ವಯೊಲೆನ್ಸ್‌, ವಯೊಲೆನ್ಸ್, ವಯೊಲೆನ್ಸ್:‌ ಎಲ್ಲರ ಗಮನ ಸೆಳೀತಿದೆ ಈ ಹಾಲಿವುಡ್‌ ವಿಚಾರಣೆ ‌ - Vistara News

ಸಿನಿಮಾ

ವಯೊಲೆನ್ಸ್‌, ವಯೊಲೆನ್ಸ್, ವಯೊಲೆನ್ಸ್:‌ ಎಲ್ಲರ ಗಮನ ಸೆಳೀತಿದೆ ಈ ಹಾಲಿವುಡ್‌ ವಿಚಾರಣೆ ‌

ಪೈರೇಟ್ಸ್‌ ಆಫ್‌ ದಿ ಕೆರೀಬಿಯನ್‌ ಸಿನಿಮಾ ನಟ ಜಾನಿ ಡೆಪ್‌ ಮತ್ತು ನಟಿ ಆಂಬರ್‌ ಹರ್ಡ್‌ ನಡುವಿನ ಮಾನನಷ್ಟ ಮೊಕದ್ದಮೆ ವಿಚಾರಣೆ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಲೇ ಇದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಸದ್ಯ ಹಾಲಿವುಡ್‌ನಲ್ಲಿ ಯಾವುದೇ ಫಿಲಂಗಳಿಗಿಂತ ಅತ್ಯಧಿಕ ಸದ್ದು ಮಾಡುತ್ತಾ ಓಡುತ್ತಿರುವುದು ಜಾನಿ ಡೆಪ್‌ ಮತ್ತು ಆಂಬರ್‌ ಹರ್ಡ್‌ ಎಂಬ ಇಬ್ಬರು ಹೈ ಪ್ರೊಫೈಲ್‌ ನಟರ ಮುರಿದ ದಾಂಪತ್ಯದ, ನಂತರದ ಮಾನನಷ್ಟ ಮೊಕದ್ದಮೆಯ ಕೋರ್ಟ್‌ ವಿಚಾರಣೆಯ ಪ್ರಕರಣ. ಯೂಟ್ಯೂಬ್‌ಗೆ ಹೋದರೆ ಖುದ್ದು ಕೋರ್ಟ್‌ ಟ್ರಯಲ್‌ನ ವಿಡಿಯೋಗಳನ್ನೂ ನೀವು ನೋಡಬಹುದು.

ಅದಿರಲಿ. ನೀವು ಈ ಕೇಸ್‌ನ ಆದ್ಯಂತ ತಿಳಿದುಕೊಳ್ಳಬೇಕಿದ್ದರೆ ಈ ಕತೆಯನ್ನು ಆರಂಭದಿಂದಲೇ ಶುರು ಮಾಡಬೇಕು.

ಜಾನಿ ಡೆಪ್‌, ಪೈರೇಟ್ಸ್‌ ಆಫ್‌ ದಿ ಕೆರಿಬಿಯನ್‌ ಸೀರೀಸ್‌ ಸಿನಿಮಾಗಳಿಂದಾಗಿ ಜಗದ್ವಿಖ್ಯಾತ. ಅವನ ಕಡಲುಗಳ್ಳ ಭೂತದ ಪಾತ್ರ ಮಕ್ಕಳಿಗೂ ಚಿರಪರಿಚಿತ. ಇನ್ನು ಆಂಬರ್‌ ಹರ್ಡ್‌, ಈಕೆ ʼಗೋನ್‌ ಗರ್ಲ್‌ʼ ಫಿಲಂನ ಲೀಡ್‌ ಕ್ಯಾರೆಕ್ಟರ್‌ ಆಗಿ ಹೆಸರು ಮಾಡಿದಳು. ಇಬ್ಬರ ಬುಟ್ಟಿಯಲ್ಲೂ ಹತ್ತಾರು ಫೀಲಂಗಳೂ ಕೆಲವಷ್ಟು ಡೇಟಿಂಗ್-‌ ಪ್ರೇಮ- ಮದುವೆ- ಪ್ರೇಮಭಂಗ- ಇತ್ಯಾದಿಗಳೂ ಇವೆ.

ಇವರಿಬ್ಬರ ರೊಮ್ಯಾನ್ಸ್‌ ಶುರುವಾದುದು 2009ರಲ್ಲಿ. ದಿ ರನ್‌ ಡೈರಿ ಫಿಲಂನಲ್ಲಿ ನಟಿಸುತ್ತಾ ಇದ್ದಾಗ ಇವರಿಬ್ಬರಿಗೂ ಗೆಳೆತನ. ಶವರ್‌ನಲ್ಲಿ ನಿಂತು ಕಿಸ್‌ ಮಾಡುವ ಸೀನ್‌ನಿಂದಲೇ ಅವರಿಬ್ಬರಿಗೂ ಓಹೋ ನಮ್ಮಿಬ್ಬರ ನಡುವೆ ಏನೋ ಇದೆ ಅನ್ನಿಸಲು ಶುರುವಾದದ್ದು. ಅದಕ್ಕೂ ಮುನ್ನ ಇಬ್ಬರೂ ಬೇರೆ ಮದುವೆಯಾಗಿದ್ದರು. 2012ರಲ್ಲಿ ತಮ್ಮ ಹಳೆಯ ಸಂಗಾತಿಗಳಿಂದ ಬೇರೆಯಾದರು. ʼʼಅವಳು ಕಾಳಜಿ ವಹಿಸುತ್ತಾಳೆ, ಪ್ರೀತಿಸುತ್ತಾಳೆ, ಅವಳು ಸ್ಮಾರ್ಟ್‌, ಫನ್ನಿ, ಅರ್ಥ ಮಾಡಿಕೊಳ್ಳುತ್ತಾಳೆ. ನಮ್ಮಿಬ್ಬರ ನಡುವೆ ತುಂಬಾ ಸಂಗತಿಗಳು ಕಾಮನ್‌ ಆಗಿವೆ..ʼʼ ಎಂದೆಲ್ಲ ಆಕೆಯ ಬಗೆಗೆ ಜಾನಿ ಹೇಳಿದ್ದು ಇತ್ತು.

ಎರಡು ವರ್ಷಗಳ ಡೇಟಿಂಗ್‌ ಬಳಿಕ ಅವರಿಬ್ಬರೂ 2014ರಲ್ಲಿ ಮದುವೆಯಾದರು. ಅದೂ ಕೂಡ ಜಾನಿ ಡೆಪ್‌ನ ಖಾಸಗಿ ದ್ವೀಪದಲ್ಲಿ.

ಆದರೆ ಆರಂಭದಿಂದಲೇ ಈ ದಾಂಪತ್ಯ ಮುರಿಯಲಿರುವ ಹಡಗು ಎಂಬುದು ಅರಿವಿಗೆ ಬಂತು. ಅದೂ ಮದುವೆಯಾದ ಮೊದಲ ದಿನದಿಂದಲೇ. ಮದುವೆಯಾದ ಕೆಲವೇ ಗಂಟೆಗಳ ಬಳಿಕ ʼʼನಾನೀಗ ಆಕೆಗೆ ಹೊಡೆಯಬಹುದುʼʼ ಎಂದು ತನ್ನ ಆಪ್ತನಿಗೆ ಡೆಪ್‌ ಹೇಳಿದ್ದು ದಾಖಲಾಗಿತ್ತು.

ಡೆಪ್‌ ಕೈಯಲ್ಲಿದ್ದ ಒಂದು ಟ್ಯಾಟೂ ಬಗ್ಗೆ ಹರ್ಡ್‌ ಕ್ಯಾಶುಯಲ್ಲಾಗಿ ಪ್ರಶ್ನಿಸಿದಾಗ ಡೆಪ್‌ ಮೊದಲ ಬಾರಿಗೆ ಆಕೆಯ ಕಪಾಲಕ್ಕೆ ಬಾರಿಸಿದ. ಆಕೆ ಶಾಕ್‌ಗೆ ಒಳಗಾದಳು. ಅಂದಿನಿಂದ ಆಕೆಯ ಬದುಕು ಬದಲಾಯಿತು. ನಂತರ ಎಂದೂ ದಾಂಪತ್ಯ ಹಳಿಗೆ ಮರಳಲೇ ಇಲ್ಲ.

ಮದುವೆಯಾಗಿ ಹದಿನೈದು ತಿಂಗಳಲ್ಲಿ ಹರ್ಡ್‌ ಡೈವೋರ್ಸ್‌ಗೆ ಅರ್ಜಿ ಹಾಕಿದಳು. ಇವರಿಬ್ಬರ ದಾಂಪತ್ಯದಲ್ಲಿ ನಡೆದ ಹೀನಾತಿಹೀನ ಜಗಳಗಳ ವಿವರಗಳು ಹೊರಬಿದ್ದವು. ಇಬ್ಬರೂ ಪರಸ್ಪರ ಹಿಂಸಾತ್ಮಕವಾಗಿ ಕಿತ್ತಾಡಿಕೊಳ್ಳುತ್ತಿದ್ದರು. ಹೊಡೆದುಕೊಳ್ಳುತ್ತಿದ್ದರು. ಡೆಪ್‌ ಬಿಯರ್‌ ಬಾಟಲ್‌ಗಳಿಂದ ಆಕೆಯ ಮೇಲೆ ಹಲ್ಲೆ ಮಾಡುತ್ತಿದ್ದ. ನಿನಗೆ ಇನ್ಯಾರ ಜೊತೆಗೋ ಸಂಬಂಧ ಇದೆ ಎಂದು ಸಂಶಯಿಸಿ ಆಕೆಯ ತಲೆಕೂದಲು ಹಿಡಿದು ಕೀಳುತ್ತಿದ್ದ. ಮುಖಮೈಥುನಕ್ಕೆ ಬಲಾತ್ಕರಿಸುತ್ತಿದ್ದ. ಕುಡಿದು ಚಿತ್‌ ಆದಾಗ, ಕೊಕೇನ್‌ ಸೇವಿಸಿ ಹೈ ಆದಾಗ, ಲಿಕ್ಕರ್ ಕ್ಯಾಬಿನೆಟ್‌ಗಳನ್ನು ಮುರಿದುಹಾಕುತ್ತಿದ್ದ.

ಹರ್ಡ್‌ ಹಿಂಸೆ ತಾಳಿಕೊಳ್ಳಲಾಗದೆ ಪ್ರತಿಹಿಂಸೆ ನಡೆಸುತ್ತಿದ್ದಳು. ಡೆಪ್‌ ಹೇಳುವ ಪ್ರಕಾರ ಅವಳು ಆತನ ಹಾಸಿಗೆಯಲ್ಲಿ ಮಲ ವಿಸರ್ಜನೆ ಮಾಡಿದ್ದು ಇತ್ತು. ಅಂತೂ ಇಬ್ಬರೂ ಡ್ರಗ್ಸ್‌ ಸೇವಿಸಿದಾಗ ಮನುಷ್ಯರಂತೆ ವರ್ತಿಸುತ್ತಲೇ ಇರಲಿಲ್ಲ ಎನ್ನಬಹುದು. ಮೃಗಗಳಂತೆ ಕಿತ್ತಾಡಿಕೊಳ್ಳುತ್ತಿದ್ದರು.

ಇವರಿಬ್ಬರ ವಿಚಾರಣೆಯ ಸಂದರ್ಭದಲ್ಲಿ ಹೊರಬರುತ್ತಿರುವ ಒಂದೊಂದು ಹಿಂಸೆ, ಕಿತ್ತಾಟದ ವಿವರಗಳೂ ಭೀಭತ್ಸವಾಗಿವೆ.

ಕೊನೆಗೂ ಎಂಟು ದಶಲಕ್ಷ ಡಾಲರ್‌ ಕೊಟ್ಟು ಡೆಪ್‌, ಹರ್ಡ್‌ಗೆ ಡೈವೋರ್ಸ್‌ ನೀಡಿ ಸೆಟಲ್‌ ಮಾಡಿಕೊಂಡ.

2018ರಲ್ಲಿ ಹರ್ಡ್‌ ವಾಷಿಂಗ್ಟನ್‌ ಪೋಸ್ಟ್‌ನಲ್ಲಿ ಒಂದು ಲೇಖನ ಬರೆದಳು. ಅದರಲ್ಲಿ ʼʼನಾನು ಮನೆಯೊಳಗಿನ ಹಿಂಸೆಯ ಸಂತ್ರಸ್ತೆʼʼ ಎಂದು ಬರೆದುಕೊಂಡಳು. ಇದನ್ನು ನೋಡಿ ಡೆಪ್‌ಗೆ ರೇಗಿತು. ಆತ ಆಕೆಯ ಮೇಲೆ 50 ಲಕ್ಷ ಡಾಲರ್‌ನ ಮಾನನಷ್ಟ ಕೇಸ್‌ ಹಾಕಿದ. ಪ್ರತಿಯಾಗಿ ಹರ್ಡ್‌ ಕೂಡ ಡೆಪ್‌ ಮೇಲೆ ಡೊಮೆಸ್ಟಿಕ್‌ ವಯೊಲೆನ್ಸ್‌ನ ಕೇಸ್‌ ಹಾಕಿದಳು. ಅದೇ ಈಗ ವಿಚಾರಣೆಯಲ್ಲಿದೆ.

ಇದನ್ನೂ ಓದಿ: ಹಾಲಿವುಡ್‌ ನಟನ ಸಂಸಾರದಲ್ಲೂ ಮೂಗು ತೂರಿಸಿದರೇ ಎಲಾನ್‌ ಮಸ್ಕ್?‌

ಈ ನಡುವೆ ಹರ್ಡ್‌ ಒಬ್ಬಳು ಹೆಣ್ಣುಮಗಳನ್ನು ಸರೊಗಸಿಯ ಮೂಲಕ ಪಡೆದಳು. ಅದರ ತಾಯಿಯೂ ತಂದೆಯೂ ತಾನೇ ಎಂದು ಹೇಳಿಕೊಂಡಳು.

ಈ ನಡುವೆ ಇನ್ನೊಂದು ಅಸಹ್ಯಕರ ಸಂಗತಿ ಹೊರಬಿತ್ತು. ನಮ್ಮ ದಾಂಪತ್ಯ ನಡೆದಿದ್ದಾಗಲೇ ಆಂಬರ್‌ ಹರ್ಡ್‌ ಮತ್ತು ಕಾರಾ ಡೆವಿಯನೆ ಎಂಬ ಇನ್ನೊಬ್ಬ ನಟಿಯ ಜೊತೆಗೆ ಉದ್ಯಮಿ ಎಲಾನ್‌ ಮಸ್ಕ್‌ ತ್ರೀಸಮ್‌ ನಡೆಸಿದ್ದ ಎಂದು ಕೂಡ ಜಾನಿ ಡೆಪ್‌ ಆರೋಪಿಸಿದ್ದ. ಮಸ್ಕ್‌ ಇದನ್ನು ಅಲ್ಲಗಳೆದ. ಹರ್ಡ್-‌ ಡೆಪ್‌ ಡೈವೋರ್ಸ್‌ ಆದ ಬಳಿಕವೇ ನಾನು ಹರ್ಡ್‌ ಜೊತೆ ಸಾಂಗತ್ಯ ಬೆಳೆಸಿದ್ದು ಎಂದು ಹೇಳಿದ. ಕಾರಾ ನನಗೆ ಗೆಳತಿ ಮಾತ್ರ ಎಂದ.

ಹೀಗೆ ಕೋರ್ಟಡ್‌ ವಿಚಾರಣೆ ಹೊಸ ಹೊಸ ಸತ್ಯಗಳನ್ನು ಹೊರಗೆಡಹುತ್ತಲೇ ನಡೆದಿದೆ. ಸೆಲೆಬ್ರಿಟಿ ದಾಂಪತ್ಯಗಳ ಬಗ್ಗೆ ಕಣ್ಣು ತೆರೆಸುವುದು, ಅವುಗಳ ಕತ್ತಲೆ ಕೋಣೆಗಳ ಅಸಹ್ಯ ಮಗ್ಗುಲುಗಳ ಮೇಲೆ ಬೆಳಕು ಚೆಲ್ಲುವುದಂತೂ ಇದರಿಂದ ಆಗಿದೆ. ಎಲ್ಲಿ ಹೋಗಿ ನಿಲ್ಲುತ್ತದೋ ತಿಳಿಯದು.

ಇದನ್ನೂ ಓದಿ: ನಿಮ್ಮ ಮಕ್ಕಳಿಗೆ ಬೇಸಿಗೆಯಲ್ಲಿ ಹೇಗೆ ಸಹಾಯ ಮಾಡಬೇಕು?: ಇಲ್ಲಿವೆ ಪ್ರಮುಖ ಟಿಪ್ಸ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

ಗೋಲ್ಡ್ ಸ್ಮಗ್ಲಿಂಗ್ ಹಗರಣ: ನಟಿ ರನ್ಯಾ ರಾವ್​​ಗೆ ಜಾಮೀನು ಮಂಜೂರು ಮಾಡಿದ ನ್ಯಾಯಾಲಯ!

VISTARANEWS.COM


on

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಅವರಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಕೊನೆಗೂ ಬಿಗ್ ರಿಲೀಫ್ ಸಿಕ್ಕಿದೆ. ಕಳೆದ ಒಂದು ವರ್ಷದಿಂದ ಜೈಲು ವಾಸ ಅನುಭವಿಸುತ್ತಿದ್ದ ನಟಿಗೆ ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯವು ಬುಧವಾರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಲಿದ್ದು, ದೀರ್ಘಕಾಲದ ಕಾನೂನು ಹೋರಾಟದ ನಂತರ ಅವರಿಗೆ ತಾತ್ಕಾಲಿಕ ಜಯ ಸಿಕ್ಕಂತಾಗಿದೆ.

ಸುಮಾರು 102 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಿದ ಗಂಭೀರ ಆರೋಪದ ಮೇಲೆ 2025ರ ಮಾರ್ಚ್ 3ರಂದು ಡಿಆರ್​​ಐ (DRI) ಅಧಿಕಾರಿಗಳು ರನ್ಯಾ ರಾವ್ ಅವರನ್ನು ಬಂಧಿಸಿದ್ದರು. ಈ ಹಿಂದೆ ಹೈಕೋರ್ಟ್ ಏಕಸದಸ್ಯ ಪೀಠವು ಇವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಅಲ್ಲದೆ, ಕೇಂದ್ರೀಯ ಆರ್ಥಿಕ ಗುಪ್ತಚರ ಬ್ಯೂರೋ ಕಾಫಿಪೋಸಾ (COFEPOSA) ಕಾಯ್ದೆಯ ಸೆಕ್ಷನ್ 3(1) ಅಡಿ ಬಂಧನದ ಆದೇಶ ಹೊರಡಿಸಿದ್ದರಿಂದ, ನಟಿಗೆ ಕಳೆದ ಒಂದು ವರ್ಷದಿಂದ ಜಾಮೀನು ಸಿಗದೆ ಜೈಲಿನಲ್ಲೇ ಉಳಿಯುವಂತಾಗಿತ್ತು.

ಇದೀಗ ಒಂದು ವರ್ಷದ ಕಠಿಣ ಜೈಲು ವಾಸದ ನಂತರ ನ್ಯಾಯಾಲಯವು ಜಾಮೀನು ನೀಡಿದ್ದು, ರನ್ಯಾ ರಾವ್ ಜೈಲಿನಿಂದ ಹೊರಬರಲು ಸಿದ್ಧರಾಗಿದ್ದಾರೆ. ಹಗರಣದ ಆಳ ಮತ್ತು ವ್ಯಾಪ್ತಿ ದೊಡ್ಡದಾಗಿರುವುದರಿಂದ ತನಿಖಾ ಸಂಸ್ಥೆಗಳು ತನಿಖೆಯನ್ನು ಮುಂದುವರಿಸಿವೆ. ಸದ್ಯಕ್ಕೆ ಬಿಡುಗಡೆಯ ಭಾಗ್ಯ ಸಿಕ್ಕಿದ್ದರೂ, ವಿಚಾರಣೆಯ ಸಮಯದಲ್ಲಿ ನ್ಯಾಯಾಲಯ ವಿಧಿಸಿರುವ ಷರತ್ತುಗಳನ್ನು ಪಾಲಿಸಬೇಕಿದೆ. ಈ ಹೈಪ್ರೊಫೈಲ್ ಪ್ರಕರಣವು ಚಿತ್ರರಂಗದಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಭಾರಿ ಸಂಚಲನ ಮೂಡಿಸಿತ್ತು.

Continue Reading

Latest

ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿ ವಿರುದ್ಧ ದಿನಕರ್ ತೂಗುದೀಪ ಕಿಡಿ: ಮೋಸಗಾರ ಎಂದಿದ್ದೇಕೆ ಚಾಲೆಂಜಿಂಗ್‌ಸ್ಟಾರ್‌ ಸಹೋದರ?

VISTARANEWS.COM


on

ಬೆಂಗಳೂರು: ಸ್ಯಾಂಡಲ್‌ವುಡ್ ನಟ ದರ್ಶನ್ ಅವರ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ಅಲಿಯಾಸ್ ಮಲ್ಲಿ ವಿರುದ್ಧ ನಿರ್ದೇಶಕ ದಿನಕರ್ ತೂಗುದೀಪ ಗಂಭೀರ ವಂಚನೆಯ ಆರೋಪಗಳನ್ನು ಮಾಡಿದ್ದಾರೆ. ಮಲ್ಲಿಕಾರ್ಜುನ್ ಒಬ್ಬ ನಂಬಿಕೆ ದ್ರೋಹಿ ಮತ್ತು ಮಹಾ ವಂಚಕ ಎಂದು ಕರೆದಿರುವ ಅವರು, ಸಾರ್ವಜನಿಕರು ಈತನ ಮಾತುಗಳನ್ನು ನಂಬಿ ಹಣಕಾಸಿನ ವಿಚಾರದಲ್ಲಿ ಮೋಸ ಹೋಗಬಾರದು ಎಂದು ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಎಚ್ಚರಿಕೆ ನೀಡಿದ್ದಾರೆ.

ದಿನಕರ್ ತೂಗುದೀಪ ಅವರ ಪ್ರಕಾರ, ಮಲ್ಲಿಕಾರ್ಜುನ್ ದರ್ಶನ್ ಅವರ ಹೆಸರನ್ನು ಹಾಗೂ ‘ತೂಗುದೀಪ ಪ್ರೊಡಕ್ಷನ್’ ಸಂಸ್ಥೆಯ ಘನತೆಯನ್ನು ದುರ್ಬಳಕೆ ಮಾಡಿಕೊಂಡು ಅನೇಕರಿಗೆ ವಂಚಿಸಿದ್ದಾನೆ. ಎಂಟು ವರ್ಷಗಳ ಹಿಂದೆಯೇ ಹಣಕಾಸಿನ ವಿಚಾರದಲ್ಲಿ ತೂಗುದೀಪ ಕುಟುಂಬಕ್ಕೆ ದೊಡ್ಡ ದ್ರೋಹ ಎಸಗಿದ್ದ ಮಲ್ಲಿ, ಪರಿಚಯಸ್ಥರು ಮತ್ತು ಸ್ನೇಹಿತರ ಬಳಿ ಸುಳ್ಳು ಹೇಳಿ ಹಣ ಪಡೆದು ಪರಾರಿಯಾಗಿದ್ದ. ಈಗ ಮತ್ತೆ ಪ್ರತ್ಯಕ್ಷವಾಗಿ ಸುದ್ದಿಗೋಷ್ಠಿ ನಡೆಸಿ ತನಗೆ ಅನ್ಯಾಯವಾಗಿದೆ ಎಂದು ‘ಸಿಂಪತಿ’ ಗಿಟ್ಟಿಸಿಕೊಳ್ಳಲು ಕಟ್ಟುಕಥೆ ಹೇಳುತ್ತಿದ್ದಾನೆ. ಆದರೆ ಆತ ತನ್ನಿಂದ ಯಾರಿಗೆಲ್ಲ ಅನ್ಯಾಯವಾಗಿದೆ ಎಂಬ ಸತ್ಯವನ್ನು ಮುಚ್ಚಿಟ್ಟಿದ್ದಾನೆ ಎಂದು ದಿನಕರ್ ಆಕ್ರೋಶ ಹೊರಹಾಕಿದ್ದಾರೆ.

ಈ ನಂಬಿಕೆ ದ್ರೋಹಿಗೂ ತಮ್ಮ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿರುವ ದಿನಕರ್, ಮಲ್ಲಿಕಾರ್ಜುನ್ ಅನ್ನು ಮತ್ತೆ ತಮ್ಮ ಸಂಸ್ಥೆಗೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ಆಗಿ ತಿಳಿಸಿದ್ದಾರೆ. ಮಲ್ಲಿ ಮತ್ತೆ ದರ್ಶನ್ ಹೆಸರನ್ನು ಬಳಸಿಕೊಂಡು ಹಣ ಮಾಡುವ ಹುನ್ನಾರ ನಡೆಸುತ್ತಿದ್ದು, ಯಾರಾದರೂ ಆತನ ಒಡನಾಟದ ಬಗ್ಗೆ ಹೇಳಿಕೊಂಡು ಬಂದರೆ ದಯವಿಟ್ಟು ನಂಬಬೇಡಿ ಎಂದು ಕನ್ನಡಿಗರಲ್ಲಿ ಮನವಿ ಮಾಡಿದ್ದಾರೆ. ಈ ಮೂಲಕ ದರ್ಶನ್ ಅಭಿಮಾನಿಗಳು ಮತ್ತು ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕೆಂದು ವಿನಂತಿಸಿದ್ದಾರೆ.

Continue Reading

Latest

ನಟ, ರಾಜಕಾರಣಿ ವಿಜಯ್‌ ವಿರುದ್ಧ ಕಮಲ್‌ ಹಾಸನ್‌ ಆಕ್ರೋಶ; ಕಾರಣ ಏನು?

VISTARANEWS.COM


on

ತಿರುಚಿರಾಪಳ್ಳಿ: ಬಾಲ್ಯದಲ್ಲಿ ಮೇರುನಟ ಮತ್ತು ರಾಜಕಾರಣಿ ಎಂ.ಜಿ. ರಾಮಚಂದ್ರನ್, ಶಿವಾಜಿ ಗಣೇಶನ್ ಅವರ ಮಡಿಲಲ್ಲಿ ಬೆಳೆದಿದ್ದರೂ ನಾನು ರಾಜಕೀಯ ಲಾಭ ಮಾಡಿಕೊಳ್ಳಲಿಲ್ಲ ಎಂದು ನಟ ಹಾಗೂ ಮಕ್ಕಳ ನೀಧಿ ಮೈಯಂ ಪಕ್ಷದ ಅಧ್ಯಕ್ಷ ಕಮಲ್ ಹಾಸನ್ ಹೇಳಿದ್ದಾರೆ. ಟಿವಿಕೆ ಮುಖ್ಯಸ್ಥ ವಿಜಯ್‌ ಅವರನ್ನು ಗುರಿಯಾಗಿಸಿಕೊಂಡೇ ಕಮಲ್‌ ಹಾಸನ್‌ ಈ ಟೀಕೆ ಮಾಡಿದ್ದಾರೆ.

ಪೂರ್ವ ತಿರುಚಿರಾಪಳ್ಳಿ ಕ್ಷೇತ್ರದ ಡಿಎಂಕೆ ಅಭ್ಯರ್ಥಿ ಇನಿಗೋ ಎಸ್.ಇರುದಯರಾಜ್ ಪರವಾಗಿ ಪ್ರಚಾರ ನಡೆಸಿದ ಕಮಲ್ ಹಾಸನ್ ಅವರು ವಿಜಯ್‌ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಇತ್ತೀಚೆಗೆ ರಾಜಕೀಯ ಪ್ರವೇಶಿಸಿರುವ ನಟ ವಿಜಯ್ ತಮ್ಮನ್ನು ಎಂಜಿಆರ್ ಅವರ ಉತ್ತರಾಧಿಕಾರಿ ಎಂಬಂತೆ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿರುವುದಕ್ಕೆ ಕಮಲ್ ಹಾಸನ್ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ನಾನು ಕೂಡ ಬಾಲ್ಯದಲ್ಲೇ ಚಿತ್ರರಂಗ ಪ್ರವೇಶಿಸಿದೆ. ಎಂಜಿ ರಾಮಚಂರನ್‌ ಅವರಿಗೆ ನಾನು ಎಂದರೆ ತುಂಬಾ ಪ್ರೀತಿ ಇತ್ತು. ಆದರೂ ನಾನು ಆ ಸಂಪರ್ಕವನ್ನು ಎಲ್ಲೂ ಪ್ರದರ್ಶಿಸಿಕೊಳ್ಳಲಿಲ್ಲ ಅಥವಾ ದುರುಪಯೋಗಪಡಿಸಿಕೊಳ್ಳಲಿಲ್ಲ’ ಎಂದು ಹೇಳಿದ್ದಾರೆ. ತಮಿಳುನಾಡಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 23 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.

Continue Reading

Latest

ಹೆಣ್ಣು ಮಗುವಿನ ತಂದೆಯಾದ ಖ್ಯಾತ ನಿರ್ದೇಶಕ ಅಟ್ಲಿ; ಅಭಿನಂದನೆಗಳ ಮಹಾಪೂರ

VISTARANEWS.COM


on

ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಅಟ್ಲಿ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ. ಅಟ್ಲಿ ಅವರ ಪತ್ನಿ ಪ್ರಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಅಟ್ಲಿ ಹಾಗೂ ಅವರ ಪತ್ನಿ ಪ್ರಿಯಾ ಅವರ ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣ ಆಗಿದೆ. ಈ ದಂಪತಿ ಎರಡನೇ ಬಾರಿಗೆ ಪೋಷಕರಾಗಿದ್ದು, ಮುದ್ದಾದ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ. ವಿಶೇಷವೆಂದರೆ, ಅಟ್ಲಿ ನಿರ್ದೇಶನದ ‘ರಾಕಾ’ ಚಿತ್ರದ ನಾಯಕಿ ದೀಪಿಕಾ ಪಡುಕೋಣೆ ಅವರು ತಮ್ಮ ಎರಡನೇ ಪ್ರೆಗ್ನೆನ್ಸಿ ಸುದ್ದಿಯನ್ನು ಹಂಚಿಕೊಂಡ ಮರುದಿನವೇ ಅಟ್ಲೀ ಕೂಡ ಈ ಸಿಹಿ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಪ್ರಿಯಾ ಅಟ್ಲಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಇಂದು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಟ್ಲಿ ಮತ್ತು ಪ್ರಿಯಾ, ತಮ್ಮ ಮನೆಗೆ ಹೆಣ್ಣು ಮಗುವಿನ ಆಗಮನವಾಗಿರುವುದನ್ನು ಖಚಿತಪಡಿಸಿದ್ದಾರೆ. ಈ ಪೋಸ್ಟ್‌ ಗೆ ‘ಧನ್ಯತೆಯ ಭಾವ ಮೂಡಿದೆ’ ಎಂದು ಕ್ಯಾಪ್ಷನ್ ನೀಡಿದ್ದಾರೆ. ತಮ್ಮ ಮೊದಲ ಪುತ್ರ ಮೀರ್ ಈಗ ದೊಡ್ಡ ಅಣ್ಣನ ಜವಾಬ್ದಾರಿ ವಹಿಸಿಕೊಳ್ಳಲು ಸಜ್ಜಾಗಿರುವ ಮುದ್ದಾದ ಪೋಸ್ಟರ್ ಒಂದನ್ನೂ ಹಂಚಿಕೊಂಡಿರುವುದು ಕುತೂಹಲ ಮೂಡಿಸಿದೆ.
ಅಟ್ಲಿ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಇಡೀ ದೇಶದ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಅಟ್ಲಿ ಮತ್ತು ಪ್ರಿಯಾ ಹಲವು ವರ್ಷಗಳ ಕಾಲ ಪ್ರೀತಿಸಿ 2014ರಲ್ಲಿ ವಿವಾಹವಾಗಿದ್ದರು. ಮದುವೆಯಾದ ಎಂಟು ವರ್ಷಗಳ ನಂತರ 2023ರ ಜನವರಿ 31ರಂದು ದಂಪತಿಗೆ ಮೊದಲ ಪುತ್ರ ಮೀರ್ ಜನಿಸಿದ್ದ. ಈಗ ಎರಡನೇ ಮಗುವಿನ ಆಗಮನವಾಗಿದೆ.
ಚಿತ್ರರಂಗದಲ್ಲಿಯೂ ಅಟ್ಲಿ ಅವರಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಈಗ ಅವರು ‘ರಾಕಾ’ ಚಿತ್ರದ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಮತ್ತು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ.

Continue Reading
Advertisement
Latest1 minute ago

ಜೈಲಿನಲ್ಲಿದ್ದುಕೊಂಡೆ ವಿಧ್ವಂಸ ಕೃತ್ಯಕ್ಕೆ ಸಂಚು: 7 ಆರೋಪಿಗಳಿಗೆ ಕಠಿಣ ಶಿಕ್ಷೆ ಪ್ರಕಟಿಸಿದ ಎನ್‌ ಐ ಎ ಕೋರ್ಟ್

Latest16 minutes ago

ಸಚಿವ ಪ್ರಲ್ಹಾದ ಜೋಶಿ ಮನವಿಗೆ ಸ್ಪಂದನೆ; “ಧಾರವಾಡ ಆಕಾಶವಾಣಿ ಕೇಂದ್ರ” ಸ್ಥಳಾಂತರಿಸದಿರಲು ನಿರ್ಧಾರ

Latest23 minutes ago

Latest23 minutes ago

ಚಿನ್ನ ಕಳ್ಳ ಸಾಗಣೆ: ನಟಿ ರನ್ಯಾರಾವ್‌ ಗೆ ಸಿಕ್ತು ಜಾಮೀನು

Latest45 minutes ago

ತಮಿಳುನಾಡು: ಯಾರು ಹಿತವರು ಈ ಮೂವರೊಳಗೆ?:dmk; aiadmk; tvk

Latest2 hours ago

ಗೋಲ್ಡ್ ಸ್ಮಗ್ಲಿಂಗ್ ಹಗರಣ: ನಟಿ ರನ್ಯಾ ರಾವ್​​ಗೆ ಜಾಮೀನು ಮಂಜೂರು ಮಾಡಿದ ನ್ಯಾಯಾಲಯ!

ಅವಿಭಾಗೀಕೃತ2 hours ago

“ನಿಮ್ಮಿಂದಲೇ ಟ್ರಾಫಿಕ್‌ ಜಾಮ್!‌ ಗೆಟ್‌ ಔಟ್‌” ಎಂದು ಸಚಿವರನ್ನು ನಿಂದಿಸಿದ ಮಹಿಳೆ

Latest2 hours ago

ಹಾರ್ದಿಕ್ ವಿರುದ್ಧ ಅಸಮಾಧಾನ: ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಸಹೋದರ ಕೃನಾಲ್ ಪಾಂಡ್ಯ.

Donald trump
Latest2 hours ago

ಯುದ್ಧವಿರಾಮ ಅನಿರ್ದಿಷ್ಠಾವಧಿಗೆ ವಿಸ್ತರಣೆ: ಡೋನಾಲ್ಡ್ ಟ್ರಂಪ್‌ ಘೋಷಣೆ

BJP State President B Y Vijayendra latest statement in bengaluru
Latest3 hours ago

ಸರ್ಕಾರಿ ನೌಕರರಿಗೆ ಸಂಬಳ ಕೊಡದ ಸರ್ಕಾರ: ವಿಜಯೇಂದ್ರ ವಾಗ್ದಾಳಿ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌