RBI News: ರೆಪೊ ದರ 6.5% ಮುಂದುವರಿಕೆ, ಸತತ 5ನೇ ಬಾರಿಗೆ ಯಥಾಸ್ಥಿತಿ - Vistara News

ದೇಶ

RBI News: ರೆಪೊ ದರ 6.5% ಮುಂದುವರಿಕೆ, ಸತತ 5ನೇ ಬಾರಿಗೆ ಯಥಾಸ್ಥಿತಿ

ಆರ್‌ಬಿಐ (RBI news) ತನ್ನ ನಾಲ್ಕು ಹಣಕಾಸು ನೀತಿಗಳಲ್ಲಿ ಬೆಂಚ್‌ಮಾರ್ಕ್ ಪಾಲಿಸಿ ದರವನ್ನು (ರೆಪೊ) ಬದಲಾಯಿಸದೆ ಬಿಟ್ಟಿದೆ. RBI ಕೊನೆಯದಾಗಿ ಫೆಬ್ರವರಿಯಲ್ಲಿ ರೆಪೋ ದರವನ್ನು 6.5%ಕ್ಕೆ ಹೆಚ್ಚಿಸಿತ್ತು.

VISTARANEWS.COM


on

RBI
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದಿನ ದ್ವೈಮಾಸಿಕದ ರೆಪೊ ದರಗಳನ್ನು ಪ್ರಕಟಿಸಿದೆ. ಈಗಾಗಲೇ ಅಸ್ತಿತ್ವದಲ್ಲಿರುವ 6.5% ಬಡ್ಡಿ ದರವನ್ನೇ ಆರ್‌ಬಿಐ (RBI News) ಮುಂದುವರಿಸಿದೆ. ಸತತ ಐದನೇ ಬಾರಿಗೆ ರೆಪೊ ದರದಲ್ಲಿ ಬ್ಯಾಂಕ್ ಯಥಾಸ್ಥಿತಿ ಕಾಪಾಡಿಕೊಂಡಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಹಣಕಾಸು ನೀತಿಯ ಆರು ಸದಸ್ಯರ MPC (ಹಣಕಾಸು ನೀತಿ ಸಮಿತಿ) ಸಭೆಯಲ್ಲಿ ಮುಂದಿನ ದ್ವೈಮಾಸಿಕದ ಹಣಕಾಸು ನೀತಿಯ ಬಗ್ಗೆ ತೆಗೆದುಕೊಳ್ಳಲಾದ ನಿರ್ಧಾರವನ್ನು ಶುಕ್ರವಾರ ಅನಾವರಣಗೊಳಿಸಿದ್ದಾರೆ. ಆರ್‌ಬಿಐನ ದರ ನಿಗದಿ ಸಮಿತಿಯು ತನ್ನ ಮೂರು ದಿನಗಳ ಸಭೆಯನ್ನು ಬುಧವಾರ ಆರಂಭಿಸಿತ್ತು.

ಆರ್‌ಬಿಐ ತನ್ನ ನಾಲ್ಕು ಹಣಕಾಸು ನೀತಿಗಳಲ್ಲಿ ಬೆಂಚ್‌ಮಾರ್ಕ್ ಪಾಲಿಸಿ ದರವನ್ನು (ರೆಪೊ) ಬದಲಾಯಿಸದೆ ಬಿಟ್ಟಿದೆ. ರೆಪೊ ದರ ಎಂದರೆ ವಾಣಿಜ್ಯ ಬ್ಯಾಂಕ್‌ಗಳು ರಿಸರ್ವ್ ಬ್ಯಾಂಕ್‌ಗೆ ತಮ್ಮ ಭದ್ರತೆಗಳನ್ನು ನೀಡಿ ಹಣವನ್ನು ಎರವಲು ಪಡೆಯುವ ದರವನ್ನು ಸೂಚಿಸುತ್ತದೆ. ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು, ವ್ಯಾಪಾರಗಳಲ್ಲಿ ಸಾಲ ಮತ್ತು ಹೂಡಿಕೆಗಳನ್ನು ಹೆಚ್ಚಿಸಲು ಈ ದರಗಳು ಪ್ರಮುಖವಾಗಿವೆ.

RBI ಕೊನೆಯದಾಗಿ ಫೆಬ್ರವರಿಯಲ್ಲಿ ರೆಪೋ ದರವನ್ನು 6.5%ಕ್ಕೆ ಹೆಚ್ಚಿಸಿತ್ತು. ರಷ್ಯಾ- ಉಕ್ರೇನ್ ಯುದ್ಧದ ನಂತರ ಮತ್ತು ಜಾಗತಿಕ ಪೂರೈಕೆ ಸರಪಳಿಯಲ್ಲಿನ ಅಡೆತಡೆಗಳ ಪರಿಣಾಮ 2022ರ ಮೇ ತಿಂಗಳಿನಲ್ಲಿ ಬಡ್ಡಿದರ ಏರಿಕೆ ಆರಂಭವಾಗಿತ್ತು. ಆದರೆ ಇದೇ ಫೆಬ್ರವರಿ ಬಳಿಕ ಬದಲಾಗಿಲ್ಲ.

“ಆಹಾರ ಬೆಳೆಗಳ ಬೆಲೆ ಏರಿಕೆಗಳು ಮುಖ್ಯ ಹಣದುಬ್ಬರದಲ್ಲಿ ನಿರಂತರತೆಯನ್ನು ಉಂಟುಮಾಡಬಹುದು” ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ತಜ್ಞರ ಪ್ರಕಾರ ಬಡ್ಡಿದರ ಈಗಾಗಲೇ ಉತ್ತುಂಗಕ್ಕೇರಿದೆ. ಆರ್‌ಬಿಐ ಬಿಗಿಯಾದ ಹಣದ ಹರಿವು ಕಾಯ್ದುಕೊಂಡ ಪರಿಣಾಮ ಅಲ್ಪಾವಧಿಯ ದರಗಳು ಶೇಕಡಾ 6.85- 6.9ರ ಆಸುಪಾಸಿನಲ್ಲಿವೆ. ಇದು ರೆಪೋ ದರಕ್ಕಿಂತ 35-40 ಬಿಪಿಎಸ್ ಹೆಚ್ಚಾಗಿದೆ.

ಮೃದುವಾದ ಹಣದುಬ್ಬರದ ಪರಿಣಾಮ 2024ರ ಮೊದಲಾರ್ಧದಲ್ಲಿ RBI ಬಡ್ಡಿದರಗಳನ್ನು ಕಡಿತಗೊಳಿಸಲು ಪ್ರಾರಂಭಿಸಬಹುದು ಎಂದು ನಿರೀಕ್ಷಿಸಲಾಗಿದೆ. ಹೆಚ್ಚಿನ ಆಹಾರ ಬೆಲೆಗಳಿಂದಾಗಿ ಭಾರತದ ಚಿಲ್ಲರೆ ಹಣದುಬ್ಬರವು ನವೆಂಬರ್‌ನಲ್ಲಿ ಏರಿಕೆಯಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಮಿಶ್ರಫಲ ನೀಡಿದ ಫಲಿತಾಂಶ; ಆಡಳಿತ ಪಕ್ಷಕ್ಕೆ ಪಾಠ, ವಿಪಕ್ಷ ಬಲಿಷ್ಠ

ವಿಸ್ತಾರ ಸಂಪಾದಕೀಯ: ಹತ್ತು ವರ್ಷಗಳ ಕಾಲ ಆಡಳಿತ ನಡೆಸಿರುವ ಎನ್‌ಡಿಎಗೆ ಮತದಾರ ಮತ್ತೊಂದು ಅವಕಾಶವನ್ನು ನೀಡಿದ್ದಾನೆ. 1984ರ ಬಳಿಕ ಇದೇ ಮೊದಲ ಬಾರಿಗೆ ಭಾರತದ ಮತದಾರ ಮೂರನೇ ಅವಧಿಗೆ ಒಂದು ಸರಕಾರವನ್ನು ಚುನಾಯಿಸಿದ್ದಾನೆ.

VISTARANEWS.COM


on

narendra modi amit shah jp nadda election results 2024
Koo

ಭಾರತ ಹಾಗೂ ಇತರ ದೇಶಗಳೂ ಕುತೂಹಲದಿಂದ ಕಾಯುತ್ತಿದ್ದ ಲೋಕಸಭೆ ಚುನಾವಣೆ (Lok sabha Election 2024) ಫಲಿತಾಂಶ (Election results 2024) ಪ್ರಕಟವಾಗಿದೆ. 543 ಬಲದ ಲೋಕಸಭೆಯಲ್ಲಿ ಬಹುಮತ ಸಾಧಿಸಿ ಸರಕಾರ ರಚಿಸಬೇಕಿದ್ದರೆ 272 ಸ್ಥಾನಗಳನ್ನು ಗೆಲ್ಲಬೇಕು; ಆದರೆ ಯಾವುದೇ ಒಂದು ಪಕ್ಷ ಅಷ್ಟು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. ಎರಡು ಅವಧಿಗೆ ಆಡಳಿತ ನಡೆಸಿರುವ ಬಿಜೆಪಿ- ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟ ಒಟ್ಟಾರೆ 291 ಸ್ಥಾನಗಳಲ್ಲಿ ಮುಂದಿದ್ದು, ಸರ್ಕಾರ ರಚಿಸಲು ಮುಂದಾಗಿದೆ. ಬಿಜೆಪಿ ಅತ್ಯಧಿಕ ಸ್ಥಾನಗಳನ್ನು (240) ಗಳಿಸಿರುವ ಪಕ್ಷವಾಗಿದೆ. ʼ400 ಸ್ಥಾನಗಳನ್ನು ಗೆಲ್ಲುವʼ ಕನಸು ಹೊಂದಿದ್ದ ಎನ್‌ಡಿಎಗೆ ಅದನ್ನು ಸಾಧ್ಯವಾಗಿಸಿಕೊಳ್ಳಲು ಆಗಿಲ್ಲ. ಆಡಳಿತ ಪಕ್ಷಕ್ಕೆ ದೃಢವಾದ ಹೋರಾಟ ನೀಡಿರುವ ಕಾಂಗ್ರೆಸ್‌ ಹಾಗೂ ಇಂಡಿಯಾ ಬ್ಲಾಕ್‌ ಒಟ್ಟಾಗಿ 235 ಸ್ಥಾನಗಳನ್ನು ಗೆದ್ದುಕೊಳ್ಳಲು ಶಕ್ತವಾಗಿದ್ದರೂ ಅಧಿಕಾರದ ಸನಿಹ ಸುಳಿಯಲು ಸಾಧ್ಯವಾಗದು. ಒಟ್ಟಾರೆಯಾಗಿ ನೋಡಿದರೆ ಇದು ಮಿಶ್ರಫಲ ನೀಡಿರುವ ಫಲಿತಾಂಶ; ಎಲ್ಲ ಪಕ್ಷಗಳೂ ಕಲಿಯಬೇಕಾದ ಹಲವು ಪಾಠಗಳನ್ನು ಹುದುಗಿಸಿ ಈ ಫಲಿತಾಂಶವನ್ನು ಮತದಾರರು ನೀಡಿದ್ದಾರೆ.

ಹತ್ತು ವರ್ಷಗಳ ಕಾಲ ಆಡಳಿತ ನಡೆಸಿರುವ ಎನ್‌ಡಿಎಗೆ ಮತದಾರರು ಮತ್ತೊಂದು ಅವಕಾಶವನ್ನು ನೀಡಿದ್ದಾರೆ. ದಶಕಗಳ ಬಳಿಕ ಭಾರತದ ಮತದಾರರು ನಿರಂತರ ಮೂರನೇ ಅವಧಿಗೆ ಒಂದು ಸರಕಾರವನ್ನು ಚುನಾಯಿಸಿದ್ದಾರೆ. ಅಂದರೆ ಎನ್‌ಡಿಎ ಮೇಲೆ ಭರವಸೆಯನ್ನು ದೇಶದ ಜನತೆ ಉಳಿಸಿಕೊಂಡಿದೆ. ಎನ್‌ಡಿಎ ಮಾಡಿರುವ ಅಭಿವೃದ್ಧಿ ಕಾರ್ಯಗಳು, ಸಮಾಜ ಕಲ್ಯಾಣ ಕಾರ್ಯಕ್ರಮಗಳು, ಫಲಾನುಭವಿಗಳಿಗೆ ತಲುಪಿದೆ ಹಾಗೂ ಜನ ಅದನ್ನು ನೆನಪಿಟ್ಟುಕೊಂಡಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ. 2014ರಲ್ಲಿ ಯುಪಿಎ ಸರಕಾರದ ವಿರುದ್ಧ ಕಂಡುಬಂದಿದ್ದ ಜನತೆಯ ಪ್ರಬಲ ಆಕ್ರೋಶ, ಆಡಳಿತ ವಿರೋಧಿ ಅಲೆ ಈಗ ಕಂಡುಬಂದಿಲ್ಲ. ಹೀಗಾಗಿ ಎನ್‌ಡಿಎ ಸರಕಾರದ ಯಶಸ್ಸು ಅದನ್ನು ಮುಂದಕ್ಕೆ ಒಯ್ದಿದೆ. ಆದರೆ ಬಿಜೆಪಿಗೆ ಪೂರ್ಣ ಬಹುಮತವನ್ನೂ ಮತದಾರ ನೀಡಿಲ್ಲ. ಅದಕ್ಕೂ ಹಲವು ಕಾರಣಗಳಿವೆ. ಹತ್ತು ವರ್ಷಗಳ ಕಾಲ ಆಳಿಸಿಕೊಂಡ ನಂತರ ಸಹಜವಾಗಿಯೇ ಮತದಾರನಿಗೆ ಒಂದು ಪಕ್ಷದ ಕೊರತೆಗಳು ಗೊತ್ತಾಗತೊಡಗುತ್ತವೆ.

ಮುಖ್ಯವಾಗಿ, ಎನ್‌ಡಿಎ ಪಕ್ಷಗಳ ಬಗ್ಗೆ ಪ್ರತಿಪಕ್ಷಗಳು ನಡೆಸಿದ ಪ್ರಚಾರದ ತೀವ್ರತೆ ಅತ್ಯುಚ್ಛ ಮಟ್ಟವನ್ನು ಮುಟ್ಟಿದೆ. ಇದರಲ್ಲಿ ಸ್ವಲ್ಪ ಸತ್ಯವೂ ಅಪಾರ ಪ್ರಮಾಣದ ಸುಳ್ಳೂ ಇತ್ತು. ಮೋದಿ ಸರಕಾರ ಅಲ್ಪಸಂಖ್ಯಾತರ ವಿರೋಧಿ ಎಂಬುದು ಅವುಗಳಲ್ಲಿ ಒಂದು. ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳನ್ನು ಮೋದಿ ಸರಕಾರ ಸಾಕಷ್ಟು ನೀಡಿದ್ದರೂ, ವಿಪಕ್ಷಗಳ ಈ ಅಪಪ್ರಚಾರದ ಮುಂದೆ ಅದು ನಿಲ್ಲಲಿಲ್ಲ. ಅಂತಾರಾಷ್ಟ್ರೀಯವಾಗಿ ಮೋದಿ ಸರ್ಕಾರದ, ಆ ಮೂಲಕ ದೇಶದ ಮಾನ ಹರಾಜು ಹಾಕುವ ಕಾರ್ಯಕ್ರಮವನ್ನೂ ಹಲವು ಎಡಪಂಥೀಯ ಚಿಂತಕರು, ಚಳವಳಿಗಾರರು ನಡೆಸಿದರು. ಎನ್‌ಡಿಎ ಸರಕಾರದ ಸಾಧನೆಯ ಅಂಕಿಅಂಶಗಳನ್ನು ಜನತೆಗೆ ಸಮರ್ಪಕವಾಗಿ ತಲುಪಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ, ಕೊನೆಯ ಕ್ಷಣಗಳಲ್ಲಿ ಬಿಜೆಪಿ ಸ್ವಲ್ಪ ತೀವ್ರವಾದಿ ಹಿಂದುತ್ವದ ಧೋರಣೆಯನ್ನೂ ತೋರಿಸಲು ಮುಂದಾಯಿತು. ಇದು ಮುಸ್ಲಿಂ ಮತಗಳನ್ನು ಮತ್ತಷ್ಟು ಬಿಜೆಪಿಯ ವಿರುದ್ಧ, ಇಂಡಿಯಾ ಒಕ್ಕೂಟದ ಪರ ಕ್ರೋಡೀಕರಿಸಲು ಸಾಧ್ಯವಾಗಿರಬಹುದು.

ಎನ್‌ಡಿಎ ಅರ್ಥ ಮಾಡಿಕೊಳ್ಳಬೇಕಾದ ಮುಖ್ಯ ಪಾಠ ಎಂದರೆ, ಪ್ರಾದೇಶಿಕ ಪಕ್ಷಗಳು ಹಾಗೂ ಮಿತ್ರಪಕ್ಷಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವುದು. ಹಾಗೆಯೇ ತನ್ನ ಪಕ್ಷದ ಪ್ರಾದೇಶಿಕ ನಾಯಕರನ್ನೂ ಕಡೆಗಣಿಸಬಾರದು. ಪ್ರಾದೇಶಿಕ ನಾಯಕರಿಗೆ ತಮ್ಮದೇ ಆದ ಅಜೆಂಡಾ ಇದ್ದರೂ, ಸ್ಥಳೀಯ ಸಮೀಕರಣಗಳು ಇವರನ್ನು ಅವಲಂಬಿಸಿರುತ್ತವೆ. ಹಾಗೇ ರಾಮ ಮಂದಿರದಂಥ ಸಂಗತಿಗಳು ಈ ಸಲ ಒಂದು ವರ್ಗದ ಮಂದಿಯನ್ನು ಮಾತ್ರ ಸೆಳೆಯಲು ಶಕ್ತವಾದವು. ಇದು ಈಗಾಗಲೇ ಬಿಜೆಪಿ ಬಗ್ಗೆ ಒಲವುಳ್ಳವರನ್ನು ಇನ್ನಷ್ಟು ತೃಪ್ತಿಪಡಿಸಿತೇ ಹೊರತು, ಹೊಸ ಮತದಾರರನ್ನು ತರಲಿಲ್ಲ. ಇದಕ್ಕೆ ಉತ್ತರಪ್ರದೇಶವೇ ಉದಾಹರಣೆ. ಅಲ್ಲಿ ಇದ್ದ ಸ್ಥಾನಗಳನ್ನು ಉಳಿಸಿಕೊಳ್ಳಲು ಬಿಜೆಪಿ ಶಕ್ತವಾಗಲಿಲ್ಲ. ಬಿಜೆಪಿ ವಿರೋಧಿ ಮತಗಳು ಇಲ್ಲಿ ಕ್ರೋಡೀಕೃತಗೊಂಡವು. ಈ ಕ್ರೋಡೀಕರಣಕ್ಕೆ ಆಕ್ರಮಣಕಾರಿಯಾದ ಬಿಜೆಪಿಯ ಚುನಾವಣಾ ಪ್ರಚಾರ ಭಾಷಣಗಳು, ಧ್ರುವೀಕರಣವಾದಿ ನಡೆ ಕಾರಣವಿರಬಹುದು. ಇದನ್ನು ಕಡಿಮೆ ಮಾಡಿಕೊಳ್ಳದಿದ್ದರೆ ಎನ್‌ಡಿಎ ಎಲ್ಲರನ್ನೂ ಒಳಗೊಳ್ಳುವುದು ಸಾಧ್ಯವಿಲ್ಲ.

ಅನೇಕರಿಗೆ ಮತದಾರ ಈ ಬಾರಿ ಪಾಠ ಕಲಿಸಿದ್ದಾನೆ. ಅತ್ಯಾಚಾರ ಆರೋಪಿಯಾಗಿ ಜೈಲಿನಲ್ಲಿರುವ ಸಂಸದನನ್ನು ಭಾರಿ ಮತಗಳ ಅಂತರದಿಂದ ಸೋಲಿಸಿರುವುದು, ಮತದಾರನಿಗೆ ಇಂಥ ನಾಯಕರ ಬಗ್ಗೆ ಎಷ್ಟು ಜಿಗುಪ್ಸೆ ಮೂಡಿದೆ ಎಂಬುದಕ್ಕೆ ಉದಾಹರಣೆ. ಹಾಗೆಯೇ ಸ್ಮೃತಿ ಇರಾನಿ, ಅಣ್ಣಾಮಲೈಯಂಥ ನಾಯಕರನ್ನು ಸೋಲಿಸುವ ಮೂಲಕವೂ ಮತದಾರ ಹಲವು ಪಾಠಗಳನ್ನು ಮುಂದಿರಿಸಿದ್ದಾನೆ. ತಮಿಳುನಾಡು, ಕೇರಳಗಳಲ್ಲಿ ಪ್ರಾದೇಶಿಕ ಶಕ್ತಿಗಳ ಪ್ರಾಬಲ್ಯವನ್ನು ಮುರಿಯಲು ಎನ್‌ಡಿಎಗೆ ಸಾಧ್ಯವಾಗಿಲ್ಲ. ಆದರೆ ಹಲವು ಕಡೆ ಹೊಸ ಸ್ಥಾನಗಳನ್ನು ಗೆದ್ದುಕೊಂಡಿದೆ. ಉದಾಹರಣೆಗೆ ಆಂಧ್ರಪ್ರದೇಶ ಹಾಗೂ ತೆಲಂಗಾಣ. ಕಾಂಗ್ರೆಸ್‌ ಉಚಿತ ಯೋಜನೆಗಳ ಆಮಿಷಗಳನ್ನು ಮುಂದಿಟ್ಟಿರುವುದು ಹಲವು ಕಡೆ ಕೆಲಸ ಮಾಡಿರುವಂತಿದೆ. ಇದು ಬೊಕ್ಕಸಕ್ಕೆ ಹೊರೆಯೆನಿಸುತ್ತದಾದರೂ, ಭಾರತದಂಥ ದೇಶಗಳ ಪ್ರಜೆಗಳು ಇಂಥ ಉಚಿತಗಳನ್ನು ಬಾಚಿಕೊಳ್ಳುವುದರಲ್ಲಿ ಮುಂದು; ಹೀಗಾಗಿ ಇದನ್ನು ಮುಂದಿನ ದಿನಗಳಲ್ಲಿ ಪರಿಗಣಿಸದೇ ನಿರ್ವಾಹವಿಲ್ಲ.

ಎನ್‌ಡಿಎಗೆ ಅಧಿಕಾರ ನೀಡಿದ ಮತದಾರರು, ವಿಪಕ್ಷವಾದ ಕಾಂಗ್ರೆಸ್‌ ಹಾಗೂ ಇಂಡಿಯಾ ಒಕ್ಕೂಟವನ್ನೂ ಗಟ್ಟಿಗೊಳಿಸಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ ಅನ್ನು 52 ಸ್ಥಾನಕ್ಕೆ ಇಳಿಸಿದ್ದ ಮತದಾರರೇ ಈ ಸಲ ಅದನ್ನು ನೂರರ ಆಸುಪಾಸಿಗೆ ತಂದು ನಿಲ್ಲಿಸಿದ್ದಾರೆ ಎಂದರೆ, ಮತದಾರರ ಚೈತನ್ಯವನ್ನೂ, ಅವರ ವಿವೇಚನಾ ಶಕ್ತಿಯನ್ನೂ ಅರ್ಥ ಮಾಡಿಕೊಳ್ಳಬಹುದು. ಮತದಾರ ಭ್ರಷ್ಟಾಚಾರಿ ಸರ್ಕಾರಕ್ಕೆ ಪಾಠ ಕಲಿಸಲೂ ಶಕ್ತ; ಹಾಗೇ ಏನೂ ಅಲ್ಲದ ಪಕ್ಷವನ್ನು ಮೇಲೆತ್ತಲೂ ಶಕ್ತ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನಾಯಕತ್ವದಲ್ಲಿ ಇನ್ನಷ್ಟು ಮಾಗಬೇಕು ಅನ್ನಿಸಿದರೂ, ಭಾರತ್‌ ಜೋಡೋ ಮುಂತಾದ ಕಾರ್ಯಕ್ರಮಗಳ ಮೂಲಕ ಮತದಾರರ ಮನದಲ್ಲಿ ತುಸುವಾದರೂ ತಮ್ಮ ಇಮೇಜ್‌ ಹೆಚ್ಚಿಸಿಕೊಳ್ಳಲು ಶಕ್ತರಾದರು. ಹಾಗಾಗಿ ಎರಡೂ ಕಡೆ ಗೆದ್ದಿದ್ದಾರೆ. ಇವರಿಂದ, ಗೆಲ್ಲುವ ಮತಗಳ ಅಂತರವನ್ನು 3 ಲಕ್ಷದಿಂದ 1.5 ಲಕ್ಷಕ್ಕೆ ಇಳಿಸಿಕೊಂಡ ನರೇಂದ್ರ ಮೋದಿಯವರೂ ಪಾಠ ಕಲಿಯಬಹುದು. ಇದೇ ವೇಗವನ್ನು ಉಳಿಸಿಕೊಂಡರೆ ಇಂಡಿಯಾ ಬ್ಲಾಕ್‌ ಮುಂದಿನ ಚುನಾವಣೆ ಹೊತ್ತಿಗೆ ಇನ್ನಷ್ಟು ಸದೃಢವಾಗಬಹುದು. ವಾಸ್ತವವಾಗಿ ದೃಢ ವಿರೋಧ ಪಕ್ಷ ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಗತ್ಯ. ಅದು ಈಗ ಸಾಧ್ಯವಾಗಿದೆ. ಗಟ್ಟಿ ವಿರೋಧ ಪಕ್ಷವಾಗಿ ಇಂಡಿಯಾ ಕೆಲಸ ಮಾಡಿದರೆ, ಆಡಳಿತ ಪಕ್ಷವೂ ಇನ್ನಷ್ಟು ಎಚ್ಚರದಿಂದ, ಪರಿಣಾಮಕಾರಿಯಾಗಿ ಕೆಲಸ ಮಾಡಬಹುದಾಗಿದೆ.

ಇದನ್ನೂ ಓದಿ: Election Results 2024: ತಮಿಳುನಾಡಿನಲ್ಲಿ ಪೈಪೋಟಿ ನೀಡಿ ಸೋತ ಅಣ್ಣಾಮಲೈ; ಬಿಜೆಪಿ ಮತ ಗಳಿಕೆ ಪ್ರಮಾಣ ಶೇ. 3.57ರಿಂದ ಶೇ. 11.04ಕ್ಕೆ ಜಿಗಿತ!

Continue Reading

ರಾಜಕೀಯ

Anna Lezhneva: ಚುನಾವಣೆ ಗೆದ್ದು ಬಂದ ಪವನ್‌ಗೆ ತಿಲಕವಿಟ್ಟು ಸ್ವಾಗತಿಸಿದ ಈ ವಿದೇಶಿ ಮಹಿಳೆ ಯಾರು?

ಮೊದಲ ಎರಡು ಮದುವೆ ವಿಫಲವಾದ ಬಳಿಕ ನಟ-ರಾಜಕಾರಣಿ ಪವನ್ ಕಲ್ಯಾಣ್ 2013ರಲ್ಲಿ ಅನ್ನಾ ಲೆಜ್ನೆವಾ ಅವರನ್ನು ವಿವಾಹವಾದರು. ಅನ್ನಾ ಅವರಿಗೂ ಈ ಹಿಂದೆ ವಿವಾಹವಾಗಿ ಮಗಳನ್ನು ಹೊಂದಿದ್ದರು. ಈ ಮಗುವನ್ನು ಪವನ್ ದತ್ತು ಪಡೆದಿದ್ದಾರೆ. ಇವತ್ತು ಚುನಾವಣೆ ಗೆದ್ದು ಬಂದ ಪವನ್ ಗೆ ಅನ್ನಾ ಲೆಜ್ನೆವಾ (Anna Lezhneva) ಆರತಿ ಮಾಡಿ, ತಿಲಕವಿಟ್ಟು ಸ್ವಾಗತಿಸಿದ್ದಾರೆ.

VISTARANEWS.COM


on

By

Anna Lezhneva
Koo

ಲೋಕಸಭಾ ಚುನಾವಣೆ-2024ರಲ್ಲಿ (Loksabha election-2024) ಆಂಧ್ರಪ್ರದೇಶದಲ್ಲಿ (andrapradesh) ಭರ್ಜರಿ ಗೆಲುವು ಸಾಧಿಸಿ ಮನೆಗೆ ಬಂದ ತೆಲುಗು ನಟ (Telugu actor), ರಾಜಕಾರಣಿ (politician) ಪವನ್ ಕಲ್ಯಾಣ್ (Pawan Kalyan) ಅವರನ್ನು ಪತ್ನಿ (wife) ಅನ್ನಾ ಲೆಜ್ನೆವಾ (Anna Lezhneva) ಆರತಿ ಮಾಡಿ, ತಿಲಕವಿಟ್ಟು ಸ್ವಾಗತಿಸಿದ್ದು ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (viral news) ಆಗಿದೆ. ಈ ನಡುವೆ ಅವರ ಬಗ್ಗೆ ತಿಳಿದುಕೊಳ್ಳುವ ಕುತೂಹಲವೂ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಆಂಧ್ರಪ್ರದೇಶ ರಾಜ್ಯ ಚುನಾವಣೆಯಲ್ಲಿ ಜನಸೇನಾ ಪಕ್ಷದ (ಜೆಎಸ್‌ಪಿ) ನಾಯಕ ತೆಲುಗು ನಟ- ರಾಜಕಾರಣಿ ಪವನ್ ಕಲ್ಯಾಣ್ ಅವರ ಐತಿಹಾಸಿಕ ಗೆಲುವು ಅವರ ಅಭಿಮಾನಿಗಳು ಮತ್ತು ಕುಟುಂಬ ಸದಸ್ಯರಲ್ಲಿ ಹರ್ಷ ಮೂಡಿಸಿದೆ. ಫಲಿತಾಂಶದ ಅನಂತರ ಪವನ್ ಮನೆಗೆ ಮರಳಿದ್ದು, ಅವರನ್ನು ಅವರ ಪತ್ನಿ ಅನ್ನಾ ಲೆಜ್ನೆವಾ ಸ್ವಾಗತಿಸಿದರು. ರಾಜಕೀಯ ಪಯಣದುದ್ದಕ್ಕೂ ಪವನ್ ಜೊತೆಯಾಗಿ ನಿಂತಿರುವ ಅನ್ನಾ ಅವರು ಪವನ್ ಅವರನ್ನು ಸ್ವಾಗತಿಸಿದ ಕ್ಷಣವನ್ನು ಸೆರೆಹಿಡಿಯಲಾಗಿದೆ ಮತ್ತು ಅವರ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಅನ್ನಾ ಲೆಜ್ನೆವಾ ಯಾರು?

ರಷ್ಯಾದ ರೂಪದರ್ಶಿ ಮತ್ತು ನಟಿಯಾಗಿರುವ ಅನ್ನಾ ಲೆಜ್ನೆವಾ ಅವರು 2011ರ ತೀನ್ ಮಾ ಚಿತ್ರದ ಚಿತ್ರೀಕರಣದಲ್ಲಿದ್ದಾಗ ಮೊದಲ ಬಾರಿಗೆ ಪವನ್ ಅವರನ್ನು ಭೇಟಿಯಾಗಿದ್ದರು. ಶೀಘ್ರದಲ್ಲೇ ಅವರು ಪ್ರೀತಿಸುವುದಾಗಿ ಪ್ರಕಟಿಸಿ 2013ರ ಸೆಪ್ಟೆಂಬರ್ 30ರಂದು ಮದುವೆಯಾದರು. ಇದಕ್ಕೂ ಮೊದಲು ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿದರು. ಪವನ್ ಕಲ್ಯಾಣ್ ಅವರ ಮೂರನೇ ಪತ್ನಿ ಅನ್ನಾ.

ಪವನ್ ಕಲ್ಯಾಣ್ ಅವರ ಹಿಂದಿನ ಮದುವೆಗಳು

ʼಗಬ್ಬರ್ ಸಿಂಗ್ʼ ಪವನ್ ಮೊದಲ ಬಾರಿಗೆ 1997ರಲ್ಲಿ 19 ವರ್ಷದ ಹುಡುಗಿ ನಂದಿನಿಯನ್ನು ವಿವಾಹವಾದರು. 2001ರಲ್ಲಿ ಪವನ್ ನಟಿ ರೇಣು ದೇಸಾಯಿ ಅವರೊಂದಿಗೆ ವಾಸ ಮಾಡಲು ತೊಡಗಿದರು. ಅವರಿಬ್ಬರಿಗೆ ಗಂಡು ಮಗುವಾಗಿತ್ತು. ಪವನ್ ತನ್ನ ಮೊದಲ ಹೆಂಡತಿಗೆ ಕಾನೂನುಬದ್ಧವಾಗಿ ವಿಚ್ಛೇದನ ನೀಡದ ಕಾರಣ ಸಾಕಷ್ಟು ತೊಂದರೆಯನ್ನು ಎದುರಿಸಬೇಕಾಯಿತು. ಅನಂತರ ನ್ಯಾಯಾಲಯವು 2008ರಲ್ಲಿ ಅವರಿಗೆ ವಿಚ್ಛೇದನವನ್ನು ನೀಡಿತು. ಅವರ ಎರಡನೇ ಮದುವೆಯು 2009ರಲ್ಲಿ ನಡೆಯಿತು. ಬಳಿಕ ಪವನ್ ಮತ್ತು ರೇಣು ದಂಪತಿ ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದರು. ದುರದೃಷ್ಟವಶಾತ್ ಇವರಿಬ್ಬರ ವೈವಾಹಿಕ ಜೀವನ 2012 ರಲ್ಲಿ ವಿಚ್ಛೇದನದ ಮೂಲಕ ಕೊನೆಯಾಯಿತು.


ಪವನ್ ಕಲ್ಯಾಣ್ ಮತ್ತು ಅನ್ನಾ ಲೆಜ್ನೆವಾ

ಅನ್ನಾ ಮತ್ತು ಪವನ್ ದಂಪತಿ 2017ರಲ್ಲಿ ಮಾರ್ಕ್ ಶಂಕರ್ ಪವನೋವಿಚ್ ಎಂಬ ಗಂಡು ಮಗುವಿಗೆ ಪೋಷಕರಾದರು. ಅನ್ನಾ ಅವರ ಮೊದಲ ಮದುವೆ ವಿಫಲವಾಗಿ ಹೆಣ್ಣು ಮಗುವಿನ ತಾಯಿಯಾಗಿದ್ದರು. ಈ ಮಗು ಪೋಲೆನಾ ಅಂಜನಾ ಪವನ್ನೋವಾಳನ್ನು ಪವನ್ ತನ್ನ ಸ್ವಂತ ಮಗಳಂತೆ ಸ್ವೀಕರಿಸಿದ್ದಾರೆ. ಈಗ ಇವರು ಮೂವರು ಮಕ್ಕಳ ಪೋಷಕರಾಗಿದ್ದಾರೆ.

ವಿಚ್ಛೇದನದ ವದಂತಿ

ಕಳೆದ ವರ್ಷ ಅನ್ನಾ ಮತ್ತು ಪವನ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಇತ್ತು. ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿತ್ತು. ತೆಲುಗು ತಾರೆ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಅವರ ನಿಶ್ಚಿತಾರ್ಥ ಸಮಾರಂಭದಲ್ಲಿ ಅನ್ನಾ ಲೆಜ್ನೆವಾ ಹಾಜರಾಗದಿದ್ದಾಗ ಈ ಗುಲ್ಲು ಹಬ್ಬಿತ್ತು. ರಾಮ್ ಚರಣ್ ಮತ್ತು ಉಪಾಸನಾ ಅವರ ಮಗಳು ಕ್ಲಿನ್ ಕಾರಾ ಕೊನಿಡೆಲಾ ಅವರ ತೊಟ್ಟಿಲು ಸಮಾರಂಭವನ್ನು ಇವರು ತಪ್ಪಿಸಿಕೊಂಡರು. ಇದರಿಂದ ಅವರ ಪ್ರತ್ಯೇಕತೆಯ ವದಂತಿಗಳಿಗೆ ಉತ್ತೇಜನ ಸಿಕ್ಕಿತು. ಆದರೂ ಇತ್ತೀಚಿನ ವಿಡಿಯೋ ಗಳು ಈ ವದಂತಿಗಳನ್ನು ತಳ್ಳಿ ಹಾಕುವಂತೆ ಮಾಡಿದೆ.

ಇದನ್ನೂ ಓದಿ: Odisha Assembly Result 2024: ಬಿಜೆಡಿ ಭದ್ರ ಕೋಟೆಗೆ ಬಿಜೆಪಿ ಗ್ರ್ಯಾಂಡ್‌ ಎಂಟ್ರಿ! ಹಳೇ ದೋಸ್ತಿಗೆ ಸಕತ್‌ ಠಕ್ಕರ್‌ ಕೊಟ್ಟ ಕೇಸರಿ ಬಣ

ಆಂಧ್ರಪ್ರದೇಶದ ರಾಜ್ಯ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಗೆದ್ದ ಅನಂತರ ಅನ್ನಾ ಲೆಜ್ನೇವಾ ಮತ್ತು ಪವನ್ ಕಲ್ಯಾಣ್ ಮತ್ತು ಅವರ ಮಾಜಿ ಪತ್ನಿ ರೇಣು ದೇಸಾಯಿ ಅವರ ಪುತ್ರ ಅಕಿರಾ ನಂದನ್ ಸೇರಿದಂತೆ ಪವನ್ ಕಲ್ಯಾಣ್ ಅವರ ಅಭಿಮಾನಿಗಳಿಗೆ ಶುಭ ಹಾರೈಸಿದ್ದಾರೆ.

Continue Reading

ಪ್ರಮುಖ ಸುದ್ದಿ

Election Results 2024: ಬಿಜೆಪಿ ಹಿನ್ನಡೆ ನಡುವೆಯೂ ಮೂರನೇ ಅವಧಿಗೆ ನರೇಂದ್ರ ಮೋದಿ ಪ್ರಧಾನಿ ಆಗುವುದು ಖಚಿತ!

Election Results 2024 :ಮುಂದಿನ ಐದು ವರ್ಷಗಳ ಕಾಲ ಲೋಕಸಭೆಗೆ ಸರ್ಕಾರದ ಆಯ್ಕೆಯ ಮತ ಎಣಿಕೆಯು ನಿರ್ಣಾಯಕ ಕ್ಷಣವಾಗಿತ್ತು ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ತಮಿಳುನಾಡುಗಳು ಗಮನ ಸೆಳೆದಿದ್ದವು.

VISTARANEWS.COM


on

Election Results 2024
Koo

ಬೆಂಗಳೂರು: ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭಾ ಚುನಾವಣೆಗಳ ಜೊತೆಗೆ 18ನೇ ಲೋಕಸಭಾ ಚುನಾವಣೆಯ (Election Results 2024) ಮತ ಎಣಿಕೆ ಪ್ರಕ್ರಿಯೆ ಮಂಗಳವಾರ ನಡೆಯಿತು. ಸಂಸತ್ತಿನ ಕೆಳಮನೆ ಎಂದೂ ಕರೆಯಲ್ಪಡುವ ಲೋಕಸಭೆಯು 543 ಸಂಸದೀಯ ಕ್ಷೇತ್ರಗಳನ್ನು ಒಳಗೊಂಡಿದೆ. ಆಯಾ ಕ್ಷೇತ್ರಗಳ ಧ್ವನಿಯಾಗಿ ಸೇವೆ ಸಲ್ಲಿಸುವ ಒಬ್ಬ ಸದಸ್ಯರನ್ನು ಈ ಚುನಾವಣೆಯಲ್ಲಿ ಆರಿಸಲಾಗುತ್ತದೆ. ಒಟ್ಟು 80 ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶವು ಲೋಕಸಭೆಯಲ್ಲಿ ಭಾರತದ ಎಲ್ಲಾ ರಾಜ್ಯಗಳಿಗಿಂತ ಅತ್ಯಧಿಕ ಸದಸ್ಯರನ್ನು ಹೊಂದಿದೆ. ಮಹಾರಾಷ್ಟ್ರವು ಒಟ್ಟು 48 ಕ್ಷೇತ್ರಗಳೊಂದಿಗೆ ಅತಿ ಹೆಚ್ಚು ಕ್ಷೇತ್ರಗಳನ್ನು ಹೊಂದಿರುವ ಎರಡನೇ ರಾಜ್ಯ. ಮುಂದಿನ ಐದು ವರ್ಷಗಳ ಕಾಲ ಲೋಕಸಭೆಗೆ ಸರ್ಕಾರದ ಆಯ್ಕೆಯ ಮತ ಎಣಿಕೆಯು ನಿರ್ಣಾಯಕ ಕ್ಷಣವಾಗಿತ್ತು ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ತಮಿಳುನಾಡು ಗಮನ ಸೆಳೆದಿದ್ದವು.

2024ರ ಲೋಕಸಭಾ ಚುನಾವಣೆಯ ಫಲಿತಾಂಶವು ಬಿಜೆಪಿಗೆ ವಾಸ್ತವ ತೆರೆದಿಟ್ಟಿದೆ. ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟವು ಸರ್ಕಾರ ರಚಿಸಲು ಸಿದ್ಧವಾಗಿದೆ. ಆದಾಗ್ಯೂ 272 ಸ್ಥಾನಗಳ ಸರಳ ಬಹುಮತ ಪಡೆಯುವಲ್ಲಿ ಬಿಜೆಪಿ ವಿಫಲವಾಗಿದೆ. ಇದು 2019ರಲ್ಲಿ ಸ್ವತಂತ್ರವಾಗಿ 303 ಸ್ಥಾನಗಳನ್ನು ಗಳಿಸಿ ವಿಜೃಂಭಿಸಿದ್ದ ಬಿಜೆಪಿಯ ತಾಕತ್ತಿಗೆ ವ್ಯತಿರಿಕ್ತವಾಗಿದೆ. ಆ ವರ್ಷ ಎನ್​​ಡಿಎ 353 ಸೀಟುಗಳನ್ನು​ ಗೆದ್ದುಕೊಂಡಿತ್ತು.

ಸಾಂಪ್ರದಾಯಿಕ ಭದ್ರಕೋಟೆಗಳಾದ ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದಲ್ಲಿ ಬಿಜೆಪಿಗೆ ಗಮನಾರ್ಹ ಹಿನ್ನಡೆಯಾಗಿದೆ. ಇದಕ್ಕೆ ವಿರುದ್ಧವಾಗಿ, ಪಕ್ಷವು ಒಡಿಶಾ, ತೆಲಂಗಾಣ ಮತ್ತು ಕೇರಳದಂತಹ ರಾಜ್ಯಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಇದು ವಿವಿಧ ಪ್ರದೇಶಗಳಲ್ಲಿ ಮಿಶ್ರ ಪ್ರತಿಕ್ರಿಯೆ ದೊರಕಿದೆ.

ಇಂಡಿ ಒಕ್ಕೂಟದ ಸವಾಲು

ಮತ್ತೊಂದೆಡೆ, ಬಿಜೆಪಿ ಮತ್ತು ಅದರ ನೀತಿಗಳ ವಿರುದ್ಧ ಸಾಮೂಹಿಕ ಪ್ರತಿರೋಧದಿಂದ ಪ್ರೇರಿತವಾದ ಇಂಡಿ ಬ್ಯಾನರ್ ಅಡಿಯಲ್ಲಿನ ಏಕೀಕೃತ ವಿರೋಧ ಬಣವು ಸರಿಸುಮಾರು 230 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಒಕ್ಕೂಟವು ವಿವಿಧ ರಾಜ್ಯಗಳಲ್ಲಿ ಗಣನೀಯ ಲಾಭಗಳನ್ನು ಪಡೆದಿದೆ. ಇದು ಬಿಜೆಪಿಯ ಪ್ರಾಬಲ್ಯಕ್ಕೆ ಪ್ರಬಲ ಸವಾಲನ್ನು ಒಡ್ಡಿದೆ. ಈ ಒಕ್ಕೂಟಕ್ಕೆ ಸರ್ಕಾರ ರಚಿಸುವ ಅವಕಾಶ ಕಡಿಮೆ ಇದ್ದರು ಒಂದು ಕೈ ನೋಡುವ ಸಾಧ್ಯತೆಗಳಿವೆ.

ಮಂಗಳವಾರ ರಾತ್ರಿಯ ವೇಳೆಗೆ ಪ್ರಮುಖ ಪಕ್ಷಗಳು ಪಡೆದ ಮುನ್ನಡೆಯ ವಿವರ ಹೀಗಿದೆ:

ಎನ್​ಡಿಎ ಬಣ ಒಟ್ಟು 293 ಸ್ಥಾನಗಳಲ್ಲಿ ಮೇಲುಗೈ ಸಾಧಿಸಿದೆ. ಅದರಲ್ಲಿ ಬಿಜೆಪಿಯೊಂದೇ 240 ಸ್ಥಾನಗಳನ್ನು ಪಡೆದಿದೆ. 2019ಕ್ಕೆ ಹೋಲಿಸಿದರೆ 62 ಸೀಟ್​ಗಳ ಕೊರತೆ ಎದುರಿಸಿದೆ. ಮಿತ್ರ ಪಕ್ಷ ತೆಲುಗು ದೇಶಂ ಪಾರ್ಟಿ 16 ಸೀಟುಗಳನ್ನು ಗೆದ್ದಿದೆ. ಹಿಂದಿನ ಬಾರಿಗಿಂತ 13 ಸೀಟು​ಗಳನ್ನು ಹೆಚ್ಚು ಗೆದ್ದಿದೆ. ಜೆಡಿಯು 13 ಸೀಟುಗಳನ್ನು ಗಳಿಸಿಕೊಂಡಿದ್ದು, ಹಿಂದಿನ ಬಾರಿಗಿಂತ 4 ಸ್ಥಾನಗಳನ್ನು ಮೈತ್ರಿಯ ಲಾಭವಾಗಿ ಪಡೆದಿದೆ. ಶಿವಸೇನೆ (ಶಿಂಧೆ ಬಣ) 7 ಸ್ಥಾನ ಗಳಿಸಿದ್ದರೆ, ಲೋಕ ಜನಶಕ್ತಿ ಪಾರ್ಟಿ ( ಎಲ್​ಜೆಪಿ) 5 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಕರ್ನಾಟಕದಲ್ಲಿ ಮಿತ್ರ ಪಕ್ಷ ಜೆಡಿಎಸ್​ ಮಂಡ್ಯ ಹಾಗೂ ಕೋಲಾರ ಮೂಲಕ 2 ಸ್ಥಾನ ಕೊಟ್ಟಿದೆ. ಜನಸೇನಾ ಪಾರ್ಟಿ ಆಂಧ್ರದಲ್ಲಿ 2 ಸೀಟ್​ ಗೆದ್ದಿದ್ದು, ಆರ್​ಎಲ್​ಡಿ 2 ಸೀಟ್​ ಗೆಲುವು ಕಂಡಿದೆ. ಎನ್​ಸಿಪಿ (ಅಜಿತ್ ಪವಾರ್ ಬಣ) ಒಂದು ಸ್ಥಾನ ಗೆದ್ದುಕೊಂಡಿದೆ.

​ಕಾಂಗ್ರೆಸ್‌ ಬಲ ಏರಿಕೆ:

ಇಂಡಿ ಒಕ್ಕೂಟದಲ್ಲಿ ಕಾಂಗ್ರೆಸ್​ 99 ಸ್ಥಾನಗಳನ್ನು ಗೆದ್ದುಕೊಂಡಿದೆ. ಇದು 2019ನೇ ವರ್ಷದ ಫಲಿತಾಂಶಕ್ಕೆ ಹೋಲಿಸಿದರೆ 47 ಸೀಟುಗಳನ್ನು ಹೆಚ್ಚುವರಿಯಾಗಿ ಪಡೆದಿದೆ. ಹಿಂದಿನ ಬಾರಿಗಿಂತ 32 ಸ್ಥಾನಗಳನ್ನು ಹೆಚ್ಚಿಸಿಕೊಂಡಿರುವ ಸಮಾಜವಾದಿ ಪಾರ್ಟಿ 37 ಸೀಟ್​ ಗೆದ್ದಿದೆ. ಟಿಎಂಸಿ 29 ಹಾಗೂ ತಮಿಳುನಾಡಿನಲ್ಲಿ ಡಿಎಂಕೆ 22 ಸೀಟ್​ಗಳನ್ನು ತನ್ನದಾಗಿಸಿಕೊಂಡಿದೆ. ಹಿಂದಿನ ಬಾರಿಗಿಂತ 2 ಕ್ಷೇತ್ರ​ ಹೆಚ್ಚಳವಾಗಿದೆ. ಎಸ್​ಎಸ್​ಯುಬಿಟಿ ಪಾರ್ಟಿ 9 ಸೀಟ್ ಗೆದ್ದಿದೆ. ಎನ್​ಸಿಪಿ ಶರದ್ ಪವಾರ್ ಬಣ 8 ಸೀಟ್​ಗಳನ್ನು ಹೊಂದಿವೆ. ಆರ್​ಜೆಡಿ 4, ಸಿಪಿಐಎಮ್​ 4 ಹಾಗೂ ಐಯುಎಮ್​ಎಲ್​ 3 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ.

ಇತರ ಪಕ್ಷಗಳು 17 ಕ್ಷೇತ್ರಗಳನ್ನು ಬಾಚಿಕೊಂಡಿವೆ. ಐಎನ್​ಡಿ ಪಕ್ಷ 3 ಸ್ಥಾನ, ವೈಎಸ್​ಆರ್​ಪಿ 4 ಸ್ಥಾನ, ವಿಪಿಪಿ 1 ಸ್ಥಾನ, ಎಸ್​ಕೆಎಮ್​ 1 ಸ್ಥಾನ, ಝಡ್​ಪಿಎಮ್ 1 ಸ್ಥಾನ, ಶಿರೋಮಣಿ ಅಕಾಲಿದಳ 1 ಸ್ಥಾನ, ಎಐಎಮ್​ಎಮ್​ 1, ಎಸ್​​ಕೆಎಂ ಒಂದು ಸ್ಥಾನ ಗೆದ್ದುಕೊಂಡಿದೆ.

Continue Reading

ಪ್ರಮುಖ ಸುದ್ದಿ

Election Results 2024: ಲೋಕಸಭೆ ಚುನಾವಣೆಯ ರಾಜ್ಯವಾರು ಬಲಾಬಲ ಹೀಗಿದೆ

Election Results 2024: ಎನ್​ಡಿಎ ಒಕ್ಕೂಟ 290ಕ್ಕೂ ಅಧಿಕ ಸ್ಥಾನಗಳೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯವುದು ಖಚಿತ. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಆಗುವುದು ಕೂಡ ನಿಶ್ಚಿತ. 400 ಸೀಟುಗಳ ಅಭಿಲಾಷೆಯಲ್ಲಿದ್ದ ಬಿಜೆಪಿ ಇದೀಗ ಬೇರೆ ಪಕ್ಷಗಳ ಜತೆ ಸೇರಿ ಸರ್ಕಾರ ರಚಿಸಬೇಕಾಗುತ್ತದೆ.

VISTARANEWS.COM


on

Election Results 2024
Koo

ಬೆಂಗಳೂರು: 2024ರ ಲೋಕಸಭಾ ಚುನಾವಣೆಯಲ್ಲಿ ದೇಶದ ಮತದಾರರು ರಾಜಕೀಯ ಪಕ್ಷಗಳಿಗೆ ಅಚ್ಚರಿಯ ಫಲಿತಾಂಶ ನೀಡಿದ್ದಾರೆ. ಸ್ವತಃ 300ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಬೇಕೆಂದಿದ್ದ ಬಿಜೆಪಿ ಕೇವಲ 240 ಸ್ಥಾನಗಳಿಗೆ ತೃಪ್ತಿ ಪಡುವಂತಾಗಿದೆ. ಹೀಗಾಗಿ ಈ ಬಾರಿ ಸರಳ ಬಹುಮತ ಪಡೆದ ಪಕ್ಷವೇ ಇಲ್ಲ. ಆದಾಗ್ಯೂ ಎನ್​ಡಿಎ ಒಕ್ಕೂಟ 290ಕ್ಕೂ ಅಧಿಕ ಸ್ಥಾನಗಳೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯವುದು ಖಚಿತ. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಆಗುವುದು ಕೂಡ ನಿಶ್ಚಿತ. ಒಟ್ಟು 400 ಸೀಟುಗಳ ಅಭಿಲಾಷೆಯಲ್ಲಿದ್ದ ಬಿಜೆಪಿ ಇದೀಗ ಬೇರೆ ಪಕ್ಷಗಳ ಜತೆ ಸೇರಿ ಸರ್ಕಾರ ರಚಿಸಬೇಕಾಗುತ್ತದೆ. ಈ ರೀತಿಯಾಗಿ ಅಚ್ಚರಿಯ ಫಲಿತಾಂಶ ಕಂಡ ಲೋಕಸಭಾ ಚುನಾವಣೆಯ ರಾಜ್ಯವಾರು ಚಿತ್ರಣ ಇಲ್ಲಿದೆ.

ಉತ್ತರ ಪ್ರದೇಶ

ಉತ್ತರ ಪ್ರದೇಶ ಅತಿ ಹೆಚ್ಚು 80 ಲೋಕ ಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜ್ಯವಾಗಿದೆ. ಇಲ್ಲಿ ಇಂಡಿಯಾ ಒಕ್ಕೂಟಕ್ಕೆ ಮುನ್ನಡೆ ದೊರಕಿದೆ. ಬಿಜೆಪಿಗೆ ಕೇವಲ 34 ಸೀಟುಗಳು ದೊರಕಿದ್ದರೆ, ಎಸ್​ಪಿ 36 ಸೀಟುಗಳು ಗೆದ್ದುಕೊಂಡಿದೆ. ಕಾಂಗ್ರೆಸ್​ 6 ಹಾಗೂ ಇತರ ಪಕ್ಷಗಳು 4 ಸೀಟುಗಳನ್ನು ಗೆದ್ದಿವೆ. ಕಳೆದ ಬಾರಿ ಇಲ್ಲಿ ಬಿಜೆಪಿ 62 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಹಾಗಾಗಿ ಇಲ್ಲಿ ಬಿಜೆಪಿಗೆ ಭಾರಿ ನಷ್ಟವಾಗಿದೆ.

ಪಶ್ಚಿಮ ಬಂಗಾಳ

31 ಲೋಕ ಸಭಾ ಕ್ಷೇತ್ರಗಳನ್ನು ಹೊಂದಿರುವ ಪಶ್ಚಿಮ ಬಂಗಾಳದಲ್ಲಿ ಇಂಡಿ ಒಕ್ಕೂಟಕ್ಕೆ ಲಾಭವಾಗಿದೆ. ಇಲ್ಲಿ ಟಿಎಂಸಿ 31 ಸೀಟ್​ಗಳನ್ನು ಗೆದ್ದಿದ್ದರೆ, ಬಿಜೆಪಿಗೆ 10 ಸೀಟ್​ಗಳು ಮಾತ್ರ ದೊರಕಿವೆ. ಕಾಂಗ್ರೆಸ್​ ಪಕ್ಷ 1 ಸ್ಥಾನ​ ತನ್ನದಾಗಿಸಿಕೊಂಡಿದೆ. ಕಳೆದ ಬಾರಿ ಇಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆದ್ದಿತ್ತು.

ಮಹಾರಾಷ್ಟ್ರ

ಮಹಾರಾಷ್ಟ್ರದಲ್ಲಿ ಎನ್​ಡಿಎ ಒಕ್ಕೂಟಕ್ಕೆ ನಷ್ಟವಾಗಿದೆ. ಇಲ್ಲಿ ಕಾಂಗ್ರೆಸ್​ 12 ಸೀಟ್​ ಗೆದ್ದಿದ್ದರೆ ಬಿಜೆಪಿ 11 ಸೀಟ್​ಗಳಲ್ಲಿ ಜಯಿಸಿದೆ. ಶಿವಸೇನೆ ಉದ್ಧವ್​ ಠಾಕ್ರೆ ಬಣ 10​ ಹಾಗೂ ಎನ್​​ಸಿಪಿ ಶರದ್ ಪವಾರ್​ ಬಣ 5 ಸೀಟು ತನ್ನದಾಗಿಸಿಕೊಂಡಿದೆ. ಶಿವ ಸೇನೆ ಶಿಂಧೆ ಬಣಕ್ಕೆ 6 ಸೀಟ್​ ಸಿಕ್ಕಿದೆ. ಕಳೆದ ಬಾರಿ ಇಲ್ಲಿ ಬಿಜೆಪಿ ಮತ್ತು ಶಿವಸೇನೆ ಜತೆಯಾಗಿ 40 ಸೀಟುಗಳನ್ನು ಗೆದ್ದಿದ್ದವು.

ಕರ್ನಾಟಕ

28 ಕ್ಷೇತ್ರಗಳನ್ನು ಹೊಂದಿರುವ ಕರ್ನಾಟಕದಲ್ಲಿ ಬಿಜೆಪಿ 17 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್​ 9 ಸ್ಥಾನ ಗೆದ್ದಿದೆ. ಜೆಡಿಎಸ್​ 2 ಸ್ಥಾನ ಗೆದ್ದುಕೊಂಡಿದೆ. ಕಳೆದ ಬಾರಿ ಇಲ್ಲಿ ಬೆಂಬಲಿತ ಪಕ್ಷೇತರ ಸೇರಿದಂತೆ ಬಿಜೆಪಿ 26 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಬಿಹಾರ

ಬಿಹಾರದಲ್ಲಿ ಜೆಡಿಯುಗೆ 13 ಮತ್ತು ಬಿಜೆಪಿ ಸೀಟುಗಳು ಗೆದ್ದಿವೆ. ಆರ್​ಜೆಡಿಗೆ 4 ಮತ್ತು ಕಾಂಗ್ರೆಸ್‌ಗೆ 3 ಸೀಟುಗಳು ಸಿಕ್ಕಿವೆ. ಇತರ ಪಕ್ಷಗಳಿಗೆ 8 ಸೀಟ್ ದೊರಕಿದೆ.

ತಮಿಳುನಾಡು

ದಕ್ಷಿಣದ ಪ್ರಮುಖ ರಾಜ್ಯವಾಗಿರುವ ತಮಿಳುನಾಡಿನಲ್ಲಿ ಡಿಎಂಕೆ 22 ಸ್ಥಾನ ಗೆದ್ದುಕೊಂಡಿದೆ. ಕಾಂಗ್ರೆಸ್‌ 9 ಮತ್ತು ಇತರ ಪಕ್ಷಗಳಿಗೆ 8 ಸ್ಥಾನಗಳು ಲಭಿಸಿವೆ.

ಅಂಡಮಾನ್​ ನಿಕೋಬಾರ್

ಕೇಂದ್ರಾಡಳಿತ ಪ್ರದೇಶವಾಗಿರುವ ಅಂಡಮಾನ್ ಹಾಗೂ ನಿಕೋಬಾರ್​ನಲ್ಲಿ ಇದ್ದ ಏಕೈಕ ಸ್ಥಾನ ಬಿಜೆಪಿ ಪಾಲಾಗಿದೆ.

ಆಂಧ್ರಪ್ರದೇಶ

ಆಂಧ್ರಪ್ರದೇಶದಲ್ಲಿ ಟಿಡಿಪಿ 16 ಸ್ಥಾನಗಳನ್ನು ಗೆದ್ದಿದ್ದರೆ, ವೈಎಸ್​ಆರ್​ಪಿ 4 ಸ್ಥಾನ ಗೆದ್ದಿದೆ. ಬಿಜೆಪಿ 3, ಜನಸೇನಾ ಪಕ್ಷ 2 ಸ್ಥಾನ ತನ್ನದಾಗಿಸಿಕೊಂಡಿದೆ.

ಮಧ್ಯಪ್ರದೇಶ

ಮಧ್ಯ ಪ್ರದೇಶದಲ್ಲಿ ಒಟ್ಟು 29 ಲೋಕ ಸಭಾ ಕ್ಷೇತ್ರಗಳಿವೆ. ಇಲ್ಲಿ ಅಷ್ಟನ್ನೂ ಬಿಜೆಪಿ ಗೆದ್ದುಕೊಂಡು ಕ್ಲೀನ್ ಸ್ವೀಪ್ ಮಾಡಿದೆ.

ಅರುಣಾಚಲ ಪ್ರದೇಶ

ಈಶಾನ್ಯ ರಾಜ್ಯವಾಗಿರುವ ಅರುಣಾಚಲ ಪ್ರದೇಶದಲ್ಲಿ ಇದ್ದ ಎರಡು ಸ್ಥಾನವನ್ನು ಬಿಜೆಪಿ ವಶಪಡಿಸಿಕೊಂಡಿದೆ.

ಅಸ್ಸಾಂ

ಅಸ್ಸಾಂನಲ್ಲಿ ಒಟ್ಟು 14 ಸ್ಥಾನಗಳಿವೆ. ಅದರಲ್ಲಿ ಬಿಜೆಪಿ 9 ಸ್ಥಾನ ಗೆದ್ದಿದ್ದರೆ ಕಾಂಗ್ರೆಸ್​ 3 ಹಾಗೂ ಇತರರು 2 ಸ್ಥಾನ ಗೆದ್ದಿದ್ದಾರೆ.

ಛತ್ತೀಸ್​ಗಢ

ನಕ್ಸಲರ ಉಪಟಳ ಹೆಚ್ಚಿರುವ ಛತ್ತೀಸ್​ಗಡದಲ್ಲಿ ಒಟ್ಟು ಇರುವ 11 ಸ್ಥಾನಗಳಲ್ಲಿ ಬಿಜೆಪಿ 9 ಸ್ಥಾನ ಗೆದ್ದಿದೆ. ಉಳಿದ 2 ಸ್ಥಾನ ಕಾಂಗ್ರೆಸ್​ಗೆ ದೊರಕಿದೆ.

ದಾದರ್​ ಮತ್ತು ನಾಗರ್​ ಹವೇಲಿ

ಕೇಂದ್ರಾಡಳಿತ ಪ್ರದೇಶವಾಗಿರುವ ದಾದರ್ ಮತ್ತು ನಾಗರ್​ ಹವೇಲಿಯಲ್ಲಿ ಒಂದೇ ಸ್ಥಾನವಿದ್ದು ಅದು ಬಿಜೆಪಿಗೆ ಸಿಕ್ಕಿದೆ.

ದಮನ್, ದಿಯು

ಕೇಂದ್ರಾಡಳಿತ ಪ್ರದೇಶವಾಗಿರುವ ದಿಯು ಹಾಗೂ ದಮನ್​ನಲ್ಲಿ ಪಕ್ಷೇತರ ಒಂದು ಸ್ಥಾನ ಗೆದ್ದಿದ್ದಾರೆ.

ಗೋವಾ

ಕೇಂದ್ರಾಡಳಿತ ಪ್ರದೇಶವಾಗಿರುವ ಗೋವಾದಲ್ಲಿ 2 ಸ್ಥಾನಗಳು ಇದ್ದವು. ಬಿಜೆಪಿ ಹಾಗೂ ಕಾಂಗ್ರೆಸ್ ತಲಾ ಒಂದು ಸೀಟುಗಳನ್ನು ಹಂಚಿಕೊಂಡಿವೆ.

ಗುಜರಾತ್​

ಗುಜರಾತ್​ನಲ್ಲಿ ಒಟ್ಟು 26 ಲೋಕಸಭಾ ಸ್ಥಾನಗಳಿವೆ. ಅವುಗಳಲ್ಲಿ 25 ಸ್ಥಾನಗಳನ್ನು ಬಿಜೆಪಿ ವಶಪಡಿಸಿಕೊಂಡಿದೆ. ಒಂದು ಸ್ಥಾನ ಕಾಂಗ್ರೆಸ್​ಗೆ ಬಂದಿದ್ದು 10 ವರ್ಷದ ಬಳಿಕ ಖಾತೆ ತೆರೆದಿದೆ.

ಹರಿಯಾಣ

ಹರಿಯಾಣದಲ್ಲಿ ಒಟ್ಟು 10 ಲೋಕಸಭಾ ಸ್ಥಾನಗಳು ಇವೆ. ಅವುಗಳಲ್ಲಿ ಬಿಜೆಪಿ 5 ಸ್ಥಾನ ಗೆದ್ದಿದ್ದರೆ ಕಾಂಗ್ರೆಸ್​ ಅಷ್ಟೇ ಸೀಟ್​ಗಳನ್ನು ಖಾತೆಗೆ ಸೇರಿಸಿಕೊಂಡಿದೆ.

ಹಿಮಾಚಲ ಪ್ರದೇಶ

ಒಟ್ಟು ಇರುವ ನಾಲ್ಕು ಸೀಟ್​ಗಳಲ್ಲಿ ಅಷ್ಟನ್ನೂ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಜಮ್ಮು ಮತ್ತು ಕಾಶ್ಮೀರ

ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ 2 ಸ್ಥಾನ ಗೆದ್ದಿದ್ದು ಜೆಕೆಎನ್​ ಪಕ್ಷ 2 ಸ್ಥಾನ ಪಡೆದಿದೆ. ಪಕ್ಷೇತರರಿಗೆ 1 ಒಂದು ಸ್ಥಾನ ದೊರಕಿದೆ.

ಕೇರಳ

ಕೇರಳದಲ್ಲಿ ಒಟ್ಟು 20 ಸೀಟ್​ಗಳಿವೆ. ಅದಲ್ಲಿ ಕಾಂಗ್ರೆಸ್​ 14 ಸೀಟ್​ಗಳನ್ನು ಗೆದ್ದುಕೊಂಡಿದೆ. ಐಯುಎಮ್​ಎಲ್​ 2 ಸೀಟ್ ಗೆದ್ದರೆ ಬಿಜೆಪಿ ಮೊದಲ ಬಾರಿಗೆ ಖಾತೆ ತೆರೆದಿದೆ. ಸಿಪಿಎಂ 1 ಸ್ಥಾನ ಹಾಗೂ ಇತರರು 2 ಸ್ಥಾನ ಗೆದ್ದಿದ್ದಾರೆ.

ಲಡಾಖ್​

ಲಡಾಖ್​​ನಲ್ಲಿ ಇದ್ದ ಒಂದೇ ಸ್ಥಾನವನ್ನು ಪಕ್ಷೇತರ ಅಭ್ಯರ್ಥಿ ಗೆದ್ದುಕೊಂಡಿದ್ದಾರೆ.

ಲಕ್ಷದ್ವೀಪ

ಇಲ್ಲಿನ ಒಂದೇ ಒಂದು ಸ್ಥಾನವನ್ನು ಕಾಂಗ್ರೆಸ್​ ಪಕ್ಷ ತನ್ನದಾಗಿಸಿಕೊಂಡಿದೆ.

ಮಣಿಪುರ

ಜನಾಂಗೀಯ ಗಲಭೆ ಪೀಡಿತ ಮಣಿಪುರದಲ್ಲಿ ಇದ್ದ ಎರಡು ಸ್ಥಾನಗಳನ್ನು ಕಾಂಗ್ರೆಸ್ ಬಾಚಿಕೊಂಡಿದೆ.

ಮೇಘಾಲಯ

ಇಲ್ಲಿ ಒಟ್ಟು 2 ಸ್ಥಾನಗಳಿದ್ದವು. ಅವುಗಳಲ್ಲಿ ಒಂದು ಕಾಂಗ್ರೆಸ್​ ಪಾಲಾಗಿದ್ದರೆ ಇನ್ನೊಂದು ಇತರ ಪಕ್ಷವೊಂದರ ಪಾಲಾಗಿದೆ.

ಮಿಜೋರಾಮ್​

ಸಣ್ಣ ರಾಜ್ಯವಾಗಿರುವ ಮಿಜೋರಾಮ್​ನಲ್ಲಿ ಒಂದೇ ಒಂದು ಸ್ಥಾನವಿತ್ತು. ಇದನ್ನು ಝಡ್​ಪಿಎಂ ಪಕ್ಷ ಗೆದ್ದುಕೊಂಡಿದೆ.

ನಾಗಾಲ್ಯಾಂಡ್​

ಒಟ್ಟು 1 ಸ್ಥಾನ ಇದ್ದ ನ್ಯಾಗಾಲ್ಯಾಂಡ್​ನಲ್ಲಿ ಕಾಂಗ್ರೆಸ್​ ಮೇಲುಗೈ ಸಾಧಿಸಿದೆ.

ನವ ದೆಹಲಿ

ದೆಹಲಿಯಲ್ಲಿ ಬೇರೆ ಪಕ್ಷಗಳಿಗೆ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಏಳೂ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ.

ಒಡಿಶಾ

ಇಲ್ಲಿನ ಒಟ್ಟು 21 ಕ್ಷೇತ್ರಗಳಲ್ಲಿ ಬಿಜೆಪಿಯೇ 20 ಗೆದ್ದುಕೊಂಡಿದ್ದು, ಒಂದು ಸ್ಥಾನ ಮಾತ್ರ ಬಿಜೆಡಿ ಪಾಲಾಗಿದೆ.

ಪುದುಚೆರಿ

ಪುದುಚೆರಿಯಲ್ಲಿ ಈ ಬಾರಿ ಬಿಜೆಪಿಗೆ ಅನುಕೂಲ ಆಗಿಲ್ಲ. ಇಲ್ಲಿ ಕಾಂಗ್ರೆಸ್​ ಗೆಲುವು ಸಾಧಿಸಿದೆ.

ಪಂಜಾಬ್​

ಒಟ್ಟು 13 ಸ್ಥಾನಗಳಲ್ಲಿ ಕಾಂಗ್ರೆಸ್​ 7 ಸ್ಥಾನ ಗೆದ್ದಿದ್ದರೆ ಆಪ್​ಗೆ 3 ಸೀಟ್ ಸಿಕ್ಕಿದೆ. ಎಸ್​ಎಡಿಗೆ 1 ಹಾಗೂ ಇತರರಿಗೆ 2 ಸ್ಥಾನ ದೊರಕಿದೆ.

ರಾಜಸ್ಥಾನ

ರಾಜಸ್ಥಾನದಲ್ಲಿ ಒಟ್ಟು 25 ಲೋಕಸಭಾ ಕ್ಷೇತ್ರಗಳಿವೆ. ಇಲ್ಲಿ 14 ಬಿಜೆಪಿ ಪಾಲಾದರೆ, 8 ಕಾಂಗ್ರೆಸ್ ಹಾಗೂ 3 ಇತರ ಪಕ್ಷಗಳ ಪಾಲಾಗಿವೆ.

ಸಿಕ್ಕಿಂ

ಸಿಕ್ಕಿಮ್​ನಲ್ಲಿರುವ ಒಂದೇ ಒಂದು ಕ್ಷೇತ್ರದಲ್ಲಿ ಎಸ್​ಕೆಎಂ ಪಕ್ಷ ಗೆಲುವು ಸಾಧಿಸಿದೆ.

ತೆಲಂಗಾಣ

ತೆಲಂಗಾಣದಲ್ಲಿ 17 ಲೋಕಸಭಾ ಸ್ಥಾನಗಳು ಇದ್ದವು. ಇವುಗಳಲ್ಲಿ 8 ಬಿಜೆಪಿ ಪಾಲಾದರೆ, 8 ಕಾಂಗ್ರೆಸ್​ಗೆ ಸಿಕ್ಕಿದೆ. ಒಂದು ಎಐಎಮ್​ಐಎಮ್​ಗೆ ದೊರಕಿದೆ.

ಉತ್ತರಾಖಂಡ

ಉತ್ತರಾಖಂಡದಲ್ಲಿ ಒಟ್ಟು 5 ಸೀಟುಗಳಿವೆ. ಅಷ್ಟೂ ಬಿಜೆಪಿ ಪಾಲಾಗಿವೆ.

2019ರ ಫಲಿತಾಂಶ ಏನಾಗಿತ್ತು?

ಹಿಂದಿನ 2019ರ ಚುನಾವಣೆಯಲ್ಲಿ, ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಎನ್​ಡಿಎ 353 ಲೋಕಸಭಾ ಸ್ಥಾನಗಳನ್ನು ಪಡೆಯುವ ಮೂಲಕ ಗಮನಾರ್ಹ ವಿಜಯ ದಾಖಲಿಸಿತ್ತು. ಬಿಜೆಪಿ ಏಕಾಂಗಿಯಾಗಿ 303 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಬಿಜೆಪಿ ನೇತೃತ್ವದ ಎನ್​​ಡಿಎ ಮತ್ತು ಹೊಸದಾಗಿ ರೂಪುಗೊಂಡ ಇಂಡಿಯಾ ಬ್ಲಾಕ್ ಪ್ರಮುಖ ಸ್ಪರ್ಧಿಗಳಾಗಿದ್ದವು. ಮತದಾರರ ಬೆಂಬಲವನ್ನು ಗಳಿಸಲು ರಾಜಕೀಯ ಪಕ್ಷಗಳು ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದವು. ಎನ್​ಡಿಎಯ ಹಾಲಿ ಲೋಕಸಭಾ ಅವಧಿ ಜೂನ್ 16, 2024ರಂದು ಕೊನೆಗೊಳ್ಳಲಿದೆ.

Continue Reading
Advertisement
narendra modi amit shah jp nadda election results 2024
ಸಂಪಾದಕೀಯ5 mins ago

ವಿಸ್ತಾರ ಸಂಪಾದಕೀಯ: ಮಿಶ್ರಫಲ ನೀಡಿದ ಫಲಿತಾಂಶ; ಆಡಳಿತ ಪಕ್ಷಕ್ಕೆ ಪಾಠ, ವಿಪಕ್ಷ ಬಲಿಷ್ಠ

World Environment Day
ಪರಿಸರ6 mins ago

World Environment Day: ಇಂದು ವಿಶ್ವ ಪರಿಸರ ದಿನ; ಭೂಮಿಗೆ ಜ್ವರ, ನಮಗೆಲ್ಲ ಬರೆ!

dina bhavishya
ಭವಿಷ್ಯ6 mins ago

Dina Bhavishya : ನಿಮ್ಮನ್ನು ದ್ವೇಷಿಸುತ್ತಿದ್ದವರಿಗೆ ನಿಮ್ಮ ಮೇಲೆ ದಿಢೀರ್‌ ಪ್ರೀತಿ!

Anna Lezhneva
ರಾಜಕೀಯ6 hours ago

Anna Lezhneva: ಚುನಾವಣೆ ಗೆದ್ದು ಬಂದ ಪವನ್‌ಗೆ ತಿಲಕವಿಟ್ಟು ಸ್ವಾಗತಿಸಿದ ಈ ವಿದೇಶಿ ಮಹಿಳೆ ಯಾರು?

BJP celebration about lok sabha election results
ಕರ್ನಾಟಕ6 hours ago

R Ashok: ಸೋಲಿನ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಆರ್‌. ಅಶೋಕ್‌ ಆಗ್ರಹ

MLC TA Sharavana latest statement about lok sabha election results 2024
ಕರ್ನಾಟಕ6 hours ago

TA Sharavana: ಫಲಿತಾಂಶದಿಂದ ಬಲಿಷ್ಠವಾದ ಜೆಡಿಎಸ್‌: ಟಿ.ಎ.ಶರವಣ

Election Results 2024
ಪ್ರಮುಖ ಸುದ್ದಿ6 hours ago

Election Results 2024: ಬಿಜೆಪಿ ಹಿನ್ನಡೆ ನಡುವೆಯೂ ಮೂರನೇ ಅವಧಿಗೆ ನರೇಂದ್ರ ಮೋದಿ ಪ್ರಧಾನಿ ಆಗುವುದು ಖಚಿತ!

Election Results 2024
ಪ್ರಮುಖ ಸುದ್ದಿ7 hours ago

Election Results 2024: ಲೋಕಸಭೆ ಚುನಾವಣೆಯ ರಾಜ್ಯವಾರು ಬಲಾಬಲ ಹೀಗಿದೆ

Assault Case
ಕರ್ನಾಟಕ7 hours ago

Assault Case: ಬೆಳ್ತಂಗಡಿಯಲ್ಲಿ ಬಿಜೆಪಿ ಮುಖಂಡನ ಮೇಲೆ ತಲ್ವಾರ್‌ನಿಂದ ಹಲ್ಲೆ; ಸುರಪುರದಲ್ಲಿ ರಾಜುಗೌಡ ಅಳಿಯನ ಕಾರಿನ ಮೇಲೆ ಕಲ್ಲೆಸೆತ

Narendra Modi Election
ದೇಶ7 hours ago

Narendra Modi Election: ಚುನಾವಣೆ ಫಲಿತಾಂಶದ ಬಳಿಕ ತಾಯಿಯ ನೆನೆದು ಭಾವುಕರಾದ ಮೋದಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ22 hours ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ2 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ2 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು4 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ6 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌