Economic Survey 2023-24: ಇಂದು ಆರ್ಥಿಕ ಸಮೀಕ್ಷೆ ಮಂಡನೆ; ಏನಿದರ ಪ್ರಾಮುಖ್ಯತೆ? ಏನೆಲ್ಲ ಇರಲಿದೆ? - Vistara News

ವಾಣಿಜ್ಯ

Economic Survey 2023-24: ಇಂದು ಆರ್ಥಿಕ ಸಮೀಕ್ಷೆ ಮಂಡನೆ; ಏನಿದರ ಪ್ರಾಮುಖ್ಯತೆ? ಏನೆಲ್ಲ ಇರಲಿದೆ?

Economic Survey 2023-24: ಮೂರನೇ ಎನ್‌ಡಿಎ ಸರ್ಕಾರದ ಮೊದಲ ಬಜೆಟ್‌ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ನಾಳೆ (ಜುಲೈ 23) ಮಂಡಿಸಲಿದ್ದಾರೆ. ಬಜೆಟ್‌ ಮಂಡನೆಗೆ ಪೂರ್ವಭಾವಿಯಾಗಿ ಇಂದು (ಜುಲೈ 22) ಆರ್ಥಿಕ ಸಮೀಕ್ಷೆ ಪ್ರಕಟಿಸಲಾಗುತ್ತದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023-24ರ ಆರ್ಥಿಕ ಸಮೀಕ್ಷೆಯನ್ನು ಇಂದು ಮಧ್ಯಾಹ್ನ 1 ಗಂಟೆಗೆ ಲೋಕಸಭೆಯಲ್ಲಿ ಮಂಡಿಸಲಿದ್ದಾರೆ.

VISTARANEWS.COM


on

Economic Survey 2023-24
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಮೂರನೇ ಎನ್‌ಡಿಎ ಸರ್ಕಾರದ ಮೊದಲ ಬಜೆಟ್‌ (Budget) ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ನಾಳೆ (ಜುಲೈ 23) ಮಂಡಿಸಲಿದ್ದಾರೆ. ಈಗಾಗಲೇ ಸಂಸತ್ತಿನ ಬಜೆಟ್‌ ಅಧಿವೇಶನವು (Budget Session 2024) ಆರಂಭವಾಗಲಿದೆ. ಬಜೆಟ್‌ ಮಂಡನೆಗೆ ಪೂರ್ವಭಾವಿಯಾಗಿ ಇಂದು (ಜುಲೈ 22) ಆರ್ಥಿಕ ಸಮೀಕ್ಷೆ ಪ್ರಕಟಿಸಲಾಗುತ್ತದೆ (Economic Survey 2023-24). ಏನಿದು ಆರ್ಥಿಕ ಸಮೀಕ್ಷೆ? ಎಷ್ಟು ಗಂಟೆಗೆ ಮಂಡನೆಯಾಗಲಿದೆ? ಪಿಡಿಎಫ್‌ ಪ್ರತಿ ಡೌನ್‌ಲೋಡ್‌ ಮಾಡುವುದು ಹೇಗೆ? ಮುಂತಾದ ವಿವರ ಇಲ್ಲಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023-24ರ ಆರ್ಥಿಕ ಸಮೀಕ್ಷೆಯನ್ನು ಇಂದು ಮಧ್ಯಾಹ್ನ 1 ಗಂಟೆಗೆ ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಈ ಸಮೀಕ್ಷೆಯು 2023-24ರ ಹಣಕಾಸು ವರ್ಷದಲ್ಲಿನ ಆರ್ಥಿಕತೆಯ ಬಗ್ಗೆ ವಿವರ ಒದಗಿಸುತ್ತದೆ ಮತ್ತು ಪ್ರಸಕ್ತ ಹಣಕಾಸು ವರ್ಷದ ಒಳನೋಟವನ್ನು ನೀಡುತ್ತದೆ. ಇದು ದೇಶದ ಪ್ರಮುಖ ಆರ್ಥಿಕ ದಾಖಲೆಗಳಲ್ಲಿ ಒಂದಾಗಿದ್ದು, ಇದು ಕೇಂದ್ರ ಬಜೆಟ್‌ಗೆ ವೇದಿಕೆಯನ್ನು ರೂಪಿಸುತ್ತದೆ.

ಆರ್ಥಿಕ ಸಮೀಕ್ಷೆ ಎಂದರೇನು?

ಪ್ರತಿ ವರ್ಷ ಕೇಂದ್ರ ಹಣಕಾಸು ಸಚಿವರು ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಮಂಡಿಸುವ ಮೊದಲು ಆರ್ಥಿಕ ಸಮೀಕ್ಷಾ ವರದಿಯನ್ನು ಮಂಡಿಸುತ್ತಾರೆ. ಇದು ಕೂಡ ನಿರ್ಣಾಯಕ ವಾರ್ಷಿಕ ದಾಖಲೆಯಾಗಿದ್ದು, ಆಯಾ ವರ್ಷದ ಆರ್ಥಿಕ ಪ್ರಗತಿಯ ಅವಲೋಕನವಾಗಿದೆ. ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ವಿಭಾಗವು ಮುಖ್ಯ ಆರ್ಥಿಕ ಸಲಹೆಗಾರರ ಮೇಲ್ವಿಚಾರಣೆಯಲ್ಲಿ ಆರ್ಥಿಕ ಸಮೀಕ್ಷೆಯನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಹೊಂದಿದೆ. ಪ್ರಸ್ತುತ ವಿ.ಅನಂತ ನಾಗೇಶ್ವರನ್ ಭಾರತದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದಾರೆ.

ಆರ್ಥಿಕ ಸಮೀಕ್ಷೆಯು ಕಳೆದ 1 ವರ್ಷದಲ್ಲಿ ಕೃಷಿ, ಸೇವೆಗಳು, ಕೈಗಾರಿಕೆಗಳು, ಸಾರ್ವಜನಿಕ ಹಣಕಾಸು ಮತ್ತು ಮೂಲಸೌಕರ್ಯಗಳಂತಹ ವಿವಿಧ ಕ್ಷೇತ್ರಗಳಲ್ಲಿನ ಭಾರತೀಯ ಆರ್ಥಿಕತೆಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತದೆ. ಇದು ರಫ್ತು, ಆಮದು, ವಿದೇಶಿ ವಿನಿಮಯ ಮೀಸಲು ಮತ್ತು ಹಣಕಾಸಿನ ಅವಧಿಯಲ್ಲಿ ಹಣ ಪೂರೈಕೆಯ ಅವಲೋಕನವನ್ನೂ ನೀಡುತ್ತದೆ. ಜತೆಗೆ ಜಿಡಿಪಿ ಬೆಳವಣಿಗೆ, ಹಣದುಬ್ಬರ, ಉದ್ಯೋಗ, ವಿತ್ತೀಯ ಕೊರತೆ ಮತ್ತಿತರ ವಿವರಗಳನ್ನು ಒಳಗೊಂಡಿರುತ್ತದೆ.

ಆರ್ಥಿಕ ಸವಾಲುಗಳನ್ನು ಎದುರಿಸಲು ಮತ್ತು ಬೆಳವಣಿಗೆಯನ್ನು ಉತ್ತೇಜಿಸಲು ಅಗತ್ಯವಾದ ಕ್ರಮಗಳನ್ನು ಸೂಚಿಸುತ್ತದೆ. ಈ ಶಿಫಾರಸುಗಳನ್ನು ಕೇಂದ್ರದ ಬಜೆಟ್ ತಯಾರಿಯಲ್ಲಿ ಪರಿಗಣಿಸಲಾಗುತ್ತದೆ. ಮಾತ್ರವಲ್ಲ ಸರ್ಕಾರದ ಕಾರ್ಯಕ್ರಮಗಳು ಮತ್ತು ಉಪಕ್ರಮಗಳ ಪರಿಣಾಮವನ್ನು ಮೌಲ್ಯಮಾಪನ ಮಾಡಲಾಗುತ್ತದೆ.

ಯಾವಾಗ ಮಂಡನೆ?

2023-24ರ ಆರ್ಥಿಕ ಸಮೀಕ್ಷೆಯನ್ನು ಲೋಕಸಭೆಯಲ್ಲಿ ಮಧ್ಯಾಹ್ನ 1 ಗಂಟೆಗೆ ಮತ್ತು ರಾಜ್ಯಸಭೆಯಲ್ಲಿ ಅಪರಾಹ್ನ 2 ಗಂಟೆಗೆ ಮಂಡಿಸಲಾಗುತ್ತದೆ. 2:30ಕ್ಕೆ ನವದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಈ ಬಗ್ಗೆ ವಿ.ಅನಂತ ನಾಗೇಶ್ವರನ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಪಿಡಿಎಫ್‌ ಡೌನ್‌ಲೋಡ್‌ ಮಾಡುವ ವಿಧಾನ

ಆರ್ಥಿಕ ಸಮೀಕ್ಷಾ ವರದಿಯ ಪಿಡಿಎಫ್‌ ಪ್ರತಿಯನ್ನು ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ (https://www.indiabudget.gov.in/economicsurvey/). ಅಪರಾಹ್ನ 2:15-2:30 ಮಧ್ಯೆ ಪಿಡಿಎಫ್‌ ಪ್ರತಿ ಸಿಗಲಿದೆ.

ಏನಿರಲಿದೆ?

ಜಿಡಿಪಿ ಬೆಳವಣಿಗೆ: ಆರ್ಥಿಕ ಸಮೀಕ್ಷೆಯು ಭಾರತದ ಜಿಡಿಪಿ ಬೆಳವಣಿಗೆಯ ದರವನ್ನು ವಿವರಿಸುತ್ತದೆ. ಇದು ಪ್ರಸಕ್ತ ಹಣಕಾಸು ವರ್ಷಗಳಲ್ಲಿ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಗಳನ್ನು ಹೊಂದಿರುತ್ತದೆ. ಜತೆಗೆ ಉತ್ತಮವಾಗಿ ಬೆಳೆಯುತ್ತಿರುವ ಕ್ಷೇತ್ರಗಳು ಮತ್ತು ಹಿಂದುಳಿದಿರುವ ಕ್ಷೇತ್ರಗಳ ವಿಶ್ಲೇಷಣೆಯನ್ನು ತಿಳಿಸಲಿದೆ. ಆರ್ಥಿಕ ಸಮೀಕ್ಷೆಯು ಶೇಕಡಾ 6.5-7ರಷ್ಟು ಬೆಳವಣಿಗೆಯನ್ನು ಅಂದಾಜಿಸುವ ನಿರೀಕ್ಷೆಯಿದೆ. 2024ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ. 8.2ರಷ್ಟಿದೆ.

ವಿತ್ತೀಯ ಕೊರತೆ: 2024-25ರ ಮಧ್ಯಂತರ ಬಜೆಟ್‌ನಲ್ಲಿ ಭಾರತದ ವಿತ್ತೀಯ ಕೊರತೆಯನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡಾ 5.1ಕ್ಕೆ ನಿಗದಿಪಡಿಸಲಾಗಿದೆ. ಆರ್‌ಬಿಐಯ 2.1 ಲಕ್ಷ ಕೋಟಿ ರೂ. ಹೆಚ್ಚುವರಿ ವರ್ಗಾವಣೆ ಮತ್ತು ಬಲವಾದ ತೆರಿಗೆ ಸಂಗ್ರಹದ ನಡುವೆ ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ. 5ಕ್ಕೆ ಇಳಿಯುವ ನಿರೀಕ್ಷೆಯಿದೆ.

ಹಣದುಬ್ಬರ: ಸಗಟು ಮತ್ತು ಸಿಪಿಐ ಹಣದುಬ್ಬರ ಎರಡರ ಮೌಲ್ಯಮಾಪನವನ್ನು ಹೊಂದಿರುವ ಸಮೀಕ್ಷೆಯಲ್ಲಿ ಬೆಲೆ ಏರಿಕೆ ಪ್ರವೃತ್ತಿಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ.

ಇದನ್ನೂ ಓದಿ: Union Budget 2024: ಬಜೆಟ್‌ಗೂ ಮೊದಲು, ನಂತರ ಹೂಡಿಕೆ ಮಾಡುವುದು ಲಾಭವೇ? ತಜ್ಞರು ಹೇಳೋದಿಷ್ಟು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Union Budget 2024: ನಾಳೆ ಕೇಂದ್ರ ಬಜೆಟ್;‌ ಎಷ್ಟು ಗಂಟೆಗೆ ಮಂಡನೆ? ಲೈವ್‌ ವೀಕ್ಷಣೆ ಎಲ್ಲಿ? ಇಲ್ಲಿದೆ ಮಾಹಿತಿ

Union Budget 2024: ಉದ್ಯೋಗಿಗಳು, ಬಡವರು, ಉದ್ಯಮಿಗಳಿಂದ ಹಿಡಿದು ಪ್ರತಿಯೊಬ್ಬರ ಗಮನವೂ ಕೇಂದ್ರ ಸರ್ಕಾರದ ಬಜೆಟ್‌ ಮೇಲಿದೆ. ಮಂಗಳವಾರ ಬೆಳಗ್ಗೆ 11 ಗಂಟೆಗೇ ನಿರ್ಮಲಾ ಸೀತಾರಾಮನ್‌ ಅವರು ಏಳನೇ ಬಾರಿಗೆ ಬಜೆಟ್‌ ಮಂಡಿಸಲಿದ್ದಾರೆ. ಇನ್ನು, ಬಜೆಟ್‌ನ ಪ್ರತಿಕ್ಷಣದ ಅಪ್‌ಡೇಟ್‌ಅನ್ನು ಲೈವ್‌ ವೀಕ್ಷಿಸಬಹುದಾಗಿದೆ.

VISTARANEWS.COM


on

Union Budget 2024
Koo

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸತತ ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್‌ಅನ್ನು (Union Budget 2024) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಮಂಗಳವಾರ (ಜುಲೈ 22) ಮಂಡಿಸಲಿದ್ದಾರೆ. ಉದ್ಯೋಗಿಗಳು, ಬಡವರು, ಉದ್ಯಮಿಗಳಿಂದ ಹಿಡಿದು ಪ್ರತಿಯೊಬ್ಬರ ಗಮನವೂ ಕೇಂದ್ರ ಸರ್ಕಾರದ ಬಜೆಟ್‌ ಮೇಲಿದೆ. ಮಂಗಳವಾರ ಬೆಳಗ್ಗೆ 11 ಗಂಟೆಗೇ ನಿರ್ಮಲಾ ಸೀತಾರಾಮನ್‌ ಅವರು ಏಳನೇ ಬಾರಿಗೆ ಬಜೆಟ್‌ ಮಂಡಿಸಲಿದ್ದಾರೆ. ಇನ್ನು, ಬಜೆಟ್‌ನ ಪ್ರತಿಕ್ಷಣದ ಮಾಹಿತಿಯನ್ನು ಲೈವ್‌ ವೀಕ್ಷಣೆ ಮೂಲಕ ಪಡೆಯಬಹುದಾಗಿದೆ.

ಲೈವ್‌ ಇಲ್ಲಿ ವೀಕ್ಷಿಸಿ

ಸಂಸತ್‌ ಟಿವಿ ಜತೆಗೆ ವಿಸ್ತಾರ ನ್ಯೂಸ್‌ ಚಾನೆಲ್‌ನಲ್ಲೂ ಬೆಳಗ್ಗೆಯಿಂದಲೇ ಲೈವ್‌ ಮಾಹಿತಿ, ಕ್ಷಣ ಕ್ಷಣದ ಅಪ್‌ಡೇಟ್‌, ಬಜೆಟ್‌ ಕುರಿತ ವಿಶ್ಲೇಷಣೆ ಇರಲಿದೆ. ವಿಸ್ತಾರ ನ್ಯೂಸ್ ವೆಬ್‌ಸೈಟ್‌ನಲ್ಲೂ ಪ್ರತಿಪಕ್ಷಣದ ಮಾಹಿತಿ ಲಭ್ಯವಾಗಲಿದೆ. ಮತ್ತೊಂದೆಡೆ, ಬಜೆಟ್‌ನಲ್ಲಿ ಏನೆಲ್ಲ ಘೋಷಣೆ ಮಾಡಲಾಗುತ್ತದೆ ಎಂಬ ನಿರೀಕ್ಷೆಗಳು ಹೆಚ್ಚಾಗಿವೆ. ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಹೊಸ ತೆರಿಗೆ (Income Tax) ಸ್ಲ್ಯಾಬ್‌ಅನ್ನು ಪರಿಚಯಿಸಲಾಗುತ್ತದೆ ಎಂದು ತಿಳಿದುಬಂದಿದೆ. ಇದರ ಜತೆಗೆ ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತವನ್ನೂ ಏರಿಕೆ ಮಾಡುವ ನಿರೀಕ್ಷೆ ಇದೆ.

ಹೊಸ ದಾಖಲೆ ಬರೆಯಲಿದ್ದಾರೆ ನಿರ್ಮಲಾ

ನಿರ್ಮಲಾ ಸೀತಾರಾಮನ್‌ ಅವರು ಇಂದು ಪೂರ್ಣಪ್ರಮಾಣದ ಬಜೆಟ್‌ ಮಂಡಿಸುವ ಮೂಲಕ ಹೊಸ ದಾಖಲೆ ಬರೆಯಲಿದ್ದಾರೆ. ಇದುವರೆಗೆ ನಿರ್ಮಲಾ ಸೀತಾರಾಮನ್‌ ಅವರು ಹಣಕಾಸು ಸಚಿವೆಯಾಗಿ ಐದು ಪೂರ್ಣ ಪ್ರಮಾಣದ ಹಾಗೂ ಒಂದು ಮಧ್ಯಂತರ ಬಜೆಟ್‌ ಮಂಡಿಸಿದ್ದಾರೆ. ಈಗ ಏಳನೇ ಬಾರಿಗೆ ಬಜೆಟ್‌ ಮಂಡಿಸಿದರೆ, ದೇಶದ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಾರಿ ಬಜೆಟ್‌ ಮಂಡಿಸಿದ ಖ್ಯಾತಿಗೆ ಭಾಜನರಾಗಲಿದ್ದಾರೆ. ಮೊರಾರ್ಜಿ ದೇಸಾಯಿ ಅವರು ಆರು ಬಾರಿ ಬಜೆಟ್‌ ಮಂಡಿಸಿದ ದಾಖಲೆ ಮಾಡಿದ್ದಾರೆ. ಇದನ್ನು ನಿರ್ಮಲಾ ಸೀತಾರಾಮನ್‌ ಅವರು ಮುರಿಯಲಿದ್ದಾರೆ.

ನಿರ್ಮಲಾ ಸೀತಾರಾಮನ್‌ ಅವರು ಫೆಬ್ರವರಿ 1ರಂದು ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಕೊನೆಯ ಬಜೆಟ್‌ ಮಂಡಿಸಿದ್ದರು. ಇದು ಮಧ್ಯಂತರ ಬಜೆಟ್‌ ಆದ ಕಾರಣ ಮಹತ್ವದ ಘೋಷಣೆಗಳನ್ನು ಮಾಡಿರಲಿಲ್ಲ. ಆದರೆ, ನೂತನ ಸರ್ಕಾರ ರಚನೆಯಾಗಿದ್ದು, ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಲಾಗುತ್ತದೆ. ಉದ್ಯೋಗ ಸೃಷ್ಟಿ, ಬಡವರು ಹಾಗೂ ಮಧ್ಯಮ ವರ್ಗದವರಿಗೆ ಕೊಡುಗೆ, ತೆರಿಗೆ ಹೊರೆ ಇಳಿಸುವುದು ಸೇರಿ ಹಲವು ಅಂಶಗಳು ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್‌ನ ಪ್ರಮುಖ ಅಂಶಗಳಾಗಿವೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Economic Survey 2023-24: ಉದ್ಯೋಗ ಸೃಷ್ಟಿ, ಕೃಷಿ ಏಳಿಗೆ; ಬಜೆಟ್‌ಗೂ ಮುನ್ನ ಕೇಂದ್ರದಿಂದ ಮಹತ್ವದ ಸುಳಿವು

Continue Reading

ದೇಶ

Economic Survey 2023-24: ಉದ್ಯೋಗ ಸೃಷ್ಟಿ, ಕೃಷಿ ಏಳಿಗೆ; ಬಜೆಟ್‌ಗೂ ಮುನ್ನ ಕೇಂದ್ರದಿಂದ ಮಹತ್ವದ ಸುಳಿವು

Economic Survey 2023-24: ದೇಶದ ಜನ ಕುತೂಹಲದಿಂದ ಕಾಯುತ್ತಿದ್ದ ಆರ್ಥಿಕ ಸಮೀಕ್ಷೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಂಸತ್‌ನಲ್ಲಿ ಮಂಡಿಸಿದ್ದಾರೆ. ಭಾರತದ ಆರ್ಥಿಕತೆ ಹೇಗಿದೆ? ಬಡ-ಮಧ್ಯಮ ವರ್ಗದವರಿಗೆ ಆಶಾದಾಯಕ ಬೆಳವಣಿಗೆಗಳು ಏನಿವೆ ಎಂಬುದರ ಕುರಿತು ಕೂಡ ಕೇಂದ್ರ ಸಚಿವೆ ಮಾಹಿತಿ ನೀಡಿದ್ದಾರೆ. ಸರ್ಕಾರದ ಆದ್ಯತೆಗಳು ಏನು ಎಂಬುದರ ಕುರಿತ ವಿವರ ಇಲ್ಲಿದೆ.

VISTARANEWS.COM


on

Economic Survey 2023-24
Koo

ನವದೆಹಲಿ: ದೇಶದ ಜನ ಕುತೂಹಲದಿಂದ ಕಾಯುತ್ತಿರುವ ಕೇಂದ್ರ ಬಜೆಟ್‌ ಮಂಡನೆಗೆ (Union Budget 2024) ಮುನ್ನಾ ದಿನವಾದ ಸೋಮವಾರ (ಜುಲೈ 22) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಸಂಸತ್‌ನಲ್ಲಿ ಆರ್ಥಿಕ ಸಮೀಕ್ಷಾ (Economic Survey 2023-24) ವರದಿಯನ್ನು ಮಂಡಿಸಿದ್ದಾರೆ. ದೇಶದ ಆರ್ಥಿಕತೆ ಸುಭದ್ರವಾಗಿದೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ಇನ್ನು, ಮುಂದಿನ ದಿನಗಳಲ್ಲಿ ದೇಶದಲ್ಲಿ ಉದ್ಯೋಗ ಸೃಷ್ಟಿ, ಕೃಷಿಗೆ ಆದ್ಯತೆ ಹಾಗೂ ಕೌಶಲ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

ಉದ್ಯೋಗ ಸೃಷ್ಟಿಗೆ ಆದ್ಯತೆ

2024-25ನೇ ಸಾಲಿನಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಆರ್ಥಿಕ ಸಮೀಕ್ಷೆ ಪ್ರಕಾರ, ಉದ್ಯೋಗ ಸೃಷ್ಟಿಯ ಪ್ರಮಾಣ ಏರಿಕೆಯಾಗಿದೆ. ದೇಶದಲ್ಲಿ ಪ್ರಸ್ತುತ 56.5 ಕೋಟಿ ಉದ್ಯೋಗಿಗಳಿದ್ದು, ಕೃಷಿ ಕ್ಷೇತ್ರದಲ್ಲಿಯೇ ಶೇ.45ರಷ್ಟು ಜನ ತೊಡಗಿದ್ದಾರೆ. ಇನ್ನು ಶೇ.11.4ರಷ್ಟು ಜನ ಉತ್ಪಾದನೆ, ಶೇ.28.9 ಮಂದಿ ಸೇವೆಗಳು ಹಾಗೂ ಶೇ.13ರಷ್ಟು ಜನ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಮುಂದಿನ ದಿನಗಳಲ್ಲೂ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಕೌಶಲ ವೃದ್ಧಿಗೆ ಪ್ರಾಮುಖ್ಯತೆ

ಆರ್ಥಿಕ ಸಮೀಕ್ಷೆಯ ವರದಿಯನ್ನು ಅವಲೋಕಿಸಿ ದೇಶಾದ್ಯಂತ ಕೌಶಲ ವೃದ್ಧಿಗೆ ಇನ್ನಷ್ಟು ಪ್ರಾಮುಖ್ಯತೆ ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ದೇಶದಲ್ಲಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಪ್ರಮಾಣವು ಶೇ.65ರಷ್ಟಿದೆ. ಹಾಗಾಗಿ, ಆಧುನಿಕ ಆರ್ಥಿಕತೆಯ ಸೃಜನೆಗೆ ಯುವಕರಿಗೆ ಕೌಶಲ ಅಭಿವೃದ್ಧಿಯು ಪ್ರಮುಖವಾಗಿದೆ. ಕಳೆದ ಒಂದು ದಶಕದಲ್ಲಿ ಶೇ.34ರಿಂದ ಶೇ.51.3ಕ್ಕೆ ಕೌಶಲ ವೃದ್ಧಿ ಪ್ರಮಾಣ ಏರಿಕೆಯಾಗಿದೆ. ಇದಕ್ಕೆ ಇನ್ನಷ್ಟು ಒತ್ತು ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಕೃಷಿ ಕ್ಷೇತ್ರದ ಏಳಿಗೆಗೆ ಒತ್ತು

ದೇಶದ ಆರ್ಥಿಕತೆಗೆ ಬಹುಮುಖ್ಯ ಪಾತ್ರ ವಹಿಸುವ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ, ಕೃಷಿ ಉತ್ಪಾದನೆ ಹೆಚ್ಚಳ, ಉದ್ಯೋಗ ಸೃಷ್ಟಿ, ವಿವಿಧ ಬೆಳೆಗಳನ್ನು ಬೆಳೆಯಲು ಉತ್ತೇಜನ, ಆಧುನಿಕ ತಂತ್ರಜ್ಞಾನದ ಅಳವಡಿಕೆ, ಆಧುನಿಕ ಕೃಷಿಗಾಗಿ ಕೌಶಲ ವೃದ್ಧಿ, ಸಾವಯವ ಗೊಬ್ಬರದ ಬಳಕೆಗೆ ಪ್ರೋತ್ಸಾಹ ಸೇರಿ ಹಲವು ದಿಸೆಯಲ್ಲಿ ಸರ್ಕಾರವು ಕೃಷಿ ಅಭಿವೃದ್ಧಿಗೆ ಶ್ರಮಿಸುತ್ತದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಕೃಷಿ, ಉದ್ಯೋಗ ಸೃಷ್ಟಿಯ ಜತೆಗೆ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಶ್ರೇಣಿ ಉದ್ಯಮಗಳಿಗೆ (MSME) ಪ್ರೋತ್ಸಾಹ, ಆರ್ಥಿಕ ನೆರವು, ಪರಿಸರ ಮಾಲಿನ್ಯ, ಹವಾಮಾನ ಬದಲಾವಣೆ ನಿಯಂತ್ರಣ, ಸುಸ್ಥಿರ ಅಭಿವೃದ್ಧಿಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಗಮನ ಹರಿಸುವುದು ಸೇರಿ ಕೇಂದ್ರ ಸರ್ಕಾರವು ಹಲವು ನಿರ್ಧಾರಗಳನ್ನು ಘೋಷಣೆ ಮಾಡಿದೆ. ಇವುಗಳನ್ನು ಬಜೆಟ್‌ನಲ್ಲಿ ಹೇಗೆ ಸಾಕಾರಗೊಳಿಸುತ್ತದೆ ಎಂಬುದು ಈಗ ಕುತೂಹಲ ಕೆರಳಿಸಿದೆ.

ಆರ್ಥಿಕ ಸಮೀಕ್ಷೆಯ ಹೈಲೈಟ್ಸ್‌….

  • ಪ್ರಸಕ್ತ ಸಾಲಿನಲ್ಲಿ ಉತ್ತಮ ಮುಂಗಾರು, ನೀತಿ-ನಿರೂಪಣೆಗಳ ಬದಲಾವಣೆ ಇಲ್ಲದ ಕಾರಣ 2024-25ನೇ ಹಣಕಾಸು ವರ್ಷದಲ್ಲಿ ದೇಶದ ಹಣದುಬ್ಬರ ಪ್ರಮಾಣವು ಶೇ.4.5ರಿಂದ ಶೇ.4.1ಕ್ಕೆ ಇಳಿಕೆಯಾಗಲಿದೆ ಎಂಬುದಾಗಿ ಆರ್‌ಬಿಐ ಉಲ್ಲೇಖಿಸಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ವರದಿ ಕೂಡ ಹಣದುಬ್ಬರವು ಶೇ.4.2ಕ್ಕೆ ಇಳಿಯಲಿದೆ ಎಂಬುದಾಗಿ ತಿಳಿಸಿದೆ. ಇದರಿಂದಾಗಿ ದೇಶದ ಜನರ ಮೇಲಿನ ಹೊರೆ ಕಡಿಮೆಯಾಗಲಿದೆ.
  • ಕೊರೊನಾ ಬಿಕ್ಕಟ್ಟಿನ ನಂತರ ಭಾರತದ ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ. ಇದರಿಂದಾಗಿ ದೇಶದ ವಿತ್ತೀಯ ವ್ಯವಸ್ಥೆಯಲ್ಲಿ ಗಣನೀಯವಾಗಿ ಚೇತರಿಕೆ ಕಂಡಿದೆ. ಹಾಗಾಗಿ, 2024-25ನೇ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿಯು ಶೇ.6.5ರಿಂದ ಶೇ.7ಕ್ಕೆ ಏರಿಕೆಯಾಗುವ ಅಂದಾಜಿದೆ.
  • ಸೇವಾ ವಲಯದಲ್ಲಿ ದೇಶದಲ್ಲೇ ಅತಿ ಹೆಚ್ಚಿನ ಪ್ರಮಾಣದ ಉದ್ಯೋಗ ಸೃಷ್ಟಿಯಾಗುತ್ತಿದೆ. ನಿರ್ಮಾಣ, ಉತ್ಪಾದನೆ ಸೇರಿ ಹಲವು ಕ್ಷೇತ್ರಗಳಲ್ಲೂ ಉದ್ಯೋಗ ಸೃಷ್ಟಿಯಾಗುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
  • 2023ರ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಹೊಸ ಬಂಡವಾಳ ಹೂಡಿಕೆ ಪ್ರಮಾಣವು 47.6 ಶತಕೋಟಿ ಡಾಲರ್‌ ಇತ್ತು. ಆದರೆ, ಇದು 2024ನೇ ಹಣಕಾಸು ವರ್ಷದಲ್ಲಿ 45.8 ಶತಕೋಟಿ ಡಾಲರ್‌ಗೆ ಇಳಿಕೆಯಾಗಿದೆ. ಜಾಗತಿಕ ಬೆಳವಣಿಗೆಗಳು ಇದಕ್ಕೆ ಕಾರಣವಾಗಿವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹೂಡಿಕೆ ಪ್ರಮಾಣ ಜಾಸ್ತಿಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Economic Survey 2023-24: ದೇಶದ ಆರ್ಥಿಕತೆ, ಜಿಡಿಪಿ, ಹೂಡಿಕೆ; ಆರ್ಥಿಕ ಸಮೀಕ್ಷೆಯ ಪ್ರಮುಖಾಂಶಗಳು ಇಲ್ಲಿವೆ

Continue Reading

ದೇಶ

Economic Survey 2023-24: ದೇಶದ ಆರ್ಥಿಕತೆ, ಜಿಡಿಪಿ, ಹೂಡಿಕೆ; ಆರ್ಥಿಕ ಸಮೀಕ್ಷೆಯ ಪ್ರಮುಖಾಂಶಗಳು ಇಲ್ಲಿವೆ

Economic Survey 2023-24: ದೇಶದ ಜನ ಕುತೂಹಲದಿಂದ ಕಾಯುತ್ತಿದ್ದ ಆರ್ಥಿಕ ಸಮೀಕ್ಷೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಂಸತ್‌ನಲ್ಲಿ ಮಂಡಿಸಿದ್ದಾರೆ. ಭಾರತದ ಆರ್ಥಿಕತೆ ಹೇಗಿದೆ? ಬಡ-ಮಧ್ಯಮ ವರ್ಗದವರಿಗೆ ಆಶಾದಾಯಕ ಬೆಳವಣಿಗೆಗಳು ಏನಿವೆ ಎಂಬುದರ ಮಾಹಿತಿ ಇಲ್ಲಿದೆ.

VISTARANEWS.COM


on

Economic Survey 2023-24
Koo

ನವದೆಹಲಿ: ಕೇಂದ್ರ ಬಜೆಟ್‌ ಮಂಡನೆಗೆ (Union Budget 2024) ಮುನ್ನಾ ದಿನವಾದ ಸೋಮವಾರ (ಜುಲೈ 22) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಸಂಸತ್‌ನಲ್ಲಿ ಆರ್ಥಿಕ ಸಮೀಕ್ಷಾ (Economic Survey 2023-24) ವರದಿಯನ್ನು ಮಂಡಿಸಿದ್ದು, ಭಾರತದ ಆರ್ಥಿಕತೆಯು ಸಕಾರಾತ್ಮಕ ಏಳಿಗೆ ಹೊಂದುತ್ತಿದೆ ಎಂಬುದಾಗಿ ಅವರು ಮಾಹಿತಿ ನೀಡಿದ್ದಾರೆ. ಭಾರತದ ಆರ್ಥಿಕತೆ, ವಿದೇಶಿ ನೇರ ಬಂಡವಾಳ ಹೂಡಿಕೆ, ಹಣದುಬ್ಬರ, ಉದ್ಯೋಗ ಸೇರಿ ಹಲವು ವಿಷಯಗಳನ್ನು ಆರ್ಥಿಕ ಸಮೀಕ್ಷೆಯು ಒಳಗೊಂಡಿದೆ. ಆರ್ಥಿಕ ಸಮೀಕ್ಷೆಯ ಪ್ರಮುಖ ಅಂಶಗಳು ಇಲ್ಲಿವೆ.

ಆರ್ಥಿಕ ಸಮೀಕ್ಷೆಯ ಹೈಲೈಟ್ಸ್‌….

  • ಪ್ರಸಕ್ತ ಸಾಲಿನಲ್ಲಿ ಉತ್ತಮ ಮುಂಗಾರು, ನೀತಿ-ನಿರೂಪಣೆಗಳ ಬದಲಾವಣೆ ಇಲ್ಲದ ಕಾರಣ 2024-25ನೇ ಹಣಕಾಸು ವರ್ಷದಲ್ಲಿ ದೇಶದ ಹಣದುಬ್ಬರ ಪ್ರಮಾಣವು ಶೇ.4.5ರಿಂದ ಶೇ.4.1ಕ್ಕೆ ಇಳಿಕೆಯಾಗಲಿದೆ ಎಂಬುದಾಗಿ ಆರ್‌ಬಿಐ ಉಲ್ಲೇಖಿಸಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ವರದಿ ಕೂಡ ಹಣದುಬ್ಬರವು ಶೇ.4.2ಕ್ಕೆ ಇಳಿಯಲಿದೆ ಎಂಬುದಾಗಿ ತಿಳಿಸಿದೆ. ಇದರಿಂದಾಗಿ ದೇಶದ ಜನರ ಮೇಲಿನ ಹೊರೆ ಕಡಿಮೆಯಾಗಲಿದೆ.
  • ಕೊರೊನಾ ಬಿಕ್ಕಟ್ಟಿನ ನಂತರ ಭಾರತದ ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ. ಇದರಿಂದಾಗಿ ದೇಶದ ವಿತ್ತೀಯ ವ್ಯವಸ್ಥೆಯಲ್ಲಿ ಗಣನೀಯವಾಗಿ ಚೇತರಿಕೆ ಕಂಡಿದೆ. ಹಾಗಾಗಿ, 2024-25ನೇ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿಯು ಶೇ.6.5ರಿಂದ ಶೇ.7ಕ್ಕೆ ಏರಿಕೆಯಾಗುವ ಅಂದಾಜಿದೆ.
  • ಸೇವಾ ವಲಯದಲ್ಲಿ ದೇಶದಲ್ಲೇ ಅತಿ ಹೆಚ್ಚಿನ ಪ್ರಮಾಣದ ಉದ್ಯೋಗ ಸೃಷ್ಟಿಯಾಗುತ್ತಿದೆ. ನಿರ್ಮಾಣ, ಉತ್ಪಾದನೆ ಸೇರಿ ಹಲವು ಕ್ಷೇತ್ರಗಳಲ್ಲೂ ಉದ್ಯೋಗ ಸೃಷ್ಟಿಯಾಗುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
  • 2023ರ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಹೊಸ ಬಂಡವಾಳ ಹೂಡಿಕೆ ಪ್ರಮಾಣವು 47.6 ಶತಕೋಟಿ ಡಾಲರ್‌ ಇತ್ತು. ಆದರೆ, ಇದು 2024ನೇ ಹಣಕಾಸು ವರ್ಷದಲ್ಲಿ 45.8 ಶತಕೋಟಿ ಡಾಲರ್‌ಗೆ ಇಳಿಕೆಯಾಗಿದೆ. ಜಾಗತಿಕ ಬೆಳವಣಿಗೆಗಳು ಇದಕ್ಕೆ ಕಾರಣವಾಗಿವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹೂಡಿಕೆ ಪ್ರಮಾಣ ಜಾಸ್ತಿಯಾಗುವ ಸಾಧ್ಯತೆ ಇದೆ.

  • ಜಾಗತಿಕ ರಾಜಕೀಯ ಬಿಕ್ಕಟ್ಟು, ಆಕ್ರಮಣಗಳ ಹಿನ್ನೆಲೆಯಲ್ಲಿ ವಿದೇಶಿ ವ್ಯಾಪಾರ ಪ್ರಮಾಣವೂ ಇಳಿಕೆ ಕಂಡಿದೆ. 2023ನೇ ಸಾಲಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ 2024ನೇ ಸಾಲಿನಲ್ಲಿ ವ್ಯಾಪಾರದ ಕೊರತೆಯು ಶೇ.0.07ರಷ್ಟಿದೆ.

ಇದನ್ನೂ ಓದಿ: Economic Survey 2023-24: ದೇಶದ ಆರ್ಥಿಕತೆ ಸುಭದ್ರ, ಜಿಡಿಪಿ 7% ಬೆಳವಣಿಗೆ; ಆರ್ಥಿಕ ಸಮೀಕ್ಷೆ ಪ್ರಕಟ

Continue Reading

ದೇಶ

Economic Survey 2023-24: ದೇಶದ ಆರ್ಥಿಕತೆ ಸುಭದ್ರ, ಜಿಡಿಪಿ 7% ಬೆಳವಣಿಗೆ; ಆರ್ಥಿಕ ಸಮೀಕ್ಷೆ ಪ್ರಕಟ

Economic Survey 2023-24: ಭಾರತದ ಆರ್ಥಿಕತೆಯು ಸಮತೋಲನದಿಂದ ಕೂಡಿದೆ. ಮುಂದಿನ ದಿನಗಳಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ. ಜಾಗತಿಕವಾಗಿ ರಾಜಕೀಯ ಬೆಳವಣಿಗೆ, ಕೊರೊನಾ ಬಿಕ್ಕಟ್ಟಿನ ನಂತರದ ಸವಾಲುಗಳ ಮಧ್ಯೆಯೂ ಭಾರತದ ಆರ್ಥಿಕತೆಯು ಸದೃಢವಾಗಿದೆ ಎಂದು ನಿರ್ಮಲಾ ಸೀತಾರಾಮನ್‌ ಅವರು ಆರ್ಥಿಕ ಸಮೀಕ್ಷೆ ಪ್ರಕಟಿಸುವ ವೇಳೆ ತಿಳಿಸಿದ್ದಾರೆ.

VISTARANEWS.COM


on

Economic Survey 2023-24
Koo

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಸಂಸತ್‌ನಲ್ಲಿ 2023-24ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು (Economic Survey 2023-24) ಪ್ರಕಟಿಸಿದ್ದಾರೆ. ಬಜೆಟ್‌ ಮಂಡನೆಗೂ (Union Budget 2024_ ಒಂದು ದಿನ ಮಂಡನೆಯಾಗುವ ಆರ್ಥಿಕ ಸಮೀಕ್ಷೆಯು ದೇಶದ ಆರ್ಥಿಕತ ಸ್ಥಿತಿಗತಿಗೆ ಕನ್ನಡಿಯಾಗಿರುವ ಕಾರಣ ಪ್ರಾಮುಖ್ಯತೆ ಪಡೆದಿದೆ. ಇನ್ನು, ಆರ್ಥಿಕ ಸಮೀಕ್ಷೆಯ ಪ್ರಕಾರ, ಭಾರತದ ಆರ್ಥಿಕತೆಯು ಸದೃಢವಾಗಿದ್ದು, 2024-25ನೇ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿಯು ಶೇ.6.5ರಿಂದ ಶೇ.7ಕ್ಕೆ ಏರಿಕೆಯಾಗುವ ಅಂದಾಜಿದೆ ಎಂದು ನಿರ್ಮಲಾ ಸೀತಾರಾಮನ್‌ ಅವರು ತಿಳಿಸಿದ್ದಾರೆ.

“ಭಾರತದ ಆರ್ಥಿಕತೆಯು ಸಮತೋಲನದಿಂದ ಕೂಡಿದೆ. ಮುಂದಿನ ದಿನಗಳಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ. ಜಾಗತಿಕವಾಗಿ ರಾಜಕೀಯ ಬೆಳವಣಿಗೆ, ಕೊರೊನಾ ಬಿಕ್ಕಟ್ಟಿನ ನಂತರದ ಸವಾಲುಗಳ ಮಧ್ಯೆಯೂ ಭಾರತದ ಆರ್ಥಿಕತೆಯು ಸದೃಢವಾಗಿದೆ. ಹೂಡಿಕೆ, ವ್ಯಾಪಾರ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಭಾರತವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ” ಎಂಬುದಾಗಿ ಆರ್ಥಿಕ ಸಮೀಕ್ಷೆ ತಿಳಿಸಿದೆ ಎಂದು ನಿರ್ಮಲಾ ಸೀತಾರಾಮನ್‌ ಅವರು ಸಂಸತ್ತಿಗೆ ಮಾಹಿತಿ ನೀಡಿದರು.

ಉದ್ಯೋಗದ ಕುರಿತು ಆರ್ಥಿಕ ಸಮೀಕ್ಷೆಯ ಮಾಹಿತಿಯನ್ನು ಸಚಿವೆ ಹಂಚಿಕೊಂಡರು. “ಕಾಲೇಜಿನಿಂದ ಹೊರಬರುತ್ತಲೇ ಭಾರತದಲ್ಲಿ ಸರಾಸರಿ ಇಬ್ಬರಲ್ಲಿ ಒಬ್ಬರು ಉದ್ಯೋಗ ಕೈಗೊಳ್ಳುವಷ್ಟು ಕೌಶಲಗಳನ್ನು ಹೊಂದಿರುವುದಿಲ್ಲ. ಇದರ ಕುರಿತು ಕೇಂದ್ರ ಸರ್ಕಾರ ಗಮನ ಹರಿಸುತ್ತಿದೆ. ಇನ್ನು, ಸೇವಾ ವಲಯದಲ್ಲಿ ದೇಶದಲ್ಲೇ ಅತಿ ಹೆಚ್ಚಿನ ಪ್ರಮಾಣದ ಉದ್ಯೋಗ ಸೃಷ್ಟಿಯಾಗುತ್ತಿದೆ. ನಿರ್ಮಾಣ, ಉತ್ಪಾದನೆ ಸೇರಿ ಹಲವು ಕ್ಷೇತ್ರಗಳಲ್ಲೂ ಉದ್ಯೋಗ ಸೃಷ್ಟಿಯಾಗುತ್ತಿರುವುದು ಸಕಾರಾತ್ಮಕ ಬೆಳವಣಿಗೆ” ಎಂದು ತಿಳಿಸಿದರು.

ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಇಳಿಕೆ

ವಿದೇಶಿ ನೇರ ಬಂಡವಾಳ ಹೂಡಿಕೆಯ ಪ್ರಮಾಣ ತುಸು ಕಡಿಮೆಯಾಗಿದೆ ಎಂಬುದಾಗಿ ಆರ್ಥಿಕ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. “2023ರ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಹೊಸ ಬಂಡವಾಳ ಹೂಡಿಕೆ ಪ್ರಮಾಣವು 47.6 ಶತಕೋಟಿ ಡಾಲರ್‌ ಇತ್ತು. ಆದರೆ, ಇದು 2024ನೇ ಹಣಕಾಸು ವರ್ಷದಲ್ಲಿ 45.8 ಶತಕೋಟಿ ಡಾಲರ್‌ಗೆ ಇಳಿಕೆಯಾಗಿದೆ. ಜಾಗತಿಕ ಬೆಳವಣಿಗೆಗಳು ಇದಕ್ಕೆ ಕಾರಣವಾಗಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೂಡಿಕೆ ಹರಿದುಬರುವ ನಿರೀಕ್ಷೆ ಇದೆ” ಎಂದು ನಿರ್ಮಲಾ ಸೀತಾರಾಮನ್‌ ಅವರು ಸಮೀಕ್ಷೆಯನ್ನು ಮಂಡಿಸುವ ವೇಳೆ ತಿಳಿಸಿದರು.

ಇದನ್ನೂ ಓದಿ: NEET UG 2024: ಅಧಿವೇಶನದಲ್ಲಿ ‘ನೀಟ್‌’ ಪ್ರಸ್ತಾಪಿಸಿದ ರಾಹುಲ್‌ ಗಾಂಧಿ; ಪ್ರತ್ಯುತ್ತರ ಕೊಟ್ಟ ಕೇಂದ್ರ ಸಚಿವ

Continue Reading
Advertisement
Chaluvadi Narayanaswamy
ಕರ್ನಾಟಕ43 mins ago

Chaluvadi Narayanaswamy : ಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್​​ನ ಪ್ರತಿಪಕ್ಷದ ನಾಯಕ

NEET
ಕರ್ನಾಟಕ57 mins ago

NEET: ನೀಟ್‌ ಪರೀಕ್ಷೆಗೆ ವಿರೋಧ, ಬೆಂಗಳೂರು ವಿಭಜನೆಗೆ ಅಸ್ತು; ರಾಜ್ಯ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

DK Shivakumar
ಕರ್ನಾಟಕ1 hour ago

DK Shivakumar: ರೈತನಿಗೆ ಪ್ರವೇಶ ನಿರ್ಬಂಧ ಖಂಡನೀಯ; ಮಾಲ್ ಸೇರಿ ಇತರೆಡೆ ಶೀಘ್ರ ವಸ್ತ್ರ ಸಂಹಿತೆ ಜಾರಿ ಎಂದ ಡಿಕೆಶಿ

Veerabaswanthreddy Mudnal
ಶ್ರದ್ಧಾಂಜಲಿ2 hours ago

Veerabaswanthreddy Mudnal: ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ ಅನಾರೋಗ್ಯದಿಂದ ನಿಧನ

Rahat Fateh Ali Khan
ವಿದೇಶ2 hours ago

Rahat Fateh Ali Khan: ದುಬೈನಲ್ಲಿ ಪಾಕಿಸ್ತಾನದ ಗಾಯಕನ ಬಂಧನ; ಎಸಗಿದ ಕೃತ್ಯವೇನು?

Valmiki Corporation Scam
ಕರ್ನಾಟಕ2 hours ago

Valmiki Corporation Scam: ಬಿ. ನಾಗೇಂದ್ರ ಹೆಸರೇಳುವಂತೆ ಒತ್ತಡ; ಇಡಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

Tata Curvv
ಆಟೋಮೊಬೈಲ್2 hours ago

Tata Curvv : ಎಸ್​ಯುವಿ ವಿಭಾಗದಲ್ಲಿ ವಿಭಿನ್ನ ವಿನ್ಯಾಸದ ಕಾರನ್ನು ಪರಿಚಯಿಸಿದ ಮಾಡಿದ ಟಾಟಾ

Kempambudi lake encroachment cleared soon says DCM DK Shivakumar
ಕರ್ನಾಟಕ2 hours ago

Assembly Session 2024: ಕೆಂಪಾಂಬುದಿ ಕೆರೆ ಒತ್ತುವರಿ ಶೀಘ್ರ ತೆರವು; ಡಿ.ಕೆ.ಶಿವಕುಮಾರ್

Viral Video
ವೈರಲ್ ನ್ಯೂಸ್2 hours ago

Viral Video: ಸ್ಕೂಟರ್‌ಗೆ ಅಪ್ಪಳಿಸಿದ ಕಾರು; 10 ಅಡಿ ಮೇಲಕ್ಕೆ ಹಾರಿ ಬಿದ್ದ ತಾಯಿ, ಮಗ

TA Sharavana questioned about the continuous variation in the service of 108 Ambulance even after 7 years there is no new tender
ಬೆಂಗಳೂರು2 hours ago

TA Sharavana: 108 ಆಂಬ್ಯುಲೆನ್ಸ್‌ಗೆ 7 ವರ್ಷ ಕಳೆದರೂ ಹೊಸ ಟೆಂಡರ್‌ ಇಲ್ಲ ಯಾಕೆ? ಟಿ. ಎ. ಶರವಣ ಪ್ರಶ್ನೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ2 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ3 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ3 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ4 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ4 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ6 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ1 week ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 week ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌