Ayodhya Ram Mandir: ರಾಮಮಂದಿರ ಪ್ರಾಣ ಪ್ರತಿಷ್ಠೆ, ಅಮೆರಿಕದ ದೇವಾಲಯಗಳಲ್ಲೂ ಸಂಭ್ರಮವೋ ಸಂಭ್ರಮ! - Vistara News

ದೇಶ

Ayodhya Ram Mandir: ರಾಮಮಂದಿರ ಪ್ರಾಣ ಪ್ರತಿಷ್ಠೆ, ಅಮೆರಿಕದ ದೇವಾಲಯಗಳಲ್ಲೂ ಸಂಭ್ರಮವೋ ಸಂಭ್ರಮ!

ರಾಮಮಂದಿರದ (Ayodhya Ram Mandir) ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ನಾನಾ ದೇವಾಲಯಗಳಲ್ಲಿ ನಡೆಯುವ ಸರಣಿ ಪೂಜಾದಿ ಕಾರ್ಯಕ್ರಮಗಳಲ್ಲಿ ಸಾವಿರಾರು ಭಾರತೀಯ ಅಮೆರಿಕನ್ನರು ಭಾಗವಹಿಸುವ ನಿರೀಕ್ಷೆಯಿದೆ.

VISTARANEWS.COM


on

ram mandir US
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: ಅಯೋಧ್ಯೆಯಲ್ಲಿ ನಾಳೆ ನಡೆಯಲಿರುವ ರಾಮಮಂದಿರದ (Ayodhya Ram Mandir) ಪ್ರಾಣ ಪ್ರತಿಷ್ಠಾಪನೆಯ (Pran Pratishta) ಹಿನ್ನೆಲೆಯಲ್ಲಿ ಸಂಭ್ರಮಿಸಲು ಅಮೆರಿಕದ ಹಿಂದೂ ದೇವಾಲಯಗಳಲ್ಲೂ ಭರ್ಜರಿ ಸಿದ್ಧತೆಗಳು ನಡೆದಿವೆ.

ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ನಾನಾ ದೇವಾಲಯಗಳಲ್ಲಿ ನಡೆಯುವ ಸರಣಿ ಪೂಜಾದಿ ಕಾರ್ಯಕ್ರಮಗಳಲ್ಲಿ ಸಾವಿರಾರು ಭಾರತೀಯ ಅಮೆರಿಕನ್ನರು ಭಾಗವಹಿಸುವ ನಿರೀಕ್ಷೆಯಿದೆ. “ಅಯೋಧ್ಯೆಯು ವಿನಾಶ ಮತ್ತು ನಿರ್ಲಕ್ಷ್ಯದಿಂದ ವೈಭವಪೂರ್ಣವಾಗಿ ಹೊರಹೊಮ್ಮಿದೆ. ಸನಾತನ ಧರ್ಮದ ಶಾಶ್ವತ ಸ್ವರೂಪವನ್ನು ಬಿಂಬಿಸುತ್ತದೆ. 550 ವರ್ಷಗಳ ನಂತರ ರಾಮ್ ಲಲ್ಲಾ ಮಂದಿರದಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕವು ಇಡೀ ದೇಶಕ್ಕೆ ಮತ್ತು ಪ್ರಪಂಚದಾದ್ಯಂತದ ಸುಮಾರು ನೂರು ಕೋಟಿ ಹಿಂದೂಗಳಿಗೆ ಅಪಾರ ಸಂತೋಷವನ್ನು ತಂದಿದೆ” ಎಂದು ಅಮೆರಿಕದ ಹಿಂದೂ ವಿಶ್ವವಿದ್ಯಾಲಯದ ಅಧ್ಯಕ್ಷ ಕಲ್ಯಾಣ್ ವಿಶ್ವನಾಥನ್ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಟೆಕ್ಸಾಸ್‌ನ ಶ್ರೀ ಸೀತಾ ರಾಮ ಪ್ರತಿಷ್ಠಾನವನ್ನು ಪ್ರತಿನಿಧಿಸುವ ಕಪಿಲ್ ಶರ್ಮಾ, ಐದು ಶತಮಾನದ ನಂತರ ಅಯೋಧ್ಯೆಯಲ್ಲಿ ಭಗವಾನ್ ರಾಮನ ಮಂದಿರ ನಿರ್ಮಾಣವಾಗಿರುವುದು ಜಾಗತಿಕವಾಗಿ ಹಿಂದೂಗಳಿಗೆ ಮಹತ್ವದ್ದು ಎನ್ನುತ್ತಾರೆ. ಸುದೀರ್ಘ ಕಾಯುವಿಕೆಯಿಂದ ಹಿಂದೂ ನಂಬಿಕೆ ಮತ್ತು ಆಚರಣೆಯ ಮಹತ್ವದ ದಿನ ಅವತರಿಸಿದೆ ಎಂದಿದ್ದಾರೆ. ಶ್ರೀರಾಮ ಜನ್ಮಭೂಮಿ ಪ್ರಾಣ ಪ್ರತಿಷ್ಠಾ ಆಚರಣೆಯ ಕಾರ್ಯಕ್ರಮವನ್ನು ಹ್ಯೂಸ್ಟನ್‌ನಲ್ಲಿರುವ ಪ್ರತಿಷ್ಠಾನದ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.

ಇಲ್ಲಿನ ಉತ್ಸವಗಳು ಸುಂದರಕಾಂಡ ಪಾರಾಯಣದೊಂದಿಗೆ ಪ್ರಾರಂಭವಾಗುತ್ತದೆ. ನೃತ್ಯ, ಗಾಯನ ಮತ್ತು ಸಂಗೀತವನ್ನು ಒಳಗೊಂಡ ಸಾಂಸ್ಕೃತಿಕ ಪ್ರದರ್ಶನಗಳಿವೆ. ತರುವಾಯ ರಾಮನ ಹವನ ಮತ್ತು ವಿಧ್ಯುಕ್ತವಾದ ಪಟ್ಟಾಭಿಷೇಕ ನಡೆಯಲಿದೆ. ಭಗವಾನ್ ರಾಮನ ಮೆರವಣಿಗೆ ಮತ್ತು ಪ್ರಸಾದ ವಿತರಣೆಯೊಂದಿಗೆ ಉತ್ಸವ ಮುಕ್ತಾಯಗೊಳ್ಳುತ್ತದೆ. “ಅಯೋಧ್ಯಾ ಮಂದಿರ ತಾಣದಿಂದ ಈ ವಿಶೇಷ ಕಾರ್ಯಕ್ರಮಕ್ಕಾಗಿ ತರಿಸಲಾದ ಪ್ರಸಾದ ಮತ್ತು ರಾಜ್ (ಪವಿತ್ರ ಧೂಳು) ಅನ್ನು ವಿತರಿಸುತ್ತೇವೆ” ಎಂದು ಶರ್ಮಾ ಹೇಳಿದ್ದಾರೆ.

ಮೇರಿಲ್ಯಾಂಡ್ ಗವರ್ನರ್ ವೆಸ್ ಮೂರ್ ಅವರು ಶನಿವಾರ ವಾಷಿಂಗ್ಟನ್ ಡಿಸಿಯ ಉಪನಗರದಲ್ಲಿ ರಾಮಮಂದಿರ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕೆಲವು ಪಾಕಿಸ್ತಾನಿ ಅಮೆರಿಕನ್ನರು ಗ್ರೇಟರ್ ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿ ಒಟ್ಟಿಗೆ ಸೇರುತ್ತಿದ್ದಾರೆ.

“ಶ್ರೀರಾಮನ ಕೋಟ್ಯಂತರ ಅನುಯಾಯಿಗಳ ಬಹುನಿರೀಕ್ಷಿತ ಕನಸು ನನಸಾಗಲಿದೆ” ಎಂದು ಅಮೆರಿಕದ ವಿಶ್ವ ಹಿಂದೂ ಪರಿಷತ್ತಿನ ಅಮಿತಾಭ್‌ ಮಿತ್ತಲ್ ಹೇಳಿದ್ದಾರೆ. ಅಮೆರಿಕದಲ್ಲಿರುವ ಸುಮಾರು 1,000 ದೇವಾಲಯಗಳಲ್ಲಿ ರಾಷ್ಟ್ರವ್ಯಾಪಿ ಉತ್ಸವಗಳನ್ನು ವಿಹಿಂಪ ಸಂಘಟನೆ ಕೈಗೊಂಡಿದೆ. ಬಹುತೇಕ ಎಲ್ಲರೂ ಐತಿಹಾಸಿಕ ಸಂದರ್ಭವನ್ನು ಸ್ಮರಿಸಲು ಈ ವಾರಾಂತ್ಯದಲ್ಲಿ ಸೇರುತ್ತಿದ್ದಾರೆ.

ಇದನ್ನೂ ಓದಿ: Ayodhya Ram Mandir: ರಾಮ ಮಂದಿರದಲ್ಲಿ ಮಂಡಲ ಪೂಜೆಗೆ ರಾಯಚೂರಿನ ವೈದಿಕರ ತಂಡ ಆಯ್ಕೆ

ವಿಹಿಂಪದ ವಾಷಿಂಗ್ಟನ್ ಡಿಸಿ ಶಾಖೆಯು ರಾಷ್ಟ್ರೀಯ ರಾಜಧಾನಿಯ ಮೇರಿಲ್ಯಾಂಡ್ ಉಪನಗರದಲ್ಲಿರುವ ಪ್ರೌಢಶಾಲೆಯಲ್ಲಿ ಕಾರ್ ರ್ಯಾಲಿ, ಲವ್ ಧೋಲೆ ತಾಶೆ, ಶ್ರೀರಾಮ ಪೂಜೆಯೊಂದಿಗೆ ಬೆರಗುಗೊಳಿಸುವ ಸಾಂಸ್ಕೃತಿಕ ಪ್ರದರ್ಶನಗಳನ್ನು ಆಯೋಜಿಸಿದೆ. ಕ್ಯಾಲಿಫೋರ್ನಿಯಾದದಲ್ಲಿ 20ಕ್ಕೂ ಹೆಚ್ಚು ಕಾರ್ ರ್ಯಾಲಿಗಳನ್ನು ಆಯೋಜಿಸಲಾಗಿದೆ. ಅಲ್ಲಿ 600ಕ್ಕೂ ಹೆಚ್ಚು ಕಾರುಗಳು ಭಾಗವಹಿಸುವ ನಿರೀಕ್ಷೆಯಿದೆ.

“ಈ ಸಂದರ್ಭಕ್ಕಾಗಿ ಶ್ರೀರಾಮನ ಭಕ್ತರು ಸ್ಯಾನ್ ಫ್ರಾನ್ಸಿಸ್ಕೋ ಪ್ರದೇಶದಲ್ಲಿ ಕಾರ್ ರ್ಯಾಲಿಯನ್ನು ನಡೆಸುತ್ತಾರೆ. ರ್ಯಾಲಿಯು ಡಿಜಿಟಲ್ ಮೊಬೈಲ್ ಟ್ರಕ್‌ಗಳಲ್ಲಿ ಭಗವಾನ್ ರಾಮನ ಚಿತ್ರಗಳು ಮತ್ತು ಅವನ ಬಗ್ಗೆ ಸುಮಧುರ ಸ್ತೋತ್ರಗಳೊಂದಿಗೆ ಇರುತ್ತದೆ” ಎಂದು ದೀಪ್ತಿ ಮಹಾಜನ್ ಹೇಳಿದರು.

ಚಿಕಾಗೋ, ಹ್ಯೂಸ್ಟನ್ ಮತ್ತು ಲಾಸ್ ಏಂಜಲೀಸ್‌ನಂತಹ ನಗರಗಳ ಹೊರಾಂಗಣ ಸ್ಥಳಗಳಲ್ಲಿ ಪ್ರಮುಖ ಜಾಹೀರಾತು ಫಲಕಗಳನ್ನು ವಿಹಿಂಪ ಹಾಕಿದ್ದು, ರಾಮಮಂದಿರದ ಪ್ರತಿಷ್ಠಾಪನೆ ಸಮಾರಂಭವನ್ನು ಪ್ರದರ್ಶಿಸುತ್ತಿದೆ. ಇದರ ಜೊತೆಗೆ ಸೋನಿ ಟಿವಿಯು ಜನವರಿ 21ರಂದು ಟೈಮ್ಸ್ ಸ್ಕ್ವೇರ್‌ನಲ್ಲಿ ಶ್ರೀಮದ್ ರಾಮಾಯಣವನ್ನು ಪ್ರದರ್ಶಿಸುತ್ತಿದೆ.

ಇದನ್ನೂ ಓದಿ: Ram Mandir: ಬಾಲರಾಮ ಆಯ್ತು, ಈಗ ಭವ್ಯ ಮಂದಿರದ ವಿಡಿಯೊ ವೈರಲ್;‌ ನೀವೂ ನೋಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Hijab Row: ಹಿಬಾಬ್‌ ನಿಷೇಧದ ಬೆನ್ನಲ್ಲೇ ಜೀನ್ಸ್‌, ಟೀ-ಶರ್ಟ್‌ ಬ್ಯಾನ್‌- ಪ್ರಕಟಣೆ ಹೊರಡಿಸಿದ ಮುಂಬೈ ಕಾಲೇಜು

Hijab Row: ವಿದ್ಯಾರ್ಥಿಗಳು ಔಪಚಾರಿಕ ಮತ್ತು ಯೋಗ್ಯವಾದ ಉಡುಗೆಯನ್ನು ಧರಿಸಬೇಕು. ಅವರು ಶರ್ಟ್‌-ಪ್ಯಾಂಟ್‌ ಧರಿಸಬಹುದು. ಹುಡುಗಿಯರು ಭಾರತೀಯ ಹಾಗೂ ಮಾರ್ಡನ್‌ ಡ್ರೆಸ್‌ ಧರಿಸಬಹುದು. ಆದರೆ ಆದರೆ ಒಂದು ಧರ್ಮ, ಜಾತಿಯನ್ನು ಪ್ರತಿನಿಧಿಸುವಂತಹ ಬಟ್ಟೆಯನ್ನು ಧರಿಸುವಂತಿಲ್ಲ. ಆದರೆ ಜೀನ್ಸ್‌, ಟಿ ಶರ್ಟ್‌, ಅಸಭ್ಯ ರೀತಿಯ ಉಡುಗೆಗಳನ್ನು ಧರಿಸಲು ಅವಕಾಶ ಇಲ್ಲ. ಹಿಜಾಬ್‌, ಬುರ್ಖಾ, ನಖಾಬ್, ಶಾಲು, ಟೋಪಿಗಳನ್ನು ತೆಗೆದೇ ಕ್ಯಾಂಪಸ್‌ ಒಳಗೆ ಬರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

VISTARANEWS.COM


on

Hijab Row
Koo

ಮುಂಬೈ: ಹಿಜಾಬ್‌ ನಿಷೇಧ(Hijab Row)ದ ಬೆನ್ನಲ್ಲೇ ಮುಂಬೈ ಕಾಲೇಜು(Mumbai College) ಇದೀಗ ವಿದ್ಯಾರ್ಥಿಗಳು ಟೋರ್ನ್‌ ಜೀನ್ಸ್‌ ಮತ್ತು ಟೀ-ಶರ್ಟ್‌ ಧರಿಸುವುದನ್ನು ಬ್ಯಾನ್‌ ಮಾಡಿದ್ದು, ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿದೆ. ಚೆಂಬೂರ್‌ ಟ್ರಾಮ್ಬೇ ಎಜುಕೇಶನ್‌ ಸೊಸೈಟಿಯ ಎನ್‌ಜಿ ಆಚಾರ್ಯ ಮತ್ತು ಡಿಕೆ ಮರಾಠೆ ಕಾಲೇಜಿನ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದ್ದು, ಕಾಲೇಜು ಕ್ಯಾಂಪಸ್‌ನಲ್ಲಿ ವಸ್ತ್ರಸಂಹಿತೆಯನ್ನು ತಪ್ಪದೇ ಪಾಲಿಸುವಂತೆ ಆದೇಶಿಸಿದೆ.

ವಿದ್ಯಾರ್ಥಿಗಳು ಔಪಚಾರಿಕ ಮತ್ತು ಯೋಗ್ಯವಾದ ಉಡುಗೆಯನ್ನು ಧರಿಸಬೇಕು. ಅವರು ಶರ್ಟ್‌-ಪ್ಯಾಂಟ್‌ ಧರಿಸಬಹುದು. ಹುಡುಗಿಯರು ಭಾರತೀಯ ಹಾಗೂ ಮಾರ್ಡನ್‌ ಡ್ರೆಸ್‌ ಧರಿಸಬಹುದು. ಆದರೆ ಆದರೆ ಒಂದು ಧರ್ಮ, ಜಾತಿಯನ್ನು ಪ್ರತಿನಿಧಿಸುವಂತಹ ಬಟ್ಟೆಯನ್ನು ಧರಿಸುವಂತಿಲ್ಲ. ಆದರೆ ಜೀನ್ಸ್‌, ಟಿ ಶರ್ಟ್‌, ಅಸಭ್ಯ ರೀತಿಯ ಉಡುಗೆಗಳನ್ನು ಧರಿಸಲು ಅವಕಾಶ ಇಲ್ಲ. ಹಿಜಾಬ್‌, ಬುರ್ಖಾ, ನಖಾಬ್, ಶಾಲು, ಟೋಪಿಗಳನ್ನು ತೆಗೆದೇ ಕ್ಯಾಂಪಸ್‌ ಒಳಗೆ ಬರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕರ್ನಾಟಕದಂತೆ ಮಹಾರಾಷ್ಟ್ರದಲ್ಲೂ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್‌, ಬುರ್ಖಾ ಧರಿಸುವ ಕುರಿತು ವಿವಾದ (Hijab Row) ಭುಗಿಲೆದ್ದಿದೆ. ಇದರ ಬೆನ್ನಲ್ಲೇ, ಚೆಂಬುರ್‌ ಟ್ರೋಂಬೆ ಎಜುಕೇಷನ್‌ ಸೊಸೈಟಿಯ ಎನ್‌.ಜಿ.ಆಚಾರ್ಯ ಹಾಗೂ ಕೆ.ಕೆ. ಮರಾಠೆ ಕಾಲೇಜು ಹಿಜಾಬ್‌, ಬುರ್ಖಾ ನಿಷೇಧಿಸಿದ (Hijab Ban) ಮುಂಬೈ ಮೂಲದ ಕಾಲೇಜಿನ ಆದೇಶವನ್ನು ಬಾಂಬೆ ಹೈಕೋರ್ಟ್‌ (Bombay High Court) ಎತ್ತಿಹಿಡಿದಿತ್ತು. ಕಾಲೇಜಿನಲ್ಲಿ ಹಿಜಾಬ್‌, ಬುರ್ಖಾ ನಿಷೇಧಿಸಿದ ಕಾಲೇಜಿನ ಆಡಳಿತ ಮಂಡಳಿ ತೀರ್ಮಾನದ ವಿಷಯದಲ್ಲಿ ಮಧ್ಯಪ್ರವೇಶ ಇಲ್ಲ ಎಂಬುದಾಗಿ ಬಾಂಬೆ ಹೈಕೋರ್ಟ್‌ ಖಡಾಖಂಡಿತವಾಗಿ ಹೇಳಿತ್ತು.

ಮುಂಬೈನಲ್ಲಿರುವ ಚೆಂಬುರ್‌ ಟ್ರೋಂಬೆ ಎಜುಕೇಷನ್‌ ಸೊಸೈಟಿಯ ಎನ್‌.ಜಿ.ಆಚಾರ್ಯ ಹಾಗೂ ಕೆ.ಕೆ. ಮರಾಠೆ ಕಾಲೇಜಿನಲ್ಲಿ ಇತ್ತೀಚೆಗೆ ವಸ್ತ್ರಸಂಹಿತೆ ಜಾರಿಗೆ ತರಲಾಗಿದ್ದು, ಕಾಲೇಜು ಆವರಣದಲ್ಲಿ ಹಿಜಾಬ್‌, ನಕಾಬ್‌, ಬುರ್ಖಾ, ಶಾಲು, ಟೋಪಿ, ಬ್ಯಾಡ್ಜ್‌ಗಳನ್ನು ಧರಿಸಿಕೊಂಡು ಬರುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಆದರೆ, ಕಾಲೇಜಿನಲ್ಲಿ ಪದವಿಯ ದ್ವಿತೀಯ ಹಾಗೂ ಅಂತಿಮ ವರ್ಷದ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ 9 ವಿದ್ಯಾರ್ಥಿನಿಯರು ಕಾಲೇಜಿನ ಆದೇಶ ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದರು.

ವಿದ್ಯಾರ್ಥಿಗಳ ಪರ ಹಿರಿಯ ವಕೀಲ ಅಲ್ತಾಫ್‌ ಖಾನ್‌ ವಾದ ಮಂಡಿಸಿದರು. “ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸುವುದು ಅವರ ಆಯ್ಕೆ ಹಾಗೂ ವೈಯಕ್ತಿಕ ವಿಚಾರವಾಗಿದೆ. ಹೀಗೆ, ಹಿಜಾಬ್‌ ಧರಿಸುವುದನ್ನು ನಿಷೇಧಿಸುವ ಮೂಲಕ ಕಾಲೇಜಿನ ಆಡಳಿತ ಮಂಡಳಿಯು ಕಾನೂನುಬಾಹಿರ, ನಿರಂಕುಶ ಹಾಗೂ ಹಟಮಾರಿತನದ ನಿರ್ಧಾರ ತೆಗೆದುಕೊಂಡಿದೆ. ಇಸ್ಲಾಂನಲ್ಲಿ ಹಿಜಾಬ್‌ ಧರಿಸುವುದು ಅತ್ಯವಶ್ಯಕವಾಗಿದೆ. ಈ ಕುರಿತು ಕುರಾನ್‌ನಲ್ಲಿ ಕೂಡ ಉಲ್ಲೇಖಿಸಲಾಗಿದೆ” ಎಂದು ಕುರಾನ್‌ನ ಹಲವು ಅಧ್ಯಾಯಗಳನ್ನು ಕೋರ್ಟ್‌ಗೆ ನೀಡಿದರು.

ಕಾಲೇಜು ಆಡಳಿತ ಮಂಡಳಿ ಪರ ಅನಿಲ್‌ ಅತುರ್ಕರ್‌ ವಾದ ಮಂಡಿಸಿದರು. “ಕಾಲೇಜಿನಲ್ಲಿ ಯಾವುದೇ ಧರ್ಮ, ಜಾತಿ ಹಾಗೂ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ವಸ್ತ್ರಸಂಹಿತೆ ತಂದಿಲ್ಲ. ಎಲ್ಲ ತೀರ್ಮಾನಗಳನ್ನು ಸಮಾನ ವಸ್ತ್ರಸಂಹಿತೆ ಜಾರಿಯಲ್ಲಿರಲಿ ಎಂದು ತೆಗೆದುಕೊಳ್ಳಲಾಗಿದೆ. ಇಸ್ಲಾಂ ವಿರೋಧಿಯಾಗಿ, ಯಾವುದೇ ಧರ್ಮದ ವಿರೋಧಿಯಾಗಿ ಈ ತೀರ್ಮಾನ ತೆಗೆದುಕೊಂಡಿಲ್ಲ” ಎಂದು ಹೇಳಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳಾದ ಎ.ಎಸ್.ಚಂದುರ್ಕರ್‌ ಹಾಗೂ ರಾಜೇಶ್‌ ಪಾಟೀಲ್‌ ಅವರಿದ್ದ ಪೀಠವು, ಕಾಲೇಜು ಆಡಳಿತ ಮಂಡಳಿಯ ತೀರ್ಮಾನದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ತಿಳಿಸಿತು.

ಇದನ್ನೂ ಓದಿ:Stampedes in India: ದೇಶದಲ್ಲಿ ಈ ಹಿಂದೆಯೂ ನಡೆದಿವೆ ಭಾರೀ ಕಾಲ್ತುಳಿತ ದುರಂತ; ಇಲ್ಲಿದೆ ಲಿಸ್ಟ್‌

Continue Reading

ದೇಶ

Anant-Radhika Wedding: ಅನಂತ್‌ ಅಂಬಾನಿ ಮದುವೆಗೆ ಪೂರ್ವಭಾವಿಯಾಗಿ ಸಾಮೂಹಿಕ ವಿವಾಹ; ಪ್ರತಿ ವಧುವಿಗೆ ಚಿನ್ನಾಭರಣ, 1 ಲಕ್ಷ ರೂ.

Anant-Radhika Wedding: ಜುಲೈ 12ರಂದು ಮುಂಬೈಯಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ನಡೆಯಲಿದೆ. ಅದಕ್ಕೆ ಮುನ್ನುಡಿಯಾಗಿ ಜುಲೈ 2ರಂದು ಮುಕೇಶ್‌ ಅಂಬಾನಿ ಮತ್ತು ನೀತಾ ಅಂಬಾನಿ ಸುಮಾರು 50 ಬಡ ಜೋಡಿಗಳ ಸಾಮೂಹಿಕ ವಿವಾಹ ನೆರವೇರಿಸಿ ಮಾದರಿಯಾಗಿದ್ದಾರೆ. ಮುಂಬೈಯಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಫಾಲ್ಘರ್‌ನಲ್ಲಿ ಈ ಸಾಮೂಹಿಕ ವಿವಾಹ ನೆರವೇರಿತು. ರಿಲಯನ್ಸ್‌ ಕಾರ್ಪೋರೇಟ್‌ ಪಾರ್ಕ್‌ನಲ್ಲಿ ನಡೆದ ಈ ವಿವಾಹ ಸಮಾರಂಭದಲ್ಲಿ ಆರ್ಥಿಕವಾಗಿ ಹಿಂದುಳಿದ 50 ಜೋಡಿ ಹಸಮಣೆಗೇರಿತು.

VISTARANEWS.COM


on

Anant-Radhika Wedding
Koo

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಅಧ್ಯಕ್ಷ ಮುಕೇಶ್ ಅಂಬಾನಿ (Mukesh Ambani) ಮತ್ತು ನೀತಾ ಅಂಬಾನಿ (Nita Ambani) ದಂಪತಿ ಪುತ್ರ ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ ಮರ್ಚೆಂಟ್ (Radhika Merchant) ಅವರ ವಿವಾಹಕ್ಕೆ ದಿನ ಗಣನೆ ಆರಂಭವಾಗಿದೆ. ಜುಲೈ 12ರಂದು ಮುಂಬೈಯಲ್ಲಿ ಈ ಅದ್ಧೂರಿ ಸಮಾರಂಭ ಆಯೋಜಿಸಲಾಗಿದೆ. ಅದಕ್ಕೆ ಮುನ್ನುಡಿಯಾಗಿ ಜುಲೈ 2ರಂದು ಮುಕೇಶ್‌ ಅಂಬಾನಿ ಮತ್ತು ನೀತಾ ಅಂಬಾನಿ ಸುಮಾರು 50 ಬಡ ಜೋಡಿಗಳ ಸಾಮೂಹಿಕ ವಿವಾಹ ನೆರವೇರಿಸಿ ಮಾದರಿಯಾಗಿದ್ದಾರೆ.

ಮುಂಬೈಯಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಫಾಲ್ಘರ್‌ನಲ್ಲಿ ಈ ಸಾಮೂಹಿಕ ವಿವಾಹ ನೆರವೇರಿತು. ರಿಲಯನ್ಸ್‌ ಕಾರ್ಪೋರೇಟ್‌ ಪಾರ್ಕ್‌ನಲ್ಲಿ ನಡೆದ ಈ ವಿವಾಹ ಸಮಾರಂಭದಲ್ಲಿ ಆರ್ಥಿಕವಾಗಿ ಹಿಂದುಳಿದ 50 ಜೋಡಿ ಹಸಮಣೆಗೇರಿತು.

ಈ ಸಾಮೂಹಿಕ ವಿವಾಹದಲ್ಲಿ ವಧು-ವರರ ಕುಟುಂಬದ ಸುಮಾರು 800 ಮಂದಿ ಪಾಲ್ಗೊಂಡಿದ್ದರು. ಸ್ವತಃ ಮುಕೇಶ್‌ ಅಂಬಾನಿ, ನೀತಾ ಅಂಬಾನಿ, ಆಕಾಶ್‌ ಅಂಬಾನಿ, ಶ್ಲೋಕ ಮೆಹ್ತಾ, ಇಶಾ ಅಂಬಾನಿ, ಆನಂದ್‌ ಪಿರಮಾಲ್‌ ಆಗಮಿಸಿ ನೂತನ ವಧು-ವರರನ್ನು ಹಾರೈಸಿದರು.

ಉಡುಗೊರೆ

ಪ್ರತಿ ಜೋಡಿಗೆ ಚಿನ್ನದ ಉಂಗುರ, ಮಂಗಳ ಸೂತ್ರ, ಮೂಗುತ್ತಿ ಉಡುಗೊರೆಯಾಗಿ ನೀಡಲಾಯಿತು. ಜತೆಗೆ ಬೆಳ್ಳಿಯ ಆಭರಗಳನ್ನೂ ನೀಡಲಾಗಿದೆ. ಜತೆಗೆ ಸ್ತ್ರೀಧನವಾಗಿ ಪ್ರತಿ ವಧುವಿಗೆ 1.01 ಲಕ್ಷ ರೂ. ಚೆಕ್‌ ಅನ್ನು ಅಂಬಾನಿ ಕುಟುಂಬಸ್ಥರು ವಿತರಿಸಿದ್ದಾರೆ. ಮಾತ್ರವಲ್ಲ ಪ್ರತಿ ಜೋಡಿಗೆ ಒಂದು ವರ್ಷಕ್ಕೆ ಅಗತ್ಯವಾದ ದಿನಸಿ ಸಾಮಗ್ರಿಗಳನ್ನೂ ವಿತರಿಸಲಾಗಿದೆ. ಇದು ಪಾತ್ರೆ ಪರಿಕರಗಳು, ಗ್ಯಾಸ್‌ ಸ್ಟವ್‌, ಮಿಕ್ಸಿ, ಫ್ಯಾನ್‌, ಹಾಸಿಗೆ ಮತ್ತು ತಲೆ ದಿಂಬುಗಳನ್ನು ಒಳಗೊಂಡಿದೆ. ಅದ್ಧೂರಿ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಈ ವೇಳೆ ವರ್ಲಿ ಬುಡಕಟ್ಟು ಜನಾಂಗದವರು ಪ್ರದರ್ಶಿಸಿದ ಸಾಂಪ್ರದಾಯಿಕ ತಾರ್ಪ ನೃತ್ಯವನ್ನು ಅತಿಥಿಗಳು ಮತ್ತು ಅಂಬಾನಿ ಕುಟುಂಬದ ಸದಸ್ಯರು ವೀಕ್ಷಿಸಿದರು.

ʼʼಜನ ಸೇವೆಯೇ ಜನಾರ್ದನ ಸೇವೆ ಎಂದು ಪರಿಗಣಿಸುವ ಅಂಬಾನಿ ಕುಟುಂಬ ಪ್ರತಿ ಶುಭ ಸಂದರ್ಭದಲ್ಲಿ ಸಮಾಜಕ್ಕೆ ನೆರವಾಗುವ ಉದ್ದೇಶದಿಂದ ಇಂತ ಜನ ಕಲ್ಯಾಣ ಕಾರ್ಯಕ್ರಮಗಳು ಆಯೋಜಿಸುತ್ತದೆʼʼ ಎಂದು ಆಪ್ತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Mohan Bhagwat: ಮುಕೇಶ್‌ ಅಂಬಾನಿ ನಿವಾಸಕ್ಕೆ ಆಗಮಿಸಿದ ಮೋಹನ್‌ ಭಾಗವತ್‌; ಕೈ ಮುಗಿದು ಸ್ವಾಗತಿಸಿದ ನೀತಾ ಅಂಬಾನಿ

ಜುಲೈ 12ರಂದು ಮದುವೆ

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12ರಂದು ಮುಂಬೈಯ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹವಾಗಲಿದ್ದಾರೆ. ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಇದರ ವಿವರವನ್ನು ಬಹಿರಂಗಪಡಿಸುವ ಆಹ್ವಾನ ಪತ್ರಿಕೆ ರಿಲೀಸ್‌ ಆಗಿ, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಜುಲೈ 14ರವರೆಗೆ ಶುಭ ವಿವಾಹ, ಶುಭ ಆಶೀರ್ವಾದ ಮತ್ತು ಮಂಗಳ ಉತ್ಸವ ಎನ್ನುವ ಮೂರು ದಿನಗಳ ಕಾರ್ಯಕ್ರಮ ನಡೆಯಲಿದೆ. ಕೆಲವು ದಿನಗಳ ಹಿಂದೆ ಮೂರು ದಿನಗಳ ಅದ್ದೂರಿ ಮದುವೆ ಪೂರ್ವ ಸಮಾರಂಭ ನಡೆದಿತ್ತು. ದೇಶ-ವಿದೇಶಗಳ ವಿವಿಧ ಕ್ಷೇತ್ರಗಳ ಗಣ್ಯರು ಇದರಲ್ಲಿ ಪಾಲ್ಗೊಂಡಿದ್ದರು.

Continue Reading

ಕ್ರೀಡೆ

Medal Biting: ಒಲಂಪಿಕ್ಸ್‌ನಲ್ಲಿ ಕ್ರೀಡಾಪಟುಗಳು ಪದಕ ಕಚ್ಚುವುದು ಏಕೆ?

Medal Biting: ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತ ಕ್ರೀಡಾಪಟುಗಳು ಪದಕಗಳನ್ನು ಕಚ್ಚಿ (Medal Biteing) ಫೋಟೋಗೆ ಪೋಸ್ ಕೊಡುತ್ತಾರೆ. ಇದು ಯಾಕಾಗಿ? ಪದಕದ ಶುದ್ಧತೆಯನ್ನು ಪರಿಶೀಲಿಸಲೇ ಅಥವಾ ಇದೊಂದು ಸಂಪ್ರದಾಯವೇ? ಇದು ಯಾವಾಗದಿಂದ ಆಚರಣೆಯಲ್ಲಿದೆ ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

Medal Biteing
Koo

ಬೆಂಗಳೂರು: ಒಲಂಪಿಕ್ಸ್‌ನಲ್ಲಿ (Olympic) ಪದಕ ವಿಜೇತ ( winners ) ಕ್ರೀಡಾಪಟುಗಳು ಪದಕವನ್ನು ಕಚ್ಚಿ (Medal Biting) ಫೋಟೋಗೆ ಪೋಸ್ ಕೊಡುವುದನ್ನು ನೋಡಿರುತ್ತೇವೆ. ಇವರು ಯಾಕೆ ಹೀಗೆ ಮಾಡುತ್ತಾರೆ ಎನ್ನುವ ಪ್ರಶ್ನೆಯಂತೂ ಒಂದಲ್ಲಾ ಒಂದು ಬಾರಿ ನಮ್ಮ ಮನದಲ್ಲಿ ಮೂಡಿರುತ್ತದೆ. ಒಲಿಂಪಿಕ್ ಪದಕ ವಿಜೇತರು ಪದಕ ಕಚ್ಚಲು ಕಾರಣವಿದೆ ಮಾತ್ರವಲ್ಲ ಇದಕ್ಕೆ ದೊಡ್ಡ ಇತಿಹಾಸವೇ ಇದೆ.

ಒಲಿಂಪಿಕ್ಸ್ ಪದಕ ವಿಜೇತ ಗಣ್ಯ ಕ್ರೀಡಾಪಟುಗಳು ವೇದಿಕೆಯ ಮೇಲೆ ನಿಂತು ತಮ್ಮ ಪದಕಗಳನ್ನು ಕಚ್ಚುವುದು ಒಲಿಂಪಿಕ್ಸ್‌ನಲ್ಲಿ ಚಿರಪರಿಚಿತ ದೃಶ್ಯವಾಗಿದೆ. ಮೈಕೆಲ್ ಫೆಲ್ಪ್ಸ್, ಉಸೇನ್ ಬೋಲ್ಟ್ ಮತ್ತು ಸಿಮೋನ್ ಬೈಲ್ಸ್ ಅವರ ಇಂತಹ ಚಿತ್ರಗಳು ಇಂದಿಗೂ ಬಹುತೇಕ ಮಂದಿಯ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಒಲಿಂಪಿಯನ್‌ಗಳು ಹೀಗೆ ಪದಕಗಳನ್ನು ಏಕೆ ಕಚ್ಚುತ್ತಾರೆ, ಇದರ ಹಿಂದಿರುವ ಕಾರಣ ಏನು ಗೊತ್ತೇ?

ಶುದ್ಧತೆ ಪರಿಶೀಲನೆ?

ಒಲಿಂಪಿಕ್ಸ್ ನ ಆರಂಭಿಕ ದಿನಗಳು. ಬೆಲೆಬಾಳುವ ಚಿನ್ನವನ್ನು ಕರೆನ್ಸಿಯ ರೂಪದಲ್ಲಿ ಬಳಸಲು ಪ್ರಾರಂಭಿಸಲಾಯಿತು. ಚಿನ್ನದ ಪರಿಶುದ್ಧತೆಯನ್ನು ಪರಿಶೀಲಿಸಲು ವ್ಯಾಪಾರಿಗಳು ಚಿನ್ನದ ನಾಣ್ಯಗಳನ್ನು ಕಚ್ಚಿ ನೋಡುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ. ಚಿನ್ನವು ಮೃದುವಾದ ಲೋಹವಾಗಿದೆ. ಇದರ ಮೇಲೆ ಸ್ವಲ್ಪ ಒತ್ತಡ ಬಿದ್ದರೂ ಗುರುತು ಬೀಳುತ್ತದೆ. ಹೀಗಾಗಿ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತ ಕ್ರೀಡಾಪಟುಗಳು ತಮಗೆ ಸಿಗುವ ಚಿನ್ನದ ಪದಕವನ್ನು ಪರಿಶೀಲಿಸಲು ಹೀಗೆ ಮಾಡುತ್ತಿದ್ದರು. ಕ್ರಮೇಣ ಇದೊಂದು ಅಭ್ಯಾಸದ ಭಾಗವಾಯಿತು.


ಒಲಿಂಪಿಕ್ ಚಾಂಪಿಯನ್‌ಗಳು ತಮ್ಮ ಬಾಯಿಯಲ್ಲಿ ಚಿನ್ನದ ಪದಕವನ್ನು ಕಚ್ಚುವುದು ಈಗ ಶುದ್ಧತೆಯನ್ನು ಪರಿಶೀಲಿಸುವುದಕ್ಕಾಗಿ ಅಲ್ಲ. ಯಾಕೆಂದರೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) 1912 ರಲ್ಲಿ ಶುದ್ಧ ಚಿನ್ನದ ಪದಕಗಳನ್ನು ನೀಡುವುದನ್ನು ನಿಲ್ಲಿಸಿತ್ತು. ಆದರೆ ಅದರ ಅಭ್ಯಾಸ ಕ್ರಮ ಇನ್ನೂ ಮುಂದುವರಿದಿದೆ.


ಕ್ರೀಡಾಪಟುಗಳು ಪದಕಗಳನ್ನು ಏಕೆ ಕಚ್ಚುತ್ತಾರೆ?

ಒಲಿಂಪಿಕ್ ಕ್ರೀಡಾಪಟುಗಳಿಗೆ ಪದಕಗಳನ್ನು ಕಚ್ಚಿ ಫೋಟೋಗೆ ಪೋಸ್ ಕೊಡಲು ಕ್ರೀಡಾ ಛಾಯಾಚಿತ್ರ ಗ್ರಾಹಕರು ಕೇಳುತ್ತಾರೆ. ಇದೀಗ ಗೀಳಾಗಿ ಪರಿಣಮಿಸಿದೆ ಎನ್ನುತ್ತಾರೆ ಇಂಟರ್ನ್ಯಾಷನಲ್ ಸೊಸೈಟಿ ಆಫ್ ಒಲಿಂಪಿಕ್ ಇತಿಹಾಸಕಾರರ ಅಧ್ಯಕ್ಷ ಡೇವಿಡ್ ವಾಲೆಚಿನ್ಸ್ ಕಿ.

ಪದಕವನ್ನು ಕಚ್ಚುವ ಭಂಗಿಯು ಪತ್ರಿಕೆಗಳ ಮೊದಲ ಪುಟಕ್ಕೆ ಕೊಡಬಹುದಾದ ಚಿತ್ರ ಎಂದು ಅವರು ಪರಿಗಣಿಸುತ್ತಾರೆ ಹೀಗಾಗಿ ಕ್ರೀಡಾಪಟುಗಳಿಗೆ ಹಾಗೆ ಮಾಡಲು ಪತ್ರಕರ್ತರೇ ವಿನಂತಿಸುತ್ತಾರೆ. ಅವರು ಅದನ್ನು ಒಂದು ಸಾಂಪ್ರದಾಯ ಎನ್ನುವಂತೆ ನೋಡುತ್ತಾರೆ. ಅಥ್ಲೀಟ್‌ಗಳು ಇದನ್ನು ಸ್ವಂತವಾಗಿ ಮಾಡುತ್ತಾರೆ ಎಂದು ನಾನು ಭಾವಿಸುವುದಿಲ್ಲ ಎಂದು ವಾಲೆಚಿನ್ಸ್ ಕಿ ವಿವರಿಸಿದರು.


ಇದನ್ನೂ ಓದಿ: Suryakumar Yadav Catch: ಸೂರ್ಯಕುಮಾರ್​ ಕ್ಯಾಚ್ ಎಡವಟ್ಟು; ವಿಶ್ವಕಪ್​ ವಾಪಸ್​ ನೀಡಬೇಕಾ ಭಾರತ?

ಹಲ್ಲು ಮುರಿದುಕೊಂಡ ಡೇವಿಡ್ ಮೊಲ್ಲರ್

2010ರ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಜರ್ಮನ್ ಲೂಗರ್ ಡೇವಿಡ್ ಮೊಲ್ಲರ್ ಅವರಿಗೆ ಈ ಭಂಗಿಯಲ್ಲಿ ಫೋಟೋಗೆ ಪೋಸ್ ಕೊಡಲು ಪತ್ರಕರ್ತರು ಕೇಳಿಕೊಂಡರು, ಆದರೆ ಇದರಿಂದ ಬಳಿಕ ಅವರು ಒಂದು ಹಲ್ಲು ಮುರಿದುಕೊಂಡಿರುವುದಾಗಿ ಹೇಳಿಕೊಂಡಿದ್ದರು.

Continue Reading

ವಾಣಿಜ್ಯ

Stock Market: ಮೊದಲ ಬಾರಿಗೆ 80,000 ಗಡಿ ದಾಟಿದ ಸೆನ್ಸೆಕ್ಸ್: 24,250 ಪಾಯಿಂಟ್‌ ತಲುಪಿದ ನಿಫ್ಟಿ

Stock Market: ಭಾರತೀಯ ಷೇರು ಮಾರುಕಟ್ಟೆ ಬುಧವಾರ (ಜುಲೈ 3) ಹೊಸ ಇತಿಹಾಸ ಬರೆದಿದೆ. ವಹಿವಾಟು ಆರಂಭವಾದ ಕೂಡಲೇ ಸೆನ್ಸೆಕ್ಸ್ 570ಕ್ಕೂ ಅಧಿಕ ಅಂಕಗಳ ಜಿಗಿತವನ್ನು ಕಂಡು ಇದೇ ಮೊದಲ ಬಾರಿಗೆ 80 ಸಾವಿರ ಅಂಕಗಳ ಗಡಿ ದಾಟಿದೆ. ಜತೆಗೆ ನಿಫ್ಟಿ ಕೂಡ 24,291.75 ಅಂಕಗಳ ಹೊಸ ಶಿಖರ ಏರಿದೆ. ಇಂದು ಸೆನ್ಸೆಕ್ಸ್ ಮೊದಲ ಬಾರಿಗೆ ಜೀವಮಾನದ ಗರಿಷ್ಠ ಪಾಯಿಂಟ್‌ 80,039 ಪಾಯಿಂಟ್‌ಗೆ ತಲುಪಿದರೆ, ನಿಫ್ಟಿ 169 ಪಾಯಿಂಟ್‌ಗಳ ಏರಿಕೆ ಕಂಡು 24,292ಕ್ಕೆ ತಲುಪಿದೆ.

VISTARANEWS.COM


on

Stock Market
Koo

ಮುಂಬೈ: ಭಾರತೀಯ ಷೇರು ಮಾರುಕಟ್ಟೆ (Stock Market) ಬುಧವಾರ (ಜುಲೈ 3) ಹೊಸ ಇತಿಹಾಸ ಬರೆದಿದೆ. ಇಂದು ವಹಿವಾಟು ಆರಂಭವಾದ ಕೂಡಲೇ ಸೆನ್ಸೆಕ್ಸ್ (Sensex) 570ಕ್ಕೂ ಅಧಿಕ ಅಂಕಗಳ ಜಿಗಿತವನ್ನು ಕಂಡು ಇದೇ ಮೊದಲ ಬಾರಿಗೆ 80 ಸಾವಿರ ಅಂಕಗಳ ಗಡಿ ದಾಟಿದೆ. ಜತೆಗೆ ನಿಫ್ಟಿ (Nifty) ಕೂಡ 24,291.75 ಅಂಕಗಳ ಹೊಸ ಶಿಖರ ಏರಿದೆ.

ಇಂದು ಸೆನ್ಸೆಕ್ಸ್ ಮೊದಲ ಬಾರಿಗೆ ಜೀವಮಾನದ ಗರಿಷ್ಠ ಪಾಯಿಂಟ್‌ 80,039 ಪಾಯಿಂಟ್‌ಗೆ ತಲುಪಿದರೆ, ನಿಫ್ಟಿ 169 ಪಾಯಿಂಟ್‌ಗಳ ಏರಿಕೆ ಕಂಡು 24,292ಕ್ಕೆ ತಲುಪಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಸೆನ್ಸೆಕ್ಸ್‌ನಲ್ಲಿ ಗರಿಷ್ಠ ಲಾಭ ಗಳಿಸಿದ್ದು, 1,791.90 ರೂ.ಗೆ ತಲುಪಿದೆ. ಸೆನ್ಸೆಕ್ಸ್‌ನಲ್ಲಿ ಕೋಟಕ್ ಬ್ಯಾಂಕ್, ಬಜಾಜ್ ಫೈನಾನ್ಸ್, ಬಜಾಜ್ ಫಿನ್‌ಸರ್ವ್‌ ಮತ್ತು ಎಂ & ಎಂ ಲಾಭ ಗಳಿಸಿದರೆ, ಟೆಕ್ ಮಹೀಂದ್ರಾ, ಟಿಸಿಎಸ್, ಸನ್ ಫಾರ್ಮಾ, ಇನ್ಫೋಸಿಸ್ ಮತ್ತು ಭಾರ್ತಿ ಏರ್‌ಟೆಲ್‌ ನಷ್ಟ ಅನುಭವಿಸಿವೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ 52 ವಾರಗಳ ಗರಿಷ್ಠ ಬೆಲೆ

ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ ಸುಮಾರು 52 ವಾರಗಳ ಬಳಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಇಂದು 60ಕ್ಕೂ ಹೆಚ್ಚು ರೂ. ಅಥವಾ ಶೇ. 3ಕ್ಕೂ ಅಧಿಕ ಮಟ್ಟದಲ್ಲಿ ವಹಿವಾಟು ನಡೆಸುತ್ತಿವೆ. ʼʼಇಂದು ಮಾರುಕಟ್ಟೆ ಚಟುವಟಿಕೆಯ ಕೇಂದ್ರಬಿಂದು ಎಚ್‌ಡಿಎಫ್‌ಸಿ ಬ್ಯಾಂಕ್ ಆಗಿದ್ದು, ತನ್ನ ಮೇಲ್ಮುಖ ಚಲನೆಯನ್ನು ಮುಂದುವರಿಸಿದೆ. ಇದು ಇನ್ನೂ ಕೆಲವು ದಿನಗಳವರೆಗೆ ಮುಂದುವರಿಯುವ ಸಾಮರ್ಥ್ಯ ಹೊಂದಿದೆʼʼ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಯುಎಸ್ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಅವರು ಹಣದುಬ್ಬರವನ್ನು ನಿಯಂತ್ರಿಸುವಲ್ಲಿ ಪ್ರಗತಿ ಸಾಧಿಸುದ್ದೇವೆ ಎಂದು ಹೇಳಿಕ ನೀಡಿದ ನಂತರ ಏಷ್ಯಾ-ಪೆಸಿಫಿಕ್ ಮಾರುಕಟ್ಟೆಗಳು ಬುಧವಾರ ಬೆಳಿಗ್ಗೆ ಧನಾತ್ಮಕ ಪ್ರದರ್ಶನ ತೋರಿದವು.

ಇದನ್ನೂ ಓದಿ: ITR Filing: ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು ಈ ಸಂಗತಿ ತಿಳಿದಿರಲೇಬೇಕು!

ಮಂಗಳವಾರ ವಹಿವಾಟು ಆರಂಭವಾದ ಕೆಲ ಹೊತ್ತಿನಲ್ಲಿ ಸೆನ್ಸೆಕ್ಸ್‌ ದಾಖಲೆಯ 79,653.21 ಅಂಕ ತಲುಪಿತ್ತು. ನಿಫ್ಟಿ (Nifty) ಕೂಡ ಹೊಸ ದಾಖಲೆ ಬರೆದಿದ್ದು 24,186.5 ಪಾಯಿಂಟ್‌ ಗಡಿ ಮುಟ್ಟಿತ್ತು. ಮಂಗಳವಾರ ಬೆಳಿಗ್ಗೆ ಎನ್ಎಸ್ಇ ನಿಫ್ಟಿ ಶೇ. 0.21ರಷ್ಟು ಏರಿಕೆ ಕಂಡು 24,186.5 ಪಾಯಿಂಟ್‌ಗೆ ತಲುಪಿದ್ದರೆ, ಬಿಎಸ್ಇ ಸೆನ್ಸೆಕ್ಸ್ ಶೇಕಡಾ 0.22ರಷ್ಟು ಹೆಚ್ಚಳ ದಾಖಲಿಸಿ 79,653.21 ಪಾಯಿಂಟ್‌ ಗಳಿಸಿತ್ತು. ಐಟಿ ಕಂಪನಿಗಳ ಲಾಭ ಮತ್ತು ಯುಎಸ್ ಫೆಡರಲ್ ಸೆಪ್ಟೆಂಬರ್‌ನಲ್ಲಿ ರಿಸರ್ವ್ ಬಡ್ಡಿದರ ಕಡಿತದ ಭರವಸೆ ನೀಡಿದ ಹಿನ್ನೆಲೆಯಲ್ಲಿ ಭಾರತೀಯ ಷೇರುಗಳು ಈ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ.

ಹಿಂದಿನ ಸೆಷನ್‌ನಲ್ಲಿ ಶೇ. 2ರಷ್ಟು ಏರಿಕೆ ಕಂಡಿದ್ದ ಐಟಿ ಷೇರುಗಳು ಮತ್ತೆ ಶೇ. 0.7ರಷ್ಟು ಹೆಚ್ಚಳ ದಾಖಲಿಸಿದ್ದವು. ಎಲ್ಲ 13 ಪ್ರಮುಖ ವಲಯಗಳು ಲಾಭವನ್ನು ಕಂಡವು. ಅದರಲ್ಲಿಯೂ ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳು ಕ್ರಮವಾಗಿ ಶೇ. 0.4 ಮತ್ತು ಶೇ. 0.2 ಹೆಚ್ಚಳ ಕಂಡವು.

Continue Reading
Advertisement
viral news signboard
ವೈರಲ್ ನ್ಯೂಸ್6 mins ago

Viral News: ʼತುರ್ತಾಗಿ ಒಂದು ಅಪಘಾತ ಮಾಡಿʼ ಅನ್ನುತ್ತಿದೆ ಈ ಸೈನ್‌ಬೋರ್ಡ್‌!

Hijab Row
ದೇಶ8 mins ago

Hijab Row: ಹಿಬಾಬ್‌ ನಿಷೇಧದ ಬೆನ್ನಲ್ಲೇ ಜೀನ್ಸ್‌, ಟೀ-ಶರ್ಟ್‌ ಬ್ಯಾನ್‌- ಪ್ರಕಟಣೆ ಹೊರಡಿಸಿದ ಮುಂಬೈ ಕಾಲೇಜು

Stray Dogs Attack
ಕರ್ನಾಟಕ20 mins ago

Stray Dogs Attack: ಸುರಪುರದಲ್ಲಿ ಬೀದಿ ನಾಯಿಗಳ ದಾಳಿಗೆ 15 ಕುರಿಗಳು ಬಲಿ

Gold Rate Today
ಚಿನ್ನದ ದರ26 mins ago

Gold Rate Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಇಷ್ಟಿದೆ ಇಂದಿನ ಬೆಲೆ

lovers death self harming
ಕ್ರೈಂ41 mins ago

Lovers Death: ನಾಪತ್ತೆಯಾಗಿದ್ದ ಪ್ರೇಮಿಗಳ ಶವ ನೈಸ್ ರಸ್ತೆ ಬಳಿ ಕೆರೆಯಲ್ಲಿ ಪತ್ತೆ

Anant-Radhika Wedding
ದೇಶ51 mins ago

Anant-Radhika Wedding: ಅನಂತ್‌ ಅಂಬಾನಿ ಮದುವೆಗೆ ಪೂರ್ವಭಾವಿಯಾಗಿ ಸಾಮೂಹಿಕ ವಿವಾಹ; ಪ್ರತಿ ವಧುವಿಗೆ ಚಿನ್ನಾಭರಣ, 1 ಲಕ್ಷ ರೂ.

Prajwal Devaraj cancel birthday darshan main reason
ಸಿನಿಮಾ53 mins ago

Prajwal Devaraj: ಪ್ರಜ್ವಲ್ ದೇವರಾಜ್ ಬರ್ತ್‌ಡೇ ಸೆಲೆಬ್ರೇಷನ್‌ ಕ್ಯಾನ್ಸಲ್‌; ದರ್ಶನ್‌ ಕಾರಣ?

IND vs ZIM
ಕ್ರೀಡೆ1 hour ago

IND vs ZIM: ಜಿಂಬಾಬ್ವೆ ತಲುಪಿದ ಯಂಗ್‌ ಟೀಮ್‌ ಇಂಡಿಯಾ; ಶನಿವಾರದಿಂದ ಸರಣಿ ಆರಂಭ

Medal Biteing
ಕ್ರೀಡೆ1 hour ago

Medal Biting: ಒಲಂಪಿಕ್ಸ್‌ನಲ್ಲಿ ಕ್ರೀಡಾಪಟುಗಳು ಪದಕ ಕಚ್ಚುವುದು ಏಕೆ?

Tharun Sudhir sonal monteiro marriage update
ಸ್ಯಾಂಡಲ್ ವುಡ್1 hour ago

Tharun Sudhir: ಸೋನಾಲ್-ತರುಣ್ ಮದುವೆ ಯಾವಾಗ? ಭಾವಿ ಸೊಸೆ ಬಗ್ಗೆ ಡೈರೆಕ್ಟರ್ ಅಮ್ಮ ಏನಂದ್ರು?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ18 hours ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ2 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ3 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು3 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ4 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ4 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ5 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ6 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌