Money plus : ಆನ್‌ಲೈನ್‌ನಲ್ಲಿ ಎನ್‌ಪಿಎಸ್ ಅಕೌಂಟ್‌ ತೆರೆಯುವುದು ಹೇಗೆ? - Vistara News

ವಾಣಿಜ್ಯ

Money plus : ಆನ್‌ಲೈನ್‌ನಲ್ಲಿ ಎನ್‌ಪಿಎಸ್ ಅಕೌಂಟ್‌ ತೆರೆಯುವುದು ಹೇಗೆ?

ನೀವು ಆನ್‌ಲೈನ್‌ ಮೂಲಕ ಕೂಡ ಎನ್‌ಪಿಎಸ್‌ ಅಕೌಂಟ್‌ ಅನ್ನು ( Money plus) ತೆರೆಯಬಹುದು. ಇಲ್ಲಿದೆ ವಿವರ.

VISTARANEWS.COM


on

Committee to look into NPS for government employees set up by Finance Ministry
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಷ್ಟ್ರೀಯ ಪಿಂಚಣಿ ಯೋಜನೆ (National Pension Scheme -NPS) ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದ್ದು, ನಿವೃತ್ತಿಯ ಬಳಿಕ ಆರ್ಥಿಕ ಭದ್ರತೆಗೆ ಸಹಾಯಕವಾಗುತ್ತದೆ. ಆರಂಭದಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಮಾತ್ರ ಸೀಮಿತವಾಗಿದ್ದ ಎನ್‌ಪಿಎಸ್‌ ಈಗ ಎಲ್ಲ ಭಾರತೀಯ ನಾಗರಿಕರಿಗೂ ಸ್ವಯಂ ಪ್ರೇರಿತವಾಗಿ ಸಿಗುತ್ತಿದೆ. ಈ ಯೋಜನೆಯಲ್ಲಿ ಎನ್‌ಪಿಎಸ್‌ ಅಕೌಂಟ್‌ ಅನ್ನು ತೆರೆಯಬೇಕಾಗುತ್ತದೆ. ಬಳಿಕ ನಿಯಮಿತವಾಗು ಹೂಡಿಕೆ ಮಾಡಬಹುದು. ನಿವೃತ್ತಿಯ ಕಾಲಕ್ಕೆ (60 ವರ್ಷ) ಒಟ್ಟು ಬಂಡವಾಳದ 60% ಮೊತ್ತವನ್ನು ಒಟ್ಟಿಗೆ ವಿತ್‌ ಡ್ರಾವಲ್‌ ಮಾಡಬಹುದು. ಉಳಿದ 40% ಮೊತ್ತವನ್ನು ಆನ್ಯುಯಿಟಿ ಪ್ಲಾನ್‌ (ಪಿಂಚಣಿ ಉತ್ಪನ್ನ) ಪಡೆಯಲು ಬಳಸುತ್ತಾರೆ. ಆನ್ಯುಯಿಟಿ ಪ್ಲಾನ್‌ ಇಲ್ಲದೆ ಒಟ್ಟು ಮೊತ್ತ 5 ಲಕ್ಷ ರೂ.ಗಿಂತ ಕಡಿಮೆ ಇದ್ದರೂ ಎಲ್ಲ ಮೊತ್ತವನ್ನು ವಿತ್‌ ಡ್ರಾವಲ್‌ ಮಾಡಬಹುದು. ಇದರ ಮೇಲೆ ತೆರಿಗೆ ಇರುವುದಿಲ್ಲ.‌ ಎನ್‌ಪಿಎಸ್‌ ಅಕೌಂಟ್‌ ಅನ್ನು ಆನ್‌ಲೈನ್‌ ಮೂಲಕವೂ ತೆರೆಯಬಹುದು. ಅದು ಹೇಗೆ ಎಂಬುದನ್ನು ನೋಡೋಣ.

  1. 1. ಇ-ಎನ್‌ಪಿಎಸ್‌ ವೆಬ್‌ಸೈಟ್‌ ಗೆ ಲಾಗಿನ್‌ ಆಗಿ  (https://enps. nsdl.com/eNPS/NationalPension-System.html)
  2. 2. ರಿಜಿಸ್ಟ್ರೇಶನ್‌ ಮೇಲೆ ಕ್ಲಿಕ್‌ ಮಾಡಿ, ನ್ಯೂ ರಿಜಿಸ್ಟ್ರೇಶನ್‌ ಸಿಲೆಕ್ಟ್‌ ಮಾಡಿ.
  3. 3. ಆಧಾರ್‌ ಅಥವಾ ಪ್ಯಾನ್‌ ನಂಬರ್‌, ಮೊಬೈಲ್‌ ನಂಬರ್‌ ಮತ್ತು ಇ-ಮೇಲ್‌ ಐಡಿ ಸಲ್ಲಿಸಿ.
  4. 4. ಮೂರು ಸೆಂಟ್ರಲ್‌ ರೆಕಾರ್ಡ್‌ ಕೀಪಿಂಗ್‌ ಏಜೆನ್ಸಿಗ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು.
  5. 5. ಒಟಿಪಿ ವ್ಯಾಲಿಡೇಶನ್‌ ಬಳಿಕ ವೈಯಕ್ತಿಕ ವಿವರಗಳನ್ನು ಭರ್ತಿಗೊಳಿಸಿ.

ಎನ್‌ಪಿಎಸ್‌ ಖಾತೆ ತೆರೆಯಲು ಅವಶ್ಯವಿರುವ ದಾಖಲೆಗಳೇನು?

ಇತ್ತೀಚಿನ ಭಾವಚಿತ್ರ, ಸಿಗ್ನೇಚರ್‌ ಮತ್ತು ಕ್ಯಾನ್ಸಲ್ಡ್‌ ಚೆಕ್‌ ಅಥವಾ ಬ್ಯಾಂಕ್‌ ಸ್ಟೇಟ್‌ಮೆಂಟ್‌ ಅಗತ್ಯ.

ಅಕೌಂಟ್‌ ಆಯ್ಕೆ ಮಾಡಿಕೊಳ್ಳುವುದು ಹೇಗೆ? : ಅರ್ಜಿದಾರರು ಟೈರ್‌ I ಅಥವಾ ಟೈರ್‌ II ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಅಥವಾ ಎರಡನ್ನೂ ಆಯ್ಕೆ ಮಾಡಬಹುದು. ಟೈರ್‌ I ಕಡ್ಡಾಯವಾಗಿದ್ದು, ಟ್ಯಾಕ್ಸ್‌ ಬೆನಿಫಿಟ್‌ ಅನ್ನು ಹೊಂದಿರುತ್ತದೆ. ಹಾಗೂ ವಿತ್‌ ಡ್ರಾವಲ್ಸ್‌ನಲ್ಲಿ ಕೆಲವು ನಿಬಂಧನೆಗಳನ್ನು ಒಳಗೊಂಡಿರುತ್ತದೆ. ಟೈರ್‌ II ಸ್ವಯಂಪ್ರೇರಿತ ಅಕೌಂಟ್‌ ಆಗಿದ್ದು ಹೆಚ್ಚು ಫ್ಲೆಕ್ಸಿಬಿಲಿಟಿಯನ್ನು ಹೊಂದಿದೆ. ಆದರೆ ಇದಕ್ಕೆ ತೆರಿಗೆ ಬೆನಿಫಿಟ್‌ ಇರುವುದಿಲ್ಲ.

ಇದನ್ನೂ ಓದಿ: Money Guide : ಎಸ್‌ಬಿಐನಲ್ಲಿ 5 ಕೋಟಿ ರೂ. ತನಕ ಬಿಸಿನೆಸ್‌ ಸಾಲ ಪಡೆಯಿರಿ

ಅಕೌಂಟ್‌ ಅನ್ನು ಸಕ್ರಿಯಗೊಳಿಸುವುದು ಹೇಗೆ? ಅರ್ಜಿದಾರರು ಆರಂಭದಲ್ಲಿ ಟೈರ್‌ I ಖಾತೆಗೆ 500 ರೂ. ಠೇವಣಿ ಇಡಬೇಕು. ಟೈರ್‌ II ಖಾತೆಗೆ 1000 ರೂ. ಕೊಡಬೇಕು. ಅರ್ಜಿದಾರರು 12 ಅಂಕಿಗಳ ಪ್ರಾನ್‌ ನಂಬರ್‌ ( Permanent Retirement Account Number) ಪಡೆಯುತ್ತಾರೆ. ಒಟಿಪಿ ಮೂಲಕ ದೃಢೀಕರಣಗೊಳಿಸಬೇಕು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Reliance Jio: ಜಿಯೋ ಏರ್‌ಫೈಬರ್, ಜಿಯೋಫೈಬರ್, ಜಿಯೋ ಮೊಬಿಲಿಟಿ ಗ್ರಾಹಕರಿಗೆ ಫ್ಯಾನ್ ಕೋಡ್ ಒಟಿಟಿ ಸಬ್‌ಸ್ಕ್ರಿಪ್ಷನ್!

Reliance Jio: ಜಿಯೋದಿಂದ ದೇಶದಾದ್ಯಂತ ಇರುವ ಕ್ರೀಡಾ ಉತ್ಸಾಹಿಗಳಿಗೆ ಹೊಸ ಹಾಗೂ ರೋಮಾಂಚಕ ಡಿಜಿಟಲ್ ಅನುಭವವನ್ನು ಪರಿಚಯಿಸಲಾಗಿದ್ದು, ಜಿಯೋ ಏರ್‌ಫೈಬರ್, ಜಿಯೋಫೈಬರ್ ಹಾಗೂ ಜಿಯೋ ಮೊಬಿಲಿಟಿ ಪ್ರೀಪ್ರೇಯ್ಡ್ ಗ್ರಾಹಕರು ಇದೀಗ ‘ಫ್ಯಾನ್ ಕೋಡ್’ಎಂಬ ಪ್ರೀಮಿಯಂ ಕ್ರೀಡಾ ಒಟಿಟಿ ಅಪ್ಲಿಕೇಷನ್‌ಗೆ ಕಾಂಪ್ಲಿಮೆಂಟರಿ ಸಬ್‌ಸ್ಕ್ರಿಪ್ಷನ್ ಪಡೆಯಬಹುದಾಗಿದೆ. ಇದರಲ್ಲಿ ಫ್ಯಾನ್ ಕೋಡ್‌ನ ಎಕ್ಸ್‌ಕ್ಲೂಸಿವ್‌ ಫಾರ್ಮುಲಾ ಒನ್ ಪ್ರಸಾರದ ಕಂಟೆಂಟ್ ಸಂಪರ್ಕ ಸಹ ಪಡೆಯಬಹುದಾಗಿದ್ದು, ಜಿಯೋ ಏರ್‌ಫೈಬರ್, ಜಿಯೋಫೈಬರ್ ಮತ್ತು ಜಿಯೋ ಮೊಬಿಲಿಟಿಯ ಆಯ್ದ ಅರ್ಹ ಗ್ರಾಹಕರಿಗೆ ಮಾತ್ರ ಈ ಕಾಂಪ್ಲಿಮೆಂಟರಿ ಪ್ಲಾನ್ ಅನ್ವಯಿಸುತ್ತವೆ.

VISTARANEWS.COM


on

Fan Code OTT Subscription Now for Jio AirFiber JioFiber Jio Mobility Customers
Koo

ಮುಂಬೈ: ದೇಶದಾದ್ಯಂತ ಇರುವ ಕ್ರೀಡಾ ಉತ್ಸಾಹಿಗಳಿಗೆ ಜಿಯೋದಿಂದ ಹೊಸ ಹಾಗೂ ರೋಮಾಂಚಕ ಡಿಜಿಟಲ್ ಅನುಭವವನ್ನು ಪರಿಚಯಿಸಲಾಗಿದ್ದು, ಜಿಯೋ ಏರ್‌ಫೈಬರ್, ಜಿಯೋಫೈಬರ್ ಹಾಗೂ ಜಿಯೋ ಮೊಬಿಲಿಟಿ (Reliance Jio) ಪ್ರೀಪ್ರೇಯ್ಡ್ ಗ್ರಾಹಕರು ಇದೀಗ ‘ಫ್ಯಾನ್ ಕೋಡ್’ ಎಂಬ ಪ್ರೀಮಿಯಂ ಕ್ರೀಡಾ ಒಟಿಟಿ ಅಪ್ಲಿಕೇಷನ್‌ಗೆ ಕಾಂಪ್ಲಿಮೆಂಟರಿ ಸಬ್‌ಸ್ಕ್ರಿಪ್ಷನ್ ಪಡೆಯಬಹುದಾಗಿದೆ.

ಈ ಆಫರ್ ಮೂಲಕ ಜಿಯೋ ಗ್ರಾಹಕರು ರೋಮಾಂಚಕವಾದ ಮತ್ತು ಕ್ರೀಡೆಯಲ್ಲಿಯೇ ಅತ್ಯುತ್ತಮವಾದ ನೇರಪ್ರಸಾರದ ಅನುಭವವನ್ನು ಪಡೆಯಬಹುದು. ಇದರಲ್ಲಿ ಫ್ಯಾನ್ ಕೋಡ್‌ನ ಎಕ್ಸ್‌ಕ್ಲೂಸಿವ್‌ ಫಾರ್ಮುಲಾ ಒನ್ ಪ್ರಸಾರದ ಕಂಟೆಂಟ್ ಸಂಪರ್ಕ ಸಹ ಪಡೆಯಬಹುದಾಗಿದ್ದು, ಜಿಯೋ ಏರ್‌ಫೈಬರ್, ಜಿಯೋಫೈಬರ್ ಮತ್ತು ಜಿಯೋ ಮೊಬಿಲಿಟಿಯ ಆಯ್ದ ಅರ್ಹ ಗ್ರಾಹಕರಿಗೆ ಮಾತ್ರ ಈ ಕಾಂಪ್ಲಿಮೆಂಟರಿ ಪ್ಲಾನ್ ಅನ್ವಯಿಸುತ್ತವೆ.

ಜಿಯೋ ಏರ್‌ಫೈಬರ್ ಮತ್ತು ಜಿಯೋಫೈಬರ್ ಗ್ರಾಹಕರು 1199 ರೂಪಾಯಿ ಮತ್ತು ಮೇಲ್ಪಟ್ಟ ಪ್ಲಾನ್‌ಗೆ ಸಬ್‌ಸ್ಕ್ರಿಪ್ಷನ್ ಪಡೆದಾಗ ಕಾಂಪ್ಲಿಮೆಂಟರಿ ಆಗಿ ಫ್ಯಾನ್ ಕೋಡ್ ಪಡೆಯುವುದಕ್ಕೆ ಅರ್ಹರು. ಅದೇ ರೀತಿ ಜಿಯೋ ಮೊಬಿಲಿಟಿ ಪ್ರಿಪೇಯ್ಡ್ ಗ್ರಾಹಕರು ತಮ್ಮ ಈಗಿರುವ ರೂ. 398, ರೂ. 1198, ರೂ. 4498 ಪ್ಲಾನ್‌ಗಳ ಮೂಲಕ ಅಥವಾ ಹೊಚ್ಚ ಹೊಸದಾದ 3333 ರೂಪಾಯಿಯ ವಾರ್ಷಿಕ ಪ್ಲಾನ್ ಬಳಸುತ್ತಿದ್ದಲ್ಲಿ ಈ ಕಾಂಪ್ಲಿಮೆಂಟರಿ ಫ್ಯಾನ್ ಕೋಡ್ ಪಡೆಯಬಹುದು. ಯಾವುದೇ ಹೆಚ್ಚುವರಿಯಾದ ಶುಲ್ಕ ಇಲ್ಲದೆ ಈ ಕಾಂಪ್ಲಿಮೆಂಟರಿ ಯೋಜನೆ ಸೇರ್ಪಡೆ ಆಗುತ್ತದೆ. ಹೊಸ ಹಾಗೂ ಈಗಾಗಲೇ ಗ್ರಾಹಕರಾದವರಿಗೆ ಈ ಪ್ಲಾನ್ ದೊರೆಯುತ್ತದೆ.

ಇದನ್ನೂ ಓದಿ: Tatkal Tickets: ಕೊನೆ ಘಳಿಗೆಯಲ್ಲಿ ರೈಲು ಪ್ರಯಾಣಕ್ಕೆ ತತ್ಕಾಲ್‌ ಟಿಕೆಟ್‌ ಪಡೆಯುವುದು ಹೇಗೆ?

ಫ್ಯಾನ್ ಕೋಡ್ ಎಂಬುದು ಪ್ರಮುಖ ಕ್ರೀಡಾ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್. ಇದು ಇಂಟರ್ ಆಕ್ಟಿವ್ ನೇರ ಪ್ರಸಾರವನ್ನು ತರುತ್ತದೆ. ಪ್ರೀಮಿಯರ್ ಕ್ರಿಕೆಟ್ ಪಂದ್ಯಾವಳಿಗಳು, ಮಹಿಳಾ ಕ್ರಿಕೆಟ್, ಫುಟ್‌ಬಾಲ್ ನೇರಪ್ರಸಾರ, ಬ್ಯಾಸ್ಕೆಟ್ ಬಾಲ್, ಬೇಸ್ ಬಾಲ್, ಕುಸ್ತಿ, ಬ್ಯಾಡ್ಮಿಂಟನ್ ಮತ್ತು ಇತರ ಪ್ರಮುಖ ಕ್ರೀಡಾ ಕಾರ್ಯಕ್ರಮಗಳು ಪ್ರಸಾರ ಆಗುತ್ತವೆ. ಫಾರ್ಮುಲಾ 1 ಉತ್ಸಾಹಿಗಳ ಮಧ್ಯೆ ಇದು ಬಹಳ ಖ್ಯಾತಿಯನ್ನು ಪಡೆದಿದೆ. 2024 ಮತ್ತು 2025ನೇ ಇಸವಿಗೆ ಫಾರ್ಮುಲಾ 1 ಭಾರತದ ಪ್ರಸಾರ ಹಕ್ಕುಗಳನ್ನು ತನ್ನದಾಗಿಸಿಕೊಂಡಿದೆ. ಬಳಕೆದಾರರು ನೈಜ ಸಮಯದ ಪಂದ್ಯದ ಮುಖ್ಯಾಂಶಗಳು, ಸಂಪೂರ್ಣ ಮ್ಯಾಚ್ ವಿಡಿಯೋಗಳು, ಭಾರತೀಯ ಕ್ರಿಕೆಟ್ ಪ್ರಮುಖಾಂಶಗಳು, ದತ್ತಾಂಶ, ಅಂಕಿ-ಅಂಶಗಳು, ಗಹನವಾದ ವಿಶ್ಲೇಷಣೆ, ಫ್ಯಾಂಟಸಿ ಸ್ಪೋರ್ಟ್ಸ್ ಒಳನೋಟಗಳು, ಮತ್ತು ವಿಶ್ವ ಮಟ್ಟದ ಕ್ರೀಡೆಗೆ ಸಂಬಂಧಿಸಿದ ಬ್ರೇಕಿಂಗ್ ಸುದ್ದಿ ಇವೆಲ್ಲವೂ ದೊರೆಯುತ್ತವೆ.

ಕಾಂಪ್ಲಿಮೆಂಟರಿ ಸಂಪರ್ಕದಿಂದ ಏನೇನು ದೊರೆಯಲಿದೆ?

ಪ್ರೀಮಿಯಂ ಫ್ಯಾನ್ ಕೋಡ್ ಕಂಟೆಂಟ್

ಫ್ಯಾನ್ ಕೋಡ್‌ನ ಎಕ್ಸ್‌ಕ್ಲೂಸಿವ್ ಆದ ಕ್ರೀಡಾ ಕಂಟೆಂಟ್‌ಗಳನ್ನು ಯಾವುದೇ ಅಡೆತಡೆಗಳಿಲ್ಲದೆ ಜಿಯೋಟಿವಿ+ ಅಥವಾ ಜಿಯೋಟಿವಿ ಅಪ್ಲಿಕೇಷನ್ ಮೂಲಕ ವೀಕ್ಷಣೆ ಮಾಡಬಹುದು.

ಇದನ್ನೂ ಓದಿ: Delhi Airport: ಹಾರುತ್ತಿದ್ದ ವಿಮಾನದಲ್ಲಿ ಅಗ್ನಿ ಅವಘಡ; ದೆಹಲಿ ಏರ್‌ಪೋರ್ಟ್‌ನಲ್ಲಿ ಎಮರ್ಜನ್ಸಿ ಘೋಷಣೆ!

ಎಫ್1 ಸಂಪರ್ಕ

2024 ಮತ್ತು 2025ನೇ ಋತುವಿಗೆ ಫಾರ್ಮುಲಾ 1 ಭಾರತದ ಪ್ರಸಾರ ಹಕ್ಕುಗಳನ್ನು ಫ್ಯಾನ್ ಕೋಡ್ ತನ್ನದಾಗಿಸಿಕೊಂಡಿದೆ. ಭಾರತೀಯ ಅಭಿಮಾನಿಗಳು ರೇಸ್‌ಗಳನ್ನು ಫ್ಯಾನ್ ಕೋಡ್ ಮೂಲಕ ಸ್ಮಾರ್ಟ್ ಟೀವಿಗಳು, ಮೊಬೈಲ್ ಫೋನ್ ಮತ್ತು ಟ್ಯಾಬ್ಲೆಟ್ ಗಳಲ್ಲಿ ವೀಕ್ಷಿಸಬಹುದು. ಇನ್ನು ಕವರೇಜ್‌ನಲ್ಲಿ ಅಭ್ಯಾಸ, ಅರ್ಹತಾ ಸೆಷನ್‌ಗಳು, ಸ್ಪ್ರಿಂಟ್ ರೇಸ್‌ಗಳು ಹಾಗೂ ಗ್ರಾಂಡ್ ಪ್ರಿಕ್ಸ್ ಒಳಗೊಂಡಿರುತ್ತದೆ.

ವಿಸ್ತೃತವಾದ ಕವರೇಜ್

ಪ್ರಮುಖ ಕ್ರೀಡಾ ಪಂದ್ಯಾವಳಿಗಳ ನೇರಪ್ರಸಾರ, ಆಳವಾದ ವಿಶ್ಲೇಷಣೆ ಮತ್ತು ರಿಯಲ್ ಟೈಮ್ ವಿಶ್ಲೇಷಣೆ ಇರುತ್ತದೆ.

ಸಮಗ್ರವಾದ ಸ್ಪೋರ್ಟ್ಸ್ ಲೈಬ್ರರಿ

ಪಂದ್ಯಾವಳಿಯ ಪ್ರಮುಖಾಂಶಗಳು, ಸಂಪೂರ್ಣವಾದ ಅಂಕಿ- ಅಂಶ, ಮತ್ತು ಕ್ರೀಡಾ ಒಳನೋಟಕ್ಕೆ ಸಂಪರ್ಕ ದೊರೆಯುತ್ತದೆ.

ತಾಜಾ ಸುದ್ದಿ ಬಗ್ಗೆ ಅಪ್‌ಡೇಟ್

ಭಾರತೀಯ ಕ್ರಿಕೆಟ್ ಮತ್ತು ಜಾಗತಿಕ ಕ್ರೀಡೆಗಳ ತಾಜಾ ಸುದ್ದಿ ಬಗ್ಗೆ ಅಪ್‌ಡೇಟ್ ದೊರೆಯುತ್ತದೆ.

ಹೊಸ ವಾರ್ಷಿಕ ಪ್ರಿಪೇಯ್ಡ್ ಪ್ಲಾನ್

ಜಿಯೋದಿಂದ ಹೊಸದಾಗಿ 3333 ರೂ. ಪ್ಲಾನ್ ಇದ್ದು, ಇದರಲ್ಲಿ 2.5 ಜಿಬಿ/ದಿನಕ್ಕೆ ನೀಡುತ್ತಿದೆ, ಈ ಪ್ಲ್ಯಾನ್ ಜತೆಗೆ ಕಾಂಪ್ಲಿಮೆಂಟರಿ ಆಗಿ ಫ್ಯಾನ್‌ಕೋಡ್ ಚಂದಾದಾರಿಕೆ ದೊರೆಯುತ್ತದೆ.

ಇದನ್ನೂ ಓದಿ: SSLC 2024 Exam 2: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫೇಲ್‌ ಆದ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ಬೋಧನೆ ತರಗತಿ ಮುಂದೂಡಿಕೆ

ಜಿಯೋ ಏರ್‌ಫೈಬರ್, ಜಿಯೋಫೈಬರ್ ಮತ್ತು ಮತ್ತು ಪ್ರಿಪೇಯ್ಡ್ ಮೊಬಿಲಿಟಿ ಪ್ಲಾನ್ ಬಳಕೆದಾರರು ಅರ್ಹ ಯೋಜನೆಗಳನ್ನು ಹೊಂದಿದ್ದಲ್ಲಿ ಈಗ ಕ್ರೀಡಾ ಜಗತ್ತಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು, ಅದರಲ್ಲೂ ವಿಶೇಷವಾಗಿ ಎಫ್ 1ಗೆ ಸಂಬಂಧಿಸಿದಂತೆ ಈ ಹಿಂದೆಂದಿಗಿಂತಲೂ ಹೆಚ್ಚು ತೊಡಗಿಸಿಕೊಳ್ಳಬಹುದು. ಈ ಕೊಡುಗೆಯು ಜಿಯೋ ಬಳಕೆದಾರರಿಗೆ ಹೆಚ್ಚಿನ ಗುಣಮಟ್ಟದ ಕ್ರೀಡಾ ಕಂಟೆಂಟ್‌ಗೆ ಸಂಪರ್ಕ ಹೊಂದಿದ್ದು, ಮನರಂಜನೆ, ಸುದ್ದಿ, ಆಧ್ಯಾತ್ಮಿಕ ಇತ್ಯಾದಿ ಕಂಟೆಂಟ್‌ಗಳು ಸಹ ಇದ್ದು, ಇತರ ಪ್ರಕಾರಗಳಲ್ಲಿ ಕಂಟೆಂಟ್‌ನ ವಿಶಾಲವಾದ ಲೈಬ್ರರಿಯನ್ನು ಹೊಂದಿದೆ ಎಂದು ಖಚಿತಪಡಿಸುತ್ತದೆ. ಇದರಿಂದಾಗಿ ಬಳಕೆದಾರರ ವೀಕ್ಷಣೆಯ ಅನುಭವವನ್ನು ಹೆಚ್ಚಿಸುತ್ತದೆ ಮತ್ತು ಅವರ ನೆಚ್ಚಿನ ಆನ್-ಡಿಮಾಂಡ್ ವಿಡಿಯೋಗಳೊಂದಿಗೆ ಯಾವಾಗಲೂ ಸಂಪರ್ಕದಲ್ಲಿ ಇರಿಸುತ್ತದೆ ಎಂದು ತಿಳಿಸಿದೆ.

Continue Reading

ಮನಿ ಗೈಡ್

Retirement Plan: ನಿವೃತ್ತಿ ನಂತರ ನೆಮ್ಮದಿ ಜೀವನ ನಡೆಸಬೇಕೆ? ಈ 5 ಯೋಜನೆಗಳನ್ನು ಮರೆಯಬೇಡಿ

ನಿವೃತ್ತಿಗಾಗಿ ಯೋಜಿಸುತ್ತಿದ್ದರೆ ಮತ್ತು ಪ್ರತಿ ತಿಂಗಳು ಪಿಂಚಣಿ ಪಡೆಯಲು ಬಯಸಿದರೆ ಉತ್ತಮ ಆದಾಯವನ್ನು ನೀಡುವ ಯೋಜನೆಗಳಲ್ಲಿ (Retirement Plan) ಹೂಡಿಕೆ ಮಾಡುವುದು ಒಳ್ಳೆಯದು. ಐದು ನಿವೃತ್ತಿ ಯೋಜನೆಗಳ ಕುರಿತು ಇಲ್ಲಿದೆ ಮಾಹಿತಿ.

VISTARANEWS.COM


on

By

Retirement Plan
Koo

ಉದ್ಯೋಗ (job) ಆರಂಭಿಸುವಾಗಲೇ ನಿವೃತ್ತಿ ಯೋಜನೆಯನ್ನು (Retirement Plan) ರೂಪಿಸಬೇಕು. ಇಲ್ಲವಾದರೆ ವಯಸ್ಸು ಜಾರಿದ್ದು ಗೊತ್ತೇ ಆಗುವುದಿಲ್ಲ. ನಿವೃತ್ತಿ ಸಮೀಪಿಸಿದಾಗ ಕೈಯಲ್ಲಿ ಬಿಡಿಗಾಸೂ ಇಲ್ಲದೆ ಕಷ್ಟ ಪಡಬೇಕಾಗಬಹುದು. ಇಲ್ಲವಾದರೆ ಅವರಿವರ ಮುಂದೆ ಕೈಚಾಚಿಕೊಂಡು ನಿಲ್ಲುವಂತಹ ಸಂದರ್ಭ ಬರಬಹುದು.

ನಿವೃತ್ತಿಗಾಗಿ ಯೋಜಿಸುತ್ತಿದ್ದರೆ ಮತ್ತು ಪ್ರತಿ ತಿಂಗಳು ಪಿಂಚಣಿ (pension ) ಪಡೆಯಲು ಬಯಸಿದರೆ ಉತ್ತಮ ಆದಾಯವನ್ನು (regular income) ನೀಡುವ ಯೋಜನೆಗಳಲ್ಲಿ ಹೂಡಿಕೆ (investment) ಮಾಡುವುದು ಒಳ್ಳೆಯದು. ನಿಯಮಿತ ಆದಾಯದ ಮೂಲವನ್ನು ನಮ್ಮನು ಸುರಕ್ಷಿತಗೊಳಿಸುತ್ತದೆ ಮತ್ತು ಆರಾಮದಾಯಕ ವೃದ್ಧಾಪ್ಯವನ್ನು ಖಚಿತಪಡಿಸಿಕೊಳ್ಳಲು ಗಮನಾರ್ಹವಾದ ಒಟ್ಟು ಮೊತ್ತವನ್ನು ಸಂಗ್ರಹಿಸುತ್ತದೆ. ಒಂದು ದೊಡ್ಡ ಮೊತ್ತವು ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಆದರೆ ಮಾಸಿಕ ಆದಾಯವು ದೈನಂದಿನ ಖರ್ಚುಗಳನ್ನು ಒಳಗೊಂಡಿರುತ್ತದೆ.

ವಿಶ್ವಾಸಾರ್ಹ ಮಾಸಿಕ ಪಿಂಚಣಿಯನ್ನು ನೀಡುವ ಐದು ಯೋಜನೆಗಳು ಇಲ್ಲಿವೆ. ಇದರಲ್ಲಿ ಹೂಡಿಕೆ ಮಾಡಿದರೆ ನಿವೃತ್ತಿ ಬಳಿಕ ಯಾರನ್ನೂ ಅವಲಂಬಿಸಬೇಕಿಲ್ಲ.

1. ಅಟಲ್ ಪಿಂಚಣಿ ಯೋಜನೆ

ತೆರಿಗೆದಾರರಲ್ಲದಿದ್ದರೆ ಅಟಲ್ ಪಿಂಚಣಿ ಯೋಜನೆ ಮೂಲಕ ನಿಮ್ಮ ವೃದ್ಧಾಪ್ಯದಲ್ಲಿ ನಿಯಮಿತ ಆದಾಯಕ್ಕೆ ವ್ಯವಸ್ಥೆ ಮಾಡಬಹುದು. ಈ ಯೋಜನೆಯು 18ರಿಂದ 40 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಲಭ್ಯವಿರುತ್ತದೆ. ಭಾಗವಹಿಸುವವರು 60 ವರ್ಷವನ್ನು ತಲುಪುವವರೆಗೆ ಸಣ್ಣ ಮಾಸಿಕ ಕೊಡುಗೆಗಳನ್ನು ನೀಡಬೇಕು. ಅನಂತರ ಅವರು ತಮ್ಮ ಕೊಡುಗೆಗಳ ಆಧಾರದ ಮೇಲೆ 1,000 ರಿಂದ ರೂ 5,000 ರವರೆಗಿನ ಮಾಸಿಕ ಪಿಂಚಣಿಯನ್ನು ಪಡೆಯುತ್ತಾರೆ.

2. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS)

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯು ಮಾಸಿಕ ಪಿಂಚಣಿ ಪಡೆಯಲು ಮತ್ತೊಂದು ಕಾರ್ಯಸಾಧ್ಯವಾದ ಆಯ್ಕೆಯಾಗಿದೆ. 18 ರಿಂದ 70 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ನೋಂದಾಯಿಸಿಕೊಳ್ಳಬಹುದು. NPS 60 ವರ್ಷ ವಯಸ್ಸಿನವರೆಗೆ ಹೂಡಿಕೆಯ ಅಗತ್ಯವಿರುವ ಮಾರುಕಟ್ಟೆ-ಸಂಯೋಜಿತ ಸರ್ಕಾರಿ ಯೋಜನೆಯಾಗಿದೆ. ತುರ್ತು ಸಂದರ್ಭದಲ್ಲಿ ನಿಮ್ಮ ಕೊಡುಗೆಗಳ ಶೇ. 60ರಷ್ಟನ್ನು ಹಿಂಪಡೆಯಬಹುದು, ಶೇ. 40 ಪಿಂಚಣಿಗೆ ನಿಗದಿಪಡಿಸಲಾಗಿದೆ. ಇದು ನಿಮ್ಮ ಪಿಂಚಣಿ ಮೊತ್ತವನ್ನು ನಿರ್ಧರಿಸುತ್ತದೆ. ವರ್ಷಾಶನವು ದೊಡ್ಡದಾಗಿದ್ದರೆ ಪಿಂಚಣಿ ಮೊತ್ತವೂ ಹೆಚ್ಚಾಗುತ್ತದೆ.


3. ವ್ಯವಸ್ಥಿತ ಹಿಂತೆಗೆದುಕೊಳ್ಳುವ ಯೋಜನೆ (SWP)

ವ್ಯವಸ್ಥಿತ ಹಿಂತೆಗೆದುಕೊಳ್ಳುವ ಯೋಜನೆಯು ಹೂಡಿಕೆದಾರರಿಗೆ ಮ್ಯೂಚುಯಲ್ ಫಂಡ್ ಯೋಜನೆಯಿಂದ ನಿಗದಿತ ಮಾಸಿಕ ಮೊತ್ತವನ್ನು ಪಡೆಯಲು ಅನುಮತಿಸುತ್ತದೆ. ಇದರಿಂದ ಲಾಭ ಪಡೆಯಲು ನಿಮ್ಮ ಕೆಲಸದ ವರ್ಷಗಳಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ (SIP) ಅಥವಾ ಇತರ ಯೋಜನೆಗಳ ಮೂಲಕ ನೀವು ಗಣನೀಯ ಪ್ರಮಾಣದ ಹಣವನ್ನು ಹೂಡಿಕೆ ಮಾಡಿರಬೇಕು. ನೀವು SWP ಗಾಗಿ ನಿಮ್ಮ ನಿವೃತ್ತಿ ನಿಧಿಯನ್ನು ಬಳಸಬಹುದು, ಅಲ್ಲಿ ನೀವು ಮ್ಯೂಚುಯಲ್ ಫಂಡ್ ಘಟಕಗಳನ್ನು ಮಾರಾಟ ಮಾಡುವ ಮೂಲಕ ಮಾಸಿಕ ಪಾವತಿಗಳನ್ನು ಸ್ವೀಕರಿಸುತ್ತೀರಿ. ನಿಧಿಯು ಖಾಲಿಯಾದ ಅನಂತರ SWP ನಿಲ್ಲುತ್ತದೆ. ನೀವು ವಾಪಸಾತಿ ಆವರ್ತನವನ್ನು ನಿರ್ದಿಷ್ಟಪಡಿಸಬೇಕು ಮತ್ತು SWP ಅನ್ನು ಸಕ್ರಿಯಗೊಳಿಸಲು ಅಗತ್ಯ ವಿವರಗಳನ್ನು ಒದಗಿಸಬೇಕು.

ಇದನ್ನೂ ಓದಿ: Money Guide: ಎನ್‌ಪಿಎಸ್‌ಗೆ 15 ವರ್ಷ; ಇಲ್ಲಿದೆ ಯೋಜನೆಯ ಸಂಪೂರ್ಣ ವಿವರ

4. ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (EPFO)

ಸಂಬಳ ಪಡೆಯುವ ಉದ್ಯೋಗಿಯಾಗಿದ್ದರೆ ಮತ್ತು ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆಗೆ (ಇಪಿಎಫ್‌ಒ) ಕೊಡುಗೆ ನೀಡುತ್ತಿದ್ದರೆ ನೀವು ಉದ್ಯೋಗಿ ಪಿಂಚಣಿ ಯೋಜನೆ (ಇಪಿಎಸ್) ಬಗ್ಗೆ ತಿಳಿದಿರಬಹುದು. ಈ ಯೋಜನೆಯು ಖಾಸಗಿ ವಲಯದ ಉದ್ಯೋಗಿಗಳಿಗೆ ನಿವೃತ್ತಿಯ ಅನಂತರ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ. EPFO ನಿಂದ ಪಿಂಚಣಿ ಪಡೆಯಲು ಅರ್ಹರಾಗಲು, ನೀವು ಕನಿಷ್ಠ 10 ವರ್ಷಗಳ ಕಾಲ EPS ಗೆ ಕೊಡುಗೆ ನೀಡಿರಬೇಕು. ಪಿಂಚಣಿ ಮೊತ್ತವು ನಿಮ್ಮ ಕೊಡುಗೆಗಳನ್ನು ಅವಲಂಬಿಸಿರುತ್ತದೆ ಮತ್ತು ನಿವೃತ್ತಿಯ ನಂತರ ಲಭ್ಯವಿರುತ್ತದೆ.

5. ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (POMIS)

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯು ಮಾಸಿಕ ಆದಾಯವನ್ನು ಗಳಿಸಲು ಸರ್ಕಾರ-ಖಾತ್ರಿಪಡಿಸಿದ ಠೇವಣಿ ಆಯ್ಕೆಯನ್ನು ನೀಡುತ್ತದೆ. ನೀವು ಏಕ ಅಥವಾ ಜಂಟಿ ಖಾತೆಗಳನ್ನು ತೆರೆಯಬಹುದು, ಏಕ ಖಾತೆಗಳಿಗೆ ಗರಿಷ್ಠ 9 ಲಕ್ಷ ರೂ. ಮತ್ತು ಜಂಟಿ ಖಾತೆಗಳಿಗೆ 15 ಲಕ್ಷ ರೂ. ಠೇವಣಿ ಅವಧಿಯು ಐದು ವರ್ಷಗಳು ಮತ್ತು ನಿಮ್ಮ ಅಸಲು ಮೊತ್ತದ ಸುರಕ್ಷತೆಯನ್ನು ಖಾತರಿಪಡಿಸುವ ಮೂಲಕ ನೀವು ಬಡ್ಡಿಯನ್ನು ಗಳಿಸುತ್ತೀರಿ. ಪ್ರಸ್ತುತ ಶೇ.7.4 ಬಡ್ಡಿದರದಲ್ಲಿ ಜಂಟಿ ಖಾತೆಯು ತಿಂಗಳಿಗೆ 9,250 ರೂ. ವರೆಗೆ ಗಳಿಸಬಹುದು. ಐದು ವರ್ಷಗಳ ಅನಂತರ ನೀವು ಹೊಸ ಖಾತೆಯನ್ನು ತೆರೆಯುವ ಮೂಲಕ ಯೋಜನೆಯನ್ನು ನವೀಕರಿಸಬಹುದು.

Continue Reading

ಬೆಂಗಳೂರು

Water Aerator : ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ್ರೆ 10 ನಿಮಿಷದಲ್ಲಿ ಮನೆ ತಲುಪುತ್ತದೆ ವಾಟರ್ ಏರಿಯೇಟರ್​

water aerator : ಏರಿಯೇಟರ್‌ ಹುಡುಕುವವರ ಸಂಖ್ಯೆ ಶೇಕಡಾ 1400 ರಷ್ಟು ಹೆಚ್ಚಾಗಿರುವುದು ಕಂಡುಬಂದಿದೆ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸ್ವಿಗ್ಗಿ ಇನ್‌ಸ್ಟಾ ಮಾರ್ಟ್‌, ಅರ್ಥ ಫೋಕಸ್‌ ಎನ್ನುವ ಕಂಪನಿಯ ಜೊತೆ ಕೈಜೋಡಿಸಿದೆ. ಈ ಮೂಲಕ ಕೇವಲ 10 ನಿಮಿಷಗಳಲ್ಲಿ ಬೇಡಿಕೆ ಸಲ್ಲಿಸುವ ಗ್ರಾಹಕರುಗಳಿಗೆ ಏರಿಯೇಟರ್‌ ಅನ್ನು ತಲುಪಿಸಲು ಆರಂಭಿಸಿದೆ.

VISTARANEWS.COM


on

water aerator
Koo

ಬೆಂಗಳೂರು : ಬೆಂಗಳೂರು ನಗರ ಹಾಗೂ ಕರ್ನಾಟಕದಾದ್ಯಂತ ನೀರಿನ ಕೊರತೆಯನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ನೀರಿನ ಸಂಪರ್ಕಕ್ಕೆ ವಾಟರ್​ ಏರಿಯೇಟರ್​​ (water aerator) ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಏರಿಯೇಟರ್​ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದಾಗಿ ಏರಿಯೇಟರ್‌ ಗೆ ಆನ್‌ಲೈನ್‌ ಫ್ಲಾಟ್‌ ಫಾರಂಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳನ್ನು ಹಾಗೂ ಫುಡ್​ ಡೆಲಿವರಿ ಆ್ಯಪ್​ ಸ್ವಿಗ್ಗಿ ಏರಿಯೇಟರ್​ ಸರಬರಾಜು ಮಾಡಲು ಆರಂಭಿಸಿದೆ.

ಅತ್ಯಂತ ವೇಗವಾಗಿ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವ ವೇದಿಕೆಯಾಗಿರುವ ಸ್ವಿಗ್ಗಿ ಮಾರ್ಟ್‌ನಲ್ಲೂ ಏರಿಯೇಟರ್‌ ಹುಡುಕುವವರ ಸಂಖ್ಯೆ ಶೇಕಡಾ 1400 ರಷ್ಟು ಹೆಚ್ಚಾಗಿರುವುದು ಕಂಡುಬಂದಿದೆ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸ್ವಿಗ್ಗಿ ಇನ್‌ಸ್ಟಾ ಮಾರ್ಟ್‌, ಅರ್ಥ ಫೋಕಸ್‌ ಎನ್ನುವ ಕಂಪನಿಯ ಜೊತೆ ಕೈಜೋಡಿಸಿದೆ. ಈ ಮೂಲಕ ಕೇವಲ 10 ನಿಮಿಷಗಳಲ್ಲಿ ಬೇಡಿಕೆ ಸಲ್ಲಿಸುವ ಗ್ರಾಹಕರುಗಳಿಗೆ ಏರಿಯೇಟರ್‌ ಅನ್ನು ತಲುಪಿಸಲು ಆರಂಭಿಸಿದೆ.

ಇದನ್ನೂ ಓದಿ: Ambulance Booking : ಬೆಂಗಳೂರಿನಲ್ಲಿ ಆ್ಯಪ್ ​ಮೂಲಕವೇ ಮಾಡಬಹುದು ಆಂಬ್ಯುಲೆನ್ಸ್​ ಬುಕಿಂಗ್

ಈ ಮೂಲಕ ಬೆಂಗಳೂರು ಜಲಮಂಡಳಿಯ ನೀರಿನ ಸದ್ಬಳಕೆಯ ಮಹತ್ವಕಾಂಕ್ಷಿ ಯೋಜನೆಯಾದ ಏರಿಯೇಟರ್‌ ಅಳವಡಿಕೆಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುವ ಗುರಿಯನ್ನು ಹೊಂದಿದೆ. ಈ ಏರಿಯೇಟರ್‌ಗಳ ಬಳಕೆಯಿಂದ ಬಹಳಷ್ಟು ನೀರಿನ ಉಳೀತಾಯವನ್ನು ಮಾಡಬಹುದಾಗಿದೆ. ಕಿಚನ್‌ ಟ್ಯಾಪ್‌ಗಳಲ್ಲಿ ಅಳವಡಿಸುವುದರಿಂದ ಶೇಕಡಾ 70 ರಷ್ಟು ಮತ್ತು ಶವರ್‌ಗಳಿಂದ ಶೇಕಡಾ 50 ರಷ್ಟು ನೀರು ಉಳಿತಾಯ ಮಾಡಬಹುದಾಗಿದೆ. ಸ್ವಿಗ್ಗಿ ಇಸ್ಟಾ ಮಾರ್ಟ್‌ನಲ್ಲಿ ಕಿಚನ್‌, ಬಾತ್‌ ಮತ್ತು ಬೇಸಿನ್‌ ಟ್ಯಾಪ್‌ ಹಾಗೂ ಶವರ್‌ಗಳಲ್ಲಿ ಅಳವಡಿಸಬಹುದಾದ ಫ್ಲೋ ರಿಸ್ಟ್ರಿಕ್ಟರ್‌ ಅನ್ನು ದಾಸ್ತುನು ಮಾಡಿಕೊಳ್ಳಲಾಗಿದೆ ಎಂದು ಪ್ರಕಟಣೆಯನ್ನು ತಿಳಿಸಲಾಗಿದೆ.

ಮಾ.21ರಿಂದ ನಲ್ಲಿಗಳಿಗೆ ಏರಿಯೇಟರ್‌ ಕಡ್ಡಾಯ ಮಾಡಿದ್ದ ಬೆಂಗಳೂರು ಜಲಮಂಡಳಿ

ರಾಜಧಾನಿಯಲ್ಲಿ ಬೇಸಿಗೆ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ (Bangalore Water Crisis) ಉಲ್ಬಣವಾಗುತ್ತಿದೆ. ಹೀಗಾಗಿ ನೀರಿನ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಹಲವು ಕ್ರಮ ಕೈಗೊಂಡಿರುವ ಬೆಂಗಳೂರು ಜಲಮಂಡಳಿಯು(ಬಿಡಬ್ಲ್ಯುಎಸ್‌ಎಸ್‌ಬಿ), ನಲ್ಲಿಗಳಿಗೆ ಏರಿಯೇಟರ್‌ ಅಳವಡಿಕೆ ಕಡ್ಡಾಯ ಮಾಡಿ (Aerators for Taps) ಆದೇಶ ಹೊರಡಿಸಿತ್ತು.

ಅನಗತ್ಯವಾಗಿ ನೀರು ಪೋಲಾಗುವುದನ್ನು ತಡೆಯುವ ನಿಟ್ಟಿನಲ್ಲಿ ಜಲಮಂಡಲಿ ಕ್ರಮ ಕೈಗೊಂಡಿದ್ದು, ಮಾರ್ಚ್‌ 21 ರಿಂದ 31ರೊಳಗೆ ನಲ್ಲಿಗಳಿಗೆ ಕಡ್ಡಾಯವಾಗಿ ಏರಿಯೇಟರ್‌ ಅಳವಡಿಸಲು ಸೂಚನೆ ನೀಡಿತ್ತು.

ಏರಿಯೇಟರ್‌ ಅಳವಡಿಕೆಯಿಂದ ಶೇ. 60 ರಿಂದ 85ರಷ್ಟು ನೀರಿನ ಉಳಿತಾಯ ಸಾಧ್ಯವಾಗಲಿದೆ. ವಾಣಿಜ್ಯ ಮಳಿಗೆಗೆಳು, ಕೈಗಾರಿಕೆಗಳು, ಅಪಾರ್ಟ್‌ಮೆಂಟ್‌ಗಳು, ಐಷಾರಾಮಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಸಾರ್ವಜನಿಕ ಸ್ಥಳಗಳಲ್ಲಿ ವಾಷ್ ಬೇಸಿನ್, ಕಿಚನ್, ಕೈ ಮತ್ತು ಕಾಲು ತೊಳೆಯುವ ಸ್ಥಳಗಳು, ಸ್ವಚ್ಛತೆಗಾಗಿ ಮೀಸಲಿರುವ ನಲ್ಲಿಗಳಿಂದ ಹೆಚ್ಚಿನ ನೀರು ಪೋಲಾಗುವುದನ್ನು ತಡೆಯಲು ಕ್ರಮ ಏರಿಯೇಟರ್‌ ಕಡ್ಡಾಯವಾಗಿ ಅಳವಡಿಸಲು ಸೂಚನೆ ನೀಡಲಾಗಿತ್ತು.

Continue Reading

ತಂತ್ರಜ್ಞಾನ

Four Digit PIN: ಇಂಥ ಪಿನ್ ನಂಬರ್ ಕೊಡ್ತಾ ಇದ್ದೀರಾ? ನಿಮ್ಮ ದುಡ್ಡಿಗೆ ಕಾದಿದೆ ಅಪಾಯ!

ಸಾಮಾನ್ಯವಾಗಿ 1234, 0000, ಜನ್ಮ ದಿನಾಂಕ ಅಥವಾ ಫೋನ್ ಸಂಖ್ಯೆಯಂತಹ ವೈಯಕ್ತಿಕ ಮಾಹಿತಿಯನ್ನು ಆಧರಿಸಿದಂತಹ ದುರ್ಬಲ ಪಿನ್ ನಂಬರ್ (Four Digit PIN) ಅನ್ನು ಹೊಂದಿದ್ದರೆ ನಮ್ಮ ವಯಕ್ತಿಕ ಮಾಹಿತಿಗಳು ಸುಲಭವಾಗಿ ಸೈಬರ್ ದಾಳಿಕೋರರಿಗೆ ಲಭ್ಯವಾಗುವುದು.

VISTARANEWS.COM


on

By

Four Digit PIN
Koo

ಸಾಮಾನ್ಯವಾಗಿ ನಾವು ನಾಲ್ಕು ಅಂಕೆಯ (Four Digit PIN) ಪಿನ್ ನಂಬರ್ ಹಾಕಬೇಕಾದಾಗ ನಮಗೆ ಸುಲಭವಾಗಿ ನೆನಪಿಟ್ಟುಕೊಳ್ಳಬಹುದಾದ ಅಂಕೆಗಳನ್ನು (numbers) ಹಾಕುತ್ತೇವೆ. ಆದರೆ ಇದು ತುಂಬಾ ಅಪಾಯಕಾರಿ. ಯಾಕೆಂದರೆ ಸುಲಭವಾದ ಪಿನ್ ಸಂಖ್ಯೆಯು ಶೀಘ್ರದಲ್ಲಿ ಸೈಬರ್ ವಂಚಕರ (cyber attacks) ಪಾಲಾಗಬಹುದು. ಹೀಗಾಗಿ ಅತ್ಯಂತ ಸರಳ ಪಿನ್ ಗಳನ್ನು ನೀವು ಯಾವುದೇ ಉದ್ದೇಶಕ್ಕೆ ಬಳಸಿದ್ದರೆ ಕೂಡಲೇ ಅದನ್ನು ಬದಲಾಯಿಸುವುದು ಒಳ್ಳೆಯದು.

ಸಾಮಾನ್ಯವಾಗಿ ನಾವು 1234 ಅಥವಾ 0000 ಅಥವಾ ಜನ್ಮ ದಿನಾಂಕ (date of birth) ಅಥವಾ ಫೋನ್ ಸಂಖ್ಯೆಯಂತಹ (phone number) ವೈಯಕ್ತಿಕ ಮಾಹಿತಿಯನ್ನು ಆಧರಿಸಿದಂತಹ ದುರ್ಬಲ ಪಿನ್ ನಂಬರ್ ಅನ್ನು ನಾವು ಹೊಂದಿರುತ್ತೇವೆ. ಇದು ಸೈಬರ್ ದಾಳಿಕೋರರಿಗೆ ಸುಲಭವಾಗಿ ಸಿಗುತ್ತದೆ.

ವರ್ಷದಿಂದ ವರ್ಷಕ್ಕೆ ಸೈಬರ್ ದಾಳಿಗಳು ಹೆಚ್ಚಾಗುತ್ತಲೇ ಇದೆ. 2024 ರ ಮೊದಲ ತ್ರೈಮಾಸಿಕದಲ್ಲಿ ಸೈಬರ್ ದಾಳಿಯ ಪ್ರಮಾಣ ಶೇ. 33ರಷ್ಟು ಹೆಚ್ಚಾಗಿದೆ. ಭಾರತವು ವಿಶ್ವದಲ್ಲೇ ಅತೀ ಹೆಚ್ಚು ಸೈಬರ್ ದಾಳಿಗೆ ಒಳಗಾದ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಚೆಕ್ ಪಾಯಿಂಟ್ ಸಾಫ್ಟ್‌ವೇರ್ ಟೆಕ್ನಾಲಜೀಸ್ ಲಿಮಿಟೆಡ್ ವರದಿ ತಿಳಿಸಿದೆ.

ಕಂಪ್ಯೂಟರ್ ವ್ಯವಸ್ಥೆಗಳು, ನೆಟ್‌ವರ್ಕ್‌ಗಳಲ್ಲಿನ ದೌರ್ಬಲ್ಯಗಳನ್ನು ಕಂಡುಹಿಡಿಯುವ ಮೂಲಕ ಸೈಬರ್ ಅಪರಾಧಿಗಳು ಜನರ ವ್ಯವಹಾರ ಖಾತೆಗಳು ಮತ್ತು ಸರ್ಕಾರದ ಖಾತೆಗಳ ಮೇಲೆ ದಾಳಿ ನಡೆಸುತ್ತಾರೆ. ಸೂಕ್ಷ್ಮ ಮಾಹಿತಿಯನ್ನು ಕದಿಯಲು, ಬ್ಯಾಂಕ್ ಖಾತೆಗಳಿಂದ ಹಣವನ್ನು ದೋಚಲು ವಿವಿಧ ವಿಧಾನಗಳನ್ನು ಬಳಸುತ್ತಾರೆ.


ಏನು ಕಾರಣ?

ಸೈಬರ್ ದಾಳಿಯಲ್ಲಿ ದಿಢೀರ್ ಏರಿಕೆಗೆ ಮುಖ್ಯ ಕಾರಣ ನಾವು ಬಳಸುವ ದುರ್ಬಲ ಪಿನ್ ಗಳು. ಇದು ಯಾವುದೇ ವ್ಯವಸ್ಥೆಯನ್ನು ಉಲ್ಲಂಘಿಸಲು ಸುಲಭವಾದ ಮಾರ್ಗವಾಗಿದೆ. ದುರ್ಬಲವಾದ ಪಿನ್ “1234” ಅಥವಾ “0000” ನಂತಹ ಸ್ಪಷ್ಟವಾಗಿರಬಹುದು ಅಥವಾ ಜನ್ಮ ದಿನಾಂಕ ಅಥವಾ ಫೋನ್ ಸಂಖ್ಯೆಯಂತಹ ವೈಯಕ್ತಿಕ ಮಾಹಿತಿಯ ಆಧಾರದ ಮೇಲೆ ಸುಲಭವಾಗಿ ಊಹಿಸಬಹುದಾಗಿದೆ.

ಸಾಮಾನ್ಯವಾದ ಪಿನ್‌ಗಳು ಯಾವುವು?

ಸೈಬರ್‌ ಸೆಕ್ಯುರಿಟಿ ಅಧ್ಯಯನವು ಅನೇಕರು ತಮ್ಮ ಭದ್ರತಾ ಕೋಡ್‌ಗಳಲ್ಲಿ ಸರಳ ಮಾದರಿಗಳ ಪಿನ್ ಗಳನ್ನು ಬಳಸುತ್ತಾರೆ ಎಂದು ತೋರಿಸಿದ್ದಾರೆ. ಪರೀಕ್ಷಿಸಿದ 3.4 ಮಿಲಿಯನ್ ಪಿನ್‌ಗಳಲ್ಲಿ ಸಾಮಾನ್ಯ ಮಾದರಿಗಳು ಹೀಗಿವೆ.

1234, 1111, 0000, 1212, 7777, 1004, 2000, 4444, 2222, 6969 ಈಗಾಗಲೇ ಈ ಮಾದರಿಯ ಪಿನ್ ಗಳು ಸೈಬರ್ ದಾಳಿಗೆ ತುತ್ತಾಗಿದ್ದು, ಯಾರಾದರೂ ಈಗಲೂ ಇಂತಹ ಪಿನ್ ಬಳಸುತ್ತಿದ್ದಾರೆ ಬದಲಾಯಿಸಿಕೊಳ್ಳುವುದು ಒಳ್ಳೆಯದು.
ಸರಳವಾದ ಅಥವಾ ಸುಲಭವಾಗಿ ಊಹಿಸಬಹುದಾದ ಪಿನ್ ಅನ್ನು ಆಯ್ಕೆ ಮಾಡುವುದರಿಂದ ಸೈಬರ್ ಅಪರಾಧಿಗಳಿಗೆ ನೀವು ಸುಲಭ ಗುರಿಯಾಗಬಹುದು. ನಿಮ್ಮ ಖಾತೆಗಳು ಮತ್ತು ಸಾಧನಗಳನ್ನು ರಕ್ಷಿಸಲು ಪಿನ್ ಅನ್ನು ಆಯ್ಕೆ ಮಾಡುವಾಗ ಸುರಕ್ಷತೆಗೆ ಆದ್ಯತೆ ನೀಡುವುದು ಮುಖ್ಯವಾಗಿದೆ. ಬಲವಾದ, ವಿಶಿಷ್ಟವಾದ ಪಿನ್ ಸೂಕ್ಷ್ಮ ಮಾಹಿತಿಗೆ ಅನಧಿಕೃತ ಪ್ರವೇಶದ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

ಇಎಸ್ ಇ ಟಿ ಸೈಬರ್ ಸೆಕ್ಯುರಿಟಿ ತಜ್ಞ, ಜೇಕ್ ಮೂರ್, ಸರಳವಾದ ಪಾಸ್‌ಕೋಡ್‌ಗಳನ್ನು ಬಳಸದಂತೆ ಸಲಹೆ ನೀಡಿದ್ದಾರೆ. ಇದು ಜನರನ್ನು ಸೈಬರ್‌ಟಾಕ್‌ಗಳಿಗೆ ಗುರಿಯಾಗಿಸಬಹುದು ಎಂದು ಡೈಲಿ ಮೇಲ್ ವರದಿ ಮಾಡಿದೆ.

ಪರಿಣಿತ ಹ್ಯಾಕರ್‌ಗಳು ಸೀಮಿತ ಸಂಖ್ಯೆಯ ಪ್ರಯತ್ನಗಳಲ್ಲಿ ಪಾಸ್ಕೋಡ್ ಗಳನ್ನು ಊಹಿಸಿ ಶೀಘ್ರದಲ್ಲೇ ಖಾತೆಗಳಿಗೆ, ವಯಕ್ತಿಕ ಮಾಹಿತಿಗಳ ಮೇಲೆ ಕನ್ನ ಹಾಕಬಹುದು. ಸಾಮಾಜಿಕ ಮಾಧ್ಯಮ ಸೇರಿದಂತೆ ವೈಯಕ್ತಿಕ ಖಾತೆಗಳಿಗೆ ಜನ್ಮ ವರ್ಷಗಳು, ವೈಯಕ್ತಿಕ ಮಾಹಿತಿ ಅಥವಾ ಪುನರಾವರ್ತಿತ ಪಾಸ್‌ವರ್ಡ್‌ಗಳನ್ನು ಬಳಸದಂತೆ ಜಾಗತಿಕ ಸೈಬರ್‌ ಸೆಕ್ಯುರಿಟಿ ಸಲಹೆಗಾರರು ಶಿಫಾರಸು ಮಾಡುತ್ತಾರೆ. ಸುಲಭವಾಗಿ ಊಹಿಸಬಹುದಾದ ಪಿನ್‌ಗಳನ್ನು ಬಳಸುವುದರಿಂದ ಜನರು ಸುಲಭವಾಗಿ ದಾಳಿಕೋರರು ಬಲಿಯಾಗುತ್ತಾರೆ.

ಇದನ್ನೂ ಓದಿ: Google Update: ಕೃತಕ ಬುದ್ಧಿಮತ್ತೆ, ವಂಚನೆ ತಡೆಯಲು ಅಲರ್ಟ್‌; ಗೂಗಲ್‌ ಹೊಸ ಘೋಷಣೆಗಳು ಏನೇನು?

ಕಡಿಮೆ ಬಳಕೆಯ ಸಾಮಾನ್ಯ ಪಿನ್

ಕಡಿಮೆ ಬಳಸುವ ಆದರೆ ತೀರಾ ಸಾಮಾನ್ಯವಾದ 4-ಅಂಕಿಯ ಪಿನ್‌ಗಳು ಹೀಗಿವೆ. 8557, 8438, 9539,7063, 6827, 0859, 6793, 0738, 6835.

ಸಾಕಷ್ಟು ಮುನ್ನೆಚ್ಚರಿಕೆಗಳನ್ನು ವಹಿಸಿದ್ದರೂ ಪಾಸ್‌ಕೋಡ್‌ಗಳನ್ನು ಹ್ಯಾಕ್ ಮಾಡಬಹುದು. ಆದ್ದರಿಂದ ಹೆಚ್ಚುವರಿ ಭದ್ರತೆಗಾಗಿ ಪಾಸ್‌ವರ್ಡ್ ನಿರ್ವಾಹಕರನ್ನು ಬಳಸಲು ಶ್ರೀ ಮೂರ್ ಸಲಹೆ ನೀಡಿದ್ದಾರೆ. ಇದರಿಂದ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಬಹುದು ಮತ್ತು ಸಂಪೂರ್ಣವಾಗಿ ಯಾದೃಚ್ಛಿಕ ಕೋಡ್‌ಗಳನ್ನು ರಚಿಸಲು ಸಹಾಯ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

Continue Reading
Advertisement
World Aids Vaccine Day
ದೇಶ20 mins ago

World Aids Vaccine Day: ಇಂದು ವಿಶ್ವ ಏಡ್ಸ್ ಲಸಿಕೆ ದಿನ; ಈ ದಿನದ ಹಿನ್ನೆಲೆ ಏನು?

Dina Bhavishya
ಭವಿಷ್ಯ20 mins ago

Dina Bhavishya : ಈ ರಾಶಿಯವರ ಬೆನ್ನ ಹಿಂದೆ ನಡೆಯುತ್ತೆ ಪಿತೂರಿ..ಎಚ್ಚರವಾಗಿರಿ

ipl 2024
ಪ್ರಮುಖ ಸುದ್ದಿ5 hours ago

IPL 2024 : ಲಕ್ನೊ ವಿರುದ್ಧವೂ ಸೋತ ಮುಂಬೈ; ಹತ್ತನೇ ಸ್ಥಾನ ಕಾಯಂ

Anjali Murder Case
ಕರ್ನಾಟಕ5 hours ago

Anjali Murder Case: ಅಂಜಲಿ ಕೊಂದವನ ಎನ್‌ಕೌಂಟರ್ ಮಾಡಿ: ಸಹೋದರಿ ಪೂಜಾ ಆಗ್ರಹ

Kanhaiya Kumar
ದೇಶ5 hours ago

Kanhaiya Kumar: ಪ್ರಚಾರದ ವೇಳೆ ಕಾಂಗ್ರೆಸ್‌ ಅಭ್ಯರ್ಥಿ ಕನ್ಹಯ್ಯ ಕುಮಾರ್‌ ಮೇಲೆ ಹಲ್ಲೆ; ವಿಡಿಯೊ ಇಲ್ಲಿದೆ

Murder Case
ಬೆಂಗಳೂರು6 hours ago

Murder Case: ಯಲಹಂಕದಲ್ಲಿ ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರ ಕೊಲೆ

Siddaramaiah
ಸಂಪಾದಕೀಯ6 hours ago

ವಿಸ್ತಾರ ಸಂಪಾದಕೀಯ: ಗ್ರೇಸ್‌ ಮಾರ್ಕ್ಸ್‌ ಅಲ್ಲ, ಗುಣಮಟ್ಟದ ಶಿಕ್ಷಣವೇ ಫಲಿತಾಂಶಕ್ಕೆ ದಾರಿ

Pavithra Jayaram
ಸಿನಿಮಾ6 hours ago

ನಟಿ ಪವಿತ್ರ ಜಯರಾಮ್‌ ಸಾವಿನ ಬೆನ್ನಲ್ಲೇ ಪ್ರಿಯತಮ ಚಂದ್ರಕಾಂತ್ ಆತ್ಮಹತ್ಯೆ; ಖಿನ್ನತೆಗೆ ನಟ ಬಲಿ?

Rohit Sharma
ಕ್ರೀಡೆ6 hours ago

Rohit Sharma : ಆಡಿಯೊ ಬಂದ್ ಮಾಡಪ್ಪ; ಕ್ಯಾಮೆರಾಮನ್​ಗೆ ಕೈಮುಗಿದು ಬೇಡಿಕೊಂಡ ರೋಹಿತ್​ ಶರ್ಮಾ

Road Accident
ಪ್ರಮುಖ ಸುದ್ದಿ6 hours ago

Road Accident: ಕೊಪ್ಪಳ ಬಳಿ ಟ್ರ್ಯಾಕ್ಟರ್‌ಗೆ ಬಸ್ ಡಿಕ್ಕಿಯಾಗಿ ಮೂವರ ದುರ್ಮರಣ; 20ಕ್ಕೂ ಹೆಚ್ಚು ಮಂದಿಗೆ ಗಾಯ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ9 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ23 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌