Here are the details of the 10 worst train accidents that occurred in India Odisha Train Accident : ಭಾರತದಲ್ಲಿ ಸಂಭವಿಸಿದ 10 ಭೀಕರ ರೈಲು ಅಪಘಾತಗಳ ವಿವರ ಇಲ್ಲಿದೆ - Vistara News

ದೇಶ

Odisha Train Accident : ಭಾರತದಲ್ಲಿ ಸಂಭವಿಸಿದ 10 ಭೀಕರ ರೈಲು ಅಪಘಾತಗಳ ವಿವರ ಇಲ್ಲಿದೆ

ಸಾವಿರಾರು ಮಂದಿಯನ್ನು ಏಕಕಾಲಕ್ಕೆ ಹೊತ್ತೊಯ್ಯುವ ರೈಲುಗಳು ಅವಘಡಕ್ಕೆ ಒಳಗಾದರೆ ಸಾವು- ನೋವುಗಳು ಸಂಖ್ಯೆಯೂ ಹೆಚ್ಚಾಗುತ್ತದೆ.

VISTARANEWS.COM


on

Odisha Train Accident
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭುವನೇಶ್ವರ: ಒಡಿಶಾದ ಬಾಲಾಸೋರ್‌ ಜಿಲ್ಲೆಯಲ್ಲಿ ನಡೆದ ರೈಲು ದುರಂತದಲ್ಲಿ (Odisha Train Accident) 50ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ಕೋರಮಂಡಲ ಎಕ್ಸ್‌ಪ್ರೆಸ್‌ ರೈಲಿನ ಐದಾರು ಬೋಗಿಗಳು ಹಳಿತಪ್ಪಿ ಬಿದ್ದಿದ್ದು, 300ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವವರಲ್ಲಿ ಹೆಚ್ಚನ ಜನರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಜಾಸ್ತಿಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಇದು ಇತ್ತೀಚಿನ ದಿನಗಳಲ್ಲಿ ನಡೆದ ಅತ್ಯಂತ ಭೀಕರ ರೈಲು ಅವಘಡ ಎನಿಸಿಕೊಂಡಿದೆ. ನೂತನ ತಂತ್ರಜ್ಞಾನ, ಅತ್ಯಾಧುನಿಕ ಸಂಪರ್ಕ ಸಾಧನಗಳು ಹಾಗೂ ಮೂಲ ಸೌಕರ್ಯದ ಅಭಿವೃದ್ಧಿಯಿಂದಾಗಿ ರೈಲು ಅವಘಡಗಳ ಸಂಖ್ಯೆ ಕಡಿಮೆಯಾಗಿತ್ತು. ಆದಾಗ್ಯೂ ದುರದೃಷ್ಟವಶಾತ್​ ದೊಡ್ಡ ಪ್ರಮಾಣದ ಅಪಘಾತ ನಡೆದಿದೆ. ಈ ವೇಳೆ ಈ ಹಿಂದೆ ಭಾರತದಲ್ಲಿ ನಡೆದಿರುವ ಅತ್ಯಂತ ಭೀಕರ ರೈಲು ಅವಘಡಗಳನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

1- 1981ರ ಬಿಹಾರ ರೈಲು ದುರಂತ

ಬಿಹಾರದ ಸಹರ್ಸಾ ಬಳಿ ಈ ದುರಂತ ನಡೆದಿತ್ತು. ಸುಮಾರು 900 ಜನರನ್ನು ಹೊತ್ತೊಯ್ಯುತ್ತಿದ್ದ ಪ್ಯಾಸೆಂಜರ್ ರೈಲು ಹಳಿ ತಪ್ಪಿ ಭಾಗಮತಿ ನದಿಗೆ ಬಿದ್ದಿತ್ತು. ಘಟನೆಯಲ್ಲಿ 500ಕ್ಕೂ ಅಧಿಕ ಮಂದಿ ಘಟನೆಯಲ್ಲಿ ಮೃತಪಟ್ಟಿದ್ದರು.

2- 1995 ಫಿರೋಜಾಬಾದ್ ರೈಲು ದುರಂತ

ಉತ್ತರ ಪ್ರದೇಶದ ಫಿರೋಜಾಬಾದ್ ಬಳಿ 1985ರಲ್ಲಿ ಈ ದುರ್ಘಟನೆ ಸಂಭವಿಸಿತ್ತು. ದೆಹಲಿಗೆ ತೆರಳುತ್ತಿದ್ದ ಪುರುಷೋತ್ತಮ್ ಎಕ್ಸ್​​ಪ್ರೆಸ್​ ನಿಂತಿದ್ದ ಕಾಳಿಂದಿ ಎಕ್ಸ್​ಪ್ರೆಸ್​ ರೈಲಿಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ 358 ಜನರು ಮೃಪಟ್ಟಿದ್ದರು. ನೂರಾರು ಮಂದಿ ಗಾಯಗೊಂಡಿದ್ದರು.

3- 1999 ಗೈಸಲ್ ರೈಲು ದುರಂತ

    ಅಸ್ಸಾಂ ರಾಜಧಾನಿ ಗುವಾಹಟಿಯಿಂದ 310 ಮೈಲಿ ದೂರದಲ್ಲಿರುವ ಗೈಸಲ್ ಬಳಿ 2,500 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ಎರಡು ರೈಲುಗಳು ಮುಖಾಮುಖಿ ಡಿಕ್ಕಿ ಹೊಡೆದಿದ್ದವು ಪರಿಣಾಮ 290 ಪ್ರಯಾಣಿಕರು ಮೃತಪಟ್ಟಿದ್ದರು. ಅತಿ ವೇಗದಲ್ಲಿ ಪರಸ್ಪರ ಡಿಕ್ಕಿ ಹೊಡೆದಿದ್ದರಿಂದ ರೈಲುಗಳು ಸ್ಫೋಟಗೊಂಡಿದ್ದವು.

    4- 1998 ಖನ್ನಾ ರೈಲು ದುರಂತ

    ಪಂಜಾಬ್​ನ ಉತ್ತರ ರೈಲ್ವೆಯ ಖನ್ನಾ- ಲೂಧಿಯಾನ ವಿಭಾಗದ ಖನ್ನಾ ಬಳಿ ಅಮೃತಸರಕ್ಕೆ ತೆರಳುತ್ತಿದ್ದ ಗೋಲ್ಡನ್ ಟೆಂಪಲ್ ಮೇಲ್ ರೈಲು ಹಳಿ ತಪ್ಪಿ ಬಿದ್ದಿತ್ತು. ಈ ಬೋಗಿಗಳಿಗೆ ಕೋಲ್ಕತ್ತಾಗೆ ತೆರಳುತ್ತಿದ್ದ ಜಮ್ಮು ತಾವಿ- ಸೀಲ್ಡಾ ಎಕ್ಸ್​​ಪ್ರೆಸ್​ ರೈಲು ಡಿಕ್ಕಿ ಹೊಡೆದಿದೆ. 212 ಮಂದಿ ಈ ಘಟನೆಯಲ್ಲಿ ಮೃತಪಟ್ಟಿದ್ದರು. ನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

    5- 2002ರ ಹೌರಾ-ನವದೆಹಲಿ ರಾಜಧಾನಿ ಎಕ್ಸ್​ಪ್ರೆಸ್​ ದುರಂತ

    2000 ಅವಧಿಯಲ್ಲಿ ಭಾರತದ ಅತಿ ವೇಗದ ರೈಲು ಎಂದು ಹೇಳಲಾಗಿದ್ದ ಹೌರಾ-ನವದೆಹಲಿ ರಾಜಧಾನಿ ಎಕ್ಸ್​ಪ್ರೆಸ್​ ರೈಲು ಗಯಾ ಮತ್ತು ದೆಹ್ರಿ-ಆನ್-ಸೋನೆ ನಿಲ್ದಾಣಗಳ ನಡುವಿನ ರಫಿಗಂಜ್ ಬಳಿ ಹಳಿ ತಪ್ಪಿತ್ತು. 130 ಕಿ.ಮೀ ವೇಗದಲ್ಲಿ ಸಾಗುತ್ತಿದ್ದ ರೈಲಿನ ಬೋಗಿಗಳು ಧವಿ ನದಿಗೆ ಬಿದ್ದಿದ್ದವು. ರಾತ್ರಿ 10.40 ಕ್ಕೆ ನಡೆದ ಘಟನೆಯಲ್ಲಿ 140ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

    6- 2010 ಜ್ಞಾನೇಶ್ವರಿ ಎಕ್ಸ್ ಪ್ರೆಸ್ ದುರಂತ

    ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಖೇಮಾಶುಲಿ ಮತ್ತು ಸರ್ದಿಹಾ ನಡುವಿನ ಪ್ರದೇಶದಲ್ಲಿ ಮುಂಬೈಗೆ ತೆರಳುತ್ತಿದ್ದ ಹೌರಾ ಕುರ್ಲಾ ಲೋಕಮಾನ್ಯ ತಿಲಕ್ ಜ್ಞಾನೇಶ್ವರಿ ಸೂಪರ್ ಡೀಲಕ್ಸ್ ಎಕ್ಸ್​ಪ್ರೆಸ್​ ರೈಲು ಹಳಿ ತಪ್ಪಿತ್ತು. ಘಟನೆಯಲ್ಲಿ ಕನಿಷ್ಠ 170 ಮಂದಿ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರಿಯಾಗಿತ್ತು.

    7- 2016 ಇಂದೋರ್ ಪಾಟ್ನಾ ದುರಂತ

    ಇಂದೋರ್-ಪಾಟ್ನಾ ಎಕ್ಸ್​​ಪ್ರೆಸ್​ 2016ರ ನವೆಂಬರ್ 20ರಂದು ಕಾನ್ಪುರದ ಪುಖ್ರಾಯನ್ ಬಳಿ ಹಳಿ ತಪ್ಪಿ ಉರುಳಿ ಬಿದ್ದಿತ್ತು. ಘಟನೆಯಲ್ಲಿ 150 ಜನರು ಸಾವನ್ನಪ್ಪಿದರು ಹಾಗೂ 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

    8- 2005 ವಾಲಿಗೊಂಡ ರೈಲು ದುರಂತ

    2005ರ ಅಕ್ಟೋಬರ್ 29ರಂದು ಆಂಧ್ರಪ್ರದೇಶದ ವಾಲಿಗೊಂಡದಲ್ಲಿ ಈ ಅವಘಡ ನಡೆದಿತ್ತು. ಏಕಾಏಕಿ ಸುರಿದ ಮಳೆಗೆ ಸಣ್ಣ ರೈಲು ಸೇತುವೆಯನ್ನು ಕೊಚ್ಚಿಕೊಂಡು ಹೋಗಿತ್ತು. ಅದರ ಮಾಹಿತಿ ಇಲ್ಲದೇ ಡೆಲ್ಟಾ ಫಾಸ್ಟ್ ಪ್ಯಾಸೆಂಜ್​ ರೈಲು ಆ ಹಳಿಯ ಮೇಲೆ ಬಂದು ಉರುಳಿ ಬಿದ್ದಿತ್ತು. ಘಟನೆಯಲ್ಲಿ 114 ಜನರು ಮೃತಪಟ್ಟಿದ್ದರು 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

    ಇದನ್ನೂ ಓದಿ : Odisha Train Accident: ಒಡಿಶಾದಲ್ಲಿ ಕೋರಮಂಡಲ ಎಕ್ಸ್‌ಪ್ರೆಸ್‌ ರೈಲು ಅಪಘಾತ; 50ಕ್ಕೂ ಹೆಚ್ಚು ಜನರ ಸಾವು

    9- 2010 ಸೈಂಥಿಯಾ ರೈಲು ಅಪಘಾತ

    ಜುಲೈ 19, 2010ರಂದು ಪಶ್ಚಿಮ ಬಂಗಾಳದ ಸೈಂಥಿಯಾದಲ್ಲಿ ಉತ್ತರ ಬಂಗಾ ಎಕ್ಸ್​ಪ್ರೆಸ್​ ಮತ್ತು ವನಂಚಲ್ ಎಕ್ಸ್​ಪ್ರೆಸ್​ ಪರಸ್ಪರ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಸುಮಾರು 63 ಜನರು ಮೃತಪಟ್ಟಿದ್ದರು. 165 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

    10- 2012 ಹಂಪಿ ಎಕ್ಸ್ ಪ್ರೆಸ್ ಅಪಘಾತ

    2012ರ ಮೇ 22ರಂದು ಹುಬ್ಬಳ್ಳಿ- ಬೆಂಗಳೂರು ಹಂಪಿ ಎಕ್ಸ್​ಪ್ರೆಸ್​ ರೈಲು ಆಂಧ್ರಪ್ರದೇಶದ ಬಳಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ರೈಲಿನ ನಾಲ್ಕು ಬೋಗಿಗಳು ಹಳಿತಪ್ಪಿದ್ದವು. ಅವುಗಳಲ್ಲಿ ಒಂದು ಬೆಂಕಿಗೆ ಆಹುತಿಯಾಗಿತ್ತು. ಘಟನೆಯಲ್ಲಿ 25 ಪ್ರಯಾಣಿಕರು ಮೃತಪಟ್ಟಿದ್ದು ಸುಮಾರು 43 ಜನರು ಗಾಯಗೊಂಡಿದ್ದರು.

    ಭಾರತದಲ್ಲಿ ಇನ್ನೂ ಹಲವಾರು ರೈಲು ಅವಘಡಗಳು ಸಂಭವಿಸಿವೆ. ಆದರೆ, ಸಾವು ನೋವುಗಳ ವಿಚಾರಕ್ಕೆ ಬಂದಾಗ ಈ ಮೇಲಿನ ಅಪಘಾತಗಳಲ್ಲಿ ಹೆಚ್ಚಿನ ಸಾವು, ನೋವುಗಳು ಸಂಭವಿಸಿವೆ. ಹೀಗಾಗಿ ಇವುಗಳನ್ನು ಅತ್ಯಂತ ಭೀಕರ ದುರಂತ ಎಂದು ಹೇಳಲಾಗುತ್ತದೆ.

    ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
    ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
    Continue Reading
    Click to comment

    Leave a Reply

    Your email address will not be published. Required fields are marked *

    ವೈರಲ್ ನ್ಯೂಸ್

    Viral Video: ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿಕೊಂಡ ಬೆಂಕಿಯನ್ನು ಈತ ಏಕಾಂಗಿಯಾಗಿ ಹೇಗೆ ನಂದಿಸಿದ ನೋಡಿ!

    Viral Video: ತೆಲಂಗಾಣದ ಪೆಟ್ರೋಲ್‌ ಬಂಕ್‌ನಲ್ಲಿ ಲಾರಿಯೊಂದಕ್ಕೆ ಬೆಂಕಿ ಹೊತ್ತಿಕೊಂಡಿದ್ದು ಕೂಡಲೇ ಸಿಬ್ಬಂದಿ ಏಕಾಂಗಿಯಾಗಿ ನಂದಿಸಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಸಿಬ್ಬಂದಿಯ ಸಮಯೋಚಿತ ನಿರ್ಧಾರವನ್ನು, ಧೈರ್ಯವನ್ನು ಹಲವರು ಮುಕ್ತಕಂಠದಿಂದ ಹೊಗಳಿದ್ದಾರೆ. ಈತನೇ ನಿಜವಾದ ಹೀರೋ ಎಂದು ಅನೇಕರು ಶ್ಲಾಘಿಸಿದ್ದಾರೆ.

    VISTARANEWS.COM


    on

    Viral Video
    Koo

    ಹೈದರಾಬಾದ್‌: ದೇಶದಲ್ಲಿ ತಾಪಮಾನ ಹೆಚ್ಚಾಗುತ್ತಿದೆ. ಇತ್ತೀಚೆಗೆ ಅಲ್ಲಲ್ಲಿ ಮಳೆಯಾಗುತ್ತಿದ್ದರೂ ತಾಪಮಾನ ಗಣನೀಯವಾಗಿ ಕಡಿಮೆಯಾಗುತ್ತಿಲ್ಲ. ಅತ್ಯಧಿಕ ಉಷ್ಣಾಂಶದ ಕಾರಣದಿಂದ ದೇಶದ ಹಲವೆಡೆ ನಿಲ್ಲಿಸಿದ್ದ, ಚಲಿಸುತ್ತಿರುವ ವಾಹನಗಳು ಬೆಂಕಿಗಾಹುತಿಯಾಗುವ ಘಟನೆ ಪದೇ ಪದೆ ಘಟಿಸುತ್ತಲೇ ಇದೆ. ಸದ್ಯ ಅಂತಹದ್ದೇ ಒಂದು ದುರಂತ ತೆಲಂಗಾಣದಲ್ಲಿ ನಡೆದಿದ್ದು, ಪೆಟ್ರೋಲ್‌ ಬಂಕ್‌ ಉದ್ಯೋಗಿಯೊಬ್ಬರ ಸಮಯಪ್ರಜ್ಞೆಯಿಂದ ಬಹು ದೊಡ್ಡ ಅನಾಹುತವೊಂದು ತಪ್ಪಿದೆ. ಸಿಬ್ಬಂದಿ ಬೆಂಕಿ ನಂದಿಸಲು ಏಕಾಂಗಿಯಾಗಿ ನಡೆಸುತ್ತಿರುವ ಪ್ರಯತ್ನ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಸದ್ಯ ವೈರಲ್‌ ಆಗಿದೆ (Viral Video).

    ತೆಲಂಗಾಣದ ಯಾದಾದ್ರಿ ಭುವನಗಿರಿಯ ಉಪನಗರದಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಭಾನುವಾರ ಈ ಘಟನೆ ನಡೆದಿದೆ. ಇಂಧನ ಹಾಕಿಸಿಕೊಳ್ಳಲು ಟ್ರಕ್ಕೊಂದು ಪೆಟ್ರೋಲ್‌ ಬಂಕ್‌ ಪ್ರವೇಶಿಸುತ್ತದೆ. ಬಿಸಿಲಿನ ಝಳಕ್ಕೆ ಇದ್ದಕ್ಕಿದ್ದಂತೆ ಟ್ರಕ್‌ನ ಇಂಧನ ಟ್ಯಾಂಕ್‌ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಳ್ಳುತ್ತದೆ. ಚಾಲಕ ಮತ್ತು ನಿರ್ವಾಹಕ ಕೂಡಲೇ ಟ್ರಕ್‌ನಿಂದ ಜಿಗಿದು ಪಾರಾಗುತ್ತಾರೆ.

    ಸ್ಫೋಟದ ಶಬ್ದಕ್ಕೆ ಎಲ್ಲರೂ ದಂಗಾಗಿ ನಿಲ್ಲುತ್ತಾರೆ. ಈ ವೇಳೆ ಕೂಡಲೆ ಎಚ್ಚೆತ್ತುಕೊಳ್ಳುವ ಪೆಟ್ರೋಲ್‌ ಬಂಕ್‌ ಸಿಬ್ಬಂದಿಯೋರ್ವರು ಧೈರ್ಯದಿಂದ ಮುನ್ನುಗ್ಗಿ ಅಗ್ನಿಶಾಮಕ ಯಂತ್ರ (Fire extinguisher)ವನ್ನು ಹಿಡಿದು ಉರಿಯುತ್ತಿರುವ ಟ್ರಕ್ ಕಡೆಗೆ ಧಾವಿಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಾರೆ.

    ಅವರ ಆರಂಭಿಕ ಪ್ರಯತ್ನಗಳ ಹೊರತಾಗಿಯೂ, ಅಗ್ನಿಶಾಮಕ ಸಿಲಿಂಡರ್ ಖಾಲಿಯಾದ ನಂತರ ಬೆಂಕಿ ಮತ್ತೆ ಹೊತ್ತಿಕೊಂಡಿತು. ಕೂಡಲೇ ಅವರು ಮತ್ತೊಂದು ಅಗ್ನಿಶಾಮಕವನ್ನು ತಂದು ಬೆಂಕಿಯನ್ನು ನಿಯಂತ್ರಿಸುವ ಸಾಹಸವನ್ನು ಮುಂದುವರಿಸಿದರು. ಅವರ ಧೈರ್ಯದಿಂದ ಪ್ರೇರಿತರಾಗಿ ಬಂಕ್‌ನಲ್ಲಿದ್ದ ಇತರರು ಸಹ ಕೈ ಜೋಡಿಸತೊಡಗಿದರು. ಎಲ್ಲರ ಪ್ರಯತ್ನದ ಫಲವಾಗಿ, ಸತತ ಹೋರಾಟದ ನಂತರ ಬೆಂಕಿ ನಿಯಂತ್ರಣಕ್ಕೆ ಬಂತು. ಈ ಮೂಲಕ ಸಂಭವಿಸಬಹುದಾದ ದೊಡ್ಡ ಅನಾಹುತವೊಂದು ತಪ್ಪಿತು. ಅದು ಪೆಟ್ರೋಲ್‌ ಬಂಕ್‌ ಆಗಿರುವ ಕಾರಣ ತುಸು ಹೆಚ್ಚು ಕಡಿಮೆಯಾಗಿದ್ದರೂ ಬಹು ದೊಡ್ಡ ಸ್ಫೋಟ ಸಂಭವಿಸುವ ಸಾಧ್ಯತೆ ಇತ್ತು. ಸಿಬ್ಬಂದಿಯ ಸಮಯೋಚಿತ ಕಾರ್ಯದಿಂದಾಗಿ ಆಪತ್ತು ಕೂದಲೆಳೆ ಅಂತರದಲ್ಲಿ ತಪ್ಪಿತು.

    ನೆಟ್ಟಿಗರಿಂದ ಮೆಚ್ಚುಗೆ

    ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಅಪ್‌ಲೋಡ್‌ ಅದ ಕೆಲವೇ ಕ್ಷಣಗಳಲ್ಲಿ ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಹಲವು ಲೈಕ್‌ ಬಟನ್‌ ಒತ್ತಿದರೆ ಇನ್ನು ಕೆಲವರು ಸಿಬ್ಬಂದಿಯ ಸಮಯೋಚಿತ ನಿರ್ಧಾರವನ್ನು, ಧೈರ್ಯವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.

    ʼʼಬೆಂಕಿ ನಂದಿಸಲು ಏಕಾಂಗಿಯಾಗಿ ಹೋರಾಡಿದ ಸಿಬ್ಬಂದಿಗೆ ಅತ್ಯಂತ ಶೂರ ಎನ್ನುವ ಅವಾರ್ಡ್‌ ಕೊಡಬೇಕು. ಒಂದು ವೇಳೆ ಸ್ಥಳದಲ್ಲಿ ನಾನು ಇದ್ದಿದ್ದರೆ ಇತರರಂತೆ ಓಡಿ ಹೋಗುತ್ತಿದ್ದೆʼʼ ಎಂದು ಒಬ್ಬರು ಪ್ರಾಮಾಣಿಕವಾಗಿ ಹೇಳಿಕೊಂಡಿದ್ದಾರೆ.

    ʼʼಈ ಸಿಬ್ಬಂದಿಯ ಧೈರ್ಯಕ್ಕೆ ಹ್ಯಾಟ್ಸಾಫ್‌ʼʼ ಎಂದು ಮತ್ತೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ. ʼʼಬೆಂಕಿ ಆಕಸ್ಮಿಕದಿಂದ ಪಾರಾಗುವುದು ಹೇಗೆ ಎನ್ನುವ ಬಗ್ಗೆ ಈತನಿಗೆ ತರಬೇತಿ ಸಿಕ್ಕಿರಬೇಕು. ಅದಕ್ಕೆ ಆತ ಧೈರ್ಯವಾಗಿ ಮುನ್ನುಗ್ಗಿದ್ದಾನೆʼʼ ಎಂದು ಇನ್ನೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ʼʼಆತನ ಧೈರ್ಯಕ್ಕೆ ಪ್ರಶಸ್ತಿ ಕೊಡಲೇಬೇಕುʼʼ ಎಂದು ಮಗದೊಬ್ಬರು ಆಗ್ರಹಿಸಿದ್ದಾರೆ. ಈತನೇ ನಿಜವಾದ ಹೀರೋ ಎಂದು ಅನೇಕರು ಶ್ಲಾಘಿಸಿದ್ದಾರೆ.

    ಇದನ್ನೂ ಓದಿ:Weight Lose: ತೂಕ ಇಳಿಸಲು ಬಯಸುವಿರಾ? ಈ ಸಂಗತಿ ತಿಳಿದಿರಲಿ

    Continue Reading

    Lok Sabha Election 2024

    Prashant Kishor: ಈ ಬಾರಿ ಮೋದಿಗೆ ಹಿನ್ನಡೆ ಆಗುತ್ತಾ? ಪ್ರಶಾಂತ್ ಕಿಶೋರ್ ಲೇಟೆಸ್ಟ್ ಲೆಕ್ಕಾಚಾರ ಹೀಗಿದೆ

    Prashant Kishor: ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಊಹಿಸಿದ್ದು, 2019ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಬಿಜೆಪಿ ಹೆಚ್ಚುವರಿ ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದ್ದಾರೆ. ಬಿಜೆಪಿ ಬಹುಮತ ಪಡೆಯುವ ಸಾಧ್ಯತೆಯಿಲ್ಲ ಮತ್ತು ಮೊದಲ ಕೆಲವು ಹಂತಗಳ ಮತದಾನ ಆಡಳಿತ ಪಕ್ಷದ ಪರವಾಗಿಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದು, ಕೆಲವು ವರದಿಗಳು ಇದನ್ನೇ ಊಹಿಸಿರುವ ಮಧ್ಯೆ ಪ್ರಶಾಂತ್‌ ಕಿಶೋರ್‌ ಈ ರೀತಿ ಹೇಳಿಕೆ ನೀಡಿರುವುದು ಕಮಲ ಪಾಳಯಕ್ಕೆ ಕೊಂಚ ಮಟ್ಟಿನ ಸಮಾಧಾನ ತಂದಿತ್ತಿದೆ.

    VISTARANEWS.COM


    on

    Prashant Kishor
    Koo

    ನವದೆಹಲಿ: ಲೋಕಸಭಾ ಚುನಾವಣೆ (Lok Sabha Election)ಯ ಮೊದಲ 5 ಹಂತಗಳ ಮತದಾನ ಮುಗಿದಿದೆ. ಇನ್ನು ಎರಡು ಹಂತಗಳ ಮತದಾನ ಬಾಕಿ ಇದ್ದು, ಸೋಲು-ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ಈ ಮಧ್ಯೆ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ (Prashant Kishor) ಫಲಿತಾಂಶವನ್ನು ಊಹಿಸಿದ್ದು, 2019ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಬಿಜೆಪಿ ಹೆಚ್ಚುವರಿ ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಬಿಜೆಪಿ ಸ್ಪಷ್ಟ ಬಹುಮತ ಹೊಂದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ʼʼಈ ಚುನಾವಣೆಯಲ್ಲಿ ಬಿಜೆಪಿ ಅತ್ಯುತ್ತಮ ಪ್ರದರ್ಶನ ತೋರಲಿದೆ. ಜತೆಗೆ ಸೀಟುಗಳ ಸಂಖ್ಯೆಯನ್ನೂ ವೃದ್ಧಿಸಿಕೊಳ್ಳಲಿದೆ. ಅದರಲ್ಲಿಯೂ ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಬಿಜೆಪಿ ಇನ್ನಷ್ಟು ಶಕ್ತವಾಗಲಿದೆ. ಅಲ್ಲದೆ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿಯೂ ಸೀಟು ಹೆಚ್ಚಳವಾಗುವ ನಿರೀಕ್ಷೆ ಇದೆʼʼ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಬಿಜೆಪಿ ಬಹುಮತ ಪಡೆಯುವ ಸಾಧ್ಯತೆಯಿಲ್ಲ ಮತ್ತು ಮೊದಲ ಕೆಲವು ಹಂತಗಳ ಮತದಾನ ಆಡಳಿತ ಪಕ್ಷದ ಪರವಾಗಿಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದು, ಕೆಲವು ವರದಿಗಳು ಇದನ್ನೇ ಊಹಿಸಿರುವ ಮಧ್ಯೆ ಪ್ರಶಾಂತ್‌ ಕಿಶೋರ್‌ ಈ ರೀತಿ ಹೇಳಿಕೆ ನೀಡಿರುವುದು ಕಮಲ ಪಾಳಯಕ್ಕೆ ಕೊಂಚ ಮಟ್ಟಿನ ಸಮಾಧಾನ ತಂದಿತ್ತಿದೆ. ಆದಾಗ್ಯೂ ಅವರು ರಾಜ್ಯವಾರು ಫಲಿತಾಂಶಗಳನ್ನು ಊಹಿಸಲು ನಿರಾಕರಿಸಿದ್ದಾರೆ.

    ಮೋದಿ ಬ್ರ್ಯಾಂಡ್‌ ಕುಸಿತ

    ಬಿಜೆಪಿಯ ಬಗ್ಗೆ ಈಗಲೂ ಜನರಲ್ಲಿ ಸಕಾರಾತ್ಮಕ ಭಾವನೆ ಇದೆ ಎಂದಿರುವ ಪ್ರಶಾಂತ್‌ ಕಿಶೋರ್‌, ಮೋದಿ ಬ್ರ್ಯಾಂಡ್‌ ಮಾತ್ರ ಕುಸಿಯುತ್ತಿದೆ. ಪ್ರಧಾನಿಯ ಪ್ರಭಾವ ಕ್ಷೀಣಿಸುತ್ತಿದೆ ಎಂದು ಹೇಳಿದ್ದಾರೆ. ಇತ್ತ ವಿರೋಧ ಪಕ್ಷಗಳ ಕಾರ್ಯ ವೈಖರಿಯನ್ನೂ ಅವರು ಟೀಕಿಸಿದ್ದಾರೆ. ಬಿಜೆಪಿ ವಿರುದ್ಧ ಪ್ರಯೋಗಿಸಬಹುದಾದ ಅನೇಕ ಅಸ್ತ್ರಗಳನ್ನು, ಅವಕಾಶಗಳನ್ನು ʼಇಂಡಿಯಾʼ ಮೈತ್ರಿಕೂಟ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್‌ ರಾಜ್ಯ ವಿಧಾನಸಭಾ ಚುನಾವಣೆಗಳ ಮೇಲೆ ಗಮನ ಕೇಂದ್ರೀಕರಿಸಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ಮತ್ತು ಡಿಸೆಂಬರ್ ನಡುವಿನ ನಿರ್ಣಾಯಕ ತಿಂಗಳುಗಳು ವ್ಯರ್ಥವಾಗಿದೆ. ಇದು ʼಇಂಡಿಯಾʼ ಬಣದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಅವರು ಒತ್ತಿ ಹೇಳಿದ್ದಾರೆ. ಡಿಸೆಂಬರ್‌ನಲ್ಲಿ ಮೂರು ರಾಜ್ಯಗಳಲ್ಲಿನ ಬಿಜೆಪಿಯ ಗೆಲುವು ಮತ್ತು ಜನವರಿಯಲ್ಲಿ ನಡೆದ ಅಯೋಧ್ಯೆ ರಾಮ ಮಂದಿರದ ಉದ್ಘಾಟನೆ ಕಮಲ ಪಡೆಯ ಗೆಲುವಿಗೆ ಇನ್ನಷ್ಟು ಶಕ್ತಿ ನೀಡಲಿದೆ ಎಂದಿದ್ದಾರೆ.

    ಇದನ್ನೂ ಓದಿ: Lok Sabha Election 2024: ಪ್ರತಿಪಕ್ಷಗಳಿಗೆ ರೆಡ್‌ ಅಲರ್ಟ್‌ ನೀಡಿದ ಪ್ರಶಾಂತ್‌ ಕಿಶೋರ್‌; ಏನವರ ಚುನಾವಣಾ ಲೆಕ್ಕಾಚಾರ?

    ರಾಹುಲ್‌ ಗಾಂಧಿಗೆ ಸಲಹೆ

    ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರಿಗೆ ಸಲಹೆ ನೀಡಿದ ಪ್ರಶಾಂತ್‌ ಕಿಶೋರ್, ಚುನಾವಣಾ ಫಲಿತಾಂಶಗಳು ಕಾಂಗ್ರೆಸ್ ಪರವಾಗಿಲ್ಲದಿದ್ದರೆ ಐದು ವರ್ಷಗಳ ವಿರಾಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಮೂರನೇ ಅವಧಿಯಲ್ಲಿ ಬಿಜೆಪಿಗೆ ಅನೇಕ ಕಠಿಣ ಸವಾಲು ಎದುರಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಭೂ ಮಸೂದೆ ವಿರೋಧಿ ಪ್ರತಿಭಟನೆ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ವಿರೋಧಿಸಿ ನಡೆದ ಪ್ರತಿಭಟನೆ ಮತ್ತು ರೈತರ ಹೋರಾಟವನ್ನು ಉಲ್ಲೇಖಿಸಿ ಅವರು ಸವಾಲುಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಈ ಎಲ್ಲ ಸವಾಲುಗಳಿಂದ ಮೋದಿ ದುರ್ಬಲ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.

    Continue Reading

    ದೇಶ

    ಕುಡಿದು ಕಾರು ಓಡಿಸಿ ಇಬ್ಬರ ಜೀವ ತೆಗೆದ ಅಪ್ರಾಪ್ತನ ತಂದೆಯನ್ನು ಬಂಧಿಸಿದ ಪೊಲೀಸರು; ಬಾರ್‌ ಮಾಲೀಕನ ವಿರುದ್ಧವೂ ಕ್ರಮ

    Crime News: ಮಹಾರಾಷ್ಟ್ರದಲ್ಲಿ ಸ್ಪೋರ್ಟ್ಸ್‌ ಕಾರು ಓಡಿಸಿ ಇಬ್ಬರ ಸಾವಿನ ಕಾರಣನಾದ ಅಪ್ರಾಪ್ತ ವಯಸ್ಕನಿಗೆ ಜಾಮೀನು ಸಿಕ್ಕ ವಿಚಾರ ಸೋಮವಾರ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಇದೀಗ ಕಾರು ಚಲಾಯಿಸಿ ಅಪಘಾತ ನಡೆಸಿದ 17 ವರ್ಷದ ಬಾಲಕನ ತಂದೆಯನ್ನು ಪುಣೆ ಪೊಲೀಸರು ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಬಂಧಿಸಿದ್ದಾರೆ. ಅಪ್ರಾಪ್ತರನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುವುದು ಮತ್ತು ಅವರಿಗೆ ಮಾದಕ ವಸ್ತುಗಳನ್ನು ಒದಗಿಸುವ ಕಾರಣ ನೀಡಿ ಪ್ರಕರಣ ದಾಖಲಿಸಲಾಗಿದೆ. ಅಪ್ರಾಪ್ತರಿಗೆ ಮದ್ಯ ನೀಡಿದ ಬಾರ್‌ ಮಾಲೀಕನ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

    VISTARANEWS.COM


    on

    Crime News
    Koo

    ಮುಂಬೈ: ಮಹಾರಾಷ್ಟ್ರದಲ್ಲಿ ಸ್ಪೋರ್ಟ್ಸ್‌ ಕಾರು ಓಡಿಸಿ ಇಬ್ಬರ ಸಾವಿನ ಕಾರಣನಾದ ಅಪ್ರಾಪ್ತ ವಯಸ್ಕನಿಗೆ ಜಾಮೀನು ಸಿಕ್ಕ ವಿಚಾರ ಸೋಮವಾರ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಜತೆಗೆ ಕೋರ್ಟ್‌ನ ತೀರ್ಪಿಗೆ ಟೀಕೆಯೂ ವ್ಯಕ್ತವಾಗಿತ್ತು. ಇದೀಗ ಕಾರು ಚಲಾಯಿಸಿ ಅಪಘಾತ ನಡೆಸಿದ 17 ವರ್ಷದ ಬಾಲಕನ ತಂದೆಯನ್ನು ಪುಣೆ ಪೊಲೀಸರು ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಬಂಧಿಸಿದ್ದಾರೆ. ಪುಣೆಯ ಕಲ್ಯಾಣಿ ನಗರದಲ್ಲಿ ಭಾನುವಾರ ಮುಂಜಾನೆ ಅಪಘಾತ ನಡೆದು ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿ ಮೃತಪಟ್ಟಿದ್ದರು (Crime News).

    17 ವರ್ಷದ ವೇದಾಂತ್‌ ಅಗರ್‌ವಾಲ್‌ ಐಷಾರಾಮಿ ಪೋರ್ಷೆ ಕಾರನ್ನು ಗಂಟೆಗೆ 200 ಕಿ.ಮೀ. ವೇಗದಲ್ಲಿ ಓಡಿಸಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದ. ಪರಿಣಾಮ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಮಧ್ಯಪ್ರದೇಶದ ಎಂಜಿನಿಯರ್‌ಗಳಾದ 24 ವರ್ಷದ ಅನೀಶ್ ಅವಧಿ ಮತ್ತು ಅಶ್ವಿನಿ ಕೊಶ್ತಾ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಘಟನೆಯ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

    ಪುಣೆ ಪೊಲೀಸ್‌ ಆಯುಕ್ತ ಅಮಿತೇಶ್‌ ಕುಮಾರ್‌ ಘಟನೆ ಬಗ್ಗೆ ಮಾಹಿತಿ ನೀಡಿ, ʼʼಸ್ಥಳೀಯ ಪಬ್‌ ಒಂದರಲ್ಲಿ ವೇದಾಂತ್‌ ಅಗರ್‌ವಾಲ್‌ ಮತ್ತು ಆತನ ಸ್ನೇಹಿತರು ಪಾರ್ಟಿ ಮಾಡಿ ಮದ್ಯ ಸೇವಿಸಿದ್ದರು. ಮಹಾರಾಷ್ಟ್ರದಲ್ಲಿ 25 ವರ್ಷಕ್ಕಿಂತ ಕೆಳಗಿನವರು ಮದ್ಯ ಸೇವಿಸುವುದು ನಿಷಿದ್ಧ. ಹೀಗಾಗಿ ಅಪ್ರಾಪ್ತರಿಗೆ ಮದ್ಯ ನೀಡಿದ ಬಾರ್‌ ಮಾಲೀಕನ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆʼʼ ಎಂದು ತಿಳಿಸಿದ್ದಾರೆ.

    15 ಗಂಟೆಯೊಳಗೆ ಜಾಮೀನು

    ವೇದಾಂತ್‌ ಅಗರ್‌ವಾಲ್‌ ಚಲಾಯಿಸುತ್ತಿದ್ದ ಕಾರಿನಲ್ಲಿ ಒಟ್ಟು ಮೂವರಿದ್ದರು. ಅಪಘಾತಕ್ಕೀಡಾಗುತ್ತಿದ್ದಂತೆ ಸ್ಥಳೀಯರೆಲ್ಲ ಒಟ್ಟುಗೂಡಿ ಸೆರೆ ಹಿಡಿದು ಥಳಿಸಿ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದರು. ಈ ಪೈಕಿ ಓರ್ವ ತಪ್ಪಿಸಿಕೊಂಡಿದ್ದ. ಆದರೆ ದುರಂತ ಎಂದರೆ ವೇದಾಂತ್‌ ಅಗರ್‌ವಾಲ್‌ನ ಬಂಧನವಾದ ಕೇವಲ 15 ಗಂಟೆಗಳಲ್ಲೇ ಬಾಲಾಪರಾಧಿ ನ್ಯಾಯ ಮಂಡಳಿಯು ಆತನಿಗೆ ಜಾಮೀನು ಮಂಜೂರು ಮಾಡಿತ್ತು. ಜಾಮೀನು ನಿರಾಕರಿಸುವಷ್ಟು ಅಪರಾಧವು ಗಂಭೀರವಾಗಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯವು, ಅಪರಾಧಿ ಯೆರವಾಡಾದ ಸಂಚಾರ ಪೊಲೀಸರೊಂದಿಗೆ 15 ದಿನಗಳ ಕಾಲ ಕೆಲಸ ಮಾಡಬೇಕು, ಅಪಘಾತಗಳ ಬಗ್ಗೆ 300 ಪದಗಳ ಪ್ರಬಂಧ ಬರೆಯಬೇಕು, ಕುಡಿತದ ಅಭ್ಯಾಸಕ್ಕೆ ಚಿಕಿತ್ಸೆ ಪಡೆಯಬೇಕು ಮತ್ತು ಮನೋವೈದ್ಯಕೀಯ ಮೌಲ್ಯಮಾಪನ ಹಾಗೂ ಚಿಕಿತ್ಸೆಗೆ ಒಳಗಾಗಬೇಕು ಎಂಬ ಷರತ್ತು ವಿಧಿಸಿತ್ತು. ಈ ತೀರ್ಪಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.

    ಜಾಮೀನು ನಿರ್ಧಾರವನ್ನು ಪುಣೆ ಪೊಲೀಸರೂ ವಿರೋಧಿಸಿದ್ದು, ವೇದಾಂತ್‌ ಅಗರ್‌ವಾಲ್‌ನನ್ನು ವಿಚಾರಣೆಗೆ ಒಳಪಡಿಸಲು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. “ಈ ಘಟನೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಐಪಿಸಿಯ ಸೆಕ್ಷನ್ 304ರ ಅಡಿಯಲ್ಲಿ ನಾವು ಕ್ರಮ ಕೈಗೊಂಡಿದ್ದೇವೆ. ಇದು ಜಾಮೀನು ರಹಿತ ಸೆಕ್ಷನ್ ಆಗಿದ್ದು, ಇದು ಘೋರ ಅಪರಾಧ” ಎಂದು ಪೊಲೀಸ್‌ ಆಯುಕ್ತ ಅಮಿತೇಶ್‌ ಕುಮಾರ್‌ ತಿಳಿಸಿದ್ದಾರೆ.

    ಇದೀಗ ಪುಣೆ ಪೊಲೀಸರು ಬಾಲಕನ ತಂದೆ, ಸ್ಥಳೀಯ ಪ್ರಮುಖ ಬಿಲ್ಡರ್ ವಿಶಾಲ್‌ ಅಗರ್‌ವಾಲ್‌ನನ್ನು ಬಂಧಿಸಿದ್ದಾರೆ. ಅಪ್ರಾಪ್ತರನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುವುದು ಮತ್ತು ಅವರಿಗೆ ಮಾದಕ ವಸ್ತುಗಳನ್ನು ಒದಗಿಸುವ ಕಾರಣ ನೀಡಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ಇದನ್ನೂ ಓದಿ: ಕುಡಿದು ಕಾರು ಓಡಿಸಿ ಇಬ್ಬರ ಜೀವ ತೆಗೆದ ಶ್ರೀಮಂತನ ಮಗನಿಗೆ 15 ಗಂಟೆಯೊಳಗೆ ಜಾಮೀನು! ಪ್ರಬಂಧ ಬರೆಯುವ ಶಿಕ್ಷೆ!

    Continue Reading

    ಪ್ರಮುಖ ಸುದ್ದಿ

    Corona Virus: ಸಿಂಗಾಪುರದಲ್ಲಿ ಕೋವಿಡ್‌-19 ಹೊಸ ಅಲೆ, ರಾಜ್ಯದಲ್ಲಿ ಅಲರ್ಟ್‌, ಇಂದು ಆರೋಗ್ಯ ಇಲಾಖೆ ಸಭೆ

    Corona Virus: ಸಿಂಗಾಪುರದಲ್ಲಿ ಒಂದೇ ವಾರದಲ್ಲಿ 25 ಸಾವಿರ ಕೋವಿಡ್ ಕೇಸ್ ಖಚಿತವಾಗಿದ್ದು, ಇದರಿಂದ ಸಿಲಿಕಾನ್ ಸಿಟಿ ಬೆಂಗಳೂರು ಅಲರ್ಟ್‌ ಆಗಿದೆ. ಇದರ ಜೊತೆಗೆ ಮಹಾರಾಷ್ಟ್ರದಲ್ಲಿಯೂ ಕೋವಿಡ್ ಒಮಿಕ್ರಾನ್ ರೂಪಾಂತರಿ ವೈರಸ್‌ನ 91 ಕೇಸ್‌ ಪತ್ತೆಯಾಗಿವೆ. ಹೀಗಾಗಿ, ಮುನ್ನೆಚ್ಚರಿಕೆ ವಹಿಸಲು ಇಂದು ಕೇಂದ್ರ ಆರೋಗ್ಯ ಇಲಾಖೆಯ ಜೊತೆಗೆ ರಾಜ್ಯ ಆರೋಗ್ಯ ಇಲಾಖೆ ಸಭೆ ನಡೆಯುತ್ತಿದೆ.

    VISTARANEWS.COM


    on

    corona virus wave in singapore
    Koo

    ಬೆಂಗಳೂರು: ಸಿಂಗಾಪುರದಲ್ಲಿ (Singapore) ಹೊಸ ಕೋವಿಡ್‌- 19 (Covid 19 wave) ಅಲೆ ಪತ್ತೆಯಾಗಿದೆ. ಒಂದೇ ವಾರದಲ್ಲಿ ಕೊರೊನಾ ವೈರಸ್‌ (Corona Virus) ಕೇಸುಗಳ ಸಂಖ್ಯೆ ದ್ವಿಗುಣಗೊಂಡಿದ್ದು, ಮತ್ತೆ ಮಾಸ್ಕ್‌ (Mask) ಧರಿಸಲು ಸಲಹೆ ನೀಡಲಾಗಿದೆ. ರಾಜ್ಯದಲ್ಲೂ ಆರೋಗ್ಯ ಇಲಾಖೆ (Health department) ಅಲರ್ಟ್‌ ಆಗಿದ್ದು, ಪರಿಸ್ಥಿತಿಯನ್ನು ಗಮನಿಸುತ್ತಿದೆ.

    ಸಿಂಗಾಪುರದಲ್ಲಿ ಒಂದೇ ವಾರದಲ್ಲಿ 25 ಸಾವಿರ ಕೋವಿಡ್ ಕೇಸ್ ಖಚಿತವಾಗಿದ್ದು, ಇದರಿಂದ ಸಿಲಿಕಾನ್ ಸಿಟಿ ಬೆಂಗಳೂರು ಅಲರ್ಟ್‌ ಆಗಿದೆ. ಇದರ ಜೊತೆಗೆ ಮಹಾರಾಷ್ಟ್ರದಲ್ಲಿಯೂ ಕೋವಿಡ್ ಒಮಿಕ್ರಾನ್ ರೂಪಾಂತರಿ ವೈರಸ್‌ನ 91 ಕೇಸ್‌ ಪತ್ತೆಯಾಗಿವೆ. ಹೀಗಾಗಿ, ಮುನ್ನೆಚ್ಚರಿಕೆ ವಹಿಸಲು ಇಂದು ಕೇಂದ್ರ ಆರೋಗ್ಯ ಇಲಾಖೆಯ ಜೊತೆಗೆ ರಾಜ್ಯ ಆರೋಗ್ಯ ಇಲಾಖೆ ಸಭೆ ನಡೆಯುತ್ತಿದೆ.

    ಸಿಂಗಾಪುರದಿಂದ ಬೆಂಗಳೂರು ಹಾಗೂ ಮುಂಬಯಿಗೆ ಆಗಮಿಸುವ ವಿಮಾನಯಾನಿಗಳ ಸಂಖ್ಯೆ ಹೆಚ್ಚು ಇದ್ದು, ಈ ಹಿನ್ನೆಲೆಯಲ್ಲಿ ಮುಂದಿನ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ. ಆಯ್ದ ಯಾನಿಗಳ ಆರೋಗ್ಯ ತಪಾಸಣೆ, ಮಾಸ್ಕ್‌ ಧಾರಣೆ ಸೇರಿದಂತೆ ಹಲವು ಕ್ರಮಗಳ ಬಗೆಗೆ ಚರ್ಚಿಸಲಾಗುತ್ತಿದೆ.

    ಸಿಂಗಾಪುರದಲ್ಲಿ ಏನಾಗಿದೆ?

    ಸಿಂಗಾಪುರದ ಆರೋಗ್ಯ ಸಚಿವ ಓಂಗ್ ಯೆ ಕುಂಗ್, ಸಾರ್ವಜನಿಕ ತಾಣಗಳಲ್ಲಿ ಮುಖವಾಡಗಳನ್ನು ಧರಿಸುವಂತೆ ಸಲಹೆ ನೀಡಿದ್ದಾರೆ. ಸಾಮಾಜಿಕ ನಿರ್ಬಂಧಗಳ ಕುರಿತು ಮಾತನಾಡಿದ ಸಚಿವ ಓಂಗ್, ಸದ್ಯಕ್ಕೆ ಯಾವುದೇ ರೀತಿಯ ಸಾಮಾಜಿಕ ನಿರ್ಬಂಧಗಳ ಯೋಚನೆಯಿಲ್ಲ ಎಂದಿದ್ದಾರೆ. ಏಕೆಂದರೆ ಸಿಂಗಾಪುರದಲ್ಲಿ ಕೋವಿಡ್ -19 ಅನ್ನು ಸ್ಥಳೀಯ ಕಾಯಿಲೆ ಎಂದು ಪರಿಗಣಿಸಲಾಗುತ್ತದೆ.

    ಕೋವಿಡ್‌ನ ಹೊಸ ಅಲೆಯ ಪಥವನ್ನು ಸರ್ಕಾರವು ನಿಕಟವಾಗಿ ಗಮನಿಸುತ್ತಿದೆ ಎಂದು ಸಿಂಗಾಪುರದ ಆರೋಗ್ಯ ಸಚಿವಾಲಯ ಹೇಳಿದೆ. ಸಚಿವಾಲಯದ ಪ್ರಕಾರ, ಕೋವಿಡ್ -19 ಪ್ರಕರಣಗಳ ಅಂದಾಜು ಸಂಖ್ಯೆಯು ಹಿಂದಿನ ವಾರದಲ್ಲಿದ್ದ 13,700ರಿಂದ 25,900ಕ್ಕೆ ದ್ವಿಗುಣಗೊಂಡಿದೆ. ಅದೇ ಅವಧಿಯಲ್ಲಿ ಸರಾಸರಿ ದೈನಂದಿನ ಕೋವಿಡ್ -19 ಆಸ್ಪತ್ರೆಗೆ ದಾಖಲು ಕೇಸ್‌ಗಳು 181ರಿಂದ ಸರಿಸುಮಾರು 250ಕ್ಕೆ ಏರಿದೆ ಎಂದು ಸಚಿವಾಲಯ ವರದಿ ಮಾಡಿದೆ.

    ಆಸ್ಪತ್ರೆಯ ಹಾಸಿಗೆ ಸಾಮರ್ಥ್ಯವನ್ನು ಸಂರಕ್ಷಿಸಲು, ಸಾರ್ವಜನಿಕ ಆಸ್ಪತ್ರೆಗಳಿಗೆ ತುರ್ತು-ಅಲ್ಲದ ಶಸ್ತ್ರಚಿಕಿತ್ಸೆಗಳನ್ನು ಕಡಿಮೆ ಮಾಡಲು ಮತ್ತು ಸೂಕ್ತವಾದ ರೋಗಿಗಳನ್ನು ಆರೈಕೆ ಸೌಲಭ್ಯಗಳಿಗೆ ವರ್ಗಾಯಿಸಲು ಸೂಚನೆ ನೀಡಲಾಗಿದೆ. “ನಾವು ಅಲೆಯ ಆರಂಭಿಕ ಭಾಗದಲ್ಲಿದ್ದೇವೆ. ಪ್ರಮಾಣ ಸ್ಥಿರವಾಗಿ ಏರುತ್ತಿದೆ” ಎಂದು ಆರೋಗ್ಯ ಸಚಿವ ಓಂಗ್ ಯೆ ಕುಂಗ್ ಹೇಳಿದ್ದಾರೆ.

    ಕೋವಾಕ್ಸಿನ್‌ ಲಸಿಕೆ ಪಡೆದವರಿಗೂ ಬಿಗ್‌ ಶಾಕ್‌! ಆಘಾತಕಾರಿ ವರದಿ ಔಟ್‌

    ನವದೆಹಲಿ: ಕೊರೋನಾ ವೈರಸ್‌(Corona Virus) ಎದುರಿಸಲು ತೆಗೆದುಕೊಂಡಿರುವ ಕೋವಿಶೀಲ್ಡ್‌(Covishield Vaccine) ಲಸಿಕೆ ಅಡ್ಡಪರಿಣಾಮ(Side Effects) ಹೊಂದಿದೆ ಎಂಬುದು ಬಯಲಾದ ಬೆನ್ನಲ್ಲಿ ಕೋವಾಕ್ಸಿನ್‌ (Covaxin) ತೆಗೆದುಕೊಂಡಿರುವ ಜನ ತಮಗೇನು ಅಪಾಯವಿಲ್ಲ ಎಂದು ನಿರಾಳವಾಗಿದ್ದರು. ಆದರೆ ಇದೀಗ ವರದಿಯೊಂದು ಹೊರಬಿದ್ದಿದ್ದು, ಕೋವಾಕ್ಸಿನ್‌ ಪಡೆದಿರುವ ಜನರಿಗೆ ಬಿಗ್‌ ಶಾಕ್‌ ಕೊಟ್ಟಿದೆ. ಕೋವಾಕ್ಸಿನ್‌ ಲಸಿಕೆಯೂ ಅಡ್ಡಪರಿಣಾಮ ಹೊಂದಿದೆ ಎಂಬುದು ಅಧ್ಯಯನದಲ್ಲಿ ಬಯಲಾಗಿದೆ.

    ಇತ್ತೀಚೆಗೆ ಕೋವಿಶೀಲ್ಡ್ ಅನ್ನು ಅಭಿವೃದ್ಧಿಪಡಿಸಿದ ಬ್ರಿಟಿಷ್ ಕಂಪನಿಯಾದ ಅಸ್ಟ್ರಾಜೆನೆಕಾ ಇತ್ತೀಚೆಗೆ ಅಲ್ಲಿನ ನ್ಯಾಯಾಲಯದಲ್ಲಿ ಅದರ ಲಸಿಕೆ ಕೆಲವು ಜನರಲ್ಲಿ ಗಂಭೀರ ಕಾಯಿಲೆಗೆ ಕಾರಣವಾಗಬಹುದು ಎಂದು ಒಪ್ಪಿಕೊಂಡಿತ್ತು. ಇದೀಗ ಅದೇ ರೀತಿ ನಮ್ಮ ದೇಶದಲ್ಲಿ ಭಾರತ್ ಬಯೋಟೆಕ್ ಕಂಪನಿ ಅಭಿವೃದ್ಧಿಪಡಿಸಿರುವ ‘ಕೋವಾಕ್ಸಿನ್’ ಲಸಿಕೆಯ ಅಡ್ಡ ಪರಿಣಾಮಗಳ ಬಗ್ಗೆ ವರದಿ ಬಂದಿದೆ. ಈ ಲಸಿಕೆಯನ್ನು ಪಡೆದ ಸುಮಾರು ಒಂದು ವರ್ಷದ ನಂತರ, ಅದರ ಅಡ್ಡಪರಿಣಾಮಗಳು ಸಾಕಷ್ಟು ಜನರಲ್ಲಿ ಕಂಡುಬಂದಿದೆ ಎಂದು ಹೇಳಲಾಗಿದೆ.

    BHU ಅಧ್ಯಯನ ವರದಿಯಲ್ಲಿ ಬಹಿರಂಗ

    ಬನಾರಸ್‌ ಹಿಂದೂ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ಈ ವರದಿಯ ಪ್ರಕಾರ, ಕೊವಾಕ್ಸಿನ್‌ ತೆಗೆದುಕೊಂಡಿರುವ ಹದಿ ಹರೆಯದವರು ಮತು ಯುವಕರಲ್ಲಿ ಈ ಅಡ್ಡ ಪರಿಣಾಮ ಹೆಚ್ಚಾಗಿ ಕಂಡು ಬಂದಿದೆ. ಈ ಸಂಶೋಧನೆಗಾಗಿ ಒಟ್ಟು 1024 ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅವರಲ್ಲಿ 635 ಹದಿಹರೆಯದವರು ಮತ್ತು 391 ಯುವಕರು ಇದ್ದರು. 304 ಹದಿಹರೆಯದವರು ಅಥವಾ ಸುಮಾರು 48 ಪ್ರತಿಶತದಷ್ಟು ಜನರು ಶ್ವಾಸನಾಳದ ಸೋಂಕುಗೆ ತುತ್ತಾಗಿರುವುದು ಅಧ್ಯಯನದಲ್ಲಿ ಬಯಲಾಗಿದೆ.

    ಇದನ್ನೂ ಓದಿ: CoWIN Certificates: ಕೋವಿಡ್‌ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಔಟ್‌; ಕೇಂದ್ರ ಹೇಳೋದೇನು?

    Continue Reading
    Advertisement
    India Head Coach
    ಕ್ರೀಡೆ5 mins ago

    India Head Coach: ಭಾರತ ತಂಡದ ಕೋಚ್​ ಆಗಲು ಫ್ಲೆಮಿಂಗ್​ಗೆ ಮನವೊಲಿಸುವಂತೆ ಧೋನಿಗೆ ಮನವಿ ಮಾಡಿದ ಬಿಸಿಸಿಐ!

    Viral Video
    ವೈರಲ್ ನ್ಯೂಸ್14 mins ago

    Viral Video: ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿಕೊಂಡ ಬೆಂಕಿಯನ್ನು ಈತ ಏಕಾಂಗಿಯಾಗಿ ಹೇಗೆ ನಂದಿಸಿದ ನೋಡಿ!

    Contaminated Water
    ಮೈಸೂರು23 mins ago

    Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

    Viral video
    ವೈರಲ್ ನ್ಯೂಸ್29 mins ago

    Chudidar Gang: ಚಡ್ಡಿ ಗ್ಯಾಂಗ್ ಆಯ್ತು, ಈಗ ದರೋಡೆಕೋರರ ಚೂಡಿದಾರ್ ಗ್ಯಾಂಗ್ ಆ್ಯಕ್ಟಿವ್ ಆಗಿದೆ; ಹುಷಾರ್! ವಿಡಿಯೊ ನೋಡಿ

    Actor Upendra Ajaneesh Visited Hangary To Record Music
    ಸ್ಯಾಂಡಲ್ ವುಡ್50 mins ago

    Actor Upendra: ಹಂಗೆರಿಯಲ್ಲಿ ಉಪೇಂದ್ರ, ಅಜನೀಶ್: ʻUIʼ ಸಿನಿಮಾದ ಬಿಗ್‌ ಅಪ್‌ಡೇಟ್‌!

    RCB
    ಕ್ರೀಡೆ54 mins ago

    RCB: ಅಮೆರಿಕದ ಘಟಿಕೋತ್ಸವದಲ್ಲೂ ಆರ್​ಸಿಬಿಯದ್ದೇ ಹವಾ: ವಿಡಿಯೊ ವೈರಲ್​

    Dog Attack in raichur
    ರಾಯಚೂರು58 mins ago

    Dog Attack: ಆಟವಾಡುತ್ತಿದ್ದವಳ ಕಿತ್ತು ತಿಂದ ಬೀದಿ ನಾಯಿ; ರಕ್ತಸ್ರಾವವಾಗಿ 4 ವರ್ಷದ ಬಾಲಕಿ ಸಾವು

    jain monk samadhi sena chikkodi sallekhana
    ಚಿಕ್ಕೋಡಿ1 hour ago

    Sallekhana: ಸಲ್ಲೇಖನ ವ್ರತ ಸ್ವೀಕರಿಸಿ ಸಮಾಧಿಸೇನ ಮುನಿ ಜಿನೈಕ್ಯ

    Viral Video
    ವೈರಲ್ ನ್ಯೂಸ್1 hour ago

    Viral Video: ಅಬ್ಬಾ…ಇವರೆಂಥಾ ರಾಕ್ಷಸರು! ಸೊಸೆ ಮೇಲೆ ಅತ್ತೆ, ನಾದಿನಿಯಿಂದ ಅಟ್ಯಾಕ್‌; ವಿಡಿಯೋ ವೈರಲ್‌

    Prashant Kishor
    Lok Sabha Election 20241 hour ago

    Prashant Kishor: ಈ ಬಾರಿ ಮೋದಿಗೆ ಹಿನ್ನಡೆ ಆಗುತ್ತಾ? ಪ್ರಶಾಂತ್ ಕಿಶೋರ್ ಲೇಟೆಸ್ಟ್ ಲೆಕ್ಕಾಚಾರ ಹೀಗಿದೆ

    Sharmitha Gowda in bikini
    ಕಿರುತೆರೆ8 months ago

    Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

    Kannada Serials
    ಕಿರುತೆರೆ7 months ago

    Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

    Bigg Boss- Saregamapa 20 average TRP
    ಕಿರುತೆರೆ7 months ago

    Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

    galipata neetu
    ಕಿರುತೆರೆ6 months ago

    Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

    Kannada Serials
    ಕಿರುತೆರೆ8 months ago

    Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

    Kannada Serials
    ಕಿರುತೆರೆ8 months ago

    Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

    Bigg Boss' dominates TRP; Sita Rama fell to the sixth position
    ಕಿರುತೆರೆ7 months ago

    Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

    geetha serial Dhanush gowda engagement
    ಕಿರುತೆರೆ5 months ago

    Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

    varun
    ಕಿರುತೆರೆ6 months ago

    Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

    Kannada Serials
    ಕಿರುತೆರೆ8 months ago

    Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

    Karnataka Rain
    ಮಳೆ22 hours ago

    Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

    Karnataka Rain
    ಮಳೆ2 days ago

    Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

    Karnataka rain
    ಮಳೆ2 days ago

    Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

    Karnataka Rain
    ಮಳೆ2 days ago

    Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

    Prajwal Revanna Case JDS calls CD Shivakumar pen drive gang
    ರಾಜಕೀಯ4 days ago

    Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

    Karnataka weather Forecast
    ಮಳೆ4 days ago

    Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

    Dina Bhavishya
    ಭವಿಷ್ಯ4 days ago

    Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

    Karnataka Weather Forecast
    ಮಳೆ5 days ago

    Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

    Drowned in water
    ಹಾಸನ5 days ago

    Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

    Suspicious Case
    ಬೆಂಗಳೂರು5 days ago

    Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

    ಟ್ರೆಂಡಿಂಗ್‌