ವಯೊಲೆನ್ಸ್‌, ವಯೊಲೆನ್ಸ್, ವಯೊಲೆನ್ಸ್:‌ ಎಲ್ಲರ ಗಮನ ಸೆಳೀತಿದೆ ಈ ಹಾಲಿವುಡ್‌ ವಿಚಾರಣೆ ‌ - Vistara News

ಸಿನಿಮಾ

ವಯೊಲೆನ್ಸ್‌, ವಯೊಲೆನ್ಸ್, ವಯೊಲೆನ್ಸ್:‌ ಎಲ್ಲರ ಗಮನ ಸೆಳೀತಿದೆ ಈ ಹಾಲಿವುಡ್‌ ವಿಚಾರಣೆ ‌

ಪೈರೇಟ್ಸ್‌ ಆಫ್‌ ದಿ ಕೆರೀಬಿಯನ್‌ ಸಿನಿಮಾ ನಟ ಜಾನಿ ಡೆಪ್‌ ಮತ್ತು ನಟಿ ಆಂಬರ್‌ ಹರ್ಡ್‌ ನಡುವಿನ ಮಾನನಷ್ಟ ಮೊಕದ್ದಮೆ ವಿಚಾರಣೆ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಲೇ ಇದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸದ್ಯ ಹಾಲಿವುಡ್‌ನಲ್ಲಿ ಯಾವುದೇ ಫಿಲಂಗಳಿಗಿಂತ ಅತ್ಯಧಿಕ ಸದ್ದು ಮಾಡುತ್ತಾ ಓಡುತ್ತಿರುವುದು ಜಾನಿ ಡೆಪ್‌ ಮತ್ತು ಆಂಬರ್‌ ಹರ್ಡ್‌ ಎಂಬ ಇಬ್ಬರು ಹೈ ಪ್ರೊಫೈಲ್‌ ನಟರ ಮುರಿದ ದಾಂಪತ್ಯದ, ನಂತರದ ಮಾನನಷ್ಟ ಮೊಕದ್ದಮೆಯ ಕೋರ್ಟ್‌ ವಿಚಾರಣೆಯ ಪ್ರಕರಣ. ಯೂಟ್ಯೂಬ್‌ಗೆ ಹೋದರೆ ಖುದ್ದು ಕೋರ್ಟ್‌ ಟ್ರಯಲ್‌ನ ವಿಡಿಯೋಗಳನ್ನೂ ನೀವು ನೋಡಬಹುದು.

ಅದಿರಲಿ. ನೀವು ಈ ಕೇಸ್‌ನ ಆದ್ಯಂತ ತಿಳಿದುಕೊಳ್ಳಬೇಕಿದ್ದರೆ ಈ ಕತೆಯನ್ನು ಆರಂಭದಿಂದಲೇ ಶುರು ಮಾಡಬೇಕು.

ಜಾನಿ ಡೆಪ್‌, ಪೈರೇಟ್ಸ್‌ ಆಫ್‌ ದಿ ಕೆರಿಬಿಯನ್‌ ಸೀರೀಸ್‌ ಸಿನಿಮಾಗಳಿಂದಾಗಿ ಜಗದ್ವಿಖ್ಯಾತ. ಅವನ ಕಡಲುಗಳ್ಳ ಭೂತದ ಪಾತ್ರ ಮಕ್ಕಳಿಗೂ ಚಿರಪರಿಚಿತ. ಇನ್ನು ಆಂಬರ್‌ ಹರ್ಡ್‌, ಈಕೆ ʼಗೋನ್‌ ಗರ್ಲ್‌ʼ ಫಿಲಂನ ಲೀಡ್‌ ಕ್ಯಾರೆಕ್ಟರ್‌ ಆಗಿ ಹೆಸರು ಮಾಡಿದಳು. ಇಬ್ಬರ ಬುಟ್ಟಿಯಲ್ಲೂ ಹತ್ತಾರು ಫೀಲಂಗಳೂ ಕೆಲವಷ್ಟು ಡೇಟಿಂಗ್-‌ ಪ್ರೇಮ- ಮದುವೆ- ಪ್ರೇಮಭಂಗ- ಇತ್ಯಾದಿಗಳೂ ಇವೆ.

ಇವರಿಬ್ಬರ ರೊಮ್ಯಾನ್ಸ್‌ ಶುರುವಾದುದು 2009ರಲ್ಲಿ. ದಿ ರನ್‌ ಡೈರಿ ಫಿಲಂನಲ್ಲಿ ನಟಿಸುತ್ತಾ ಇದ್ದಾಗ ಇವರಿಬ್ಬರಿಗೂ ಗೆಳೆತನ. ಶವರ್‌ನಲ್ಲಿ ನಿಂತು ಕಿಸ್‌ ಮಾಡುವ ಸೀನ್‌ನಿಂದಲೇ ಅವರಿಬ್ಬರಿಗೂ ಓಹೋ ನಮ್ಮಿಬ್ಬರ ನಡುವೆ ಏನೋ ಇದೆ ಅನ್ನಿಸಲು ಶುರುವಾದದ್ದು. ಅದಕ್ಕೂ ಮುನ್ನ ಇಬ್ಬರೂ ಬೇರೆ ಮದುವೆಯಾಗಿದ್ದರು. 2012ರಲ್ಲಿ ತಮ್ಮ ಹಳೆಯ ಸಂಗಾತಿಗಳಿಂದ ಬೇರೆಯಾದರು. ʼʼಅವಳು ಕಾಳಜಿ ವಹಿಸುತ್ತಾಳೆ, ಪ್ರೀತಿಸುತ್ತಾಳೆ, ಅವಳು ಸ್ಮಾರ್ಟ್‌, ಫನ್ನಿ, ಅರ್ಥ ಮಾಡಿಕೊಳ್ಳುತ್ತಾಳೆ. ನಮ್ಮಿಬ್ಬರ ನಡುವೆ ತುಂಬಾ ಸಂಗತಿಗಳು ಕಾಮನ್‌ ಆಗಿವೆ..ʼʼ ಎಂದೆಲ್ಲ ಆಕೆಯ ಬಗೆಗೆ ಜಾನಿ ಹೇಳಿದ್ದು ಇತ್ತು.

ಎರಡು ವರ್ಷಗಳ ಡೇಟಿಂಗ್‌ ಬಳಿಕ ಅವರಿಬ್ಬರೂ 2014ರಲ್ಲಿ ಮದುವೆಯಾದರು. ಅದೂ ಕೂಡ ಜಾನಿ ಡೆಪ್‌ನ ಖಾಸಗಿ ದ್ವೀಪದಲ್ಲಿ.

ಆದರೆ ಆರಂಭದಿಂದಲೇ ಈ ದಾಂಪತ್ಯ ಮುರಿಯಲಿರುವ ಹಡಗು ಎಂಬುದು ಅರಿವಿಗೆ ಬಂತು. ಅದೂ ಮದುವೆಯಾದ ಮೊದಲ ದಿನದಿಂದಲೇ. ಮದುವೆಯಾದ ಕೆಲವೇ ಗಂಟೆಗಳ ಬಳಿಕ ʼʼನಾನೀಗ ಆಕೆಗೆ ಹೊಡೆಯಬಹುದುʼʼ ಎಂದು ತನ್ನ ಆಪ್ತನಿಗೆ ಡೆಪ್‌ ಹೇಳಿದ್ದು ದಾಖಲಾಗಿತ್ತು.

ಡೆಪ್‌ ಕೈಯಲ್ಲಿದ್ದ ಒಂದು ಟ್ಯಾಟೂ ಬಗ್ಗೆ ಹರ್ಡ್‌ ಕ್ಯಾಶುಯಲ್ಲಾಗಿ ಪ್ರಶ್ನಿಸಿದಾಗ ಡೆಪ್‌ ಮೊದಲ ಬಾರಿಗೆ ಆಕೆಯ ಕಪಾಲಕ್ಕೆ ಬಾರಿಸಿದ. ಆಕೆ ಶಾಕ್‌ಗೆ ಒಳಗಾದಳು. ಅಂದಿನಿಂದ ಆಕೆಯ ಬದುಕು ಬದಲಾಯಿತು. ನಂತರ ಎಂದೂ ದಾಂಪತ್ಯ ಹಳಿಗೆ ಮರಳಲೇ ಇಲ್ಲ.

ಮದುವೆಯಾಗಿ ಹದಿನೈದು ತಿಂಗಳಲ್ಲಿ ಹರ್ಡ್‌ ಡೈವೋರ್ಸ್‌ಗೆ ಅರ್ಜಿ ಹಾಕಿದಳು. ಇವರಿಬ್ಬರ ದಾಂಪತ್ಯದಲ್ಲಿ ನಡೆದ ಹೀನಾತಿಹೀನ ಜಗಳಗಳ ವಿವರಗಳು ಹೊರಬಿದ್ದವು. ಇಬ್ಬರೂ ಪರಸ್ಪರ ಹಿಂಸಾತ್ಮಕವಾಗಿ ಕಿತ್ತಾಡಿಕೊಳ್ಳುತ್ತಿದ್ದರು. ಹೊಡೆದುಕೊಳ್ಳುತ್ತಿದ್ದರು. ಡೆಪ್‌ ಬಿಯರ್‌ ಬಾಟಲ್‌ಗಳಿಂದ ಆಕೆಯ ಮೇಲೆ ಹಲ್ಲೆ ಮಾಡುತ್ತಿದ್ದ. ನಿನಗೆ ಇನ್ಯಾರ ಜೊತೆಗೋ ಸಂಬಂಧ ಇದೆ ಎಂದು ಸಂಶಯಿಸಿ ಆಕೆಯ ತಲೆಕೂದಲು ಹಿಡಿದು ಕೀಳುತ್ತಿದ್ದ. ಮುಖಮೈಥುನಕ್ಕೆ ಬಲಾತ್ಕರಿಸುತ್ತಿದ್ದ. ಕುಡಿದು ಚಿತ್‌ ಆದಾಗ, ಕೊಕೇನ್‌ ಸೇವಿಸಿ ಹೈ ಆದಾಗ, ಲಿಕ್ಕರ್ ಕ್ಯಾಬಿನೆಟ್‌ಗಳನ್ನು ಮುರಿದುಹಾಕುತ್ತಿದ್ದ.

ಹರ್ಡ್‌ ಹಿಂಸೆ ತಾಳಿಕೊಳ್ಳಲಾಗದೆ ಪ್ರತಿಹಿಂಸೆ ನಡೆಸುತ್ತಿದ್ದಳು. ಡೆಪ್‌ ಹೇಳುವ ಪ್ರಕಾರ ಅವಳು ಆತನ ಹಾಸಿಗೆಯಲ್ಲಿ ಮಲ ವಿಸರ್ಜನೆ ಮಾಡಿದ್ದು ಇತ್ತು. ಅಂತೂ ಇಬ್ಬರೂ ಡ್ರಗ್ಸ್‌ ಸೇವಿಸಿದಾಗ ಮನುಷ್ಯರಂತೆ ವರ್ತಿಸುತ್ತಲೇ ಇರಲಿಲ್ಲ ಎನ್ನಬಹುದು. ಮೃಗಗಳಂತೆ ಕಿತ್ತಾಡಿಕೊಳ್ಳುತ್ತಿದ್ದರು.

ಇವರಿಬ್ಬರ ವಿಚಾರಣೆಯ ಸಂದರ್ಭದಲ್ಲಿ ಹೊರಬರುತ್ತಿರುವ ಒಂದೊಂದು ಹಿಂಸೆ, ಕಿತ್ತಾಟದ ವಿವರಗಳೂ ಭೀಭತ್ಸವಾಗಿವೆ.

ಕೊನೆಗೂ ಎಂಟು ದಶಲಕ್ಷ ಡಾಲರ್‌ ಕೊಟ್ಟು ಡೆಪ್‌, ಹರ್ಡ್‌ಗೆ ಡೈವೋರ್ಸ್‌ ನೀಡಿ ಸೆಟಲ್‌ ಮಾಡಿಕೊಂಡ.

2018ರಲ್ಲಿ ಹರ್ಡ್‌ ವಾಷಿಂಗ್ಟನ್‌ ಪೋಸ್ಟ್‌ನಲ್ಲಿ ಒಂದು ಲೇಖನ ಬರೆದಳು. ಅದರಲ್ಲಿ ʼʼನಾನು ಮನೆಯೊಳಗಿನ ಹಿಂಸೆಯ ಸಂತ್ರಸ್ತೆʼʼ ಎಂದು ಬರೆದುಕೊಂಡಳು. ಇದನ್ನು ನೋಡಿ ಡೆಪ್‌ಗೆ ರೇಗಿತು. ಆತ ಆಕೆಯ ಮೇಲೆ 50 ಲಕ್ಷ ಡಾಲರ್‌ನ ಮಾನನಷ್ಟ ಕೇಸ್‌ ಹಾಕಿದ. ಪ್ರತಿಯಾಗಿ ಹರ್ಡ್‌ ಕೂಡ ಡೆಪ್‌ ಮೇಲೆ ಡೊಮೆಸ್ಟಿಕ್‌ ವಯೊಲೆನ್ಸ್‌ನ ಕೇಸ್‌ ಹಾಕಿದಳು. ಅದೇ ಈಗ ವಿಚಾರಣೆಯಲ್ಲಿದೆ.

ಇದನ್ನೂ ಓದಿ: ಹಾಲಿವುಡ್‌ ನಟನ ಸಂಸಾರದಲ್ಲೂ ಮೂಗು ತೂರಿಸಿದರೇ ಎಲಾನ್‌ ಮಸ್ಕ್?‌

ಈ ನಡುವೆ ಹರ್ಡ್‌ ಒಬ್ಬಳು ಹೆಣ್ಣುಮಗಳನ್ನು ಸರೊಗಸಿಯ ಮೂಲಕ ಪಡೆದಳು. ಅದರ ತಾಯಿಯೂ ತಂದೆಯೂ ತಾನೇ ಎಂದು ಹೇಳಿಕೊಂಡಳು.

ಈ ನಡುವೆ ಇನ್ನೊಂದು ಅಸಹ್ಯಕರ ಸಂಗತಿ ಹೊರಬಿತ್ತು. ನಮ್ಮ ದಾಂಪತ್ಯ ನಡೆದಿದ್ದಾಗಲೇ ಆಂಬರ್‌ ಹರ್ಡ್‌ ಮತ್ತು ಕಾರಾ ಡೆವಿಯನೆ ಎಂಬ ಇನ್ನೊಬ್ಬ ನಟಿಯ ಜೊತೆಗೆ ಉದ್ಯಮಿ ಎಲಾನ್‌ ಮಸ್ಕ್‌ ತ್ರೀಸಮ್‌ ನಡೆಸಿದ್ದ ಎಂದು ಕೂಡ ಜಾನಿ ಡೆಪ್‌ ಆರೋಪಿಸಿದ್ದ. ಮಸ್ಕ್‌ ಇದನ್ನು ಅಲ್ಲಗಳೆದ. ಹರ್ಡ್-‌ ಡೆಪ್‌ ಡೈವೋರ್ಸ್‌ ಆದ ಬಳಿಕವೇ ನಾನು ಹರ್ಡ್‌ ಜೊತೆ ಸಾಂಗತ್ಯ ಬೆಳೆಸಿದ್ದು ಎಂದು ಹೇಳಿದ. ಕಾರಾ ನನಗೆ ಗೆಳತಿ ಮಾತ್ರ ಎಂದ.

ಹೀಗೆ ಕೋರ್ಟಡ್‌ ವಿಚಾರಣೆ ಹೊಸ ಹೊಸ ಸತ್ಯಗಳನ್ನು ಹೊರಗೆಡಹುತ್ತಲೇ ನಡೆದಿದೆ. ಸೆಲೆಬ್ರಿಟಿ ದಾಂಪತ್ಯಗಳ ಬಗ್ಗೆ ಕಣ್ಣು ತೆರೆಸುವುದು, ಅವುಗಳ ಕತ್ತಲೆ ಕೋಣೆಗಳ ಅಸಹ್ಯ ಮಗ್ಗುಲುಗಳ ಮೇಲೆ ಬೆಳಕು ಚೆಲ್ಲುವುದಂತೂ ಇದರಿಂದ ಆಗಿದೆ. ಎಲ್ಲಿ ಹೋಗಿ ನಿಲ್ಲುತ್ತದೋ ತಿಳಿಯದು.

ಇದನ್ನೂ ಓದಿ: ನಿಮ್ಮ ಮಕ್ಕಳಿಗೆ ಬೇಸಿಗೆಯಲ್ಲಿ ಹೇಗೆ ಸಹಾಯ ಮಾಡಬೇಕು?: ಇಲ್ಲಿವೆ ಪ್ರಮುಖ ಟಿಪ್ಸ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Rakshit Shetty: ರಕ್ಷಿತ್‌ ಶೆಟ್ಟಿಗೆ ತಪ್ಪದ ಸಂಕಷ್ಟ; ಮತ್ತೊಂದು ದೂರು ದಾಖಲು!

Rakshit Shetty: ನಟ ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಜನವರಿ 26 ರಂದು ರಿಲೀಸ್‌ ಆಗಿತ್ತು. ಕಾಮಿಡಿ ಜಾನರ್‌ನ ಈ ಸಿನಿಮಾದಲ್ಲಿ ನಟ ದಿಗಂತ್, ಲೂಸ್ ಮಾದ ಯೋಗಿ, ಅಚ್ಯುತ್ ಕುಮಾ‌ರ್, ನಟಿ ಸಿರಿ ರವಿಕುಮಾರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಕಿರಿಕ್ ಪಾರ್ಟಿ’ ಚಿತ್ರದ ಬರಹಗಾರ ಅಭಿಜಿತ್ ಮಹೇಶ್ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದರು. ಕಿರಿಕ್‌ ಪಾರ್ಟಿಯ ಬರಹಗಾರರಲ್ಲಿ ಅಭಿಜಿತ್ ಮಹೇಶ್ ಕೂಡ ಒಬ್ಬರು.

VISTARANEWS.COM


on

Rakshit Shetty copy right issue Bachelor Party File a complaint
Koo

ಬೆಂಗಳೂರು: ‘ಸಿಂಪಲ್ ಸ್ಟಾರ್ರಕ್ಷಿತ್ ಶೆಟ್ಟಿ ಅಭಿನಯದ ರಿಷಬ್ ಶೆಟ್ಟಿ (Rakshit Shetty)ನಿರ್ದೇಶನದ ‘ಕಿರಿಕ್ ಪಾರ್ಟಿ’ 2016ರಲ್ಲಿ ತೆರೆಗೆ ಬಂದಿತ್ತು. ‘ಕಿರಿಕ್ ಪಾರ್ಟಿ’ ಸಿನಿಮಾ ‘ಕಾಪಿರೈಟ್’ ವಿಚಾರವಾಗಿ ವಿವಾದಕ್ಕೂ ಗ್ರಾಸವಾಗಿತ್ತು. ಇದೀಗ ನಟ ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಚಿತ್ರದ ಸರದಿ. ಈ ಚಿತ್ರದ ʻಗಾಳಿಮಾತುʼ ಹಾಗೂ ʻನ್ಯಾಯ ಎಲ್ಲಿದೆʼ ಎಂಬ ಹಾಡನ್ನು ಕದ್ದಿರುವ ಆರೋಪ ಕೇಳಿ ಬಂದಿದೆ. ಮಾತ್ರವಲ್ಲ ನಟ ರಕ್ಷಿತ್ ಶೆಟ್ಟಿ ಮೇಲೆ ದೂರು ದಾಖಲಾಗಿದೆ.

ʻನ್ಯಾಯ ಎಲ್ಲಿದೆʼ ಟೈಟಲ್ ಸಾಂಗ್ ಹಾಗೂ ‘ಒಮ್ಮೆ ನಿನ್ನನ್ನೂ ಕಣ್ತುಂಬ ನೋಡುವಾಸೆ” ಹಾಡುಗಳನ್ನು ಕದ್ದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಹಿಂದೆ ನವೀನ್ ಕುಮಾರ್ ಎಂಬುವವರ ಜತೆ ಹಾಡುಗಳ ಬಗ್ಗೆ ಮಾತುಕತೆ ನಡೆದಿತ್ತು. ನವೀನ್ ಕುಮಾರ್ ಹಾಡುಗಳ ಕಾಪಿರೈಟ್ ಪಡೆದು ಮಾರಾಟ ಮಾಡುವ ಬ್ಯುಸಿನೆಸ್ ಮೆನ್ ಆಗಿದ್ದರು. ಇವರ ಜೊತೆ ಹಾಡಿಗೆ ಸಂಬಂಧಿಸಿದ ಮಾತುಕತೆ ನಡೆದಿತ್ತು. ಆದರೆ ನಾನಾ ಕಾರಣಕ್ಕೆ ಈ ಡೀಲ್ ಮುರಿದು ಬಿದ್ದಿತ್ತು. ಆದರೂ ಆ ಹಾಡನ್ನು ಮಾಲೀಕರ ಅನುಮತಿ ಇಲ್ಲದೆ ಬಳಕೆ ಆಗಿತ್ತು. ಚಿತ್ರದಲ್ಲಿ ಎರಡೂ ಹಾಡುಗಳನ್ನು ಅನುಮತಿ ಇಲ್ಲದೆ ಬಳಕೆ ಮಾಡಿದ್ದಾರೆಂದು ನವೀನ್‌ರಿಂದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಂದು ಕಿರಿಕ್ ಪಾರ್ಟಿ ಇಂದು ಬ್ಯಾಚುಲರ್ ಪಾರ್ಟಿ ವಿವಾದ ಶುರು ಆಗಿದೆ. ಹೀಗಾಗಿ ರಕ್ಷಿತ್‌ ಶೆಟ್ಟಿ ಬೆಂಬಿಡದೇ ಕಾಡುತ್ತಿದೆ ಕಾಪಿ ರೈಟ್‌.

ನಟ ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಜನವರಿ 26 ರಂದು ರಿಲೀಸ್‌ ಆಗಿತ್ತು. ಕಾಮಿಡಿ ಜಾನರ್‌ನ ಈ ಸಿನಿಮಾದಲ್ಲಿ ನಟ ದಿಗಂತ್, ಲೂಸ್ ಮಾದ ಯೋಗಿ, ಅಚ್ಯುತ್ ಕುಮಾ‌ರ್, ನಟಿ ಸಿರಿ ರವಿಕುಮಾರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಕಿರಿಕ್ ಪಾರ್ಟಿ’ ಚಿತ್ರದ ಬರಹಗಾರ ಅಭಿಜಿತ್ ಮಹೇಶ್ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದರು. ಕಿರಿಕ್‌ ಪಾರ್ಟಿಯ ಬರಹಗಾರರಲ್ಲಿ ಅಭಿಜಿತ್ ಮಹೇಶ್ ಕೂಡ ಒಬ್ಬರು. ಈ ಚಿತ್ರದ ಮೂಲಕ ಅವರು ಸ್ವತಂತ್ರ ನಿರ್ದೇಶಕರಾಗಿ ಬೆಳ್ಳಿ ಪರದೆಗೆ ಕಾಲಿಟ್ಟಿದ್ದರು. ಪರಂವಃ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಅಮಿತ್ ಗುಪ್ತ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದು, ಅರವಿಂದ್ ಛಾಯಾಗ್ರಹಣ, ಅರ್ಜುನ್ ರಾಮು ಸಂಗೀತ ನಿರ್ದೇಶನ ಈ ಚಿತ್ರಕ್ಕಿತ್ತು.

ಇದನ್ನೂ ಓದಿ: Rakshit Shetty: ಕೊರಗಜ್ಜ ಸನ್ನಿಧಾನಕ್ಕೆ ಭೇಟಿ ಕೊಟ್ಟ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ!

ಈ ಮುಂಚೆ ‘ಕಿರಿಕ್ ಪಾರ್ಟಿ’ ಚಿತ್ರದಲ್ಲಿ ಬಳಕೆಯಾದ ಒಂದು ಹಾಡಿನ ವಿರುದ್ಧ ಲಹರಿ ಮ್ಯೂಸಿಕ್ ಸಂಸ್ಥೆ ಕೋರ್ಟ್ ಮೆಟ್ಟಿಲೇರಿತ್ತು. ‘ಕಿರಿಕ್ ಪಾರ್ಟಿ’ ಚಿತ್ರದಲ್ಲಿ ಕಾಪಿರೈಟ್ ನಿಯಮ ಉಲ್ಲಂಘಿಸಿ ತಮ್ಮ ಸಂಸ್ಥೆಯ ಹಾಡುಗಳನ್ನು ಅಕ್ರಮವಾಗಿ ಬಳಕೆ ಮಾಡಿಕೊಳ್ಳಲಾಗಿದೆ, ಅನುಮತಿ ಇಲ್ಲದೆ ಹಾಡು ಬಳಸಲಾಗಿದೆ ಎಂದು ಆರೋಪಿಸಿ ಲಹರಿ ಸಂಸ್ಥೆ ಕ್ರಿಮಿನಲ್ ಹಾಗೂ ಸಿವಿಲ್ ಕೇಸ್ ಹಾಕಿತ್ತು.

Continue Reading

ಬಾಲಿವುಡ್

Anant Ambani Wedding: ಅನಂತ್ ಅಂಬಾನಿ ಆರತಕ್ಷತೆಯಲ್ಲಿ ದುಬಾರಿ ಲೆಹೆಂಗಾ ಧರಿಸಿ ಅಪ್ಸರೆಯಂತೆ ಕಂಡ ತಮನ್ನಾ ಭಾಟಿಯಾ!

Anant Ambani Wedding: ಮುಂಬೈನ ಜಿಯೋ ವರ್ಲ್ಡ್​ ಕನ್ವೆನ್ಷನ್ ಸೆಂಟರ್​ನಲ್ಲಿ ರಿಸೆಪ್ಷನ್​ ನಡೆಯುತ್ತಿದ್ದು, ಹಲವಾರು ಸೆಲೆಬ್ರಿಟಿಗಳು ಅತಿಥಿಗಳಾಗಿ ಭಾಗವಹಿಸಿದ್ದಾರೆ. ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರಿಗೂ ಈ ಸಮಾರಂಭಕ್ಕೆ ಆಹ್ವಾನ ಬಂದಿದೆ. ಆಕರ್ಷಕವಾದ ಉಡುಗೆ ಧರಿಸಿ ಬಂದಿರುವ ತಮನ್ನಾ ಅವರು ಪಾಪರಾಜಿಗಳ ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ.

VISTARANEWS.COM


on

Anant Ambani Wedding Tamannaah Bhatia is vintage beauty
Koo

ಬೆಂಗಳೂರು: ನಟಿ ತಮನ್ನಾ ಭಾಟಿಯಾ (Tamannaah Bhatia ) ಭಾನುವಾರ (ಜು.14) ಮುಂಬೈನಲ್ಲಿ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಆಯೋಜಿಸಿದ್ದ ‘ಮಂಗಲ್ ಉತ್ಸವ’ದಲ್ಲಿ ಭಾಗವಹಿಸಿದ್ದರು. ನಟಿ ಕಪ್ಪು ಹಾಗೂ ಬಂಗಾರ ಮಿಶ್ರಿತ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ನಟಿಯ ಈ ಸುಂದರವಾದ ಲೆಹೆಂಗಾ ಬರೋಬ್ಬರಿ 3.85 ಲಕ್ಷ ರೂ. ಎಂದು ವರದಿಯಾಗಿದೆ. ‘ಟೋರಾಣಿ’ ಅವರ ಲೆಹೆಂಗಾ ಡಿಸೈನರ್.

‘ಭದ್ರ ನಲಿಕಾ ಲೆಹೆಂಗಾ’ ಎಂದು ಹೆಸರಿಸಲಾಗಿದೆ. ನಟಿಯ ಲೆಹೆಂಗಾವು ಮತ್ಸ್ಯಕನ್ಯೆಯಂತಹ ಶೈಲಿಯಲ್ಲಿ ರಚನೆಯಾಗಿದೆ. ಚಿಕ್ಕದಾದ ಕುಪ್ಪಸ, ಭಾರವಾದ ದುಪಟ್ಟಾ ಮತ್ತು ಮ್ಯಾಚಿಂಗ್ ಕಪ್ಪು ಪೊಟ್ಲಿಯೊಂದಿಗೆ ಧರಿಸಿದ್ದರು. ಜುಮ್ಕಿಗಳು ಮತ್ತು ಮಧ್ಯಮ ಗಾತ್ರದ ಮಾಂಗ್-ಟಿಕಾವನ್ನು ಹೊರತುಪಡಿಸಿ ಯಾವುದೇ ಆಭರಣವನ್ನು ಧರಿಸಿಲ್ಲ.

ತಮನ್ನಾ ಪ್ರಾಯೋಗಿಕ ಫ್ಯಾಷನ್ ಆಯ್ಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಫಿಗರ್-ಹಗ್ಗಿಂಗ್ ಸಿಲೂಯೆಟ್‌ಗಳನ್ನು ಧರಿಸಲು ಇಷ್ಟಪಡುತ್ತಾರೆ. ಆದರೆ, ಈ ಬಾರಿ ಅವರು ಸಂಪೂರ್ಣ ಫಿಲ್ಮಿ ಲುಕ್‌ಗಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಕೆಂಪು ಗುಲಾಬಿಗಳಿಂದ ಅಲೋಕೃತವಾದ ಉದ್ದನೆಯ ಜಡೆಯಲ್ಲಿ ಸ್ಟೈಲಿಂಗ್ ಮಾಡಿದ್ದರು. ಮುಂಬೈನ ಜಿಯೋ ವರ್ಲ್ಡ್​ ಕನ್ವೆನ್ಷನ್ ಸೆಂಟರ್​ನಲ್ಲಿ ರಿಸೆಪ್ಷನ್​ ನಡೆಯುತ್ತಿದ್ದು, ಹಲವಾರು ಸೆಲೆಬ್ರಿಟಿಗಳು ಅತಿಥಿಗಳಾಗಿ ಭಾಗವಹಿಸಿದ್ದಾರೆ. ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರಿಗೂ ಈ ಸಮಾರಂಭಕ್ಕೆ ಆಹ್ವಾನ ಬಂದಿದೆ. ಆಕರ್ಷಕವಾದ ಉಡುಗೆ ಧರಿಸಿ ಬಂದಿರುವ ತಮನ್ನಾ ಅವರು ಪಾಪರಾಜಿಗಳ ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ.

ಇದನ್ನೂ ಓದಿ: Anant Ambani Wedding: ಪಾದ ಸ್ಪರ್ಶಿಸಲು ಬಂದ ರಜನಿಯನ್ನು ಬಿಗಿದಪ್ಪಿಕೊಂಡ ಅಮಿತಾಭ್ ಬಚ್ಚನ್!

ಅನಂತ್ ಮತ್ತು ರಾಧಿಕಾ ಅವರ ಮದುವೆಯ ಆರತಕ್ಷತೆಯಲ್ಲಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸೇರಿದ್ದರು. ಗೋವಿಂದ, ಸನ್ನಿ ಡಿಯೋಲ್, ಬಾಬಿ ಡಿಯೋಲ್, ಮಧುರ್ ಭಂಡಾರ್ಕರ್, ಸುಭಾಷ್ ಘಾಯ್, ರಾಜ್‌ಕುಮಾರ್ ರಾವ್-ಪತ್ರಲೇಖಾ, ಬಿಪಾಶಾ ಬಸು-ಕರಣ್ ಸಿಂಗ್ ಗ್ರೋವರ್, ಅರ್ಜುನ್ ಕಪೂರ್, ಡಯಾನಾ ಪೆಂಟಿ, ಅಟ್ಲೀ, ಜಾಕಿ ಭಗ್ನಾನಿ-ರಾಕುಲ್ ಪ್ರೀತ್ ಸಿಂಗ್ ಮತ್ತು ಆಯುಷ್ಮಾನ್ ಖುರಾನಾ ಸೇರಿದಂತೆ ಇತರರು ಭಾಗವಹಿಸಿದ್ದರು.

ಮುಂಬೈನಲ್ಲಿರುವ ಜಿಯೋ ವರ್ಲ್ಡ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ಶುಕ್ರವಾರ (ಜುಲೈ 12) ರಾತ್ರಿ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್‌ ಅವರು ಸಾವಿರಾರು ಗಣ್ಯರು (Anant Ambani Wedding), ಸೆಲೆಬ್ರಿಟಿಗಳ ಮಧ್ಯೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Continue Reading

ಬಾಲಿವುಡ್

Katrina Kaif: ಕೊರಗಜ್ಜನ ಕ್ಷೇತ್ರದಲ್ಲಿ ಕತ್ರಿನಾ ಕೈಫ್; ದೈವದ ಬಳಿ ನಟಿ ಬೇಡಿಕೊಂಡಿದ್ದೇನು?

Katrina Kaif: ಭಾರತ ತಂಡದ ಬಲಗೈ ಬ್ಯಾಟರ್ ಹಾಗೂ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ (KL Rahul) ಇಲ್ಲಿನ ಐತಿಹಾಸಿಕ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಭಾನುವಾರ ಭೇಟಿ ನೀಡಿದ್ದಾರೆ. ಪತ್ನಿ ಅಥಿಯಾ ಶೆಟ್ಟಿ ಅವರ ಜತೆ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ನೆರವೇರಿಸಿದರು. ಬ

VISTARANEWS.COM


on

Katrina Kaif Visited Swamy Koragajja Aadisthala Kuthar
Koo

ಬೆಂಗಳೂರು: ಜುಲೈ 16ರಂದು ಕತ್ರಿನಾ ಕೈಫ್ (Katrina Kaif) ಅವರ ಜನ್ಮದಿನ. ಇದಕ್ಕೂ ಮುನ್ನ ಮಂಗಳೂರಿನ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಶಿಲ್ಪಾ ಶೆಟ್ಟಿ, ಸುನೀಲ್ ಶೆಟ್ಟಿ ಮೊದಲಾದವರು ಆಗಾಗ ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಹೀಗಾಗಿ, ಬಾಲಿವುಡ್​ನ ಉಳಿದವರಿಗೂ ಈ ಬಗ್ಗೆ ನಂಬಿಕೆ ಮೂಡಿದೆ.ಕತ್ರಿನಾ ಕೈಫ್ ಜೊತೆ ಸುನೀಲ್ ಶೆಟ್ಟಿ ಫ್ಯಾಮಿಲಿ ಕೂಡ ಇಲ್ಲಿಗೆ ಆಗಮಿಸಿದೆ. ಸುನೀಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ, ಪುತ್ರಿ ಅಥಿಯಾ ಶೆಟ್ಟಿ ಹಾಗೂ ಅಳಿಯ ಕೆ.ಎಲ್. ರಾಹುಲ್ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಕೆ ಮಾಡಿದ್ದಾರೆ.

ಭಾರತ ತಂಡದ ಬಲಗೈ ಬ್ಯಾಟರ್ ಹಾಗೂ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ (KL Rahul) ಇಲ್ಲಿನ ಐತಿಹಾಸಿಕ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಭಾನುವಾರ ಭೇಟಿ ನೀಡಿದ್ದಾರೆ. ಪತ್ನಿ ಅಥಿಯಾ ಶೆಟ್ಟಿ ಅವರ ಜತೆ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ನೆರವೇರಿಸಿದರು. ಬಪ್ಪನಾಡು ಕ್ಷೇತ್ರವು ಮಂಗಳೂರು ನಗರದ ಹೊರವಲಯದ ಮುಲ್ಕಿ ಸಮೀಪ ಇದೆ. ದೇಗುಲಕ್ಕೆ ಭೇಟಿ ನೀಡಿದ ದಂಪತಿಗೆ ದೇವಾಲಯದ ವತಿಯಿಂದ ವಿಶೇಷ ಗೌರವ ಸಲ್ಲಿಸಲಾಯಿತು.

ಇದನ್ನೂ ಓದಿ: Kamal Haasan: ಇಂದೇ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ ಕಮಲ್ ಹಾಸನ್ ನಟನೆಯ ʻಇಂಡಿಯನ್’ ಸಿನಿಮಾ?

ವಿಶ್ವ ಕಪ್​ ತಂಡದಲ್ಲಿ ಅವಕಾಶ ಪಡೆಯದೇ ಕೆ. ಎಲ್ ರಾಹುಲ್​ ಮುಂಬರುವ ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡ ಸೇರುವ ನಿರೀಕ್ಷೆಯಿದೆ. ಆದರೆ ಅದಿನ್ನೂ ಸ್ಪಷ್ಟವಾಗಿಲ್ಲ. ತಂಡವೂ ಪ್ರಕಟಗೊಂಡಿಲ್ಲ. ಅವಕಾಶದ ನಿರೀಕ್ಷೆಯಲ್ಲಿರುವ ಅವರೀಗ ಅಮೂಲ್ಯ ಸಮಯವನ್ನು ಕುಟುಂಬದ ಜತೆ ಕಳೆಯುತ್ತಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಅನಂತ್​ ಅಂಬಾನಿ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದಂಪತಿ ಜತೆಯಾಗಿ ಭಾಗಿಯಾಗಿದ್ದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿಕಾಣಿಸಿಕೊಂಡಿದ್ದವು.

ಶ್ರೀಲಂಕಾ ಪ್ರವಾಸದ ಏಕ ದಿನ ತಂಡಕ್ಕೆ ಕೆ. ಎಲ್ ರಾಹುಲ್ ನಾಯಕ?

ಜಿಂಬಾಬ್ವೆ ಪ್ರವಾಸದ ಬಳಿಕ ಟೀಮ್ ಇಂಡಿಯಾ ತನ್ನ ಮುಂದಿನ ಕಾರ್ಯಯೋಜನೆಗೆ ಸಜ್ಜಾಗಬೇಕಾಗಿದೆ ವೈಟ್-ಬಾಲ್ ಸರಣಿಗಾಗಿ ಭಾರತ ಬಳಗ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಹೊಸ ಕೋಚ್​ ಗೌತಮ್ ಗಂಭೀರ್ ಅಡಿಯಲ್ಲಿ ಈ ತಂಡ ದ್ವೀಪ ರಾಷ್ಟ್ರಕ್ಕೆ ಹೋಗಲಿದೆ. ಈ ಸರಣಿಯಲ್ಲಿ ಯಾರೆಲ್ಲ ಇರುತ್ತಾರೆ ಎಂಬ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಆದರೆ, ವರದಿಗಳ ಪ್ರಕಾರ, ಸ್ಟಾರ್ ಬ್ಯಾಟರ್​ ಹಾಗೂ ಕನ್ನಡಿಗ ಕೆಎಲ್ ರಾಹುಲ್ (KL Rahul) ತಂಡಕ್ಕೆ ಮರಳಲಿದ್ದು ತಂಡವನ್ನು ಮುನ್ನಡೆಸುವ ನಿರೀಕ್ಷೆಯಿದೆ.

ಏಕದಿನ ಸರಣಿಯಿಂದ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿದ್ದು, ವಿರಾಟ್ ಕೊಹ್ಲಿಗೂ ವಿಶ್ರಾಂತಿ ನೀಡಲಾಗಿದೆ ಎಂದು ವರದಿಯಾಗಿದೆ. ಈ ಸರಣಿಯು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಅಡಿಯಲ್ಲಿ ತಂಡಕ್ಕೆ ಮೊದಲನೆಯದು ಶ್ರೀಲಂಕಾ ಸವಾಲು. ಹೀಗಾಗಿ ಈ ಸರಣಿಯಲ್ಲಿ ಭಾರತವನ್ನು ಮುನ್ನಡೆಸಲು ಕೆಎಲ್ ರಾಹುಲ್ ಮುಂಚೂಣಿಯಲ್ಲಿ ಆಯ್ಕೆಯಾಗಿದ್ದಾರೆ.

ಕೆಎಲ್ ರಾಹುಲ್ ಟಿ 20 ವಿಶ್ವಕಪ್​​ ಗೆ ಹೋಗಿದ್ದ ಭಾರತದ ತಂಡದಿಂದ ಹೊರಗುಳಿದಿದ್ದರು. ಆದರೆ ಈಗ ಶ್ರೀಲಂಕಾ ಪ್ರವಾಸದ ಏಕದಿನ ಹಂತದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ನಾಯಕತ್ವದ ಪಾತ್ರವನ್ನು ಸಹ ತೆಗೆದುಕೊಳ್ಳಲಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ 20 ಯಿಂದ ನಿವೃತ್ತರಾಗುವುದರೊಂದಿಗೆ ಆಲ್ರೌಂಡರ್ ಹಾರ್ದಿಕ್ ಚುಟುಕು ಸ್ವರೂಪದ ಕ್ರಿಕೆಟ್​​ನಲ ಲಿ ತಂಡದ ಜವಾಬ್ದಾರಿ ವಹಿಸುವ ನಿರೀಕ್ಷೆಯಿದೆ.

Continue Reading

ಟಾಲಿವುಡ್

Kalki 2898 AD: ನೀವಿಲ್ಲದೆ ನಾನು ಶೂನ್ಯ ಎಂದು ಅಭಿಮಾನಿಗಳಿಗೆ ಧನ್ಯವಾದ ಹೇಳಿದ ನಟ ಪ್ರಭಾಸ್‌!

Kalki 2898 AD: ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾ ವಿಶ್ವಾದ್ಯಂತ 1000 ಕೋಟಿ ರೂ. ಗಳಿಕೆ ಕಂಡಿದೆ. ಚಿತ್ರದ ಯಶಸ್ಸನ್ನು ಸಂಭ್ರಮಿಸುತ್ತಿರುವ ಪ್ರಭಾಸ್, ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಚಿತ್ರವನ್ನು ‘ದೊಡ್ಡ ಹಿಟ್’ ಮಾಡಿದಕ್ಕಾಗಿ ಧನ್ಯವಾದ ಎಂದು ವಿಡಿಯೊ ಮೂಲಕ ಹೇಳಿಕೊಂಡಿದ್ದಾರೆ.

VISTARANEWS.COM


on

Kalki 2898 AD Prabhas thanks fans
Koo

ಬೆಂಗಳೂರು: ಪ್ರಭಾಸ್ ಅಭಿನಯದ ‘ಕಲ್ಕಿ 2898 ಎಡಿ’ ಸಿನಿಮಾ (Kalki 2898 AD) ಚಿತ್ರಮಂದಿರಗಳಲ್ಲಿ ತನ್ನ ಓಟವನ್ನು ಮುಂದುವರಿಸುತ್ತಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾ ವಿಶ್ವಾದ್ಯಂತ 1000 ಕೋಟಿ ರೂ. ಗಳಿಕೆ ಕಂಡಿದೆ. ಚಿತ್ರದ ಯಶಸ್ಸನ್ನು ಸಂಭ್ರಮಿಸುತ್ತಿರುವ ಪ್ರಭಾಸ್, ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಚಿತ್ರವನ್ನು ‘ದೊಡ್ಡ ಹಿಟ್’ ಮಾಡಿದಕ್ಕಾಗಿ ಧನ್ಯವಾದ ಎಂದು ವಿಡಿಯೊ ಮೂಲಕ ಹೇಳಿಕೊಂಡಿದ್ದಾರೆ.

ವೈಜಯಂತಿ ನೆಟ್‌ವರ್ಕ್ ಒಂದು ವೀಡಿಯೊವನ್ನು ಹಂಚಿಕೊಂಡಿದೆ. ಅದರಲ್ಲಿ ಪ್ರಭಾಸ್ ಅಭಿಮಾನಿಗಳಿಗೆ ಧನ್ಯವಾದ ಹೇಳುತ್ತಾ, “ನನಗೆ ಇಷ್ಟು ದೊಡ್ಡ ಹಿಂಟ್‌ ನೀಡಿದ್ದಕ್ಕಾಗಿ ತುಂಬಾ ಧನ್ಯವಾದಗಳು. ತುಂಬಾ ಧನ್ಯವಾದಗಳು. ನೀವಿಲ್ಲದೆ (ಅಭಿಮಾನಿಗಳು) ನಾನು ಶೂನ್ಯ. ನಾಗ್ ಅಶ್ವಿನ್ ಅವರಿಗೆ ಧನ್ಯವಾದಗಳ. ಇಂತಹ ದೊಡ್ಡ ಸಿನಿಮಾ ಮಾಡಲ ಐದು ವರ್ಷಗಳ ಕಾಲ ಶ್ರಮಿಸಿದ್ದಾರೆ.ನಾವು ನಿರ್ಮಾಪಕರಿಗೆ ಧನ್ಯವಾದ ಹೇಳಬೇಕು. ಅತ್ಯಂತ ಧೈರ್ಯಶಾಲಿ ನಿರ್ಮಾಪಕರು. ಅವರು ಖರ್ಚು ಮಾಡಿದ ರೀತಿ, ನಮಗೆಲ್ಲ ಆತಂಕವಾಯಿತು. ಭಾರತೀಯ ಚಿತ್ರರಂಗದ ಶ್ರೇಷ್ಠ ದಂತಕಥೆಗಳೊಂದಿಗೆ ಕೆಲಸ ಮಾಡುವ ಅವಕಾಶವನ್ನು ನೀಡಿದ ಈ ನಿರ್ಮಾಪಕರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ.

“ನಮ್ಮಲ್ಲಿ ಅಮಿತಾಬ್ ಸರ್ ಮತ್ತು ಕಮಲ್ ಸರ್ ಇದ್ದಾರೆ .ನಾವೆಲ್ಲರೂ ನಿಮ್ಮನ್ನು ನೋಡುತ್ತಾ ಬೆಳೆದಿದ್ದೇವೆ ಮತ್ತು ನಿಮ್ಮಿಂದ ನಾವು ಬಹಳಷ್ಟು ಕಲಿತಿದ್ದೇವೆ. ದೀಪಿಕಾ ಅವರಿಗೆ ಕೂಡ ತುಂಬಾ ಧನ್ಯವಾದಗಳು. ಮತ್ತೊಮ್ಮೆ, ನನ್ನ ಅಭಿಮಾನಿಗಳಿಗೆ ಧನ್ಯವಾದಗಳುʼʼಎಂದು ಹೇಳಿಕೊಂಡಿದ್ದಾರೆ.

Kalki 2898 AD: 1,000 ಕೋಟಿ ರೂ. ಕಲೆಕ್ಷನ್‌ ಮಾಡಿದ `ಕಲ್ಕಿ 2898 ಎಡಿ’: ಪ್ರಭಾಸ್ ಹೊಸ ದಾಖಲೆ!ಇದನ್ನೂ ಓದಿ:

ನಾಗ್ ಅಶ್ವಿನ್ ಅವರು ‘ಕಲ್ಕಿ 2898 ಎಡಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. 2ಡಿ ಜೊತೆಗೆ 3ಡಿಯಲ್ಲೂ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಈ ಚಿತ್ರದ ಬಜೆಟ್ 600 ಕೋಟಿ ರೂಪಾಯಿ ಎನ್ನಲಾಗಿದೆ. ಈ ಕಾರಣದಿಂದಲೇ ಸಿನಿಮಾ ದೊಡ್ಡ ಮೊತ್ತದ ಗಳಿಕೆ ಮಾಡೋ ಅವಶ್ಯಕತೆ ಇತ್ತು. ಸದ್ಯ ಆಗಿರೋ ಗಳಿಕೆಯಿಂದ ನಿರ್ಮಾಪಕರಿಗೆ ಇನ್ನೂ ದೊಡ್ಡ ಲಾಭವೇನು ಆಗಿಲ್ಲ. ‘ಕಲ್ಕಿ 2898 ಎಡಿ’ ಚಿತ್ರ ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ರಿಲೀಸ್ ಆಗಿದೆ. ವೈಜಯಂತಿ ಮೂವಿಸ್ ಮೂಲಕ ಅಶ್ವಿನಿ ದತ್ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಸಲಾರ್’ ನಂತರ ಬಿಡುಗಡೆಯಾದ ಕಲ್ಕಿ ಸಿನಿಮಾ ಮೂಲಕ, ಪ್ರಭಾಸ್ ಚಿತ್ರೋದ್ಯಮದಲ್ಲಿ ಮತ್ತೊಂದು ಹೊಸ ಮೈಲಿಗಲ್ಲು ತಲುಪಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಮಟ್ಟದ ಓಪನಿಂಗ್ ಪ್ರಭಾಸ್‌ ಸಿನಿಮಾಗಳಿಗೆ ಸಿಗುತ್ತಿವೆ. ಇದೀಗ ‘ಕಲ್ಕಿ 2898 AD’ ಸಿನಿಮಾ ಸಹ ಇದಕ್ಕೆ ಹೊರತಾಗಿಲ್ಲ, ಇದು ಭಾರತೀಯ ಚಿತ್ರರಂಗದಲ್ಲಿ ಅವರ ಮೂರನೇ ಅತಿದೊಡ್ಡ ಕಲೆಕ್ಷನ್‌ ಮಾಡಿದ ಸಿನಿಮಾವಾಗಿದೆ.

Continue Reading
Advertisement
assault case udupi
ಕ್ರೈಂ4 mins ago

Assault Case: ಆಪದ್ಬಾಂಧವನಲ್ಲ ವಿಕೃತ! ಮಗಳ ಅಶ್ಲೀಲ ವಿಡಿಯೋ ಮಾಡಿದ ಆಸೀಫ್‌ನ ಇನ್ನೊಂದು ವಿಕೃತಿ ಬಯಲು

SBI
ದೇಶ13 mins ago

SBI: ದುಬಾರಿಯಾಗಲಿದೆ ಎಸ್‌ಬಿಐ ಸಾಲ; ಲೆಂಡಿಂಗ್‌ ದರದಲ್ಲಿ ಭಾರೀ ಏರಿಕೆ

Sanju Samson
ಕ್ರೀಡೆ34 mins ago

Sanju Samson: ‘ಔಟ್​ ಆಫ್​ ದಿ ಪಾರ್ಕ್​’​ ಸಿಕ್ಸರ್​ ಬಾರಿಸಿದ ಸಂಜು ಸ್ಯಾಮ್ಸನ್​; ವಿಡಿಯೊ ವೈರಲ್

Job Alert
ಉದ್ಯೋಗ48 mins ago

Job Alert: ಅಂಚೆ ಇಲಾಖೆಯಿಂದ ಗುಡ್‌ನ್ಯೂಸ್‌: 44,228 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟ; ಅಪ್ಲೈ ಮಾಡುವ ವಿಧಾನ ಇಲ್ಲಿದೆ

Rakshit Shetty copy right issue Bachelor Party File a complaint
ಸ್ಯಾಂಡಲ್ ವುಡ್56 mins ago

Rakshit Shetty: ರಕ್ಷಿತ್‌ ಶೆಟ್ಟಿಗೆ ತಪ್ಪದ ಸಂಕಷ್ಟ; ಮತ್ತೊಂದು ದೂರು ದಾಖಲು!

Euro 2024 final
ಕ್ರೀಡೆ1 hour ago

Euro 2024 final: 4ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಸ್ಪೇನ್​

udupi fire tragedy bar owner
ಉಡುಪಿ1 hour ago

Fire Tragedy: ಅಗ್ನಿ ಆಕಸ್ಮಿಕಕ್ಕೆ ಮನೆ ಸುಟ್ಟು ಕರಕಲು, ಬಾರ್‌ ಮಾಲೀಕ ಸಾವು

Anant Ambani Wedding Tamannaah Bhatia is vintage beauty
ಬಾಲಿವುಡ್1 hour ago

Anant Ambani Wedding: ಅನಂತ್ ಅಂಬಾನಿ ಆರತಕ್ಷತೆಯಲ್ಲಿ ದುಬಾರಿ ಲೆಹೆಂಗಾ ಧರಿಸಿ ಅಪ್ಸರೆಯಂತೆ ಕಂಡ ತಮನ್ನಾ ಭಾಟಿಯಾ!

Katrina Kaif Visited Swamy Koragajja Aadisthala Kuthar
ಬಾಲಿವುಡ್2 hours ago

Katrina Kaif: ಕೊರಗಜ್ಜನ ಕ್ಷೇತ್ರದಲ್ಲಿ ಕತ್ರಿನಾ ಕೈಫ್; ದೈವದ ಬಳಿ ನಟಿ ಬೇಡಿಕೊಂಡಿದ್ದೇನು?

Trump Assassination Bid
ವಿದೇಶ2 hours ago

Trump Assassination Bid: ಟ್ರಂಪ್‌ ಮೇಲೆ ಗುಂಡಿನ ದಾಳಿ; ಶೂಟರ್‌ ಫೋಟೋ ರಿಲೀಸ್‌- ಆತನ ಸ್ನೇಹಿತರು ಹೇಳಿದ್ದೇನು?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ4 hours ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ17 hours ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ18 hours ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ22 hours ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ23 hours ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ2 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ2 days ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

karnataka Rain Effect
ಮಳೆ4 days ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ6 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

ಟ್ರೆಂಡಿಂಗ್‌