Viral Video: ಥೋ! ಈ ಮುದುಕರಿಗೆ ಈ ವಯಸ್ಸಲ್ಲಿ ಏನೆಲ್ಲ ಚಪಲ ನೋಡಿ! ಹಿಂದೆಂದೂ ಕಂಡಿರದಂಥ ವಿಡಿಯೊ! - Vistara News

Latest

Viral Video: ಥೋ! ಈ ಮುದುಕರಿಗೆ ಈ ವಯಸ್ಸಲ್ಲಿ ಏನೆಲ್ಲ ಚಪಲ ನೋಡಿ! ಹಿಂದೆಂದೂ ಕಂಡಿರದಂಥ ವಿಡಿಯೊ!

Viral Video: ಇಲ್ಲೊಬ್ಬ ಬೊಕ್ಕ ತಲೆಯ ವ್ಯಕ್ತಿ ಮಹಿಳೆಯ ಕೂದಲಿನ ಜೊತೆ ವಿಚಿತ್ರವಾಗಿ ವರ್ತಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಅನೇಕರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಕ್ಯಾಮೆರಾದಲ್ಲಿ ಸೆರೆಯಾದ ಘಟನೆಯಲ್ಲಿ ಮಹಿಳೆಯ ಹಿಂದೆ ಬೊಕ್ಕ ತಲೆಯ ಮುದುಕನೊಬ್ಬ ಅವಳ ಕೂದಲನ್ನು ಸ್ಪರ್ಶಿಸಲು ಮತ್ತು ಅದರ ವಾಸನೆ ನೋಡಲು ಪ್ರಯತ್ನಿಸುತ್ತಿದ್ದಾನೆ. ಅಶ್ಲೀಲವಾಗಿರುವುದರ ಜೊತೆಗೆ, ಅವನ ವರ್ತನೆ ಕಳವಳಕಾರಿಯಾಗಿದೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಈ ಮುದುಕರಿಗೆ ವಯಸ್ಸಾಗುತ್ತಿದ್ದಂತೆ ಏನೆಲ್ಲ ಚಪಲ ಬರುತ್ತದೋ ಹೇಳಲಾಗುವುದಿಲ್ಲ. ಕೆಲವರು ಚಿಕ್ಕ ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ ಎಸಗಲು ಹೇಸುವುದಿಲ್ಲ. ಕೆಲವರು ಬಸ್‌ಗಳಲ್ಲಿ, ರೈಲುಗಳಲ್ಲಿ ಮಹಿಳೆಯರ ಮೈ ಸವರುವುದರಲ್ಲೇ ವಿಕೃತ ಖುಷಿ ಅನುಭವಿಸುತ್ತಾರೆ. ಆದರೆ ಇಲ್ಲಿ ಈ ಮುದುಕ ಯುವತಿಯೊಬ್ಬಳ ಕೂದಲನ್ನು ಮುಟ್ಟಲು, ಅದನ್ನು ಮುದ್ದಿಸಲು ಪಡುವ ಪ್ರಯತ್ನ ನಗು ತರಿಸುತ್ತದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಇದು ಅನೇಕರಲ್ಲಿ ಆಶ್ಚರ್ಯವನ್ನುಂಟುಮಾಡಿದೆ.

ಉತ್ತರ ಪ್ರದೇಶದ ಬಿಸೋಲಿಯಲ್ಲಿ ನಡೆದಿದೆ ಎನ್ನಲಾದ ಈ ಘಟನೆಯ ವಿಡಿಯೊದಲ್ಲಿ ವಯಸ್ಸಾದ ಬೊಕ್ಕ ತಲೆಯ ವ್ಯಕ್ತಿ ಮತ್ತು ಉದ್ದವಾದ ಕೂದಲನ್ನು ಹೊಂದಿರುವ ಮಹಿಳೆ ಕಾಣಿಸುತ್ತಿದ್ದಾರೆ. ಈ ವಿಡಿಯೊದಲ್ಲಿ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ವಿಚಿತ್ರವಾಗಿ ವರ್ತಿಸುತ್ತಿರುವುದು, ಅನೇಕರ ಗಮನವನ್ನು ಸೆಳೆದಿದೆ. ಕ್ಯಾಮೆರಾದಲ್ಲಿ ಸೆರೆಯಾದ ಘಟನೆಯಲ್ಲಿ ಮಹಿಳೆಯ ಹಿಂದೆ ಬೊಕ್ಕ ತಲೆಯ ಮುದುಕನೊಬ್ಬ ಅವಳ ಕೂದಲನ್ನು ಸ್ಪರ್ಶಿಸಲು ಮತ್ತು ವಾಸನೆ ನೋಡಲು ಪ್ರಯತ್ನಿಸುತ್ತಿದ್ದಾನೆ. ಅಶ್ಲೀಲವಾಗಿರುವುದರ ಜೊತೆಗೆ, ಅವನ ವರ್ತನೆ ಕಳವಳಕಾರಿಯಾಗಿದೆ. ಏಕೆಂದರೆ ಆ ಮಹಿಳೆಗೆ ತನ್ನ ಹಿಂದೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ತಿಳಿದಿಲ್ಲ.

ವಿಡಿಯೊ ಮುಂದುವರಿಯುತ್ತಿದ್ದಂತೆ ಆ ವ್ಯಕ್ತಿ ಮಹಿಳೆಗೆ ಹತ್ತಿರವಾಗಲು ಅನೇಕ ಬಾರಿ ಪ್ರಯತ್ನಿಸುತ್ತಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅವನ ಎಲ್ಲಾ ಅನುಚಿತ ಕೃತ್ಯಗಳು ರೆಕಾರ್ಡ್ ಆಗಿದೆ. ಈ ವಿಡಿಯೊವನ್ನು ಘರ್ ಕೆ ಕಾಲೇಶ್ ಎಂಬ ಖಾತೆಯಿಂದ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೊವನ್ನು ಕಂಡು ಸಾರ್ವಜನಿಕ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಇದನ್ನು ನೋಡಿದ ನಂತರ ಅನೇಕ ವೀಕ್ಷಕರು ಕೋಪಗೊಂಡಿದ್ದಾರೆ.

ಇದನ್ನೂ ಓದಿ: ಕಾಂಡೋಮ್, ಲೂಬ್ರಿಕೆಂಟ್‍ ಬಳಸಿದರೂ ಕ್ಯಾನ್ಸರ್‌! ಅಧ್ಯಯನ ವರದಿಯಲ್ಲಿ ಆಘಾತಕಾರಿ ಸಂಗತಿ

ಜುಲೈ 31ರಂದು ಪೋಸ್ಟ್ ಮಾಡಲಾದ ಈ ವಿಡಿಯೊ ವೈರಲ್ ಆಗಿದ್ದು, 3.3 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಇದಕ್ಕೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಅವರಲ್ಲಿ ಅನೇಕರು ತಮ್ಮ ಕೋಪ ವ್ಯಕ್ತಪಡಿಸಿದ್ದಾರೆ. “ಅವನ ತಲೆ ಬೋಳು ಆಗಿರುವುದರಿಂದ ಅವಳ ಕೂದಲಿನ ಮೇಲೆ ಆಸೆ ಪಟ್ಟಿರಬೇಕು” ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು “ವಯಸ್ಸಾದಂತೆ ಕೆಲವು ಮುದುಕರಲ್ಲಿ ವಿಕೃತ ಸ್ವಭಾವವು ಹೆಚ್ಚಾಗುತ್ತದೆ. ಅನೇಕ ವೃದ್ಧರು ಇಂಥದ್ದನ್ನು ಮಾಡುವುದನ್ನು ನೋಡಿದ್ದೇನೆ” ಎಂಬುದಾಗಿ ಬರೆದಿದ್ದಾರೆ. ಇನ್ನೂ ಕೆಲವರು ಆತನನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Wayanad Landslide: 144 ಸೈನಿಕರು 31 ಗಂಟೆಯೊಳಗೆ 190 ಅಡಿ ಉದ್ದದ ಸೇತುವೆ ನಿರ್ಮಿಸಿದ್ದು ಹೇಗೆ?

ಭೂಕುಸಿತವಾಗಿರುವ ವಯನಾಡಿನ (Wayanad Landslide) ಚೂರಲ್ಮಲಾದಿಂದ ಮುಂಡಕ್ಕೈ ಗೆ ಸಂಪರ್ಕ ಕಲ್ಪಿಸಲು ಭಾರತೀಯ ಸೈನಿಕರು 31 ಗಂಟೆಗಳಲ್ಲಿ ಅದ್ಭುತ ಸೇತುವೆಯನ್ನು ನಿರ್ಮಿಸಿದ್ದಾರೆ. 190 ಅಡಿ ಉದ್ದದ ಸೇತುವೆ ನಿರ್ಮಾಣ ಕಾರ್ಯ ಸುಲಭವಾಗಿರಲಿಲ್ಲ. ಆದರೂ ನಮ್ಮ ಸೈನಿಕರು ಸೀಮಿತ ಅವಧಿಯಲ್ಲಿ ಅದನ್ನು ನಿರ್ಮಿಸಿದ್ದಾರೆ. ಇದರ ಕಾರ್ಯಾಚರಣೆ ಹೇಗಿತ್ತು ಗೊತ್ತೇ? ಅಂದ ಹಾಗೆ, ಈ ಸೇತುವೆಗೆ ಬೆಂಗಳೂರಿನ ನಂಟೂ ಇದೆ.

VISTARANEWS.COM


on

By

Wayanad Landslide
Koo

ವಯನಾಡು: ಪ್ರವಾಹ ಪೀಡಿತ ವಯನಾಡಿನಲ್ಲಿ (Wayanad Landslide) ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಭಾರತೀಯ ಸೇನೆ (Indian army) 31 ಗಂಟೆಗಳ ಅವಧಿಯಲ್ಲಿ ಯಾವುದೇ ವಿರಾಮವಿಲ್ಲದೆ 190 ಅಡಿ ಉದ್ದದ ಸೇತುವೆಯನ್ನು (Bailey bridge) ನಿರ್ಮಿಸಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ವಯನಾಡಿನ ಕುಗ್ರಾಮವಾದ ಚೂರಲ್ಮಲಾ ಮತ್ತು ಮುಂಡಕ್ಕೈ ಭೂಕುಸಿತದಿಂದಾಗಿ ಧ್ವಂಸಗೊಂಡಿದ್ದು, ಇಲ್ಲಿ ಫ್ಯಾಬ್ರಿಕೇಟೆಡ್ ಟ್ರಸ್ ಬೈಲಿ ಸೇತುವೆಯನ್ನು ನಿರ್ಮಿಸಲಾಗಿದೆ.

ಬೆಟ್ಟಗಳಿಂದ ಪ್ರಬಲ ಬಂಡೆಗಳು ಉರುಳಿ ಬಿದ್ದ ಪರಿಣಾಮ ಇಲ್ಲಿದ್ದ 100 ಅಡಿ ಉದ್ದದ ಕಾಂಕ್ರೀಟ್ ಸೇತುವೆ ಸಂಪೂರ್ಣ ಧ್ವಂಸಗೊಂಡಿದೆ. ನಿರ್ಮಾಣಗೊಂಡ ಹೊಸ ಸೇತುವೆ ಮೇಲೆ ಸೈನ್ಯವು ಮೊದಲು ಆಂಬ್ಯುಲೆನ್ಸ್ ಅನ್ನು ಹಾದುಹೋಗಲು ಅವಕಾಶ ಮಾಡಿಕೊಟ್ಟಿತು. ಬಳಿಕ ಮಿಲಿಟರಿ ಸೇವೆಯನ್ನು ಒದಗಿಸಲು ಕಳುಹಿಸಿತ್ತು.

3 ಮೀಟರ್ ಅಗಲದ ಸೇತುವೆಯ ಸಾಮರ್ಥ್ಯವನ್ನು 24 ಟನ್‌ಗಳನ್ನು ಹೊತ್ತೊಯ್ಯಬಲ್ಲ ಟ್ರಕ್ ಮೂಲಕ ಪರೀಕ್ಷೆ ನಡೆಸಲಾಯಿತು. ಈ ಸೇತುವೆ ನಿರ್ಮಾಣದಿಂದ ಮುಂಡಕ್ಕೈನಲ್ಲಿ ಶೋಧ ಕಾರ್ಯಾಚರಣೆಯನ್ನು ಚುರುಕುಗೊಳಿಸಬಹುದು ಎಂದು ಕರ್ನಾಟಕ ಮತ್ತು ಕೇರಳ ಉಪ ಪ್ರದೇಶ ಕಮಾಂಡಿಂಗ್ ಅಧಿಕಾರಿ ಮೇಜರ್ ಜನರಲ್ ವಿ.ಟಿ. ಮ್ಯಾಥ್ಯೂ ತಿಳಿಸಿದ್ದಾರೆ.

Wayanad Landslide
Wayanad Landslide


ಸೇತುವೆಯ ಅಗಲವು ಮಣ್ಣು ತೆಗೆಯುವ ಯಂತ್ರ, ಅಗೆಯುವ ಯಂತ್ರಗಳು, ಆಂಬ್ಯುಲೆನ್ಸ್‌ ಮತ್ತು ಜೀಪ್‌, ಟ್ರಕ್‌ಗಳು ಸಾಗಲು ಸಾಕಷ್ಟು ಉತ್ತಮವಾಗಿದೆ. ಮುಂಡಕೈಗೆ ಇಲ್ಲಿಯವರೆಗೆ ಕೇವಲ ಟೀ ಎಸ್ಟೇಟ್‌ನಲ್ಲಿದ್ದ ಆಫ್ ರೋಡ್ ಜೀಪುಗಳನ್ನು ಮಾತ್ರ ಕಳುಹಿಸಲು ಸಾಧ್ಯವಾಗುತ್ತಿತ್ತು ಎಂದು ಅಧಿಕಾರಿ ತಿಳಿಸಿದರು. ಮಂಡಕೈ ಪ್ರದೇಶದಲ್ಲಿ 400 ಮನೆಗಳಿದ್ದು, ಭೂಕುಸಿತದಿಂದ 30 ಮಂದಿ ಮಾತ್ರ ಬದುಕುಳಿದಿದ್ದಾರೆ. ಅಲ್ಲಿ ಇನ್ನೂ ಅನೇಕ ಜನರಿದ್ದು, ಕಾಣೆಯಾಗಿದ್ದಾರೆ ಎಂದು ಅವರು ಹೇಳಿದರು.

ಸೇತುವೆ ಹೇಗೆ ನಿರ್ಮಿಸಲಾಯಿತು?

ಜುಲೈ 30ರಂದು ಚೂರಲ್ಮಲಾದಲ್ಲಿ ಬೈಲಿ ಸೇತುವೆಗಾಗಿ 20 ಟ್ರಕ್‌ಗಳಲ್ಲಿ ಬೆಂಗಳೂರಿನಿಂದ ಪ್ರತಿ 10 ಅಡಿ ಉದ್ದದ ಪ್ಯಾನಲ್‌ಗಳನ್ನು ಸಾಗಿಸಲಾಗಿತ್ತು. 190 ಅಡಿ ಉದ್ದದ ಸೇತುವೆ ನಿರ್ಮಿಸಲು ಒಟ್ಟು 19 ಉಕ್ಕಿನ ಫಲಕಗಳನ್ನು ಬಳಸಲಾಗಿದೆ. ಇದು ಒಂದೇ ಪಿಯರ್‌ನಿಂದ ಆಧರಿತವಾಗಿದ ಎಂದು ಮೇಜರ್ ಜನರಲ್ ಮ್ಯಾಥ್ಯೂ ಹೇಳಿದರು.

Wayanad Landslide
Wayanad Landslide


ಮಂಗಳವಾರ ಸಂಜೆಯೇ ಮದ್ರಾಸ್ ಎಂಜಿನಿಯರ್ ಗ್ರೂಪ್‌ನ ಅಧಿಕಾರಿಗಳು, ಸೇನೆಯ ಎಂಜಿನಿಯರಿಂಗ್ ಟಾಸ್ಕ್ ಫೋರ್ಸ್ ಸ್ಥಳಕ್ಕೆ ಆಗಮಿಸಿತ್ತು. ಬುಧವಾರ ಬೆಳಗ್ಗೆ 9 ಗಂಟೆಗೆ ಸೀಮಿತ ಸ್ಥಳಾವಕಾಶದಲ್ಲಿ ಸೇತುವೆ ನಿರ್ಮಾಣ ಕಾರ್ಯವನ್ನು 144 ಅಧಿಕಾರಿಗಳು ಪ್ರಾರಂಭಿಸಿದರು. ಒಂದು ಟ್ರಕ್‌ಗೆ ಮಾತ್ರ ಸ್ಥಳಾವಕಾಶವಿತ್ತು. ಪ್ರತಿಕೂಲ ಹವಾಮಾನ ಪರಿಸ್ಥಿತಿ, ಸಾಕಷ್ಟು ಸ್ಥಳಾವಕಾಶದ ಕೊರತೆಯಿಂದ ಕಾಮಗಾರಿ ವಿಳಂಬವಾಯಿತು. ಇವೆಲ್ಲದರ ಹೊರತಾಗಿಯೂ ಅಧಿಕಾರಿಗಳು ರಾತ್ರಿಯಿಡೀ ಬಿಡುವಿಲ್ಲದೆ ದುಡಿದು ಆಗಸ್ಟ್ 1ರಂದು ಸಂಜೆ 6 ಗಂಟೆಗೆ ಸೇತುವೆಯನ್ನು ಸಿದ್ಧಗೊಳಿಸಿದರು ಎಂದು ಅವರು ತಿಳಿಸಿದರು.



ಇದನ್ನೂ ಓದಿ: Wayanad Landslide: ವಯನಾಡು ಹಿಂದೆ ಹೇಗಿತ್ತು? ಈಗ ಹೇಗಿದೆ? ದುರಂತ ಸ್ಥಳದ ದೃಶ್ಯ ಸೆರೆ ಹಿಡಿದ ಇಸ್ರೋ

ಬೈಲಿ ಸೇತುವೆಗೆ ಸಮಾನಾಂತರವಾದ ಕಾಲುಸೇತುವೆ ನಿರ್ಮಾಣ ಕಾರ್ಯವನ್ನು ಗುರುವಾರ ಮುಂಜಾನೆ 3 ಗಂಟೆ ಸುಮಾರಿಗೆ ಸೇನೆಯ ಸಿಬ್ಬಂದಿ ಪ್ರಾರಂಭಿಸಿದರು. 100 ಅಡಿ ಉದ್ದದ ಈ ಸೇತುವೆಯನ್ನು ಸಂಜೆ 6 ಗಂಟೆಗೆ ಪೂರ್ಣಗೊಳಿಸಿದ್ದೇವೆ ಎಂದರು. ಈ ಎರಡು ಸೇತುವೆಗಳನ್ನು ಸರ್ಕಾರ ಬಯಸಿದಷ್ಟು ಕಾಲ ಇರಿಸಿಕೊಳ್ಳಬಹುದು. ಈ ಹಿಂದೆ ಶಬರಿಮಲೆಯಲ್ಲಿ ನಿರ್ಮಿಸಿರುವ ಬೈಲಿ ಸೇತುವೆ ಇನ್ನೂ ಇದೆ ಎಂದು ಅವರು ತಿಳಿಸಿದರು.

Continue Reading

Latest

Actress Kiara Aadvani: ಬಿಕಿನಿ ಪ್ರಿಯರು ಕಿಯಾರಾ ಅಡ್ವಾಣಿಯ ಈ ಟಾಪ್ 5 ಬಿಕಿನಿ ಟ್ರೈ ಮಾಡಬಹುದು!

Actress Kiara Aadvani: ಬೀಚ್ ಎಂದರೆ ಎಲ್ಲರಿಗೂ ಇಷ್ಟ. ಇನ್ನು ಬೀಚ್‌ಗೆ ಹೋಗುವಾಗ ಚೂಡಿದಾರ್, ಸೀರೆಗಳಿಗಿಂತ ಹೆಚ್ಚು ಸೂಕ್ತವಾದದ್ದು ಬೀಚ್ ಡ್ರೆಸ್. ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಬಿಡುವಿನ ಸಮಯದಲ್ಲಿ ಸ್ಟೈಲಿಶ್ ಬಿಕಿನಿ ಡ್ರೆಸ್‌ಗಳನ್ನು ಧರಿಸಿ ಬೀಚ್ ಸಮಯವನ್ನು ಎಂಜಾಯ್ ಮಾಡುತ್ತಾರಂತೆ. ಕಿಯಾರ ಅಡ್ವಾಣಿ ಅವರ ಟಾಪ್ 5 ಬಿಕಿನಿ ಡ್ರೆಸ್ ಬಗ್ಗೆ ಮಾಹಿತಿ ಇಲ್ಲಿದೆ. ನೀವು ಕೂಡ ಬೀಚ್ ಪ್ರಿಯರಾಗಿದ್ದರೆ, ಬೀಚ್‌ನಲ್ಲಿ ಬಿಕಿನಿ ಧರಿಸುವ ಆಸೆ ಇದ್ದರೆ ಈ ಡ್ರೆಸ್ ಟ್ರೈ ಮಾಡಬಹುದು!

VISTARANEWS.COM


on

Actress Kiara Aadvani
Koo


ಮುಂಬೈ : ಬಾಲಿವುಡ್ ಹಾಗೂ ಟಾಲಿವುಡ್‌ನಲ್ಲಿ ಮಿಂಚಿದ ನಟಿ ಕಿಯಾರಾ ಅಡ್ವಾಣಿ (Actress Kiara Aadvani) ಅವರು ತಮ್ಮ ನಟನೆ ಹಾಗೂ ಸೌಂದರ್ಯದ ಮೂಲಕ ಜನರ ಮೆಚ್ಚುಗೆ ಗಳಿಸಿದ್ದಾರೆ. ಇನ್ನು ಇವರಿಗೆ ಬೀಚ್‌ ಎಂದರೆ ತುಂಬಾ ಇಷ್ಟ. ಹಾಗಾಗಿ ತಮ್ಮ ರಜಾದಿನಗಳು ಬಂತೆಂದರೆ ಕಿಯಾರಾ ಬೀಚ್‍ನತ್ತ ಮುಖಮಾಡುತ್ತಾರೆ. ಅಲ್ಲಿ ಅವರು ಸ್ಟೈಲಿಶ್ ಬಿಕಿನಿ ಡ್ರೆಸ್‍ಗಳನ್ನು ಧರಿಸಿ ಬೀಚ್ ಸಮಯವನ್ನು ಎಂಜಾಯ್‌ ಮಾಡುತ್ತಾರಂತೆ. ಇಲ್ಲಿ ಕಿಯಾರ ಅಡ್ವಾಣಿ ಅವರ ಟಾಪ್ 5 ಬಿಕಿನಿ ಡ್ರೆಸ್‌ ಬಗ್ಗೆ ಮಾಹಿತಿ ಇದೆ ನೋಡಿ.

Actress Kiar Aadvani
Actress Kiar Aadvani

ಸರೋಂಗ್ ಸ್ಕರ್ಟ್‍ನೊಂದಿಗೆ ಪ್ರಿಂಟೆಡ್ ಬಿಕಿನಿ:

ಕಿಯಾರಾ ಅಡ್ವಾಣಿ ಅವರು ಬೀಚ್‍ನಲ್ಲಿ ಆಕರ್ಷಕವಾಗಿ ಕಾಣಲು ಧರಿಸುವ ಬಿಕಿನಿಯಲ್ಲಿ ಸರೋಂಗ್ ಸ್ಕರ್ಟ್ ಪ್ರಿಂಟೆಡ್ ಬಿಕಿನಿ ಕೂಡ ಒಂದು. ಈ ಕಾಂಬೋ ಬೀಚ್‍ಗೆ ಹೋಗಲು ಸೂಕ್ತವಾಗಿದೆ. ಚಿತ್ರದಲ್ಲಿ ಕಿಯಾರಾ ರೆಡ್ ಸರೋಂಗ್ ಮತ್ತು ರೆಡ್ ಕಲರ್ ಪ್ರಿಂಟೆಡ್ ಬಿಕಿನಿ ಟಾಪ್ ಧರಿಸಿದ್ದಾರೆ. ಹಾಗೇ ಅವರು ತನ್ನ ಕೂದಲಿಗೆ ಸುತ್ತಿದ ಸ್ಕಾರ್ಫ್ ಮತ್ತು ಸನ್‍ಗ್ಲಾಸ್‍ಗಳು ಒಂದಕ್ಕೊಂದು ಸರಿಹೊಂದುವಂತೆ ಧರಿಸಿದ್ದಾರೆ. ಕಡಲತೀರದಲ್ಲಿ ತಲೆ ತಿರುಗುವ ಸಮಸ್ಯೆ ಇರುವವರಿಗೆ ಈ ಸ್ಟೈಲ್ ಸೂಕ್ತವಾಗಿದೆ ಏಕೆಂದರೆ ಇದು ಫ್ಯಾಶನ್ ಮಾತ್ರವಲ್ಲದೆ ಇದು ಆಯಾಸವಾಗದಂತೆ ರಕ್ಷಿಸುತ್ತದೆ.

Actress Kiar Aadvani
Actress Kiar Aadvani

ಸ್ಟ್ರಾಪ್ಲೆಸ್ ಹಳದಿ ಬಿಕಿನಿ:

ಬೀಚ್ ಉಡುಪುಗಳ ಮೇಲೆ ಹೊಸ ಸ್ಪಿನ್‍ಗಾಗಿ ಸ್ಟ್ರಾಪ್ ಲೆಸ್ ಆಗಿರುವ ಹಳದಿ ಬಿಕಿನಿಯನ್ನು ಆಯ್ಕೆ ಮಾಡಿ. ಕಿಯಾರಾ ಬಿಳಿ ಶರ್ಟ್ ಮತ್ತು ರೌಂಡ್ ಕ್ಯಾಪ್‌ನೊಂದಿಗೆ ತಮ್ಮ ನೋಟವನ್ನು ಆಕರ್ಷಕವಾಗಿ ಕಾಣುವಂತೆ ಮಾಡಿದ್ದಾರೆ.

ಈ ಆಕರ್ಷಕ ಮತ್ತು ವಿಶಿಷ್ಟ ಸ್ಟೈಲ್ ನೊಂದಿಗೆ ನೀವು ಎಲ್ಲಿಗೆ ಹೋದರೂ ಖಂಡಿತವಾಗಿಯೂ ಬೇರೆಯವರ ಗಮನ ಸೆಳೆಯುತ್ತೀರಿ.

Actress Kiar Aadvani
Actress Kiar Aadvani

ಮಲ್ಟಿ-ಸ್ಟ್ರಿಪ್ ಬ್ಲ್ಯಾಕ್ ಬಿಕಿನಿ:

ನೀವು ಕ್ಲಾಸಿಕ್ ಮತ್ತು ಅಸಾಧಾರಣ ನೋಟವನ್ನು ಬಯಸಿದರೆ, ಮಲ್ಟಿ-ಸ್ಟ್ರಿಪ್ ಕಪ್ಪು ಬಿಕಿನಿಯನ್ನು ಪ್ರಯತ್ನಿಸಿ. ಕಿಯಾರಾ ಅಡ್ವಾಣಿ ಅವರ ಒಂದು ಭುಜದ ಮೇಲೆ ಮಾತ್ರ ಕಾಣುವ ಸ್ಟ್ರಿಪ್ ವಿನ್ಯಾಸ ಅತ್ಯಾಧುನಿಕತೆ ಮತ್ತು ಅನನ್ಯತೆಯ ಸ್ಪರ್ಶವನ್ನು ನೀಡುತ್ತದೆ. ಇದು ಯಾವುದೇ ಬೀಚ್‍ಗಳಲ್ಲಿ ರಜಾದಿನಗಳನ್ನು ಆನಂದಿಸಲು ಸೂಕ್ತವಾಗಿದೆ ಮತ್ತು ನಿಮ್ಮನ್ನು ಸ್ಟೈಲಿಶ್ ಆಗಿ ಕಾಣುವಂತೆ ಮಾಡುತ್ತದೆ.

ಇದನ್ನೂ ಓದಿ: ಥೋ! ಈ ಮುದುಕರಿಗೆ ಈ ವಯಸ್ಸಲ್ಲಿ ಏನೆಲ್ಲ ಚಪಲ ನೋಡಿ! ಹಿಂದೆಂದೂ ಕಂಡಿರದಂಥ ವಿಡಿಯೊ!

Actress Kiar Aadvani
Actress Kiar Aadvani

ದೊಡ್ಡದಾದ ಶರ್ಟ್‌ನೊಂದಿಗೆ ಬಿಕಿನಿ:

ನಿಮ್ಮ ಬಿಕಿನಿಯೊಂದಿಗೆ ದೊಡ್ಡದಾದ ಶರ್ಟ್ ಧರಿಸುವುದು ಮತ್ತೊಂದು ಅದ್ಭುತ ಬೀಚ್ ಉಡುಗೆಯಾಗಿದೆ. ಈ ಶೈಲಿಯನ್ನು ತೋರಿಸಲು ಕಿಯಾರಾ ದೊಡ್ಡ ಗಾತ್ರದ ಹಳದಿ ಶರ್ಟ್ ಒಳಗೆ ಬೂದು ಬಣ್ಣದ ಬಿಕಿನಿ ಧರಿಸಿದ್ದಾರೆ. ಈ ಉಡುಗೆ ಬೀಚ್‍ನಲ್ಲಿ ಆನಂದಿಸಲು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಇದು ಫ್ಯಾಶನ್ ಮತ್ತು ಆರಾಮದಾಯಕವಾಗಿರುತ್ತದೆ.

Actress Kiar Aadvani
Actress Kiar Aadvani

ಬ್ಯಾಕ್ ಲೆಸ್ ಮಿನಿ ಡ್ರೆಸ್:

ಬಿಕಿನಿ ಧರಿಸಲು ಇಷ್ಟವಿಲ್ಲದವರು ಕಿಯಾರಾ ಅಡ್ವಾಣಿ ಧರಿಸಿರುವಂತೆ ಬ್ಯಾಕ್ ಲೆಸ್ ಮಿನಿಡ್ರೆಸ್ ಅನ್ನು ಪ್ರಯತ್ನಿಸಬಹುದು. ಈ ಉಡುಗೆಯು ಅತ್ಯಾಧುನಿಕತೆಯ ಲುಕ್ ಅನ್ನು ನೀಡುವುದರ ಜೊತೆಗೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಅದರ ಜೊತೆಗೆ ಸನ್‍ಗ್ಲಾಸ್ ಮತ್ತು ರೌಂಡ್ ಟೋಪಿಯನ್ನು ಧರಿಸಬಹುದು. ಇದು ನಿಮಗೆ ಸುಂದರ ನೋಟವನ್ನು ನೀಡುವುದರ ಜೊತೆ ಸ್ಟೈಲಿಶ್ ಆಗಿ ಕಾಣಿಸುತ್ತದೆ.

Continue Reading

ಸಿನಿಮಾ

Indian 2 OTT Release: ಒಟಿಟಿಯಲ್ಲಿ ಇಂಡಿಯನ್ 2 ಬಿಡುಗಡೆ ವಿಳಂಬ ಆಗುತ್ತಿರುವುದು ಈ ಕಾರಣಕ್ಕೆ!

ಕಮಲ್ ಹಾಸನ್ ಅಭಿನಯದ ತಮಿಳು ಚಿತ್ರ ಇಂಡಿಯನ್ 2 ಒಟಿಟಿಯಲ್ಲಿ (Indian 2 OTT Release) ಪ್ರದರ್ಶನ ಕಾಣಲು ವಿಳಂಬವಾಗಿದೆ. ಜುಲೈ 12ರಂದು ಚಿತ್ರ ಮಂದಿರಗಳಿಗೆ ಬಂದಿದ್ದರೂ ಒಟಿಟಿಗೆ ಬರಲು ವಿಳಂಬವಾಗುತ್ತಿದೆ. ಈ ಚಿತ್ರ ಆಗಸ್ಟ್ 2ರಂದು ಒಟಿಟಿಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದರೂ ಬಂದಿಲ್ಲ. ಈ ಚಿತ್ರದ ಪ್ರದರ್ಶನಕ್ಕೆ ನೆಟ್‌ಫ್ಲಿಕ್ಸ್ 150 ಕೋಟಿ ರೂ. ನೀಡಿತ್ತು. ಚಲನಚಿತ್ರ ನಿರ್ಮಾಪಕರು 75 ಕೋಟಿ ರೂ. ಮುಂಗಡ ಪಾವತಿಯನ್ನು ಪಡೆದಿದ್ದರು. ಆದರೆ ನೆಟ್‌ಫ್ಲಿಕ್ಸ್‌ ಈಗ ಹಿಂಜರಿಯುತ್ತಿದೆ.

VISTARANEWS.COM


on

By

Indian 2 OTT Release
Koo

ಇಂಡಿಯನ್ 2 (Indian 2 OTT Release) ಜುಲೈ 12 ಚಿತ್ರಮಂದಿರಗಳಲ್ಲಿ (movie theater) ಬಿಡುಗಡೆಯಾಗಿತ್ತು. ಕಮಲ್ ಹಾಸನ್ (kamal hasan), ಸಿದ್ಧಾರ್ಥ್, ಎಸ್.ಜೆ. ಸೂರ್ಯ ಮತ್ತು ರಾಕುಲ್ ಪ್ರೀತ್ ಸಿಂಗ್ ನಟಿಸಿರುವ ಈ ಚಿತ್ರವು ವಿಮರ್ಶಕರು, ಅಭಿಮಾನಿಗಳಿಂದ ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಥಿಯೇಟರ್ ಗಳಿಗೆ ಬಂದ ಮೇಲೆ ಶೀಘ್ರದಲ್ಲೇ ಒಟಿಟಿಗೆ (OTT Release) ಬರಲು ನಿರ್ಧರಿಸಿರುವ ಚಿತ್ರ ತಂಡಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಹಿನ್ನಡೆಯಾಗುತ್ತಿದೆ.

ಗಲ್ಲಾ ಪೆಟ್ಟಿಗೆಯಲ್ಲಿ ನಿರೀಕ್ಷಿತ ಯಶಸ್ಸು ಕಾಣದೇ ಇರುವುದರಿಂದ ಒಟಿಟಿ ಚಿತ್ರದ ಪ್ರದರ್ಶನವನ್ನು ಹಿಂದಕ್ಕೆ ತಳ್ಳುತ್ತಿದೆ. ಈ ಮೊದಲು ಆಗಸ್ಟ್ 2 ರಂದು ಬಿಡುಗಡೆಯಾಗುತ್ತೆ ಎಂದು ನಿರೀಕ್ಷಿಸಿದ್ದ ಚಿತ್ರ ಇದೀಗ ಆಗಸ್ಟ್ 9ಕ್ಕೆ ಮುಂದೂಡಲಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಒಟಿಟಿ ಪ್ರೇಕ್ಷಕರು ಈ ಸಿನಿಮಾ ನೋಡಲು ಕೊಂಚ ಸಮಯ ಬೇಕಾಗಬಹುದು.

ವರದಿ ಪ್ರಕಾರ, ಇಂಡಿಯನ್ 2 ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದು ಎಲ್ಲಾ ಭಾಷೆಗಳಲ್ಲಿ ಚಿತ್ರದ ಪ್ರದರ್ಶನಕ್ಕೆ ನೆಟ್‌ಫ್ಲಿಕ್ಸ್ 150 ಕೋಟಿ ರೂ. ನೀಡಿತ್ತು. ಚಲನಚಿತ್ರ ನಿರ್ಮಾಪಕರು 75 ಕೋಟಿ ರೂ. ಮುಂಗಡ ಪಾವತಿಯನ್ನು ಪಡೆದಿದ್ದಾರೆ. ಆದರೆ ಚಿತ್ರವೀಕ್ಷಕರ ನಕಾರಾತ್ಮಕ ಪ್ರತಿಕ್ರಿಯೆಯಿಂದಾಗಿ ನೆಟ್‌ಫ್ಲಿಕ್ಸ್ ಕಾರ್ಯನಿರ್ವಾಹಕರು ಮುಂಗಡ ಮೊತ್ತದ ಮರು ಪಾವತಿಗೆ ವಿನಂತಿಸಿದ್ದಾರೆ.


ಹೀಗಾಗಿ ಒಟಿಟಿಯಲ್ಲಿ ಚಿತ್ರ ಪ್ರದರ್ಶನ ಕೊಂಚ ವಿಳಂಬವಾಗುತ್ತಿದೆ. ಆಗಸ್ಟ್ 2ರಂದು ಒಟಿಟಿಯಲ್ಲಿ ಬರಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಇಂಡಿಯನ್ 2 ಚಿತ್ರವು ಒಟಿಟಿಯಲ್ಲಿ ಆಗಸ್ಟ್ 9ರಂದು ತೆರೆ ಕಾಣುವ ನಿರೀಕ್ಷೆ ಇದೆ ಎಂದು ʼ123 ತೆಲುಗುʼ ವರದಿ ಹೇಳಿದ್ದರೂ ಈ ಬಗ್ಗೆ ನಿಖರವಾದ ಮಾಹಿತಿ ಅಲ್ಲ.

ಇದನ್ನೂ ಓದಿ: Pushpa 2: ಪುಷ್ಪ 2 ಕ್ಲೈ ಮ್ಯಾಕ್ಸ್‌ ದೃಶ್ಯ ಲೀಕ್‌; ಕೋಪ ಹೊರ ಹಾಕಿದ ಅರ್ಜುನ್‌ ಫ್ಯಾನ್ಸ್‌!

ಇಂಡಿಯನ್ 2 ಚಿತ್ರವೂ ಜುಲೈ ತಿಂಗಳಲ್ಲಿ ವಿಶ್ವದಾದ್ಯಂತ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಂಡಿತು. ಆದರೆ ಹೆಚ್ಚಾಗಿ ನಕಾರಾತ್ಮಕ ವಿಮರ್ಶೆಗಳೇ ಕೇಳಿ ಬಂದಿವೆ. ಬರವಣಿಗೆ, ಅತಿಯಾದ ಉದ್ದ, ಭವ್ಯತೆಗೆ ಹೆಚ್ಚಿನ ಒತ್ತು ಧ್ವನಿಮುದ್ರಿಕೆ ಕುರಿತು ಆಕ್ಷೇಪ ಕೇಳಿ ಬಂದಿದ್ದರೂ ಕಮಲ್ ಹಾಸನ್ ಅಭಿನಯಕ್ಕೆ ಮಾತ್ರ ಭಾರಿ ಮೆಚ್ಚುಗೆ ಗಳಿಸಿದೆ.

ಆರು ಗಂಟೆಗಳಿಗೂ ಹೆಚ್ಚು ಅವಧಿಯ ಚಲನಚಿತ್ರ ಇದಾಗಿದ್ದು, ಎರಡು ಭಾಗಗಳಾಗಿ ವಿಭಜಿಸಲಾಗಿದೆ. ಇಂಡಿಯನ್ 2ನ ಮುಂದುವರಿದ ಭಾಗ ಇಂಡಿಯನ್ 3 ಚಿತ್ರವನ್ನು 2025ರಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

Continue Reading

Latest

Mangaluru Train Timings: ಮಂಗಳೂರು-ಬೆಂಗಳೂರು ರೈಲು ವೇಳಾಪಟ್ಟಿ ಬದಲು; ಪ್ರಯಾಣಿಕರಿಗೆ ಏನು ಲಾಭ?

Mangaluru Train Timings ಮಂಗಳೂರಿನಿಂದ ಬೆಂಗಳೂರಿನ ಯಶವಂತಪುರಕ್ಕೆ ಸಂಚರಿಸುತ್ತಿದ್ದ ನಂ.16576 ಎಕ್ಸ್ ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಬದಲಾಯಿಸುವಂತೆ ಸಾರ್ವಜನಿಕರು ಬಹುದಿನಗಳಿಂದ ಮನವಿ ಮಾಡುತ್ತಿದ್ದರು. ಇದೀಗ ಸಾರ್ವಜನಿಕರ ಮನವಿಗೆ ಸ್ಪಂದಿಸಿದ ರೈಲ್ವೆ ಇಲಾಖೆ ನಂ.16576 ಎಕ್ಸ್ ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಬದಲಾಯಿಸಿ ನವೆಂಬರ್ 1ರಿಂದ ಅದು ಜಾರಿಗೆ ಬರಲಿದೆ ಎಂಬುದಾಗಿ ತಿಳಿಸಿದ್ದಾರೆ. ಈ ಮೂಲಕ ರೈಲ್ವೆ ಇಲಾಖೆ ತನ್ನ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದೆ.

VISTARANEWS.COM


on

Mangaluru Train Timings
Koo


ಬೆಂಗಳೂರು: ವಾರದಲ್ಲಿ ಮೂರು ದಿನ ಸೋಮವಾರ, ಬುಧವಾರ ಮತ್ತು ಶುಕ್ರವಾರ ಮಾತ್ರ ಮಂಗಳೂರಿನಿಂದ ಬೆಂಗಳೂರಿನ ಯಶವಂತಪುರಕ್ಕೆ ಸಂಚರಿಸುತ್ತಿದ್ದ ನಂ.16576 ಎಕ್ಸ್ ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಬದಲಾಯಿಸುವಂತೆ ಸಾರ್ವಜನಿಕರು ಬಹುದಿನಗಳಿಂದ ಮನವಿ ಮಾಡುತ್ತಿದ್ದರು. ಇದೀಗ ಸಾರ್ವಜನಿಕರ ಮನವಿಗೆ ಸ್ಪಂದಿಸಿದ ರೈಲ್ವೆ ಇಲಾಖೆ ನಂ.16576 ಎಕ್ಸ್ ಪ್ರೆಸ್ ರೈಲಿನ (Mangaluru Train Timings) ವೇಳಾಪಟ್ಟಿಯನ್ನು ಬದಲಾಯಿಸಿದೆ. ನವೆಂಬರ್ 1ರಿಂದ ಅದು ಜಾರಿಗೆ ಬರಲಿದೆ. ಈ ಮೂಲಕ ರೈಲ್ವೆ ಇಲಾಖೆ ತನ್ನ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದೆ. ರೈಲ್ವೆ ಸಹಾಯಕ ಸಚಿವ ವಿ ಸೋಮಣ್ಣ ಅವರು ಎಕ್ಸ್‌ ಮೂಲಕ ಈ ಮಾಹಿತಿ ನೀಡಿದ್ದಾರೆ.

ಈಗಿನ ರೈಲ್ವೆ ವೇಳಾಪಟ್ಟಿಯ ಪ್ರಕಾರ, ಈ ರೈಲು ಬೆಳಗ್ಗೆ 11:30ಕ್ಕೆ ಮಂಗಳೂರಿನಿಂದ ಹೊರಟು ರಾತ್ರಿ 8:45ರ ಸುಮಾರಿಗೆ ಯಶವಂತಪುರ ರೈಲು ನಿಲ್ದಾಣವನ್ನು ತಲುಪುತಿತ್ತು. ಇನ್ನು ಮುಂದಿನ ದಿನಗಳಲ್ಲಿ ಈ ರೈಲು ಬೆಳಗ್ಗೆ 7 ಗಂಟೆಗೆ ಮಂಗಳೂರಿನಿಂದ ಹೊರಟು ಸಂಜೆ 4.30ಕ್ಕೆ ಬೆಂಗಳೂರಿನ ಯಶವಂತಪುರ ತಲುಪಲಿದೆ. ಈ ವರ್ಷದ ನವೆಂಬರ್ 1ರಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹೊಸ ವೇಳಾಪಟ್ಟಿ ಜಾರಿಗೆ ಬರಲಿದೆ. ಹಾಗಾಗಿ ಇದುವರೆಗೆ ಬೆಳಗ್ಗೆ ತಡವಾಗಿ ಹೊರಟು, ರಾತ್ರಿ ಬೆಂಗಳೂರಿಗೆ ತಲುಪುತ್ತಿದ್ದ ಈ ರೈಲು, ಇನ್ನುಮುಂದೆ ಬೆಳಗ್ಗೆ ಬೇಗ ಹೊರಟು ಸಂಜೆಯ ವೇಳೆಗೆ ಬೆಂಗಳೂರು ತಲುಪಲಿದೆ. ಇದರಿಂದ ಪ್ರಯಾಣಿಕರು ರಾತ್ರಿಯೊಳಗೆ ತಮ್ಮ ಮನೆಗೆ ಸೇರಬಹುದು.

ಈ ಬಗ್ಗೆ ರೈಲ್ವೆ ಇಲಾಖೆಯ ಸಹಾಯಕ ಸಚಿವ ವಿ.ಸೋಮಣ್ಣ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ. “ಮಂಗಳೂರು ಜಂಕ್ಷನ್ – ಯಶವಂತಪುರಕ್ಕೆ (ರೈಲು ಸಂಖ್ಯೆ 16576) ವಾರಕ್ಕೆ 3 ಬಾರಿ ಕಾರ್ಯಾಚರಿಸುವ ರೈಲಿನ ಸಮಯ ಬದಲಾಯಿಸುವಂತೆ ಬಹುದಿನಗಳಿಂದಲೂ ಸಾರ್ವಜನಿಕರಿಂದ ಮನವಿಯಿತ್ತು. ಇದೀಗ, ಸಾರ್ವಜನಿಕರ ಕೋರಿಕೆಯನ್ನು ಈಡೇರಿಸಲಾಗಿದೆ. ಈ ರೈಲು ಬೆಳಗ್ಗೆ 7 ಗಂಟೆಗೆ ಮಂಗಳೂರಿನಿಂದ ಹೊರಟು ಸಂಜೆ 4.30ಕ್ಕೆ ಬೆಂಗಳೂರಿನ ಯಶವಂತಪುರ ತಲುಪಲಿದೆʼʼ ಎಂದಿದ್ದಾರೆ.

ಇದನ್ನೂ ಓದಿ: ಅಮೆಜಾನ್‌ನಲ್ಲಿ 55,000 ರೂ. ಮೊಬೈಲ್ ಫೋನ್ ಆರ್ಡರ್ ಮಾಡಿದವನಿಗೆ ಸಿಕ್ಕಿದ್ದು ಟೀ ಕಪ್!

ಸಾರ್ವಜನಿಕರು ಈ ರೈಲಿನ ಸೇವೆಯ ಪ್ರಯೋಜನ ಪಡೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದು ವಿ. ಸೋಮಣ್ಣ ತಮ್ಮ ಸೋಶಿಯಲ್ ಮೀಡಿಯಾದ ಪೇಜ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌಟ “ಸಮಯ ಬದಲಾವಣೆ ಮಾಡಲು ರೈಲ್ವೇ ಸಚಿವರನ್ನು ಒತ್ತಾಯಿಸಲಾಗಿತ್ತು. ನಮ್ಮ ಮನವಿಗೆ ಸ್ಪಂದಿಸಿರುವ ರೈಲ್ವೆ ಇಲಾಖೆ ಈಗ ಆದೇಶ ಹೊರಡಿಸಿರುವುದು ಕಂಡು ಖುಷಿಯಾಗಿದೆʼʼ ಎಂದು ತಿಳಿಸಿದ್ದಾರೆ.

Continue Reading
Advertisement
Wayanad Landslide
ದೇಶ28 mins ago

Wayanad Landslide: 144 ಸೈನಿಕರು 31 ಗಂಟೆಯೊಳಗೆ 190 ಅಡಿ ಉದ್ದದ ಸೇತುವೆ ನಿರ್ಮಿಸಿದ್ದು ಹೇಗೆ?

Actress Kiara Aadvani
Latest29 mins ago

Actress Kiara Aadvani: ಬಿಕಿನಿ ಪ್ರಿಯರು ಕಿಯಾರಾ ಅಡ್ವಾಣಿಯ ಈ ಟಾಪ್ 5 ಬಿಕಿನಿ ಟ್ರೈ ಮಾಡಬಹುದು!

Indian 2 OTT Release
ಸಿನಿಮಾ30 mins ago

Indian 2 OTT Release: ಒಟಿಟಿಯಲ್ಲಿ ಇಂಡಿಯನ್ 2 ಬಿಡುಗಡೆ ವಿಳಂಬ ಆಗುತ್ತಿರುವುದು ಈ ಕಾರಣಕ್ಕೆ!

One day workshop on 10th August by G Academy in Bengaluru
ಬೆಂಗಳೂರು38 mins ago

Workshop: ಬೆಂಗಳೂರಿನಲ್ಲಿ ಆ.10ರಂದು ಸಿನಿಮಾಸಕ್ತರಿಗೆ ಕಾರ್ಯಾಗಾರ

Ranadhurandhara book release in Bengaluru on August 4
ಕರ್ನಾಟಕ40 mins ago

Book Release: ಬೆಂಗಳೂರಿನಲ್ಲಿ ಆ.4ರಂದು ʼರಣಧುರಂಧರʼ ಗ್ರಂಥ ಲೋಕಾರ್ಪಣೆ

Manu Bhaker
ಕ್ರೀಡೆ51 mins ago

Manu Bhaker : 25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್​ ಫೈನಲ್​ಗೆ​​; ಒಂದೇ ಒಲಿಂಪಿಕ್ಸ್​ನಲ್ಲಿ ಮೂರನೇ ಬಾರಿ ಫೈನಲ್​ಗೆ

Woman Deliver Baby in Auto
ಕರ್ನಾಟಕ1 hour ago

Woman Deliver Baby in Auto: ಆಸ್ಪತ್ರೆಗೆ ಹೋಗುವಾಗ ಆಟೋದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

Mangaluru Train Timings
Latest1 hour ago

Mangaluru Train Timings: ಮಂಗಳೂರು-ಬೆಂಗಳೂರು ರೈಲು ವೇಳಾಪಟ್ಟಿ ಬದಲು; ಪ್ರಯಾಣಿಕರಿಗೆ ಏನು ಲಾಭ?

BSNL 5G Service
ಪ್ರಮುಖ ಸುದ್ದಿ1 hour ago

BSNL 5G Service : ಬಿಎಸ್​ಎನ್​​ಎಲ್​ 5ಜಿ ಸಿಮ್​ಕಾರ್ಡ್​ಗಳು ವಿತರಣೆಗೆ ರೆಡಿ​; ಬೆಂಗಳೂರಿನಲ್ಲಿಯೂ ಲಭ್ಯವೇ?

karnataka Rain
ಮಳೆ1 hour ago

Karnataka Rain : ಹಾಸನದಲ್ಲಿ ಗಾಳಿ- ಮಳೆಗೆ ಕುಸಿದು ಬಿದ್ದ ಮನೆ; ಮಂಗಳೂರಿನಲ್ಲಿ ಜಾನುವಾರುಗಳು ಸಾವು

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 day ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 day ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 day ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ3 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ3 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ4 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ4 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ4 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ5 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌