ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಏಳು ಮಲ್ಲಿಗೆ ತೂಕದವಳು… - Vistara News

ಕಲೆ/ಸಾಹಿತ್ಯ

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಏಳು ಮಲ್ಲಿಗೆ ತೂಕದವಳು…

ಯೌವ್ವನವೆಂಬುದು ಹೂವಾಗಿ, ಕಾಯಾಗಿ, ಹಣ್ಣೊಡೆದು, ಹಣ್ಣಾದ ಈ ಹದಿಮೂರು ವರ್ಷದಲ್ಲಿ ಒಮ್ಮೆಯೂ ನೀಲವ್ವ ನೀರು ತಪ್ಪಿಸಲಿಲ್ಲ. ಇನ್ನೇನು ಈ ಬದುಕು ಇಷ್ಟೇ!? ಹಾಡು ಮರೆತ ಕೋಗಿಲೆಯಂತಹದು! ಅಕ್ಕಸಾಲಿಗನ ಕೈಗೆ ಸಿಗದ ಬಂಗಾರದ ಬುಗುಡೆಯಂತಹದು ಎಂದುಕೊಂಡ ಕ್ಷಣದಲ್ಲೇ…

VISTARANEWS.COM


on

elu mallige tukadavalu vistara ugadi short story
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
sharanabasava gudadinni

:: ಶರಣಬಸವ ಕೆ. ಗುಡದಿನ್ನಿ

ಕಲ್ಲು-ಮಣ್ಣು ಹದವಾಗಿ ಬೆರೆಸಿ ಕಟ್ಟಿದ ಜಲದುರ್ಗ ಕೋಟೆ.ಕೋಟೆಯ ಒಳಗೆ ಬಲಕ್ಕೆ ಅರಮನೀಯಂತ ಧಣೇರ ವಾಡೇ.ಅದರ ಮುಂದಿದ್ದ ಸವಾರಿ ಬಂಡಿಯ ಕಡಾಣಿಗೆ ಕೀಲೆಣ್ಣೆ ಬಿಡುತ್ತಿದ್ದ ಹನುಮ ಒಳಗಿಂದ ತೂರಿ ಬಂದ ದನಿಗೆ ಬೆಚ್ಚಿ ಎದ್ದು ನಿಂತ.

“ಧಣೇರ ಸೊಸೀ ನೀಲವ್ವ ಹೊಳಿ ಮುಂದ್ಲ ಸಂಗಮೇಶ್ವರನ ಗುಡೀಗಿ ಹೊಕ್ಕಾಳಂತ ಬಂಡಿ ಕಟ್ಟು” ಅಂತ ಕೂಗಿ ಹೇಳಿಕ್ಯಾಂತ ತಳವಾರ ನಿಂಗವ್ವ ಮುದೇಕಿ ಮೆತ್ತಗ ಕಾಲೂರಿಕೋಂತ ಪ್ಯಾಂಟಿಗಿ ಇಳೀತಿದ್ಲು.

ಹನುಮ ಕಣ್ಣಿಗಿ ಬಿದ್ದ ಕ್ಷಣಕ್ಕ ಆಕಿ ಮುಖದ ಮ್ಯಾಲ ಅನುಮಾನ ಅಂಬೋದು ಅಂಚೇಬಟ್ಟಿನಷ್ಟು ನಿಚ್ಛಳವಾಗಿ “ನೀ ಹಾಲಬಾವಿ ಲಚುಮನ ಮಗ ಹನುಮ ಅಲ್ಲೇನು? ಅಂತ ಕೇಳಿದಳು. ಹೌದು ಎಂಬಂತೆ ಹನುಮ ತಲೆಯಾಡಿಸಿದ. “ವಯಸ್ಸಿಗಿ ಬಂದ ಹೋರೀಕರ ಆಗಿದ್ದಿ! ಅವ್ವೋರು ಜೋಪಾನ, ನಿಮಪ್ಪ ಕ್ವಾಟೀಗಿ ದುಡುದು ಮುಪ್ಪಾದ್ರೂ ಒಂದೀಟು ಹೆಸ್ರೀಗಿ ಮಣ್ಣ ಬಡಕಂಡವ್ನಲ್ಲ! ಅಂತೇಳಿ ಕ್ವಾಟಿ ಮುಂದಲಿನ ಹನುಮಪ್ಪಗ ಕೈಮುಗಿದು ಹಾದಿ ಹಿಡಿದು ಹೊಂಟಳು.

ಹದಿನಾರು ಅಂಕಣದ ಗ್ವಾದಲಿಯಿಂದ ಕೊಂಬು ಸವರಿ ಹುರಿ ಮಾಡಿದ, ಶನಿವಾರದ ಸಂತೆಗೆ ಬಂದಿದ್ದ ಗುರುಗುಂಟಾದ ಇಮಾಮಸಾಬನ ಕೈಯಿಂದ ಕಾಲ ಗೊರಸು ತೆಗೆಸಿ ನಾಲು ಹೊಡೆಸಿದ,ಹಾಲಬಣ್ಣದ ಸೀಮಿ ಎತ್ತಿನ ಮುಗುದಾಣಿ ಹಿಡಿದು ತಂದು ನೊಗ ಎತ್ತಿ ಬಂಡಿಗೆ ಕಟ್ಟಿದ.ಬಂಡಿಗೆ ಕಟ್ಟಿದ್ದ ಸವಾರಿಯ ಛತ್ತಿಗೆ ಹೊಸ ಜಮಖಾನ ಹೊದೆಸಿ ಸೂರ್ಯನ ಒಂದು ಕಿರಣವೂ ಬಂಡಿಯೊಳಗೆ ನುಸುಳದಷ್ಟು ಜತನ ಮಾಡಿದ.

ಅಷ್ಟೊತ್ತಿಗೆ ಕೋಟೆಯ ಪೂರ್ವದ ಕೋಣೆಯ ತಾರಸಿಯಿಂದ ರಾಣಿ ಅಚ್ಚಮ್ಮನ ಗಡಸು ದನಿ ಕೇಳಿ ಹನುಮ ಎಚ್ಚರವಾದವನಂತೆ ತಲೆತಗ್ಗಿಸಿ ಎತ್ತಿನ ಹಗ್ಗ ಹಿಡಿದು ನೊಗ ಸಾಗಿ ಚಕ್ಕಡಿಯೊಳಗೆ ಸೇರುವಲ್ಲಿ ಜಾಗ ಮಾಡಿಕೊಂಡು ಕೂತ. ಆಗ ಮೆಟ್ಟಿಲ ಮೇಲಿಂದ ರಾಣಿ ಅಚ್ಚಮ್ಮನ ಸೊಸೆ ನೀಲವ್ವ ನವಿಲಿನಂತೆ ಕುಣಿಯುತ್ತ, ಕುಲುಕುಲು ನಗುತ್ತ ಕೈಯಲ್ಲಿ ಕಾಯಿ-ಕರ್ಪೂರವಿದ್ದ ಬೆಳ್ಳಿ ಕೈಬಟ್ಟಲು ಹಿಡಿದು ಇಳಿದು ಬಂದಳು. ಅವಳ ಮುಖವನ್ನ ನೋಡದೆಯೇ ಇರುವಂತೆ ಹನುಮ ನೋಡಿದ!

ಇಡೀ ಚಂದಿರನ ಬೆಳದಿಂಗಳೆಲ್ಲ ಅವಳ ಮುಖವೇ ಕಡಾ ತಗಂಡಂತಿತ್ತು! ಮುಂದಲೆಯ ಕೂದಲು ಬಾಗಿ ಅವಳ ಕೆನ್ನೆಯನ್ನ ತಾಕುತಿದ್ದರೆ ನಾಜೂಕಿನಿಂದ ಅವಕ್ಕೆ ಕಿರು ಬೆರಳಲ್ಲಿ ಬುದ್ದಿ ಹೇಳಿ ಮತ್ತೆ ಹಣ್ಣೆತ್ತಿ ಮ್ಯಾಲೆ ಕೂಡಿಸುತ್ತಿದ್ದಳು. ಗಿಣಿ ಮೂಗಿನ, ಜುಮುಕಿ ತೊಟ್ಟ ಕಿವಿಯ ನೀಲವ್ವ ಹನುಮನ ಮೊದಲ ನೋಟಕ್ಕೆ ಅವ್ವ ಹೇಳುವ ಕತೆಯ ಏಳು ಮಲ್ಲಿಗೆ ತೂಕದ ಸುಂದರಿ ಎನಿಸಿಬಿಟ್ಟಳು!

ಕನಸು ಕಾಣುವ ವ್ಯಾಳೆ ಅದಲ್ಲವಾದರೂ ಹುಚ್ಚು ಹರೆಯ ಜೀನು ಬಿಚ್ಚಿದ ಕುದುರೆಯಂತೆ ಅಂಡಲೆಯುತ್ತಿತ್ತು.ಒಂಟೆತ್ತಿನ ಬಂಡಿಯಲಿ ಇಬ್ಬರು ಮನೆಯಾಳುಗಳ ಸಂಗಡ ಬಂದು ಕೂತ ನೀಲವ್ವ ಲಚುಮನ ಜಾಗದಲ್ಲಿ ಮತ್ಯಾರೋ ಮಣ್ಣಿನ ಬಣ್ಣದ ಹುಡುಗ ಕೂತಿರುವದನ್ನು ಕಂಡು ಚೂರು ವಿಚಲಿತಳಾದರೂ ತೋರಿಸಿಕೊಳ್ಳದೆ ಲಚುಮ ಬಂದಿಲ್ಲೇನು? ಅಂತ ಜಬರಿಸಿ ಕೇಳಿದಳು.

ಇಲ್ಲ ಎಂಬಂತೆ ತಲೆಯಾಡಿಸಿದ ಹನುಮ ಹೊಳ್ಳಿ ನೋಡಲೇನು ಅಂತ ನಾಕಾರು ಸಲ ಯೋಚಿಸಿ ತಳವಾರ ನಿಂಗವ್ವ ಅಂದ ಮಾತು ನೆಪ್ಪಿಗೆ ಬಂದು ತಲೆ ಕೊಡವಿ ಎತ್ತಿನ ಬಾಲ ಮುರಿದು ಹ್ಯಾಅ..ಅಂತ ಒದರಿದ.ಅವನ ಒರಟು ಕೈಗಳು ಬಾಲ ತಿರುವಿದೇಟಿಗೆ ಬೆದರಿದಂತಾದ ಎತ್ತು ನಾಗಾಲೋಟಕ್ಕೆ ಬಿದ್ದು ಕ್ವಾಟಿಯನ್ನು ಸುತ್ತು ಬಳಸಿ ಧಣೇರ ಸೇದಾಬಾವಿ ದಾಟಿ ಕಣ್ಣು ತೆರೆದು ಬಿಡೋವತ್ತಿಗೆ ಸಂಗಮೇಶ್ವರನ ಗುಡಿ ಮುಟ್ಟಿತ್ತು.

ಬಂಡಿ ನಿಂತ ಮರುಕ್ಷಣ ಹರಿವ ಹೊಳೆಯ ದಂಡೆಗೆ ಇಳಿದ ನೀಲವ್ವ ತನ್ನ ಬಿಳಿಯ ಅಂಗಾಲನ್ನ ತೋಯುವಷ್ಟು ನೀರಿಗದ್ದಿ ಬಂಗಾರದ ಕಾಲಚೈನು ನೀರಿನಲ್ಲಿ ಅಲುಗುತ್ತ ಹೊಳೆಯುವದನ್ನ ಸಣ್ಣ ಮಗುವಿನಂತೆ ನೋಡತೊಡಗಿದಳು. ಒಂದು ಕೈಯೊಳಗೆ ಕಾಯಿ ಕರ್ಪೂರದ ಹೂಬುಟ್ಟಿ ಇದ್ದರೆ ಇನ್ನೊಂದು ಕೈಯಲ್ಲಿ ನೀರಿಗಂಟದಂತೆ ಉಟ್ಟ ಮಡಿ ಸೀರೆಯನ್ನ ಎತ್ತಿ ಹಿಡಿದಿದ್ದಳು. ಮೊಳಕಾಲ ಸಮೀಪದವರೆಗೆ ಮೇಲೇರಿದ್ದ ಸೀರೆ ಮೀನಖಂಡವನ್ನು ಬೆತ್ತಲೆಗೊಳಿಸಿ ನೋಡಿದ ಎದೆಗೆ ಬೆಂಕಿ ಬೀಳುವಂತೆ ಚೆಲ್ಲಾಟವಾಡುತ್ತಿತ್ತು.

ಎತ್ತಿನ ಕೊಳ್ಳರಿದು ಮರದ ನೆರಳಿಗೆ ಅದರ ಮುಗುದಾಣಿ ಹಿಡಿದು ನಿಂತಿದ್ದ ಹನುಮ ನೀಲವ್ವ ಮೇಲೆ ಬಂದರೆ ತಾನಿಳಿದು ಎತ್ತಿಗೆ ನೀರು ಕುಡಿಸುವವನಿದ್ದ.ಆದರೆ ಅವಳು ಬರಲೊಲ್ಲಳು! ನೀರು ಕಂಡ ಪುಟ್ಟ ಮಗುವಿನಂತೆ ಜೊತೆ ಬಂದ ಗಿರಿಜಾ-ಲಕ್ಷ್ಮೀಯರಿಗೆ ನೀರುಗ್ಗಿ ಆಟದಲ್ಲಿ ಮುಳುಗಿದ್ದಳು.ಅವಳ ಹುಡುಗಾಟದ ಮದ್ಯೆ ಎದೆಗಿದ್ದ ಸೆರಗು ಜಾರಿ ಕುಪ್ಪುಸದ ಮೇರೆ ದಾಟಿ ಹೊರಗೆ ಇಣುಕುತ್ತಿದ್ದ ಅವಳ ಯೌವ್ವನ ಹನುಮನ ಕಣ್ಣನ್ನು ತಾಕಿ ನಿಧಿ ನೋಡಿದವನಂತೆ ತಲ್ಲಣಿಸಿದ.

ತಾನು ಹಾಗೆ ನೋಡಿದ್ದರ ಅರಿವು ಆಕೆಗೆ ಕೊನೆ ಕ್ಷಣದಲ್ಲಿ ಕಾಣಿಸಿ ಅದೇ ಅನುಮಾನದಲ್ಲಿ ನೀಲವ್ವ ಸೆರಗಷ್ಟೇ ಅಲ್ಲದೇ ಮೇಲೇರಿದ್ದ ಸೀರೆಯನ್ನೂ ನೀರಿನ ಮುಲಾಜು ಇಲ್ಲದೆ ಇಳಿಬಿಟ್ಟು ಕಣ್ಣು ಕಿರಿದು ಮಾಡಿ ಇವನೆಡಗೆ ನೋಡಿದಳು. ಹನುಮ ಎದೆ ಒಡೆದಂತವನಂತಾಗಿ ಎತ್ತಿನ ಕೊಳ್ಳ ಗಂಟೆಯನ್ನು ವಿನಾಕಾರಣ ಸರಿ ಮಾಡತೊಡಗಿದ. ಅವಳು ಖಿಲ್ಲನೆ ನಗುತ್ತ ಗುಡಿಯ ಒಳಗೆ ಹೋದಳು.

ಹನುಮ ಈ ಹಿಂದೆಯೂ ಈ ಗುಡಿಗೆ ಅಪ್ಪ ಲಚುಮನ ಜೊತೆ ಬಂದಿದ್ದ. ಈ ಗುಡಿಯ ತಳಪಾಯ ಹಾಕುವಾಗ ಗುರುಗುಂಟಾದ ಗುಡ್ಡದಿಂದ ದೊಡ್ಡ,ದೊಡ್ಡ ಗುಂಡಾಕಲ್ಲುಗಳನ್ನ ತಂದವರೆ ಹಾಲಬಾವಿ-ಯರಗುಂಟಿಯ ಹನುಮನ ಬಳಗದವರು. ಅಂತಹ ಕಲ್ಲುಗಳನ್ನ ತಳಪಾಯಕ್ಕೆ ಹಾಕಿ ಇಲಕಲ್ಲಿನಿಂದ ತಂದ ಮೊಸರಿನ ಬಣ್ಣದ ಕಂಬಗಳ ಬಳಸಿ ಗುಡಿ ಕಟ್ಟುವಾಗೆಲ್ಲ ಲಚುಮ ಧಣೇರೊಂದಿಗೆ ಗಾಳಿಯಂತೆ ತಿರುಗಿದ್ದ. ಗುಡಿಯಾಗಿ, ಅದಕ್ಕೊಂದು ಕಳಸವಾಗಿ, ಆ ದೇವರಿಗೆ ಜಾತ್ರಿಯಾದಾಗ ಲಚುಮ ಹನುಮನನ್ನ ಹೆಗಲ ಮೇಲೆ ಕೂಡಿಸಿಕೊಂಡು ಜಾತ್ರೆ, ಊರು, ಕ್ವಾಟೆ ತೋರಿಸಿದ್ದ. ಹನುಮನಿಗೆ ಬುದ್ದಿ ತಿಳಿದಾಗಿನಿಂದ ಅಪ್ಪ ಧಣೇರ ಕೋಟೆಯೊಳಗೆ ಜೀತ ದುಡಿಯುತ್ತಿದ್ದ. ಈಗ ಎರಡ್ಮೂರು ದಿನದಿಂದ ಆತ ಹೊಟ್ಟೆಯಿಡಿದು ಮಲಗಿದಾಗಿನಿಂದ ಬೇರೆ ದಾರಿ ಕಾಣದೆ ಧಣಿಗಳ ಅಪ್ಪಣೆ ಮೇರೆಗೆ ಹನುಮ ಕೆಲಸಕ್ಕೆ ಹಾಜರಾಗಿದ್ದ. ಈ ತರಹದ ಕೆಲಸಗಳನ್ನು ಮಾಡಿ ಹನುಮನಿಗೆ ಅಭ್ಯಾಸವೇ ಇಲ್ಲ!

ಬೆಳಗ್ಗೆದ್ದರೆ ಸಾಕು ಹಿಂಡುವ ಎಮ್ಮೆಯ ಎರಡು ತಂಬಿಗೆ ಹಸಿ ಹಾಲು ಕುಡಿದು ಮೈಯನ್ನ ಮಣಿಸಿ ತಾಸುಗಟ್ಟಲೆ ಗರಡಿ ಮನೆಯಲ್ಲಿ ಕಳೆಯುತ್ತಿದ್ದ. ಸುತ್ತ ಎಲ್ಲೇ ಕುಸ್ತಿ ನಡೆದರೂ ಹನುಮ ಒಂದೇ ಏಟಿಗೆ ಚಿತ್ ಮಾಡಿ ಹೆಸರು ಮಾಡಿದ್ದ. ಬಣ್ಣ ಕಪ್ಪಾದರೂ ಕಂಬದಂತ ಕೈಕಾಲುಗಳು, ಹರವಾದ ಎದೆ, ಕಿರಿದಾದ ಕಣ್ಣು, ಚೂಪನ ಮೂಗು, ಆಗಷ್ಟೇ ಚಿಗುರುತ್ತಿದ್ದ ಮೀಸೆ, ಇಷ್ಟೆ ಮುರಿದು ಬಾತುಕೊಂಡ ಕಿವಿ ನೋಡಿದರೆ ಒಂದೇಟಿಗೆ ಹರೆಯದ ಹುಡುಗಿಯರು ಆಸೆ ಪಡಬೇಕು ಹಂಗಿದ್ದ ಹನುಮ.

ಗುಡಿಯ ಒಳಗೆ ಪೂಜೆಗೆ ಹೋಗಿದ್ದ ನೀಲವ್ವ ಹೊರ ಬರೊವೊತ್ತಿಗೆ ಮುಖ ಬಾಡಿ, ಕಣ್ಣೆಂಬವು ಇನ್ನೇನು ನಂದಿ ಹೋಗುವ ದೀಗಿಯಂತೆ ಅಸಾಹಯಕವಾಗಿ ಓಲಾಡುತ್ತಿದ್ದವು.ಆಕೆ ಮೆಟ್ಟಿಲು ಇಳಿಯುವೊತ್ತಿಗೆ ಹನುಮ ಬಂಡಿಗೆ ಎತ್ತು ಹೂಡಿ ಮನೆಯ ದಾರಿಯ ಕಡೆ ತಿರುಗಿಸಿ ನಿಂತ. ಬಾರವಾದ ಹೆಜ್ಜೆಗಳನ್ನಿಟ್ಟ ನೀಲವ್ವ ಮತ್ತು ಅವಳ ಸಂಗಡಿಗರು ಕೂತಾಗ ಹೊರಡಿಸಿದ ಬಿಸಿಯುಸಿರು ಹನುಮನ ಬೆನ್ನನ್ನ ತಾಕಿ ಕಳವಳಗೊಂಡ. ನಿಡುಸುಯ್ವ ನಿರಾಸೆಯ ಮದ್ಯೆಯೂ ನೀಲವ್ವ ಹನುಮನ ಹೆಬ್ಬಂಡೆಯಂತಹ ಬೆನ್ನು ಅದಕ್ಕೆ ಟಿಸಿಲೊಡೆದ ಬಲಿಷ್ಠ ತೋಳುಗಳನ್ನ ಆಸೆಯಿಂದ ನೋಡಿದಳು. ಅವನು ಅದಿಷ್ಟು ಜಾಗ ಆಕೃಮಿಸಿ ಕೂತದ್ದನ್ನು ಕಂಡು ಅಚ್ಚರಿಯಾದಳು.
“ದಿನಾ ನೀನಾ ಬರತೀಯೇನು ಕ್ವಾಟೀಗಿ? ಅನಿರೀಕ್ಷಿತವಾಗಿ ಬಂದ ಪ್ರಶ್ನೆಗೆ ಹನುಮ ತಬ್ಬಿಬ್ಬಾದ.

ಏನು ಹೇಳಬೇಕೊ ತಿಳಿಯಲಿಲ್ಲ.ಮನೆಯಲ್ಲಿ ಮಲಗಿದ ಅಪ್ಪನೆಂಬೊ ಜೀವ ಸದ್ಯಕ್ಕೆ ಗುಣವಾಗಿ ಕೆಲಸಕ್ಕೆ ಬರುವ ಸ್ಥಿತಿಯಲ್ಲಿ ಇಲ್ಲ.ಹಾಗಂತ ಆ ಕೆಲಸಕ್ಕೆ ಬರುವ ಇಚ್ಛೆ ಹನುಮನಿಗೂ ಇಲ್ಲ ಆದರೆ ನೀಲವ್ವನ ದ್ವನಿಯೊಳಗಿನ ಆರ್ದ್ರತೆ ಇಲ್ಲ ಅನಗೊಡಿಸಲಿಲ್ಲ.

“ಹೂನ್ರೀ ನಾನ ಬರತೀನಿ ನಮಪ್ಪಗ ಮೈಯಾಗ ಬೇಸಿಲ್ಲ” ಅಂದ. ಅವನ ಮಾತಿಂದ ನೀಲವ್ವನ ಮುಖ ಚೂರು ಗೆಲುವಾಗಿದ್ದನ್ನ ಗೆಳತಿಯರು ಗಮನಿಸಿದರು. ಆಡಾಡುತ್ತ ಜಿಂಕೆಯಂತೆ ಗುಡಿಯೊಳಗೆ ಹೋಗಿದ್ದ ದೊರೆಸಾನಿಯ ಮುಖದ ಮೇಲಿನ ನಗು, ಉಲ್ಲಾಸಗಳನ್ನ ಪೂಜಾರಿಯ ಒಂದೇ ಮಾತು ಕಸಿದುಬಿಟ್ಟಿತ್ತು! “ಧಣೇರ ಬಾಳ ಇಳ್ದೋಗ್ಯಾರ ಮೊನ್ನೆ ಔಷ್ದಿ ಕೊಡಾಕ ಬಂದಿದ್ದೆ! ಅವ್ರು ಹೋಗಾಕಿನ ಮುಂದ ನಿಮ್ ಹೊಟ್ಯಾಗೊಂದು ಬೀಜ ಮೂಡಿದ್ರ ಚೊಲೊ ಇತ್ತು” ಅಂತ ನಿಟ್ಟುಸಿರು ಬಿಟ್ಟಿದ್ದ ಡೊಳ್ಳು ಹೊಟ್ಟೆಯ ಪೂಜಾರಿ. ಅವನ ಕಣ್ಣೊಳಗೊಂದು ಅಸಹ್ಯದ ಆಸೆ ಆಗಷ್ಟೇ ಚಿಗುರುತ್ತಿತ್ತು. ಸಂಗಮೇಶ್ವರನ ಮುಂದೆ ನಗುನಗುತ್ತ ನಿಂತಿದ್ದ ನೀಲವ್ವ ಆ ಮಾತಿನಿಂದ ಬಿಳಚಿಕೊಂಡು ಕುಸಿದುಬಿಟ್ಟಿದ್ದಳು.

ಪೂಜಾರಿ ಹೇಳಿದ್ದೇನು ಹೊಸದಲ್ಲ! ಆದರೆ ಅದು ಜಪ್ತಿಗೆ ಬಂದರೆ ಸಾಕು ನೀಲವ್ವ ಇನ್ನಿಲ್ಲದಂತೆ ಕೊರಗುತ್ತಿದ್ದಳು. ಎಲ್ಲಾ ಮರೆತು ನಾಕು ದಿನ ತಣ್ಣಗ ಇರಬೇಕೆಂದು ಗೆಲುವಾಗುತ್ತಿದ್ದವಳ ಹಕ್ಕಿ ಮನಸನ್ನ ಕುಕ್ಕಲು ಕೋಟೆಯ ಪ್ರತೀ ಕಂಬಕ್ಕೂ ಪೂಜಾರಿಯಂತಹ ಹದ್ದುಗಳಿದ್ದವು. ಇಂತಹ ಯೌವ್ವನ ತುಂಬಿದ ದೇಹವಿದ್ದರೂ ಅದರೊಳಗೊಂದು ಜೀವ ಕುಡಿಯೊಡಿಸಲು ದಾರಿಯಿಲ್ಲ ಎಂಬುದನ್ನ ನೆನೆನೆನೆದು ದುಖಃದಿಂದ ಹದಿಮೂರು ವರ್ಷದಿಂದ ಹಗಲು-ರಾತ್ರಿಯೆನ್ನದೆ ಹಲುಬುತ್ತಿದ್ದಳು.

ಮಾಡಿಕೊಂಡಾಗಲೇ ಹಾಸಿಗೆಯಿಂದ ಎದ್ದು ಬಂದಂತಿದ್ದ ಧಣಿ ನೀಲವ್ವನೊಡನೆ ರಾತ್ರಿಗಳಲಿ ಈಜಿದ್ದು ಕಡಿಮೆಯೇ. ಇಲ್ಲವೆಂದರೂ ಆದೀತು! ಮೈಮರೆತು ಕೈಕಾಲು ಬಡಿದರೂ ಅದು ಈಜು ಬಾರದವನ ವ್ಯರ್ಥ ಪ್ರಯತ್ನವಷ್ಟೆ! ಆವಾಗೆಲ್ಲ ನೀಲವ್ವನಿಗೆ ಕೋಟೆಯ ಯಾವದಾದರೂ ಜಂತಿಗೆ ನೇಣು ಹಾಕಿಕೊಳ್ಳಬೇಕು ಎನಿಸುತ್ತಿತ್ತು. ನಾಳೆ ಸರಿ ಹೋದೀತು ಅಂತ ಮಲಗುತ್ತಿದ್ದಳು. ಮತ್ತೆ ಆಟ ಶುರು ಆದಾಗಲೂ ಅದೇ ಗತಿ. ಮೊದಲ ಓಟಕ್ಕೆ ಧಣಿ ಏದುಸಿರು ಬಿಡುತ್ತಿದ್ದ. ಆಟ ಶುರಯವಾಗುವ ಮುಂಚೆಯೇ ನೀರಾಗಿ ಕರಗಿ ಅವಳ ಮೇಲೆ ಸೋತು ಬೀಳುತ್ತಿದ್ದ! ಈಚೆಗಂತೂ ಹಾಸಿಗೆ ಬಿಟ್ಟೇಳುವದೇ ಅಪರೂಪ. ಮಲಗಿದಲ್ಲೇ ಎಲ್ಲವೂ ಆಗಬೇಕು.

ಅತ್ತೆ ದೊರೆಸಾನಿ ಅಚ್ಚಮ್ಮನಿಗೆ ಎಲ್ಲಾ ಗೊತ್ತು! ಆದರೆ ಗಂಡನ ಸೇವೆ ಮಾಡು ದೇವರು ಕಣ್ತೆರೆಯುತ್ತಾನೆ ಅಂತ ಗದರಿಸುತ್ತಾಳೆ. ಅದೆಲ್ಲವನ್ನೂ ದಾಟಿ “ನೆಮ್ಮದಿ ಕೊಡು ಸಿವನೇ ಸಂಗಮೇಶ್ವರ” ಅಂತ ಉದ್ದ ಬೀಳಲು ಬಂದರೆ ಪೂಜಾರಿ ಎಂಬುವವ ಹಾರಾಡುತ್ತಿದ್ದ ಹಕ್ಕಿಯ ಎದೆಗೆ ಜಾಲಿಮುಳ್ಳು ಚುಚ್ಚಿದ.ಹಾಗೆ ಯೋಚಿಸುತ್ತ ಕುಳಿತ ನೀಲವ್ವ ಬದುಕಿನಲ್ಲಿ ಮೊಟ್ಟಮೊದಲ ಸಲ ಪರಪುರುಷನೊಬ್ಬನ ಬೆನ್ನನ್ನ ಆಸೆಯಿಂದ ನೋಡುತ್ತ ಆ ಬೆನ್ನಿಂದ ಕಣ್ಣು ತೆಗೆಯಲಾಗದೆ ಒದ್ದಾಡಿದಳು.


ಅಪರಾತ್ರಿಯಲ್ಲಿ ಮನೆಗೆ ಬಂದ ಹನುಮನನ್ನ ಬಾಗಿಲು ದಾಟುವ ಮೊದಲೇ ತಡೆದು ಅವನವ್ವ ಕಾಲ್ತೊಳಕಂಡು ಬಾ ಯಪ್ಪಾ ಒಳ್ಗಾ! ಅಂದಳು. ನಾನೇನು ಹೇಲಾಗೇರಿಗೆ ಹೋಗಿದ್ನೇನು? ಕ್ವಾಟಿಯೊಳಗ ಹೂವಿನ ಮ್ಯಾಲ ನಡದು ಬಂದೀನಿ, ಹಸುವಾಗ್ಯಾದ ಮೊದಲು ಉಣ್ಣಾಕಚ್ಚು ಅಂತ ತಲ ಬಾಗಿಲು ತುಳ್ಯಾವಿದ್ದ.

“ನಿಂದ್ರರಂದ್ರ ತಿಳ್ಯಾದಿಲ್ಲೇನು ಕಬರಗೇಡಿ, ನಾವೇಟು ಹೊಯ್ಕ್ಯಂಡ್ರೂ ನಿಂದಾ ನಿನಗಾ” ಅಂತ ಅವಸರೀಲಿ ಬಂದು ತಳ ನೆಗ್ಗಿದ ಚರಿಗ್ಯಾಗ ನೀರು ತಂದು ಅವನ ಕಾಲಿಗಾಕಿ ತಲಿ ಮ್ಯಾಲ ಎಲ್ಡು ಕಾಳುಗ್ಗಿ ನಮವ್ವ ಕಾಪಾಡವ್ವ ಅಂತ ಗುಡ್ಡದ ಎಲ್ಲವ್ವಗ ಬೇಡಿ ಬಾ ಕುಂದ್ರು ಉಣಾಕ ಅಂತ ಸಂಜ್ಞೆ ಮಾಡಿದಳು. ಜಂಪದ ಕಟಿಗೀಗಿ ಸಿಗೆಬಿದ್ದಿದ್ದ ಮೂಲೇ ಹರದ ಲಚುಮೂನ ಹಳೇ ಶೆಲ್ಯಾವ ತಗಂಡು ಮುಖ, ಕಾಲು, ತಲೀ ಒರಿಸಿಗ್ಯಾಂತ ಬಂದು ಅಡಿಗಿ ಮನೀ ಅಂಬೋ ಸಣ್ಣ ಕೋಲ್ಯಾಗ ಅವ್ವನ ಮುಂದ ಚಕಳಮುಕಳ ಹಾಕ್ಯಾಂಡು ಕುಂತ.

ಗಂಗಾಳ್ದಾಗ ಬಂದು ಬಿದ್ದ ರೊಟ್ಟಿ ಮನೀ ಇಂದಲ ಬಳ್ಯಾಗ ದಿನಕ್ಹೆಂಟು ಬಿಡೋ ಈರೇಕಾಯಿಯ ಪಲ್ಯವನ್ನ ತುತ್ತು ಮಾಡಿ ಬಾಯಾಗ ಇಟಗಳಾ ಹೊತ್ತಿಗೆ ಒಂದು ಮುದ್ದೆ ಬೆಣ್ಣೆ ತಂದು ರೊಟ್ಟಿಯ ಮುಖಕ್ಕೆ ಬಡಿದಳು.
ಬೆಣ್ಣೆ ನೋಡಿ ಹನುಮನ ಮುಖ ಅರಳಿದರೂ “ಚಂದ ಕಾಸೀ ಛಾವಣಿ ಸಂತ್ಯಾಗ ಮಾರಿದ್ರ ನಾಕು ದುಡ್ಡು ಬಂದು ಅಪ್ಪಗ ಔಷದಕ ಬರತಿತ್ತಬೇ” ಅಂತ ಕಾಳಜಿ ಮಾಡಿದ.ಆ ಮಾತಿಗೀ ಅವ್ವನ ಮುಖದಾಗ ಯಾವ ವ್ಯತ್ಯಾಸ ಆಗಲಾರದ, ಉತ್ರಾನೂ ಬರಲಾರದ ಅವ್ವ ಯಾವ್ದೊ ಲೋಕದಾಗ ಮುಳುಗಿ ಚಿಂತಿ ಮಾಡಕತ್ಯಾಳ ಅನಿಸ್ತು.

“ಯವ್ವಾss ಏ ಯವ್ವಾ” ಅಂತ ಹನುಮಾ ಅಲುಗ್ಯಾಡಸವರೆಗೂ ಅವ್ವಗ ಈಕಡೇ ಧ್ಯಾನಿದ್ದಿಲ್ಲ. ಮಗ ಕೈ ಬಡದು ಅಲ್ಲಾಡಿಸ್ದದಕ ದಡಗ್ಗನ ಬೆದರಿದಂಗಾಗಿ “ಏನಿಲ್ಲಪ ಹಂಗ್ಯ ಏನೊ ನೆಪ್ಪಾತಿ” ಅಂತ ಬಾಯಿ ಸವರಿದಳು. ಬರಾಮುಂದನ ಕಾಲು ತೊಳ್ಕೊ ಮಾರಿ ತೊಳ್ಕೊ ಅದಾಗಲೇ ಕೇಳಾಂವಿದ್ದ! ಇದೇನಬೇ ಹೊಸ ನಡೀ? ಅಂತ.

ಮುಂಜಾನೆ ಮೈಯೀಗಿ ನೀರಬಿದ್ರೇ ಮತ್ತೆ ಮರಾಮುಂಜಾನೆ ತನಾ ನೀರ್ ಕಾಣ್ಸಾವಲ್ಲ ಅಂತದ್ರಾಗ ನೀss ಅಂತ ಓಘಕ್ಕಿಳಿದವ ಮಾತು ಕತ್ತರಿಸಿ “ನೀ ಹೋದಾ ಕ್ವಾಟೀ ಸಣ್ಣ ಕತೀದಲ್ಲೋ ಮುದೇತಾ!ಎಂಟು ತಲೀಲಿಂದ ಆ ಕ್ವಾಟೀ ಮನೆತನಕ್ಕ ಮಕ್ಳಾ ಆಗಿಲ್ಲ!ತೊಟ್ಲಾ ತೂಗಿಲ್ಲ! ಅದರ ನೆದರು ನಿನ ಮ್ಯಾಲ ಬಿದ್ದು ನಮ್ಮನೀ ದೀಪ ಹೊಯ್ದಾಡಬಾರದು ಅಂತ ಅಂಜಿಕೆಂಡ್ಯಾ” ಅಂತ ನಿಟ್ಟುಸಿರು ಬಿಟ್ಟಳು. ಹನುಮ ಸಣ್ಣಾವಿದ್ದಾಗಿಂದ ಈ ಕತೆಯನ್ನ ಅಷ್ಟು ಇಷ್ಟು ಕೇಳಿದ್ದಾನಾದರೂ ಯಾವದೂ ಸ್ಪಷ್ಟ ಇರಲಿಲ್ಲ. ಏನಾದರೂ ಕೇಳಿದಾಗ ಅವ್ವನಾಗಲಿ, ಅಪ್ಪನಾಗಲಿ “ಅದೆಲ್ಲ ನಿನಗ್ಯಾಕ ಮೂಳಾ” ಅಂತ ಗದರಿಸುತ್ತಿದ್ದರೆ ವಿನಃ ತುಟಿ ಬಿಚ್ಚುತ್ತಿರಲಿಲ್ಲ. ಆಮೇಲೆ ದೊಡ್ಡವನಾಗಿ ಬೆಳ್ದ ಘಳಿಗೆಯಲ್ಲೂ ಅವರಿಗೆ ಅದನ್ನ ಹೇಳಬೇಕಿನಿಸಿದ್ದಿಲ್ಲ! ಆದರೀವಾಗ ಮಗ ಕೋಟೆಯೊಳಗೆ ಹೋಗಬೇಕಾಗಿ ಬಂದದ್ದರಿಂದ ಬೇರೆ ದಾರಿ ಇರಲಿಲ್ಲ.ಅಲ್ಲದೆ ಮುಂಜಾನೆಯಿಂದ ನೀಲವ್ವನ ಗುಂಗಿನಲ್ಲೇ ಇದ್ದ ಹನುಮನಿಗೆ ಕ್ವಾಟಿಯ ಕತೆ ಕೇಳುವ ಹುಕಿ ಬಂದು ಬಿಟ್ಟಿತ್ತು.

“ಧಣೇರಿಗಿ ದೇಸ್ಗತಿ ಬರೋ ಮುಂಚೆ ಏನೇನು ಇರಲಿಲ್ಲಂತ! ಹೀಂಗ ಎಂಟು ತಲೀ ಹಿಂದ ಈಗ ಹಾಸಿಗ್ಯಾಗ ಬಿದ್ದು ಇವತ್ತಾ ನಾಳೀ ಅನ್ನಾಂಗಿರೋ ನಿಂಗರಾಜ ಧಣಿಯ ತಾತ, ಮುತ್ತಾತನ, ಮುತ್ತಾತನ, ಮುತ್ತಾತ! ಹೇಳುವದನ್ನ ನಿಲ್ಲಿಸಿ ಗೊತ್ತಾತೇನು? ಅಂಬಂಗ ಮಗನ ಕಡೆ ನೋಡಿದಳು. “ಹೇ ಗೊತ್ತಾತೇಳಬೇ ಈಗ್ಗೆ ಎಂಟು ತಲೀ ಹಿಂದ ಮೊದಲ್ನೇದವ” ಅಂತ ಚೂರು ಸಿಟ್ಟಿನಿಂದಲೇ ಅವ್ವನ ಮೇಲೆ ಹರಿಹಾಯ್ದ. ನಾ ಏಟು ಬೆಳೆದ್ರೂ ಇವರಿಗೀ ಗ್ಯಾನಿಲ್ಲ ಇನ್ನಾ ಹಾಲ್ಕುಡ್ಯಾ ಕೂಸ ಅನಕಂಡಾರ ಅಂತ ಸಿಟ್ಟು ಬಂತು.

“ನವಾಬರು ಯುದ್ದ ಮಾಡಿ ಗೆದ್ದ ರೊಕ್ಕ, ಬೆಳ್ಳಿ, ಬಂಗಾರನ ಹದಿನೇಳು ಒಂಟೀ ಮ್ಯಾಲ ಸಾಗಸಾಕತ್ತಿದ್ದರು! ಅದರಾಗ ಒಂದು ಒಂಟಿ ನ ಧಣೇರ ಮುತ್ತಾತ ಕಳ್ತನ ಮಾಡಿ ಊರಿಗಿ ಹೊಡಕಂಡು ಬಂದ್ರಂತ! ಆಮ್ಯಾಲಿದು ಗೊತ್ತಾಗಿ ಗುಲ್ಬರ್ಗಾದ ನವಾಬ ಇವ್ರ ಮುತ್ತಾತನ ಕರಿಸಿ ಜೀವ ತೆಗ್ಯಾಕ ಸಂಚು ಮಾಡಿದ್ರಂತ! ಸೈನಿಕರು ಬಂದು ಸರಪಳಿ ಹಾಕಿ ಕರಕೊಂಡು ಹೋಗುವಾಗ ದಾರೀಲಿ ಕಾಣಿಸಿದ ದರಗದಾಗ ಬಾಬಾನ ಕಾಲಿಗಿ ಬಿದ್ದು
“ನನ್ನ ಹೆಂಗಾರ ಪಾರು ಮಾಡೋ ಯಪ್ಪ ನೀ ಕೇಳಿದ್ದು ಕೊಡ್ತೀನಿ” ಅಂತ ಬೇಡಿಕೊಂಡ್ನಂತ.

ದರಗದಾಗಿನ ಬಾಬಾ ಧಣೇರ ಮುತ್ಯಾಗ ಮೂರಳ್ಳು ಮಂತ್ರಿಸಿ ಕೊಟ್ಟು “ನಿನಗ ಹುಚ್ಚು ಕುದುರೀ ಮ್ಯಾಗ ಕುಂದ್ರಿಸಿ ಗುಡ್ಡದ ಮ್ಯಾಲಿಂದ ಬೂಳುಸ್ತಾರ, ಆ ಕುದುರಿ ಮ್ಯಾಲ ಕುಂತೋರು ಇಲ್ಲೀತನ ಯಾರೂ ಉಳ್ದಿಲ್ಲ! ಈ ಮೂರು ಅಳ್ಳಿನ್ಯಾಗ ಕುದುರಿ ಮ್ಯಾಗ ಕುಂತಾಗ ಒಂದಳ್ಳು ಹೊಗಿ, ಕುದುರಿ ಓಡಿ ಹೋಗಾಗ ಒಂದಳ್ಳು ಹೋಗಿ,ಕುದುರಿ ನಿಂತ ಮ್ಯಾಗ ಒಂದಳ್ಳು ಹೊಗಿ” ಅಂದನಂತ.

ಬಾಬಾ ಹೇಳಿದ ಮಾತು ಎಷ್ಟು ಸತ್ಯ ಇತ್ತಂದ್ರ!? ನವಾಬರ ದರ್ಬಾರದಾಗ ಜಾಸ್ತಿ ಮಾತಾ ಆಡಲಿಲ್ಲ. ರೊಕ್ಕದ ಒಂಟಿ ಕದ್ದಾಂವಗ ಹುಚ್ಚು ಕುದುರಿ ಮ್ಯಾಗ ಕುಂದ್ರಿಸಿ ಸಾಯಿಸ್ರೀ”ಅಂದು ಕುದುರಿ ಮ್ಯಾಲ ಕುಂದ್ರಿಸಿ ಗುಡ್ಡದ ಕಡೀ ಓಡಿಸಿದ್ರಂತ.

ಕುದುರಿ ಅಂಬೋದು ಹುಲಿಯಂಗ ಓಡಕಲಕ ಧಣೇರು ಒಂದು ಅಳ್ಳು ಒಗದ್ರಂತ.
ಕುದುರಿ ಓಡಾದು ಕಮ್ಮಿ ಆತಂತ! ಆದ್ರ ಗುಡ್ಡದ ಕೊನಿಗಿ ಹಂಗ ಹೊಂಟಿತ್ತಂತ!

ಇನ್ನೊಂದು ಹಳ್ಳು ಹೊಗದ್ರ ಓಡೋ ಕುದುರಿ ನಿಂತು ಮತ್ತೆ ನವಾಬರ ದರ್ಬಾರಿನ ಕಡೆ ಹೊಳ್ಳಿ ನಿಂತಿತಂತ!
ಉಳ್ದ ಇನ್ನೊಂದು ಅಳ್ಳು ಹೊಗದ್ರ ವಳ್ಳಿ ಹೂವಿನಂಗ ನವಾಬರ ದರಬಾರದಾಗ ತಂದು ನಿಲ್ಲಿಸಿತಂತ.

“ಅಲೇ ಇವ್ನೌನ ಈ ಕುದುರಿ ಇಷ್ಟು ದಿನ್ದಾಗ ಒಬ್ರೂನು ಉಳಿಸಿಲ್ಲ ಈ ಗಡಿ ಗಟ್ಟೈತಿ” ಅನಕೊಂಡು ಅವತ್ತಾ ಅದಾ ದರ್ಬಾರದಾಗ ಮೂವತ್ತು ಮೂರು ಹಳ್ಳಿ ದೇಸ್ಗತಿ ಮತ್ಯ ಒಂಟಿ ಮ್ಯಾಲ ತಂದ ಸಂಪತ್ತು ಧಣೇರಿಗಿ ಕೊಟ್ಟು ಕಳಿಸಿದ್ರಂತ.ಕತೆಯನ್ನ ಅಷ್ಟಕ್ಕೆ ಮೊಟಕುಗೊಳಿಸಿ ಮಗನ ಮುಖ ನೋಡಿದಳು.ಇಷ್ಟೊತ್ತಿಗಿ ಕೂಕಡಿಸಿ ಸಾಕಬಿಡಬೇ ನಿದ್ದಿ ಬಂದಾದ ಅಂತಾನ ಮಗ ಅಂದ್ರ, ಕಣ್ಣಂಬವು ಕಂದೀಲಿ ಮಾಡಿಕೆಂಡು ಮುಂದಾ ಹೇಳು ಅಂತ ದುಂಬಾಲು ಬಿದ್ದ.

“ಯಪ್ಪ ಹಗಲೆಲ್ಲ ದುಡದು ಹೈರಾಣಾಗಿ ಬಂದೀದಿ ಮಕ್ಕ ನಾಳಿ ಪೂರಾ ಹೇಳ್ತೀನಿ” ಅಂತೇಳಿ ಎದ್ದು ಹೊಂಟಳು.ಎಂಟ ತಲೆಮಾರಿಗಿ ಮಕ್ಳು ಯಾಕಿಲ್ಲ, ನೀಲವ್ವ ಯಾವ ಊರ್ ರಾಜ್ಕುಮಾರಿ ಅಂಬೋದನ್ನ ಕೇಳಬೇಕು ಅನ್ನೊ ಕುಶಾಲಿಯಲ್ಲಿದ್ದ ಹನುಮನಿಗೆ ಅರ್ದ ಕತೀ ಕೇಳಿ ತಲ್ಯಾಗ ಹುಳ ಬಿಟ್ಟಂಗ್ಹಾತಿ.ಹೆಂಗ ನಾಳಿ ಹೇಳತಾಳಲ ಬುಡು ಅನಕೊಂಡು ನಿದ್ದೆಗೆ ಜಾರಿದ.

ಮಲಗಿ ಜೊಂಪತ್ತಿ ಗೊರಕೀ ಹೊಡಿಯೋ ಹೊತ್ತಿಗೆ ಅವನ ಕಣ್ಣ ತುಂಬಾ ಕನಸೊಂದು ಬಿತ್ತು.

ಕಾಲಗೆಜ್ಜೆ ಕುಣಿಸುತ್ತ ಯಾರೋ ಓಣಿ ತುಂಬಾ ನಡೆದು ಬಂದಂಗಾತಿ! ಕಾಲ್ಗೆಜ್ಜೆ ಸಮೀಪವಾಗಿ ಕಾಲ್ದೆಸೆಯಲ್ಲೆ ಕುಂತಂತಾಗಿ ಮಲಗಿದಲ್ಲೇ ಮಿಸುಕಾಡಿದ. ಕುಂತವರ ಮುಖವನ್ನೊಮ್ಮೆ ನೋಡುವ ಪ್ರಯತ್ನದಲ್ಲಿ ಇರುವಾಗಲೇ ರಟ್ಟೆ ಹಿಡಿದು ಕ್ಷಣಾರ್ದದಲ್ಲೇ ಅಷ್ಟು ದೂರದ ಕೋಟೆಯೊಳಗೆ ಎಳೆದೊಯ್ದಂತಾಯಿತು!

ಕೈ ಹಿಡಿದವರ ಮುಖವನ್ನೊಮ್ಮೆ ನೋಡಿದ. ನೀಲವ್ವ! ಒಂದರೆಕ್ಷಣ ಬೆಚ್ಚಿಬಿದ್ದ. ಮರುಕ್ಷಣ ಬಿಡಿಸಿಕೊಳ್ಳಲು ಹವಣಿಸಿದ. ಅಷ್ಟೊತ್ತಿಗೆ ಕ್ವಾಟಿಯ ಅಷ್ಟು ಧಣಿಗಳು, ಹೆಂಗಸರು, ಆಳುಗಳು ಕೊಡಲಿ, ಭರ್ಚಿಗಳೊಂದಿಗೆ ಮೇಲೆ ಮುಗಿಬಿದ್ದರು.

ಮೊದಲು ಎದೆಗೆ
ನಂತರ ಹೊಟ್ಟೆಗೆ
ಎಲ್ಲೆಂದರಲ್ಲಿ ಇರಿಯುತ್ತಿರುವಾಗಲೇ ಅಚ್ಚಮ್ಮ ದೊರೆಸಾನಿ ಬೀಸಿದ ಖಡ್ಗ ಕೊರಳು ಸೀಳಿದಂತಾಗಿ ಯವ್ವೋ ಅಂತ ಗಟ್ಟಿಸಿ ಚೀರಿಬಿಟ್ಟ!

ಪುಟ್ಟ ಗುಡಿಸಲು ಅದುರಿ ಹೋಯಿತು. ಮೂಲೆಯಲ್ಲಿ ಮಲಗಿದ್ದ ಅವನವ್ವ ಓಡಿ ಬಂದಳು. ಕನಸಿಂದ ಎದ್ದು ಕೂತವನ ಮೈ ತೋಯ್ದು ತೊಪ್ಪೆಯಾಗಿತ್ತು.ಒಲೆಯ ಆಧಾರ ತಂದು ಮಗನ ಹಣೆಗಚ್ಚಿ “ಕೆಟ್ಟ ಕನಸು ಮತ್ತೆ ಬೀಳದಿಲ್ಲ ಮಲಕೊ” ಅಂತ ಅಲ್ಲೇ ಕೂತ ಮಗನ ಹಣೆಗೆ ಚೋ ಬಡಿಯತೊಡಗಿದಳು.

*

ಸೂರ್ಯ ಮೂಡುವ ಮೊದಲೇ ಹನುಮ ಧಣೇರ ಕ್ವಾಟೆಯೊಳಗಿದ್ದ.ರಾತ್ರಿ ಬಿದ್ದ ಕನಸು ಮುಖದ ಮೂಲೆಯಲ್ಲಿ ಅವಿತು ಅವನಿನ್ನೂ ನಿರಮ್ಮಳ ಆಗಿರಲಿಲ್ಲ. ಘಳಿಗೆಗೊಮ್ಮೆ ಕ್ವಾಟಿಯ ಬಾಗಿಲು ತೆರೆಯುವದನ್ನ ಕಾಯುತ್ತಿದ್ದ. ತಿಕ್ಕಿದ ಕುದುರೆಯ ಬೆನ್ನನ್ನೆ ಮತ್ತೆ ತಿಕ್ಕಿದ. ಬಂಡಿಯ ಕಡಾಣಿ ಬಿಚ್ಚದೆಯೇ ವಿನಾಕಾರಣ ಉಚ್ಚಿ ಉಪಚರಿಸಿ ಮತ್ತೆ ಸಿಗಾಕಿದ.

ಊಹೂಂ ಏನೂ ಮಾಡಿದರೂ ಮನಸು ತಹಬಂದಿಗೆ ಬರಲೊಲ್ಲದು.ಇದೆಲ್ಲ ಮಾಡುತ್ತಿರುವ ಹೊತ್ತಿಗೆ ಅವನಿಗೆ ತಿಳಿಯದೆ ಅವನ ಹರವಾದ ಅಗಸಿಗೆ ಹಾಸಿದ ಬಂಡೆಯಂತಹ ಬೆನ್ನನ್ನೂ,ದೋತರದ ಹಂಗಿಲ್ಲದ ಕರಿ ತೊಡೆಗಳನ್ನು ಉಪ್ಪರಿಗೆ ಮೇಲಿನಿಂದ ಜೋಡಿ ಕಣ್ಗಳು ಆಸೆಯಿಂದ ನೋಡುತ್ತಿದ್ದವು!

ಆ ಕಣ್ಗಳಲಿ ಆಸೆಯೆಂಬುದು ಹದ್ದಾಗಿ, ಕಲ್ಲಿನಲ್ಲಿ ಕಡೆದಿಟ್ಟಂತಹ ದೇಹದ ಮೇಲೆ ತೆಗೆಯದಂತೆ ಕಣ್ಣು ನೆಟ್ಟಿದ್ದವು. ಆ ಕ್ಷಣದಲ್ಲೇ ನೆಲುವಿನ ಮೇಲಿನ ಹಾಲಿಗೆ ಜಿಗಿಯಲಿದ್ದ ಬೆಕ್ಕಿಗೆ ಗದರಿಸುವ ಘಟವಾಣಿಯಂತೆ ಬಾಗಿಲಲ್ಲಿ ರಾಣಿ ಅಚ್ಚಮ್ಮ ಪ್ರತ್ಯಕ್ಷವಾಗಿದ್ದು. “ನೀಲವ್ವ ನೀ ಆಸಿ ಬೆನ್ನತ್ತಿದ್ದು ನಿನ್ನ ಕಣ್ಣ ಕನ್ನಡ್ಯಾಗಿನ ಚಿತ್ರ ಆಗಿ ಕಂಡೋರಿಗಿ ಕಾಣಕತ್ಯಾದ, ಅದರ ಖಬರ ಐತೇನು ನಿನಗ?” ಅಂತ ಗದರಿಸಿದರು. ನೀಲವ್ವ ಒಮ್ಮೆಲೇ ಹಾವು ತುಳಿದವಳಂತೆ ಮೆಟ್ಟಿ ಬಿದ್ದು ಬೆದರಿದಳು.

ಸಟ್ಟನೆ ಕಿಟಕಿಯಿಂದ ಕಣ್ಣನ್ನೂ ಮತ್ತು ಆಕಡೆ ವಾಲಿದ್ದ ದೇಹವನ್ನ ಈಚೆ ಎಳೆದುಕೊಂಡು ಅಡಸಲಬಡಸಲ ಒಳಗೆ ಓಡಿದಳು. ಪ್ರತೀ ಕಂಬಕ್ಕೂ ಕೈ ಬಡಿದು, ಕಾಲ್ ಎಡವಿ, ಬಿದ್ದು-ಎದ್ದು ತೆರೆದ ಬಾಗಿಲ ಮುಚ್ಚುವ ಪರಿವೆ ಇಲ್ಲದೆ ಹಾಸಿಗೆ ಮೇಲೆ ಬೋರಲು ಬಿದ್ದು ಕಣ್ಣೀರು ಖಾಲಿ ಆಗೋವರೆಗೂ ಅತ್ತಳು. ಸಮಾಧಾನವನ್ನುವಾಗಲಿಲ್ಲ! ಬಾಲ್ಯದಲ್ಲೇ ಕಳೆದುಕೊಂಡ ಅವ್ವ ಕಣ್ಣ ಮುಂದೆ ಬಂದಳು. ಮತ್ತೀಟು ಅತ್ತಳು.

ಅಜಮಾಸು ಹತ್ತು ವರ್ಷಗಳ ಮೇಲಾಯ್ತು ಈ ಮನೆಗೆ ನಡೆಯಲು ಬಂದು! ಆದರೆ ಒಂದೇ ಒಂದು ದಿನವೂ ಅಚ್ಚಮ್ಮ ಹೀಗೆ ಗದರಿಸಿರಲಿಲ್ಲ. ಹೆಸರಿಡಿದು ಕರೆದಿರಲಿಲ್ಲ. ತಾಯಿಯಿಲ್ಲದ ತಬ್ಬಲಿ ಅಂತ ಒಂದರಪಾವು ಹೆಚ್ಚೇ ಪ್ರೀತಿ ಕೊಟ್ಟಿದ್ದಳು. ಇಪ್ಪತ್ತರ ಹರೆಯದಲ್ಲೇ ಮುದುಕನಂತೆ ಗೂರುತ್ತ ಕೂಡುವ ಕ್ವಾಟೆಯ ರಾಜ್ಕುಮಾರನಿಗೆ ಹೆಣ್ಣು ಕೊಡವವರು ಯಾರೂ ಇರಲಿಲ್ಲ.

ಸಿರಿ-ಸಂಪತ್ತು ಸೇರುಗಟ್ಟಲೆ ಇತ್ತಾದರೂ ಏಳೆಂಟು ತಲೆಮಾರುಗಳಿಂದ ವಂಶದ ಕುಡಿ ಇಲ್ಲದೆ ದತ್ತಕ ನಡೆದ ಮನೆತನಕ್ಕೆ ಕೊಟ್ಟರೆ ತಮ್ಮ ಮಗಳ ಹೊಟ್ಟೆಗೂ ಕೇರು ಬಿದ್ದೀತು ಅಂತ ಹೆದರಿದ್ದರು. ಇಂತಹ ಘಳಿಗೆಯಲ್ಲೇ ಮಲತಾಯಿಯ ಕೈಯಲ್ಲಿ ಹಣ್ಣಾಗುತ್ತಿದ್ದ ಸೊಲ್ಲಾಪುರ ಕಡೆಯ ನೀಲವ್ವ ಅಚ್ಚಮ್ಮನ ಕಣ್ಣಿಗೆ ಬಿದ್ದು ಕೋಟೆಯೊಳಗೆ ಸೊಸೆಯಾಗಿ ನಡೆದು ಬಂದಿದ್ದಳು.

ಉದ್ದ ಮೂಗಿನ, ದುಂಡು ಮುಖದ ಆಗಷ್ಟೇ ಹರೆಯ ಹಬ್ಬಿದ ಬಳ್ಳಿಯಂತಿದ್ದ ನೀಲವ್ವನ್ನ ಮುಖವನ್ನ ತನ್ನ ಎರಡೂ ಕೈಯಲ್ಲಿಡಿದು ಘಳಿಗೆಗೊಮ್ಮೆ ರಾಣಿ ಲಟಿಕೆ ಮುರಿಯುತ್ತಿದ್ದಳು. “ನನ್ನ ಸೊಸೆ ಮುದ್ದು ಈಕಿ ಕಾಲ್ದೆಸೆಯಿಂದ ನಮ್ಮುಡುಗ್ಹಾನು ಎಚ್ಚರಾತದ, ಈ ಕ್ವಾಟೀ ಕಂಬಕೊಂದು ಆಡೋ ಕೂಸೂ ಬರತಾವ” ಅಂತ ದಿನಕ್ಕ ನಾಕು ಸಲ ಅನ್ನುತ್ತಿದ್ದಳು. ಆರಂಭದಲ್ಲಿ ನೀಲವ್ವನ ಗಂಡ ಸಣ್ಣ ಧಣಿ ಚೇತರಿಸಿಕೊಂಡಂತೆ ಕಾಣಿಸಿತು. ಆದರದು ಕ್ರಮೇಣ ಭ್ರಮೆಯ ಬೀಜ ಅಂಬೋದು ಅಪೂಟ ಗೊತ್ತಾಯಿತು. ಆತನಿಗಿದ್ದ ಕ್ಷಯ ದಿನದಿಂದ ದಿನಕ್ಕೆ ಕಟಿಗೆಯೊಳಗಿನ ಹುಳದಂತೆ ಇಂಚಿಂಚು ತಿನ್ನುತ್ತಿತ್ತು.

ರಾತ್ರಿ ಬಾಜು ಮಲಗಿದರೆ ಸೂರ್ಯ ಹುಟ್ಟೋವರೆಗೆ ಬರೀ ಕೆಮ್ಮು, ಕೆಮ್ಮಿನ ಕಫ, ಮತ್ತು ಕೆಮ್ಮಿ ಸರಿಮಾಡಿಕೊಂಡ ಗಂಟಲಿನ ಗರಗರ ಸದ್ದಷ್ಟೆ! ಅದರಾಚೆ ಆಟ ಸಾಗುತ್ತಿರಲಿಲ್ಲ!

ಯೌವ್ವನವೆಂಬದು
ಹೂವಾಗಿ,
ಕಾಯಾಗಿ,
ಹಣ್ಣೊಡೆದು,
ಹಣ್ಣಾದ
ಈ ಹದಿಮೂರು ವರ್ಷದಲ್ಲಿ ಒಮ್ಮೆಯೂ ನೀಲವ್ವ ನೀರು ತಪ್ಪಿಸಲಿಲ್ಲ. ಇನ್ನೇನು ಈ ಬದುಕು ಇಷ್ಟೇ!? ಹಾಡು ಮರೆತ ಕೋಗಿಲೆಯಂತಹದು! ಅಕ್ಕಸಾಲಿಗನ ಕೈಗೆ ಸಿಗದ ಬಂಗಾರದ ಬುಗುಡೆಯಂತಹದು
ಎಂದುಕೊಂಡ ಕ್ಷಣದಲ್ಲೇ ಹನುಮ ಕಣ್ಣಿಗೆ ಬಿದ್ದಿದ್ದ. ಹೊಕ್ಕುಳದಾಳದಲ್ಲಿ ಬಾಡಿ ಹೋಗಿದ್ದ ಆಸೆಯ ಹೂ ಮತ್ತೆ ಅರಳುವ ಮನಸು ಮಾಡಿತ್ತು. ಕಣ್ಣ ಕೊನೆಯ ಕಾಮವೆಂಬುದು ಬಸಿರಿನ ಬಯಕೆವೊತ್ತ ಬಾವುಗವಾಗಿ ಬೇಟೆಯ ಜಾಡು ಹಿಡಿದಿತ್ತು.

ಬೈಯ್ಯುವದೇನೋ ಬೈಯ್ದಳು ಆದರೆ ರಾಣಿ ಅಚ್ಚಮ್ಮನಿಗೆ ಜೀವ ಸಮಾಧಾನವಾಗಲಿಲ್ಲ. ಆಕೆಯೂ ಒಂದು ಕಾಲಕ್ಕೆ ಈ ದೆವ್ವದಂತಹ ಕ್ವಾಟಿಗೆ ಸೊಸೆಯಾಗಿಯೇ ಬಂದವಳು! ನೂರು ಕಂಬಗಳ ನಡುವಿನ ಒಂಟಿತನ, ಹತ್ತಾರೂ ಜನರ ಮದ್ಯೆಯೂ ಕಾಡುವ ಖಾಲೀತನವನ್ನ ಉಂಡು ಬೆಳೆದವಳೇ.

ದೈವಕ್ಕೆ ಧಣಿ ಸಿದ್ಧರಾಮ ರಸಿಕನಿದ್ದ. ಹಣೆಗೆ, ಹಣೆ ಹಚ್ಚಿ ಪ್ರೀತಿಗೆ ನಿಲ್ಲುತ್ತಿದ್ದ! ಆಡುವ ಪ್ರತೀ ಮಾತಿಗೆ ಜೇನು ತುಂಬಿರುತ್ತಿದ್ದ. ತಬ್ಬುಗೆಯೆಂಬುದು ಮರ ಬಳಸಿದ ಬಳ್ಳಿಯಂತೆ ಅಪ್ಯಾಯಮಾನ. ಕತ್ತಲು ಹೊತ್ತಿಗೆ ತಳಿಕೆ ಬೀಳುವ ಹಾವಿನಂತಾಗುತ್ತಿದ್ದ ಧಣಿ ಈಜಿ ಧಣಿದನೇ ಹೊರತು ಅಲ್ಲೂ ಒಂದು ಸಸಿ ಮೊಳಕೆಯೊಡೆಯಲಿಲ್ಲ.

ಸುಖವೆಂಬುದು ಕಲ್ಲಮೇಲೆ ಸುರಿದ ಮಳೆಯಂತೆ ಸರಿದು ಹೋಯಿತೆ ವಿನಃ ನೆಲ ಇಂಗಿ ಒಳಗಿಂದ ಬೀಜವೊಂದು ಮೊಳಕೆಯೊಡೆಯಲಿಲ್ಲ. ಆವತ್ತಿಗೂ ಕ್ವಾಟೆಯಲ್ಲಿ ಹತ್ತು ಹಲವು ಗಂಡಸರಿದ್ದರು. ಧಣಿಯೊಂದಿಗೆ ಬೇಟೆ ಆಡುವ ಬೇಡರ ಕಟ್ಟುಮಸ್ತಾದ ಹುಡುಗರಿದ್ದರು. ಅಷ್ಟೇ ಏಕೆ ಇವತ್ತು ನೀಲವ್ವನ ಕಣ್ಣಲಿ ಚಿತ್ರವಾಗಿ ಕದಲುತ್ತಿರುವ ಹನುಮನ ತಂದೆ ಹಾಲಬಾವಿಯ ಲಚುಮನಿದ್ದ. ಎಂತಹ ಗರತಿಯೂ ತೆಕ್ಕೆಗೆ ಬೀಳಬೇಕು ಅಂತ ಕಬ್ಬಿಣದ ಮೈಯ್ಯವನು.

ಆದರೆ ಧಣಿಯೊಂದಿಗಿನ ಎಂದೂ ಮುಗಿಯದ ಪ್ರೇಮ ಅದಕ್ಕೆ ಅವಕಾಶ ನೀಡಲಿಲ್ಲ. ಇದೆಲ್ಲದರ ಕೊನೆ ಎಂಬಂತೆ ಮನೆತನದ ಎಂಟನೇ ತಲೆಗೆ ನಿಂಗರಾಜನನ್ನು ದತ್ತು ತೆಗೆದುಕೊಂಡರು. ಹುಟ್ಟುತ್ತ ಚೂರು ಕೃಶವಾಗಿದ್ದ ನಿಂಗರಾಜ ಅಚ್ಚಮ್ಮನ ತವರಿನ ಬಳ್ಳಿ. ಆ ಕಕ್ಕುಲಾತಿಗೆ ಬಿದ್ದು ಅವನನ್ನೇ ದತ್ತಿಗೆ ನಿಕ್ಕಿ ಮಾಡಿದ್ದಳು. ಕೋಟೆಯ ಹೊಸ್ತಿಲು ತುಳಿದು ಹಾಲು-ತುಪ್ಪದ ಅಭ್ಯಂಜನಕ್ಕೆ ಹುಡುಗ ತಿರುಗಿಯಾನು ಅಂತ ಕನಸು ಕಂಡಿದ್ದಳು.

ಧಣಿ ಮರು ಮಾತಾಡಿರಲಿಲ್ಲ. ಅವಳ ಪ್ರತೀ ನಿರ್ದಾರಕೂ ಮುಗುಳು ನಗೆಯಷ್ಟೇ! ಅದೇ ಒಪ್ಪಿಗೆ ಅದೇ ಒಲವು ಬದುಕ್ಕಿದ್ದಷ್ಟು ದಿವಸ. ಆದರೆ ವಿಧಿ ಲಿಖಿತ ಬೇರೆ ಇತ್ತು. ಇಪ್ಪತ್ತರ ಹರೆಯಕ್ಕೆ ನಿಂಗರಾಜನಿಗೆ ಕ್ಷಯ ಅಂಟಿಕೊಂಡಿತು. ಇನ್ನೇನು ಅವನು ಕರಗಿ ಕರ್ಪೂರವಾಗುವ ಮೊದಲೇ ಮನೆಗೊಂದು ದಿಕ್ಕಾಗಲಿ ಅಂತ ಹಂಬಲಿಸುತ್ತಿದ್ದ ದಿನಗಳಲ್ಲಿ ಅಷ್ಟು ದಿನದ ಗೆಣೆಕಾರ ದೊಡ್ಡ ಧಣಿಯೂ ಸಿವನ ಪಾದ ಸೇರಿದ.

ಆಗ ಅಕ್ಷರಶಃ ರಾಣಿ ಅಚ್ಚಮ್ಮ ಒಂಟಿಯಾದಳು. ಕಣ್ಣ ಕೊನೆಯಲ್ಲೊಂದು ದಾರ್ಷ್ಟ್ಯ, ಮಾತಿನ ಕೊನೆಯಲ್ಲೊಂದು ಅಹಂನ್ನು ರೂಢಿಸಿಕೊಂಡು ಕೋಟೆಗೂ ವಂಶಕೂ ದಿಕ್ಕಾದಳು.

ಆದರೆ ನೀಲವ್ವನದು ಆಸೆಯ ವಯಸ್ಸು! ನಾನು ಹಾಗೆ ಒಮ್ಮೆಲೇ ಹರಿಹಾಯಬಾರದಿತ್ತು ಅಂತ ಮತ್ತೊಂದು ಸಲ ಮನಸಲ್ಲೇ ಅಂದುಕೊಂಡಳು.ಬಹಳ ಹೊತ್ತು ಅಲ್ಲಿ ಕುಂದ್ರಲಾಗದೆ ನೀಲವ್ವನ ಕೋಣೆಯ ದಿಕ್ಕಿಗೆ ನಡೆದಳು. ಮುಂದು ಮಾಡಿದ ಬಾಗಿಲ ಸರಿಸಿ “ನೀಲವ್ವಾ” ಎಂದಳಷ್ಟೇ! ಮೈಮೇಲಿನ ಗ್ಯಾನವಿಲ್ಲದೆ ಹಾಸಿಗೆ ಮೇಲೆ ಬಿದ್ದು ಕಣ್ಣೀರಾಗಿದ್ದ ನೀಲವ್ವ ಮಲಗಿದಲ್ಲಿಂದ ಚಂಗನೇ ನೆಗೆದು ಅಸ್ತವ್ಯಸ್ತವಾಗಿದ್ದ ಸೀರೆಯ ಮಡಿ ಸರಿ ಮಾಡಿಕೊಳ್ಳುತ್ತ ಸೆರಗು ತಲೆ ಮೇಲೆ ಹೊತ್ತು ಅಂಜುತ್ತ, ಅಳುಕುತ್ತ ಮುಂದೆ ಬಂದು ನಿಂತಳು.

ಕಕ್ಕುಲಾತಿಯಿಂದ ಸೊಸೆಯ ಹಣ್ಣೆತ್ತಿ ಸವರಿ “ಆಸೇ ಅಂಬೋದು ಹುಚ್ಚು ಕುದುರಿ, ಅದು ಗುರಿ ಕಾಣ್ಸುತ್ತೊ?ಇಲ್ಲ ಕೆಳಗ ಕೆಡವಿ ಮಣ್ಣು ಮುಕ್ಸುತ್ತೋ ಗೊತ್ತಾಗೊದಿಲ್ಲ ತಂಗೀ! ನಿನಗ ಆ ಹೂವಿನ ಮ್ಯಾಲ ಆಸೀ ಇತ್ತಂದ್ರ ಮುಡಿ! ಆದ್ರ ಮುಡುದ ಮರುದಿನ ಆ ಗಿಡಾ ಉಳ್ಯಾಣಿಲ್ಲ! ನೆನಪಿಟ್ಕೊ! ಆಸೆಯಿಂದ ತಬ್ಕ್ಯಂಡ ಕೈಯೀನೇ ಹಗ್ಗ ಆಗಬೇಕಾತದ! ಕ್ವಾಟಿ ಮೂಲ್ಯಾಗಿನ ಖಾಲೀ ಜಾಗದಾಗ ಸಮಾದಿ ಏಳ್ತದ! ನಿನ್ನ ಹೊಟ್ಯಾಗೊಂದು ಹುಳಾ ಹುಟ್ತಾದಂದ್ರ ಅದೂ ಆಗ್ಲಿ ಬಿಡು” ಅಂತೇಳಿ ಎರಡೂ ಕೈಯಿಂದ ಪ್ರೀತಿಯ ನೆಟಿಗೆ ಮುರಿದು ಮರೆಯಾದಳು.

ಅತ್ತೆ ಕೊಟ್ಟಿದ್ದು ಅನುಮತಿಯಾ? ಎಚ್ಚರಿಕೆಯಾ?ಎಂಬುದು ತಿಳಿಯದೆ ನೀಲವ್ವ ತುಂಬಾ ಹೊತ್ತು ಹಾಸಿಗೆಯಲ್ಲಿ ಬಿದ್ದು ಹೊರಳಾಡಿದಳು.


ಇದೆಲ್ಲ ಆಗಿ ಸುಮಾರು ಹಗಲು-ರಾತ್ರಿಗಳು ಉರುಳಿ ಹನುಮ-ನೀಲವ್ವರ ಮದ್ಯೆ ಪ್ರೇಮವೆಂಬುದು ಮಿಡಿನಾಗರವಾಗಿ ಹರಿದಾಡತೊಡಗಿತ್ತು. ಎದಿರು ಕಂಡರೆ ಸಾಕು ಆಸೆ ಎಂಬುದು ಕಣ್ಗಳಲಿ ಹುಟ್ಟಿ ನಿಟ್ಟುಸಿರಲಿ ಸಾಯುತ್ತಿತ್ತು. ನೂರು ಕಣ್ಗಾವಲಿನ ಮದ್ಯೆಯೂ ಒಂದು ಅಮೃತ ಘಳಿಗೆಗಾಗಿ ಕಾಯುತ್ತಿದ್ದ ಜೀವಗಳು ಅದೊಂದು ದಿನ ಮಿತಿಯ ಪಾಜಿ ದಾಟಿ ಬಿಟ್ಟವು. ಅದೊಂದು ಇಳಿಸಂಜೆಯ ಹೊತ್ತು.

ಕೋಟೆಯ ಮುಂದಿನ ಹನಮಂದೇವರ ಗುಡಿಯ ಪೂಜೆಯ ಗಂಟೆಯ ಶಬ್ದ ನಿಚ್ಛಳವಾಗಿ ಕಿವಿಗೆ ಬೀಳುತ್ತಿದ್ದಾಗ್ಯೂ ನೀಲವ್ವ ಹನುಮ ಹೊಸ್ತಿಲ ದಾಟಿ ಒಳಗೆ ಕಾಲಿಡುವುದನ್ನೆ ಕಾಯುತ್ತಿದ್ದಳು. ಕಟ್ಟಿಗೆಯ ಸಣ್ಣ ಹೊರೆಯನ್ನ ಕೈಲಿಡಿದು ಅಡಿಗೆಯ ಅಂಗಳಕ್ಕೆ ಬಿಸಾಕಿ ಹೋಗುವ ಇಂಗಿತದಲ್ಲಿದ್ದವನನ್ನು ಆಗಷ್ಟೆ ಹಬ್ಬುತ್ತಿದ್ದ ನೀಳ ಕತ್ತಲೊಳಗೆ ಅನಾಮತ್ತು ಎಳೆದುಕೊಂಡು ಬಿಟ್ಟಳು!

ಬೇಟೆಗೆ ಬಲಿಯಾದ ಹರಿಣಿಯಂತೆ ಹನುಮ ಮೊದಲ ಕ್ಷಣಕ್ಕೆ ತಬ್ಬಿಬ್ಬಾದರೂ ಮರುಕ್ಷಣ ಕತ್ತಲೆಯನ್ನ ಅರ್ಥ ಮಾಡಿಕೊಂಡ! ಮರುಕ್ಷಣದಲ್ಲೇ ಅವರು ಕೋಟೆಯೊಳಗಿದ್ದರು. ಕ್ವಾಟಿಗೆ ನೂರು ಕಂಬ, ಪ್ರತೀ ಕಂಬದ ಮ್ಯಾಲ ಬಗೆ, ಬಗೆಯ ಚಿತ್ತಾರ ಆ ಕಂಬಗಳ ದಾಟಿ ಹಜಾರ ಇಳಿದು ಒಳಕೋಣೆಗೆ ಹೊರಟರೆ ಅಲ್ಲಿ ಬೆಳಗುತ್ತಿದ್ದ ಹತ್ತಾರು ದೀಪಗಳಲಿ ಬರೀ ತುಪ್ಪದ್ದೆ ಘಮಲು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಒಂದು ಗುಡ್ ಮಾರ್ನಿಂಗ್ ಮೆಸೇಜು

ಹೊಳೆ ದಂಡಿಗೆ ಕಾಣಿಸಿದ್ದ, ಕನಸಲಿ ಕಾಡಿದ್ದ ಆಕೆಯ ಇಪ್ಪತ್ತೈದರ ಹರೆಯ ಈಗ ಅವನ ಮುಂದೆ ಅಕ್ಷರಶಃ ಬೆತ್ತಲಾಗಿತ್ತು. ಇನ್ನೂ ಮಡಿಕೆಗಳಿಲ್ಲದ ತೆಳು ಸೊಂಟ ತಬ್ಬಲು ಆಹ್ವಾನಿಸುತ್ತಿತ್ತು. ಅವಳು ಪಿಸು ಮಾತು ನುಡಿವಂತೆ ಅವನ ಕಿವಿ ಹತ್ತಿರ ಬಂದಳು. ಉಸಿರು ಬಿಗಿ ಹಿಡಿದು ಏನೋ ಹೇಳಲು ಬಂದವಳು ಏನೂ ಹೇಳದೆ ಅವನ ಹೆಗಲಿಗೆ ಜೋತು ಬಿದ್ದು ತಬ್ಬಿದಳು. ಅಂತಹ ಕೊರೆಯುವ ಚಳಿಯಲ್ಲೂ ಮೈ ಬೆಚ್ಚಗಾಗಿ ಹನುಮ ಆಕೆಯ ಇಡೀ ದೇಹವನ್ನು ಹೊತ್ತು ಅಲ್ಲೇ ಮಲಗುವ ಕೋಣೆಯ ವಸ್ತಿಲ ಬಳಿಯೇ ನೆಲದ ಮೇಲೆ ಅಂಗಾತ ಬಿದ್ದ.

ಆಕೆ ನಿಪುಣ ಬೇಟೆಗಾರ್ತಿಯಂತೆ ಅವನ ದೇಹದ ಇಂಚಿಂಚನ್ನು ಹುಡುಕಿದಳು. ಅವನು, ಅವಳು ನುಡಿಸಿದಂತೆ ನುಡಿಯುತ್ತ ಕಣ್ಣೆವೇ ತೆರೆಯದೇ ಸ್ವರ್ಗದ ಹಾದಿಯಲ್ಲಿ ಸಾಗತೊಡಗಿದ. ಅವಳು ಕಚ್ಚಿದಳು, ಅವನು ಬೆಚ್ಚಿದ!
ನೀಲವ್ವನಲಿ ಬೆದೆಗೆ ಬಂದ ಬೆಕ್ಕಿನ ದಾರ್ಷ್ಯ್ಟವಿತ್ತು! ಇಬ್ಬರೂ ಕೇಳಿಯಲ್ಲಿ ತೊಡಗಿದ ಪುನುಗು ಬೆಕ್ಕುಗಳಂತೆ ಮುನುಗಿದರು. ಪರಸ್ಪರ ಕಾದರು, ಕೆರಳಿದರು, ಬೆರಳ ಉಗುರಿಂದ ಪರಚಿದರು.

ಮಳೆಗೆ ಕಾಯ್ವ ನೆಲದಂತೆ ಬಿರಿದು ಹೋಗಿದ್ದ ನೀಲವ್ವ ಹೂವ್ವಿನಂತೆ ಅರಳಿ ಭೂಮಿಯಂತೆ ತೋಯ್ದಳು. ಅವನು ಮತ್ತೆ, ಮತ್ತೆ ತಬ್ಬಿಕೊಂಡ, ಕಿರುಗಾಲುವೆಯೊಳಗೆ ಹರಿವ ಸ್ವಚ್ಛಂದ ಮೀನಂತೆ ಹರಿದಾಡಿದ. ಆಟ ಇನ್ನೇನು ಮುಗಿಯಬೇಕು ನೀಲವ್ವನ ಕೈಗಳು ಬಿರುಸಾಗಿ ಮರಕ್ಕಂಟುವ ಬಳ್ಳಿಯಂತೆ ಕುತ್ತಿಗೆಯ ಸುತ್ತ ಹಬ್ಬತೊಡಗಿದ್ದವು!

ಅರೆಕ್ಷಣ! ಅವಳ ಮನಸು ಬದಲಾಗುವ ಕಾಲದಂತೆ, ಋತುವಿನಂತೆ ತಾನೇ, ತಾನಾಗಿ ಪಲ್ಲಟಗೊಂಡಿತು. ಮನದ ಮೂಲೆಯಲ್ಲಿ ಪ್ರೇಮದ ತಂತಿಯೊಂದು ಅವನಿಗಾಗಿ ಮಿಡಿಯಿತು! ಅವಳ ಎದೆಯ ತುಂಬೆಲ್ಲ ಅವನ ಕುರಿತು ಪ್ರೀತಿ ತುಂಬಿ ಅವನನ್ನ ಮಗುವಂತೆ ಮುದ್ದಿಸುತ್ತ ಬಂಡೆಯಂತಹ ಅವನ ಎದೆಯ ಮೇಲೆ ಒರಗಿದಳು. ಬರಡು ನೆಲದ ಮೇಲೆ ಮಳೆ ಸುರಿಸಿದವನನ್ನ ತಬ್ಬುಗೆಯಲ್ಲೇ ಉಸಿರುಗಟ್ಟಿಸುವಂತ ಪ್ರಮಾದ ಮಾಡಿಬಿಡುತ್ತಿದ್ದೆನಲ್ಲ ಅಂತ ಮತ್ತೊಮ್ಮೆ ಬೆವರಿದಳು. ಅವನು ಗಾಳಿ ಹೋದ ಪೀಪಿಯಂತೆ ಕೈಕಾಲು ಉಸೂರ್ ಅನಿಸಿದಂತೆ ಭೂಮಿಯನ್ನ ಹಾಸಿಗೆ ಮಾಡಿ ಅಂಗಾತ ಮಲಗಿದ್ದ.

ಇಂತಹದ್ದೊಂದು ತಿರುವು ಪಡೆದ ಬದುಕನ್ನ ಈ ಹಾಳು ಅರಮನೆ ಬದುಕಲು ಬಿಟ್ಟೀತಾ? ತಲೆ ತುಂಬಾ ಆಲೋಚನೆಗಳು ಜೇನು ಹುಳುವಿನಂತೆ ದಾಳಿ ಮಾಡತೊಡಗಿದ್ದವು. ಸ್ವಲ್ಪ ಹೊತ್ತಿನ ಹಿಂದೆ ಇದ್ದ ಹುಂಬುತನ ಮಾಯವಾಗಿ ಆ ಜಾಗದಲ್ಲಿ ಭಯವೆಂಬುದು ಮಳೆ ಬರುವ ಮುನ್ನ ಆಗಸವಿಡೀ ಆವರಿಸುವ ಕಪ್ಪು ಮೋಡದಂತೆ ಮನಪೂರ ಆವರಿಸತೊಡಗಿತು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಕಿಂಡಿ

ಹಾಸಿಗೆ ಹಿಡಿದ ಅಪ್ಪ, ಸದಾ ಮನೀಗಾಗಿ ದುಡುದು ಹೈರಾಣಾದ ಅವ್ವ,ಇಂದೋ ನಾಳೆಯೇ ಹಡೆಯಲು ತವರಿಗೆ ಬರುವ ತಂಗಿ ಎಲ್ಲರೂ ಕಣ್ಣ ಮುಂದೆ ಬಂದರು. ಯಾಕೋ ಕೈಕಾಲು ನಡುಗಿದವು! ಎಡಗಣ್ಣು ಬೇಡವೆಂದರೂ ಅದುರಿ ಎದೆ ಬಡಿತ ಹೆಚ್ಚಿಸಿತು.ಅಲ್ಲಿರುವುದು ಜೀವಕ್ಕೆ ಅಪಾಯ ಎಂಬುದನ್ನ ಇಂದ್ರಿಯ ಒತ್ತಿ ಒತ್ತಿ ಹೇಳತೊಡಗಿತು. ಎದೆಯ ಮೇಲೆ ಜೀವ ಇಲ್ಲದ ಗೊಂಬೆಯಂತೆ ನಿಸೂರಾಗಿ ಮಲಗಿದ್ದ ನೀಲವ್ವನನ್ನ ಬಗುಲಿಗೆ ನೂಕಿ ದಡಗ್ಗನೆ ಎದ್ದು ನಿಂತ.

ನೀಲವ್ವ ಎದ್ದು ನಿಂತ ಅವನ ದೋತರದ ಚುಂಗನ್ನ ಹಿಡಿದಳು. ಅವಳ ಕಣ್ಣಲ್ಲಿ ಎಂದೂ ಮುಗಿಯದ ದುಖಃದ ಮಡುವಿತ್ತು. ಮುಂದೇನೋ ಘಟಿಸಲಿದೆ ಎಂಬ ಅಸ್ಪಷ್ಟ ಸಂದೇಶ ಆಕೆಯ ಕಣ್ಣಲ್ಲಿ ಕೆನೆ ಕಟ್ಟಿತ್ತು. ಇನ್ನೂ ಸ್ವಲ್ಪ ಹೊತ್ತಾದರು ಜೊತೆಗಿರು ಎಂಬಂತೆ ಕಣ್ಣಲ್ಲೇ ಬೇಡಿದಳು.

ಅವನು ದಾವಂತದಲ್ಲಿದ್ದ. ಬಿರಬಿರನೆ ನಡೆದುಬಿಟ್ಟ. ತನ್ನನ್ನ ಯಾರೋ ಹಿಂಬಾಲಿಸುತ್ತಿದ್ದಾರೆ, ಅರಮನೆಯ ಪ್ರತೀ ಕಂಬದ ಹಿಂದೆ ಯಾರೋ ಅಡಗಿ ಕೂತು ಮಸಲತ್ತು ನಡೆಸಿದ್ದಾರೆ ಎನಿಸಿ ಎದೆ ಬಿಗಿ ಹಿಡಿದು ಕಾಲೂರಿ ನೆಟ್ಟಗೆ ನಿಂತು ದೆವ್ವನಂತಹ ಬಾಗಿಲು ತಳ್ಳಿ ಇಷ್ಟೆತ್ತರದ ತಲಬಾಗಿಲನ್ನು ಜಿಗಿಯಲೆತ್ನಿಸಿದ.

ಆವಾಗಲೇ ಆ ಕ್ಷಣದಲ್ಲೇ ನೀಲವ್ವನಿಗೆ ಕೋಟೆಯ ತಲಬಾಗಿಲ ಬಳಿ ಕೆಟ್ಟ ದನಿಯ ಆರ್ತನಾದ ಕೇಳಿದ್ದು. ಇಡೀ ಸನ್ನಿವೇಶ ಒಮ್ಮೆಲೆ ಅರ್ಥ ಆದವಳಂತೆ ನೀಲವ್ವ ಚೀರುತ್ತ ಬಾಗಿಲಿಗೆ ಬಂದಳು. ಕಣ್ಣು ಕತ್ತಲಾಗಿ ಹೆಜ್ಜೆ ಎತ್ತಿ ಇಡಲಾರದಂತಾಗಿ ತನ್ನ ಕೋಣೆಯ ಬಾಗಿಲಲ್ಲಿ ದೊಪ್ಪನೆ ಬಿದ್ದಳು. ಸ್ಮೃತಿ ಇಲ್ಲದೆ ಬಿದ್ದರೂ ಅವಳ ಕಣ್ಣಿಂದ ಕಣ್ಣೀರು ಇಳಿಯುತ್ತಲೇ ಇತ್ತು..

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಚೆಕ್‍ಔಟ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Youngest Artist: ಅಂಬೆಗಾಲಿಡುವ ಬಾಲಕ ಈಗ ವಿಶ್ವದ ಅತಿ ಕಿರಿಯ ಚಿತ್ರ ಕಲಾವಿದ!

ಸುಮಾರು ಆರು ತಿಂಗಳ ಮಗುವಿದ್ದಾಗಲೇ ಚಿತ್ರ ರಚಿಸಲು ಪ್ರಾರಂಭಿಸಿದ ವಿಶ್ವದ ಕಿರಿಯ ಚಿತ್ರಕಲಾವಿದ (Youngest Artist) ಘಾನಾದ ಆಂಕ್ರಾ ಹಲವಾರು ವರ್ಣಚಿತ್ರಗಳನ್ನು ರಚಿಸಿರುವುದು ಮಾತ್ರವಲ್ಲ ಅವುಗಳಲ್ಲಿ ಒಂಬತ್ತು ಚಿತ್ರಗಳನ್ನು ಪ್ರದರ್ಶನದಲ್ಲಿ ಮಾರಾಟ ಮಾಡಿದ್ದಾನೆ! ಈ ಅತಿ ಕಿರಿಯ ಕಲಾವಿದನ ಕುರಿತು ವ್ಯಾಪಕ ಕುತೂಹಲ ಉಂಟಾಗಿದೆ.

VISTARANEWS.COM


on

By

Youngest Artist
Koo

ಅಂಬೆಗಾಲಿಡುವ (Toddler) ಮಗು ವರ್ಣಚಿತ್ರಗಳನ್ನು (Youngest Artist) ರಚಿಸಿ ಗಿನ್ನೆಸ್ ವಿಶ್ವ ದಾಖಲೆ (Guinness World Records) ಬರೆದಿದೆ. ವಿಶ್ವದ ಅತ್ಯಂತ ಕಿರಿಯ ಚಿತ್ರ ಕಲಾವಿದ ಎನ್ನುವ ಖ್ಯಾತಿಗೆ ಈ ಮಗು ಪಾತ್ರವಾಗಿದೆ. ಘಾನಾದ (Ghana) 1 ವರ್ಷ 152 ದಿನಗಳ ಏಸ್-ಲಿಯಾಮ್ ನಾನಾ ಸ್ಯಾಮ್ ಆಂಕ್ರಾ (Ace-Liam Nana Sam Ankrah) ತಾನೇ ರಚಿಸಿದ 9 ವರ್ಣಚಿತ್ರಗಳನ್ನು ಮಾರಾಟ ಮಾಡಿ ಈ ದಾಖಲೆ ನಿರ್ಮಿಸಿದೆ.

ಏಸ್- ಲಿಯಾಮ್ ನಾನಾ ಸ್ಯಾಮ್ ಆಂಕ್ರಾ ವಿಶ್ವದ ಅತ್ಯಂತ ಕಿರಿಯ ಪುರುಷ ಚಿತ್ರ ಕಲಾವಿದನಾಗಿ ಪ್ರತಿಷ್ಠಿತ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (GWR) ನಲ್ಲಿ ತನ್ನ ಹೆಸರನ್ನು ಬರೆದಿದ್ದಾನೆ.

ಸುಮಾರು ಆರು ತಿಂಗಳ ಮಗುವಿದ್ದಾಗಲೇ ಚಿತ್ರ ರಚಿಸಲು ಪ್ರಾರಂಭಿಸಿದ ಆಂಕ್ರಾ ಹಲವಾರು ವರ್ಣಚಿತ್ರಗಳನ್ನು ರಚಿಸಿರುವುದು ಮಾತ್ರವಲ್ಲ ಅವುಗಳಲ್ಲಿ ಒಂಬತ್ತು ವರ್ಣಚಿತ್ರಗಳನ್ನು ಪ್ರದರ್ಶನದಲ್ಲಿ ಮಾರಾಟ ಮಾಡಿದ. ಆಂಕ್ರಾನ ಈ ಸಾಧನೆ ಹಲವಾರು ಮಂದಿಯ ಗಮನ ಸೆಳೆದಿದ್ದ್ದು, ಜಾಗತಿಕ ಮೆಚ್ಚುಗೆಯನ್ನು ಗಳಿಸಿತ್ತು. ಇದೀಗ ವಿಶ್ವ ದಾಖಲೆ ಪಟ್ಟಿಯಲ್ಲಿ ಆಂಕ್ರಾ ಹೆಸರು ಸೇರ್ಪಡೆಗೆ ಸಾಕಷ್ಟು ಮಂದಿ ಅಚ್ಚರಿಯನ್ನೂ ವ್ಯಕ್ತಪಡಿಸಿದ್ದಾರೆ.


ಯಾವಾಗ ಚಿತ್ರಕಲೆ ಪ್ರಾರಂಭಿಸಿದ್ದು?

ಈಗಷ್ಟೇ ಅಂಬೆಗಾಲಿಡುತ್ತಿರುವ ಆಂಕ್ರಾ ಕೇವಲ ಆರು ತಿಂಗಳಲ್ಲೇ ಚಿತ್ರಕಲೆಯನ್ನು ಪ್ರಾರಂಭಿಸಿದನು ಎನ್ನುತ್ತಾರೆ ಆತನ ತಾಯಿ. ಚಿತ್ರಕಲೆಯ ಮೇಲಿನ ಆತನ ಉತ್ಸಾಹವು ಚಿಕ್ಕ ವಯಸ್ಸಿನಿಂದಲೂ ಸ್ಪಷ್ಟವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಆತ ಕಲಿಯಲು ಪ್ರಾರಂಭ ಮಾಡಿದಾಗಲೇ ಕ್ಯಾನ್ವಾಸ್‌ನ ತುಂಡನ್ನು ನೆಲದ ಮೇಲೆ ಹರಡಿ ಅದರ ಮೇಲೆ ಸ್ವಲ್ಪ ಬಣ್ಣವನ್ನು ಬೀಳಿಸಿದೆ. ಕ್ಯಾನ್ವಾಸ್‌ನಾದ್ಯಂತ ಆತ ಬಣ್ಣವನ್ನು ಹರಡಿ ಕೊನೆಗೊಳಿಸಿದ. ಇದು ಆತನ ಮೊದಲ ವರ್ಣಚಿತ್ರ ‘ದಿ ಕ್ರಾಲ್’ ಎಂದು ಅವರು ವಿವರಿಸಿದರು.


ಅಂಬೆಗಾಲಿಡುವ ಘಾನಾದ ಆಂಕ್ರಾ ಈಗ ಸೆಲೆಬ್ರಿಟಿಯಾಗಿದ್ದಾನೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಿಂದ ಮಾತ್ರವಲ್ಲದೆ ಘಾನಾ ಗಣರಾಜ್ಯದ ಪ್ರಥಮ ಮಹಿಳೆಯ ಗಮನವನ್ನೂ ಆತ ಸೆಳೆದಿದ್ದಾನೆ.

ಮೊದಲ ಪ್ರದರ್ಶನ

ಏಸ್- ಲಿಯಾಮ್ ಆಂಕ್ರಾ ಇತ್ತೀಚೆಗೆ ತನ್ನ ಚಿತ್ರಗಳನ್ನು ಮೊದಲ ಬಾರಿಗೆ ಸಾರ್ವಜನಿಕ ಪ್ರದರ್ಶನ ನಡೆಸಿದ. ಇದರಲ್ಲಿ ಆತನ ಹತ್ತು ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು. ಅವುಗಳಲ್ಲಿ ಒಂಬತ್ತು ಮಾರಾಟವಾಗಿವೆ. ಏಸ್- ಲಿಯಾಮ್‌ನ ಕಲೆಯು ನಿರ್ದಿಷ್ಟ ಸಂದೇಶಗಳನ್ನು ರವಾನಿಸುವುದಕ್ಕಿಂತ ಹೆಚ್ಚಾಗಿ ಅಭಿವ್ಯಕ್ತಿ ಮತ್ತು ಅನ್ವೇಷಣೆಯ ಬಗ್ಗೆ ಹೆಚ್ಚಾಗಿದೆ ಎಂದು ಆತನ ತಾಯಿ ಹೇಳಿದ್ದಾರೆ.

ಅವನ ಅಮೂರ್ತ ವರ್ಣಚಿತ್ರಗಳು ಸುತ್ತಲಿನ ಪ್ರಪಂಚದಿಂದ ಪ್ರೇರಿತವಾಗಿವೆ. ಬಣ್ಣ, ಆಕಾರ, ಟೆಕಶ್ಚರ್ ಮತ್ತು ಅವನ ಮನಸ್ಥಿತಿಯನ್ನು ಇದು ಅವಲಂಬಿಸಿದೆ. ಪ್ರತಿ ಚಿತ್ರಕಲೆಯು ಹೊಸ ವಿಷಯಗಳನ್ನು ಕಂಡುಹಿಡಿಯುವಲ್ಲಿ ಆತನ ಕುತೂಹಲ ಮತ್ತು ಸಂತೋಷದ ಅಭಿವ್ಯಕ್ತಿಯಾಗಿದೆ ಎಂದಿದ್ದಾರೆ ಅವರು.


ಭವಿಷ್ಯದ ಯೋಜನೆಗಳು

ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪ್ರಕಾರ, ವಿಶ್ವದ ಅತ್ಯಂತ ಕಿರಿಯ ಕಲಾವಿದ ಲಿಯಾಮ್ ಅವರ ದಾಖಲೆಯನ್ನು ಅನುಮೋದಿಸಿದ ಬಳಿಕ ಆತನ ಕುಟುಂಬವು ಆತನ ಕಲಾತ್ಮಕ ಪ್ರತಿಭೆಗೆ ಗುಣಮಟ್ಟದ ಶಿಕ್ಷಣದ ಮೂಲಕ ಪೋಷಿಸಲು ಅವಕಾಶಗಳನ್ನು ಹುಡುಕುತ್ತಿದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿ ವೇತನದ ಅವಕಾಶಗಳು ಅವರಿಗೆ ದೊರೆಯುತ್ತದೆ ಮತ್ತು ಆತನ ಕಲಾಕೃತಿಗಳನ್ನು ಮಾರಾಟ ಮಾಡಲು ಬಯಸುತ್ತಿದೆ ಎಂದು ಹೇಳಿದೆ.

ಇದನ್ನೂ ಓದಿ: Guinness World Records: ಬರೋಬ್ಬರಿ 168 ಅಕ್ಷರಗಳನ್ನೊಳಗೊಂಡ ಈ ನಗರದ ಹೆಸರಿನಲ್ಲಿದೆ ವಿಶ್ವ ದಾಖಲೆ

ಏಸ್-ಲಿಯಾಮ್ ತಾಯಿಯ ಸಲಹೆ ಏನು?

ತಮ್ಮ ಆಸಕ್ತಿಗಳನ್ನು ಕಂಡುಕೊಳ್ಳಲು ಮಕ್ಕಳನ್ನು ಪ್ರೋತ್ಸಾಹಿಸಲು ಪೋಷಕರಿಗೆ ಸಲಹೆ ನೀಡಿದ ಅವರು, ಪ್ರತಿ ಮಗು ಅನನ್ಯವಾಗಿದೆ ಮತ್ತು ಅವರ ಭಾವೋದ್ರೇಕಗಳನ್ನು ಪೋಷಿಸುವುದು ಅದ್ಭುತ ಆವಿಷ್ಕಾರಗಳು ಮತ್ತು ಸಾಧನೆಗಳಿಗೆ ಕಾರಣವಾಗಬಹುದು. ಅದನ್ನು ಪ್ರಯತ್ನಿಸುವ ಮೊದಲು ಅದನ್ನು ಮತ್ತೆ ಮತ್ತೆ ಓದಿ ಮತ್ತು ನೆನಪಿಡಿ. ಪ್ರಯಾಣ ಮತ್ತು ಅದು ತರುವ ಸಂತೋಷವು ತುಂಬಾ ತೃಪ್ತಿಕರವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Continue Reading

ಕರ್ನಾಟಕ

Bengaluru News: ಬೆಂಗಳೂರಿನಲ್ಲಿ ಮೇ 26ರಂದು ʼಭಾರತದ ಧೀರ ಚೇತನಗಳುʼ ಕೃತಿ ಲೋಕಾರ್ಪಣೆ

Bengaluru News: ಡಾ. ವಿಕ್ರಮ್‌ ಸಂಪತ್‌ ಅವರ ʼಭಾರತದ ಧೀರ ಚೇತನಗಳುʼ (ಭಾರತೀಯ ಇತಿಹಾಸದ ವೀರರರ ಬಗೆಗೆ ನುಡಿಚಿತ್ರಗಳು) ಎಂಬ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ಇದೇ ಮೇ 26 ರಂದು ಭಾನುವಾರ ಬೆಳಿಗ್ಗೆ 10.30 ಕ್ಕೆ ಬೆಂಗಳೂರಿನ ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ ನಲ್ಲಿ ನಡೆಯಲಿದೆ. ಸಾಹಿತಿ ಎಸ್‌.ಎಲ್‌.ಭೈರಪ್ಪ ಕೃತಿ ಬಿಡುಗಡೆ ಮಾಡಲಿದ್ದಾರೆ.

VISTARANEWS.COM


on

Bharathada dheera chethanagalu kruthi lokarpane in Bengaluru on May 26
Koo

ಬೆಂಗಳೂರು: ಡಾ. ವಿಕ್ರಮ್‌ ಸಂಪತ್‌ ಅವರ ʼಭಾರತದ ಧೀರ ಚೇತನಗಳುʼ (ಭಾರತೀಯ ಇತಿಹಾಸದ ವೀರರರ ಬಗೆಗೆ ನುಡಿಚಿತ್ರಗಳು) ಎಂಬ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ಇದೇ ಮೇ 26ರಂದು ಭಾನುವಾರ ಬೆಳಗ್ಗೆ 10.30ಕ್ಕೆ ನಗರದ (Bengaluru News) ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ನಲ್ಲಿ ಜರುಗಲಿದೆ.

ಇದನ್ನೂ ಓದಿ: COMEDK UGET Result 2024: ಕಾಮೆಡ್‌ ಕೆ ಫಲಿತಾಂಶ ಪ್ರಕಟ; ಬೆಂಗಳೂರಿನ ಬಾಲಸತ್ಯ ಸರವಣನ್ ಫಸ್ಟ್‌ ರ‍್ಯಾಂಕ್‌

ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎಸ್‌.ಎಲ್‌. ಭೈರಪ್ಪ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇದೇ ವೇಳೆ ಎಸ್‌.ಎಲ್‌. ಭೈರಪ್ಪನವರ ಇಂಗ್ಲೀಷ್‌ ಅನುವಾದಿತ 3 ಕಾದಂಬರಿಗಳನ್ನು ಡಾ. ವಿಕ್ರಮ್‌ ಸಂಪತ್‌ ಅವರು ಲೋಕಾರ್ಪಣೆ ಮಾಡಲಿದ್ದಾರೆ.

ಇದನ್ನೂ ಓದಿ: Rotary June Run: ರೋಟರಿಯಿಂದ ಬೆಂಗಳೂರಿನಲ್ಲಿ ಜೂನ್​ 9ರಂದು ಮ್ಯಾರಥಾನ್​; ವಿಸ್ತಾರ ನ್ಯೂಸ್‌ ಸಹಯೋಗ

ಕಾರ್ಯಕ್ರಮದಲ್ಲಿ ಡಾ. ವಿಕ್ರಮ್‌ ಸಂಪತ್‌ ಅವರೊಂದಿಗೆ ಅರ್ಧಗಂಟೆಯ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅನುವಾದಕರಾದ ಎಲ್‌.ವಿ. ಶಾಂತಕುಮಾರಿ, ಪ್ರೊ. ಜಿ.ಎಲ್‌. ಶೇಖರ್‌ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಎಂ.ಎ. ಸುಬ್ರಮಣ್ಯ ಮತ್ತು ಎಂ.ಎಸ್‌. ಋತ್ವಿಕ್‌ ತಿಳಿಸಿದ್ದಾರೆ.

Continue Reading

ಕರ್ನಾಟಕ

ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಇವು ಗುರು ಸಕಲಮಾ ಬದುಕಿನ ಅಧ್ಯಾಯಗಳು!

ಉತ್ತರದ ಹಿಮಾಲಯ ಭಾರತೀ ಗುರು ಪರಂಪರೆ ಹಾಗೂ ದಕ್ಷಿಣದ ವಿದ್ಯಾರಣ್ಯ ಗುರು ಪರಂಪರೆಗಳೆರಡರಲ್ಲೂ ಪಾರಮ್ಯ ಸಾಧಿಸಿ ಇದೀಗ ಸಕಲಮಾ ಆಗಿ, ಸಾವಿರಾರು ಮಂದಿಗೆ ಶ್ರೀವಿದ್ಯಾ ಸಾಧನೆಯ ಅರಿವು ಹೆಚ್ಚಿಸುತ್ತಿರುವ ಗುರು ಸಕಲಮಾ ಅವರ ಆತ್ಮಕಥನ ಸದ್ಯದಲ್ಲೇ ಹೊರಬರಲಿದೆ.

VISTARANEWS.COM


on

ಗುರು ಸಕಲಮಾ guru sakalamaa
Koo

ಹಿಮಾಲಯದ ಮಹಾನ್‌ ಯೋಗಿ ಸ್ವಾಮಿ ರಾಮ (Himalayan Yogi Swami Rama) ಹಾಗೂ ಬಹುಶ್ರುತ ವಿದ್ವಾಂಸ, ಶ್ರೀವಿದ್ಯಾ ಗುರು, ಪದ್ಮಶ್ರೀ ಪುರಸ್ಕೃತ ಡಾ. ರಾ. ಸತ್ಯನಾರಾಯಣ (R Satyanarayana) ಅವರುಗಳ ನೇರ ಶಿಷ್ಯೆ, ಶ್ರೀವಿದ್ಯಾ (Shrividya) ಸಾಧಕಿ ಸಕಲಮಾ ಅವರ ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಆತ್ಮಕಥನ ಪುಸ್ತಕ ರೂಪದಲ್ಲಿ ಕನ್ನಡ ಹಾಗೂ ಇಂಗ್ಲೀಷ್‌ ಭಾಷೆಯಲ್ಲಿ (Messages from Himalayan Sages- Timely and Timeless) ಸದ್ಯದಲ್ಲೇ ಹೊರಬರಲಿದೆ. ಈ ಹಿನ್ನೆಲೆಯಲ್ಲಿ, ಕೃತಿಯ ಮುಖಪುಟ ಅನಾವರಣ (cover page launch) ಇದೇ ಮೇ 26ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ನಡೆಯಲಿದೆ. ಸಂಸದ ತೇಜಸ್ವಿ ಸೂರ್ಯ (Tejaswi Surya), ಸಾಹಿತಿ, ಪತ್ರಕರ್ತ ಜೋಗಿ (Jogi), ಕಾಂತಾರ (Kantara) ಸಿನಿಮಾ ಖ್ಯಾತಿಯ ನಟಿ ಸಪ್ತಮಿ ಗೌಡ (Saptami Gowda) ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಗುರು ಸಕಲಮಾ ತಮ್ಮ ಪೂರ್ವಾಶ್ರಮದಲ್ಲಿ ಜ್ಯೋತಿ ಪಟ್ಟಾಭಿರಾಂ ಹೆಸರಿನಿಂದಲೇ ನೃತ್ಯವಲಯದಲ್ಲಿ, ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಹೆಸರು ಮಾಡಿದವರು. ಮೂವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಪ್ರೊಫೆಸರ್‌ ಆಗಿ ಸಾವಿರಾರು ಮಕ್ಕಳಿಗೆ ಇಂಗ್ಲೀಷ್‌ ಬೋಧನೆ ಮಾಡಿದವರು. ಇದರ ಜೊತೆಜೊತೆಗೇ, ತಾನು ಬಾಲ್ಯದಿಂದ ಕಲಿತ ಭರತನಾಟ್ಯವನ್ನೂ ಪೋಷಿಸಿ, ತನ್ನದೇ ಆದ ನೃತ್ಯ ಸಂಸ್ಥೆಯನ್ನು ಕಟ್ಟಿ ನೀರೆರೆದು, ಹಲವಾರು ನೃತ್ಯಪ್ರತಿಭೆಗಳನ್ನು ಬೆಳೆಸಿದವರು. ನೃತ್ಯಕ್ಷೇತ್ರದ ಇವರ ಸಾಧನೆಗೆ ಕರ್ನಾಟಕ ಸರ್ಕಾರ ಕೊಡುವ ಉನ್ನತ ನಾಗರಿಕ ಪ್ರಶಸ್ತಿಯಾದ ರಾಜ್ಯೋತ್ಸವ ಪ್ರಶಸ್ತಿ ಇವರನ್ನು ಹುಡುಕಿಕೊಂಡು ಬಂದಿರುವುದು ಇವರ ಸಾಧನೆಯ ಹಾದಿಯ ಮೈಲುಗಲ್ಲುಗಳಲ್ಲಿ ಒಂದು. ಇವಿಷ್ಟೇ ಅಲ್ಲದೆ, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ, ಯೋಗ- ನಾಟ್ಯ ಸರಸ್ವತಿ, ಆಸ್ಟ್ರೇಲಿಯಾ ಕನ್ನಡ ಸಂಘ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರ ಸನ್ಮಾನಗಳು ಇವರಿಗೆ ಸಂದಿವೆ. ನೂರಾರು ಪ್ರದರ್ಶನಗಳನ್ನೂ ನೀಡಿ ಅಪಾರ ನೃತ್ಯಾಭಿಮಾನಿಗಳನ್ನೂ ಹೊಂದಿದ್ದಾರೆ.

ಇವೆಲ್ಲ ಸಾಧನೆಯ ಜೊತೆಜೊತೆಗೇ, ಜ್ಯೋತಿ ಪಟ್ಟಾಭಿರಾಂ ಅವರು ಇನ್ನೊಂದು ಕ್ಷೇತ್ರದಲ್ಲೂ ಸಮನಾಗಿ ಹೆಜ್ಜೆಯೂರಿ ಬೆಳೆದಿದ್ದೇ ಒಂದು ವಿಸ್ಮಯದ ಗಾಥೆ. ಅದು ಅಧ್ಯಾತ್ಮ. 1992ರವರೆಗೆ ಜ್ಯೋತಿ ಪಟ್ಟಾಭಿರಾಂ ಅವರು ತಮ್ಮ ಬದುಕಿನ ಹಾದಿ ಈ ದಿಕ್ಕಿನಲ್ಲಿ ಹೊರಳೀತು ಎಂಬ ಕಲ್ಪನೆಯನ್ನೂ ಹೊಂದಿರಲಿಲ್ಲ. ಯೋಗಾಚಾರ್ಯ ಪಟ್ಟಾಭಿರಾಂ ಅವರ ಜೀವನ ಸಂಗಾತಿಯಾಗಿ, ತನ್ನ ಕಾಲೇಜು, ನೃತ್ಯ ತರಗತಿಗಳು, ನೃತ್ಯ ಪ್ರದರ್ಶನಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಅವರಿಗೆ ಹಿಮಾಲಯನ್‌ ಯೋಗಿ ಸ್ವಾಮಿ ರಾಮ ಅವರ ಭೇಟಿಯಾದದ್ದೇ ಒಂದು ಆಸಕ್ತಿದಾಯಕ ಕತೆ. ಅಲ್ಲಿಂದ ನಂತರ ಬದುಕು ಬೇರೆಯದೇ ದಿಕ್ಕಿನತ್ತ ಮುಖ ಮಾಡಿದರೂ, ಅಧ್ಯಾತ್ಮವನ್ನೂ, ನೃತ್ಯವನ್ನೂ, ತನ್ನ ಉದ್ಯೋಗವನ್ನೂ ಸಮದೂಗಿಸಿಕೊಂಡು ಕೆಲಸ ಮಾಡಿದರು. ತಮ್ಮ ಗುರು ಸ್ವಾಮಿ ರಾಮ ಅವರಿಂದ ಶ್ರೀವಿದ್ಯೆಯಲ್ಲಿ ಅತ್ಯಂತ ಶ್ರೇಷ್ಠವಾದ ಶಾಂಭವ ದೀಕ್ಷೆಯನ್ನು ಪಡೆದ ಇವರು, ಗುರುವಿನ ದೇಹತ್ಯಾಗದ ನಂತರವೂ ಅವರಿಂದ ಮಾರ್ಗದರ್ಶನಗಳನ್ನು ಪಡೆಯುತ್ತಾ ಬಂದವರು. ಅವರ ಈ ಅಧ್ಯಾತ್ಮದ ಹಾದಿಗೆ ಇನ್ನಷ್ಟು ಬಲ ಬಂದಿದ್ದು ಸ್ವಾಮಿ ರಾಮ ಅವರ ಮಾರ್ಗದರ್ಶನದ ಮೇರೆಗೆ ಮೈಸೂರಿನ ಖ್ಯಾತ ವಿದ್ವಾಂಸ, ಪದ್ಮಶ್ರೀ ಪುರಸ್ಕೃತ ರಾ ಸತ್ಯನಾರಾಯಣ ಅವರ ಬಳಿ ದಕ್ಷಿಣದ ವಿದ್ಯಾರಣ್ಯ ಪರಂಪರೆಯಲ್ಲಿ ಶ್ರೀವಿದ್ಯೆಯ ಹೆಚ್ಚಿನ ಕಲಿಕೆಗೆ ತೆರಳಿದ ಮೇಲೆ.

ಹೀಗಾಗಿ ಉತ್ತರದ ಹಿಮಾಲಯನ್‌ ಭಾರತೀ ಪರಂಪರೆ ಹಾಗೂ ದಕ್ಷಿಣದ ವಿದ್ಯಾರಣ್ಯ ಪರಂಪರೆಗಳೆರಡರಲ್ಲೂ ಪಾರಮ್ಯ ಸಾಧಿಸಿ ಇದೀಗ ಸಕಲಮಾ ಆಗಿ, ಈಗ ಸಾವಿರಾರು ಮಂದಿಗೆ ಶ್ರೀವಿದ್ಯಾ ಸಾಧನೆಯ ಅರಿವು ಹೆಚ್ಚಿಸುವಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದಾರೆ. ಅವರ ಈ ಬದುಕಿನ ಪುಟಗಳಲ್ಲಿ ನೂರಾರು ರೋಮಾಂಚನಗೊಳಿಸುವ ಅಧ್ಯಾತ್ಮದ ಅನುಭವಗಳಿವೆ. ಸುಮಾರು 30 ವರ್ಷಗಳ ಸುದೀರ್ಘ ಅಧ್ಯಾತ್ಮ ಸಾಧನೆಯ ವಿವಿಧ ಮಜಲುಗಳೆಲ್ಲವೂ, ಮೈನವಿರೇಳಿಸುವಂತ ಹಲವಾರು ಅನುಭವಗಳ ಜೊತೆಗೆ ಪುಸ್ತಕದ ಮೂಲಕ ಅಧ್ಯಾತ್ಮ ಆಸಕ್ತರನ್ನೂ ಸಾಧಕರನ್ನೂ, ಜನಸಾಮಾನ್ಯರನ್ನೂ ತಲುಪಲಿದ್ದು, ಋಷಿ ಪರಂಪರೆಯ ಬಗೆಗಿನ ಸಾಮಾನ್ಯರ ಅರಿವಿನ ವಿಸ್ತಾರಕ್ಕೆ ಹೊಸ ಭಾಷ್ಯ ಬರೆಯಲಿದ್ದಾರೆ.

ಕೃತಿ ಮುಖಪುಟ ಅನಾವರಣ, ಸ್ಥಳ: ಸುಚಿತ್ರಾ ಫಿಲಂ ಸೊಸೈಟಿ
ದಿನಾಂಕ: ಮೇ 26, ಭಾನುವಾರ
ಸಮಯ: ಬೆಳಗ್ಗೆ 10.30
ಸಾನಿಧ್ಯ: ಗುರು ಸಕಲಮಾ
ಅತಿಥಿಗಳು: ಸಾಹಿತಿ ಜೋಗಿ, ಸಂಸದ ತೇಜಸ್ವಿ ಸೂರ್ಯ, ನಟಿ ಸಪ್ತಮಿ ಗೌಡ

ಇದನ್ನೂ ಓದಿ: Daredevil Mustafa: ಪುಸ್ತಕ ರೂಪ ಪಡೆದ ʻಡೇರ್ ಡೆವಿಲ್‌ ಮುಸ್ತಾಫಾʼ ಸಿನಿಮಾ!

Continue Reading

ಬೆಂಗಳೂರು

Bengaluru News: ಬೆಂಗಳೂರಿನಲ್ಲಿ ಮೇ 19ರಂದು ವೀರಲೋಕ ಪ್ರಕಾಶನದ 7 ಕೃತಿಗಳ ಲೋಕಾರ್ಪಣೆ

Bengaluru News: ವೀರಲೋಕ ಪ್ರಕಾಶನದ 7 ಕೃತಿಗಳ ಲೋಕಾರ್ಪಣೆ ಸಮಾರಂಭವು ಇದೇ ಮೇ 19 ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತು ಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪನ್ಯಾಸಕ, ಕೃಷಿ ವಿಜ್ಞಾನಿ ಡಾ.ಕೆ.ಎನ್‌. ಗಣೇಶಯ್ಯ, ಕಥೆಗಾರ, ಕಾದಂಬರಿಕಾರ ಜೋಗಿ, ಉಪನ್ಯಾಸಕಿ, ಲೇಖಕಿ ಸಂಧ್ಯಾರಾಣಿ, ಉಪನ್ಯಾಸಕ, ಕಥೆಗಾರ ಶಿವಕುಮಾರ ಮಾವಲಿ ಅವರು ಪಾಲ್ಗೊಳ್ಳಲಿದ್ದಾರೆ.

VISTARANEWS.COM


on

7 books release programme on May 19 in Bengaluru
Koo

ಬೆಂಗಳೂರು: ವೀರಲೋಕ ಪ್ರಕಾಶನದ 7 ಕೃತಿಗಳ ಲೋಕಾರ್ಪಣೆ ಸಮಾರಂಭವು ಇದೇ ಮೇ 19ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ (Bengaluru News) ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತು ಮಂದಿರದಲ್ಲಿ ನಡೆಯಲಿದೆ.

ಇದನ್ನೂ ಓದಿ: SubAir facility: ಸಬ್‌ ಏರ್‌ ಸಿಸ್ಟಮ್‌ ಹೇಗೆ ಕಾರ್ಯನಿರ್ವಹಿಸುತ್ತದೆ?; ಮಳೆ ನಿಂತು ಎಷ್ಟು ಗಂಟೆಯಲ್ಲಿ ಪಂದ್ಯ ಆರಂಭ?

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪನ್ಯಾಸಕ, ಕೃಷಿ ವಿಜ್ಞಾನಿ ಡಾ. ಕೆ.ಎನ್‌. ಗಣೇಶಯ್ಯ, ಕಥೆಗಾರ, ಕಾದಂಬರಿಕಾರ ಜೋಗಿ, ಉಪನ್ಯಾಸಕಿ, ಲೇಖಕಿ ಸಂಧ್ಯಾರಾಣಿ, ಉಪನ್ಯಾಸಕ, ಕಥೆಗಾರ ಶಿವಕುಮಾರ ಮಾವಲಿ ಅವರು ಪಾಲ್ಗೊಳ್ಳಲಿದ್ದಾರೆ.

ವೀರಕಪುತ್ರ ಆಶಯನುಡಿಗಳನ್ನಾಡಲಿದ್ದಾರೆ. ಶೋಭಾ ರಾವ್‌ ಮತ್ತು ಅನಂತ ಕುಣಿಗಲ್‌ ಪುಸ್ತಕ ಪರಿಚಯ ಮಾಡಿಕೊಡಲಿದ್ದಾರೆ.

ಇದನ್ನೂ ಓದಿ: Karnataka Weather : ತುಮಕೂರಲ್ಲಿ ಸಿಡಿಲಿಗೆ ಜಾನುವಾರು ಬಲಿ; ಚಿಕ್ಕಮಗಳೂರಲ್ಲಿ ಮಳೆ ಅವಾಂತರಕ್ಕೆ ಜನ ತತ್ತರ

ಲೋಕಾರ್ಪಣೆಗೊಳ್ಳಲಿರುವ ಕೃತಿಗಳು ಹಾಗೂ ಕೃತಿಕಾರರ ವಿವರ

ಡಾ. ಲಕ್ಷ್ಮಣಕೌಂಟೆ ಅವರ ಮಹಾವಿನಾಶ (ಕಾದಂಬರಿ), ಕೌಂಡಿನ್ಯ ಅವರ ಬೆಳವಡಿ ಮಲ್ಲಮ್ಮ (ಕಾದಂಬರಿ), ರಾಘವೇಂದ್ರ ಪ್ರಭು ಎಂ. ಅವರ ಬಹುತ್ವ ಭಾರತ ಕಟ್ಟಿದವರು (ಬದುಕು ಬರಹಗಳು), ವಿ. ಗೋಪಕುಮಾರ್‌ ಅವರ ಕಗ್ಗಕ್ಕೊಂದು ನ್ಯಾನೋ ಕಥೆ (ನ್ಯಾನೋ ಕತೆಗಳು), ಗೀತಾ ದೊಡ್ಮನೆ ಅವರ ನೀಲಿ ಶಾಯಿಯ ಕಡಲು (ಕವಿತೆಗಳು), ಮೇದಿನಿ ಕೆಸವಿನಮನೆ ಅವರ ಮಿಸ್ಸಿನ ಡೈರಿ (ಅನುಭವ ಕಥನ), ಪಾರ್ವತಿ ಪಿಟಗಿ ಅವರ ಪುನರುತ್ಥಾನ (ಕಾದಂಬರಿ) ಲೋಕಾರ್ಪಣೆಗೊಳ್ಳಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Continue Reading
Advertisement
MLC Election
ರಾಜಕೀಯ23 mins ago

MLC Election: ಹೈಕಮಾಂಡ್ ಅಂಗಳದಲ್ಲಿ ಪರಿಷತ್ ಕೈ ಅಭ್ಯರ್ಥಿಗಳ ಆಯ್ಕೆ ಕಸರತ್ತು; ನಾಳೆ ದೆಹಲಿಗೆ ಸಿಎಂ, ಡಿಸಿಎಂ

Kiccha Sudeep visit chamundeshwari temple
ಸ್ಯಾಂಡಲ್ ವುಡ್42 mins ago

Kiccha Sudeep: ಚಾಮುಂಡಿ ಬೆಟ್ಟಕ್ಕೆ ಕಿಚ್ಚ ಸುದೀಪ್ ಭೇಟಿ; ಇವರನ್ನು ನೋಡಲು ಜನವೋ ಜನ!

Viral Video
ವೈರಲ್ ನ್ಯೂಸ್1 hour ago

Viral Video: ರೈಫಲ್‌ ಜೊತೆ ಬಾರ್‌ಗೆ ನುಗ್ಗಿದ ಕಿಡಿಗೇಡಿ..ಡಿಜೆ ಮೇಲೆ ಗುಂಡಿನ ದಾಳಿ-ಶಾಕಿಂಗ್‌ ವಿಡಿಯೋ ನೋಡಿ

Mitchell Starc
ಕ್ರೀಡೆ1 hour ago

Mitchell Starc : ಐಪಿಎಲ್ ಯಶಸ್ಸಿನ ಶ್ರೇಯಸ್ಸನ್ನು ಪತ್ನಿಗೆ ಅರ್ಪಿಸಿದ ಸ್ಟಾರ್ಕ್​; ಅವರ ಪತ್ನಿಯೂ ಕ್ರಿಕೆಟರ್​

Love Propose
ಬಾಗಲಕೋಟೆ2 hours ago

Love Propose : I Love You ಮೆಸೇಜ್‌ ಕಳಿಸಿದ ಮುಸ್ಲಿಂ ಯುವಕನಿಗೆ ವಿವಾಹಿತೆಯಿಂದ ಚಪ್ಪಲಿ ಏಟು!

Dhruva Sarja Trainer Prashanth Was Attacked First Reaction
ಸ್ಯಾಂಡಲ್ ವುಡ್2 hours ago

Dhruva Sarja: ಜಿಮ್ ಟ್ರೈನರ್ ಮೇಲೆ ಹಲ್ಲೆ; ಧ್ರುವ ಸರ್ಜಾ ನೀಡಿದ ಸ್ಪಷ್ಟನೆ ಏನು?

Asaduddin Owaisi Party Leader
ದೇಶ2 hours ago

Asaduddin Owaisi: ಓವೈಸಿ ಪಕ್ಷದ ನಾಯಕನ ಮೇಲೆ ಗುಂಡಿನ ದಾಳಿ

BS Yediyurappa
ಪ್ರಮುಖ ಸುದ್ದಿ2 hours ago

BS Yediyurappa: ಯಡಿಯೂರಪ್ಪ ವಿರುದ್ಧ ಪೋಕ್ಸೊ ಕೇಸ್ ದಾಖಲಿಸಿದ್ದ ಮಹಿಳೆ ಸಾವು

Fire accident
ದೇಶ2 hours ago

Fire Accident: 4 ವರ್ಷ ನೀವು ನಿದ್ದೆಯಲ್ಲಿದ್ರಾ? ನಿಮಗೆ ಕಣ್ಣು ಕಾಣೋದಿಲ್ವಾ?-ಗುಜರಾತ್‌ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

Sunil Narine
ಪ್ರಮುಖ ಸುದ್ದಿ2 hours ago

Sunil Narine : ಐಪಿಎಲ್​ 2024ರ ‘ಮೌಲ್ಯಯುತ ಆಟಗಾರ ಪ್ರಶಸ್ತಿ’ ಗೆದ್ದು ಹೊಸ ದಾಖಲೆ ಬರೆದ ಸುನಿಲ್ ನರೈನ್​​

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ21 hours ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು22 hours ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ4 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ5 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು6 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು6 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 week ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

ಟ್ರೆಂಡಿಂಗ್‌