PM Modi Russia Visit: ಜು.8ರಂದು ಪ್ರಧಾನಿ ಮೋದಿ ರಷ್ಯಾ ಪ್ರವಾಸ; ಹಲವು ಮಹತ್ವದ ಚರ್ಚೆ - Vistara News

ದೇಶ

PM Modi Russia Visit: ಜು.8ರಂದು ಪ್ರಧಾನಿ ಮೋದಿ ರಷ್ಯಾ ಪ್ರವಾಸ; ಹಲವು ಮಹತ್ವದ ಚರ್ಚೆ

PM Modi Russia Visit: ಪ್ರಧಾನಿ ಮೋದಿ ಇತ್ತೀಚೆಗೆ ಇಟಲಿಯಲ್ಲಿ ಆಯೋಜಿಸಿರುವ ಜಿ7 ಶೃಂಗಸಭೆ (G7 Summit)ಯಲ್ಲಿ ಪಾಲ್ಗೊಂಡಿದ್ದರು. ಇದರ ಬಳಿಕ ರಷ್ಯಾ ಪ್ರವಾಸ ಮಹತ್ವ ಪಡೆದುಕೊಂಡಿದೆ. ಈಗಾಗಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿತ್‌ ಪುಟಿನ್‌ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌ ಅವರನ್ನು ಹಲವು ಸಂದರ್ಭಗಳಲ್ಲಿ ಭೇಟಿಯಾಗಿದ್ದರು. ಇದೀಗ ಪ್ರಧಾನಿ ಮೋದಿ ರಷ್ಯಾ ಭೇಟಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮತ್ತಷ್ಟು ವೃದ್ಧಿಗೊಳಿಸಲಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಸತತ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದ ಬಳಿಕ ನರೇಂದ್ರ ಮೋದಿ (Narendra Modi) ಮೊದಲ ಬಾರಿಗೆ ಜು.8ರಂದು ರಷ್ಯಾ ಪ್ರವಾಸ(PM Modi Russia Visit) ಕೈಗೊಳ್ಳಲಿದ್ದಾರೆ. ಈ ಭೇಟಿ ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಗೊಳಿಸಲಿದೆ. ಈ ಭೇಟಿ ವೇಳೆ ಉಭಯ ರಾಷ್ಟಗಳು ರಕ್ಷಣೆ, ಅನಿಲ ಮತ್ತು ಇತರೆ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದೆ.

ಪ್ರಧಾನಿ ಮೋದಿ ಇತ್ತೀಚೆಗೆ ಇಟಲಿಯಲ್ಲಿ ಆಯೋಜಿಸಿರುವ ಜಿ7 ಶೃಂಗಸಭೆ (G7 Summit)ಯಲ್ಲಿ ಪಾಲ್ಗೊಂಡಿದ್ದರು. ಇದರ ಬಳಿಕ ರಷ್ಯಾ ಪ್ರವಾಸ ಮಹತ್ವ ಪಡೆದುಕೊಂಡಿದೆ. ಈಗಾಗಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿತ್‌ ಪುಟಿನ್‌ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌ ಅವರನ್ನು ಹಲವು ಸಂದರ್ಭಗಳಲ್ಲಿ ಭೇಟಿಯಾಗಿದ್ದರು. ಇದೀಗ ಪ್ರಧಾನಿ ಮೋದಿ ರಷ್ಯಾ ಭೇಟಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮತ್ತಷ್ಟು ವೃದ್ಧಿಗೊಳಿಸಲಿದೆ. ಹಲವಾರು ರಕ್ಷಣಾ ಖರೀದಿಗಳಿಗಾಗಿ ಭಾರತವು ರಷ್ಯಾವನ್ನು ಹೆಚ್ಚು ಅವಲಂಬಿಸಿರುವುದರಿಂದ ರಷ್ಯಾವು ಹಲವಾರು ವಿಷಯಗಳಿಗೆ ಚೀನಾದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವುದನ್ನು ಭಾರತ ಬಯಸುವುದಿಲ್ಲ.

ರಷ್ಯಾ-ಉಕ್ರೇನ್ ಸಂಘರ್ಷದ ನಡುವೆ ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತವನ್ನು ಮಾತ್ರ ಪ್ರಬಲ ಮಧ್ಯವರ್ತಿಯಾಗಿ ಕಾಣುವುದರಿಂದ ಈ ಭೇಟಿಯು ಪಶ್ಚಿಮಕ್ಕೆ ಉಪಯುಕ್ತವಾಗಬಹುದು ಎಂದು ಮೂಲಗಳು ಹೇಳುತ್ತವೆ. ಪ್ರಧಾನಿ ಮೋದಿ 2022ರಲ್ಲಿ ಉಜ್ಬೇಕಿಸ್ತಾನದಲ್ಲಿ ನಡೆದ ಶಾಂಘೈ ಶೃಂಘಸಭೆಯಲ್ಲಿ ಪುಟಿನ್‌ ಅವರನ್ನು ಭೇಟಿಯಾಗಿದ್ದರು.

ಈ ಹಿಂದೆ ಎನ್‌ಎಸ್‌ಎ ದೋವಲ್ ಕೈಗೆತ್ತಿಕೊಂಡ ರಕ್ಷಣೆ, ಚೀನಾ ಅಂಶ ಮತ್ತು ಉಕ್ರೇನ್‌ನಲ್ಲಿ ಮಧ್ಯಸ್ಥಿಕೆ ಮುಂತಾದ ವಿಷಯಗಳ ಕುರಿತು ಚರ್ಚೆಗಳು ಈಗ ಉನ್ನತ ಮಟ್ಟದಲ್ಲಿ ನಡೆಯಲಿವೆ, ಆದರೆ ನಿರ್ಣಾಯಕ ಅಂಶವಾಗಿ ಮಾರ್ಪಟ್ಟಿರುವ ಭಾರತ-ರಷ್ಯಾ ಬಾಂಧವ್ಯದ ಮೇಲೆ ಎಲ್ಲರ ಕಣ್ಣುಗಳಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಜೂನ್‌ 13ರಂದು ಇಟಲಿಯಲ್ಲಿ ಆಯೋಜಿಸಿದ್ದ ಜಿ7 ಶೃಂಗಸಭೆ (G7 Summit)ಯಲ್ಲಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು.

ಇಟಲಿಯ ಅಪುಲಿಯಾ ಪ್ರದೇಶದ ಐಷಾರಾಮಿ ರೆಸಾರ್ಟ್ ಬೊರ್ಗೊ ಎಗ್ನಾಜಿಯಾದಲ್ಲಿ ಜೂನ್‌ 13ರಿಂದ 15ರವರೆಗೆ ಈ ಬಾರಿಯ, 50ನೇ ಜಿ7 ಶೃಂಗಸಭೆಯನ್ನು ಆಯೋಜಿಸಲಾಗಿತ್ತು. ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ ವಿನಯ್ ಅವರನ್ನು ಒಳಗೊಂಡಿರುವ ಉನ್ನತ ಮಟ್ಟದ ನಿಯೋಗವು ಪ್ರಧಾನಿ ಅವರೊಂದಿಗೆ ಸಭೆಯಲ್ಲಿ ಭಾಗಿಯಾಗಿತ್ತು. ಜೂನ್‌ 14ರಂದು ಸಭೆಯಲ್ಲಿ ಮೋದಿ ಅವರು ಪಾಲ್ಗೊಂಡು ಅಂದೇ ಭಾರತಕ್ಕೆ ಹಿಂದಿರುಗಲಿದ್ದರು.

ಇದನ್ನೂ ಓದಿ:Bulldozer: ‌ಉತ್ತರ ಪ್ರದೇಶದಲ್ಲಿ ಮತ್ತೆ ಬುಲ್ಡೋಜರ್‌ ಸದ್ದು; ರಸ್ತೆಯಲ್ಲಿ ಗುಂಡು ಹಾರಿಸಿದವರ ಹೋಟೆಲ್ ಧ್ವಂಸ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Kannada- Marathi Row: ಮಹಾರಾಷ್ಟ್ರ ಸದನದಲ್ಲಿ ಕನ್ನಡ ಪರ ದನಿ, ಗಡಿಯಲ್ಲಿ ಮರಾಠಿ ದಬ್ಬಾಳಿಕೆಗೆ ಪ್ರತಿಭಟನೆ

Kannada- Marathi Row: ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ಮಹಾರಾಷ್ಟ್ರದ ಜತ್ ತಾಲೂಕಿನ ಸಂಖ್ ಉಪತಹಶೀಲ್ದಾರ್ ಕಚೇರಿ ಮುಂದೆ ಗಡಿ ಕನ್ನಡಿಗರು ಪ್ರತಿಭಟನೆ ನಡೆಸಿದರು. ಜತ್ ತಾಲೂಕಿನ ಗಡಿ ನಾಡು ಕನ್ನಡ ಸಂಘದವರು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಮಹಾರಾಷ್ಟ್ರದ ಸದನದಲ್ಲಿಯೂ ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕದ ವಿಚಾರವನ್ನು ಜತ್ ತಾಲೂಕಿನ ಶಾಸಕ ವಿಕ್ರಮ್ ಸಾವಂತ ಪ್ರಸ್ತಾಪಿಸಿದರು.

VISTARANEWS.COM


on

kannada marathi row
Koo

ಬೆಳಗಾವಿ: ಮಹಾರಾಷ್ಟ್ರದಲ್ಲಿ (Maharashtra) ಬೆಳಗಾವಿ ಗಡಿ (Belagavi news) ಕನ್ನಡಿಗರ ಹೋರಾಟ (Kannada- Marathi Row) ಜೋರಾಗಿದ್ದು, ಮಹಾರಾಷ್ಟ್ರ ಸರ್ಕಾರದ ದಬ್ಬಾಳಿಕೆ ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ. ಸರ್ಕಾರಿ ಕನ್ನಡ ಶಾಲೆಗಳಿಗೆ (Govt kannada schools) ಮರಾಠಿ ಶಿಕ್ಷಕರ (Teachers) ನೇಮಕಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ಮಹಾರಾಷ್ಟ್ರದ ಜತ್ ತಾಲೂಕಿನ ಸಂಖ್ ಉಪತಹಶೀಲ್ದಾರ್ ಕಚೇರಿ ಮುಂದೆ ಗಡಿ ಕನ್ನಡಿಗರು ಪ್ರತಿಭಟನೆ ನಡೆಸಿದರು. ಜತ್ ತಾಲೂಕಿನ ಗಡಿ ನಾಡು ಕನ್ನಡ ಸಂಘದವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಟಿಇಟಿ ಪರೀಕ್ಷೆಯನ್ನು ಸಹ ಮರಾಠಿ ಮಾಧ್ಯಮದಲ್ಲೆ ಮಹಾರಾಷ್ಟ್ರ ಶಿಕ್ಷಣ ಇಲಾಖೆ ನಡೆಸುತ್ತಿದ್ದು, 500 ಪ್ರಶಿಕ್ಷಣಾರ್ಥಿಗಳ ಪೈಕಿ ಕೇವಲ ಒಬ್ಬಿಬ್ಬರು ಮಾತ್ರ ಪಾಸ್ ಆಗುತ್ತಿದ್ದಾರೆ. ಟಿಇಟಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮಕ್ಕೂ ಅವಕಾಶ ಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಜತ್ತ, ಅಕ್ಕಲಕೋಟ ತಾಲ್ಲೂಕಿನಲ್ಲಿ ಅತಿ ಹೆಚ್ಚು ಕನ್ನಡಿಗರು ಇದ್ದಾರೆ. ಹೀಗಾಗಿ ಗಡಿ ಕನ್ನಡಿಗರ ಹಿತ ಕಾಪಾಡಿ ಎಂದು ಒತ್ತಾಯಿಸಲಾಯಿತು.

ಸದನದಲ್ಲಿ ವಿಕ್ರಮ್‌ ಸಾವಂತ ಪ್ರಸ್ತಾಪ

ಈ ನಡುವೆ, ಮಹಾರಾಷ್ಟ್ರದ ಸದನದಲ್ಲಿಯೂ ಗಡಿ ಕನ್ನಡಿಗರ ಸಮಸ್ಯೆ ಪ್ರಸ್ತಾಪವಾಗಿದೆ. ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕದ ವಿಚಾರವನ್ನು ಜತ್ ತಾಲೂಕಿನ ಶಾಸಕ ವಿಕ್ರಮ್ ಸಾವಂತ ಸದನದಲ್ಲಿ ಪ್ರಸ್ತಾಪಿಸಿದರು.

ಕರ್ನಾಟಕದ ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಇರುವ ಹಾಗೇ ಮಹಾರಾಷ್ಟ್ರ ಗಡಿ ಭಾಗದಲ್ಲಿ ಕನ್ನಡ ಭಾಷಿಕರು ಇದ್ದಾರೆ. ಜತ್, ಅಕ್ಕಲಕೋಟ ತಾಲ್ಲೂಕಿನಲ್ಲಿ ಹೆಚ್ಚು ಕನ್ನಡ ಭಾಷಿಕರು ಇದ್ದಾರೆ. ಇಲ್ಲಿನ‌ ಸರ್ಕಾರಿ ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಇದು ಗಡಿ ಭಾಗದ ಕನ್ನಡಿಗರಲ್ಲಿ ಮಹಾರಾಷ್ಟ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂಬ ಭಾವನೆ ಮೂಡಿಸಿದೆ. ಸರ್ಕಾರ ತಕ್ಷಣವೇ ಗಡಿ ಭಾಗದ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸರ್ಕಾರಿ ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಶಾಸಕ ವಿಕ್ರಮ ಸಾವಂತ ಸದನದಲ್ಲಿ ಆಗ್ರಹಿಸಿದರು.

ಸಿಎಂ ಸಿದ್ದರಾಮಯ್ಯನವರಿಗೂ ಗಮನ ಹರಿಸಲು ಆಗ್ರಹ

ಬೆಳಗಾವಿ: ಮಹಾರಾಷ್ಟ್ರದ ಸೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಗಳಲ್ಲಿಯ ಕನ್ನಡ ಶಾಲೆಗಳಿಗೆ (Kannada Schools) ಮರಾಠಿ ಶಿಕ್ಷಕರನ್ನು ನೇಮಿಸುವ ಮೂಲಕ ಕನ್ನಡಿಗರ ಸಂಸ್ಕೃತಿ ಮತ್ತು ಪರಂಪರೆಯ ಹಾಳು ಮಾಡುತ್ತಿರುವ ಮಹಾರಾಷ್ಟ್ರ ಸರ್ಕಾರದ (Maharashtra Government) ಕನ್ನಡ ವಿರೋಧಿ ನೀತಿಯನ್ನು ಪ್ರತಿಭಟಿಸುವ ಕುರಿತು ಈಗ ಕನ್ನಡಿಗರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ (Belagavi News) ಬರೆದಿದ್ದಾರೆ.

ಈ ಬಗ್ಗೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹಾಗೂ ಇತರರು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಈ ಕುರಿತು ಗಮನ ಹರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಕರ್ನಾಟಕ ಸರ್ಕಾರವು ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಗಡಿ ಭಾಗದ ಎಲ್ಲ ಮರಾಠಿ ಶಾಲೆಗಳಿಗೆ ಸರ್ವ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಿದೆ. ರಾಜ್ಯದಲ್ಲಿ ಭಾಷಾ ಅಲ್ಪಸಂಖ್ಯಾತರ ಹಿತವನ್ನು ಗಮನದಲ್ಲಿಟ್ಟುಕೊಂಡು ಮರಾಠಿ ಭಾಷಿಕರ ಶಾಲೆಗಳಿಗೆ ಮರಾಠಿ ಶಿಕ್ಷಕರನ್ನೇ ನೇಮಿಸುತ್ತ ಬಂದಿದೆ. ಇದಕ್ಕೆ ತದ್ವಿರುದ್ಧವಾಗಿ ಮಹಾರಾಷ್ಟ್ರದ ಸೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಗಳ ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರನ್ನು ನೇಮಿಸುವ ಮೂಲಕ ಅಲ್ಲಿಯ ಕನ್ನಡಿಗರ ಹಿತಕ್ಕೆ ಧಕ್ಕೆ ತರುವಂಥ ಕನ್ನಡಿಗರ ಹಾಗೂ ಕನ್ನಡ ವಿರೋಧಿ ನಿಲುವನ್ನು ಮಹಾರಾಷ್ಟ್ರ ಸರ್ಕಾರ ತಳೆಯುತ್ತಿದೆ ಎಂದು ಹೇಳಿದ್ದಾರೆ.

ಸಾಂಗ್ಲಿ ಜಿಲ್ಲಾ ಪಂಚಾಯಿತಿಯು ಇತ್ತೀಚೆಗೆ ಕನ್ನಡ ಶಾಲೆಗಳಿಗಾಗಿ ನೇಮಕ ಮಾಡಿದ 24 ಶಿಕ್ಷಕರ ಪೈಕಿ ಕೇವಲ ನಾಲ್ವರು ಮಾತ್ರ ಕನ್ನಡಿಗರಾಗಿದ್ದಾರೆ. ಕನ್ನಡ ಡಿ.ಎಡ್. ಪದವಿ ಪಡೆದ ನೂರಾರು ಶಿಕ್ಷಕರು ಕನ್ನಡ ಪ್ರದೇಶಗಳಲಿದ್ದು ಅವರನ್ನು ಕನ್ನಡ ಶಾಲೆಗಳಿಗೆ ನೇಮಕ ಮಾಡದೇ ಮರಾಠಿ ಶಿಕ್ಷಕರನ್ನು ನೇಮಕ ಮಾಡುತ್ತಿರುವ ಅಲ್ಲಿಯ ಸರ್ಕಾರದ ಕ್ರಮವು ದುರದ್ದೇಶಪೂರಿತವಾಗಿದೆ. ಈ ಕ್ರಮದ ವಿರುದ್ಧ ಅಲ್ಲಿಯ ಕನ್ನಡಿಗರು, ಕನ್ನಡ ಸಂಘಟನೆಗಳು ತೀವ್ರ ಆಕ್ರೋಶ, ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. ಅವರ ಬೆನ್ನಿಗೆ ಕರ್ನಾಟಕ ಸರ್ಕಾರ ಗಟ್ಟಿಯಾಗಿ ನಿಲ್ಲಬೇಕಾಗಿದೆ ಎಂದಿದ್ದಾರೆ.

ಇದನ್ನೂ ಓದಿ: Job Recruitment: ಬ್ಯಾಂಕ್ ಆಫ್ ಬರೋಡಾದಲ್ಲಿ 627 ಹುದ್ದೆಗಳಿಗೆ ಅರ್ಜಿ ಆಹ್ವಾನ; 55 ಲಕ್ಷದವರೆಗೆ ಸಂಬಳ!

Continue Reading

Latest

Grand Marriage: ಭಾರತದ ಶ್ರೀಮಂತ ಕುಟುಂಬಗಳ ಅತ್ಯಂತ ಅದ್ಧೂರಿ ಮದುವೆ ಯಾರದು? ಪಟ್ಟಿ ಇಲ್ಲಿದೆ

Grand Marriage: ಕೆಲವರು ಹಣಕಾಸಿನ ಸಮಸ್ಯೆಯಿಂದ ಮಗ/ಮಗಳ ಮದುವೆ ಮಾಡುವುದಕ್ಕೆ ಆಗದೇ ಒದ್ದಾಡುತ್ತಾರೆ. ಇನ್ನು ಕೆಲವರು ಮದುವೆಯನ್ನು ಹೇಗಲ್ಲಾ ಅದ್ಧೂರಿಯಾಗಿ ಮಾಡಬಹುದು ಎಂದು ತಲೆಕೆಡಿಸಿಕೊಳ್ಳುತ್ತಾರೆ. ಭಾರತದಲ್ಲಿ ಸಾಕಷ್ಟು ಶ್ರೀಮಂತ ಕುಟುಂಬಗಳಿವೆ. ಇವರು ಮದುವೆಗಾಗಿ ಯಥೇಚ್ಛವಾಗಿ ದುಡ್ಡು ಸುರಿದಿದ್ದಾರೆ. ಅದ್ಧೂರಿಯಾಗಿ ನಡೆದ ಮದುವೆಗಳು ಯಾರದ್ದು?ಎಷ್ಟೆಲ್ಲಾ ಖರ್ಚಾಗಿದೆ ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

Grand Marriage
Koo

ಮುಂಬೈ : ಮಕ್ಕಳ ಮದುವೆಯೆಂದರೆ ಎಲ್ಲಾ ತಂದೆ-ತಾಯಿಗೂ ಸಂಭ್ರಮವಿರುತ್ತದೆ. ಇನ್ನು ಶ್ರೀಮಂತ ಮನೆತನದ ಮಕ್ಕಳ ಮದುವೆಯೆಂದರೆ ಕೇಳಬೇಕಾ…? ತಮ್ಮ ಶ್ರೀಮಂತಿಕೆಯನ್ನು ತೋರ್ಪಡಿಸುವುದಕ್ಕಾದರೂ ಅದ್ಧೂರಿಯಿಂದ ಮದುವೆ ಮಾಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ, ಹಲವಾರು ಶ್ರೀಮಂತ ಮನೆತನದವರ ಮದುವೆಗಳು ಬಹಳ ಅದ್ಧೂರಿ (Grand Marriage)ಯಾಗಿ ನಡೆದಿದ್ದು, ಅದರ ಬಗ್ಗೆ ಇಲ್ಲಿದೆ ಮಾಹಿತಿ.

Grand Marriage

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದೆ ಹೆಸರಾದ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮದುವೆ ಜುಲೈ 12, 2024ರಂದು ಮುಂಬೈನಲ್ಲಿ ರಾಧಿಕಾ ಮರ್ಚೆಂಟ್ ಅವರ ಜೊತೆ ನಿಶ್ಚಯವಾಗಿದ್ದು, ಇದು  ಅತ್ಯಂತ ದುಬಾರಿ ರಿ ಮದುವೆ ಎಂದು ಊಹಿಸಲಾಗಿದೆ.

Grand Marriage

1. ಇಶಾ ಅಂಬಾನಿ ಮತ್ತು ಆನಂದ್ ಪಿರಮಾಲ್: 700 ಕೋಟಿ ರೂ. ಖರ್ಚು

ಬಿಲಿಯನೇರ್ ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಅವರು ಆನಂದ್ ಪಿರಮಾಲ್ ಅವರನ್ನು ವಿವಾಹವಾಗಿದ್ದು, ಸುಮಾರು ಒಂದು ವಾರಗಳ ಕಾಲ ನಡೆದ ಈ ಮದುವೆಗೆ  ಅಂದಾಜು 700 ಕೋಟಿ ರೂ. ಖರ್ಚು ಮಾಡಲಾಗಿದೆ ಎನ್ನಲಾಗಿದೆ. ಉದಯಪುರ, ಇಟಲಿಯ ಲೇಕ್ ಕೊಮೊ ಮತ್ತು ಮುಂಬೈನಲ್ಲಿ ನಡೆದ ಈ ಉತ್ಸವದಲ್ಲಿ ಜಗತ್ತಿನ ಅನೇಕ ಸೂಪರ್ ಸ್ಟಾರ್‌ಗಳು  ಭಾಗವಹಿಸಿದ್ದರು.  ಮತ್ತು ವಿವಾಹ ಸಮಾರಂಭವು ಲೇಕ್ ಪಿಚೋಲಾದ ಖಾಸಗಿ ದ್ವೀಪದಲ್ಲಿ ನಡೆಯಿತು.

Grand Marriage

2. ಸುಶಾಂತ್ ರಾಯ್ ಮತ್ತು ಸೀಮಂತೋ ರಾಯ್: 554 ಕೋಟಿ ರೂ. ಖರ್ಚು

2004ರಲ್ಲಿ ಸಹಾರಾ ಗ್ರೂಪ್‌ನ ಮಾಜಿ ಅಧ್ಯಕ್ಷ ಉದ್ಯಮಿ ಸುಬ್ರತಾ ರಾಯ್ ಅವರ ಪುತ್ರರಾದ ಸುಶಾಂತ್ ರಾಯ್ ಮತ್ತು ಸೀಮಾಂತೋ ರಾಯ್ ಅವರ ವಿವಾಹಕ್ಕೆ ಅಂದಾಜು 554 ಕೋಟಿ ರೂ. ಖರ್ಚುಮಾಡಲಾಗಿದೆ ಎನ್ನಲಾಗಿದೆ. ಲಕ್ನೋದ ಸಹಾರಾ ಕ್ರೀಡಾಂಗಣದಲ್ಲಿ ನಡೆದ ಈ  ಕಾರ್ಯಕ್ರಮದಲ್ಲಿ ಬಾಲಿವುಡ್ ತಾರೆಯರು ಮತ್ತು ಕ್ರೀಡಾಕೂಟದವರು  ಸೇರಿದಂತೆ 11,000ಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸಿದ್ದರು.

Grand Marriage

3. ಬ್ರಹ್ಮಣಿ ರೆಡ್ಡಿ ಮತ್ತು ರಾಜೀವ್ ರೆಡ್ಡಿ: 500 ಕೋಟಿ ರೂ. ಖರ್ಚು

ಮಾಜಿ ರಾಜಕಾರಣಿ, ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಅವರ ಪುತ್ರಿ ಬ್ರಹ್ಮಣಿ ರೆಡ್ಡಿ ಮತ್ತು ರಾಜೀವ್ ರೆಡ್ಡಿ ಅವರ ವಿವಾಹಕ್ಕೆ ಸುಮಾರು 500 ಕೋಟಿ ರೂಪಾಯಿ (74 ಮಿಲಿಯನ್ ಡಾಲರ್) ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು ಅರಮನೆಯಲ್ಲಿ ನಡೆದ ಐದು ದಿನಗಳ ಆಚರಣೆಯಲ್ಲಿ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳು ಸೇರಿದಂತೆ ಸುಮಾರು 50,000 ಮಂದಿ ಭಾಗವಹಿಸಿದ್ದರು.

Grand Marriage

4. ಸೃಷ್ಟಿ ಮಿತ್ತಲ್ ಮತ್ತು ಗುಲ್ರಾಜ್ ಬೆಹ್ಲ್: 500 ಕೋಟಿ

ಸ್ಟೀಲ್  ಉದ್ಯಮಿ ಪ್ರಮೋದ್ ಮಿತ್ತಲ್ ಅವರ ಪುತ್ರಿ ಸೃಷ್ಟಿ ಮಿತ್ತಲ್ ಅವರು ಇನ್‌ವೆಸ್ಟ್‌ಮೆಂಟ್ ಬ್ಯಾಂಕರ್ ಗುಲ್ರಾಜ್ ಬೆಹ್ಲ್ ಅವರನ್ನು 2013 ರಲ್ಲಿ ಸ್ಪೇನ್‌ನ ಬಾರ್ಸಿಲೋನಾದಲ್ಲಿ ಮದುವೆಯಾದರು. ಇದು  ಮೂರು ದಿನಗಳ ಅದ್ದೂರಿ ಮದುವೆಯಾಗಿದ್ದು, ಈ ಕಾರ್ಯಕ್ರಮಕ್ಕೆ ಸುಮಾರು 500 ಕೋಟಿ ರೂ. ಖರ್ಚುಮಾಡಲಾಗಿದೆ ಎನ್ನಲಾಗಿದೆ. ಮದುವೆಯಲ್ಲಿ 500 ಅತಿಥಿಗಳು ಭಾಗವಹಿಸಿದ್ದರು ಮತ್ತು ಪ್ರಸಿದ್ಧ ಸ್ಪ್ಯಾನಿಷ್ ಪ್ರಸಿದ್ಧ ಬಾಣಸಿಗ ಸೆರ್ಗಿ ಅರೋಲಾ ಸಿದ್ಧಪಡಿಸಿದ ಮೆನು ಮತ್ತು 60 ಕೆಜಿ, ಬೃಹತ್ ವಿವಾಹ ಕೇಕ್ ಅನ್ನು ಕತ್ತರಿಸಲಾಗಿತ್ತು. ಈ ವಿವಾಹ ಸಮಾರಂಭವು ಬೆಟ್ಟದ ಮೇಲಿರುವ ನ್ಯಾಷನಲ್ ಮ್ಯೂಸಿಯಂ ಆಫ್ ಕ್ಯಾಟಲಾನ್ ಆರ್ಟ್‌ನಲ್ಲಿ ನಡೆಯಿತು.

Grand Marriage

5. ವಾಣಿಶಾ ಮಿತ್ತಲ್ ಮತ್ತು ಅಮಿತ್ ಭಾಟಿಯಾ: 240 ಕೋಟಿ ರೂ.

2004ರಲ್ಲಿ ಸ್ಟೀಲ್ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರ ಪುತ್ರಿ ವಾಣಿಶಾ ಮಿತ್ತಲ್ ಮತ್ತು ಲಂಡನ್ ಬ್ಯಾಂಕರ್ ಅಮಿತ್ ಭಾಟಿಯಾ ಅವರ ವಿವಾಹವು ಆರು ದಿನಗಳ ಕಾಲ ಪ್ಯಾರಿಸ್‌ನಲ್ಲಿ ಅದ್ದೂರಿಯಾಗಿ ಆಚರಿಸಲಾಗಿತ್ತು. ಈ ಉತ್ಸವದಲ್ಲಿ ಬಾಲಿವುಡ್ ತಾರೆಯರಾದ ಶಾರುಖ್ ಖಾನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರು ಆಗಮಿಸಿದ್ದರು. ಪ್ರಸಿದ್ಧ ಕವಿ ಜಾವೇದ್ ಅಖ್ತರ್ ವಿವಾಹಪೂರ್ವ ಸಮಾರಂಭಗಳಿಗಾಗಿ ನಾಟಕವನ್ನು ಸಹ ಬರೆದಿದ್ದಾರೆ. ಮುಖ್ಯ ವಿವಾಹವು 17 ನೇ ಶತಮಾನದ ಚಾಟೌ ಡಿ ವಾಕ್ಸ್-ಲೆ-ವಿಕಾಮ್ಟೆಯಲ್ಲಿ ನಡೆಯಿತು, ಈ ಮದುವೆಗಾಗಿ  ಎಸ್ಟೇಟ್‌ನ  ಉದ್ಯಾನಗಳಲ್ಲಿನ ಕೊಳದ ಮೇಲೆ ಭವ್ಯವಾದ ಮಂಟಪವನ್ನು ನಿರ್ಮಿಸಲಾಗಿತ್ತು.

Grand Marriage

6. ಸೋನಮ್ ವಾಸ್ವಾನಿ ಮತ್ತು ನವೀನ್ ಫ್ಯಾಬಿಯಾನಿ: 210 ಕೋಟಿ ರೂ. ಖರ್ಚು

2017 ರಲ್ಲಿ, ಸ್ಟಾಲಿಯನ್ ಗ್ರೂಪ್ ಸಂಸ್ಥಾಪಕ ಸುನಿಲ್ ವಾಸ್ವಾನಿ ಅವರ ಪುತ್ರಿ ಸೋನಮ್ ವಾಸ್ವಾನಿ  ಮತ್ತು ಮುಂಬೈ ಮೂಲದ ಉದ್ಯಮಿ ನವೀನ್ ಫ್ಯಾಬಿಯಾನಿ ಅವರ ವಿವಾಹವು ಆಸ್ಟ್ರಿಯಾದ ವಿಯೆನ್ನಾದಲ್ಲಿ ಸುಮಾರು 210 ಕೋಟಿ ರೂ.ಗಳ (30 ಮಿಲಿಯನ್ ಡಾಲರ್) ವೆಚ್ಚದಲ್ಲಿ ಅದ್ಧೂರಿಯಾಗಿ ನೇರವೇರಿತ್ತು. ಉತ್ಸವಗಳು ಪಲೈಸ್ ಫೆರ್ಸ್ಟೆಲ್, ಪಲೈಸ್ ಲಿಚೆನ್ಸ್ಟೇನ್ ಪಾರ್ಕ್ ಮತ್ತು ಬೆಲ್ವೆಡೆರೆ ಅರಮನೆಯಲ್ಲಿ ನಡೆದವು.

Grand Marriage

7. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ: 100 ಕೋಟಿ ರೂ. ಖರ್ಚು

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ 2017ರ ಡಿಸೆಂಬರ್ ನಲ್ಲಿ ಇಟಲಿಯ ಟಸ್ಕನಿಯಲ್ಲಿರುವ ಲೇಕ್ ಕೊಮೊದಲ್ಲಿ ವಿವಾಹವಾದರು. ಕೆಲವು ದಿನಗಳ ನಂತರ ಮುಂಬೈನಲ್ಲಿ ನಡೆದ ಅವರ ವಿವಾಹ ಆರತಕ್ಷತೆ ಕೂಡ ಹೆಚ್ಚು ಅದ್ದೂರಿಯಾಗಿ ನಡೆಯಿತು, ಇದರಲ್ಲಿ ಸೆಲೆಬ್ರಿಟಿಗಳು ಮತ್ತು ಕ್ರಿಕೆಟಿಗರು ಭಾಗವಹಿಸಿದ್ದರು ಮತ್ತು ಪಿಎಂ ಮೋದಿ ಕೂಡ ಇವರ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು.

Grand Marriage

8. ಅಡೆಲ್ ಸಾಜನ್ ಮತ್ತು ಸನಾ ಖಾನ್: 100 ಕೋಟಿ ರೂ. ಖರ್ಚು

ದುಬೈ ಉದ್ಯಮಿ ಅಡೆಲ್ ಸಾಜನ್ ಅವರು ನಟಿ ಸನಾ ಖಾನ್ ಅವರನ್ನು ಕ್ರೂಸ್‌ನಲ್ಲಿ  ಅದ್ದೂರಿಯಾಗಿ ವಿವಾಹವಾದರು. ಇವರ ವಿವಾಹಕ್ಕೆ 100 ಕೋಟಿ ರೂ.ಗಳ ಖರ್ಚಾಗಿದೆ ಎಂದು ಊಹಿಸಲಾಗಿದೆ. ಬಾರ್ಸಿಲೋನಾದಿಂದ ಫ್ರಾನ್ಸ್ ಮೂಲಕ ಇಟಲಿಗೆ ಪ್ರಯಾಣಿಸುತ್ತಿದ್ದ ಕೋಸ್ಟಾ ಫಾಸಿನೋಸಾ ಕ್ರೂಸ್ ಹಡಗಿನಲ್ಲಿ ದಂಪತಿಗಳು ವಿವಾಹ ವಿಧಿಯನ್ನು ಆಚರಿಸಿದ್ದಾರೆ.

Grand Marriage

9. ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ: 77 ಕೋಟಿ ರೂ. ಖರ್ಚು

ಆರು ವರ್ಷಗಳ ಡೇಟಿಂಗ್ ನಂತರ, ಬಾಲಿವುಡ್ ದಂಪತಿಗಳಾದ ರಣವೀರ್‌ಸಿಂಗ್ ಮತ್ತು ದೀಪಿಕಾ ಪಡುಕೋಣೆ 2018 ರ ನವೆಂಬರ್ ನಲ್ಲಿ ಇಟಲಿಯ ಲೇಕ್ ಕ್ಯಾಮೊದಲ್ಲಿ ವಿವಾಹವಾದರು, ಅವರ ವಿವಾಹ ಸಮಾರಂಭಗಳು ಸಿಂಧಿ ಮತ್ತು ಕೊಂಕಣಿ ಸಂಪ್ರದಾಯಗಳಲ್ಲಿ ನಡೆದವು. ಇವರ ಮದುವೆಯ ಖರ್ಚು 77 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

Grand Marriage

10. ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ

ಮುಕೇಶ್ ಅಂಬಾನಿ ಅವರ ಹಿರಿಯ ಮಗ ಆಕಾಶ್ ಅಂಬಾನಿ ಅವರು ವಜ್ರದ ಉದ್ಯಮಿಯ ಪುತ್ರಿ ಶ್ಲೋಕಾ ಮೆಹ್ತಾ ಅವರನ್ನು 2019 ರಲ್ಲಿ ಮುಂಬೈನಲ್ಲಿ ಅದ್ದೂರಿಯಾಗಿ ವಿವಾಹವಾದರು. ಈ ಮದುವೆಯಲ್ಲಿ ಬಹಳ ವರ್ಣರಂಜಿತ ಅಲಂಕಾರಗಳನ್ನು ಮಾಡಲಾಗಿತ್ತು. ಆದರೆ ಮದುವೆಯ ಖರ್ಚಿನ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ.

ಇದನ್ನೂ ಓದಿ: ದಳಪತಿ ವಿಜಯ್‌ಗೆ ಭುಜದ ಮೇಲಿನ ಕೈ ತೆಗೆಯಲು ಹೇಳಿದ ಹುಡುಗಿ; ವಿಡಿಯೊ ವೈರಲ್

Continue Reading

ಅಂಕಣ

ರಾಜಮಾರ್ಗ ಅಂಕಣ: ಟಿ20 ವಿಶ್ವಕಪ್ ಫೈನಲ್; ಒಂದು ಪಂದ್ಯ – ಹಲವು ಪಾಠ

ರಾಜಮಾರ್ಗ ಅಂಕಣ: ತಾಳ್ಮೆಯಿಂದ ನರಗಳನ್ನು ಬಿಗಿ ಹಿಡಿದು ಆಡಿದರೆ ಯಾವ ಪಂದ್ಯವನ್ನೂ ಗೆಲ್ಲಲು ಸಾಧ್ಯ ಎನ್ನುವುದು ಕ್ರಿಕೆಟ್ ಕಲಿಸಿದ ಜೀವನದ ಪಾಠ. ಕ್ಲಾಸೆನ್ ಮತ್ತು ಕ್ಲಿಂಟನ್ ಡಿಕಾಕ್ ಅವರು ಕ್ರೀಸಿನಲ್ಲಿ ಗಟ್ಟಿ ನಿಂತು ಆಡುತ್ತಿದ್ದಾಗ ದಕ್ಷಿಣ ಆಫ್ರಿಕಾ ಗೆದ್ದೇ ಬಿಟ್ಟಿತು ಎಂದು ಭಾವಿಸಿಕೊಂಡು ಟಿವಿ ಆಫ್ ಮಾಡಿ ಮಲಗಿದವರಿಗೆ ಇದು Life Time Lesson!

VISTARANEWS.COM


on

ರಾಜಮಾರ್ಗ ಅಂಕಣ virat kohli rohit sharma
Koo

ಚಾಂಪಿಯನ್ ಆಟಗಾರರು ಮತ್ತು ಟೀಮ್ ಇಂಡಿಯಾ ಗೆಲುವು

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಈ ಭಾವುಕ ಕ್ಷಣಗಳನ್ನು ಭಾರತದ ಕೋಟಿ ಕೋಟಿ ಕ್ರಿಕೆಟ್ (Cricket) ಅಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲ.

ಸೂರ್ಯಕುಮಾರ್ (Suryakumar yadav) ಹಿಡಿದ ಅದ್ಭುತವಾದ ಕ್ಯಾಚ್, ವಿರಾಟ್ ಕೊಹ್ಲಿಯ ಹೀರೋಯಿಕ್ ಇನ್ನಿಂಗ್ಸ್, ಬುಮ್ರಾ, ಹಾರ್ದಿಕ್, ಆರ್ಷದೀಪ್ ಬೌಲಿಂಗ್‌ನಲ್ಲಿ ತೋರಿದ ಮ್ಯಾಜಿಕ್, ರೋಹಿತ್ ಶರ್ಮಾ (Rohit Sharma) ತೋರಿಸಿದ ತಾಳ್ಮೆ, ಅಕ್ಷರ್ ಪಟೇಲ್ ಆಲ್ರೌಂಡ್ ಆಟ……ಇದ್ಯಾವುದೂ ನಮಗೆ ಮರೆತು ಹೋಗೋದಿಲ್ಲ.

ಭರವಸೆ ನಮ್ಮನ್ನು ಗೆಲ್ಲಿಸಿತು

ಚಾಂಪಿಯನ್ ಆಟಗಾರರ ಮೇಲೆ ಟೀಮ್ ಇಂಡಿಯಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಇಟ್ಟ ಭರವಸೆ ನಿಜ ಆಗಿದೆ. ವಿಶ್ವಕಪ್ಪಿನ ಹಿಂದಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಸತತವಾಗಿ ವೈಫಲ್ಯ ಕಂಡಾಗ ಆತನಿಗೆ ವಿಶ್ರಾಂತಿ ಕೊಡಿ, ಆತನಿಗೆ ಓಪನಿಂಗ್ ಸ್ಲಾಟ್ ಬೇಡವೇ ಬೇಡ, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿಸಿ ಎಂದೆಲ್ಲ ಟ್ರೋಲ್ ಮಾಡಿದವರಿಗೆ ಈ ಬಾರಿ ಸರಿಯಾದ ಉತ್ತರ ದೊರೆತಿದೆ. ಚಾಂಪಿಯನ್ ಆಟಗಾರ ಯಾವತ್ತೂ ದೊಡ್ಡ ಮ್ಯಾಚಲ್ಲಿ ಮಿಂಚು ಹರಿಸುತ್ತಾನೆ.

ಚಾಂಪಿಯನ್, ನಿನ್ನ ಆಟ ಆಡುತ್ತಾ ಹೋಗು!

ಆತ ಸತತವಾಗಿ ಸೋತು ಅಳುತ್ತಾ ಕೂತಾಗ ರಾಹುಲ್ ದ್ರಾವಿಡ್ ಹೇಳಿದ ಮಾತನೊಮ್ಮೆ ಸೂಕ್ಷ್ಮವಾಗಿ ಗಮನಿಸಿ.
‘ಚಾಂಪಿಯನ್, ನಿನ್ನ ಆಟ ಆಡುತ್ತಾ ಹೋಗು. ನಮಗೆ ನಂಬಿಕೆ ಇದೆ’ ಎಂದು. ಆತನ ಬ್ಯಾಟಿಂಗ್ ಕ್ರಮಾಂಕವನ್ನು ಕೂಡ ಬದಲಾವಣೆ ಮಾಡದೆ ಆತನ ನೆರವಿಗೆ ನಿಂತವರು ಟೀಮ್ ಮ್ಯಾನೇಜ್ಮೆಂಟ್ ಮತ್ತು ಟೀಮ್ ಕೋಚ್ ರಾಹುಲ್ ದ್ರಾವಿಡ್. ಚಾಂಪಿಯನ್ ವಿರಾಟ್ ಕೊಹ್ಲಿ ಇಂದು ಆವರ
ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.

ಹಾರ್ದಿಕ ಪಾಂಡ್ಯನನ್ನು ಟ್ರೋಲ್ ಮಾಡಿದವರಿಗೆ ಈ ಗೆಲುವು ಅರ್ಪಣೆ!

ಅದೇ ರೀತಿ ನಮ್ಮ ಹಾರ್ದಿಕ್ ಪಾಂಡ್ಯನ ಬಗ್ಗೆ ಗಮನಿಸಿ. ಈ ಬಾರಿಯ ಐಪಿಎಲ್ ಪಂದ್ಯಗಳಲ್ಲಿ ಆತನು ಸತತವಾಗಿ ಬೈಗುಳ ತಿಂದ ಆಟಗಾರ. ಆತ ವಿಶ್ವಕಪ್ ತಂಡಕ್ಕೆ ಆಯ್ಕೆ ಆದಾಗ ಎಷ್ಟೊಂದು ಜನರು ರೊಚ್ಚಿಗೆದ್ದು ಬೈದವರಿದ್ದರು! ಆತನ ಖಾಸಗಿ ಜೀವನದ ಮೇಲೆ ಕೆಸರು ಎರಚುವ ಕೆಲಸ ಕೂಡ ಆಗಿತ್ತು. ಅಂತವನ ಕೈಗೆ ಪಂದ್ಯದ 20ನೇ ಓವರು ಕೊಡುವುದೆಂದರೆ? ಟೀಮ್ ಇಂಡಿಯಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಆತನ ಮೇಲಿಟ್ಟ ನಂಬಿಕೆಗೆ ಆತನು ಎಷ್ಟೊಂದು ಅದ್ಭುತವಾಗಿ ಉತ್ತರ ಕೊಟ್ಟು ಬಿಟ್ಟ ನೋಡಿ. ಚಾಂಪಿಯನ್ ಎಂದಿಗೂ ಚಾಂಪಿಯನ್ ಆಗಿರುತ್ತಾನೆ.

ರೋಹಿತ್ ಶರ್ಮಾ ನಾಯಕತ್ವವನ್ನು ಪ್ರಶ್ನೆ ಮಾಡಿದವರಿಗೆ, ಆತ ಸ್ವಾರ್ಥಿ ಎಂದು ಟೀಕೆ ಮಾಡಿವರಿಗೆ ಇಲ್ಲಿ ಸರಿಯಾದ ಉತ್ತರ ದೊರೆತಿದೆ. ಟೀಮ್ ಆಡಳಿತ ಯುವ ಆಟಗಾರರ ಮೇಲೆ ತೋರಿದ ಕಾಳಜಿಯಿಂದ ಶಿವಂ ದುಬೆ, ಆಕ್ಷರ್ ಪಟೇಲ್ ಮೊದಲಾದ ಯಂಗಸ್ಟರ್ಸ್ ಒಳ್ಳೆ ಆಟಗಾರರಾಗಿ ಮಿಂಚಲು ಸಾಧ್ಯವಾಯಿತು. ಅವರಿಗೆ ಖಚಿತವಾಗಿ ಒಳ್ಳೆಯ ಭವಿಷ್ಯವಿದೆ.

ಒಂದು ಪಂದ್ಯ – ಹಲವು ಪಾಠ!

ಭಾರತ ಟಿ 20 ವಿಶ್ವಕಪ್ಪನ್ನು ಅರ್ಹವಾಗಿ ಗೆದ್ದು ಬೀಗಿತು, ವಿರಾಟ್ ಕೊಹ್ಲಿ (Virat Kohli) ಮತ್ತು ರಾಹುಲ್ ದ್ರಾವಿಡ್ (Rahul Dravid) ಅವರಿಗೆ ಗೆಲುವಿನ ವಿದಾಯ ನೀಡಿತು, ರೋಹಿತ್ ಶರ್ಮಾ ತನ್ನ ಮೊದಲ ಐಸಿಸಿ ಟ್ರೋಫಿ ಲಿಫ್ಟ್ ಮಾಡಿದರು ಅನ್ನುವುದು ಮುಂದಿನ ಇತಿಹಾಸದ ಭಾಗ. ತಾಳ್ಮೆಯಿಂದ ನರಗಳನ್ನು ಬಿಗಿ ಹಿಡಿದು ಆಡಿದರೆ ಯಾವ ಪಂದ್ಯವನ್ನೂ ಗೆಲ್ಲಲು ಸಾಧ್ಯ ಎನ್ನುವುದು ಕ್ರಿಕೆಟ್ ಕಲಿಸಿದ ಜೀವನದ ಪಾಠ.

ಕ್ಲಾಸೆನ್ ಮತ್ತು ಕ್ಲಿಂಟನ್ ಡಿಕಾಕ್ ಅವರು ಕ್ರೀಸಿನಲ್ಲಿ ಗಟ್ಟಿ ನಿಂತು ಆಡುತ್ತಿದ್ದಾಗ ದಕ್ಷಿಣ ಆಫ್ರಿಕಾ ಗೆದ್ದೇ ಬಿಟ್ಟಿತು ಎಂದು ಭಾವಿಸಿಕೊಂಡು ಟಿವಿ ಆಫ್ ಮಾಡಿ ಮಲಗಿದವರಿಗೆ ಇದು Life Time Lesson!

ಐಪಿಎಲ್ ಪಂದ್ಯಗಳ ಉದ್ದಕ್ಕೂ ಬಾಸುಂಡೆ ಬರುವ ಹಾಗೆ ಹೊಡೆಸಿಕೊಂಡಿದ್ದ ಭಾರತದ ಬೌಲರಗಳಿಗೆ ಈ ವಿಶ್ವಕಪ್ ಸ್ಟಾರ್ ವ್ಯಾಲ್ಯೂ ಕೊಟ್ಟಿತು ಅನ್ನುವುದು ಭರತವಾಕ್ಯ.

ಕಂಗ್ರಾಚ್ಯುಲೇಶನ್ ರೋಹಿತ್ ಆಂಡ್ ಹುಡುಗರು!

ಇದನ್ನೂ ಓದಿ: ರಾಜಮಾರ್ಗ ಅಂಕಣ: ಮುಖವೇ ಇಲ್ಲದ ಆಕೆಗೆ ತನ್ನ ಹೆಸರೇ ಮರೆತು ಹೋಗಿತ್ತು!

Continue Reading

ಮನಿ-ಗೈಡ್

ITR Filing: ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು ಈ ಸಂಗತಿ ತಿಳಿದಿರಲೇಬೇಕು!

ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸುವ ಪ್ರಕ್ರಿಯೆಯು ಸ್ವಲ್ಪ ಸಂಕೀರ್ಣ ಮತ್ತು ಸವಾಲಿನದ್ದಾಗಿರಬಹುದು. ತೆರಿಗೆದಾರರು ತಮ್ಮ ಐಟಿಆರ್ (ITR Filing) ಅನ್ನು ಸಲ್ಲಿಸುವಾಗ ತಿಳಿದಿರಬೇಕಾದ ಮತ್ತು ಗಮನ ಹರಿಸಬೇಕಾದ ಕೆಲವು ಪ್ರಮುಖ ವಿಷಯಗಳಿವೆ. ಆದಾಯ ತೆರಿಗೆ ರಿಟರ್ನ್‌ ಸಲ್ಲಿಸುವ ಮೊದಲು ಈ ಮಹತ್ವದ ಸಂಗತಿಗಳನ್ನು ತಿಳಿದುಕೊಂಡಿರಿ.

VISTARANEWS.COM


on

By

ITR Filing
Koo

ಆದಾಯ ತೆರಿಗೆ ರಿಟರ್ನ್ (ITR Filing) ಸಲ್ಲಿಸುವ ಮೊದಲು ತಿಳಿದುಕೊಳ್ಳಬೇಕಾದ ಹಲವಾರು ಸಂಗತಿಗಳಿವೆ. ಆದಾಯ ತೆರಿಗೆಯು (Income tax) ಜನರು ಮತ್ತು ಸಂಸ್ಥೆಗಳು ಗಳಿಸುವ ಆದಾಯ ಮತ್ತು ಲಾಭದ ಮೇಲೆ ಪಾವತಿಸುವ ತೆರಿಗೆಯಾಗಿದೆ. ಆದಾಯ ತೆರಿಗೆ ರಿಟರ್ನ್ (ITR) ಅನ್ನು ಸಲ್ಲಿಸುವುದು ತೆರಿಗೆದಾರರು ಮಾಡಲೇಬೇಕಾದ ವಾರ್ಷಿಕ ಆಥಿಕ ಕಾರ್ಯವಾಗಿದೆ.

ಭಾರತದಲ್ಲಿ (India) ತೆರಿಗೆದಾರರು (taxpayer) ತಮ್ಮ ಆದಾಯ ಮತ್ತು ತೆರಿಗೆಗಳ ವಾರ್ಷಿಕ ಲೆಕ್ಕಾಚಾರವನ್ನು ಸಲ್ಲಿಸುವ ಮೂಲಕ ಸರ್ಕಾರಕ್ಕೆ ವರದಿ ಮಾಡಬೇಕಾಗುತ್ತದೆ. ಪಾರದರ್ಶಕತೆ, ಹೊಣೆಗಾರಿಕೆ ಮತ್ತು ರಾಷ್ಟ್ರದ ಆರ್ಥಿಕ ವ್ಯವಸ್ಥೆಯ ಸರಿಯಾದ ಕಾರ್ಯನಿರ್ವಹಣೆಗೆ ಇದು ಅತ್ಯಮೂಲ್ಯವಾಗಿದೆ. 2023– 24ರ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವ ಪ್ರಕ್ರಿಯೆಯು ಪ್ರಾರಂಭವಾಗಿದೆ. ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸುವ ಪ್ರಕ್ರಿಯೆಯು ಸ್ವಲ್ಪ ಸಂಕೀರ್ಣ ಮತ್ತು ಸವಾಲಿನದ್ದಾಗಿರಬಹುದು. ತೆರಿಗೆದಾರರು ತಮ್ಮ ಐಟಿಆರ್ ಅನ್ನು ಸಲ್ಲಿಸುವಾಗ ತಿಳಿದಿರಬೇಕಾದ ಮತ್ತು ಗಮನ ಹರಿಸಬೇಕಾದ ಕೆಲವು ಪ್ರಮುಖ ವಿಷಯಗಳಿವೆ.

ಗಡುವು ತಿಳಿದಿರಿ

ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸುವ ಮೊದಲು ಎಲ್ಲಾ ತೆರಿಗೆದಾರರು ಗಮನಿಸಬೇಕಾದ ಮೊದಲ ಮತ್ತು ಪ್ರಮುಖ ವಿಷಯವೆಂದರೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಸಾಮಾನ್ಯವಾಗಿ ಪ್ರತಿ ಹಣಕಾಸು ವರ್ಷದ ಜುಲೈ 31 ಕೊನೆಯ ದಿನವಾಗಿದೆ. ಈ ವರ್ಷ ಆದಾಯ ತೆರಿಗೆ ಇಲಾಖೆಯು 2023-24ಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ.

ತೆರಿಗೆ ಪದ್ಧತಿಯನ್ನು ಅರ್ಥಮಾಡಿಕೊಳ್ಳಿ

ತೆರಿಗೆದಾರರು ಈಗ ಹಳೆಯ ತೆರಿಗೆ ಪದ್ಧತಿ ಮತ್ತು ಬಜೆಟ್ 2020ರಲ್ಲಿ ಪರಿಚಯಿಸಲಾದ ಹೊಸ ತೆರಿಗೆ ಪದ್ಧತಿಯ ನಡುವೆ ಆಯ್ಕೆ ಮಾಡಿಕೊಳ್ಳುವ ಆಯ್ಕೆಯನ್ನು ಹೊಂದಿದ್ದಾರೆ. ಎರಡೂ ತನ್ನದೇ ಆದ ಸಾಧಕ-ಬಾಧಕಗಳನ್ನು ಹೊಂದಿವೆ. ಹೊಸ ಪದ್ದತಿಯು ಕಡಿಮೆ ತೆರಿಗೆ ದರಗಳನ್ನು ನೀಡುತ್ತದೆ. ಆದರೆ ಕೆಲವು ವಿಷಯಗಳ ಮೇಲೆ ಕಡಿತ ಮತ್ತು ವಿನಾಯಿತಿಗಳನ್ನು ಮಿತಿಗೊಳಿಸುತ್ತದೆ.

ಹಳೆಯ ಪದ್ದತಿಯು ತುಲನಾತ್ಮಕವಾಗಿ ಹೆಚ್ಚಿನ ತೆರಿಗೆ ದರಗಳನ್ನು ಹೊಂದಿದೆ. ಆದರೆ ಕಡಿತ ಮತ್ತು ತೆರಿಗೆ ಪ್ರಯೋಜನಗಳನ್ನು ಕ್ಲೈಮ್ ಮಾಡುವ ಮೂಲಕ ಹಣವನ್ನು ಉಳಿಸಲು ಜನರಿಗೆ ಅವಕಾಶ ನೀಡುತ್ತದೆ. ಒಬ್ಬರ ಪರಿಸ್ಥಿತಿಗೆ ಅನುಗುಣವಾಗಿ ಯಾವ ಪದ್ಧತಿ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂಬುದನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಿಕೊಳ್ಳಬೇಕು.

ಯಾವ ತೆರಿಗೆ ವರ್ಗಕ್ಕೆ ಸೇರುತ್ತೀರಿ?

ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು ತೆರಿಗೆ ವರ್ಗಕ್ಕೆ ಸೇರುತ್ತೀರಿ ಎಂಬುದನ್ನು ತಿಳಿದುಕೊಂಡಿರಬೇಕು. ತೆರಿಗೆಯ ಆದಾಯವನ್ನು ತಿಳಿದುಕೊಳ್ಳುವುದು ತೆರಿಗೆ ಹೊಣೆಗಾರಿಕೆಯನ್ನು ನಿರ್ಧರಿಸಲು ಸಹಾಯ ಮಾಡುತ್ತದೆ, ಇದು ಭರ್ತಿ ಮಾಡಲು ಅರ್ಹವಾದ ಕಡಿತಗಳನ್ನು ಕ್ಲೈಮ್ ಮಾಡಲು ಮತ್ತು ಅದಕ್ಕೆ ಅನುಗುಣವಾಗಿ ಹಣಕಾಸು ಮತ್ತು ಹೂಡಿಕೆಗಳನ್ನು ಯೋಜಿಸಲು ಆದಾಯ ತೆರಿಗೆ ರಿಟರ್ನ್ ಅನ್ನು ಸಮರ್ಥ ಮತ್ತು ದೋಷ-ಮುಕ್ತ ರೀತಿಯಲ್ಲಿ ಸಲ್ಲಿಸುವುದನ್ನು ಖಚಿತಪಡಿಸುತ್ತದೆ.

ಅಗತ್ಯವಿರುವ ದಾಖಲೆಗಳನ್ನು ಪರಿಶೀಲಿಸಿ

ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ವೇಳೆ ದಾಖಲೆಗಳನ್ನು ಪರಿಶೀಲಿಸುವುದು ಬಹುಮುಖ್ಯವಾಗಿದೆ. ಆದಾಯ ತೆರಿಗೆ ಇಲಾಖೆಯು ತೆರಿಗೆದಾರರು ತಮ್ಮ ಆದಾಯ, ಕಡಿತಗಳು ಮತ್ತು ತೆರಿಗೆ ಪಾವತಿಗಳನ್ನು ದೃಢೀಕರಿಸಲು ವಿವಿಧ ದಾಖಲೆಗಳನ್ನು ಸಲ್ಲಿಸಬೇಕು. ಆದ್ದರಿಂದ ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಪ್ರಕ್ರಿಯೆಯು ಹೆಚ್ಚು ಸುವ್ಯವಸ್ಥಿತ ಮತ್ತು ಡಿಜಿಟೈಸ್ ಆಗಿರುವುದರಿಂದ ಡಿಜಿಟಲ್ ಸಾಧನದಲ್ಲಿ ಅಗತ್ಯ ದಾಖಲೆಗಳನ್ನು ಸಂಘಟಿಸುವುದು ಮತ್ತು ಉಳಿಸುವುದು ಫೈಲಿಂಗ್ ಪ್ರಕ್ರಿಯೆಯನ್ನು ವೇಗವಾಗಿ ಮತ್ತು ಹೆಚ್ಚು ನಿಖರವಾಗಿ ಮಾಡಲು ಸಹಾಯ ಮಾಡುತ್ತದೆ.


ಸರಿಯಾದ ಐಟಿಆರ್ ಅರ್ಜಿಯನ್ನು ಆಯ್ಕೆ ಮಾಡಿ

ಆದಾಯದ ಮೂಲ ಮತ್ತು ಒಟ್ಟು ಆದಾಯದ ಆಧಾರದ ಮೇಲೆ ಅನ್ವಯವಾಗುವ ಐಟಿಆರ್ ಫಾರ್ಮ್ ಅನ್ನು ಗುರುತಿಸುವುದು ಮತ್ತು ಆಯ್ಕೆ ಮಾಡುವುದು ಮುಖ್ಯವಾಗಿದೆ. ಏಪ್ರಿಲ್ ಮೊದಲ ವಾರದಲ್ಲಿ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ತೆರಿಗೆದಾರರಿಂದ ಆರಂಭಿಕ ರಿಟರ್ನ್ ಫೈಲಿಂಗ್ ಅನ್ನು ಉತ್ತೇಜಿಸಲು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಐಟಿಆರ್ ಫಾರ್ಮ್‌ಗಳು ಲಭ್ಯವಾಗುವಂತೆ ಮಾಡಿತು.

ಐಟಿಆರ್-1 ಆದಾಯದ ಮೂಲ ಸಂಬಳವಾಗಿದ್ದು, ಮನೆ ಆಸ್ತಿ ಮತ್ತು ಇತರ ಮೂಲಗಳಿಂದ ಬಡ್ಡಿ, ಲಾಭಂಶ ಸೇರಿ ಒಟ್ಟು 50 ಲಕ್ಷ ರೂ. ಆದಾಯವಿದ್ದವರು ಇದರಲ್ಲಿ ಅರ್ಜಿ ಸಲ್ಲಿಸಬೇಕು.

ಐಟಿಆರ್ -2 ಬಂಡವಾಳ ಅಥವಾ ವಿದೇಶಿ ಆಸ್ತಿಗಳಿಂದ ಆದಾಯದ ಮೂಲ ಹೊಂದಿರುವ ಹಿಂದೂ ಅವಿಭಜಿತ ಕುಟುಂಬಗಳು ಇದರಲ್ಲಿ ಅರ್ಜಿ ಸಲ್ಲಿಸಬೇಕು.

ಐಟಿಆರ್- 3 ವ್ಯಾಪಾರ ಅಥವಾ ಸ್ವಯಂ ವೃತ್ತಿಯಿಂದ ಆದಾಯ ಹೊಂದಿರುವ ವ್ಯಕ್ತಿಗಳು, ಐಟಿಆರ್- 4 ವ್ಯಾಪಾರ ಅಥವಾ ಸ್ವಂತ ವೃತ್ತಿಯಿಂದ ಆದಾಯ ಹೊಂದಿರುವವರು ಇದರಲ್ಲಿ ಅರ್ಜಿ ಸಲ್ಲಿಸಬಹುದು.

ವೈಯಕ್ತಿಕ ಮತ್ತು ಬ್ಯಾಂಕ್ ಖಾತೆ ವಿವರ ಪರಿಶೀಲಿಸಿ

ಐಟಿಆರ್ ಅನ್ನು ಸಲ್ಲಿಸುವ ಮೊದಲು ತೆರಿಗೆ ಮರುಪಾವತಿ ಪ್ರಕ್ರಿಯೆಯಲ್ಲಿ ವಿಳಂಬವನ್ನು ತಪ್ಪಿಸಲು ತೆರಿಗೆದಾರರು ತಮ್ಮ ವೈಯಕ್ತಿಕ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ಪರಿಶೀಲಿಸಬೇಕು. ಹೆಸರು, ವಿಳಾಸ, ಇಮೇಲ್ ಮತ್ತು ಪಾನ್ ನಂತಹ ವಿವರಗಳನ್ನು ಲಿಂಕ್ ಮಾಡಲಾಗಿದೆ ಮತ್ತು ತೆರಿಗೆ ರಿಟರ್ನ್‌ನಲ್ಲಿ ನಿಖರವಾಗಿ ನಮೂದಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಸರಿಯಾದ ಮೌಲ್ಯಮಾಪನ ವರ್ಷವನ್ನು ಆಯ್ಕೆ ಮಾಡಿ

ತೆರಿಗೆ ರಿಟರ್ನ್‌ನಲ್ಲಿ ಸರಿಯಾದ ಮೌಲ್ಯಮಾಪನ ವರ್ಷವನ್ನು ನಮೂದಿಸಿ. ಇದರಲ್ಲಿ ತಪ್ಪುಗಳಾದರೆ ಹೆಚ್ಚು ತೆರಿಗೆ ಮತ್ತು ಅನಗತ್ಯ ದಂಡಗಳಿಗೆ ಕಾರಣವಾಗಬಹುದು.

ಫಾರ್ಮ್ 16ರಲ್ಲಿ ವಿವರಗಳನ್ನು ಪರಿಶೀಲಿಸಿ

ಫಾರ್ಮ್ 16ರಲ್ಲಿನ ಸಂಬಳದ ಭಾಗಗಳು, ಟಿಡಿಎಸ್ ಕಡಿತ ಮತ್ತು ತೆರಿಗೆ-ಉಳಿತಾಯ ಹೂಡಿಕೆಗಳಂತಹ ವಿವರಗಳು ಸರಿಯಾಗಿವೆಯೇ ಎಂದು ಮುಂಚಿತವಾಗಿ ಖಚಿತಪಡಿಸಿಕೊಳ್ಳಿ. ಪೇ ಸ್ಲಿಪ್‌ ಮತ್ತು ಹೂಡಿಕೆ ಹೇಳಿಕೆಗಳೊಂದಿಗೆ ಮಾಹಿತಿಯನ್ನು ಕ್ರಾಸ್-ಚೆಕ್ ಮಾಡಿ. ಯಾವುದೇ ವ್ಯತ್ಯಾಸಗಳನ್ನು ಸರಿಪಡಿಸಲು ಉದ್ಯೋಗದಾತರಿಗೆ ವರದಿ ಮಾಡಬೇಕು.

ಹಣಕಾಸು ವರ್ಷದಲ್ಲಿ ಒಬ್ಬರು ಬಹು ಉದ್ಯೋಗದಾತರನ್ನು ಹೊಂದಿದ್ದರೆ ರಿಟರ್ನ್ ಸಲ್ಲಿಸುವ ಮೊದಲು ನಿಮ್ಮ ಎಲ್ಲಾ ಫಾರ್ಮ್ 16ರಿಂದ ಆದಾಯವನ್ನು ಒಟ್ಟುಗೂಡಿಸಿರುವುದು ಖಚಿತಪಡಿಸಿಕೊಳ್ಳಿ. ಸರಿಯಾದ ಕಡಿತಗಳನ್ನು ಕ್ಲೈಮ್ ಮಾಡಲು ಮತ್ತು ಒಟ್ಟು ಆದಾಯವನ್ನು ನಿಖರವಾಗಿ ವರದಿ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.

ಇದನ್ನೂ ಓದಿ: New Rules: ಐಟಿಆರ್‌ನಿಂದ ಕ್ರೆಡಿಟ್ ಕಾರ್ಡ್‌ವರೆಗೆ; ಈ ತಿಂಗಳಲ್ಲಿ ಹಲವು ಹೊಸ ಬದಲಾವಣೆ

ನಿಖರ ವರದಿ ಖಚಿತಪಡಿಸಿ

ಫಾರ್ಮ್ 26ಎಎಸ್ (ತೆರಿಗೆ ಕ್ರೆಡಿಟ್ ಸ್ಟೇಟ್‌ಮೆಂಟ್) ಮತ್ತು ಎಐಎಸ್ /ಟಿಐಎಸ್ (ವಾರ್ಷಿಕ ಮಾಹಿತಿ ಹೇಳಿಕೆ/ತೆರಿಗೆ ಮಾಹಿತಿ ಹೇಳಿಕೆ) ನಲ್ಲಿ ಲಭ್ಯವಿರುವ ಮಾಹಿತಿಯೊಂದಿಗೆ ಒಟ್ಟು ಆದಾಯವನ್ನು ಸಂಪೂರ್ಣವಾಗಿ ಸಮನ್ವಯಗೊಳಿಸಿ. ಯಾಕೆಂದರೆ ಇದು ಯಾವುದೇ ವ್ಯತ್ಯಾಸಗಳನ್ನು ಗುರುತಿಸಲು ಮತ್ತು ಎಲ್ಲಾ ಆದಾಯ ಮೂಲಗಳನ್ನು ನಿಖರವಾಗಿ ವರದಿ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.

Continue Reading
Advertisement
lovers fight hubli
ವೈರಲ್ ನ್ಯೂಸ್11 mins ago

Lovers Fight: ಫೋನ್‌ಗಾಗಿ ಕಿತ್ತಾಡಿದ ಪ್ರೇಮಿಗಳು, ಲವರ್‌ ಬಾಯ್‌ಗೆ ಸಾರ್ವಜನಿಕರ ಗೂಸಾ

Team India stuck in Barbados
ಕ್ರೀಡೆ14 mins ago

Team India stuck in Barbados: ಟೀಮ್​ ಇಂಡಿಯಾ ತವರಿಗೆ ವಾಪಸಾಗುವುದು ಮತ್ತಷ್ಟು ವಿಳಂಬ

Latest26 mins ago

Viral Video: ರಸ್ತೆ ಮೇಲೆಯೇ ಮಹಿಳೆಯ ವಶೀಕರಣ! 4.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಲೂಟಿ

Kalki 2898 AD
ಸಿನಿಮಾ26 mins ago

Kalki 2898 AD: ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದ ʼಕಲ್ಕಿʼ; ಬಿಡುಗಡೆಯಾದ 5ನೇ ದಿನ ಗಳಿಸಿದ್ದು ಬರೋಬ್ಬರಿ 84 ಕೋಟಿ ರೂ.

Anant Ambani
ಫ್ಯಾಷನ್32 mins ago

Anant Ambani: ಅನಂತ್ ಅಂಬಾನಿ ಬಳಿ ಇವೆ 300 ಕೋಟಿಯ ವಾಚ್‌ಗಳು! ಎಂಥೆಂಥ ಗಡಿಯಾರಗಳಿವೆ ನೋಡಿ!

Team India Coach
ಕ್ರೀಡೆ38 mins ago

Team India Coach: ಟೀಮ್​ ಇಂಡಿಯಾ ಕೋಚ್​ ಆಯ್ಕೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಜಯ್‌ ಶಾ

kannada marathi row
ಪ್ರಮುಖ ಸುದ್ದಿ54 mins ago

Kannada- Marathi Row: ಮಹಾರಾಷ್ಟ್ರ ಸದನದಲ್ಲಿ ಕನ್ನಡ ಪರ ದನಿ, ಗಡಿಯಲ್ಲಿ ಮರಾಠಿ ದಬ್ಬಾಳಿಕೆಗೆ ಪ್ರತಿಭಟನೆ

Food for Concentration
ಆರೋಗ್ಯ1 hour ago

Food for Concentration: ಈ ಆಹಾರಗಳ ಸೇವನೆಯಿಂದ ನಿಮ್ಮ ಏಕಾಗ್ರತೆ ಶಕ್ತಿಯೇ ಕುಂಠಿತವಾಗಬಹುದು!

Grand Marriage
Latest1 hour ago

Grand Marriage: ಭಾರತದ ಶ್ರೀಮಂತ ಕುಟುಂಬಗಳ ಅತ್ಯಂತ ಅದ್ಧೂರಿ ಮದುವೆ ಯಾರದು? ಪಟ್ಟಿ ಇಲ್ಲಿದೆ

ರಾಜಮಾರ್ಗ ಅಂಕಣ virat kohli rohit sharma
ಅಂಕಣ1 hour ago

ರಾಜಮಾರ್ಗ ಅಂಕಣ: ಟಿ20 ವಿಶ್ವಕಪ್ ಫೈನಲ್; ಒಂದು ಪಂದ್ಯ – ಹಲವು ಪಾಠ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ15 hours ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ2 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು2 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ3 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ3 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ4 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು5 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

ಟ್ರೆಂಡಿಂಗ್‌