Viral Video: ಥೋ! ಈ ಮುದುಕರಿಗೆ ಈ ವಯಸ್ಸಲ್ಲಿ ಏನೆಲ್ಲ ಚಪಲ ನೋಡಿ! ಹಿಂದೆಂದೂ ಕಂಡಿರದಂಥ ವಿಡಿಯೊ! - Vistara News

Latest

Viral Video: ಥೋ! ಈ ಮುದುಕರಿಗೆ ಈ ವಯಸ್ಸಲ್ಲಿ ಏನೆಲ್ಲ ಚಪಲ ನೋಡಿ! ಹಿಂದೆಂದೂ ಕಂಡಿರದಂಥ ವಿಡಿಯೊ!

Viral Video: ಇಲ್ಲೊಬ್ಬ ಬೊಕ್ಕ ತಲೆಯ ವ್ಯಕ್ತಿ ಮಹಿಳೆಯ ಕೂದಲಿನ ಜೊತೆ ವಿಚಿತ್ರವಾಗಿ ವರ್ತಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಅನೇಕರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಕ್ಯಾಮೆರಾದಲ್ಲಿ ಸೆರೆಯಾದ ಘಟನೆಯಲ್ಲಿ ಮಹಿಳೆಯ ಹಿಂದೆ ಬೊಕ್ಕ ತಲೆಯ ಮುದುಕನೊಬ್ಬ ಅವಳ ಕೂದಲನ್ನು ಸ್ಪರ್ಶಿಸಲು ಮತ್ತು ಅದರ ವಾಸನೆ ನೋಡಲು ಪ್ರಯತ್ನಿಸುತ್ತಿದ್ದಾನೆ. ಅಶ್ಲೀಲವಾಗಿರುವುದರ ಜೊತೆಗೆ, ಅವನ ವರ್ತನೆ ಕಳವಳಕಾರಿಯಾಗಿದೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಈ ಮುದುಕರಿಗೆ ವಯಸ್ಸಾಗುತ್ತಿದ್ದಂತೆ ಏನೆಲ್ಲ ಚಪಲ ಬರುತ್ತದೋ ಹೇಳಲಾಗುವುದಿಲ್ಲ. ಕೆಲವರು ಚಿಕ್ಕ ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ ಎಸಗಲು ಹೇಸುವುದಿಲ್ಲ. ಕೆಲವರು ಬಸ್‌ಗಳಲ್ಲಿ, ರೈಲುಗಳಲ್ಲಿ ಮಹಿಳೆಯರ ಮೈ ಸವರುವುದರಲ್ಲೇ ವಿಕೃತ ಖುಷಿ ಅನುಭವಿಸುತ್ತಾರೆ. ಆದರೆ ಇಲ್ಲಿ ಈ ಮುದುಕ ಯುವತಿಯೊಬ್ಬಳ ಕೂದಲನ್ನು ಮುಟ್ಟಲು, ಅದನ್ನು ಮುದ್ದಿಸಲು ಪಡುವ ಪ್ರಯತ್ನ ನಗು ತರಿಸುತ್ತದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಇದು ಅನೇಕರಲ್ಲಿ ಆಶ್ಚರ್ಯವನ್ನುಂಟುಮಾಡಿದೆ.

ಉತ್ತರ ಪ್ರದೇಶದ ಬಿಸೋಲಿಯಲ್ಲಿ ನಡೆದಿದೆ ಎನ್ನಲಾದ ಈ ಘಟನೆಯ ವಿಡಿಯೊದಲ್ಲಿ ವಯಸ್ಸಾದ ಬೊಕ್ಕ ತಲೆಯ ವ್ಯಕ್ತಿ ಮತ್ತು ಉದ್ದವಾದ ಕೂದಲನ್ನು ಹೊಂದಿರುವ ಮಹಿಳೆ ಕಾಣಿಸುತ್ತಿದ್ದಾರೆ. ಈ ವಿಡಿಯೊದಲ್ಲಿ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ವಿಚಿತ್ರವಾಗಿ ವರ್ತಿಸುತ್ತಿರುವುದು, ಅನೇಕರ ಗಮನವನ್ನು ಸೆಳೆದಿದೆ. ಕ್ಯಾಮೆರಾದಲ್ಲಿ ಸೆರೆಯಾದ ಘಟನೆಯಲ್ಲಿ ಮಹಿಳೆಯ ಹಿಂದೆ ಬೊಕ್ಕ ತಲೆಯ ಮುದುಕನೊಬ್ಬ ಅವಳ ಕೂದಲನ್ನು ಸ್ಪರ್ಶಿಸಲು ಮತ್ತು ವಾಸನೆ ನೋಡಲು ಪ್ರಯತ್ನಿಸುತ್ತಿದ್ದಾನೆ. ಅಶ್ಲೀಲವಾಗಿರುವುದರ ಜೊತೆಗೆ, ಅವನ ವರ್ತನೆ ಕಳವಳಕಾರಿಯಾಗಿದೆ. ಏಕೆಂದರೆ ಆ ಮಹಿಳೆಗೆ ತನ್ನ ಹಿಂದೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ತಿಳಿದಿಲ್ಲ.

ವಿಡಿಯೊ ಮುಂದುವರಿಯುತ್ತಿದ್ದಂತೆ ಆ ವ್ಯಕ್ತಿ ಮಹಿಳೆಗೆ ಹತ್ತಿರವಾಗಲು ಅನೇಕ ಬಾರಿ ಪ್ರಯತ್ನಿಸುತ್ತಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅವನ ಎಲ್ಲಾ ಅನುಚಿತ ಕೃತ್ಯಗಳು ರೆಕಾರ್ಡ್ ಆಗಿದೆ. ಈ ವಿಡಿಯೊವನ್ನು ಘರ್ ಕೆ ಕಾಲೇಶ್ ಎಂಬ ಖಾತೆಯಿಂದ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೊವನ್ನು ಕಂಡು ಸಾರ್ವಜನಿಕ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಇದನ್ನು ನೋಡಿದ ನಂತರ ಅನೇಕ ವೀಕ್ಷಕರು ಕೋಪಗೊಂಡಿದ್ದಾರೆ.

ಇದನ್ನೂ ಓದಿ: ಕಾಂಡೋಮ್, ಲೂಬ್ರಿಕೆಂಟ್‍ ಬಳಸಿದರೂ ಕ್ಯಾನ್ಸರ್‌! ಅಧ್ಯಯನ ವರದಿಯಲ್ಲಿ ಆಘಾತಕಾರಿ ಸಂಗತಿ

ಜುಲೈ 31ರಂದು ಪೋಸ್ಟ್ ಮಾಡಲಾದ ಈ ವಿಡಿಯೊ ವೈರಲ್ ಆಗಿದ್ದು, 3.3 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಇದಕ್ಕೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಅವರಲ್ಲಿ ಅನೇಕರು ತಮ್ಮ ಕೋಪ ವ್ಯಕ್ತಪಡಿಸಿದ್ದಾರೆ. “ಅವನ ತಲೆ ಬೋಳು ಆಗಿರುವುದರಿಂದ ಅವಳ ಕೂದಲಿನ ಮೇಲೆ ಆಸೆ ಪಟ್ಟಿರಬೇಕು” ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು “ವಯಸ್ಸಾದಂತೆ ಕೆಲವು ಮುದುಕರಲ್ಲಿ ವಿಕೃತ ಸ್ವಭಾವವು ಹೆಚ್ಚಾಗುತ್ತದೆ. ಅನೇಕ ವೃದ್ಧರು ಇಂಥದ್ದನ್ನು ಮಾಡುವುದನ್ನು ನೋಡಿದ್ದೇನೆ” ಎಂಬುದಾಗಿ ಬರೆದಿದ್ದಾರೆ. ಇನ್ನೂ ಕೆಲವರು ಆತನನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಾಜಕೀಯ

Parliament Session: ಪೈರಸಿಯಿಂದ ಚಿತ್ರೋದ್ಯಮಕ್ಕೆ 20,000 ಕೋಟಿ ರೂ. ನಷ್ಟ; ಸಂಸತ್‌ನಲ್ಲಿ ಕಳವಳ

ಪೈರಸಿಯಿಂದಾಗಿ ಕಲಾವಿದರ ವರ್ಷಗಳ ಪರಿಶ್ರಮ ವ್ಯರ್ಥವಾಗುತ್ತಿದೆ. ಈ ವ್ಯಾಪಕ ಸಮಸ್ಯೆಯಿಂದ ಕಲಾವಿದರ ಸೃಜನಶೀಲ ಪ್ರಯತ್ನಗಳು ಮತ್ತು ಉದ್ಯಮದ ಆರ್ಥಿಕ ಸದೃಢತೆಗೆ ಧಕ್ಕೆಯಾಗುತ್ತಿದೆ. ಕೋವಿಡ್-19 ಸಾಂಕ್ರಾಮಿಕದ ಬಳಿಕ ಆನ್ಲೈನ್ ನಲ್ಲಿ ಪೈರಸಿಯು ಶೇ. 62 ಹೆಚ್ಚಳವಾಗಿದೆ ಎಂದು ರಾಜ್ಯಸಭೆಯಲ್ಲಿ (Parliament Session) ಸಂಸದ ರಾಘವ್ ಚಡ್ಡಾ ಕಳವಳ ವ್ಯಕ್ತಪಡಿಸಿದ್ದಾರೆ.

VISTARANEWS.COM


on

By

Parliament Session
Koo

ನವದೆಹಲಿ: ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿನ (OTT platforms) ಪೈರಸಿಯನ್ನು (piracy on the film industry) ತಡೆಗಟ್ಟಲು ತುರ್ತು ಕ್ರಮ ಕೈಗೊಳ್ಳುವಂತೆ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ (MP Raghav Chadha) ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ (rajya sabha) ಮಾತನಾಡಿದ ಅವರು, ಚಲನಚಿತ್ರೋದ್ಯಮದ ಮೇಲೆ ಪೈರಸಿಯ ತೀವ್ರ ಆರ್ಥಿಕ ಪರಿಣಾಮವನ್ನು ಬೀರುತ್ತಿದೆ. ವಾರ್ಷಿಕ 20,000 ಕೋಟಿ ರೂ. ನಷ್ಟವಾಗುತ್ತಿದೆ ಎಂದು ತಿಳಿಸಿದರು.

ಪೈರಸಿಯಿಂದಾಗಿ ಕಲಾವಿದರ ವರ್ಷಗಳ ಪರಿಶ್ರಮ ವ್ಯರ್ಥವಾಗುತ್ತಿದೆ. ಈ ವ್ಯಾಪಕ ಸಮಸ್ಯೆಯಿಂದ ಕಲಾವಿದರ ಸೃಜನಶೀಲ ಪ್ರಯತ್ನಗಳು ಮತ್ತು ಉದ್ಯಮದ ಆರ್ಥಿಕ ಸದೃಢತೆಗೆ ಧಕ್ಕೆಯಾಗುತ್ತಿದೆ ಎಂದು ತಿಳಿಸಿದ ಚಡ್ಡಾ, ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲೇ ಪೈರಸಿಯು ಶೇ. 62 ಹೆಚ್ಚಳವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಟ್ವೀಟ್‌ನಲ್ಲೂ ಈ ಕುರಿತು ಮಾಹಿತಿ ಹಂಚಿಕೊಂಡ ಆಪ್ ನಾಯಕ ಪರಿಸ್ಥಿತಿಯ ಗಂಭೀರತೆ ಬಗ್ಗೆ ಎಲ್ಲರ ಗಮನ ಸೆಳೆಯುವ ಅಗತ್ಯವಿದೆ ಎಂದು ತಿಳಿಸಿದರು.


ಪೈರಸಿ ಎನ್ನುವುದು ಚಲನಚಿತ್ರೋದ್ಯಮದಲ್ಲಿ ಮತ್ತು ಈಗ ಒಟಿಟಿ ಪ್ರಪಂಚದಲ್ಲಿಯೂ ವ್ಯಾಪಕವಾಗಿರುವ ಪ್ಲೇಗ್‌ನಂತೆ ಹರಡುತ್ತಿದೆ. ಸಾಂಕ್ರಾಮಿಕದ ಸಮಯದಲ್ಲೇ ಆನ್‌ಲೈನ್ ಪೈರಸಿ ಶೇ. 62ರಷ್ಟು ಏರಿಕೆ ಕಂಡಿದೆ. ಒಂದು ವರ್ಷದ ಹಿಂದೆ ಸಿನಿಮಾಟೋಗ್ರಾಫಿಕ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದ್ದೇವೆ. ಆದರೆ ಇದು ಆನ್‌ಲೈನ್ ಪೈರಸಿ ವಿರುದ್ಧ ಯಾವುದೇ ಕಾರ್ಯವಿಧಾನವನ್ನು ಹೊಂದಿಲ್ಲ. ಇದು ಮಲ್ಟಿಪ್ಲೆಕ್ಸ್‌ಗಳಲ್ಲಿ ಆಂಟಿ ಕ್ಯಾಮ್ ರೆಕಾರ್ಡಿಂಗ್ ಮೇಲೆ ಹೆಚ್ಚಾಗಿ ಕೇಂದ್ರೀಕರಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Yogi Adityanath: ನೀರು ಎರಚಿ ಮಹಿಳೆಗೆ ಕಿರುಕುಳ ಕೇಸ್‌; ಇಡೀ ಪೊಲೀಸ್‌ ಚೌಕಿಯೇ ಅಮಾನತು; ಇನ್ಮುಂದೆ ʼಬುಲೆಟ್‌ ರೈಲ್‌ʼ ಓಡಿಸಲಾಗುತ್ತೆ ಎಂದು ವಾರ್ನಿಂಗ್‌

ಸೀಮಿತ ವ್ಯಾಪ್ತಿ ಹೊಂದಿರುವ ಈಗಿನ ಕಾನೂನನ್ನು ಟೀಕಿಸಿದ ಅವರು, ಇದು ಡಿಜಿಟಲ್ ಪೈರಸಿಯಿಂದ ಎದುರಾಗುವ ಸವಾಲುಗಳನ್ನು ಎದುರಿಸಲು ಸಮರ್ಥವಾಗಿಲ್ಲ. ಇದರಿಂದ ಪೈರಸಿ ಹಾವಳಿ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸೂಕ್ತವಾದ ಕಾನೂನನ್ನು ಪರಿಚಯಿಸುವಂತೆ ಅವರು ಸರ್ಕಾರಕ್ಕೆ ತಿಳಿಸಿದರು.

Continue Reading

ದೇಶ

Rajeev Chandrasekhar: 10 ವರ್ಷಗಳಲ್ಲಿ 80 ಕೋಟಿ ಮಂದಿ ಬಡತನದಿಂದ ಹೊರಗೆ; ವಿಶ್ವಸಂಸ್ಥೆಯಲ್ಲೇ ಮೋದಿ ಆಡಳಿತಕ್ಕೆ ಪ್ರಶಂಸೆ

ಪ್ರಧಾನಿ ಮೋದಿ ತಮ್ಮ ಡಿಜಿಟಲ್ ಸರ್ಕಾರದ ನೀತಿಗಳ ಮೂಲಕ 80 ಕೋಟಿ ಜನರನ್ನು ಬಡತನದಿಂದ ಮತ್ತು 25 ಕೋಟಿ ಜನರನ್ನು ಬಹು ಬಡತನದಿಂದ ಹೊರಬರಲು ಸಹಾಯ ಮಾಡಿದ್ದಾರೆ. ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಸಾಕಷ್ಟು ಪರಿವರ್ತನೆಯಾಗಿದೆ. ವಿಶ್ವ ಸಂಸ್ಥೆಯ ಜನರಲ್‌ ಅಸೆಂಬ್ಲಿ ಅಧ್ಯಕ್ಷರೇ ಈ ಬಗ್ಗೆ ಮೋದಿ ಆಡಳಿತಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಎಂದು ಕೇಂದ್ರ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಪ್ರಸ್ತಾಪಿಸಿದ್ದಾರೆ.

VISTARANEWS.COM


on

By

Rajeev Chandrasekhar
Koo

ಕಳೆದ ಹತ್ತು ವರ್ಷಗಳಲ್ಲಿ ಭಾರತದ 80 ಕೋಟಿ ಜನರು ಬಡತನದಿಂದ (poverty) ಹೊರಬಂದಿದ್ದು, ಇದಕ್ಕಾಗಿ ವಿಶ್ವಸಂಸ್ಥೆ ಜನರಲ್‌ ಅಸೆಂಬ್ಲಿ (ಯುಎನ್‌ಜಿಎ) ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ (UNGA president Dennis Francis) ಅವರು ಭಾರತವನ್ನು ಶ್ಲಾಘಿಸಿರುವುದನ್ನು ಪ್ರಸ್ತಾಪಿಸಿರುವ ಬಿಜೆಪಿ ನಾಯಕ (bjp leader) ಮತ್ತು ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ( Rajeev Chandrasekhar), ಭಾರತದಲ್ಲಿ ನಡೆದಿರುವ ಪರಿವರ್ತನೆಗೆ ಇದು ಸಾಕ್ಷಿ ಎಂದಿದ್ದಾರೆ.

ಪ್ರಧಾನಿ ಮೋದಿ ತಮ್ಮ ಡಿಜಿಟಲ್ ಸರ್ಕಾರದ ನೀತಿಗಳ ಮೂಲಕ 80 ಕೋಟಿ ಜನರು ಬಡತನದಿಂದ ಮತ್ತು 25 ಕೋಟಿ ಜನರಿಗೆ ಬಹು ಬಡತನದಿಂದ ಹೊರಬರಲು ಸಹಾಯ ಮಾಡಿದ್ದಾರೆ ಎಂದು ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಸಾಕಷ್ಟು ಪರಿವರ್ತನೆಯಾಗಿದೆ. ಎಂದ ಅವರು, ಪ್ರತಿ ದೇಶವು ತಮ್ಮ ಬಡವರನ್ನು ಮುನ್ನಡೆಸಲು ಈ ರೀತಿಯ ನೀತಿಗಳನ್ನು ರೂಪಿಸಬೇಕು ಎಂದು ಹೇಳಿದರು.


ತಂತ್ರಜ್ಞಾನ ಮತ್ತು ಮೊಬೈಲ್ ಫೋನ್‌ಗಳಿಂದ 80 ಕೋಟಿ ಜನರ ಜೀವನದಲ್ಲಿ ಈ ಬದಲಾವಣೆಯಾಗಿದೆ. 2014ರ ಮೊದಲು ವಿಶ್ವದ ಮುಂದೆ ಭಾರತ ಸರ್ಕಾರದ ನಿರೂಪಣೆಯೆಂದರೆ ಸರ್ಕಾರವು ಅತ್ಯಂತ ನಿಷ್ಕ್ರಿಯವಾಗಿದೆ, ಸರ್ಕಾರಿ ವ್ಯವಸ್ಥೆಯು ತುಂಬಾ ಸೋರಿಕೆ ಮತ್ತು ಭ್ರಷ್ಟವಾಗಿದೆ ಎಂದಾಗಿತ್ತು. ಭಾರತದಲ್ಲಿ ಬ್ಯಾಂಕಿಂಗ್ ಸೇರ್ಪಡೆ ಕೇವಲ ಶ್ರೀಮಂತ ಮತ್ತು ಮಧ್ಯಮ ವರ್ಗದವರಿಗೆ ಆಗಿತ್ತು. ಬಡವರಿಗೆ ಬ್ಯಾಂಕಿಂಗ್ ವ್ಯವಸ್ಥೆ ಸಂಪರ್ಕ ಕಡಿತವಾಗಿತ್ತು ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

2014ರ ಮೊದಲು ಕೇವಲ 17 ಕೋಟಿ ಜನರಿಗೆ ಇಂಟರ್ನೆಟ್ ಸಂಪರ್ಕ ಲಭ್ಯವಿತ್ತು. 2014ರ ಅನಂತರ ಪ್ರಧಾನಿ ಮೋದಿ ಈ 17 ಕೋಟಿ ಇಂಟರ್ನೆಟ್ ಸಂಪರ್ಕವನ್ನು 10 ವರ್ಷಗಳಲ್ಲಿ 90 ಕೋಟಿಗೆ ಪರಿವರ್ತಿಸಿದರು. 14 ಕೋಟಿ ಜನರು ಮಾತ್ರ ಬ್ಯಾಂಕ್ ಖಾತೆ ಹೊಂದಿದ್ದರು, ಇಂದು 52 ಕೋಟಿ ಜನರು ಬ್ಯಾಂಕ್ ಖಾತೆ ಹೊಂದಿದ್ದಾರೆ. ಇವೆಲ್ಲವನ್ನೂ ಒಟ್ಟುಗೂಡಿಸಿ 25 ಕೋಟಿ ಜನರು ಬಹುಆಯಾಮದ ಬಡತನದಿಂದ ಹೊರಬಂದಿದ್ದಾರೆ. ಕೋವಿಡ್ ಸಮಯದಲ್ಲಿ 80 ಕೋಟಿ ಜನರಿಗೆ ಪಡಿತರವನ್ನು ಒದಗಿಸಲಾಗಿದೆ. 200 ಕೋಟಿ ಜನರಿಗೆ ವ್ಯಾಕ್ಸಿನೇಷನ್ ಅನ್ನು ತಂತ್ರಜ್ಞಾನದ ಸಹಾಯದಿಂದ ನಿರ್ವಹಿಸಲಾಗಿದೆ ಎಂದು ರಾಜೀವ್‌ ವಿವರಿಸಿದ್ದಾರೆ.

ಇತರ ದೇಶಗಳು ಸಹ ಭಾರತದ ಹೆಜ್ಜೆಗಳನ್ನು ಅನುಸರಿಸಬೇಕು ಎಂದು ಬ್ರಿಟನ್‌ ಮಾಜಿ ಪ್ರಧಾನಿ ಟೋನಿ ಬ್ಲೇರ್ ಹೇಳಿದ್ದರು. ಹತ್ತು ವರ್ಷಗಳಲ್ಲಿ ಏನಾಯಿತು ಎಂದು ನಮ್ಮ ವಿರೋಧ ಪಕ್ಷಗಳು ಕೇಳುತ್ತವೆ. ಆದರೆ ಪ್ರಧಾನಿ ಮೋದಿ ಬಡವರು ಮತ್ತು ರೈತರಿಗಾಗಿ ಏನು ಮಾಡಿದ್ದಾರೆ ಎಂಬುದು ಜಗತ್ತಿಗೆ ತಿಳಿದಿದೆ, ನಮಗೂ ತಿಳಿದಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಅವರನ್ನು ಸಬಲೀಕರಣಗೊಳಿಸಲಾಗಿದೆ. ಜಗತ್ತು ಅದನ್ನು ಒಪ್ಪಿಕೊಳ್ಳುತ್ತದೆ ಎಂದಿದ್ದಾರೆ ರಾಜೀವ್‌ ಚಂದ್ರಶೇಖರ್‌.

ಇದನ್ನೂ ಓದಿ: Pralhad Joshi: ಪ್ರಸಕ್ತ ಸಕ್ಕರೆ ಋತುವಿನಲ್ಲಿ 1 ಲಕ್ಷ ಕೋಟಿ ರೂ. ರೈತರ ಬಾಕಿ ಪಾವತಿ

ಕ್ಷಿಪ್ರ ಅಭಿವೃದ್ಧಿಗಾಗಿ ಡಿಜಿಟಲೀಕರಣದ ಬಳಕೆಯನ್ನು ಒತ್ತಿಹೇಳುತ್ತಾ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 78ನೇ ಅಧಿವೇಶನದ ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ ಅವರು ಕಳೆದ 5-6 ವರ್ಷಗಳಲ್ಲಿ 800 ಮಿಲಿಯನ್ ಜನರನ್ನು ಬಡತನದಿಂದ ಮೇಲಕ್ಕೆತ್ತಿರುವ ಭಾರತದ ಕ್ರಮವನ್ನು ಶ್ಲಾಘಿಸಿದ್ದರು. ಭಾರತದ ಗ್ರಾಮೀಣ ಪ್ರದೇಶದ ಜನರ ಕೇವಲ ಸ್ಮಾರ್ಟ್‌ಫೋನ್ ಸ್ಪರ್ಶದಿಂದ ಹೇಗೆ ಪಾವತಿಗಳನ್ನು ಮತ್ತು ಬಿಲ್‌ಗಳನ್ನು ಸುಲಭವಾಗಿ ಪಾವತಿಸುತ್ತಿದ್ದಾರೆ ಎಂಬುದನ್ನು ಅವರು ತಿಳಿಸಿದ್ದರು.

Continue Reading

Latest

Viral Video: ನಿನಗೆಷ್ಟು ಬಾಯ್‌ಫ್ರೆಂಡ್‌ ಎನ್ನುತ್ತ ಗೆಳತಿಗೆ ಭೀಕರವಾಗಿ ಇರಿದ ಯುವ ಕಾಂಗ್ರೆಸ್ ಮುಖಂಡ!

Viral Video: ಮಧ್ಯಪ್ರದೇಶದಲ್ಲಿ ಯುವ ಕಾಂಗ್ರೆಸ್ ನಾಯಕನೊಬ್ಬ ತನ್ನ ಗೆಳತಿಗೆ ಹಾಡಹಗಲೇ ಚಾಕುವಿನಿಂದ ಇರಿದಿದ್ದಾನೆ. ಈ ಘಟನೆಯಲ್ಲಿ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಸಂತ್ರಸ್ತೆ ರಕ್ತದ ಮಡುವಿನಲ್ಲಿ ಬಿದ್ದು ಸಹಾಯಕ್ಕೆ ಮೊರೆ ಇಡುತ್ತಿರುವುದು ಕಂಡು ಬಂದಿದೆ. ಅಲ್ಲೇ ಇದ್ದ ಆತ “ಅವಳು ನನಗೆ ಮೋಸ ಮಾಡಿದ್ದಾಳೆ. ಈ ಹುಡುಗಿಯರು ಕೇವಲ ಹಣವನ್ನು ಬಯಸುತ್ತಾರೆʼʼ ಎಂದು ಕಿರುಚಿದ್ದಾನೆ. ಆಕೆಯ ಬಳಿ ನಿನಗೆ ಎಷ್ಟು ಬಾಯ್ ಫ್ರೆಂಡ್‌ಗಳಿದ್ದಾರೆ? ಅಯಾನ್, ರಯಾನ್, ಆಜಾದ್, ಹರ್ಷಿತ್ ಎಂದು ಪ್ರಶ್ನಿಸಿದ್ದಾನೆ.

VISTARANEWS.COM


on

Viral Video
Koo


ಇತ್ತೀಚೆಗೆ ಲವ್‌ ಬ್ರೇಕಪ್, ಮೋಸ, ವಂಚನೆ ಮಾಡುವಂತಹ ಪ್ರಕರಣಗಳು (Love Case) ಇತ್ತೀಚೆಗೆ ಮಿತಿ ಮೀರಿ ಬಿಟ್ಟಿದೆ. ಇದೀಗ ಮಧ್ಯಪ್ರದೇಶದಲ್ಲಿ ಕೂಡ ಇಂತಹದೊಂದು (Viral Video) ಪ್ರಕರಣ ನಡೆದಿದೆ. ಮಧ್ಯಪ್ರದೇಶದ ನೀಮುಚ್‍ನಲ್ಲಿ ಯುವ ಕಾಂಗ್ರೆಸ್ ನಾಯಕನೊಬ್ಬ ತನ್ನ ಗೆಳತಿಗೆ ಹಾಡಹಗಲೇ ಚಾಕುವಿನಿಂದ ಭೀಕರವಾಗಿ ಇರಿದಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಘಟನೆಯಲ್ಲಿ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಘಟನೆಯನ್ನು ಪ್ರೇಕ್ಷಕರೊಬ್ಬರು ವಿಡಿಯೊ ಮಾಡಿದ್ದು, ಇದರಲ್ಲಿ ಸಂತ್ರಸ್ತೆ ರಕ್ತದ ಮಡುವಿನಲ್ಲಿ ಬಿದ್ದು ಸಹಾಯಕ್ಕೆ ಮೊರೆ ಇಡುತ್ತಿರುವುದು ಕಂಡು ಬಂದಿದೆ. ಆ ವ್ಯಕ್ತಿ ಅವಳನ್ನು ಭೀಕರವಾಗಿ ಚಾಕುವಿನಿಂದ ಇರಿದಿದ್ದಾನೆ. ಅಲ್ಲೇ ಇದ್ದ ಆತ “ಅವಳು ನನಗೆ ಮೋಸ ಮಾಡಿದ್ದಾಳೆ. ಈ ಹುಡುಗಿಯರು ಕೇವಲ ಹಣವನ್ನು ಬಯಸುತ್ತಾರೆ ಎಂದು ಹೇಳುತ್ತಾ ಆಕೆಯ ಬಳಿ ನಿನಗೆ ಎಷ್ಟು ಬಾಯ್ ಫ್ರೆಂಡ್‌ಗಳಿದ್ದಾರೆ? ಅಯಾನ್, ರಯಾನ್, ಆಜಾದ್, ಹರ್ಷಿತ್?ʼʼ ಎಂದು ಪ್ರಶ್ನಿಸುತ್ತಿರುವುದು ಕೇಳಿಸುತ್ತದೆ.

ವರದಿಗಳ ಪ್ರಕಾರ, ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ನೀಮುಚ್‍ನ ಕಾಟ್ ಪೊಲೀಸ್ ಠಾಣೆ (Cantt police station)ಪ್ರದೇಶದ ಗಾಂಧಿ ವಾಟಿಕಾ ಬಳಿ ಈ ಘಟನೆ ನಡೆದಿದೆ. ಮಾಹಿತಿ ಪಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ತಲುಪಿ ತೀವ್ರ ರಕ್ತಸ್ರಾವವಾಗುತ್ತಿದ್ದ ಯುವತಿಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಜಿಲ್ಲಾ ಆಸ್ಪತ್ರೆಯಿಂದ, ಯುವತಿಯ ಕುಟುಂಬವು ಅವಳನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿತು. ಅಲ್ಲಿ ಅವಳ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಆರೋಪಿಯನ್ನು ಕುಲದೀಪ್ ವರ್ಮಾ (23) ಎಂದು ಗುರುತಿಸಲಾಗಿದೆ. ಆತ ಯುವತಿಯನ್ನು ಕೊಲೆ ಮಾಡುವ ಪ್ರಯತ್ನದ ಹಿಂದಿನ ನಿಖರವಾದ ಉದ್ದೇಶವನ್ನು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಪೊಲೀಸರು ಆರೋಪಿಯನ್ನು ಹುಡುಕಿ ಬಂಧಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಜಲಾವೃತ ರಸ್ತೆಯಲ್ಲಿ ಬೈಕ್ ಮೇಲೆ ಹೋಗುತ್ತಿದ್ದ ಮಹಿಳೆಗೆ ಪುಂಡರ ಕಿರುಕುಳ; ವಿಡಿಯೊ ನೋಡಿ ಜನಾಕ್ರೋಶ

ಪ್ರತ್ಯಕ್ಷದರ್ಶಿಗಳ ಪ್ರಕಾರ, ಇವರಿಬ್ಬರು ಉದ್ಯಾನವನದ ಹೊರಗೆ ನಿಂತು ಯಾವುದೋ ವಿಚಾರಕ್ಕೆ ವಾದಿಸುತ್ತಿದ್ದಾಗ ವ್ಯಕ್ತಿ ಚಾಕುವನ್ನು ಹೊರತೆಗೆದು ಆಕೆಗೆ ಇರಿದಿದ್ದಾನೆ. ಸಂತ್ರಸ್ತೆಯ ಕಿರುಚಾಟ ಕೇಳಿ ಸ್ಥಳದಲ್ಲಿದ್ದವರು ಓಡಿ ಬಂದಿದ್ದಾರೆ. ಆದರೆ ಯಾರೂ ಹುಡುಗಿಯನ್ನು ಕಾಪಾಡಲು ಮತ್ತು ಆ ವ್ಯಕ್ತಿಯನ್ನು ಎದುರಿಸಲು ಪ್ರಯತ್ನಿಸಲಿಲ್ಲ ಎನ್ನಲಾಗಿದೆ. ಸಂತ್ರಸ್ತೆಯನ್ನು 20 ವರ್ಷದ ತಸ್ಲೀಮ್, ಬೋಹ್ರಾ ಬಜಾರ್ ನಿವಾಸಿ ಎಂದು ಗುರುತಿಸಲಾಗಿದ್ದು, ಆರೋಪಿ ಕುಲದೀಪ್ ವರ್ಮಾ ಕೇಸರ್ ಪುರ ನಿವಾಸಿಯಾಗಿದ್ದು, ಯುವ ಕಾಂಗ್ರೆಸ್ ನಾಯಕನಾಗಿದ್ದಾನೆ. ಈತ ಜ್ಞಾನೋದಯ ಮಹಾವಿದ್ಯಾಲಯದಲ್ಲಿ ಎನ್ಎಸ್‌ಯುಐನ ಕಾಲೇಜು ಅಧ್ಯಕ್ಷನಾಗಿದ್ದ. ಇತ್ತೀಚೆಗೆ ಅವನನ್ನು ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಸೇರಿಸಲಾಗಿತ್ತು.

Continue Reading

Latest

Sexual Abuse: ಹಾಸ್ಟೆಲ್‌ ಬಾತ್‌ರೂಮ್‌ನಲ್ಲಿ ಮಗು ಜನನ! ಆಘಾತಗೊಂಡು ಅಲ್ಲೇ ಕೂತಿದ್ದ ಬಾಲಕಿ

Sexual Abuse: ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ (ಕೆಜಿಬಿವಿ) ಮೊದಲ ವರ್ಷದ ಇಂಟರ್ ಮೀಡಿಯಟ್ ವಿದ್ಯಾರ್ಥಿನಿಯೊಬ್ಬಳು ಬಾತ್ ರೂಮ್‌ನಲ್ಲಿ ಇನ್ನೂ ಬೆಳವಣಿಗೆ ಹೊಂದದ ಮಗುವಿಗೆ ಜನ್ಮ ನೀಡಿದ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕೊಥಪಟ್ಟಣಂನ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ನಡೆದಿದೆ. ವಿದ್ಯಾರ್ಥಿನಿ ಬಹಳ ಸಮಯದ ನಂತರ ತನ್ನ ತರಗತಿಗೆ ಹಾಜರಾಗದಿದ್ದಾಗ, ಅವಳ ಸಹಪಾಠಿಗಳು ಅಲ್ಲಿಯ ಸಿಬ್ಬಂದಿಗೆ ಮಾಹಿತಿ ನೀಡಿದರು. ಆಗ ಆಕೆಯನ್ನು ಹುಡುಕಿಕೊಂಡು ಬಾತ್‌ರೂಂಗೆ ಬಂದ ಶಿಕ್ಷಕರಿಗೆ ಅಲ್ಲಿ ಈ ಘೋರ ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದಾರೆ.

VISTARANEWS.COM


on

Sexual Abuse
Koo

ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಲೇ ಇದೆ. ಇದೀಗ 16 ವರ್ಷದ ಇಂಟರ್ ಮೀಡಿಯೆಟ್ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್‌ ಬಾತ್‍ರೂಮ್‌(Sexual Abuse)ನಲ್ಲಿ ಇನ್ನೂ ಬೆಳವಣಿಗೆ ಹೊಂದದ ಭ್ರೂಣಕ್ಕೆ ಜನ್ಮ ನೀಡಿದ್ದಾಳೆ. ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕೊಥಪಟ್ಟಣಂನ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ಈ ಘಟನೆ ನಡೆದಿದೆ.

ಈಕೆ ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ (ಕೆಜಿಬಿವಿ) ಮೊದಲ ವರ್ಷದ ಇಂಟರ್‌ ಮೀಡಿಯಟ್‌ ವಿದ್ಯಾರ್ಥಿನಿಯಾಗಿದ್ದು, ಕಳೆದ ಎರಡು ತಿಂಗಳಿನಿಂದ ಹಾಸ್ಟೆಲ್‍ನಲ್ಲಿ ವಾಸವಾಗಿದ್ದಳು. ಶಾಲಾ ಅಧಿಕಾರಿಗಳ ಮಾಹಿತಿ ಪ್ರಕಾರ, ವಿದ್ಯಾರ್ಥಿನಿ ಹೊಟ್ಟೆ ನೋವಿನ ಬಗ್ಗೆ ಹೇಳಿಕೊಂಡಿದ್ದಳು. ಆಗ ಅವಳನ್ನು ಬಾತ್ ರೂಮ್‌ಗೆ ಹೋಗಿ ಬರುವಂತೆ ಹೇಳಲಾಗಿತ್ತು. ಅಲ್ಲಿ ಅವಳು ಇನ್ನೂ ಬೆಳವಣಿಗೆ ಹೊಂದದ ಮಗುವಿಗೆ ಜನ್ಮ ನೀಡಿದ್ದಾಳೆ. ವಿದ್ಯಾರ್ಥಿನಿ ಬಹಳ ಸಮಯ ಕಳೆದರೂ ಬಾತ್‌ರೂಮ್‌ನಿಂದ ಬಾರದ ಕಾರಣ, ಅವಳ ಸಹಪಾಠಿಗಳು ಅಲ್ಲಿಯ ಉಸ್ತುವಾರಿಗೆ ಮಾಹಿತಿ ನೀಡಿದರು. ಆಗ ಆಕೆಯನ್ನು ಹುಡುಕಿಕೊಂಡು ಬಾತ್‍ರೂಮ್‌ಗೆ ಬಂದ ಅವರು ಅಲ್ಲಿ ಈ ಘೋರ ದೃಶ್ಯ ಕಂಡುಬಂದಿದೆ.

ಚೀಮಕುರ್ತಿ ಮಂಡಲದ ನಿವಾಸಿಯಾದ ಈ ವಿದ್ಯಾರ್ಥಿನಿ ಜೂನ್ 19ರಂದು ಈ ಶಿಕ್ಷಣ ಸಂಸ್ಥೆಗೆ ಸೇರಿದ್ದಳು. ಪ್ರತಿದಿನ ತರಗತಿಗಳಿಗೆ ಹಾಜರಾಗುತ್ತಿದ್ದಳು. ಅವಳು ಒಂದು ವಾರ ಮನೆಗೆ ಹೋಗಿ ಹಾಸ್ಟೆಲ್‍ಗೆ ಹಿಂದಿರುಗಿದ್ದಳು. ಹಾಸ್ಟೆಲ್‍ನಲ್ಲಿ ಅವಳ ಜೊತೆ ಇತರ ವಿದ್ಯಾರ್ಥಿಗಳು ವಾಸವಾಗಿದ್ದಾರೆ. ವಿದ್ಯಾರ್ಥಿನಿಯ ಗರ್ಭಧಾರಣೆಯ ಬಗ್ಗೆ ತಮಗೆ ತಿಳಿದಿರಲಿಲ್ಲ ಎಂಬುದಾಗಿ ಶಾಲಾ ಅಧಿಕಾರಿಗಳು ಹೇಳಿದ್ದಾರೆ. ವಿದ್ಯಾರ್ಥಿಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಒಂಗೋಲ್‍ನ ರಿಮ್ಸ್(ಆರ್ ಐಎಂಎಸ್) ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಪೊಲೀಸರ ಮಾಹಿತಿ ಪ್ರಕಾರ, ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯದ ಹಾಸ್ಟೆಲ್‌ ಶೌಚಾಲಯದಲ್ಲಿ ಹದಿನಾರು ವರ್ಷದ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಅವಳು ಬಹಳ ಸಮಯದಿಂದ ಶೌಚಾಲಯದಿಂದ ಹೊರಗೆ ಬರದಿರುವುದನ್ನು ಕಾಲೇಜು ಸಿಬ್ಬಂದಿ ಗಮನಿಸಿದ್ದಾರೆ. ಉಪನ್ಯಾಸಕಿಯೊಬ್ಬರು ಒಳಗೆ ಹೋಗಿ ನೋಡಿದಾಗ ವಿದ್ಯಾರ್ಥಿನಿಯ ಪಕ್ಕದಲ್ಲಿ ಗಂಡು ಮಗು ಸತ್ತು ಬಿದ್ದಿರುವುದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ವಿದ್ಯಾರ್ಥಿನಿ ಆಘಾತಗೊಂಡು ಅಲ್ಲೇ ಕುಳಿತಿದ್ದಳು.

ಇದನ್ನೂ ಓದಿ: ಟೋಸ್ಟ್‌ ನೀಡುವುದಾಗಿ ಕರೆದು ಬಾಲಕಿ ಮೇಲೆ ಅತ್ಯಾಚಾರ; ಮೋಯಿದ್‌ ಖಾನ್‌, ರಾಜ ಖಾನ್‌ ಬಂಧನ

ಸ್ಥಳಕ್ಕೆ ಬಂದ ಪೊಲೀಸರು ಬಾಲಕಿಯನ್ನು ಒಂಗೋಲ್‍ನ ರಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಿದರು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಚಿಮಕುರ್ತಿಯ ವ್ಯಕ್ತಿಯೊಬ್ಬ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂಬುದಾಗಿ ತಿಳಿದುಬಂದಿದೆ.

Continue Reading
Advertisement
Parliament Session
ರಾಜಕೀಯ49 seconds ago

Parliament Session: ಪೈರಸಿಯಿಂದ ಚಿತ್ರೋದ್ಯಮಕ್ಕೆ 20,000 ಕೋಟಿ ರೂ. ನಷ್ಟ; ಸಂಸತ್‌ನಲ್ಲಿ ಕಳವಳ

Rajeev Chandrasekhar
ದೇಶ6 mins ago

Rajeev Chandrasekhar: 10 ವರ್ಷಗಳಲ್ಲಿ 80 ಕೋಟಿ ಮಂದಿ ಬಡತನದಿಂದ ಹೊರಗೆ; ವಿಶ್ವಸಂಸ್ಥೆಯಲ್ಲೇ ಮೋದಿ ಆಡಳಿತಕ್ಕೆ ಪ್ರಶಂಸೆ

Teacher Transfer Counselling
ಬೆಂಗಳೂರು12 mins ago

Teachers Transfer : ಇಂದಿನಿಂದ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌ ಶುರು; ವಿವಿಧ ನೇಮಕಾತಿ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ

Kapati Kannada movie Teaser released
ಕರ್ನಾಟಕ26 mins ago

Kannada New Movie: ಟೀಸರ್‌ನಲ್ಲೇ ಮೋಡಿ ಮಾಡಿದ ಕನ್ನಡ ಚಿತ್ರ ʼಕಪಟಿʼ

Viral News
ವೈರಲ್ ನ್ಯೂಸ್32 mins ago

Viral News: ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್‌ಗೆ ಕ್ರೀಡಾ ಸಚಿವೆ ಕಿಸ್‌ ಕೊಟ್ಟಿದ್ದು ಸಂಸ್ಕೃತಿಯ ಭಾಗ; ಸಮರ್ಥಿಸಿಕೊಂಡ ನೆಟ್ಟಿಗರು

IND vs SL ODI
ಪ್ರಮುಖ ಸುದ್ದಿ37 mins ago

IND vs SL ODI : ಲಂಕಾ ವಿರುದ್ಧ ಪಂದ್ಯದ ವೇಳೆ ಕಪ್ಪು ಪಟ್ಟಿ ಕಟ್ಟಿಕೊಂಡು ಮೈದಾನಕ್ಕೆ ಇಳಿದ ರೋಹಿತ್​ ಪಡೆ

Election Bond
ದೇಶ39 mins ago

Election Bond: ಚುನಾವಣಾ ಬಾಂಡ್‌ ಹಗರಣದ ಬಗ್ಗೆ SIT ತನಿಖೆಗೆ ಆಗ್ರಹ; ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್‌

CM Siddaramaiah
ಕರ್ನಾಟಕ56 mins ago

CM Siddaramaiah: ರಾಜಭವನದ ದುರ್ಬಳಕೆ ಮಾಡಿ ಚುನಾಯಿತ ಸರ್ಕಾರ ಅಸ್ಥಿರಗೊಳಿಸಲು ಕೇಂದ್ರ ಪ್ರಯತ್ನ: ಸಿಎಂ ಕಿಡಿ

Nita Ambani Beauty Secrets
ಆರೋಗ್ಯ58 mins ago

Nita Ambani Beauty Secrets: ನೀತಾ ಅಂಬಾನಿ ನಿತ್ಯವೂ ಕುಡಿಯುವ ಆರೋಗ್ಯಕರ ಮ್ಯಾಜಿಕ್‌ ಡ್ರಿಂಕ್‌ ಯಾವುದು ಗೊತ್ತೇ? ನಾವೂ ಕುಡಿಯಬಹುದು!

Viral Video
Latest60 mins ago

Viral Video: ನಿನಗೆಷ್ಟು ಬಾಯ್‌ಫ್ರೆಂಡ್‌ ಎನ್ನುತ್ತ ಗೆಳತಿಗೆ ಭೀಕರವಾಗಿ ಇರಿದ ಯುವ ಕಾಂಗ್ರೆಸ್ ಮುಖಂಡ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 day ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 day ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 day ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ3 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ3 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ4 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ4 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ4 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ5 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌