Human trafficking Case: ದೇಶಾದ್ಯಂತ NIA ರೇಡ್‌; ಮಾನವ ಕಳ್ಳಸಾಗಣೆ ಜಾಲ ಬಯಲು - Vistara News

ದೇಶ

Human trafficking Case: ದೇಶಾದ್ಯಂತ NIA ರೇಡ್‌; ಮಾನವ ಕಳ್ಳಸಾಗಣೆ ಜಾಲ ಬಯಲು

Human trafficking Case:ಮಹಾರಾಷ್ಟ್ರ, ಉತ್ತರ ಪ್ರದೇಶ, ಬಿಹಾರ, ಗುಜರಾತ್, ದೆಹಲಿ, ಹರಿಯಾಣ, ಪಂಜಾಬ್ ಮತ್ತು ಚಂಡೀಗಢಯ ಒಟ್ಟು 15 ಸ್ಥಳಗಳಲ್ಲಿ ದಾಳಿ ನಡೆಸಿದ ಎನ್‌ಐಎ ಐವರನ್ನು ಬಂಧಿಸಿದೆ ಬಂಧಿತ ಆರೋಪಿಗಳನ್ನು ವಡೋದರದ ಮನೀಶ್ ಹಿಂಗು, ಗೋಪಾಲ್‌ಗಂಜ್‌ನ ಪಹ್ಲಾದ್ ಸಿಂಗ್, ನೈಋತ್ಯ ದೆಹಲಿಯ ನಬಿಯಾಲಂ ರೇ, ಗುರುಗ್ರಾಮದ ಬಲ್ವಂತ್ ಕಟಾರಿಯಾ ಮತ್ತು ಚಂಡೀಗಢದ ಸರ್ತಾಜ್ ಸಿಂಗ್ ಎಂದು ಗುರುತಿಸಲಾಗಿದೆ. ಇನ್ನು ಎನ್‌ಐಎ ರಾಜ್ಯ ಪೊಲೀಸ್‌ ಮತ್ತು ಕೇಂದ್ರೀಯ ಗುಪ್ತಚರ ಇಲಾಖೆ ಜೊತೆಗೂಡಿ ಈ ರೇಡ್‌ ನಡೆಸಿದೆ.

VISTARANEWS.COM


on

Human trafficking
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಳಿ ನಡೆಸಿದ್ದು, ಭಾರೀ ಮಾನವ ಕಳ್ಳಸಾಗಣೆ(Human trafficking Case) ಜಾಲವನ್ನು ಬೇಧಿಸಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಐವರನ್ನು ಅರೆಸ್ಟ್‌ ಮಾಡಿದ್ದಾರೆ. ಈ ಆರೋಪಿಗಳು ಕೆಲಸ ಕೊಡಿಸುವುದಾಗಿ ನಂಬಿಸಿ ಭಾರತೀಯ ಯುವಕರನ್ನು ವಿದೇಶಕ್ಕೆ ಕಳ್ಳಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.

15 ಸ್ಥಳಗಳಲ್ಲಿ ಶೋಧ ಕಾರ್ಯ

ಮಹಾರಾಷ್ಟ್ರ, ಉತ್ತರ ಪ್ರದೇಶ, ಬಿಹಾರ, ಗುಜರಾತ್, ದೆಹಲಿ, ಹರಿಯಾಣ, ಪಂಜಾಬ್ ಮತ್ತು ಚಂಡೀಗಢಯ ಒಟ್ಟು 15 ಸ್ಥಳಗಳಲ್ಲಿ ದಾಳಿ ನಡೆಸಿದ ಎನ್‌ಐಎ ಐವರನ್ನು ಬಂಧಿಸಿದೆ ಬಂಧಿತ ಆರೋಪಿಗಳನ್ನು ವಡೋದರದ ಮನೀಶ್ ಹಿಂಗು, ಗೋಪಾಲ್‌ಗಂಜ್‌ನ ಪಹ್ಲಾದ್ ಸಿಂಗ್, ನೈಋತ್ಯ ದೆಹಲಿಯ ನಬಿಯಾಲಂ ರೇ, ಗುರುಗ್ರಾಮದ ಬಲ್ವಂತ್ ಕಟಾರಿಯಾ ಮತ್ತು ಚಂಡೀಗಢದ ಸರ್ತಾಜ್ ಸಿಂಗ್ ಎಂದು ಗುರುತಿಸಲಾಗಿದೆ. ಇನ್ನು ಎನ್‌ಐಎ ರಾಜ್ಯ ಪೊಲೀಸ್‌ ಮತ್ತು ಕೇಂದ್ರೀಯ ಗುಪ್ತಚರ ಇಲಾಖೆ ಜೊತೆಗೂಡಿ ಈ ರೇಡ್‌ ನಡೆಸಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಂಟು FIR ದಾಖಲಾಗಿವೆ

ಎನ್‌ಐಎ ತನಿಖೆಯಿಂದ ಆರೋಪಿಗಳು ಕಾನೂನುಬದ್ಧ ಉದ್ಯೋಗದ ಸುಳ್ಳು ಭರವಸೆಯ ಮೇಲೆ ಭಾರತೀಯ ಯುವಕರನ್ನು ವಿದೇಶಿ ದೇಶಗಳಿಗೆ ಆಮಿಷವೊಡ್ಡುವ ಮತ್ತು ಕಳ್ಳಸಾಗಣೆ ಮಾಡುವ ಸಂಘಟಿತ ಕಳ್ಳಸಾಗಣೆ ಸಿಂಡಿಕೇಟ್‌ನಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. “ಯುವಕರು ಲಾವೋಸ್, ಗೋಲ್ಡನ್ ಟ್ರಯಾಂಗಲ್ ಸ್ಪೆಷಲ್ ಎಕನಾಮಿಕ್ ಝೋನ್ (SEZ), ಮತ್ತು ಕಾಂಬೋಡಿಯಾದ ಇತರ ಸ್ಥಳಗಳಲ್ಲಿ ನಕಲಿ ಕಾಲ್ ಸೆಂಟರ್‌ಗಳಲ್ಲಿ ಕೆಲಸ ಮಾಡಲು ಬಲವಂತ ಮಾಡಲಾಗುತ್ತದೆ. ಈ ಕಾಲ್‌ ಸೆಂಟರ್‌ ಮುಖ್ಯವಾಗಿ ವಿದೇಶಿ ಪ್ರಜೆಗಳಿಂದ ನಿಯಂತ್ರಿಸಲ್ಪಡುತ್ತದೆ ಎಂದು ಎನ್‌ಐಎ ಹೇಳಿದೆ.

ಕೆಲವು ವಾರಗಳ ಹಿಂದೆ ಕೇರಳದಲ್ಲೂ ಇಂತಹದ್ದೇ ಒಂದು ಜಾಲವನ್ನು ಸಿಬಿಐ ಬಯಲಿಗೆಳೆದಿತ್ತು. ಯುದ್ಧ ಪೀಡಿತ ರಷ್ಯಾ ಮತ್ತು ಉಕ್ರೇನ್‌(Russia-Ukraine War)ಗೆ ಮಾನವ ಕಳ್ಳಸಾಗಾಟ(Human trafficking) ಮಾಡುತ್ತಿದ್ದ ಕೇರಳದ ತಿರುವನಂತಪುರಂ ಮೂಲದ ಇಬ್ಬರನ್ನು ಕೇಂದ್ರೀಯ ತನಿಖಾ ಸಂಸ್ಥೆ(CBI) ಬಂಧಿಸಿತ್ತು. ಟ್ರಾವೆಲ್‌ ಏಜೆಂಟ್‌ಗಳ ಮೋಸದಾಟಕ್ಕೆ ಬಲಿಯಾಗಿ ವಿದೇಶಕ್ಕೆ ಹೋಗಿ ಯುವಕರು ಸಂಕಷ್ಟ ಎದುರಿಸುತ್ತಿರುವ ಘಟನೆಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಟ್ರಾವೆಲ್‌ ಏಕೆಂಟ್‌ಗಳ ಮೇಲೆ ಕಣ್ಣಿಟ್ಟ ಸಿಬಿಐಗೆ ಈ ದಂಧೆ ಬೆಳಕಿಗೆ ಬಂದಿತ್ತು.

ಈ ಟ್ರಾವೆಲ್‌ ಏಜೆಂಟ್‌ಗಳು ರಷ್ಯಾದಲ್ಲಿ ಕೆಲಸ ಕೊಡಿಸುವುದಾಗ ಭಾರತೀಯ ಯುವಕರನ್ನು ನಂಬಿಸಿ, ಅಲ್ಲಿಗೆ ಕಳುಹಿಸಿ ಅವರ ಪಾಸ್‌ಪೋರ್ಟ್‌ಗಳನ್ನು ಕಿತ್ತುಕೊಂಡು ಯುದ್ಧ ಪೀಡಿತ ಪ್ರದೇಶಕ್ಕೆ ಕಳಿಸುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ 17 ವಿಸಾ ಕಂಪನಿಗಳು ಹಾಗೂ ಅದರ ಮಾಲಕರು, ಏಜೆಂಟ್‌ಗಳ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿದೆ. ಅವರ ವಿರುದ್ಧ ಸಂಚು, ವಂಚನೆ ಮತ್ತು ಮಾನವ ಕಳ್ಳಸಾಗಣೆ ಪ್ರಕರಣಗಳನ್ನು ದಾಖಲಿಸಲಾಗಿದೆ.

ಏಜೆಂಟ್‌ಗಳ ಮೂಲಕ ಭಾರತೀಯ ಯುವಕರನ್ನು ರಷ್ಯಾ ಸೇನೆ, ಭದ್ರತಾ ಸಿಬ್ಬಂದಿ ಅಥವಾ ಇತರೆ ಕ್ಷೇತ್ರಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ರಷ್ಯಾಗೆ ಕಳುಹಿಸಿಕೊಡಲಾಗುತ್ತದೆ. ಸಂತ್ರಸ್ತರಿಂದ ಇದಕ್ಕಾಗಿ ಏಜೆಂಟ್‌ಗಳು ಸ್ವಲ್ಪ ಹಣವನ್ನೂ ಪಡೆಯುತ್ತಾರೆ. ಅಲ್ಲಿ ಕಾಲಿಟ್ಟೊಡನೇ ಅವರ ಪಾಸ್‌ಪೋರ್ಟ್‌ ಕಿತ್ತುಕೊಂಡು ರಷ್ಯಾ ಸೇನೆಗೆ ಒತ್ತಾಯಪೂರ್ವಕವಾಗಿ ಸೇರಿಸಲಾಗುತ್ತದೆ. ಅಲ್ಲಿ ಅವರಿಗೆ ಯುದ್ಧ ತರಬೇತಿ ನೀಡಿ ಅಲ್ಲಿಂದ ಅವರನ್ನು ಯುದ್ಧ ಪೀಡಿತ ಪ್ರದೇಶಗಳಿಗೆ ಕಳಿಸುತ್ತಾರೆ.

ಇದನ್ನೂ ಓದಿ:Deepfake Case: ವಿದ್ಯಾರ್ಥಿನಿಯ ಡೀಪ್‌ ಫೇಕ್‌ ಫೋಟೋ ಸೃಷ್ಟಿ ಮಾಡಿದ ಅದೇ ಶಾಲೆಯ 2 ಹುಡುಗರು ಡಿಬಾರ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Highest Collection Movie: ಅತೀ ಹೆಚ್ಚು ಗಳಿಕೆ ದಾಖಲಿಸಿದ ಭಾರತದ ಟಾಪ್‌ 10 ಸಿನಿಮಾಗಳಿವು

Highest Collection Movie: ಭಾರತೀಯ ಸಿನಿಮಾ (Indian Movies) ರಂಗದಲ್ಲಿ ಕೆಲವು ಚಿತ್ರಗಳು ಗಳಿಕೆಯಲ್ಲಿ ವಿಶ್ವ ದಾಖಲೆಯನ್ನೇ ಮಾಡಿದೆ. ಅದರಲ್ಲಿ ಅತಿ ಹೆಚ್ಚು ಗಳಿಕೆಯನ್ನು ಮಾಡಿ ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆ ಬರೆದಿರುವ ಹತ್ತು ಸಿನಿಮಾಗಳನ್ನು ಇಂದಿಗೂ ಹಲವು ಮಂದಿ ಪದೇ ಪದೇ ನೋಡುತ್ತಿರುತ್ತಾರೆ. ಆ ಚಿತ್ರಗಳು ಯಾವುದು, ಗಳಿಕೆ ಎಷ್ಟಾಗಿತ್ತು ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Highest Collection Movie
Koo

ಭಾರತೀಯ ಸಿನಿಮಾ (Indian Movies) ರಂಗದಲ್ಲಿ ಬಾಲಿವುಡ್ (Highest Collection Movie) ದಾಖಲೆಗಳು ನಿರಂತರವಾಗಿವೆ. ಹಲವಾರು ಚಿತ್ರಗಳು ಸಾರ್ವಕಾಲಿಕವಾಗಿ ಅತಿ ಹೆಚ್ಚು ಗಳಿಕೆಯನ್ನು ಪಡೆದಿವೆ. ದಂಗಲ್‌ (Dangal), ಜವಾನ್ (Jawan), ಪಠಾಣ್ (Pathaan), ಬಜರಂಗಿ ಭಾಯಿಜಾನ್ (Bajrangi Bhaijaan), ಸೀಕ್ರೆಟ್ ಸೂಪರ್‌ಸ್ಟಾರ್ (Secret Superstar), ಪಿಕೆ (PK) ಈ ಚಿತ್ರಗಳು ತೆರೆಗೆ ಬಂದು ಹತ್ತು ವರ್ಷಗಳೇ ಕಳೆದರೂ ಇಂದಿಗೂ ಬಹುತೇಕ ಮಂದಿಯ ಮೆಚ್ಚಿನ ಚಿತ್ರವಾಗಿ ಉಳಿದಿದೆ.

ಭಾರತೀಯ ಸಿನಿಮಾ ರಂಗದಲ್ಲಿ ಕೆಲವು ಚಿತ್ರಗಳು ಗಳಿಕೆಯಲ್ಲಿ ವಿಶ್ವ ದಾಖಲೆಯನ್ನೇ ಮಾಡಿದೆ. ಅದರಲ್ಲಿ ಅತಿ ಹೆಚ್ಚು ಗಳಿಕೆಯನ್ನು ಮಾಡಿ ಗಲ್ಲಾ ಪೆಟ್ಟಿಗೆಯಲ್ಲಿ (box office) ದಾಖಲೆ ಬರೆದಿರುವ ಹತ್ತು ಸಿನಿಮಾಗಳನ್ನು ಇಂದಿಗೂ ಹಲವು ಮಂದಿ ಪದೇ ಪದೇ ನೋಡುತ್ತಿರುತ್ತಾರೆ. ಆ ಚಿತ್ರಗಳು ಯಾವುದು, ಗಳಿಕೆ ಎಷ್ಟಾಗಿತ್ತು ಎನ್ನುವ ಮಾಹಿತಿ ಇಲ್ಲಿದೆ.

1. ದಂಗಲ್

ಕುಸ್ತಿ ಪಟುಗಳಾದ ಗೀತಾ ಫೋಗಟ್ ಮತ್ತು ಬಬಿತಾ ಫೋಗಟ್ ಅವರ ಜೀವನಾಧಾರಿತ ಚಿತ್ರದಲ್ಲಿ ಮಹಾವೀರ್ ಸಿಂಗ್ ಪಾತ್ರಧಾರಿಯಾಗಿ ಆಮೀರ್ ಖಾನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. 2016ರಲ್ಲಿ ತೆರೆಗೆ ಬಂದ ಈ ಚಿತ್ರ 30 ಕೋಟಿ ರೂ. ಬಜೆಟ್‌ನದ್ದಾಗಿದ್ದು, ವಿಶ್ವಾದ್ಯಂತ ಗಲ್ಲಾ ಪೆಟ್ಟಿಗೆಯಲ್ಲಿ 2,024 ಕೋಟಿ ರೂ. ಗಳಿಸಿ ದಾಖಲೆ ಬರೆದು ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಆದಾಯಗಳಿಸಿದ ಸಿನೆಮಾ ಎಂಬ ಖ್ಯಾತಿಯನ್ನು ಪಡೆದಿದೆ. ಅದರಲ್ಲೂ ಚೀನಾದಲ್ಲಿ ಈ ಸಿನಿಮಾ ಅತಿ ಹೆಚ್ಚು ಆದಾಯವನ್ನು ಗಳಿಸಿದ ಅನ್ಯ ಭಾಷೆಯ ಮೂರನೇ ಸಿನಿಮಾ ಇದು ಎನ್ನುವ ಖ್ಯಾತಿಯೂ ʼದಂಗಲ್ʼ ಚಿತ್ರದ್ದಾಗಿದೆ.


2. ಬಾಹುಬಲಿ 2

ಪ್ರಭಾಸ್ ಅಭಿನಯದ ‘ಬಾಹುಬಲಿ 2’ ಚಿತ್ರ 2012ರಲ್ಲಿ ತೆರೆಗೆ ಬಂದಿದ್ದು, ಎಸ್.ಎಸ್. ರಾಜಮೌಳಿ ಮತ್ತು ವಿ. ವಿಜಯೇಂದ್ರ ಪ್ರಸಾದ್ ಬರೆದು ನಿರ್ದೇಶಿಸಿದ್ದಾರೆ. 250 ಕೋಟಿ ರೂ. ಬಜೆಟ್ ನ ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ 1,810.60 ಕೋಟಿ ರೂ. ಆದಾಯ ಗಳಿಸಿ ದಾಖಲೆ ಬರೆದಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯ ಗಳಿಸಿರುವ ಚಿತ್ರ ಎಂಬ ಖ್ಯಾತಿ ಈ ಸಿನೆಮಾದ್ದಾಗಿದೆ. ಚಿತ್ರ ಬಿಡುಗಡೆಯಾದ ಮೊದಲ ಆರು ದಿನದಲ್ಲಿ 789 ಕೋಟಿ ರೂ. ಗಳಿಸಿರುವುದು ಮಾತ್ರವಲ್ಲ 10 ದಿನದಲ್ಲಿ 1 ಸಾವಿರ ಕೋಟಿ ರೂ. ಆದಾಯ ಪಡೆದ ಸಿನೆಮಾ ಇದಾಗಿದೆ.


3. ಆರ್ ಆರ್ ಆರ್

ರಾಮ್ ಚರಣ್ ಮತ್ತು ಜ್ಯೂ. ಎನ್ ಟಿ ಆರ್ ಅಭಿನಯದ ಆರ್ ಆರ್ ಆರ್ ಚಿತ್ರ 2022ರಲ್ಲಿ ತೆರೆಗೆ ಬಂದಿದ್ದು, 550 ಕೋಟಿ ರೂ. ಬಜೆಟ್ ನದ್ದಾಗಿದೆ. ಅತ್ಯಂತ ದುಬಾರಿ ಖರ್ಚು ಮಾಡಿ ನಿರ್ಮಿಸಿರುವ ಈ ಚಿತ್ರ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ 405.9 ಕೋಟಿ ರೂ. ಗಳಿಸಿದೆ. ವಿಶ್ವದಾದ್ಯಂತ 1,387.26 ಕೋಟಿ ರೂ. ಆದಾಯ ಗಳಿಸಿದೆ. ಭಾರತದಲ್ಲಿ ಮೂರನೇ ಅತಿ ಹೆಚ್ಚು ಆದಾಯ ಗಳಿಸಿದ ಚಿತ್ರವಾಗಿ ಮಾತ್ರವಲ್ಲ ತೆಲುಗಿನಲ್ಲಿ ಎರಡನೇ ಅತಿ ಹೆಚ್ಚು ಆದಾಯಗಳಿಸಿರುವ ಚಿತ್ರವಾಗಿ ಗುರುತಿಸಿಕೊಂಡಿದೆ.


4. ಕೆಜಿಎಫ್ ಚಾಪ್ಟರ್ 2

2022ರಲ್ಲಿ ತೆರೆಗೆ ಬಂದ ಯಶ್ ಅಭಿನಯದ ಕನ್ನಡ ಚಿತ್ರ ಕೆಜಿಎಫ್ ಚಾಪ್ಟರ್ 2 ಅನ್ನು ಪ್ರಶಾಂತ್ ನೀಲ್ ಅವರು ನಿರ್ದೇಶಿಸಿದ್ದಾರೆ. ವಿಜಯ ಕಿರಗಂದೂರ್ ನಿರ್ಮಿಸಿದ್ದಾರೆ.

100 ಕೋಟಿ ಬಜೆಟ್‌ನ ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ 1,250 ಕೋಟಿ ರೂ. ಆದಾಯ ಗಳಿಸಿದೆ. ವಿಶ್ವದಲ್ಲಿ (ಭಾರತೀಯ ಚಿತ್ರ) ನಾಲ್ಕನೇ ಹಾಗೂ ಭಾರತದಲ್ಲಿ ಎರಡನೇ ಅತಿ ಹೆಚ್ಚು ಆದಾಯ ಗಳಿಸಿರುವ ಚಿತ್ರವಾಗಿ ಇದು ಗುರುತಿಸಿಕೊಂಡಿದೆ.

5. ಜವಾನ್

ಶಾರುಖ್ ಖಾನ್ ಅಭಿನಯದ ‘ಜವಾನ್’ ಚಿತ್ರ 2023ರಲ್ಲಿ ತೆರೆಗೆ ಬಂದಿದ್ದು, 1,148.32 ಕೋಟಿ ರೂ. ಆದಾಯ ಗಳಿಸಿದೆ. 300 ಕೋಟಿ ರೂ. ಬಜೆಟ್‌ನ ಈ ಚಿತ್ರದಲ್ಲಿ ನಯನತಾರಾ, ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರ ಕೂಡ ಕಾಣಿಸಿಕೊಂಡಿದ್ದಾರೆ.

ಹಿಂದಿ ಭಾಷೆಯಲ್ಲಿ ಎರಡನೇ ಅತಿ ಹೆಚ್ಚು ಆದಾಯ ಗಳಿಸಿರುವ ಚಿತ್ರವಾಗಿ ಇದು ಗುರುತಿಸಿಕೊಂಡಿದ್ದು, ಭಾರತೀಯ ಸಿನಿಮಾದಲ್ಲಿ ಐದನೇ ಸ್ಥಾನ ಪಡೆದಿದೆ.


6. ಪಠಾಣ್

ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿರುವ ಚಿತ್ರ ʼಪಠಾಣ್ʼ ವಿಶ್ವದಾದ್ಯಂತ 1,050.30 ಕೋಟಿ ರೂ. ಆದಾಯ ಗಳಿಸಿದೆ. ಶಾರುಖ್ ಖಾನ್ ಅಭಿನಯದ ಈ ಚಿತ್ರ ಗಳಿಕೆಯಲ್ಲಿ ಹಿಂದಿ ಭಾಷೆಯಲ್ಲಿ ಮೂರನೇ ಸ್ಥಾನ ಹಾಗೂ ಭಾರತೀಯ ಸಿನಿಮಾ ರಂಗದಲ್ಲಿ ಆರನೇ ಸ್ಥಾನವನ್ನು ಗಳಿಸಿದೆ. 240 ಕೋಟಿ ರೂ. ಬಜೆಟ್ ನ ಚಿತ್ರ ಇದಾಗಿದೆ.


7. ಬಜರಂಗಿ ಭಾಯಿಜಾನ್

ಭಾರತದಾದ್ಯಂತ ಬಾಯಿಜಾನ್ ಎಂದೇ ಕರೆಯಲ್ಪಡುವ ಸಲ್ಮಾನ್ ಖಾನ್, ಕರೀನಾ ಕಪೂರ್ ಅಭಿನಯದ ಈ ಚಿತ್ರ 2015ರಲ್ಲಿ ತೆರೆಗೆ ಬಂದಿದ್ದು, ಕಬೀರ್ ಖಾನ್ ನಿರ್ದೇಶಿಸಿದ್ದಾರೆ. ವಿಶ್ವದಾದ್ಯಂತ 969 ಕೋಟಿ ರೂ. ಆದಾಯವನ್ನು ಈ ಚಿತ್ರ ಗಳಿಸಿದ್ದು, ಅತಿ ಹೆಚ್ಚು ಆದಾಯ ಗಳಿಸಿದ ಭಾರತದ 7ನೇ ಚಿತ್ರ ಹಾಗೂ ಹಿಂದಿ ಭಾಷೆಯ 4ನೇ ಚಿತ್ರವಾಗಿ ಗುರುತಿಸಿಕೊಂಡಿದೆ.


8. ಅನಿಮಲ್

ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್, ಬಾಬಿ ಡಿಯೋಲ್, ತೃಪ್ತಿ ದಿಮ್ರಿ ಅಭಿನಯದ ಈ ಚಿತ್ರ ವಿಶ್ವದಾದ್ಯಂತ 917.36 ಕೋಟಿ ರೂ. ಆದಾಯ ಗಳಿಸಿದೆ. ಈ ಚಿತ್ರವನ್ನು 200 ಕೋಟಿ ರೂ. ಬಜೆಟ್ ನಲ್ಲಿ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ.


9. ಸೀಕ್ರೆಟ್ ಸೂಪರ್ ಸ್ಟಾರ್

2017ರಲ್ಲಿ ತೆರೆಗೆ ಬಂದ ‘ಸೀಕ್ರೆಟ್ ಸೂಪರ್ ಸ್ಟಾರ್’ ಚಿತ್ರವನ್ನು ಅದ್ವತ್ ಚಂದನ್ ನಿರ್ದೇಶಿಸಿದ್ದು, ಆಮೀರ್ ಖಾನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಶ್ವದಾದ್ಯಂತ 905.7 ಕೋಟಿ ರೂ. ಆದಾಯ ಗಳಿಸಿರುವ ಈ ಚಿತ್ರವನ್ನು ಅತೀ ಕಡಿಮೆ ಬಜೆಟ್ 15 ಕೋಟಿ ರೂ.ನಲ್ಲಿ ನಿರ್ಮಿಸಲಾಗಿದೆ.


ಇದನ್ನೂ ಓದಿ: Kalki 2898 AD: ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದ ʼಕಲ್ಕಿʼ; ಬಿಡುಗಡೆಯಾದ 5ನೇ ದಿನ ಗಳಿಸಿದ್ದು ಬರೋಬ್ಬರಿ 84 ಕೋಟಿ ರೂ.

10. ಪಿಕೆ

ಆಮೀರ್ ಖಾನ್, ಅನುಷ್ಕಾ ಶರ್ಮಾ, ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಈ ಚಿತ್ರ 2014ರಲ್ಲಿ ತೆರೆಗೆ ಬಂದಿತ್ತು. ರಾಜಕುಮಾರ್ ಹಿರಾನಿ ನಿರ್ದೇಶಿರುವ ಈ ಚಿತ್ರವನ್ನು 122 ಕೋಟಿ ರೂ. ಬಜೆಟ್ ನಲ್ಲಿ ನಿರ್ಮಿಸಲಾಗಿದ್ದು, ವಿಶ್ವದಾದ್ಯಂತ 769.89 ಕೋಟಿ ರೂ. ಆದಾಯವನ್ನು ಗಳಿಸಿದೆ.

Continue Reading

ರಾಜಕೀಯ

Narendra Modi: ರಾಹುಲ್‌ ಗಾಂಧಿ ಥರ ಆಡ್ಬೇಡಿ; ಗಂಭೀರವಾಗಿರಿ: ಎನ್‌ಡಿಎ ಸಂಸದರಿಗೆ ಮೋದಿ ಕಿವಿಮಾತು

Narendra Modi: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಹೇಳಿಕೆಗಳನ್ನು ವಾಸ್ತವಾಂಶಗಳೊಂದಿಗೆ ಎದುರಿಸಬೇಕು ಮತ್ತು ಸಂಸದರು ಅವರಂತೆ ವರ್ತಿಸಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ಎನ್‌ಡಿಎ ಸಂಸದರಿಗೆ ಸಲಹೆ ನೀಡಿದರು. ಸತತ ಮೂರನೇ ಬಾರಿ ಎನ್‌ಡಿಎ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಗೆ ಎನ್‌ಡಿಎ ಸಂಸದರನ್ನುದ್ದೇಶಿಸಿ ಮೋದಿ ಮಾತನಾಡಿದರು.

VISTARANEWS.COM


on

Narendra Modi
Koo

ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi) ಅವರ ಹೇಳಿಕೆಗಳನ್ನು ವಾಸ್ತವಾಂಶಗಳೊಂದಿಗೆ ಎದುರಿಸಬೇಕು ಮತ್ತು ಸಂಸದರು ಅವರಂತೆ ವರ್ತಿಸಬಾರದು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ ನಡೆದ ಸಂಸದೀಯ ಪಕ್ಷದ ಸಭೆ (Parliamentary party meeting)ಯಲ್ಲಿ ಎನ್‌ಡಿಎ (NDA) ಸಂಸದರಿಗೆ ಸಲಹೆ ನೀಡಿದರು. ಸಂಸದೀಯ ನಿಯಮಗಳು ಮತ್ತು ನಡವಳಿಕೆಯನ್ನು ಅನುಸರಿಸುವಂತೆ ಮತ್ತು ಉತ್ತಮ ಅಭ್ಯಾಸಗಳನ್ನು ಹಿರಿಯ ಸದಸ್ಯರಿಂದ ಕಲಿಯುವಂತೆ ಸೂಚಿಸಿದರು. ಸತತ ಮೂರನೇ ಬಾರಿ ಎನ್‌ಡಿಎ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಗೆ ಎನ್‌ಡಿಎ ಸಂಸದರನ್ನುದ್ದೇಶಿಸಿ ಮೋದಿ ಮಾತನಾಡಿದರು.

ಪ್ರತಿಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಸೋಮವಾರ ಬೇಜವಾಬ್ದಾರಿಯುತವಾಗಿ ಭಾಷಣ ಮಾಡಿದ್ದಾರೆ ಎಂದು ಆಡಳಿತರೂಢ ಎನ್‌ಡಿಎ ಆರೋಪಿಸಿದ ಒಂದು ದಿನದ ಬಳಿಕ ಪ್ರಧಾನಿ ಈ ರೀತಿಯ ಹೇಳಿಕೆ ನೀಡಿದರು. ಮೊದಲ ಬಾರಿಗೆ ಕಾಂಗ್ರೆಸೇತರ ನಾಯಕ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿರುವುದರಿಂದ ಪ್ರತಿಪಕ್ಷಗಳು ಅಸಮಾಧಾನಗೊಂಡಿವೆ ಎಂದು ಅವರು ಸಂಸದರಿಗೆ ತಿಳಿಸಿದರು ಎಂದು ಮೂಲಗಳಿ ವರದಿ ಮಾಡಿವೆ.

ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ

ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡುವಂತೆ ಮೋದಿ ಹೊಸ ಸಂಸದರಿಗೆ ಸಲಹೆ ನೀಡಿದರು. ಸಂಸತ್ತಿಗಿಂತ ಕಲಿಯಲು ಉತ್ತಮ ಸ್ಥಳವಿಲ್ಲ ಮತ್ತು ಮಹಾನ್‌ ನಾಯಕರ ಬಗ್ಗೆ ತಿಳಿದುಕೊಳ್ಳಲು ಮತ್ತು ಅವರ ಅನುಭವವನ್ನು ಅರಿತುಕೊಳ್ಳಲು ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ನೆರವಾಗುತ್ತದೆ ಎಂದು ತಿಳಿಸಿದರು.

ಯಾವುದೇ ವಿಷಯದ ಬಗ್ಗೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸುವ ಮೊದಲು ಅದನ್ನು ಕೂಲಂಕುಷವಾಗಿ ಅಧ್ಯಯನ ಮಾಡಬೇಕು. ಸಾರ್ವಜನಿಕವಾಗಿ ಮಾತನಾಡುವುದರಲ್ಲಿ ಏಕರೂಪತೆ ಇರಬೇಕು, ಸಂಸದರು ಕ್ಷೇತ್ರಗಳೊಂದಿಗೆ ಸಂಪರ್ಕದಲ್ಲಿರಬೇಕು ಮತ್ತು ಬೆಂಬಲ ನೀಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದು ಮೋದಿ ಕಿವಿ ಮಾತು ಹೇಳಿದರು.

ಪ್ರಧಾನಿಯೊಂದಿಗೆ ಆಗಮಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಬಳಿಕ ಮಾತನಾಡಿ, ʼʼಮೋದಿ ಸಂಸದರಿಗೆ ರಾಷ್ಟ್ರದ ಸೇವೆಯನ್ನು ಬೋಧಿಸಿದರು. ಯಾವುದೇ ಪಕ್ಷವಾಗಿದ್ದರೂ ದೇಶಸೇವೆ ಮೊದಲ ಜವಾಬ್ದಾರಿಯಾಗಿರಬೇಕು ಎಂದು ಕರೆ ನೀಡಿದರು. ಪ್ರತಿಯೊಬ್ಬ ಎನ್‌ಡಿಎ ಸಂಸದ ದೇಶಕ್ಕಾಗಿ ಕೆಲಸ ಮಾಡಬೇಕು ಎಂದರುʼʼ ಎಂದು ವಿವರಿಸಿದರು.

ನೀರು, ಪರಿಸರ ಮತ್ತು ಸಾಮಾಜಿಕ ವ್ಯವಹಾರಗಳಂತಹ ಪ್ರಮುಖ ವಿಷಯಗಳಲ್ಲಿ ಪರಿಣತಿಯನ್ನು ಬೆಳೆಸಿಕೊಳ್ಳಲು ಮತ್ತು ನಡವಳಿಕೆಗೆ ಸಂಬಂಧಿಸಿದ ಎಲ್ಲ ಸದನದ ನಿಯಮಗಳ ಬಗ್ಗೆ ಅರಿವು ಹೊಂದಲು ಮೋದಿ ಸಂಸದರಿಗೆ ಕರೆ ನೀಡಿದರುʼ ಎಂದು ಕಿರಣ್ ರಿಜಿಜು ತಿಳಿಸಿದರು.

ಇದನ್ನೂ ಓದಿ: Parliament Sessions : ರಾಹುಲ್ ಗಾಂಧಿಯಿಂದ ಹಿಂದೂಗಳಿಗೆ ಅವಮಾನ: ಬಿಜೆಪಿ ಆರೋಪ

ʼʼಉತ್ತಮ ಸಂಸದರಾಗಲು ಅಗತ್ಯವಾದ ಸಂಸತ್ತಿನ ನಿಯಮಗಳು, ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ನಡವಳಿಕೆಯನ್ನು ಅನುಸರಿಸುವಂತೆ ಪ್ರಧಾನಿ ಸಂಸದರಿಗೆ ಸೂಚಿಸಿದರು. ಪ್ರಧಾನಿ ಅವರ ಈ ಮಾರ್ಗದರ್ಶನವು ಎಲ್ಲ ಸಂಸದರಿಗೆ, ವಿಶೇಷವಾಗಿ ಮೊದಲ ಬಾರಿಗೆ ಆಯ್ಕೆಯಾದವರಿಗೆ ದಾರಿದೀಪವಾಗಲಿದೆ. ನಾವು ಈ ಸಲಹೆಗಳನ್ನು ಪಾಲಿಸಲು ನಿರ್ಧರಿಸಿದ್ದೇವೆʼʼ ರಿಜಿಜು ಹೇಳಿದರು.

Continue Reading

ದೇಶ

Turbulence: ಟರ್ಬುಲೆನ್ಸ್‌ಗೆ ತುತ್ತಾದ ವಿಮಾನ; ಲಗೇಜ್‌ ಕಂಪಾರ್ಟ್‌ಮೆಂಟ್‌ನಲ್ಲಿ ಸಿಲುಕಿದ ವ್ಯಕ್ತಿ-ವಿಡಿಯೋ ಇದೆ

Turbulence: ವಿಮಾನವು ಸ್ಪೇನ್ ನ ಮ್ಯಾಡ್ರಿಡ್ ನಿಂದ ಉರುಗ್ವೆಯ ರಾಜಧಾನಿ ಮಾಂಟೆವಿಡಿಯೊಗೆ ಹಾರುತ್ತಿತ್ತು ಎಂದು ಸ್ಪ್ಯಾನಿಷ್ ವಿಮಾನಯಾನ ಸಂಸ್ಥೆ ತಿಳಿಸಿದೆ. ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಯುಎಕ್ಸ್ 045 ವಿಮಾನವನ್ನು ಪ್ರಕ್ಷುಬ್ಧತೆಯ ನಂತರ ಈಶಾನ್ಯ ಬ್ರೆಜಿಲ್‌ನ ನೇಟಾಲ್ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದೆ. ಘಟನೆಯಲ್ಲಿ 30 ಮಂದಿಗೆ ಗಂಭೀರ ಗಾಯಗಳಾಗಿದ್ದು, ಮೇಲಿನ ಕಂಪಾರ್ಟ್‌ಮೆಂಟ್‌ನಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಹರಸಾಹಸ ಪಟ್ಟು ರಕ್ಷಿಸಲಾಯಿತು.

VISTARANEWS.COM


on

Turbulence
Koo

ಬ್ರೆಜಿಲ್‌: ಅಪಾಯಕಾರಿ ಟರ್ಬುಲೆನ್ಸ್‌(Turbulence)ಗೆ ಸಿಲುಕಿ ಏರ್ ಯುರೋಪ್ ಬೋಯಿಂಗ್ 787-9 ಡ್ರೀಮ್ ಲೈನರ್ ವಿಮಾನವು ಬ್ರೆಜಿಲ್ ನಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಭಾರೀ ದುರಂತವೊಂದು ತಪ್ಪಿದೆ. ಪ್ರಕ್ಷುಬ್ಧತೆಯ ತೀವ್ರತೆಗೆ ಸಿಲುಕಿ ಎಷ್ಟು ಪ್ರಯಾಣಿಕರು ತಮ್ಮ ಆಸನಗಳಿಂದ ಜಿಗಿದರೆ, ಒಬ್ಬ ವ್ಯಕ್ತಿ ಮೇಲಿನ ಕಂಪಾರ್ಟ್ಮೆಂಟ್‌ನಲ್ಲಿ ಸಿಕ್ಕಿಬಿದ್ದಿದ್ದಾನೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ.

ವಿಮಾನವು ಸ್ಪೇನ್ ನ ಮ್ಯಾಡ್ರಿಡ್ ನಿಂದ ಉರುಗ್ವೆಯ ರಾಜಧಾನಿ ಮಾಂಟೆವಿಡಿಯೊಗೆ ಹಾರುತ್ತಿತ್ತು ಎಂದು ಸ್ಪ್ಯಾನಿಷ್ ವಿಮಾನಯಾನ ಸಂಸ್ಥೆ ತಿಳಿಸಿದೆ. ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಯುಎಕ್ಸ್ 045 ವಿಮಾನವನ್ನು ಪ್ರಕ್ಷುಬ್ಧತೆಯ ನಂತರ ಈಶಾನ್ಯ ಬ್ರೆಜಿಲ್‌ನ ನೇಟಾಲ್ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದೆ. ಘಟನೆಯಲ್ಲಿ 30 ಮಂದಿಗೆ ಗಂಭೀರ ಗಾಯಗಳಾಗಿದ್ದು, ಮೇಲಿನ ಕಂಪಾರ್ಟ್‌ಮೆಂಟ್‌ನಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಹರಸಾಹಸ ಪಟ್ಟು ರಕ್ಷಿಸಲಾಯಿತು.

ಪ್ರಕ್ಷುಬ್ಧತೆಯಿಂದ ಉಂಟಾದ ಹಾನಿ ಮತ್ತು ಅದರ ನಂತರದ ವೀಡಿಯೊಗಳನ್ನು ಪ್ರಯಾಣಿಕರು ಪೋಸ್ಟ್ ಮಾಡಿದ್ದಾರೆ, ಇದರಲ್ಲಿ ಓವರ್ಹೆಡ್ ಡಬ್ಬಿಯಿಂದ ವ್ಯಕ್ತಿ ಹೊರಬರುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.. ಮಗು ಅಳುವ ಶಬ್ದ ಕೇಳಿದಾಗ ಕೆಲವರು ಅವನನ್ನು ಕೆಳಕ್ಕೆ ಎಳೆಯಲು ಜಮಾಯಿಸುತ್ತಿರುವುದು ಕಂಡುಬಂದಿದೆ. 325 ಪ್ರಯಾಣಿಕರನ್ನು ಹೊತ್ತ ವಿಮಾನವು ಪ್ರಕ್ಷುಬ್ಧತೆಯ ಪರಿಣಾಮದಿಂದಾಗಿ ಮೇಲ್ಛಾವಣಿಯ ಫಲಕಗಳನ್ನು ಹರಿದುಹಾಕಿತ್ತು, ಮುರಿದ ಆಸನ ಮತ್ತು ಮೇಲೆ ನೇತಾಡುತ್ತಿದ್ದ ಆಮ್ಲಜನಕದ ಮಾಸ್ಕ್‌ಗಳು ವಿಡಿಯೋದಲ್ಲಿ ಗೋಚರಿಸುತ್ತಿವೆ.

ಕೆಲವು ದಿನಗಳ ಹಿಂದೆ ಇಂತಹದ್ದೇ ಒಂದು ಘಟನೆ ಸಿಂಗಾಪುರ ಏರ್‌ಲೈನ್ಸ್‌ನಲ್ಲೂ ಕಂಡುಬಂದಿತ್ತು. ವಿಮಾನದಲ್ಲಿ ಪ್ರಕ್ಷುಬ್ಧತೆ ಉಂಟಾಗಿದ್ದು, ಒಬ್ಬರು ಮೃತಪಟ್ಟರೆ 30 ಜನ ಗಾಯಗೊಂಡಿದ್ದಾರೆ. ಸಿಂಗಾಪುರ ಏರ್‌ಲೈನ್ಸ್‌ ವಿಮಾನವು (Singapore Airlines) ಹೀಥ್ರೂ ಏರ್‌ಪೋರ್ಟ್‌ನಿಂದ ಸಿಂಗಾಪುರಕ್ಕೆ ಹಾರಾಟ ಆರಂಭಿಸಿತ್ತು. ಆದರೆ, ಹಾರಾಟ ನಡೆಸಿದ ಕೆಲ ಹೊತ್ತಿನಲ್ಲಿಯೇ ಪ್ರಕ್ಷುಬ್ಧತೆ ಉಂಟಾದ ಕಾರಣ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ತೊಂದರೆಯಾಗಿದೆ. ಬ್ಯಾಂಕಾಕ್‌ನ ಸುವರ್ಣಭೂಮಿ ಏರ್‌ಪೋರ್ಟ್‌ನಲ್ಲಿ ತುರ್ತು ಲ್ಯಾಂಡ್‌ ಮಾಡಲಾಯಿತು. ಆದರೆ, ಅಷ್ಟೊತ್ತಿಗಾಗಲೇ ಒಬ್ಬರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

ಸಿಂಗಾಪುರ ಏರ್‌ಲೈನ್ಸ್‌ನ ಎಸ್‌ಕ್ಯೂ 321 ವಿಮಾನದಲ್ಲಿದ್ದ 30 ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬುದಾಗಿ ಮೂಲಗಳು ತಿಳಿಸಿವೆ. ಆದರೆ, ಗಾಯಾಳುಗಳ ಸಂಖ್ಯೆ ಕುರಿತು ವಿಮಾನಯಾನ ಸಂಸ್ಥೆಯು ಯಾವುದೇ ಮಾಹಿತಿ ನೀಡಿಲ್ಲ. ಒಬ್ಬರು ಮೃತಪಟ್ಟಿರುವುದನ್ನು ಕೂಡ ವಿಮಾನಯಾನ ಸಂಸ್ಥೆಯು ದೃಢಪಡಿಸಿದೆ.

ವಿಮಾನವನ್ನು ಏಕಾಏಕಿ 6 ಸಾವಿರ ಅಡಿ ಕೆಳಗಿಳಿಸಿದ ಪರಿಣಾಮವಾಗಿ ವ್ಯಕ್ತಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ವಿಮಾನವು ಸುಮಾರು 37 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು. ಪ್ರಕ್ಷುಬ್ಧತೆಯ ಹಿನ್ನೆಲೆಯಲ್ಲಿ ದಿಢೀರನೆ 31 ಸಾವಿರ ಅಡಿಗೆ ಇಳಿಸಿದ ಕಾರಣ ಪ್ರಯಾಣಿಕರಿಗೆ ಭಾರಿ ಪ್ರಮಾಣದಲ್ಲಿ ಗಾಯಗಳಾಗಲು, ಒಬ್ಬ ವ್ಯಕ್ತಿ ಮೃತಪಡಲು ಕಾರಣವಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Shoaib Akhtar: ಭಗವದ್ಗೀತೆಯ ಸಂದೇಶ ಹಂಚಿಕೊಂಡ ಪಾಕ್​ ಆಟಗಾರ ಶೋಯೆಬ್ ಅಖ್ತರ್

Continue Reading

ದೇಶ

Allahabad High Court: ಮತಾಂತರ ತಡೆಯದಿದ್ದರೆ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗಬಹುದು; ಅಲಹಾಬಾದ್ ಹೈಕೋರ್ಟ್ ಕಳವಳ

Allahabad High Court: ಮತಾಂತರರವನ್ನು ನಿಯಂತ್ರಿಸದಿದ್ದರೆ ಸ್ತುತ ದೇಶದಲ್ಲಿರುವ ಬಹುಸಂಖ್ಯಾತರು ಕ್ರಮೇಣ ಅಲ್ಪಸಂಖ್ಯಾತರಾಗಬಹುದು ಎಂದು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಮತಾಂತರ ನಡೆಸಲು ಯತ್ನಿಸಿ 2021ರ ಮತಾಂತರ ನಿಷೇಧ ಕಾಯಿದೆಯಡಿ ಬಂಧಿತನಾಗಿರುವ ಉತ್ತರ ಪ್ರದೇಶ ಮೂಲದ ಕೈಲಾಶ್‌ ಎಂಬಾತನ ಪ್ರಕರಣದ ವಿಚಾರಣೆ ನಡೆಸುವ ವೇಳೆ ನ್ಯಾ. ರೋಹಿತ್‌ ರಂಜನ್‌ ಅಗರವಾಲ್‌ ನೇತೃತ್ವದ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

VISTARANEWS.COM


on

Allahabad High Court
Koo

ಲಕ್ನೋ: ಮತಾಂತರ (Religious conversion)ಗಳನ್ನು ನಡೆಸುವ ಧಾರ್ಮಿಕ ಸಭೆಗಳನ್ನು ನಿಯಂತ್ರಿಸದಿದ್ದರೆ ಪ್ರಸ್ತುತ ದೇಶದಲ್ಲಿರುವ ಬಹುಸಂಖ್ಯಾತರು ಕ್ರಮೇಣ ಅಲ್ಪಸಂಖ್ಯಾತರಾಗಬಹುದು ಎಂದು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ (Allahabad High Court) ಕಳವಳ ವ್ಯಕ್ತಪಡಿಸಿದೆ.

ಮತಾಂತರ ನಡೆಸಲು ಯತ್ನಿಸಿ 2021ರ ಮತಾಂತರ ನಿಷೇಧ ಕಾಯಿದೆಯಡಿ ಬಂಧಿತನಾಗಿರುವ ಉತ್ತರ ಪ್ರದೇಶ ಮೂಲದ ಕೈಲಾಶ್‌ ಎಂಬಾತನ ಪ್ರಕರಣದ ವಿಚಾರಣೆ ನಡೆಸುವ ವೇಳೆ ನ್ಯಾ. ರೋಹಿತ್‌ ರಂಜನ್‌ ಅಗರವಾಲ್‌ ನೇತೃತ್ವದ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಭಾರತದ ಸಂವಿಧಾನದ 25ನೇ ವಿಧಿಯು ಧಾರ್ಮಿಕ ಮತಾಂತರಕ್ಕೆ ಅವಕಾಶ ನೀಡುವುದಿಲ್ಲ ಎಂದೂ ತಿಳಿಸಿದೆ.

ಏನಿದು ಪ್ರಕರಣ?

ಆರೋಪಿ ಕೈಲಾಶ್‌ ದೆಹಲಿಯಲ್ಲಿ ಧಾರ್ಮಿಕ ಸಭೆ ಆಯೋಜಿಸಿ ಅದರಲ್ಲಿ ಭಾಗವಹಿಸುವಂತೆ ಆಗ್ರಹಿಸಿ ತನ್ನ ಹಳ್ಳಿಯಿಂದ ಅನೇಕರನ್ನು ಕರೆದೊಯ್ದಿದ್ದಾನೆ. ಈ ಪೈಕಿ ಹೆಚ್ಚಿನವರು ಮನೆಗೆ ಮರಳಲಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ. ಅಲ್ಲಿ ಆತ ಮುಗ್ಧ ಜನರನ್ನು ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರ ಮಾಡಿದ್ದಾನೆ ಎಂದೂ ದೂರಿನಲ್ಲಿ ತಿಳಿಸಲಾಗಿದೆ.

ವಾದ ವಿವಾದ ಆಲಿಸಿದ ಕೋರ್ಟ್‌, “ಕೈಲಾಶ್ ನವದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಗಳಿಗೆ ಹಾಜರಾಗಲು ಜನರನ್ನು ಕರೆದೊಯ್ಯುತ್ತಿದ್ದ ಮತ್ತು ಅಲ್ಲಿ ಅವರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲಾಗುತ್ತಿತ್ತು ಎನ್ನುವುದು ಸ್ಪಷ್ಟವಾಗಿದೆ. ಇದೇ ರೀತಿ ಮುಂದುವರಿದರೆ ದೇಶದಲ್ಲಿರುವ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗುವ ದಿನ ದೂರವಿಲ್ಲ. ಕೂಡಲೇ ಮತಾಂತರವನ್ನು ನಿಲ್ಲಿಸಬೇಕುʼʼ ಎಂದು ಸೂಚಿಸಿದೆ.

“ಉತ್ತರ ಪ್ರದೇಶದಾದ್ಯಂತ ಎಸ್‌ಸಿ / ಎಸ್‌ಟಿ ಮತ್ತು ಇತರ ಜಾತಿಗಳ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಕಾನೂನುಬಾಹಿರವಾಗಿ ಮತಾಂತರಿಸುವುದು ವ್ಯಾಪಕವಾಗಿದೆ ಎಂಬುದು ನ್ಯಾಯಾಲಯದ ಗಮನಕ್ಕೆ ಬಂದಿದೆ” ಎಂದ ನ್ಯಾ. ರೋಹಿತ್‌ ರಂಜನ್‌ ಅಗರವಾಲ್‌ ಅವರು ಆರೋಪಿಗೆ ಜಾಮೀನು ನಿರಾಕರಿಸಿದರು.

ವಾದದ ವೇಳೆ ಆರೋಪಿ ಪರ ವಕೀಲ ಸಾಕೇತ್ ಜೈಸ್ವಾಲ್, ಸಂತ್ರಸ್ತ ರಾಮ್‌ಪಾಲ್‌ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿಲ್ಲ ಅಥವಾ ಅವರು ಕ್ರಿಶ್ಚಿಯನ್ ಅಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಲು ಮುಂದಾದರು. ಅವರು ಇತರರೊಂದಿಗೆ ಧಾರ್ಮಿಕ ಕಾರ್ಯಕ್ರಮಕ್ಕೆ ಹಾಜರಾಗಿದ್ದರಷ್ಟೆ. ಅಲ್ಲದೆ ಧಾರ್ಮಿಕ ಸಭೆಗಳನ್ನು ನಡೆಸುತ್ತಿದ್ದ ಸೋನು ಪಾಸ್ಟರ್‌ಗೆ ಈಗಾಗಲೇ ಜಾಮೀನು ನಿಡಲಾಗಿದೆ ಎಂದು ತಿಳಿಸಿದರು. ಆದರೂ ಕೈಲಾಶ್‌ಹೆ ಜಾಮೀನು ನಿರಾಕರಿಸಲಾಯಿತು.

ರಾಜ್ಯದಲ್ಲಿ ಅಕ್ರಮ ಮತಾಂತರ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕ್ರಿಶ್ಚಿಯನ್ ಮಿಷನರಿಗಳು ಮತ್ತು ಮುಸ್ಲಿಂ ಸಂಘಟನೆಗಳು ಬಹುಸಂಖ್ಯಾತ ಹಿಂದೂಗಳಿಗೆ ಆಮಿಷ ಒಡ್ಡಿ ಮತಾಂತರ ನಡೆಸುತ್ತಿರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ: Religious Conversion: ಶಿವಮೊಗ್ಗದಲ್ಲಿ ಆಮಿಷವೊಡ್ಡಿ ಮತಾಂತರಕ್ಕೆ ಯತ್ನ; ಪಾದ್ರಿ ಸೇರಿ ಹಲವರು ಪೊಲೀಸ್‌ ವಶಕ್ಕೆ

ಪಾದ್ರಿ ಸೇರಿ 10 ಮಂದಿಯ ಬಂಧನ

ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಆಮಿಷದ ಮೂಲಕ ಹಿಂದೂಗಳ ದೊಡ್ಡ ಗುಂಪೊಂದನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲು ಪ್ರಯತ್ನಿಸಿದ ಆರೋಪದ ಮೇಲೆ ಚರ್ಚ್ ಪಾದ್ರಿ ಸೇರಿದಂತೆ ಹತ್ತು ಜನರನ್ನು ಬಂಧಿಸಲಾಗಿತ್ತು. ಬಳಿಕ ರಾಜ್ಯದ ಮತಾಂತರ ತಡೆ ಕಾನೂನು ಪ್ರಕಾರ (Anti-conversion law) ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಚರ್ಚ್‌ನ ಪಾದ್ರಿ ಫಾದರ್‌ ಡೊಮೆನಿಕ್‌, ಸರ್ಜು ಪ್ರಸಾದ್‌ ಗೌತಮ್‌, ಪವನ್‌ ಕುಮಾರ್‌, ಸುನಿಲ್‌ ಪಾಸಿ, ಘನಶ್ಯಾಮ್‌ ಗೌತಮ್‌, ಸುರೇಂದ್ರ ಪಾಸ್ವಾನ್‌, ರಾಹುಲ್‌ ಪಾಸ್ವಾನ್‌, ರಾಮಚಂದ್ರನ್‌ ರಾವತ್‌, ಧರ್ಮೇಂದ್ರ ಕೋರಿ ಮತ್ತು ಸೂರಜ್‌ ಗೌತಮ್‌ ಬಂಧಿತರು.

Continue Reading
Advertisement
Student death
ಚಿತ್ರದುರ್ಗ2 mins ago

Student Death : ಅಮ್ಮನ ಸೀರೆಯಲ್ಲಿ ನೇಣು ಬಿಗಿದುಕೊಂಡಳು ಅಪ್ರಾಪ್ತೆ

MUDA site Cm Siddaramaiah says his wife was given MUDA site during BJP regimescandal
ಕರ್ನಾಟಕ23 mins ago

MUDA site scandal: ಪತ್ನಿಗೆ ಕಾನೂನು ಪ್ರಕಾರವೇ ಮುಡಾ ಸೈಟ್‌; ಬಿಜೆಪಿ ಕಾಲದಲ್ಲೇ ನೀಡಲಾಗಿತ್ತು ಎಂದ ಸಿದ್ದರಾಮಯ್ಯ

Highest Collection Movie
ಸಿನಿಮಾ33 mins ago

Highest Collection Movie: ಅತೀ ಹೆಚ್ಚು ಗಳಿಕೆ ದಾಖಲಿಸಿದ ಭಾರತದ ಟಾಪ್‌ 10 ಸಿನಿಮಾಗಳಿವು

Narendra Modi
ರಾಜಕೀಯ34 mins ago

Narendra Modi: ರಾಹುಲ್‌ ಗಾಂಧಿ ಥರ ಆಡ್ಬೇಡಿ; ಗಂಭೀರವಾಗಿರಿ: ಎನ್‌ಡಿಎ ಸಂಸದರಿಗೆ ಮೋದಿ ಕಿವಿಮಾತು

theft Case
ಕ್ರೈಂ40 mins ago

Theft case : ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಕೆಲಸಗಾರ; ರಾಯಚೂರಲ್ಲಿ ಬೀಡುಬಿಟ್ಟ ಮಂಕಿ ಕ್ಯಾಪ್‌ ಗ್ಯಾಂಗ್‌!

AR Rahman
ಕ್ರೀಡೆ50 mins ago

AR Rahman: ಹಾಡಿನ ಮೂಲಕ ಟೀಮ್​ ಇಂಡಿಯಾಕ್ಕೆ ‘ಜೈ ಹೋ’ ಎಂದ ಎಆರ್ ರೆಹಮಾನ್

Press Day celebration Programme in hosapete
ವಿಜಯನಗರ50 mins ago

Press Day: ಹೊಸಪೇಟೆಯಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ

Police Arrest
Latest52 mins ago

Police Arrest: ಅಕ್ರಮ ಮದ್ಯ ಸಾಗಿಸಲು ಸಹಾಯ; ಸಿಕ್ಕಿ ಬಿದ್ದ ಸಿಐಡಿ ಲೇಡಿ ಆಫೀಸರ್!

Turbulence
ದೇಶ57 mins ago

Turbulence: ಟರ್ಬುಲೆನ್ಸ್‌ಗೆ ತುತ್ತಾದ ವಿಮಾನ; ಲಗೇಜ್‌ ಕಂಪಾರ್ಟ್‌ಮೆಂಟ್‌ನಲ್ಲಿ ಸಿಲುಕಿದ ವ್ಯಕ್ತಿ-ವಿಡಿಯೋ ಇದೆ

Shraddha Nrityarnava special dance festival in Bengaluru
ಕರ್ನಾಟಕ57 mins ago

Bengaluru News: ಕಲಾ ರಸಿಕರ ಮನಸೂರೆಗೊಳಿಸಿದ ‘ಶ್ರದ್ಧಾ ನೃತ್ಯಾರ್ಣವʼ ವಿಶೇಷ ನೃತ್ಯೋತ್ಸವ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ21 hours ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ2 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು2 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ3 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ3 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ4 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು5 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

ಟ್ರೆಂಡಿಂಗ್‌