ವಾಣಿಜ್ಯ
Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್ ಫೋನ್ ರಫ್ತು
ಭಾರತದಿಂದ 2022-23ರಲ್ಲಿ ಒಟ್ಟು 85,000 ಕೋಟಿ ರೂ. ಮೌಲ್ಯದ ಮೊಬೈ;ಲ್ ಫೋನ್ ರಫ್ತಾಗಿದೆ. ಕೇಂದ್ರ ಸರ್ಕಾರ ಸ್ಥಳೀಯ ಉತ್ಪಾದನೆಗೆ ಉತ್ತೇಜನ ನೀಡುತ್ತಿರುವುದು ಸಕಾರಾತ್ಮಕ (Mobile export) ಪ್ರಭಾವ ಬೀರಿದೆ.
ನವ ದೆಹಲಿ: ಭಾರತದಿಂದ 2022-23ರಲ್ಲಿ ಒಟ್ಟು 85,000 ಕೋಟಿ ರೂ. ಮೌಲ್ಯದ (Mobile Export) ಮೊಬೈಲ್ ಹ್ಯಾಂಡ್‌ಸೆಟ್ ರಫ್ತಾಗಿದೆ ಎಂದು ಶನಿವಾರ ಬಿಡುಗಡೆಯಾದ ಇಂಡಿಯಾ ಸೆಲ್ಯುಲಾರ್ & ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್‌ನ (India Cellular and Electronics Association) ಅಂಕಿ ಅಂಶಗಳು ತಿಳಿಸಿವೆ.
ಕಳೆದ 2021-22ರ ಸಾಲಿನಲ್ಲಿ 46,980 ಕೋಟಿ ರೂ. ಮೌಲ್ಯದ ಮೊಬೈಲ್ ಹ್ಯಾಂಡ್‌ಸೆಟ್ ರಫ್ತಾಗಿತ್ತು. ಉತ್ಪಾದಕರು ಮೊಬೈಲ್ ಉತ್ಪಾದನೆ ಮತ್ತು ರಫ್ತನ್ನು ವೃದ್ಧಿಸಿರುವುದು ಇದಕ್ಕೆ ಕಾರಣ. ಸ್ಥಳೀಯವಾಗಿ ಮೊಬೈಲ್ ಫೋನ್ ಉತ್ಪಾದನೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಉಪಕ್ರಮಗಳು (production linked incentive) ಫಲ ನೀಡುತ್ತಿವೆ. ಆ್ಯಪಲ್‌ನ ಉತ್ಪಾದನೆಯಲ್ಲಿ ಉಂಟಾಗಿರುವ ಹೆಚ್ಚಳ, ಸ್ಯಾಮ್‌ಸಂಗ್ ಸೇರಿದಂತೆ ಇತರ ಕಂಪನಿಗಳೂ ಹ್ಯಾಂಡ್ ಸೆಟ್ ಉತ್ಪಾದನೆಯನ್ನು ಹೆಚ್ಚಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಭಾರತ 2027ರ ವೇಳೆಗೆ ಐಫೋನ್‌ನ 47% ಪಾಲನ್ನು ತಯಾರಿಸುವ ನಿರೀಕ್ಷೆ ಇದೆ.
ರಾಜ್ಯಗಳಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು ಹೆಚ್ಚಿಸಲು ಎಲ್ಲ ರಾಜ್ಯಗಳ ಐಟಿ ಸಚಿವರುಗಳ ಜತೆಗೆ ಮಾಹಿತಿ ತಂತ್ರಜ್ಞಾನ ಇಲಾಖೆಯ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ನಿಯಮಿತವಾಗಿ ಸಭೆ ನಡೆಸುತ್ತಿದ್ದಾರೆ.
ಭಾರತವು ಮೊಬೈಲ್ ಫೋನ್‌ಗಳನ್ನು ಯುಎಇ, ಅಮೆರಿಕ, ನೆದರ್ಲೆಂಡ್, ಬ್ರಿಟನ್, ಇಟಲಿಗೆ ರಫ್ತು ಮಾಡುತ್ತಿದೆ ಎಂದು ಐಸಿಇಎ ವರದಿ ತಿಳಿಸಿದೆ. ಭಾರತದಲ್ಲಿ ಮಾರಾಟವಾಗುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ 97% ಸ್ಥಳೀಯವಾಗಿ ಉತ್ಪಾದನೆಯಾಗುತ್ತಿವೆ. ಜಗತ್ತಿನಲ್ಲಿಯೇ ಎರಡನೇ ಅತಿ ದೊಡ್ಡ ಮೊಬೈಲ್ ಉತ್ಪಾದಕ ಈಗ ಭಾರತವಾಗಿದೆ.
2023ರಲ್ಲಿ ಭಾರತವು 1 ಲಕ್ಷ ಕೋಟಿ ಸ್ಮಾರ್ಟ್ ಫೋನ್‌ಗಳನ್ನು ರಫ್ತು ಮಾಡಿ ಹೊಸ ದಾಖಲೆ ಸೃಷ್ಟಿಸಲಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆಯ ಸಹಾಯಕ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಸ್ಮಾರ್ಟ್‌ಫೋನ್ ಪೂರೈಕೆಯ ಸರಣಿ ಚೀನಾದಿಂದ ಸ್ಥಳಾಂತರವಾಗುವುದರ ಪ್ರಯೋಜನವನ್ನು ಭಾರತ ಮತ್ತು ವಿಯೆಟ್ನಾಂ ಪಡೆಯಲಿದೆ.
ದೇಶ
Air India: ಬದಲಾಗಲಿದೆ ಏರ್ ಇಂಡಿಯಾ ಸಿಬ್ಬಂದಿ ಸಮವಸ್ತ್ರ; ಸೀರೆ ಬದಲು ಚೂಡಿದಾರ್?
Air India: ಏರ್ ಇಂಡಿಯಾ (Air India) ವಿಮಾನ ಯಾನ ಸಂಸ್ಥೆಯ ಮಹಿಳಾ ಸಿಬ್ಬಂದಿಯ ಸಮವಸ್ತ್ರ (uniform) ಬದಲಾಗಲಿದೆ. ಸೀರೆ ಬದಲು ಅವರು ಆಧುನಿಕ ಉಡುಗೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನವ ದೆಹಲಿ: ಏರ್ ಇಂಡಿಯಾ (Air India) ಸಿಬ್ಬಂದಿಯ ಸಮವಸ್ತ್ರ ಇನ್ನು ಮಂದೆ ಬದಲಾಗಲಿದೆ. ಸುಮಾರು 60 ವರ್ಷಗಳ ಕಾಲ ಭಾರತೀಯ ಸಾಂಪ್ರದಾಯಿಕ ಉಡುಪು ಸೀರೆಯಲ್ಲಿ ಕಾಣಿಸಿಕೊಂಡಿದ್ದ ಅವರಿಗೆ ಇನ್ನು ಮುಂದೆ ಹೊಸ ರೀತಿಯ ಉಡುಗೆ ಸಿಗಲಿದೆ. ವರ್ಷಾಂತ್ಯದಲ್ಲಿ ಸಮವಸ್ತ್ರ (uniform) ಬದಲಾಗಲಿದೆ ಎಂದು ಮೂಲಗಳು ತಿಳಿಸಿವೆ. 6 ದಶಕಗಳ ಕಾಲ ಸೀರೆ ಧರಿಸಿಕೊಂಡು ಪ್ರಯಾಣಿಕರನ್ನು ಸ್ವಾಗತಿಸುತ್ತಿದ್ದ ಏರ್ ಇಂಡಿಯಾ ಸಿಬ್ಬಂದಿ ಇನ್ನು ಮುಂದೆ ಆಧುನಿಕ ಉಡುಗೆ ಮೂಲಕ ಕಾಣಿಸಿಕೊಳ್ಳಲಿರುವುದು ಖಚಿತವಾಗಿದೆ.
ಖ್ಯಾತ ವಸ್ತ್ರ ವಿನ್ಯಾಸಕ ಮನೀಶ್ ಮಲ್ಹೋತ್ರ ಹೊಸ ಸಮವಸ್ತ್ರದ ವಿನ್ಯಾಸ ಮಾಡಲಿದ್ದಾರೆ ಎನ್ನಲಾಗಿದೆ. ಸದ್ಯ ಅವರು ನಾನ್ ಡಿಸ್‌ಕ್ಲೋಷರ್ ಅಗ್ರಿಮೆಂಟ್ (NDA) ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಹೀಗಾಗಿ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಆದಾಗ್ಯೂ ಹೊಸ ಸಮವಸ್ತ್ರ ಸಾಂಪ್ರದಾಯಿಕವಾಗಿಯೇ ಇರಲಿದೆ ಎಂದು ಮೂಲಗಳು ತಿಳಿಸಿವೆ.
ಅಧಿಕಾರಿಗಳು ಹೇಳಿದ್ದೇನು?
ಸದ್ಯದ ಬೆಳವಣಿಗೆ ಪ್ರಕಾರ ಸೀರೆಯನ್ನು ಸಮವಸ್ತ್ರದ ಪಟ್ಟಿಯಿಂದ ಸಂಪೂರ್ಣ ಹೊರಗಿಡಲಾಗುತ್ತದೆ. ಮಹಿಳೆಯರಿಗೆ ಚೂಡಿದಾರ್ ಮತ್ತು ಪುರುಷ ಸಿಬ್ಬಂದಿಗೆ ಸೂಟ್ ಸಮವಸ್ತ್ರವಾಗಿ ದೊರೆಯುವ ಸಾಧ್ಯತೆ ಇದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆದರೆ ಇನ್ನೊಬ್ಬ ಅಧಿಕಾರಿಯ ಪ್ರಕಾರ, ಸೀರೆಯನ್ನು ಸಂಪೂರ್ಣವಾಗಿ ಸಮವಸ್ತ್ರದಿಂದ ಹೊರಗಿಡಲಾಗುವುದಿಲ್ಲವಂತೆ. “ವಿಮಾನಯಾನ ಸಂಸ್ಥೆಗೆ ಸಮವಸ್ತ್ರವಾಗಿ ವಿವಿಧ ಆಯ್ಕೆಗಳನ್ನು ನೀಡಲಾಯಿತು. ಅದರಲ್ಲಿ ಸೀರೆಯಂತೆ ಕಾಣುವ ಆದರೆ ಸಾಂಪ್ರದಾಯಿಕ ಸೀರೆಗಳಿಗಿಂತ ಭಿನ್ನವಾದ ಸೀರೆಗಳಿಗೆ ಒಪ್ಪಿಗೆ ಸೂಚಿಸಿತ್ತು. ಆದಾಗ್ಯೂ, ಅವುಗಳನ್ನು ಆಡಳಿತ ಮಂಡಳಿ ಅಂತಿಮಗೊಳಿಸಿಲ್ಲʼʼ ಎಂದು ಅವರು ತಿಳಿಸಿದ್ದಾರೆ.
ಹೊಸ ಸಮವಸ್ತ್ರ ಸೀರೆ ಅಭಿಮಾನಿಗಳಿಗೆ ಬೇಸರ ಮೂಡಿಸುವ ಸಾಧ್ಯತೆ ಇದೆ. 1962ರ ತನಕ ವಿಮಾನ ಸಿಬ್ಬಂದಿ ಸ್ಕರ್ಟ್, ಜಾಕೆಟ್ ಮತ್ತು ಹ್ಯಾಟ್ ಧರಿಸುತ್ತಿದ್ದರು. ದಿ. ಜೆ.ಆರ್.ಡಿ. ಟಾಟಾ ಸೀರೆಯನ್ನು ಸಮವಸ್ತ್ರವಾಗಿಸುವ ಬಗ್ಗೆ ಪ್ರಸ್ತಾವ ಮಂಡಿಸಿದ್ದರು. ಬಳಿಕ ಇದನ್ನು ಅಂಗೀಕರಿಸಲಾಯಿತು. ಆರಂಭದಲ್ಲಿ ಸೀರೆಗಳನ್ನು ಬಿನ್ನಿ ಮಿಲ್‌ನಿಂದ ಪಡೆದುಕೊಳ್ಳಲಾಗಿತ್ತು.
ಸಮವಸ್ತ್ರ ಬದಲಾವಣೆ ಬಗ್ಗೆ ನಿವೃತ್ತ ಸಿಬ್ಬಂದಿಯೊಬ್ಬರು ಪ್ರತಿಕ್ರಿಯಿಸಿ, ನಮಗೆ ಆರಂಭಿಕ ದಿನಗಳಲ್ಲಿ ಸೀರೆಯನ್ನು ಹೇಗೆ ಧರಿಸುವುದು ಎಂದು ಹೇಳಿಕೊಟ್ಟಿದ್ದರು. ಬಳಿಕ ಸೀರೆಯಲ್ಲಿ ಕೆಲಸ ನಿರ್ವಹಿಸಲು ಖುಷಿಯಾಗುತ್ತಿತ್ತು ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಯಾವ ಬಣ್ಣ?
ಸದ್ಯದ ಮಾಹಿತಿ ಪ್ರಕಾರ ಹೊಸ ಸಮವಸ್ತ್ರದ ಬಣ್ಣ ವಿಮಾನದ ಬಣ್ಣವಾದ ಕಡುಗೆಂಪು, ಹಳದಿ(ಚಿನ್ನದ ಬಣ್ಣ)ಯಲ್ಲಿರಲಿದೆ. ವಿಲೀನದ ನಂತರ, ವಿಸ್ತಾರ ಕ್ಯಾಬಿನ್ ಸಿಬ್ಬಂದಿಯ ಉಡುಗೆಯೂ ಏರ್ ಇಂಡಿಯಾ ಸಿಬ್ಬಂದಿಯಂತೆಯೇ ಇರಲಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Manipur Horror: ಮೈತಿ ವಿದ್ಯಾರ್ಥಿಗಳಿಬ್ಬರ ಶವಗಳ ಫೋಟೊ ವೈರಲ್; ಮಣಿಪುರ ಮತ್ತೆ ಉದ್ವಿಗ್ನ?
ವಿಮಾನಯಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(CEO) ಮತ್ತು ವ್ಯವಸ್ಥಾಪಕ ನಿರ್ದೇಶಕ (MD) ಕ್ಯಾಂಪ್ಬೆಲ್ ವಿಲ್ಸನ್, ಆಗಸ್ಟ್ 10ರಂದು ನಡೆದ ಮರುನಾಮಕರಣ ಕಾರ್ಯಕ್ರಮದಲ್ಲಿ, ವಿಮಾನಯಾನದ ಹೊಸ ಉಡುಗೆಯನ್ನು ಮೊದಲು ಎ 350 ವಿಮಾನದಲ್ಲಿ ಪರಿಚಯಿಸಲಾಗುವುದು ಎಂದು ಘೋಷಿಸಿದ್ದರು. ನವೆಂಬರ್‌ನಲ್ಲಿ ಈ ಬದಲಾವಣೆ ಕಂಡುಬರುವ ಸಾಧ್ಯತೆ ಇದೆ ಎಂದು ಕೆಲವು ಮೂಲಗಳು ತಿಳಿಸಿವೆ.
ಪ್ರಮುಖ ಸುದ್ದಿ
₹2000 Notes Withdrawn: ನಿಮ್ಮ ಬಳಿ ₹2000 ನೋಟು ಇನ್ನೂ ಇದೆಯಾ? ಕೊನೆಯ ಕ್ಷಣದ ಗೊಂದಲದಿಂದ ಪಾರಾಗಲು ಈಗಲೇ ಮರಳಿಸಿ
ಸೆಪ್ಟೆಂಬರ್ 30 ನೋಟು ವಿನಿಮಯಕ್ಕೆ ಅಂತಿಮ ದಿನವಾಗಿದೆ. ಅಂತಿಮ ದಿನಾಂಕಕ್ಕೆ ಇನ್ನು ನಾಲ್ಕು ದಿನಗಳು ಉಳಿದಿವೆ. ನಿಮ್ಮ ಬಳಿ ಇರುವ 2000 ರೂಪಾಯಿ ನೋಟುಗಳನ್ನು ಸೆಪ್ಟೆಂಬರ್ 30ರೊಳಗೆ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡುವಂತೆ ಅಥವಾ ಬೇರೆ ಮುಖಬೆಲೆಯ ನೋಟುಗಳಿಗೆ ವಿನಿಮಯ ಮಾಡಿಕೊಳ್ಳುವಂತೆ ಆರ್‌ಬಿಐ ಸೂಚಿಸಿದೆ.
ಹೊಸದಿಲ್ಲಿ: ₹2000 ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ಗೆ ಮರಳಿಸುವ (₹2000 Notes Withdrawn) ಅಂತಿಮ ಗಡುವು ಸಮೀಪಿಸುತ್ತಿದೆ. ನಿಮ್ಮ ಬಳಿ ₹2000 ನೋಟುಗಳಿದ್ದರೆ, ಕೊನೆಯ ಕ್ಷಣದ ಗೊಂದಲಗಳಿಂದ ಪಾರಾಗಲು ಈಗಲೇ ಬ್ಯಾಂಕ್‌ಗೆ ಹೋಗಿ ಅವುಗಳನ್ನು ವಿನಿಮಯ ಮಾಡಿಕೊಳ್ಳುವುದು ಉತ್ತಮವೆಂದು ಸೂಚಿಸಲಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಚಲಾವಣೆಯಲ್ಲಿರುವ 2,000 ರೂ ನೋಟುಗಳನ್ನು ಸ್ಥಗಿತಗೊಳಿಸುವ ಬಗ್ಗೆ 2023ರ ಮೇ 19ರಂದು ಘೋಷಣೆ ಮಾಡಿತು. ಸೆಪ್ಟೆಂಬರ್ 30 ನೋಟು ವಿನಿಮಯಕ್ಕೆ ಅಂತಿಮ ದಿನವಾಗಿದೆ. ಅಂತಿಮ ದಿನಾಂಕಕ್ಕೆ ಇನ್ನು ನಾಲ್ಕು ದಿನಗಳು ಉಳಿದಿವೆ. ನಿಮ್ಮ ಬಳಿ ಇರುವ 2000 ರೂಪಾಯಿ ನೋಟುಗಳನ್ನು ಸೆಪ್ಟೆಂಬರ್ 30ರೊಳಗೆ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡುವಂತೆ ಅಥವಾ ಬೇರೆ ಮುಖಬೆಲೆಯ ನೋಟುಗಳಿಗೆ ವಿನಿಮಯ ಮಾಡಿಕೊಳ್ಳುವಂತೆ ಆರ್‌ಬಿಐ ಸೂಚಿಸಿದೆ.
ಬದಲಿಸುವ ಕ್ರಮ ಹೇಗೆ?
2000 ರೂಪಾಯಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಸೌಲಭ್ಯ ಸೆಪ್ಟೆಂಬರ್ 30ರವರೆಗೆ ಲಭ್ಯವಿದೆ. ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗಳಲ್ಲಿ ಈ ವಹಿವಾಟನ್ನು ಕೈಗೊಳ್ಳಬಹುದು. ಸೆಪ್ಟೆಂಬರ್ 30ರವರೆಗೆ ನಿಮ್ಮ ಬ್ಯಾಂಕ್ ಖಾತೆಗಳಿಗೆ ರೂ 2,000 ನೋಟುಗಳನ್ನು ಠೇವಣಿ ಮಾಡಬಹುದು ಅಥವಾ ಇವನ್ನು ನೀಡಿ ಬೇರೆ ನೋಟು ಪಡೆದುಕೊಳ್ಳಬಹುದು.
ಬ್ಯಾಂಕ್ ಶಾಖೆಗಳ ಸಾಮಾನ್ಯ ಕಾರ್ಯಚಟುವಟಿಕೆಗಳಿಗೆ ಅಡ್ಡಿಯಾಗುವಿಕೆ ಕಡಿಮೆಯಾಗುವಂತೆ ಈ ಉಪಕ್ರಮ ವಿನ್ಯಾಸಗೊಳಿಸಲಾಗಿದೆ. ನೀವು ಎಕ್ಸ್‌ಚೇಂಜ್ ಮಾಡಬಹುದಾದ ನೋಟುಗಳ ಗರಿಷ್ಠ ಮೌಲ್ಯ 20,000 ರೂ. ಬ್ಯಾಂಕ್ ಖಾತೆಗೆ ರೂ 2,000 ನೋಟುಗಳನ್ನು ಠೇವಣಿ ಮಾಡುವಾಗ KYC ಮಾನದಂಡಗಳನ್ನು ಅನುಸರಿಸುವುದು ಮತ್ತು ಇತರ ಕಾನೂನಾತ್ಮಕ ಕಾರ್ಯವಿಧಾನಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ.
ಠೇವಣಿ ಮಾಡುವುದಕ್ಕೆ ಯಾವುದೇ ಯಾವುದೇ ನಿರ್ದಿಷ್ಟ ಠೇವಣಿ ಮಿತಿ ಇಲ್ಲ ಎಂದು ಆರ್‌ಬಿಐ ಸ್ಪಷ್ಟವಾಗಿ ಹೇಳಿದೆ. ಆದರೆ ಕೆಲವು ಶಾಸನಬದ್ಧ ಅವಶ್ಯಕತೆಗಳು ಅನ್ವಯಿಸುತ್ತವೆ. ನೋಟುಗಳನ್ನು ಸಾಮಾನ್ಯ ಸೇವಿಂಗ್ಸ್ ಬ್ಯಾಂಕ್ ಠೇವಣಿ (BSBD) ಅಥವಾ ಜನ್‌ಧನ್ ಖಾತೆಗೆ ಠೇವಣಿ ಮಾಡುವಾಗ, ಸಾಮಾನ್ಯ ಮಿತಿಗಳು ಜಾರಿಯಲ್ಲಿರುತ್ತವೆ. 50,000 ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡುವ ವ್ಯಕ್ತಿಗಳು ಆದಾಯ ತೆರಿಗೆ ನಿಯಮಗಳ ನಿಯಮ 114B ಅನ್ನು ಅನುಸರಿಸಬೇಕು. ಇದಕ್ಕೆ ಪ್ಯಾನ್ ಸಂಖ್ಯೆಯನ್ನು ಒದಗಿಸುವ ಅಗತ್ಯವಿದೆ. ಒಂದೇ ದಿನದಲ್ಲಿ ರೂ 50,000ಕ್ಕಿಂತ ಕಡಿಮೆ ಮೊತ್ತಕ್ಕೆ ಠೇವಣಿ ಮಾಡಿದರೆ ಪ್ಯಾನ್ ಸಂಖ್ಯೆಯನ್ನು ಉಲ್ಲೇಖಿಸುವುದು ಕಡ್ಡಾಯವಲ್ಲ.
ಸೆ.30ರ ನಂತರ ಏನಾಗುತ್ತದೆ?
ಸೆ.30ರ ನಂತರವೂ ಈ ನೋಟುಗಳನ್ನು ನಿಮ್ಮಲ್ಲಿ ಉಳಿಸಿಕೊಂಡಿದ್ದರೆ ಅದೇನೂ ಅಪರಾಧವಲ್ಲ. ಆಗಲೂ ಈ ನೋಟು ಕಾನೂನುಬದ್ಧವಾಗಿಯೇ ಉಳಿದಿರುತ್ತದೆ. ಆದರೆ ಮಾರುಕಟ್ಟೆಯಲ್ಲಿ ಇದನ್ನು ಬಳಸಲು ಸಾಧ್ಯವಿಲ್ಲ. ಆರ್‌ಬಿಐ ಅದನ್ನು ಮರಳಿ ಪಡೆಯುತ್ತದೆ. ಆದರೆ ನಿರ್ದಿಷ್ಟ ಗಡುವಿನ ಒಳಗೆ ನೀವು ಯಾಕೆ ಅದನ್ನು ಮರಳಿಸಿಲ್ಲ ಎಂಬ ವಿವರಣೆಯನ್ನು ನೀಡಬೇಕಾಗುತ್ತದೆ.
ಆದರೆ ಅದರ ನಂತರ ನೀವಿ
ಎಷ್ಟು ನೋಟು ಬಂದಿದೆ?
RBI ಒದಗಿಸಿದ ಮಾಹಿತಿಯ ಪ್ರಕಾರ, ಚಲಾವಣೆಯಲ್ಲಿರುವ ನೋಟುಗಳಲ್ಲಿ ಸರಿಸುಮಾರು 93 ಪ್ರತಿಶತದಷ್ಟು ಬ್ಯಾಂಕ್‌ಗಳಿಗೆ ಮರಳಿದೆ. ಆಗಸ್ಟ್ 31, 2023ರೊಳಗೆ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲಾದ 2,000 ರೂ. ನೋಟುಗಳ ಒಟ್ಟು ಮೌಲ್ಯ 3.32 ಲಕ್ಷ ಕೋಟಿ ರೂ. 0.24 ಲಕ್ಷ ಕೋಟಿ ರೂಪಾಯಿ ಮೌಲ್ಯದ 2,000 ರೂಪಾಯಿ ನೋಟುಗಳು ಚಲಾವಣೆಯಲ್ಲಿ ಉಳಿದಿವೆ.
ಇದನ್ನೂ ಓದಿ: ₹2000 Notes Withdrawn: ಪಿಂಕ್ ನೋಟು ಮರಳಿಸಲು ಇನ್ನು ಐದೇ ದಿನ ಅವಕಾಶ; ನಿಮ್ಮಲ್ಲಿ ಇನ್ನೂ ಇದೆಯಾ?
ದೇಶ
Interest Rates: ಈ ವಾರ ಬದಲಾಗಲಿದೆ ಉಳಿತಾಯ ಖಾತೆ ಬಡ್ಡಿ ದರ; ತಜ್ಞರು ಹೇಳೋದೇನು?
Interest Rates: ಈ ವಾರ ಸಣ್ಣ ಉಳಿತಾಯ ಖಾತೆಗಳ (small savings schemes) ಬಡ್ಡಿ ದರ (Interest Rates) ಪರಿಷ್ಕರಣೆಯಾಗಲಿದೆ. ಬಡ್ಡಿ ದರ ಯಥಾ ಸ್ಥಿತಿ ಮುಂದುವರಿಯುವ ನಿರೀಕ್ಷೆ ಇದೆ.
ನವ ದೆಹಲಿ: 2023ರ ಅಕ್ಟೋಬರ್-ಡಿಸೆಂಬರ್ ತ್ರೈ ಮಾಸಿಕದ (October-December 2023 quarter) ಪಿಪಿಎಫ್(PPF), ಎನ್‌ಎಸ್‌ಸಿ(NSC), ಕೆವಿಪಿ(KVP) ಮತ್ತು ಪೋಸ್ಟ್ ಆಫೀಸ್(Post office) ಮುಂತಾದ ಸಣ್ಣ ಉಳಿತಾಯ ಯೋಜನೆಗಳ(small savings schemes) ಹೂಡಿಕೆ ಮೇಲಿನ ಬಡ್ಡಿದರಗಳ ಪರಿಷ್ಕರಣೆ ಸೆಪ್ಟೆಂಬರ್ 30ರಂದು ನಡೆಯಲಿದೆ. ಹಿಂದಿನ ತ್ರೈಮಾಸಿಕ(ಜುಲೈ-ಸೆಪ್ಟೆಂಬರ್ 2023)ದ ದರವನ್ನು ಜಿ-ಸೆಕ್ ಇಳುವರಿಯ ಆಧಾರದ ಮೇಲೆ ನಿರ್ಧರಿಸಲಾಗುವುದರಿಂದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಈ ಬಾರಿ ಬದಲಾಯಿಸುವ ಸಾಧ್ಯತೆಯಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಸಾಮಾನ್ಯವಾಗಿ ಸಣ್ಣ ಉಳಿತಾಯ ಖಾತೆಗಳ ಬಡ್ಡಿ ದರವನ್ನು ಹಿಂದಿನ ತ್ರೈ ಮಾಸಿಕದ ಟ್ರೆಂಡ್‌ಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ.
ತಜ್ಞರು ಏನು ಹೇಳುತ್ತಾರೆ?
ಪ್ರತಿ ತ್ರೈಮಾಸಿಕದ ಕೊನೆಯಲ್ಲಿ ಸಣ್ಣ ಉಳಿತಾಯ ಖಾತೆಗಳ ಬಡ್ಡಿ ದರವನ್ನು ಪರಿಷ್ಕರಿಸಲಾಗುತ್ತದೆ ಮತ್ತು ಅದಕ್ಕನುಗುಣವಾಗಿ ಮುಂದಿನ ತ್ರೈ ಮಾಸಿಕ ದರವನ್ನು ನಿರ್ಧರಿಸಲಾಗುತ್ತದೆ. 10 ವರ್ಷಗಳ ಜಿ-ಸೆಕ್ ಶೇಕಡಾ 7.0 ರಿಂದ 7.2ರ ನಡುವೆ ಇದೆ ಮತ್ತು ಮುಂದೆ ಶೇಕಡಾ 7.1-7.2ರಷ್ಟು ಮುಂದುವರಿಯುವ ನಿರೀಕ್ಷೆಯಿದೆ. ಈ ವರ್ಷದ ಸೆಪ್ಟಂಬರ್ ನಂತರ ಹಣದುಬ್ಬರ ದರವು ಶೇಕಡಾ 5-6ರ ಆಸುಪಾಸಿನಲ್ಲಿರಲಿದೆ ಎಂದು ನಿರೀಕ್ಷಿಸಲಾಗಿದೆ. ಆದ್ದರಿಂದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು ಬದಲಾಗುವ ಸಾಧ್ಯತೆ ಇಲ್ಲ ಎಂದು ಆರ್ಥಿಕ ಪರಿಣತರು ಹೇಳಿದ್ದಾರೆ.
ಪ್ರಸಕ್ತ ಬಡ್ಡಿ ದರ ಎಷ್ಟಿದೆ?
ಪ್ರಸ್ತುತ ಸಣ್ಣ ಉಳಿತಾಯ ಖಾತೆಗಳ ಬಡ್ಡಿ ದರಗಳ ವಿವರ ನೋಡುವುದಾದರೆ, ವಾರ್ಷಿಕವಾಗಿ ಪೋಸ್ಟ್ ಆಫೀಸ್ ಉಳಿತಾಯ ಖಾತೆಗಳಿಗೆ 4%, ಸೀನಿಯರ್ ಸಿಟಿಜನ್ಸ್ ಸೇವಿಂಗ್ಸ್ ಸ್ಕೀಮ್-SCSSಗೆ 8.2% ಮತ್ತು ಸಾರ್ವಜನಿಕ ಭವಿಷ್ಯ ನಿಧಿ-PPFಗೆ 7.1% ಬಡ್ಡಿ ದರವಿದೆ.
ಹಣಕಾಸು ಸಚಿವಾಲಯವು ಅಕ್ಟೋಬರ್-ನವೆಂಬರ್ ತ್ರೈಮಾಸಿಕದಲ್ಲಿ ಸಾರ್ವಜನಿಕ ಭವಿಷ್ಯ ನಿಧಿ ಖಾತೆಗಳ ಬಡ್ಡಿದರವನ್ನು 2023ರ ಸೆಪ್ಟಂಬರ್ ವೇಳೆಗೆ ವಾರ್ಷಿಕವಾಗಿ ಶೇಕಡಾ 7.10ಕ್ಕೆ ಉಳಿಸಿಕೊಳ್ಳಬಹುದು ಎಂಬ ಸಲಹೆ ವ್ಯಕ್ತವಾಗಿದೆ.
ಕಳೆದ ವರ್ಷದಲ್ಲಿ ದರ ಏರಿಕೆಯೊಂದಿಗೆ, ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳು ಪ್ರಸ್ತುತ ದೀರ್ಘಾವಧಿಯ ಸ್ಥಿರ ಠೇವಣಿ(FD)ಗಳಿಗೆ ಸಮಾನವಾಗಿವೆ ಎಂದು ಬ್ಯಾಂಕಿಂಗ್ ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಏಪ್ರಿಲ್‌ನಿಂದ ದರ ಏರಿಕೆಯನ್ನು ಸ್ಥಗಿತಗೊಳಿಸಿದೆ. ಅಲ್ಲದೆ ಜಾಗತಿಕವಾಗಿ ಹಣದುಬ್ಬರವು ನಿಧಾನವಾಗಿ ಕಡಿಮೆಯಾಗುತ್ತಿರುವುದರಿಂದ ರೆಪೊ ದರವು ಇದೇ ರೀತಿ ಮುಂದುವರಿಯುವ ನಿರೀಕ್ಷೆಯಿದೆ. ಆದ್ದರಿಂದ ಹೆಚ್ಚಿನ ಪರಿಷ್ಕರಣೆಗೆ ಯಾವುದೇ ಸಾಧ್ಯತೆ ಇಲ್ಲ. ಜೊತೆಗೆ SCSSನಲ್ಲಿ ಗಮನಾರ್ಹ ದರ ಏರಿಕೆಯ ಸಾಧ್ಯತೆಗಳು ಕಡಿಮೆ ಎಂದೂ ಅವರು ಹೇಳಿದ್ದಾರೆ.
ಜೂನ್ 30, 2023ರಲ್ಲಿ ಸರ್ಕಾರ ಅನೇಕ ಸಣ್ಣ ಉಳಿತಾಯ ಖಾತೆಗಳ ಬಡ್ಡಿ ದರವನ್ನು ಹೆಚ್ಚಿಸಿತ್ತು. 2020-21ರ ಎರಡನೇ ತ್ರೈ ಮಾಸಿಕದಿಂದ 2022-23ರ ಎರಡನೇ ತ್ರೈಮಾಸಿಕದವರೆಗೆ ಸತತ ಒಂಬತ್ತು ತ್ರೈ ಮಾಸಿಕಗಳಲ್ಲಿ ಯಾವುದೇ ಬದಲಾವಣೆಯಾಗದ ನಂತರ, ಅಕ್ಟೋಬರ್-ಡಿಸೆಂಬರ್ 2022ರ ತ್ರೈಮಾಸಿಕದಲ್ಲಿ ಸರ್ಕಾರವು ಕೆಲವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದ ನಂತರ ಇದು ನಾಲ್ಕನೇ ಹೆಚ್ಚಳವಾಗಿತ್ತು.
ಸದ್ಯದ ಬಡ್ಡಿ ದರಗಳ ವಿವರ
ಜುಲೈ ಮತ್ತು ಸೆಪ್ಟೆಂಬರ್ 2023ರ ತ್ರೈ ಮಾಸಿಕದಲ್ಲಿರುವ ಬಡ್ಡಿ ದರಗಳ ವಿವರ ಇಲ್ಲಿದೆ.
- ಉಳಿತಾಯ ಠೇವಣಿ-4%
- 1 ವರ್ಷದ ಪೋಸ್ಟ್ ಆಫೀಸ್ ಠೇವಣಿ-6.9%
- 1 ವರ್ಷದ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್-6.9%
- 2 ವರ್ಷದ ಪೋಸ್ಟ್ ಆಫೀಸ್ ಡೆಪಾಸಿಟ್- 7.0%
- 3 ವರ್ಷದ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್-7%
- 5 ವರ್ಷದ ಪೋಸ್ಟ್ ಆಫೀಸ್ ಡೆಪಾಸಿಟ್-7.5%
- 5 ವರ್ಷದ ರಿಕರಿಂಗ್ ಡೆಪಾಸಿಟ್-6.5%
- ನ್ಯಾಷನಲ್ ಸೇವಿಂಗ್ ಸರ್ಟಿಫಿಕೆಟ್ಸ್(NCS)-7.7%
- ಕಿಸಾನ್ ವಿಕಾಸ್ ಪತ್ರ: 7.5%(ಇದು 115 ತಿಂಗಳಲ್ಲಿ ಮೆಚ್ಯುರ್ ಆಗಲಿದೆ)
- ಪಬ್ಲಿಕ್ ಪ್ರೊವಿಡೆಂಟ್ ಫಂಡ್-7.1%
- ಸುಕನ್ಯಾ ಸಮೃದ್ದಿ ಖಾತೆ- 8.0%
- ಸೀನಿಯರ್ ಸಿಟಿಸನ್ ಸೇವಿಂಗ್ ಸ್ಕೀಮ್-8.2%
- ಮಾಸಿಕ ಆದಾಯ ಖಾತೆ-7.4%
ಸಣ್ಣ ಉಳಿತಾಯ ಯೋಜನೆಗಳಲ್ಲಿ 3 ವಿಧಗಳಿವೆ – ಉಳಿತಾಯ ಠೇವಣಿ, ಸಾಮಾಜಿಕ ಭದ್ರತಾ ಯೋಜನೆ ಮತ್ತು ಮಾಸಿಕ ಆದಾಯ ಯೋಜನೆ. ಉಳಿತಾಯ ಠೇವಣಿಗಳಲ್ಲಿ 1-3 ವರ್ಷಗಳ ಟೈಮ್ ಡೆಪಾಸಿಟ್ ಮತ್ತು 5 ವರ್ಷಗಳ ರಿಕರಿಂಗ್ ಡಿಪಾಸಿಟ್ ಗಳು ಸೇರಿವೆ. ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (PPF), ಸುಕನ್ಯಾ ಸಮೃದ್ಧಿ ಖಾತೆ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿವೆ. ಮಾಸಿಕ ಆದಾಯ ಯೋಜನೆ ಮಾಸಿಕ ಆದಾಯ ಖಾತೆಯನ್ನು ಒಳಗೊಂಡಿದೆ.
ಇದನ್ನೂ ಓದಿ: Server Hack : ಆಸ್ತಿ ನೋಂದಣಿಗಾಗಿ ರಿಜಿಸ್ಟ್ರಾರ್ ಕಚೇರಿಗೆ ಹೋದವರ ಬ್ಯಾಂಕ್ ಖಾತೆಯಿಂದ ಹಣ ಮಾಯ!
ಕರ್ನಾಟಕ
Gold Rate Today: ಬೆಂಗಳೂರಿನಲ್ಲಿ ಸತತ 2ನೇ ದಿನವೂ ಚಿನ್ನದ ಬೆಲೆ ಏರಿಕೆ; ಇಂದಿನ ದರ ಇಷ್ಟಿದೆ
Gold Rate Today: ಭಾನುವಾರವೂ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದೆ. ಒಂದು ಗ್ರಾಂಗೆ 10 ರೂ. ಏರಿಕೆಯಾಗಿದ್ದು, ಕೊಳ್ಳುವವರ ಜೇಬಿಗೆ ತುಸು ಭಾರ ಎನಿಸಲಿದೆ.
ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಭಾನುವಾರವೂ (ಸೆಪ್ಟೆಂಬರ್ 24) ಬಂಗಾರದ ಬೆಲೆ (Gold Rate Today) ಜಾಸ್ತಿಯಾಗುತ್ತಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 5,495 ರೂ. ಆಗಿದ್ದು, ಒಂದು ಗ್ರಾಂಗೆ 10 ರೂ. ಜಾಸ್ತಿಯಾದಂತಾಗಿದೆ. ಹಾಗೆಯೇ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 5,995 ರೂ. ಆಗಿದ್ದು, ಒಂದೇ ದಿನದಲ್ಲಿ 11 ರೂ. ಏರಿಕೆಯಾಗಿದೆ.
ಶನಿವಾರವೂ (ಸೆಪ್ಟೆಂಬರ್ 23) ಬಂಗಾರದ ಬೆಲೆಯು ಇಷ್ಟೇ ಏರಿಕೆಯಾಗಿತ್ತು. ಶುಕ್ರವಾರ ಒಂದು ಗ್ರಾಂ ಚಿನ್ನದ ಬೆಲೆಯು 20 ರೂ. ಇಳಿಕೆಯಾಗಿದ್ದು ಗ್ರಾಹಕರಿಗೆ ತುಸು ನಿರಾಳ ಭಾವ ಮೂಡಿಸಿತ್ತು. ಆದರೆ, ಶನಿವಾರ ಹಾಗೂ ಭಾನುವಾರ ಸತತ ಏರಿಕೆ ಕಂಡಿದೆ. ಆದಾಗ್ಯೂ, ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ 22 ಕ್ಯಾರಟ್ ಚಿನ್ನದ ಬೆಲೆಯು ಗ್ರಾಂಗೆ 5,500 ದಾಟಿತ್ತು. ಹಾಗೆಯೇ, 24 ಕ್ಯಾರಟ್ ಚಿನ್ನದ ಬೆಲೆಯು 6 ಸಾವಿರ ರೂ. ದಾಟಿತ್ತು. ಹಬ್ಬದ ಬಳಿಕ ತುಸು ಇಳಿಕೆಯಾಗಿರುವುದು ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.
ಭಾರತ ವಿಶ್ವದಲ್ಲಿಯೇ ಎರಡನೆಯ ಅತಿ ದೊಡ್ಡ ಬಂಗಾರದ ( Gold rate ) ಮಾರುಕಟ್ಟೆಯಾಗಿದೆ. ಚೀನಾ ಬಿಟ್ಟರೆ ಅತಿ ಹೆಚ್ಚು ಚಿನ್ನ ಕೊಳ್ಳುವ ದೇಶ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು ಭಾರತ ಮಾತ್ರ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಜನ ಸಂಖ್ಯೆಯ ಹೆಚ್ಚಳ, ವಿವಾಹ ಸಮಾರಂಭಗಳ ಏರಿಕೆ, ಹಬ್ಬಗಳ ಸಂಭ್ರಮ, ಜನರ ಆದಾಯದಲ್ಲಿ ಏರಿಕೆ, ನಗರೀಕರಣ ಮೊದಲಾದ ಕಾರಣಗಳಿಂದ ಚಿನ್ನದ ಖರೀದಿ ಗಣನೀಯ ಏರಿಕೆಯಾಗುತ್ತಿದೆ. ಈ ಟ್ರೆಂಡ್ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ತನ್ನ ವರದಿಯಲ್ಲಿ ತಿಳಿಸಿದೆ. ಈ ವರದಿ ಹಲವು ಸ್ವಾರಸ್ಯಕರ ಅಂಶಗಳನ್ನು ಬಹಿರಂಗಪಡಿಸಿದೆ.
ಇದನ್ನೂ ಓದಿ: Gold Fruad : Hallmark ಚಿನ್ನಾಭರಣ ನೀಡಿ ಲೋನ್ ಪಡೆಯಲು ಯತ್ನ: SBI ಮ್ಯಾನೇಜರ್ ಜಾಣ್ಮೆ ಮುಂದೆ ನಡೆಯದ ಆಟ!
ಭಾರತದಿಂದ ಇತ್ತೀಚಿನ ವರ್ಷಗಳಲ್ಲಿ ಜ್ಯುವೆಲ್ಲರಿ ರಫ್ತು ಕೂಡ ಗಣನೀಯ ಏರಿಕೆಯಾಗುತ್ತಿದೆ. 2015ರಲ್ಲಿ 7.6 ಶತಕೋಟಿ ಡಾಲರ್‌ನಷ್ಟಿದ್ದ ಜ್ಯುವೆಲ್ಲರಿ ರಫ್ತು 2020ರಲ್ಲಿ ಕೋವಿಡ್-19 ಬರುವುದಕ್ಕೆ ಮುನ್ನ 12.4 ಶತಕೋಟಿ ಡಾಲರ್‌ಗೆ ಏರಿಕೆಯಾಗಿತ್ತು. ಭಾರತೀಯ ಜ್ಯುವೆಲ್ಲರಿಗಳನ್ನು ಹೊಸ ಮಾರುಕಟ್ಟೆಗೆ ರಫ್ತು ಮಾಡಬೇಕಾದ ಅಗತ್ಯವೂ ಇದೆ. ಈಗ ಜ್ಯುವೆಲ್ಲರಿ ರಫ್ತಿನ 90% ಪಾಲು ಕೂಡ ಕೇವಲ ಐದು ದೇಶಗಳಿಗೆ ಹೋಗುತ್ತಿದೆ.
-
ದೇಶ13 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
ವಿದೇಶ21 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
South Cinema24 hours ago
Heart attack : ಹಿರಿಯ ನಟ ಬ್ಯಾಂಕ್ ಜನಾರ್ದನ್ಗೆ ಹೃದಯಾಘಾತ?
-
ಸುವಚನ8 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ14 hours ago
Manipur Horror: ಅಪಹರಿಸಿ ಕೊಂದ್ರಲ್ಲಾ… ನಮ್ಮ ಮಕ್ಕಳು ಮಾಡಿದ ತಪ್ಪಾದ್ರೂ ಏನು? ಹತ್ಯೆಗೀಡಾದ ವಿದ್ಯಾರ್ಥಿಗಳ ಪೋಷಕರ ಪ್ರಶ್ನೆ
-
ಕರ್ನಾಟಕ24 hours ago
Bengaluru Bandh : ಪೊಲೀಸರಿಗೆ ಕೊಟ್ಟ ಊಟದಲ್ಲಿ ಸಿಕ್ಕಿತು ಫ್ರೈಡ್ ಇಲಿ!
-
ದೇಶ14 hours ago
GST Evasion: ಜಿಎಸ್ಟಿ ವಂಚಿಸಿದ ಬಿಜೆಪಿ ನಾಯಕಿಯ ಸಕ್ಕರೆ ಕಾರ್ಖಾನೆಯ 19 ಕೋಟಿ ರೂ. ಮೌಲ್ಯದ ಸೊತ್ತು ಜಪ್ತಿ!
-
ಆಟೋಮೊಬೈಲ್20 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು