Bitcoin Scam: ಬಿಟ್‌ಕಾಯಿನ್ ಹಗರಣಕ್ಕೆ ಬಿಗ್ ಟ್ವಿಸ್ಟ್, ಡಿಐಜಿ ಮೇಲಿನ ದೂರಿನ ವಿಚಾರಣೆ - Vistara News

ಪ್ರಮುಖ ಸುದ್ದಿ

Bitcoin Scam: ಬಿಟ್‌ಕಾಯಿನ್ ಹಗರಣಕ್ಕೆ ಬಿಗ್ ಟ್ವಿಸ್ಟ್, ಡಿಐಜಿ ಮೇಲಿನ ದೂರಿನ ವಿಚಾರಣೆ

Bitcoin Scam: ಪ್ರಕರಣದ ಪ್ರಮುಖ ಕಿಂಗ್‌ಪಿನ್ ಶ್ರೀಕಿಗೆ ಲ್ಯಾಪ್‌ಟಾಪ್ ನೀಡಿ 20 ಕೋಟಿ ರೂ. ಮೌಲ್ಯದ ಬಿಟ್‌ಕಾಯಿನ್ ವರ್ಗಾವಣೆ ಮಾಡಿಸಿಕೊಂಡ ಬಗ್ಗೆ ಡಿಐಜಿ ಟಿ.ಪಿ‌ ಶೇಷ ವಿರುದ್ಧ ಲಿಖಿತ ದೂರಿನ ಮೂಲಕ ಕೈದಿ ನಾಗೇಶ್‌ ಆರೋಪ ಮಾಡಿದ್ದ. ಈ ಎಲ್ಲ ಸಂಗತಿಗಳ ಬಗ್ಗೆ ನಿನ್ನೆ ಹೇಳಿಕೆ ದಾಖಲಿಸಿಕೊಂಡು ಪಿಎಸ್ಐ ನೇತೃತ್ವದ ಎಸ್ಐಟಿ ತಂಡ ಬೆಂಗಳೂರಿಗೆ ತೆರಳಿದೆ.

VISTARANEWS.COM


on

Bitcoin scam
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಳಗಾವಿ: ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಬಹುಕೋಟಿ ಬಿಟ್‌ಕಾಯಿನ್ ಹಗರಣದ (Bitcoin Scam) ವಿಚಾರಣೆಗೆ ಬಿಗ್ ಟ್ವಿಸ್ಟ್ ದೊರೆತಿದೆ. ಈ ಹಗರಣದಲ್ಲಿ ಬಂದಿಖಾನೆ ಇಲಾಖೆ (Prison Department) ಉತ್ತರ ವಲಯ ಡಿಐಜಿ ಟಿ.ಪಿ. ಶೇಷ (DIG TP Shesha) ಹೆಸರು ತಳಕು ಹಾಕಿಕೊಂಡಿದ್ದು, ಇವರ ಬಗ್ಗೆ ದೂರು ನೀಡಿದ ಕೈದಿಯಿಂದ ಎಸ್‌ಐಟಿ (SIT) ಹೇಳಿಕೆ ದಾಖಲಿಸಿಕೊಂಡಿದೆ.

ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ನಿನ್ನೆ ಎಸ್ಐಟಿ ಅಧಿಕಾರಿಗಳ ಭೇಟಿ ನೀಡಿ, ಡಿಐಜಿ ಟಿ.ಪಿ ಶೇಷ ವಿರುದ್ಧ ದೂರು ನೀಡಿದ್ದ ಕೈದಿ ನಾಗೇಶ್ ಬಳಿಯಿಂದ ಹೇಳಿಕೆ ದಾಖಲಿಸಿಕೊಂಡರು. ದೂರಿನ ಅರ್ಜಿ ಇಟ್ಟುಕೊಂಡು ಮೂರು ಗಂಟೆಗಳ ಕಾಲ ಕೈದಿಯ ವಿಚಾರಣೆ ನಡೆಸಿದರು.

ಪ್ರಕರಣದ ಪ್ರಮುಖ ಕಿಂಗ್‌ಪಿನ್ ಶ್ರೀಕಿಗೆ ಲ್ಯಾಪ್‌ಟಾಪ್ ನೀಡಿ 20 ಕೋಟಿ ರೂ. ಮೌಲ್ಯದ ಬಿಟ್‌ಕಾಯಿನ್ ವರ್ಗಾವಣೆ ಮಾಡಿಸಿಕೊಂಡ ಬಗ್ಗೆ ಡಿಐಜಿ ಟಿ.ಪಿ‌ ಶೇಷ ವಿರುದ್ಧ ಲಿಖಿತ ದೂರಿನ ಮೂಲಕ ಕೈದಿ ನಾಗೇಶ್‌ ಆರೋಪ ಮಾಡಿದ್ದ. ಈ ಎಲ್ಲ ಸಂಗತಿಗಳ ಬಗ್ಗೆ ನಿನ್ನೆ ಹೇಳಿಕೆ ದಾಖಲಿಸಿಕೊಂಡು ಪಿಎಸ್ಐ ನೇತೃತ್ವದ ಎಸ್ಐಟಿ ತಂಡ ಬೆಂಗಳೂರಿಗೆ ತೆರಳಿದೆ.

ಪ್ರಕರಣದ ಸಂಬಂಧ ಡಿಐಜಿ ಟಿ.ಪಿ ಶೇಷ ಅವರಿಗೂ ಎಸ್ಐಟಿ ನೋಟಿಸ್ ನೀಡುವ ಸಾಧ್ಯತೆ ಇದೆ. ʼಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಶ್ರೀಕಿಯನ್ನು ನೋಡಿಯೇ ಇಲ್ಲʼ ಎಂದು ಡಿಐಜಿ ಟಿ.ಪಿ ಶೇಷ ಈ ಹಿಂದೆ ಹೇಳಿದ್ದರು. ಇದೀಗ ಡಿಐಜಿ ವಿರುದ್ಧ ಕೈದಿ ಪತ್ರ ಬರೆಯುತ್ತಿದ್ದಂತೆ ಬಿಟ್‌ಕಾಯಿನ್ ತನಿಖಾ ತಂಡ ಹಿಂಡಲಗಾ ಜೈಲು ತಲುಪಿದೆ.

ಪೊಲೀಸರ ಮೇಲೆ ಜೀಪ್‌ ಹತ್ತಿಸಿದ್ದ DySP ಶ್ರೀಧರ್‌ ಪೂಜಾರ್‌ಗೆ ಜಾಮೀನು!

ಬಿಟ್‌ಕಾಯಿನ್‌ ಹಗರಣಕ್ಕೆ (Bitcoin Scam) ಸಂಬಂಧಿಸಿದಂತೆ ಡಿವೈಎಸ್‌ಪಿ ಶ್ರೀಧರ್‌ ಪೂಜಾರ್‌ (Sridhar Pujar) ಅವರಿಗೆ ಹೈಕೋರ್ಟ್‌ (Karnataka High Court) ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಶ್ರೀಧರ್‌ ಪೂಜಾರ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಅರುಣ್‌ ಶ್ಯಾಮ್‌, “ಪೊಲೀಸರು ತಮ್ಮ ಪ್ರತಿಷ್ಠೆಗಾಗಿ ಕೇಸ್‌ ದಾಖಲಿಸಿದ್ದಾರೆ. ಪ್ರಕರಣ ನಡೆದ 4 ವರ್ಷಗಳ ನಂತರ ಬಂಧಿಸಲು ಯತ್ನಿಸಿದ್ದಾರೆ. ಒಂದೇ ಕೇಸ್‌ಗೆ ಎರಡೆರಡು ಬಾರಿ ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸಿದ್ದಾರೆ” ಎಂದು ಹೇಳಿದರು. ಪೊಲೀಸರ ಕ್ರಮಕ್ಕೆ ಹೈಕೋರ್ಟ್‌ ನ್ಯಾಯಮೂರ್ತಿ ಎಂ.ಜಿ. ಉಮಾ ಅಸಮಾಧಾನ ವ್ಯಕ್ತಪಡಿಸಿದರು. “ಜನರನ್ನು ಮೂರ್ಖರನ್ನಾಗಿಸಲು ಪೊಲೀಸರು ಯತ್ನಿಸಿದಂತಿದೆ” ಎಂದ ಅವರು, ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರು.

ಬಿಟ್‌ಕಾಯಿನ್‌ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದ ಸಿಸಿಬಿ ತಂಡದಲ್ಲಿ ಶ್ರೀಧರ್‌ ಪೂಜಾರ್‌ ಅವರು ಕೂಡ ಇದ್ದರು. ಬಿಟ್‌ಕಾಯಿನ್‌ ಪ್ರಕರಣದ ಆರೋಪಿಗಳನ್ನು ತಮ್ಮ ವಶದಲ್ಲಿ ಇರಿಸಿಕೊಂಡು ಹ್ಯಾಕಿಂಗ್‌, ಪಾಸ್‌ವರ್ಡ್‌ ಬದಲಾವಣೆ, ಬಿಟ್‌ಕಾಯಿನ್‌ ವರ್ಗಾವಣೆ ಸೇರಿ ಹಲವು ಅಕ್ರಮ ಎಸಗಿರುವ ಕುರಿತು ಶ್ರೀಧರ್‌ ಪೂಜಾರ್‌ ವಿರುದ್ಧ ಆರೋಪಿಗಳು ಕೇಳಿಬಂದಿದ್ದವು. ಅದರಂತೆ, ಎಸ್‌ಐಟಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಕಳೆದ ಪೆಬ್ರವರಿಯಲ್ಲಿ ಶ್ರೀಧರ್‌ ಪೂಜಾರ್‌ ಅವರನ್ನು ಬಂಧಿಸಲು ತೆರಳಿದ್ದರು. ಇದೇ ವೇಳೆ, ಪೊಲೀಸರ ಮೇಲೆಯೇ ಕಾರು ಹತ್ತಿಸಲು ಯತ್ನಿಸಿದ್ದ ಶ್ರೀಧರ್‌ ಪೂಜಾರ್‌, ಪರಾರಿಯಾಗಿದ್ದರು.

ಏನಿದು ಬಿಟ್‌ ಕಾಯಿನ್‌ ಹಗರಣ?

ನವೆಂಬರ್ 2020ರಲ್ಲಿ, ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಶ್ರೀಕೃಷ್ಣ ಮತ್ತು ಅವರ ಸಹಚರರನ್ನು ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿಸಿದರು. ಶ್ರೀಕಿ ಡಾರ್ಕ್‌ನೆಟ್ ಮೂಲಕ ಬಿಟ್‌ಕಾಯಿನ್‌ಗಳನ್ನು ಬಳಸಿಕೊಂಡು ಡ್ರಗ್‌ಗಳನ್ನು ಸಂಗ್ರಹಿಸಿದ್ದಾರೆ ಮತ್ತು ಅದನ್ನು ತಮ್ಮ ಹೈ ಪ್ರೊಫೈಲ್ ಕ್ಲೈಂಟ್‌ಗಳಿಗೆ ಮಾರಾಟ ಮಾಡಿದ್ದಾರೆ ಎಂಬ ವಿಷಯ ಹೊರಬಂದಿತ್ತು. ಶ್ರೀಕಿ 2019ರಲ್ಲಿ ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ನಡೆದ ಹ್ಯಾಕಿಂಗ್‌ನಲ್ಲಿ ಭಾಗಿಯಾಗಿದ್ದ ಎಂಬ ಆರೋಪವಿದೆ.

2019ರ ಜುಲೈನಲ್ಲಿ 7.37 ಕೋಟಿ ಅನಧಿಕೃತ ನಿಧಿ ವರ್ಗಾವಣೆ ಬೆಳಕಿಗೆ ಬಂದಿತ್ತು. ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಎಂಬ ಹ್ಯಾಕರ್ ಕರ್ನಾಟಕ ಸರ್ಕಾರದ ಇ-ಆಡಳಿತ ಕೇಂದ್ರದ ಪೋರ್ಟಲ್ ಅನ್ನು ಹ್ಯಾಕ್ ಮಾಡಿದ್ದಾನೆ ಮತ್ತು 10.5 ಕೋಟಿ ರೂಪಾಯಿ ಮತ್ತು 1.05 ಕೋಟಿ ರೂಪಾಯಿಗಳ ಹಣವನ್ನು ಬ್ಯಾಂಕ್ NGO, M/s. ಉದಯ್ ಗ್ರಾಮ ವಿಕಾಸ ಸಂಸ್ಥೆ, ನಾಗ್‌ಪುರ ಮತ್ತು ಮಾಲೀಕತ್ವ, M/s. ನಿಮ್ಮಿ ಎಂಟರ್‌ಪ್ರೈಸಸ್, ಬುಲಂದ್‌ಶಹರ್, ಉತ್ತರ ಪ್ರದೇಶ ಹೀಗೆ ವಿವರ ಇರುವ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿ ಅವರಿಂದ ನಗದು ಪಡೆದಿದ್ದ ಎಂದು ಹೇಳಲಾಗಿದೆ.

ಇದನ್ನೂ ಓದಿ: Actor Darshan: ಪರಪ್ಪನ ಅಗ್ರಹಾರದಿಂದ‌ ದರ್ಶನ್ ಬೇರೆ ಜೈಲಿಗೆ ಶಿಫ್ಟ್?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Chennai Super King : ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕ್ರಿಕೆಟ್ ಅಕಾಡೆಮಿ ಆರಂಭಿಸಿದ ಚೆನ್ನೂ ಸೂಪರ್ ಕಿಂಗ್ಸ್​

Chennai Super King :

VISTARANEWS.COM


on

Chennai Super King
Koo

ಬೆಂಗಳೂರು: ಐದು ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (Chennai Super King) ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಅಂತಾರಾಷ್ಟ್ರೀಯ ಸೂಪರ್ ಕಿಂಗ್ಸ್ ಅಕಾಡೆಮಿ ಸ್ಥಾಪಿಸುವುದಾಗಿ ಘೋಷಿಸಿದೆ. ಜನಪ್ರಿಯ ಫ್ರ್ಯಾಂಚೈಸಿ ಇತರ ಅಂತಾರಾಷ್ಟ್ರೀಯ ಅಕಾಡೆಮಿಗಳು. ಅಮೆರಿಕದ ಡಲ್ಲಾಸ್ ಮತ್ತು ಯುನೈಟೆಡ್ ಕಿಂಗ್​​ಡಮ್​​ನ ರೀಡಿಂಗ್​​ನಲ್ಲಿವೆ.

ಸಿಡ್ನಿಯಲ್ಲಿರುವ ಸೂಪರ್ ಕಿಂಗ್ಸ್ ಅಕಾಡೆಮಿಯು ಸಿಡ್ನಿ ಒಲಿಂಪಿಕ್ ಪಾರ್ಕ್​​ನ ಸಿಲ್ವರ್​ವಾಟರ್ ರಸ್ತೆಯ ಕ್ರಿಕೆಟ್ ಸೆಂಟ್ರಲ್​ನಲ್ಲಿ ಸ್ಥಾಪನೆಯಾಗಲಿದೆ. ಅತ್ಯಾಧುನಿಕ ಕೇಂದ್ರವು ವರ್ಷಪೂರ್ತಿ ಒಳಾಂಗಣ ಮತ್ತು ಹೊರಾಂಗಣ ತರಬೇತಿ ಸೌಲಭ್ಯಗಳನ್ನು ಹೊಂದಿರುತ್ತದೆ. ಬಾಲಕ ಮತ್ತು ಬಾಲಕಿಯರಿಗೆ ಕ್ರಿಕೆಟ್ ತರಬೇತಿ ಸೆಪ್ಟೆಂಬರ್ ನಿಂದ ಪ್ರಾರಂಭವಾಗಲಿದೆ.

2008ರಲ್ಲಿ ಐಪಿಎಲ್ ಪ್ರಾರಂಭವಾದಾಗಿನಿಂದ ಪ್ರಾರಂಭವಾದ ಆಸ್ಟ್ರೇಲಿಯಾದೊಂದಿಗೆ ನಮ್ಮ ವಿಶೇಷ ಪ್ರಯಾಣವನ್ನು ವಿಸ್ತರಿಸಲು ನಾವು ಸಂತೋಷಪಡುತ್ತೇವೆ. ಆಸ್ಟ್ರೇಲಿಯಾವು ಬಲವಾದ ಕ್ರೀಡಾ ಸಂಸ್ಕೃತಿ ಮತ್ತು ಶ್ರೀಮಂತ ಕ್ರಿಕೆಟ್ ಪರಂಪರೆಯನ್ನು ಹೊಂದಿರುವ ಚಾಂಪಿಯನ್ ದೇಶವಾಗಿದೆ. ಸೂಪರ್ ಕಿಂಗ್ಸ್ ಅಕಾಡೆಮಿಯು ಹುಡುಗರು ಮತ್ತು ಬಾಲಕಿಯರಿಬ್ಬರ ಕ್ರಿಕೆಟ್ ಪ್ರತಿಭಾನ್ವೇಷನೆಗೆ ಸಹಾಯ ಮಾಡಲಿದೆ. ಇದು ದೇಶದಲ್ಲಿ ಈಗಾಗಲೇ ಬಲವಾದ ಕ್ರಿಕೆಟ್ ವ್ಯವಸ್ಥೇ ಹೊಂದಿದೆ”ಎಂದು ಸಿಎಸ್​ಕೆ ಸಿಇಒ ಕೆಎಸ್ ವಿಶ್ವನಾಥನ್ ಹೇಳಿದರು.

ಕಳೆದ ಕೆಲವು ವರ್ಷಗಳಿಂದ ಕ್ರಿಕೆಟ್​​ನಲ್ಲಿ ಭೌಗೋಳಿಕ ಗಡಿಗಳು ಕಡಿಮೆಯಾಗುತ್ತಿವೆ. ಭಾರತ, ಯುಎಸ್ಎ, ಯುಕೆ ಮತ್ತು ಈಗ ಆಸ್ಟ್ರೇಲಿಯಾದಲ್ಲಿ ಉಪಸ್ಥಿತಿಯೊಂದಿಗೆ ನಮ್ಮ ವಿಶ್ವ ದರ್ಜೆಯ ಸೌಲಭ್ಯಗಳು ಬಲವಾದ ಕೋಚಿಂಗ್ ವಿಯಷ, ವಿನಿಮಯ ಕಾರ್ಯಕ್ರಮಗಳ ಮೂಲಕ ಮುಂದಿನ ಪೀಳಿಗೆಯ ಕ್ರಿಕೆಟಿಗರನ್ನು ಅಭಿವೃದ್ಧಿಪಡಿಸಲು ನಮಗೆ ಅವಕಾಶವಿದೆ” ಎಂದು ಅವರು ಹೇಳಿದರು.

ಮ್ಯಾಥ್ಯೂ ಹೇಡನ್, ಶೇನ್ ವ್ಯಾಟ್ಸನ್ ಮತ್ತು ಪ್ರಸ್ತುತ ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ ಅವರಂತಹ ಕೆಲವು ಪ್ರಸಿದ್ಧ ಆಟಗಾರರು ತಮ್ಮ ಜರ್ಸಿಯನ್ನು ಧರಿಸಿರುವುದರಿಂದ ಸೂಪರ್ ಕಿಂಗ್ಸ್ ಆಸ್ಟ್ರೇಲಿಯಾದೊಂದಿಗೆ ಉತ್ತಮ ಸಂಬಂಧವನ್ನು ಹಂಚಿಕೊಂಡಿದೆ. ಕ್ರೀಡೆಯನ್ನು ಪ್ರೀತಿಸುವ ರಾಷ್ಟ್ರದಲ್ಲಿ ಸೂಪರ್ ಕಿಂಗ್ಸ್ ಅಕಾಡೆಮಿಯನ್ನು ಸ್ಥಾಪಿಸುವ ಮೊದಲು ಇದು ಸಮಯದ ವಿಷಯವೆಂದು ತೋರುತ್ತದೆ ಎಂದು ನುಡಿದರು.

ಐಪಿಎಲ್ 2024 ರಲ್ಲಿ ಸಿಎಸ್​​ಕೆ ಪ್ರದರ್ಶನ ಹೇಗಿತ್ತು?

ಐಪಿಎಲ್ 17 ನೇ ಆವೃತ್ತಿಗೆ ಮುಂಚಿತವಾಗಿ ಮಹೇಂದ್ರ ಸಿಂಗ್ ಧೋನಿ ಋತುರಾಜ್ ಗಾಯಕ್ವಾಡ್​​ಗೆ ನಾಯಕತ್ವವನ್ನು ಹಸ್ತಾಂತರಿಸಿದರು. ಮೊದಲ ಆರು ಪಂದ್ಯಗಳಲ್ಲಿ ತಮ್ಮ ತಂಡವನ್ನು ನಾಲ್ಕು ಗೆಲುವುಗಳಿಗೆ ಮುನ್ನಡೆಸಿದ್ದರಿಂದ ಯುವ ಆಟಗಾರ ಉತ್ತಮ ಆರಂಭ ಹೊಂದಿದ್ದರು. ಆದಾಗ್ಯೂ, ಪಂದ್ಯಾವಳಿ ಮುಂದುವರೆದಂತೆ ಮೆನ್ ಇನ್ ಯೆಲ್ಲೋ ಪ್ರಭಾವ ಕಡಿಮೆಯಾಯಿತು. ಆರ್​ಸಿಬಿ ಜತೆ ಕೊನೇ ಪಂದ್ಯ ಸೋತು ಐದನೇ ಸ್ಥಾನ ಪಡೆಯಿತು.

ಇದನ್ನೂ ಓದಿ: Anushka Sharma : ಪತ್ನಿ ಅನುಷ್ಕಾ ಬರ್ತ್​​ಡೇಗೆ ಕೊಹ್ಲಿ ಕೇಕ್​ ಆರ್ಡರ್​ ಮಾಡಿದ್ದು ಬೆಂಗಳೂರಿನಿಂದ; ತಿಂಗಳುಗಳ ಬಳಿಕ ಮಾಹಿತಿ ಬಹಿರಂಗ

ಸಿಎಸ್​ಕೆಯ ಸಹೋದರಿ ಫ್ರಾಂಚೈಸಿಯಾದ ಟೆಕ್ಸಾಸ್ ಸೂಪರ್ ಕಿಂಗ್ಸ್ ಪ್ರಸ್ತುತ ಮೇಜರ್ ಲೀಗ್ ಕ್ರಿಕೆಟ್ (ಎಂಎಲ್​​​ಸಿ ) 2024 ರ ಎರಡನೇ ಆವೃತ್ತಿಯಲ್ಲಿ ಆಡುತ್ತಿದೆ. ಆಡಿರುವ ಮೊದಲ ಐದು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದಿರುವ ಅವರು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.

Continue Reading

ಪ್ರಮುಖ ಸುದ್ದಿ

Anushka Sharma : ಪತ್ನಿ ಅನುಷ್ಕಾ ಬರ್ತ್​​ಡೇಗೆ ಕೊಹ್ಲಿ ಕೇಕ್​ ಆರ್ಡರ್​ ಮಾಡಿದ್ದು ಬೆಂಗಳೂರಿನಿಂದ; ತಿಂಗಳುಗಳ ಬಳಿಕ ಮಾಹಿತಿ ಬಹಿರಂಗ

Anushka Sharma: ಉತ್ತಿಷ್ಠ ಕುಮಾರ್ ಎಂಬುವರು ಮಂಗಳವಾರ ತಮ್ಮ ಇನ್ಸ್ಟಾಗ್ರಾಮ್ ಫೀಡ್​​ನಲ್ಲಿ ದಂಪತಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಬರ್ತ್​ಡೇ ಗರ್ಲ್​​ ಅನುಷ್ಕಾಗೆ ಅವರು ತಯಾರಿಸಿದ ಚಾಕೊಲೇಟ್ ಕೇಕ್ ನ ಚಿತ್ರವನ್ನು ಸಹ ಅವರು ಹಂಚಿಕೊಂಡಿದ್ದಾರೆ. ಕೇಕ್ ಮೇಲಿನ ಸಂದೇಶದಲ್ಲಿ “ಹ್ಯಾಪಿ ಬರ್ತ್ ಡೇ ಮ್ಯಾಡ್ ಒನ್” ಎಂದು ಬರೆಯಲಾಗಿದೆ. ಚಿತ್ರದಲ್ಲಿ ಅನುಷ್ಕಾ ಶರ್ಮಾ ಬಿಳಿ ಉಡುಪನ್ನು ಧರಿಸಿದ್ದರೆ, ವಿರಾಟ್ ಕೊಹ್ಲಿ ಬೀಗ್​ ಬಣ್ಣದ ಟೀ ಶರ್ಟ್ ಧರಿಸಿದ್ದಾರೆ.

VISTARANEWS.COM


on

Anushka Sharma
Koo

ನವದೆಹಲಿ: ಅನುಷ್ಕಾ ಶರ್ಮಾ (Anushka Sharma) ಅವರ 36ನೇ ಹುಟ್ಟುಹಬ್ಬದ ಆಚರಣೆ ಮೇ 1ರಂದು ನಡೆದಿತ್ತು. ಆ ದಿನದ ಸಂಭ್ರಮಾಚರಣೆಗಾಗಿ ಪತಿ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್​ ಕೊಹ್ಲಿ ಬೆಂಗಳೂರಿನಿಂದ ಕೇಕ್ ಆರ್ಡರ್ ಮಾಡಿದ್ದರು ಎಂಬ ಮಾಹಿತಿ ಇದೀಗ ಬೆಳಕಿಗೆ ಬಂದಿದೆ. ಬೆಂಗಳೂರು ಮೂಲದ ಬೇಕರ್ ಒಬ್ಬರು ಅನುಷ್ಕಾ ಶರ್ಮಾ ಅವರ ಹುಟ್ಟುಹಬ್ಬದ ವಿಶೇಷ ಕೇಕ್ ತಯಾರಿಸಲು ವಿರಾಟ್ ಕೊಹ್ಲಿ ತಮ್ಮನ್ನು ಸಂಪರ್ಕಿಸಿದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಉತ್ತಿಷ್ಠ ಕುಮಾರ್ ಎಂಬುವರು ಮಂಗಳವಾರ ತಮ್ಮ ಇನ್ಸ್ಟಾಗ್ರಾಮ್ ಫೀಡ್​​ನಲ್ಲಿ ದಂಪತಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಬರ್ತ್​ಡೇ ಗರ್ಲ್​​ ಅನುಷ್ಕಾಗೆ ಅವರು ತಯಾರಿಸಿದ ಚಾಕೊಲೇಟ್ ಕೇಕ್ ನ ಚಿತ್ರವನ್ನು ಸಹ ಅವರು ಹಂಚಿಕೊಂಡಿದ್ದಾರೆ. ಕೇಕ್ ಮೇಲಿನ ಸಂದೇಶದಲ್ಲಿ “ಹ್ಯಾಪಿ ಬರ್ತ್ ಡೇ ಮ್ಯಾಡ್ ಒನ್” ಎಂದು ಬರೆಯಲಾಗಿದೆ. ಚಿತ್ರದಲ್ಲಿ ಅನುಷ್ಕಾ ಶರ್ಮಾ ಬಿಳಿ ಉಡುಪನ್ನು ಧರಿಸಿದ್ದರೆ, ವಿರಾಟ್ ಕೊಹ್ಲಿ ಬೀಗ್​ ಬಣ್ಣದ ಟೀ ಶರ್ಟ್ ಧರಿಸಿದ್ದಾರೆ.

ಅನುಷ್ಕಾ ಶರ್ಮಾ ಅವರ ಹುಟ್ಟುಹಬ್ಬಕ್ಕೆ ಕೇಕ್ ತಯಾರಿಸಲು ವಿರಾಟ್ ಕೊಹ್ಲಿ ನನ್ನನ್ನು ಸಂಪರ್ಕಿಸಿದಾಗ, ನಾನು ವಿಶೇಷವಾದದ್ದನ್ನು ರಚಿಸಬೇಕು ಎಂದು ಯೋಚಿಸಿದೆ. ಹುಟ್ಟುಹಬ್ಬದ ಆಚರಣೆಗಾಗಿ ಕ್ಲಾಸಿಕ್ ಚಾಕೊಲೇಟ್ ಕೇಕ್ ಬಿಟ್ಟರೆ ಇನ್ಯಾವುದೂ ಇಲ್ಲ ಎಂದು ಅವರು ಹೇಳಿದ್ದಾರೆ.

ವಾರಾಂತ್ಯದಲ್ಲಿ ನನ್ನ ಅಮ್ಮನ ಅಡುಗೆ ಮನೆಯಲ್ಲಿ ಅಡುವೆ ಮಾಡುವುದರಿಂದ ಹಿಡಿದು ನಮ್ಮ ಯುಗದ ಅತ್ಯಂತ ಕ್ರೀಡಾಪಟುಗಳಲ್ಲಿ ಒಬ್ಬರಿಗೆ ಕೇಕ್ ತಯಾರಿಸುವವರೆಗೆ ಇದು ಕಳೆದ ಎಂಟು ವರ್ಷಗಳಲ್ಲಿ ಅದ್ಭುತ ಪ್ರಯಾಣವಾಗಿದೆ! ನನ್ನ ಎಲ್ಲಾ ಅದ್ಭುತ ಗ್ರಾಹಕರಿಗೆ ವಿಶೇಷ ಕೇಕ್ ಗಳನ್ನು ತಯಾರಿಸುವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: R Ashwin : ಸುನೀಲ್ ನರೈನ್ ರೀತಿ ಆರಂಭಿಕರಾಗಿ 20 ಎಸೆತಕ್ಕೆ 45 ರನ್ ಬಾರಿಸಿದ ಆರ್.​ ಅಶ್ವಿನ್​; ಇಲ್ಲಿದೆ ವಿಡಿಯೊ

ಅನುಷ್ಕಾ ಶರ್ಮಾ ಮೇ 1 ರಂದು ತಮ್ಮ 36 ನೇ ಹುಟ್ಟುಹಬ್ಬವನ್ನು ಬೆಂಗಳೂರಿನಲ್ಲಿ ಆಚರಿಸಿಕೊಂಡರು. ಈ ಹಿಂದೆ ಬಾಣಸಿಗ ಮನು ಚಂದ್ರ ಅವರು ಅನುಷ್ಕಾ ಶರ್ಮಾ ಅವರ ಹುಟ್ಟುಹಬ್ಬದ ಆಚರಣೆಯ ಚಿತ್ರ ಹಂಚಿಕೊಂಡಿದ್ದರು.

ಅನುಷ್ಕಾ ಶರ್ಮಾ ಅವರ ಹುಟ್ಟುಹಬ್ಬದಂದು, ವಿರಾಟ್ ಕೊಹ್ಲಿ ಅವರ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಮತ್ತು ನಾನು ನಿಮ್ಮನ್ನು ಕಂಡುಕೊಳ್ಳದೇ ಹೋಗಿದ್ದರೆ ನಾನು ಸಂಪೂರ್ಣವಾಗಿ ಕಳೆದುಹೋಗುತ್ತಿದ್ದೆ. ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದಿದ್ದರು.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಡಿಸೆಂಬರ್ 11, 2017 ರಂದು ವಿವಾಹವಾದರು. ಅವರು ವಾಮಿಕಾ ಮತ್ತು ಅಕಾಯ್​ ಎಂಬ ಇಬ್ಬರು ಮಕ್ಕಳ ಪೋಷಕರಾಗಿದ್ದಾರೆ. ಕ್ರಿಕೆಟಿಗ ಜೂಲನ್ ಗೋಸ್ವಾಮಿ ಜೀವನಾಧಾರಿತ ಚಿತ್ರ ‘ಚಕ್ಡಾ ಎಕ್ಸ್ಪ್ರೆಸ್’ನಲ್ಲಿ ಅನುಷ್ಕಾ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ.

Continue Reading

ಪ್ರಮುಖ ಸುದ್ದಿ

R Ashwin : ಸುನೀಲ್ ನರೈನ್ ರೀತಿ ಆರಂಭಿಕರಾಗಿ 20 ಎಸೆತಕ್ಕೆ 45 ರನ್ ಬಾರಿಸಿದ ಆರ್.​ ಅಶ್ವಿನ್​; ಇಲ್ಲಿದೆ ವಿಡಿಯೊ

R Ashwin : ಟಿಎನ್​ಪಿಎಲ್​​ ಪ್ರಸಕ್ತ ಋತುವಿನಲ್ಲಿ ಆರ್ ಅಶ್ವಿನ್ ದಿಂಡಿಗಲ್ ಪರ ಬ್ಯಾಟಿಂಗ್ ಆರಂಭಿಸುತ್ತಿದ್ದಾರೆ. ತಿರುಚ್ಚಿ ಮತ್ತು ಸೇಲಂ ವಿರುದ್ಧ ಕೇವಲ 5 ಮತ್ತು 6 ರನ್ ಗಳಿಸಿದ್ದ ಅಶ್ವಿನ್ ಅಂತಿಮವಾಗಿ ಅಜೇಯ 45 ರನ್ ಗಳಿಸುವ ಮೂಲಕ ತಮ್ಮ ಹೊಣೆಗಾರಿಕೆ ಪ್ರದರ್ಶಿಸಿದರು.

VISTARANEWS.COM


on

R Ashwin
Koo

ಕೊಯಮತ್ತೂರು: ಕೊಯಮತ್ತೂರಿನಲ್ಲಿ ಭಾನುವಾರ ನಡೆದ ತಮಿಳುನಾಡು ಪ್ರೀಮಿಯರ್ ಲೀಗ್ (TNPL) ಪಂದ್ಯದಲ್ಲಿ ದಿಂಡಿಗಲ್ ಡ್ರಾಗನ್ಸ್ ಪರ ಆಡಿದ ಭಾರತ ತಂಡದ ಸ್ಪಿನ್ನ ಬೌಲರ್​ ಆರ್​. ಅಶ್ವಿನ್ ಕೆಕೆಆರ್​ ಪರ ಸುನೀಲ್ ನರೈನ್ ಅವರಂತೆಯೇ ಅಬ್ಬರದ ಬ್ಯಾಟಿಂಗ್​ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ. ಚೆಪಾಲ್ ಸೂಪರ್ ಗಿಲ್ಲಿಸ್ ವಿರುದ್ಧ ಪಂದ್ಯದಲ್ಲಿ ಅವರು ಕೇವಲ 25 ಎಸೆತಗಳಲ್ಲಿ 45 ರನ್ ಗಳಿಸಿದ್ದಾರೆ.

ಪಂದ್ಯದ ಎರಡನೇ ಓವರ್​ನಲ್ಲಿ ದಿಂಡಿಗಲ್ ಡ್ರ್ಯಾಗನ್ಸ್ 3 ವಿಕೆಟ್ ನಷ್ಟಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಭಿಷೇಕ್ ತನ್ವರ್ ಮೊದಲ ಓವರ್​ನಲ್ಲಿ ಎರಡು ಆರಂಭಿಕ ವಿಕೆಟ್​ಗಳನ್ನು ಪಡೆದರೆ, ರಾಹಿಲ್ ಶಾ ಎರಡನೇ ಓವರ್​ನಲ್ಲಿ ಬಾಬಾ ಇಂದ್ರಜಿತ್ ಅವರ ವಿಕೆಟ್ ಪಡೆದರು. 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆರ್.ವಿಮಲ್ ಕುಮಾರ್, ಗಣೇಶನ್ ಪೆರಿಯಸ್ವಾಮಿ ಹಾಕಿದ ಓವರ್​ನಲ್ಲಿ ಎರಡು ಬೌಂಡರಿಗಳನ್ನು ಬಾರಿಸಿದ ಒತ್ತಡ ಕಡಿಮೆ ಮಾಡಲು ನೆರವಾದರು. ಆದಾಗ್ಯೂ, ಆರ್ ಅಶ್ವಿನ್ ಅವರು ನಾಲ್ಕನೇ ಓವರ್​ನಲ್ಲಿ ರಾಹಿಲ್ ಶಾ ಓವರ್​ಗೆ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿಗೆ ಹೊಡೆದು ತಮ್ಮ ಅಬ್ಬರದ ಆಟ ಆರಂಭಿಸಿದರು.

ಐದನೇ ಓವರ್ ನ ಮೊದಲ ಎಸೆತದಲ್ಲಿ ವಿಮಲ್ ಕುಮಾರ್ ಔಟಾದ ಕಾರಣ ಆರ್​. ಅಶ್ವಿನ್ ಪಾಲುದಾರರನ್ನು ಕಳೆದುಕೊಂಡರು. ಆದಾಗ್ಯೂ, ಬಾಲು ಸೂರ್ಯ ವಿರುದ್ಧದ ಓವರ್​ನಲ್ಲಿ ಅಶ್ವಿನ್ ಎರಡು ಬೌಂಡರಿ ಹೊಡೆದರು. ಅಭಿಷೇಕ್ ತನ್ವರ್ ವಿರುದ್ಧ ಆರನೇ ಓವರ್​ನಲ್ಲಿ ಅಶ್ವಿನ್ ಎರಡು ಸಿಕ್ಸರ್​​ ಬಾರಿಸುವ ಮೂಲಕ ದಿಂಡಿಗಲ್ 7 ಓವರ್​​ನಲ್ಲಿ 6 ವಿಕೆಟ್ ನಷ್ಟಕ್ಕೆ 64 ರನ್ ಪೇರಿಸುವಂತೆ ಮಾಡಿದರು.

ಇದನ್ನೂ ಓದಿ: Paris Olympics 2024 : ಟೋಕಿಯೊದಲ್ಲಿ ನಡೆದ 2020ರ ಒಲಿಂಪಿಕ್ಸ್​ನಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

ಸ್ಪಿನ್ನರ್​ಗಳ ವಿರುದ್ಧ ಬೃಹತ್ ಸಿಕ್ಸರ್ಗಳನ್ನು ಬಾರಿಸಿ ಮೇಲಗೈ ಸಾಧಿಸಿದರು. ಈ ಮೂಲಕ ಐಪಿಎಲ್ 2024 ರಲ್ಲಿ ಕೆಕೆಆರ್​​ ​ತಂಡಕ್ಕಾಗಿ ಸುನಿಲ್ ನರೈನ್ ವಹಿಸಿದ ಪಾತ್ರವನ್ನು ವಹಿಸಿದರು. ಅಶ್ವಿನ್ ನಾಲ್ಕು ಸಿಕ್ಸರ್ ಮತ್ತು 3 ಬೌಂಡರಿಗಳನ್ನು ಬಾರಿಸುವ ಮೂಲಕ ಒಟ್ಟು 45 ರನ್ ಗಳಿಸಿದರು. ದಿಂಡಿಗಲ್​​ನ ಇತರ ಬ್ಯಾಟರ್​ಗಳು 15 ರನ್​​​ ದಾಟಲಿಲ್ಲ.

ಆರಂಭಿಕ ಬ್ಯಾಟಿಂಗ್ ಹೊಣೆ

ಟಿಎನ್​ಪಿಎಲ್​​ ಪ್ರಸಕ್ತ ಋತುವಿನಲ್ಲಿ ಆರ್ ಅಶ್ವಿನ್ ದಿಂಡಿಗಲ್ ಪರ ಬ್ಯಾಟಿಂಗ್ ಆರಂಭಿಸುತ್ತಿದ್ದಾರೆ. ತಿರುಚ್ಚಿ ಮತ್ತು ಸೇಲಂ ವಿರುದ್ಧ ಕೇವಲ 5 ಮತ್ತು 6 ರನ್ ಗಳಿಸಿದ್ದ ಅಶ್ವಿನ್ ಅಂತಿಮವಾಗಿ ಅಜೇಯ 45 ರನ್ ಗಳಿಸುವ ಮೂಲಕ ತಮ್ಮ ಹೊಣೆಗಾರಿಕೆ ಪ್ರದರ್ಶಿಸಿದರು.

ಆರ್ ಅಶ್ವಿನ್ ಈ ವರ್ಷದ ಕೊನೆಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಸಜ್ಜಾಗುತ್ತಿರುವುದರಿಂದ ಟಿಎನ್​ಪಿಎಲ್​ನಲ್ಲಿ ತಮ್ಮ ಬ್ಯಾಟಿಂಗ್ ಮೇಲೆ ಗಮನ ಹರಿಸುತ್ತಿದ್ದಾರೆ. ಆಫ್-ಸ್ಪಿನ್ನರ್ ಟಿ20 ವಿಶ್ವಕಪ್​ಗೆ ಆಯ್ಕೆಯಾಗಿರಲಿಲ್ಲ. ಸೆಪ್ಟೆಂಬರ್​ನಲ್ಲಿ ತಂಡವು ಬಾಂಗ್ಲಾದೇಶವನ್ನು ಎರಡು ಟೆಸ್ಟ್ ಸರಣಿಯಲ್ಲಿ ಭಾರತ ಎದುರಿಸುವಾಗ ಅವರು ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆಗಳಿವೆ.

Continue Reading

ಕರ್ನಾಟಕ

Assembly Session: ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ; ಏನೆಲ್ಲ ಅರ್ಹತೆ ಇರಬೇಕು?

Assembly Session: ಖಾಸಗಿ ಕ್ಷೇತ್ರಗಳಲ್ಲಿ ದುಡಿಯುವ ಕನ್ನಡಿಗರಿಗೆ ಉದ್ಯೋಗ ಮೀಸಲು ನೀಡುವ ವಿಧೇಯಕವನ್ನು ವಿಧಾನ ಮಂಡಲದಲ್ಲಿ ಮಂಡಿಸಲು ಸೋಮವಾರ ನಡೆದ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಇದೇ ಅಧಿವೇಶನದಲ್ಲಿ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆಯುವುದಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.

VISTARANEWS.COM


on

Assembly Session Job reservation for Kannadigas in private sectors Cabinet meeting approves bill
Koo

ಬೆಂಗಳೂರು: ಖಾಸಗಿ ಕ್ಷೇತ್ರಗಳಲ್ಲಿ ದುಡಿಯುವ ಕನ್ನಡಿಗರಿಗೆ ಉದ್ಯೋಗ ಮೀಸಲು ನೀಡುವ ವಿಧೇಯಕವನ್ನು ವಿಧಾನ ಮಂಡಲದಲ್ಲಿ ಮಂಡಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಭೆಯಲ್ಲಿ (Assembly Session) ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಇದೇ ಅಧಿವೇಶನದಲ್ಲಿ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆಯುವುದಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.

‘ದಿ ಕರ್ನಾಟಕ ಸ್ಟೇಟ್ ಎಂಪ್ಲಾಯ್ಮೆಂಟ್ ಆಫ್ ಲೋಕಲ್ ಕ್ಯಾಡಿಡೇಟ್ಸ್ ಇನ್ ದಿ ಇಂಡಸ್ಟ್ರೀಸ್, ಫ್ಯಾಕ್ಟರೀಸ್ ಆ್ಯಂಡ್ ಲೋಕಲ್ ಎಷ್ಟಾಬ್ಲಿಷ್‌ಮೆಂಟ್ ಬಿಲ್-2024 ವಿಧೇಯಕದಂತೆ ಮ್ಯಾನೇಜ್‌ಮೆಂಟ್ ಹುದ್ದೆಗಳು ಶೇ.50 ಹಾಗೂ ನಾನ್ ಮ್ಯಾನೇಜ್‌ಮೆಂಟ್ ಶೇ.75 ರಷ್ಟು ಹುದ್ದೆಗಳು ಸ್ಥಳೀಯರಿಗೆ ಮೀಸಲಿಡಲಾಗುತ್ತದೆ.

ಇದನ್ನೂ ಓದಿ: Assembly Session: ಕಾರ್ಮಿಕ ಇಲಾಖೆಯಿಂದ ಸಿನಿ ಕಾರ್ಮಿಕರಿಗೆ ಭರ್ಜರಿ ಗಿಫ್ಟ್!

ಕರ್ನಾಟಕದಲ್ಲಿಯೇ ಹುಟ್ಟಿದವರು, ಕರ್ನಾಟಕದಲ್ಲಿ 15 ವರ್ಷದಿಂದ ವಾಸಿಸುತ್ತಿರುವವರು, ಕನ್ನಡ ಓದಲು, ಬರೆಯಲು ಮತ್ತು ಮಾತನಾಡಲು ಬರುವವರು, ನೋಡಲ್ ಏಜೆನ್ಸಿ ನಡೆಸುವ ಕನ್ನಡ ಪರೀಕ್ಷೆಯಲ್ಲಿ ಪಾಸಾದವರನ್ನು ಸ್ಥಳೀಯರು ಎಂದು ಪರಿಗಣಿಸಲಾಗುವುದು. ಮ್ಯಾನೇಜ್‌ಮೆಂಟ್‌ನಲ್ಲಿ ಸೂಪರ್‌ವೈಸ‌ರ್, ಮ್ಯಾನೇಜಿರಿಯಲ್, ಟೆಕ್ನಿಕಲ್, ಆಪರೇಷನಲ್, ಆಡಳಿತ ಸೇರಿ ಉನ್ನತ ಹುದ್ದೆಗಳಲ್ಲಿ ಶೇ.50 ಉದ್ಯೋಗ ಸ್ಥಳೀಯರಿಗೆ ಮೀಸಲಿಡಲಾಗುವುದು. ಇನ್ನು ನಾನ್-ಮ್ಯಾನೇಜ್‌ಮೆಂಟ್ನಲ್ಲಿ ಕ್ಲರ್ಕ್‌ಗಳು, ಕೌಶಲ, ಕೌಶಲ ರಹಿತ ಹಾಗೂ ಅರೆಕೌಶಲ, ಗುತ್ತಿಗೆ ನೌಕರ ಹಾಗೂ ಐಟಿ ಹುದ್ದೆಗಳಲ್ಲಿ ಶೇ.75 ಮೀಸಲು ಸ್ಥಳೀಯರಿಗೆ ನೀಡುವ ವಿಧೇಯಕ ಇದಾಗಿದೆ.

ಸ್ಥಳೀಯರಿಗೆ ಉದ್ಯೋಗ ನೀಡದಿದ್ದರೆ ದಂಡ ವಿಧಿಸುವ ಅಂಶವನ್ನೂ ವಿಧೇಯಕದಲ್ಲಿ ಸೇರಿಸಲಾಗಿದೆ. ಕನಿಷ್ಠ 10 ಸಾವಿರ ರೂ. ಹಾಗೂ 25 ಸಾವಿರ ರೂ.ಗಳ ವರೆಗೆ ದಂಡ ವಿಸ್ತರಣೆ ಮಾಡಲು ಅವಕಾಶ ನೀಡಲಾಗುತ್ತದೆ. ಆ ನಂತರವೂ ಉದ್ಯೋಗ ನೀಡದೇ ಹೋದರೆ ದಿನಕ್ಕೆ 100 ರೂ. ದಂಡ ವಿಧಿಸಲಾಗುತ್ತದೆ.

ಇದನ್ನೂ ಓದಿ: Lakshmi Hebbalkar: ವಿಶೇಷ ಶಾಲೆಗಳ ಶಿಕ್ಷಕರ ವೇತನ ಪರಿಷ್ಕರಣೆಗೆ ಅಗತ್ಯ ಕ್ರಮ: ಹೆಬ್ಬಾಳಕರ್ ಭರವಸೆ

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕು. ಈ ನಿಟ್ಟಿನಲ್ಲಿ ವಿಧೇಯಕವು ಮಹತ್ವದ ಪಾತ್ರ ವಹಿಸಲಿದೆ. ಕನ್ನಡಿಗ ನೌಕರರ ಜೀವನ ಭದ್ರತೆಗೆ ಇದು ಸಹಾಯವಾಗಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ತಿಳಿಸಿದ್ದಾರೆ.

Continue Reading
Advertisement
Chennai Super King
ಕ್ರೀಡೆ1 min ago

Chennai Super King : ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕ್ರಿಕೆಟ್ ಅಕಾಡೆಮಿ ಆರಂಭಿಸಿದ ಚೆನ್ನೂ ಸೂಪರ್ ಕಿಂಗ್ಸ್​

Anushka Sharma
ಪ್ರಮುಖ ಸುದ್ದಿ34 mins ago

Anushka Sharma : ಪತ್ನಿ ಅನುಷ್ಕಾ ಬರ್ತ್​​ಡೇಗೆ ಕೊಹ್ಲಿ ಕೇಕ್​ ಆರ್ಡರ್​ ಮಾಡಿದ್ದು ಬೆಂಗಳೂರಿನಿಂದ; ತಿಂಗಳುಗಳ ಬಳಿಕ ಮಾಹಿತಿ ಬಹಿರಂಗ

Muscat Terrorist Attack
ವಿದೇಶ39 mins ago

Muscat Terrorist Attack: ಮಸ್ಕತ್‌ನಲ್ಲಿ ಉಗ್ರರ ಅಟ್ಟಹಾಸ; ಭಾರತೀಯ ಸೇರಿ 9ಮಂದಿ ಸಾವು

Manikanta Rathod
ಕರ್ನಾಟಕ52 mins ago

Manikanta Rathod: ಅನ್ನ ಭಾಗ್ಯ ಅಕ್ಕಿ ಕಳವು ಕೇಸ್‌ನಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ ಬಂಧನ

K Kavitha
ದೇಶ1 hour ago

Delhi Liquor Policy Case: ತಿಹಾರ್‌ ಜೈಲಿನಲ್ಲಿರುವ ಕೆ.ಕವಿತಾ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

R Ashwin
ಪ್ರಮುಖ ಸುದ್ದಿ1 hour ago

R Ashwin : ಸುನೀಲ್ ನರೈನ್ ರೀತಿ ಆರಂಭಿಕರಾಗಿ 20 ಎಸೆತಕ್ಕೆ 45 ರನ್ ಬಾರಿಸಿದ ಆರ್.​ ಅಶ್ವಿನ್​; ಇಲ್ಲಿದೆ ವಿಡಿಯೊ

Children Mobile Addiction
ಆರೋಗ್ಯ2 hours ago

Children Mobile Addiction: ನಮ್ಮ ಮಕ್ಕಳು ಎಷ್ಟು ಹೊತ್ತು ಮೊಬೈಲ್‌ ನೋಡಬಹುದು?

Road Accident
ಕರ್ನಾಟಕ2 hours ago

Road Accident: ಕೊಡಗಿನ ಸುಂಟಿಕೊಪ್ಪ ಬಳಿ ಟಿಪ್ಪರ್-ಬೈಕ್ ಡಿಕ್ಕಿಯಾಗಿ ಇಬ್ಬರು ಸವಾರರ ದುರ್ಮರಣ

Assembly Session Job reservation for Kannadigas in private sectors Cabinet meeting approves bill
ಕರ್ನಾಟಕ2 hours ago

Assembly Session: ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ; ಏನೆಲ್ಲ ಅರ್ಹತೆ ಇರಬೇಕು?

Paris Olympics 2024
ಪ್ರಮುಖ ಸುದ್ದಿ2 hours ago

Paris Olympics 2024 : ಟೋಕಿಯೊದಲ್ಲಿ ನಡೆದ 2020ರ ಒಲಿಂಪಿಕ್ಸ್​ನಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ8 hours ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ10 hours ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ1 day ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 day ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ2 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌