. ಆದರೆ ಇದರ ಜೊತೆಜೊತೆಗೆ ಬರುವ ಜವಾಬ್ದಾರಿಗಳು ಎಷ್ಟೋ ಬಾರಿ ಮಹಿಳೆಯರನ್ನು (mother) ಹೈರಾಣಾಗಿಸುತ್ತದೆ. ಒಂದು ಕಡೆ ಮಗುವಿನ (baby) ಸಂಪೂರ್ಣ ಜವಾಬ್ದಾರಿ ಹೊತ್ತು ಮನೆ ಕೆಲಸ, ಮನೆ ಮಂದಿಯ ಬೇಕು, ಬೇಡಗಳನ್ನು ನಿರ್ವಹಿಸುವುದು ಸುಲಭದ ಮಾತಲ್ಲ. ಇದರ ನಡುವೆ ಮಹಿಳೆ ತನ್ನ ಸಂತೋಷವನ್ನು ಕಳೆದುಕೊಂಡು ಬಿಡುತ್ತಾಳೆ. ಅವಳ ಜೀವನ ನೀರಸವಾಗುವುದು. ಅದು ಮುಂದೆ ಮೊತ್ತೊಂದು ಸಮಸ್ಯೆಗಳನ್ನು ತಂದೊಡ್ಡಬಹುದು.

ತಾಯಂದಿರು ದೈನಂದಿನ ಜಂಜಾಟದಲ್ಲಿ ಸಿಕ್ಕಿಹಾಕಿಕೊಳ್ಳುವುದು ಮತ್ತು ಸ್ವಂತ ಸಂತೋಷವನ್ನು ಕಳೆದುಕೊಳ್ಳುವುದು ಸುಲಭ. ಈ ಸರಳ ಅಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ತಾಯಂದಿರು ಸಂತೋಷವನ್ನು ಬೆಳೆಸಿಕೊಳ್ಳಬಹುದು ಮತ್ತು ತಮಗಾಗಿ, ತಮ್ಮ ಮನೆಯವರಿಗಾಗಿ ತಾಯ್ತನದ ಸಂಪೂರ್ಣ ಅನುಭವವನ್ನು ಕೊಡಬಹುದು.

ಸಂತೋಷವಾಗಿರುವ ತಾಯಿ ಮನೆಯನ್ನು ಸಂತೋಷವಾಗಿ ಇಡುತ್ತಾಳೆ ಎಂಬುದು ನೆನಪಿರಲಿ. ತಾಯ್ತನದ ಪ್ರಯಾಣಕ್ಕೆ ಸಂತೋಷ ಮತ್ತು ಯೋಗಕ್ಷೇಮವನ್ನು ತುಂಬಲು ಈ ಹತ್ತು ಸರಳ ಅಭ್ಯಾಸಗಳನ್ನು ಪಾಲಿಸಿ.


ನಿಮಗಾಗಿ ಸಮಯ

ನಿಮಗಾಗಿ ಸ್ವಲ್ಪ ಸಮಯವೂ ಸಹ ಪ್ರತಿದಿನ ದೊಡ್ಡ ವ್ಯತ್ಯಾಸವನ್ನು ಮಾಡಬಹುದು. ಪುಸ್ತಕವನ್ನು ಓದಿ, ವಿಶ್ರಾಂತಿ, ಸ್ನಾನ ಮಾಡಿ ಅಥವಾ ಸ್ನೇಹಿತರೊಂದಿಗೆ ಕಾಫಿಯನ್ನು ಆನಂದಿಸಿ. ಇದು ನಿಮ್ಮ ಕುಟುಂಬಕ್ಕೆ ನಿಮ್ಮ ತಾಳ್ಮೆ ಮತ್ತು ಶಕ್ತಿಯ ಇಂಧನವಾಗಿರುತ್ತದೆ. ಒತ್ತಡದ ಕರ್ತವ್ಯಗಳಿಂದ ಸ್ವಲ್ಪ ಸಮಯ ದೂರವಿರುವುದು ಮನಸ್ಸಿಗೆ ಒಳ್ಳೆಯದು.

ಉತ್ಸಾಹ ಕಂಡುಕೊಳ್ಳಿ

ಮಾತೃತ್ವವು ನಿಮ್ಮ ಉತ್ಸಾಹವನ್ನು ನಂದಿಸಲು ಬಿಡಬೇಡಿ. ಹವ್ಯಾಸವನ್ನು ಅನುಸರಿಸಿ, ಹೊಸ ಕೌಶಲವನ್ನು ಕಲಿಯಿರಿ ಅಥವಾ ನೀವು ಕಾಳಜಿ ವಹಿಸುವ ಕಾರಣಕ್ಕಾಗಿ ಸ್ವಯಂ ಸೇವಕರಾಗಿರಿ. ಮಾತೃತ್ವದ ಹೊರಗೆ ಹೊಂದಿರುವ ಅನನ್ಯ ಆಸಕ್ತಿಗಳನ್ನು, ಅವಕಾಶಗಳನ್ನು ಹುಡುಕಿ. ಇದು ನಿಮ್ಮನ್ನು ನಿರಂತರ ಸಂತೋಷವಾಗಿರುವಂತೆ ಮಾಡುತ್ತದೆ.

ಸರಳ ವಿಷಯಗಳಿಗೆ ಕೃತಜ್ಞತೆ ಸಲ್ಲಿಸಿ

ಮಗುವಿನ ನಗು, ಬೆಚ್ಚಗಿನ ಅಪ್ಪುಗೆ ಮತ್ತು ರುಚಿಕರವಾದ ಊಟದಂತಹ ಚಿಕ್ಕ ವಿಷಯಗಳನ್ನು ಪ್ರಶಂಸಿಸಲು ಪ್ರತಿದಿನ ಸ್ವಲ್ಪ ಸಮಯ ತೆಗೆದುಕೊಳ್ಳಿ. ಕೃತಜ್ಞತೆಯು ಸಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸುತ್ತದೆ ಮತ್ತು ಮಾತೃತ್ವದ ಸಂತೋಷವನ್ನು ಆನಂದಿಸಲು ನಿಮಗೆ ಸಹಾಯ ಮಾಡುತ್ತದೆ. ಜೀವನವು ತರುವ ಪ್ರೀತಿಯನ್ನು ಪ್ರಶಂಸಿಸಲು ಈ ವಿಷಯಗಳು ನಿಮಗೆ ಸಹಾಯ ಮಾಡುತ್ತವೆ!

ನಿದ್ರೆಗೆ ಆದ್ಯತೆ ನೀಡಿ

ನಿದ್ರಾಹೀನತೆಯು ಸಂತೋಷದ ಕೊಲೆಗಾರ. ಸ್ಥಿರವಾದ ನಿದ್ರೆಯ ವೇಳಾಪಟ್ಟಿಯನ್ನು ಗುರಿಯಾಗಿರಿಸಿಕೊಳ್ಳಿ, ಕೆಲವೊಮ್ಮೆ ಮಕ್ಕಳಿಗಿಂತ ಮುಂಚೆಯೇ ಮಲಗುವುದು ಎಂದರ್ಥ. ಉತ್ತಮ ನಿದ್ದೆ ಮಾಡುವುದರಿಂದ ತಾಯಂದಿರಿಗೆ ಬಹು ಮುಖ್ಯವಾಗಿರುತ್ತದೆ. ಇದರಿಂದ ಎಲ್ಲರನ್ನು ಉತ್ತಮವಾಗಿ ನೋಡಿಕೊಳ್ಳಲು ಹೆಚ್ಚು ತಾಳ್ಮೆಯನ್ನು ನಿಮ್ಮಲ್ಲಿ ಬೆಳೆಸುತ್ತದೆ.

ಸಂಬಂಧಗಳನ್ನು ಪೋಷಿಸಿ

ಸ್ನೇಹಿತರು ಮತ್ತು ಕುಟುಂಬದೊಂದಿಗೆ ಬಲವಾದ ಸಂಪರ್ಕಗಳು ಭಾವನಾತ್ಮಕ ಬೆಂಬಲ ಮತ್ತು ಸೇರಿದ ಭಾವನೆಯನ್ನು ನೀಡುತ್ತದೆ. ಮಗುವನ್ನು ನೋಡಿಕೊಳ್ಳಲು ಅಮ್ಮಂದಿರು ತಮ್ಮ ಸ್ನೇಹವನ್ನು ಕಳೆದುಕೊಳ್ಳುವುದು ತುಂಬಾ ಸುಲಭ. ಪ್ರೀತಿಪಾತ್ರರ ಜೊತೆಗೆ ಸಂಪರ್ಕದಲ್ಲಿರಲು ನಿಯಮಿತ ಪ್ರವಾಸಗಳು, ಫೋನ್ ಕರೆಗಳು ಅಥವಾ ವಿಡಿಯೋ ಚಾಟ್‌ಗಳನ್ನು ಮಾಡಿ.

ಅಪೂರ್ಣತೆಗಳನ್ನು ಸ್ವೀಕರಿಸಿ

ಚಿತ್ರ ಪರಿಪೂರ್ಣ ಜೀವನಕ್ಕಾಗಿ ಶ್ರಮಿಸಬೇಡಿ. ಗೊಂದಲಮಯ ಕ್ಷಣಗಳು, ಕೋಪೋದ್ರೇಕಗಳು ಜೀವನದಲ್ಲಿ ಇದ್ದೇ ಇರುತ್ತದೆ. ಒಳ್ಳೆಯ ತಾಯಿಯಾಗಿರುವುದು ಪರಿಪೂರ್ಣವಾಗಿರುವುದು ಎಂದರ್ಥವಲ್ಲ ಎಂಬುದನ್ನು ಒಪ್ಪಿಕೊಳ್ಳಿ. ಗೊಂದಲದಲ್ಲಿ ನಗುವುದನ್ನು ಕಲಿಯಿರಿ ಮತ್ತು ಪ್ರಯಾಣವನ್ನು ಆನಂದಿಸಿ.

ವ್ಯಾಯಾಮ

ವ್ಯಾಯಾಮವು ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ ಮತ್ತು ನೈಸರ್ಗಿಕ ಮೂಡ್ ಬೂಸ್ಟರ್‌ಗಳನ್ನು ನೀಡುತ್ತದೆ. ಚುರುಕಾದ ನಡಿಗೆ, ನೃತ್ಯ ತರಗತಿ ಅಥವಾ ಯೋಗ ಸೆಶನ್ ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರಿಂದ ಮಾನಸಿಕ ಯೋಗಕ್ಷೇಮವೂ ಸುಧಾರಿಸುತ್ತದೆ.

ಸಹಾನುಭೂತಿ

ನಿಮ್ಮ ಮೇಲೆ ನಿನಗೆ ಅನುಕಂಪವಿರಲಿ. ನಿಮ್ಮ ತಪ್ಪುಗಳಿಗಾಗಿ ನಿಮ್ಮನ್ನು ಕ್ಷಮಿಸಿ. ನಿಮ್ಮ ಸಾಧನೆಗಳನ್ನು ಸಂಭ್ರಮಿಸಿ. ನಿಮ್ಮ ಸವಾಲುಗಳನ್ನು ಒಪ್ಪಿಕೊಳ್ಳಿ. ಅತಿಯಾಗಿ ಸ್ವಯಂ-ವಿಮರ್ಶಾತ್ಮಕವಾಗಿರುವುದು ನಿಮ್ಮನ್ನು ಪ್ರೇರೇಪಿಸದಂತೆ ಮತ್ತು ಕೆಟ್ಟದಾಗಿ, ಅಸಂತೋಷಿತರನ್ನಾಗಿ ಮಾಡಬಹುದು. ಯಾವುದೇ ಕೆಲಸವಿರಲಿ ನಿಮ್ಮ ಕೈಲಾದಷ್ಟು ಮಾಡಿದರೆ ಸಾಕು. ಅಗತ್ಯವಿದ್ದಾಗ ಬೇರೆಯವರ ಸಹಾಯ ಪಡೆಯಲು ಹಿಂಜರಿಯಬೇಡಿ.


ಇದನ್ನೂ ಓದಿ: 12 Tips for Better Life: ನಿಮ್ಮ ಬದುಕು ಬದಲಾಗಬೇಕೇ?; ಈ 12 ಸೂತ್ರಗಳನ್ನು ಶಿಸ್ತಾಗಿ ಪಾಲಿಸಿ!

ಗಡಿ ಗುರುತಿಸಿ

ಬೇಡ ಎಂದರೂ ಪರವಾಗಿಲ್ಲ ಎಲ್ಲವನ್ನೂ ತೆಗೆದುಕೊಳ್ಳುವ ಜವಾಬ್ದಾರಿ ಹೊತ್ತುಕೊಳ್ಳಬೇಡಿ. ಗಡಿಗಳನ್ನು ಹೊಂದಿಸುವುದು ನಿಮ್ಮ ಸಮಯ ಮತ್ತು ಶಕ್ತಿಯನ್ನು ರಕ್ಷಿಸುತ್ತದೆ. ನೀವು ನಿಮ್ಮ ಮಕ್ಕಳೊಂದಿಗೆ ಇರುವಾಗ ನೀವು ಸಂಪೂರ್ಣವಾಗಿ ಇರಲು ಅನುವು ಮಾಡಿಕೊಡುತ್ತದೆ.

ಅಗತ್ಯವಿದ್ದರೆ ಬೆಂಬಲವನ್ನು ಪಡೆಯಿರಿ

ಅಗತ್ಯವಿರುವಾಗ ಸಹಾಯವನ್ನು ಕೇಳಲು ಹಿಂಜರಿಯದಿರಿ. ನಿಮ್ಮ ಸಂಗಾತಿ, ಕುಟುಂಬ, ಸ್ನೇಹಿತರು ಅಥವಾ ಚಿಕಿತ್ಸಕರೊಂದಿಗೆ ಮಾತನಾಡಿ. ಬೆಂಬಲ ವ್ಯವಸ್ಥೆಯನ್ನು ಹೊಂದಿರುವುದು ಮಾತೃತ್ವದ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ ಮತ್ತು ಸಮುದಾಯದ ಪ್ರಜ್ಞೆಯನ್ನು ಬೆಳೆಸುತ್ತದೆ.

Continue Reading
Advertisement
Latest17 minutes ago

ಮೇ 15ಕ್ಕೆ ಸಿಗುತ್ತಾ ಗುಡ್​ ನ್ಯೂಸ್?​ ಸಂಭ್ರಮಾಚರಣೆ ಬೇಡವೆಂದು ಬೆಂಬಲಿಗರಿಗೆ ಖಡಕ್​ ಸೂಚನೆ! ಡಿ ಕೆ ಬ್ರದರ್ಸ್‌ ಪ್ಲ್ಯಾನ್‌ಗೆ ಟಕ್ಕರ್‌ ಕೊಡ್ತಾರಾ ಸಿಎಂ

Latest45 minutes ago

ಮುಂದೆ ಕಾದಿದೆ ಘೋರ ವಿಪತ್ತು: ಹವಾಮಾನ ವೈಪರಿತ್ಯ, ಅನ್ನ-ನೀರಿಗೂ ಹಾಹಾಕಾರ! ಕೋಡಿ ಶ್ರೀಗಳ ಭಯಾನಕ ಭವಿಷ್ಯಕ್ಕೆ ನಡುಗಿದ ನಾಡು

Latest1 hour ago

ಮುಂದಿನ ಪಂದ್ಯದಿಂದ ‘ಯಂಗ್ ಸೆನ್ಸೇಷನ್’ ಔಟ್? ವೈಭವ್ ಸೂರ್ಯವಂಶಿ ಬಗ್ಗೆ ಕೋಚ್ ಕೊಟ್ಟ ಅಪ್ಡೇಟ್ ಏನು?

Latest2 hours ago

ಅಧ್ಯಕ್ಷ ಹುದ್ದೆ ಇಷ್ಟು ಡೇಂಜರ್ ಅಂತ ಗೊತ್ತಿರಲಿಲ್ಲ!”: ಗುಂಡಿನ ದಾಳಿಯಿಂದ ಬಚಾವಾದ ಬೆನ್ನಲ್ಲೇ ಟ್ರಂಪ್ ವ್ಯಂಗ್ಯ

Latest3 hours ago

ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಹೊಸ ಬಲ: ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಿದ ಶಿಕ್ಷಣ ಇಲಾಖೆ

Latest3 hours ago

‘ಟಾಕ್ಸಿಕ್’ ಬೋಲ್ಡ್ ದೃಶ್ಯದ ವಿವಾದಕ್ಕೆ ರಾಕಿಂಗ್ ಸ್ಟಾರ್ ಖಡಕ್ ರಿಯಾಕ್ಷನ್: ಟೀಕಾಕಾರರಿಗೆ ತಮ್ಮದೇ ಸ್ಟೈಲ್‌ನಲ್ಲಿ ಉತ್ತರ ಕೊಟ್ಟ ಯಶ್

Latest3 hours ago

ಬದುಕು ಸುಂದರವಾಗಿರಲು ಮದುವೆ-ಮಕ್ಕಳೇ ಬೇಕಿಲ್ಲ! ವೈಯಕ್ತಿಕ ಜೀವನದ ಬಗ್ಗೆ ನಿತ್ಯಾ ಮೆನನ್ ಹಂಚಿಕೊಂಡ ಮನದಾಳದ ಮಾತು

Latest4 hours ago

ಆರ್‌ಸಿಬಿ ಪ್ಲೇಯಿಂಗ್ 11 ಅಪ್‌ಡೇಟ್: ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಇಬ್ಬರು ಸ್ಟಾರ್ ಆಟಗಾರರು ಡೌಟ್?

Latest5 hours ago

ಬಿಗಿ ಭದ್ರತೆಯ ನಡುವೆಯೂ ಟ್ರಂಪ್ ಪಾರ್ಟಿಗೆ ಅತಿಥಿಯಂತೆ ಬಂದಿದ್ದ ದಾಳಿಕೋರ! ಸೀಕ್ರೆಟ್ ಸರ್ವಿಸ್ ಕಣ್ಣು ತಪ್ಪಿಸಿದ್ದು ಹೇಗೆ?

ಕರ್ನಾಟಕ6 hours ago

ಹುಬ್ಬಳ್ಳಿಯಲ್ಲಿ ವಾರದಲ್ಲಿ ಮೂರನೇ ಬಾರಿ ವಿಮಾನ ಲ್ಯಾಂಡಿಂಗ್ ಸಮಸ್ಯೆ; ಕೂದಲೆಳೆ ಅಂತರದಲ್ಲಿ ಪಾರಾದ ಪ್ರಯಾಣಿಕರು

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌