Wayanad Landslide: "ಧಾರ್ಮಿಕ ಸಂಘಟನೆಗಳ ಒತ್ತಡದಿಂದ ವಯನಾಡಿನಲ್ಲಿ ಭೂಮಿ ಒತ್ತುವರಿ ತೆರವು ಸಾಧ್ಯವಾಗ್ತಿಲ್ಲ"- ತೇಜಸ್ವಿ ಸೂರ್ಯ ಕಿಡಿ - Vistara News

ದೇಶ

Wayanad Landslide: “ಧಾರ್ಮಿಕ ಸಂಘಟನೆಗಳ ಒತ್ತಡದಿಂದ ವಯನಾಡಿನಲ್ಲಿ ಭೂಮಿ ಒತ್ತುವರಿ ತೆರವು ಸಾಧ್ಯವಾಗ್ತಿಲ್ಲ”- ತೇಜಸ್ವಿ ಸೂರ್ಯ ಕಿಡಿ

wayanad Landslide: ರಾಹುಲ್​ ಗಾಂಧಿ ಅವರು ವಯನಾಡ್​ ಸಂಸದರಾಗಿದ್ದಾಗಿನಿಂದ ಕಳೆದ 1800 ದಿನಗಳಲ್ಲಿ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಒಮ್ಮೆಯೂ ತಮ್ಮ ಕ್ಷೇತ್ರದಲ್ಲಿನ ಭೂಕುಸಿತ ಮತ್ತು ಪ್ರವಾಹದ ಬಗ್ಗೆ ಎಂದಿಗೂ ಪ್ರಸ್ತಾಪಿಸಲಿಲ್ಲ. 2020ರಲ್ಲಿ ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ವಯನಾಡಿನಲ್ಲಿ ಭೂಕುಸಿತ ಪೀಡಿತ ಪ್ರದೇಶಗಳಿಂದ 4000 ಕುಟುಂಬಗಳನ್ನು ಸ್ಥಳಾಂತರಿಸಲು ಸಲಹೆ ನೀಡಿತು ಎಂದು ತೇಜಸ್ವಿ ಸೂರ್ಯ ಹೇಳಿದರು.

VISTARANEWS.COM


on

wayanad Landslide
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಕೇರಳದ ವಯನಾಡಿನಲ್ಲಿ ನಡೆದ ಭೂಕುಸಿತ(Wayanad Landslide) ದುರಂತ ವಿಚಾರವಾಗಿ ಸಂಸತ್‌ನಲ್ಲಿ ಕೋಲಾಹಲವೇ ಎದ್ದಿದೆ. ಈ ವಿಚಾರವನ್ನು ಪ್ರಸ್ತಾಪಿಸಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ(Tejasvi Surya) ವಿಪಕ್ಷ ನಾಯಕ ರಾಹುಲ್‌ ಗಾಂಧಿ(Rahul Gandhi) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಯನಾಡಿನಲ್ಲಿ ಅಕ್ರಮ ಒತ್ತುವಾರಿಯಿಂದಾಗಿಯೇ ಇಂತಹ ದುರಂತಗಳು ಪದೇ ಪದೆ ನಡೆಯುತ್ತಿದೆ. ಧಾರ್ಮಿಕ ಸಂಘಟನೆಗಳ ಒತ್ತಡದಿಂದಾಗಿ ಒತ್ತುವರಿ ತೆರವು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು. ಈ ವೇಳೆ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ರಾಹುಲ್​ ಗಾಂಧಿ ಅವರು ವಯನಾಡ್​ ಸಂಸದರಾಗಿದ್ದಾಗಿನಿಂದ ಕಳೆದ 1800 ದಿನಗಳಲ್ಲಿ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಒಮ್ಮೆಯೂ ತಮ್ಮ ಕ್ಷೇತ್ರದಲ್ಲಿನ ಭೂಕುಸಿತ ಮತ್ತು ಪ್ರವಾಹದ ಬಗ್ಗೆ ಎಂದಿಗೂ ಪ್ರಸ್ತಾಪಿಸಲಿಲ್ಲ. 2020ರಲ್ಲಿ ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ವಯನಾಡಿನಲ್ಲಿ ಭೂಕುಸಿತ ಪೀಡಿತ ಪ್ರದೇಶಗಳಿಂದ 4000 ಕುಟುಂಬಗಳನ್ನು ಸ್ಥಳಾಂತರಿಸಲು ಸಲಹೆ ನೀಡಿತು. ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮತ್ತು ವಯನಾಡನ್ನು ಪ್ರತಿನಿಧಿಸುವ ಸಂಸದರು ಇಲ್ಲಿಯವರೆಗೆ ಈ ವಿಷಯವನ್ನು ಪ್ರಸ್ತಾಪಿಸಲಿಲ್ಲ.” ಎಂದು ಆರೋಪಿಸಿದರು.

ಧಾರ್ಮಿಕ ಸಂಘಟನೆಗಳಿಂದ ಒತ್ತಡ

ಕೇರಳ ವಿಪತ್ತು ನಿರ್ವಹಣಾ ಮಂಡಳಿಯ ಶಿಫಾರಸುಗಳ ಹೊರತಾಗಿಯೂ ವಯನಾಡಿನಲ್ಲಿ ಅಕ್ರಮ ಒತ್ತುವರಿಯನ್ನು ತೆಗೆದುಹಾಕಲಾಗಿಲ್ಲ. ಕೇರಳದ ಅರಣ್ಯ ಸಚಿವರು ಕೂಡ, ವಿವಿಧ ಧಾರ್ಮಿಕ ಸಂಘಟನೆಗಳ ಒತ್ತಡದಿಂದಾಗಿ ಅಕ್ರಮ ಒತ್ತುವರಿಯನ್ನು ತೆಗೆದುಹಾಕಲು ಅವರಿಗೆ ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ವಿಧಾನಸಭೆಯಲ್ಲಿ ಒಪ್ಪಿಕೊಳ್ಳುತ್ತಾರೆ. ರಾಹುಲ್​ ಗಾಂಧಿ ಅವರು ವಯನಾಡ್​ ಸಂಸದರಾಗಿದ್ದ ಅವಧಿಯಲ್ಲಿ ಭೂಕುಸಿತ ಮತ್ತು ಪ್ರವಾಹಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ವಿಫಲರಾಗಿದ್ದಾರೆ ಎಂದು ಟೀಕಿಸಿದರು.

ತೇಜಸ್ವಿ ಸೂರ್ಯ ಆರೋಪಕ್ಕೆ ಕಾಂಗ್ರೆಸ್‌ ಕಿಡಿ

ಇನ್ನು ತೇಜಸ್ವಿ ಸೂರ್ಯ ಆರೋಪಕ್ಕೆ ಕಾಂಗ್ರೆಸ್‌ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ವಯಾನಾಡು ದುರಂತ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಸಂಸದ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಯನಾಡ್ ಘಟನೆಯ ಬಗ್ಗೆ ಮಾತನಾಡಿದ ರೀತಿ ತಪ್ಪು. ಆಡಳಿತ ಪಕ್ಷದ ಸದಸ್ಯರ ಮಾತು ಬೇಸರ ತಂದಿದೆ ಎಂದರು. ಇದು ಇಡೀ ದೇಶ ಮತ್ತು ಕೇರಳ ಕಂಡ ಅತ್ಯಂತ ದುರಂತ ಘಟನೆಯಾಗಿದ್ದು, ತೇಜಸ್ವಿ ಸೂರ್ಯ ಅವರನ್ನು ವಜಾಗೊಳಿಸಬೇಕು ಎಂದು ಗೃಹ ಸಚಿವ ಅಮಿತ್ ಶಾ ಅವರನ್ನು ಆಗ್ರಹಿಸಿದ್ದಾರೆ.

ಇದನ್ನೂ ಓದಿ:Parliament Session: RSS ಬಗ್ಗೆ ದೋಷಾರೋಪಣೆ ಸಲ್ಲದು; ಜಗದೀಪ್ ಧನ್‌ಕರ್ ಹೇಳಿಕೆ- ಪ್ರತಿಪಕ್ಷಗಳು ವಾಕ್‌ಔಟ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Supreme Court SC ST Quota: ಪರಿಶಿಷ್ಟ ಜಾತಿ- ಪಂಗಡ ಒಳಮೀಸಲಾತಿ ಕಾನೂನುಬದ್ಧ: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

Supreme Court Sc St Quota: 2004ರಲ್ಲಿ ಐವರು ನ್ಯಾಯಮೂರ್ತಿಗಳ ಪೀಠವು ಒಳಮೀಸಲಾತಿಗೆ ವಿರೋಧವಾಗಿ ತೀರ್ಪು ನೀಡಿತ್ತು. ಇದೀಗ 7ಸದಸ್ಯರ ಪೀಠ ಮಹತ್ವದ ತೀರ್ಪು ನೀಡಿದೆ.

VISTARANEWS.COM


on

Supreme Court Sc St Quota
Koo

ನವದೆಹಲಿ: ಪರಿಶಿಷ್ಟ ಜಾತಿ(SC) ಮತ್ತು ಪರಿಶಿಷ್ಟ ಪಂಗಡ(ST)ಗಳಿಗೆ ನೀಡಿರುವ ಮೀಸಲಾತಿಯಲ್ಲಿ ಒಳಮೀಸಲಾತಿ ಕಲ್ಪಿಸಲು ಅವಕಾಶ ನೀಡುವ (Supreme Court SC ST Quota, SC ST Sub- Classifications) ಕುರಿತು ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್‌ (Supreme Court) ಇಂದು ನೀಡಿದೆ. ಆ ಮೂಲಕ 2004ರಲ್ಲಿ ಇವಿ ಚಿನ್ನಯ್ಯ ವರ್ಸಸ್‌ ಆಂಧ್ರ ಪ್ರದೇಶ ಸರ್ಕಾರ ಪ್ರಕರಣದಲ್ಲಿ ನೀಡಲಾಗಿದ್ದ ತೀರ್ಪನ್ನು ರದ್ದುಗೊಳಿಸಿದೆ.

2004ರಲ್ಲಿ ಐವರು ನ್ಯಾಯಮೂರ್ತಿಗಳ ಪೀಠವು ಒಳಮೀಸಲಾತಿ ಅಥವಾ ಉಪ-ವರ್ಗೀಕರಣವನ್ನು ಅನುಮತಿಸಲಾಗುವುದಿಲ್ಲ ಎಂದು ತೀರ್ಪು ನೀಡಿತ್ತು. ಏಕೆಂದರೆ SC / ST ಗಳು ಏಕರೂಪದ ಒಂದೇ ವರ್ಗ ಎಂದು ಹೇಳಿತ್ತು. ಇದೇ ಪ್ರಕರಣವನ್ನು ಮೂರು ದಿನಗಳ ಕಾಲ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಫೆ.8ರಂದು ಈ ತೀರ್ಪನ್ನು ಕಾಯ್ದಿರಿಸಿ ಆದೇಶ ಹೊರಡಿಸಿತ್ತು. ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ವಿಚಾರಣೆಗೆ ಬಂದಿದ್ದು, ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠದಲ್ಲಿ ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ವಿಕ್ರಮ್ ನಾಥ್, ಬೇಲಾ ಎಂ ತ್ರಿವೇದಿ, ಪಂಕಜ್ ಮಿಥಾಲ್, ಮನೋಜ್ ಮಿಶ್ರಾ ಮತ್ತು ಸತೀಶ್ ಚಂದ್ರ ಶರ್ಮಾ ಇದ್ದ ನ್ಯಾಯಪೀಠ ಈ ಮಹತ್ವದ ತೀರ್ಪು ಪ್ರಕಟಿಸಿದೆ.

ಎಸ್‌ಸಿ/ಎಸ್‌ಟಿ ಸಮುದಾಯಗಳಲ್ಲಿ ಹೆಚ್ಚು ಅನುಕೂಲವಾಗಿರುವ ಗುಂಪುಗಳ ಮಕ್ಕಳು ಮೀಸಲಾತಿಯನ್ನು ಪಡೆಯುವುದನ್ನು ಮುಂದುವರಿಸಬೇಕೇ ಎಂಬ ಪ್ರಶ್ನೆಯನ್ನು ಉನ್ನತ ನ್ಯಾಯಾಲಯವು ಪರಿಶೋಧಿಸಿತು. ನ್ಯಾಯಾಲಯವು ಈ ವರ್ಗಗಳೊಳಗಿನ ಏಕರೂಪತೆಯ ಕಲ್ಪನೆಯನ್ನು ಸಹ ಪರಿಶೀಲಿಸಿತು. ಕೇಂದ್ರ ಸರ್ಕಾರವು ಎಸ್‌ಸಿ ಮತ್ತು ಎಸ್‌ಟಿಗಳ ಉಪವರ್ಗೀಕರಣದ ಪರವಾಗಿದೆ ಎಂದು ವರದಿ ಸಲ್ಲಿಸಿತ್ತು.

2020 ರಲ್ಲಿ ಸ್ಟೇಟ್ ಆಫ್ ಪಂಜಾಬ್ ವರ್ಸಸ್‌ ದೇವಿಂದರ್ ಸಿಂಗ್ ಪ್ರಕರಣದಲ್ಲಿ ಪಂಚ ಸದಸ್ಯ ಪೀಠವು ಈ ವಿಚಾರವನ್ನು ಸಪ್ತ ಸದಸ್ಯ ಪೀಠಕ್ಕೆ ವರ್ಗಾಯಿಸಿತ್ತು. ಈ ವೇಳೆ2004ರಲ್ಲಿ ಇ.ವಿ.ಚಿನ್ನಯ್ಯ ವರ್ಸಸ್ ಆಂಧ್ರಪ್ರದೇಶ ರಾಜ್ಯ ಸರ್ಕಾರದ ಪ್ರಕರಣದಲ್ಲಿ ಉಪ-ವರ್ಗೀಕರಣವನ್ನು ಅನುಮತಿಸಲಾಗುವುದಿಲ್ಲ ಎಂದು ಸಮನ್ವಯ ಪೀಠ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂಬುದನ್ನು ನ್ಯಾಯಪೀಠ ಗಮನಿಸಿತ್ತು.

3 ದಿನಗಳ ಕಾಲ ನಡೆದ ಸುದೀರ್ಘ ವಿಚಾರಣೆಯಲ್ಲಿ ನ್ಯಾಯಾಲಯವು ಅಸ್ಪೃಶ್ಯತೆಯ ಸಾಮಾಜಿಕ ಇತಿಹಾಸ, ಸಂವಿಧಾನ ರಚನೆಕಾರರ ದೃಷ್ಟಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪರಿಕಲ್ಪನೆ, ಭಾರತದಲ್ಲಿ ಮೀಸಲಾತಿಯ ಉದ್ದೇಶ ಮತ್ತು ಅದನ್ನು ಮುಂದುವರಿಸುವಲ್ಲಿ 341ನೇ ವಿಧಿಯ ಮಹತ್ವವನ್ನು ಚರ್ಚಿಸಿತ್ತು.

ಈ ಒಳಮೀಸಲಾತಿಯ ಲಾಭವೇನು?

ಪರಿಶಿಷ್ಟ ಜಾತಿಗಳ ಉಪ-ವರ್ಗೀಕರಣವು SC ವರ್ಗಗಳಲ್ಲಿ ಹೆಚ್ಚು ಹಿಂದುಳಿದವರಿಗೆ ಪ್ರತ್ಯೇಕ ಕೋಟಾಗಳನ್ನು ನೀಡಲು ಅನುಮತಿ ಇದೆ ಎಂದು ಹೇಳಿದೆ. ಆದರೆ ಉಪ-ವರ್ಗೀಕರಣವನ್ನು ನೀಡುವಾಗ, ರಾಜ್ಯವು ಉಪ-ವರ್ಗಕ್ಕೆ 100% ಮೀಸಲಾತಿಯನ್ನು ಮೀಸಲಿಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಲ್ಲದೆ, ರಾಜ್ಯವು ಪ್ರಾಯೋಗಿಕ ದತ್ತಾಂಶದ ಆಧಾರದ ಮೇಲೆ ಉಪ-ವರ್ಗೀಕರಣದ ಪ್ರಾತಿನಿದ್ಯ ನೀಡಬಹುದಾಗಿದೆ. ಹೆಚ್ಚು ಹಿಂದುಳಿದ ಸಮುದಾಯಗಳಿಗೆ ಆದ್ಯತೆ ನೀಡುವುದು ರಾಜ್ಯದ ಕರ್ತವ್ಯ ಎಂದಿದೆ. SC/ST ವರ್ಗದ ಕೆಲವೇ ಜನರು ಮೀಸಲಾತಿಯನ್ನು ಅನುಭವಿಸುತ್ತಿದ್ದಾರೆ. ಈ ವಿಚಾರವನ್ನು ಅಲ್ಲಗಳೆಯುವಂತಿಲ್ಲ. SC/ST ಗಳಲ್ಲಿ ಶತಮಾನಗಳಿಂದ ಹೆಚ್ಚು ದಬ್ಬಾಳಿಕೆಯನ್ನು ಎದುರಿಸುತ್ತಿರುವ ಇನ್ನೂ ಹಿಂದುಳಿದ ವರ್ಗಗಳಿವೆ ಎಂದು ಕೋರ್ಟ್‌ ಹೇಳಿದೆ.

ಇದನ್ನೂ ಓದಿ: OBC Reservation: ಒಬಿಸಿ ಮೀಸಲಾತಿ ಹೆಚ್ಚಳಕ್ಕೆ ಸುಪ್ರೀಂ ಕೋರ್ಟ್‌ ತಡೆ; ನಿತೀಶ್‌ ಕುಮಾರ್‌ಗೆ ಮುಖಭಂಗ!

Continue Reading

ದೇಶ

Heavy Rain: ನೋಡ ನೋಡುತ್ತಿದ್ದಂತೆ ನದಿಯಲ್ಲಿ ಕೊಚ್ಚಿ ಹೋಯ್ತು ಬಹುಮಹಡಿ ಕಟ್ಟಡ; ಭೀಕರ ದೃಶ್ಯ ಇಲ್ಲಿದೆ

Heavy Rain: ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಪಾರ್ವತಿ ನದಿ ಮೇರೆ ಮೀರಿ ಹರಿಯುತ್ತಿದ್ದು, ಬಹುಮಹಡಿ ಕಟ್ಟಡ ಕುಸಿದು ಬೀಳುತ್ತಿರುವ ಭಯಾನಕ ವಿಡಿಯೊ ವೈರಲ್‌ ಆಗಿದೆ. ಕುಲ್ಲುವಿನಲ್ಲಿ ಗುರುವಾರ ನದಿ ತೀರದ ಬಳಿ ಇದ್ದ ಕಟ್ಟಡವು ಇದ್ದಕ್ಕಿದ್ದಂತೆ ನೆಲಕ್ಕೆ ಕುಸಿದು ಬಿದ್ದು ಕೆಲವೇ ಸೆಕೆಂಡುಗಳಲ್ಲಿ ರಭಸವಾಗಿ ಹರಿಯುವ ನೀರಿನಲ್ಲಿ ಕೊಚ್ಚಿ ಹೋಗುವ ದೃಶ್ಯ ಇದಾಗಿದೆ. ವಿಡಿಯೊದಲ್ಲಿ ಈ ಬಹುಮಹಡಿ ಕಟ್ಟಡ ಕ್ಷಣಾರ್ಧಲ್ಲಿಯೇ ನದಿಯಲ್ಲಿ ಕಣ್ಮರೆಯಾಗುತ್ತಿರುವುದು ಕಂಡು ಬಂದಿದೆ.

VISTARANEWS.COM


on

Heavy Rain
Koo

ಧರ್ಮಶಾಲಾ: ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಅಪಾರ ನಾಶ ನಷ್ಟ ಸಂಭವಿಸುತ್ತಿದೆ (Heavy Rain). ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತಕ್ಕೆ (Wayanad Landslide) ಊರಿಗೆ ಊರೇ ನಾಮವಶೇಷವಾಗಿದ್ದು, 250ಕ್ಕಿಂತ ಅಧಿಕ ಮಂದಿ ಮೃತಪಟ್ಟಿದ್ದಾರೆ. ಈ ಮಧ್ಯೆ ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ (Cloudburst)ವಾಗಿದ್ದು, ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಪಾರ್ವತಿ ನದಿ ಮೇರೆ ಮೀರಿ ಹರಿಯುತ್ತಿದ್ದು, ಬಹುಮಹಡಿ ಕಟ್ಟಡ ಕುಸಿದು ಬೀಳುತ್ತಿರುವ ಭಯಾನಕ ವಿಡಿಯೊ ವೈರಲ್‌ ಆಗಿದೆ (Viral Video).

ಕುಲ್ಲುವಿನಲ್ಲಿ ಗುರುವಾರ ನದಿ ತೀರದ ಬಳಿ ಇದ್ದ ಕಟ್ಟಡವು ಇದ್ದಕ್ಕಿದ್ದಂತೆ ನೆಲಕ್ಕೆ ಕುಸಿದು ಬಿದ್ದು ಕೆಲವೇ ಸೆಕೆಂಡುಗಳಲ್ಲಿ ರಭಸವಾಗಿ ಹರಿಯುವ ನೀರಿನಲ್ಲಿ ಕೊಚ್ಚಿ ಹೋಗುವ ದೃಶ್ಯ ಇದಾಗಿದೆ. ವಿಡಿಯೊದಲ್ಲಿ ಈ ಬಹುಮಹಡಿ ಕಟ್ಟಡ ಕ್ಷಣಾರ್ಧಲ್ಲಿಯೇ ನದಿಯಲ್ಲಿ ಕಣ್ಮರೆಯಾಗುತ್ತಿರುವುದು ಕಂಡು ಬಂದಿದೆ. ತಕ್ಷಣ ಅಲ್ಲಿದ್ದವರು ಓಡಿ ಜೀವ ಉಳಿಸಿಕೊಂಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದ್ದು, ಇದರಿಂದ ನದಿಗಳ ನೀರಿನ ಮಟ್ಟದಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದೆ.

ಇಬ್ಬರ ಸಾವು

ಇದುವರೆಗೆ ಹಿಮಾಚಲ ಪ್ರದೇಶದಲ್ಲಿ ಮಳೆ ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಸುಮಾರು 30 ಮಂದಿ ನಾಪತ್ತೆಯಾಗಿದ್ದಾರೆ. ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿ ಭಾರೀ ಅನಾಹುತ ಸಂಭವಿಸಿದೆ. ಶಿಮ್ಲಾದಿಂದ 100 ಕಿ.ಮೀ. ದೂರದಲ್ಲಿರುವ ರಾಂಪುರದ ಜಕ್ರಿಯಲ್ಲಿ ಮತ್ತು ಮಂಡಿಯಲ್ಲಿ ಮೇಘಸ್ಫೋಟ ಉಂಟಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಹಿಮಾಚಲ ಪ್ರದೇಶಕ್ಕೆ ಆರೆಂಜ್ ಅಲರ್ಟ್ ನೀಡಿದ್ದು, ಮುಂದಿನ 2-3 ದಿನಗಳವರೆಗೆ ರಾಜ್ಯದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ.

ʼʼಶಿಮ್ಲಾ ಜಿಲ್ಲೆಯ ರಾಂಪುರದಲ್ಲಿ ನಡೆದ ಮೇಘಸ್ಫೋಟದ ನಂತರ ಇಬ್ಬರು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ. ಈ ಪ್ರದೇಶದ ರಸ್ತೆಗಳು ಮತ್ತು ಜಲವಿದ್ಯುತ್ ಯೋಜನೆಗೂ ಹಾನಿಯಾಗಿದೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF), ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಮತ್ತು ರಾಜ್ಯ ಪೊಲೀಸ್‌ ತಂಡಗಳನ್ನು ರಕ್ಷಣಾ ಕಾರ್ಯಾಚರಣೆಯನ್ನು ನಿಯೋಜಿಸಲಾಗಿದೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿರಂತರ ಮಳೆಯಿಂದಾಗಿ ಭೂಕುಸಿತದ ಸಾಧ್ಯತೆ ಹೆಚ್ಚಾದ ಕಾರಣ ರಾಜ್ಯದ ಅನೇಕ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಮಂಡಿಯಲ್ಲಿ 29, ಕುಲ್ಲುನಲ್ಲಿ 8, ಶಿಮ್ಲಾದಲ್ಲಿ 4 ಮತ್ತು ಕಾಂಗ್ರಾ ಮತ್ತು ಕಿನ್ನೌರ್‌ನಲ್ಲಿ ತಲಾ 2 ಸೇರಿದಂತೆ ಒಟ್ಟು 45 ರಸ್ತೆಗಳನ್ನು ಮುಚ್ಚಲಾಗಿದೆ ಎಂದು ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ. ಸುಮಾರು 215 ಟ್ರಾನ್ಸ್‌ಫಾರ್ಮರ್‌ಗಳು ಅಸ್ತವ್ಯಸ್ತಗೊಂಡಿರುವುದರಿಂದ ವಿದ್ಯುತ್ ಸರಬರಾಜಿನ ಮೇಲೂ ಪರಿಣಾಮ ಬೀರಿದೆ.

ಇದನ್ನೂ ಓದಿ: Wayanad Landslide: ವಯನಾಡು ದುರಂತದಲ್ಲಿ ಮೃತರ ಸಂಖ್ಯೆ 254ಕ್ಕೆ ಏರಿಕೆ; ಸೇನೆಯ ತಾತ್ಕಾಲಿಕ ಸೇತುವೆ ಬಹುತೇಕ ಪೂರ್ಣ

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಾಜ್ಯಕ್ಕೆ 425 ಕೋಟಿ ರೂ.ಗಳ ನಷ್ಟವಾಗಿದೆ. ಜುಲೈ ಮೊದಲ ವಾರದಲ್ಲಿ ಸುರಿದ ಭಾರಿ ಮಳೆಯಿಂದಾಗಿ 76 ರಸ್ತೆಗಳು ಬಂದ್ ಆಗಿದ್ದು, 34 ವಿದ್ಯುತ್ ಸರಬರಾಜು ಯೋಜನೆಗಳು ಮತ್ತು 69 ನೀರು ಸರಬರಾಜು ಯೋಜನೆಗಳು ಅಸ್ತವ್ಯಸ್ತಗೊಂಡಿದ್ದವು. ಇತ್ತ ದೆಹಲಿ ಮತ್ತು ಉತ್ತರಾಖಂಡದಲ್ಲಿ ಧಾರಾಕಾರ ಮಳೆ ಆರಂಭವಾಗಿದೆ.

Continue Reading

ಕ್ರೈಂ

Yashashree Shinde Murder: ಮುಂಬಯಿಯ ಯಶಶ್ರೀ ಶಿಂಧೆಯನ್ನು ಕರ್ನಾಟಕದ ದಾವೂದ್ ಶೇಖ್ ಕೊಂದಿದ್ದು ಹೇಗೆ? ಆಘಾತಕಾರಿ ಮಾಹಿತಿ

Yashashree Shinde Murder: ತನ್ನೊಂದಿಗೆ ಕರ್ನಾಟಕಕ್ಕೆ ಓಡಿಬಂದು ಮದುವೆಯಾಗುವಂತೆ ದಾವೂದ್‌ ಶೇಖ್, ಯಶಸ್ರೀಯನ್ನು ಸದಾ ಒತ್ತಾಯಿಸುತ್ತಿದ್ದ. ಆದರೆ ಆಕೆ ಆತನೊಂದಿಗೆ ಹೋಗಲು ಸಿದ್ಧಳಿರಲಿಲ್ಲ. ಹಲವಾರು ಸಲ ಆತನ ನಂಬರ್‌ ಅನ್ನು ಆಕೆ ಬ್ಲಾಕ್‌ ಮಾಡಿದ್ದಳು.

VISTARANEWS.COM


on

Hindu Girl Murder
Koo

ಮುಂಬಯಿ: ಮುಂಬಯಿಯ ಉರಾನ್‌ನ 20 ವರ್ಷದ ಯಶಶ್ರೀ ಶಿಂಧೆಯನ್ನು (yashashree shinde Murder) ಕೊಲೆ ಮಾಡಿದ 23 ವರ್ಷದ ಕೊಲೆಪಾತಕಿ ದಾವೂದ್ ಶೇಖ್ (Dawood Sheik), ಸಂತ್ರಸ್ತೆಯನ್ನು ಕರ್ನಾಟಕಕ್ಕೆ ಕರೆದೊಯ್ದು ಮದುವೆಯಾಗಲು ಬಯಸಿದ್ದ ಎಂಬುದು ಇದೀಗ ಗೊತ್ತಾಗಿದೆ. ಆಕೆ ನಿರಾಕರಿಸಿದ್ದರಿಂದ ಇರಿದು ಕೊಲೆ ಮಾಡಿದ್ದಾನೆ.

ತನ್ನೊಂದಿಗೆ ಕರ್ನಾಟಕಕ್ಕೆ ಓಡಿಬಂದು ಮದುವೆಯಾಗುವಂತೆ ದಾವೂದ್‌ ಶೇಖ್, ಯಶಸ್ರೀಯನ್ನು ಸದಾ ಒತ್ತಾಯಿಸುತ್ತಿದ್ದ. ಆದರೆ ಆಕೆ ಆತನೊಂದಿಗೆ ಹೋಗಲು ಸಿದ್ಧಳಿರಲಿಲ್ಲ. ಹಲವಾರು ಸಲ ಆತನ ನಂಬರ್‌ ಅನ್ನು ಆಕೆ ಬ್ಲಾಕ್‌ ಮಾಡಿದ್ದಳು. ಹೀಗಾಗಿ ಕುಪಿತಗೊಂಡು ಜುಲೈ 25ರಂದು ಮಧ್ಯಾಹ್ನ ಆಕೆಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಡಿಸಿಪಿ (ಅಪರಾಧ) ಅಮಿತ್ ಕಾಳೆ ಹೇಳಿದ್ದಾರೆ.

ಸಂತ್ರಸ್ತೆಯ ಕುಟುಂಬವು 2019ರಲ್ಲಿಯೇ ತಮ್ಮ ಮಗಳಿಗೆ ಕಿರುಕುಳ ನೀಡಿದ್ದಕ್ಕಾಗಿ ಶೇಖ್ ವಿರುದ್ಧ ದೂರು ದಾಖಲಿಸಿತ್ತು. ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆಯಡಿ ಶೇಖ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತ ಒಂದೂವರೆ ತಿಂಗಳು ಜೈಲಿನಲ್ಲಿ ಕಳೆದಿದ್ದ. ಜಾಮೀನು ಪಡೆದ ನಂತರ ಶೇಖ್ 2019ರಲ್ಲಿ ಉರಾನ್‌ನಲ್ಲಿ ಸ್ವಲ್ಪ ಸಮಯ ಕಳೆದಿದ್ದ. COVID-19 ಸಾಂಕ್ರಾಮಿಕದ ಸಮಯದಲ್ಲಿ ಕರ್ನಾಟಕಕ್ಕೆ ಮರಳಿದ್ದ. ಇಲ್ಲಿ ಗುರುತು ಬದಲಿಸಿಕೊಂಡು ಚಾಲಕನಾಗಿ ಕೆಲಸ ಮಾಡಿದ್ದ.

ಅದರ ನಡುವೆ ನಿರಂತರವಾಗಿ ಹುಡುಗಿಯೊಂದಿಗೆ ಸಂಪರ್ಕದಲ್ಲಿರಲು ಪ್ರಯತ್ನಿಸಿದ್ದ. ಯಶಶ್ರೀ ತನ್ನ ಫೋನ್‌ ನಂಬರ್‌ ಬ್ಲಾಕ್‌ ಮಾಡಿದ್ದಳು. ಬಳಿಕ ಆಕೆಯನ್ನು ಸಂಪರ್ಕಿಸಲು ತನ್ನ ಸಂಬಂಧಿ ಮೋಶಿನ್‌ನ ಮೊಬೈಲ್ ಅನ್ನು ಬಳಸಿದ್ದ.

ತನ್ನೊಂದಿಗೆ ಬರಲು ನಿರಾಕರಿಸಿದರೆ ಬಾಲಕಿಯನ್ನು ಕೊಲ್ಲುವ ಉದ್ದೇಶದಿಂದಲೇ ಶೇಖ್ ಜುಲೈ 23ರಂದು ಉರಾನ್‌ಗೆ ಮರಳಿದ್ದ. ತನ್ನನ್ನು ಭೇಟಿಯಾಗಬೇಕೆಂದು ಯಶಶ್ರೀಯನ್ನು ಒತ್ತಾಯಿಸಿದ್ದ. ಬೇಲಾಪುರದಲ್ಲಿ ಕೆಲಸ ಮಾಡುತ್ತಿದ್ದ ಯಶಶ್ರೀ, ಅರ್ಧ ದಿನ ರಜೆ ತೆಗೆದುಕೊಂಡು ಜುಲೈ 24ರಂದು ಮಧ್ಯಾಹ್ನ ಜೂಯಿ ನಗರ ರೈಲು ನಿಲ್ದಾಣದಲ್ಲಿ ಆತನನ್ನು ಭೇಟಿಯಾಗಿದ್ದಳು. ಜುಲೈ 25ರ ಬೆಳಿಗ್ಗೆ ತನ್ನನ್ನು ಮತ್ತೆ ಭೇಟಿಯಾಗುವಂತೆ ಶೇಖ್ ಆಕೆಯ ಮೇಲೆ ಒತ್ತಡ ಹೇರುತ್ತಲೇ ಇದ್ದ. ಅಂದು ಆತ ಫೇಸ್‌ಬುಕ್‌ನಲ್ಲಿ ಫೋಟೋವನ್ನು ಕೂಡ ಅಪ್‌ಲೋಡ್ ಮಾಡಿದ್ದ. ಅದನ್ನು ಅಳಿಸುವಂತೆ ಯಶಶ್ರೀ ವಿನಂತಿಸಿದ್ದಳು. ಆಕೆ ಮತ್ತೆ ಭೇಟಿಯಾದರೆ ಮಾತ್ರ ಫೋಟೋ ಅಳಿಸುವುದಾಗಿ, ಇಲ್ಲವಾದರೆ ವೈರಲ್‌ ಮಾಡುವುದಾಗಿ ಆತ ಬ್ಲ್ಯಾಕ್‌ಮೇಲ್‌ ಮಾಡಿದ್ದ. ನಂತರ ಭೇಟಿಯಾಗಲು ಆಕೆ ಒಪ್ಪಿದಾಗ ಆತ ಫೋಟೋ ಡಿಲೀಟ್ ಮಾಡಿದ್ದ.

ಜುಲೈ 25ರಂದು ಯಶಶ್ರೀ ಮತ್ತೆ ಅವನನ್ನು ಭೇಟಿಯಾದಳು. ತನ್ನೊಂದಿಗೆ ಕರ್ನಾಟಕಕ್ಕೆ ಬರುವಂತೆ ಶೇಖ್ ಆಕೆಯನ್ನು ಒತ್ತಾಯಿಸಿದ್ದ. ಆಕೆ ತನ್ನೊಂದಿಗೆ ಬರಲು ನಿರಾಕರಿಸಿದಾಗ ಶೇಖ್‌ ಸಿಟ್ಟಿಗೆದ್ದು ಕರ್ನಾಟಕದಿಂದ ತಂದಿದ್ದ ಚಾಕುವನ್ನು ಬಳಸಿ ಆಕೆಯನ್ನು ಹಲವಾರು ಬಾರಿ ಇರಿದು ಪರಾರಿಯಾಗಿದ್ದ. ಯಶಶ್ರೀ ಆ ಸಂದರ್ಭದಲ್ಲಿ ಸಹಾಯಕ್ಕಾಗಿ ತನ್ನ ಸ್ನೇಹಿತೆಯೊಬ್ಬಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಳು. ಆದರೆ ನೆಟ್‌ವರ್ಕ್‌ ಸಿಗದೆ ಹೋದುದರಿಂದ ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಬಳಿಕ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು.

ಚೂರಿಯಿಂದ ಇರಿದ ಬಳಿಕ ಶೇಖ್ ತನ್ನ ಸ್ನೇಹಿತನೊಬ್ಬನ ಬಳಿ ಹಣ ಕೇಳಿದ್ದು, ಪನ್ವೇಲ್ ರೈಲು ನಿಲ್ದಾಣದ ಬಳಿಯ ಎಟಿಎಂನಿಂದ ಹಣವನ್ನು ಡ್ರಾ ಮಾಡಿದ್ದ. ನಂತರ ಕಳಂಬೋಳಿ ವೃತ್ತಕ್ಕೆ ಆಗಮಿಸಿ ಬಸ್ಸಿನಲ್ಲಿ ಕರ್ನಾಟಕದ ಗುಲ್ಬರ್ಗಕ್ಕೆ ತೆರಳಿದ್ದ. ಜುಲೈ 30ರಂದು ಗುಲ್ಬರ್ಗ ಜಿಲ್ಲೆಯ ಶಹಾಪುರ ಬೆಟ್ಟ ಪ್ರದೇಶದಲ್ಲಿ ಶೇಖ್‌ನನ್ನು ಬಂಧಿಸಲಾಗಿತ್ತು. ಶೇಖ್‌ನನ್ನು ಪನ್ವೇಲ್‌ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಲ್ಲಿ ಆತನನ್ನು ಆಗಸ್ಟ್ 7ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಜಾಮೀನು ರಹಿತ ವಾರಂಟ್

ಏತನ್ಮಧ್ಯೆ, ಪನ್ವೇಲ್ ನ್ಯಾಯಾಲಯವು 2019ರ ಪ್ರಕರಣದಲ್ಲಿ ಮಕ್ಕಳ ಲೈಂಗಿಕ ಅಪರಾಧಗಳಿಂದ ರಕ್ಷಿಸುವ ಕಾಯ್ದೆಯಡಿಯಲ್ಲಿ ಶೇಖ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದೆ ಎಂದು ತಿಳಿದುಬಂದಿದೆ. ಶೇಖ್ ಒಂದೂವರೆ ತಿಂಗಳು ಜೈಲಿನಲ್ಲಿ ಕಳೆದಿದ್ದ. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆದರೆ ಪನ್ವೇಲ್ ನ್ಯಾಯಾಲಯವು ಜುಲೈ 20, 2024ರಂದು ಅವನ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಜುಲೈ 20ರಂದು ಪೊಲೀಸರು ಶೇಖ್‌ನನ್ನು ಏಕೆ ಬಂಧಿಸಲಿಲ್ಲ ಎಂದು ಕೇಳಿದಾಗ, ಆ ಬೆಳವಣಿಗೆಯ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಡಿಸಿಪಿ ಕಾಳೆ ಹೇಳಿದ್ದಾರೆ.

ಇದನ್ನೂ ಓದಿ: Hindu Girl Murder: ಯುವತಿ ಬರ್ಬರ ಕೊಲೆ ಪ್ರಕರಣ; ಹಂತಕ ದಾವೂದ್‌ ಶೇಖ್‌ ಹಿಂಬಾಲಿಸುತ್ತಿದ್ದ ಸಿಸಿಟಿವಿ ದೃಶ್ಯ ಪತ್ತೆ

Continue Reading

ದೇಶ

Terror Attack: ಒಂದು ತಿಂಗಳಲ್ಲಿ ಬ್ಯಾಕ್‌ ಟು ಬ್ಯಾಕ್‌ ಉಗ್ರರ ದಾಳಿ; 14 ಯೋಧರು ಹುತಾತ್ಮ

Terror Attack: ಜುಲೈನಲ್ಲಿ ಕಾಶ್ಮೀರ ಮತ್ತು ಜಮ್ಮುವಿನಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಭೀಕರ ಗುಂಡಿನ ಚಕಮಕಿ ನಡೆಯಿತು. ಜುಲೈ ತಿಂಗಳಲ್ಲಿ ಎಂಟು ಗುಂಡಿನ ಚಕಮಕಿಗಳು ನಡೆದಿವೆ. ಮೂರು ಗುಂಡಿನ ಚಕಮಕಿಗಳು ಕಣಿವೆಯಲ್ಲಿ ನಡೆದಿದ್ದರೆ ನಾಲ್ಕು ಜಮ್ಮು ಪ್ರದೇಶದಲ್ಲಿ ನಡೆದಿವೆ. ಅವುಗಳಲ್ಲಿ ಮೂರು ಪರ್ವತ ಪ್ರದೇಶವಾದ ದೋಡಾ ಜಿಲ್ಲೆಯಲ್ಲಿಯೇ ಈ ದಾಳಿ ನಡೆದಿದೆ.

VISTARANEWS.COM


on

Terror Attack
Koo

ಶ್ರೀನಗರ: ಈ ವರ್ಷ ಆರಂಭದಲ್ಲಿ ಬಹಳ ಶಾಂತಿಯುತವಾಗಿದ್ದ ಜಮ್ಮು-ಕಾಶ್ಮೀರ(Jammu-Kashmir)ದಲ್ಲಿ ಉಗ್ರರ ಉಪಟಳ(Terror Attack) ಏಕಾಏಕಿ ಶುರುವಾಗಿದೆ. ಬ್ಯಾಕ್‌ ಟು ಬ್ಯಾಕ್‌ ನಿರಂತರ ಉಗ್ರರ ದಾಳಿ ನಡೆಯುತ್ತಿದ್ದು, ಜುಲೈ ತಿಂಗಳಲ್ಲಿ ಬರೋಬ್ಬರಿ 13 ಉಗ್ರರನ್ನು ಹೊಡೆದುರುಳಿಸಲಾಗಿದ್ದು, 14 ಯೋಧರು ಹುತಾತ್ಮರಾಗಿದ್ದಾರೆ. ಜುಲೈ ತಿಂಗಳಲ್ಲಿ, ಎಂಟು ಎನ್‌ಕೌಂಟರ್‌ಗಳು, ಭದ್ರತಾ ಪಡೆಗಳ ಮೇಲೆ ಕುಖ್ಯಾತ BAT ತಂಡದ ದಾಳಿ ಸೇರಿದಂತೆ ಮೂರು ದಾಳಿಗಳು ಮತ್ತು ಮೂರು ಒಳನುಸುಳುವಿಕೆ ಪ್ರಯತ್ನಗಳು ಜಮ್ಮು ಕಾಶ್ಮೀರದಲ್ಲಿ ನಡೆದಿವೆ.

ಜುಲೈನಲ್ಲಿ ಕಾಶ್ಮೀರ ಮತ್ತು ಜಮ್ಮುವಿನಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಭೀಕರ ಗುಂಡಿನ ಚಕಮಕಿ ನಡೆಯಿತು. ಜುಲೈ ತಿಂಗಳಲ್ಲಿ ಎಂಟು ಗುಂಡಿನ ಚಕಮಕಿಗಳು ನಡೆದಿವೆ. ಮೂರು ಗುಂಡಿನ ಚಕಮಕಿಗಳು ಕಣಿವೆಯಲ್ಲಿ ನಡೆದಿದ್ದರೆ ನಾಲ್ಕು ಜಮ್ಮು ಪ್ರದೇಶದಲ್ಲಿ ನಡೆದಿವೆ. ಅವುಗಳಲ್ಲಿ ಮೂರು ಪರ್ವತ ಪ್ರದೇಶವಾದ ದೋಡಾ ಜಿಲ್ಲೆಯಲ್ಲಿಯೇ ಈ ದಾಳಿ ನಡೆದಿದೆ.

ದೋಡಾ ಅರಣ್ಯ ಪ್ರದೇಶದಲ್ಲಿ ಸರಣಿ ಗುಂಡಿನ ಚಕಮಕಿಗಳ ನಂತರ, ಭದ್ರತಾ ಪಡೆಗಳು 2-3 ಗುಂಪುಗಳಾಗಿ ವಿಭಜಿಸಲ್ಪಟ್ಟು 10-12 ಉಗ್ರರ ಗುಂಪನ್ನು ಪತ್ತೆಹಚ್ಚಲು ದಟ್ಟ ಅರಣ್ಯ ಪ್ರದೇಶಗಳಲ್ಲಿ ಬೃಹತ್ ಕೂಂಬಿಂಗ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.

ಜುಲೈ ತಿಂಗಳಲ್ಲಿ, ಮೂರು ಪ್ರಮುಖ ದಾಳಿಗಳು ನಡೆದವು. ಒಂದು ಕಥುವಾ ಜಿಲ್ಲೆಯ ಮಾದೇಶಿ ಅರಣ್ಯ ಪ್ರದೇಶದಲ್ಲಿ ಐದು ಸೈನಿಕರು ಹುತಾತ್ಮರಾದರು. ದೂರದ ರಜೌರಿ ಗ್ರಾಮದಲ್ಲಿರುವ ಶೌರ್ಯ ಚಕ್ರ ಪುರಸ್ಕೃತ ಪುರಷೋತ್ತಮ್ ಕುಮಾರ್ ಅವರ ಮನೆಯ ಮೇಲೆ ಮತ್ತೊಂದು ಉಗ್ರಗಾಮಿ ದಾಳಿ ನಡೆದಿತ್ತು. ಉಗ್ರರ ದಾಳಿಯಲ್ಲಿ ಯೋಧ ಮತ್ತು ಗ್ರಾ.ಪಂ ಸದಸ್ಯನ ಸಂಬಂಧಿ ಗಾಯಗೊಂಡಿದ್ದಾರೆ. ಈ ವೇಳೆ ಸೇನೆ ಪ್ರತಿದಾಳಿ ನಡೆಸಿತ್ತಾದರೂ ಉಗ್ರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಕುಖ್ಯಾತ BAT ತಂಡವು ಉತ್ತರ ಕಾಶ್ಮೀರದ ಮಚಿಲ್ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಭಾರತೀಯ ಸೇನಾ ಪೋಸ್ಟ್ ಮೇಲೆ ಮೂರನೇ ದಾಳಿ ನಡೆಸಿತು. BAT ತಂಡವು ಪಾಕಿಸ್ತಾನಿ ಕಮಾಂಡೋಗಳು ಮತ್ತು ಹೆಚ್ಚು ತರಬೇತಿ ಪಡೆದ ಉಗ್ರರನ್ನು ಒಳಗೊಂಡಿದೆ. ಬಿಎಟಿ ದಾಳಿಯಲ್ಲಿ ಓರ್ವ ಯೋಧ ಪಾಕಿಸ್ತಾನದ ಒಳನುಗ್ಗಿ ಹುತಾತ್ಮರಾಗಿದ್ದರು.

ತಿಂಗಳಲ್ಲಿ ಮೂರು ಉಗ್ರರು ಒಳನುಸುಳುವಿಕೆ ಯತ್ನಗಳು ನಡೆದಿವೆ. ಅದರಲ್ಲಿ ಎರಡು ಪ್ರಯತ್ನಗಳು ಉತ್ತರ ಕಾಶ್ಮೀರದ ಕೆರಾನ್ ಸೆಕ್ಟರ್‌ನಲ್ಲಿ ನಡೆದಿದ್ದರೆ ಮತ್ತೊಂದು ಒಳನುಸುಳುವಿಕೆ ಪ್ರಯತ್ನ ಜಮ್ಮುವಿನ ಪೂಂಚ್ ಸೆಕ್ಟರ್‌ನಲ್ಲಿ ನಡೆದಿದೆ. ಎಲ್ಲಾ ಮೂರು ಒಳನುಸುಳುವಿಕೆ ಬಿಡ್‌ಗಳನ್ನು ಪಡೆಗಳು ವಿಫಲಗೊಳಿಸಿದವು.

ಮಾಹಿತಿಯ ಪ್ರಕಾರ, ಒಳನುಸುಳುವಿಕೆ ಪ್ರಯತ್ನಗಳನ್ನು ವಿಫಲಗೊಳಿಸುವಾಗ ಎನ್‌ಕೌಂಟರ್, ದಾಳಿ ಮತ್ತು ಗುಂಡಿನ ಚಕಮಕಿಗಳಲ್ಲಿ 14 ಸೈನಿಕರು ಹುತಾತ್ಮರಾಗಿದ್ದಾರೆ. ಹುತಾತ್ಮ ಸೈನಿಕರಲ್ಲಿ ಕ್ಯಾಪ್ಟನ್ ಮತ್ತು ಜೂನಿಯರ್ ಕಮಿಷನ್ಡ್ ಆಫೀಸರ್ (JCO) ಸೇರಿದ್ದಾರೆ ಎಂದು ಸೇನೆ ಹೇಳಿದೆ.

ಇದನ್ನೂ ಓದಿ: 9/11 Attack: ನ್ಯೂಯಾರ್ಕ್‌ ಅವಳಿ ಗೋಪುರಗಳ ಮೇಲೆ ಉಗ್ರ ದಾಳಿಯ ಹೊಸ ವಿಡಿಯೋ ವೈರಲ್‌

Continue Reading
Advertisement
Stock Market
ವಾಣಿಜ್ಯ2 mins ago

Stock Market: ಷೇರುಪೇಟೆಯಲ್ಲಿ ಗೂಳಿ ಜಿಗಿತ; ಮೊದಲ ಬಾರಿ 82,000 ಗಡಿ ದಾಟಿದ ಸೆನ್ಸೆಕ್ಸ್

ಕ್ರೀಡೆ13 mins ago

Paris Olympics: ಇಂದು ಲಕ್ಷ್ಯ ಸೇನ್‌-ಪ್ರಣಯ್ ಮಧ್ಯೆ ಪ್ರೀ ಕ್ವಾರ್ಟರ್​ ಮುಖಾಮುಖಿ; ಭಾರತಕ್ಕೆ ಒಂದು ಪದಕ ನಷ್ಟ

police firing gadag
ಕ್ರೈಂ24 mins ago

Police Firing: ದರೋಡೆ ಎಸಗಿದ ರೌಡಿಶೀಟರ್ ಕಾಲಿಗೆ ಪೊಲೀಸರ ಗುಂಡು, ಬಂಧನ

Pushpa 2 Allu Arjun climax leaked Fans urge producers to take action
ಟಾಲಿವುಡ್27 mins ago

Pushpa 2: ಪುಷ್ಪ 2 ಕ್ಲೈ ಮ್ಯಾಕ್ಸ್‌ ದೃಶ್ಯ ಲೀಕ್‌; ಕೋಪ ಹೊರ ಹಾಕಿದ ಅರ್ಜುನ್‌ ಫ್ಯಾನ್ಸ್‌!

Supreme Court Sc St Quota
ದೇಶ44 mins ago

Supreme Court SC ST Quota: ಪರಿಶಿಷ್ಟ ಜಾತಿ- ಪಂಗಡ ಒಳಮೀಸಲಾತಿ ಕಾನೂನುಬದ್ಧ: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

Gold Rate Today
ಚಿನ್ನದ ದರ1 hour ago

Gold Rate Today: ಮತ್ತೆ ಶಾಕ್‌ ಕೊಟ್ಟ ಚಿನ್ನದ ದರ; ಬಂಗಾರ ಇಂದು ಇಷ್ಟು ದುಬಾರಿ

Road Accident
ಚಿಕ್ಕಬಳ್ಳಾಪುರ1 hour ago

Road Accident : ಲಾರಿ ಗುದ್ದಿದ ರಭಸಕ್ಕೆ ಸ್ಥಳದಲ್ಲೇ ಪ್ರಾಣಬಿಟ್ಟ ಬೈಕ್‌ ಸವಾರರು

IND vs SL 1st ODI
ಕ್ರೀಡೆ2 hours ago

IND vs SL 1st ODI: ವಿಶ್ವಕಪ್​ ಫೈನಲ್​ ಸೋಲಿನ ಬಳಿಕ ಮೊದಲ ಏಕದಿನ ಆಡಲು ಸಜ್ಜಾದ ಕೊಹ್ಲಿ, ರೋಹಿತ್​, ಬುಮ್ರಾ

Heavy Rain
ದೇಶ2 hours ago

Heavy Rain: ನೋಡ ನೋಡುತ್ತಿದ್ದಂತೆ ನದಿಯಲ್ಲಿ ಕೊಚ್ಚಿ ಹೋಯ್ತು ಬಹುಮಹಡಿ ಕಟ್ಟಡ; ಭೀಕರ ದೃಶ್ಯ ಇಲ್ಲಿದೆ

India Couture Week 2024 Vicky Kaushal Rashmika Mandanna turn showstoppers
ಬಾಲಿವುಡ್2 hours ago

India Couture Week 2024: ಕೌಚರ್ ವೀಕ್ ಗ್ರ್ಯಾಂಡ್ ಫಿನಾಲೆಯಲ್ಲಿ ಮಿಂಚಿದ ರಶ್ಮಿಕಾ- ವಿಕ್ಕಿ ಕೌಶಲ್!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ2 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ3 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ3 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ3 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ4 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ4 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ4 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ4 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌