Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು - Vistara News

ವಾಣಿಜ್ಯ

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

ಭಾರತದಿಂದ 2022-23ರಲ್ಲಿ ಒಟ್ಟು 85,000 ಕೋಟಿ ರೂ. ಮೌಲ್ಯದ ಮೊಬೈ;ಲ್‌ ಫೋನ್‌ ರಫ್ತಾಗಿದೆ. ಕೇಂದ್ರ ಸರ್ಕಾರ ಸ್ಥಳೀಯ ಉತ್ಪಾದನೆಗೆ ಉತ್ತೇಜನ ನೀಡುತ್ತಿರುವುದು ಸಕಾರಾತ್ಮಕ (Mobile export) ಪ್ರಭಾವ ಬೀರಿದೆ.

VISTARANEWS.COM


on

smartphone
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಭಾರತದಿಂದ 2022-23ರಲ್ಲಿ ಒಟ್ಟು 85,000 ಕೋಟಿ ರೂ. ಮೌಲ್ಯದ (Mobile Export) ಮೊಬೈಲ್‌ ಹ್ಯಾಂಡ್‌ಸೆಟ್‌ ರಫ್ತಾಗಿದೆ ಎಂದು ಶನಿವಾರ ಬಿಡುಗಡೆಯಾದ ಇಂಡಿಯಾ ಸೆಲ್ಯುಲಾರ್‌ & ಎಲೆಕ್ಟ್ರಾನಿಕ್ಸ್‌ ಅಸೋಸಿಯೇಶನ್‌ನ (India Cellular and Electronics Association) ಅಂಕಿ ಅಂಶಗಳು ತಿಳಿಸಿವೆ.

ಕಳೆದ 2021-22ರ ಸಾಲಿನಲ್ಲಿ 46,980 ಕೋಟಿ ರೂ. ಮೌಲ್ಯದ ಮೊಬೈಲ್‌ ಹ್ಯಾಂಡ್‌ಸೆಟ್‌ ರಫ್ತಾಗಿತ್ತು. ಉತ್ಪಾದಕರು ಮೊಬೈಲ್‌ ಉತ್ಪಾದನೆ ಮತ್ತು ರಫ್ತನ್ನು ವೃದ್ಧಿಸಿರುವುದು ಇದಕ್ಕೆ ಕಾರಣ. ಸ್ಥಳೀಯವಾಗಿ ಮೊಬೈಲ್‌ ಫೋನ್‌ ಉತ್ಪಾದನೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಉಪಕ್ರಮಗಳು (production linked incentive) ಫಲ ನೀಡುತ್ತಿವೆ. ಆ್ಯಪಲ್‌ನ ಉತ್ಪಾದನೆಯಲ್ಲಿ ಉಂಟಾಗಿರುವ ಹೆಚ್ಚಳ, ಸ್ಯಾಮ್‌ಸಂಗ್‌ ಸೇರಿದಂತೆ ಇತರ ಕಂಪನಿಗಳೂ ಹ್ಯಾಂಡ್‌ ಸೆಟ್‌ ಉತ್ಪಾದನೆಯನ್ನು ಹೆಚ್ಚಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಭಾರತ 2027ರ ವೇಳೆಗೆ ಐಫೋನ್‌ನ 47% ಪಾಲನ್ನು ತಯಾರಿಸುವ ನಿರೀಕ್ಷೆ ಇದೆ.

ರಾಜ್ಯಗಳಲ್ಲಿ ಎಲೆಕ್ಟ್ರಾನಿಕ್ಸ್‌ ಉತ್ಪಾದನೆಯನ್ನು ಹೆಚ್ಚಿಸಲು ಎಲ್ಲ ರಾಜ್ಯಗಳ ಐಟಿ ಸಚಿವರುಗಳ ಜತೆಗೆ ಮಾಹಿತಿ ತಂತ್ರಜ್ಞಾನ ಇಲಾಖೆಯ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು ನಿಯಮಿತವಾಗಿ ಸಭೆ ನಡೆಸುತ್ತಿದ್ದಾರೆ.

ಭಾರತವು ಮೊಬೈಲ್‌ ಫೋನ್‌ಗಳನ್ನು ಯುಎಇ, ಅಮೆರಿಕ, ನೆದರ್ಲೆಂಡ್‌, ಬ್ರಿಟನ್‌, ಇಟಲಿಗೆ ರಫ್ತು ಮಾಡುತ್ತಿದೆ ಎಂದು ಐಸಿಇಎ ವರದಿ ತಿಳಿಸಿದೆ. ಭಾರತದಲ್ಲಿ ಮಾರಾಟವಾಗುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ 97% ಸ್ಥಳೀಯವಾಗಿ ಉತ್ಪಾದನೆಯಾಗುತ್ತಿವೆ. ಜಗತ್ತಿನಲ್ಲಿಯೇ ಎರಡನೇ ಅತಿ ದೊಡ್ಡ ಮೊಬೈಲ್‌ ಉತ್ಪಾದಕ ಈಗ ಭಾರತವಾಗಿದೆ.

2023ರಲ್ಲಿ ಭಾರತವು 1 ಲಕ್ಷ ಕೋಟಿ ಸ್ಮಾರ್ಟ್‌ ಫೋನ್‌ಗಳನ್ನು ರಫ್ತು ಮಾಡಿ ಹೊಸ ದಾಖಲೆ ಸೃಷ್ಟಿಸಲಿದೆ ಎಂದು ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ ಖಾತೆಯ ಸಹಾಯಕ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ. ಸ್ಮಾರ್ಟ್‌ಫೋನ್‌ ಪೂರೈಕೆಯ ಸರಣಿ ಚೀನಾದಿಂದ ಸ್ಥಳಾಂತರವಾಗುವುದರ ಪ್ರಯೋಜನವನ್ನು ಭಾರತ ಮತ್ತು ವಿಯೆಟ್ನಾಂ ಪಡೆಯಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

MDH, Everest Spices: ಎವರೆಸ್ಟ್‌, ಎಂಡಿಎಚ್‌ ಮಸಾಲೆ ಪೌಡರ್‌ಗಳ ಮಾಹಿತಿ ಸಂಗ್ರಹಕ್ಕೆ ಮುಂದಾದ ಅಮೆರಿಕ

MDH, Everest Spices: ಕ್ಯಾನ್ಸರ್ ಉಂಟು ಮಾಡುವ ಕೀಟ ನಾಶಕವನ್ನು ಒಳಗೊಂಡಿದೆ ಎಂಬ ಆರೋಪದ ನಂತರ ಜನಪ್ರಿಯ ಭಾರತೀಯ ಮಸಾಲೆ ಬ್ರ್ಯಾಂಡ್‌ಗಳಾದ ಎಂಡಿಎಚ್ ಮತ್ತು ಎವರೆಸ್ಟ್ ಗ್ರೂಪ್‌ನ ಉತ್ಪನ್ನಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಅಮೆರಿಕ ಮುಂದಾಗಿದೆ. ಉತ್ಪನ್ನಗಳನ್ನು ಸಿಂಗಾಪುರ, ಹಾಂಗ್ ಕಾಂಗ್ ನಿಷೇಧಿಸಿದ ನಂತರ ಈ ಬೆಳವಣಿಕೆ ಕಂಡು ಬಂದಿದೆ. ಫುಡ್ ಆ್ಯಂಡ್‌ ಡ್ರಗ್ ಅಡ್ಮಿನಿಸ್ಟ್ರೇಷನ್ ಪರಿಸ್ಥಿತಿಯ ಬಗ್ಗೆ ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

MDH, Everest Spices
Koo

ವಾಷಿಂಗ್ಟನ್‌: ಕ್ಯಾನ್ಸರ್ ಉಂಟು ಮಾಡುವ ಕೀಟ ನಾಶಕವನ್ನು ಒಳಗೊಂಡಿದೆ ಎಂಬ ಆರೋಪದ ನಂತರ ಜನಪ್ರಿಯ ಭಾರತೀಯ ಮಸಾಲೆ ಬ್ರ್ಯಾಂಡ್‌ಗಳಾದ ಎಂಡಿಎಚ್ ಮತ್ತು ಎವರೆಸ್ಟ್ ಗ್ರೂಪ್‌ನ ಉತ್ಪನ್ನ (MDH, Everest Spices)ಗಳ ಮಾರಾಟವನ್ನು ಸಿಂಗಾಪುರ, ಹಾಂಗ್ ಕಾಂಗ್ ನಿಷೇಧಿಸಿದ್ದು, ಇದೀಗ ಅಮೆರಿಕವೂ ಕ್ರಮಕ್ಕೆ ಮುಂದಾಗಿದೆ. ಅಮೆರಿಕದ ಫುಡ್ ಆ್ಯಂಡ್‌ ಡ್ರಗ್ ಅಡ್ಮಿನಿಸ್ಟ್ರೇಷನ್ (Food and Drug Administration) ಎಂಡಿಎಚ್ ಮತ್ತು ಎವರೆಸ್ಟ್‌ ಉತ್ಪನ್ನಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದೆ.

“ಎಫ್‌ಡಿಎ ಪರಿಸ್ಥಿತಿಯ ಬಗ್ಗೆ ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸುತ್ತಿದೆ” ಎಂದು ವಕ್ತಾರರು ತಿಳಿಸಿದ್ದಾರೆ. ಭಾರತ ಸೇರಿ ಜಗತ್ತಿನೆಲ್ಲೆಡೆ ಖ್ಯಾತಿ ಗಳಿಸಿರುವ ಎಂಡಿಎಚ್‌ನ ಮೂರು ಮಸಾಲಾ ಪದಾರ್ಥಗಳು ಹಾಗೂ ಎವರೆಸ್ಟ್‌ನ ಒಂದು ಮಸಾಲಾ ಪದಾರ್ಥದಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಕಾರ್ಸಿನೋಜೆನಿಕ್‌ ರಾಸಾಯನಿಕ ಇರುವ ಕಾರಣ ಹಾಂಕಾಂಗ್‌ ಆಹಾರ ನಿಯಂತ್ರಣ ಪ್ರಾಧಿಕಾರವು ನಾಲ್ಕೂ ಉತ್ಪನ್ನಗಳ ಮಾರಾಟವನ್ನು ಇತ್ತೀಚೆಗೆ ನಿಷೇಧಿಸಿತ್ತು. ಎಂಡಿಎಚ್‌ನ ಕರಿ ಪೌಡರ್‌, ಮಿಕ್ಸ್ಡ್‌ ಮಸಾಲಾ ಪೌಡರ್‌ ಹಾಗೂ ಸಾಂಬಾರ್‌ ಮಸಾಲಾ ಮತ್ತು ಎವರೆಸ್ಟ್‌ನ ಫಿಶ್‌ ಕರಿ ಮಸಾಲಾವನ್ನು ನಿಷೇಧಿತ ಉತ್ಪನ್ನಗಳು.

ವಿವಾದದ ಬಳಿಕ ಎವರೆಸ್ಟ್ ಸಂಸ್ಥೆ ಪ್ರತಿಕ್ರಿಯಿಸಿ, ʼʼತನ್ನ ಮಸಾಲೆಗಳು ಸೇವನೆಗೆ ಸುರಕ್ಷಿತʼʼ ಎಂದು ಹೇಳಿದೆ. ಆದರೆ ಎಂಡಿಎಚ್ ಇದುವರೆಗೆ ತನ್ನ ಉತ್ಪನ್ನಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಕಂಪನಿಗಳ ಉತ್ಪನ್ನಗಳನ್ನು ಅಮೆರಿಕ, ಯುರೋಪ್‌, ಇಂಗ್ಲೆಂಡ್‌ ಮತ್ತು ಮಧ್ಯಪ್ರಾಚ್ಯ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಇತ್ತ ಎಂಡಿಎಚ್ ಮತ್ತು ಎವರೆಸ್ಟ್ ಗ್ರೂಪ್‌ನ ಉತ್ಪನ್ನಗಳ ಗುಣಮಟ್ಟ ತಪಾಸಣೆಗೆ ಭಾರತೀಯ ಆಹಾರ ಸುರಕ್ಷತಾ ನಿಯಂತ್ರಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಸೋಮವಾರ ಆದೇಶ ಹೊರಡಿಸಿದೆ.

ʼʼಹಾಂಕಾಂಗ್ ಮತ್ತು ಸಿಂಗಾಪುರದ ಅಧಿಕಾರಿಗಳಿಂದ ಎಂಡಿಎಚ್ ಮತ್ತು ಎವರೆಸ್ಟ್ ಉತ್ಪನ್ನಗಳ ರಫ್ತು ಬಗ್ಗೆ ಮಾಹಿತಿ ಕೋರಲಾಗಿದೆ. ಗುಣಮಟ್ಟದ ಸಮಸ್ಯೆಗಳ ಮೂಲ ಕಾರಣವನ್ನು ಕಂಡುಹಿಡಿಯಲು ಕಂಪನಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆʼʼ ಎಂದು ಭಾರತದ ಮಸಾಲೆ ಮಂಡಳಿ ಬುಧವಾರ ತಿಳಿಸಿದೆ.

ಇದನ್ನೂ ಓದಿ: Pesticide: ಎವರೆಸ್ಟ್‌ ಫಿಶ್‌ ಕರಿ ಮಸಾಲೆಯಲ್ಲಿ ಕೀಟನಾಶಕ; ಬ್ಯಾನ್‌ ಮಾಡಿದ ಸಿಂಗಾಪುರ

ಏನಿದು ವಿವಾದ?

ಕೆಲವು ದಿನಗಳ ಹಿಂದೆ ಭಾರತದ ಜನಪ್ರಿಯ ಉತ್ಪನ್ನವಾದ ಮಸಾಲೆ ತಯಾರಕ ಎವರೆಸ್ಟ್‌ನ ಫಿಶ್ ಕರಿ ಮಸಾಲಾವನ್ನು ಹಿಂಪಡೆಯಲು ಸಿಂಗಾಪುರ ಆದೇಶಿಸಿತ್ತು. ಇದರಲ್ಲಿ ಸುರಕ್ಷಿತ ಮಿತಿಯನ್ನು ಮೀರಿ ಕೀಟನಾಶಕ ಎಥಿಲೀನ್ ಆಕ್ಸೈಡ್ ಇದೆ ಎಂದು ಅದು ಆರೋಪಿಸಿತ್ತು. ಅನುಮತಿಸಲಾದ ಮಿತಿಯನ್ನು ಮೀರಿದ ಮಟ್ಟದಲ್ಲಿ ಫಿಶ್‌ ಕರಿ ಮಸಾಲಾದಲ್ಲಿ ಎಥಿಲೀನ್ ಆಕ್ಸೈಡ್ ಕೀಟನಾಶಕವಿದೆ. ಎಥಿಲೀನ್ ಆಕ್ಸೈಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿಸಲಾಗಿಲ್ಲ. ಕೃಷಿ ಉತ್ಪನ್ನಗಳ ಫ್ಯುಮಿಗೇಶನ್‌ ವೇಳೆ ಸೂಕ್ಷ್ಮಜೀವಿ ಮಾಲಿನ್ಯವನ್ನು ತಡೆಗಟ್ಟಲು ಮಾತ್ರ ಅದನ್ನು ಬಳಸಲಾಗುತ್ತದೆ ಎಂದು ಕಾರಣ ತಿಳಿಸಿತ್ತು. ಅದಾದ ಬಳಿಕ ಹಾಂಕಾಂಗ್‌ನಲ್ಲೂ ಎಂಡಿಎಚ್‌ ಹಾಗೂ ಎವರೆಸ್ಟ್‌ ಮಸಾಲಾ ಪದಾರ್ಥಗಳ ಮಾರಾಟವನ್ನು ನಿಷೇಧಿಸಲಾಗಿತ್ತು. ಹಾಗಾಗಿ ಜಾಗತಿಕವಾಗಿ ಭಾರತದ ಎರಡು ಮಸಾಲಾ ಬ್ರ್ಯಾಂಡ್‌ಗಳು ನಕಾರಾತ್ಮಕ ಕಾರಣಕ್ಕಾಗಿ ಸುದ್ದಿಯಾಗಿವೆ.

Continue Reading

ಮನಿ-ಗೈಡ್

Money Guide: ಕಿಸಾನ್‌ ಸಮ್ಮಾನ್‌ ನಿಧಿಯ 17ನೇ ಕಂತು ಬಿಡುಗಡೆಗೆ ದಿನಗಣನೆ; ನಗದು ಜಮೆ ಯಾವಾಗ?

Money Guide: ದೇಶದಲ್ಲಿನ ಸಣ್ಣ ಮತ್ತು ಅತಿ ಸಣ್ಣ ಕೃಷಿಕರಿಗೆ ನೆರವಾಗುವ ಉದ್ದೇಶದಿಂದ ಪ್ರಧಾನ್‌ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯನ್ನು ಕೇಂದ್ರ ಸರ್ಕಾರ 2೦19ರಲ್ಲಿ ಜಾರಿಗೆ ತಂದಿದೆ. ಅದರಂತೆ ಪ್ರತಿ ವರ್ಷ ರೈತರ ಖಾತೆಗೆ 3 ಕಂತುಗಳಲ್ಲಿ 6,000 ರೂ. ಜಮೆ ಮಾಡಲಾಗುತ್ತದೆ. ಸದ್ಯ 16 ಕಂತುಗಳನ್ನು ಯಶಸ್ವಿಯಾಗಿ ಜಮೆ ಮಾಡಲಾಗಿದೆ. ಮುಂದಿನ ತಿಂಗಳು 17ನೇ ಕಂತು ಬಿಡಿಗಡೆಯಾಗುವ ನಿರೀಕ್ಷೆ ಇದೆ. ಸದ್ಯ ದಿನಾಂಕ ನಿಗಡಿಪಡಿಸಿಲ್ಲ. ಯಾವುದೇ ಕ್ಷಣದಲ್ಲಿ ದಿನಾಂಕ ಘೋಷಣೆಯಾಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

Money Guide
Koo

ನವದೆಹಲಿ: ದೇಶದ ಕೃಷಿಕರಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನ್‌ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ (PM Kisan Samman Nidhi Yojana)ಯನ್ನು 2೦19ರಲ್ಲಿ ಜಾರಿಗೆ ತಂದಿದೆ. ಈ ಯೋಜನೆ ಮೂಲಕ ಪ್ರತಿ ವರ್ಷ ರೈತರ ಖಾತೆಗೆ 3 ಕಂತುಗಳಲ್ಲಿ 6,000 ರೂ. ಜಮೆ ಮಾಡಲಾಗುತ್ತದೆ. ಸದ್ಯ ಈ ಯೋಜನೆಯ 17ನೇ ಕಂತು ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಹಾಗಾದರೆ ಯಾವಾಗ ಹಣ ಜಮೆ ಆಗಲಿದೆ ಎನ್ನುವ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಫೆಬ್ರವರಿ 28ರಂದು ಫಲಾನುಭವಿ ಕೃಷಿಕರ ಖಾತೆಗೆ ಕಿಸಾನ್‌ ಸಮ್ಮಾನ್‌ ಯೋಜನೆಯ 16ನೇ ಕಂತು ಬಿಡುಗಡೆ ಮಾಡಲಾಗಿತ್ತು. ದೇಶಾದ್ಯಂತದ 9 ಕೋಟಿಗಿಂತ ಅಧಿಕ ಫಲಾನುಭವಿಗಳ ಖಾತೆಗೆ ಅಂದು ಸುಮಾರು 21,000 ಕೋಟಿ ರೂ. ಜಮೆ ಮಾಡಲಾಗಿತ್ತು. ಸದ್ಯ 17ನೇ ಕಂತು ಬಿಡುಗಡೆಯಾಗಬೇಕಿದೆ.

17ನೇ ಕಂತು ಯಾವಾಗ?

17ನೇ ಕಂತು ಮೇಯಲ್ಲಿ ಬಿಡುಗಡೆಯಾಗಲಿದೆ. ಆದರೆ ದಿನಾಂಕ ನಿಗಡಿಪಡಿಸಿಲ್ಲ. ಯಾವುದೇ ಕ್ಷಣದಲ್ಲಿ ದಿನಾಂಕ ಘೋಷಣೆಯಾಗುವ ನಿರೀಕ್ಷೆ ಇದೆ.

3 ಕಂತುಗಳಲ್ಲಿ ಪಾವತಿ

ಪಿಎಂ-ಕಿಸಾನ್ ಸಮ್ಮಾನ್‌ ಯೋಜನೆಯ ಹಣವನ್ನು ನಾಲ್ಕು ತಿಂಗಳಿಗೊಮ್ಮೆ 2,000 ರೂ.ಗಳಂತೆ ವರ್ಷಕ್ಕೆ 3 ಬಾರಿ ಪಾವತಿಸಲಾಗುತ್ತದೆ. ಎಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್ ಎಂಬ ಮೂರು ಕಂತುಗಳಲ್ಲಿ ಹಣವನ್ನು ಒದಗಿಸಲಾಗುತ್ತದೆ. ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ದೇಶದ ಸಣ್ಣ ಮತ್ತು ಅತಿ ಸಣ್ಣ ಕೃಷಿಕರಿಗೆ ಈ ಯೋಜನೆ ನೆರವಾಗುತ್ತಿದೆ.

ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ ಹೆಸರು ನೋಂದಾಯಿಸುವ ವಿಧಾನ

  • ಅಧಿಕೃತ ವೆಬ್‌ಸೈಟ್‌ pmkisan.gov.in ಭೇಟಿ ನೀಡಿ
  • ‘New Farmer Registration’ ಆಯ್ಕೆ ಮೇಲೆ ಕ್ಲಿಕ್‌ ಮಾಡಿ ಮತ್ತು ಆಧಾರ್‌ ಕಾರ್ಡ್‌ ನಂಬರ್‌ ನಮೂದಿಸಿ ಕ್ಯಾಪ್ಚ ಕೋಡ್‌ ಭರ್ತಿ ಮಾಡಿ.
  • ಅಗತ್ಯ ಮಾಹಿತಿ ತುಂಬಿ ‘Yes’ ಬಟನ್‌ ಕ್ಲಿಕ್‌ ಮಾಡಿ.
  • ಅರ್ಜಿ ಫಾರಂ ತುಂಬಿ, ಸೇವ್‌ ಮಾಡಿ ಭವಿಷ್ಯದ ಅಗತ್ಯಗಳಿಗಾಗಿ ಪ್ರಿಂಟ್‌ ಔಟ್‌ ತೆಗೆದಿಡಿ.

ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವ ವಿಧಾನ

  • ಅಧಿಕೃತ ವೆಬ್‌ಸೈಟ್‌ www.pmkisan.gov.inಗೆ ಭೇಟಿ ನೀಡಿ.
  • ಆಗ ತೆರೆದುಕೊಳ್ಳುವ ಪುಟದಲ್ಲಿನ ‘Beneficiary list’ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ.
  • ನಿಮ್ಮ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್‌ ಮತ್ತು ಗ್ರಾಮವನ್ನು ಆಯ್ಕೆ ಮಾಡಿ.
  • ‘Get report’ ಆಯ್ಕೆಯನ್ನು ಸೆಲೆಕ್ಟ್‌ ಮಾಡಿ.

ಹೆಚ್ಚಿನ ಮಾಹಿತಿಗೆ ಹೆಲ್ಪ್‌ಲೈನ್‌ ನಂಬರ್‌ 155261 ಮತ್ತು 011-24300606 ಅನ್ನು ಸಂಪರ್ಕಿಸಿ.

ನಿಮ್ಮ ಹೆಸರು ಫಲಾನುಭವಿ ಪಟ್ಟಿಯಿಂದ ರದ್ದಾಗಲು ಕಾರಣ

  • ನಕಲಿ ಫಲಾನುಭವಿ ಸಂಖ್ಯೆ.
  • ಇ-ಕೆವೈಸಿ ಪೂರ್ಣವಾಗದಿರುವುದು.
  • ಅರ್ಜಿಯಲ್ಲಿನ ತಪ್ಪಾದ ಐಎಫ್‌ಎಸ್‌ಸಿ ಕೋಡ್‌.
  • ಅಮಾನ್ಯ, ವರ್ಗಾವಣೆಗೊಂಡ, ನಿರ್ಬಂಧಿಸಿದ ಅಥವಾ ಸ್ಥಗಿತಗೊಳಿಸಿದ ಬ್ಯಾಂಕ್ ಖಾತೆ.
  • ಬ್ಯಾಂಕ್‌ ಖಾತೆಯೊಂದಿಗೆ ಆಧಾರ್‌ ಕಾರ್ಡ್‌ ನಂಬರ್‌ ಲಿಂಕ್‌ ಆಗದೇ ಇರುವುದು.
  • ಅಪೂರ್ಣ ಅಪ್ಲಿಕೇಷನ್‌ ಫಾರಂ.
  • ಅಮಾನ್ಯ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಹೆಸರು.
  • ಫಲಾನುಭವಿ ಖಾತೆ ಸಂಖ್ಯೆಯು ಫಲಾನುಭವಿ ಕೋಡ್ ಮತ್ತು ಯೋಜನೆಯೊಂದಿಗೆ ಹೋಲಿಕೆ ಆಗದಿರುವುದು.

ಇದನ್ನೂ ಓದಿ: Money Guide: ಮನೆ ಪೂರ್ತಿಯಾಗುವ ಮುನ್ನವೇ ಸಾಲದ ಹಣ ಖರ್ಚಾಯ್ತೆ? ಚಿಂತೆ ಬೇಡ; ಟಾಪ್‌ ಅಪ್‌ ಲೋನ್‌ಗೆ ಅಪ್ಲೈ ಮಾಡಿ

Continue Reading

ವಾಣಿಜ್ಯ

Donkey milk: ಕತ್ತೆ ಹಾಲು ಲೀಟರ್‌ಗೆ 7000 ರೂ! ಈ ಹಾಲಿಗೆ ಏಕಿಷ್ಟು ಡಿಮ್ಯಾಂಡ್‌?

Donkey milk: ಹಾಲು ಉದ್ಯಮದಲ್ಲಿ ಕತ್ತೆಯ ಹಾಲು ಇಂದು ಬಿಳಿ ಚಿನ್ನವಾಗಿದೆ. ಗುಜರಾತ್‌ನಲ್ಲಿ ಧೀರೇನ್ ಸೋಲಂಕಿ ಅವರು ಕತ್ತೆಯ ಹಾಲು ಉತ್ಪಾದನೆಯಲ್ಲಿ ಕ್ರಾಂತಿಯನ್ನು ಮಾಡುತ್ತಿದ್ದಾರೆ. ಅವರು ಅದರ ಹಾಲನ್ನು ಗೋವಿನ ಪ್ರತಿಸ್ಪರ್ಧಿಗಳು ಉತ್ಪಾದಿಸುವ ಹಾಲಿನ 70 ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇಷ್ಟಕ್ಕೂ ಈ ಕತ್ತೆ ಹಾಲಿಗೆ ಏಕಿಷ್ಟು ಡಿಮ್ಯಾಂಡ್‌? ಇದರ ಹಿನ್ನೆಲೆ ಏನು? ಇಲ್ಲಿದೆ ಕುತೂಹಲಕರ ಮಾಹಿತಿ.

VISTARANEWS.COM


on

By

donkey milk
Koo

ಹಾಲು (milk) ಮಾರಾಟ ಮಾಡಿ ತಿಂಗಳಿಗೊಂದು ಎಷ್ಟು ಆದಾಯ ಗಳಿಸಬಹುದು? ಅಬ್ಬಬ್ಬಾ ಎಂದರೆ 10 ಸಾವಿರ ರೂ. ಗಡಿ ದಾಟಿದರೆ ಬಹುದೊಡ್ಡದು. ಆದರೆ ಇಲ್ಲೊಬ್ಬರು ಹಾಲು ಮಾರಾಟದಿಂದಲೇ ತಿಂಗಳಿಗೆ 2- 3 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಆದರೆ ಇವರು ಮಾರುತ್ತಿರುವ ಹಾಲು ಹಸುವಿನದಲ್ಲ (cow) ಕತ್ತೆಯದ್ದು (Donkey milk).

ಹಾಲು ಉದ್ಯಮದಲ್ಲಿ ಕತ್ತೆಯ ಹಾಲು ಇಂದು ಬಿಳಿ ಚಿನ್ನವಾಗಿದೆ (white gold). ಗುಜರಾತ್‌ನಲ್ಲಿ (gujarat) ಧೀರೇನ್ ಸೋಲಂಕಿ ( Dhiren Solanki) ಅವರು ಕತ್ತೆಯ ಹಾಲು ಉತ್ಪಾದನೆಯಲ್ಲಿ ಕ್ರಾಂತಿಯನ್ನು ಮಾಡುತ್ತಿದ್ದಾರೆ. ಅವರು ಅದರ ಹಾಲನ್ನು ಗೋವಿನ ಪ್ರತಿಸ್ಪರ್ಧಿಗಳು ಉತ್ಪಾದಿಸುವ ಹಾಲಿನ 70 ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಪಟಾನ್ ಜಿಲ್ಲೆಯಲ್ಲಿ 42 ಕತ್ತೆಗಳಿರುವ ಫಾರ್ಮ್ ಹೊಂದಿರುವ ಧೀರೇನ್ ಸೋಲಂಕಿ, ದಕ್ಷಿಣ ಪ್ರದೇಶಗಳಲ್ಲಿನ ಗ್ರಾಹಕರಿಗೆ ಬೆಲೆಬಾಳುವ ಹಾಲನ್ನು ಮಾರಾಟ ಮಾಡುವ ಮೂಲಕ ತಿಂಗಳಿಗೆ 2- 3 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಇದನ್ನೂ ಓದಿ: Tech Mahindra: ಫ್ರೆಶರ್‌ಗಳಿಗೆ ಗುಡ್‌ ನ್ಯೂಸ್;‌ 6 ಸಾವಿರ ಜನರನ್ನು ನೇಮಕ ಮಾಡಲಿದೆ ಮಹೀಂದ್ರಾ!

ಸುಮಾರು ಎಂಟು ತಿಂಗಳ ಹಿಂದೆ ಕೇವಲ 20 ಕತ್ತೆಗಳೊಂದಿಗೆ 22 ಲಕ್ಷ ರೂ.ಗಳ ಆರಂಭಿಕ ಹೂಡಿಕೆ ಮಾಡಿರುವ ಸೋಲಂಕಿ ಈಗ ಕೋಟ್ಯಂತರ ಮೌಲ್ಯದ ಹಾಲು ವ್ಯಾಪಾರ ನಡೆಸುತ್ತಿದ್ದಾರೆ.

ಪ್ರಾರಂಭದಲ್ಲಿ ಸವಾಲು

ಗುಜರಾತ್‌ ನಲ್ಲಿ ಕತ್ತೆ ಹಾಲಿಗೆ ಹೆಚ್ಚು ಬೇಡಿಕೆ ಇಲ್ಲದ ಕಾರಣ ಪ್ರಾರಂಭಿಸಿದ ಐದು ತಿಂಗಳು ಸೋಲಂಕಿ ಅವರು ತುಂಬಾ ಕಷ್ಟ ಪಟ್ಟಿದ್ದರು. ಅದರ ಅನಂತರ ಅವರು ದಕ್ಷಿಣ ಭಾರತದಲ್ಲಿ ಕತ್ತೆ ಹಾಲಿನ ಹೆಚ್ಚಿನ ಅಗತ್ಯತೆ ಇರುವಲ್ಲಿ ತಮ್ಮ ವ್ಯಾಪ್ತಿಯನ್ನು ಬೆಳೆಸುವ ನಿರ್ಧಾರವನ್ನು ಮಾಡಿದರು.

ಪ್ರಸ್ತುತ ಅವರು ಕತ್ತೆ ಹಾಲನ್ನು ಹೆಚ್ಚಾಗಿ ಕರ್ನಾಟಕ ಮತ್ತು ಕೇರಳ ರಾಜ್ಯಗಳಿಗೆ ಒದಗಿಸುತ್ತಿದ್ದಾರೆ. ಅವರ ಕೆಲವು ಗ್ರಾಹಕರು ಕತ್ತೆಗಳ ಹಾಲನ್ನು ಬಳಸುವ ಸೌಂದರ್ಯವರ್ಧಕ ಸಂಸ್ಥೆಗಳಾಗಿವೆ.


ಲೀಟರ್‌ಗೆ 5ರಿಂದ 7 ಸಾವಿರ ರೂ.

ಸೋಲಂಕಿ ಪ್ರಕಾರ ಕತ್ತೆ ಹಾಲು ಮಾರುಕಟ್ಟೆಯಲ್ಲಿ ಪ್ರತಿ ಲೀಟರ್‌ಗೆ 5,000 ರಿಂದ 7,000 ರೂ. ಗೆ ಮಾರಾಟವಾಗುತ್ತಿದೆ. ಹಸುವಿನ ಹಾಲಿಗೆ ಹೋಲಿಸಿದರೆ ಲೀಟರ್‌ಗೆ 65 ರೂ. ಗೆ ಮಾರಾಟವಾಗುತ್ತದೆ. ಹಾಲಿನ ತಾಜಾತನವನ್ನು ಕಾಪಾಡಲು ರೆಫ್ರಿಜರೇಟರ್‌ಗಳಲ್ಲಿ ಇರಿಸಲಾಗುತ್ತದೆ.

ದುಬಾರಿಯಾಗಲು ಕಾರಣ

ಕತ್ತೆಯ ಹಾಲಿನ ಬಗ್ಗೆ ಜನಪ್ರಿಯತೆ ಈಗಷ್ಟೇ ಬೆಳೆಯುತ್ತಿದೆ. ಬಹುತೇಕ ಫಾರ್ಮ್‌ಗಳು ಚಿಕ್ಕದಾಗಿದ್ದು, ಐದರಿಂದ 30 ಹಾಲು ಕರೆಯುವ ಕತ್ತೆಗಳನ್ನು ಒಳಗೊಂಡಿರುತ್ತದೆ. ಪ್ರತಿ ದಿನವೂ ಸರಿಸುಮಾರು ನಾಲ್ಕು ಕಪ್ ಅಂದರೆ ಒಂದು ಲೀಟರ್ ಹಾಲನ್ನು ಮಾತ್ರ ಉತ್ಪಾದಿಸಲಾಗುತ್ತದೆ. ಹೀಗಾಗಿ ಹಾಲು ಸ್ವಲ್ಪ ದುಬಾರಿಯಾಗಿದೆ ಮತ್ತು ಪಡೆಯುವುದು ಕಷ್ಟವಾಗುತ್ತದೆ.

ಕತ್ತೆ ಹಾಲಿನ ಪ್ರಯೋಜನಗಳು

ಕತ್ತೆ ಹಾಲಿನ ಬಳಕೆ ಸುಮಾರು 10 ಸಾವಿರ ವರ್ಷಗಳಿಂದಲೂ ಇದೆ. ಅದರ ಪೌಷ್ಟಿಕಾಂಶ ದಿಂದಾಗಿ ಸೌಂದರ್ಯವರ್ಧಕಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಹಲವಾರು ಆರೋಗ್ಯ ಪ್ರಯೋಜನಗಳಿಂದಾಗಿ ಇದು ಇತ್ತೀಚಿನ ದಿನಗಳಲ್ಲಿ ಇದಕ್ಕೆ ಮತ್ತೆ ಬೇಡಿಕೆ ಹೆಚ್ಚಾಗುತ್ತಿದೆ.

ಕತ್ತೆ ಹಾಲಿನ ಇತಿಹಾಸ

ಹಿಂದಿನ ಕಾಲದಲ್ಲಿ ಶಿಶುಗಳ ಆಹಾರಕ್ಕಾಗಿ ಕತ್ತೆ ಹಾಲನ್ನು ಬಳಸುವುದು ಸಾಮಾನ್ಯವಾಗಿತ್ತು. ಈಜಿಪ್ಟಿನ ರಾಣಿ ಕ್ಲಿಯೋಪಾತ್ರ ಕೂಡ ಅದನ್ನು ಇಷ್ಟಪಟ್ಟಿದ್ದಳು. ಅವಳು ತನ್ನ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಲು ಕತ್ತೆ ಹಾಲಿನಲ್ಲಿ ಸ್ನಾನ ಮಾಡುತ್ತಿದ್ದಳು. ದಂತಕಥೆಯ ಪ್ರಕಾರ ಅವಳಿಗೆ ನಿತ್ಯ ಅಗತ್ಯವಾದ ಹಾಲು ಒದಗಿಸಲು ಸುಮಾರು 700 ಕತ್ತೆಗಳು ಬೇಕಾಗಿದ್ದವು ಎನ್ನಲಾಗುತ್ತದೆ.

ಕತ್ತೆ ಹಾಲು ಮುಖದ ಚರ್ಮದಿಂದ ಸುಕ್ಕುಗಳನ್ನು ನಿವಾರಿಸುತ್ತದೆ. ಚರ್ಮವನ್ನು ಮೃದು ಮತ್ತು ಬಿಳಿಯನ್ನಾಗಿ ಮಾಡುತ್ತದೆ ಎಂದು ನಂಬಲಾಗಿದೆ. ರೋಮನ್ ಚಕ್ರವರ್ತಿ ನೀರೋನ ಹೆಂಡತಿ ಪೊಪ್ಪಿಯಾ ಸ್ನಾನಕ್ಕೂ ಸಹ ಕತ್ತೆ ಬಳಸುತ್ತಿದ್ದಳು. ಈ ಕಾರಣಕ್ಕಾಗಿ, ಅವಳು ಪ್ರಯಾಣ ಮಾಡುವಾಗ ಕತ್ತೆಗಳ ಹಿಂಡುಗಳನ್ನು ಜೊತೆಗೆ ಕೊಂಡೊಯ್ಯುತ್ತಿದ್ದಳು.

ಕತ್ತೆ ಹಾಲಿನ ವಿಶೇಷತೆ

ಕತ್ತೆ ಹಾಲು ಹಸುವಿನ ಹಾಲು ಮತ್ತು ಮಾನವ ಎದೆ ಹಾಲು ಹಲವಾರು ಪೌಷ್ಟಿಕಾಂಶಗಳನ್ನು ಹೊಂದಿದೆ. ಪ್ರೋಟೀನ್ ಜೊತೆಗೆ ಇದು ಜೀವಸತ್ವ, ವಿಶೇಷವಾಗಿ ವಿಟಮಿನ್ ಡಿ ಮತ್ತು ಖನಿಜಗಳನ್ನು ಒಳಗೊಂಡಿರುತ್ತದೆ. ಕತ್ತೆ ಹಾಲು ಕಡಿಮೆ ಕೊಬ್ಬು ಮತ್ತು ಕ್ಯಾಲೋರಿಗಳನ್ನು ಹೊಂದಿದ್ದು, ಇವುಗಳಲ್ಲಿ ಹೆಚ್ಚಿನವು ಕಾರ್ಬೋಹೈಡ್ರೇಟ್‌ಗಳಿಂದ ಲ್ಯಾಕ್ಟೋಸ್ ಹಾಲಿನಲ್ಲಿರುವ ಸಕ್ಕರೆಯ ರೂಪದಲ್ಲಿರುತ್ತದೆ.

ಹಸುವಿನ ಹಾಲಿನ ಪ್ರೋಟೀನ್ ಅಲರ್ಜಿಯನ್ನು ಹೊಂದಿರುವ ಅನೇಕ ಜನರು ಕತ್ತೆ ಹಾಲನ್ನು ಅದರ ಕಡಿಮೆ ಕ್ಯಾಸೀನ್ ಮಟ್ಟದಿಂದ ಸೇವಿಸಬಹುದು. ಏಕೆಂದರೆ ಕತ್ತೆ ಹಾಲು ಅಲರ್ಜಿಯ ಪ್ರತಿಕ್ರಿಯೆಯನ್ನು ಉಂಟುಮಾಡುವುದಿಲ್ಲ.


ಕತ್ತೆ ಹಾಲಿನಲ್ಲಿ ಲ್ಯಾಕ್ಟೋಸ್, ಕ್ಯಾಲ್ಸಿಯಂ ಅನ್ನು ಒಳಗೊಂಡಿದ್ದು, ಬಲವಾದ ಮೂಳೆಗಳಿಗೆ ಅಗತ್ಯವಾದ ಖನಿಜಾಂಶವನ್ನು ಇದು ಒಳಗೊಂಡಿದೆ.

2010ರ ಪ್ರಯೋಗಾಲಯದ ಅಧ್ಯಯನದ ಪ್ರಕಾರ ಕತ್ತೆ ಹಾಲು ಸೈಟೊಕಿನ್‌ಗಳ ಬಿಡುಗಡೆಯನ್ನು ಹೆಚ್ಚಿಸುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವ ಪ್ರೋಟೀನ್‌ಗಳಾಗಿವೆ. ಹಾಲು ನೈಟ್ರಿಕ್ ಆಕ್ಸೈಡ್ ಅನ್ನು ಉತ್ಪಾದಿಸಲು ಜೀವಕೋಶಗಳಿಗೆ ಕಾರಣವಾಗುತ್ತದೆ. ಇದು ರಕ್ತನಾಳಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಿ ರಕ್ತದ ಹರಿವನ್ನು ಸುಧಾರಿಸುತ್ತದೆ.

Continue Reading

ಪರಿಸರ

Chocolate: ಏನಿದು ಮೀಲಿಬಗ್‌ ವೈರಸ್‌? ಚಾಕೊಲೇಟ್ ದರ ಏರಿಕೆಗೂ ಇದಕ್ಕೂ ಏನು ಸಂಬಂಧ?

Chocolate industry: ಪಶ್ಚಿಮ ಆಫ್ರಿಕಾದ ಕೋಕೋ ಮರಗಳಲ್ಲಿ ವೈರಸ್ ಹರಡುತ್ತಿದ್ದು, ಇದು ಚಾಕೊಲೇಟ್ ಪೂರೈಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಮೀಲಿಬಗ್‌ ವೈರಸ್ ಗಳಿಂದ ಚಿಗುರು ಊದಿಕೊಂಡಿದ್ದು, ಒಂದರಿಂದ ಇನ್ನೊಂದಕ್ಕೆ ವೇಗವಾಗಿ ಹರಡುತ್ತಿದೆ.

VISTARANEWS.COM


on

By

Chocolate industry
Koo

ನವದೆಹಲಿ: ಚಾಕೊಲೇಟ್‌ನಲ್ಲಿ ಬಳಸುವ ಪ್ರಮುಖ ಸಾಮಗ್ರಿಯಾದ ಕೋಕೋ (cacao) ಮರಗಳಲ್ಲಿ ವೈರಸ್ (virus) ಕಾಣಿಸಿಕೊಂಡಿದ್ದು, ಇದು ಚಾಕೊಲೇಟ್ ಉತ್ಪಾದನೆ ಮೇಲೆ ಬಹುದೊಡ್ದ ಹೊಡೆತ ಬೀಳುವ ಸಾಧ್ಯತೆ ಇದೆ. ಇದರಿಂದ ಚಾಕೊಲೇಟ್‌ಗಳು ಮತ್ತಷ್ಟು ದುಬಾರಿಯಾಗಬಹುದು.

ಪ್ರಸ್ತುತ ಪಶ್ಚಿಮ ಆಫ್ರಿಕಾದ (West Africa) ಕೋಕೋ ಮರಗಳಲ್ಲಿ ವೈರಸ್ ಹರಡುತ್ತಿದ್ದು, ಇದು ಚಾಕೊಲೇಟ್ ಪೂರೈಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಮೀಲಿಬಗ್‌ (mealybugs) ವೈರಸ್ ಗಳಿಂದ ಚಿಗುರು ಊದಿಕೊಂಡಿದ್ದು, ಒಂದರಿಂದ ಇನ್ನೊಂದಕ್ಕೆ ವೇಗವಾಗಿ ಹರಡುತ್ತಿದೆ. ಇದು ಬಿಸಿ ವಾತಾವರಣದಲ್ಲಿ ಹೆಚ್ಚು ತೀವ್ರವಾಗಿ ಬೆಳೆಯುತ್ತಿದೆ.

ಈ ವೈರಸ್ ಭೂಮಿಯ ಮೇಲಿರುವ ಪರಿಸರ ವಿನಾಶಕಾರಿ ಜೀವಿ ಎನ್ನಲಾಗುತ್ತದೆ. ಇದು ಘಾನಾದಲ್ಲಿ 50,000 ಹೆಕ್ಟೇರ್ ಕೋಕೋ ಫಾರ್ಮ್‌ಗಳನ್ನು ನಾಶಪಡಿಸಿದೆ. ಇದು ವಿಶ್ವದ ಎರಡನೇ ಅತಿದೊಡ್ಡ ಚಾಕೊಲೇಟ್ ಉತ್ಪಾದಕ ದೇಶ. ಇದು ಜಾಗತಿಕ ಚಾಕೊಲೇಟ್ ಪೂರೈಕೆಯ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದನ್ನೂ ಓದಿ: Areca Price: ಅಡಿಕೆ ದರ ಗಗನಮುಖಿ; ಚುನಾವಣೆ ಬಳಿಕ ಮತ್ತಷ್ಟು ಏರಿಕೆ?

ಯುಎಸ್ ಮತ್ತು ಘಾನಾದ ವಿಶ್ವವಿದ್ಯಾನಿಲಯಗಳ ವಿಜ್ಞಾನಿಗಳು ವೈರಸ್ ಹರಡುವುದನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರಪಂಚದ ಚಾಕೊಲೇಟ್‌ಗಳನ್ನು ಉಳಿಸಲು ಹೊಸ ಮಾರ್ಗವನ್ನು ಈಗಾಗಲೇ ಕಂಡುಹಿಡಿದಿದ್ದರೂ ಇದು ಚಾಕೊಲೇಟ್ ನ ಜಾಗತಿಕ ಪೂರೈಕೆ ಸರಪಳಿಗೆ ಅಡ್ಡಿಯಾಗುವ ಸಾಧ್ಯತೆ ಇದೆ.


ಚಾಕೊಲೇಟ್ ಪೂರೈಕೆ ಮೇಲೆ ಪರಿಣಾಮ

ಪ್ರಪಂಚದ ಶೇ. 50ರಷ್ಟು ಚಾಕೊಲೇಟ್‌ಗಳು ಘಾನಾ ಮತ್ತು ಐವರಿ ಕೋಸ್ಟ್‌ನಿಂದ ಬರುತ್ತವೆ. ಈ ಪ್ರದೇಶಗಳಲ್ಲಿನ ಕೋಕೋ ಮರಗಳ ಚಿಗುರು ವೈರಸ್ ನಿಂದ ನಾಶವಾಗಿವೆ. ಕೊಲಂಬಿಯಾದಲ್ಲಿ ರೈತರು ಒಡೆದು ಸಿಪ್ಪೆ ಸುಲಿದಿದ್ದರೂ ಕೋಕೋ ಮರಗಳ ಎಲೆ, ಮೊಗ್ಗು ಮತ್ತು ಹೂವುಗಳನ್ನು ತಿನ್ನುವ ಮೀಲಿಬಗ್ಸ್ ಎಂದು ಕರೆಯಲ್ಪಡುವ ಸಣ್ಣ ಕೀಟಗಳಿಂದ ವೈರಸ್ ಹರಡುತ್ತದೆ. ಘಾನಾವು 254 ಮಿಲಿಯನ್ ಮರಗಳನ್ನು ಹೊಂದಿದೆ ಮತ್ತು ಐವರಿ ಕೋಸ್ಟ್‌ನಲ್ಲಿ ಶೇ. 20ರಷ್ಟು ಬೆಳೆ ಸೋಂಕಿಗೆ ಒಳಗಾಗಿದೆ.

ಚಾಕೊಲೇಟ್‌ ಹೇಗೆ ತಯಾರಿಸಲಾಗುತ್ತದೆ?

ಉಷ್ಣವಲಯದ ಹವಾಮಾನದಲ್ಲಿ ಬೆಳೆಯುವ ಕೋಕೋ ಬೀನ್ಸ್‌ನಿಂದ ಚಾಕೊಲೇಟ್‌ಗಳನ್ನು ತಯಾರಿಸಲಾಗುತ್ತದೆ. ಅವುಗಳನ್ನು ಹುದುಗಿಸಿ, ಒಣಗಿಸಿ ಮತ್ತು ಹುರಿದು ಮಾಡಿದ ಪುಡಿಯನ್ನು ಹಾಲು ಮತ್ತು ಸಕ್ಕರೆಯೊಂದಿಗೆ ಬೆರೆಸಿ ಚಾಕೊಲೇಟ್ ತಯಾರಿಸಲಾಗುತ್ತದೆ.

2022ರಲ್ಲಿ ಐವರಿ ಕೋಸ್ಟ್ 2.2 ಮಿಲಿಯನ್ ಟನ್ ಕೋಕೋವನ್ನು ಉತ್ಪಾದಿಸಿತು ಮತ್ತು ಘಾನಾ 1.1 ಮಿಲಿಯನ್ ಉತ್ಪಾದಿಸಿತು. ಪ್ರಪಂಚದ ಅತಿದೊಡ್ಡ ಉತ್ಪಾದಕ ಇಂಡೋನೇಷ್ಯಾವು 2022 ರಲ್ಲಿ 6,67,000 ಟನ್‌ಗಳನ್ನು ಉತ್ಪಾದಿಸಿದೆ.

ಬೆಚ್ಚಗಿನ ತಾಪಮಾನವು ಮೀಲಿಬಗ್ ಗೆ ಹೆಚ್ಚು ಪೂರಕವಾಗಿರುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ. ಆರ್ಲಿಂಗ್ಟನ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾನಿಲಯದ ತಜ್ಞರ ಪ್ರಕಾರ, ಈ ವೈರಸ್ ಪ್ರಪಂಚದ ಚಾಕೊಲೇಟ್ ಪೂರೈಕೆಗೆ ಅಪಾಯವನ್ನುಂಟು ಮಾಡುತ್ತದೆ.

ವೈರಸ್ ಅನ್ನು ನಿಲ್ಲಿಸಬಹುದೇ?

ಕೀಟನಾಶಕಗಳಿಂದ ಮೀಲಿಬಗ್‌ಗಳ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ಸೋಂಕಿತ ಮರಗಳನ್ನು ಕಡಿಯುವುದು ಮತ್ತು ನಿರೋಧಕ ಮರಗಳನ್ನು ನೆಡುವುದು ಸುಲಭ ಮತ್ತು ಅಗ್ಗದ ಮಾರ್ಗವಾಗಿದೆ. ರೈತರು ಮರಗಳಿಗೆ ಲಸಿಕೆಯನ್ನೂ ನೀಡಬಹುದು. ಆದರೆ ಇದು ದುಬಾರಿಯಾಗಿರುವುದರಿಂದ ಇದು ಮರಗಳಿಂದ ಉತ್ಪತ್ತಿಯಾಗುವ ಕೋಕೋ ಮೇಲೆ ಪರಿಣಾಮವನ್ನು ಬೀರುತ್ತದೆ.

ದೂರದೂರ ಮರಗಳನ್ನು ನೆಡುವುದರಿಂದ ವೈರಸ್ ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಸಂಶೋಧಕರು. ಆದರೆ ಇದು ಇನ್ನೂ ಪ್ರಯೋಗ ಹಂತದಲ್ಲಿದೆ. ಇದು ರೈತರಿಗೆ ತಮ್ಮ ಬೆಳೆಯನ್ನು ರಕ್ಷಿಸಲು ಸಹಾಯ ಮಾಡುವ ಸಾಧ್ಯತೆಯಿದೆ.


ಮೀಲಿಬಗ್‌ನಿಂದ ಮಾತ್ರ ತೊಂದರೆಯೇ?

ಈ ಹಿಂದೆ ಕಪ್ಪು ಪಾಡ್ ರೋಗವು ಚಾಕೊಲೇಟ್ ಉತ್ಪನ್ನಗಳ ಮೇಲೆ ಪರಿಣಾಮ ಬೀರಿತ್ತು. ಈ ರೋಗವು ಕೋಕೋ ಬೀಜಗಳನ್ನು ಕಪ್ಪು ಅಥವಾ ಕಂದು ಬಣ್ಣಕ್ಕೆ ತಿರುಗಿಸುತ್ತದೆ. ಇದು 2022 ರಲ್ಲಿ ವಿಶ್ವದ ವಾರ್ಷಿಕ ಕೋಕೋ ಬೆಳೆಗಳಲ್ಲಿ ಶೇ. 30ರಷ್ಟನ್ನು ನಾಶಪಡಿಸಿತು. ಈ ಪ್ರದೇಶದಲ್ಲಿ ಉಂಟಾದ ಭಾರೀ ಮಳೆಯಿಂದಾಗಿ ರೋಗವನ್ನು ಮತ್ತಷ್ಟು ಉಲ್ಬಣವಾಗಿತ್ತು. ಏಕೆಂದರೆ ಸೋಂಕು ತೇವಾಂಶವುಳ್ಳ ಸ್ಥಿತಿಯಲ್ಲಿ ಹೆಚ್ಚು ವೇಗವಾಗಿ ಬೆಳೆಯುತ್ತದೆ ಮತ್ತು ಹರಡುತ್ತದೆ.

Continue Reading
Advertisement
Hassan Pen Drive Case
ಪ್ರಮುಖ ಸುದ್ದಿ8 mins ago

Hassan Pen Drive Case: ಎಸ್‌ಐಟಿ ತನಿಖೆ ಆದೇಶಕ್ಕೂ ಮುನ್ನವೇ ವಿದೇಶಕ್ಕೆ ತೆರಳಿದ ಪ್ರಜ್ವಲ್ ರೇವಣ್ಣ!

KL Rahul
ಕ್ರಿಕೆಟ್12 mins ago

KL Rahul : ಐಪಿಎಲ್​ನಲ್ಲಿ ಆರಂಭಿಕನಾಗಿ 4000 ರನ್ ಪೂರೈಸಿದ ಕೆಎಲ್ ರಾಹುಲ್; ಈ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ?

Modi in Karnataka
ಪ್ರಮುಖ ಸುದ್ದಿ43 mins ago

Modi in Karnataka: ಬೆಳಗಾವಿಗೆ ಆಗಮಿಸಿದ ಪ್ರಧಾನಿ‌ ಮೋದಿ; ಐಟಿಸಿ ವೆಲ್‌ಕಮ್‌ ಹೋಟೆಲ್‌ನಲ್ಲಿ ವಾಸ್ತವ್ಯ

Hasan pen drive case
ಹಾಸನ1 hour ago

Hassan Pen Drive Case: ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣ ಆರೋಪ​; ಎಸ್​​ಐಟಿ ತನಿಖೆಗೆ ಸಿದ್ದರಾಮಯ್ಯ ಆದೇಶ

Air Force Chopper
ದೇಶ2 hours ago

Air Force Chopper: ಉತ್ತರಾಖಂಡದಲ್ಲಿ ಕಾಡಿನ ಬೆಂಕಿ ನಂದಿಸಲು ವಾಯು ಪಡೆಯ ಹೆಲಿಕಾಪ್ಟರ್‌ ಬಳಕೆ

TCS World 10K
ಬೆಂಗಳೂರು2 hours ago

TCS World 10K : ನಾಳೆ ಬೆಂಗಳೂರಿನಲ್ಲಿ ವಿಶ್ವ ವಿಖ್ಯಾತಿಯ ಟಿಸಿಎಸ್ ವರ್ಲ್ಡ್ 10ಕೆ ಮ್ಯಾರಾಥಾನ್​

Lok Sabha Election 2024 special kit for the polling staff
ಉತ್ತರ ಕನ್ನಡ2 hours ago

Lok Sabha Election 2024: ಲೋಕಸಭಾ ಚುನಾವಣೆ ಸಿಬ್ಬಂದಿಗೆ ತಯಾರಾಗಿದೆ ವಿಶೇಷ ಕಿಟ್

virat kohli
ಪ್ರಮುಖ ಸುದ್ದಿ2 hours ago

Virat Kohli : ಅಭ್ಯಾಸದ ಮಧ್ಯೆ ಮೊಬೈಲ್​ನಲ್ಲೇ ಡೆಲ್ಲಿ ವರ್ಸಸ್​​ ಮುಂಬೈ ಮ್ಯಾಚ್ ನೋಡಿದ ಕೊಹ್ಲಿ

MDH, Everest Spices
ವಿದೇಶ2 hours ago

MDH, Everest Spices: ಎವರೆಸ್ಟ್‌, ಎಂಡಿಎಚ್‌ ಮಸಾಲೆ ಪೌಡರ್‌ಗಳ ಮಾಹಿತಿ ಸಂಗ್ರಹಕ್ಕೆ ಮುಂದಾದ ಅಮೆರಿಕ

Zameer Ahmed Khan‌
ಕರ್ನಾಟಕ3 hours ago

Zameer Ahmed Khan‌: ಸಚಿವ ಜಮೀರ್ ಅಹ್ಮದ್ ರೋಷಾವೇಶದ ಭಾಷಣಕ್ಕೆ ಗಾಜು ಪೀಸ್‌ ಪೀಸ್; ಇಲ್ಲಿದೆ ವಿಡಿಯೊ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok sabha election 2024
Lok Sabha Election 20247 hours ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ11 hours ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ18 hours ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ1 day ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20241 day ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20242 days ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ2 days ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ2 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ2 days ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ2 days ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

ಟ್ರೆಂಡಿಂಗ್‌