Wayanad Landslide: "ಧಾರ್ಮಿಕ ಸಂಘಟನೆಗಳ ಒತ್ತಡದಿಂದ ವಯನಾಡಿನಲ್ಲಿ ಭೂಮಿ ಒತ್ತುವರಿ ತೆರವು ಸಾಧ್ಯವಾಗ್ತಿಲ್ಲ"- ತೇಜಸ್ವಿ ಸೂರ್ಯ ಕಿಡಿ - Vistara News

ದೇಶ

Wayanad Landslide: “ಧಾರ್ಮಿಕ ಸಂಘಟನೆಗಳ ಒತ್ತಡದಿಂದ ವಯನಾಡಿನಲ್ಲಿ ಭೂಮಿ ಒತ್ತುವರಿ ತೆರವು ಸಾಧ್ಯವಾಗ್ತಿಲ್ಲ”- ತೇಜಸ್ವಿ ಸೂರ್ಯ ಕಿಡಿ

wayanad Landslide: ರಾಹುಲ್​ ಗಾಂಧಿ ಅವರು ವಯನಾಡ್​ ಸಂಸದರಾಗಿದ್ದಾಗಿನಿಂದ ಕಳೆದ 1800 ದಿನಗಳಲ್ಲಿ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಒಮ್ಮೆಯೂ ತಮ್ಮ ಕ್ಷೇತ್ರದಲ್ಲಿನ ಭೂಕುಸಿತ ಮತ್ತು ಪ್ರವಾಹದ ಬಗ್ಗೆ ಎಂದಿಗೂ ಪ್ರಸ್ತಾಪಿಸಲಿಲ್ಲ. 2020ರಲ್ಲಿ ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ವಯನಾಡಿನಲ್ಲಿ ಭೂಕುಸಿತ ಪೀಡಿತ ಪ್ರದೇಶಗಳಿಂದ 4000 ಕುಟುಂಬಗಳನ್ನು ಸ್ಥಳಾಂತರಿಸಲು ಸಲಹೆ ನೀಡಿತು ಎಂದು ತೇಜಸ್ವಿ ಸೂರ್ಯ ಹೇಳಿದರು.

VISTARANEWS.COM


on

wayanad Landslide
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಕೇರಳದ ವಯನಾಡಿನಲ್ಲಿ ನಡೆದ ಭೂಕುಸಿತ(Wayanad Landslide) ದುರಂತ ವಿಚಾರವಾಗಿ ಸಂಸತ್‌ನಲ್ಲಿ ಕೋಲಾಹಲವೇ ಎದ್ದಿದೆ. ಈ ವಿಚಾರವನ್ನು ಪ್ರಸ್ತಾಪಿಸಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ(Tejasvi Surya) ವಿಪಕ್ಷ ನಾಯಕ ರಾಹುಲ್‌ ಗಾಂಧಿ(Rahul Gandhi) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಯನಾಡಿನಲ್ಲಿ ಅಕ್ರಮ ಒತ್ತುವಾರಿಯಿಂದಾಗಿಯೇ ಇಂತಹ ದುರಂತಗಳು ಪದೇ ಪದೆ ನಡೆಯುತ್ತಿದೆ. ಧಾರ್ಮಿಕ ಸಂಘಟನೆಗಳ ಒತ್ತಡದಿಂದಾಗಿ ಒತ್ತುವರಿ ತೆರವು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು. ಈ ವೇಳೆ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ರಾಹುಲ್​ ಗಾಂಧಿ ಅವರು ವಯನಾಡ್​ ಸಂಸದರಾಗಿದ್ದಾಗಿನಿಂದ ಕಳೆದ 1800 ದಿನಗಳಲ್ಲಿ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಒಮ್ಮೆಯೂ ತಮ್ಮ ಕ್ಷೇತ್ರದಲ್ಲಿನ ಭೂಕುಸಿತ ಮತ್ತು ಪ್ರವಾಹದ ಬಗ್ಗೆ ಎಂದಿಗೂ ಪ್ರಸ್ತಾಪಿಸಲಿಲ್ಲ. 2020ರಲ್ಲಿ ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ವಯನಾಡಿನಲ್ಲಿ ಭೂಕುಸಿತ ಪೀಡಿತ ಪ್ರದೇಶಗಳಿಂದ 4000 ಕುಟುಂಬಗಳನ್ನು ಸ್ಥಳಾಂತರಿಸಲು ಸಲಹೆ ನೀಡಿತು. ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮತ್ತು ವಯನಾಡನ್ನು ಪ್ರತಿನಿಧಿಸುವ ಸಂಸದರು ಇಲ್ಲಿಯವರೆಗೆ ಈ ವಿಷಯವನ್ನು ಪ್ರಸ್ತಾಪಿಸಲಿಲ್ಲ.” ಎಂದು ಆರೋಪಿಸಿದರು.

ಧಾರ್ಮಿಕ ಸಂಘಟನೆಗಳಿಂದ ಒತ್ತಡ

ಕೇರಳ ವಿಪತ್ತು ನಿರ್ವಹಣಾ ಮಂಡಳಿಯ ಶಿಫಾರಸುಗಳ ಹೊರತಾಗಿಯೂ ವಯನಾಡಿನಲ್ಲಿ ಅಕ್ರಮ ಒತ್ತುವರಿಯನ್ನು ತೆಗೆದುಹಾಕಲಾಗಿಲ್ಲ. ಕೇರಳದ ಅರಣ್ಯ ಸಚಿವರು ಕೂಡ, ವಿವಿಧ ಧಾರ್ಮಿಕ ಸಂಘಟನೆಗಳ ಒತ್ತಡದಿಂದಾಗಿ ಅಕ್ರಮ ಒತ್ತುವರಿಯನ್ನು ತೆಗೆದುಹಾಕಲು ಅವರಿಗೆ ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ವಿಧಾನಸಭೆಯಲ್ಲಿ ಒಪ್ಪಿಕೊಳ್ಳುತ್ತಾರೆ. ರಾಹುಲ್​ ಗಾಂಧಿ ಅವರು ವಯನಾಡ್​ ಸಂಸದರಾಗಿದ್ದ ಅವಧಿಯಲ್ಲಿ ಭೂಕುಸಿತ ಮತ್ತು ಪ್ರವಾಹಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ವಿಫಲರಾಗಿದ್ದಾರೆ ಎಂದು ಟೀಕಿಸಿದರು.

ತೇಜಸ್ವಿ ಸೂರ್ಯ ಆರೋಪಕ್ಕೆ ಕಾಂಗ್ರೆಸ್‌ ಕಿಡಿ

ಇನ್ನು ತೇಜಸ್ವಿ ಸೂರ್ಯ ಆರೋಪಕ್ಕೆ ಕಾಂಗ್ರೆಸ್‌ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ವಯಾನಾಡು ದುರಂತ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಸಂಸದ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಯನಾಡ್ ಘಟನೆಯ ಬಗ್ಗೆ ಮಾತನಾಡಿದ ರೀತಿ ತಪ್ಪು. ಆಡಳಿತ ಪಕ್ಷದ ಸದಸ್ಯರ ಮಾತು ಬೇಸರ ತಂದಿದೆ ಎಂದರು. ಇದು ಇಡೀ ದೇಶ ಮತ್ತು ಕೇರಳ ಕಂಡ ಅತ್ಯಂತ ದುರಂತ ಘಟನೆಯಾಗಿದ್ದು, ತೇಜಸ್ವಿ ಸೂರ್ಯ ಅವರನ್ನು ವಜಾಗೊಳಿಸಬೇಕು ಎಂದು ಗೃಹ ಸಚಿವ ಅಮಿತ್ ಶಾ ಅವರನ್ನು ಆಗ್ರಹಿಸಿದ್ದಾರೆ.

ಇದನ್ನೂ ಓದಿ:Parliament Session: RSS ಬಗ್ಗೆ ದೋಷಾರೋಪಣೆ ಸಲ್ಲದು; ಜಗದೀಪ್ ಧನ್‌ಕರ್ ಹೇಳಿಕೆ- ಪ್ರತಿಪಕ್ಷಗಳು ವಾಕ್‌ಔಟ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌; ಶೀಘ್ರದಲ್ಲೇ ತುಟ್ಟಿ ಭತ್ಯೆಯಲ್ಲಿ ಶೇ.3ರಷ್ಟು ಏರಿಕೆ

7th Pay Commission: ಪ್ರಸ್ತುತ, ತುಟ್ಟಿ ಭತ್ಯೆಯು ಮೂಲ ವೇತನದ ಶೇಕಡಾ 50 ರಷ್ಟಿದ್ದು, 7ನೇ ವೇತನ ಆಯೋಗದ ಪ್ರಕಾರ ಮೂಲವೇತನದೊಂದಿಗೆ ಡಿಎ ವಿಲೀನಗೊಳ್ಳಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಕುರಿತು ಕೆಲವು ಅಧಿಕೃತ ಮೂಲಗಳು ಪ್ರತಿಕ್ರಿಯಿಸಿದ್ದು, ಶೇ. 50 ಕ್ಕಿಂತ ಹೆಚ್ಚಿನ ತುಟ್ಟಿಭತ್ಯೆಯ ಸಂದರ್ಭದಲ್ಲಿ ಡಿಎಯನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸಲಾಗುವುದಿಲ್ಲ.

VISTARANEWS.COM


on

7th Pay Commission
Koo

ನವದೆಹಲಿ: ಕೇಂದ್ರ ಸರ್ಕಾರ(Central Government) ತನ್ನ ನೌಕರರಿಗೆ ಗುಡ್‌ನ್ಯೂಸ್‌ ನೀಡಲಿದ್ದು, ಶೀಘ್ರದಲ್ಲೇ ಕೇಂದ್ರ ಸರ್ಕಾರಿ ನೌಕರ(Government Employees)ರ ತುಟ್ಟಿಭತ್ಯೆಯಲ್ಲಿ ಶೇ. 3ರಷ್ಟು ಏರಿಕೆ ಮಾಡಲಿದೆ(7th Pay Commission). ಜುಲೈ 1, 2024 ರಿಂದ ಜಾರಿಗೆ ಬರುವಂತೆ ಸರ್ಕಾರ ಈ ಆದೇಶ ಹೊರಡಿಸಲಿದ್ದು, ಸೆಪ್ಟೆಂಬರ್‌ನಲ್ಲಿ ಇದರ ಲಾಭ ಪಡೆಯಲಿದ್ದಾರೆ. ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಶೇಕಡಾ 3-4 ರಷ್ಟು ಡಿಎ ಹೆಚ್ಚಳವನ್ನು ಘೋಷಿಸುವ ಸಾಧ್ಯತೆಯಿದೆ. 3 ರಷ್ಟು ಹೆಚ್ಚಳವು ಈಗಾಗಲೇ ದೃಢೀಕರಿಸಲ್ಪಟ್ಟಿದೆ ಎನ್ನಲಾಗಿದೆ.

ಪ್ರಸ್ತುತ, ತುಟ್ಟಿ ಭತ್ಯೆಯು ಮೂಲ ವೇತನದ ಶೇಕಡಾ 50 ರಷ್ಟಿದ್ದು, 7ನೇ ವೇತನ ಆಯೋಗದ ಪ್ರಕಾರ ಮೂಲವೇತನದೊಂದಿಗೆ ಡಿಎ ವಿಲೀನಗೊಳ್ಳಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಕುರಿತು ಕೆಲವು ಅಧಿಕೃತ ಮೂಲಗಳು ಪ್ರತಿಕ್ರಿಯಿಸಿದ್ದು, ಶೇ. 50 ಕ್ಕಿಂತ ಹೆಚ್ಚಿನ ತುಟ್ಟಿಭತ್ಯೆಯ ಸಂದರ್ಭದಲ್ಲಿ ಡಿಎಯನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸಲಾಗುವುದಿಲ್ಲ. 8ನೇ ವೇತನ ಆಯೋಗ ರಚನೆಯಾಗುವವರೆಗೂ ಅದು ಹಾಗೆಯೇ ಮುಂದುವರಿಯಲಿದೆ. ವಿಲೀನದ ಬದಲಿಗೆ, DA 50% ದಾಟಿದರೆ, HRA ಸೇರಿದಂತೆ ಭತ್ಯೆಗಳನ್ನು ಹೆಚ್ಚಿಸುವ ನಿಬಂಧನೆಗಳಿವೆ, ಅದು ಈಗಾಗಲೇ ಆಗಿದೆ ಎನ್ನಲಾಗಿದೆ.

ಮಾರ್ಚ್ 2024 ರಲ್ಲಿ ಹಿಂದಿನ ಹೆಚ್ಚಳದಲ್ಲಿ, ಕೇಂದ್ರ ಸರ್ಕಾರವು ತುಟ್ಟಿಭತ್ಯೆಯನ್ನು ಮೂಲ ವೇತನದ ಶೇಕಡಾ 4 ರಿಂದ 50 ರಷ್ಟು ಹೆಚ್ಚಿಸಿತ್ತು. ಸರ್ಕಾರವು ಪಿಂಚಣಿದಾರರ ತುಟ್ಟಿಭತ್ಯೆ (ಡಿಆರ್) ಅನ್ನು ಶೇ 4 ರಷ್ಟು ಹೆಚ್ಚಿಸಿದೆ. ಸರ್ಕಾರಿ ನೌಕರರಿಗೆ ಡಿಎ ನೀಡಿದರೆ, ಪಿಂಚಣಿದಾರರಿಗೆ ಡಿಆರ್ ನೀಡಲಾಗುತ್ತದೆ. ಜನವರಿ ಮತ್ತು ಜುಲೈನಿಂದ ಜಾರಿಗೆ ಬರುವಂತೆ ವರ್ಷಕ್ಕೆ ಎರಡು ಬಾರಿ ಡಿಎ ಮತ್ತು ಡಿಆರ್ ಅನ್ನು ಹೆಚ್ಚಿಸಲಾಗುತ್ತದೆ.

DA ಹೆಚ್ಚಳವನ್ನು ಸರ್ಕಾರ ಹೇಗೆ ಲೆಕ್ಕಾಚಾರ ಮಾಡುತ್ತದೆ?

ಅಖಿಲ ಭಾರತ CPI-IW ನ 12 ಮಾಸಿಕ ಸರಾಸರಿಯಲ್ಲಿನ ಶೇಕಡಾವಾರು ಹೆಚ್ಚಳದ ಆಧಾರದ ಮೇಲೆ DA ಮತ್ತು DR ಹೆಚ್ಚಳವನ್ನು ನಿರ್ಧರಿಸಲಾಗುತ್ತದೆ. ಕೇಂದ್ರ ಸರ್ಕಾರವು ಪ್ರತಿ ವರ್ಷ ಜನವರಿ 1 ಮತ್ತು ಜುಲೈ 1 ರಂದು ಭತ್ಯೆಗಳನ್ನು ಪರಿಷ್ಕರಿಸಿದರೂ, ನಿರ್ಧಾರವನ್ನು ಸಾಮಾನ್ಯವಾಗಿ ಮಾರ್ಚ್ ಮತ್ತು ಸೆಪ್ಟೆಂಬರ್/ಅಕ್ಟೋಬರ್‌ನಲ್ಲಿ ಪ್ರಕಟಿಸಲಾಗುತ್ತದೆ.

2006 ರಲ್ಲಿ, ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ಮತ್ತು ಡಿಆರ್ ಅನ್ನು ಲೆಕ್ಕಾಚಾರ ಮಾಡಲು ಸೂತ್ರವನ್ನು ಪರಿಷ್ಕರಿಸಿತು. ತುಟ್ಟಿಭತ್ಯೆ ಶೇಕಡಾವಾರು = ((ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ ಸರಾಸರಿ (ಮೂಲ ವರ್ಷ 2001=100) ಕಳೆದ 12 ತಿಂಗಳುಗಳಲ್ಲಿ -115.76)/115.76)x100.

ಕೇಂದ್ರ ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ: ತುಟ್ಟಿಭತ್ಯೆ ಶೇಕಡಾವಾರು = ((ಅಖಿಲ-ಭಾರತೀಯ ಗ್ರಾಹಕ ಬೆಲೆ ಸೂಚ್ಯಂಕದ ಸರಾಸರಿ (ಮೂಲ ವರ್ಷ 2001=100) ಕಳೆದ 3 ತಿಂಗಳು -126.33)/126.33)x100.

ಇತ್ತೀಚೆಗಷ್ಟೇ 8ನೇ ವೇತನ ಆಯೋಗ(8th Pay Commission) ಜಾರಿಗೊಳಿಸಲು ಎರಡು ಪ್ರಸ್ತಾವನೆಗಳು ಬಂದಿದ್ದು, ಅವುಗಳನ್ನು ಪರಿಗಣಿಸಿಲ್ಲ ಎಂದು ಕೇಂದ್ರ ಸರ್ಕಾರವು ಸಂಸತ್‌(Parliament Session)ನಲ್ಲಿ ಹೇಳಿದೆ.

ಇದನ್ನೂ ಓದಿ: 8th Pay Commission: ಭಾರಿ ವೇತನ ಹೆಚ್ಚಳ ನಿರೀಕ್ಷೆಯಲ್ಲಿ ಕೇಂದ್ರ ಸರ್ಕಾರಿ ನೌಕರರು

Continue Reading

ದೇಶ

Wayanad Landslide: ವಯನಾಡಿನ ದುರಂತ ಕಥೆ: ಬದುಕಿಗಾಗಿ ಸೌದಿಗೆ ತೆರಳಿದವ ಉಳಿದ; ಕುಟುಂಬವಿಡೀ ಮಣ್ಣು ಪಾಲಾಯ್ತು

Wayanad Landslide: ವಯನಾಡಿನಲ್ಲಿ ಮಣ್ಣು ಜರಿದು ಇಡೀ ಊರುಗಳನ್ನೇ ನಾಮಾವಶೇಷ ಮಾಡಿದ್ದು, ಮೃತಪಟ್ಟವರ ಸಂಖ್ಯೆ 270 ದಾಟಿದೆ. ಒಬ್ಬೊಬ್ಬರದ್ದು ಒಂದೊಂದು ನೋವಿನ ಕಥೆ. ಅದರಲ್ಲಿಯೂ ಕುಟುಂಬಸ್ಥರನ್ನೆಲ್ಲ ಕಳೆದುಕೊಂಡ ಜಿಷ್ಣು ಎನ್ನುವ 26 ವರ್ಷದ ಯುವಕನ ಸ್ಥಿತಿ ಕಣ್ಣಂಚಿನಲ್ಲಿ ನೀರು ತರಿಸುತ್ತದೆ. ಮನೆಯ ಜತೆಗೆ ಪಾಲಕರು, ಒಟಹುಟ್ಟಿದವರು, ಅಜ್ಜಿಯನ್ನು ಪ್ರವಾಹ ಕೊಚ್ಚಿಕೊಂಡು ಹೋಗಿದ್ದು, ಸದ್ಯ ಸಹೋದರ ಮಾತ್ರ ಉಳಿದಿದ್ದಾನೆ.

VISTARANEWS.COM


on

Wayanad Landslide
Koo

ತಿರುವನಂತಪುರಂ: ರಾಜ್ಯದಲ್ಲಿ ಸಂಭವಿಸಿದ ಅತೀ ಭೀಕರ ಭೂಕುಸಿತಕ್ಕೆ ಕೇರಳ ತತ್ತರಿಸಿದ ಹೋಗಿದೆ. ವಯನಾಡಿನಲ್ಲಿ ಮಣ್ಣು ಜರಿದು ಇಡೀ ಊರುಗಳನ್ನೇ ನಾಮಾವಶೇಷ ಮಾಡಿದ್ದು, ಮೃತಪಟ್ಟವರ ಸಂಖ್ಯೆ 270 ದಾಟಿದೆ (Wayanad Landslide). 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಅವಶೇಷಗಳಡಿ ಹುಡುಕಾಟ ಮುಂದುವರಿದಿದೆ. ತಮ್ಮವರನ್ನು ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿದೆ. ಒಬ್ಬೊಬ್ಬರದ್ದು ಒಂದೊಂದು ನೋವಿನ ಕಥೆ. ಅದರಲ್ಲಿಯೂ ಕುಟುಂಬಸ್ಥರನ್ನೆಲ್ಲ ಕಳೆದುಕೊಂಡ ಜಿಷ್ಣು ಎನ್ನುವ 26 ವರ್ಷದ ಯುವಕನ ಸ್ಥಿತಿ ಕಣ್ಣಂಚಿನಲ್ಲಿ ನೀರು ತರಿಸುತ್ತದೆ. ಮನೆಯ ಜತೆಗೆ ಪಾಲಕರು, ಒಟಹುಟ್ಟಿದವರು, ಅಜ್ಜಿಯನ್ನು ಪ್ರವಾಹ ಕೊಚ್ಚಿಕೊಂಡು ಹೋಗಿದ್ದು, ಸದ್ಯ ಸಹೋದರ ಮಾತ್ರ ಉಳಿದಿದ್ದಾನೆ.

ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದ ಜಿಷ್ಣು ಸದ್ಯ ಊರಿಗೆ ಮರಳಿದ್ದಾರೆ. ಅವರ ಮನೆ ಇದ್ದ ಜಾಗದಲ್ಲಿ ಈಗ ಉಳಿದಿರುವುದು ಸ್ಮಶಾನ ಮೌನ ಮತ್ತು ಕೆಸರು ಮಾತ್ರ. ಹೌದು, ಮನೆಯ ಜತೆಗೇ ಮನೆಯವರನ್ನೂ ಭೀಕರ ಪ್ರವಾಹ ಹೊತ್ತುಕೊಂಡು ಹೋಗಿದೆ. ಜಿಷ್ಣು ಅವರ ಮನೆಯವರು ಆಶ್ರಯ ಪಡೆದಿದ್ದ ಸಂಬಂಧಿಕರ ಮನೆಯೂ ಕೊಚ್ಚಿಕೊಂಡು ಹೋಗಿದೆ. ಈ ಸತ್ಯವನ್ನು ಜಿಷ್ಣುಗೆ ಇನ್ನೂ ಅರಗಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ಸದ್ಯ ಅವರ ಪಾಲಿಗೆ ಕಿರಿಯ ಸಹೋದರ ಮಾತ್ರ ಉಳಿದಿದ್ದಾನೆ.

ಕಣ್ಣೀರ ಕಥೆ

ಅತೀ ಹೆಚ್ಚು ದುರಂತ ಬಾಧಿತ ಮುಂಡಕೈ ನಿವಾಸಿ ಜಿಷ್ಣು ರಂಜನ್‌ ಸೌದಿ ಅರೇಬಿಯಾದ ಖಾಸಗಿ ಕಂಪೆನಿಯೊಂದರ ಉದ್ಯೋಗಿ. ಮುಂಡಕೈಯ ಪುಂಜಿರಿವಟ್ಟಂನಲ್ಲಿರುವ ಅವರ ಮನೆಯಲ್ಲಿ ತಂದೆ ರಾಜನ್‌, ತಾಯಿ ಮರುತೈ, ಒಡಹುಟ್ಟಿದವರಾದ ಜಿನು (27), ಜಿಬಿನ್‌ (18), ಆ್ಯಂಡ್ರಿಯಾ (16), ಜಿನು ಅವರ ಪತ್ನಿ ಪ್ರಿಯಾಂಕಾ (25) ಮತ್ತು ಅಜ್ಜಿ ನಾಗಮ್ಮ ವಾಸವಾಗಿದ್ದರು. ಇದೀಗ ಅವರೆಲ್ಲ ಮೃತಪಟ್ಟಿದ್ದಾರೆ. ಶಿಜು (25) ಒಬ್ಬನೇ ದುರಂತದಿಂದ ಪಾರಾಗಿದ್ದಾನೆ. ಮುಂಡಕೈ ಭಾಗದಲ್ಲಿ ಜುಲೈ 28ರಂದು ಸಣ್ಣ ಮಟ್ಟಿನ ಭೂಕುಸಿತ ಉಂಟಾಗಿತ್ತು. ಇದನ್ನು ಅರಿತ ಸೌದಿ ಅರೇಬಿಯಾದಲ್ಲಿದ್ದ ಜಿಷ್ಣು ಗಾಬರಿಯಿಂದ ಮನೆಯವರಿಗೆ ಕರೆ ಮಾಡಿದ್ದರು. ಆದರೆ ಸಂಪರ್ಕ ಸಿಕ್ಕಿರಲಿಲ್ಲ.

ಇನ್ನಷ್ಟು ಗಾಬರಿಗೊಂಡ ಅವರು ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಲೇ ಇದ್ದರು. ಜುಲೈ 30ರ ಸಂಜೆ ತನಕವೂ ಮನೆಯವರ ಸಂಪರ್ಕ ಸಾಧ್ಯವಾಗಿರಲಿಲ್ಲ. ಆಗಲೇ ಅವರಿಗೆ ಮನೆ ಕುಸಿದು ಬಿದ್ದಿರುವ ಬಗ್ಗೆ ತಿಳಿದು ಬಂದಿತ್ತು. ಜತೆಗೆ ಮನೆಯವರು ಸಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದರು ಎನ್ನುವ ವಿಚಾರ ತಿಳಿದು ಸ್ವಲ್ಪ ಸಮಾಧಾನಪಟ್ಟುಕೊಂಡಿದ್ದರು. ಆದರೆ ಭೂಕುಸಿತದಿಂದ ಎರಡೂ ಮನೆಯವರು ಕೊಚ್ಚಿಕೊಂಡು ಹೋಗಿದ್ದರು.

ಇದ್ಯಾವುದರ ಅರಿವು ಇರದ ಜಿಷ್ಣು ನಿರಂತರವಾಗಿ ಮನೆಗೆ ಕರೆ ಮಾಡಲು ಯತ್ನಿಸುತ್ತಲೇ ಇದ್ದರು. ಕೊನೆಗೆ ಪರಿಚಯಸ್ಥರಿಗೆ ಕರೆ ಮಾಡಿದರು. ಆದರೆ ಅವರಿಂದಲೂ ನಿಖರ ಮಾಹಿತಿ ದೊರೆಯಲಿಲ್ಲ. ಜುಲೈ 30ರಂದು ಸಂಜೆ ವೇಳೆಗೆ ತಂದೆ ರಾಜನ್‌ ಅವರ ಮೃತದೇಹ ದೊರೆತಿರುವ ಸುದ್ದಿ ಜಿಷ್ಣುಗೆ ಬರಸಿಡಿಲಂತೆ ಅಪ್ಪಳಿಸಿತು. ಜತೆಗೆ ಜಿನು ಮತ್ತು ತಾಯಿಯ ಅವರ ಮೃತದೇಹವೂ ಪತ್ತೆಯಾಗಿದ್ದರ ಬಗ್ಗೆ ಮಾಹಿತಿ ಲಭಿಸಿತು. ಕೊನೆಗೆ ಶಿಜು ಮಾತ್ರ ಬದುಕುಳಿದಿರುವ ವಿಚಾರ ತಿಳಿದ್ದಿದ್ದು ಕೂಡಲೇ ಊರಿಗೆ ಮರಳಿದ್ದಾರೆ. ಎರಡು ವರ್ಷಗಳ ಹಿಂದೆ ಭೂಕುಸಿತದಿಂದ ಈ ಕುಟುಂಬ ಕೂದಲೆಳೆ ಅಂತರದಿಂದ ಅಪಾಯದಿಂದ ಪಾರಾಗಿತ್ತು.

ಇದನ್ನೂ ಓದಿ: Wayanad Landslide: ಕುರ್ಚಿಯಲ್ಲಿ ಕುಳಿತ.. ಪರಸ್ಪರ ಅಪ್ಪಿಕೊಂಡ ಸ್ಥಿತಿಯಲ್ಲಿ ಶವಗಳು ಪತ್ತೆ; ಇದು ಸ್ಮಶಾನ ಸದೃಶ್ಯ ವಯನಾಡಿನ ಭೀಕರ ದೃಶ್ಯ

Continue Reading

ದೇಶ

Wayanad Landslide: ಕುರ್ಚಿಯಲ್ಲಿ ಕುಳಿತ.. ಪರಸ್ಪರ ಅಪ್ಪಿಕೊಂಡ ಸ್ಥಿತಿಯಲ್ಲಿ ಶವಗಳು ಪತ್ತೆ; ಇದು ಸ್ಮಶಾನ ಸದೃಶ್ಯ ವಯನಾಡಿನ ಭೀಕರ ದೃಶ್ಯ

Wayanad Landslide: ಮುಂಡಕ್ಕೈ ಎಂಬಲ್ಲಿನ ಮನೆಯೊಂದರಲ್ಲಿ ಕುರ್ಚಿಗಳ ಮೇಲೆ ಕುಳಿತಿದ್ದ ಸ್ಥಿತಿಯಲ್ಲಿ ಮೂರು ಶವಗಳು ಪತ್ತೆಯಾಗಿವೆ. ಇನ್ನು ಚೂರಲ್ಮಲಾದಲ್ಲಿ ಕುಸಿದು ಬಿದ್ದಿದ್ದ ಮನೆಯ ಅವಶೇಷದಡಿಯಿಂದ ಪುಟ್ಟ ಕಂದಮ್ಮನ ಶವವನ್ನು ಹೊರತೆಗೆಯಲಾಗಿದೆ.

VISTARANEWS.COM


on

Wayanad Landslide
Koo

ವಯನಾಡ್‌: ದೇವರನಾಡು ಕೇರಳ(Kerala)ದ ವಯನಾಡ್‌(Wayanad Landslide) ಅಕ್ಷರಶಃ ಸ್ಮಶಾನವಾಗಿ ಬದಲಾಗಿದೆ. ಎಲ್ಲೆಂದರಲ್ಲಿ ಮಣ್ಣು, ನೀರು, ಬೃಹತ್ ಬಂಡೆಗಳು, ಬುಡಮೇಲಾದ ಮರಗಳು, ಕಟ್ಟಡಗಳ ಅವಶೇಷಗಳೇ ಕಣ್ಣು ಹಾಯಿಸಿದಷ್ಟು ದೂರಕ್ಕೆ ಕಾಣುತ್ತಿವೆ. ಈ ನಡುವೆ ಅವಶೇಷದಡಿಯಲ್ಲಿ ಸಿಲುಕಿದ ಜೀವಗಳು ಮತ್ತು ಮೃತದೇಹಗಳ ಪತ್ತೆ ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ(Rescue Operation) ನಡೆಯುತ್ತಿದೆ.ರಕ್ಷಣಾ ಕಾರ್ಯಾಚರಣೆ ವೇಳೆ ಸಿಕ್ಕಿರುವ ಮೃತದೇಹಗಳು ಎಂಥವರ ಕಣ್ಣಲ್ಲೂ ಕಣ್ಣೀರು ಬರಿಸುವಂತಿದೆ.

ರಕ್ಷಣಾ ಕಾರ್ಯಕರ್ತರು ನೆಲದಡಿಯಲ್ಲಿರುವ ಮನೆಗಳನ್ನು ನೆಲಸಮಗೊಳಿಸಿ ಹುಡುಕಾಟ ನಡೆಸುತ್ತಿದ್ದಾರೆ. ಪ್ರತಿ ಮನೆಯಲ್ಲೂ ಹೃದಯ ವಿದ್ರಾವಕ ದೃಶ್ಯಗಳು ಕಂಡುಬರುತ್ತಿವೆ ಎಂದು ರಕ್ಷಣಾ ಕಾರ್ಯಚರಣೆಯಲ್ಲಿ ಭಾಗಿಯಾಗಿದ ವ್ಯಕ್ತಿಯೊಬ್ಬ ಹೇಳಿದ್ದಾರೆ. ಮುಂಡಕ್ಕೈ ಎಂಬಲ್ಲಿನ ಮನೆಯೊಂದರಲ್ಲಿ ಕುರ್ಚಿಗಳ ಮೇಲೆ ಕುಳಿತಿದ್ದ ಸ್ಥಿತಿಯಲ್ಲಿ ಮೂರು ಶವಗಳು ಪತ್ತೆಯಾಗಿವೆ. ಇನ್ನು ಚೂರಲ್ಮಲಾದಲ್ಲಿ ಕುಸಿದು ಬಿದ್ದಿದ್ದ ಮನೆಯ ಅವಶೇಷದಡಿಯಿಂದ ಪುಟ್ಟ ಕಂದಮ್ಮನ ಶವವನ್ನು ಹೊರತೆಗೆಯಲಾಗಿದೆ.

ಮತ್ತೊಂದು ಮನೆಯಲ್ಲಿ ಮಕ್ಕಳು ಸೇರಿದಂತೆ ಐದಾರು ಜನ ಒಟ್ಟಿಗೆ ಅಪ್ಪಿಕೊಂಡ ಸ್ಥಿತಿಯಲ್ಲಿ ಮೃತದೇಹಗಳನ್ನು ಪತ್ತೆಯಾಗಿದ್ದು, ಆ ದೃಶ್ಯವನ್ನು ಅವರ ಇಡೀ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ಹೇಳುತ್ತಾ ಕಣ್ಣೀರಿಟ್ಟಿದ್ದಾರೆ. ಈ ಪ್ರದೇಶದಲ್ಲಿ ಇನ್ನೂ ಜನರು ಜೀವಂತವಾಗಿದ್ದಾರೆ ಎಂದು ನಂಬಲಾಗಿದೆ. ಅವರನ್ನು ಆದಷ್ಟು ಬೇಗ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸೇನೆ ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ. ಕಟ್ಟಡದ ಅವಶೇಷಗಳ ನಡುವೆ ಶೋಧ ನಡೆಸಲಾಗುತ್ತಿದೆ. ಮೃತರ ಸಂಖ್ಯೆ ಕ್ಷಣ ಕ್ಷಣಕ್ಕೆ ಏರಿಕೆಯಾಗುತ್ತಿದೆ.

ಮಳೆ ಮತ್ತು ಪ್ರವಾಹದ ಶಕ್ತಿ ಕಡಿಮೆಯಾಗಿದ್ದು, ರಕ್ಷಣಾ ಕಾರ್ಯಕರ್ತರಿಗೆ ನೆಮ್ಮದಿ ನೀಡಿದೆ. ಆದರೆ, ಈ ಪ್ರದೇಶದಲ್ಲಿ ಕೆಸರು, ಜವುಗು ತುಂಬಿರುವುದರಿಂದ ಎಲ್ಲಿಯೂ ನಿಲ್ಲಲು ಸಾಧ್ಯವಾಗುತ್ತಿಲ್ಲ. ಇದರಿಂದ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡಚಣೆಯಾಗಿದೆ. ದೊಡ್ಡ ಬಂಡೆಗಳನ್ನು ಸ್ಥಳಾಂತರಿಸಲು ಹೆಚ್ಚಿನ ಯಂತ್ರೋಪಕರಣಗಳು ಸಿಗುವುದಿಲ್ಲ ಎಂಬುದು ಸಮಸ್ಯೆಯಾಗಿದೆ.

ಸುಮಾರು 400 ಮನೆಗಳನ್ನು ಹೊಂದಿದ್ದ ಮುಂಡಕ್ಕೈನಲ್ಲಿ ಈಗ ಕೇವಲ ಮೂವತ್ತು ಮನೆಗಳು ಉಳಿದಿವೆ. ಎಷ್ಟು ಮಂದಿ ಜೀವಂತವಾಗಿದ್ದಾರೆ ಅಥವಾ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇಲ್ಲ. ಕೆಲವರು ತಮ್ಮ ಕಾಣೆಯಾದ ಪ್ರೀತಿಪಾತ್ರರನ್ನು ಹುಡುಕಲು ಆಸ್ಪತ್ರೆಗಳನ್ನು, ದುರಂತದ ಪ್ರದೇಶಗಳಲ್ಲಿ ಅಲೆದಾಡುತ್ತಿದ್ದಾರೆ.

ಹಲವರು ಇಲ್ಲಿಯವರೆಗೆ ದುಡಿದಿದ್ದನ್ನೆಲ್ಲ ಕಳೆದುಕೊಂಡು ಪ್ರಸ್ತುತ ನಿರಾಶ್ರಿತ ಶಿಬಿರಗಳಲ್ಲಿದ್ದಾರೆ. ಅದರೊಂದಿಗೆ ಅವರು ತಮ್ಮ ಕುಟುಂಬ ಮತ್ತು ಆತ್ಮೀಯರನ್ನು ಕಳೆದುಕೊಂಡಿದ್ದಾರೆ. ಬದಲಾಯಿಸಲು ಅವರ ಬಳಿ ಬಟ್ಟೆಯೂ ಇಲ್ಲ. ಅವರ ಮುಂದಿನ ಜೀವನ ಹೇಗೆ ಎಂಬುದೇ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಇನ್ನು ರಕ್ಷಣಾ ಸ್ಥಳಗಳ ಒಂದೊಂದು ದೃಶ್ಯ ಮನ ಕಲುಕುವಂತಿದೆ.

ಇದನ್ನೂ ಓದಿ: Wayanad Landslide: “ಧಾರ್ಮಿಕ ಸಂಘಟನೆಗಳ ಒತ್ತಡದಿಂದ ವಯನಾಡಿನಲ್ಲಿ ಭೂಮಿ ಒತ್ತುವರಿ ತೆರವು ಸಾಧ್ಯವಾಗ್ತಿಲ್ಲ”- ತೇಜಸ್ವಿ ಸೂರ್ಯ ಕಿಡಿ

Continue Reading

ಪ್ರಮುಖ ಸುದ್ದಿ

Supreme Court Sc St Quota: ಎಸ್‌ಸಿ ಎಸ್‌ಟಿ ಒಳಮೀಸಲು; ಸುಪ್ರೀಂ ಕೋರ್ಟ್‌ ತೀರ್ಪಿನಿಂದಾಗಿ ಕೇಂದ್ರದಿಂದ ರಾಜ್ಯ ಸರ್ಕಾರದ ಅಂಗಳಕ್ಕೆ ಬಂದ ಚೆಂಡು

Supreme Court Sc St Quota: ಪರಿಶಿಷ್ಟ ಜಾತಿ-ಪಂಗಡಗಳ ಮೀಸಲಾತಿಯಡಿ, ರಾಜ್ಯ ಸರ್ಕಾರಗಳಿಗೆ ಒಳಮೀಸಲು ನೀಡುವ ಅಧಿಕಾರವಿದೆಯಾ ಎಂಬ ಸೂಕ್ಷ್ಮ ಸಂಗತಿಯ ವಿಚಾರಣೆಯನ್ನು ನಡೆಸಿದ ಸರ್ವೋಚ್ಚ ನ್ಯಾಯಾಲಯ ಇದೀಗ ರಾಜ್ಯ ಸರ್ಕಾರಗಳಿಗೆ ಈ ಹೊಣೆ ಹೊರಿಸಿ ತೀರ್ಪಿತ್ತಿದೆ.

VISTARANEWS.COM


on

Supreme Court SC ST Quota
Koo

ಬೆಂಗಳೂರು: ಎಸ್‌ಸಿ- ಎಸ್‌ಟಿ ಸಮುದಾಯಗಳ ಒಳಮೀಸಲು (Supreme Court SC ST Quota) ಪ್ರಸ್ತಾಪವನ್ನು ಕೇಂದ್ರ ಸರ್ಕಾರದ ಹೆಗಲಿಗೆ ವರ್ಗಾಯಿಸಿ ಪಾರಾಗಲು ಮುಂದಾಗಿದ್ದ ರಾಜ್ಯ ಸರ್ಕಾರಕ್ಕೆ ಇದೀಗ ಸುಪ್ರೀಂ ಕೋರ್ಟ್‌ ತೀರ್ಪು ಶಾಕ್‌ ನೀಡಿದೆ. ಒಳಮೀಸಲು (SC ST Reservation Sub-Classification) ನೀಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್‌ (Supreme Court) ನೀಡಿರುವ ತೀರ್ಪಿನಿಂದಾಗಿ, ಚೆಂಡು ಮತ್ತೆ ರಾಜ್ಯ ಸರ್ಕಾರದ ಅಂಗಳದಲ್ಲಿ ಬಂದು ಬಿದ್ದಿದೆ.

ಪರಿಶಿಷ್ಟ ಜಾತಿ-ಪಂಗಡಗಳ ಮೀಸಲಾತಿಯಡಿ, ರಾಜ್ಯ ಸರ್ಕಾರಗಳಿಗೆ ಒಳಮೀಸಲು ನೀಡುವ ಅಧಿಕಾರವಿದೆಯಾ ಎಂಬ ಸೂಕ್ಷ್ಮ ಸಂಗತಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯದ 7 ಸದಸ್ಯರ ಪೀಠ ಕಳೆದ ವರ್ಷ ಆರಂಭಿಸಿತ್ತು.. ಕರ್ನಾಟಕವೂ ಸೇರಿದಂತೆ ಇಡೀ ದೇಶದ ಮೇಲೆ ಪರಿಣಾಮ ಬೀರುವ ಅರ್ಜಿ ವಿಚಾರಣೆಯನ್ನು, ಸರ್ವೋಚ್ಚ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿದ್ದ ಪೀಠ ಕೈಗೆತ್ತಿಕೊಂಡಿತ್ತು. ಇದೀಗ ರಾಜ್ಯ ಸರ್ಕಾರಗಳಿಗೆ ಈ ಹೊಣೆ ಹೊರಿಸಿ ಕೋರ್ಟ್‌ ತೀರ್ಪಿತ್ತಿದೆ.

2020ರಲ್ಲಿ ಪಂಚಸದಸ್ಯರ ಪೀಠ, ಪ್ರಕರಣವನ್ನು ಸಪ್ತಸದಸ್ಯರ ಬೃಹತ್ ಪೀಠಕ್ಕೆ ವರ್ಗಾಯಿಸಲು ಶಿಫಾರಸು ಮಾಡಿತ್ತು. ಪಂಜಾಬ್ ಸರ್ಕಾರ, ತನ್ನ ಪರಿಶಿಷ್ಟ ಜಾತಿ-ಪಂಗಡಗಳ 2006ರ ಕಾಯ್ದೆಯಡಿ, ವಾಲ್ಮೀಕಿಗಳು ಮತ್ತು ಮಝಾಬಿ ಸಿಖ್ಖರಿಗೆ ಶೇ.50 ಒಳಮೀಸಲು ನೀಡಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆ ಶುರುವಾಗಿತ್ತು. ಇದರ ವಿರುದ್ಧ ಹಲವರು ಪಂಜಾಬ್ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಉಚ್ಚ ನ್ಯಾಯಾಲಯ ಈ ಮೀಸಲಾತಿಯನ್ನು ರದ್ದುಗೊಳಿಸಿತ್ತು. ಇದು ಅಸಾಂವಿಧಾನಿಕ, ಸಂವಿಧಾನದ 14ನೇ ವಿಧಿಯನ್ನು (ಸಮಾನತೆಯ ಹಕ್ಕು) ಉಲ್ಲಂಘಿಸುತ್ತದೆ. ಮಾತ್ರವಲ್ಲ 2004ರಲ್ಲಿ ಇ.ವಿ.ಚಿನ್ನಯ್ಯ ಮತ್ತು ಆಂಧ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ, ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪಿಗೆ ವಿರುದ್ಧವಾಗಿದೆ ಎಂದು ಹೇಳಿತ್ತು.

ಇದನ್ನು ಪ್ರಶ್ನಿಸಿ ಪಂಜಾಬ್ ಸರ್ಕಾರ, 2011ರಂದು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಐವರು ಸದಸ್ಯರ ಸರ್ವೋಚ್ಚ ಪೀಠ, 7 ಸದಸ್ಯರ ವಿಸ್ತೃತ ಪೀಠಕ್ಕೆ ಅರ್ಜಿಯನ್ನು ವರ್ಗಾಯಿಸಿತ್ತು. ಕೋರ್ಟ್‌, ಪಂಜಾಬ್‌ ಸರಕಾರದ ಪರ ತೀರ್ಪು ನೀಡಿದೆ. ಅಂದರೆ, ಉಪವರ್ಗೀಕರಣ ನೀಡುವ ಅಧಿಕಾರ ರಾಜ್ಯ ಸರಕಾರಗಳಿಗೆ ಇದೆ ಎಂದರ್ಥವಾಗುತ್ತದೆ. ಇದೂ ಕರ್ನಾಟಕಕ್ಕೂ ಅನ್ವಯವಾಗುತ್ತದೆ. ಹಾಗೆಯೇ ಕೇಂದ್ರ ಸರಕಾರಕ್ಕೂ ಅನ್ವಯವಾಗಲಿದೆ.

ಕೇಂದ್ರಕ್ಕೆ ಶಿಫಾರಸು ಮಾಡಿದ ರಾಜ್ಯ ಸರಕಾರ

ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳಿಗೆ ಒಳ ಮೀಸಲಾತಿಯನ್ನು ಕಲ್ಪಿಸಲು ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ಮುಂದಾಗಿತ್ತು. ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಲು ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಬೇಕೆಂದು ಪರಿಶಿಷ್ಟ ಎಡಗೈ ಸಮುದಾಯದ ಸಚಿವರು, ಮುಖಂಡರು ಪಟ್ಟು ಹಿಡಿದಿದ್ದರು.

ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಒಳ ಮೀಸಲಾತಿ ಜಾರಿ ಮಾಡಲಾಗುವುದು ಎಂದು ಪಕ್ಷದ ನಾಯಕರು ಭರವಸೆ ನೀಡಿದ್ದರು. ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ, ಒಳಮೀಸಲು ಬಗ್ಗೆ ಒತ್ತಡ ಹೆಚ್ಚಾಗಿತ್ತು. ʼಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಗಳಿಗೆ ಯಾವುದೇ ಅಧಿಕಾರ ಇಲ್ಲ. ಕೇಂದ್ರ ಸರ್ಕಾರವು ಸಂವಿಧಾನದ 341ನೇ ವಿಧಿಗೆ ಹೊಸತಾಗಿ ಖಂಡ (3) ಸೇರಿಸಿದರೆ ಮಾತ್ರ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸಲು ಅವಕಾಶವಿದೆ. ಒಳ ಮೀಸಲಾತಿ ಕೇಂದ್ರದ ಅಧಿಕಾರ ವ್ಯಾಪ್ತಿಯಲ್ಲಿದೆʼ ಎಂದು ರಾಜ್ಯ ಸರ್ಕಾರ ಈ ಹಿಂದೆ ಪ್ರತಿಪಾದಿಸಿತ್ತು. ಇದೀಗ ಆ ವಾದ ಬಿದ್ದುಹೋಗಲಿದೆ.

ಮಾಧುಸ್ವಾಮಿ ಸಮಿತಿ

ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಒಳ ಮೀಸಲಾತಿ ಕುರಿತು ಪರಿಶೀಲಿಸಿ ಶಿಫಾರಸು ಮಾಡಲು ಅಂದಿನ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚಿಸಿತ್ತು. ಒಳ ಮೀಸಲಾತಿ ಕಲ್ಪಿಸುವ ಪ್ರಕ್ರಿಯೆಯು ಪರಿಶೀಲನೆಯಲ್ಲಿರುವಾಗಲೇ 2022ರಲ್ಲಿ ‘ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಕಾಯ್ದೆ ರೂಪಿಸಿದ ಸರ್ಕಾರ, ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ. 15ರಿಂದ ಶೇ. 17ಕ್ಕೆ ಹೆಚ್ಚಿಸಿತು.

ಸಂಪುಟ ಉಪ ಸಮಿತಿ 2011ರ ಜನಗಣತಿಯಂತೆ ಒಟ್ಟು 101 ಪರಿಶಿಷ್ಟ ಜಾತಿಗಳ ಜಾತಿವಾರು ಜನಸಂಖ್ಯೆಯನ್ನು ಪರಿಗಣಿಸಿ ನಾಲ್ಕು ಗುಂಪುಗಳಾಗಿ ವರ್ಗೀಕರಿಸಿ, ಒಳ ಮೀಸಲಾತಿ ಅನುಷ್ಠಾನ ಮಾಡುವಂತೆ ಸಚಿವ ಸಂಪುಟ ಸಭೆಗೆ ಶಿಫಾರಸು ಮಾಡಿತ್ತು. ಗುಂಪುಗಳ ವರ್ಗೀಕರಣ, ಶೇಕಡವಾರು ಮೀಸಲಾತಿ ನಿಗದಿಪಡಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಂಪುಟ ಸಭೆ ನಿರ್ಣಯಿಸಿತ್ತು. 2023ರ ಮಾರ್ಚ್ 28 ಮತ್ತು 31ರಂದು ಈ ಪ್ರಸ್ತಾವ ಕೇಂದ್ರಕ್ಕೆ ಸಲ್ಲಿಸಲಾಗಿತ್ತು.

ಇದನ್ನೂ ಓದಿ: Supreme Court SC ST Quota: ಪರಿಶಿಷ್ಟ ಜಾತಿ- ಪಂಗಡ ಒಳಮೀಸಲಾತಿ ಕಾನೂನುಬದ್ಧ: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

Continue Reading
Advertisement
7th Pay Commission
ದೇಶ2 mins ago

7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌; ಶೀಘ್ರದಲ್ಲೇ ತುಟ್ಟಿ ಭತ್ಯೆಯಲ್ಲಿ ಶೇ.3ರಷ್ಟು ಏರಿಕೆ

Israel Attack
ವಿದೇಶ2 mins ago

Israel Attack: ಟೂತ್‌ಪೇಸ್ಟ್‌ನಲ್ಲಿ ವಿಷ ಬೆರೆಸಿದ ಇಸ್ರೇಲ್‌ ಗುಪ್ತದಳ! ಪ್ಯಾಲೆಸ್ತೀನ್‌ ಕಮಾಂಡರ್‌ ನರಳಿ ನರಳಿ ಸತ್ತ! ಸೇಡಿನ interesting story

muda scam cm siddaramaiah
ಪ್ರಮುಖ ಸುದ್ದಿ8 mins ago

MUDA Scam: ಸಿಎಂಗೆ ಕಳಿಸಿದ ರಾಜ್ಯಪಾಲರ ನೋಟೀಸ್‌ ತಿರಸ್ಕರಿಸಿದ ಕ್ಯಾಬಿನೆಟ್‌, ಕಾನೂನು ಹೋರಾಟಕ್ಕೆ ನಿರ್ಣಯ

Wayanad Landslide
ದೇಶ31 mins ago

Wayanad Landslide: ವಯನಾಡಿನ ದುರಂತ ಕಥೆ: ಬದುಕಿಗಾಗಿ ಸೌದಿಗೆ ತೆರಳಿದವ ಉಳಿದ; ಕುಟುಂಬವಿಡೀ ಮಣ್ಣು ಪಾಲಾಯ್ತು

Viral Video
Latest36 mins ago

Viral Video: ಮೆಟ್ರೊದೊಳಗೆ ಚಪ್ಪಲಿಯಿಂದ ಹೊಡೆದಾಡಿಕೊಂಡ ಪ್ರಯಾಣಿಕರು! ವಿಡಿಯೊ ನೋಡಿ

Sexual Abuse
Latest48 mins ago

Sexual Abuse: ಟೋಸ್ಟ್‌ ನೀಡುವುದಾಗಿ ಕರೆದು ಬಾಲಕಿ ಮೇಲೆ ಅತ್ಯಾಚಾರ; ಮೋಯಿದ್‌ ಖಾನ್‌, ರಾಜ ಖಾನ್‌ ಬಂಧನ

Wayanad Landslide
ದೇಶ51 mins ago

Wayanad Landslide: ಕುರ್ಚಿಯಲ್ಲಿ ಕುಳಿತ.. ಪರಸ್ಪರ ಅಪ್ಪಿಕೊಂಡ ಸ್ಥಿತಿಯಲ್ಲಿ ಶವಗಳು ಪತ್ತೆ; ಇದು ಸ್ಮಶಾನ ಸದೃಶ್ಯ ವಯನಾಡಿನ ಭೀಕರ ದೃಶ್ಯ

Paris Olympics:
ಕ್ರೀಡೆ57 mins ago

Paris Olympics: ಕಂಚಿನ ಪದಕ ಗೆದ್ದ ರೈಲ್ವೆ ಟಿಕೆಟ್ ಕಲೆಕ್ಟರ್ ಸ್ವಪ್ನಿಲ್‌ ಕುಸಾಲೆ

Condom Cause Cancer
Latest58 mins ago

Condom Cause Cancer: ಕಾಂಡೋಮ್, ಲೂಬ್ರಿಕೆಂಟ್‍ ಬಳಸಿದರೂ ಕ್ಯಾನ್ಸರ್‌! ಅಧ್ಯಯನ ವರದಿಯಲ್ಲಿ ಆಘಾತಕಾರಿ ಸಂಗತಿ

Supreme Court SC ST Quota
ಪ್ರಮುಖ ಸುದ್ದಿ1 hour ago

Supreme Court Sc St Quota: ಎಸ್‌ಸಿ ಎಸ್‌ಟಿ ಒಳಮೀಸಲು; ಸುಪ್ರೀಂ ಕೋರ್ಟ್‌ ತೀರ್ಪಿನಿಂದಾಗಿ ಕೇಂದ್ರದಿಂದ ರಾಜ್ಯ ಸರ್ಕಾರದ ಅಂಗಳಕ್ಕೆ ಬಂದ ಚೆಂಡು

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 hour ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 hours ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 hours ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ2 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ2 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ3 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ3 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ3 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ4 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌