Wipro Q4 Results: ಐಟಿ ದೈತ್ಯ ವಿಪ್ರೋದ ನಿವ್ವಳ ಲಾಭದಲ್ಲಿ ಶೇ. 8ರಷ್ಟು ಕುಸಿತ - Vistara News

ವಾಣಿಜ್ಯ

Wipro Q4 Results: ಐಟಿ ದೈತ್ಯ ವಿಪ್ರೋದ ನಿವ್ವಳ ಲಾಭದಲ್ಲಿ ಶೇ. 8ರಷ್ಟು ಕುಸಿತ

Wipro Q4 Results: ಐಟಿ ದೈತ್ಯ ವಿಪ್ರೋದ ಆದಾಯದಲ್ಲಿ ಕುಸಿತ ಕಂಡು ಬಂದಿದೆ. ಮಾರ್ಚ್ 2024 ತ್ರೈಮಾಸಿಕದ ನಿವ್ವಳ ಲಾಭ ಶೇ. 8ರಷ್ಟು ಕುಸಿತ ಕಂಡು 2,835 ಕೋಟಿ ರೂ.ಗೆ ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 23,190.3 ಕೋಟಿ ರೂ. ಆದಾಯ ಇತ್ತು. ಈ ವರ್ಷ ಇದು 22,208.3 ಕೋಟಿ ರೂ.ಗೆ ಇಳಿದಿದೆ. ಕೆಲವು ದಿನಗಳ ಹಿಂದೆಯಷ್ಟೇ ವಿಪ್ರೋದ ಸಿಇಒ, ಎಂ.ಡಿ. ಥಿಯೆರ್ರಿ ಡೆಲಾಪೋರ್ಟೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಸ್ಥಾನಕ್ಕೆ ಭಾರತ ಮೂಲದ ಶ್ರೀನಿವಾಸ್ (ಶ್ರೀನಿ) ಪಲ್ಲಿಯಾ ಅವರನ್ನು ನೇಮಕ ಮಾಡಲಾಗಿದೆ.

VISTARANEWS.COM


on

Wipro Q4 Results
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಐಟಿ ದೈತ್ಯ ವಿಪ್ರೋ (Wipro)ದ ಮಾರ್ಚ್ 2024 ತ್ರೈಮಾಸಿಕದ (ನಾಲ್ಕನೇ ತ್ರೈ ಮಾಸಿಕ) ನಿವ್ವಳ ಲಾಭ ಶೇ. 8ರಷ್ಟು ಕುಸಿತ ಕಂಡು 2,835 ಕೋಟಿ ರೂ.ಗೆ ತಲುಪಿದೆ ಎಂದು ವರದಿ ತಿಳಿಸಿದೆ. 2024ರ ಜನವರಿ-ಮಾರ್ಚ್ ಅವಧಿಯಲ್ಲಿ ವಿಪ್ರೋದ ಆದಾಯ 22,208.3 ಕೋಟಿ ರೂ.ಗೆ ಇಳಿದಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 23,190.3 ಕೋಟಿ ರೂ. ಆದಾಯ ಇತ್ತು (Wipro Q4 Results).

ಕಳೆದ ವರ್ಷ ಇದೇ ಅವಧಿಯಲ್ಲಿ ವಿಪ್ರೋ 3,074 ಕೋಟಿ ರೂ. ನಿವ್ವಳ ಲಾಭ ದಾಖಲಿಸಿತ್ತು. ವಿಪ್ರೋ ನಿರ್ದೇಶಕರ ಮಂಡಳಿಯು 1 ರೂ.ಗಳ ಮಧ್ಯಂತರ ಲಾಭಾಂಶ (ಡಿವಿಡೆಂಡ್‌)ವನ್ನು ಘೋಷಿಸಿದೆ. ಇದನ್ನು 2023-24ರ ಹಣಕಾಸು ವರ್ಷದ ಅಂತಿಮ ಲಾಭಾಂಶವೆಂದು ಪರಿಗಣಿಸಲಾಗುವುದು ಎಂದು ಫೈಲಿಂಗ್‌ನಲ್ಲಿ ತಿಳಿಸಲಾಗಿದೆ. ಡಾಲರ್ ಲೆಕ್ಕದಲ್ಲಿ ಹೇಳುವುದಾದರೆ, ವಿಪ್ರೋದ ಐಟಿ ಸೇವೆಗಳ ಆದಾಯವು 2,657.4 ಮಿಲಿಯನ್ ಡಾಲರ್ ಆಗಿದೆ.

ಜೂನ್ 30ಕ್ಕೆ ಕೊನೆಗೊಳ್ಳುವ ತ್ರೈ ಮಾಸಿಕದಲ್ಲಿ ನಮ್ಮ ಐಟಿ ಸೇವೆಗಳ ವ್ಯವಹಾರ ವಿಭಾಗದಿಂದ ಆದಾಯವು 2.62 ಬಿಲಿಯನ್ ಡಾಲರ್‌ನಿಂದ 2.67 ಬಿಲಿಯನ್ ಡಾಲರ್ ಆಸುಪಾಸಿನಲ್ಲಿರಲಿದೆ ಎನ್ನುವ ನಿರೀಕ್ಷೆ ಇದೆ. ವಿಪ್ರೋದ ಸ್ವಯಂ ಪ್ರೇರಿತ ಹೊರಗುಳಿಯುವಿಕೆಯು 12 ತಿಂಗಳ ಆಧಾರದ ಮೇಲೆ ಶೇಕಡಾ 14.2ರಷ್ಟಿದೆ. ಇದು ಹಿಂದಿನ ಡಿಸೆಂಬರ್ 2023ರ ತ್ರೈ ಮಾಸಿಕದಲ್ಲಿ ವರದಿಯಾದ ಶೇಕಡಾ 12.3ಕ್ಕಿಂತ ಹೆಚ್ಚು. 2023-24ರ ಆರ್ಥಿಕ ವರ್ಷದಲ್ಲಿ ವಿಪ್ರೋದ ಉದ್ಯೋಗಿಗಳ ಸಂಖ್ಯೆ ಶೇಕಡಾ 9.5ರಷ್ಟು ಕುಸಿದು 2,34,054ಕ್ಕೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.

ವಿಪ್ರೋ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀನಿ ಪಲ್ಲಿಯಾ ಮಾತನಾಡಿ, “2024ರ ಹಣಕಾಸು ವರ್ಷವು ನಮ್ಮ ಉದ್ಯಮಕ್ಕೆ ಸವಾಲಿನ ವರ್ಷವೆಂದು ಸಾಬೀತಾಗಿದೆ. ಅದಾಗ್ಯೂ ಮುಂದೆ ಇರುವ ಅವಕಾಶಗಳ ಬಗ್ಗೆ ನಾವು ಭರವಸೆ ಹೊಂದಿದ್ದೇನೆವೆ. ನಾವು ಪ್ರಮುಖ ತಾಂತ್ರಿಕ ಬದಲಾವಣೆಯ ಅಂಚಿನಲ್ಲಿದ್ದೇವೆ. ಕೃತಕ ಬುದ್ಧಿಮತ್ತೆ, ನಮ್ಮ ಗ್ರಾಹಕರ ಅಗತ್ಯಗಳಿಗೆ ಒತ್ತು ನೀಡಲಿದ್ದೇವೆʼʼ ಎಂದು ಹೇಳಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ವಿಪ್ರೋದ ಸಿಇಒ, ಎಂ.ಡಿ. ಥಿಯೆರ್ರಿ ಡೆಲಾಪೋರ್ಟೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಶ್ರೀನಿವಾಸ್ (ಶ್ರೀನಿ) ಪಲ್ಲಿಯಾ ಹೊಸ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಶ್ರೀನಿವಾಸ್ ಮೂರು ದಶಕಗಳಿಂದ ವಿಪ್ರೋದಲ್ಲಿದ್ದಾರೆ ಮತ್ತು ಇತ್ತೀಚೆಗೆ ವಿಪ್ರೋದ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಕಾರ್ಯತಂತ್ರದ ಮಾರುಕಟ್ಟೆಯಾದ ಅಮೇರಿಕಾಸ್ 1ರ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದರು. ಜತೆಗೆ ವಿಪ್ರೋ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರಾಗಿದ್ದಾರೆ.

ಇದನ್ನೂ ಓದಿ: Infosys Q4 Result: ಇನ್ಫೋಸಿಸ್‌ಗೆ 7,969 ಕೋಟಿ ರೂ. ನಿವ್ವಳ ಲಾಭ; 28 ರೂ.ಗಳ ಡಿವಿಡೆಂಡ್‌ ಘೋಷಣೆ

ವಿಪ್ರೋ ಕಳೆದ ತಿಂಗಳು ಆರು ಉದ್ಯೋಗಿಗಳನ್ನು ಹಿರಿಯ ಉಪಾಧ್ಯಕ್ಷ ಸ್ಥಾನಕ್ಕೆ ನೇಮಿಸಿತ್ತು ಮತ್ತು ಇತರ 25 ಉದ್ಯೋಗಿಗಳಿಗೆ ಉಪಾಧ್ಯಕ್ಷ ಸ್ಥಾನ ನೀಡಿ ಭಡ್ತಿ ಒದಗಿಸಿತ್ತು. ಹಣಕಾಸು ಮುಖ್ಯಸ್ಥ ಜತಿನ್ ದಲಾಲ್, ಚೀಫ್‌ ಗ್ರೋತ್‌ ಆಫೀಸರ್‌ ಸ್ಟೆಫನಿ ಟ್ರೌಟ್ಮನ್ ಮತ್ತು ಡಿಜಿಟಲ್ ಮತ್ತು ಕ್ಲೌಡ್ ಮುಖ್ಯಸ್ಥ ಭರತ್ ನಾರಾಯಣನ್ ಸೇರಿದಂತೆ ಅನೇಕ ಹಿರಿಯ ಕಾರ್ಯನಿರ್ವಾಹಕರು ಕಳೆದ ವರ್ಷದಲ್ಲಿ ವಿಪ್ರೋವನ್ನು ತೊರೆದಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ತಂತ್ರಜ್ಞಾನ

Four Digit PIN: ಇಂಥ ಪಿನ್ ನಂಬರ್ ಕೊಡ್ತಾ ಇದ್ದೀರಾ? ನಿಮ್ಮ ದುಡ್ಡಿಗೆ ಕಾದಿದೆ ಅಪಾಯ!

ಸಾಮಾನ್ಯವಾಗಿ 1234, 0000, ಜನ್ಮ ದಿನಾಂಕ ಅಥವಾ ಫೋನ್ ಸಂಖ್ಯೆಯಂತಹ ವೈಯಕ್ತಿಕ ಮಾಹಿತಿಯನ್ನು ಆಧರಿಸಿದಂತಹ ದುರ್ಬಲ ಪಿನ್ ನಂಬರ್ (Four Digit PIN) ಅನ್ನು ಹೊಂದಿದ್ದರೆ ನಮ್ಮ ವಯಕ್ತಿಕ ಮಾಹಿತಿಗಳು ಸುಲಭವಾಗಿ ಸೈಬರ್ ದಾಳಿಕೋರರಿಗೆ ಲಭ್ಯವಾಗುವುದು.

VISTARANEWS.COM


on

By

Four Digit PIN
Koo

ಸಾಮಾನ್ಯವಾಗಿ ನಾವು ನಾಲ್ಕು ಅಂಕೆಯ (Four Digit PIN) ಪಿನ್ ನಂಬರ್ ಹಾಕಬೇಕಾದಾಗ ನಮಗೆ ಸುಲಭವಾಗಿ ನೆನಪಿಟ್ಟುಕೊಳ್ಳಬಹುದಾದ ಅಂಕೆಗಳನ್ನು (numbers) ಹಾಕುತ್ತೇವೆ. ಆದರೆ ಇದು ತುಂಬಾ ಅಪಾಯಕಾರಿ. ಯಾಕೆಂದರೆ ಸುಲಭವಾದ ಪಿನ್ ಸಂಖ್ಯೆಯು ಶೀಘ್ರದಲ್ಲಿ ಸೈಬರ್ ವಂಚಕರ (cyber attacks) ಪಾಲಾಗಬಹುದು. ಹೀಗಾಗಿ ಅತ್ಯಂತ ಸರಳ ಪಿನ್ ಗಳನ್ನು ನೀವು ಯಾವುದೇ ಉದ್ದೇಶಕ್ಕೆ ಬಳಸಿದ್ದರೆ ಕೂಡಲೇ ಅದನ್ನು ಬದಲಾಯಿಸುವುದು ಒಳ್ಳೆಯದು.

ಸಾಮಾನ್ಯವಾಗಿ ನಾವು 1234 ಅಥವಾ 0000 ಅಥವಾ ಜನ್ಮ ದಿನಾಂಕ (date of birth) ಅಥವಾ ಫೋನ್ ಸಂಖ್ಯೆಯಂತಹ (phone number) ವೈಯಕ್ತಿಕ ಮಾಹಿತಿಯನ್ನು ಆಧರಿಸಿದಂತಹ ದುರ್ಬಲ ಪಿನ್ ನಂಬರ್ ಅನ್ನು ನಾವು ಹೊಂದಿರುತ್ತೇವೆ. ಇದು ಸೈಬರ್ ದಾಳಿಕೋರರಿಗೆ ಸುಲಭವಾಗಿ ಸಿಗುತ್ತದೆ.

ವರ್ಷದಿಂದ ವರ್ಷಕ್ಕೆ ಸೈಬರ್ ದಾಳಿಗಳು ಹೆಚ್ಚಾಗುತ್ತಲೇ ಇದೆ. 2024 ರ ಮೊದಲ ತ್ರೈಮಾಸಿಕದಲ್ಲಿ ಸೈಬರ್ ದಾಳಿಯ ಪ್ರಮಾಣ ಶೇ. 33ರಷ್ಟು ಹೆಚ್ಚಾಗಿದೆ. ಭಾರತವು ವಿಶ್ವದಲ್ಲೇ ಅತೀ ಹೆಚ್ಚು ಸೈಬರ್ ದಾಳಿಗೆ ಒಳಗಾದ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಚೆಕ್ ಪಾಯಿಂಟ್ ಸಾಫ್ಟ್‌ವೇರ್ ಟೆಕ್ನಾಲಜೀಸ್ ಲಿಮಿಟೆಡ್ ವರದಿ ತಿಳಿಸಿದೆ.

ಕಂಪ್ಯೂಟರ್ ವ್ಯವಸ್ಥೆಗಳು, ನೆಟ್‌ವರ್ಕ್‌ಗಳಲ್ಲಿನ ದೌರ್ಬಲ್ಯಗಳನ್ನು ಕಂಡುಹಿಡಿಯುವ ಮೂಲಕ ಸೈಬರ್ ಅಪರಾಧಿಗಳು ಜನರ ವ್ಯವಹಾರ ಖಾತೆಗಳು ಮತ್ತು ಸರ್ಕಾರದ ಖಾತೆಗಳ ಮೇಲೆ ದಾಳಿ ನಡೆಸುತ್ತಾರೆ. ಸೂಕ್ಷ್ಮ ಮಾಹಿತಿಯನ್ನು ಕದಿಯಲು, ಬ್ಯಾಂಕ್ ಖಾತೆಗಳಿಂದ ಹಣವನ್ನು ದೋಚಲು ವಿವಿಧ ವಿಧಾನಗಳನ್ನು ಬಳಸುತ್ತಾರೆ.


ಏನು ಕಾರಣ?

ಸೈಬರ್ ದಾಳಿಯಲ್ಲಿ ದಿಢೀರ್ ಏರಿಕೆಗೆ ಮುಖ್ಯ ಕಾರಣ ನಾವು ಬಳಸುವ ದುರ್ಬಲ ಪಿನ್ ಗಳು. ಇದು ಯಾವುದೇ ವ್ಯವಸ್ಥೆಯನ್ನು ಉಲ್ಲಂಘಿಸಲು ಸುಲಭವಾದ ಮಾರ್ಗವಾಗಿದೆ. ದುರ್ಬಲವಾದ ಪಿನ್ “1234” ಅಥವಾ “0000” ನಂತಹ ಸ್ಪಷ್ಟವಾಗಿರಬಹುದು ಅಥವಾ ಜನ್ಮ ದಿನಾಂಕ ಅಥವಾ ಫೋನ್ ಸಂಖ್ಯೆಯಂತಹ ವೈಯಕ್ತಿಕ ಮಾಹಿತಿಯ ಆಧಾರದ ಮೇಲೆ ಸುಲಭವಾಗಿ ಊಹಿಸಬಹುದಾಗಿದೆ.

ಸಾಮಾನ್ಯವಾದ ಪಿನ್‌ಗಳು ಯಾವುವು?

ಸೈಬರ್‌ ಸೆಕ್ಯುರಿಟಿ ಅಧ್ಯಯನವು ಅನೇಕರು ತಮ್ಮ ಭದ್ರತಾ ಕೋಡ್‌ಗಳಲ್ಲಿ ಸರಳ ಮಾದರಿಗಳ ಪಿನ್ ಗಳನ್ನು ಬಳಸುತ್ತಾರೆ ಎಂದು ತೋರಿಸಿದ್ದಾರೆ. ಪರೀಕ್ಷಿಸಿದ 3.4 ಮಿಲಿಯನ್ ಪಿನ್‌ಗಳಲ್ಲಿ ಸಾಮಾನ್ಯ ಮಾದರಿಗಳು ಹೀಗಿವೆ.

1234, 1111, 0000, 1212, 7777, 1004, 2000, 4444, 2222, 6969 ಈಗಾಗಲೇ ಈ ಮಾದರಿಯ ಪಿನ್ ಗಳು ಸೈಬರ್ ದಾಳಿಗೆ ತುತ್ತಾಗಿದ್ದು, ಯಾರಾದರೂ ಈಗಲೂ ಇಂತಹ ಪಿನ್ ಬಳಸುತ್ತಿದ್ದಾರೆ ಬದಲಾಯಿಸಿಕೊಳ್ಳುವುದು ಒಳ್ಳೆಯದು.
ಸರಳವಾದ ಅಥವಾ ಸುಲಭವಾಗಿ ಊಹಿಸಬಹುದಾದ ಪಿನ್ ಅನ್ನು ಆಯ್ಕೆ ಮಾಡುವುದರಿಂದ ಸೈಬರ್ ಅಪರಾಧಿಗಳಿಗೆ ನೀವು ಸುಲಭ ಗುರಿಯಾಗಬಹುದು. ನಿಮ್ಮ ಖಾತೆಗಳು ಮತ್ತು ಸಾಧನಗಳನ್ನು ರಕ್ಷಿಸಲು ಪಿನ್ ಅನ್ನು ಆಯ್ಕೆ ಮಾಡುವಾಗ ಸುರಕ್ಷತೆಗೆ ಆದ್ಯತೆ ನೀಡುವುದು ಮುಖ್ಯವಾಗಿದೆ. ಬಲವಾದ, ವಿಶಿಷ್ಟವಾದ ಪಿನ್ ಸೂಕ್ಷ್ಮ ಮಾಹಿತಿಗೆ ಅನಧಿಕೃತ ಪ್ರವೇಶದ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

ಇಎಸ್ ಇ ಟಿ ಸೈಬರ್ ಸೆಕ್ಯುರಿಟಿ ತಜ್ಞ, ಜೇಕ್ ಮೂರ್, ಸರಳವಾದ ಪಾಸ್‌ಕೋಡ್‌ಗಳನ್ನು ಬಳಸದಂತೆ ಸಲಹೆ ನೀಡಿದ್ದಾರೆ. ಇದು ಜನರನ್ನು ಸೈಬರ್‌ಟಾಕ್‌ಗಳಿಗೆ ಗುರಿಯಾಗಿಸಬಹುದು ಎಂದು ಡೈಲಿ ಮೇಲ್ ವರದಿ ಮಾಡಿದೆ.

ಪರಿಣಿತ ಹ್ಯಾಕರ್‌ಗಳು ಸೀಮಿತ ಸಂಖ್ಯೆಯ ಪ್ರಯತ್ನಗಳಲ್ಲಿ ಪಾಸ್ಕೋಡ್ ಗಳನ್ನು ಊಹಿಸಿ ಶೀಘ್ರದಲ್ಲೇ ಖಾತೆಗಳಿಗೆ, ವಯಕ್ತಿಕ ಮಾಹಿತಿಗಳ ಮೇಲೆ ಕನ್ನ ಹಾಕಬಹುದು. ಸಾಮಾಜಿಕ ಮಾಧ್ಯಮ ಸೇರಿದಂತೆ ವೈಯಕ್ತಿಕ ಖಾತೆಗಳಿಗೆ ಜನ್ಮ ವರ್ಷಗಳು, ವೈಯಕ್ತಿಕ ಮಾಹಿತಿ ಅಥವಾ ಪುನರಾವರ್ತಿತ ಪಾಸ್‌ವರ್ಡ್‌ಗಳನ್ನು ಬಳಸದಂತೆ ಜಾಗತಿಕ ಸೈಬರ್‌ ಸೆಕ್ಯುರಿಟಿ ಸಲಹೆಗಾರರು ಶಿಫಾರಸು ಮಾಡುತ್ತಾರೆ. ಸುಲಭವಾಗಿ ಊಹಿಸಬಹುದಾದ ಪಿನ್‌ಗಳನ್ನು ಬಳಸುವುದರಿಂದ ಜನರು ಸುಲಭವಾಗಿ ದಾಳಿಕೋರರು ಬಲಿಯಾಗುತ್ತಾರೆ.

ಇದನ್ನೂ ಓದಿ: Google Update: ಕೃತಕ ಬುದ್ಧಿಮತ್ತೆ, ವಂಚನೆ ತಡೆಯಲು ಅಲರ್ಟ್‌; ಗೂಗಲ್‌ ಹೊಸ ಘೋಷಣೆಗಳು ಏನೇನು?

ಕಡಿಮೆ ಬಳಕೆಯ ಸಾಮಾನ್ಯ ಪಿನ್

ಕಡಿಮೆ ಬಳಸುವ ಆದರೆ ತೀರಾ ಸಾಮಾನ್ಯವಾದ 4-ಅಂಕಿಯ ಪಿನ್‌ಗಳು ಹೀಗಿವೆ. 8557, 8438, 9539,7063, 6827, 0859, 6793, 0738, 6835.

ಸಾಕಷ್ಟು ಮುನ್ನೆಚ್ಚರಿಕೆಗಳನ್ನು ವಹಿಸಿದ್ದರೂ ಪಾಸ್‌ಕೋಡ್‌ಗಳನ್ನು ಹ್ಯಾಕ್ ಮಾಡಬಹುದು. ಆದ್ದರಿಂದ ಹೆಚ್ಚುವರಿ ಭದ್ರತೆಗಾಗಿ ಪಾಸ್‌ವರ್ಡ್ ನಿರ್ವಾಹಕರನ್ನು ಬಳಸಲು ಶ್ರೀ ಮೂರ್ ಸಲಹೆ ನೀಡಿದ್ದಾರೆ. ಇದರಿಂದ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಬಹುದು ಮತ್ತು ಸಂಪೂರ್ಣವಾಗಿ ಯಾದೃಚ್ಛಿಕ ಕೋಡ್‌ಗಳನ್ನು ರಚಿಸಲು ಸಹಾಯ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

Continue Reading

ದೇಶ

Reliance Retail: ರಿಲಯನ್ಸ್‌ ರಿಟೇಲ್‌ನಲ್ಲಿ ಎಎಸ್‌ಒಎಸ್‌ ಬ್ರ್ಯಾಂಡ್‌ನ ಉತ್ಪನ್ನಗಳು ಈಗ ಲಭ್ಯ

Reliance Retail: ಬ್ರಿಟನ್‌ನ ಪ್ರಮುಖ ಆನ್‌ಲೈನ್‌ ಫ್ಯಾಷನ್‌ ಕಂಪನಿ ಎಎಸ್‌ಒಎಸ್‌ ನ (ಎಸೋಸ್‌) ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡಲು ರಿಲಯನ್ಸ್‌ ರಿಟೇಲ್‌ ಕಂಪನಿಯು ದೀರ್ಘಾವಧಿಯ ಪಾಲುದಾರಿಕೆ ಮಾಡಿಕೊಂಡಿದ್ದು, ಈ ಒಪ್ಪಂದದ ಪ್ರಕಾರ ರಿಲಯನ್ಸ್‌ ರಿಟೇಲ್‌ ಕಂಪನಿಯು ಭಾರತದಲ್ಲಿ ತನ್ನ ಆನ್‌ಲೈನ್‌ ಮತ್ತು ಆಫ್‌ಲೈನ್‌ ಪ್ಲಾಟ್‌ಫಾರಂಗಳಲ್ಲಿ (ASOS) ಎಎಸ್‌ಒಎಸ್‌ನ ಉತ್ಪನ್ನಗಳು ಲಭ್ಯವಾಗುವಂತೆ ಮಾಡಲಿದೆ. ಎಎಸ್‌ಒಎಸ್‌ ಕಂಪನಿಯು ಜಗತ್ತಿನಾದ್ಯಂತ ಯುವ ಪೀಳಿಗೆಯಲ್ಲಿ ಜನಪ್ರಿಯವಾಗಿದ್ದು, 200ಕ್ಕೂ ಅಧಿಕ ಮಾರುಕಟ್ಟೆಗಳಲ್ಲಿ ಕಂಪನಿಯ ಉತ್ಪನ್ನಗಳು ಲಭ್ಯವಿವೆ.

VISTARANEWS.COM


on

ASOS brand products are available at Reliance Retail
Koo

ನವದೆಹಲಿ: ಬ್ರಿಟನ್‌ನ ಪ್ರಮುಖ ಆನ್‌ಲೈನ್‌ ಫ್ಯಾಷನ್‌ ಕಂಪನಿ ಎಎಸ್‌ಒಎಸ್‌ ನ (ಎಸೋಸ್‌) ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡಲು ರಿಲಯನ್ಸ್‌ ರಿಟೇಲ್‌ (Reliance Retail) ಕಂಪನಿಯು ದೀರ್ಘಾವಧಿಯ ಪಾಲುದಾರಿಕೆ ಮಾಡಿಕೊಂಡಿದ್ದು, ಈ ಒಪ್ಪಂದದ ಪ್ರಕಾರ, ರಿಲಯನ್ಸ್‌ ರಿಟೇಲ್‌ ಕಂಪನಿಯು ಭಾರತದಲ್ಲಿ ತನ್ನ ಆನ್‌ಲೈನ್‌ ಮತ್ತು ಆಫ್‌ಲೈನ್‌ ಪ್ಲಾಟ್‌ಫಾರಂಗಳಲ್ಲಿ (ASOS) ಎಎಸ್‌ಒಎಸ್‌ನ ಉತ್ಪನ್ನಗಳು ಲಭ್ಯವಾಗುವಂತೆ ಮಾಡಲಿದೆ.

ಎಎಸ್‌ಒಎಸ್‌ ಕಂಪನಿಯು ಜಗತ್ತಿನಾದ್ಯಂತ ಯುವ ಪೀಳಿಗೆಯಲ್ಲಿ ಜನಪ್ರಿಯವಾಗಿದ್ದು, 200ಕ್ಕೂ ಅಧಿಕ ಮಾರುಕಟ್ಟೆಗಳಲ್ಲಿ ಕಂಪನಿಯ ಉತ್ಪನ್ನಗಳು ಲಭ್ಯವಿವೆ.

ಇದನ್ನೂ ಓದಿ: Udupi News: ಮೂವರು ಸಾಧಕರಿಗೆ ಭಂಡಾರಕೇರಿ ಮಠದ ಪ್ರಶಸ್ತಿ; ಬೆಂಗಳೂರಿನಲ್ಲಿ ಮೇ 20ರಂದು ಪ್ರಶಸ್ತಿ ಪ್ರದಾನ

ಈ ಕುರಿತು ರಿಲಿಯನ್ಸ್‌ ರಿಟೇಲ್‌ ವೆಂಚರ್ಸ್‌ನ ನಿರ್ದೇಶಕಿ ಇಶಾ ಅಂಬಾನಿ ಮಾತನಾಡಿ, ನಮ್ಮ ಫ್ಯಾಷನ್‌ ಕುಟುಂಬಕ್ಕೆ ಎಎಸ್‌ಒಎಸ್‌ ಅನ್ನು ಸ್ವಾಗತಿಸುತ್ತೇವೆ. ಜಾಗತಿಕ ಫ್ಯಾಷನ್‌ ಅನ್ನು ಭಾರತದ ಮಾರುಕಟ್ಟೆಗೆ ತರುವ ನಿಟ್ಟಿನಲ್ಲಿ ಇದೊಂದು ಮಹತ್ವದ ಮೈಲಿಗಲ್ಲು. ಭಾರತದ ರಿಟೇಲ್‌ ಮಾರುಕಟ್ಟೆಯಲ್ಲಿ ನಮಗಿರುವ ಸ್ಥಾನವನ್ನು ಈ ಪಾಲುದಾರಿಕೆಯು ಸೂಚಿಸುತ್ತದೆ. ಅಲ್ಲದೆ, ನಮ್ಮ ಗ್ರಾಹಕರು ಬಯಸುವ ಫ್ಯಾಷನ್‌ ಉತ್ಪನ್ನಗಳನ್ನು ಅವರಿಗೆ ಒದಗಿಸುವ ಖಾತರಿಯನ್ನೂ ನೀಡುತ್ತದೆ ಎಂದು ತಿಳಿಸಿದರು.

ಈ ಬಗ್ಗೆ ಎಎಸ್‌ಒಎಸ್‌ (ASOS) ನ ಸಿಇಒ ಜೋಸ್‌ ಆಂಟೋನಿಯೋ ಮಾತನಾಡಿ, ರಿಲಯನ್ಸ್‌ ರಿಟೇಲ್‌ ಜತೆಗೂಡಿ ನಮ್ಮ ಫ್ಯಾಷನ್‌ ಬ್ರ್ಯಾಂಡ್‌ಗಳಲ್ಲಿ ಕೆಲವೊಂದನ್ನು ನಾವು ಭಾರತದ ಗ್ರಾಹಕರಿಗೆ ನೀಡಲು ಉತ್ಸುಕರಾಗಿದ್ದೇವೆ. ಮುಖ್ಯವಾಗಿ ಜಗತ್ತಿನಲ್ಲಿಯೇ ಬ್ರಿಟಿಷ್‌ ಫ್ಯಾಷನ್‌ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಎಎಸ್‌ಒಎಸ್‌ ವಿನ್ಯಾಸವನ್ನು ನೀಡಲು ಕಾತುರರಾಗಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: Bengaluru News: ವ್ಯಾಸ-ದಾಸ ಸಾಹಿತ್ಯ ಜ್ಞಾನ ಪ್ರಸಾರಕ್ಕೆ ಮಾನ್ಯತೆ ನೀಡಿ; ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ

ಆರ್‌ಐಎಲ್‌ (ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌) ಸಮೂಹದ ಎಲ್ಲಾ ರೀಟೇಲ್‌ ಕಂಪನಿಗಳನ್ನು ಒಳಗೊಂಡಿರುವ ಕಂಪನಿಯೇ ರಿಲಿಯನ್ಸ್‌ ರಿಟೇಲ್‌ ವೆಂಚರ್ಸ್‌ ಲಿಮಿಟೆಡ್‌ (ರಿಲಯನ್ಸ್‌ ರಿಟೇಲ್‌). ರಿಲಯನ್ಸ್‌ ರಿಟೇಲ್‌ 18,836ಕ್ಕೂ ಅಧಿಕ ಮಳಿಗೆಗಳು ಮತ್ತು ಡಿಜಿಟಲ್‌ ಇ-ಕಾಮರ್ಸ್‌ ಮೂಲಕ ಕಾರ್ಯಾಚರಿಸುತ್ತದೆ. ರಿಲಯನ್ಸ್‌ ರಿಟೇಲ್‌ ಕಂಪನಿಯು ತನ್ನ ಹೊಸ ವಾಣಿಜ್ಯ ಯೋಜನೆಯ ಭಾಗವಾಗಿ 30 ಲಕ್ಷಕ್ಕೂ ಅಧಿಕ ವ್ಯಾಪಾರಿಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.

Continue Reading

ಮನಿ-ಗೈಡ್

Money Guide: ಎನ್‌ಪಿಎಸ್‌ಗೆ 15 ವರ್ಷ; ಇಲ್ಲಿದೆ ಯೋಜನೆಯ ಸಂಪೂರ್ಣ ವಿವರ

Money Guide: ದೇಶದ ಜನರಲ್ಲಿನ ಉಳಿತಾಯ ಪ್ರವೃತ್ತಿಯನ್ನು ಉತ್ತೇಜಿಸಲು ಸರ್ಕಾರ ಜಾರಿಗೆ ತಂದ ಯೋಜನೆಗಳಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ ಕೂಡ ಒಂದು. 18ರಿಂದ 70 ವರ್ಷ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಜತೆಗೆ ಇದರಲ್ಲಿ ಹೂಡಿಕೆ ಮಾಡಿದರೆ ಹಲವು ರೀತಿಯ ತೆರಿಗೆ ಪ್ರಯೋಜನಗಳೂ ಲಭ್ಯ. ಇಂತಹ ಅತ್ಯುತ್ತಮ ಯೋಜನೆ ಜಾರಿಗೆ ಬಂದು ಇಂದಿಗೆ 15 ವರ್ಷ ಪೂರ್ಣಗೊಂಡಿದೆ. ಈ ಯೋಜನೆ ಕುರಿತಾದ ಕೆಲವು ಆಸಕ್ತಿದಾಯಕ ಸಂಗತಿಗಳ ವಿವರ ಇಲ್ಲಿದೆ

VISTARANEWS.COM


on

Money Guide
Koo

ಬೆಂಗಳೂರು: ದೇಶದ ಜನರಲ್ಲಿನ ಉಳಿತಾಯ ಪ್ರವೃತ್ತಿಯನ್ನು ಉತ್ತೇಜಿಸಲು ಸರ್ಕಾರ ಜಾರಿಗೆ ತಂದ ಯೋಜನೆಗಳಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಕೂಡ ಒಂದು. 18ರಿಂದ 70 ವರ್ಷ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಜತೆಗೆ ಇದರಲ್ಲಿ ಹೂಡಿಕೆ ಮಾಡಿದರೆ ಹಲವು ರೀತಿಯ ತೆರಿಗೆ ಪ್ರಯೋಜನಗಳೂ ಲಭ್ಯ. ಇಂತಹ ಅತ್ಯುತ್ತಮ ಯೋಜನೆ ಜಾರಿಗೆ ಬಂದು ಇಂದಿಗೆ 15 ವರ್ಷ ಪೂರ್ಣಗೊಂಡಿದೆ. 2009ರ ಮೇ 1ರಂದು ಈ ಯೋಜನೆಯನ್ನು ದೇಶದಲ್ಲಿ ಜಾರಿಗೊಳಿಸಲಾಯಿತು. ಈ ಯೋಜನೆ ಕುರಿತಾದ ಕೆಲವು ಆಸಕ್ತಿದಾಯಕ ಸಂಗತಿಗಳ ವಿವರ ಇಲ್ಲಿದೆ (Money Guide).

ಭಾರತ ಸರ್ಕಾರ 2004ರ ಜನವರಿ 1ರಂದು ಎನ್‌ಪಿಎಸ್‌ ಅನ್ನು ಪರಿಚಯಿಸಿತು ಮತ್ತು ಐದು ವರ್ಷಗಳ ನಂತರ (2009) ಅದನ್ನು ಸಾರ್ವಜನಿಕರಿಗಾಗಿ ಮುಕ್ತಗೊಳಿಸಲಾಯಿತು. ಈ ಯೋಜನೆಯು ಭಾರತದ ನಾಗರಿಕರಿಗೆ ವೃದ್ಧಾಪ್ಯದ ಭದ್ರತೆಯಾಗಿ ಪಿಂಚಣಿ ಮತ್ತು ಹೂಡಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಿಯಂತ್ರಿಸುತ್ತದೆ.

ಯಾರೆಲ್ಲ ಅರ್ಹರು?

ಭಾರತೀಯ ಮತ್ತು ಆನಿವಾಸಿ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೀಡಿಕೆ ಮಾಡಬಹುದಾಗಿದೆ. 18ರಿಂದ 70 ವರ್ಷದವರು ಈ ಯೋಜನೆಗೆ ಅರ್ಹರು. ವೃದ್ಧಾಪ್ಯ ಆದಾಯವನ್ನು ಒದಗಿಸುವುದು, ದೀರ್ಘಾವಧಿಯಲ್ಲಿ ಮಾರುಕಟ್ಟೆ ಆಧಾರಿತ ಆದಾಯ ನೀಡುವುದು ಮತ್ತು ಎಲ್ಲ ನಾಗರಿಕರಿಗೆ ವೃದ್ಧಾಪ್ಯ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸುವುದು ಕೂಡ ಈ ಯೋಜನೆಯ ಉದ್ದೇಶ.

ಎನ್‌ಆರ್‌ಐ ಕೂಡ ಹೂಡಿಕೆ ಮಾಡಬಹುದೆ?

ವಿಶೇಷ ಎಂದರೆ ಆನಿವಾಸಿ ಭಾರತೀಯರು ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಅದಾಗ್ಯೂ ಆರ್‌ಬಿಐ ಮತ್ತು ಫೆಮಾ ಸೂಚಿಸುವ ಷರತ್ತುಗಳು ಅನ್ವಯವಾಗುತ್ತವೆ. ಇನ್ನು ಒಸಿಐ (ಓವರ್‌ಸೀಸ್‌ ಸಿಟಿಜನ್ಸ್ ಆಫ್ ಇಂಡಿಯಾ) ಮತ್ತು ಪಿಐಒ (ಪರ್ಸನ್ ಆಫ್ ಇಂಡಿಯನ್ ಒರಿಜಿನ್) ಕಾರ್ಡ್ ಹೊಂದಿರುವವರು ಈ ಯೋಜನೆಗೆ ಅರ್ಹರಲ್ಲ.

ಎನ್‌ಪಿಎಸ್‌ ಖಾತೆ ತೆರೆಯುವುದು ಹೇಗೆ?

ಆಫ್‌ಲೈನ್‌

  • ನಿಮ್ಮ ಮನೆ ಹತ್ತಿರದ ಪಿಒಪಿ (PoP) ಅಥವಾ ಪೋಸ್ಟ್‌ ಆಫೀಸ್‌ಗೆ ತೆರಳಿ.
  • ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ಡಾಕ್ಯುಮೆಂಟ್‌ ಒದಗಿಸಿ.
  • ಟೈರ್‌ 1 ಖಾತೆಗೆ ಕನಿಷ್ಠ 500 ರೂ. ಹೂಡಿಕೆ ಮಾಡಿ.
  • ಅಪ್ಲಿಕೇಷನ್‌ ಫಾರಂ ಸಲ್ಲಿಸಿ.

ಆನ್‌ಲೈನ್‌

  • ಇಲ್ಲಿ ಕ್ಲಿಕ್‌ ಮಾಡಿ
  • ಹೆಸರು ನೋಂದಾಯಿಸಿ.
  • ಮೊಬೈಲ್‌ ನಂಬರ್‌, ಪ್ಯಾನ್‌ ಕಾರ್ಡ್‌ ನಂಬರ್‌ ಮತ್ತು ಇಮೇಲ್‌ ಐಡಿ ನಮೂದಿಸಿ.
  • ಮೊಬೈಲ್‌ಗೆ ಬಂದ ಒಟಿಪಿ ನಮೂದಿಸಿ.
  • ಅಗತ್ಯ ವಿವರಗಳನ್ನು ಭರ್ತಿ ಮಾಡಿ. ಈಗ ನಿಮಗೆ PRAN (Permanent Retirement Account Number) ಸಂಖ್ಯೆ ದೊರೆಯುತ್ತದೆ. ಇದನ್ನು ಬಳಸಿ ಲಾಗಿನ್‌ ಆಗಬಹುದು.

ಯಾವೆಲ್ಲ ದಾಖಲೆ ಅಗತ್ಯ?

  • ಇತ್ತೀಚಿನ ಭಾವಚಿತ್ರ
  • ಪ್ಯಾನ್‌ ಕಾರ್ಡ್‌
  • ವಿಳಾಸದ ಪುರಾವೆ
  • ಬ್ಯಾಂಕ್‌ ಅಕೌಂಟ್‌ ವಿವರ

ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಸೌಲಭ್ಯ ಸಿಗಲಿದೆ. ಈ ಯೋಜನೆಯಲ್ಲಿ ಗರಿಷ್ಠ 1.5 ಲಕ್ಷ ರೂಪಾಯಿವರೆಗಿನ ಹೂಡಿಕೆಗೆ ತೆರಿಗೆ ವಿನಾಯಿತಿ ಪಡೆಯಬಹುದು.

ಇದನ್ನೂ ಓದಿ: Money Guide: ನಿಮ್ಮ ಎನ್‌ಪಿಎಸ್‌ ಖಾತೆ ಸ್ಥಗಿತಗೊಂಡಿದ್ದರೆ ಚಿಂತಿಸಬೇಡಿ; ಮನೆಯಲ್ಲೇ ಕೂತು ಸಕ್ರಿಯಗೊಳಿಸುವ ವಿಧಾನ ಇಲ್ಲಿದೆ

Continue Reading

ವಾಣಿಜ್ಯ

Startup Investment : ಡ್ರಿಂಕ್​​ಪ್ರೈಮ್​ ವಿಸ್ತರಣಾ ಯೋಜನೆಯಲ್ಲಿ ಎಸ್​​ಐಡಿಬಿಐ ಹಣಕಾಸು ಸಂಸ್ಥೆಯ ಹೂಡಿಕೆ

Startup Investment : ಪ್ರಸ್ತುತ ಅಸ್ತಿತ್ವದಲ್ಲಿರುವ ಹೂಡಿಕೆದಾರರೊಂದಿಗೆ ಎಸ್​ವಿಸಿಎಲ್ , ಡ್ರಿಂಕ್​​ ಪ್ರೈಮ್ ಗೆ ಆರ್ಥಿಕ ಬೆಂಬ ನೀಡುವ ಮೂಲಕ ಬ್ರಾಂಡ್ ನ ಸಾಮರ್ಥ್ಯ ಮತ್ತು ಮಾರುಕಟ್ಟೆ ಮೌಲ್ಯದ ಮೇಲಿನ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ. ಎಸ್ ವಿಸಿಎಲ್ ಮತ್ತು ಅಸ್ತಿತ್ವದಲ್ಲಿರುವ ಹೂಡಿಕೆದಾರರಿಂದ ಮೂಲಕ ಕಾರ್ಯತಂತ್ರದ ಹೂಡಿಕೆಭಾಗವಾಗಿ 3 ಮಿಲಿಯನ್ ಡಾಲರ್​ (25,04,88,900.00 ರೂಪಾಯಿ) ಸಂಗ್ರಹಿಸಲಾಗಿದೆ.

VISTARANEWS.COM


on

Startup Investment
Koo

ಬೆಂಗಳೂರು: ಭಾರತದ 30 ವರ್ಷಗಳಷ್ಟು ಹಳೆಯದಾದ ವಾಟರ್ ಪ್ಯೂರಿಫೈಯರ್ ಉದ್ಯಮವಾಗಿರುವ ಡ್ರಿಂಕ್​​ಪ್ರೈಮ್​ನಲ್ಲಿ (DrinkPrime) ಹೂಡಿಕೆ ನಿರ್ವಹಣಾ ಕಂಪನಿಯಾದ ಎಸ್ಐಡಿಬಿಐ ವೆಂಚರ್ ಕ್ಯಾಪಿಟಲ್ ಲಿಮಿಟೆಡ್ (SVCL) ಹೂಡಿಕೆ ಮಾಡಿದೆ (Startup Investment). ಎಸ್​ವಿಸಿಎಲ್​ ಎಸ್​​ಐಡಿಬಿಐನ (SIDBI) ಸಂಪೂರ್ಣ ಸ್ವಾಮ್ಯದ ಹಣಕಾಸು ಸಂಸ್ಥೆಯಾಗಿದ್ದು ಭಾರತದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ (MSME) ಆರ್ಥಿಕ ಬೆಂಬಲವನ್ನು ಒದಗಿಸುತ್ತದೆ. ಪ್ರಸ್ತುತ ಅಸ್ತಿತ್ವದಲ್ಲಿರುವ ಹೂಡಿಕೆದಾರರೊಂದಿಗೆ ಎಸ್​ವಿಸಿಎಲ್ , ಡ್ರಿಂಕ್​​ ಪ್ರೈಮ್ ಗೆ ಆರ್ಥಿಕ ಬೆಂಬ ನೀಡುವ ಮೂಲಕ ಬ್ರಾಂಡ್ ನ ಸಾಮರ್ಥ್ಯ ಮತ್ತು ಮಾರುಕಟ್ಟೆ ಮೌಲ್ಯದ ಮೇಲಿನ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ. ಎಸ್ ವಿಸಿಎಲ್ ಮತ್ತು ಅಸ್ತಿತ್ವದಲ್ಲಿರುವ ಹೂಡಿಕೆದಾರರಿಂದ ಮೂಲಕ ಕಾರ್ಯತಂತ್ರದ ಹೂಡಿಕೆಭಾಗವಾಗಿ 3 ಮಿಲಿಯನ್ ಡಾಲರ್​ (25,04,88,900.00 ರೂಪಾಯಿ) ಸಂಗ್ರಹಿಸಲಾಗಿದೆ.

“ಎಸ್ಐಡಿಬಿಐ ವೆಂಚರ್ ಕ್ಯಾಪಿಟಲ್ ಲಿಮಿಟೆಡ್ ನಮ್ಮ ದೀರ್ಘಕಾಲೀನ ಹೂಡಿಕೆದಾರರ ಗುಂಪಿಗೆ ಸೇರಲು ನಾವು ಉತ್ಸುಕರಾಗಿದ್ದೇವೆ. ನಮ್ಮ ಮೇಲಿನ ಅವರ ನಂಬಿಕೆಯು ಕುಡಿಯುವ ನೀರಿನ ಉದ್ಯಮದಲ್ಲಿ ಡ್ರಿಂಕ್​ಪ್ರೈಮ್ ನ ಆವಿಷ್ಕಾರಕ್ಕೆ ಲಭಿಸಿದ ಬಲಿಷ್ಠ ಬೆಂಬಲವಾಗಿದೆ. ನಮ್ಮ ಅಸಾಧಾರಣ ಬೆಳವಣಿಗೆಯ ಯಾನದಲ್ಲಿ ನಂಬಿಕೆಯೂ ಆಗಿದೆ. 2021 ರಿಂದ 2023 ರವರೆಗೆ, ನಾವು ಗಮನಾರ್ಹವಾದ 3 ಪಟ್ಟು ಬೆಳವಣಿಗೆ ಸಾಧಿಸಿದ್ದೇವೆ. ಕಾರ್ಯತಂತ್ರದ ಹೂಡಿಕೆಯು ವ್ಯವಹಾರ ವಿಸ್ತರಣೆಗೆ ಅವಕಾಶ ಒದಗಿಸುತ್ತದೆ” ಎಂದು ಡ್ರಿಂಕ್ ಪ್ರೈಮ್ ಸಹ ಸಂಸ್ಥಾಪಕ ಮತ್ತು ಸಿಇಒ ವಿಜೇಂದರ್ ರೆಡ್ಡಿ ಮುತ್ಯಾಲ ಹೇಳಿದರು.

ಎಸ್ ವಿಸಿಎಲ್ ಸಂಸ್ಥೆಯು ಡ್ರಿಂಕ್​​​ ಪ್ರೈಮ್ ನಲ್ಲಿ ಮಾಡಿರುವ ಹೂಡಿಕೆಯು ಉದ್ಯಮಶೀಲತೆಯನ್ನು ಉತ್ತೇಜಿಸುವ ಮತ್ತು ಭಾರತದಾದ್ಯಂತ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿರುವ ಧ್ಯೇಯವನ್ನು ಹೊಂದಿದೆ. ಈ ಪಾಲುದಾರಿಕೆಯು ನಿರ್ಣಾಯಕ ಸಾಮಾಜಿಕ ಸವಾಲುಗಳನ್ನು ಪರಿಹರಿಸುವ ಮತ್ತು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುವ ವಿನೂತನ ಸ್ಟಾರ್ಟ್​​ಅಪ್​ಗಳನ್ನು ಬೆಂಬಲಿಸುವ ಬದ್ಧತೆಯ ಪ್ರತೀಕವಾಗಿದೆ ಎಂದು ವಿಜೇಂದರ್ ರೆಡ್ಡಿ ಅವು ಹೇಳಿದರು.

“ನಾವು ಡ್ರಿಂಕ್​​ ಪ್ರೈಮ್ ತಂಡದೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದೇವೆ ಮತ್ತು ಅದನ್ನು ಭಾರತದ ಪ್ರಮುಖ ವಾಟರ್ ಟೆಕ್ ಬ್ರಾಂಡ್ ಆಗಿ ಮಾಡಲು ಪ್ರಯತ್ನಿಸುತ್ತೇವೆ, ಅದೇ ಸಮಯದಲ್ಲಿ ಅದರ ನಾವಿನ್ಯ ಕೊಡುಗೆಗಳನ್ನು ಜಗತ್ತಿಗೆ ಪ್ರಸ್ತುತಪಡಿಸಲಿದ್ದೇವೆ. ಎಲ್ಲರಿಗೂ ಶುದ್ಧ, ಸುರಕ್ಷಿತ ಮತ್ತು ಆರೋಗ್ಯಕರ ಕುಡಿಯುವ ನೀರನ್ನು ಒದಗಿಸುವ ಧ್ಯೇಯವನ್ನು ಡ್ರಿಂಕ್ ಪ್ರೈಮ್ ವಿಸ್ತರಿಸಲಿದೆ ಮತ್ತು ಆ ಹೊಣೆಗಾರಿಕೆಯನ್ನು ತೆಗೆದುಕೊಳ್ಳುತ್ತದೆ ಎಂದು ಖಚಿತಪಡಿಸಿಕೊಂಡಿದ್ದೆವೆ. ನಾವು ಯೋಜನೆಯನ್ನು ನಂಬುತ್ತೇವೆ ಮತ್ತು ವರ್ಷಗಳಲ್ಲಿ ಡ್ರಿಂಕ್​ ಪ್ರೈಮ್​ ಬೆಳವಣಿಗೆ ಗಮನಿಸಿದ್ದೇವೆ. ಈಗ, ನಾವು ಡ್ರಿಂಕ್ ಪ್ರೈಮ್ ನ ತ್ವರಿತ ಬೆಳವಣಿಗೆಯನ್ನು ಎದುರು ನೋಡುತ್ತಿದ್ದೇವೆ ” ಎಂದು ಎಸ್ ಐಡಿಬಿಐ ವೆಂಚರ್ ಕ್ಯಾಪಿಟಲ್ ಲಿಮಿಟೆಡ್ ನ ಹಿರಿಯ ಫಂಡ್ ಮ್ಯಾನೇಜರ್ ದೇಬ್ರಾಜ್ ಬ್ಯಾನರ್ಜಿ ಹೇಳಿದರು.

ಇದನ್ನೂ ಓದಿ: Gold Rate Today: ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ, ಮತ್ತೆ ಚಿನ್ನದ ಮಾರುಕಟ್ಟೆಯಲ್ಲಿ ತುರುಸು; ದರಗಳು ಹೀಗಿವೆ

ಹೂಡಿಕೆಯನ್ನು ಬಳಸಿಕೊಳ್ಳುವ ಬಗ್ಗೆ ಮಾತನಾಡಿದ ಡ್ರಿಂಕ್ ಪ್ರೈಮ್ ನ ಸಹ-ಸಂಸ್ಥಾಪಕ ಮತ್ತು ಸಿಒಒ ಮಾನಸ್ ರಂಜನ್ ಹೋಟಾ, “ಈ ಕಾರ್ಯತಂತ್ರದ ಹೂಡಿಕೆಯು ವಿಸ್ತರಣಾ ಯೋಜನೆಗಳ ವೇಗವನ್ನು ದ್ವಿಗುಣಗೊಳಿಸಲು, ನಮ್ಮ ನವೀನ ಉತ್ಪನ್ನಗಳ ಪೋರ್ಟ್ ಫೋಲಿಯೊವನ್ನು ಅಭಿವೃದ್ಧಿಪಡಿಸಲು ನೆರವಾಗಲಿದೆ. ಅದೇ ರೀತಿ ನಮ್ಮ ಉದ್ಯಮದ ಪ್ರಮುಖ ಮತ್ತು ಉದ್ಯಮದ ಜೀವಾಳವಾಗಿರುವ ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ವೈಶಿಷ್ಟ್ಯವನ್ನು ಬಲಪಡಿಸಲು ಡ್ರಿಂಕ್ ಪ್ರೈಮ್ ಗೆ ವಿಪುಲ ಅವಕಾಶ ನೀಡುತ್ತದೆ” ಎಂದು ಹೇಳಿದರು.

ಡ್ರಿಂಕ್ ಪ್ರೈಮ್ ನಲ್ಲಿ ದೀರ್ಘಕಾಲೀನ ಹೂಡಿಕೆದಾರರು ಹೊಂದಿರುವ ನಂಬಿಕೆ ಮತ್ತು ಸ್ಟಾರ್ಟ್ ಅಪ್ ನ ಸಾಮರ್ಥ್ಯ ಅಪೂರ್ವವಾಗಿದೆ. “ಡ್ರಿಂಕ್ ಪ್ರೈಮ್ ಕಳೆದ ಎಂಟು ವರ್ಷಗಳಿಂದ ಭಾರತದ ನೀರು ಶುದ್ಧೀಕರಣ ಮಾರುಕಟ್ಟೆಯನ್ನು ಆಳುತ್ತಿದೆ ದಶಕಗಳಿಂದ ಸ್ಥಗಿತಗೊಂಡಿದ್ದ ಉದ್ಯಮದಲ್ಲಿ ಅವರು ಅನ್ವೇಷಣೆ, ಆವಿಷ್ಕಾರ ಮತ್ತು ಬದಲಾವಣೆಯನ್ನು ಸೃಷ್ಟಿಸುವುದನ್ನು ನಾನು ನೋಡಿದ್ದೇನೆ. ಅದಕ್ಕಾಗಿಯೇ ನಾನು ಡ್ರಿಂಕ್​ಪ್ರೈಮ್​ನಲ್ಲಿ ಮರುಹೂಡಿಕೆ ಮಾಡಲು ನಿರ್ಧರಿಸಿದೆ ಎಂದು ಪಾಲಿಕ್ಯಾಬ್ ಇಂಡಿಯಾ ಲಿಮಿಟೆಡ್​​ನ ಕಾರ್ಯನಿರ್ವಾಹಕ ನಿರ್ದೇಶಕ ಭರತ್ ಜೈಸಿಂಘಾನಿ ಹೇಳಿದ್ದಾರೆ.

ಡ್ರಿಂಕ್ ಪ್ರೈಮ್ ಪ್ರಸ್ತುತ ಭಾರತದ ಏಳು ನಗರಗಳಲ್ಲಿ 2 ಲಕ್ಷಕ್ಕೂ ಹೆಚ್ಚು + ಕುಟುಂಬಗಳಿಗೆ ಶುದ್ಧ, ಸುರಕ್ಷಿತ ಮತ್ತು ಆರೋಗ್ಯಕರ ಕುಡಿಯುವ ನೀರಿನ ಲಭ್ಯತೆ ನೀಡಿದೆ. ಎಲ್ಲರಿಗೂ ಸುರಕ್ಷಿತ ಕುಡಿಯುವ ನೀರು ಲಭ್ಯವಾಗುವಂತೆ ಮಾಡುವ ತನ್ನ ಧ್ಯೇಯಕ್ಕೆ ಹತ್ತಿರವಾಗಲು ವಿಸ್ತರಣಾ ಯೋಜನೆಗಳು ಜಾರಿಯಲ್ಲಿರುವುದರಿಂದ, ಡ್ರಿಂಕ್ ಪ್ರೈಮ್ ತನ್ನ ಎರಡನೇ ಹಂತದ ನಿಧಿಸಂಗ್ರಹಕ್ಕೆ ಸಜ್ಜಾಗುತ್ತಿದೆ.

Continue Reading
Advertisement
These foods are really what our body needs in summer
ಆರೋಗ್ಯ17 mins ago

Health Tips in Kannada: ಬೇಸಿಗೆಯಲ್ಲಿ ನಿಜಕ್ಕೂ ನಮ್ಮ ದೇಹಕ್ಕೆ ಬೇಕಾಗಿರುವುದು ಈ ಆಹಾರಗಳು

Lok Sabha Election 2024
ದೇಶ27 mins ago

Lok Sabha Election 2024: ಬಿಜೆಪಿಯ 400+ ಲೆಕ್ಕಾಚಾರ ಉಲ್ಟಾ? ಚುನಾವಣೆ ಹೊತ್ತಲ್ಲೇ ಪಕ್ಷಕ್ಕೆ ಬಿಗ್‌ ಶಾಕ್‌!

Medical Negligence
ದೇಶ29 mins ago

ವೈದ್ಯರ ಸಲಹೆಯಂತೆ 5 ದಿನದ ಹಸುಳೆಯನ್ನು ಬಿಸಿಲಿನಲ್ಲಿ ಮಲಗಿಸಿದರು; ಬೆಂದು ಕರಟಿಹೋಯ್ತು ಕಂದಮ್ಮನ ಜೀವ

anjali murder case girish
ಕ್ರೈಂ41 mins ago

Anjali Murder Case: ಅಂಜಲಿ ಹಂತಕನಿಗೆ ಸಾರ್ವಜನಿಕರಿಂದ ಗೂಸಾ, ಬಂಧನ

techie wife udr case
ಕ್ರೈಂ1 hour ago

UDR Case: ಟೆಕ್ಕಿ ಪತ್ನಿಯ ಅನುಮಾನಾಸ್ಪದ ಸಾವು

Karnataka weather Forecast
ಮಳೆ2 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

World Hypertension Day Today is Global Blood Pressure Day
ಆರೋಗ್ಯ4 hours ago

World Hypertension Day: ಇಂದು ಜಾಗತಿಕ ರಕ್ತದೊತ್ತಡ ದಿನ; ಈ ಸಮಸ್ಯೆಯ ಅರಿವು ನಿಮಗೆಷ್ಟಿದೆ?

Pakistan
ಸಂಪಾದಕೀಯ9 hours ago

ವಿಸ್ತಾರ ಸಂಪಾದಕೀಯ: ಒಪ್ಪಿಕೊಂಡರೆ ಸಾಲದು, ಪಾಕ್‌ ತನ್ನನ್ನು ಸರಿಪಡಿಸಿಕೊಳ್ಳಲಿ

Kapil Sibal
ದೇಶ9 hours ago

Kapil Sibal: ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷರಾಗಿ ಕಪಿಲ್‌ ಸಿಬಲ್‌ ಆಯ್ಕೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ16 hours ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ18 hours ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು22 hours ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌