Sexual Abuse: ಕ್ಲಾಸ್‌ಗೆ ಹೋಗಲು ಆಟೊ ಹತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ; ಚಾಲಕ ಮೊಹಮ್ಮದ್‌ ಬಂಧನ - Vistara News

Latest

Sexual Abuse: ಕ್ಲಾಸ್‌ಗೆ ಹೋಗಲು ಆಟೊ ಹತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ; ಚಾಲಕ ಮೊಹಮ್ಮದ್‌ ಬಂಧನ

Sexual Abuse: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಬಾಲಕಿಯ ಮೇಲೆ ಮುಸ್ಲಿಂ ಯುವಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿ ಸ್ವಲ್ಪ ಮಾನಸಿಕ ಅಸ್ವಸ್ಥೆಯಾಗಿದ್ದು, ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಆಟೋ ಚಾಲಕ ಮೊಹಮ್ಮದ್ ನದೀಮ್ ಎಂದು ಗುರುತಿಸಲಾಗಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳು ವ್ಯಾಪಕ ಪ್ರತಿಭಟನೆ ನಡೆಸಿವೆ.

VISTARANEWS.COM


on

Sexual Abuse
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಹಿಂದೂ ಯುವತಿಯರನ್ನು ಲವ್ ಮಾಡಿ ಮದುವೆಯಾಗಿ ಮತಾಂತರಗೊಳಿಸುವಂತಹ ಲವ್ ಜಿಹಾದ್ ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಿವೆ ಎಂಬ ಆಪಾದನೆಗಳ ನಡುವೆಯೇ, ಮತ್ತೊಂದು ಘಟನೆ ವರದಿಯಾಗಿದೆ. ಇತ್ತೀಚೆಗೆ ಉತ್ತರಾಖಂಡದ ಹಲ್ದ್ವಾನಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಮುಸ್ಲಿಂ ಯುವಕನೊಬ್ಬ ಲೈಂಗಿಕ ದೌರ್ಜನ್ಯ (Sexual Abuse) ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಇದು ಹಿಂದೂಪರ ಸಂಘಟನೆಯಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಪ್ರಾಪ್ತ ಬಾಲಕಿ ಮಾನಸಿಕ ಅಸ್ವಸ್ಥೆಯಾಗಿದ್ದು, ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಆಟೋ ಚಾಲಕ ಮೊಹಮ್ಮದ್ ನದೀಮ್ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಈ ಘಟನೆ ಭಾನುವಾರ ಜುಲೈ 28, 2024 ನಡೆದಿದೆ. 16 ವರ್ಷದ ಸಂತ್ರಸ್ತೆ ಕೊಟ್ವಾಲಿ ಪ್ರದೇಶದ ನಿವಾಸಿಯಾಗಿದ್ದಾಳೆ. ಆಕೆ ಪ್ರತಿಷ್ಠಿತ ಶಾಲೆಯೊಂದರಲ್ಲಿ 11ನೇ ತರಗತಿ ಓದುತ್ತಿದ್ದಾಳೆ. ಆರೋಪಿ ನದೀಮ್ ಹಲ್ದ್ವಾನಿಯ ಬನ್ಭೂಲ್ಪುರ ಪ್ರದೇಶದ ನಿವಾಸಿಯಾಗಿದ್ದಾನೆ. ಘಟನೆ ನಡೆದ ದಿನದಂದು, ಅಪ್ರಾಪ್ತ ಸಂತ್ರಸ್ತೆ ಮ್ಯೂಸಿಕ್ ಕ್ಲಾಸ್‍ಗೆ ಹಾಜರಾಗಲು ಮಂಗಲ್ ಪಾರಾವ್‍ನಲ್ಲಿ ನಿಂತು, ಆಟೋಗಾಗಿ ಕಾಯುತ್ತಿದ್ದಳು. ಆಗ ಆಟೋ ಚಾಲಕ ನದೀಮ್ ಅಲ್ಲಿಗೆ ಬಂದು ಮ್ಯೂಸಿಕ್ ಕ್ಲಾಸ್ ಬಳಿ ಅವಳನ್ನು ಬಿಡುವುದಾಗಿ ಭರವಸೆ ನೀಡಿದ. ಆಟೋ ಹತ್ತಿದ ಬಾಲಕಿಯನ್ನು ನಗರದ ಎಂಬಿ ಇಂಟರ್ ಕಾಲೇಜು ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಟೋದಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಅಪ್ರಾಪ್ತ ಬಾಲಕಿ ಇದನ್ನು ವಿರೋಧಿಸಿದಾಗ, ಘಟನೆಯನ್ನು ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ನದೀಮ್ ಬೆದರಿಕೆ ಹಾಕಿದ್ದಾನೆ. ಈ ಘೋರ ಕೃತ್ಯ ಎಸಗಿದ ನಂತರ, ಅವನು ಅವಳನ್ನು ಮಂಗಲ್ ಪಾರಾವ್ ಬಳಿ ಬಿಟ್ಟು ಪರಾರಿಯಾಗಿದ್ದಾನೆ. ಮನೆ ತಲುಪಿದ ಸಂತ್ರಸ್ತೆ ತನ್ನ ಕುಟುಂಬಕ್ಕೆ ನಡೆದ ಘಟನೆಯನ್ನು ವಿವರಿಸಿದಳು. ನಂತರ ಆಕೆಯ ಕುಟುಂಬವು ಪೊಲೀಸ್ ಠಾಣೆಗೆ ತಲುಪಿ ದೂರು ದಾಖಲಿಸಿದೆ.

ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಇತರ ಪುರಾವೆಗಳ ಆಧಾರದ ಮೇಲೆ, ಆರೋಪಿಯನ್ನು ಪೊಲೀಸರು ಕಂಡುಹುಡುಕಿದ್ದಾರೆ. ಸೋಮವಾರ (ಜುಲೈ 29, 2024) ಪೊಲೀಸರು ದಾಳಿ ನಡೆಸಿ ಮೊಹಮ್ಮದ್ ನದೀಮ್ ಅವರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 351 (2) (3), 64 (2) ಕೆ, 65 (1) ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 3/4 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಪೊಲೀಸರ ಪ್ರಕಾರ, ಸಂತ್ರಸ್ತೆ ಸಂಜೆ ಸಂಗೀತ ತರಗತಿಗಳಿಗೆ ಹಾಜರಾಗಲು ಆಟೋಗಾಗಿ ಕಾಯುತ್ತಿದ್ದಳು. ವಿದ್ಯಾರ್ಥಿ ಮಾನಸಿಕವಾಗಿ ದುರ್ಬಲಳಾಗಿದ್ದು, ಆರೋಪಿ ಆಟೋ ಚಾಲಕ ನದೀಮ್ ಅದರ ಲಾಭವನ್ನು ಪಡೆದುಕೊಂಡು, ಅವಳನ್ನು ಮನೆಗೆ ಬಿಡುವ ಬದಲು ಏಕಾಂತ ಸ್ಥಳಕ್ಕೆ ಕರೆದೊಯ್ದು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾನೆ ಎಂಬುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಶಾಲೆಯೊಳಗೆ ಗನ್‌ ತಂದು 10 ವರ್ಷದ ಹುಡುಗನಿಗೆ ಗುಂಡು ಹಾರಿಸಿದ 5 ವರ್ಷದ ಬಾಲಕ!

ಈ ಘಟನೆಯು ಹಲ್ದ್ವಾನಿಯ ಹಿಂದೂ ಸಂಘಟನೆಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿ ಆಟೋ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಕುರಿತು ಪ್ರತಿಭಟನೆ ನಡೆಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಇನ್ವೆಸ್ಟ್ ಕರ್ನಾಟಕ

Invest Karnataka: ಸನ್ಸೇರಾ ಕಂಪನಿಯಿಂದ ರಾಜ್ಯದಲ್ಲಿ 2,100 ಕೋಟಿ ರೂ. ಹೂಡಿಕೆ; ರಾಮನಗರದಲ್ಲಿ ಘಟಕ

Invest Karnataka: ವಾಹನಗಳ ಮತ್ತು ವೈಮಾನಿಕ‌ ಬಿಡಿಭಾಗಗಳನ್ನು ತಯಾರಿಸುವ ಸನ್ಸೇರಾ ಕಂಪನಿಯು ರಾಜ್ಯದಲ್ಲಿ ರೂ.2,100 ಕೋಟಿ ಹೂಡಲಿದೆ. ಈ ಸಂಬಂಧ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌.ಬಿ. ಪಾಟೀಲ ಅವರ ಸಮ್ಮುಖದಲ್ಲಿ ಬುಧವಾರ ಒಡಂಬಡಿಕೆಗೆ ಅಂಕಿತ ಹಾಕಲಾಯಿತು. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

2100 crore rupees investment in the state by Sunsera Company; Sign the agreement
Koo

ಬೆಂಗಳೂರು: ವಾಹನಗಳ ಮತ್ತು ವೈಮಾನಿಕ‌ ಬಿಡಿಭಾಗಗಳನ್ನು ತಯಾರಿಸುವ ಸನ್ಸೇರಾ ಕಂಪನಿಯು ರಾಜ್ಯದಲ್ಲಿ ರೂ. 2,100 ಕೋಟಿ ಹೂಡಲಿದೆ (Invest Karnataka). ಈ ಸಂಬಂಧ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌.ಬಿ. ಪಾಟೀಲ ಅವರ ಸಮ್ಮುಖದಲ್ಲಿ ಬುಧವಾರ ಒಡಂಬಡಿಕೆಗೆ ಅಂಕಿತ ಹಾಕಲಾಯಿತು.

ಖನಿಜ ಭವನದಲ್ಲಿ ನಡೆದ ಸಮಾರಂಭದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಮತ್ತು ಸೆನ್ಸೇರಾ ಕಂಪನಿಯ ಸಿಇಒ ಶೇಖರ್ ವಾಸನ್ ಒಡಂಬಡಿಕೆಗೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಸನ್ಸೇರಾ ಎಂಜಿನಿಯರಿಂಗ್ ಲಿಮಿಟೆಡ್ ಸಂಸ್ಥೆಯು ಮುಂದಿನ ಐದು ವರ್ಷಗಳಲ್ಲಿ ಹಂತಹಂತವಾಗಿ ಈ ಹೂಡಿಕೆ ಮಾಡಲಿದೆ. ಇದರಿಂದ 3,500 ಉದ್ಯೋಗಗಳು ಸೃಷ್ಟಿ ಆಗಲಿವೆ ಎಂದರು.

ಕಂಪನಿಯು ರಾಮನಗರ ಜಿಲ್ಲೆಯ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 55 ಎಕರೆ ಪ್ರದೇಶದಲ್ಲಿ ತನ್ನ ಉತ್ಪಾದನಾ ಘಟಕ ಆರಂಭಿಸಲಿದೆ. ಇದರಿಂದ ರಾಜ್ಯದ ರಫ್ತು ವಹಿವಾಟಿಗೂ ಅನುಕೂಲ ಆಗಲಿದೆ ಎಂದರು.

ಇದನ್ನೂ ಓದಿ: FASTag new rule: ಫಾಸ್ಟ್‌ಟ್ಯಾಗ್‌ ಬಳಕೆದಾರರೇ ಗಮನಿಸಿ; ನಾಳೆಯಿಂದ ಹೊಸ ನಿಯಮ ಜಾರಿ!

ಕಂಪನಿಯು ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ತರಬೇತಿ ಕೇಂದ್ರ ಆರಂಭಿಸಲಿದ್ದು, ಇದರಿಂದ ಸ್ಥಳೀಯರ ಕೌಶಲ ವೃದ್ಧಿಯಾಗಲಿದೆ. ಕಂಪನಿಯು ದೇಶದಲ್ಲಿ 16 ತಯಾರಿಕಾ ಘಟಕಗಳನ್ನು ಹೊಂದಿದ್ದು, ಅವುಗಳ ಪೈಕಿ 12 ಘಟಕಗಳು ರಾಜ್ಯದಲ್ಲೇ ಇವೆ ಎಂದು ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವಾಣಿಜ್ಯ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಎಫ್‌.ಆರ್‌. ಸಿಂಘ್ವಿ, ಕಾರ್ಯದರ್ಶಿ ರಾಜೇಶ್‌ ಮೋದಿ ಉಪಸ್ಥಿತರಿದ್ದರು.

ಓಟಿಸ್ ಕಂಪನಿಯಿಂದ ರೂ.135 ಕೋಟಿ ಹೂಡಿಕೆ

ಎಲಿವೇಟರುಗಳನ್ನು ತಯಾರಿಸುವ ಓಟಿಸ್ ಕಂಪನಿ ಕೂಡ ರಾಜ್ಯದಲ್ಲಿ 135 ಕೋಟಿ ರೂಪಾಯಿ ಹೂಡಲು ಒಲವು ವ್ಯಕ್ತಪಡಿಸಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ಸಂಬಂಧವಾಗಿ ಕಂಪನಿಯ ಹಿರಿಯ ನಿರ್ದೇಶಕ ರವಿಶಂಕರ್ ನೇತೃತ್ವದ ತಂಡದೊಂದಿಗೆ ಮಾತುಕತೆ ನಡೆಸಿದರು.

ಇದನ್ನೂ ಓದಿ: Kannada New Movie: ರೆಟ್ರೋ ಸ್ಟೈಲ್‌ನಲ್ಲಿ ಮೂಡಿಬಂದ ʼಹೇಳು ಗೆಳತಿʼ; ಚರಣ್‌ರಾಜ್ ಕಂಠಸಿರಿಗೆ ಕೇಳುಗರು ಫಿದಾ

ಇದಕ್ಕಾಗಿ ಕಂಪನಿಯು ಹಾರೋಹಳ್ಳಿಯಲ್ಲಿ 12 ಎಕರೆ ಭೂಮಿಯನ್ನು ಕೇಳಿದ್ದು, ಇದನ್ನು ಒದಗಿಸಲಾಗುವುದು. ಇದರಿಂದ 200ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಆಗಲಿದೆ ಎಂದು ಅವರು ಮಾಹಿತಿ ನೀಡಿದರು.

Continue Reading

ವಿದೇಶ

Israel v/s Hamas: ಇಸ್ರೇಲ್‌‌ ಮುಂದಿನ ಟಾರ್ಗೆಟ್ ಯಾರು? ಇಲ್ಲಿದೆ ಹಮಾಸ್ ‘ಉಗ್ರ’ ನಾಯಕರ ಹಿಟ್‌ ಲಿಸ್ಟ್!

ಇರಾನ್‌ನ ನೂತನ ಅಧ್ಯಕ್ಷ ಮಸೌದ್‌ ಪೆಜೆಸ್ಕಿಯಾನ್‌ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಹತ್ಯೆಯಾದ ಹಮಾಸ್ ಉಗ್ರ ನಾಯಕ ಇಸ್ಮಾಯಿಲ್‌ ಹನಿಯೆಹ್‌ ಬಳಿಕ ಇಸ್ರೇಲ್ (Israel v/s Hamas) ಇನ್ನು ಯಾರ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ. ಈಗಾಗಲೇ ಇಸ್ರೇಲ್
ಹಿಟ್‌ ಲಿಸ್ಟ್‌ನಲ್ಲಿರುವ ಹಮಾಸ್ ಉಗ್ರ ನಾಯಕರು ಯಾರು ಗೊತ್ತೇ? ಇಲ್ಲಿದೆ ವಿವರ.

VISTARANEWS.COM


on

By

Israel v/s Hamas
Koo

ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ (Ismail Haniyeh) ಹತ್ಯೆ ಸುದ್ದಿ ಪ್ರಪಂಚದಾದ್ಯಂತ ಸಂಚಲನ ಉಂಟು ಮಾಡಿರುವ ಬೆನ್ನಲ್ಲೇ ಇಸ್ರೇಲ್ (Israel v/s Hamas) ಮುಂದಿನ ಟಾರ್ಗೆಟ್ (israel next target) ಯಾರನ್ನು ಮಾಡಿರಬಹುದು ಎನ್ನುವ ಕುರಿತು ಚರ್ಚೆ ಶುರುವಾಗಿದೆ. ಇರಾನಿನ ಹೊಸ ಅಧ್ಯಕ್ಷ (Iran new president) ಮಸೌದ್ ಪೆಜೆಶ್ಕಿಯಾನ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ ಅನಂತರ ಇರಾನ್ ರಾಜಧಾನಿಯಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಹನಿಯೆಹ್ ಮತ್ತು ಅವರ ಅಂಗರಕ್ಷಕನನ್ನು ಕೊಲ್ಲಲಾಗಿದೆ.

ಇಸ್ರೇಲ್ ನಿಯಂತ್ರಿತ ಗೋಲನ್ ಹೈಟ್ಸ್‌ನಲ್ಲಿ 12 ಯುವಕರು ಕೊಲೆಯಾಗಿ ವಾರ ಕಳೆಯುವಷ್ಟರಲ್ಲಿ ನಡೆದ ರಾಕೆಟ್ ದಾಳಿ ನಡೆಸಿ ಹೆಜ್ಬೊಲ್ಲಾ ಕಮಾಂಡರ್ ಫೌದ್ ಶುಕುರ್‌ನನ್ನು ಕೊಂದಿರುವುದಾಗಿ ಇಸ್ರೇಲ್ ಹೇಳುತ್ತಿದ್ದಂತೆಯೇ, ಹನಿಯೆಹ್ ಮೇಲೂ ದಾಳಿ ನಡೆದಿದೆ. ಇಸ್ರೇಲ್ ಈಗ ಹಮಾಸ್ ಉಗ್ರರ ಹೆಡೆಮುರಿ ಕಟ್ಟಲು ಸಂಪೂರ್ಣ ಸಜ್ಜಾದಂತೆ ಕಾಣುತ್ತಿದೆ. ಹಾಗಾದರೆ ಮುಂದೆ ಇಸ್ರೇಲ್ ಯಾರನ್ನು ಟಾರ್ಗೆಟ್ ಮಾಡಿರಬಹುದು ಎನ್ನುವ ಮಾಹಿತಿ ಇಲ್ಲಿದೆ.

Israel v/s Hamas
Israel v/s Hamas


ಯಾಹ್ಯಾ ಸಿನ್ವಾರ್

ಗಾಜಾದಲ್ಲಿ ಹಮಾಸ್ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿರುವ 62 ವರ್ಷದ ಸಿನ್ವಾರ್ ಇಸ್ರೇಲ್ ಮೇಲೆ ಅಕ್ಟೋಬರ್ 7ರಂದು ನಡೆದ ದಾಳಿಯ ಪ್ರಮುಖ ರೂವಾರಿ. ಸಿನ್ವಾರ್ 1962ರ ಅಕ್ಟೋಬರ್ 29ರಂದು ಖಾನ್ ಯೂನಿಸ್ ನಿರಾಶ್ರಿತರ ಶಿಬಿರದಲ್ಲಿ ಜನಿಸಿದ್ದ. 1980ರ ದಶಕದಲ್ಲಿ ಸಿನ್ವಾರ್ ಗಾಜಾದ ಇಸ್ಲಾಮಿಕ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದ. ಬಳಿಕ ಈತ ಹಮಾಸ್‌ನ ಭದ್ರತಾ ಸೇವೆಯಾದ ಮಜ್ದ್ ಅನ್ನು ಸ್ಥಾಪಿಸಿದ.

1988ರಲ್ಲಿ ಪ್ಯಾಲೆಸ್ಟೀನಿಯಾದವರ ಹತ್ಯೆಯ ಅಪರಾಧಿ ಎಂದು ಪರಿಗಣಿಸಿ ಸಿನ್ವಾರ್‌ಗೆ ನಾಲ್ಕು ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತು. 2011ರಲ್ಲಿ ಜೈಲಿನಿಂದ ಬಿಡುಗಡೆಯಾದ ಬಳಿಕ ಹಮಾಸ್‌ನ ಭದ್ರತಾ ಪಡೆಯ ಉನ್ನತ ಶ್ರೇಣಿಯನ್ನು ಸೇರಿಕೊಂಡ. 2015ರಲ್ಲಿ ಅಮೆರಿಕ ಈತನನ್ನು ‘ಅಂತಾರಾಷ್ಟ್ರೀಯ ಭಯೋತ್ಪಾದಕ’ ಎಂದು ಘೋಷಿಸಿತು.

Israel v/s Hamas
Israel v/s Hamas


ಮೊಹಮ್ಮದ್ ಡೀಫ್

ಹಮಾಸ್‌ನ ಮಿಲಿಟರಿ ವಿಭಾಗ ಇಜ್ ಅಲ್-ದಿನ್ ಅಲ್-ಕಸ್ಸಾಮ್ ಬ್ರಿಗೇಡ್‌ಗಳ ಮುಖ್ಯಸ್ಥನಾಗಿರುವ ಡೀಫ್ ಮೇಲೆ ಇಸ್ರೇಲ್ ನಲ್ಲಿ ಅನೇಕ ಬಾರಿ ದಾಳಿ ನಡೆಸಲಾಗಿದ್ದರೂ ಬದುಕಿ ಉಳಿದಿದ್ದಾನೆ. ಪ್ಯಾಲೆಸ್ಟೀನಿಯರ ವಿರುದ್ಧದ ಅಪರಾಧಗಳನ್ನು ನಿಲ್ಲಿಸಲು, ನಿಂದನೆ ಮತ್ತು ಚಿತ್ರಹಿಂಸೆಗೊಳಗಾದ ಕೈದಿಗಳನ್ನು ಬಿಡುಗಡೆ ಮಾಡಲು, ಪ್ಯಾಲೇಸ್ಟಿನಿಯನ್ ಭೂಮಿಯನ್ನು ವಶಪಡಿಸಿಕೊಳ್ಳುವುದನ್ನು ನಿಲ್ಲಿಸಲು ಹಮಾಸ್ ಇಸ್ರೇಲ್‌ಗೆ ಪದೇಪದೇ ಎಚ್ಚರಿಸುತ್ತಿದೆ ಎಂದು ಡೀಫ್ ಇತ್ತೀಚೆಗೆ ತನ್ನ ಧ್ವನಿ ಮುದ್ರಣವನ್ನು ಬಿಡುಗಡೆ ಮಾಡಿದ್ದ.

ಹಲವು ದಾಳಿಯಲ್ಲಿ ಡೀಫ್ ಮತ್ತು ಸಿನ್ವಾರ್ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಯಾಹ್ಯಾ ಸಿನ್ವಾರ್‌ನಂತೆ ಡೀಫ್ ಖಾನ್ ಯೂನಿಸ್ ನಿರಾಶ್ರಿತರ ಶಿಬಿರದಲ್ಲಿ ಜನಿಸಿದ್ದ. ಈತನ ಮೊದಲ ಹೆಸರು ಮೊಹಮ್ಮದ್ ಮಸ್ರಿ. ಹಮಾಸ್‌ಗೆ ಸೇರಿದ ಅನಂತರ ಮೊಹಮ್ಮದ್ ಡೀಫ್ ಎಂಬ ಹೆಸರನ್ನು ಪಡೆದ. ಡೀಫ್‌ನನ್ನು 1989ರಲ್ಲಿ ಇಸ್ರೇಲ್ ಬಂಧಿಸಿತ್ತು. ಸುಮಾರು 16 ತಿಂಗಳ ಕಾಲ ಜೈಲಿನಲ್ಲಿದ್ದು ಹೊರ ಬಂದ ಬಳಿಕ ಸುರಂಗಗಳ ಜಾಲವನ್ನು ಮತ್ತು ಅದರ ಬಾಂಬ್ ತಯಾರಿಕೆಯ ಪರಿಣತಿ ಪಡೆದ. ದಶಕಗಳಿಂದ ಇಸ್ರೇಲ್‌ನ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದಾನೆ. 2000ರಲ್ಲಿ ಇಸ್ರೇಲ್‌ನಲ್ಲಿ ಬಂಧನಕ್ಕೆ ಒಳಗಾದರೂ ಬಳಿಕ ತಪ್ಪಿಸಿಕೊಂಡಿದ್ದ.

ಇಸ್ರೇಲ್‌ ನಡೆಸಿದ ಒಂದು ದಾಳಿಯಲ್ಲಿ ಆತ ಕಣ್ಣು ಕಳೆದುಕೊಂಡಿದ್ದು, ಒಂದು ಕಾಲಿಗೂ ಗಂಭೀರ ಗಾಯವಾಗಿತ್ತು ಎಂದು ಹಮಾಸ್ ಮೂಲಗಳು ತಿಳಿಸಿದ್ದವು. 2014ರ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಆತನ ಪತ್ನಿ, 7 ತಿಂಗಳ ಮಗ ಮತ್ತು 3 ವರ್ಷದ ಮಗಳು ಸಾವನ್ನಪ್ಪಿದ್ದರು.

Israel v/s Hamas
Israel v/s Hamas


ಖಲೀದ್ ಮಶಾಲ್

ಹಮಾಸ್‌ನ ಸಂಸ್ಥಾಪಕರಲ್ಲಿ ಒಬ್ಬನಾಗಿರುವ ಮಶಾಲ್, 1956ರಲ್ಲಿ ವೆಸ್ಟ್ ಬ್ಯಾಂಕ್‌ನ ಸಿಲ್ವಾಡ್‌ನಲ್ಲಿ ಜನಿಸಿದ. ಬಳಿಕ ಆತನ ಕುಟುಂಬ ಕುವೈತ್‌ಗೆ ಸ್ಥಳಾಂತರಗೊಂಡಿತು. ಮಶಾಲ್ ಪದವಿ ಪಡೆದ ಬಳಿಕ ಕುವೈತ್‌ನಲ್ಲಿಯೇ ಇದ್ದ. ಅಲ್ಲಿ ಆತ ಗಾಜಾ ಮತ್ತು ವೆಸ್ಟ್ ಬ್ಯಾಂಕ್‌ನಲ್ಲಿ ಸಾಮಾಜಿಕ ಸೇವೆಗಳನ್ನು ಆಯೋಜಿಸಲು ಹಣವನ್ನು ಸಂಗ್ರಹಿಸಿದ.

1996ರಲ್ಲಿ ಹಮಾಸ್ ರಾಜಕೀಯ ಬ್ಯೂರೋ ಮುಖ್ಯಸ್ಥನಾಗಿ ಆಯ್ಕೆಯಾದ ಮಶಾಲ್, ಹಮಾಸ್‌ನ ಆತ್ಮಹತ್ಯಾ ಬಾಂಬ್ ದಾಳಿಗೆ ಪ್ರತೀಕಾರವಾಗಿ ಪ್ರಧಾನಿ ಬೆಂಜಮಿನ್ ನೆತನ್ಯಾಹು 1997ರಲ್ಲಿ ಮಶಾಲ್‌ನ ಹತ್ಯೆ ಮಾಡಲು ಅನುಮೋದನೆ ನೀಡಿದರು. ಮಶಾಲ್ 2017ರವರೆಗೂ ಹಮಾಸ್‌ನ ಮುಖ್ಯಸ್ಥನಾಗಿದ್ದ. ಹಮಾಸ್‌ನ ಪ್ರಮುಖ ಒತ್ತೆಯಾಳು ಸಂಧಾನಕಾರರಲ್ಲಿ ಒಬ್ಬನಾಗಿರುವ ಮಶಾಲ್ ಪ್ರಸ್ತುತ ಕತಾರ್‌ನಲ್ಲಿ ವಾಸಿಸುತ್ತಿದ್ದಾನೆ.

Israel v/s Hamas
Israel v/s Hamas


ಮಹಮೂದ್ ಜಹರ್

ಹಮಾಸ್‌ನ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬನಾಗಿದ್ದಾನೆ. 1945ರಲ್ಲಿ ಗಾಜಾ ನಗರದ ಬಳಿ ಜನಿಸಿದ ಜಹರ್ ತಂದೆ ಪ್ಯಾಲೇಸ್ಟಿನಿಯನ್ ಮತ್ತು ತಾಯಿ ಈಜಿಪ್ಟಿನವನು. ಗಾಜಾದಲ್ಲಿ ವೈದ್ಯನಾಗಿದ್ದ ಆತನ ರಾಜಕೀಯ ದೃಷ್ಟಿಕೋನದಿಂದ ಕೆಲಸದಿಂದ ವಜಾಗೊಳಿಸಲಾಗಿತ್ತು. 1988ರಲ್ಲಿ ಹಮಾಸ್ ಸ್ಥಾಪನೆಯ ಅನಂತರ ಜಹರ್‌ನನ್ನು ಇಸ್ರೇಲ್ ಜೈಲಿನಲ್ಲಿರಿಸಿತ್ತು. 1992ರಲ್ಲಿ ಲೆಬನಾನ್‌ಗೆ ಗಡೀಪಾರು ಮಾಡಲಾಯಿತು. ಗಾಜಾಕ್ಕೆ ಹಿಂದಿರುಗಿದ ಬಳಿಕ ಈತನ ಮೇಲೆ ಹತ್ಯೆ ಯತ್ನವೂ ನಡೆದಿದ್ದು, ಒಂದು ಸಂದರ್ಭದಲ್ಲಿ ಆತನ ಹಿರಿಯ ಮಗ ಮೃತಪಟ್ಟಿದ್ದಾನೆ.

ಇದನ್ನೂ ಓದಿ: Ismail Haniyeh: ಒಸಾಮಾ ರೀತಿಯೇ ಹಮಾಸ್‌ನ ಇಸ್ಮಾಯಿಲ್‌ ಹನಿಯೇಹ್‌ನನ್ನು ಕೊಂದ ಇಸ್ರೇಲ್;‌ ಆಪರೇಷನ್‌ನ ಡಿಟೇಲ್ಸ್‌ ಇಲ್ಲಿದೆ

2008ರಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯಲ್ಲಿ ಹಮಾಸ್‌ನ ಮಿಲಿಟರಿ ವಿಭಾಗದ ಸದಸ್ಯರಾದ ಈತನ ಇನ್ನೊಬ್ಬ ಮಗನೂ ಸಾವನ್ನಪ್ಪಿದ್ದಾನೆ. 2006 ರಲ್ಲಿ ಜಹರ್ ಪ್ಯಾಲೇಸ್ಟಿನಿಯನ್ ಲೆಜಿಸ್ಲೇಟಿವ್ ಕೌನ್ಸಿಲ್ (PLC) ಗೆ ಆಯ್ಕೆಯಾಗಿದ್ದು, ಬಳಿಕ ಆತನನ್ನು ವಿದೇಶಾಂಗ ಸಚಿವನನ್ನಾಗಿ ನೇಮಿಸಲಾಯಿತು.

ಹಮಾಸ್‌ನ ಇವಿಷ್ಟು ಉಗ್ರ ನಾಯಕರು ಇಸ್ರೇಲ್‌ನ ಹಿಟ್‌ ಲಿಸ್ಟ್‌ನಲ್ಲಿದ್ದಾರೆ. ಇವರ ಮೇಲೆ ಯಾವಾಗ ಬೇಕಾದರೂ ದಾಳಿ ನಡೆಯಬಹುದು.

Continue Reading

ತಂತ್ರಜ್ಞಾನ

FASTag new rule: ಫಾಸ್ಟ್‌ಟ್ಯಾಗ್‌ ಬಳಕೆದಾರರೇ ಗಮನಿಸಿ; ನಾಳೆಯಿಂದ ಹೊಸ ನಿಯಮ ಜಾರಿ!

ಆಗಸ್ಟ್ 1ರಿಂದ ಫಾಸ್ಟ್ ಟ್ಯಾಗ್ ಗೆ ಸಂಬಂಧಿಸಿ ಹೊಸ ನಿಯಮಗಳು (FASTag new rule) ಜಾರಿಗೆ ಬರಲಿದ್ದು, ಇದಕ್ಕಾಗಿ ಗ್ರಾಹಕರು ಕೆವೈಸಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಟೋಲ್ ಪಾವತಿಗಳನ್ನು ಸರಳಗೊಳಿಸಲು ಮತ್ತು ಟೋಲ್ ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಎನ್ ಪಿಸಿಐ ಜಾರಿಗೊಳಿಸಿರುವ ಹೊಸ ನಿಯಮಗಳು ಯಾವುದು ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

FASTag new rule
Koo

ಫಾಸ್ಟ್ ಟ್ಯಾಗ್ ಬಳಕೆದಾರರಿಗೆ ನಾಳೆಯಿಂದ ಅಂದರೆ ಆಗಸ್ಟ್ 1ರಿಂದ ಹೊಸ ನಿಯಮಗಳು (FASTag new rule) ಜಾರಿಗೆ ಬರಲಿದೆ. ಯಾಕೆಂದರೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ನವೀಕರಿಸಿದ ಮಾರ್ಗಸೂಚಿಗಳನ್ನು ಪರಿಚಯಿಸಿದ್ದು, ಇದಕ್ಕಾಗಿ ಗ್ರಾಹಕರು ಕೆವೈಸಿ (KYC) ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗುತ್ತದೆ.

ಟೋಲ್ ಪಾವತಿಗಳನ್ನು ಸರಳಗೊಳಿಸಲು ಮತ್ತು ಟೋಲ್ ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಫಾಸ್ಟ್ ಟ್ಯಾಗ್ ಅತ್ಯಗತ್ಯವಾಗಿದೆ. ಆದರೆ ಎನ್ ಪಿಸಿಐ ಮಾಡಿರುವ ಈ ಬದಲಾವಣೆಗಳು ಬಳಕೆದಾರರ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವ ಸಾಧ್ಯತೆ ಇದೆ.

ಆಗಸ್ಟ್ 1ರಿಂದ ಫಾಸ್ಟ್‌ಟ್ಯಾಗ್ ಸೇವೆಗಳನ್ನು ಒದಗಿಸುವ ಕಂಪನಿಗಳು 3- 5 ವರ್ಷಗಳ ಹಿಂದೆ ನೀಡಲಾದ ಎಲ್ಲಾ ಫಾಸ್ಟ್‌ಟ್ಯಾಗ್‌ಗಳಿಗೆ ಕೆವೈಸಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಅಕ್ಟೋಬರ್ 31ರವರೆಗೆ ಸಮಯಾವಕಾಶವನ್ನು ನೀಡಲಿದೆ. ಈ ಅವಧಿಯಲ್ಲಿ ಫಾಸ್ಟ್‌ಟ್ಯಾಗ್ ಹೊಂದಿರುವವರು ಸೇವೆಯಲ್ಲಿ ಯಾವುದೇ ಅಡಚಣೆಗಳು ಉಂಟಾಗದಂತೆ ತಡೆಗಟ್ಟಲು ಕೆವೈಸಿ ಮಾಹಿತಿಯನ್ನು ನವೀಕರಿಸುವುದು ಕಡ್ಡಾಯವಾಗಿದೆ.

ಐದು ವರ್ಷಕ್ಕಿಂತ ಹಳೆಯದಾದ ಫಾಸ್ಟ್ ಟ್ಯಾಗ್ ಅನ್ನು ಬದಲಾಯಿಸಬೇಕು. ವಾಹನ ಮಾಲೀಕರು ತಮ್ಮ ಫಾಸ್ಟ್ ಟ್ಯಾಗ್ ಗಳ ವಿತರಣೆಯ ದಿನಾಂಕಗಳನ್ನು ಪರಿಶೀಲಿಸಬೇಕು ಮತ್ತು ಸಮಸ್ಯೆಗಳನ್ನು ತಪ್ಪಿಸಲು ತ್ವರಿತವಾಗಿ ಕ್ರಮ ತೆಗೆದುಕೊಳ್ಳಬೇಕು.

ಹಳೆಯ ವಾಹನಗಳನ್ನು ಹೊಂದಿರುವ ಚಾಲಕರಿಗೆ ಈ ನವೀಕರಣಗಳು ವಿಶೇಷವಾಗಿ ಮುಖ್ಯವಾಗಿದೆ. ಆಗಸ್ಟ್ 1 ಮತ್ತು ಅಕ್ಟೋಬರ್ 31ರ ಗಡುವಿನೊಳಗೆ ಫಾಸ್ಟ್ ಟ್ಯಾಗ್ ಸೇವೆಗಳನ್ನು ಒದಗಿಸುವ ಕಂಪೆನಿಗಳು ಮೂರು ಮತ್ತು ಐದು ವರ್ಷಗಳ ಹಿಂದೆ ನೀಡಲಾದ ಎಲ್ಲಾ ಫಾಸ್ಟ್‌ಟ್ಯಾಗ್‌ಗಳಿಗೆ ಕೆವೈಸಿ ಅನ್ನು ಪೂರ್ಣಗೊಳಿಸಬೇಕಾಗುತ್ತದೆ. ಈ ಗಡುವುಗಳನ್ನು ತಪ್ಪಿಸಿಕೊಂಡರೆ ಮುಂದೆ ಹಲವು ತೊಂದರೆಗಳನ್ನು ಎದುರಿಸಬೇಕಾಗಬಹುದು.

ಹೊಸ ನಿಯಮಗಳು ಆಗಸ್ಟ್ 1ರಿಂದ ಎಲ್ಲಾ ಫಾಸ್ಟ್‌ಟ್ಯಾಗ್‌ಗಳನ್ನು ವಾಹನದ ನೋಂದಣಿ ಸಂಖ್ಯೆ ಮತ್ತು ಚಾಸಿಸ್ ಸಂಖ್ಯೆಗೆ ಲಿಂಕ್ ಮಾಡಬೇಕು ಎಂಬ ಷರತ್ತು ವಿಧಿಸಲಾಗಿದೆ.

ಹೊಸ ವಾಹನ ಮಾಲೀಕರು ವಾಹನವನ್ನು ಖರೀದಿಸಿದ 90 ದಿನಗಳಲ್ಲಿ ತಮ್ಮ ನೋಂದಣಿ ಸಂಖ್ಯೆಯನ್ನು ನವೀಕರಿಸಬೇಕು. ಫಾಸ್ಟ್‌ಟ್ಯಾಗ್ ಪೂರೈಕೆದಾರರು ತಮ್ಮ ಡೇಟಾಬೇಸ್‌ಗಳು ನಿಖರ ಮತ್ತು ಪ್ರಸ್ತುತ ಎಂದು ಖಚಿತಪಡಿಸಿಕೊಳ್ಳಲು ಅಗತ್ಯವಿದೆ. ಇದು ಎಲ್ಲಾ ವಿವರಗಳನ್ನು ಪರಿಶೀಲಿಸುವುದು ಮತ್ತು ನವೀಕರಿಸುವುದನ್ನು ಒಳಗೊಂಡಿರುತ್ತದೆ.

ಈ ಬದಲಾವಣೆಗಳ ಜೊತೆಗೆ ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ ವಾಹನದ ಮುಂಭಾಗ ಮತ್ತು ಬದಿಯ ಸ್ಪಷ್ಟ ಫೋಟೋಗಳನ್ನು ಅಪ್‌ಲೋಡ್ ಮಾಡಬೇಕು. ಸುಗಮ ಸಂವಹನ ಮತ್ತು ನವೀಕರಣಗಳನ್ನು ಖಚಿತಪಡಿಸಿಕೊಳ್ಳಲು ಪ್ರತಿ ಫಾಸ್ಟ್‌ಟ್ಯಾಗ್ ಅನ್ನು ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಮಾಡಬೇಕು.

ಇದನ್ನೂ ಓದಿ: New Toll System: ಫಾಸ್ಟ್‌ ಟ್ಯಾಗ್‌ಗೂ ಉಪಗ್ರಹ ಆಧರಿತ ಟೋಲ್‌ ಸಂಗ್ರಹಕ್ಕೂ ಏನು ವ್ಯತ್ಯಾಸ? ಏನು ಪ್ರಯೋಜನ?

ನಿಯಮ ಏನಿದೆ?

5 ವರ್ಷಕ್ಕಿಂತ ಹಳೆಯದಾದ ಫಾಸ್ಟ್‌ಟ್ಯಾಗ್‌ಗಳನ್ನು ಬದಲಾಯಿಸಬೇಕು.

3 ವರ್ಷಗಳ ಹಿಂದೆ ನೀಡಲಾದ ಫಾಸ್ಟ್‌ಟ್ಯಾಗ್‌ಗಳಿಗೆ ಕೆವೈಸಿ ಅನ್ನು ನವೀಕರಿಸಬೇಕು.

ವಾಹನ ನೋಂದಣಿ ಸಂಖ್ಯೆ ಮತ್ತು ಚಾಸಿಸ್ ಸಂಖ್ಯೆಯನ್ನು ಫಾಸ್ಟ್‌ಟ್ಯಾಗ್‌ನೊಂದಿಗೆ ಲಿಂಕ್ ಮಾಡಬೇಕು.

ಹೊಸ ವಾಹನವನ್ನು ಖರೀದಿಸಿದ 90 ದಿನಗಳಲ್ಲಿ ನೋಂದಣಿ ಸಂಖ್ಯೆಯನ್ನು ನವೀಕರಿಸಬೇಕು.

ಫಾಸ್ಟ್ ಟ್ಯಾಗ್ ಪೂರೈಕೆದಾರರು ತಮ್ಮ ಡೇಟಾಬೇಸ್‌ಗಳನ್ನು ಪರಿಶೀಲಿಸಬೇಕು.

ಕಾರಿನ ಮುಂಭಾಗ ಮತ್ತು ಬದಿಯ ಸ್ಪಷ್ಟ ಫೋಟೋಗಳನ್ನು ಅಪ್‌ಲೋಡ್ ಮಾಡಬೇಕು.

ಫಾಸ್ಟ್ ಟ್ಯಾಗ್ ಅನ್ನು ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಬೇಕು.

Continue Reading

Latest

Gunfire On School: ಶಾಲೆಯೊಳಗೆ ಗನ್‌ ತಂದು 10 ವರ್ಷದ ಹುಡುಗನಿಗೆ ಗುಂಡು ಹಾರಿಸಿದ 5 ವರ್ಷದ ಬಾಲಕ!

Gunfire On School: ಶಾಲೆಗ ಹೋಗುವ ಮಕ್ಕಳ ಬ್ಯಾಗ್‌ನಲ್ಲಿ ಈಗ ಪುಸ್ತಕದ ಬದಲು ಗನ್ ಕುಳಿತು ಬಿಟ್ಟಿದೆ.ನರ್ಸರಿ ವಿದ್ಯಾರ್ಥಿಯಾಗಿರುವ ಆರೋಪಿ ಬಾಲಕ ತನ್ನ ಸ್ಕೂಲ್ ಬ್ಯಾಗ್‌ನಲ್ಲಿ ಬಂದೂಕನ್ನು ಅಡಗಿಸಿಕೊಂಡು ಶಾಲೆಗೆ ಹೋಗಿದ್ದ. ಶಾಲೆಗೆ ಬಂದ ಕೂಡಲೇ ಆತ ತನ್ನ ಬ್ಯಾಗ್‌ನಿದ ಬಂದೂಕು ತೆಗೆದು ಗುಂಡು ಹಾರಿಸಿದ್ದಾನೆ. ಗುಂಡು 3ನೇ ತರಗತಿಯ ವಿದ್ಯಾರ್ಥಿಗೆ ತಗುಲಿದೆ. ಇದರಿಂದ ಆತ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

VISTARANEWS.COM


on

Gunfire On School
Koo


ಐದು ವರ್ಷದ ಬಾಲಕನೊಬ್ಬ ಹ್ಯಾಂಡ್‍ಗನ್‌ನೊಂದಿಗೆ ಶಾಲೆಗೆ ಬಂದು 3ನೇ ತರಗತಿಯಲ್ಲಿ ಓದುತ್ತಿದ್ದ 10 ವರ್ಷದ ಬಾಲಕನ ಮೇಲೆ ಗುಂಡು (Gunfire On School) ಹಾರಿಸಿದ ಆಘಾತಕಾರಿ ಘಟನೆ ಉತ್ತರ ಬಿಹಾರದ ಸುಪಾಲ್ ಜಿಲ್ಲೆಯ ತ್ರಿವೇಣಿಗಂಜ್‍ನ ಲಾಲ್ಪಟ್ಟಿಯಲ್ಲಿರುವ ಸೇಂಟ್ ಜಾನ್ಸ್ ಬೋರ್ಡಿಂಗ್ ಸ್ಕೂಲ್‍ನಲ್ಲಿ ಬುಧವಾರ ನಡೆದಿದೆ. ಇದರಿಂದ ಸಂತ್ರಸ್ತ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ನರ್ಸರಿ ವಿದ್ಯಾರ್ಥಿಯಾಗಿರುವ ಆರೋಪಿ ಬಾಲಕ ತನ್ನ ಸ್ಕೂಲ್ ಬ್ಯಾಗ್‍ನಲ್ಲಿ ಬಂದೂಕನ್ನು ಅಡಗಿಸಿಕೊಂಡು ಶಾಲೆಗೆ ಹೋಗಿದ್ದ. ಶಾಲೆಗೆ ಬಂದ ಕೂಡಲೇ ಆತ ತನ್ನ ಬ್ಯಾಗ್‍ನಿಂದ ಬಂದೂಕು ತೆಗೆದು ಗುಂಡು ಹಾರಿಸಿದ್ದಾನೆ. ಗುಂಡು 3 ನೇ ತರಗತಿಯ ವಿದ್ಯಾರ್ಥಿ ಆಸಿಫ್ ಎಂಬ ಬಾಲಕನಿಗೆ ತಗುಲಿದೆ. ಇದರಿಂದ ಆತ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ಬಳಿಕ ಇಬ್ಬರು ವಿದ್ಯಾರ್ಥಿಗಳ ಪೋಷಕರನ್ನು ಶಾಲೆಗೆ ಕರೆದು ವಿಚಾರಣೆ ನಡೆಸಲಾಗುತ್ತಿದೆ. ಆದರೆ ಗುಂಡು ಹಾರಿಸಿದ ಬಾಲಕ ಹಾಗೂ ಆತನ ಪೋಷಕರು ಶಾಲೆಯಿಂದ ಓಡಿ ಹೋಗಿದ್ದಾರೆ. ಇದರಿಂದ ಕೋಪಗೊಂಡ ಸಂತ್ರಸ್ತ ಬಾಲಕನ ಕುಟುಂಬದವರು ಶಾಲೆಯನ್ನು ಧ್ವಂಸಗೊಳಿಸಿದ್ದಾರೆ.

ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹಾಗೂ ತಲೆಮರೆಸಿಕೊಂಡಿರುವ ಆರೋಪಿ ಬಾಲಕ ಹಾಗೂ ಆತನ ಕುಟುಂಬದವರನ್ನು ಪೊಲೀಸರು ಹುಡುಕಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಪೊಲೀಸ್ ಅಧಿಕಾರಿ “ಅದೇ ಶಾಲೆಯಲ್ಲಿ 3 ನೇ ತರಗತಿಯಲ್ಲಿ ಓದುತ್ತಿರುವ 10 ವರ್ಷದ ಹುಡುಗನ ಮೇಲೆ ವಿದ್ಯಾರ್ಥಿ ಗುಂಡು ಹಾರಿಸಿದ್ದಾನೆ. ಗುಂಡು ಅವನ ತೋಳಿಗೆ ತಗುಲಿತು. ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮಹಿಳೆಯ ಎದೆ, ಕುತ್ತಿಗೆಗೆ ಭೀಕರವಾಗಿ ತಿವಿದ ಬೀದಿ ಹಸು; ಮೈ ನಡುಗಿಸುವ ವಿಡಿಯೊ

ಬಾಲಕ ಬ್ಯಾಗ್‍ನಲ್ಲಿ ಬಂದೂಕನ್ನು ಇರಿಸಿಕೊಂಡು ಅದನ್ನು ಲಾಲ್ಪಟ್ಟಿ ಪ್ರದೇಶದಲ್ಲಿರುವ ಖಾಸಗಿ ಶಾಲೆಗೆ ಹೇಗೆ ಸಾಗಿಸುವಲ್ಲಿ ಯಶಸ್ವಿಯಾದನು ಎಂಬುದನ್ನು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ” ಎಂದು ಹೇಳಿದ್ದಾರೆ. ಅಲ್ಲದೇ “ವಿದ್ಯಾರ್ಥಿಗಳ ಚೀಲಗಳನ್ನು ನಿಯಮಿತವಾಗಿ ಕೂಲಂಕಷವಾಗಿ ಪರಿಶೀಲಿಸಬೇಕೆಂದು ಜಿಲ್ಲೆಯಾದ್ಯಂತ ಶಾಲೆಗಳಿಗೆ ಕೇಳುತ್ತಿದ್ದೇವೆ. ಈ ಘಟನೆಯು ಶಿಕ್ಷಕರು ಮತ್ತು ಪೋಷಕರಲ್ಲಿ ಹೆಚ್ಚಿನ ಆತಂಕವನ್ನುಂಟು ಮಾಡಿದೆ” ಎಂಬುದಾಗಿ ತಿಳಿಸಿದ್ದಾರೆ

Continue Reading
Advertisement
Nutrients For The Human Body
ಆರೋಗ್ಯ3 mins ago

Nutrients For The Human Body: ನಮ್ಮ ದೇಹವೆಂಬ ಕಾರ್ಯಾಲಯದಲ್ಲಿ ಕೆಲಸ ಮಾಡುವ 22 ಪೋಷಕಾಂಶಗಳ ಬಗ್ಗೆ ನಿಮಗೆ ಗೊತ್ತೇ?

Our government has changed the concept of Anganwadi says Minister Lakshmi Hebbalkar
ಕರ್ನಾಟಕ11 mins ago

Lakshmi Hebbalkar: ಅಂಗನವಾಡಿ ಪರಿಕಲ್ಪನೆಯನ್ನೇ ನಮ್ಮ ಸರ್ಕಾರ ಬದಲಾಯಿಸಿದೆ; ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Congress government
ಕರ್ನಾಟಕ21 mins ago

Congress government: ನಮ್ಮ ಸರ್ಕಾರ ಅಲುಗಾಡಿಸಿದರೆ ರಕ್ತಕ್ರಾಂತಿ ಆಗುತ್ತೆ: ಕೆ.ಎಂ.ಶಿವಲಿಂಗೇಗೌಡ ಎಚ್ಚರಿಕೆ

Nino Salukvadze
ಕ್ರೀಡೆ41 mins ago

Nino Salukvadze: ತಂದೆಯ ಆಸೆಯಂತೆ 10ನೇ ಒಲಿಂಪಿಕ್ಸ್ ಆಡಿ ದಾಖಲೆ ಬರೆದ ಜಾರ್ಜಿಯಾದ ಮಹಿಳಾ ಶೂಟರ್‌

2100 crore rupees investment in the state by Sunsera Company; Sign the agreement
ಇನ್ವೆಸ್ಟ್ ಕರ್ನಾಟಕ45 mins ago

Invest Karnataka: ಸನ್ಸೇರಾ ಕಂಪನಿಯಿಂದ ರಾಜ್ಯದಲ್ಲಿ 2,100 ಕೋಟಿ ರೂ. ಹೂಡಿಕೆ; ರಾಮನಗರದಲ್ಲಿ ಘಟಕ

Kaftan Kurta Fashion
ಫ್ಯಾಷನ್47 mins ago

Kaftan Kurta Fashion: ಸಿಂಪಲ್‌ ಲುಕ್‌ಗೆ ಸಾಥ್‌ ನೀಡುವ ದೊಗಲೆ ಕಫ್ತಾನ್‌ ಕುರ್ತಾ!

Paris Olympics
ಕ್ರೀಡೆ47 mins ago

Paris Olympics: ಒಲಿಂಪಿಕ್ಸ್​ನಲ್ಲಿ ನಾಳೆ ಭಾರತದ ಸ್ಪರ್ಧೆಗಳ ವೇಳಾಪಟ್ಟಿ ಹೀಗಿದೆ; 4 ಪದಕ ನಿರೀಕ್ಷೆ!

Toyota company investment in the state will continue as usual says Minister MB Patil
ಕರ್ನಾಟಕ47 mins ago

MB Patil: ರಾಜ್ಯದಲ್ಲಿ ಟೊಯೋಟಾ ಕಂಪನಿಯ ಹೂಡಿಕೆ ಅಬಾಧಿತ; ಸಚಿವ ಎಂ‌.ಬಿ. ಪಾಟೀಲ

Ismail Haniyeh
ಪ್ರಮುಖ ಸುದ್ದಿ53 mins ago

Ismail Haniyeh: ಇಸ್ರೇಲ್‌ ದಾಳಿಗೆ ಹತನಾಗುವ ಮುನ್ನ ಹಮಾಸ್‌ ಉಗ್ರ ಇಸ್ಮಾಯಿಲ್‌ ಏನು ಮಾಡುತ್ತಿದ್ದ? ಇಲ್ಲಿದೆ ವರದಿ

BJP Protest
ಕರ್ನಾಟಕ54 mins ago

BJP Protest: ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ; ಪ್ರತಾಪ್ ಸಿಂಹ, ಹರೀಶ್‌ ಪೂಂಜಾ, ಪುನೀತ್ ಕೆರೆಹಳ್ಳಿ ವಿರುದ್ಧ ಎಫ್‌ಐಆರ್‌!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 day ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 day ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ2 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ2 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ2 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ3 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ3 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ3 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ3 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌