Neha Hiremath Murder: ನೇಹಾ ಹಿರೇಮಠ ಹತ್ಯೆ ಹಿಂದೆ ಲವ್ ಜಿಹಾದ್? ಸಿಐಡಿ ಚಾರ್ಜ್‌‌ಶೀಟ್‌ನಲ್ಲೇನಿದೆ? - Vistara News

ಪ್ರಮುಖ ಸುದ್ದಿ

Neha Hiremath Murder: ನೇಹಾ ಹಿರೇಮಠ ಹತ್ಯೆ ಹಿಂದೆ ಲವ್ ಜಿಹಾದ್? ಸಿಐಡಿ ಚಾರ್ಜ್‌‌ಶೀಟ್‌ನಲ್ಲೇನಿದೆ?

Neha Hiremath Murder: ಕೃತ್ಯದ ಹಿಂದೆ ಲವ್‌ ಜಿಹಾದ್‌ ಇದೆ ಎಂದು ನೇಹಾ ಹಿರೇಮಠಳ ತಂದೆ ನಿರಂಜನ್‌ ಹಿರೇಮಠ ಆರೋಪಿಸಿದ್ದರು. ಪ್ರಕರಣ ನಡೆದ ಬಳಿಕ ರಾಜ್ಯದಲ್ಲಿ ಇದರ ಬಗ್ಗೆ ವ್ಯಾಪಕವಾದ ಪ್ರತಿರೋಧ ವ್ಯಕ್ತವಾಗಿತ್ತು. ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿತ್ತು. ಹಿಂದೂ ಸಂಘಟನೆಗಳು ಲವ್‌ ಜಿಹಾದ್‌ಗೆ ತಡೆಗಟ್ಟಲು ಸಮಗ್ರ ಕಾರ್ಯತಂತ್ರಕ್ಕಾಗಿ ಒತ್ತಾಯಿಸಿದ್ದವು.

VISTARANEWS.COM


on

Neha hiremath Murder case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹುಬ್ಬಳ್ಳಿ: ನಗರದಲ್ಲಿ ನಡೆದಿದ್ದ ನೇಹಾ ಹಿರೇಮಠ ಹತ್ಯೆಗೆ (Neha Hiremath Murder) ಸಂಬಂಧಿಸಿ ಪೊಲೀಸರು 483 ಪುಟಗಳ ಚಾರ್ಜ್​ಶೀಟ್ (Charge Sheet) ಅನ್ನು ಕೋರ್ಟ್‌ಗೆ ಸಲ್ಲಿಸಿದ್ದಾರೆ. ಕೊಲೆಗೆ ಆರೋಪಿಯ ಹತಾಶೆಯೇ ಕಾರಣ ಎಂದು ಸಿಐಡಿ ಪೊಲೀಸರು (CID Police) ಕೋರ್ಟ್​ಗೆ ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣದಲ್ಲಿ ಲವ್ ಜಿಹಾದ್ (Love Jihad) ​ಕೋನ ಇದೆಯೇ ಎಂಬ ಬಗ್ಗೆ ಯಾವುದೇ ಅಂಶವನ್ನು ಸಿಐಡಿ ಉಲ್ಲೇಖಿಸಿಲ್ಲ.

ಕೃತ್ಯದ ಹಿಂದೆ ಲವ್‌ ಜಿಹಾದ್‌ ಇದೆ ಎಂದು ನೇಹಾ ಹಿರೇಮಠಳ ತಂದೆ ನಿರಂಜನ್‌ ಹಿರೇಮಠ ಆರೋಪಿಸಿದ್ದರು. ಪ್ರಕರಣ ನಡೆದ ಬಳಿಕ ರಾಜ್ಯದಲ್ಲಿ ಇದರ ಬಗ್ಗೆ ವ್ಯಾಪಕವಾದ ಪ್ರತಿರೋಧ ವ್ಯಕ್ತವಾಗಿತ್ತು. ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿತ್ತು. ಹಿಂದೂ ಸಂಘಟನೆಗಳು ಲವ್‌ ಜಿಹಾದ್‌ಗೆ ತಡೆಗಟ್ಟಲು ಸಮಗ್ರ ಕಾರ್ಯತಂತ್ರಕ್ಕಾಗಿ ಒತ್ತಾಯಿಸಿದ್ದವು.

ಇದೀಗ ನೇಹಾಳ ತಂದೆ, ತಾಯಿ, ಸಹೋದರ, ಸಹಪಾಠಿಗಳು, ಗೆಳತಿಯರು, ಬಿವಿಬಿ ಕಾಲೇಜಿನ ಉಪನ್ಯಾಸಕರು ಸೇರಿದಂತೆ ಒಟ್ಟು 99 ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಪ್ರತ್ಯಕ್ಷ ಸಾಕ್ಷಿಗಳು, ಸಿಸಿಟಿವಿ ದೃಶ್ಯಾವಳಿಗಳು, ದಾಖಲೆಗಳು, ಮರಣೋತ್ತರ ಶವ ಪರೀಕ್ಷೆ ಕೈಗೊಂಡ ವೈದ್ಯರು ಹಾಗೂ ತಜ್ಞರ (ಫೊರೆನ್ಸಿಕ್) ವರದಿಗಳೂ ಚಾರ್ಜ್‌ಶೀಟ್‌ನಲ್ಲಿ ಅಡಕವಾಗಿವೆ.

ಆರೋಪಿ ಫಯಾಜ್ ವಿರುದ್ಧ ಐಪಿಸಿ ಕಲಂ 302 (ಮರಣದಂಡನೆ ಇಲ್ಲವೇ ಜೀವಾವಧಿ ಶಿಕ್ಷೆ), 341(ಒಂದು ತಿಂಗಳ ಜೈಲು ಶಿಕ್ಷೆ) ಹಾಗೂ 506 (ಜೀವ ಬೆದರಿಕೆಗಾಗಿ 7 ವರ್ಷಗಳ ಜೈಲು ಶಿಕ್ಷೆ) ಅಡಿಯಲ್ಲಿ ದೋಷಾರೋಪ ಹೊರಿಸಲಾಗಿದೆ.

ಏನಿದು ಪ್ರಕರಣ?

ಫಯಾಜ್​ ಮತ್ತು ನೇಹಾ 2020-21ರಲ್ಲಿ ಹುಬ್ಬಳ್ಳಿಯ ಪಿ.ಸಿ.ಜಾಬಿನ್ ಕಾಲೇಜಿನಲ್ಲಿ ಬಿಸಿಎ ಅಧ್ಯಯನ ಮಾಡುತ್ತಿದ್ದಾಗ ಸಹಪಾಠಿಗಳಾಗಿದ್ದರು. ಇಬ್ಬರೂ ಆರಂಭದಲ್ಲಿ ಸ್ನೇಹಿತರಾಗಿದ್ದರು. 2022ರಲ್ಲಿ ಕ್ರಮೇಣ ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. 2024ರ ಮಾರ್ಚ್ ತಿಂಗಳಿನಲ್ಲಿ ಇಬ್ಬರಿಗೂ ಮನಸ್ತಾಪ ಉಂಟಾಗಿತ್ತು. ಇದರಿಂದ ಬೇಸತ್ತ ನೇಹಾ, ಫಯಾಜ್ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದಳು.

ಫಯಾಜ್‌ನನ್ನು ನೇಹಾ ನಿರ್ಲಕ್ಷ್ಯ ಮಾಡಲು ಆರಂಭಿಸಿದ್ದರಿಂದ ಆತ ಹತಾಶೆಗೊಂಡು ಕೊಲೆ ಮಾಡಲು ನಿರ್ಧರಿಸಿದ್ದ. 2024ರ ಏಪ್ರಿಲ್ 18ರಂದು ಸಂಜೆ 4.40ರ ವೇಳೆಗೆ ಚಾಕುವಿನಿಂದ ಮನಬಂದಂತೆ ಚುಚ್ಚಿ ಕೊಲೆ ಮಾಡಿದ್ದಾನೆ. ಕೊಲೆಗೂ ಮುನ್ನ ಫಯಾಜ್, “ಇಷ್ಟು ದಿನ ಪ್ರೀತಿಸಿ ಈಗ ಮೋಸ ಮಾಡುತ್ತಿದ್ದೀಯಾ?” ಎಂದು ಚೀರಾಡಿ ಆಕೆಗೆ ಚಾಕುವಿನಿಂದ ಚುಚ್ಚಿ, ಚಾಕು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾನೆ ಎಂದು ಸಿಐಡಿ ಚಾರ್ಜ್‌ಶೀಟ್‌ನಲ್ಲಿ ವಿವರಿಸಲಾಗಿದೆ.

ನೇಹಾ ಕೊಲೆಗೆ ಧಾರವಾಡದಲ್ಲಿ ಫಯಾಜ್​ ಸಂಚು ರೂಪಿಸಿದ್ದ. ಧಾರವಾಡದಲ್ಲಿ ಟೋಪಿ, ಚಾಕು ಖರೀದಿಸಿದ್ದ. ಏಪ್ರಿಲ್ 18ರಂದು ಕೊಲೆ ಮಾಡುವ 3 ದಿನಗಳ ಮೊದಲೇ ಎ.15ರಂದು ಧಾರವಾಡದ ಆರ್ಯ ಸೂಪರ್ ಬಜಾರ್‌ನಲ್ಲಿ ಚಾಕು ಖರೀದಿಸಿದ್ದಾನೆ. ಚಾಕು ಖರೀದಿಸಿದ ಸಿಸಿಟಿವಿ ದೃಶ್ಯ ಸಿಐಡಿಗೆ ಲಭ್ಯವಾಗಿದೆ. ಅದೇ ದಿನ ಧಾರವಾಡದ ನ್ಯೂ ಸಾಯಿ ಗಾರ್ಮೆಂಟ್‌ನಲ್ಲಿ 130 ರೂ. ಕೊಟ್ಟು ಕೆಂಪು ಟೋಪಿ ಖರೀದಿಸಿದ್ದಾನೆ.

ಕೊಲೆ ಮಾಡಲು ಬಿವಿಬಿ ಕಾಲೇಜಿಗೆ ಹೋದಾಗ ಯಾರೂ ಗುರುತು ಹಿಡಿಯಬಾರದೆಂಬ ಕಾರಣಕ್ಕೆ ಕೆಂಪು ಟೋಪಿ ಹಾಕಿಕೊಂಡು ಹೋಗಿದ್ದಾನೆ. ಮುಖಕ್ಕೆ ಕಪ್ಪು ಮಾಸ್ಕ್ ಕೂಡ ಧರಿಸಿದ್ದ. ಅದನ್ನೂ ಧಾರವಾಡದ ಶ್ರೀ ಹನುಮಾನ್ ಮೆಡಿಕಲ್ ಶಾಪ್‌ನಲ್ಲಿ ಖರೀದಿಸಿದ್ದ. ಈ ಬಗ್ಗೆ ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ದೊರೆತಿವೆ.

ನೇಹಾಳ ರಕ್ತದ ಮಾದರಿಗಳು, 15 ಸೆಂ.ಮೀ. ಹಿಡಿಕೆಯುಳ್ಳ ಮಧ್ಯಮ ಗಾತ್ರದ ಸೈನ್‌ಲೆಸ್ ಸ್ಟೀಲ್ ಚಾಕು, ವೈಲ್ಡ್‌ ಕ್ರಾಫ್ಟ್ ಕಂಪನಿಯ ನೇಹಾಳ ಏರ್ ಬ್ಯಾಗ್, ಐಡಿ ಕಾರ್ಡ್, ಪೆನ್, ಪೆನ್ಸಿಲ್, ಮತ್ತೊಂದು ಏರ್ ಬ್ಯಾಗ್, ಒನ್ ಪ್ಲಸ್ ಮೊಬೈಲ್ ಫೋನ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದೇ ರೀತಿ, ಫಯಾಜ್ ಕೊಲೆ ಮಾಡಲು ಬರುವಾಗ ತಂದಿದ್ದ ಹೊಂಡಾ ಆ್ಯಕ್ಟಿವಾ (ಕೆಎ24 ವೈ 5781), ಕೆಲವು ಪೆನ್‌ಡ್ರೈವ್‌ಗಳು ಮತ್ತಿತರ ವಸ್ತುಗಳನ್ನು ತನಿಖೆಯ ವೇಳೆ ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: Neha Hiremath: ಲಿಂಗಾಯತಳಾದ ನೇಹಾ ಹಿರೇಮಠ ಎಸ್‌ಸಿ ಪ್ರಮಾಣಪತ್ರ ಮಾಡಿಸಿದ್ದೇಕೆ? ಸರ್ಟಿಫಿಕೇಟ್‌ ಫೋಟೊ ಈಗ ವೈರಲ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

CM Siddaramaiah: ಆಸ್ತಿ ಬಗ್ಗೆ ತಪ್ಪು ಮಾಹಿತಿ; ಸಿಎಂ ವಿರುದ್ಧ ಚುನಾವಣಾ ಆಯೋಗಕ್ಕೆ ಮತ್ತೆರಡು ದೂರು

CM Siddaramaiah: 2018 ಮತ್ತು 2023ರ ವಿಧಾನಸಭಾ ಚುನಾವಣೆ ಆಫಿಡವಿಟ್‌ನಲ್ಲಿ ಆಸ್ತಿ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ಸಾಮಾಜಿಕ ಹೋರಾಟಗಾರ ಟಿ.ಜೆ.ಅಬ್ರಹಾಂ ಎರಡು ಪ್ರತ್ಯೇಕ ದೂರು ಸಲ್ಲಿಸಿದ್ದಾರೆ.

VISTARANEWS.COM


on

CM Siddaramaiah
Koo

ಬೆಂಗಳೂರು: ಮುಡಾ ಹಗರಣದಲ್ಲಿ ದೂರು ದಾಖಲಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮತ್ತೆರಡು ದೂರು ದಾಖಲಾಗಿವೆ. 2018 ಮತ್ತು 2023ರ ವಿಧಾನಸಭಾ ಚುನಾವಣೆ ಆಫಿಡವಿಟ್‌ನಲ್ಲಿ ಆಸ್ತಿ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ಸಾಮಾಜಿಕ ಹೋರಾಟಗಾರ, ಕರ್ನಾಟಕ ಭ್ರಷ್ಟಾಚಾರ ವಿರೋಧಿ ಮತ್ತು ಪರಿಸರ ವೇದಿಕೆ ಅಧ್ಯಕ್ಷ ಟಿ.ಜೆ.ಅಬ್ರಹಾಂ ಎರಡು ಪ್ರತ್ಯೇಕ ದೂರು ಸಲ್ಲಿಸಿದ್ದಾರೆ.

2018ರ ಚುನಾವಣೆ ವೇಳೆ ಪಾರ್ವತಿ ಸಿದ್ದರಾಮಯ್ಯ ಬಳಿ ಇರುವ 3 ಎಕರೆ 16 ಗುಂಟೆ ಕೃಷಿ ಜಮೀನು ಎಂದು ಅಫಿಡವಿಟ್‌ನಲ್ಲಿ ನಮೂದು ಮಾಡಲಾಗಿದೆ ಇದರ ಮೌಲ್ಯ ಕೇವಲ 25 ಲಕ್ಷ ಎಂದು ನಮೂದಿಸಲಾಗಿತ್ತು. ಆದರೆ 2005 ರಲ್ಲಿಯೇ ಜಮೀನು ಪರಿವರ್ತನೆ ಮಾಡಿಸಿದ್ದ ದಾಖಲೆ ನೀಡಿ, ಮೊದಲ ದೂರು ಸಲ್ಲಿಸಲಾಗಿದೆ.

ಇನ್ನು 2023ರ ಚುನಾವಣೆ ವೇಳೆ 14 ಮುಡಾ ಸೈಟುಗಳ ಮೌಲ್ಯ ಕೇವಲ 8 ಕೋಟಿ ಎಂದು ಅಫಿಡವಿಟ್‌ನಲ್ಲಿ ನಮೂದು ಮಾಡಲಾಗಿದೆ. ಆದರೆ, 14 ಸೈಟುಗಳ ಅಸಲಿ ಮಾರುಕಟ್ಟೆ ಮೌಲ್ಯ 34 ಕೋಟಿಯಾಗಿದ್ದು, ಉದ್ದೇಶಪೂರ್ವಕವಾಗಿ ಸಿದ್ದರಾಮಯ್ಯ ಮಾಹಿತಿ ತಪ್ಪು ನೀಡಿದ್ದಾರೆ ಎಂದು ಎರಡನೇ ದೂರು ನೀಡಲಾಗಿದೆ.

ಸಿಎಂ ಪತ್ನಿ ಪಾರ್ವತಿ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ 2010ರಲ್ಲಿ ಈ ಜಾಗವನ್ನು ಗಿಫ್ಟ್‌ ಡೀಡ್‌ ಆಗಿ ನೋಂದಣಿ ಮಾಡಿದ್ದಾರೆ. ಈ ಜಾಗದ ಮೂಲ ಮಾಲೀಕರು ದೇವರಾಜು ಮತ್ತು ಕುಟುಂಬಸ್ಥರು ಆಗಿದ್ದು. 2004ರ ಆಗಸ್ಟ್‌ 25ರಂದು ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಈ ಜಾಗವನ್ನು ಮಾರಾಟ ಮಾಡಿದ್ದಾರೆ. 2013ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದ ವಾರ್ಷಿಕ ರಿಟರ್ನ್‌ ಲೋಕಾಯುಕ್ತಕ್ಕೆ ಸಲ್ಲಿಸುವ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಪತ್ನಿ ಬಳಿ ಇದ್ದ ನಿವೇಶನದ ವಿವರವನ್ನು ಉಲ್ಲೇಖಿಸಿದ್ದಾರೆ. ಆದರೆ 2013ರ ಚುನಾವಣೆಯ ಅಫಿಡವಿಟ್‌ ಸಲ್ಲಿಸುವಾಗ ಈ ವಿಚಾರವನ್ನು ಉದ್ದೇಶಪೂರ್ವಕವಾಗಿ ಉಲ್ಲೇಖ ಮಾಡಿಲ್ಲ.

ಇದನ್ನೂ ಓದಿ | 7th Pay Commission: ಸರ್ಕಾರಿ ನೌಕರರ ವೇತನ, ಪಿಂಚಣಿ 58% ಹೆಚ್ಚಳ; ಸಂಪೂರ್ಣ ಲೆಕ್ಕ ಕೊಟ್ಟ ಸಿದ್ದರಾಮಯ್ಯ

ಕೃಷಿ ಭೂಮಿಯ ಬಗ್ಗೆಯ ಮಾಹಿತಿ ನೀಡದೇ ಸುಳ್ಳು ಅಫಿಡವಿಟ್ ಸಲ್ಲಿಸಿದ್ದು, ಜನಪ್ರತಿ ನಿಧಿ ಕಾಯ್ದೆ ಸೆಕ್ಷನ್ 125 ಎ ಮತ್ತು ಸೆಕ್ಷನ್ 8 ಉಲ್ಲಂಘನೆ. ಸುಳ್ಳು ದಾಖಲೆ ಸಲ್ಲಿಸಿದ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ 227, 229, 231, 236, 202 ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಟಿಜೆ ಅಬ್ರಹಾಂ ಮನವಿ ಮಾಡಿದ್ದಾರೆ.

ಆ.1ರಿಂದ ನೌಕರರ ವೇತನ ಹೆಚ್ಚಳ; ಸರ್ಕಾರಕ್ಕೆ ವಾರ್ಷಿಕ 20,208 ಕೋಟಿ ಹೆಚ್ಚುವರಿ ಹೊರೆ ಎಂದ ಸಿಎಂ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿ ಪರಿಷ್ಕರಣೆಗೆ ಏಳನೇ ವೇತನ ಆಯೋಗ ರಚನೆ ಮಾಡಲಾಗಿತ್ತು. ಈ ಆಯೋಗ (7th Pay Commission) ವರದಿಯನ್ನು ನೀಡಿದ್ದು, ಆಗಸ್ಟ್‌ 1ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಜಾರಿ ಮಾಡಲಾಗುತ್ತದೆ. ಶೇ. 31ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದ್ದು, ನೌಕರರ ವೇತನ ಪರಿಷ್ಕರಣೆಯಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕ 20,208 ಕೋಟಿ ರೂ.ಗಳಷ್ಟು ಹೆಚ್ಚುವರಿ ವೆಚ್ಚ ಉಂಟಾಗುತ್ತದೆ. ಈ ಹೆಚ್ಚುವರಿ ವೆಚ್ಚಕ್ಕೆ 2024-25ರ ಆಯವ್ಯಯದಲ್ಲಿ ಅಗತ್ಯ ಅನುದಾನವನ್ನು ಮೀಸಲಿಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸಭಾ ಕಲಾಪದಲ್ಲಿ ಮಂಗಳವಾರ ಮಾತನಾಡಿದ ಅವರು, ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆ, ಪಿಂಚಣಿ ಪರಿಷ್ಕರಣೆಯ ಬೇಡಿಕೆಗಳನ್ನು ಪರಿಷ್ಕರಿಸಲು 2022ರ ನ.19ರಂದು 7ನೇ ರಾಜ್ಯ ವೇತನ ಆಯೋಗವನ್ನು ರಚಿಸಲಾಗಿತ್ತು. ಅದರಂತೆ, ವೇತನ ಆಯೋಗವು 2024ರ ಮಾರ್ಚ್‌ 24ರಂದು ಅಂತಿಮ ವರದಿ ಸಲ್ಲಿಸಿದೆ.
7ನೇ ರಾಜ್ಯ ವೇತನ ಆಯೋಗದ ಶಿಫಾರಸಿನಂತೆ ಸರ್ಕಾರಿ ನೌಕರರ ವೇತನ, ವೇತನ ಸಂಬಂಧಿತ ಭತ್ಯೆ, ಪಿಂಚಣಿಯನ್ನು 2022ರ ಜುಲೈ 1ರಿಂದ ಅನ್ವಯವಾಗುವಂತೆ ಪರಿಷ್ಕರಿಸಿ ಇದೇ ಆಗಸ್ಟ್‌ 1ರಿಂದ ಅನುಷ್ಠಾನಗೊಳಿಸಲು ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿರುತ್ತದೆ. ಅದರಂತೆ, 01.07.2022ಕ್ಕೆ ನೌಕರರ ಮೂಲ ವೇತನಕ್ಕೆ ಶೇಕಡ 31ರಷ್ಟು ತುಟ್ಟಿ ಭತ್ಯೆ ಮತ್ತು ಶೇ. 27.50 ರಷ್ಟು ಫಿಟ್‌ಮೆಂಟ್ ಸೇರಿಸಿ ವೇತನ ಮತ್ತು ಪಿಂಚಣಿಯನ್ನು ಪರಿಷ್ಕರಿಸಲಾಗುವುದು. ಇದರಿಂದ ನೌಕರರ ಮೂಲ ವೇತನ ಮತ್ತು ಪಿಂಚಣಿಯಲ್ಲಿ ಶೇ 58.50 ರಷ್ಟು ಹೆಚ್ಚಳವಾಗುತ್ತದೆ. ಮನೆಬಾಡಿಗೆ ಭತ್ಯೆಯಲ್ಲಿ ಶೇ. 32ರಷ್ಟು ಹೆಚ್ಚಳವಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ | 7th Pay Commission: ರಜೆ, ಪಿಂಚಣಿ, ಬಡ್ತಿ; 7ನೇ ವೇತನ ಆಯೋಗದ ಜಾರಿ ಬಳಿಕ ಸಂಬಳದ ಜತೆ ಏನೆಲ್ಲ ಸೌಲಭ್ಯ ಸಿಗಲಿವೆ? ಇಲ್ಲಿದೆ ಮಾಹಿತಿ

ನೌಕರರ ಕನಿಷ್ಠ ಮೂಲವೇತನವು 17,000 ರಿಂದ ರೂ. 27,000ಕ್ಕೆ, ಗರಿಷ್ಠ ವೇತನವು 1,50,600 ರಿಂದ 2,41,200 ಗಳಿಗೆ ಪರಿಷ್ಕರಣೆಯಾಗುತ್ತದೆ. ನೌಕರರ ಕನಿಷ್ಠ ಪಿಂಚಣಿಯು 8,500 ರಿಂದ 13,500ಕ್ಕೆ ಮತ್ತು ಗರಿಷ್ಠ ಪಿಂಚಣಿಯು 75,300 ರಿಂದ ರೂ. 1,20,600ಕ್ಕೆ ಪರಿಷ್ಕರಣೆಗೊಳ್ಳುತ್ತದೆ. ಈ ಪರಿಷ್ಕರಣೆಯು, ಅನುದಾನಿತ ಶಿಕ್ಷಣ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆಗಳ ನೌಕರರು, ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳಿಗೂ ಅನ್ವಯವಾಗುತ್ತದೆ.
ನೌಕರರ ವೇತನ ಪರಿಷ್ಕರಣೆಯಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕ 20,208 ರೂ. ಕೋಟಿಗಳಷ್ಟು ಹೆಚ್ಚುವರಿ ವೆಚ್ಚ ಉಂಟಾಗುತ್ತದೆ. ಈ ಹೆಚ್ಚುವರಿ ವೆಚ್ಚಕ್ಕೆ 2024-25ರ ಆಯವ್ಯಯದಲ್ಲಿ ಅಗತ್ಯ ಅನುದಾನವನ್ನು ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ.

Continue Reading

Latest

Viral News: ಬಾಸ್‌ ಜತೆ ಚಕ್ಕಂದವಾಡುತ್ತಿದ್ದ ಕಿಲಾಡಿ ಪತ್ನಿ; ಡ್ರೋನ್‌ ಬಳಸಿ ಪತ್ತೆ ಹಚ್ಚಿದ ಚಾಲಾಕಿ ಗಂಡ!

Viral News: ಗಂಡನಿಗೆ ಹೆಂಡತಿಯ ಮೇಲೆ ಅನುಮಾನ, ಹೆಂಡತಿಗೆ ಗಂಡನ ಮೇಲೆ ಅನುಮಾನ ಇದು ಈಗ ಸಾಮಾನ್ಯವಾಗಿ ಬಿಟ್ಟಿದೆ. ಚೀನಾದಲ್ಲಿ ವಾಸಿಸುವ ವ್ಯಕ್ತಿಯೊಬ್ಬನಿಗೆ ತನ್ನ ಪತ್ನಿ ತನ್ನನ್ನು ನಿರ್ಲಕ್ಷಿಸುತ್ತಿರುವುದು ತಿಳಿದುಬಂದಿದೆ. ಇದರಿಂದ ಆತನಿಗೆ ತನ್ನ ಪತ್ನಿಯ ಮೇಲೆ ಅನುಮಾನ ಶುರುವಾಗಿದೆ. ಹಾಗಾಗಿ ಆತ ತನ್ನ ಹೆಂಡತಿಯ ಚಲನವಲನಗಳನ್ನು ಪತ್ತೆಹಚ್ಚಲು ಡ್ರೋನ್ ಅನ್ನು ಬಳಸಲು ಆತ ನಿರ್ಧರಿಸಿದ. ಕೊನೆಗೂ ಆತನ ಪತ್ನಿ ಬಾಸ್‌ ಜತೆ ಸರಸವಾಡುತ್ತಿರುವುದು ಡ್ರೋನ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ

VISTARANEWS.COM


on

Viral News
Koo

ಅಕ್ರಮ ಸಂಬಂಧದ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಕೇಳಿಬರುತ್ತಿದೆ. ಪತಿ ಪತ್ನಿಯರು ಒಬ್ಬರು, ಇನ್ನೊಬ್ಬರಿಗೆ ತಿಳಿಯದಂತೆ ತಮ್ಮ ಕಚೇರಿಗಳಲ್ಲಿ, ಅಥವಾ ಇನ್ನಿತರ ಸ್ಥಳಗಳಲ್ಲಿ ಬೇರೆಯವರೊಡನೆ ಅಕ್ರಮ ಸಂಬಂಧವನ್ನು ಹೊಂದುವ ಪ್ರಕರಣಗಳು ಬಯಲಾಗುತ್ತಿವೆ. ಇದು ಈಗ ಸಾಮಾನ್ಯ ಎಂಬಂತಾಗಿ ಬಿಟ್ಟಿದೆ. ಆದರೆ ಇದೀಗ ಮಹಿಳೆಯೊಬ್ಬಳು ತಮ್ಮ ಬಾಸ್ ಜೊತೆ ಅಕ್ರಮ ಸಂಬಂಧವನ್ನು ಹೊಂದಿದ್ದು, ಇದರಿಂದ ಅನುಮಾನಗೊಂಡಿದ್ದ ಪತಿ ತನ್ನ ಹೆಂಡತಿಯ ರಹಸ್ಯ ಸಂಬಂಧವನ್ನು ಕಂಡುಹಿಡಿಯಲು ಡ್ರೋನ್ ಬಳಸಿ ಯಶಸ್ವಿಯಾಗಿದ್ದಾನೆ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News )ಆಗಿದೆ.

Viral News

ಮಧ್ಯ ಹುಬೈ ಪ್ರಾಂತ್ಯದ ಶಿಯಾನ್‍ನಲ್ಲಿ ವಾಸಿಸುವ 33 ವರ್ಷದ ವ್ಯಕ್ತಿಯೊಬ್ಬನಿಗೆ ತನ್ನ ಪತ್ನಿ ತನ್ನನ್ನು ನಿರ್ಲಕ್ಷಿಸುತ್ತಿರುವುದು ತಿಳಿದುಬಂದಿದೆ. ಇದರಿಂದ ಆತನಿಗೆ ತನ್ನ ಪತ್ನಿಯ ಮೇಲೆ ಅನುಮಾನ ಶುರುವಾಗಿದೆ. ಅಲ್ಲದೇ ಆತನ ಪತ್ನಿಗೆ ಕೆಲಸದಲ್ಲಿ ಪ್ರಮೋಷನ್ ಸಿಕ್ಕಿದ್ದು, ತನ್ನ ಹೆತ್ತವರನ್ನು ಆಗಾಗ ಭೇಟಿ ಮಾಡಲು ಹೋಗುವುದು ಆತನಲ್ಲಿ ಅನುಮಾನವನ್ನುಂಟುಮಾಡಿದೆ. ಹಾಗಾಗಿ ಆತ ತನ್ನ ಹೆಂಡತಿಯ ಚಲನವಲನಗಳನ್ನು ಪತ್ತೆಹಚ್ಚಲು ಡ್ರೋನ್ ಅನ್ನು ಬಳಸಲು ನಿರ್ಧರಿಸಿದನು. ಪತ್ನಿಯ ಹಿಂದೆ ಡ್ರೋನ್ ಅನ್ನು ಕಳುಹಿಸಿದ ಆತ ಆಕೆ ಕಾರೊಂದರಲ್ಲಿ ದೂರದ ಪರ್ವತ ಪ್ರದೇಶಕ್ಕೆ ಹೋಗುವುದು ಕಂಡುಬಂದಿದೆ. ನಂತರ ಅಲ್ಲಿ ಅವಳು ಇನ್ನೊಬ್ಬ ವ್ಯಕ್ತಿಯೊಂದಿಗೆ ಕೈ ಕೈ ಹಿಡಿದು ನಡೆದು ಪಾಳುಬಿದ್ದ ಮಣ್ಣಿನ ಗೋಡೆಯ ಮನೆಯೊಳಗೆ ಹೋಗುತ್ತಿರುವುದು ಕಂಡಿದೆ. ಸುಮಾರು 20 ನಿಮಿಷಗಳ ನಂತರ, ಅವರು ಕಟ್ಟಡದಿಂದ ಹೊರಬಂದು ನಂತರ ಅವಳು ತನ್ನ ಕೆಲಸ ಮಾಡುವ ಕಾರ್ಖಾನೆಗೆ ಹಿಂತಿರುಗಿದ್ದಾಳೆ. ಆಗ ಪತಿಗೆ ಆಕೆಗೆ ಅಕ್ರಮ ಸಂಬಂಧವಿರುವುದು ತಿಳಿದು ಬಂದಿದೆ.

ಹಾಗಾಗಿ ಡ್ರೋನ್‍ನಿಂದ ಸಂಗ್ರಹಿಸಿದ ಪುರಾವೆಗಳಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದಾನೆ ಎನ್ನಲಾಗಿದೆ. ಹಾಗೇ ಅವಳಿಗೆ ತನ್ನ ಬಾಸ್ ಜೊತೆ ಅಕ್ರಮ ಸಂಬಂಧವಿದ್ದು, ಕಾರ್ಖಾನೆಯಲ್ಲಿ ಅವರಿಗೆ ಸಂಬಂಧ ಹೊಂದಲು ಸಮಸ್ಯೆಯಾಗುತ್ತದೆ ಎಂದು ದೂರದ ಕಾಡಿನಲ್ಲಿ ಈ ಕೆಲಸ ಮಾಡಲು ಮುಂದಾಗಿರುವುದಾಗಿ ಪತಿ ತಿಳಿಸಿದ್ದಾನೆ. ಈ ವಿಚಾರವನ್ನು ಆತ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದು, ಪತ್ನಿಯ ಮೋಸವನ್ನು ಡ್ರೋನ್ ಮೂಲಕ ಬಯಲು ಮಾಡಿರುವ ಬಗ್ಗೆ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಕೆಲವರು ಡ್ರೋನ್ ತಂತ್ರಜ್ಞಾನದಿಂದ ಆತನ ಪತ್ನಿಯ ಮೋಸ ಬಯಲಾಗಿದೆ ಎಂದು ಹೊಗಳಿದ್ದಾರೆ. ಹಾಗೇ ಡ್ರೋನ್‍ನಂತಹ ತಂತ್ರಜ್ಞಾನ ಇರುವ ಈ ಕಾಲದಲ್ಲಿ ಇಂತಹ ಮೋಸ ನಡೆಯುವುದಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:  ಹೆಣ್ಣು ಮಕ್ಕಳಿಗೆ ಈಗ ಶಾಲೆ ಕೂಡ ಸುರಕ್ಷಿತವಲ್ಲ! ಶಾಲಾ ಶೌಚಾಲಯದಲ್ಲಿ ಬಾಲಕಿ ಮೇಲೆ ಬಾಲಕನಿಂದ ಅತ್ಯಾಚಾರ

ಡ್ರೋನ್ ತಂತ್ರಜ್ಞಾನ ಇತೀಚಿನ ದಿನಗಳಲ್ಲಿ ಹೆಚ್ಚಿನ ಕೆಲಸಕ್ಕೆ ಬಳಸಲಾಗುತ್ತಿದೆ. ಏಪ್ರಿಲ್ 2022ರಲ್ಲಿ ಶಾಂಘೈನಲ್ಲಿ ಕಟ್ಟುನಿಟ್ಟಾದ ಕೋವಿಡ್ -19 ಲಾಕ್‍ಡೌನ್ ಇದ್ದಾಗ, ವ್ಯಕ್ತಿಯೊಬ್ಬರು ಎತ್ತರದ ಕಟ್ಟಡದಲ್ಲಿ ವಾಸಿಸುತ್ತಿದ್ದ ನೆರೆಹೊರೆಯವರಿಗೆ ಮೀನು ಮತ್ತು ತರಕಾರಿಗಳಂತಹ ದೈನಂದಿನ ಅಗತ್ಯ ವಸ್ತುಗಳನ್ನು ಡ್ರೋನ್‍ನಲ್ಲಿ ವಿತರಿಸಿ ಗಮನ ಸೆಳೆದಿದ್ದರು.

Continue Reading

ಪ್ರಮುಖ ಸುದ್ದಿ

‌2nd PUC Exam Result: ದ್ವಿತೀಯ ಪಿಯುಸಿ ಪರೀಕ್ಷೆ- 3 ಫಲಿತಾಂಶ ಪ್ರಕಟ, 23.73% ವಿದ್ಯಾರ್ಥಿಗಳು ಪಾಸ್

‌2nd PUC Exam Result: ಜೂನ್/ಜುಲೈ 2024ರ ದ್ವಿತೀಯ ಪಿಯುಸಿ ಪರೀಕ್ಷೆ- 3 ಅನ್ನು ದಿನಾಂಕ ಜೂನ್‌ 24ರಿಂದ ಜುಲೈ 5ರವರೆಗೆ ಒಟ್ಟು 248 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಒಟ್ಟು 12 ಮೌಲ್ಯಮಾಪನ ಶಿಬಿರಗಳಲ್ಲಿ ದಿನಾಂಕ ಜುಲೈ 9ರಿಂದ 14ರವರೆಗೆ 2293 ಮೌಲ್ಯಮಾಪಕರಿಂದ ನಡೆಸಲಾಯಿತು.

VISTARANEWS.COM


on

2nd Puc Result
Koo

ಬೆಂಗಳೂರು: 2024ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ- 3 ಫಲಿತಾಂಶಗಳನ್ನು (2nd PUC Exam Result) ಪ್ರಕಟಿಸಲಾಗಿದೆ. 23.73% ವಿದ್ಯಾರ್ಥಿಗಳು (PUC Students) ಉತ್ತೀರ್ಣರಾಗಿದ್ದಾರೆ. ಶಾಲಾ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಳಿ ಫಲಿತಾಂಶದ (PUC Result) ಅಂಕಿ ಅಂಶ ಬಿಡುಗಡೆ ಮಾಡಿದ್ದು, ಪರೀಕ್ಷೆಗೆ ಹಾಜರಾದ 75,466 ವಿದ್ಯಾರ್ಥಿಗಳಲ್ಲಿ 17,911 ಮಂದಿ ಪಾಸ್ (Pass) ಆಗಿದ್ದಾರೆ.

ಜೂನ್/ಜುಲೈ 2024ರ ದ್ವಿತೀಯ ಪಿಯುಸಿ ಪರೀಕ್ಷೆ- 3 ಅನ್ನು ದಿನಾಂಕ ಜೂನ್‌ 24ರಿಂದ ಜುಲೈ 5ರವರೆಗೆ ಒಟ್ಟು 248 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಒಟ್ಟು 12 ಮೌಲ್ಯಮಾಪನ ಶಿಬಿರಗಳಲ್ಲಿ ದಿನಾಂಕ ಜುಲೈ 9ರಿಂದ 14ರವರೆಗೆ 2293 ಮೌಲ್ಯಮಾಪಕರಿಂದ ನಡೆಸಲಾಯಿತು.

ಫಲಿತಾಂಶವನ್ನು ಇಂದು ಮಧ್ಯಾಹ್ನ 3:00 ಗಂಟೆಗೆ ಕಾಲೇಜುಗಳಲ್ಲಿ ಪ್ರಕಟಿಸಲಾಗುತ್ತಿದೆ. ಪರೀಕ್ಷೆ-3ರ ಫಲಿತಾಂಶವನ್ನು https://karresults.nic.in ವೆಬ್‌ಸೈಟ್‌ನಲ್ಲಿಯೂ ಪ್ರಚುರಪಡಿಸಲಾಗಿದೆ. ಫಲಿತಾಂಶವನ್ನು ಉತ್ತಮ ಪಡಿಸಿಕೊಳ್ಳಲು ಪರೀಕ್ಷೆ ಬರೆದ ವಿದ್ಯಾರ್ಥಿಗಳು ಪರೀಕ್ಷೆ 1, ಪರೀಕ್ಷೆ 2 ಮತ್ತು ಪರೀಕ್ಷೆ- 3ರಲ್ಲಿ ವಿಷಯವಾರು ಗಳಿಸಿದ ಅತಿಹೆಚ್ಚು ಅಂಕಗಳನ್ನು ಪರಿಗಣಿಸಿ ಅಂತಿಮ ಫಲಿತಾಂಶವನ್ನು https://kseab.karnataka.gov.in ಅಂತರ್ಜಾಲದಲ್ಲಿ ನಂತರ ಪ್ರಕಟಿಸಲಾಗುವುದು ಎಂದು ಮಂಡಳಿ ತಿಳಿಸಿದೆ.

ಪರೀಕ್ಷೆಗೆ ನೋಂದಾಯಿಸಿದವರ ಸಂಖ್ಯೆ 76,005, ಹಾಜರಾದವರು 75,466, ಉತ್ತೀರ್ಣರಾದವರು 17,911 ಹಾಗೂ ಶೇಕಡವಾರು ಫಲಿತಾಂಶ 23.73. ಉತ್ತೀರ್ಣರಾದವರಲ್ಲಿ ಬಾಲಕಿಯರ ಪ್ರಮಾಣ 26.65% ಹಾಗೂ ಬಾಲಕರು 21.65%. ಕಲಾ ವಿಭಾಗದಲ್ಲಿ 21.71%, ವಾಣಿಜ್ಯದಲ್ಲಿ 23.58% ಹಾಗೂ ವಿಜ್ಞಾನದಲ್ಲಿ 27.06% ವಿದ್ಯಾರ್ಥಿಗಳು ಪಾಸ್‌ ಆಗಿದ್ದಾರೆ.

ಉತ್ತರ ಪತ್ರಿಕೆಯ ಸ್ಕ್ಯಾನಿಂಗ್‌ ಪ್ರತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 17ರಿಂದ 21
ಸ್ಕ್ಯಾನಿಂಗ್‌ ಪ್ರತಿಯನ್ನು ಅಂತರ್ಜಾಲದಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳುವ ದಿನಾಂಕ: ಜುಲೈ 18ರಿಂದ 22
ಮರುಮೌಲ್ಯಮಾಪನ ಹಾಗೂ ಮರುಎಣಿಕೆಗೆ ಅರ್ಜಿ ಸಲ್ಲಿಸಲು ಜುಲೈ 18ರಿಂದ 24. ಸ್ಕ್ಯಾನಿಂಗ್‌ ಪ್ರತಿ ತೆಗೆದುಕೊಂಡವರಿಗೆ ಮಾತ್ರ ಅವಕಾಶ.
ಸ್ಕ್ಯಾನಿಂಗ್‌ ಪ್ರತಿ ಪಡೆಯಲು ಪ್ರತಿ ಪೇಪರ್‌ಗೆ ಶುಲ್ಕ- 530 ರೂ.
ಮರುಮೌಲ್ಯಮಾಪನ ಶುಲ್ಕ ಪ್ರತಿ ವಿಷಯಕ್ಕೆ- 1670 ರೂ.

ಈ ಬಾರಿ ಆಯ್ಕೆಯಾದ 105 ಸಂಸದರು ಪಿಯುಸಿ ದಾಟಿಲ್ಲ!

ಹೊಸದಿಲ್ಲಿ: ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಗೆದ್ದು ಸಂಸತ್ತು ಪ್ರವೇಶಿಸಿರುವ ಶೇ. 19ರಷ್ಟು ನೂತನ ಸಂಸದರ (MPs) ಶೈಕ್ಷಣಿಕ ಅರ್ಹತೆ (education qualification) 12 ನೇ ತರಗತಿಗಿಂತ ಕೆಳಗಿದೆ. ಶೇ. 77ರಷ್ಟು ಅಭ್ಯರ್ಥಿಗಳು ಪದವಿ ಮತ್ತು ಅದಕ್ಕಿಂತ ಹೆಚ್ಚಿನ ಶಿಕ್ಷಣ ಅರ್ಹತೆಯನ್ನು ಪಡೆದಿದ್ದಾರೆ ಎಂದು ಅಸೋಸಿಯೇಷನ್ ​​ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿ ಹೇಳಿದೆ.

ವಿಜೇತ ಅಭ್ಯರ್ಥಿಗಳಲ್ಲಿ ಸುಮಾರು 105 ಮಂದಿ ತಮ್ಮ ಶೈಕ್ಷಣಿಕ ಅರ್ಹತೆಯನ್ನು 5ನೇ ತರಗತಿ ಮತ್ತು 12 ನೇ ತರಗತಿಯ ನಡುವೆ ಎಂದು ಘೋಷಿಸಿದ್ದಾರೆ. 420 ಅಭ್ಯರ್ಥಿಗಳು ಪದವಿ ಅಥವಾ ಅದಕ್ಕಿಂತ ಹೆಚ್ಚಿನ ಪದವಿಯನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. 17 ವಿಜೇತ ಅಭ್ಯರ್ಥಿಗಳು ಡಿಪ್ಲೊಮಾ ಮಾಡಿದ್ದು, ಒಬ್ಬ ವಿಜೇತರು “ಕೇವಲ ಸಾಕ್ಷರರು” ಎಂದು ಹೇಳಿಕೊಂಡಿದ್ದಾರೆ. ಚುನಾವಣಾ ಕಣದಲ್ಲಿ ಇಳಿಯುವಾಗ ತಾವು ಅನಕ್ಷರಸ್ಥರೆಂದು ಘೋಷಿಸಿಕೊಂಡ ಎಲ್ಲಾ 121 ಅಭ್ಯರ್ಥಿಗಳು ಸೋಲು ಅನುಭವಿಸಿದ್ದಾರೆ.

ಯಾರು ಎಷ್ಟು?

5ನೇ ತರಗತಿಯವರೆಗೆ ಓದಿರುವ ಇಬ್ಬರು ವಿಜೇತ ಅಭ್ಯರ್ಥಿಗಳಿದ್ದರೆ, ನಾಲ್ವರು 8 ನೇ ತರಗತಿಯವರೆಗೆ ಓದಿದ್ದೇವೆ ಎಂದು ಹೇಳಿದ್ದಾರೆ. 34 ಅಭ್ಯರ್ಥಿಗಳು ತಾವು 10 ನೇ ತರಗತಿಯವರೆಗೆ ಮತ್ತು 65 ಅಭ್ಯರ್ಥಿಗಳು 12ನೇ ತರಗತಿಯವರೆಗೆ ಓದಿರುವುದಾಗಿ ಘೋಷಿಸಿದ್ದಾರೆ.

ಕೃಷಿಕರು

ಪಿ ಆರ್ ಎಸ್ ಶಾಸಕಾಂಗ ಸಂಶೋಧನೆ ವಿಶ್ಲೇಷಣೆಯ ಪ್ರಕಾರ 543 ಸಂಸದರಲ್ಲಿ ಛತ್ತೀಸ್‌ಗಢದ ಶೇ. 91 ಸಂಸದರು, ಮಧ್ಯಪ್ರದೇಶದಿಂದ ಶೇ. 72 ಮತ್ತು ಗುಜರಾತ್‌ನ ಶೇ. 65 ಸಂಸದರು ಕೃಷಿಯನ್ನು ತಮ್ಮ ವೃತ್ತಿ ಎಂದು ಘೋಷಿಸಿದ್ದಾರೆ.
18ನೇ ಲೋಕಸಭೆಗೆ ಚುನಾಯಿತರಾದ ಸಂಸದರಲ್ಲಿ ಸುಮಾರು ಶೇ. 7 ರಷ್ಟು ಮಂದಿ ವಕೀಲರು ಮತ್ತು ಶೇ. 4ರಷ್ಟು ಮಂದಿ ವೈದ್ಯಕೀಯ ವೃತ್ತಿಯವರು ಇದ್ದಾರೆ.

ಇದನ್ನೂ ಓದಿ: UGCET 2024: ಅರ್ಹತಾ ಅಂಕ ಶೇ 45ಕ್ಕೆ ಇಳಿಕೆ ; ಆರ್ಕಿಟೆಕ್ಚರ್ ಕೋರ್ಸ್‌ಗೆ ಅರ್ಜಿ ಸಲ್ಲಿಸಲು ಜು. 13ರವರೆಗೆ ಅವಕಾಶ

Continue Reading

Latest

Stuck in Lift: ಫ್ಯಾನಿಲ್ಲ, ಲೈಟಿಲ್ಲ, ಆಹಾರವಿಲ್ಲ; 2 ದಿನ ಲಿಫ್ಟ್‌ನಲ್ಲಿ ಸಿಲುಕಿದ್ದವನ ಸ್ಥಿತಿ ಹೇಗಿರಬಹುದು ಊಹಿಸಿ!

Stuck in Lift: ಸ್ಥಳೀಯ ಸಿಪಿಐ ನಾಯಕ ಮತ್ತು ಸ್ಥಳೀಯ ಶಾಸಕರ ಹಾಸ್ಟೆಲ್‌ನ ಸಿಬ್ಬಂದಿ ರವೀಂದ್ರನ್ ಅವರು ಬೆನ್ನುನೋವಿನ ಚಿಕಿತ್ಸೆಗಾಗಿ ತಿರುವನಂತಪುರಂನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಹೋಗಿದ್ದರು. ಎಕ್ಸ್-ರೇ ನಂತರ ಅವರು ಲಿಫ್ಟ್ ಮೂಲಕ ವೈದ್ಯರ ಬಳಿಗೆ ಹೋಗುತ್ತಿದ್ದಾಗ ಅದು ಸಡನ್ ಆಗಿ ನಿಂತಿದೆ. ಆಗ ಅವರು ತಮ್ಮ ಫೋನ್ ಬಳಸಿ ಲಿಫ್ಟ್ ಒಳಗೆ ಬರೆದ ಹಲವಾರು (ಸಹಾಯವಾಣಿ) ಸಂಖ್ಯೆಗಳಿಗೆ ಕಾಲ್ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. 42 ಗಂಟೆಗಳ ಕಾಲ ಲಿಫ್ಟ್ ಒಳಗೆ ಸಿಲುಕಿಕೊಂಡಿದ್ದರು. ಅವರ ಕರಾಳ ಅನುಭವ ಇಲ್ಲಿದೆ ಓದಿ.

VISTARANEWS.COM


on

Stuck in Lift
Koo

ವ್ಯಕ್ತಿ ಲಿಫ್ಟ್‌ನೊಳಗೆ ಸಿಲುಕಿಕೊಂಡು ಒದ್ದಾಡುವಂತಹ ದೃಶ್ಯಗಳನ್ನು ನಾವು ಹೆಚ್ಚು ಸಿನಿಮಾಗಳಲ್ಲಿ ನೋಡಿರುತ್ತೇವೆ. ಆದರೆ ಆಸ್ಪತ್ರೆಯೊಂದರಲ್ಲಿ 59 ವರ್ಷದ ವ್ಯಕ್ತಿಯೊಬ್ಬರು ಭರ್ತಿ 42 ಗಂಟೆಗಳ ಕಾಲ ಲಿಫ್ಟ್ (Stuck in Lift) ಒಳಗೆ ಸಿಲುಕಿಕೊಂಡಿದ್ದು, ಸುಮಾರು ಎರಡು ದಿನಗಳ ಕಾಲ ಅವರು ಲಿಫ್ಟ್‌ನೊಳಗೆ ಪರದಾಡಿದ ರೀತಿ ಕೇಳಿದರೆ ಯಾರಿಗಾದರೂ ಗಾಬರಿಯಾಗುವುದು ಖಂಡಿತ.

ಸ್ಥಳೀಯ ಸಿಪಿಐ ನಾಯಕ ಮತ್ತು ಸ್ಥಳೀಯ ಶಾಸಕರ ಹಾಸ್ಟೆಲ್‍ನ ಸಿಬ್ಬಂದಿ ರವೀಂದ್ರನ್ ಅವರು ಬೆನ್ನುನೋವಿನ ಚಿಕಿತ್ಸೆಗಾಗಿ ತಿರುವನಂತಪುರಂನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿದರು. ಎಕ್ಸ್-ರೇ ನಂತರ, ಅವರು ಲಿಫ್ಟ್‌ ಮೂಲಕ ವೈದ್ಯರ ಬಳಿಗೆ ಹೋಗುತ್ತಿದ್ದಾಗ ಅದು ಸಡನ್ ಆಗಿ ನಿಂತಿದೆ. ಆಗ ಅವರು ತಮ್ಮ ಫೋನ್ ಬಳಸಿ ಲಿಫ್ಟ್ ಒಳಗೆ ಬರೆದ ಹಲವಾರು (ಸಹಾಯವಾಣಿ) ಸಂಖ್ಯೆಗಳಿಗೆ ಕಾಲ್ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಂತರ ಅವರ ಫೋನ್ ಕೆಳಗೆ ಬಿದ್ದು ಹಾಳಾಗಿದೆ. ನಂತರ ಅವರು ಲಿಫ್ಟ್‌ನ ಒಂದು ಮೂಲೆಯಲ್ಲಿ ಕುಳಿತು ಯಾರಾದರೂ ಬರುತ್ತಾರೆ ಎಂದು ಕಾಯತೊಡಗಿದ್ದಾರೆ.

ಅನಿವಾರ್ಯವಾದಾಗ ಲಿಫ್ಟ್‌ನ ಒಂದು ಮೂಲೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾರೆ. ಅವರಿಗೆ ಬಾಯಾರಿಕೆ, ಹಸಿವು ಆದ ಕಾರಣ ನಿದ್ರೆ ಕೂಡ ಬರಲಿಲ್ಲ. ಅವರು ನಿಯಮಿತವಾಗಿ ಆಲರಂ ಬೆಲ್ ಅನ್ನು ಒತ್ತುತ್ತಲೇ ಇದ್ದರಂತೆ. ಲಿಫ್ಟ್ ಚೇಂಬರ್‌ನಲ್ಲಿ ಫ್ಯಾನ್ ಮತ್ತು ಬೆಳಕು ಎರಡೂ ಇರಲಿಲ್ಲ. ಸ್ವಲ್ಪ ಗಾಳಿ ಒಳಗೆ ಬರುತ್ತಿದ್ದರಿಂದ ಅವರ ಜೀವ ಉಳಿದಿದೆ. ಕೊನೆಗೆ ಅವರು ತಮ್ಮ ನೈತಿಕ ಸ್ಥೈರ್ಯವನ್ನು ಉಳಿಸಿಕೊಳ್ಳಲು, ತಮ್ಮ ಹೆಂಡತಿ ಬರೆದು ಪ್ರಕಟಿಸಿದ ಕವಿತೆಗಳನ್ನು ಮೆಲುಕು ಹಾಕಿದರಂತೆ. ಎರಡು ದಿನ ಲಿಫ್ಟ್‌ನಲ್ಲಿ ಸಿಕ್ಕಿ ಬಿದ್ದು ಹೊರ ಬಂದಿರುವ ರವೀಂದ್ರನ್ ಆ ಸಂಕಷ್ಟದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.

ಇತ್ತ ಅವರ ಪತ್ನಿ ಮತ್ತು ಮಕ್ಕಳು ಅವರು ಮನೆಗೆ ಬರದಿದ್ದರೂ ತಲೆಕೆಡಿಸಿಕೊಂಡಿರಲಿಲ್ಲ. ಯಾಕೆಂದರೆ ಅವರು ಆಗಾಗ ಕೆಲಸದ ನಿಮಿತ್ತ ಮನೆಗೇ ಬರುತ್ತಿರಲಿಲ್ಲವಂತೆ. ಆದರೆ ಭಾನುವಾರ ಅವರು ಮನೆಗೆ ಹಿಂತಿರುಗದಿದ್ದಾಗ ಮತ್ತು ಅವರ ಪೋನ್‌ಗೆ ಕರೆ ಮಾಡಿದರೂ ಅದು ಸಿಗದಿದ್ದಾಗ ಅವರಿಗೆ ಚಿಂತೆ ಶುರುವಾಗಿದೆ. ಹಾಗಾಗಿ ಶಾಸಕರ ಹಾಸ್ಟೆಲ್ ಮತ್ತು ಸಿಪಿಐ ಕಚೇರಿಗೆ ಕರೆ ಮಾಡಿದಾಗ ರವೀಂದ್ರನ್ ಶನಿವಾರ ಮಧ್ಯಾಹ್ನದಿಂದ ಕಾಣೆಯಾಗಿರುವುದು ತಿಳಿದುಬಂದಿದೆ.

ಇದನ್ನೂ ಓದಿ:  ಕಾಮುಕರ ಹಾವಳಿ ಮಿತಿ‌ ಮೀರಿದೆ; ಬೀದಿ ನಾಯಿಯನ್ನೂ ಇವರು ಬಿಡುತ್ತಿಲ್ಲ! ಆಘಾತಕಾರಿ ವಿಡಿಯೊ

Stuck in Lift

ಭಾನುವಾರ ಮಧ್ಯಾಹ್ನದ ವೇಳೆಗೆ, ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ದೂರು ದಾಖಲಿಸಿದ್ದರು ಮತ್ತು ಹಾಗಾಗಿ ಅವರನ್ನು ಪೊಲೀಸರು ಹುಡುಕಾಡಿದ್ದಾರೆ. ಕೊನೆಯಲ್ಲಿ ಸೋಮವಾರ ಬೆಳಗ್ಗೆ ಲಿಫ್ಟ್ ಆಪರೇಟರ್ ನಿಧಾನವಾಗಿ ಕರ್ತವ್ಯಕ್ಕೆ ಹಾಜರಾದಾಗ ರವೀಂದ್ರನ್ ಲಿಫ್ಟ್‌ನಲ್ಲಿ ಸಿಕ್ಕಿ ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ. ತಕ್ಷಣ ಅವರನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ತನಿಖೆಗೆ ಆದೇಶಿಸಿದ್ದು, ಲಿಫ್ಟ್ ಆಪರೇಟರ್‌ಗಳು ಸೇರಿದಂತೆ ಮೂವರನ್ನು ಅಮಾನತುಗೊಳಿಸಲಾಗಿದೆ.

Continue Reading
Advertisement
CM Siddaramaiah
ಕರ್ನಾಟಕ24 seconds ago

CM Siddaramaiah: ಆಸ್ತಿ ಬಗ್ಗೆ ತಪ್ಪು ಮಾಹಿತಿ; ಸಿಎಂ ವಿರುದ್ಧ ಚುನಾವಣಾ ಆಯೋಗಕ್ಕೆ ಮತ್ತೆರಡು ದೂರು

Viral News
Latest19 mins ago

Viral News: ಬಾಸ್‌ ಜತೆ ಚಕ್ಕಂದವಾಡುತ್ತಿದ್ದ ಕಿಲಾಡಿ ಪತ್ನಿ; ಡ್ರೋನ್‌ ಬಳಸಿ ಪತ್ತೆ ಹಚ್ಚಿದ ಚಾಲಾಕಿ ಗಂಡ!

Rishabh Pant
ಕ್ರಿಕೆಟ್22 mins ago

Rishabh Pant: ಸಹ ಆಟಗಾರ ಖಲೀಲ್​ ಅಹ್ಮದ್​ರನ್ನು ಸ್ವಿಮ್ಮಿಂಗ್ ಪೂಲ್‌​ಗೆ ತಳ್ಳಿ ಹಾಕಿದ ಪಂತ್​; ವಿಡಿಯೊ ವೈರಲ್​

Karnataka Rain
ಮಳೆ22 mins ago

Karnataka Rain : ಭಾರಿ ಮಳೆ ಎಫೆಕ್ಟ್‌-ಮಲಗಿದ್ದ‌ ವ್ಯಕ್ತಿ ಮೇಲೆ ಬಿದ್ದ ಗೋಡೆ; ಮರ ಬಿದ್ದು ಕಾರು ಜಖಂ, ಚಾಲಕ ಜಸ್ಟ್‌ ಮಿಸ್‌

2nd Puc Result
ಪ್ರಮುಖ ಸುದ್ದಿ28 mins ago

‌2nd PUC Exam Result: ದ್ವಿತೀಯ ಪಿಯುಸಿ ಪರೀಕ್ಷೆ- 3 ಫಲಿತಾಂಶ ಪ್ರಕಟ, 23.73% ವಿದ್ಯಾರ್ಥಿಗಳು ಪಾಸ್

Stuck in Lift
Latest34 mins ago

Stuck in Lift: ಫ್ಯಾನಿಲ್ಲ, ಲೈಟಿಲ್ಲ, ಆಹಾರವಿಲ್ಲ; 2 ದಿನ ಲಿಫ್ಟ್‌ನಲ್ಲಿ ಸಿಲುಕಿದ್ದವನ ಸ್ಥಿತಿ ಹೇಗಿರಬಹುದು ಊಹಿಸಿ!

7th Pay Commission
ಕರ್ನಾಟಕ49 mins ago

7th Pay Commission: ಸರ್ಕಾರಿ ನೌಕರರ ವೇತನ, ಪಿಂಚಣಿ 58% ಹೆಚ್ಚಳ; ಸಂಪೂರ್ಣ ಲೆಕ್ಕ ಕೊಟ್ಟ ಸಿದ್ದರಾಮಯ್ಯ

Viral Video
Latest53 mins ago

Viral Video: ಸ್ಟ್ರೆಚರ್‌ ಇಲ್ಲದ ಸರ್ಕಾರಿ ಆಸ್ಪತ್ರೆ; ಪತಿಯನ್ನು ಬೆನ್ನ ಮೇಲೆ ಹೊತ್ತು ನಡೆದ ಪತ್ನಿ! ಮನಮಿಡಿಯುವ ವಿಡಿಯೊ

7th Pay Commission
ಕರ್ನಾಟಕ1 hour ago

7th Pay Commission: ಆ.1ರಿಂದ ನೌಕರರ ವೇತನ ಹೆಚ್ಚಳ; ಸರ್ಕಾರಕ್ಕೆ ವಾರ್ಷಿಕ 20,208 ಕೋಟಿ ಹೆಚ್ಚುವರಿ ಹೊರೆ ಎಂದ ಸಿಎಂ

Sexual Abuse
Latest1 hour ago

Sexual Abuse: ಹೆಣ್ಣು ಮಕ್ಕಳಿಗೆ ಈಗ ಶಾಲೆ ಕೂಡ ಸುರಕ್ಷಿತವಲ್ಲ! ಶಾಲಾ ಶೌಚಾಲಯದಲ್ಲಿ ಬಾಲಕಿ ಮೇಲೆ ಬಾಲಕನಿಂದ ಅತ್ಯಾಚಾರ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ2 hours ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ4 hours ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ22 hours ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 day ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ1 day ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌