G20 Summit 2023: ಜಿ20 ವೇಳೆ ಗಮನ ಸೆಳೆದ ಕೊನಾರ್ಕ್‌ ಚಕ್ರ, ಬೈಡೆನ್‌ಗೂ ಪರಿಚಯ ಮಾಡಿದ ಮೋದಿ; ಏನಿದು? - Vistara News

ದೇಶ

G20 Summit 2023: ಜಿ20 ವೇಳೆ ಗಮನ ಸೆಳೆದ ಕೊನಾರ್ಕ್‌ ಚಕ್ರ, ಬೈಡೆನ್‌ಗೂ ಪರಿಚಯ ಮಾಡಿದ ಮೋದಿ; ಏನಿದು?

G20 Summit 2023: ನವದೆಹಲಿಯಲ್ಲಿರುವ ಭಾರತ ಮಂಟಪದಲ್ಲಿ ನರೇಂದ್ರ ಮೋದಿ ಅವರು ಜಾಗತಿಕ ನಾಯಕರನ್ನು ಆಹ್ವಾನಿಸಿದರು. ಇದೇ ವೇಳೆ ಮೋದಿ ನಿಂತ ಸ್ಥಳದಲ್ಲಿ ಅಳವಡಿಸಿದ ಕೊನಾರ್ಕ್‌ ಚಕ್ರದ ಪ್ರತಿಕೃತಿಯು ಎಲ್ಲರ ಗಮನ ಸೆಳೆಯಿತು.

VISTARANEWS.COM


on

Narendra Modi And Joe Biden Near Konark Wheel
ಜೋ ಬೈಡೆನ್‌ ಅವರಿಗೆ ಕೊನಾರ್ಕ್‌ ಚಕ್ರದ ಮಹತ್ವ ವಿವರಿಸಿದ ಪ್ರಧಾನಿ ಮೋದಿ.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಜಿ 20 ಶೃಂಗಸಭೆ ನಡೆಯುತ್ತಿರುವ ಭಾರತ ಮಂಟಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ನಾಯಕರನ್ನು ಸ್ವಾಗತಿಸಿದರು. ನಿಗದಿತ ಸ್ಥಳದಲ್ಲಿ ನಿಂತು ಒಬ್ಬೊಬ್ಬರೇ ನಾಯಕರನ್ನು ಮೋದಿ ಆತ್ಮೀಯವಾಗಿ ಸ್ವಾಗತಿಸಿದರು. ಇದೇ ವೇಳೆ ಮೋದಿ (G20 Summit 2023) ಅವರು ನಿಂತಿದ್ದ ಜಾಗದಲ್ಲಿ ಕೊನಾರ್ಕ್‌ ಚಕ್ರದ ಬೃಹತ್‌ ಚಿತ್ರವನ್ನು ಅಳವಡಿಸಿದ್ದು, ಅದು ಗಮನ ಸೆಳೆಯಿತು. ಹಾಗೆಯೇ, ನರೇಂದ್ರ ಮೋದಿ ಅವರು ಕೊನಾರ್ಕ್‌ ಚಕ್ರದ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರಿಗೂ ವಿವರಿಸಿದರು. ಹಾಗಾದರೆ, ಏನಿದು ಕೊನಾರ್ಕ್‌ ಚಕ್ರ? ಇದರ ಹಿನ್ನೆಲೆ, ವೈಶಿಷ್ಟ್ಯ ಏನಿದೆ ಎಂಬುದರ ಮಾಹಿತಿ ಇಲ್ಲಿದೆ.

ಏನಿದು ಕೊನಾರ್ಕ್‌ ಚಕ್ರ?

ಒಡಿಶಾದ ಪುರಿಯಲ್ಲಿರುವ ಸೂರ್ಯ ದೇವಾಲಯದಲ್ಲಿ ಕೊನಾರ್ಕ್‌ ಚಕ್ರವಿದೆ. ಚಕ್ರವನ್ನು 13ನೇ ಶತಮಾನದ ಗಂಗಾ ಸಾಮ್ರಾಜ್ಯದ ಅರಸ ನರಸಿಂಹದೇವ I ಅವರು ಇದನ್ನು ನಿರ್ಮಿಸಿದರು. ಕೊನಾರ್ಕ್‌ ಚಕ್ರವು ವಾಸ್ತುಶಿಲ್ಪದ ಶ್ರೇಷ್ಠತೆಯ ಸಂಕೇತವಾಗಿದೆ. ದೊಡ್ಡ ರಥದ ಮಾದರಿಯಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ. ಇದರಲ್ಲಿ ಚಕ್ರವನ್ನು ಕೆತ್ತಲಾಗಿದ್ದು, ಐತಿಹಾಸಿಕ ಪರಂಪರೆ ಹೊಂದಿದೆ.

ಬೈಡೆನ್‌ಗೆ ಚಕ್ರದ ಪರಿಚಯ ಮಾಡಿಸಿದ ಮೋದಿ

ಏನಿದರ ವಿಶೇಷ?

ಸೂರ್ಯ ದೇವಾಲಯವು ಸೂರ್ಯನ ರಥ ಎಂದೇ ಹೇಳಲಾಗುತ್ತದೆ. ಸುಮಾರು 24 ಚಕ್ರಗಳನ್ನು ಬಳಸಿ ದೇವಾಲಯವನ್ನು ರಥದ ಮಾದರಿಯಲ್ಲಿ ನಿರ್ಮಿಸಲಾಗಿದೆ. ಬಂಗಾಳ ಕೊಲ್ಲಿಯ ತೀರದಲ್ಲಿರುವ ಕ್ಲೊರೈಟ್‌ ಹಾಗೂ ಮರಳುಗಲ್ಲುಗಳನ್ನು ಬಳಸಿ, 12 ವರ್ಷ ಶ್ರಮ ವಹಿಸಿ ಇವುಗಳನ್ನು ನಿರ್ಮಿಸಲಾಗಿದೆ. ಸುಮಾರು 1,200 ಕುಶಲಕರ್ಮಿಗಳ ಶ್ರಮವು ಕೊನಾರ್ಕ್‌ ಚಕ್ರಗಳ ಕೆತ್ತನೆಯಲ್ಲಿ ಅಡಗಿದೆ.

ಇದನ್ನೂ ಓದಿ: G20 Summit 2023: ಜಿ20 ಶೃಂಗಸಭೆ; ನಾಯಕರ ನಿರ್ಣಯ ಅಂಗೀಕರಿಸಿದ ಮೋದಿ, ಮಹತ್ವದ ಘಟ್ಟದತ್ತ ಸಭೆ

ಕೊನಾರ್ಕ್‌ ಚಕ್ರಗಳನ್ನು ಚಲನಶೀಲತೆ, ಕಾಲಚಕ್ರ, ವಾಸ್ತುಶಿಲ್ಪ ಕಲೆಯ ಚಾಣಾಕ್ಷತನ ಎಂಬಂತೆ ಬಿಂಬಿಸಲಾಗುತ್ತದೆ. ಹಾಗೆಯೇ, ಇದನ್ನು ”ಜೀವನ ಚಕ್ರ” ಎಂದೂ ಹೇಳಲಾಗತ್ತದೆ. ಇದು ಪ್ರಜಾಪ್ರಭುತ್ವ ಚಕ್ರದ ಸಂಕೇತವೂ ಆಗಿರುವುದರಿಂದ ಅದರ ಪ್ರತಿಕೃತಿಯನ್ನು ಭಾರತ ಮಂಟಪದಲ್ಲಿ ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ. ಕೊನಾರ್ಕ್‌ ಚಕ್ರವು 9 ಅಡಿ ಸುತ್ತಳತೆಯನ್ನು ಹೊಂದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Lok Sabha Election: 6ನೇ ಹಂತದಲ್ಲಿ 59% ಮತದಾನ ; ಬಂಗಾಳದಲ್ಲಿ ವೋಟಿಂಗ್‌ ಹೆಚ್ಚು, ಹಿಂಸೆಯ ಕಿಚ್ಚು

Lok Sabha Election: ರಾಷ್ಟ್ರಪತಿ ದ್ರೌಪದಿ ಮುರ್ಮು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌, ಕ್ರಿಕೆಟಿಗ ಗೌತಮ್‌ ಗಂಭೀರ್‌, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ನಾಯಕ ರಾಹುಲ್‌ ಗಾಂಧಿ ಸೇರಿ ಹಲವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತದಾನ ಮಾಡಿದರು. ಇದರೊಂದಿಗೆ ಆರನೇ ಹಂತದ ಮತದಾನ ಮುಕ್ತಾಯಗೊಂಡಿದ್ದು, ಜೂನ್‌ 1ರಂದು ಏಳನೇ ಅಥವಾ ಕೊನೆಯ ಹಂತದ ಮತದಾನ ನಡೆಯಲಿದೆ.

VISTARANEWS.COM


on

Lok Sabha Election
Koo

ನವದೆಹಲಿ: ಲೋಕಸಭೆ ಚುನಾವಣೆಯು (Lok Sabha Election 2024) ಅಂತಿಮ ಹಂತಕ್ಕೆ ಬಂದಿದೆ. ಶನಿವಾರ ಆರನೇ ಹಂತದಲ್ಲಿ 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆದಿದ್ದು, ಸಂಜೆ 5 ಗಂಟೆ ಸುಮಾರಿಗೆ ಶೇ.59.05ರಷ್ಟು ಮತದಾನ (Voter Turnout) ನಡೆದಿದೆ. ದೆಹಲಿಯಲ್ಲಿ ಶೇ.54.48ರಷ್ಟು ಮತದಾನ ದಾಖಲಾದರೆ, ಪಶ್ಚಿಮ ಬಂಗಾಳದಲ್ಲಿ (West Bengal) 78.19ರಷ್ಟು ಮತದಾನ ದಾಖಲಾಗಿದೆ. ಆ ಮೂಲಕ ಆರನೇ ಹಂತದಲ್ಲಿ ಅತಿಹೆಚ್ಚು ಮತದಾನ ದಾಖಲಾದ ರಾಜ್ಯ ಎಂಬ ಖ್ಯಾತಿ ಪಶ್ಚಿಮ ಬಂಗಾಳದ್ದಾಗಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌, ಕ್ರಿಕೆಟಿಗ ಗೌತಮ್‌ ಗಂಭೀರ್‌, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ನಾಯಕ ರಾಹುಲ್‌ ಗಾಂಧಿ ಸೇರಿ ಹಲವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತದಾನ ಮಾಡಿದರು. ಇದರೊಂದಿಗೆ ಆರನೇ ಹಂತದ ಮತದಾನ ಮುಕ್ತಾಯಗೊಂಡಿದ್ದು, ಜೂನ್‌ 1ರಂದು ಏಳನೇ ಅಥವಾ ಕೊನೆಯ ಹಂತದ ಮತದಾನ ನಡೆಯಲಿದೆ. ಜೂನ್‌ 4ರಂದು ಸಾರ್ವತ್ರಿಕ ಚುನಾವಣೆ ಹಾಗೂ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.

ಯಾವ ರಾಜ್ಯದಲ್ಲಿ ಎಷ್ಟು ಮತದಾನ?

ರಾಜ್ಯಮತದಾನ ಪ್ರಮಾಣ
ಬಿಹಾರ53.30%
ಹರಿಯಾಣ58.37%
ಜಮ್ಮು-ಕಾಶ್ಮೀರ52.28%
ಜಾರ್ಖಂಡ್62.74%
ದೆಹಲಿ54.48%
ಒಡಿಶಾ60.07%
ಉತ್ತರ ಪ್ರದೇಶ54.03%
ಪಶ್ಚಿಮ ಬಂಗಾಳ78.19%

ಯಾವ ರಾಜ್ಯಗಳ ಎಷ್ಟು ಕ್ಷೇತ್ರಗಳಲ್ಲಿ ಮತದಾನ?

ಆರನೇ ಹಂತದಲ್ಲಿ 5.84 ಕೋಟಿ ಪುರುಷರು, 5.29 ಕೋಟಿ ಮಹಿಳೆಯರು, 5120 ತೃತೀಯ ಲಿಂಗಿಗಳು ಸೇರಿ ಒಟ್ಟು 11.13 ಕೋಟಿ ಮತದಾರರು ನೋಂದಣಿ ಮಾಡಿಕೊಂಡಿದ್ದರು. 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 58 ಕ್ಷೇತ್ರಗಳಿಗೆ ಮತದಾನ ನಡೆದಿದೆ. ಬಿಹಾರದ 8 ಸ್ಥಾನಗಳು, ಹರಿಯಾಣದ ಎಲ್ಲ 10 ಸ್ಥಾನ, ಜಾರ್ಖಂಡ್‌ 4, ಜಮ್ಮು-ಕಾಶ್ಮೀರ 1, ದೆಹಲಿಯ ಎಲ್ಲ 7 ಸ್ಥಾನ, ಒಡಿಶಾ 6, ಉತ್ತರ ಪ್ರದೇಶ 14 ಹಾಗೂ ಪಶ್ಚಿಮ ಬಂಗಾಳದ 8 ಕ್ಷೇತ್ರಗಳಲ್ಲಿ ವೋಟಿಂಗ್‌ ನಡೆದಿದೆ. ಒಟ್ಟು 889 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿ ಇದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ

ಪಶ್ಚಿಮ ಬಂಗಾಳದಲ್ಲಿ ಎಂದಿನಂತೆ ಕೆಲವೆಡೆ ಹಿಂಸಾಚಾರ ನಡೆದಿದೆ. ಅದರಲ್ಲೂ ಝಾರ್‌ಗ್ರಾಮ್‌ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಣತ್‌ ತುಡು ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮಂಗಳಪೋಟಾ ಗ್ರಾಮದಲ್ಲಿ ಅವರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಭದ್ರತಾ ಸಿಬ್ಬಂದಿಯು ಅವರಿಗೆ ಭದ್ರತೆ ಒದಗಿಸಿದರೂ, ಕೆಲ ದುಷ್ಕರ್ಮಿಗಳು ಅವರನ್ನು ಬೆನ್ನತ್ತಿ, ಅವರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಪ್ರಣತ್‌ ತುಡು, ಭದ್ರತಾ ಸಿಬ್ಬಂದಿ ಹಾಗೂ ಪತ್ರಕರ್ತರು ಓಡಿ ಹೋಗುವ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: Narendra Modi: 10 ವರ್ಷ ಬಲಿಷ್ಠ ಪ್ರತಿಪಕ್ಷ ಇರಲಿಲ್ಲ ಎಂಬುದೇ ನೋವು ತಂದಿದೆ; ಮೋದಿ ಬೇಸರ

Continue Reading

ದೇಶ

ಚಲಿಸುತ್ತಿದ್ದ ಟ್ರಕ್‌ ಹಿಂದೆ ಬೈಕ್‌ ಚೇಸ್‌ ಮಾಡಿ ಹಾಲಿವುಡ್ ಸಿನಿಮಾ ಸ್ಟೈಲಲ್ಲಿ ಕಳ್ಳತನ; ರೋಚಕ Video ಇಲ್ಲಿದೆ!

ಮಧ್ಯಪ್ರದೇಶದ ಆಗ್ರಾ-ಮುಂಬೈ ಹೆದ್ದಾರಿಯ ದೆವಾಸ್-ಶಾಜಾಪುರ್‌ ರಸ್ತೆಯಲ್ಲಿ ಟ್ರಕ್‌ ಒಂದು ಚಲಿಸುತ್ತಿರುತ್ತಿದೆ. ವೇಗವಾಗಿ ಚಲಿಸುತ್ತಿದ್ದ ಟ್ರಕ್‌ ಹಿಂದೆ ಬೈಕ್‌ ವೇಗವಾಗಿ ಚಲಿಸುತ್ತದೆ. ಇದೇ ವೇಳೆ ಕಳ್ಳನೊಬ್ಬನು ಹಾಗೆಯೇ ಟ್ರಕ್‌ ಹತ್ತುತ್ತಾನೆ. ಬೆಲೆ ಬಾಳುವ ವಸ್ತುಗಳ ಮೂಟೆಯೊಂದನ್ನು ಅಲ್ಲಿಂದ ಕೆಳಗೆ ಎಸೆಯುತ್ತಾನೆ. ಅದಾದ ನಂತರ, ಚಲಿಸುತ್ತಿರುವ ಟ್ರಕ್‌ನಿಂದಲೇ ಚಲಿಸುತ್ತಿರುವ ಬೈಕ್‌ ಮೇಲೆ ಇಳಿಯುತ್ತಾನೆ. ಆತನು ಬೈಕ್‌ ಹತ್ತಲು ಉಳಿದ ಇಬ್ಬರು ಸಹಾಯ ಮಾಡುತ್ತಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

VISTARANEWS.COM


on

Viral Video
Koo

ಭೋಪಾಲ್‌: ಚಲಿಸುತ್ತಿರುವ ವಾಹನದಿಂದಲೇ ಕಳ್ಳತನ ಮಾಡುವುದು, ಸಿಸಿಟಿವಿ, ಸೆಕ್ಯುರಿಟಿ ಇದ್ದರೂ ಬ್ಯಾಂಕ್‌ ದರೋಡೆ ಮಾಡುವುದು ಸೇರಿ ಹಲವು ಭೀಕರ ಕಳ್ಳತನಗಳನ್ನು ಸಿನಿಮಾಗಳಲ್ಲಿ ನೋಡಿರುತ್ತೇವೆ. ಆದರೆ, ಮಧ್ಯಪ್ರದೇಶದಲ್ಲಿ (Madhya Pradesh) ಹಾಲಿವುಡ್‌ ಸಿನಿಮಾ ರೀತಿಯಲ್ಲಿಯೇ ಮೂವರು ಕಳ್ಳರು ಚಲಿಸುತ್ತಿದ್ದ ಟ್ರಕ್‌ನಿಂದ ಬೆಲೆ ಬಾಳುವ ವಸ್ತುಗಳನ್ನು ಕದ್ದಿದ್ದಾರೆ. ಚಲಿಸುತ್ತಿದ್ದ ಟ್ರಕ್‌ಅನ್ನು ಬೈಕ್‌ ಮೇಲೆಯೇ ಚೇಸ್‌ ಮಾಡಿದ ಕಳ್ಳರು ಭಾರಿ ಪ್ರಮಾಣದ ವಸ್ತುಗಳನ್ನು ಕದ್ದಿದ್ದಾರೆ. ಸಿನಿಮೀಯ ರೀತಿಯ ಕಳ್ಳತನದ ವಿಡಿಯೊ (Viral Video) ಈಗ ಭಾರಿ ವೈರಲ್‌ ಆಗಿದೆ. ‌

ಹೌದು, ಆಗ್ರಾ-ಮುಂಬೈ ಹೆದ್ದಾರಿಯ ದೆವಾಸ್-ಶಾಜಾಪುರ್‌ ರಸ್ತೆಯಲ್ಲಿ ಟ್ರಕ್‌ ಒಂದು ಚಲಿಸುತ್ತಿರುತ್ತಿದೆ. ವೇಗವಾಗಿ ಚಲಿಸುತ್ತಿದ್ದ ಟ್ರಕ್‌ ಹಿಂದೆ ಬೈಕ್‌ ವೇಗವಾಗಿ ಚಲಿಸುತ್ತದೆ. ಇದೇ ವೇಳೆ ಕಳ್ಳನೊಬ್ಬನು ಹಾಗೆಯೇ ಟ್ರಕ್‌ ಹತ್ತುತ್ತಾನೆ. ಬೆಲೆ ಬಾಳುವ ವಸ್ತುಗಳ ಮೂಟೆಯೊಂದನ್ನು ಅಲ್ಲಿಂದ ಕೆಳಗೆ ಎಸೆಯುತ್ತಾನೆ. ಅದಾದ ನಂತರ, ಚಲಿಸುತ್ತಿರುವ ಟ್ರಕ್‌ನಿಂದಲೇ ಚಲಿಸುತ್ತಿರುವ ಬೈಕ್‌ ಮೇಲೆ ಇಳಿಯುತ್ತಾನೆ. ಆತನು ಬೈಕ್‌ ಹತ್ತಲು ಉಳಿದ ಇಬ್ಬರು ಸಹಾಯ ಮಾಡುತ್ತಾರೆ. ಸ್ವಲ್ಪ ಸಮತೋಲನ ತಪ್ಪಿದರೂ ಬಿದ್ದು ಮೃತಪಡುವ ಸಾಧ್ಯತೆಗಳು ಜಾಸ್ತಿ ಇದ್ದರೂ ಸಿನಿಮೀಯ ರೀತಿಯಲ್ಲಿ ಮೂವರು ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ.

ವಿಡಿಯೊ ವೈರಲ್‌ ಆಗುತ್ತಲೇ ನೂರಾರು ಜನ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. “ಯಾವ ಸಿನಿಮಾದ ದೃಶ್ಯ ಇದು” ಎಂದು ಒಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ. “ಅವರ ಬ್ಯಾಲೆನ್ಸ್‌, ಧೈರ್ಯ, ಚಾಣಾಕ್ಷತನವನ್ನು ಖಂಡಿತವಾಗಿಯೂ ಮೆಚ್ಚಬೇಕು. ಇವರ ಕೌಶಲಗಳು ಎಲ್ಲರಿಗೂ ಬರುವುದಿಲ್ಲ” ಎಂದು ಮತ್ತೊಬ್ಬರು ಕಳ್ಳರ ಸಾಹಸವನ್ನು ಕೊಂಡಾಡಿದ್ದಾರೆ. “ಹೆದ್ದಾರಿಗಳಲ್ಲಿ ಸಂಚರಿಸುವವರಿಗೆ ಇಂತಹ ಕಳ್ಳರು ಅಪಾಯಕಾರಿ. ಮೂವರನ್ನೂ ಒದ್ದು ಒಳಗೆ ಹಾಕಬೇಕು” ಎಂಬುದಾಗಿ ಇನ್ನೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗೆ, ಕಳ್ಳರ ಸಾಹಸವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವಿಶ್ಲೇಷಿಸಿದ್ದಾರೆ.

ವಿಡಿಯೊ ವೈರಲ್‌ ಆಗುತ್ತಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅವರು ಟ್ರಕ್‌ನಿಂದ ಯಾವೆಲ್ಲ ವಸ್ತುಗಳನ್ನು ಎಗರಿಸಿದರು ಎಂಬುದರ ಕುರಿತು ಇದುವರೆಗೆ ಯಾವುದೇ ಮಾಹಿತಿ ಇಲ್ಲ. ಹೆದ್ದಾರಿಗಳಲ್ಲಿ ಬೆಲೆ ಬಾಳುವ ವಸ್ತುಗಳನ್ನು ತುಂಬಿಕೊಂಡು ಸಾವಿರಾರು ಟ್ರಕ್‌ಗಳು ಚಲಿಸುತ್ತಲೇ ಇರುತ್ತವೆ. ಹೀಗೆ, ಸಿನಿಮಾ ರೀತಿಯಲ್ಲಿ ಸ್ಟಂಟ್‌ ಮಾಡಿ, ಆ ವಸ್ತುಗಳನ್ನು ಕಳ್ಳತನ ಮಾಡಿದರೆ, ಯಾರೂ ಟ್ರಕ್‌ಗಳ ಮೂಲಕ ವಸ್ತುಗಳನ್ನು ಸಾಗಿಸಲು ಧೈರ್ಯ ಮಾಡುವುದಿಲ್ಲ. ಇಂತಹ ಪ್ರಕರಣಗಳನ್ನು ಗಂಭೀರವಾಗ ಪರಿಗಣಿಸಿ, ಅಪರಾಧಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

ಇದನ್ನೂ ಓದಿ: Viral Video: ಚಲಿಸುವ ಬೈಕ್​ನಲ್ಲಿ ಆಲಿಂಗನ, ಬಿಸಿ ಚುಂಬನ; ಲಜ್ಜೆಯಿಲ್ಲದ ಜೋಡಿಯ ಸ್ಟಂಟ್​ ವಿಡಿಯೊ ವೈರಲ್​

Continue Reading

ದೇಶ

IndiGo Flight: ಗಾಂಜಾ ಮತ್ತಿನಲ್ಲಿ ಹಾರುತ್ತಿದ್ದ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ ಕಿಡಿಗೇಡಿ; ಮುಂದೇನಾಯ್ತು?

IndiGo Flight: ಗಾಂಜಾ ಸೇದಿದ ಮತ್ತಿನಲ್ಲಿ ಪ್ರಯಾಣಿಕನು ಹುಚ್ಚಾಟ ಮಾಡಿದ್ದಾನೆ. ಹೈದರಾಬಾದ್‌ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನವು ಇನ್ನೇನು ಲ್ಯಾಂಡ್‌ ಆಗಬೇಕು ಎನ್ನುವಷ್ಟರಲ್ಲಿ 29 ವರ್ಷದ ವ್ಯಕ್ತಿಯು ಬಾಗಿಲು ತೆರೆಯಲು ಯತ್ನಿಸಿದ್ದಾನೆ. ಮೇ 21ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಂದೋರ್‌ಗೆ ಯಾತ್ರೆಗೆಂದು ತೆರಳಿದ್ದ ವ್ಯಕ್ತಿಯು ಹೈದರಾಬಾದ್‌ಗೆ ಹೊರಟಿದ್ದ. ಇದೇ ವೇಳೆ ಆತನು ಗಾಂಜಾದ ಮತ್ತಿನಲ್ಲಿ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ್ದಾನೆ.

VISTARANEWS.COM


on

Indigo Flight
Koo

ಹೈದರಾಬಾದ್:‌ ಹಾರುತ್ತಿರುವ ವಿಮಾನದಲ್ಲಿ ಸಹ ಪ್ರಯಾಣಿಕರಿಗೆ ತೊಂದರೆ ಕೊಡುವುದು, ಗಗನಸಖಿಯರ ಜತೆ ಅನುಚಿತವಾಗಿ ವರ್ತಿಸುವುದು, ಪ್ರೇಮಿಗಳಿಬ್ಬರು ರೊಮ್ಯಾನ್ಸ್‌ ಮಾಡುವುದು, ಎಮರ್ಜೆನ್ಸಿ ಬಾಗಿಲು ತೆರೆಯುವುದು ಸೇರಿ ಪ್ರಯಾಣಿಕರು ಹಲವು ರೀತಿಯ ದುರ್ವರ್ತನೆ ತೋರುವ ಪ್ರಕರಣಗಳು ಇತ್ತೀಚೆಗೆ ಜಾಸ್ತಿಯಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಹೈದರಾಬಾದ್‌ನಲ್ಲಿ (Hyderabad) ಹಾರುತ್ತಿದ್ದ ಇಂಡಿಗೋ ವಿಮಾನದ (IndiGo Flight) ಬಾಗಿಲು ತೆರೆಯಲು ಪ್ರಯಾಣಿಕನೊಬ್ಬ (Flight Passenger) ಯತ್ನಿಸಿದ್ದು, ಇದರಿಂದ ಕೆಲ ಕಾಲ ಆತಂಕವಾದ ವಾತಾವರ್ಣ ನಿರ್ಮಾಣವಾಗಿತ್ತು ಎಂದು ತಿಳಿದುಬಂದಿದೆ.

ಹೌದು, ಗಾಂಜಾ ಸೇದಿದ ಮತ್ತಿನಲ್ಲಿ ಪ್ರಯಾಣಿಕನು ಹುಚ್ಚಾಟ ಮಾಡಿದ್ದಾನೆ. ಹೈದರಾಬಾದ್‌ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನವು ಇನ್ನೇನು ಲ್ಯಾಂಡ್‌ ಆಗಬೇಕು ಎನ್ನುವಷ್ಟರಲ್ಲಿ 29 ವರ್ಷದ ವ್ಯಕ್ತಿಯು ಬಾಗಿಲು ತೆರೆಯಲು ಯತ್ನಿಸಿದ್ದಾನೆ. ಮೇ 21ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಂದೋರ್‌ಗೆ ಯಾತ್ರೆಗೆಂದು ತೆರಳಿದ್ದ ವ್ಯಕ್ತಿಯು ಹೈದರಾಬಾದ್‌ಗೆ ಹೊರಟಿದ್ದ. ಇದೇ ವೇಳೆ ಆತನು ಗಾಂಜಾದ ಮತ್ತಿನಲ್ಲಿ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ್ದಾನೆ. ವಿಮಾನವು ರಾಜೀವ್‌ ಗಾಂಧಿ ಇಂಟರ್‌ನ್ಯಾಷನ್‌ ಏರ್‌ಪೋರ್ಟ್‌ಗೆ ಆಗಮಿಸುತ್ತಲೇ ಆರೋಪಿಯನ್ನು ಬಂಧಿಸಲಾಗಿದೆ.

ಏರ್‌ಪೋರ್ಟ್‌ನಲ್ಲಿ ವಿಮಾನವನ್ನು ಲ್ಯಾಂಡ್‌ ಮಾಡಲು ಪೈಲಟ್‌ಗಳು ತೀರ್ಮಾನಿಸಿದ್ದರು. ಎಲ್ಲರೂ ಸೀಟ್‌ಬೆಲ್ಟ್‌ ಧರಿಸಿ, ಎದ್ದು ತಿರುಗಾಡಬೇಡಿ ಎಂಬುದಾಗಿ ಸಿಬ್ಬಂದಿಯು ಸೂಚಿಸಿದ್ದರು. ಹೀಗಿದ್ದರೂ ವ್ಯಕ್ತಿಯು ಗಾಂಜಾದ ಮತ್ತಿನಲ್ಲಿ ಎದ್ದು ಹೋಗಿ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ್ದಾನೆ. ಆಗ ವಿಮಾನದ ಸಿಬ್ಬಂದಿಯು ಎಷ್ಟು ಎಚ್ಚರಿಸಿದರೂ ಕೇಳಿದರೂ ಬಾಗಿಲು ಬಳಿ ತೆರಳಿದ್ದಾನೆ. ಕೂಡಲೇ ವಿಮಾನದ ಸಿಬ್ಬಂದಿಯು ಆತನನ್ನು ಬೇರೊಂದು ಆಸನದಲ್ಲಿ ಕೂರಿಸಿದ್ದಾರೆ. ಇದಾದ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

ವಿಮಾನದಲ್ಲಿ ಸಿಬ್ಬಂದಿ ಜತೆ ಪ್ರಯಾಣಿಕರು ಅನುಚಿತವಾಗಿ ವರ್ತಿಸುವ, ಜಗಳವಾಡುತ್ತಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಕೆಲ ತಿಂಗಳ ಹಿಂದಷ್ಟೇ, ಲಂಡನ್‌ನಿಂದ ಮುಂಬೈ ಏರ್ ಇಂಡಿಯಾ ವಿಮಾನದ ಪ್ರಯಾಣಿಕರೊಬ್ಬರು ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿದ್ದರು. ಅವರ ಈ ಅಶಿಸ್ತಿನ ವರ್ತನೆಗಾಗಿ ಪ್ರಕರಣ ದಾಖಲಾಗಿತ್ತು. ಇನ್ನು 2022ರ ನವೆಂಬರ್‌ನಲ್ಲಿ ಸಹ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಪ್ರಕರಣದಲ್ಲಿ ನಿಯಮಗಳನ್ನು ಅನುಸರಿಸಲು ವಿಫಲವಾದ ಕಾರಣ ಏರ್ ಇಂಡಿಯಾಗೆ ಸಂಸ್ಥೆಗೆ 30 ಲಕ್ಷ ರೂ. ದಂಡ ವಿಧಿಸಲಾಯಿತು. ನವೆಂಬರ್ 26 ರಂದು ನ್ಯೂಯಾರ್ಕ್-ದಿಲ್ಲಿ ವಿಮಾನದಲ್ಲಿ ಶಂಕರ್ ಮಿಶ್ರಾ ಎಂಬ ಪ್ರಯಾಣಿಕರು ಕುಡಿದ ಅಮಲಿನಲ್ಲಿ ವಯಸ್ಸಾದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು. ಈ ಪ್ರಕರಣ ಭಾರಿ ಸುದ್ದಿ ಮಾಡಿತ್ತು.

ಇದನ್ನೂ ಓದಿ: Flight Turbulence: ನೀವಿದ್ದ ವಿಮಾನ ಪ್ರಕ್ಷುಬ್ಧತೆಗೊಳಗಾದರೆ ಏನು ಮಾಡುತ್ತೀರಿ? ಇಲ್ಲಿದೆ ಪೈಲಟ್‌ಗಳ ಸಲಹೆ

Continue Reading

ದೇಶ

Fire Accident: ಗೇಮಿಂಗ್‌ ಜೋನ್‌ನಲ್ಲಿ ಅಗ್ನಿ ದುರಂತ; ಮಹಿಳೆಯರು, ಮಕ್ಕಳು ಸೇರಿ 24 ಮಂದಿ ದಾರುಣ ಸಾವು

Fire Accident: ಗೇಮಿಂಗ್‌ ಜೋನ್‌ ಕಟ್ಟಡದಲ್ಲಿ ನೂರಾರು ಮಕ್ಕಳು ಹಾಗೂ ಅವರ ತಾಯಂದಿರು ಇದ್ದರು. ವೀಕೆಂಡ್‌ ಇರುವ ಕಾರಣ ಮಕ್ಕಳು ಆಟವಾಡಲಿ ಎಂಬುದಾಗಿ ಟಿಆರ್‌ಪಿ ಗೇಮಿಂಗ್‌ ಜೋನ್‌ಗೆ ಕರೆದುಕೊಂಡು ಹೋಗಿದ್ದರು. ಇದೇ ವೇಳೆ ಏಕಾಏಕಿ ಅಗ್ನಿದುರಂತ ಸಂಭವಿಸಿದ ಕಾರಣ 24 ಜನ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

VISTARANEWS.COM


on

Fire Accident
Koo

ಗಾಂಧಿನಗರ:‌ ಗುಜರಾತ್‌ನ ರಾಜ್‌ಕೋಟ್‌ (Rajkot) ನಗರದಲ್ಲಿರುವ ಗೇಮಿಂಗ್‌ ಜೋನ್‌ (Gaming Zone) ಒಂದರಲ್ಲಿ ಶನಿವಾರ (ಮೇ 25) ಸಂಜೆ ಭೀಕರ ಅಗ್ನಿ ದುರಂತ (Fire Accident) ಸಂಭವಿಸಿದ್ದು, ಮಹಿಳೆಯರು, ಮಕ್ಕಳು ಸೇರಿ 24 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಏಕಾಏಕಿ ಹೊತ್ತಿಕೊಂಡ ಬೆಂಕಿಯು ಇಡೀ ಕಟ್ಟಡದ ತುಂಬ ಆವರಿಸಿಕೊಂಡಿದ್ದು, ಇನ್ನೂ ಹಲವರು ಅಗ್ನಿಯ ಕೆನ್ನಾಲಗೆಯಲ್ಲಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ಅಗ್ನಿಶಾಮಕ ದಳದ ಸಿಬ್ಬಂದಿಯು ಬೆಂಕಿ ನಂದಿಸಲು ಇನ್ನಿಲ್ಲದ ಹರಸಾಹಸ ಪಡುತ್ತಿದ್ದಾರೆ.

ಗೇಮಿಂಗ್‌ ಜೋನ್‌ ಕಟ್ಟಡದಲ್ಲಿ ನೂರಾರು ಮಕ್ಕಳು ಹಾಗೂ ಅವರ ತಾಯಂದಿರು ಇದ್ದರು. ವೀಕೆಂಡ್‌ ಇರುವ ಕಾರಣ ಮಕ್ಕಳು ಆಟವಾಡಲಿ ಎಂಬುದಾಗಿ ಟಿಆರ್‌ಪಿ ಗೇಮಿಂಗ್‌ ಜೋನ್‌ಗೆ ಕರೆದುಕೊಂಡು ಹೋಗಿದ್ದರು. ಇದೇ ವೇಳೆ ಏಕಾಏಕಿ ಅಗ್ನಿದುರಂತ ಸಂಭವಿಸಿದ ಕಾರಣ 24 ಜನ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಲ್ಲಿ ಮಹಿಳೆಯರು ಹಾಗೂ ಮಕ್ಕಳು ಕೂಡ ಸೇರಿದ್ದಾರೆ. ಘಟನೆ ಸಂಭವಿಸುತ್ತಲೇ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದುವರೆಗೆ 15-20 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

“ಗೇಮಿಂಗ್‌ ಜೋನ್‌ನಲ್ಲಿ ಅಗ್ನಿ ದುರಂತ ಸಂಭವಿಸಲು ನಿಖರ ಕಾರಣ ತಿಳಿದುಬಂದಿಲ್ಲ. ಅಗ್ನಿಯನ್ನು ನಂದಿಸಲು ಸಿಬ್ಬಂದಿಯು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಆದಾಗ್ಯೂ, ಬೆಂಕಿಯಲ್ಲಿ ಎಷ್ಟು ಜನ ಸಿಲುಕಿದ್ದಾರೆ? ಇನ್ನೂ ಎಷ್ಟು ಜನ ಕಾಣೆಯಾಗಿದ್ದಾರೆ ಎಂಬುದರ ಕುರಿತು ನಿಖರ ಮಾಹಿತಿ ದೊರೆತಿಲ್ಲ. ಗಾಳಿಯ ತೀವ್ರತೆ ಹಾಗೂ ಬೆಂಕಿಯ ಹಿನ್ನೆಲೆಯಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದ ಕಾರಣ ರಕ್ಷಣಾ ಕಾರ್ಯಾಚರಣೆಯು ಕ್ಷಿಪ್ರವಾಗಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ” ಎಂಬುದಾಗಿ ಅಗ್ನಿಶಾಮಕ ದಳದ ಅಧಿಕಾರಿ ಐ.ವಿ.ಖೇರ್‌ ಅವರು ಮಾಹಿತಿ ನೀಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಪಟಾಕಿ ಕಾರ್ಖಾನೆಯೊಂದರಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, 11 ಮಂದಿ ಮೃತಪಟ್ಟಿದ್ದರು. ಘಟನೆಯಲ್ಲಿ ಸುಮಾರು 15 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ದೊಂಬಿವಿಲಿ ಬಳಿಯ ಎಂಐಡಿಸಿ ಫೇಸ್‌ 2ರಲ್ಲಿರುವ ಕಾರ್ಖಾನೆಯಲ್ಲಿ ಕಾರ್ಮಿಕರು ಗುರುವಾರ (ಮೇ 23) ಮಧ್ಯಾಹ್ನ ಕೆಲಸ ಮಾಡುವಾಗಲೇ ಬಾಯ್ಲರ್‌ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದಾದ ಕ್ಷಣಮಾತ್ರದಲ್ಲೇ ಭೀಕರ ಸ್ಫೋಟ ಸಂಭವಿಸಿತ್ತು ಎಂದು ಮೂಲಗಳು ತಿಳಿಸಿದ್ದವು.

ಇದನ್ನೂ ಓದಿ: Fire Tragedy: ಹೋಟೆಲ್‌ನಲ್ಲಿ ಭೀಕರ ಅಗ್ನಿ ದುರಂತ; 6 ಮಂದಿ ಸಾವು

Continue Reading
Advertisement
childrens summer camp closing ceremony at yallapur
ಉತ್ತರ ಕನ್ನಡ30 mins ago

Uttara Kannada News: ಭಾರತದ ಭವಿಷ್ಯ ಸಣ್ಣ ಸಣ್ಣ ಊರುಗಳಲ್ಲಿದೆ: ಹರಿಪ್ರಕಾಶ್‌ ಕೋಣೆಮನೆ

Hardik Pandya
ಪ್ರಮುಖ ಸುದ್ದಿ32 mins ago

Hardik Pandya : ಮೊದಲ ಲವ್​ ಬ್ರೇಕ್​ಅಪ್​ ಮಾಡಿಕೊಂಡಿದ್ದ ಪಾಂಡ್ಯ; ಇಲ್ಲಿದೆ ಆರಂಭದ ಪ್ರೇಮ ಕಹಾನಿ!

Siddaramaiah
ಕರ್ನಾಟಕ41 mins ago

Siddaramaiah: ನೀವು 2 ಸಾವಿರ ಕೊಟ್ಟಿದ್ದಕ್ಕೆ ದೇವರ ದರ್ಶನ; ಧರ್ಮಸ್ಥಳದಲ್ಲಿ ಸಿದ್ದರಾಮಯ್ಯಗೆ ಸ್ತ್ರೀಯರ ಮೆಚ್ಚುಗೆ

Shikhar Dhawan
ಪ್ರಮುಖ ಸುದ್ದಿ60 mins ago

Shikhar Dhawan : ಶಿಖರ್ ಧವನ್ ಮಿಥಾಲಿ ರಾಜ್ ಮದುವೆ? ಬಗ್ಗೆ ಮೌನ ಮುರಿದ ಭಾರತದ ಸ್ಟಾರ್

Union Minister Pralhad Joshi statement about Prajwal revanna case
ಕರ್ನಾಟಕ1 hour ago

Pralhad Joshi: ಸಿಎಂ ಪತ್ರ ಬರೆದು ರಾಜಕಾರಣ ಮಾಡಿದರೆ ಪ್ರಜ್ವಲ್ ಪಾಸ್‌ಪೋರ್ಟ್ ರದ್ದಾಗಲ್ಲ: ಪ್ರಲ್ಹಾದ್‌ ಜೋಶಿ

opposition of the girl friend family to the marriage Suicide of a offended lover
ಕ್ರೈಂ1 hour ago

Self Harming: ಮದುವೆಗೆ ಪ್ರೇಯಸಿ ಕುಟುಂಬಸ್ಥರ ವಿರೋಧ; ನೊಂದ ಪ್ರಿಯಕರ ಆತ್ಮಹತ್ಯೆ

International Suryamitra Annual Award Ceremony on 27th May
ಕರ್ನಾಟಕ1 hour ago

Selco India: ಬೆಂಗಳೂರಿನಲ್ಲಿ ಮೇ 27ರಂದು ಅಂತಾರಾಷ್ಟ್ರೀಯ ಸೂರ್ಯಮಿತ್ರ ವಾರ್ಷಿಕ ಪ್ರಶಸ್ತಿ ಪ್ರದಾನ

Engineers suspended
ಕರ್ನಾಟಕ1 hour ago

Engineers Suspended: ಸರ್ಕಾರಿ ಐಬಿಯಲ್ಲಿ ಕುಡಿದು ಮಜಾ ಮಾಡಿದ್ದ ಐವರು ಜಿಪಂ ಎಂಜಿನಿಯರ್‌ಗಳ ಅಮಾನತು

Lok Sabha Election
ದೇಶ2 hours ago

Lok Sabha Election: 6ನೇ ಹಂತದಲ್ಲಿ 59% ಮತದಾನ ; ಬಂಗಾಳದಲ್ಲಿ ವೋಟಿಂಗ್‌ ಹೆಚ್ಚು, ಹಿಂಸೆಯ ಕಿಚ್ಚು

Lockup Death
ಕರ್ನಾಟಕ2 hours ago

Lockup Death: ಚನ್ನಗಿರಿ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ; 10 ಮಂದಿ ವಶಕ್ಕೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ7 hours ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ3 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ4 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು4 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು4 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ5 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ6 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ6 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ6 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

ಟ್ರೆಂಡಿಂಗ್‌