Israel Palestine War: ಗಾಜಾ ನಿರಾಶ್ರಿತರ ಕೇಂದ್ರದ ಮೇಲೆ ಇಸ್ರೇಲ್‌ ದಾಳಿ; 68 ಜನ ಸಾವು - Vistara News

ಪ್ರಮುಖ ಸುದ್ದಿ

Israel Palestine War: ಗಾಜಾ ನಿರಾಶ್ರಿತರ ಕೇಂದ್ರದ ಮೇಲೆ ಇಸ್ರೇಲ್‌ ದಾಳಿ; 68 ಜನ ಸಾವು

Israel Palestine War: ಗಾಜಾ ನಗರದ ಮೇಲೆ ಸಮರ ಸಾರಿರುವ ಇಸ್ರೇಲ್‌ ಪಡೆಗಳು ಆಸ್ಪತ್ರೆ, ಆಂಬುಲೆನ್ಸ್‌, ನಿರಾಶ್ರಿತರ ಕೇಂದ್ರಗಳನ್ನು ಗುರಿಯಾಗಿಸಿಯೂ ದಾಳಿ ನಡೆಸುತ್ತಿದೆ.

VISTARANEWS.COM


on

Israel Attack On Gaza
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗಾಜಾ: ಹಮಾಸ್‌ ಉಗ್ರರನ್ನು ನಿರ್ನಾಮ ಮಾಡಿಯೇ ಸಿದ್ಧ ಎಂದು ಶಪಥ ಮಾಡಿರುವ ಇಸ್ರೇಲ್‌ ಸೇನೆ (Israel Palestine War) ಈಗ ಗಾಜಾ ನಗರದಲ್ಲಿರುವ ಆಸ್ಪತ್ರೆ, ಶಾಲೆ, ಆಂಬುಲೆನ್ಸ್‌, ನಿರಾಶ್ರಿತರ ಕೇಂದ್ರಗಳ (Refugee Camp) ಮೇಲೆ ದಾಳಿ ನಡೆಸುತ್ತಿದೆ. ಶನಿವಾರ (ನವೆಂಬರ್‌ 5) ರಾತ್ರಿ ಗಾಜಾ ನಗರದಲ್ಲಿರುವ (Gaza City) ನಿರಾಶ್ರಿತ ಕೇಂದ್ರದ ಮೇಲೆ ಇಸ್ರೇಲ್‌ ಬಾಂಬ್‌ (Israel Attack) ದಾಳಿ ನಡೆಸಿದ್ದು, 68 ಜನ ಮೃತಪಟ್ಟಿದ್ದಾರೆ. ಇಸ್ರೇಲ್‌ ದಾಳಿಯನ್ನು ಅರಬ್‌ ರಾಷ್ಟ್ರಗಳು ಖಂಡಿಸಿವೆ.

“ಗಾಜಾ ನಗರದಲ್ಲಿರುವ ಮಘಾಜಿ ನಿರಾಶ್ರಿತರ ಕೇಂದ್ರದ ಮೇಲೆ ಇಸ್ರೇಲ್‌ ರಾತ್ರೋರಾತ್ರಿ ಬಾಂಬ್‌ ದಾಳಿ ನಡೆಸಿದೆ. ದಾಳಿಯಲ್ಲಿ ಹಿರಿಯರು, ಮಹಿಳೆಯರು ಹಾಗೂ ಮಕ್ಕಳು ಸೇರಿ 68 ಮಂದಿ ಮೃತಪಟ್ಟಿದ್ದಾರೆ. ಹಾಗೆಯೇ, ನೂರಾರು ಜನ ಗಾಯಗೊಂಡಿದ್ದಾರೆ” ಎಂದು ಪ್ಯಾಲೆಸ್ತೀನ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎರಡು ದಿನದ ಹಿಂದಷ್ಟೇ ಗಾಜಾ ನಗರದ ಆಸ್ಪತ್ರೆ ಮೇಲೆ ನಡೆಸಿದ ದಾಳಿಯಲ್ಲಿ 15 ಜನ, ಶಾಲೆ ಮೇಲೆ ನಡೆಸಿದ ದಾಳಿಯಲ್ಲಿ 20 ಮಂದಿ ಮೃತಪಟ್ಟಿದ್ದರು.

ದಾಳಿಯ ಭೀಕರ ಚಿತ್ರಗಳು

ಹಮಾಸ್‌ ಉಗ್ರರನ್ನು ನಿರ್ನಾಮ ಮಾಡದೆ ಬಿಡುವುದಿಲ್ಲ ಎಂದು ಶಪಥ ಮಾಡಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಮತ್ತೆ ಕದನ ವಿರಾಮದ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಗಾಜಾ ನಗರದಲ್ಲಿ ಕದನ ವಿರಾಮ ಘೋಷಿಸಬೇಕು ಎಂಬ ಅಮೆರಿಕ ಪ್ರಸ್ತಾಪವನ್ನು ನೆತನ್ಯಾಹು ತಿರಸ್ಕರಿಸಿದ್ದಾರೆ. ಕದನ ವಿರಾಮ ಘೋಷಿಸಬೇಕು ಎಂದು ಈಗಾಗಲೇ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕಾರಗೊಂಡರೂ, ನೆತನ್ಯಾಹು ಅವರು ದಾಳಿ ನಿಲ್ಲಿಸುವ ಯಾವ ಲಕ್ಷಣವನ್ನೂ ತೋರಿಲ್ಲ.

ಇದನ್ನೂ ಓದಿ: Israel Palestine War: ಯಾರಿಗೂ ಜಗ್ಗದ ಇಸ್ರೇಲ್;‌ ದೇಶದತ್ತ ಬಂದ ‘ಇರಾನ್‌’ ಕ್ಷಿಪಣಿ ಧ್ವಂಸ!

ಸಾವಿನ ಸಂಖ್ಯೆ ದಿನೇದಿನೆ ಏರಿಕೆ

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರದಲ್ಲಿ ಮೃತಪಟ್ಟವರ ಸಂಖ್ಯೆ 10 ಸಾವಿರ ದಾಟಿದೆ. ಅದರಲ್ಲೂ, ಹಮಾಸ್‌ ಉಗ್ರರ ತಾಣವಾದ ಗಾಜಾ ನಗರದ ಮೇಲೆ ಇಸ್ರೇಲ್‌ ನಿರಂತರವಾಗಿ ದಾಳಿ ನಡೆಸುತ್ತಿದ್ದು, ನಗರದಲ್ಲಿ ಇದುವರೆಗೆ 9,400 ಜನ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯವೇ ಮಾಹಿತಿ ನೀಡಿದೆ. ಇನ್ನೂ 2 ಸಾವಿರಕ್ಕೂ ಅಧಿಕ ಜನ ಕಟ್ಟಡದ ಅವಶೇಷಗಳಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂಬುದಾಗಿ ಮಾಹಿತಿ ನೀಡಿದೆ. ಇನ್ನು ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 1,400 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
1 Comment

1 Comments

  1. ದೇಶಿಯ

    5 November 2023, 9:24 AM at 9:24 am

    ಮೇಲ್ನೋಟಕ್ಕೆ ಅವು ಆಸ್ಪತ್ರೆ ನಿರಾಶ್ರಿತರ ಶಿಬಿರ. ಅದರ ಅಡಿಯಲ್ಲೇ ಭಯೋತ್ಪಾದಕರ ಸುರಂಗಗಳಿವೆ. ಹಾಗಾಗಿಯೇ ದಾಳಿ ಮಾಡಿದ್ದು

Leave a Reply

Your email address will not be published. Required fields are marked *

ಭವಿಷ್ಯ

Dina Bhavishya :‌ ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಗುಡ್‌ ನ್ಯೂಸ್

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ ಅಮಾವಾಸ್ಯೆ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಶುಕ್ರವಾರ ಕಟಕ ರಾಶಿಯಲ್ಲೇ ನೆಲಸಲಿದ್ದಾನೆ. ಇದರಿಂದಾಗಿ ಮೇಷ, ಮಿಥುನ, ಸಿಂಹ, ಕನ್ಯಾ, ಧನಸ್ಸು, ಮಕರ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮೇಷ ರಾಶಿಯವರು ಸಂಶಯಾಸ್ಪದವಾದ ಹಣಕಾಸು ವ್ಯವಹಾರದಲ್ಲಿ ತೊಡಗುವುದು ಬೇಡ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಆಪ್ತರಿಂದ ಸಿಹಿ ಸುದ್ದಿ ಸಿಗಲಿದೆ. ದಿನದ ಮಟ್ಟಿಗೆ ಖರ್ಚು ಇರಲಿದೆ. ವೃಷಭ ರಾಶಿಯವರು ಕುಟುಂಬದ ಆಪ್ತರಿಂದ ಆರ್ಥಿಕ ಸಹಾಯ ಬೇಡಿಕೆ ಬರುವುದು. ಮಾನಸಿಕ ಒತ್ತಡ ಹೆಚ್ಚಾಗಲಿದೆ. ವಿದ್ಯಾರ್ಥಿಗಳು ಮನೋಬಲ ಹೆಚ್ಚಿಸಿಕೊಳ್ಳುವುದು ಅವಶ್ಯಕ. ಧೈರ್ಯ ಕಾಡಬಹುದು. ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುವುದು. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (5-07-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷ.
ತಿಥಿ: ಅಮಾವಾಸ್ಯೆ 28:26 ವಾರ: ಶುಕ್ರವಾರ
ನಕ್ಷತ್ರ: ಆರಿದ್ರಾ 28:05 ಯೋಗ: ಧ್ರುವ 27:47
ಕರಣ: ಚತುಷ್ಪಾದ 16:38 ಅಮೃತಕಾಲ: ಸಂಜೆ 06:01 ರಿಂದ 07:38 ರವರೆಗೆ
ದಿನದ ವಿಶೇಷ: ಮಣ್ಣಿತ್ತಿನ ಅಮಾವಾಸ್ಯೆ

ಸೂರ್ಯೋದಯ : 05:58   ಸೂರ್ಯಾಸ್ತ : 06:50

ರಾಹುಕಾಲ: ಬೆಳಗ್ಗೆ 10:48ರಿಂದ 12:24
ಗುಳಿಕಕಾಲ: ಬೆಳಗ್ಗೆ 07:35 ರಿಂದ 09:11

ಯಮಗಂಡಕಾಲ: ಮಧ್ಯಾಹ್ನ 03:37
ರಿಂದ 05:14

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ದೈಹಿಕ ಶ್ರಮ ಹೆಚ್ಚಲಿದೆ. ಸಂಶಯಾಸ್ಪದವಾದ ಹಣಕಾಸು ವ್ಯವಹಾರದಲ್ಲಿ ತೊಡಗುವುದು ಬೇಡ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಆಪ್ತರಿಂದ ಸಿಹಿ ಸುದ್ದಿ ಸಿಗಲಿದೆ. ದಿನದ ಮಟ್ಟಿಗೆ ಖರ್ಚು ಇರಲಿದೆ. ಸಂಗಾತಿಯ ಮಧುರ ಮಾತುಗಳು ಹಿತವೇನಿಸುವುದು. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 3

Horoscope Today

ವೃಷಭ: ಕುಟುಂಬದ ಆಪ್ತರಿಂದ ಆರ್ಥಿಕ ಸಹಾಯ ಬೇಡಿಕೆ ಬರುವುದು. ಮಾನಸಿಕ ಒತ್ತಡ ಹೆಚ್ಚಾಗಲಿದೆ. ವಿದ್ಯಾರ್ಥಿಗಳು ಮನೋಬಲ ಹೆಚ್ಚಿಸಿಕೊಳ್ಳುವುದು ಅವಶ್ಯಕ. ಧೈರ್ಯ ಕಾಡಬಹುದು. ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುವುದು. ಆರೋಗ್ಯ ಮಧ್ಯಮವಾಗಿರಲಿದೆ. ಉದ್ಯೋಗಿಗಳಿಗೆ ಕಿರಿಕಿರಿಯಾಗಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 3

Horoscope Today

ಮಿಥುನ: ಸದಾ ಕಲ್ಪನೆಯಲ್ಲಿ ಕನಸುಗಳನ್ನು ಕಾಣುವುದು ಬಿಡಿ. ಆರ್ಥಿಕವಾಗಿ ಸಹಾಯ ಮಾಡಿ, ನೀವು ಹಣಕಾಸಿನ ಸಮಸ್ಯೆಯಲ್ಲಿ ಸಿಲುಕುವುದು ಬೇಡ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಉದ್ಯೋಗಿಗಳಿಗೆ ಶುಭಫಲ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 1

Horoscope Today

ಕಟಕ: ಕುಟುಂಬದ ಸದಸ್ಯರಿಂದ ಆರ್ಥಿಕ ಬೆಂಬಲ ಸಿಗಲಿದೆ. ಉದ್ಯೋಗಿಗಳಿಗೆ ಶುಭಫಲ. ಹಣದ ಹರಿವು ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಪ್ರಗತಿ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಆಪ್ತ ವ್ಯಕ್ತಿಗಳೊಂದಿಗೆ ಮಾತುಕತೆಯಲ್ಲಿ ತೊಡಗುವಿರಿ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 4

Horoscope Today

ಸಿಂಹ: ಕೆಲವು ಘಟನೆಗಳು ಮನಸ್ಸಿನ ಮೇಲೆ ಪರಿಣಾಮ ಬೀರಲಿವೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಸಹೋದ್ಯೋಗಿಗಳಿಂದ ಬೆಂಬಲ ಸಿಗಲಿದೆ.ಕ್ಷೇತ್ರ ದರ್ಶನ ಆಧ್ಯಾತ್ಮಿಕ ಗುರುಗಳ ಮಾರ್ಗದರ್ಶನ ಸಿಗಲಿದೆ. ಉದ್ಯೋಗಿಗಳಿಗೆ ಕಿರಿಕಿರಿಯಾಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರಫಲ. ಅದೃಷ್ಟ ಸಂಖ್ಯೆ: 3

Horoscope Today

ಕನ್ಯಾ: ದೀರ್ಘಕಾಲದ ಕೆಲಸ ಕಾರ್ಯಗಳು ಇಂದು ಯಶಸ್ಸನ್ನು ತಂದು ಕೊಡಲಿದೆ. ಆದಾಯದ ಮೂಲ ಹೆಚ್ಚಾಗಲಿದೆ. ಆಪ್ತರೊಂದಿಗೆ ಮಾತುಕತೆಯಲ್ಲಿ ತೊಡಗುವಿರಿ. ಸಂಗಾತಿಯೊಂದಿಗೆ ಮಾತಿಗೆ ಮಾತು ಬೆಳೆಸುವುದು ಬೇಡ. ಇದರಿಂದ ಕುಟುಂಬದ ವಾತಾವರಣ ಹದಗೆಡುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಕಿರಿಕಿರಿ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಆತ್ಮವಿಶ್ವಾಸದಿಂದ ಕೆಲಸ-ಕಾರ್ಯಗಳಲ್ಲಿ ಪ್ರಗತಿ ಇರಲಿದೆ. ಸ್ನೇಹಿತರೊಂದಿಗೆ ಸಮಯ ಹಂಚಿಕೊಳ್ಳುವಿರಿ. ಹಣಕಾಸು, ಉದ್ಯೋಗ ಹಾಗೂ ವ್ಯಾಪಾರದಲ್ಲಿ ಪ್ರಗತಿ ಇರಲಿದೆ. ಈ ಹಿಂದೆ ನಿಮ್ಮನ್ನು ದ್ವೇಷಿಸುತ್ತಿದ್ದ ಜನರು ನಿಮ್ಮೊಂದಿಗೆ ಪ್ರೀತಿಯಿಂದ ವರ್ತಿಸುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಶುಭಕಾಲ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 3

Horoscope Today

ವೃಶ್ಚಿಕ : ಆರೋಗ್ಯದ ಕುರಿತು ಕಾಳಜಿ ಇರಲಿ. ನ್ಯಾಯಾಲಯದಲ್ಲಿರುವ ವ್ಯಾಜ್ಯಗಳು ವಿಜಯವನ್ನು ತಂದುಕೊಡುವ ಸಾಧ್ಯತೆ ಇದೆ. ಹಣಕಾಸು, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ವಿವಾಹ ಅಪೇಕ್ಷಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 5

Horoscope Today

ಧನಸ್ಸು:ಮಾನಸಿಕ ಒತ್ತಡದಿಂದ ಹೊರಬರಲು ಆಧ್ಯಾತ್ಮಿಕ ಹಾದಿ ಅತ್ಯವಶ್ಯಕ. ಹಣಕಾಸು ವಿಷಯದಲ್ಲಿ ಪ್ರಗತಿ ಇರಲಿದೆ. ಉದ್ಯೋಗಿಗಳಿಗೆ ಮಿಶ್ರಫಲ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 2

Horoscope Today

ಮಕರ:ಬುದ್ಧಿವಂತಿಕೆಯಿಂದ ಕೆಲಸಕಾರ್ಯಗಳಲ್ಲಿ ಯಶಸ್ಸು ಕೀರ್ತಿ ಸಿಗುವುದು. ಕೋಪ ಅಪಾಯ ತರುವುದು.ಆರೋಗ್ಯ ಪರಿಪೂರ್ಣವಾಗಿರಲಿದೆ. ಆರ್ಥಿಕ ಲಾಭ. ಹೊಸ ಸ್ನೇಹಿತರ ಪರಿಚಯವಾಗಲಿದೆ. ಕೌಟುಂಬಿಕವಾಗಿ ಮಿಶ್ರಫಲ. ಅದೃಷ್ಟ ಸಂಖ್ಯೆ: 2

Horoscope Today

ಕುಂಭ: ದುಂದುವೆಚ್ಚವನ್ನು ತಪ್ಪಿಸಿ. ಬುದ್ದಿವಂತಿಕೆಯಿಂದ ಕೆಲಸಮಾಡಿ ವ್ಯರ್ಥ ಪ್ರಯತ್ನ ಮಾಡುವುದು ಬೇಡ. ಗೌಪ್ಯ ವಿಷಯಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರಿಕೆ ಇರಲಿ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 9

Horoscope Today

ಮೀನ: ಮನರಂಜನೆಗಾಗಿ ಸಮಯ ಕಳೆಯುವ ಸಾಧ್ಯತೆ ಇದೆ. ಆರೋಗ್ಯ ಮಧ್ಯಮವಾಗಿರಲಿದೆ. ಆರ್ಥಿಕವಾಗಿ ಪ್ರಗತಿ ಇರಲಿದೆ. ಸಂಗಾತಿ ಇಂದು ನಿಮ್ಮೊಂದಿಗೆ ಮುಖ್ಯ ವಿಷಯದ ಕುರಿತು ಚರ್ಚಿಸಬಹುದು. ಉದ್ಯೋಗಿಗಳಿಗೆ ಮಧ್ಯಮ ಫಲ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 7

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಪ್ರಮುಖ ಸುದ್ದಿ

Team India : ಮುಂಬೈನಲ್ಲಿ ನಡೆದ ಭಾರತ ತಂಡದ ವಿಜಯೋತ್ಸವ ನೋಡಿದರೆ ರೋಮಾಂಚನ ಖಾತರಿ

Team India : ಸಮಾರಂಭದ ನಂತರ, ಆಟಗಾರರು ಅಭಿಮಾನಿಗಳೊಂದಿಗೆ ಮಾತುಕತೆ ನಡೆಸಿದರು. ಸಹಿ ಮಾಡಿದ ಚೆಂಡುಗಳನ್ನು ವಿತರಿಸಿದರು ಮತ್ತು ಸೆಲ್ಫಿಗಳನ್ನು ತೆಗೆದುಕೊಂಡರು. ಇದು ಕ್ರಿಕೆಟ್​ನ ಅಪ್ಪಟ ಅಭಿಮಾನಿಗಳಿಗೆ ಸಂತೋಷವನ್ನುಂಟುಮಾಡಿತು. ಮರೀನ್ ಡ್ರೈವ್​​ನಲ್ಲಿ ಪ್ರಾರಂಭವಾದ 20 ವಿಶ್ವಕಪ್ ವಿಜಯೋತ್ಸವ ಮೆರವಣಿಗೆ ವಾಂಖೆಡೆ ಕ್ರೀಡಾಂಗಣದಲ್ಲಿ ಕೊನೆಗೊಂಡಿತು.

VISTARANEWS.COM


on

Team India
Koo

ಬೆಂಗಳೂರು: ಟಿ 20 ವಿಶ್ವಕಪ್ 2024 ರಲ್ಲಿ (Team India) ಟೀಮ್ ಇಂಡಿಯಾದ ಟ್ರೋಫಿ ಗೆದ್ದ ಸಂಭ್ರಮವನ್ನು ಆಚರಿಸಲು ಕ್ರಿಕೆಟ್ ಅಭಿಮಾನಿಗಳು ಮುಂಬೈನಲ್ಲಿ ಜಮಾಯಿಸಿದ್ದರು. ಅಲ್ಲಿನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣವು ಗದ್ದಲ ಮತ್ತು ಉತ್ಸಾಹದಿಂದ ತುಂಬಿತ್ತು. ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 125 ಕೋಟಿ ರೂ.ಗಳ ಬಹುಮಾನವು ದೊರೆಯಿತು. ಈ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಪ್ರಮುಖ ಆಟಗಾರರು ವೇದಿಕೆಯಲ್ಲಿದ್ದು, ಅದ್ಯಮ ಉತ್ಸಹದಲ್ಲಿದ್ದ ಪ್ರೇಕ್ಷಕರೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಂಡರು.

ಸಮಾರಂಭದ ನಂತರ, ಆಟಗಾರರು ಅಭಿಮಾನಿಗಳೊಂದಿಗೆ ಮಾತುಕತೆ ನಡೆಸಿದರು. ಸಹಿ ಮಾಡಿದ ಚೆಂಡುಗಳನ್ನು ವಿತರಿಸಿದರು ಮತ್ತು ಸೆಲ್ಫಿಗಳನ್ನು ತೆಗೆದುಕೊಂಡರು. ಇದು ಕ್ರಿಕೆಟ್​ನ ಅಪ್ಪಟ ಅಭಿಮಾನಿಗಳಿಗೆ ಸಂತೋಷವನ್ನುಂಟುಮಾಡಿತು. ಮರೀನ್ ಡ್ರೈವ್​​ನಲ್ಲಿ ಪ್ರಾರಂಭವಾದ 20 ವಿಶ್ವಕಪ್ ವಿಜಯೋತ್ಸವ ಮೆರವಣಿಗೆ ವಾಂಖೆಡೆ ಕ್ರೀಡಾಂಗಣದಲ್ಲಿ ಕೊನೆಗೊಂಡಿತು. ಅಭಿಮಾನಿಗಳ ಬೃಹತ್​​ ಸಂಖ್ಯೆಯು ಯಶಸ್ಸನ್ನು ಹೆಚ್ಚಿಸಿತು. ಅಪಾರ ಜನಸಂದಣಿಯಿಂದಾಗಿ ಟೀಮ್ ಇಂಡಿಯಾ ಬಸ್ ಬೀದಿಗಳಲ್ಲಿ ಸಂಚರಿಸಲು ಕಷ್ಟವಾಯಿತು. ಇದು ಭಾವನಾತ್ಮಕ ಮತ್ತು ಸಂಭ್ರಮದ ವಾತಾವರಣ ಉಂಟು ಮಾಡಿತು.

ಇದನ್ನೂ ಓದಿ: India’s open-bus parade : ಮುಂಬೈನಲ್ಲಿ ನಡೆದ ಭಾರತ ಕ್ರಿಕೆಟ್​ ತಂಡದ ವಿಜಯೋತ್ಸವ ಕಾರ್ಯಕ್ರಮದ ಚಿತ್ರಗಳು ಇಲ್ಲಿವೆ

“ಮುಂಬೈ ಎಂದಿಗೂ ನಿರಾಶೆ ಮಾಡುವುದಿಲ್ಲ.. ನಮಗೆ ಆದರದ ಸ್ವಾಗತ ದೊರೆಯಿತು. ತಂಡದ ಪರವಾಗಿ, ನಾವು ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ನಾನು ತುಂಬಾ ಸಂತೋಷ ಮತ್ತು ನಿರಾಳನಾಗಿದ್ದೇನೆ ಎದು ರೋಹಿತ್​ ಶರ್ಮಾ ಹೇಳಿದರು. ಇದೇ ವೇಳೆ ಅವರು ಟಿ 20 ವಿಶ್ವಕಪ್​​ನ ಅಂತಿಮ ಓವರ್​ನಲ್ಲಿ ನಿರ್ಣಾಯಕ ಪ್ರದರ್ಶನಕ್ಕಾಗಿ ಭಾರತೀಯ ನಾಯಕ ತಮ್ಮ ಉಪನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಶ್ಲಾಘಿಸಿದರು. “ಕೊನೆಯ ಓವರ್ ಎಸೆದು ತಂಡವನ್ನು ಕಾಪಾಡಿದ ಹಾರ್ದಿಕ್ಗೆ ಹ್ಯಾಟ್ಸ್ ಆಫ್. ನಿಮಗೆ ಎಷ್ಟು ರನ್​ಗಳ ಅಗತ್ಯವಿದ್ದರೂ, ಆ ಓವರ್ ಎಸೆಯಲು ಯಾವಾಗಲೂ ತುಂಬಾ ಒತ್ತಡವಿರುತ್ತದೆ. ಅವರಿಗೆ ಹ್ಯಾಟ್ಸ್ ಆಫ್” ಎಂದು ನಾಯಕ ಹೇಳಿದರು. ಇದೇ ವೇಳೆ ಹಾರ್ದಿಕ್! ಹಾರ್ದಿಕ್!” ಜನಸಮೂಹದಿಂದ. ಪಾಂಡ್ಯ ಮುಗುಳ್ನಗೆ ಮತ್ತು ಅಲೆಯೊಂದಿಗೆ ಚಪ್ಪಾಳೆಯನ್ನು ಒಪ್ಪಿಕೊಂಡರು. ಭಾವಪರವಶರಾದ ಹಾರ್ದಿಕ್ ಎದ್ದು ನಿಂತು ಅಭಿಮಾನಿಗಳನ್ನು ಸ್ವಾಗತಿಸಿದರು. ಇದು ವಾಂಖೆಡೆಯಲ್ಲಿ ಭಾವನಾತ್ಮಕ ಮತ್ತು ಸಂಭ್ರಮದ ವಾತಾವರಣವನ್ನು ಹೆಚ್ಚಿಸಿತು.

ವಿರಾಟ್ ಕೊಹ್ಲಿ ಕೂಡ ಪ್ರೇಕ್ಷಕರಿಗೆ ಹಾಗೂ ಸಹ ಆಟಗಾರರಿಗೆ ಹೃತ್ಪೂರ್ವಕ ಧನ್ಯವಾದ ಹೇಳಿದ್ದಾರೆ. “ರೋಹಿತ್ ಮತ್ತು ನಾನು ನಾವು ಇದನ್ನು ಬಹಳ ಸಮಯದಿಂದ ಪ್ರಯತ್ನಿಸುತ್ತಿದ್ದೇವೆ. ನಾವು ಯಾವಾಗಲೂ ವಿಶ್ವಕಪ್ ಗೆಲ್ಲಲು ಬಯಸಿದ್ದೆವು. ಟ್ರೋಫಿಯನ್ನು ವಾಂಖೆಡೆಗೆ ಮರಳಿ ತರುವುದು ಬಹಳ ವಿಶೇಷವಾದ ಭಾವನೆ. ನಾವು ಕಳೆದ 15 ವರ್ಷಗಳಿಂದ ಆಡುತ್ತಿದ್ದೇವೆ ಮತ್ತು ರೋಹಿತ್ ತುಂಬಾ ಭಾವುಕನಾಗಿರುವುದನ್ನು ನಾನು ಇದೇ ಮೊದಲ ಬಾರಿಗೆ ನೋಡಿದ್ದೇನೆ. ಅವನು ಅಳುತ್ತಿದ್ದನು, ನಾನು ಅಳುತ್ತಿದ್ದೆ, ನಮ್ಮಿಬ್ಬರ ನಡುವಿನ ಆ ಅಪ್ಪುಗೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.

ಭಾರತದ ಶ್ರೇಷ್ಠ ಆಟಗಾರ ಜಸ್ಪ್ರೀತ್ ಬುಮ್ರಾ ಅವರನ್ನು ಶ್ಲಾಘಿಸಿದ ಕೊಹ್ಲಿ, “ಜಸ್ಪ್ರೀತ್ ಬುಮ್ರಾ ಇದೀಗ ವಿಶ್ವದ ಎಂಟನೇ ಅದ್ಭುತ ಎಂದು ಹೇಳಿದರು. ಮುಂಬೈನ ಪ್ರೇಕ್ಷಕರು ಬೌಲರ್​​ನ ಅಸಾಧಾರಣ ಕೊಡುಗೆಗಳನ್ನು ಸಂಭ್ರಮಿಸಿದರು.

ವಾಂಖೆಡೆಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಅಪ್ರತಿಮ ಜೋಡಿ ಕೊಹ್ಲಿ ಮತ್ತು ರೋಹಿತ್ ಮೈದಾನದಲ್ಲಿ ನೃತ್ಯ ಮಾಡಿದರು. ಇದು ಅಭಿಮಾನಿಗಳ ಸಂತೋಷಕ್ಕೆ ಕಾರಣವಾಯಿತು. ವಿಜಯೋತ್ಸವದ ಮೆರವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಜಸ್ಪ್ರೀತ್ ಬುಮ್ರಾ, “ನಾನು ಇಂದು ನೋಡಿದ್ದನ್ನು ನಾನು ಹಿಂದೆಂದೂ ನೋಡಿಲ್ಲ ಎಂದು ಹೇಳಿದರು.

Continue Reading

ದೇಶ

10 ರೂ.ಗಾಗಿ ಎಲ್ಲರ ಮುಂದೆ ಪ್ಯಾಂಟ್‌ ಬಿಚ್ಚಿ, ಆಟೋ ಡ್ರೈವರ್‌ ಮೇಲೆ ಮಂಗಳಮುಖಿ ಹಲ್ಲೆ; Video ಇಲ್ಲಿದೆ

ಇ-ರಿಕ್ಷಾದಿಂದ ಚಾಲಕನನ್ನು ಇಳಿಸಿ, ಆತನ ಕೊರಳಪಟ್ಟಿ ಹಿಡಿದು, ಎಳೆದಾಡಿ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ, ಆಟೋ ಚಾಲಕನು ಕೂಡ ಮಂಗಳಮುಖಿಗೆ ಹೊಡೆದಿದ್ದಾನೆ. ಇದೇ ವೇಳೆ, ಮಂಗಳಮುಖಿಗೆ ಏನು ಅನಿಸಿತೋ ಏನೋ, ಕೂಡಲೇ ತಮ್ಮ ಪ್ಯಾಂಟ್‌ ಬಿಚ್ಚಿ, ಬೆತ್ತಲೆಯಾಗಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

VISTARANEWS.COM


on

Viral Video
Koo

ನವದೆಹಲಿ: ರೈಲುಗಳಲ್ಲಿ, ಬಸ್‌ ಸ್ಟ್ಯಾಂಡ್‌ಗಳು, ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಮಂಗಳಮುಖಿಯರು (Transgenders) ಜನರಿಂದ 5-10 ರೂ. ಪಡೆಯುತ್ತಾರೆ. ಜನರೂ ಕರುಣೆ ತೋರಿಸಿ ಅವರಿಗೆ ಹಣ ನೀಡುತ್ತಾರೆ. ಕೆಲವೊಮ್ಮೆ ಕಾಡಿ-ಬೇಡಿ ಮಂಗಳಮುಖಿಯರು ಜನರಿಂದ ಹಣ ಪಡೆಯುತ್ತಾರೆ. ಇದರಿಂದ ಜಗಳಗಳೂ ನಡೆದಿರುವ ಉದಾಹರಣೆಗಳು ಇವೆ. ಇದಕ್ಕೆ ತಾಜಾ ನಿದರ್ಶನ ಎಂಬಂತೆ, ಮಂಗಳಮುಖಿಯೊಬ್ಬರು 10 ರೂ.ಗಾಗಿ ಎಲ್ಲರ ಮುಂದೆಯೇ ಪ್ಯಾಂಟ್‌ ಬಿಚ್ಚಿಕೊಂಡು, ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವಿಡಿಯೊ (Viral Video) ಈಗ ಭಾರಿ ವೈರಲ್‌ ಆಗಿದೆ.

ವ್ಯಕ್ತಿಯು ಇ-ರಿಕ್ಷಾವನ್ನು ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದು, ಈತನ ರಿಕ್ಷಾವನ್ನು ಮಂಗಳಮುಖಿ ಹತ್ತಿದ್ದಾರೆ. ಮಂಗಳಮುಖಿಯು ಇಳಿಯುವಾಗ ಎಂದಿನಂತೆ ಇ-ರಿಕ್ಷಾ ಚಾಲಕನು 10 ರೂ. ಬಾಡಿಗೆ ಕೊಡಿ ಎಂದಿದ್ದಾನೆ. ಇದರಿಂದ ಕುಪಿತಗೊಂಡ ಮಹಿಳೆಯು ಆತನ ಜತೆ ಜಗಳಕ್ಕೆ ನಿಂತಿದ್ದಾರೆ. ಯಾವುದೇ ಕಾರಣಕ್ಕೂ ಬಾಡಿಗೆ ಕೊಡುವುದಿಲ್ಲ ಎಂದು ಹೇಳುವ ಜತೆಗೆ ಬೈದಿದ್ದಾರೆ. ಇದಾದ ನಂತರ ಆಟೋ ಚಾಲಕನು ಕೂಡ ಗದರಿದ್ದಾನೆ. ಆಗ ಮಂಗಳಮುಖಿಯ ಕೋಪ ದ್ವಿಗುಣಗೊಂಡಿದೆ. ಕೂಡಲೇ ಆಟೋ ಚಾಲಕನ ಮೇಲೆ ದಾಳಿ ನಡೆಸಿದ್ದಾರೆ.‌ ಘಟನೆಯು ಎಲ್ಲಿ ನಡೆದಿದೆ ಎಂಬುದರ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ.

ಇ-ರಿಕ್ಷಾದಿಂದ ಚಾಲಕನನ್ನು ಇಳಿಸಿ, ಆತನ ಕೊರಳಪಟ್ಟಿ ಹಿಡಿದು, ಎಳೆದಾಡಿ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ, ಆಟೋ ಚಾಲಕನು ಕೂಡ ಮಂಗಳಮುಖಿಗೆ ಹೊಡೆದಿದ್ದಾನೆ. ಇದೇ ವೇಳೆ, ಮಂಗಳಮುಖಿಗೆ ಏನು ಅನಿಸಿತೋ ಏನೋ, ಕೂಡಲೇ ತಮ್ಮ ಪ್ಯಾಂಟ್‌ ಬಿಚ್ಚಿ, ಬೆತ್ತಲೆಯಾಗಿದ್ದಾರೆ. ಪ್ಯಾಂಟ್‌ ಬಿಚ್ಚಿ ಬೆತ್ತಲೆಯಾದ ಬಳಿಕವೂ ಅವರು ಮತ್ತೆ ಚಾಲಕನ ಮೇಳೆ ಹಲ್ಲೆ ನಡೆಸಿದ್ದಾರೆ. ಕೇವಲ 10 ರೂ.ಗಾಗಿ ಇಬ್ಬರೂ ರಸ್ತೆ ಮಧ್ಯೆ ಕಾದಾಡಿಕೊಂಡಿರುವ ವಿಡಿಯೊ ಭಾರಿ ಸದ್ದು ಮಾಡುತ್ತಿದೆ.

ವಿಡಿಯೊ ವೈರಲ್‌ ಆಗುತ್ತಲೇ ಹತ್ತಾರು ಅಭಿಪ್ರಾಯಗಳು ವ್ಯಕ್ತವಾಗಿವೆ. “ಆಟೋ ಚಾಲಕರು 10 ರೂ.ಗಾಗಿ ದುಡಿಯುತ್ತಾರೆ. ಮಂಗಳಮುಖಿಯರು ಅವರಿಗೆ ಬಾಡಿಗೆ ಕೊಡಬೇಕು. ಅವರು ಬೇಕಾದರೆ ಶ್ರೀಮಂತರ ಬಳಿ ಹಣ ಪಡೆಯಲಿ” ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, “ಮಂಗಳಮುಖಿಯರು ಕೆಲಸ ಮಾಡುತ್ತೇವೆ ಎಂದರೆ ಯಾರೂ ಕೆಲಸ ಕೊಡಲ್ಲ. ಅವರಿಗೆ ಮಾನವೀಯತೆ ಆಧಾರದ ಮೇಲೆ ಜನ ನೆರವು ನೀಡಬೇಕು” ಎಂಬುದಾಗಿ ಹೇಳಿದ್ದಾರೆ. ಹೀಗೆ ಪರ-ವಿರೋಧಗಳ ಚರ್ಚೆಯಾಗಿದೆ.

ಇದನ್ನೂ ಓದಿ: Assault Case: ಸಾಲ ವಾಪಸ್‌ ಕೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ ಬಿಜೆಪಿ ಕಾರ್ಯಕರ್ತ

Continue Reading

ಪ್ರಮುಖ ಸುದ್ದಿ

India’s open-bus parade : ಮುಂಬೈನಲ್ಲಿ ನಡೆದ ಭಾರತ ಕ್ರಿಕೆಟ್​ ತಂಡದ ವಿಜಯೋತ್ಸವ ಕಾರ್ಯಕ್ರಮದ ಚಿತ್ರಗಳು ಇಲ್ಲಿವೆ

India’s open-bus parade: ಟೀಮ್ ಇಂಡಿಯಾ ಮುಂಬೈಗೆ ಆಗಮಿಸುವ ಮೊದಲೇ ಸಾವಿರಾರು ಅಭಿಮಾನಿಗಳು ಮರೀನ್ ಡ್ರೈವ್​ಗೆ ಆಗಮಿಸಿದ್ದರು. ವಿಶ್ವಕಪ್ ವಿಜೇತರಿಗಾಗಿ ಅಭಿಮಾನಿಗಳು ತೀವ್ರವಾಗಿ ಕಾಯುತ್ತಿದ್ದರಿಂದ ವಾಂಖೆಡೆ ಕ್ರೀಡಾಂಗಣವೂ ಜನರಿಂದ ತುಂಬಿತ್ತು. ಆ ಬಳಿಕ ಐತಿಹಾಸಿಕ ವಾಖೆಂಡೆ ಸ್ಟೇಡಿಯಮ್​ನಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು.

VISTARANEWS.COM


on

India's open-bus parade
Koo

ಮುಂಬೈ: ಟಿ20 ವಿಶ್ವ ಕಪ್​ ನಲ್ಲಿ ಚಾಂಪಿಯನ್​ ಪಟ್ಟ ಪಡೆದುಕೊಂಡ ಭಾರತ ಕ್ರಿಕೆಟ್ ತಂಡಕ್ಕೆ (Team India) ಮುಂಬಯಿನಲ್ಲಿ ಬಿಸಿಸಿಐ ಅದ್ಧೂರಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಿತ್ತು. ತಂಡದ ಆಟಗಾರರನ್ನು ತುಂಬಿಕೊಂಡಿದ್ದ ತೆರೆದ ಬಸ್​ (India’s open-bus parade) ಸಂಜೆ 7 ಗಂಟೆಗೆ ಮರೀನ್ ಡ್ರೈವ್​ನಿಂದ ಆರಂಭಗೊಂಡು ರಸ್ತೆಯುದ್ದಕ್ಕೂ ನೆರೆದಿದ್ದ ಅಭಿಮಾನಿಗಳ ಸಮ್ಮುಖದಲ್ಲಿ ಸಾಗಿತು.

ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ಐತಿಹಾಸಿಕ ವಿಜಯವನ್ನು ಆಚರಿಸಲು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದರು. ಟೀಮ್ ಇಂಡಿಯಾ ಮುಂಬೈಗೆ ಆಗಮಿಸುವ ಮೊದಲೇ ಸಾವಿರಾರು ಅಭಿಮಾನಿಗಳು ಮರೀನ್ ಡ್ರೈವ್​ಗೆ ಆಗಮಿಸಿದ್ದರು. ವಿಶ್ವಕಪ್ ವಿಜೇತರಿಗಾಗಿ ಅಭಿಮಾನಿಗಳು ತೀವ್ರವಾಗಿ ಕಾಯುತ್ತಿದ್ದರಿಂದ ವಾಂಖೆಡೆ ಕ್ರೀಡಾಂಗಣವೂ ಜನರಿಂದ ತುಂಬಿತ್ತು. ಆ ಬಳಿಕ ಐತಿಹಾಸಿಕ ವಾಖೆಂಡೆ ಸ್ಟೇಡಿಯಮ್​ನಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು. ನಾಯಕ ರೋಹಿತ್ ಶರ್ಮಾ. ವಿರಾಟ್​ ಕೊಹ್ಲಿ ಮುಂದಾಳತ್ವದಲ್ಲಿ ತಂಡದ ಆಟಗಾರರು ಕುಣಿದು ಕುಪ್ಪಳಿಸಿದರು. ಬಳಿಕ ಅವರು ತಮ್ಮ ತಂಡದ ಆಟಗಾರರು ಹಾಗೂ ಪ್ರೇಕ್ಷಕರನ್ನುದ್ದೇಶಿಸಿ ಮಾತನಾಡಿದರು. ಈ ವಿಶೇಷ ಸಂದರ್ಭದ ಚಿತ್ರಗಳು ಈ ಕೆಳಗಿವೆ.

ಇದನ್ನೂ ಓದಿ: Rohit Sharma : ವಾಂಖೆಡೆ ಸ್ಟೇಡಿಯಮ್​ನಲ್ಲಿ ಡಾನ್ಸ್ ಮಾಡಿದ ರೋಹಿತ್ ಶರ್ಮಾ

Continue Reading
Advertisement
Paris Olympics 2024
ಕ್ರೀಡೆ11 mins ago

Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ದೇಶದ ಕ್ರೀಡಾಪಟುಗಳ ಶ್ರೇಷ್ಠ ಪ್ರದರ್ಶನ; ಮೋದಿ ವಿಶ್ವಾಸ

Prajwal Devaraj New Movie Rakshasa
ಸ್ಯಾಂಡಲ್ ವುಡ್17 mins ago

Prajwal Devaraj: ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ಡೈನಾಮಿಕ್‌ ಪ್ರಿನ್ಸ್ `ಪ್ರಜ್ವಲ್ ದೇವರಾಜ್`

Hathras Stampede
ದೇಶ34 mins ago

Hathras Stampede: ಇಂದು ಹತ್ರಾಸಕ್ಕೆ ರಾಹುಲ್‌ ಗಾಂಧಿ; ಕಾಲ್ತುಳಿತ ಸಂತ್ರಸ್ತರ ಭೇಟಿ

Sleep Apnea
ಆರೋಗ್ಯ35 mins ago

Sleep Apnea: ಗೊರಕೆಯೆಂದು ನಿರ್ಲಕ್ಷಿಸಬೇಡಿ, ಇದು ಜೀವಕ್ಕೂ ಎರವಾದೀತು!

Job Interview
Latest35 mins ago

Job Interview: ಉದ್ಯೋಗ ಸಂದರ್ಶನವನ್ನು ಹೇಗೆ ಎದುರಿಸಬೇಕು? ಈ ಟಿಪ್ಸ್‌ ಫಾಲೋ ಮಾಡಿ

chemicals in food
ಕೋಲಾರ41 mins ago

Chemicals in Food: ಕ್ಯಾನ್ಸರ್​ ಕಾರಕ ಅಂಶವಿರುವ ರಾಸಾಯನಿಕ ಕಲರ್ ಬಳಸಿದ ಸ್ವೀಟ್​ ವಶಕ್ಕೆ

dengue fever hassan news
ಹಾಸನ1 hour ago

Dengue Fever: ಹಾಸನದಲ್ಲಿ ಶಂಕಿತ ಡೆಂಗ್ಯು ಜ್ವರದಿಂದ ನಾಲ್ಕನೇ ಬಾಲಕಿ ಬಲಿ

Hot Corn Recipe
ಆಹಾರ/ಅಡುಗೆ2 hours ago

Hot Corn Recipe: ಮಳೆಗಾಲದಲ್ಲಿ ಬಿಸಿಬಿಸಿಯಾದ ಜೋಳವನ್ನು ಮನೆಯಲ್ಲೇ ಮಾಡುವುದು ಹೇಗೆ?

karnataka Weather Forecast Rain
ಮಳೆ2 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

Vastu Tips
ಧಾರ್ಮಿಕ3 hours ago

Vastu Tips: ಉದ್ಯೋಗದಲ್ಲಿ ಪ್ರಗತಿ ಸಾಧಿಸಬೇಕೆ? ಹೀಗೆ ಮಾಡಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast Rain
ಮಳೆ2 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ14 hours ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ16 hours ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

wild animal attack
ಬೆಂಗಳೂರು ಗ್ರಾಮಾಂತರ17 hours ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Chikkaballapura News
ಚಿಕ್ಕಬಳ್ಳಾಪುರ19 hours ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ19 hours ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Karnataka Rain
ಮಳೆ20 hours ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ21 hours ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ದದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

karnataka weather Forecast
ಮಳೆ3 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ4 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ಟ್ರೆಂಡಿಂಗ್‌