ವಿಸ್ತಾರ ಸಂಪಾದಕೀಯ: ರಷ್ಯಾದಲ್ಲಿ ಬಂಡಾಯ, ಪುಟಿನ್ ವಿಸ್ತರಣಾಕಾಂಕ್ಷೆಯ ದುಷ್ಪರಿಣಾಮ - Vistara News

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ರಷ್ಯಾದಲ್ಲಿ ಬಂಡಾಯ, ಪುಟಿನ್ ವಿಸ್ತರಣಾಕಾಂಕ್ಷೆಯ ದುಷ್ಪರಿಣಾಮ

ಭಾರತಕ್ಕೆ ಮೇಲ್ನೋಟಕ್ಕೆ ಈ ಬೆಳವಣಿಗೆಗಳಿಂದ ತಕ್ಷಣದ ಹಾನಿಯಿಲ್ಲವಾದರೂ, ಇದರ ಪಶ್ಚಾತ್‌ ಪರಿಣಾಮಗಳ ಬಗ್ಗೆ ಎಚ್ಚರ ವಹಿಸಬೇಕಿದೆ. ಪ್ರಜಾಪ್ರಭುತ್ವದ ಮೌಲ್ಯಗಳೇ ಸದಾ ಶಾಂತಿಯ ಮೂಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ.

VISTARANEWS.COM


on

Turmoil In Russia: Vladimir Putin with Army
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಷ್ಟ್ರದ ನಾಯಕತ್ವ ವಹಿಸಿದವರಲ್ಲಿ ವಿಸ್ತರಣಾಕಾಂಕ್ಷೆ, ಸರ್ವಾಧಿಕಾರ ಧೋರಣೆ ಸೇರಿಕೊಂಡಾಗ ಏನಾಗುತ್ತದೆ ಎಂಬುದಕ್ಕೆ ಸದ್ಯದ ರಷ್ಯದ ಸ್ಥಿತಿಯೇ ಉದಾಹರಣೆ. ಸದ್ಯ ಅಲ್ಲಿನ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರೇ ಹುಟ್ಟಿಸಿ ಸಾಕಿ ಬೆಳೆಸಿದ ಬಾಡಿಗೆ ಸೈನ್ಯದ ನಾಯಕನೇ ಅವರಿಗೆ ತಿರುಗಿ ಬಿದ್ದಿದ್ದಾನೆ. ರಷ್ಯಾದ ಸೈನ್ಯಕ್ಕೂ ಬಾಡಿಗೆ ಸೈನ್ಯಕ್ಕೂ ಚಕಮಕಿ ಶುರುವಾಗಿದೆ. ಪುಟಿನ್‌ ಅವರ ಸರ್ವಾಧಿಕಾರಿ ಧೋರಣೆಯಿಂದ ನೊಂದಿರುವ ಹಲವರು ಬಂಡಾಯ ಸೈನ್ಯದ ಜತೆ ಹೋಗಲೂಬಹುದು. ಪರಿಣಾಮ ಏನಾಗುತ್ತದೆ ಎಂದು ಹೇಳಬರುವಂತಿಲ್ಲ. ಪುಟಿನ್‌ ಅವರೇ ಉಳಿದುಕೊಳ್ಳಲೂಬಹುದು; ತಲೆದಂಡವಾಗಲೂಬಹುದು. ಆದರೆ ಏನೇ ಆದರೂ ರಷ್ಯಾದ ಅಮಾಯಕ ಪ್ರಜೆಗಳಿಗಂತೂ ಕಂಟಕ ಕಟ್ಟಿಟ್ಟ ಬುತ್ತಿ.

ಪಕ್ಕದ ದೇಶ ಉಕ್ರೇನ್‌ ನ್ಯಾಟೋ ಸೇರಲು ಬಯಸುತ್ತಿದೆ ಎಂಬುದು ರಷ್ಯಾದಂಥ ಬಲಿಷ್ಠ ದೇಶದ ನಾಯಕನಲ್ಲಿ ಹುಟ್ಟಿಸಿದ ಆತಂಕವೇ ಉಕ್ರೇನ್‌ನ ಮೇಲೆ ರಷ್ಯಾದ ದಾಳಿಯ ಮೂಲ. ಉಕ್ರೇನ್‌ನ ಹಿಂದೆ ಅಮೆರಿಕದಂಥ ಹಿತಾಸಕ್ತಿಗಳು ಇರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲವಾದರೂ, ವ್ಲಾದಿಮಿರ್‌ ಪುಟಿನ್‌ ಅವರ ಸರ್ವಾಧಿಕಾರ ಧೋರಣೆಯ ಬಗ್ಗೆ ಮೊದಲಿನಿಂದಲೂ ಜಾಗತಿಕ ಆತಂಕವಿದೆ. ಅಲ್ಲಿ ಹೆಸರಿಗೆ ಪ್ರಜಾಪ್ರಭುತ್ವವಿದ್ದರೂ, ಚೀನಾದಂತೆಯೇ ಏಕಾಧಿಪತ್ಯವನ್ನು ಪುಟಿನ್‌ ಸಾಧಿಸಿಕೊಂಡಿದ್ದಾರೆ. ನ್ಯಾಟೋದಂಥ ಪವರ್‌ ಕೇಂದ್ರಗಳು ತಮ್ಮ ಅಸ್ತಿತ್ವಕ್ಕೆ ಅಪಾಯ ಉಂಟುಮಾಡಬಹುದು ಎಂಬ ಅಸ್ಥಿರತೆಯಿಂದ ಪುಟಿನ್‌ ಉಕ್ರೇನ್ ಮೇಲೆ ದಾಳಿ ಶುರುಮಾಡಿದರು. ಅಧಿಕಾರ ಉಳಿಸಿಕೊಳ್ಳಲು ನಡೆಸಿದ ಈ ಅನಗತ್ಯ ದಾಳಿಯಿಂದಾಗಿ ಎರಡೂ ಕಡೆ ಅಪಾರ ನಷ್ಟವಾಯಿತು. ಸಾವಿರಾರು ಮಂದಿಯ ಸಾವುನೋವುಗಳಾದವು. ಚಿಂದಿಯಾಗಿರುವ ಉಕ್ರೇನ್‌ ಅನ್ನು ಮತ್ತೆ ಕಟ್ಟಲು ದಶಕಗಳೇ ಬೇಕು. ಯುದ್ಧದಿಂದ ಛಿದ್ರಗೊಂಡಿರುವ ದೇಶಗಳು ಮರಳಿ ಸುಧಾರಿಸಿಕೊಳ್ಳುವುದು ಮರೀಚಿಕೆ ಎಂಬುದನ್ನು ಅಫಘಾನಿಸ್ತಾನ, ಸಿರಿಯಾ, ಇರಾಕ್, ರುವಾಂಡ ಇತ್ಯಾದಿ ದೇಶಗಳು ಸಾಬೀತುಪಡಿಸಿವೆ. ರಷ್ಯಾದಲ್ಲಿ ಕೂಡ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಹಣದುಬ್ಬರದಿಂದ ಜನತೆ ತತ್ತರಿಸುತ್ತಿದ್ದಾರೆ.

ಈ ಯುದ್ಧದಿಂದ ಜಾಗತಿಕವಾಗಿಯೂ ಕೆಟ್ಟ ಪರಿಣಾಮವಾಗಿದೆ. ಜಾಗತಿಕ ಆರ್ಥಿಕತೆ ಮೇಲೆ ಇದು ದುಷ್ಪರಿಣಾಮ ಬೀರಿತು. ಯುದ್ಧವೊಂದು ಕಡೆ ಶುರುವಾದರೆ ತೈಲ ದೇಶಗಳು ತೈಲ ಮಾರಾಟದಲ್ಲಿ ರಾಜಕೀಯ ಶುರು ಮಾಡುತ್ತವೆ. ಸ್ವತಃ ರಷ್ಯಾ ಕೂಡ ತೈಲ ಮಾರಾಟ ರಾಷ್ಟ್ರ. ಆದರೆ ಇತರ ದೇಶಗಳ ಜತೆಗಿನ ಅದರ ರಫ್ತು- ಆಮದು ಕೆಟ್ಟುಹೋಯಿತು. ರಷ್ಯಾದ ಜೊತೆಗೆ ರಕ್ಷಣಾ- ವ್ಯಾಪಾರ ಸಂಬಂಧ ಹೊಂದಿದ್ದ ದೇಶಗಳ ಸ್ಥಿತಿ ಹದಗೆಟ್ಟಿತು. ಇದೆಲ್ಲವೂ ಯುದ್ಧದ ಅನಿವಾರ್ಯ ಪರಿಣಾಮಗಳು. ಒಂದು ದೇಶ ಎಲ್ಲ ನಿಯಮಗಳನ್ನು ಮರೆತು ವರ್ತಿಸತೊಡಗಿದರೆ, ಉಳಿದ ಬಲಿಷ್ಠ ದೇಶಗಳಿಗೂ ಹಾಗೆಯೇ ವರ್ತಿಸಲು ಆಹ್ವಾನ ಕೊಟ್ಟಂತಾಗುತ್ತದೆ. ಜಾಗತಿಕ ಶಾಂತಿಯನ್ನು ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ.

ಇದನ್ನೂ ಓದಿ: Turmoil In Russia: ಮಾಸ್ಕೋದತ್ತ ವ್ಯಾಗ್ನರ್‌ ಸೇನೆ ಲಗ್ಗೆ, ರಷ್ಯಾದಿಂದಲೇ ವ್ಲಾಡಿಮಿರ್‌ ಪುಟಿನ್‌ ಪಲಾಯನ

ಇದೀಗ ರಷ್ಯಾದಲ್ಲೇ ಅಂತರ್ಯುದ್ಧ ಶುರುವಾಗಿದೆ. ಇದೂ ಕೂಡ ಯುದ್ಧದ ಅನಿವಾರ್ಯ ಪರಿಣಾಮವೇ ಆಗಿದೆ. ಪುಟಿನ್‌ ಈಗ ತಾವೇ ಸಾಕಿದ ಬಾಡಿಗೆ ಕೊಲೆಗಡುಕರ ಕೈಯಲ್ಲಿ ಸಿಕ್ಕಿಬೀಳುವಂತಾಗಿದೆ. ತಾನೇ ಸಾಕಿದ ಹದ್ದು ತನ್ನ ಕೈಯನ್ನೇ ಕುಕ್ಕಿದಂತಾಗಿದೆ. ವ್ಯಾಗ್ನರ್‌ ಗ್ರೂಪ್‌ ಎಂಬ ಬಾಡಿಗೆ ಸೈನಿಕರ ಪಡೆ ರಷ್ಯಕ್ಕೆ ನಿದ್ರೆಯಿಲ್ಲದ ರಾತ್ರಿಗಳನ್ನು ಕರುಣಿಸುವುದು ನಿಶ್ಚಿತ. ವಿಷಸರ್ಪಗಳನ್ನು ಸಾಕಿದವನು ಕುಟುಕಿಸಿಕೊಳ್ಳಲು ಸಿದ್ಧನಾಗಿರಬೇಕಾಗುತ್ತದೆ. ಸರ್ವಾಧಿಕಾರ, ಸೈನ್ಯದ ಕೈಯಲ್ಲಿ ಹೆಚ್ಚಿನ ಅಧಿಕಾರ ನಿಕ್ಷೇಪ, ಎಲ್ಲರ ಮೇಲೂ ಬೇಹುಗಾರಿಕೆ, ವಿಪಕ್ಷಗಳ ನಾಯಕರನ್ನು ಸಾಯಿಸಲು ಯತ್ನ ಮುಂತಾದ ಆರೋಪಗಳು ಪುಟಿನ್‌ ಮೇಲಿವೆ. ಪ್ರಜಾಪ್ರಭುತ್ವೀಯ ಮೌಲ್ಯಗಳ ದಾರಿಯಲ್ಲಿ ನಡೆದಿದ್ದರೆ ಇಂಥ ಸ್ಥಿತಿ ಒದಗುತ್ತಿರಲಿಲ್ಲ. ಭಾರತಕ್ಕೆ ಮೇಲ್ನೋಟಕ್ಕೆ ಈ ಬೆಳವಣಿಗೆಗಳಿಂದ ತಕ್ಷಣದ ಹಾನಿಯಿಲ್ಲವಾದರೂ, ಇದರ ಪಶ್ಚಾತ್‌ ಪರಿಣಾಮಗಳ ಬಗ್ಗೆ ಎಚ್ಚರ ವಹಿಸಬೇಕಿದೆ. ಪ್ರಜಾಪ್ರಭುತ್ವದ ಮೌಲ್ಯಗಳೇ ಸದಾ ಶಾಂತಿಯ ಮೂಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Radhika Merchant : ಅನಂತ್​​ ಅಂಬಾನಿ- ರಾಧಿಕಾ ಮರ್ಚೆಂಟ್​ ವಿವಾಹದ ಸ್ಥಳ ಬಹಿರಂಗ; ಇಲ್ಲಿದೆ ವಿವರ

Radhika Merchant : ವರದಿಯ ಪ್ರಕಾರ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12 ರಂದು ಹಿಂದೂ ವೈದಿಕ ಸಮಾರಂಭದ ಪ್ರಕಾರ ಮದುವೆಯಾಗಲಿದ್ದಾರೆ. ವಿವಾಹ ಆಮಂತ್ರಣ ಪತ್ರಿಕೆಯ ಚಿತ್ರ ಬಹಿರಂಗಗೊಂಡಿದ್ದು ಅದರ ಪ್ರಕಾರ ಮೂರು ಸಮಾರಂಭಗಳನ್ನು ಆಯೋಜಿಸಲು ಸಿದ್ಧತೆ ನಡೆದಿದೆ.

VISTARANEWS.COM


on

Radhika Merchant
Koo

ಬೆಂಗಳೂರು: ದೈತ್ಯ ಉದ್ಯಮಿ ಮುಖೇಶ್ ಅಂಬಾನಿ ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ ಮರ್ಚೆಂಟ್ (Radhika Merchant) ವಿವಾಹ ಸಮಾರಂಭದ ಕುರಿತ ಹೊಸ ವಿಷಯವೊಂದು ಬಹಿರಂಗಗೊಂಡಿದೆ. ಫ್ರೆಂಚ್ ಕ್ರೂಸ್​ನಲ್ಲಿ ತಮ್ಮ ವಿವಾಹ ಪೂರ್ವ ಎರಡಡನೇ ಪಾರ್ಟಿಯನ್ನು ಪ್ರಾರಂಭಿಸುತ್ತಿದ್ದಂತೆ ಎಲ್ಲರ ಕಣ್ಣುಗಳು ಅವರ ಮೇಲೆ ನೆಟ್ಟಿದ್ದವು. ಸಂತೋಷಕೂಟಕ್ಕಾಗಿ ಅಂಬಾನಿ ದಂಪತಿಗಳು (Ambani Couple) ಫ್ರಾನ್ಸ್ ಮತ್ತು ಇಟಲಿಯಾದ್ಯಂತ ಪ್ರಯಾಣಿಸಿದ್ದರು ಮತ್ತು ಐಷಾರಾಮಿ ಹಡಗಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು. ವಈ ಆಚರಣೆಗಳ ನಡುವೆ, ದಂಪತಿಗಳು ಜುಲೈನಲ್ಲಿ ಮದುವೆಯಾಗಲಿದ್ದಾರೆ ಎಂದು ಇತ್ತೀಚಿನ ವರದಿಯೊಂದು ಬಹಿರಂಗಪಡಿಸಿದೆ.

ವರದಿಯ ಪ್ರಕಾರ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12 ರಂದು ಹಿಂದೂ ವೈದಿಕ ಸಮಾರಂಭದ ಪ್ರಕಾರ ಮದುವೆಯಾಗಲಿದ್ದಾರೆ. ವಿವಾಹ ಆಮಂತ್ರಣ ಪತ್ರಿಕೆಯ ಚಿತ್ರ ಬಹಿರಂಗಗೊಂಡಿದ್ದು ಅದರ ಪ್ರಕಾರ ಮೂರು ಸಮಾರಂಭಗಳನ್ನು ಆಯೋಜಿಸಲು ಸಿದ್ಧತೆ ನಡೆದಿದೆ. ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಲ್ಲಿರುವ ಭವ್ಯವಾದ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್​ನಲ್ಲಿ ಮದುವೆ ನಡೆಯಲಿದೆ.

ಭಾರತೀಯ ಸಂಪ್ರದಾಯದ ಉಡುಪುಗಳು

ಜುಲೈ 12 ರಿಂದ ಮೂರು ದಿನಗಳ ಕಾಲ ವಿವಾಹ ಉತ್ಸವಗಳು ನಡೆಯಲಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 12ರಂದು ರಂದು ವಿವಾಹದೊಂದಿಗೆ ಆಚರಣೆಗೆ ಚಾಲನೆ ಸಿಗಲಿದೆ. ಅಂದು ಅತಿಥಿಗಳು ಭಾರತೀಯ ಸಾಂಪ್ರದಾಯಿಕ ಉಡುಪನ್ನು ಧರಿಸುವ ನಿರೀಕ್ಷೆಯಿದೆ. ಮದುವೆಯ ನಂತರ, ಮುಂದಿನ ಕಾರ್ಯಕ್ರಮವು ಜುಲೈ 13 ರಂದು ಶುಭ ಆಶಿರ್ವಾದ್ ಅಥವಾ ದೈವಿಕ ಆಶೀರ್ವಾದ ಕಾರ್ಯಕ್ರಮ. ಅಂದು ಡ್ರೆಸ್ ಕೋಡ್ ಭಾರತೀಯ ಕ್ಯಾಶುವಲ್ ಡ್ರೆಸ್​ ಆಗಿದೆ. ಜುಲೈ 14 ರಂದು ಆಯೋಜಿಸಲಾಗುವ ವಿವಾಹ ಆರತಕ್ಷತೆ ಅಥವಾ ಮಂಗಲ್ ಉತ್ಸವ್ ನಡೆಯಲಿದೆ. ಅಂದು ಅತಿಥಿಗಳು ಭಾರತೀಯ ಚಿಕ್ ಉಡುಪನ್ನು ಧರಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: IPL 2024 : ಜಿಯೋಸಿನಿಮಾದಲ್ಲಿ ದಾಖಲೆಯ 62 ಕೋಟಿಗೂ ಅಧಿಕ ವೀಕ್ಷಣೆ ಕಂಡ ಐಪಿಎಲ್​

ವಿವಾಹ ಪೂರ್ವ ಪಾರ್ಟಿಯಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್, ರಣವೀರ್ ಸಿಂಗ್, ಸಲ್ಮಾನ್ ಖಾನ್ ಮತ್ತು ಎಂಎಸ್ ಧೋನಿ ಭಾಗವಹಿಸುವ ನಿರೀಕ್ಷೆಯಿದೆ. ಬ್ಯಾಕ್ ಸ್ಟ್ರೀಟ್ ಬಾಯ್ಸ್ ಪಾರ್ಟಿಯಲ್ಲಿ ಪ್ರದರ್ಶನ ನೀಡುವ ದೃಶ್ಯಗಳು ಇತ್ತೀಚೆಗೆ ವೈರಲ್ ಆಗಿದ್ದವು. ಗುರು ರಾಂಧವ ಮತ್ತು ಪಿಟ್ಬುಲ್ ಕೂಡ ಈ ತಾರೆಗಳಿಂದ ಕೂಡಿದ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲಿದ್ದಾರೆ ಎಂಬ ವದಂತಿಗಳಿವೆ.

Continue Reading

ದೇಶ

Indo China Border : ಸಿಕ್ಕಿಂನಿಂದ 150 ಕಿ.ಮೀ ದೂರದಲ್ಲಿ ಚೀನಾದಿಂದ ಅತ್ಯಾಧುನಿಕ ಯುದ್ಧ ವಿಮಾನ ನಿಯೋಜನೆ

indo china border :ಜೆ -20 ಸ್ಟೆಲ್ತ್ ಫೈಟರ್ ಇಲ್ಲಿಯವರೆಗೆ ಚೀನಾದ ಅತ್ಯಂತ ಸುಧಾರಿತ ಕಾರ್ಯಾಚರಣೆಯ ಯುದ್ಧ ವಿಮಾನ. ಈ ವಿಮಾನಗಳು ಮುಖ್ಯವಾಗಿ ಚೀನಾದ ಪೂರ್ವ ಪ್ರಾಂತ್ಯಗಳಲ್ಲಿ ನೆಲೆಗೊಳಿಸಲಾಗಿದೆ ಎಂದು ಆಲ್ ಸೋರ್ಸ್ ಅನಾಲಿಸಿಸ್​ನ ತಂತ್ರಜ್ಞಾನ ಮತ್ತು ವಿಶ್ಲೇಷಣೆಯ ಉಪಾಧ್ಯಕ್ಷ ಹೇಳಿದ್ದಾರೆ.

VISTARANEWS.COM


on

indo Chaina border
Koo

ನವದೆಹಲಿ: ಸಿಕ್ಕಿಂಗಿಂತ 150 ಕಿಲೋಮೀಟರ್​ ದೂರದಲ್ಲಿರುವ ವಿಮಾನ ನಿಲ್ದಾಣದಲ್ಲಿ ಚೀನಾ ತನ್ನ ಅತ್ಯಾಧುನಿಕ ಜೆ -20 ಸ್ಟೆಲ್ತ್ ಫೈಟರ್ ಜೆಟ್ ಗಳನ್ನು ನಿಯೋಜಿಸಿರುವುದು ಮೇ 27 ರಂದು ಸಂಗ್ರಹಿಸಿದ ಉಪಗ್ರಹ ಚಿತ್ರಗಳ ಮೂಲಕ ಕಂಡು ಬಂದಿದೆ. ಈ ಚಿತ್ರವನ್ನು ಜಿಯೋಸ್ಪೇಷಿಯಲ್ ಇಂಟೆಲಿಜೆನ್ಸ್ ಅನ್ನು ನೋಡುವ ಸಂಸ್ಥೆಯಾದ ಆಲ್ ಸೋರ್ಸ್ ಅನಾಲಿಸಿಸ್​​ನ ಅನುಮತಿಯೊಂದಿ ಅಭಿವೃದ್ಧಿ ಮಾಡಲಾಗಿದೆ. ಈ ಮೂಲಕ ಚೀನಾ, ಭಾರತ ಗಡಿಯಲ್ಲಿ (Indo China Border) ಅತ್ಯಂತ ಅಪಾಯಕಾರಿ ವಿಮಾನವನ್ನು ನಿಯೋಜಿಸುವ ಮೂಲಕ ಆತಂಕ ಸೃಷ್ಟಿಸುತ್ತಿದೆ.

ಟಿಬೆಟ್​​ನ ಎರಡನೇ ಅತಿದೊಡ್ಡ ನಗರವಾದ ಶಿಗಾಟ್ಸೆಗೆ ಸೇವೆ ಸಲ್ಲಿಸುವ ಮಿ ಮತ್ತು ನಾಗರಿಕ ವಿಮಾನ ನಿಲ್ದಾಣ ಇದಾಗಿದ್ದು ಆರು ಚೀನೀ ವಾಯುಪಡೆಯ ಜೆ -20 ಸ್ಟೆಲ್ತ್ ಫೈಟರ್​​ ವಿಮಾನಗಳು ಅಲ್ಲಿ ಕಂಡು ಬಂದಿದೆ. ಈ ವಿಮಾನ ನಿಲ್ದಾಣವು 12,408 ಅಡಿ ಎತ್ತರದಲ್ಲಿದೆ, ಇದು ವಿಶ್ವದ ಅತಿ ಎತ್ತರದ ವಿಮಾನ ನಿಲ್ದಾಣಗಳಲ್ಲಿ ಒಂದು. ಜೆ -20 ಯುದ್ಧ ವಿಮಾನಗಳ ನಿಯೋಜನೆಯ ಬಗ್ಗೆ ತಿಳಿದಿರುವ ಭಾರತೀಯ ವಾಯುಪಡೆ (ಐಎಎಫ್) ಈ ಸಮಯದಲ್ಲಿ ಅವುಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.

ಜೆ -20 ಸ್ಟೆಲ್ತ್ ಫೈಟರ್ ಇಲ್ಲಿಯವರೆಗೆ ಚೀನಾದ ಅತ್ಯಂತ ಸುಧಾರಿತ ಕಾರ್ಯಾಚರಣೆಯ ಯುದ್ಧ ವಿಮಾನ. ಈ ವಿಮಾನಗಳು ಮುಖ್ಯವಾಗಿ ಚೀನಾದ ಪೂರ್ವ ಪ್ರಾಂತ್ಯಗಳಲ್ಲಿ ನೆಲೆಗೊಳಿಸಲಾಗಿದೆ ಎಂದು ಆಲ್ ಸೋರ್ಸ್ ಅನಾಲಿಸಿಸ್​ನ ತಂತ್ರಜ್ಞಾನ ಮತ್ತು ವಿಶ್ಲೇಷಣೆಯ ಉಪಾಧ್ಯಕ್ಷ ಹೇಳಿದ್ದಾರೆ. “ಈ ವಿಮಾನಗಳು ಟಿಬೆಟ್​ನ ಶಿಗಾಟ್ಸೆಯಲ್ಲಿ ಕಾಣಿಸಿಕೊಂಡಿರುವುದು ವಿಷೇಷ. ಯಾಕೆಂದರೆ ಅವುಗಳನ್ನು ತಮ್ಮ ಸಾಮಾನ್ಯ ಕಾರ್ಯಾಚರಣೆಯ ಪ್ರದೇಶಗಳ ಹೊರಗೆ ಮತ್ತು ಭಾರತೀಯ ಗಡಿಯ ಸಮೀಪದಲ್ಲಿ ನಿಯೋಜಿಸಿರುವುದು ಅಚ್ಚರಿಯಾಗಿದೆ.

ಭಾರತವು ತನ್ನ 36 ಫ್ರೆಂಚ್ ನಿರ್ಮಿತ ರಫೇಲ್ ಯುದ್ಧ ವಿಮಾನಗಳೊಂದಿಗೆ ಜೆ -20 ಅನ್ನು ಎದುರಿಸಬೇಕಾಗುತ್ತದೆ. ಅವುಗಳಲ್ಲಿ ಎಂಟು ಪ್ರಸ್ತುತ ಯುನೈಟೆಡ್ ಸ್ಟೇಟ್ಸ್ ಏರ್ ಫೋರ್ಸ್ ನ (ಯುಎಸ್ಎಎಫ್) ಸುಧಾರಿತ ವಾಯು ಯುದ್ಧ ರಿಹರ್ಸಲ್​​ಗಾಗಿ ಅಲಾಸ್ಕಾಕ್ಕೆ ಹಾರಿವೆ. ಗಮನಾರ್ಹವಾಗಿ, ಚೀನಾದ ಜೆ -20 ಪತ್ತೆಯಾದ ಶಿಗಾಟ್ಸೆ ಪಶ್ಚಿಮ ಬಂಗಾಳದ ಹಸಿಮಾರಾದಿಂದ (ಕೆಳಗೆ) 290 ಕಿ.ಮೀ ಗಿಂತ ಕಡಿಮೆ ದೂರದಲ್ಲಿದೆ. ಅಲ್ಲಿ ಭಾರತವು ತನ್ನ 16 ರಾಫೆಲ್​ ಎರಡನೇ ಸ್ಕ್ವಾಡ್ರನ್ ಅನ್ನು ನೆಲೆಗೊಳಿಸಲಾಗುತ್ತದೆ.

ಇದನ್ನೂ ಓದಿ: Azam Khan : ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಗೆ 10 ವರ್ಷ ಜೈಲು, 14 ಲಕ್ಷ ದಂಡ

ಟಿಬೆನಲ್ಲಿ ಜೆ – 20 ವಿಮಾನವನ್ನು ಅನ್ನು ನಿಯೋಜಿಸುತ್ತಿರುವುದು ಇದೇ ಮೊದಲಲ್ಲ. 2020 ಮತ್ತು 2023 ರ ನಡುವೆ ಚೀನಾದ ಹೋಟಾನ್ ಪ್ರಾಂತ್ಯದ ಕ್ಸಿನ್ಜಿಯಾಂಗ್ನಲ್ಲಿ ಜೆಟ್​ಗಳನ್ನು ಇಡಲಾಗಿತ್ತು. ಆದಾಗ್ಯೂ, ಇದು ಜೆ -20ನ ವಿಚಾರದಲ್ಲಿ ಅತ್ಯಂತ ಸೂಕ್ಷ್ಮ ನಿಯೋಜನೆ ಎಂದು ನಂಬಲಾಗಿದೆ.

2017ರಿಂದ ಚೀನಾ ವಾಯುಸೇನೆ ಸೇರಿದ ಜೆ 20

ಮೈಟಿ ಡ್ರ್ಯಾಗನ್ ಎಂದೂ ಕರೆಯಲ್ಪಡುವ ಚೆಂಗ್ಡು ಜೆ -20 ಅವಳಿ ಎಂಜಿನ್ ಸ್ಟೆಲ್ತ್ ಫೈಟರ್ ಆಗಿದ್ದು, ಇದನ್ನು 2017 ರಲ್ಲಿ ಸೇವೆಗೆ ಪರಿಚಯಿಸಲಾಯಿತು. ಕೆಲವು ವರದಿಗಳು ಚೀನಾ ಈಗಾಗಲೇ 250 ಸ್ಟೆಲ್ತ್ ಫೈಟರ್​ಗಳನ್ನು ನಿಯೋಜಿಸಿದೆ. ಇದು ಅತಿ ವೇಗದ ವಿಮಾನವಾಗಿದ್ದ ರಾಡಾರ್​ ಮೂಲಕ ಗಮನಿಸುವುದು ಕಷ್ಟ.

ಯುದ್ಧ ವಿಮಾನದ ಸೇರ್ಪಡೆಯೊಂದಿಗೆ, ಚೀನಾ ಸ್ಟೆಲ್ತ್ ಫೈಟರ್ಗಳನ್ನು ಕಾರ್ಯಾಚರಣೆಯಲ್ಲಿ ನಿಯೋಜಿಸಿದ ವಿಶ್ವದ ಮೂರನೇ ದೇಶವಾಗಿ ಹೊರಹೊಮ್ಮಿತು. ಈ ಜೆಟ್ ಅನ್ನು ನಿರಂತರವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಇದರ ಪ್ರಾಥಮಿಕ ಜವಾಬ್ದಾರಿ ಯುದ್ಧ. ಇದು 300 ಕಿ.ಮೀ ದೂರದಲ್ಲಿರುವ ವೈಮಾನಿಕ ಗುರಿಗಳನ್ನು ಹೊಡೆಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ನಂಬಲಾಗಿದೆ.

ಕಳೆದ ಐದು ವರ್ಷಗಳಲ್ಲಿ ಚೀನಾ ಟಿಬೆಟ್ ಮತ್ತು ಭಾರತ ಗಡಿಯ ಬಳಿಯ ಇತರ ಪ್ರದೇಶಗಳಲ್ಲಿ ತನ್ನ ವಾಯು ಶಕ್ತಿ ಸಾಮರ್ಥ್ಯವನ್ನು ಸ್ಥಿರವಾಗಿ ಹೆಚ್ಚಿಸಿದೆ. ಇದು ಪ್ರಾಥಮಿಕವಾಗಿ ಹೊಸ ವಾಯುನೆಲೆಗಳ ನಿರ್ಮಾಣ ಮತ್ತು ಅಸ್ತಿತ್ವದಲ್ಲಿರುವ ವಾಯುನೆಲೆಗಳಲ್ಲಿ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವುದನ್ನು ಸೇರಿಕೊಂಡಿದೆ ಚೀನಾ ಜೆ -20 ಮತ್ತು ಅದರ ಎಚ್ -6 ಪರಮಾಣು ಸಾಮರ್ಥ್ಯದ ಬಾಂಬರ್ ಗಳಂತಹ ವಿಮಾನಗಳನ್ನು ಈ ಗಡಿ ಪ್ರದೇಶಗಳಲ್ಲಿ ನಿಯೋಜಿಸುತ್ತಿದೆ.

Continue Reading

ಕರ್ನಾಟಕ

Prajwal Revanna Case: ಜರ್ಮನಿಯಿಂದ ಬೆಂಗಳೂರಿನತ್ತ ಹೊರಟ ಪ್ರಜ್ವಲ್;‌ ಬಂದ ತಕ್ಷಣ ಏನಾಗತ್ತೆ? ಇಲ್ಲಿದೆ ಕಂಪ್ಲೀಟ್‌ ರಿಪೋರ್ಟ್

Prajwal Revanna Case: ಪ್ರಜ್ವಲ್‌ ರೇವಣ್ಣ ಬೆಂಗಳೂರಿಗೆ ಆಗಮಿಸುತ್ತಲೇ ಮಹಿಳೆಯರ ಪ್ರತಿಭಟನೆ, ಬೆಂಬಲಿಗರ ಘೋಷಣೆ, ಪತ್ರಕರ್ತರು ಹಾಗೂ ವಕೀಲರ ಕಣ್ತಪ್ಪಿಸಿ ಕರೆದುಕೊಂಡು ಹೋಗಲು ಎಸ್‌ಐಟಿ 4 ಪ್ಲಾನ್‌ ಮಾಡಿದೆ ಎಂದು ತಿಳಿದುಬಂದಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಈಗಾಗಲೇ ಎಸ್‌ಐಟಿ ಅಧಿಕಾರಿಗಳು ತೆರಳಿದ್ದಾರೆ. ಇಮಿಗ್ರೇಷನ್‌ ಡೆಸ್ಕ್‌ ಬಳಿ ಎಸ್‌ಐಟಿ ಅಧಿಕಾರಿಗಳು ತೆರಳಿದ್ದಾರೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿದೇಶಕ್ಕೆ ಪರಾರಿಯಾಗಿದ್ದ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna Case) ಒಂದು ತಿಂಗಳ ಬಳಿಕ ಕೊನೆಗೂ ಬೆಂಗಳೂರಿನತ್ತ ಆಗಮಿಸುತ್ತಿದ್ದಾರೆ. ಜರ್ಮನಿಯ ಮ್ಯೂನಿಕ್‌ ವಿಮಾನ ನಿಲ್ದಾಣದಲ್ಲಿ (Munich Airport) ವಿಮಾನ ಹತ್ತಿರುವ ಪ್ರಜ್ವಲ್‌ ರೇವಣ್ಣ ಇಂದು ರಾತ್ರಿ (ಮೇ 31) 12.30ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬೆಂಗಳೂರಿಗೆ ಆಗಮಿಸುತ್ತಲೇ ಅವರನ್ನು ಎಸ್‌ಐಟಿ ಅಧಿಕಾರಿಗಳು ವಶಪಡಿಸಿಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.

ಏರ್‌ಪೋರ್ಟ್‌ಗೆ ಎಸ್‌ಐಟಿ ಅಧಿಕಾರಿಗಳ ಲಗ್ಗೆ

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಈಗಾಗಲೇ ಎಸ್‌ಐಟಿ ಅಧಿಕಾರಿಗಳು ತೆರಳಿದ್ದಾರೆ. ಇಮಿಗ್ರೇಷನ್‌ ಡೆಸ್ಕ್‌ ಬಳಿ ಎಸ್‌ಐಟಿ ಅಧಿಕಾರಿಗಳು ತೆರಳಿದ್ದಾರೆ. ವಿಮಾನ ಲ್ಯಾಂಡಿಂಗ್‌ ಕುರಿತು, ವಿಮಾನದಲ್ಲಿ ಯಾರಿದ್ದಾರೆ ಎಂಬುದು ಸೇರಿ ವಿವಿಧ ಮಾಹಿತಿಯನ್ನು ಎಸ್‌ಐಟಿ ಅಧಿಕಾರಿಗಳು ಪಡೆಯುತ್ತಿದ್ದಾರೆ. ಪ್ರಜ್ವಲ್‌ ರೇವಣ್ಣ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಲೇ ಅವರ ಡಿಪ್ಲೋಮ್ಯಾಟಿಕ್‌ ಪಾಸ್‌ಪೋರ್ಟ್‌ಗೆ ಇಮಿಗ್ರೇಷನ್‌ ಅಧಿಕಾರಿಗಳು ಸ್ಟ್ಯಾಂಪ್‌ ಹಾಕುತ್ತಾರೆ. ಸ್ಟ್ಯಾಂಪ್‌ ಹಾಕಿ, ಪರಿಶೀಲನೆ ಮುಗಿದ ಬಳಿಕವೇ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್‌ ರೇವಣ್ಣ ಅವರನ್ನು ವಶಕ್ಕೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.

ಪ್ರಜ್ವಲ್‌ ಕರೆದೊಯ್ಯಲು ಎಸ್‌ಐಟಿ 4 ಪ್ಲಾನ್‌

ಪ್ರಜ್ವಲ್‌ ರೇವಣ್ಣ ಬೆಂಗಳೂರಿಗೆ ಆಗಮಿಸುತ್ತಲೇ ಮಹಿಳೆಯರ ಪ್ರತಿಭಟನೆ, ಬೆಂಬಲಿಗರ ಘೋಷಣೆ, ಪತ್ರಕರ್ತರು ಹಾಗೂ ವಕೀಲರ ಕಣ್ತಪ್ಪಿಸಿ ಕರೆದುಕೊಂಡು ಹೋಗಲು ಎಸ್‌ಐಟಿ 4 ಪ್ಲಾನ್‌ ಮಾಡಿದೆ ಎಂದು ತಿಳಿದುಬಂದಿದೆ. ಟರ್ಮಿನಲ್‌ 2 ಆಗಮನದ ಗೇಟ್‌, ಟರ್ಮಿನಲ್‌ 2 ವಿಐಪಿ ಎಕ್ಸಿಟ್‌ ಗೇಟ್‌, ಟರ್ಮಿನಲ್‌ 2 ಒಳಭಾಗದಿಂದ ಟರ್ಮಿನಲ್‌ 1ರ ಮೂಲಕ ಹೊರತರುವುದು ಇಲ್ಲವೇ ಟರ್ಮಿನಲ್‌ 1 ಬಳಿಯ ಆಲ್ಫಾ ಗೇಟ್‌ನಿಂದ ಪ್ರಜ್ವಲ್‌ ರೇವಣ್ಣ ಅವರನ್ನು ಕರೆದುಕೊಂಡು ಹೋಗಲು ಎಸ್‌ಐಟಿ ಯೋಜನೆ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ.

ನಾಳೆ ಜಾಮೀನು ಅರ್ಜಿ ವಿಚಾರಣೆ

ಲೈಂಗಿಕ ದೌರ್ಜನ್ಯ, ಸಂತ್ರಸ್ತೆಯ ಅಪಹರಣ ಸೇರಿ ಎಫ್‌ಐಆರ್‌ ದಾಖಲಾಗಿರುವ ಮೂರು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡಬೇಕು ಎಂಬುದಾಗಿ ಪ್ರಜ್ವಲ್‌ ರೇವಣ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮೇ 31ರಂದು ಅರ್ಜಿಯ ವಿಚಾರಣೆ ನಡೆಯಲಿದೆ. ಇನ್ನು, ಭವಾನಿ ರೇವಣ್ಣ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ಕುರಿತ ತೀರ್ಪು ಕೂಡ ಶುಕ್ರವಾರವೇ ಹೊರಬೀಳಲಿದೆ. ಇದರಿಂದಾಗಿ ಶುಕ್ರವಾರವು ಎಚ್‌.ಡಿ.ರೇವಣ್ಣ ಕುಟುಂಬಕ್ಕೆ ಬಿಗ್‌ ಡೇ ಆಗಿದೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ರೇವಣ್ಣ ಬಂಧಿಸಲು ಆಗ್ರಹಿಸಿ ಹಾಸನದಲ್ಲಿ ಬೃಹತ್‌ ಪ್ರತಿಭಟನೆ

Continue Reading

ದೇಶ

Azam Khan : ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಗೆ 10 ವರ್ಷ ಜೈಲು, 14 ಲಕ್ಷ ದಂಡ

Azam Khan: ಜಿಲ್ಲಾ ಸರ್ಕಾರಿ ವಕೀಲರಾದ ಸೀಮಾ ಸಿಂಗ್ ರಾಣಾ ಮಾತನಾಡಿ, “ಅಜಂ ಖಾನ್ ಅವರನ್ನು ನಿನ್ನೆ ಪ್ರಕರಣವೊಂದರಲ್ಲಿ ದೋಷಿ ಎಂದು ಘೋಷಿಸಲಾಯಿತು. ಶಿಕ್ಷೆಯ ಪ್ರಮಾಣವನ್ನು ಇಂದು ಘೋಷಿಸಲಾಗಿದೆ. ಆತನಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅವರಿಗೆ ಒಟ್ಟು 14 ಲಕ್ಷ ರೂ.ಗಳ ದಂಡವನ್ನೂ ವಿಧಿಸಲಾಗಿದೆ ಎಂದು ಹೇಳಿದ್ದಾರೆ.

VISTARANEWS.COM


on

Azam Khan
Koo

ಲಖನೌ: ಬಲವಂತವಾಗಿ ವ್ಯಕ್ತಿಯೊಬ್ಬರ ಮನೆ ತೆರವು ಮಾಡಿದ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್ ಗೆ (Azam Khan) 10 ವರ್ಷಗಳ ಜೈಲು ಶಿಕ್ಷೆ ಘೋಷಣೆಯಾಗಿದೆ. ಅದೇ ರೀತಿ 14 ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಎಂಟು ವರ್ಷಗಳ ಹಳೆಯ ಪ್ರಕರಣ ಇದಾಗಿದ್ದು, ಮನೆಯನ್ನು ಬಲವಂತವಾಗಿ ಖಾಲಿ ಮಾಡಿ ಮಾಲೀಕರನ್ನು ಥಳಿಸಿದ್ದ ಪ್ರಕರಣ ಇದಾಗಿದೆ. ಪ್ರಕರಣದಲ್ಲಿ ಉತ್ತರ ಪ್ರದೇಶದ ರಾಂಪುರದ ನ್ಯಾಯಾಲಯವು ಮೊಹಮ್ಮದ್ ಅಜಂ ಖಾನ್ ಅವರನ್ನು ದೋಷಿ ಎಂದು ಬುಧವಾರ ತೀರ್ಪು ನೀಡಿತ್ತು.

ಜಿಲ್ಲಾ ಸರ್ಕಾರಿ ವಕೀಲರಾದ ಸೀಮಾ ಸಿಂಗ್ ರಾಣಾ ಮಾತನಾಡಿ, “ಅಜಂ ಖಾನ್ ಅವರನ್ನು ನಿನ್ನೆ ಪ್ರಕರಣವೊಂದರಲ್ಲಿ ದೋಷಿ ಎಂದು ಘೋಷಿಸಲಾಯಿತು. ಶಿಕ್ಷೆಯ ಪ್ರಮಾಣವನ್ನು ಇಂದು ಘೋಷಿಸಲಾಗಿದೆ. ಆತನಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅವರಿಗೆ ಒಟ್ಟು 14 ಲಕ್ಷ ರೂ.ಗಳ ದಂಡವನ್ನೂ ವಿಧಿಸಲಾಗಿದೆ ಎಂದು ಹೇಳಿದ್ದಾರೆ.

ಈ ವಿಷಯವು ರಾಂಪುರದ ಡುಂಗರಪುರ ಬಸ್ತಿಗೆ ಸಂಬಂಧಿಸಿದ್ದಾಗಿದೆ. ದೂರುದಾರ ಅಬ್ರಾರ್ ಅವರು 2019 ರಲ್ಲಿ ಅಜಂ ಖಾನ್ ವಿರುದ್ಧ ದೂರು ನೀಡಿದ್ದರು. 2019 ರಲ್ಲಿ ಅವರ ಮನೆಗೆ ಬಲವಂತವಾಗಿ ಪ್ರವೇಶಿಸಿ, ಲೂಟಿ ಮಾಡಿದ್ದರು. ಜೀವ ಬೆದರಿಕೆಗಳ ಹಾಕಿ ಬುಲ್ಡೋಜರ್ ಬಳಸಿ ಮನೆಯನ್ನು ನೆಲಸಮಗೊಳಿಸಿದ್ದರು ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಪ್ರಕರಣದ ಎರಡನೇ ಅರೋಪಿ ಬರ್ಕತ್ ಅಲಿಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ಒಟ್ಟು 6 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂಬುದಾಗಿಯೂ ವಕೀಲರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಖಾನ್ ವಿರುದ್ಧ ಪಿತೂರಿಯ ಆರೋಪವಿದೆ.ಅಲಿ ಈ ದಂಡವನ್ನು ಪಾವತಿಸಲು ವಿಫಲವಾದರೆ, ಅವರು 18 ತಿಂಗಳ ಕಠಿಣ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: ಕಾಶ್ಮೀರ ಗಡಿಯಲ್ಲಿ ರಕ್ಷಣಾ ಬಲ ಹೆಚ್ಚಿಸಿಕೊಳ್ಳಲು ಕಂತ್ರಿ ಪಾಕಿಸ್ತಾನಕ್ಕೆ ಕುತಂತ್ರಿ ಚೀನಾ ನೆರವು; ಸ್ಫೋಟಕ ವರದಿ ಇಲ್ಲಿದೆ

ಅಲಿಗೆ ಸೆಕ್ಷನ್ 392 ರ ಅಡಿಯಲ್ಲಿ ಏಳು ವರ್ಷ ಜೈಲು ಶಿಕ್ಷೆ ಮತ್ತು 3 ಲಕ್ಷ ರೂ., ಸೆಕ್ಷನ್ 452 ರ ಅಡಿಯಲ್ಲಿ ಆರು ವರ್ಷ ಜೈಲು ಶಿಕ್ಷೆ ಮತ್ತು 2 ಲಕ್ಷ ರೂ.ಗಳ ದಂಡ, ಸೆಕ್ಷನ್ 504 ರ ಅಡಿಯಲ್ಲಿ ಎರಡು ವರ್ಷ ಜೈಲು ಶಿಕ್ಷೆ ಮತ್ತು 50,000 ರೂ. ದಂಡ ವಿಧಿಸಲಾಗಿದೆ.

ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ನಂತರ ಎಸ್ಪಿ ನಾಯಕ ಖಾನ್ ಪ್ರಸ್ತುತ ಸೀತಾಪುರ ಜೈಲಿನಲ್ಲಿದ್ದಾರೆ. 2022 ರಲ್ಲಿ, ದ್ವೇಷ ಭಾಷಣ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ಅವರು ಮೂರು ವರ್ಷಗಳ ಕಾಲ ಉತ್ತರ ಪ್ರದೇಶ ವಿಧಾನಸಭಾ ಸದಸ್ಯತ್ವ ಕಳೆದುಕೊಂಡಿದ್ದರು.

Continue Reading
Advertisement
Radhika Merchant
ಪ್ರಮುಖ ಸುದ್ದಿ8 mins ago

Radhika Merchant : ಅನಂತ್​​ ಅಂಬಾನಿ- ರಾಧಿಕಾ ಮರ್ಚೆಂಟ್​ ವಿವಾಹದ ಸ್ಥಳ ಬಹಿರಂಗ; ಇಲ್ಲಿದೆ ವಿವರ

Suspicious Death Advocate Chaitra Gowda Case
ಬೆಂಗಳೂರು26 mins ago

Suspicious Death: ಸಿಸಿಬಿ ತೆಕ್ಕೆಗೆ ವಕೀಲೆ ಚೈತ್ರಾ ಡೆತ್ ಕೇಸ್; 15 ದಿನಗಳ ಸಿಸಿಟಿವಿ ಪರಿಶೀಲನೆ

Star Fashion
ಫ್ಯಾಷನ್54 mins ago

Star Fashion: ಪಂಚೆ ಜೊತೆ ಟ್ರೋಫಿ ಜಾಕೆಟ್‌ ಧರಿಸಿದ ನಟಿ ತಮನ್ನಾಳ ಯೂನಿಕ್‌ ಫ್ಯಾಷನ್‌!

Health Insurance
ಮನಿ-ಗೈಡ್1 hour ago

Health Insurance: ಕ್ಯಾಶ್​ಲೆಸ್​ ಕ್ಲೈಮ್‌ ಗಳಿಗೆ ಆಸ್ಪತ್ರೆಯಲ್ಲಿ ಇನ್ನು ಹೆಚ್ಚು ಹೊತ್ತು ಕಾಯಬೇಕಿಲ್ಲ; ಇಲ್ಲಿದೆ ಹೊಸ ನಿಯಮ

First successful TAVR surgery in the state at Fortis Hospital
ಬೆಂಗಳೂರು1 hour ago

Fortis Hospital: ರಾಜ್ಯದಲ್ಲೇ ಮೊದಲ ಬಾರಿಗೆ ಅಪರೂಪದ ಶಸ್ತ್ರಚಿಕಿತ್ಸೆ

MLA Belur Gopalakrishna election campaign for Congress candidates at ripponpete
ರಾಜಕೀಯ1 hour ago

MLC Election: ವಿಧಾನಪರಿಷತ್ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿಗಳ ಪರ ಶಾಸಕ ಬೇಳೂರು ಗೋಪಾಲಕೃಷ್ಣ ಮತಯಾಚನೆ

Vijayanagara News Distribute good quality sowing seeds and fertilizers says Tehsildar Amaresh G K
ವಿಜಯನಗರ1 hour ago

Vijayanagara News: ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ವಿತರಿಸಿ: ತಹಸೀಲ್ದಾರ್‌ ಅಮರೇಶ್

Vishwadarshan Education Institute President Hariprakash konemane spoke in Training Workshop for Vishwadarshan Central School Teachers at Yallapura
ಉತ್ತರ ಕನ್ನಡ1 hour ago

Uttara Kannada News: ಸಂಸ್ಕಾರಯುತ, ಗುಣಾತ್ಮಕ ಶಿಕ್ಷಣ ನೀಡುವಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಮುಂಚೂಣಿ: ಹರಿಪ್ರಕಾಶ್‌ ಕೋಣೆಮನೆ

indo Chaina border
ದೇಶ1 hour ago

Indo China Border : ಸಿಕ್ಕಿಂನಿಂದ 150 ಕಿ.ಮೀ ದೂರದಲ್ಲಿ ಚೀನಾದಿಂದ ಅತ್ಯಾಧುನಿಕ ಯುದ್ಧ ವಿಮಾನ ನಿಯೋಜನೆ

Prevention Of Obesity
ಆರೋಗ್ಯ1 hour ago

Prevention Of Obesity: ಆರೋಗ್ಯಪೂರ್ಣ ಜೀರ್ಣಕ್ರಿಯೆ ಮೂಲಕ ಬೊಜ್ಜು ನಿವಾರಣೆ ಸಾಧ್ಯ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ6 hours ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು2 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ3 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ4 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು4 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌