Ambani Wedding Fashion: ಇಶಾ ಅಂಬಾನಿಯ ಸೌತ್‌ ಇಂಡಿಯನ್‌ ಲುಕ್‌ಗೆ ಸಾಥ್‌ ನೀಡಿದ ದುಬಾರಿ ಜಡೆ ಬಿಲ್ಲೆ! - Vistara News

ಫ್ಯಾಷನ್

Ambani Wedding Fashion: ಇಶಾ ಅಂಬಾನಿಯ ಸೌತ್‌ ಇಂಡಿಯನ್‌ ಲುಕ್‌ಗೆ ಸಾಥ್‌ ನೀಡಿದ ದುಬಾರಿ ಜಡೆ ಬಿಲ್ಲೆ!

Ambani Wedding Fashion: ಅಂಬಾನಿ ಫ್ಯಾಮಿಲಿಯ ಪ್ರಿ-ವೆಡ್ಡಿಂಗ್‌ ಕಾರ್ಯಕ್ರಮವೊಂದರಲ್ಲಿ ಇಶಾ ಅಂಬಾನಿ ಸೌತ್‌ ಇಂಡಿಯನ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬೈತಲೆ ತೆಗೆದ ಜಡೆಗೆ ವಜ್ರ-ವೈಢೂರ್ಯ ಸಹಿತವಿರುವ ದುಬಾರಿ ಬಂಗಾರದ ಜಡೆ ಬಿಲ್ಲೆ ಹಾಗೂ ಹೂವು ಧರಿಸಿ, ತಮ್ಮ ನಾರ್ತ್‌ ಇಂಡಿಯನ್‌ ಲೆಹೆಂಗಾ ಜೊತೆ ಮ್ಯಾಚ್‌ ಮಾಡಿದ್ದಾರೆ. ಅವರ ಈ ಲುಕ್‌ ಬಗ್ಗೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Ambani Wedding Fashion
ಚಿತ್ರಗಳು: ಇಶಾ ಅಂಬಾನಿ ಸೌತ್‌ ಇಂಡಿಯನ್‌ ಲುಕ್‌ಗೆ ಸಾಥ್‌ ನೀಡಿದ ದುಬಾರಿ ಬಂಗಾರದ ಜಡೆ ಬಿಲ್ಲೆ.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಂಗಾರದ ದುಬಾರಿ ಜಡೆ ಬಿಲ್ಲೆ (Ambani Wedding Fashion) ಧರಿಸಿದ ಇಶಾ ಅಂಬಾನಿ ಪಕ್ಕಾ ಸೌತ್‌ ಇಂಡಿಯನ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು, ಅಂಬಾನಿ ಫ್ಯಾಮಿಲಿಯ ಪ್ರಿ-ವೆಡ್ಡಿಂಗ್‌ನ ಕಾರ್ಯಕ್ರಮವೊಂದರಲ್ಲಿ ಇಶಾ ಅಂಬಾನಿ, ಬೈತಲೆ ತೆಗೆದು ಜಡೆ ಹೆಣೆದ ಕೂದಲಿಗೆ ಟ್ರೆಡಿಷನಲ್‌ ಆಂಟಿಕ್‌ ಜ್ಯುವೆಲರಿಗೆ ಸೇರುವ ಉದ್ದದ ಬಂಗಾರದ ಜಡೆ ಬಿಲ್ಲೆ ಧರಿಸಿದ್ದಾರೆ. ಅಷ್ಟು ಮಾತ್ರವಲ್ಲ, ದಕ್ಷಿಣ ಭಾರತದ ನಾರಿಯರು ಮಾಡುವ ಹೇರ್‌ಸ್ಟೈಲ್‌ನಂತೆ ಜಡೆಯ ಮೇಲ್ಗಡೆ ಹೂವನ್ನು ಮುಡಿದಿದ್ದಾರೆ.

Ambani Wedding Fashion

ಇಶಾ ಅಂಬಾನಿಯ ಟ್ರೆಡಿಷನಲ್‌ ಲುಕ್‌ ಸ್ಯಾಂಪಲ್ಸ್

“ಅಂಬಾನಿ ಫ್ಯಾಮಿಲಿಯ ಎಲ್ಲಾ ಪ್ರಿ-ವೆಡ್ಡಿಂಗ್‌ ಸಮಾರಂಭಗಳಲ್ಲೂ ಡಿಫರೆಂಟ್‌ ಲುಕ್‌ಗಳಲ್ಲಿ ಕಾಣಿಸಿಕೊಂಡಿರುವ ಇಶಾ ಅಂಬಾನಿ, ಈಗಾಗಲೇ ಸಾಕಷ್ಟು ಬಗೆಯ ಟ್ರೆಡಿಷನಲ್‌ ಲುಕ್‌ಗಳನ್ನು ಟ್ರೈ ಮಾಡಿದ್ದಾರೆ. ತಮ್ಮ ಗುಜರಾತಿ ಸ್ಟೈಲಿಂಗ್‌ಗೆ ಸಾಥ್‌ ನೀಡುವ ಡಿಸೈನರ್‌ವೇರ್‌ಗಳಿಂದಿಡಿದು, ಪಂಜಾಬಿ, ಮಾರ್ವಾಡಿ ಹೀಗೆ ನಾನಾ ಬಗೆಯ ಟ್ರೆಡಿಷನಲ್‌ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇಕೆ! ಇಂಡೋ-ವೆಸ್ಟರ್ನ್‌ ಲುಕ್‌ ನೀಡುವ ಸೀರೆಗಳಲ್ಲಂತೂ ತಮ್ಮದೇ ಆದ ಫ್ಯಾಷನ್‌ ಸ್ಟೇಟ್‌ಮೆಂಟ್‌ಗಳನ್ನೇ ಅನಾವರಣಗೊಳಿಸಿದ್ದಾರೆ. ಸಂಗೀತ್‌ ಕಾರ್ಯಕ್ರಮದಿಂದಿಡಿದು ಅರಿಷಿಣ ಶಾಸ್ತ್ರದಲ್ಲೂ, ಆದಷ್ಟೂ ವಿಭಿನ್ನವಾಗಿ ಅಂದವಾಗಿ ಕಾಣಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಇದೀಗ ಹೊಸ ಪ್ರಯೋಗ ಎಂಬಂತೆ, ಅನೈತಾ ಶ್ರಾಫ್‌ ಸ್ಟೈಲಿಂಗ್‌ ಸಹಕಾರದೊಂದಿಗೆ ಮಾರ್ವಾಡಿ ಡಿಸೈನರ್‌ವೇರ್‌ಗೆ ಸೌತ್‌ ಇಂಡಿಯನ್‌ ಮೇಕಪ್‌ ಹಾಗೂ ಹೇರ್‌ಸ್ಟೈಲ್‌ ಮ್ಯಾಚ್‌ ಮಾಡಿ, ಅಚ್ಚರಿ ಮೂಡಿಸಿದ್ದಾರೆ” ಎನ್ನುತ್ತಾರೆ ಬ್ಯೂಟಿ ಎಕ್ಸ್‌ಫರ್ಟ್ಸ್‌.

ಮಿಕ್ಸ್ ಮ್ಯಾಚ್‌ ಕಾನ್ಸೆಪ್ಟ್

ಹಾಗೆಂದು ಇಶಾ ಅಂಬಾನಿ ಕಂಪ್ಲೀಟ್‌ ಸೌತ್‌ ಇಂಡಿಯನ್‌ ಆಗಿ ಕಾಣಿಸಿಕೊಂಡಿಲ್ಲ! ತಮ್ಮ ಲುಕ್‌ನಲ್ಲಿ ಮಾತ್ರ ಬದಲಾವಣೆ ತಂದಿದ್ದಾರೆ. ಮಿಕ್ಸ್ ಮ್ಯಾಚ್‌ ಕಾನ್ಸೆಪ್ಟ್ ಅಳವಡಿಸಿಕೊಂಡಿದ್ದಾರೆ.

Ambani Wedding Fashion

ಇಶಾ ಅಂಬಾನಿಯ ದುಬಾರಿ ಜಡೆ ಬಿಲ್ಲೆ

ದಕ್ಷಿಣ ಭಾರತದ ಮದುವೆಗಳಲ್ಲಿ ಅದರಲ್ಲೂ ಮದುವೆಯಾಗುವ ವಧು ಧರಿಸುವಂತಹ ಜಡೆ ಬಿಲ್ಲೆ ಇಶಾ ಅಂಬಾನಿಯ ಕೂದಲನ್ನು ಶ್ರೀಮಂತಗೊಳಿಸಿದೆ. ಪ್ರಿಶಿಯಸ್‌ ಸ್ಟೋನ್ಸ್, ರೂಬಿ, ಎಮರಾಲ್ಡ್, ವಜ್ರ-ವೈಢೂರ್ಯಗಳನ್ನು ಹೊಂದಿರುವ ಈ ಆಂಟಿಕ್‌ ವಿನ್ಯಾಸದ ಜಡೆ ಬಿಲ್ಲೆ ಮೂರು ಬಂಗಾರದ ಕುಚ್ಚುಗಳನ್ನು ಹೊಂದಿದ್ದು, ಟೆಂಪಲ್‌ ವಿನ್ಯಾಸದ್ದಾಗಿದೆ. ಜಡೆ ಸುತ್ತಲೂ ಹೂವಿನ ದಿಂಡಿನಿಂದ ಅಲಂಕರಿಸಲಾಗಿದೆ. ಇನ್ನು ಕುಂದನ್‌ ಹಾಗೂ ಜುಮ್ಕಾ ಕಿವಿಯೊಲೆ ಮಿಕ್ಸ್ ಮ್ಯಾಚ್‌ ಸ್ಟೈಲಿಂಗ್‌ಗೆ ಸಾಥ್‌ ನಿಡಿದೆ.

ಇದನ್ನೂ ಓದಿ: Ambani Wedding Fashion: ಅಂಬಾನಿ ಮಗನ ಬಂದ್ಗಾಲ ಸೂಟ್ ಬಂಗಾರದ್ದು! ರಾಜರ ಕಾಲದ ಉಡುಗೆಯ ಮರು ಸೃಷ್ಟಿ

ಸೌತ್‌ ಹಾಗೂ ನಾರ್ತ್‌ ಲುಕ್‌ನ ಸಮಾಗಮ

ಹಣೆಗೆ ಇರಿಸಿರುವ ಬಿಂದಿ ಸೌತ್‌ ಇಂಡಿಯನ್‌ ಲುಕ್‌ಗೆ ಸಾಥ್‌ ನೀಡಿದರೇ, ಇಶಾ ಅಂಬಾನಿ ಧರಿಸಿರುವ ಲೆಹೆಂಗಾ ಮಾರ್ವಾಡಿ ಸ್ಟೈಲಿಂಗ್‌ ಪ್ರತಿನಿಧಿಸಿದೆ. ಒಟ್ಟಾರೆ, ಲುಕ್‌ಗಳನ್ನು ಮಿಕ್ಸ್ ಮ್ಯಾಚ್‌ ಮಾಡಿಯೂ ಆಕರ್ಷಕವಾಗಿ ಕಾಣಿಸಬಹುದು ಎಂಬುದಕ್ಕೆ ಇಶಾ ಅಂಬಾನಿಯ ಜಡೆ ಬಿಲ್ಲೆ ಸಿಂಗಾರವೇ ಸಾಕ್ಷಿ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕಿ ವಿದ್ಯಾ ವಿವೇಕ್‌.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Aparna Fashion Connection: ಫ್ಯಾಷನ್‌ ಪೇಜೆಂಟ್‌ ಕನ್ನಡದಲ್ಲಿ ನಿರೂಪಿಸಿ ಟ್ರೆಂಡ್‌ ಸೆಟ್‌ ಮಾಡಿದ್ದ ಅಪರ್ಣಾ!

Aparna Fashion Connection: ನಟಿ, ನಿರೂಪಕಿ ಅಪರ್ಣಾ ಅವರು ಮಿಸೆಸ್‌ ಇಂಡಿಯಾ ಕರ್ನಾಟಕ ಪೇಜೆಂಟ್‌ನಲ್ಲಿ ಕನ್ನಡ ಭಾಷೆಯಲ್ಲೆ ನಿರೂಪಣೆ ಮಾಡುವ ಮೂಲಕ ಇಂಗ್ಲೀಷ್‌ಮಯವಾಗಿದ್ದ ಫ್ಯಾಷನ್‌ ಲೋಕದಲ್ಲಿ ಕನ್ನಡದ ಕಂಪನ್ನು ಹುಟ್ಟುಹಾಕಿ, ಟ್ರೆಂಡ್‌ ಸೆಟ್‌ ಮಾಡಿದ್ದರು. ಈ ಅವಕಾಶ ನೀಡಿದ್ದ ಪೇಜೆಂಟ್‌ ಡೈರೆಕ್ಟರ್‌ ಪ್ರತಿಭಾ ಸಂಶಿಮಠ್ ಈ ಅನುಭವವನ್ನು ವಿಸ್ತಾರ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ.

VISTARANEWS.COM


on

Aparna fashion connection
ಚಿತ್ರಗಳು: ಮಿಸೆಸ್‌ ಇಂಡಿಯಾ ಕರ್ನಾಟಕ ಪೇಜೆಂಟ್‌ 2018ರ ಚಿತ್ರಗಳು
Koo

ವಿಶೇಷ ಸಂದರ್ಶನ: ಶೀಲಾ ಸಿ. ಶೆಟ್ಟಿ
ಫ್ಯಾಷನ್‌ಗೂ ಅಪರ್ಣಾಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ! ಸಾಕಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ, ಅಪರ್ಣಾ ಅವರು ಕೇವಲ ಸಾಹಿತ್ಯ ಹಾಗೂ ಕನ್ನಡ ಭಾಷೆಯ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ! ಬದಲಿಗೆ ಮಿಸೆಸ್‌ ಇಂಡಿಯಾ ಕರ್ನಾಟಕದಂತಹ ಬ್ಯೂಟಿ ಪೇಜೆಂಟ್‌ಗೂ ಕಂಪ್ಲೀಟ್‌ ಅಚ್ಚ ಕನ್ನಡದಲ್ಲಿ ನಿರೂಪಣೆ ಮಾಡಿ, ಫ್ಯಾಷನ್‌ ಲೋಕದಲ್ಲೂ ಕಂಪ್ಲೀಟ್‌ ಕನ್ನಡ ಬಳಸಬಹುದು ಎಂಬ ಹೊಸ ಟ್ರೆಂಡ್‌ ಹುಟ್ಟುಹಾಕಿದ್ದರು.
ಹೌದು, ಫ್ಯಾಷನ್‌ ಲೋಕದಲ್ಲೂ ಅಪರ್ಣಾ ಅವರ ಈ ಕನ್ನಡ ಕಂಪು ಹರಡಿದ್ದ ಅಪರ್ಣಾ ಅವರ ಕುರಿತಂತೆ ರಿಜಿನಲ್‌ ಡೈರೆಕ್ಟರ್‌ ಹಾಗೂ ಮಿಸೆಸ್‌ ಏಷಿಯಾ ಪೆಸಿಫಿಕ್‌ ಪ್ರತಿಭಾ ಸಂಶಿಮಠ್ ಖುದ್ದು ವಿಸ್ತಾರ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ. ಪೇಜೆಂಟ್‌ನ ಆರಂಭಿಕ ವರ್ಷಗಳಲ್ಲಿ, ನಿರೂಪಣೆಯ ಜವಾಬ್ದಾರಿ ಹೊತ್ತು, ಕರ್ನಾಟಕದಲ್ಲೂ ಇಂಗ್ಲೀಷ್‌ ಮಯವಾಗಿರುವ ಫ್ಯಾಷನ್‌ ಲೋಕದಲ್ಲೂ, ಕನ್ನಡವನ್ನು ಬಳಸಿ ಅಂದವಾಗಿ ನಿರೂಪಣೆ ಮಾಡಬಹುದು ಎಂಬುದನ್ನು ಅಪರ್ಣಾ ತೋರಿಸಿಕೊಟ್ಟಿದ್ದರು ಎಂದಿದ್ದಾರೆ. ಪೇಜೆಂಟ್‌ ಸಮಯದಲ್ಲಿ ಅವರೊಂದಿಗಿನ ಒಡನಾಟದ ಅನುಭವದ ಒಂದಿಷ್ಟು ವಿಷಯಗಳನ್ನು ಹಾಗೂ ಒಂದಿಷ್ಟು ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Aparna fashion connection

ವಿಸ್ತಾರ ನ್ಯೂಸ್‌

ಇಂಗ್ಲೀಷ್‌ಮಯವಾಗಿದ್ದ ಫ್ಯಾಷನ್‌ ಲೋಕದಲ್ಲೂ ಕನ್ನಡದಲ್ಲಿ ನಿರೂಪಣೆ ಮಾಡಿ ಟ್ರೆಂಡ್‌ ಸೆಟ್‌ ಮಾಡಿದ್ದ ಅಪರ್ಣಾ ಅವರ ಬಗ್ಗೆ ಹೇಳಿ?

Aparna fashion connection

ಪ್ರತಿಭಾ ಸಂಶಿಮಠ್

ಖಂಡಿತ. ಬೆಂಗಳೂರಿನಲ್ಲಿ ನಡೆಯುವ ಬಹುತೇಕ ಫ್ಯಾಷನ್‌ ಶೋಗಳು ಪೇಜೆಂಟ್‌ಗಳು ಎಲ್ಲವೂ ಇಂಗ್ಲೀಷ್‌ಮಯವಾಗಿರುತ್ತಿದ್ದವು. ನಮ್ಮ ಪೇಜೆಂಟ್‌ ಸಾಕಷ್ಟು ಬಾರಿ ಕನ್ನಡವನ್ನು ಬಳಸುವುದರ ಮೂಲಕ ಟ್ರೆಂಡ್‌ ಹುಟ್ಟುಹಾಕಿದ್ದೆವು. ಇದಕ್ಕೆ ಪ್ರಮುಖವಾಗಿ ಸಹಕರಿಸಿದ್ದು ಅಪರ್ಣಾ. ಅವರ ಸುಂದರ ನಿರೂಪಣೆ ಟ್ರೆಂಡ್‌ ಹುಟ್ಟುಹಾಕಿತು.

ವಿಸ್ತಾರ ನ್ಯೂಸ್‌

ಅಪರ್ಣಾ ಅವರ ಕನ್ನಡದಲ್ಲಿನ ನಿರೂಪಣೆ ಫ್ಯಾಷನ್‌ ಲೋಕದಲ್ಲಿ ಟ್ರೆಂಡ್‌ ಸೆಟ್‌ ಮಾಡಿದ್ದಾದರೂ ಹೇಗೆ?

Aparna fashion connection

ಪ್ರತಿಭಾ ಸಂಶಿಮಠ್

ಅವರ ಶುದ್ಧ ಕನ್ನಡ ಭಾಷೆ ಹಾಗೂ ನಿರೂಪಣೆಯ ಶೈಲಿ, ಭಾಷೆ ಅರ್ಥವಾಗದಿದ್ದವರಿಗೂ ಮನ ಮುಟ್ಟುವಂತಹ ಭಾವನೆ ಹೊಂದಿದ ಪದಗಳು ಎಲ್ಲರನ್ನೂ ಆಕರ್ಷಿಸಿತ್ತು.

ವಿಸ್ತಾರ ನ್ಯೂಸ್‌

ಫ್ಯಾಷನ್‌ ಪೇಜೆಂಟ್‌ನಲ್ಲಿ ನಿರೂಪಣೆ ಮಾಡುವಾಗ ಅವರೊಂದಿಗೆ ಕಳೆದ ಕ್ಷಣಗಳು ಹೇಗಿದ್ದವು?

Aparna fashion connection

ಪ್ರತಿಭಾ ಸಂಶಿಮಠ್

ಅಪರ್ಣಾ ಅವರು ಕನ್ನಡ ಭಾಷೆಯ ಖಜಾನೆ. ಅವರಿಂದಲೇ ಸಾಕಷ್ಟು ನಾವು ಕಲಿತಿದ್ದಿದೆ. ಅಷ್ಟು ಮಾತ್ರವಲ್ಲದೇ, ಇಂಗ್ಲೀಷ್‌ ಕೂಡ ಅಷ್ಟೇ ಚೆನ್ನಾಗಿ ಬಲ್ಲವರಾಗಿದ್ದರು. ಅವರ ಭಾಷಾ ಪ್ರೇಮ, ಮುಂದೆಯೂ ನಾವು ರ‍್ಯಾಂಪ್‌ ಮೇಲೆ ಕನ್ನಡ ಬಳಕೆ ಮಾಡಲು ಪ್ರೋತ್ಸಾಹ ನೀಡಿತ್ತು.

Aparna fashion connection

ವಿಸ್ತಾರ ನ್ಯೂಸ್‌

ಸದಾ ಎಥ್ನಿಕ್‌ ಲುಕ್‌ನಲ್ಲಿ ಇರುತ್ತಿದ್ದ ಅಪರ್ಣಾ ಅವರು ಫ್ಯಾಷನ್‌ ಪೇಜೆಂಟ್‌ಗೆ ಹೊಂದಿಕೊಂಡದ್ದು ಹೇಗೆ?

ಪ್ರತಿಭಾ ಸಂಶಿಮಠ್

ಫ್ಯಾಷನ್‌ ಪೇಜೆಂಟ್‌ಗೆ ತಕ್ಕಂತೆ ಅವರು ಕೂಡ ಡಿಸೈನರ್‌ ಗೌನ್‌ ಡಿಸೈನ್‌ ಮಾಡಿಸಿ ಧರಿಸಿದ್ದರು. ಮಾಡೆಲ್‌ನಂತೆ ಕಾಣಿಸಿಕೊಂಡಿದ್ದರು.

Aparna fashion connection

ವಿಸ್ತಾರ ನ್ಯೂಸ್‌

ಫ್ಯಾಷನ್‌ ಜಗತ್ತಿನಲ್ಲಿ ಅಪರ್ಣಾ ಅವರು ಕನ್ನಡ ಬಳಸಿದ ನಂತರ ಆದ ಬದಲಾವಣೆಗಳೇನು?

ಇದನ್ನೂ ಓದಿ: Kim Kardashian Saree Fashion: ರೆಡಿ ರೆಡ್‌ ಸೀರೆಯಲ್ಲಿ ಸೆಕ್ಸಿಯಾಗಿ ಕಂಡ ಕಿಮ್‌ ಕಾರ್ಡಶಿಯಾನ್‌! ವಿಡಿಯೊ ನೋಡಿ

ಪ್ರತಿಭಾ ಸಂಶಿಮಠ್

ನಮ್ಮ ಪೇಜೆಂಟ್‌ನಲ್ಲಿ ಅಪರ್ಣಾ ಅವರು ಕನ್ನಡದಲ್ಲಿ ನಿರೂಪಣೆ ಮಾಡಿದ ನಂತರ, ಇತರೇ ಫ್ಯಾಷನ್‌ ಇವೆಂಟ್‌ಗಳಲ್ಲೂ ಕನ್ನಡ ಇಣುಕತೊಡಗಿತು. ಕನ್ನಡ ಭಾಷೆ ಬಗ್ಗೆ ಪ್ರೀತಿ ಹುಟ್ಟಿಕೊಂಡಿತು. ಇದೇ ಅವರು ಟ್ರೆಂಡ್‌ ಸೆಟ್‌ ಮಾಡಿದ್ದಕ್ಕೆ ಸಾಕ್ಷಿ ಎನ್ನಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Ambani Wedding Fashion: ನೀತಾ ಅಂಬಾನಿಯ ಗ್ರ್ಯಾಂಡ್‌ ಘಾಗ್ರ ಬ್ಲೌಸ್‌ ಮೇಲೆ ಬಂಗಾರದಲ್ಲಿ ಮೂಡಿದ ಕುಟುಂಬದವರ ಹೆಸರು!

Ambani Wedding Fashion: ಅಂಬಾನಿ ಫ್ಯಾಮಿಲಿಯ ಮದುವೆ ಸಮಾರಂಭದಲ್ಲಿ ನೀತಾ ಅಂಬಾನಿ ಧರಿಸಿದ್ದ ಗ್ರ್ಯಾಂಡ್‌ ಡಿಸೈನರ್‌ ಬ್ಲೌಸ್‌ ಮೇಲೆ ಬಂಗಾರದಲ್ಲಿ ಕುಟುಂಬದವರ ಹೆಸರು ಮೂಡಿಸಲಾಗಿದೆ. ಹಾಗಾದಲ್ಲಿ ಇದ್ಯಾವ ಬಗೆಯ ಹೊಸ ಡಿಸೈನ್‌? ದುಬಾರಿ ಘಾಗ್ರದ ವಿಶೇಷತೆಯೇನು? ಈ ಕುರಿತಂತೆ ಫ್ಯಾಷನ್‌ ಪರಿಣತರು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Ambani Wedding Fashion
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೀತಾ ಅಂಬಾನಿಯವರ (Ambani Wedding Fashion) ದುಬಾರಿ ಗ್ರ್ಯಾಂಡ್‌ ಘಾಗ್ರ ಬ್ಲೌಸ್‌ ಮೇಲೆ ಕುಟುಂಬದವರ ಹೆಸರು ಬಂಗಾರದಲ್ಲಿ ಮೂಡಿಸಿರುವುದು, ಬ್ಲೌಸ್‌ ಫ್ಯಾಷನ್‌ ಪ್ರಿಯರ ಹುಬ್ಬೇರಿಸಿದೆ. ಹೌದು, ಸೆಲೆಬ್ರೆಟಿ ಡಿಸೈನರ್‌ ಅಬುಜಾನಿ ಸಂದೀಪ್‌ ಕೋಸ್ಲಾ ಅವರ ಕೈಚಳಕದಲ್ಲಿ ಎಂದಿನಂತೆ ಬಂಗಾರ-ವಜ್ರ ವೈಢೂರ್ಯದಿಂದಲೇ ಸಿದ್ಧಗೊಂಡ ಗ್ರ್ಯಾಂಡ್‌ ಘಾಗ್ರ ಬ್ಲೌಸ್‌ನ ಬ್ಯಾಕ್‌ ಡಿಸೈನ್‌ನಲ್ಲಿ, ನೀತಾ ಅವರ ಪ್ರೀತಿ ಪಾತ್ರರಾದ ಇಡೀ ಕುಟುಂಬದವರ ಹೆಸರು ದಾಖಲಿಸಲಾಗಿದೆ. ಕೋಟಿಗಟ್ಟಲೇ ಬೆಲೆ ಬಾಳುವ ಈ ಡಿಸೈನರ್‌ ಘಾಗ್ರದಲ್ಲಿ ಆಂಟಿಕ್‌ ವಿನ್ಯಾಸವನ್ನುಕೂಡ ಚಿತ್ರಿಸಲಾಗಿದೆ.

Ambani Wedding Fashion

ಡಿಸೈನರ್‌ ಘಾಗ್ರ ವಿಶೇಷತೆ ಏನು?

ಭಾರತೀಯ ಸಂಸ್ಕೃತಿ ಬಿಂಬಿಸುವ ಕಲಾತ್ಮಕ ಹ್ಯಾಂಡ್‌ಮೇಡ್‌ ಚಿನ್ನ-ಬೆಳ್ಳಿ ಸೂಕ್ಷ್ಮ ಕುಸುರಿ ಚಿತ್ತಾರ ಹೊಂದಿರುವ ಈ ಡಿಸೈನರ್‌ವೇರ್‌ ಅಬು ಜಾನಿ ಸಂದೀಪ್‌ ಅವರ ಸ್ಪೆಷಲ್‌ ಡಿಸೈನ್‌ದ್ದಾಗಿದ್ದು, ನೀತಾ ಅವರ ಅಭಿಲಾಷೆಗೆ ತಕ್ಕಂತೆ, ವಿನ್ಯಾಸಗೊಳಿಸಲಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ನೀತಾ ಅವರ ಆಧ್ಯಾತ್ಮಿಕ ಪ್ರೀತಿಯನ್ನು ವಿವರಿಸುವ ವಾರಣಾಸಿ ಅಂದರೇ, ಕಾಶಿಯ ಪ್ರೇಮ ಕುರಿತಾದ ಚಿತ್ರಣವನ್ನು ಡಿಸೈನ್‌ ಮೂಲಕ ಮೂಡಿಸಲಾಗಿದೆ. ಉತ್ತರ ಭಾರತದ ಟೆಂಪಲ್‌ ಡಿಸೈನ್ಸ್ ಈ ಘಾಗ್ರಾದಲ್ಲಿ, ಮನಮೋಹಕವಾಗಿ ಬೆಳ್ಳಿ-ಬಂಗಾರದ ದಾರದಿಂದ ಹ್ಯಾಂಡ್‌ವರ್ಕ್ ಮೂಲಕ ಡಿಸೈನ್‌ ಮಾಡಲಾಗಿದೆ.

Ambani Wedding Fashion

ಅಪರೂಪದ ಘಾಗ್ರ ವಿನ್ಯಾಸ

ಕಲಾಕಾರರ ಜರ್ದೋಸಿ ಹ್ಯಾಂಡ್‌ ಮೇಡ್‌ ಡಿಸೈನ್‌ ಹೊಂದಿರುವ ಈ ಘಾಗ್ರ ಸಾಮಾನ್ಯವಾದ ಘಾಗ್ರವಲ್ಲ! ಉತ್ತರ ಭಾರತದ ಟೆಂಪಲ್‌ ಡಿಸೈನ್ಸ್ ಭಕ್ತಿ ಪೂರ್ವಕವಾಗಿ ಪ್ರತಿನಿಧಿಸಿದೆ. ಇದುವರೆಗೂ ಜ್ಯುವೆಲರಿಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಟೆಂಪಲ್‌ ಡಿಸೈನ್‌ಗೆ ಸಂಬಂಧಿಸಿದ ವಿನ್ಯಾಸಗಳು, ಇದೀಗ ಈ ವಿಶೇಷ ಘಾಗ್ರದ ಕುಸುರಿ ಕಲೆಯಲ್ಲಿ ಕಂಡು ಬಂದಿರುವುದು ಇದೇ ಮೊದಲು ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

Ambani Wedding Fashion

ಜ್ಯುವೆಲ್‌ ಬ್ಲೌಸ್‌ ಮೇಲೆ ಬಂಗಾರದ ಹೆಸರು

ಅತಿ ಸೂಕ್ಷ್ಮವಾದ ಸಾಫ್ಟ್ ನೆಟ್ಟೆಡ್‌ ಫ್ಯಾಬ್ರಿಕ್‌ನಿಂದ ಘಾಗ್ರದ ಬ್ಲೌಸ್‌ ವಿನ್ಯಾಸಗೊಳಿಸಲಾಗಿದೆ. ಬ್ಯಾಕ್‌ ಡಿಸೈನ್‌ನ ಮಧ್ಯಭಾಗದಲ್ಲಿ ಜೋಡಿ ಆನೆಯ ಸುತ್ತಾ ಬಂಗಾರದ ದಾರದಲ್ಲಿ ಹ್ಯಾಂಡ್‌ವರ್ಕ್ನಿಂದ ಕುಟುಂಬದವರೆಲ್ಲರ ಹೆಸರನ್ನು ಹಿಂದಿ ಭಾಷೆಯಲ್ಲಿ ಮೂಡಿಸಲಾಗಿದೆ. ಇನ್ನು, ಎರಡು ಸ್ಲೀವ್‌ಗಳ ಮೇಲೆ ವಿನ್ಯಾಸಗೊಳಿಸಿರುವ ಜುಮ್ಕಾ ಡಿಸೈನ್‌ ಈ ಔಟ್‌ಫಿಟ್‌ಗೆ ಕಂಪ್ಲೀಟ್‌ ಟ್ರೆಡಿಷನಲ್‌ ಲುಕ್‌ ನೀಡಿದೆ. ಈ ದುಬಾರಿ ಬ್ಲೌಸ ಅನ್ನು ಬಂಗಾರದ ಟೈನಿ ಬೀಡ್ಸ್ ಹಾಗೂ ಸಿಕ್ವಿನ್ಸ್‌ನಿಂದಲೇ ಸಿದ್ಧಪಡಿಸಿರುವುದು ವಿಶೇಷ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಫರ್ಟ್ಸ್‌ ದಿಯಾ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Ambani Wedding Fashion: ಅನಂತ್ ಅಂಬಾನಿ ಶೆರ್ವಾನಿ ಬೆಲೆಯೇ 214 ಕೋಟಿ ರೂ! ಹೇಗಿತ್ತು ನೋಡಿ ಅಂಬಾನಿ ಜೋಡಿಯ ವೆಡ್ಡಿಂಗ್ ಫ್ಯಾಷನ್!

Continue Reading

ಫ್ಯಾಷನ್

Kim Kardashian Saree Fashion: ರೆಡಿ ರೆಡ್‌ ಸೀರೆಯಲ್ಲಿ ಸೆಕ್ಸಿಯಾಗಿ ಕಂಡ ಕಿಮ್‌ ಕಾರ್ಡಶಿಯಾನ್‌! ವಿಡಿಯೊ ನೋಡಿ

Kim Kardashian Saree Fashion: ಕಿಮ್‌ ಕಾರ್ಡಶಿಯಾನ್‌ ಯಾರಿಗೆ ಗೊತ್ತಿಲ್ಲ! ಪ್ರಪಂಚದ ಸೆಕ್ಸಿ ಮಹಿಳೆಯೆಂದೇ ಖ್ಯಾತಿಗಳಿಸಿದ ಹಾಲಿವುಡ್‌ ನಟಿ, ಮಾಡೆಲ್‌ ಹಾಗೂ ಬಿಸ್ನೆಸ್‌ ವುಮೆನ್‌ ಇವರು. ಅಂಬಾನಿ ಫ್ಯಾಮಿಲಿಯ ವೆಡ್ಡಿಂಗ್‌ನಲ್ಲಿ ಮನೀಶ್‌ ಮಲ್ಹೋತ್ರಾ ಡಿಸೈನ್‌ನ ರೆಡಿ ರೆಡ್‌ ಸೀರೆಯುಟ್ಟು ಸೆಕ್ಸಿಯಾಗಿ ಕಾಣಿಸಿಕೊಂಡರು. ಹೇಗಿತ್ತು ಅವರ ಈ ಲುಕ್‌ ! ಇಲ್ಲಿದೆ ವರದಿ.

VISTARANEWS.COM


on

Kim Kardashian Saree Fashion
ಚಿತ್ರಗಳು : ಕಿಮ್‌ ಕಾರ್ಡಶಿಯಾನ್‌, ಹಾಲಿವುಡ್‌ ನಟಿ, ಮಾಡೆಲ್‌ & ಬಿಸ್ನೆಸ್‌ ವುಮೆನ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸದಾ ಸೆಕ್ಸಿ ಇಮೇಜ್‌ನಿಂದ ಸೆಳೆಯುವ ಕಿಮ್‌ ಕಾರ್ಡಶಿಯಾನ್‌ (kim kardashian saree fashion) ಅಂಬಾನಿ ಫ್ಯಾಮಿಲಿಯ ಮದುವೆಯಲ್ಲಿ, ರೆಡಿ ರೆಡ್‌ ಸೀರೆಯುಟ್ಟು ಸಂಭ್ರಮಿಸಿದ್ದು, ಪ್ರಪಂಚದಾದ್ಯಂತ ಅವರಿಗಿರುವ ಕೋಟಿಗಟ್ಟಲೇ ಅಭಿಮಾನಿಗಳನ್ನು ಸೆಳೆದಿದೆ. ಅಂದಹಾಗೆ, ಕಿಮ್‌ ಕಾರ್ಡಶಿಯಾನ್‌ ಯಾರಿಗೆ ಗೊತ್ತಿಲ್ಲ! ಪ್ರಪಂಚದ ಸೆಕ್ಸಿ ಮಹಿಳೆಯರಲ್ಲಿ ಒಬ್ಬರು ಎಂದು ಖ್ಯಾತಿಗಳಿಸಿದ ಹಾಲಿವುಡ್‌ ನಟಿ ಹಾಗೂ ಇಂಟರ್‌ನ್ಯಾಷನಲ್‌ ಸೆಲೆಬ್ರೆಟಿ ಇವರು.

Kim Kardashian Saree Fashion

ನಟಿ, ಮಾಡೆಲ್‌ ಮಾತ್ರವಲ್ಲ, ಸಕ್ಸ್‌ಫುಲ್‌ ಬಿಸ್ನೆಸ್‌ ವುಮೆನ್‌ ಕೂಡ. ಅಂಬಾನಿ ಫ್ಯಾಮಿಲಿಯ ಅನಂತ್‌-ರಾಧಿಕಾ ಮರ್ಚೆಂಟ್‌ ವೆಡ್ಡಿಂಗ್‌ಗೆ ಸಹೋದರಿ ಖ್ಲೋ ಜೊತೆಗೆ ಆಗಮಿಸಿದ್ದ ಕಿಮ್‌, ಡಿಸೈನರ್‌ ಮನೀಶ್‌ ಮಲ್ಹೋತ್ರಾ ಡಿಸೈನರ್‌ವೇರ್‌ ಹಾಗೂ ಜ್ಯುವೆಲರಿಗಳನ್ನು ಧರಿಸಿ, ಸೀರೆಯಲ್ಲೂ ಸೆಕ್ಸಿಯಾಗಿ ಕಾಣಿಸಿಕೊಂಡರು.

ಸೀರೆಯಲ್ಲೂ ಸೆಕ್ಸಿ ಲುಕ್‌

ಸದಾ ಎಕ್ಸ್ಪೋಸಿಂಗ್‌ ವೆಸ್ಟರ್ನ್‌ ಔಟ್‌ಫಿಟ್‌ಗಳಲ್ಲೆ ಕಾಣಿಸುವ ಕಿಮ್‌, ಅಂಬಾನಿ ಫ್ಯಾಮಿಲಿಯ ಮದುವೆಗಾಗಿ ರೆಡಿ ರೆಡ್‌ ಸೀರೆ ಧರಿಸಿದ್ದರು. ಗ್ಲಿಟ್ಟರ್‌ ರೆಡ್‌ ಸೀರೆಯನ್ನು ಉಟ್ಟಿದ್ದರು. ಆಫ್‌ ಶೋಲ್ಡರ್‌ ಡಿಸೈನ್‌ನ ಡಬ್ಬಲ್‌ ಸ್ಟ್ರಾಪ್‌ ಹೊಂದಿರುವ ವೈಡ್‌ ನೆಕ್‌ನ ಬಿಕಿನಿ ಶೈಲಿಯ ಟಾಸೆಲ್‌ ಬ್ಲೌಸ್‌ ಧರಿಸಿದ್ದರು. ಇನ್ನು, ಫ್ರೀ ವೆವ್ವಿ ಹೇರ್‌ಸ್ಟೈಲ್‌ಗೆ ಜರ್ಕೋನಿ ಮಾಂಗ್‌ಟೀಕಾ ಹಾಗೂ ಎರಡು ಲೇಯರ್‌ನ ನೆಕ್ಲೇಸ್‌, ಬ್ರೇಸ್‌ಲೆಟ್‌ ಧರಿಸಿ ನೋಡುಗರ ಮನಸೆಳೆದರು.

ಇವರ ಸಹೋದರಿ ಕೂಡ ಐವರಿ ಶೇಡ್‌ನ ಗ್ರ್ಯಾಂಡ್‌ ಡಿಸೈನರ್‌ ಸೀರೆ ಹಾಗೂ ಹೆವ್ವಿ ಲುಕ್‌ ನೀಡುವ ಮಾಂಗ್‌ಟೀಕಾ ಹಾಗೂ ಲೇಯರ್‌ ಜಿರ್ಕೋನ್‌ ಹಾರಗಳನ್ನು ಧರಿಸಿ, ಕೆಲವು ಕಾಲ ಇಂಡಿಯನ್‌ ಲುಕ್‌ನಲ್ಲಿ ಮಿಂಚಿದರು. ಸ್ಟೈಲಿಶ್‌ ಡಾನಿ ಸ್ಟೈಲಿಂಗ್‌ ಇಬ್ಬರನ್ನು ಅತ್ಯಾಕರ್ಷಕವಾಗಿ ಬಿಂಬಿಸಿತ್ತು.

ಡಿಸೈನರ್‌ ಮನೀಶ್‌ ಮಲ್ಹೋತ್ರಾ ಸಂತಸ

“ಕಿಮ್‌, ನಮ್ಮ ಇಂಡಿಯನ್‌ ಔಟ್‌ಫಿಟ್‌ ಧರಿಸಿದ್ದು, ಹೆಮ್ಮೆಯ ವಿಚಾರ. ಅಂತರಾಷ್ಟ್ರೀಯ ಮಟ್ಟದ ಸೆಲೆಬ್ರೆಟಿಗಳು ಈ ರೀತಿ ಭಾರತೀಯ ಉಡುಪುಗಳನ್ನು ಧರಿಸಿದಾಗ, ಇಲ್ಲಿನ ಡಿಸೈನ್‌ಗಳಿಗೆ ಹೆಚ್ಚು ಆದ್ಯತೆ ದೊರಕಿದಂತಾಗುತ್ತದೆ ” ಎಂದು ಮನೀಶ್‌ ಮಲ್ಹೋತ್ರಾ ಸಂತಸ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, ಕಿಮ್‌ ಸಹೋದರಿಯರ ಮುಂಬರುವ ರಿಯಾಲಿಟಿ ಶೋನ ಸೀರೀಸ್‌ನಲ್ಲಿ, ಅಂಬಾನಿ ಫ್ಯಾಮಿಲಿಯ ಮದುವೆಯ ಝಲಕ್‌ಗಳು ಪ್ರಸಾರವಾಗುವ ಸಾಧ್ಯತೆಗಳಿದ್ದು, ಭಾರತೀಯ ಡಿಸೈನರ್‌ವೇರ್‌ಗಳು ಜಗತ್ತಿನಾದ್ಯಂತ ಕಾಣಿಸಿಕೊಳ್ಳಲಿವೆ. ಇದು ಪ್ರಶಂಸನೀಯ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಫರ್ಟ್ಸ್‌.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Ambani Wedding Fashion: ಅನಂತ್ ಅಂಬಾನಿ ಶೆರ್ವಾನಿ ಬೆಲೆಯೇ 214 ಕೋಟಿ ರೂ! ಹೇಗಿತ್ತು ನೋಡಿ ಅಂಬಾನಿ ಜೋಡಿಯ ವೆಡ್ಡಿಂಗ್ ಫ್ಯಾಷನ್!

Continue Reading

ಫ್ಯಾಷನ್

Ambani Wedding Fashion: ಅನಂತ್ ಅಂಬಾನಿ ಶೆರ್ವಾನಿ ಬೆಲೆಯೇ 214 ಕೋಟಿ ರೂ! ಹೇಗಿತ್ತು ನೋಡಿ ಅಂಬಾನಿ ಜೋಡಿಯ ವೆಡ್ಡಿಂಗ್ ಫ್ಯಾಷನ್!

Ambani Wedding Fashion: ವಜ್ರ-ವೈಢೂರ್ಯ ಹಾಗೂ ಬಂಗಾರದಿಂದಲೇ ತಯಾರಾದ ಗ್ರ್ಯಾಂಡ್‌ ಡಿಸೈನರ್‌ವೇರ್‌ಗಳನ್ನು ಧರಿಸಿ ಮದುವೆಯಾದ ಅಂಬಾನಿ ಜೋಡಿ ಅನಂತ್‌-ರಾಧಿಕಾ ಮರ್ಚೆಂಟ್‌ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಹೊಸ ಭಾಷ್ಯವನ್ನೇ ಬರೆದಿದ್ದಾರೆ. ಹಾಗಾದಲ್ಲಿ, ಅವರ ಮದುವೆಯ ದಿನದ ಡಿಸೈನರ್‌ವೇರ್ಸ್ & ಆಭರಣಗಳು ಹೇಗಿದ್ದವು? ಇಲ್ಲಿದೆ ವರದಿ.

VISTARANEWS.COM


on

Ambani Wedding Fashion
ಚಿತ್ರಗಳು: ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ಮದುವೆಯ ಚಿತ್ರಗಳು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಜ್ರ-ವೈಢೂರ್ಯದಲ್ಲೆ ಮಿಂದೆದ್ದಿರುವ ಅಂಬಾನಿ ಜೋಡಿ ಅನಂತ್‌-ರಾಧಿಕಾ ಮರ್ಚೆಂಟ್‌, ಇಂಡಿಯನ್‌ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ (Ambani Wedding Fashion) ಹೊಸ ಭಾಷ್ಯ ಬರೆದಿದ್ದಾರೆ. ಹೌದು, ಜನರ ಕಣ್ಣು ಕುಕ್ಕುವಂತಹ ವಜ್ರ-ವೈಢೂರ್ಯ ಹಾಗೂ ಬಂಗಾರದಿಂದಲೇ ತಯಾರಾದ ಗ್ರ್ಯಾಂಡ್‌ ಡಿಸೈನರ್‌ವೇರ್ಸ್, ದುಬಾರಿ ಜ್ಯುವೆಲರಿಗಳನ್ನು ಧರಿಸಿ ಲಕ್ಷುರಿಯಾಗಿ ಮದುವೆಯಾದ ಅಂಬಾನಿ ಜೋಡಿ ಅನಂತ್‌-ರಾಧಿಕಾ ಮರ್ಚೆಂಟ್‌ , ಬಿಗ್‌ ಗ್ರ್ಯಾಂಡ್‌ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಾಗಾದಲ್ಲಿ, ಮದುವೆಯ ದಿನ ಅವರು ಧರಿಸಿದ್ದ ವಿಶೇಷವಾದ ಡಿಸೈನರ್‌ವೇರ್ಸ್ ಹಾಗೂ ಆಭರಣಗಳು ಹೇಗಿದ್ದವು?ಎಷ್ಟು ಕೋಟಿ ರೂ. ಬೆಲೆಬಾಳುತ್ತಿದ್ದವು. ಈ ಕುರಿತಂತೆ ಫ್ಯಾಷನ್‌ ವಿಮರ್ಶಕರು ಹೇಳುವುದೇನು? ಇಲ್ಲಿದೆ ವಿವರ.

Ambani Wedding Fashion

ವಜ್ರ- ವೈಢೂರ್ಯ ಬಂಗಾರದಲ್ಲೆ ಮಿಂದೆದ್ದ ಜೋಡಿ

ಮದುವೆಯ ದಿನದಂದು ಅಡಿಯಿಂದ ಮುಡಿಯವರೆಗೂ ಕೋಟಿಗಟ್ಟಲೇ ಬೆಲೆ ಬಾಳುವ ವಜ್ರ ವೈಡೂರ್ಯಗಳಿಂದಲೇ ಅಲಂಕೃತಗೊಂಡಿದ್ದ ಅನಂತ್‌-ರಾಧಿಕಾ ಅಂಬಾನಿಯವರ ಸೆಲೆಬ್ರೇಷನ್‌, ವೆಡ್ಡಿಂಗ್‌ ಇಂಡಸ್ಟ್ರೀಯಲ್ಲಿ ಭಾರಿ ಸಂಚಲನ ಮೂಡಿಸಿರುವುದರೊಂದಿಗೆ ಬಿಗ್‌ ಫ್ಯಾಟ್‌ ವೆಡ್ಡಿಂಗ್‌ ಪ್ರಿಯರನ್ನು ಉತ್ತೇಜಿಸಿದೆ. ಡಿಸೈನಿಂಗ್‌ ಕ್ಷೇತ್ರದಲ್ಲಿ ಸಾಕಷ್ಟು ಮಂದಿಗೆ ಉದ್ಯೋಗ ಕಲ್ಪಿಸಿದೆ.

ಅನಂತ್‌ ಅಂಬಾನಿಯ 214 ಕೋಟಿ ರೂ. ಗಳ ಶೆರ್ವಾನಿ

ಅಬ್ಬಬ್ಬಾ., ಮದುವೆಯ ದಿನ ಅನಂತ್‌ ಅಂಬಾನಿ ಧರಿಸಿದ್ದ ವಜ್ರ ಹಾಗೂ ಬಂಗಾರ ಮಿಶ್ರಿತ ಡಿಸೈನ್‌ನ ಶೆರ್ವಾನಿ ಬೆಲೆ 214 ಕೋಟಿ ರೂ. ಗಳು. ಅದರೊಂದಿಗೆ ಧರಿಸಿದ್ದ, ಆನೆಯ ಆಕಾರದ ಬ್ರೋಚ್‌ 14 ಕೋಟಿ ರೂ. ಎಂದರೇ ನೀವು ನಂಬಲೇಬೇಕು. ದೇಸಿ ಕಲಾಕಾರರಿಂದ ಸಿದ್ಧಗೊಂಡ ಶೆರ್ವಾನಿಗೆ ಎಥ್ನಿಕ್‌ ಜೂತಿ ಧರಿಸುವ ಬದಲು, ಬಂಗಾರದ ಪಾಲಿಶ್‌ ಪ್ರಿಂಟ್ಸ್ ಇರುವಂತಹ ಕಸ್ಟಮೈಸ್ಡ್ ಸ್ಪೋರ್ಟ್ಸ್ ಶೂ ಧರಿಸಿದ್ದು, ಹೊಸ ಟ್ರೆಂಡ್‌ಗೆ ಗ್ರೀನ್‌ ಸಿಗ್ನಲ್‌ ನೀಡಿತು ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ಜಾನ್‌.

ಮಹಾರಾಣಿಯಂತೆ ಬಿಂಬಿಸಿದ ರಾಧಿಕಾ ಮರ್ಚೆಂಟ್‌ ಬ್ರೈಡಲ್‌ ಲುಕ್‌

ಇನ್ನು, ಮದುವೆಯ ದಿನ ಗುಜರಾತಿ ಸಂಪ್ರದಾಯದಂತೆ ವಿಶೇಷ ಲೆಹೆಂಗಾ ಹಾಗೂ ಗಾಗ್ರದಲ್ಲಿ ಕಾಣಿಸಿಕೊಂಡ ರಾಧಿಕಾ ಧರಿಸಿದ್ದ, ಡಿಸೈನರ್‌ವೇರ್‌ಗಳು ಕೂಡ ಅಷ್ಟೇ, ಶುದ್ಧ ಬಂಗಾರ ಹಾಗೂ ವಜ್ರದಿಂದಲೇ ಸಿಂಗಾರಗೊಂಡಿದ್ದವು. ತವರು ಮನೆಯಿಂದ ಹೊರಡುವ ಲುಕ್‌, ರಾತ್ರಿ ಮಹೂರ್ತದ ಲುಕ್‌, ವಿದಾಯಿ ಲುಕ್‌ ಹೀಗೆ ನಾನಾ ಟ್ರೆಡಿಷನಲ್‌ ಲುಕ್‌ಗಳಲ್ಲಿ ರಾಧಿಕಾ ಧರೆಗಿಳಿದ ಅಪ್ಸರೆಯಂತೆ ಕಾಣಿಸಿಕೊಂಡರು. ಅಗ್ನಿಸಾಕ್ಷಿ ಸಂದರ್ಭದಲ್ಲಿ, ಡಿಸೈನರ್‌ ಅಬುಜಾನಿ ಸಂದೀಪ್‌ ಕೋಸ್ಲಾ ಅವರ ಡಿಸೈನ್‌ನ ವೈಟ್‌ ಹಾಗೂ ರೆಡ್‌ ಕಾಂಬಿನೇಷನ್‌ನ ಬಂಗಾರದ ವಿನ್ಯಾಸದ ಗಾಗ್ರದಲ್ಲಿ ಮಿನುಗಿದರು. ವಿಶೇಷವೆಂದರೇ, ಸಹೋದರಿಯ ನೂರಾರು ಕೋಟಿ. ರೂ ಬೆಲೆಬಾಳುವ ಜ್ಯುವೆಲರಿ ಸೆಟ್‌ ಧರಿಸಿ, ಸಸ್ಟೈನಬಲ್‌ ಜ್ಯುವೆಲರಿ ಫ್ಯಾಷನ್‌ಗೂ ಸೈ ಎಂದರು. ಅಂದಹಾಗೆ, ಈ ಅಂಬಾನಿ ಜೋಡಿಯ ಈ ಗ್ರ್ಯಾಂಡ್‌ ವೆಡ್ಡಿಂಗ್‌ ಫ್ಯಾಷನ್‌ ಭಾರತೀಯ ಸಂಸ್ಕೃತಿ ಎತ್ತಿ ಹಿಡಿಯುವ ಸಾಕಷ್ಟು ಡಿಸೈನರ್‌ಗಳಿಗೆ ವೇದಿಕೆಯನ್ನು ಸೃಷ್ಟಿಸಿತು ಎನ್ನಬಹುದು ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು.

Ambani wedding Fashion: ಇಂದ್ರಲೋಕವನ್ನೇ ಧರೆಗಿಳಿಸಿದ ಅಂಬಾನಿ ಫ್ಯಾಮಿಲಿ!ಇದನ್ನೂ ಓದಿ:

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading
Advertisement
Pennar River Dispute
ಪ್ರಮುಖ ಸುದ್ದಿ16 mins ago

Pennar River Dispute: ಪೆನ್ನಾರ್ ನದಿ ನೀರು ಹಂಚಿಕೆ ವಿವಾದ; 8 ವಾರದಲ್ಲಿ ವರದಿ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

Rape Case
Latest25 mins ago

Sexual Abuse: ಮಧ್ಯವಯಸ್ಕ ಮಹಿಳೆಯ ಮೇಲೆ ಮಗನ ಸ್ನೇಹಿತನಿಂದಲೇ ಅತ್ಯಾಚಾರ!

ಕ್ರೀಡೆ28 mins ago

India at the Olympics: ಒಲಿಂಪಿಕ್ಸ್​ನಲ್ಲಿ ಭಾರತದ ಪದಕ ಸಾಧನೆಯ ಇಣುಕು ನೋಟ

Ambani Video
ಪ್ರಮುಖ ಸುದ್ದಿ40 mins ago

Ambani Video: 3 ವರ್ಷದ ಅಂಬಾನಿ ಮೊಮ್ಮಗ ವೇದಿಕೆ ಮೇಲೆ ಜಾರಿ ಬಿದ್ದ, ಆದರೆ ಜನರ ಹೃದಯ ಗೆದ್ದ!

Money Guide
ಮನಿ-ಗೈಡ್40 mins ago

Money Guide: ಹಿರಿಯರಿಗೆ ಆರೋಗ್ಯ ವಿಮೆ: ಯಾಕಾಗಿ? ಏನಿದರ ಉಪಯೋಗ?

Muharram 2024 Man dies in fire during
ರಾಯಚೂರು50 mins ago

Muharram 2024: ರಾಯಚೂರಿನಲ್ಲಿ ಮೊಹರಂನಲ್ಲಿ ಕೊಂಡ ಹಾಯುವಾಗ ಆಯತಪ್ಪಿ ಬಿದ್ದ ವ್ಯಕ್ತಿ ಸುಟ್ಟು ಭಸ್ಮ

hit and run case
ದೇಶ52 mins ago

Hit And Run Case: ಮುಂಬೈ ಹಿಟ್‌ ಆ್ಯಂಡ್‌ ರನ್‌ ಕೇಸ್‌; ತನಗೆ ಕುಡಿಯುವ ಅಭ್ಯಾಸ ಇದೆ ಎಂದು ಒಪ್ಪಿಕೊಂಡ ಆರೋಪಿ

Assembly Session
ಕರ್ನಾಟಕ57 mins ago

Assembly Session: ವಾಲ್ಮೀಕಿ ನಿಗಮ ಅಕ್ರಮ ದಲಿತರಿಗೆ ಮಾಡಿರೋ ಅನ್ಯಾಯ: ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ

Paris Olympics 2024
ಪ್ರಮುಖ ಸುದ್ದಿ1 hour ago

Paris Olympics 2024 : ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಕಡಿಮೆ ಪದಕಗಳು ಸಿಗುವುದು ಯಾಕೆ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ

BMTC staff commits suicide at headquarters
ಬೆಂಗಳೂರು2 hours ago

BMTC staff : ಬೆಂಗಳೂರಿನಲ್ಲಿ ನೇಣು ಬಿಗಿದುಕೊಂಡು ಬಿಎಂಟಿಸಿ ಸಿಬ್ಬಂದಿ ಆತ್ಮಹತ್ಯೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ4 hours ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ6 hours ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ24 hours ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 day ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ1 day ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌