Shravan 2024: ಶ್ರಾವಣ ಮಾಸದಲ್ಲಿ ಯಾವ ಹಬ್ಬ, ಯಾವ ದಿನ? ಈ ತಿಂಗಳ ಮಹತ್ವ ಏನು? - Vistara News

Latest

Shravan 2024: ಶ್ರಾವಣ ಮಾಸದಲ್ಲಿ ಯಾವ ಹಬ್ಬ, ಯಾವ ದಿನ? ಈ ತಿಂಗಳ ಮಹತ್ವ ಏನು?

Shravan 2024: ಶ್ರಾವಣ ಮಾಸ ಬಂದಾಗ…ಆನಂದ ತಂದಾಗ….ಹೌದು, ಶ್ರಾವಣ ಈ ಹೆಸರು ಕೇಳುತ್ತಲೆ ಖುಷಿಯಾಗುತ್ತದೆ. ಆಷಾಢದ ಆಲಸ್ಯ ಕಳೆದು ಹೊಸ ಹುರುಪು ತುಂಬುತ್ತದೆ ಈ ಶ್ರಾವಣ. ಹಬ್ಬಹರಿದಿನಗಳು ಸಾಲು ಸಾಲಾಗಿ ಶುರುವಾಗುತ್ತದೆ. ಮನಸ್ಸು ಕೂಡ ಗರಿಗೆದರುತ್ತದೆ. ಹೆಂಗಳೆಯರಿಗೆ ಈ ಮಾಸವೆಂದರೆ ತುಸು ಪ್ರೀತಿ. ವ್ರತ, ಪೂಜೆ, ಉಪಾವಾಸ ಎಂದೆಲ್ಲಾ ಬ್ಯುಸಿಯಾಗಿಬಿಡುತ್ತಾರೆ.ಅಂದಹಾಗೇ, ಈ ಶ್ರಾವಣ ಮಾಸವನ್ನು ಹೇಗೆಲ್ಲಾ ಆಚರಿಸಲಾಗುತ್ತದೆ, ಇದರ ವಿಶೇಷತೆ ಏನು ಎಂಬುದರ ಕುರಿತ ಮಾಹಿತಿ ಇಲ್ಲಿದೆ ನೋಡಿ.

VISTARANEWS.COM


on

Shravan 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಹಿಂದೂ ಕ್ಯಾಲೆಂಡರ್‌ನ ಪ್ರಕಾರ ಶ್ರಾವಣ ಮಾಸವು ಮಾಸಗಳಲ್ಲಿ (shravan 2024) ಐದನೇಯದಾಗಿದೆ. ಶ್ರವಣ ನಕ್ಷತ್ರ ದಿನದಂದು ಈ ಮಾಸ ಆರಂಭವಾಗುವುದರಿಂದ ಇದನ್ನು ಶ್ರಾವಣ ಮಾಸ (Shravan Masa) ಎಂದು ಕರೆಯುತ್ತಾರೆ. ಈ ಮಾಸ ಹಿಂದೂಗಳಿಗೆ ಬಹಳ ಪವಿತ್ರವಾದ ಹಾಗೂ ವಿಶೇಷವಾದ ಮಾಸವಾಗಿದೆ. ಯಾಕೆಂದರೆ ಈ ಮಾಸದಲ್ಲಿ ಜನರು ಹೆಚ್ಚಾಗಿ ಶಿವನ ಆರಾಧನೆ ಮಾಡುತ್ತಾರೆ. ಜೊತೆಗೆ ಲಕ್ಷ್ಮಿ,, ಗೌರಿಯ ಪೂಜೆ ಮಾಡಲಾಗುತ್ತದೆ. ಹಾಗೇ ಈ ಮಾಸದಲ್ಲಿ ಹಲವು ಹಬ್ಬ ಹರಿದಿನಗಳನ್ನು, ವ್ರತ ಉಪವಾಸಗಳನ್ನು ಜನರು ಆಚರಿಸುತ್ತಾರೆ. ಹಾಗಾಗಿ ಈ ಮಾಸದಲ್ಲಿ ಹಬ್ಬಗಳು ಸಾಲು ಸಾಲಾಗಿ ಬರುತ್ತಿರುತ್ತದೆ. ಅಲ್ಲದೇ ಶ್ರಾವಣ ಮಾಸ ಮಹಿಳೆಯರಿಗೆ ಬಹಳ ಪ್ರಿಯವಾದ ಮಾಸ. ಯಾಕೆಂದರೆ ಮಹಿಳೆಯರಿಗೆ ದೇವರ ಪೂಜೆ ಮಾಡಲು ಇದು ಬಹಳ ಶ್ರೇಷ್ಠವಾದ ಮಾಸವಾಗಿದೆ. ಮತ್ತು ಈ ಮಾಸದಲ್ಲಿ ಮಾಡಿದ ಪೂಜೆಗಳಿಗೆ ಬಹಳ ಬೇಗ ಫಲ ದೊರೆಯುತ್ತದೆಯಂತೆ.

Shravan Masa
Shravan Masa

ಶ್ರಾವಣ ಮಾಸ ಶುರು ಯಾವಾಗ?

ಆಷಾಢ ಮಾಸ ಮುಗಿದ ನಂತರ ಅಂದರೆ ಭೀಮನ ಅಮಾವಾಸ್ಯೆ ನಂತರ ಶ್ರಾವಣ ಮಾಸ ಪ್ರಾರಂಭವಾಗುತ್ತದೆ. ಅಂದರೆ ಹಿಂದೂ ಕ್ಯಾಲೆಂಡರ್‌ನಲ್ಲಿ 2024ರಲ್ಲಿ ಶ್ರಾವಣ ಮಾಸ ಆಗಸ್ಟ್ 5ರ ಸೋಮವಾರದಂದು ಪ್ರಾರಂಭವಾಗಿ ಸೆಪ್ಟೆಂಬರ್ 3, 2024 ಮಂಗಳವಾರದ ಅಮಾವಾಸ್ಯೆಯ ತಿಥಿಯಂದು ಕೊನೆಗೊಳ್ಳುತ್ತದೆ. ಮರುದಿನ ಭಾದ್ರಪದ ಮಾಸ ಆರಂಭವಾಗುತ್ತದೆ.

ಶ್ರಾವಣ ಮಾಸದ ವಿಶೇಷತೆ ಏನು?

ಶ್ರಾವಣ ಮಾಸದಲ್ಲಿ ಬರುವ ಎಲ್ಲಾ ದಿನಗಳು ಬಹಳ ಶುಭವೇ ಆಗಿರುತ್ತದೆ. ಈ ಮಾಸ ಧಾರ್ಮಿಕ ಕಾರ್ಯಗಳಿಗೆ ಬಹಳ ಉತ್ತಮವಾದ ಮಾಸವಾಗಿದೆ. ಈ ಮಾಸದಲ್ಲಿ ಜಪ-ತಪ, ವ್ರತ-ನಿಯಮ, ಪೂಜೆ-ಪುರಾಣಶಾಸ್ತ್ರ, ಪ್ರವಚನ, ಭಜನೆ, ಕೀರ್ತನೆ, ಸತ್ಸಾಂಗ, ಪುಣ್ಯ ಕ್ಷೇತ್ರಗಳ ದರ್ಶನ, ಯಜ್ಞ-ಯಾಗ, ಹೋಮ-ಹವನ ಮುಂತಾದವುಗಳಿಗೆ ಶ್ರೇಷ್ಠವಾಗಿದೆ. ಅಲ್ಲದೇ ಯಾವುದೇ ಶುಭ ಕಾರ್ಯಗಳನ್ನು ಮಾಡಲು ಹಾಗೂ ಹೊಸ ಕೆಲಸಗಳನ್ನು ಆರಂಭಿಸಲು ಈ ಮಾಸ ಬಹಳ ಪ್ರಶಸ್ತವಾಗಿದೆ. ಜೊತೆಗೆ ಈ ಮಾಸದಲ್ಲಿ ಹಬ್ಬಗಳು ಸಾಲುಸಾಲಾಗಿ ಬರುತ್ತವೆ.

Shravan Masa
Shravan Masa

ಶ್ರಾವಣದಲ್ಲಿ ಶಿವನ ಆರಾಧನೆ

ಇನ್ನು ಶ್ರಾವಣ ಮಾಸದಲ್ಲಿ ಶಿವನ ಆರಾಧನೆಗೆ ಹೆಚ್ಚು ಪ್ರಾಮುಖ್ಯತೆ ಇರುವುದರಿಂದ ಶ್ರಾವಣ ಮಾಸದ ಪ್ರತಿ ಸೋಮವಾರವನ್ನು ಶ್ರಾವಣ ಸೋಮವಾರ ಎಂದೇ ಕರೆಯುತ್ತಾರೆ. ಈ ಮಾಸದಲ್ಲಿ ಶಿವನಿಗೆ ವಿವಿಧ ರೀತಿಯ ಅಭಿಷೇಕಗಳನ್ನು ಮಾಡಲಾಗುತ್ತದೆ. ಯಾಕೆಂದರೆ ಸಮುದ್ರ ಮಂಥನ ನಡೆದಿದ್ದು ಶ್ರಾವಣ ಮಾಸದಲ್ಲಿ. ಆಗ ಈ ಸಮಯದಲ್ಲಿ ಹೊರಗೆ ಬಂದ ಹಾಲಾಹಲವನ್ನು ಶಿವನು ಕುಡಿಯುತ್ತಾನೆ ಎಂಬುದು ಎಲ್ಲರಿಗೂ ತಿಳಿದಿದೆ. ಈ ಹಾಲಾಹಲದ ತಾಪವನ್ನು ಶಿವನಿಗೆ ಸಹಿಸಲು ಸಾಧ್ಯವಾಗದ ಕಾರಣ ದೇಹವನ್ನು ತಂಪಾಗಿಸಲು ಚಂದ್ರನನ್ನು ಹಾಗೂ ಗಂಗೆಯನ್ನು ಶಿರದಲ್ಲಿ ಧರಿಸುತ್ತಾನೆ. ಹಾಗಾಗಿ ಶ್ರಾವಣ ಮಾಸದಲ್ಲಿ ಶಿವನನ್ನು ತಂಪಾಗಿಲು ಅಭಿಷೇಕ ಮಾಡಲಾಗುತ್ತದೆ. ಇದರಿಂದ ಶಿವನ ಕೃಪೆ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಶ್ರಾವಣ ಮಾಸದಲ್ಲಿ ಆಚರಿಸುವ ಹಬ್ಬಗಳು

  • ಈ ಮಾಸದಲ್ಲಿ ನಾಗರ ಪಂಚಮಿ, ವರಮಹಾಲಕ್ಷ್ಮಿ ವ್ರತ, ಮಂಗಳ ಗೌರಿ ವ್ರತ, ರಕ್ಷಾಬಂಧನ, ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಮುಂತಾದ ಹಬ್ಬಗಳನ್ನು ಆಚರಿಸಲಾಗುತ್ತದೆ.
Shravan Masa
Shravan Masa
  • ಮಂಗಳಗೌರಿ ವ್ರತ : ಶ್ರಾವಣ ಮಾಸದ ಮೊದಲಿಗೆ ಮಂಗಳವಾರ ಬರುವುದರಿಂದ ಮಂಗಳ ಗೌರಿಯ ವ್ರತ ಮಾಡುತ್ತಾರೆ. ಇದನ್ನು ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ಮಾಡಿದರೆ ಅವರ ವೈವಾಹಿಕ ಜೀವನ ಉತ್ತಮವಾಗಿರುತ್ತದೆಯಂತೆ. ಹಾಗಾಗಿ ಶ್ರಾವಣ ಮಾಸದಲ್ಲಿ ಬರುವ ಎಲ್ಲಾ ಮಂಗಳವಾರದಂದು ಮಂಗಳಗೌರಿ ವ್ರತ ಆಚರಿಸಿದರೆ ಒಳ್ಳೆಯದು.
Shravan Masa
Shravan Masa
  • ನಾಗರ ಪಂಚಮಿ: ಶ್ರಾವಣ ಮಾಸದ ಪ್ರಾರಂಭವಾದ 5ನೇ ದಿನಕ್ಕೆ ಅಂದರೆ ಆಗಸ್ಟ್ 9ರಂದು ನಾಗರ ಪಂಚಮಿ ಹಬ್ಬ ಬರಲಿದೆ. ಈ ದಿನ ಜನರು ತಾವು ನಂಬಿದಂತಹ ನಾಗ ದೇವರಿಗೆ ಪೂಜೆ ಸಲ್ಲಿಸುತ್ತಾರೆ.
Shravan Masa
Shravan Masa
  • ವರಮಹಾಲಕ್ಷ್ಮಿ ವ್ರತ : ಶ್ರಾವಣ ಅಮಾವಾಸ್ಯೆಯ 2ನೇ ಶುಕ್ರವಾರದಂದು ಅಂದರೆ ಆಗಸ್ಟ್ 16ರಂದು ಆಚರಿಸಲಾಗುತ್ತದೆ. ಈ ದಿನ ಮಹಿಳೆಯರು ಲಕ್ಷ್ಮಿದೇವಿಯನ್ನು ಕಳಸದ ಮೇಲೆ ಪ್ರತಿಷ್ಠಾಪನೆ ಮಾಡಿ ಜರಿ ಸೀರೆ ಉಡಿಸಿ, ಧನ, ಚಿನ್ನದ ಆಭರಣಗಳಿಂದ ದೇವಿಯನ್ನು ಅಲಂಕರಿಸಿ ಪೂಜೆ ಮಾಡಿ ವರವನ್ನು ಬೇಡಿಕೊಳ್ಳುತ್ತಾರೆ.
Shravan Masa
Shravan Masa
  • ಸಂಪತ್ ಗೌರಿ ವ್ರತ : ಇದನ್ನು ಶ್ರಾವಣ ಮಾಸದಲ್ಲಿ ಬರುವ ಪ್ರತಿ ಶುಕ್ರವಾರದಂದು ಆಚರಿಸಲಾಗುತ್ತದೆ. ಈ ದಿನ ಸಂಪತ್ತಿನ ದೇವತೆ ಲಕ್ಷ್ಮಿದೇವಿಯನ್ನು ಪೂಜಿಸಲಾಗುತ್ತದೆ.
Shravan Masa
Shravan Masa
  • ಶ್ರಾವಣ ಶನಿವಾರ: ಈ ದಿನ ಲಕ್ಷ್ಮಿ ಮತ್ತು ವೆಂಕಟೇಶ್ವರನನ್ನು ಆರಾಧಿಸುತ್ತಾರೆ. ಹಾಗೇ ಕೆಲವರು ಶ್ರಾವಣ ಶನಿವಾರದಂದು ಉಪವಾಸ ವ್ರತವನ್ನು ಆಚರಿಸುತ್ತಾರೆ. ಹಾಗೇ ಈ ದಿನ ಆಂಜನೇಯ ಸ್ವಾಮಿಯ ಪೂಜೆ ಹಾಗೂ ಶನಿ ಶಾಂತಿ ಪೂಜೆಗೆ ಬಹಳ ಉತ್ತಮ ಎನ್ನಲಾಗಿದೆ.
Shravan Masa
Shravan Masa
  • ರಕ್ಷಾ ಬಂಧನ : ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾಬಂಧನವನ್ನು ಆಚರಿಸುತ್ತಾರೆ. ಇದನ್ನು ನೂಲು ಹುಣ್ಣಿಮೆಯಂದು ಕರೆಯುತ್ತಾರೆ. ಈ ದಿನ ಸಹೋದರಿಯರು ತಮ್ಮ ಸಹೋದರನ ಕೈಗೆ ರಕ್ಷಾ ಬಂಧನವನ್ನು ಕಟ್ಟಿ ಒಳಿತಾಗಲಿ ಎಂದು ಹಾರೈಸುತ್ತಾರೆ. ಮತ್ತು ಉಪನಯನವಾದವರು ಈ ದಿನ ಉಪಕರ್ಮವನ್ನು ಆಚರಿಸಬೇಕು. ಅಂದರೆ ಜನೀವಾರವನ್ನು ಬದಲಾಯಿಸಿ ಹೊಸ ಜನೀವಾರವನ್ನು ಧರಿಸಬೇಕು. ಈ ವರ್ಷ ಆಗಸ್ಟ್ 19ರಂದು ರಕ್ಷಾ ಬಂಧನವನ್ನು ಆಚರಿಸುತ್ತಾರೆ.
Shravan Masa
Shravan Masa
  • ಶ್ರೀಕೃಷ್ಣ ಜನ್ಮಾಷ್ಟಮಿ: ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಮಹಾವಿಷ್ಣು ಕಂಸನ ಸಂಹಾರಕ್ಕಾಗಿ ಶ್ರೀಕೃಷ್ಣನ ಅವತಾರದಲ್ಲಿ ಜನ್ಮ ತಾಳುತ್ತಾನೆ. ಹಾಗಾಗಿ ಈ ವರ್ಷ ಆಗಸ್ಟ್ 26ರಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ಇದರ ಮಹತ್ವ ತಿಳಿದರೆ ನೀವು ಇನ್ನೆಂದೂ ಕರಿ ಬೇವಿನ ಎಲೆಯನ್ನು ಪಕ್ಕಕ್ಕೆ ಎತ್ತಿಡುವುದಿಲ್ಲ!

ಈ ಎಲ್ಲಾ ಶುಭ ದಿನಗಳು ಮತ್ತು ಹಬ್ಬಗಳಿಂದ ಶ್ರಾವಣ ಮಾಸ ತುಂಬಾ ವಿಶೇಷವಾದ ಮಾಸವಾಗಿದೆ. ಈ ಮಾಸದಲ್ಲಿ ಎಲ್ಲರೂ ಶ್ರದ್ಧೆ, ಭಕ್ತಿಯಿಂದ ದೇವರ ಆರಾಧನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ತಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಬಹುದು. ಹಾಗಾಗಿ ಈ ಶ್ರಾವಣ ಮಾಸವನ್ನು ಎಲ್ಲರೂ ಸಂತೋಷದಿಂದ ಬರಮಾಡಿಕೊಳ್ಳಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

CM Siddaramaiah: ಬಜೆಟ್ ಮೂಲಪಾಠವೇ ಗೊತ್ತಿಲ್ಲದ ನಿರ್ಮಲಾ ಸೀತಾರಾಮನ್; ಸಂಪುಟದಿಂದ ಕೈಬಿಡಲು ಸಿಎಂ ಒತ್ತಾಯ

CM Siddaramaiah: ಆಯವ್ಯಯದ ಲೆಕ್ಕಾಚಾರದ ಮೂಲಪಾಠವೇ ಗೊತ್ತಿಲ್ಲದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ತಕ್ಷಣ ಸಂಪುಟದಿಂದ ಕೈಬಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ. ಇಂಥವರ ಕೈಯಲ್ಲಿ ಹಣಕಾಸು ಖಾತೆ ನೀಡಿರುವುದು ಅತ್ಯಂತ ಅಪಾಯಕಾರಿ ನಿರ್ಧಾರ ಎಂದು ಅವರು ಹೇಳಿದ್ದಾರೆ.

VISTARANEWS.COM


on

CM Siddaramaiah demands to Pm for drop the Nirmala Sitharaman from the cabinet
Koo

ಬೆಂಗಳೂರು: ಆಯವ್ಯಯದ ಲೆಕ್ಕಾಚಾರದ ಮೂಲಪಾಠವೇ ಗೊತ್ತಿಲ್ಲದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ತಕ್ಷಣ ಸಂಪುಟದಿಂದ ಕೈಬಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ. ಇಂಥವರ ಕೈಯಲ್ಲಿ ಹಣಕಾಸು ಖಾತೆ ನೀಡಿರುವುದು ಅತ್ಯಂತ ಅಪಾಯಕಾರಿ ನಿರ್ಧಾರ ಎಂದು ಅವರು ಹೇಳಿದ್ದಾರೆ.

ಭಾನುವಾರದ ಪತ್ರಿಕಾಗೋಷ್ಠಿಯಲ್ಲಿ ನರೇಂದ್ರ ಮೋದಿ ಸರ್ಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಮರೆಮಾಚುವ ಹತಾಶ ಪ್ರಯತ್ನ ಮಾಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಾವೇ ಹೆಣೆದ ಬಲೆಯಲ್ಲಿ ಸಿಕ್ಕಿ ಹಾಕಿಕೊಡಿರುವುದು ದುರಂತ. ಸಚಿವರ ಗೊಂದಲಮಯ ಹೇಳಿಕೆಗಳ ಸಿಕ್ಕುಗಳನ್ನೆಲ್ಲ ಬಿಡಿಸುತ್ತಾ ಹೋದರೆ ಕೊನೆಗೂ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಿರುವುದು ಚೊಂಬು ಮಾತ್ರ ಎನ್ನುವುದು ಸಾಬೀತಾಗುತ್ತದೆ.

ನಿರ್ಮಲಾ ಸೀತಾರಾಮನ್ ಅವರ ಪ್ರಕಾರ ಹಿಂದಿನ ಯುಪಿಎ ಸರ್ಕಾರ (2004-2014) ಹತ್ತು ವರ್ಷಗಳ ಅವಧಿಯಲ್ಲಿ ಕರ್ನಾಟಕಕ್ಕೆ ನೀಡಿರುವ ಅನುದಾನ ರೂ.60,779 ಕೋಟಿ. ಎನ್‌ಡಿಎ ಸರ್ಕಾರ (2014-2024) ಹತ್ತು ವರ್ಷಗಳ ಅವಧಿಯಲ್ಲಿ ನೀಡಿದ್ದ ಹಣ ರೂ.2,36,955 ಕೋಟಿ ಎಂದು ಸಚಿವೆ ಆರೋಪಿಸಿದ್ದಾರೆ.

ಆದರೆ ಹತ್ತು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರದ ಬಜೆಟ್ ಗಾತ್ರ ಎಷ್ಟು ಪಟ್ಟು ಹೆಚ್ಚಾಗಿದೆ ಎನ್ನುವುದನ್ನು ಅವರು ಮರೆತಿದ್ದಾರೆ. ಇದು ಅವರ ಅಜ್ಞಾನವೋ, ಇಲ್ಲವೇ ಜನತೆಯ ದಾರಿ ತಪ್ಪಿಸುವ ಹುನ್ನಾರವೋ? ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದರು.

ಇದನ್ನೂ ಓದಿ: Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

2013-14ರ ಕೇಂದ್ರ ಸರ್ಕಾರದ ಬಜೆಟ್ ರೂ.16,06 ಲಕ್ಷ ಕೋಟಿ. ಆಗ ಕರ್ನಾಟಕಕ್ಕೆ ಅನುದಾನದ ರೂಪದಲ್ಲಿ ರೂ. 16,428 ಕೋಟಿ ಮತ್ತು ತೆರಿಗೆ ಹಂಚಿಕೆಯಲ್ಲಿ ರೂ.15,005 ಕೋಟಿ ಹೀಗೆ ಒಟ್ಟು ರೂ.31,483 ಕೋಟಿ ನೀಡಲಾಗಿತ್ತು. ಈ ನೆರವು ಒಟ್ಟು ಬಜೆಟ್ ನ ಶೇಕಡಾ 1.9 ರಷ್ಟಾಗುತ್ತದೆ.

2024-25ರ ಅವಧಿಯ ಕೇಂದ್ರ ಸರ್ಕಾರದ ಬಜೆಟ್ ಗಾತ್ರ ರೂ.48.02 ಲಕ್ಷ ಕೋಟಿಯಾಗಿದೆ. ಈ ಅವಧಿಯಲ್ಲಿ ನಮಗೆ ಕೇಂದ್ರ ಅನುದಾನದ ರೂಪದಲ್ಲಿ ರೂ.15,229 ಕೋಟಿ ಮತ್ತು ತೆರಿಗೆ ಹಂಚಿಕೆಯಲ್ಲಿ ರೂ.44.485 ಕೋಟಿ ನೀಡಲಾಗುತ್ತದೆ. ಇದು ಒಟ್ಟು ಬಜೆಟ್ ಗಾತ್ರದ ಶೇಕಡಾ 1.2 ರಷ್ಟಾಗುತ್ತದೆ.

ನರೇಂದ್ರ ಮೋದಿ ಸರ್ಕಾರದಿಂದ ಅನ್ಯಾಯ

2013-14ರ ಪ್ರಮಾಣದಲ್ಲಿ (ಶೇಕಡಾ 1.9)ಯೇ ಅನುದಾನ ಮತ್ತು ತೆರಿಗೆ ಹಂಚಿಕೆಯ ಹಣವನ್ನು 2024-25ರ ಅವಧಿಯಲ್ಲಿಯೂ ಕರ್ನಾಟಕಕ್ಕೆ ನೀಡಿದ್ದರೆ, ಕೇಂದ್ರ ಸರ್ಕಾರ ನೀಡುವ ಹಣದ ಮೊತ್ತ ರೂ.91,580 ಕೋಟಿಗಳಾಗುತ್ತಿತ್ತು. ಅಂದರೆ ನರೇಂದ್ರ ಮೋದಿ ಸರ್ಕಾರ ಮಾಡಿರುವ ಅನ್ಯಾಯದಿಂದಾಗಿ ಕಳೆದ ಒಂದು ವರ್ಷದ ಅವಧಿಯಲ್ಲಿ ಕರ್ನಾಟಕ 31,866 ಕೋಟಿ ರೂಪಾಯಿ ಕಳೆದುಕೊಂಡಿದೆ ಎಂದು ಆರೋಪಿಸಿದರು.

ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುಳ್ಳಿನ ದಾರಿಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಬರುವ ತೆರಿಗೆ ಹಂಚಿಕೆಯಲ್ಲಿ ವೃದ್ಧಿಯಾಗಿದೆ ಎನ್ನುವ ದಾರಿ ತಪ್ಪಿಸುವ ಹೇಳಿಕೆ ನೀಡಿದ್ದಾರೆ. ಅವರ ಪ್ರಕಾರ ಯುಪಿಎ ಸರ್ಕಾರದ ಕಾಲದಲ್ಲಿ ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದ ಪಾಲು ರೂ.81,791 ಕೋಟಿ ಮಾತ್ರ. 2014-24ರ ಅವಧಿಯ ಎನ್‌ಡಿ.ಎ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಪಡೆದಿರುವುದು ರೂ. 2.9 ಲಕ್ಷ ಕೋಟಿ.

ಹದಿನಾಲ್ಕನೇ ಹಣಕಾಸು ಆಯೋಗ ಕರ್ನಾಟಕದ ತೆರಿಗೆ ಪಾಲು ಶೇ 4.72 ಎಂದು ನಿಗದಿಪಡಿಸಿತ್ತು, ಈಗಿನ 15ನೇ ಹಣಕಾಸು ಆಯೋಗ ಈ ಪಾಲನ್ನು ಕಡಿಮೆಗೊಳಿಸಿ ಶೇ 3.64ಕ್ಕೆ ಇಳಿಸಿತು. ಇದರಿಂದ ಕಳೆದ ಐದು ವರ್ಷಗಳಲ್ಲಿ ತೆರಿಗೆ ಪಾಲಿನಲ್ಲಿ ಅಂದಾಜು ರೂ.62,098 ಕೋಟಿಯನ್ನು ಕರ್ನಾಟಕ ಕಳೆದುಕೊಂಡಿದೆ. ಇದನ್ನು ನಿರ್ಮಲಾ ಸೀತಾರಾಮನ್ ಜಾಣತನದಿಂದ ಮರೆಮಾಚಲು ಪ್ರಯತ್ನಿಸಿದ್ದಾರೆ ಎಂದು ಸಿಎಂ ದೂರಿದರು.

ಇದನ್ನೂ ಓದಿ: Lakshmi Hebbalkar: ಪ್ರವಾಹ ಸಂತ್ರಸ್ತರ ಕಣ್ಣೀರು ಒರೆಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿ ರಾಜ್ಯ ಇದೆ. ಇನ್ನು ಜಿಎಸ್‌ಟಿ ಸಂಗ್ರಹದ ಬೆಳೆವಣಿಗೆ ದರವನ್ನು ಗಮನಿಸಿದರೆ ಶೇ.17ರ ಸಾಧನೆಯ ಮೂಲಕ ದೇಶದಲ್ಲೇ ಮೊದಲ ಸ್ಥಾನದಲ್ಲಿ ಕರ್ನಾಟಕವಿದೆ. ವಿಪರ್ಯಾಸವೆಂದರೆ ಈ ಪ್ರಮಾಣದಲ್ಲಿ ಜಿಎಸ್‌ಟಿ ಹಣವನ್ನು ಕೇಂದ್ರಕ್ಕೆ ಸಂಗ್ರಹಿಸಿ ನೀಡಿದರೂ ಇದರಿಂದ ರಾಜ್ಯಕ್ಕೆ ಮರಳಿ ದೊರೆಯುತ್ತಿರುವುದು ಶೇ.52 ಪಾಲು ಮಾತ್ರ. ಜಿಎಸ್‌ಟಿಯ ಅವೈಜ್ಞಾನಿಕ ಅನುಷ್ಠಾನದಿಂದಾಗಿ ಕರ್ನಾಟಕವು 2017-18 ರಿಂದ 2023-24 ರವರೆಗೆ ಸುಮಾರು ರೂ. 59,274 ಕೋಟಿ ಹಣವನ್ನು ಕಳೆದುಕೊಂಡಿದೆ.

2023-24ರ ಅವಧಿಯಲ್ಲಿ ಕೇಂದ್ರವು ರಾಜ್ಯದಿಂದ ಕನಿಷ್ಠ ರೂ. 4.30 ಲಕ್ಷ ಕೋಟಿಗೂ ಹೆಚ್ಚು ಸಂಪನ್ಮೂಲವನ್ನು ತೆರಿಗೆ, ಸೆಸ್‌, ಸರ್‌ಚಾರ್ಜ್‌ ಮೂಲಕ ಸಂಗ್ರಹಿಸಿದೆ. ಆದರೆ, ಇದಕ್ಕೆ ಪ್ರತಿಯಾಗಿ ರೂ.50 ರಿಂದ 53 ಸಾವಿರ ಕೋಟಿ ಮಾತ್ರ ಕರ್ನಾಟಕಕ್ಕೆ ನೀಡಿದೆ. ನಾವು ನೂರು ರೂ. ಸಂಗ್ರಹಿಸಿ ಕೊಟ್ಟರೆ ನಮಗೆ ಮರಳಿ ದೊರೆಯುವುದು 12-13 ರೂಪಾಯಿ ಮಾತ್ರ. ಇದರಲ್ಲಿ ತೆರಿಗೆ ಪಾಲು ₹37,000 ಕೋಟಿ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ನೀಡಿದ ಪಾಲಿನ ಹಣ ₹13,005 ಕೋಟಿ.

ಕಳೆದ ಆರು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರದ ಬಜೆಟ್‌ ಸರಿಸುಮಾರು ದುಪ್ಪಟ್ಟಾಗಿದೆ. 2018-19 ರಲ್ಲಿ ಕೇಂದ್ರ ಬಜೆಟ್‌ ಗಾತ್ರ ರೂ. 24,42,213 ಕೋಟಿ ಇತ್ತು. ಆಗ ಕೇಂದ್ರದಿಂದ ರಾಜ್ಯಕ್ಕೆ ದೊರೆಯುತ್ತಿದ್ದ ತೆರಿಗೆ ಪಾಲು ರೂ.35,895 ಕೋಟಿ ಹಾಗೂ ರೂ.16,082 ಕೋಟಿ ಅನುದಾನ ಸೇರಿ ಒಟ್ಟು ರೂ.46,288 ಕೋಟಿ ಲಭ್ಯವಾಗಿತ್ತು.

ಇದನ್ನೂ ಓದಿ: Paris Olympics 2024 : ಒಲಿಂಪಿಕ್ಸ್ ಕ್ವಾರ್ಟರ್​ಫೈನಲ್​ಗೇರಿ ದಾಖಲೆ ಸೃಷ್ಟಿಸಿದ ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್​- ಚಿರಾಗ್​

ಆದರೆ, 2023-24ರಲ್ಲಿ ಕೇಂದ್ರದ ಬಜೆಟ್‌ ಗಾತ್ರ ರೂ.45,03,097 ಕೋಟಿಗೆ ಏರಿಕೆಯಾಗಿದೆ. ವಿಪರ್ಯಾಸವೆಂದರೆ, ಕರ್ನಾಟಕ್ಕೆ ಕೇಂದ್ರದಿಂದ ತೆರಿಗೆ ಪಾಲು ಹಾಗೂ ಅನುದಾನಗಳೆರಡೂ ಸೇರಿ ಸಿಕ್ಕಿರುವುದು ರೂ.50,257 ಕೋಟಿ ಮಾತ್ರ. ಅಂದರೆ ಐದು ವರ್ಷದ ಅವಧಿಯಲ್ಲಿ ಬಜೆಟ್‌ ದುಪ್ಪಟ್ಟಾದರೂ ರಾಜ್ಯಕ್ಕೆ ದೊರೆಯುತ್ತಿರುವ ಪಾಲಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರಸಕ್ತ ಬಜೆಟ್‌ ಗಾತ್ರದ ಹೋಲಿಕೆಯಲ್ಲಿ ಕರ್ನಾಟಕಕ್ಕೆ ವಾರ್ಷಿಕ ಕನಿಷ್ಠ ರೂ.1 ಲಕ್ಷ ಕೋಟಿಯಷ್ಟು ಹಣ ತೆರಿಗೆಯ ಪಾಲು ಹಾಗೂ ಅನುದಾನದ ಮುಖೇನ ದೊರೆಯಬೇಕಿತ್ತು, ಆದರೆ ದೊರೆತಿಲ್ಲ ಎಂದು ಸಿಎಂ ತಿಳಿಸಿದರು.

ಕರ್ನಾಟಕಕ್ಕೆ ದೊಡ್ಡ ಮಟ್ಟದ ಅನ್ಯಾಯ

ಕರ್ನಾಟಕಕ್ಕೆ ಈ ಪರಿಯ ದೊಡ್ಡ ಮಟ್ಟದ ಅನ್ಯಾಯ ಆಗಿರುವುದು ಮನವರಿಕೆಯಾದ ನಂತರವೇ ಹದಿನೈದನೇ ಹಣಕಾಸು ಆಯೋಗ ಕರ್ನಾಟಕಕ್ಕೆ ವಿಶೇಷ ಅನುದಾನದ ರೂಪದಲ್ಲಿ ₹5,495 ಕೋಟಿ ನೀಡಬೇಕೆಂದು ಶಿಫಾರಸು ಮಾಡಿತ್ತು. ಕನ್ನಡಿಗರ ಜನಪ್ರತಿನಿಧಿಯಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಈ ಶಿಫಾರಸನ್ನು ನಿರಾಕರಿಸಿರುವ ಕಾರಣ ಆ ದುಡ್ಡು ಕೂಡಾ ಬರಲಿಲ್ಲ.

ಕೇಂದ್ರ ಸರ್ಕಾರದ ಈ ತಾರತಮ್ಯ ನೀತಿ, ಮಲತಾಯಿ ಧೋರಣೆಯಿಂದಾಗಿ ಕರ್ನಾಟಕವು 2017-18ರಿಂದ ಈವರೆಗೆ ತನಗೆ ಸೇರಬೇಕಾದ ನ್ಯಾಯಯುತ ಪಾಲಾದ ರೂ. 1,87,867 ಕೋಟಿ ಹಣದಿಂದ ವಂಚಿತವಾಗಿದೆ. ಅಂದರೆ, ಕರ್ನಾಟಕದ ಪರಿಷ್ಕೃತ ಆಯವ್ಯಯದ ಗಾತ್ರ 3.24 ಲಕ್ಷ ಕೋಟಿಯ ಹೋಲಿಕೆಯಲ್ಲಿ ಅದರ ಅರ್ಧಕ್ಕಿಂತಲೂ ಹೆಚ್ಚು ಹಣ, ನಿಖರವಾಗಿ ಹೇಳಬೇಕೆಂದರೆ ಪ್ರಸಕ್ತ ಸಾಲಿನ ಬಜೆಟ್‌ನ‌ ಶೇ.57ರಷ್ಟು ಗಾತ್ರದ ಹಣ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯಕ್ಕೆ ನಷ್ಟವಾಗಿದೆ ಎಂದು ಹೇಳಿದರು.

ಇದಲ್ಲದೆ, ಹದಿನೈದನೇ ಹಣಕಾಸು ಆಯೋಗವು ಬೆಂಗಳೂರಿನ ಫೆರಿಫೆರಲ್‌ ರಿಂಗ್‌ ರಸ್ತೆಗೆ ರೂ.3,000 ಕೋಟಿ ಮತ್ತು ಕೆರೆಗಳು ಸೇರಿದಂತೆ ಬೆಂಗಳೂರು ಜಲಮೂಲ ಅಭಿವೃದ್ಧಿಗೆ ರೂ. 3000 ನೀಡಲು ಶಿಫಾರಸ್ಸು ಮಾಡಿತ್ತು. ಆದರೆ, ಈ ಶಿಫಾರಸ್ಸುಗಳನ್ನು ತಿರಸ್ಕರಿಸಿದ ವಿತ್ತ ಸಚಿವರು ರಾಜ್ಯಕ್ಕೆ ಸುಮಾರು ರೂ.11,495 ಕೋಟಿ ದ್ರೋಹ ಮಾಡಿದ್ದಾರೆ.

ನರೇಂದ್ರ ಮೋದಿಯವರು ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೂಡಿಕೊಂಡು ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ದೇಶದ ವಿರೋಧ ಪಕ್ಷಗಳ ಸರ್ಕಾರ ಇರುವ ಪ್ರತಿಯೊಂದು ರಾಜ್ಯಗಳಿಗೆ ತೆರಿಗೆ ಮತ್ತು ಅನುದಾನದ ಹಂಚಿಕೆಯಲ್ಲಿ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಜುಲೈ 30ರಂದು ಭಾರತದ ವೇಳಾಪಟ್ಟಿ ಈ ರೀತಿ ಇದೆ

ಆದರೆ ದುರಂತವೆಂದರೆ ನಿರ್ಮಲಾ ಸೀತಾರಾಮನ್ ಅವರು ಉಂಡ ಮನೆಗೆ ಎರಡು ಬಗೆದಿದ್ದಾರೆ. ತಮ್ಮನ್ನು ರಾಜ್ಯಸಭೆಗೆ ಆರಿಸಿ ಕಳಿಸಿದ ಕರ್ನಾಟಕಕ್ಕೆ ಅನ್ಯಾಯ ಮಾಡಲು ಹೇಸದ ನಿರ್ಮಲಾ ಸೀತಾರಾಮನ್ ಅವರಿಗೆ ರಾಜ್ಯದ ಹಣಕಾಸು ವ್ಯವಸ್ಥೆ ಬಗ್ಗೆ ಮಾತನಾಡುವ ಯಾವ ನೈತಿಕ ಅಧಿಕಾರ ಇದೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಖಾರವಾಗಿ ಪ್ರಶ್ನಿಸಿದ್ದಾರೆ.

Continue Reading

Latest

Bollywood Divorce Case: ವಿಚ್ಛೇದನದ ಬಳಿಕ ಪತ್ನಿಗೆ ದುಬಾರಿ ʼಜೀವನಾಂಶʼ ನೀಡಿದ ಬಾಲಿವುಡ್ ಸ್ಟಾರ್‌ಗಳಿವರು!

Bollywood Divorce Case: ಮದುವೆ ಎನ್ನುವುದು ಮಧುರವಾದ ಬಂಧ, ಸತಿ-ಪತಿಯರಿಬ್ಬರೂ ಸುಖವಾಗಿ ಬಾಳಿ ಬದುಕಿದರೆ ಜೀವನವೇ ಸ್ವರ್ಗ.ಆದರೆ ಈಗ ಮದುವೆಯಾಗಿ ಮೂರೇ ನಿಮಿಷಕ್ಕೆ ವಿಚ್ಛೇದನ ನೀಡುವವರು ಇದ್ದಾರೆ. ವಿಚ್ಛೇದನದ ಪಾರ್ಟಿಯನ್ನು ಆಚರಿಸುವವರು ಇದ್ದಾರೆ. ಇನ್ನು ಸಿನಿಮಾ ರಂಗದಲ್ಲಂತೂ ಇದನ್ನು ಕೇಳುವುದೇ ಬೇಡ. ಮದುವೆಯಾದ ಸಂಗಾತಿಯೊಂದಿಗೆ ದೀರ್ಘಕಾಲದವರೆಗೆ ಸಂಬಂಧದಲ್ಲಿದ್ದ ಸಿನಿಮಾ ತಾರೆಯರು ಬೆರಳೆಣಿಕೆಯಷ್ಟು ಮಾತ್ರ ಎನ್ನಬಹುದೇನೋ. ಬಾಲಿವುಡ್ ಸಿನಿಮಾ ತಾರೆಯರಲ್ಲಿ ಹಲವರು ಮದುವೆ ಆಗಿ ಸ್ವಲ್ಪ ದಿನದಲ್ಲೇ ವಿಚ್ಛೇದನ ಪಡೆದು ಪತ್ನಿಗೆ ಅತಿ ಹೆಚ್ಚು ಜೀವನಾಂಶ ನೀಡುವ ಮೂಲಕ ಮನೆಮಾತಾಗಿದ್ದಾರೆ. ಅಂತಹ ಬಾಲಿವುಡ್ ಸಿನಿಮಾ ತಾರೆಯರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

VISTARANEWS.COM


on

Bollywood Divorce Case
Koo

ಮುಂಬೈ: ಈಗಿನ ಕಾಲದಲ್ಲಿ ಲವ್, ಬ್ರೇಕ್ ಅಪ್, ಮದುವ , ವಿಚ್ಛೇದನ ಎಲ್ಲಾ ಕಾಮನ್ ಆಗಿ ಬಿಟ್ಟಿದೆ. ಲವ್ ಮಾಡಿ ಮದುವೆಯಾಗಿ ನಂತರ ಕೆಲವೇ ದಿನಗಳಲ್ಲಿ ವಿಚ್ಛೇದನ ನೀಡುವುದು ಸೆಲೆಬ್ರಿಟಿಗಳಲ್ಲಿ ಸಾಮಾನ್ಯ. ಆದರೆ ಈಗ ಸಾಮಾನ್ಯ ಜನರೂ ಇದೇ ನಿಯಮವನ್ನು ಅನುಸರಿಸುತ್ತಿದ್ದಾರೆ! ಮದುವೆಯಾದ ಸಂಗಾತಿಯೊಂದಿಗೆ ದೀರ್ಘಕಾಲದವರೆಗೆ ಸಂಬಂಧದಲ್ಲಿದ್ದ ಸಿನಿಮಾ ತಾರೆಯರು ಬೆರಳೆಣಿಕೆಯಷ್ಟು ಮಾತ್ರ! ಬಾಲಿವುಡ್ (Bollywood Divorce Case) ಸಿನಿಮಾ ತಾರೆಯರಲ್ಲಿ ಹಲವರು ಮದುವೆ ಆಗಿ ಸ್ವಲ್ಪ ದಿನದಲ್ಲೇ ವಿಚ್ಛೇದನ ಪಡೆದು ಪತ್ನಿಗೆ ಅತಿ ಹೆಚ್ಚು ಜೀವನಾಂಶ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಅಂತಹ ಬಾಲಿವುಡ್ ಸಿನಿಮಾ ತಾರೆಯರ ಬಗ್ಗೆ ಇಲ್ಲಿದೆ ಕುತೂಹಲಕರ ಮಾಹಿತಿ.

Bollywood Divorce Case
Bollywood Divorce Case

ಹೃತಿಕ್ ರೋಷನ್- ಸುಸ್ಸೇನ್ ಖಾನ್

ಬಾಲಿವುಡ್‌ನ ʼಗ್ರೀಕ್ ದೇವರುʼ ಎಂದೇ ಕರೆಯಲ್ಪಡುವ ಹೃತಿಕ್ ರೋಷನ್ 2000ರಲ್ಲಿ ಪ್ರಸಿದ್ಧ ಇಂಟಿರಿಯರ್ ಡಿಸೈನರ್ ಸುಸ್ಸೇನ್ ಖಾನ್ ಅವರನ್ನು ವಿವಾಹವಾದರು. ಹೊರಗಿನವರಿಗೆ ಸುಂದರವಾಗಿ ಕಾಣುತ್ತಿದ್ದ ಇವರ ವೈವಾಹಿಕ ಜೀವನವು 2014ರಲ್ಲಿ ಕೊನೆಗೊಂಡಿತು. ಇವರ ವಿಚ್ಛೇದನ ಒಪ್ಪಂದವು ಬಾಲಿವುಡ್ ಇತಿಹಾಸದಲ್ಲೇ ಅತ್ಯಂತ ದುಬಾರಿಯಾಗಿತ್ತು. ಯಾಕೆಂದರೆ ಹೃತಿಕ್ ರೋಷನ್‌ ಅವರು ಸುಸ್ಸೇನ್‌ಗೆ ಸುಮಾರು 380 ಕೋಟಿ ರೂ. ಜೀವನಾಂಶ ಪಾವತಿಸಿದ್ದಾರೆ ಎಂದು ವರದಿಯಾಗಿದೆ.

Bollywood Divorce Case
Bollywood Divorce Case

ಕರಿಷ್ಮಾ ಕಪೂರ್ ಮತ್ತು ಸಂಜಯ್ ಕಪೂರ್

ಕಪೂರ್ ಕುಟುಂಬದ ವಂಶಸ್ಥರಾದ ಕರಿಷ್ಮಾ ಕಪೂರ್ 2003ರಲ್ಲಿ ಉದ್ಯಮಿ ಸಂಜಯ್ ಕಪೂರ್ ಅವರನ್ನು ವಿವಾಹವಾದರು. ಇವರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾದ ಹಿನ್ನಲೆಯಲ್ಲಿ ಇವರು 2014ರಲ್ಲಿ ಬೇರೆಬೇರೆಯಾದರು. ಕರಿಷ್ಮಾ ಅವರಿಗೆ ಸಂಜಯ್ ಜೀವನಾಂಶವಾಗಿ 14 ಕೋಟಿ ರೂ. ಬಾಂಡ್, ಮುಂಬೈನಲ್ಲಿ ಐಷಾರಾಮಿ ಮನೆ ಮತ್ತು ಅವರ ಮಕ್ಕಳ ಜೀವನಕ್ಕಾಗಿ ಹಣವನ್ನು ಪಾವತಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

Bollywood Divorce Case
Bollywood Divorce Case

ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್

ನಟ ಸೈಫ್ ಅಲಿ ಖಾನ್ 1991ರಲ್ಲಿ ನಟಿ ಅಮೃತಾ ಸಿಂಗ್ ಅವರನ್ನು ವಿವಾಹವಾದರು. ಈ ದಂಪತಿಗೆ ಸಾರಾ ಮತ್ತು ಇಬ್ರಾಹಿಂ ಎಂಬ ಇಬ್ಬರು ಮಕ್ಕಳಿದ್ದರು. ಹದಿಮೂರು ವರ್ಷಗಳ ದಾಂಪತ್ಯದ ನಂತರ, ಅವರು 2004ರಲ್ಲಿ ವಿಚ್ಛೇದನ ಪಡೆದರು. ಸೈಫ್ ಅಮೃತಾಗೆ ಜೀವನಾಂಶವಾಗಿ 5 ಕೋಟಿ ರೂ.ಗಳನ್ನು ಪಾವತಿಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ ಹೆಚ್ಚುವರಿಯಾಗಿ, ತಮ್ಮ ಮಗ ಪ್ರೌಢಾವಸ್ಥೆಗೆ ತಲುಪುವವರೆಗೆ ತಿಂಗಳಿಗೆ 1 ಲಕ್ಷ ರೂ.ಗಳನ್ನು ಪಾವತಿಸಲು ಅವರು ಬದ್ಧರಾಗಿದ್ದಾರೆ.

Bollywood Divorce Case
Bollywood Divorce Case

ಅಮೀರ್ ಖಾನ್ ಮತ್ತು ರೀನಾ ದತ್ತಾ

ಅಮೀರ್ ಖಾನ್ 1986ರಲ್ಲಿ ರೀನಾ ದತ್ತಾ ಅವರನ್ನು ವಿವಾಹವಾದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. 2002ರಲ್ಲಿ ಅವರ ವಿವಾಹವು ಕೊನೆಗೊಂಡಿದೆ. ವಿಚ್ಛೇದನ ನಂತರ ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಲು ರೀನಾಗೆ ಸುಮಾರು 50 ಕೋಟಿ ರೂ.ಗಳನ್ನು ನೀಡಿರುವುದಾಗಿ ಅಮೀರ್ ಖಾನ್ ಖಚಿತಪಡಿಸಿದ್ದಾರೆ.

Bollywood Divorce Case
Bollywood Divorce Case

ಫರ್ಹಾನ್ ಅಖ್ತರ್ ಮತ್ತು ಅಧುನಾ ಭಬಾನಿ

ಬಹುಮುಖ ಪ್ರತಿಭೆಯ ನಟ, ನಿರ್ದೇಶಕ ಮತ್ತು ನಿರ್ಮಾಪಕ ಫರ್ಹಾನ್ ಅಖ್ತರ್ 2000ರಲ್ಲಿ ಸೆಲೆಬ್ರಿಟಿ ಹೇರ್ಸ್ಟೈಲಿಸ್ಟ್ ಅಧುನಾ ಭಬಾನಿ ಅವರನ್ನು ವಿವಾಹವಾದರು. ಹದಿನಾರು ವರ್ಷಗಳ ದಾಂಪತ್ಯದ ನಂತರ, ಅವರು 2016ರಲ್ಲಿ ವಿಚ್ಛೇದನ ಪಡೆದಿದ್ದಾರೆ. ಹಾಗೇ ಪತ್ನಿಗೆ ದುಬಾರಿ ಜೀವನಾಂಶದ ಜೊತೆಗೆ ಬಂಗಲೆ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳ ಖರ್ಚುವೆಚ್ಚದ ಜವಾಬ್ದಾರಿಯನ್ನು ತಾವೇ ತೆಗೆದುಕೊಂಡಿದ್ದಾರೆ.

Bollywood Divorce Case
Bollywood Divorce Case

ಸಂಜಯ್ ದತ್ ಮತ್ತು ರಿಯಾ ಪಿಳ್ಳೈ

ರೂಪದರ್ಶಿ ರಿಯಾ ಪಿಳ್ಳೈ ಅವರೊಂದಿಗಿನ ಸಂಜಯ್ ದತ್ ಅವರ ಎರಡನೇ ಮದುವೆಯಾದರು. 2008ರಲ್ಲಿ ಇವರ ವೈವಾಹಿಕ ಜೀವನ ವಿಚ್ಛೇದನದಲ್ಲಿ ಕೊನೆಗೊಂಡಿತು ಸಂಜಯ್ ರಿಯಾಗೆ ದುಬಾರಿ ಜೀವನಾಂಶವನ್ನು ಪಾವತಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಅದರಲ್ಲಿ ಮುಂಬೈನಲ್ಲಿ ಸಮುದ್ರದ ಕಡೆಗೆ ಮುಖವಿದ್ದ ಎರಡು ಐಷಾರಾಮಿ ಅಪಾರ್ಟ್ಮೆಂಟ್‍ಗಳು ಮತ್ತು ಒಂದು ಕಾರನ್ನು ನೀಡಲಾಗಿದೆ.

ಇದನ್ನೂ ಓದಿ: 20 ದೇಶಗಳಿಗೆ ಮಣ್ಣಿನ ಪಾತ್ರೆಗಳ ರಫ್ತು; ವರ್ಷಕ್ಕೆ 5 ಕೋಟಿ ರೂ. ಗಳಿಸುತ್ತಿದೆ ಈ ಕುಟುಂಬ!

Bollywood Divorce Case
Bollywood Divorce Case

ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರಾ

ನಟ-ನಿರ್ಮಾಪಕ ಮತ್ತು ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ ಅರ್ಬಾಜ್ ಖಾನ್ ನಟಿ ಮತ್ತು ರೂಪದರ್ಶಿ ಮಲೈಕಾ ಅರೋರಾ ಅವರನ್ನು 1998ರಲ್ಲಿ ವಿವಾಹವಾದರು. ಸ್ಟೈಲಿಶ್ ನೋಟಗಳಿಗೆ ಹೆಸರುವಾಸಿಯಾದ ದಂಪತಿಗಳು 2016ರಲ್ಲಿ ತಮ್ಮ ವಿಚ್ಛೇದನವನ್ನು ಘೋಷಿಸಿದರು ಮತ್ತು 2017ರಲ್ಲಿ ಅಧಿಕೃತವಾಗಿ ವಿಚ್ಛೇದನವನ್ನು ಪಡೆದುಕೊಂಡರು. ಈ ಒಪ್ಪಂದದಲ್ಲಿ ಅರ್ಬಾಜ್ ಮಲೈಕಾಗೆ ಸುಮಾರು 10-15 ಕೋಟಿ ರೂ.ಗಳ ದುಬಾರಿ ಜೀವನಾಂಶವನ್ನು ನೀಡಿದ್ದಾರೆ ಮತ್ತು ಅವರ ಮಗ ಅರ್ಹಾನ್ ಅವರ ಸಂಪೂರ್ಣ ಖರ್ಚುವೆಚ್ಚವನ್ನು ನೋಡಿಕೊಳ್ಳುವುದಾಗಿ ವರದಿಯಾಗಿದೆ.

Continue Reading

Latest

Fraud Case: 20ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾಗಿ ಚಿನ್ನಾಭರಣ ಎಗರಿಸಿದ್ದ ವಂಚಕ ಪೊಲೀಸ್‌ ಬಲೆಗೆ ಬಿದ್ದಿದ್ದು ಹೇಗೆ?

Fraud Case: ದೇಶಾದ್ಯಂತ 20ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾಗಿ ಅವರ ಬಳಿ ಇದ್ದ ಬೆಲೆಬಾಳುವ ವಸ್ತುಗಳನ್ನು ವಂಚಿಸಿದ ಆರೋಪದ ಮೇಲೆ 43 ವರ್ಷದ ವ್ಯಕ್ತಿಯನ್ನು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಮ್ಯಾರೇಜ್ ವೆಬ್‌ಸೈಟ್‌ಗಳಲ್ಲಿ ವಿಚ್ಛೇದಿತರು ಮತ್ತು ವಿಧವೆಯರನ್ನು ಗುರಿಯಾಗಿಸಿಕೊಂಡು, ಅವರನ್ನು ಮದುವೆಯಾಗಿ ಅವರ ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡುತ್ತಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.

VISTARANEWS.COM


on

Fraud Case
Koo


ಈ ಕಾಲದಲ್ಲಿ ಮೋಸಗಾರರ ಸಂಖ್ಯೆ ಹೆಚ್ಚುತ್ತಲೇ ಇದೆ. ಜನರು ತಮ್ಮ ದುರಾಸೆಗೆ ಜನರ ಜೀವ, ಜೀವನಕ್ಕೂ ಎಳ್ಳುಕಾಳಿನಷ್ಟು ಪ್ರಾಮುಖ್ಯತೆ ನೀಡುತ್ತಿಲ್ಲ. ಬೆಲೆಬಾಳುವ ವಸ್ತುಗಳಿಗಾಗಿ ಜನರ ಜೀವನವನ್ನು ಹಾಳುಮಾಡುತ್ತಿದ್ದಾರೆ. ಅಂತಹದೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಬೆಲೆಬಾಳುವ ವಸ್ತುಗಳನ್ನು ಕದಿಯಲು ಅನೇಕ ಮಹಿಳೆಯರನ್ನು ಮದುವೆಯಾಗಿ ಅವರಿಗೆ ಮೋಸ ಮಾಡಿ ಅವರ ಜೀವನವನ್ನು (Fraud Case) ಹಾಳು ಮಾಡಿದ್ದಾನೆ.

ದೇಶಾದ್ಯಂತ 20ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾಗಿ ಅವರ ಬಳಿ ಇದ್ದ ಬೆಲೆಬಾಳುವ ವಸ್ತುಗಳನ್ನು ವಂಚಿಸಿದ ಆರೋಪದ ಮೇಲೆ 43 ವರ್ಷದ ವ್ಯಕ್ತಿಯನ್ನು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯೊಬ್ಬಳು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಎಂಬಿವಿವಿ ಪೊಲೀಸರು ಜುಲೈ 23ರಂದು ಥಾಣೆ ಜಿಲ್ಲೆಯ ಕಲ್ಯಾಣ್‍ನಿಂದ ಆರೋಪಿ ಫಿರೋಜ್ ನಿಯಾಜ್ ಶೇಖ್‍ನನ್ನು ಬಂಧಿಸಿದ್ದಾರೆ. ಆರೋಪಿಯು ಮ್ಯಾರೇಜ್ ವೆಬ್‍ಸೈಟ್‌ನಲ್ಲಿ ಅವಳೊಂದಿಗೆ ಸ್ನೇಹ ಬೆಳೆಸಿ ಮದುವೆಯಾಗಿದ್ದ.

2023ರ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಶೇಖ್ ಮಹಿಳೆಯಿಂದ 6.5 ಲಕ್ಷ ರೂ.ಗಳ ನಗದು, ಲ್ಯಾಪ್‍ಟಾಪ್ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡಿದ್ದಾನೆ. ಹಾಗಾಗಿ ಮಹಿಳೆ ಪೊಲೀಸರಿಗೆ ಆತನ ಬಗ್ಗೆ ದೂರು ನೀಡಿದ್ದು, ಆಕೆಯ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ನಂತರ ಆರೋಪಿಯನ್ನು ಬಂದಿಸಿ, ಆತನಿಂದ ಲ್ಯಾಪ್‍ಟಾಪ್, ಮೊಬೈಲ್ ಪೋನ್‍ಗಳು, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‍ಗಳು, ಚೆಕ್‍ಬುಕ್‍ಗಳು ಮತ್ತು ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಪತ್ನಿಗೆ ಮಕ್ಕಳಾಗಿಲ್ಲ ಎಂದು ಮಾವನ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿದ!

ಶೇಖ್ ಮ್ಯಾರೇಜ್ ವೆಬ್‍ಸೈಟ್‌ಗಳಲ್ಲಿ ವಿಚ್ಛೇದಿತರು ಮತ್ತು ವಿಧವೆಯರನ್ನು ಗುರಿಯಾಗಿಸಿಕೊಂಡು, ಅವರನ್ನು ಮದುವೆಯಾಗಿ ಅವರ ಬೆಲೆಬಾಳುವ ವಸ್ತುಗಳನ್ನು ಎಗರಿಸುತ್ತಿದ್ದ ಎಂಬ ಸಂಗತಿ ತನಿಖೆಯಿಂದ ತಿಳಿದು ಬಂದಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿ ಮತ್ತು ಗುಜರಾತ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಆರೋಪಿ 2015ರಿಂದ 20ಕ್ಕೂ ಹೆಚ್ಚು ಮಹಿಳೆಯರಿಗೆ ಈ ರೀತಿಯಲ್ಲಿ ಮೋಸ ಮಾಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

Continue Reading

ಚಿನ್ನದ ದರ

Aditya Birla Group: ಟಾಟಾ, ಅಂಬಾನಿಯೊಂದಿಗೆ ಸ್ಪರ್ಧೆ: ಆಭರಣ ವ್ಯಾಪಾರಕ್ಕೆ ಬಿರ್ಲಾ ಎಂಟ್ರಿ!

ಆದಿತ್ಯ ಬಿರ್ಲಾ ಗ್ರೂಪ್ (Aditya Birla Group) ಶುಕ್ರವಾರ ಆಭರಣ ಬ್ರ್ಯಾಂಡ್ ‘ಇಂದ್ರಿಯ’ವನ್ನು ಬಿಡುಗಡೆ ಮಾಡಿದ್ದು, 6.7 ಲಕ್ಷ ಕೋಟಿ ರೂಪಾಯಿಗಳ ಭಾರತೀಯ ಆಭರಣ ಮಾರುಕಟ್ಟೆಗೆ ತನ್ನ ಪ್ರವೇಶವನ್ನು ಪ್ರಕಟಿಸಿದೆ. ಆದಿತ್ಯ ಬಿರ್ಲಾ ಗ್ರೂಪ್ ಮುಂದಿನ ಐದು ವರ್ಷಗಳಲ್ಲಿ ಆಭರಣ ವಿಭಾಗದಲ್ಲಿ ಅಗ್ರ ಮೂರು ಚಿಲ್ಲರೆ ವ್ಯಾಪಾರಿಗಳಲ್ಲಿ ಒಂದಾಗುವ ಗುರಿಯನ್ನು ಹೊಂದಿದೆ

VISTARANEWS.COM


on

By

Aditya Birla Group
Koo

ಟಾಟಾ (TATA Group), ಅಂಬಾನಿಯಂತಹ (ambani) ದೊಡ್ಡ ಉದ್ಯಮಗಳು ಆಭರಣ ವ್ಯಾಪಾರ (Jewellery Business) ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಈಗ ದೇಶದ ಮತ್ತೊಂದು ಪ್ರಮುಖ ವ್ಯಾಪಾರ ಸಂಸ್ಥೆಯಾದ ಆದಿತ್ಯ ಬಿರ್ಲಾ ಗ್ರೂಪ್ (Aditya Birla Group) ಬ್ರ್ಯಾಂಡೆಡ್ ಚಿಲ್ಲರೆ ಆಭರಣ ವ್ಯಾಪಾರಕ್ಕೆ ಇಳಿದಿದೆ. ಮುಂದಿನ ದಿನಗಳಲ್ಲಿ ಟಾಟಾ, ಅಂಬಾನಿಯೊಂದಿಗೆ ಆದಿತ್ಯ ಬಿರ್ಲಾ ಕೂಡ ಆಭರಣ ಮಾರುಕಟ್ಟೆಯಲ್ಲಿ ಸ್ಪರ್ಧೆ ನಡೆಸಲಿದ್ದಾರೆ.

ಭಾರತೀಯ ಆಭರಣ ಮಾರುಕಟ್ಟೆಯು 2030ರ ವೇಳೆಗೆ 11,00,000-13,00,000 ಕೋಟಿ ರೂ.ಗಳಷ್ಟು ಬೆಳೆಯುವ ನಿರೀಕ್ಷೆ ಇದೆ. ಪ್ರಸ್ತುತ ಭಾರತದಲ್ಲಿ 6,70,000 ಕೋಟಿ ರೂ. ಗಳಷ್ಟು ಆಭರಣಗಳ ಚಿಲ್ಲರೆ ವ್ಯಾಪಾರವು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಕಠಿಣ ಸ್ಪರ್ಧೆಗೆ ಸಾಕ್ಷಿಯಾಗಲಿದೆ. ಟಾಟಾ, ಅಂಬಾನಿ ಮತ್ತು ಬಿರ್ಲಾ ಗುಂಪು ಮುಂದಿನ ಐದು ವರ್ಷಗಳಲ್ಲಿ ಭಾರತದ ಪ್ರಮುಖ ಮೂರು ಆಭರಣ ಚಿಲ್ಲರೆ ವ್ಯಾಪಾರಿಗಳಲ್ಲಿ ಸ್ಥಾನವನ್ನು ಪಡೆದುಕೊಳ್ಳುವ ಗುರಿಯನ್ನು ಹೊಂದಿದೆ.

Aditya Birla Group
Aditya Birla Group


‘ಇಂದ್ರಿಯ’ ಬ್ರ್ಯಾಂಡ್ ಬಿಡುಗಡೆ

ಆದಿತ್ಯ ಬಿರ್ಲಾ ಗ್ರೂಪ್ ಶುಕ್ರವಾರ ಆಭರಣ ಬ್ರ್ಯಾಂಡ್ ‘ಇಂದ್ರಿಯ’ವನ್ನು ಬಿಡುಗಡೆ ಮಾಡಿದ್ದು, 6.7 ಲಕ್ಷ ಕೋಟಿ ರೂಪಾಯಿಗಳ ಭಾರತೀಯ ಆಭರಣ ಮಾರುಕಟ್ಟೆಗೆ ತನ್ನ ಪ್ರವೇಶವನ್ನು ಪ್ರಕಟಿಸಿದೆ.

ಆದಿತ್ಯ ಬಿರ್ಲಾ ಗ್ರೂಪ್ ಮುಂದಿನ ಐದು ವರ್ಷಗಳಲ್ಲಿ ಆಭರಣ ವಿಭಾಗದಲ್ಲಿ ಅಗ್ರ ಮೂರು ಚಿಲ್ಲರೆ ವ್ಯಾಪಾರಿಗಳಲ್ಲಿ ಒಂದಾಗುವ ಗುರಿಯನ್ನು ಹೊಂದಿದೆ ಮತ್ತು ಆಭರಣ ವ್ಯವಹಾರಕ್ಕಾಗಿ ಚಿಲ್ಲರೆ ಜಾಲವನ್ನು ಸ್ಥಾಪಿಸಲು 5,000 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ ಎಂದು ತಿಳಿಸಿದೆ.

ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಗುರುತಿಸಿರುವ ಆದಿತ್ಯಾ ಬಿರ್ಲಾ ಗ್ರೂಪ್ ತನ್ನ ಗ್ರಾಹಕ ಬಂಡವಾಳವನ್ನು ಬಲಪಡಿಸಲಿದೆ. ಅದರ ಬಲವಾದ ಬ್ರ್ಯಾಂಡ್ ಇಕ್ವಿಟಿ ಮತ್ತು ಆಳವಾದ ಮಾರುಕಟ್ಟೆ ಒಳನೋಟಗಳನ್ನು ನಿಯಂತ್ರಿಸುವುದಾಗಿ ತಿಳಿಸಿದೆ.

Aditya Birla Group
Aditya Birla Group


ಟಾಟಾ, ಅಂಬಾನಿಯೊಂದಿಗೆ ಸ್ಪರ್ಧೆ

ಬ್ರ್ಯಾಂಡೆಡ್ ವಿಭಾಗದಲ್ಲಿ ಆದಿತ್ಯ ಬಿರ್ಲಾ ಗ್ರೂಪ್ ಬ್ರ್ಯಾಂಡೆಡ್ ಆಭರಣ ಮಾರುಕಟ್ಟೆಯಲ್ಲಿ ಮಾರುಕಟ್ಟೆ ನಾಯಕ ಟಾಟಾ ಗ್ರೂಪ್‌ನ ತನಿಷ್ಕ್ ಮತ್ತು ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಒಡೆತನದ ರಿಲಯನ್ಸ್ ಜ್ಯುವೆಲ್ಸ್‌ನೊಂದಿಗೆ ಸ್ಪರ್ಧಿಸಲಿದೆ.

ಅಭಿವೃದ್ಧಿಯ ಕುರಿತು ಪ್ರತಿಕ್ರಿಯಿಸಿರುವ ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ್ ಮಂಗಳಂ ಬಿರ್ಲಾ ಅವರು ಭಾರತವು ಬಹುಶಃ ಜಾಗತಿಕವಾಗಿ ಅತ್ಯಂತ ಭರವಸೆಯ ಗ್ರಾಹಕ ಸಮೂಹವನ್ನು ಹೊಂದಿದೆ. ಈ ವರ್ಷ ನಾವು ಎರಡು ಪ್ರಮುಖ ಹೊಸ ಗ್ರಾಹಕ ಬ್ರ್ಯಾಂಡ್ ಗಳನ್ನು ಬಣ್ಣ ಮತ್ತು ಆಭರಣಗಳಲ್ಲಿ ಪ್ರಾರಂಭಿಸುವ ಮೂಲಕ ಭಾರತೀಯ ಗ್ರಾಹಕರ ಮೇಲೆ ನಮ್ಮ ಪ್ರಭಾವವನ್ನು ಬೀರಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: Money Guide: ಷೇರು V/S ಚಿನ್ನ: ಹೂಡಿಕೆಗೆ ಯಾವುದು ಬೆಸ್ಟ್‌? ಇಲ್ಲಿದೆ ತಜ್ಞರ ಸಲಹೆ

ಬಿರ್ಲಾ ಗ್ರೂಪ್ ಅನೌಪಚಾರಿಕದಿಂದ ಔಪಚಾರಿಕ ವಲಯಗಳಿಗೆ ನಡೆಯುತ್ತಿರುವ ಮೌಲ್ಯದ ವಲಸೆ, ಬಲವಾದ, ವಿಶ್ವಾಸಾರ್ಹ ಬ್ರ್ಯಾಂಡ್‌ಗಳಿಗೆ ಹೆಚ್ಚುತ್ತಿರುವ ಗ್ರಾಹಕರ ಆದ್ಯತೆ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ವಿವಾಹ ಮಾರುಕಟ್ಟೆಯಂತಹ ಅಂಶಗಳನ್ನು ಪರಿಗಣಿಸುತ್ತಿದೆ. 20 ವರ್ಷಗಳಿಂದ ಫ್ಯಾಷನ್ ಬದಲಾಗಿರುವುದು ಮಾತ್ರವಲ್ಲ ಸಾಕಷ್ಟು ವಿಸ್ತರಣೆಯಾಗಿದೆ. ಇಂದ್ರಿಯ ದೆಹಲಿ, ಇಂದೋರ್ ಮತ್ತು ಜೈಪುರ ಈ ಮೂರು ನಗರಗಳಲ್ಲಿ ಏಕಕಾಲದಲ್ಲಿ ನಾಲ್ಕು ಮಳಿಗೆಗಳನ್ನು ತೆರೆಯಲಿದೆ ಎಂದರು.

ಆದಿತ್ಯ ಬಿರ್ಲಾ ಗ್ರೂಪ್ ಆರು ತಿಂಗಳೊಳಗೆ 10 ನಗರಗಳಿಗೆ ವಿಸ್ತರಿಸುವ ಯೋಜನೆಯನ್ನು ಹೊಂದಿದೆ. ಬ್ರ್ಯಾಂಡ್ 5,000 ವಿಶೇಷ ವಿನ್ಯಾಸಗಳೊಂದಿಗೆ 15,000 ಕ್ಯುರೇಟೆಡ್ ಆಭರಣಗಳ ಸಂಗ್ರಹವನ್ನು ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.

Continue Reading
Advertisement
NEET-UG
ಪ್ರಮುಖ ಸುದ್ದಿ35 mins ago

NEET-UG : ಆಗಸ್ಟ್ 14ರಿಂದ ನೀಟ್-ಯುಜಿ ಕೌನ್ಸೆಲಿಂಗ್ ಆರಂಭ

ವೈರಲ್ ನ್ಯೂಸ್54 mins ago

Viral News: ಜಗಳವಾಡಿಕೊಂಡು ನಡುರಸ್ತೆಯಲ್ಲಿ ಬೆತ್ತಲೆ ಓಡಾಟ; ಜೋಡಿಯ ಹುಚ್ಚಾಟ ಮೊಬೈಲ್‌ನಲ್ಲಿ ಸೆರೆ; ಭಾರೀ ಆಕ್ರೋಶ ವ್ಯಕ್ತ

Paris Olympics 2024
ಕ್ರೀಡೆ1 hour ago

Paris Olympics 2024 : ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದ ಈಜುಪಟುವಿಗೆ ಕೊರೊನಾ ಸೋಂಕು!

Asia Cup cricket
ಪ್ರಮುಖ ಸುದ್ದಿ1 hour ago

Asia Cup Cricket : ಭಾರತದಲ್ಲಿ ನಡೆಯಲಿದೆ 2025ರ ಏಷ್ಯಾ ಕಪ್ ಕ್ರಿಕೆಟ್​, ಇಲ್ಲಿದೆ ಪೂರ್ಣ ವಿವರ

Viral video
ವೈರಲ್ ನ್ಯೂಸ್2 hours ago

Viral Video: ಕಾರಿನಲ್ಲೇ ಸೆಕ್ಸ್‌.. ಡಿವೈಡರ್‌ಗೆ ಡಿಕ್ಕಿ; ನಗ್ನ ಸ್ಥಿತಿಯಲ್ಲಿದ್ದ ಇಬ್ಬರು ಯುವಕರು, ಯುವತಿಯನ್ನು ಕಂಡು ಜನ ಶಾಕ್‌-ವಿಡಿಯೋ ಇದೆ

Rohan Bopanna
ಕ್ರೀಡೆ2 hours ago

Rohan Bopanna : ಅಂತಾರಾಷ್ಟ್ರೀಯ ಟೆನಿಸ್​ಗೆ ವಿದಾಯ ಘೋಷಿಸಿದ ಕನ್ನಡಿಗ ರೋಹನ್ ಬೋಪಣ್ಣ

CM Siddaramaiah demands to Pm for drop the Nirmala Sitharaman from the cabinet
ಕರ್ನಾಟಕ2 hours ago

CM Siddaramaiah: ಬಜೆಟ್ ಮೂಲಪಾಠವೇ ಗೊತ್ತಿಲ್ಲದ ನಿರ್ಮಲಾ ಸೀತಾರಾಮನ್; ಸಂಪುಟದಿಂದ ಕೈಬಿಡಲು ಸಿಎಂ ಒತ್ತಾಯ

Parliament session
ದೇಶ2 hours ago

Parliament Session: ಅಗ್ನಿಪಥ್‌ ಯೋಜನೆ ಬಗ್ಗೆ ರಾಹುಲ್‌ ನಿಗಿ ನಿಗಿ ಕೆಂಡ; ರಾಜನಾಥ್‌ ಸಿಂಗ್‌ ಸಖತ್‌ ಟಾಂಗ್‌

Minister Lakshmi Hebbalkar reviewed the flood situation and provided individual financial assistance to the victims
ಕರ್ನಾಟಕ2 hours ago

Lakshmi Hebbalkar: ಪ್ರವಾಹ ಸಂತ್ರಸ್ತರ ಕಣ್ಣೀರು ಒರೆಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Union Minister Pralhad Joshi statement on tomato price
ಕರ್ನಾಟಕ2 hours ago

Pralhad Joshi: ಟೊಮೆಟೊ ಬೆಲೆ ಸ್ಥಿರತೆಗೆ ಕ್ರಮ; ಕೆಜಿಗೆ 60 ರೂ. ನಿಗದಿ: ಪ್ರಲ್ಹಾದ್‌ ಜೋಶಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ7 hours ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ8 hours ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ11 hours ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ1 day ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ1 day ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ1 day ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ2 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ2 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ2 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ2 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

ಟ್ರೆಂಡಿಂಗ್‌