Physical Abuse: ಐವರಿಂದ ಗ್ಯಾಂಗ್‌ರೇಪ್‌; ಸಹಾಯಕ್ಕಾಗಿ ಅಂಗಲಾಚುತ್ತಿರುವ ಮಹಿಳೆಯ ವಿಡಿಯೋ ವೈರಲ್‌ - Vistara News

ವಿದೇಶ

Physical Abuse: ಐವರಿಂದ ಗ್ಯಾಂಗ್‌ರೇಪ್‌; ಸಹಾಯಕ್ಕಾಗಿ ಅಂಗಲಾಚುತ್ತಿರುವ ಮಹಿಳೆಯ ವಿಡಿಯೋ ವೈರಲ್‌

Physical Abuse: ಮಹಿಳೆ ಅಂಗಡಿಯೊಳಗೆ ಓಡಿ ಬಂದು ಅಲ್ಲಿದ್ದ ಸಿಬ್ಬಂದಿಗೆ ಸಹಾಯ ಮಾಡುವಂತೆ ಬೇಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ಕಬಾಬ್‌ ಅಂಗಡಿ ಪ್ಯಾರಿಸ್‌ನ 18 ನೇ ಅರೋಂಡಿಸ್‌ಮೆಂಟ್‌ನಲ್ಲಿ ಬೌಲೆವರ್ಡ್ ಡಿ ಕ್ಲಿಚಿ, ಮೌಲಿನ್ ರೂಜ್‌ಗೆ ಹತ್ತಿರದಲ್ಲಿದೆ.

VISTARANEWS.COM


on

physical abuse
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ಯಾರಿಸ್‌: ಬಹುನಿರೀಕ್ಷಿತ ಒಲಿಂಪಿಕ್ಸ್‌ಗೂ ಮುನ್ನ ಪ್ಯಾರಿಸ್‌ನಲ್ಲಿ ಭೀಕರ ಘಟನೆಯೊಂದು ಪ್ರಪಂಚದ ಗಮನ ಸೆಳೆದಿದೆ. ಪ್ಯಾರಿಸ್‌ನಲ್ಲಿ ಆಸ್ಟ್ರೇಲಿಯಾದ ಮಹಿಳೆಯೊಬ್ಬಳ ಮೇಲೆ ಐವರು ಕಿಡಿಗೇಡಿಗಳು ಸಾಮೂಹಿಕ ಅತ್ಯಾಚಾರ(Physical Abuse) ಎಸಗಿರುವ ಘಟನೆ ವರದಿಯಾಗಿದೆ. ಜುಲೈ 19ರ ಮಧ್ಯರಾತ್ರಿಯಲ್ಲಿ ನಡೆದ ಘೋರ ಕೃತ್ಯದ ಬಗ್ಗೆ ಫ್ರೆಂಚ್ ಪ್ರಾಸಿಕ್ಯೂಟರ್‌ಗಳು ತನಿಖೆ ನಡೆಸುತ್ತಿದ್ದಾರೆ. ಇನ್ನು ದೌರ್ಜನ್ಯಕ್ಕೊಳಗಾದ ಮಹಿಳೆ ಘಟನೆ ಬಳಿಕ ಸಹಾಯಕಕ್ಕಾಗಿ ಅಂಗಲಾಚುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್‌(Viral Video) ಆಗುತ್ತಿದೆ.

ವಿಡಿಯೋದಲ್ಲೇನಿದೆ?

ಮಹಿಳೆ ಅಂಗಡಿಯೊಳಗೆ ಓಡಿ ಬಂದು ಅಲ್ಲಿದ್ದ ಸಿಬ್ಬಂದಿಗೆ ಸಹಾಯ ಮಾಡುವಂತೆ ಬೇಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ಕಬಾಬ್‌ ಅಂಗಡಿ ಪ್ಯಾರಿಸ್‌ನ 18 ನೇ ಅರೋಂಡಿಸ್‌ಮೆಂಟ್‌ನಲ್ಲಿ ಬೌಲೆವರ್ಡ್ ಡಿ ಕ್ಲಿಚಿ, ಮೌಲಿನ್ ರೂಜ್‌ಗೆ ಹತ್ತಿರದಲ್ಲಿದೆ. ಆಕೆಗೆ ಸಾಂತ್ವನ ಹೇಳಲು ಸಿಬ್ಬಂದಿ ಮತ್ತು ಗ್ರಾಹಕರು ಆಕೆಯ ಸುತ್ತಲೂ ನೆರೆದಿರುವುದು ಕಂಡುಬರುತ್ತದೆ. ಶೀಘ್ರದಲ್ಲೇ, ಒಬ್ಬ ವ್ಯಕ್ತಿ ಕಬಾಬ್ ಅಂಗಡಿಯನ್ನು ಪ್ರವೇಶಿಸಿದನು, ಮತ್ತು ಮಹಿಳೆ ಅವನನ್ನು ತನ್ನ ಮೇಲೆ ದಾಳಿ ನಡೆಸಿದವರಲ್ಲಿ ಒಬ್ಬ ಎಂದು ಗುರುತಿಸಿದಳು. ಅಲ್ಲಿದ್ದ ಜನ ಆತನನ್ನು ಚೆನ್ನಾಗಿ ಥಳಿಸಿ ಓಡಿಸಿದ್ದಾರೆ. ನಂತರ, ಅಗ್ನಿಶಾಮಕ ಸಿಬ್ಬಂದಿ ಮಹಿಳೆಗೆ ತುರ್ತು ನೆರವು ನೀಡಿದರು ಮತ್ತು ನಂತರ ಸಂತ್ರಸ್ತೆಯನ್ನು ಆಸ್ಪತ್ರೆಗೆ ಕರೆದೊಯ್ದರು.

ವರದಿಗಳ ಪ್ರಕಾರ, ಮಹಿಳೆಯು ಮೌಲಿನ್ ರೂಜ್ ಬಳಿ ಮದ್ಯಪಾನ ಮಾಡುತ್ತಿದ್ದಾಗ ಆಫ್ರಿಕನ್‌ ಪುರುಷರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಪ್ಯಾರಿಸ್‌ನಲ್ಲಿರುವ ಆಸ್ಟ್ರೇಲಿಯಾದ ರಾಯಭಾರ ಕಚೇರಿಯು ಫ್ರೆಂಚ್ ರಾಜಧಾನಿಯಲ್ಲಿ ಹಲ್ಲೆಗೊಳಗಾದ ನಾಗರಿಕರಿಗೆ ಕಾನ್ಸುಲರ್ ನೆರವು ನೀಡಲು ಪ್ರಯತ್ನಿಸಿದೆ ಎಂದು ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರಗಳು ಮತ್ತು ವ್ಯಾಪಾರ ಇಲಾಖೆ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.

“ಇದು ತುಂಬಾ ಆಘಾತಕಾರಿ ಅನುಭವ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಸಹಾಯವನ್ನು ಒದಗಿಸಲು ಸಿದ್ಧರಾಗಿದ್ದೇವೆ” ಎಂದು ಹೇಳಿಕೆ ತಿಳಿಸಿದೆ. ಸಂತ್ರಸ್ತೆಯ ಗೌಪ್ಯತೆಯನ್ನು ರಕ್ಷಿಸಲು ಇದು ಯಾವುದೇ ಇತರ ಮಾಹಿತಿಯನ್ನು ಒದಗಿಸಿಲ್ಲ.

ವಾರಾಂತ್ಯದಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು 25 ವರ್ಷದ ಆಸ್ಟ್ರೇಲಿಯನ್ ಮಹಿಳೆ ಮಾಡಿದ ಆರೋಪಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಪ್ಯಾರಿಸ್ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ. ಇನ್ನು ಇದೇ ಶುಕ್ರವಾರ ಸೀನ್ ನದಿ ದಡದಲ್ಲಿ ಒಲಂಪಿಕ್ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ ಸಿಗಲಿದೆ. ಆಗಸ್ಟ್ 11 ರವರೆಗೆ ನಡೆಯುವ ಒಲಿಂಪಿಕ್ಸ್‌ಗಾಗಿ ನಗರದಲ್ಲಿ ಪ್ರತಿದಿನ 35,000 ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ.

ಇದನ್ನೂ ಓದಿ: Donald Trump: ಅಮೆರಿಕವೂ ಐರನ್ ಡೋಮ್ ಕ್ಷಿಪಣಿ ತಯಾರಿಸಲಿದೆ; ಡೊನಾಲ್ಡ್‌ ಟ್ರಂಪ್‌ ಸೂಚನೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Sea King Chopper: ಸಾವಿನ ದವಡೆಯಲ್ಲಿದ್ದ ಚೀನಾ ನಾವಿಕನನ್ನು ರಕ್ಷಿಸಿದ ಭಾರತೀಯ ನೌಕಾಪಡೆ; ಮಾನವೀಯತೆಗೆ ಮೆಚ್ಚುಗೆ

Sea King Chopper: ನೌಕಾಪಡೆಯ ಸೀ ಕಿಂಗ್‌ ಚಾಪರ್‌ ಬಳಸಿ, ಸಾವಿನ ದವಡೆಯಲ್ಲಿದ್ದ ಚೀನಾ ನಾವಿಕನೊಬ್ಬನನ್ನು ರಕ್ಷಿಸಲಾಗಿದೆ. ಭಾರತೀಯ ನೌಕಾಪಡೆಯ ಮಾನವೀಯ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಕೆಲ ತಿಂಗಳ ಹಿಂದಷ್ಟೇ ಪಾಕಿಸ್ತಾನದ ಮೀನುಗಾರರನ್ನು ಕೂಡ ಭಾರತದ ನೌಕಾಪಡೆ ಸಿಬ್ಬಂದಿ ರಕ್ಷಿಸಿದ್ದರು.

VISTARANEWS.COM


on

King Chopper
Koo

ನವದೆಹಲಿ: ಸಾಗರ ಪ್ರದೇಶದಲ್ಲಿ ವೈರಿಗಳ ಮೇಲೆ ನಿಗಾ ಇಡುವುದು, ತುರ್ತು ಸಂದರ್ಭಗಳಲ್ಲಿ ಕಾರ್ಯಾಚರಣೆ ಕೈಗೊಳ್ಳುವುದರಲ್ಲಿ ಸಮರ್ಥವಾಗಿರುವ ಜತೆಗೆ ಭಾರತೀಯ ನೌಕಾಪಡೆಯು (Indian Navy) ಬೇರೆಯವರನ್ನು ರಕ್ಷಣೆ ಮಾಡುವುದರಲ್ಲಿಯೂ ಅಷ್ಟೇ ದಕ್ಷತೆ ಹಾಗೂ ಮಾನವೀಯತೆಯನ್ನು ಹೊಂದಿದೆ. ಇದಕ್ಕೆ ನಿದರ್ಶನ ಎಂಬಂತೆ, ನೌಕಾಪಡೆಯ ಸೀ ಕಿಂಗ್‌ ಚಾಪರ್‌ (Sea King Chopper) ಬಳಸಿ, ಸಾವಿನ ದವಡೆಯಲ್ಲಿದ್ದ ಚೀನಾ ನಾವಿಕನೊಬ್ಬನನ್ನು ರಕ್ಷಿಸಲಾಗಿದೆ. ಭಾರತೀಯ ನೌಕಾಪಡೆಯ ಮಾನವೀಯ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಹೌದು, ಮುಂಬೈನಿಂದ ಸುಮಾರು 370 ಕಿಲೋಮೀಟರ್‌ ದೂರದ ಸಾಗರ ಪ್ರದೇಶದಲ್ಲಿ ಚೀನಾದ ಝೋಂಗ್‌ ಶಾನ್‌ ಮೆನ್‌ ಎಂಬ ನೌಕೆಯು ಹವಾಮಾನ ವೈಪರೀತ್ಯದಿಂದ ಚಲಿಸಲು ಆಗಿಲ್ಲ. ಇನ್ನು, ಹಡಗಿನ ನಾವಿಕನಿಗೆ ಗಂಭೀರವಾಗಿ ಗಾಯವಾಗಿದ್ದು, ರಕ್ತಸ್ರಾವದಿಂದ ತೀವ್ರ ತೊಂದರೆಗೆ ಸಿಲುಕಿದ್ದ. ಈ ಕುರಿತು ಮುಂಬೈನಲ್ಲಿರುವ ಮರಿಟೈಮ್‌ ರೆಸ್ಕ್ಯೂ ಕೋ-ಆಪರೇಷನ್‌ ಸೆಂಟರ್‌ಗೆ ಮಂಗಳವಾರ (ಜುಲೈ 24) ರಾತ್ರಿ ಕರೆ ಬಂದಿದೆ. ಕೂಡಲೇ 51 ವರ್ಷದ ನಾವಿಕನ ರಕ್ಷಣೆ ಮಾಡಬೇಕು ಎಂದು ಕರೆ ಮಾಡಲಾಗಿತ್ತು.

ಇದಾದ ಬಳಿಕ ಭಾರತೀಯ ನೌಕಾಪಡೆಯ ಸೀ ಕಿಂಗ್‌ ಹೆಲಿಕಾಪ್ಟರ್‌ಅನ್ನು ಶಿಖ್ರಾದಲ್ಲಿರುವ ಭಾರತದ ನೌಕಾಪಡೆಯ ಏರ್‌ ಸ್ಟೇಷನ್‌ನಿಂದ ಕಾರ್ಯಾಚರಣೆ ಆರಂಭಿಸಲಾಗಿದೆ. ಹವಾಮಾನ ವೈಪರೀತ್ಯದ ಕುರಿತು ಮಾಹಿತಿ ಇದ್ದರೂ ಕಾರ್ಯಾಚರಣೆ ನಡೆಸಿದ ಭಾರತೀಯ ನೌಕಾಪಡೆಯು ಚೀನಾದ ನಾವಿಕನನ್ನು ರಕ್ಷಿಸಿ, ಆತನಿಗೆ ವೈದ್ಯಕೀಯ ನೆರವು ನೀಡಿದೆ. ಈ ರೋಚಕ ವಿಡಿಯೊವನ್ನು ನೌಕಾಪಡೆಯು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ನೌಕಾಪಡೆಯ ಮಾನವೀಯತೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೆಲ ತಿಂಗಳ ಹಿಂದಷ್ಟೇ ಭಾರತದ ನೌಕಾಪಡೆಯ ಐಎನ್‌ಎಸ್‌ ಸುಮಿತ್ರ ಸಮರನೌಕೆಯ ಮೂಲಕ ಅರಬ್ಬೀ ಸಮುದ್ರದಲ್ಲಿ ಸೋಮಾಲಿಯಾ ಕಡಲ್ಗಳ್ಳರಿಂದ ಪಾಕಿಸ್ತಾನದ 19 ನಾವಿಕರನ್ನು ರಕ್ಷಿಸಲಾಗಿತ್ತು. ಅರಬ್ಬೀ ಸಮುದ್ರದಲ್ಲಿ ಪಾಕಿಸ್ತಾನದ 19 ನಾಗರಿಕರಿದ್ದ ಹಡಗನ್ನು ಅಪಹರಿಸಿದ್ದ ಸೋಮಾಲಿಯಾ ಕಡಲ್ಗಳ್ಳರನ್ನು ಹಿಮ್ಮೆಟ್ಟಿಸಿ ರಕ್ಷಣೆ ಮಾಡಲಾಗಿತ್ತು. ಇದಕ್ಕೂ ಕೆಲ ದಿನಗಳ ಮೊದಲು ಇರಾನ್‌ ಮೂಲದ ಹಡಗು ಹಾಗೂ ಹಡಗಿನಲ್ಲಿದ್ದ 17 ಜನರನ್ನು ರಕ್ಷಿಸಲಾಗಿತ್ತು.

ಇದನ್ನೂ ಓದಿ: INS Brahmaputra: ನೌಕಾಪಡೆಯ ಐಎನ್‌ಎಸ್‌ ಯುದ್ಧನೌಕೆಯಲ್ಲಿ ಭೀಕರ ಅಗ್ನಿ ದುರಂತ; ನಾವಿಕ ನಾಪತ್ತೆ

Continue Reading

ದೇಶ

Worlds Most Powerful Passports: ಪಾಸ್‌ಪೋರ್ಟ್‌ ಸೂಚ್ಯಂಕದಲ್ಲಿ ಸಿಂಗಾಪುರ ನಂ.1; ಭಾರತಕ್ಕೆ ಎಷ್ಟನೇ ಸ್ಥಾನ?

ಇಂಡೋನೇಷ್ಯಾ, ಮಲೇಷ್ಯಾ ಮತ್ತು ಥೈಲ್ಯಾಂಡ್‌ನಂತಹ ಜನಪ್ರಿಯ ಸ್ಥಳಗಳು ಸೇರಿದಂತೆ 58 ದೇಶಗಳು ಭಾರತೀಯರಿಗೆ ವೀಸಾ ಮುಕ್ತ ಪ್ರವೇಶಕ್ಕೆ ಅನುಮತಿ ನೀಡುತ್ತದೆ. ಜಾಗತಿಕ ಪಾಸ್‌ಪೋರ್ಟ್ ಸೂಚ್ಯಂಕವು ಆಯಾ ದೇಶಗಳ ಪಾಸ್‌ಪೋರ್ಟ್‌ಗಳು ತಮ್ಮ ನಾಗರಿಕರಿಗೆ ಅನುಮತಿಸುವ ಪ್ರಯಾಣ ಸ್ವಾತಂತ್ರ್ಯದ ಪ್ರಕಾರ ಶ್ರೇಯಾಂಕವನ್ನು (World’s Most Powerful Passports) ನೀಡುತ್ತದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

World's Most Powerful Passports
Koo

ವಾರ್ಷಿಕ ಜಾಗತಿಕ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ (Worlds Most Powerful Passports) ಭಾರತೀಯ ಪಾಸ್‌ಪೋರ್ಟ್ (indian Passports) 82ನೇ ಸ್ಥಾನದಲ್ಲಿದೆ. ಅಂತಾರಾಷ್ಟ್ರೀಯ ವಾಯುಯಾನ ಸಾರಿಗೆ ಅಸೋಸಿಯೇಷನ್ (International Air Transport Association) ಅಂಕಿ ಅಂಶಗಳನ್ನು ಆಧರಿಸಿ ಯುಕೆ ಮೂಲದ ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್‌ (UK-based Henley Passport Index) ಈ ಶ್ರೇಯಾಂಕವನ್ನು ನೀಡಿದೆ.

ಇಂಡೋನೇಷ್ಯಾ, ಮಲೇಷ್ಯಾ ಮತ್ತು ಥೈಲ್ಯಾಂಡ್‌ನಂತಹ ಜನಪ್ರಿಯ ಸ್ಥಳಗಳು ಸೇರಿದಂತೆ 58 ದೇಶಗಳು ಭಾರತೀಯರಿಗೆ ವೀಸಾ-ಮುಕ್ತ ಪ್ರವೇಶಕ್ಕೆ ಅನುಮತಿ ನೀಡುತ್ತದೆ. ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕವು ಆ ದೇಶಗಳ ಸಾಮಾನ್ಯ ಪಾಸ್‌ಪೋರ್ಟ್‌ಗಳು ತಮ್ಮ ನಾಗರಿಕರಿಗೆ ಅನುಮತಿಸುವ ಪ್ರಯಾಣ ಸ್ವಾತಂತ್ರ್ಯದ ಪ್ರಕಾರ ದೇಶಗಳ ಜಾಗತಿಕ ಶ್ರೇಯಾಂ ಕವಾಗಿದೆ.

ಅಗ್ರಸ್ಥಾನದಲ್ಲಿ ಸಿಂಗಾಪುರ

ಸಿಂಗಾಪುರವು ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ ಮುಂಚೂಣಿಯಲ್ಲಿದೆ. ಇತ್ತೀಚಿನ ಶ್ರೇಯಾಂಕದ ಪ್ರಕಾರ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್ ಎಂಬ ಶೀರ್ಷಿಕೆಯನ್ನು ಇದು ಮತ್ತೆ ಪಡೆದುಕೊಂಡಿದೆ.

ಈ ದೇಶದ ನಾಗರಿಕರು ಈಗ ಪ್ರಪಂಚದಾದ್ಯಂತ 227ರಲ್ಲಿ 195 ಪ್ರಯಾಣದ ಸ್ಥಳಗಳಿಗೆ ವೀಸಾ-ಮುಕ್ತವಾಗಿ ಪ್ರವೇಶ ಪಡೆಯಬಹುದು. ಶ್ರೇಯಾಂಕದ ಪ್ರಕಾರ ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಸ್ಪೇನ್ ಜಂಟಿಯಾಗಿ ಎರಡನೇ ಸ್ಥಾನದಲ್ಲಿದೆ. ಇದು ಪ್ರತಿ 192 ಸ್ಥಳಗಳಿಗೆ ವೀಸಾ-ಮುಕ್ತ ಪ್ರವೇಶವನ್ನು ಹೊಂದಿದೆ.

ಆಸ್ಟ್ರಿಯಾ, ಫಿನ್ಲೆಂಡ್, ಐರ್ಲೆಂಡ್, ಲಕ್ಸೆಂಬರ್ಗ್, ನೆದರ್ಲ್ಯಾಂಡ್ಸ್, ದಕ್ಷಿಣ ಕೊರಿಯಾ ಮತ್ತು ಸ್ವೀಡನ್ ಪೂರ್ವ ವೀಸಾ ಇಲ್ಲದೆಯೇ 191 ಸ್ಥಳಗಳಿಗೆ ಪ್ರವೇಶವನ್ನು ಹೊಂದಿರುವ ಏಳು ರಾಷ್ಟ್ರಗಳು ಶ್ರೇಯಾಂಕದಲ್ಲಿ 3 ನೇ ಸ್ಥಾನದಲ್ಲಿದೆ.

ಯುಕೆ, ಬೆಲ್ಜಿಯಂ, ಡೆನ್ಮಾರ್ಕ್, ನ್ಯೂಜಿಲೆಂಡ್, ನಾರ್ವೆ ಮತ್ತು ಸ್ವಿಟ್ಜರ್ಲೆಂಡ್ ಗೆ ವೀಸಾ ಮುಕ್ತ ಗಮ್ಯಸ್ಥಾನ ಪ್ರವೇಶ 190 ಕ್ಕೆ ಕುಸಿದಿದ್ದರೂ ಈ ರಾಷ್ಟ್ರಗಳು ಜಂಟಿಯಾಗಿ ನಾಲ್ಕನೇ ಸ್ಥಾನದಲ್ಲಿದೆ.


ಅಮೆರಿಕಕ್ಕೆ ದಶಕದಿಂದಲೂ 8ನೇ ಸ್ಥಾನ

ಇನ್ನು ಯುಎಸ್ ಈಗ 186 ಗಮ್ಯಸ್ಥಾನಗಳಿಗೆ ವೀಸಾ ಮುಕ್ತ ಪ್ರವೇಶ ಪಡೆಯಬಹುದು. ದಶಕದಿಂದಲೂ 8ನೇ ಸ್ಥಾನದಲ್ಲಿ ಯುಎಸ್ ಉಳಿದಿದೆ ಎಂದು ಸೂಚ್ಯಂಕ ಹೇಳಿದೆ.

ಅಂತಾರಾಷ್ಟ್ರೀಯ ವಾಯುಯಾನ ಸಾರಿಗೆ ಅಸೋಸಿಯೇಷನ್ ಪ್ರಕಾರ ಏರ್‌ಲೈನ್ಸ್ 2024ರಲ್ಲಿ ಈ ವರೆಗೆ ಸರಿಸುಮಾರು 39 ಮಿಲಿಯನ್ ವಿಮಾನಗಳು 22,000 ಮಾರ್ಗಗಳಲ್ಲಿ ಸುಮಾರು 5 ಶತಕೋಟಿ ಜನರನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಿದೆ. ಏರ್ ಕಾರ್ಗೋ 62 ಮಿಲಿಯನ್ ಟನ್‌ ಸರಕುಗಳನ್ನು ಸಾಗಿಸಿದೆ. ಇದು ಒಟ್ಟು 8.3 ಟ್ರಿಲಿಯನ್ ಡಾಲರ್ ವಹಿವಾಟನ್ನು ನಡೆಸಿದೆ.

ಇದನ್ನೂ ಓದಿ: NEET: ಕರ್ನಾಟಕ ಬಳಿಕ ಪಶ್ಚಿಮ ಬಂಗಾಳದಲ್ಲೂ ನೀಟ್‌ ಪರೀಕ್ಷೆ ವಿರುದ್ಧ ನಿರ್ಣಯ; ಹೆಚ್ಚಾಯ್ತು ಆಕ್ರೋಶ

ನಮ್ಮ ಉದ್ಯಮವು ಈ ವರ್ಷ ಸುಮಾರು 1 ಟ್ರಿಲಿಯನ್ ಡಾಲರ್ ಆದಾಯವನ್ನು ದಾಖಲಿಸುವ ನಿರೀಕ್ಷೆಯಿದೆ. ಆದರೂ ವೆಚ್ಚಗಳು 936 ಶತಕೋಟಿ ಡಾಲರ್ ಆಗಿದ್ದು, ಏರಿಕೆಯಾಗುತ್ತಲೇ ಇದೆ. ನಿವ್ವಳ ಲಾಭವು 30.5 ಶತಕೋಟಿ ಡಾಲರ್ ಆಗಿದೆ. ಎಂದು ಅಂತಾರಾಷ್ಟ್ರೀಯ ವಾಯುಯಾನ ಸಾರಿಗೆ ಅಸೋಸಿಯೇಷನ್ ನ ಡೈರೆಕ್ಟರ್ ಜನರಲ್ ವಿಲ್ಲಿ ವಾಲ್ಶ್ ಹೇಳಿದ್ದಾರೆ.

2006ರಲ್ಲಿ ಈ ಸೂಚ್ಯಂಕ ಪ್ರಾರಂಭವಾದ ಬಳಿಕ ವೀಸಾ ಮುಕ್ತ ಪ್ರವೇಶ ಪಡೆಯಲು 185 ಪ್ರದೇಶಗಳಲ್ಲಿ 152 ಸ್ಥಳಗಳನ್ನು ಸೇರಿಸುವ ಮೂಲಕ ಯುಎಇ ಮೊದಲ ಬಾರಿಗೆ ಟಾಪ್ 10ರಲ್ಲಿ ಸ್ಥಾನ ಪಡೆದಿದೆ.

Continue Reading

ವಿದೇಶ

Plane Crash: ನೇಪಾಳದಲ್ಲಿ 19 ಪ್ರಯಾಣಿಕರಿದ್ದ ವಿಮಾನ ಪತನ; ವಿಡಿಯೋ ಇದೆ

Plane Crash: ಟೇಕ್‌ ಆಫ್‌ ಆಗುತ್ತಿದ್ದಂತೆ ಇದ್ದಕ್ಕಿದ್ದಂತೆ ವಿಮಾನದಲ್ಲಿ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿತ್ತು. ಇದಾದ ಕೆಲವೇ ಹೊತ್ತಿನಲ್ಲಿ ವಿಮಾನ ಪತನಗೊಂಡಿತ್ತು. ಶೌರ್ಯ ಏರ್‌ಲೈನ್ಸ್‌ ವಿಮಾನ ಹಿಮಾಲಯ ಪ್ರಸಿದ್ಧ ಪ್ರವಾಸಿ ತಾಣವಾಗಿ ರುವ ಪೋಖರಾಕ್ಕೆ ಪ್ರಯಾಣ ಬೆಳೆಸಿತ್ತು. ಈ ವೇಳೆ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಸದ್ಯ ದುರ್ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

VISTARANEWS.COM


on

Plane crash
Koo

ಕಾಠ್ಮಂಡು: ನೇಪಾಳ(Nepal)ದಲ್ಲಿ 19 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ಪತನಗೊಂಡಿರುವ ಘಟನೆ ವರದಿಯಾಗಿದೆ. ರಾಷ್ಟ್ರ ರಾಜಧಾನಿ ಕಾಠ್ಮಂಡುವಿನಲ್ಲಿರುವ ತ್ರಿಭುವನ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(Tribhuvan International Airport)ದಿಂದ ಟೇಕ್‌ ಆಫ್‌ ಆದ ಶೌರ್ಯ ವಿಮಾನಯಾನ ಸಂಸ್ಥೆ ವಿಮಾನ ಪತನ(Plane Crash)ಗೊಂಡಿದೆ. ಇಂದು ಬೆಳಗ್ಗೆ 11 ಗಂಟೆಗೆ ಈ ದುರ್ಘಟನೆ ಸಂಭವಿಸಿದ್ದು, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಟೇಕ್‌ ಆಫ್‌ ಆಗುತ್ತಿದ್ದಂತೆ ಇದ್ದಕ್ಕಿದ್ದಂತೆ ವಿಮಾನದಲ್ಲಿ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿತ್ತು. ಇದಾದ ಕೆಲವೇ ಹೊತ್ತಿನಲ್ಲಿ ವಿಮಾನ ಪತನಗೊಂಡಿತ್ತು. ಶೌರ್ಯ ಏರ್‌ಲೈನ್ಸ್‌ ವಿಮಾನ ಹಿಮಾಲಯ ಪ್ರಸಿದ್ಧ ಪ್ರವಾಸಿ ತಾಣವಾಗಿ ರುವ ಪೋಖರಾಕ್ಕೆ ಪ್ರಯಾಣ ಬೆಳೆಸಿತ್ತು. ಈ ವೇಳೆ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಸದ್ಯ ದುರ್ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಕಳೆದ ವರ್ಷ ಜನವರಿಯಲ್ಲಿ, ಕೇಂದ್ರ ನಗರವಾದ ಪೊಖರಾ ಬಳಿ ಯೇತಿ ಏರ್‌ಲೈನ್ಸ್ ವಿಮಾನ ಅಪಘಾತ ಸಂಭವಿಸಿತು. ಈ ಘಟನೆಯಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 72 ಜನರು ಪ್ರಾಣ ಕಳೆದುಕೊಂಡಿದ್ದಾರೆ. ವಿಮಾನವು ಕಡಿದಾದ ಕಮರಿಗೆ ಬಿದ್ದಿತು, ಅದು ಪೊಖರಾವನ್ನು ಸಮೀಪಿಸುತ್ತಿದ್ದಂತೆ ತುಂಡುಗಳಾಗಿ ಮುರಿದು ಜ್ವಾಲೆಗೆ ಒಳಗಾಯಿತು.

ಮೇ 29, 2022 ರಂದು, ತಾರಾ ಏರ್ ವಿಮಾನವು ಮುಸ್ತಾಂಗ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾಯಿತು, ಇದರ ಪರಿಣಾಮವಾಗಿ ವಿಮಾನದಲ್ಲಿದ್ದ ಎಲ್ಲಾ 22 ವ್ಯಕ್ತಿಗಳು ಸಾವನ್ನಪ್ಪಿದರು. 2018 ರಲ್ಲಿ, ಯುಎಸ್-ಬಾಂಗ್ಲಾ ಏರ್ಲೈನ್ಸ್ ವಿಮಾನವನ್ನು ಒಳಗೊಂಡ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ದುರಂತ ಅಪಘಾತ ಸಂಭವಿಸಿದೆ. ವಿಮಾನವು ಕ್ರ್ಯಾಶ್-ಲ್ಯಾಂಡ್ ಆಗಿದ್ದು, 51 ಜನರ ಸಾವಿಗೆ ಕಾರಣವಾಯಿತು ಮತ್ತು 20 ಇತರರಿಗೆ ಗಂಭೀರ ಗಾಯಗಳಾಗಿತ್ತು.

ಇದನ್ನೂ ಓದಿ: Foreign Secretary: ಕೇರಳಕ್ಕಾಗಿ ‘ವಿದೇಶಾಂಗ ಕಾರ್ಯದರ್ಶಿ’ಯನ್ನು ನೇಮಿಸಿದ ಪಿಣರಾಯಿ; ಭುಗಿಲೆದ್ದ ವಿವಾದ

Continue Reading

ವಿದೇಶ

US Presidential Election: ಚುನಾವಣಾ ಪೂರ್ಣ ಸಮೀಕ್ಷೆ ಔಟ್‌; ಕಮಲಾ ಹ್ಯಾರಿಸ್‌ಗೆ ಮುನ್ನಡೆ

US Presidential Election:ಭಾನುವಾರ ತಾವು ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿಯುವುದಾಗಿ ಬೈಡೆನ್‌ ಘೋಷಿಸಿದ ಎರಡು ದಿನಗಳ ಬಳಿಕ ರೂಟರ್ಸ್‌ ಮತ್ತು ಮಾರ್ಕೆಟಿಂಗ್‌ ರಿಸರ್ಚ್‌ ಕಂಪನಿಗಳ ದಿಗ್ಗಜ Ipsos ಈ ಸಮೀಕ್ಷೆ ನಡೆಸಿತ್ತು. ಸಮೀಕ್ಷೆಯಲ್ಲಿ ಕಲಮಾ ಹ್ಯಾರಿಸ್‌ಗೆ ಶೇ.44 ಮತಗಳನ್ನು ಪಡೆಯುವ ಮೂಲಕ ಡೊನಾಲ್ಡ್‌ ಟ್ರಂಪ್‌ ಅವರನ್ನು ಎರಡು ಪಾಯಿಂಟ್‌ಗಳಿಂದ ಹಿಂದಿಕ್ಕಿದ್ದಾರೆ. ಟ್ರಂಪ್‌ ಶೇ.42ಮತಗಳನ್ನು ಪಡೆದಿದ್ದಾರೆ.

VISTARANEWS.COM


on

US Presidential Election
Koo

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆ(US Presidential Election) ದಿನೇ ದಿನೇ ರಂಗೇರುತ್ತಿದೆ. ಹಾಲಿ ಅಧ್ಯಕ್ಷ ಜೋ ಬೈಡೆನ್‌(Joe Biden) ಸ್ಪರ್ಧೆಯಿಂದ ಹಿಂದೆ ಸರಿದು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌(Kamala Harris) ಅವರ ಹೆಸರು ಸೂಚಿಸಿದ ಬೆನ್ನಲ್ಲೇ ಚುನಾವಣಾ ಪೂರ್ಣ ಮರು ಸಮೀಕ್ಷೆಗಳು ಹೊರಬಿದ್ದಿದೆ. ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಪ್ರತಿಸ್ಪರ್ಧಿ ಡೊನಾಲ್ಡ್‌ ಟ್ರಂಪ್‌(Donald Trump) ಅವರನ್ನು ಹಿಂದಿಕ್ಕಿ ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಮುನ್ನಡೆ ಸಾಧಿಸಿದ್ದಾರೆ.

ಭಾನುವಾರ ತಾವು ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿಯುವುದಾಗಿ ಬೈಡೆನ್‌ ಘೋಷಿಸಿದ ಎರಡು ದಿನಗಳ ಬಳಿಕ ರೂಟರ್ಸ್‌ ಮತ್ತು ಮಾರ್ಕೆಟಿಂಗ್‌ ರಿಸರ್ಚ್‌ ಕಂಪನಿಗಳ ದಿಗ್ಗಜ Ipsos ಈ ಸಮೀಕ್ಷೆ ನಡೆಸಿತ್ತು. ಸಮೀಕ್ಷೆಯಲ್ಲಿ ಕಲಮಾ ಹ್ಯಾರಿಸ್‌ಗೆ ಶೇ.44 ಮತಗಳನ್ನು ಪಡೆಯುವ ಮೂಲಕ ಡೊನಾಲ್ಡ್‌ ಟ್ರಂಪ್‌ ಅವರನ್ನು ಎರಡು ಪಾಯಿಂಟ್‌ಗಳಿಂದ ಹಿಂದಿಕ್ಕಿದ್ದಾರೆ. ಟ್ರಂಪ್‌ ಶೇ.42ಮತಗಳನ್ನು ಪಡೆದಿದ್ದಾರೆ.

ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ನಾಮನಿರ್ದೇಶನವನ್ನು ಗೆಲ್ಲಲು ಸಾಕಾಗುವಷ್ಟು ಡೆಮಾಕ್ರಟಿಕ್ ಪ್ರತಿನಿಧಿಗಳ ಬೆಂಬಲ ಗಳಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಎನ್‌ಎನ್ ವರದಿ ಮಾಡಿದೆ. ಮೊದಲ ಮತದಾನದಲ್ಲಿ ನಾಮನಿರ್ದೇಶನವನ್ನು ಗೆಲ್ಲಲು ಅಗತ್ಯವಿರುವ 1,976ಕ್ಕಿಂತಲೂ ಹೆಚ್ಚಿನ ಪ್ರತಿನಿಧಿಗಳ ಬೆಂಬಲವನ್ನು ಇದುವರೆಗೆ ಹ್ಯಾರಿಸ್ ಗಳಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಕಮಲಾ ಹ್ಯಾರಿಸ್‌, `ಇವತ್ತು ನಮ್ಮ ಪಕ್ಷದ ಅಭ್ಯರ್ಥಿಯಾಗಲು ಅಗತ್ಯವಿರುವ ಬೆಂಬಲವನ್ನು ಗಳಿಸಿದ್ದಕ್ಕಾಗಿ ನಾನು ಹೆಮ್ಮೆ ಪಡುತ್ತೇನೆ. ಮುಂದಿನ ತಿಂಗಳು ನಾನು ದೇಶದಾದ್ಯಂತ ಪ್ರಯಾಣಿಸುತ್ತೇನೆ ಎಂದಿದ್ದಾರೆ.

ಸೋಮವಾರ ನಡೆಸಿದ PBS ನ್ಯೂಸ್/ಎನ್‌ಪಿಆರ್/ಮಾರಿಸ್ಟ್ ಸಮೀಕ್ಷೆಯಲ್ಲಿ, ಟ್ರಂಪ್ ಹ್ಯಾರಿಸ್‌ಗೆ ಶೇ.46 ರಿಂದ 45 ರಷ್ಟು US ನೋಂದಾಯಿತ ಮತದಾರರ ಬೆಂಬಲ ಹೊಂದಿದ್ದು, ಒಂಬತ್ತು ಪ್ರತಿಶತ ನಿರ್ಧಾರವಾಗಿಲ್ಲ. ಮೂರನೇ ಪಕ್ಷದ ಅಭ್ಯರ್ಥಿಗಳು ಅಥವಾ ಸ್ವತಂತ್ರ ಅಭ್ಯರ್ಥಿಗಳನ್ನು ಸ್ಪರ್ಧೆಯಲ್ಲಿ ಸೇರಿಸಿದರೆ, ಟ್ರಂಪ್ ಮತ್ತು ಹ್ಯಾರಿಸ್ ಶೇಕಡಾ 42 ರಷ್ಟು ಸಮಬಲ ಹೊಂದಿದ್ದಾರೆ.

ಕಮಲಾ ಹ್ಯಾರಿಸ್​ ಮೂಲತಃ ಭಾರತದವರು. ಅವರ ತಾಯಿ ಹುಟ್ಟಿದ್ದು ತಮಿಳುನಾಡಿನ ಚೆನ್ನೈನಲ್ಲಿ. ಬಳಿಕ ಯುಎಸ್​ಗೆ ತೆರಳಿ, ಅಲ್ಲಿನವರನ್ನೇ ಮದುವೆಯಾಗಿ ನೆಲೆಸಿದ್ದರು. ಯುಎಸ್​ ಉಪಾಧ್ಯಕ್ಷೆ ಸ್ಥಾನಕ್ಕೆ ಏರಿದ ಮೊದಲ ಭಾರತೀಯ ಮೂಲದ ಮಹಿಳೆ ಎಂಬ ಹೆಗ್ಗಳಿಕೆಗೂ ಕಮಲಾ ಹ್ಯಾರಿಸ್​ ಪಾತ್ರರಾಗಿದ್ದಾರೆ. ಅವರು ಯುಎಸ್​ ಉಪಾಧ್ಯಕ್ಷ ಚುನಾವಣೆಯಲ್ಲಿ ಗೆದ್ದಾಗ ಚೆನ್ನೈನಲ್ಲಿರುವ ಅವರ ಪೂರ್ವಜರ ಊರಿನಲ್ಲಿ ಭರ್ಜರಿ ಸಂಭ್ರಮ ಏರ್ಪಟ್ಟಿತ್ತು. ಸಿಹಿ ವಿತರಣೆಯೂ ನಡೆದಿತ್ತು.

ಅಮೆರಿಕದ ಉಪಾಧ್ಯಕ್ಷ ಸ್ಥಾನದ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಕಮಲಾದೇವಿ ಹ್ಯಾರಿಸ್ ಅವರ ತಂದೆ ಜಮೈಕಾ ಮೂಲದವರಾದರೆ ತಾಯಿ ಭಾರತೀಯ ಮೂಲದವರು. ಉನ್ನತ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ಕಮಲಾ, ಪೊಲೀಸ್ ವ್ಯವಸ್ಥೆಯಲ್ಲಿ ಗಮನಾರ್ಹ ಸುಧಾರಣೆ ತಂದು ಗಮನ ಸೆಳೆದರು. ನಂತರ ರಾಜಕೀಯ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ ಕಮಲಾದೇವಿ ಹ್ಯಾರಿಸ್, 2020ರಲ್ಲಿ ಅಮೆರಿಕದ ಉಪಾಧ್ಯಕ್ಷ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ಮೈಕ್ ಪೆನ್ಸೆ ಅವರ ವಿರುದ್ಧ ಅಭೂತಪೂರ್ವ ಗೆಲುವು ಸಾಧಿಸಿದ್ದರು.

ಇದನ್ನೂ ಓದಿ: Donald Trump: ಅಮೆರಿಕವೂ ಐರನ್ ಡೋಮ್ ಕ್ಷಿಪಣಿ ತಯಾರಿಸಲಿದೆ; ಡೊನಾಲ್ಡ್‌ ಟ್ರಂಪ್‌ ಸೂಚನೆ

Continue Reading
Advertisement
King Chopper
ದೇಶ23 mins ago

Sea King Chopper: ಸಾವಿನ ದವಡೆಯಲ್ಲಿದ್ದ ಚೀನಾ ನಾವಿಕನನ್ನು ರಕ್ಷಿಸಿದ ಭಾರತೀಯ ನೌಕಾಪಡೆ; ಮಾನವೀಯತೆಗೆ ಮೆಚ್ಚುಗೆ

ahoratri dharani until the guilts are punished says Opposition party Leader R Ashok
ಕರ್ನಾಟಕ24 mins ago

R Ashok: ಹಗರಣಕೋರರಿಗೆ ಶಿಕ್ಷೆಯಾಗುವವರೆಗೂ ಅಹೋರಾತ್ರಿ ಧರಣಿ; ಆರ್. ಅಶೋಕ್‌ ಘೋಷಣೆ

Traffic Restrictions
ಬೆಂಗಳೂರು36 mins ago

Traffic Restrictions: ವೈಟ್ ಟಾಪಿಂಗ್ ಕಾಮಗಾರಿ; ನಾಳೆಯಿಂದ ರಾಜಾಜಿನಗರದ ಈ ಮಾರ್ಗದಲ್ಲಿ ಸಂಚಾರ ನಿಷೇಧ

Mohammed Shami
ಕ್ರೀಡೆ39 mins ago

Mohammed Shami: 19ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ಮೊಹಮ್ಮದ್ ಶಮಿ; ತಡೆದು ನಿಲ್ಲಿಸಿದ್ದು ಯಾರು?

KP Poorchandra Tejaswi samagra kruthi Jagattu 14 samputagalu Lokarpane On July 29 in Bengaluru
ಬೆಂಗಳೂರು39 mins ago

Book Release: ಜು.29ರಂದು ಬೆಂಗಳೂರಿನಲ್ಲಿ 14 ಸಂಪುಟಗಳ ಪೂರ್ಣಚಂದ್ರ ತೇಜಸ್ವಿ ಕೃತಿ ಲೋಕಾರ್ಪಣೆ

Asteria Aerospace has introduced a SkyDeck platform that helps in various fields including agriculture
ದೇಶ43 mins ago

SkyDeck: ಕೃಷಿ ಮತ್ತಿತರ ಕ್ಷೇತ್ರಗಳಿಗೆ ನೆರವಾಗುವ ʼಸ್ಕೈಡೆಕ್ʼ ಪ್ಲಾಟ್‌ಫಾರ್ಮ್! ಏನಿದು?

Health Tips Kannada
ಆರೋಗ್ಯ1 hour ago

Health Tips Kannada: ನಿಂತ ಮಳೆ ನೀರಿನಿಂದ ಈ 7 ರೋಗಗಳು ಬರುತ್ತವೆ ಎನ್ನುವುದು ನಿಮಗೆ ಗೊತ್ತೆ?

Dog attack
ದೇಶ2 hours ago

Dog Attack: ವಕೀಲನ ಮೇಲೆ ಶ್ವಾನ ದಾಳಿ; ಖಾಸಗಿ ಅಂಗಕ್ಕೆ ಕಚ್ಚಿದ ಪಿಟ್‌ ಬುಲ್‌

Paris Olympics
ಕ್ರೀಡೆ2 hours ago

Paris Olympics: ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲಿದ್ದಾರೆ ಭಾರತದ 24 ಸೈನಿಕರು

Supreme Court
ದೇಶ2 hours ago

Supreme Court: ರೈತರು, ಸರ್ಕಾರದ ಮಧ್ಯೆ ‘ತಟಸ್ಥ ಅಂಪೈರ್’‌ ಬೇಕು; ಸುಪ್ರೀಂ ಕೋರ್ಟ್‌ ಮಹತ್ವದ ಸಲಹೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ15 hours ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ1 day ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ1 day ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ1 day ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ4 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ5 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ5 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ6 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ6 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

ಟ್ರೆಂಡಿಂಗ್‌