UDR Case: ವಿದೇಶಿ ಪ್ರಜೆಯ ಕೊಳೆತ ಶವ ಬೆಂಗಳೂರಿನಲ್ಲಿ ಪತ್ತೆ - Vistara News

ಕ್ರೈಂ

UDR Case: ವಿದೇಶಿ ಪ್ರಜೆಯ ಕೊಳೆತ ಶವ ಬೆಂಗಳೂರಿನಲ್ಲಿ ಪತ್ತೆ

UDR Case: ಕಳೆದ ತಿಂಗಳ 27ರಂದು ಮನೆ ಓನರ್‌ಗೆ ಕರೆ ಮಾಡಿದ್ದ ಜೇಮ್ಸ್, ಆಗಸ್ಟ್ 1ರವರೆಗೂ ನನ್ನನ್ನು ಡಿಸ್ಟರ್ಬ್‌ ಮಾಡಬೇಡಿ ಎಂದು ಹೇಳಿದ್ದ. ಶನಿವಾರ ಮನೆ ಮಾಲೀಕ ಎಷ್ಟೇ ಕರೆ ಮಾಡಿದರೂ ಜೇಮ್ಸ್ ಸ್ವೀಕರಿಸಿರಲಿಲ್ಲ. ಹೀಗಾಗಿ ಅನುಮಾನಗೊಂಡು ಮನೆ ಬಳಿ ಹೋಗಿ ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

VISTARANEWS.COM

on

udr case foreigner
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bangalore crime) ವಿದೇಶಿ ಪ್ರಜೆಯ (Foreigner) ಶವ (Body) ಕೊಳೆತ ಸ್ಥಿತಿಯಲ್ಲಿ (UDR Case) ಪತ್ತೆಯಾಗಿದೆ. ಯುಕೆ ಮೂಲದ ಪ್ರಜೆ ಗೇವಿನ್ ಜೇಮ್ಸ್ ಯಂಗ್ (59) ಮೃತದೇಹ ಪತ್ತೆಯಾಗಿದ್ದು, ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಶಂಕೆ ಇದೆ.

ಕೋರಮಂಗಲ 7ನೇ ಬ್ಲಾಕ್‌ಲ್ಲಿ ಘಟನೆ ನಡೆದಿದೆ. ಮೃತ ಜೇಮ್ಸ್‌ ಡೆತ್ ನೋಟ್ ಬರೆದಿಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಜುಲೈ 1ರಂದು ಬೆಂಗಳೂರಿಗೆ ಬಂದಿದ್ದ ಜೇಮ್ಸ್ ಯಂಗ್, ಆಪ್ ಮೂಲಕ ಕೋರಮಂಗಲದಲ್ಲಿ ಮನೆ ಬಾಡಿಗೆಗೆ ಪಡೆದಿದ್ದ. ಜನಾರ್ದನ್ ಎಂಬವರ ಮನೆಯಲ್ಲಿ ಬಾಡಿಗೆಗೆ ಇದ್ದ. ಶೆಫ್ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದ.

ಜೇಮ್ಸ್‌ ಹೆಂಡತಿಯಿಂದ ಡೈವೋರ್ಸ್‌ ಕೂಡ ಪಡೆದಿದ್ದು, ಖಿನ್ನತೆಗೊಳಗಾಗಿದ್ದ ಎನ್ನಲಾಗಿದೆ. ಅನಾರೋಗ್ಯದಿಂದ ಕೂಡ ಬಳಲುತ್ತಿದ್ದ ಜೇಮ್ಸ್‌ಗೆ ಬಿಪಿ, ಶುಗರ್ ಕೂಡ ಇತ್ತು. ಶುಗರ್ ಹಿನ್ನೆಲೆಯಲ್ಲಿ ಮಾತ್ರೆ ಹಾಗೂ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದ. ಓವರ್ ಡೋಸ್ ಟ್ಯಾಬ್ಲೆಟ್ ಹಾಗೂ ಇನ್ಸುಲಿನ್ ತಗೆದುಕೊಂಡು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಅನುಮಾನಿಸಲಾಗಿದೆ.

ಕಳೆದ ತಿಂಗಳ 27ರಂದು ಮನೆ ಓನರ್‌ಗೆ ಕರೆ ಮಾಡಿದ್ದ ಜೇಮ್ಸ್, ಆಗಸ್ಟ್ 1ರವರೆಗೂ ನನ್ನನ್ನು ಡಿಸ್ಟರ್ಬ್‌ ಮಾಡಬೇಡಿ ಎಂದು ಹೇಳಿದ್ದ. ಶನಿವಾರ ಮನೆ ಮಾಲೀಕ ಎಷ್ಟೇ ಕರೆ ಮಾಡಿದರೂ ಜೇಮ್ಸ್ ಸ್ವೀಕರಿಸಿರಲಿಲ್ಲ. ಹೀಗಾಗಿ ಅನುಮಾನಗೊಂಡು ಮನೆ ಬಳಿ ಹೋಗಿ ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಕೂಡಲೇ ಕೋರಮಂಗಲ ಪೊಲೀಸರಿಗೆ ಮನೆ ಮಾಲೀಕ ಜನಾರ್ದನ್ ಮಾಹಿತಿ ನೀಡಿದ್ದಾರೆ. ಕೋರಮಂಗಲ ಪೊಲೀಸರು ಹಾಗೂ ಎಫ್ಎಸ್ಎಲ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಾವಿನ ಬಗ್ಗೆ ತನಿಖೆ ಕೈಗೊಂಡಿರುವ ಪೊಲೀಸರು, ಈ ಬಗ್ಗೆ ಎಫ್ಆರ್‌ಆರ್‌ಓಗೆ ಮಾಹಿತಿ ನೀಡಿದ್ದಾರೆ. ಕೋರಮಂಗಲ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

ವಾಕಿಂಗ್‌ ಮಾಡುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಹೆಣ್ಣುಮಕ್ಕಳಿಗೆ ಸುರಕ್ಷತೆಯೇ ಇಲ್ಲದಂತಾಗಿದೆ. ಮನೆ ಎದುರು ತಿರುಗಾಡುತ್ತಿರುವಾಗ ಚಿನ್ನದ ಸರ ಕಿತ್ತುಕೊಂಡು ಹೋಗುವುದು, ಅವರ ಮೇಲೆ ಹಲ್ಲೆ ನಡೆಸುವುದು, ಮೊಬೈಲ್‌, ಪರ್ಸ್‌ ಎಗರಿಸುವುದು ಸೇರಿ ಹಲವು ರೀತಿಯ ಪ್ರಕರಣಗಳು ಸುದ್ದಿಯಾಗುತ್ತಲೇ ಇರುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ಕೋಣನಕುಂಟೆಯ (Konanakunte) ಕೃಷ್ಣಾ ನಗರದಲ್ಲಿ ಮನೆ ಬಳಿ ವಾಕಿಂಗ್‌ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ದುಷ್ಕರ್ಮಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ.

ಹೌದು, ಮಹಿಳೆಯು ಮನೆಯ ಬಳಿ ವಾಕಿಂಗ್‌ ಮಾಡುತ್ತಿದ್ದಾಗ ದುಷ್ಕರ್ಮಿಯೊಬ್ಬ ಬಳಿ ಬಂದಿದ್ದಾನೆ. ಅವರನ್ನು ಬಲವಂತವಾಗಿ ಹಿಡಿದು ತಬ್ಬಿಕೊಂಡು, ಕಿಸ್‌ ಕೊಟ್ಟಿದ್ದಾನೆ. ದುಷ್ಕರ್ಮಿಯಿಂದ ಬಿಡಿಸಿಕೊಂಡು ಕೂಗುತ್ತ ಮಹಿಳೆ ಓಡಿದ್ದಾರೆ. ಅವರ ಹಿಂದೆಯೇ ಓಡಿ ಬಂದ ದುರುಳನು, ಮತ್ತೆ ಕಿರುಕುಳ ನೀಡಿ ಓಡಿಹೋಗಿದ್ದಾನೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಹಾಗೆಯೇ, ನಗರದಲ್ಲಿ ಹೆಣ್ಣುಮಕ್ಕಳ ಸುರಕ್ಷತೆ ಕುರಿತು ಆತಂಕ ವ್ಯಕ್ತವಾಗುತ್ತಿದೆ. ಜನ ಆಕ್ರೋಶವನ್ನೂ ವ್ಯಕ್ತಪಡಿಸುತ್ತಿದ್ದಾರೆ.

ಶುಕ್ರವಾರ (ಆಗಸ್ಟ್‌ 2) ಬೆಳಗಿನ ಜಾವ ಮಹಿಳೆಯು ಮನೆಯ ಬಳಿಯಲ್ಲೇ ವಾಕಿಂಗ್‌ ಮಾಡುವಾಗ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಮಹಿಳೆಯು ಉತ್ತರ ಭಾರತದವರಾಗಿದ್ದು, ಬೆಳಗ್ಗೆ ಕೆಲ ಹೆಣ್ಣುಮಕ್ಕಳು ಸೇರಿ ವಾಕಿಂಗ್‌ ಹೋಗುತ್ತಿದ್ದರು. ಪಕ್ಕದ ಮನೆಯವರು ಬರುವ ಕಾರಣ ಅವರು ರಸ್ತೆ ಬದಿ ಕಾಯುತ್ತಿದ್ದರು ಎಂದು ತಿಳಿದುಬಂದಿದೆ.

ವಿಡಿಯೊ ವೈರಲ್‌ ಆದ ಬಳಿಕ ಹೆಣ್ಣುಮಕ್ಕಳು ಮನೆಯಿಂದ ಹೊರಬರಲು ಕೂಡ ಭಯಪಡುವಂತಾಗಿದೆ. ಹೆಣ್ಣುಮಕ್ಕಳ ಆಭರಣ, ಮೊಬೈಲ್‌ ಸೇರಿ ಬೆಲೆ ಬಾಳುವ ವಸ್ತುಗಳನ್ನು ಕಿತ್ತುಕೊಂಡು ಹೋಗುವುದು ಸೇರಿ ಹಲವು ಕೃತ್ಯ ಎಸಗುತ್ತಿರುವ ಇಂತಹ ದುಷ್ಕರ್ಮಿಗಳನ್ನು ಪೊಲೀಸರು ನಿಯಂತ್ರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Kangana Ranaut: ಮಲಗುವ ಕೋಣೆಗಳಲ್ಲಿ ಲೈಂಗಿಕತೆ ಏಕೆ ಉಳಿಯಬಾರದು?; ಒಲಿಂಪಿಕ್ಸ್ ಆಯೋಜಕರ ವಿರುದ್ಧ ಕಂಗನಾ ಆಕ್ರೋಶ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Road Accident: ಲಾರಿಯ ಹಿಂಬದಿ ಚಕ್ರಕ್ಕೆ ಸಿಲುಕಿ ಕ್ಲೀನರ್ ಸಾವು; ಬೈಕ್‌ ಅಪಘಾತದಲ್ಲಿ ಸವಾರರಿಬ್ಬರು ಮೃತ್ಯು

Road Accident: ಬೆಂಗಳೂರಿನಲ್ಲಿ ಲಾರಿಯ ಹಿಂಬದಿ ಚಕ್ರಕ್ಕೆ ಸಿಲುಕಿ ಕ್ಲೀನರ್ ಮೃತಪಟ್ಟರೆ, ಇತ್ತ ಮೈಸೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಬೈಕ್‌ ಸವಾರರಿಬ್ಬರು ಅಪಘಾತದಲ್ಲಿ ಮೃತ್ಯುವಾಗಿದ್ದಾರೆ.

VISTARANEWS.COM

on

By

Road Accident
Koo

ಬೆಂಗಳೂರು/ಕೊಡಗು: ಬೆಂಗಳೂರಿನ ಚಿಕ್ಕಬಾಣವಾರ ಸಮೀಪದ ಬ್ಯಾಲಕೆರೆ ರಸ್ತೆಯಲ್ಲಿ ಲಾರಿಯ ಹಿಂಬದಿ ಚಕ್ರಕ್ಕೆ ಸಿಲುಕಿ ಕ್ಲೀನರ್‌ರೊಬ್ಬರು ದಾರುಣವಾಗಿ (Road Accident) ಮೃತಪಟ್ಟಿದ್ದಾರೆ. ಲಾರಿ ಕ್ಲೀನರ್‌ ರಾಮನಂದ್ ಸಿಂಗ್ (42) ಮೃತ ದುರ್ದೈವಿ.

ಲಾರಿ ರಿವರ್ಸ್ ತೆಗೆಯಬೇಕಾದರೆ ಈ ದುರ್ಘಟನೆ ನಡೆದಿದೆ. ಸದ್ಯ ಲಾರಿ ಹಾಗೂ ಚಾಲಕನನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಚಿಕ್ಕಬಾಣವಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Road Accident : ಬಲ ತಿರುವು ಪಡೆಯುವಾಗ ಬೈಕ್‌ ಸವಾರನ ಮೇಲೆ ಹರಿದ ಕೆಎಸ್‌ಆರ್‌ಟಿಸಿ ಬಸ್‌; ಸಿಸಿ ಕ್ಯಾಮೆರಾದಲ್ಲಿ ಅಪಘಾತ ಸೆರೆ

ಧರ್ಮಸ್ಥಳಕ್ಕೆ ಹೊರಟಿದ್ದ ಯುವಕರು ಬೈಕ್‌ ಅಪಘಾತದಲ್ಲಿ ಸಾವು

ಕೊಡಗು: ಕೊಡಗಿನ ಮಡಿಕೇರಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 275ರ ಕೊಯನಾಡು ಬಳಿ ಬೈಕ್ ಅಪಘಾತ ಸಂಭವಿಸಿದೆ. ಮೈಸೂರು ಮೂಲದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭಾನುವಾರ ರಾತ್ರಿ ರಾಯಲ್‌ ಎನ್‌ಫೀಲ್ಡ್‌ ಬೈಕ್‌ನಲ್ಲಿ ವೇಗವಾಗಿ ಬಂದ ಸವಾರರು ನಿಯಂತ್ರಣ ತಪ್ಪಿ ಮೋರಿಗೆ ಗುದ್ದಿದ್ದಾರೆ.

ಗುದ್ದಿದ ರಭಸಕ್ಕೆ ಬೈಕ್‌ನಿಂದ ಹಾರಿ ಬಿದ್ದಿದ್ದಾರೆ. ಗಂಭೀರ ಗಾಯಗೊಂಡು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೋಮವಾರ ಬೆಳಗ್ಗೆ ಸ್ಥಳೀಯರು ನೋಡಿದಾಗ ಅಪಘಾತ ಪ್ರಕರಣ ಬೆಳಕಿಗೆ ಬಂದಿದೆ. ಮೋರಿ ಬಳಿ ಬೈಕ್ ಮತ್ತು ಎರಡು ಮೃತದೇಹಗಳು ಪತ್ತೆಯಾಗಿವೆ.

ಮೈಸೂರಿನ ಪವನ್ ಮತ್ತು ಮನೋಜ್ ಮೃತ ದುರ್ದೈವಿಗಳು. ಬೈಕ್‌ ಮೂಲಕ ಮೈಸೂರಿನಿಂದ ಧರ್ಮಸ್ಥಳ ಕಡೆಗೆ ಪ್ರಯಾಣಿಸುತ್ತಿದ್ದರು. ಆದರೆ ಬೈಕ್‌ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Inspector Death: ಮತ್ತೊಬ್ಬ ಪೊಲೀಸ್‌ ಇನ್‌ಸ್ಪೆಕ್ಟರ್‌ ಆತ್ಮಹತ್ಯೆ, ಎರಡು ತಿಂಗಳ ಹಿಂದೆ ಟ್ರಾನ್ಸ್‌ಫರ್‌ ಆಗಿದ್ದ ಸಿಸಿಬಿ ಎಸ್‌ಐ

Inspector Death: ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಿರ್ಜನ ಪ್ರದೇಶದಲ್ಲಿ ಮರಕ್ಕೆ ನೇಣು ಹಾಕಿಕೊಂಡು ತಿಮ್ಮೇಗೌಡ ಸಾವಿಗೆ ಶರಣಾಗಿದ್ದಾರೆ. ಈ ಹಿಂದೆ ಕುಂಬಳಗೋಡಿನ ಇನ್‌ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅವರು ಎರಡು ತಿಂಗಳ ಹಿಂದೆ ಸಿಸಿಬಿಗೆ ವರ್ಗಾವಣೆಗೊಂಡಿದ್ದರು. ತಮ್ಮ ತೋಟದ ಜಾಗದಲ್ಲಿ ಮರಕ್ಕೆ ನೇಣು ಬಿಗಿದುಕೊಂಡಿದ್ದಾರೆ.

VISTARANEWS.COM

on

police inspector death thimmegowda
Koo

ಬೆಂಗಳೂರು: ರಾಜ್ಯದಲ್ಲಿ ಮತ್ತೊಬ್ಬ ಪೊಲೀಸ್‌ ಇನ್‌ಸ್ಪೆಕ್ಟರ್‌ ಆತ್ಮಹತ್ಯೆ (police inspector death) ಮಾಡಿಕೊಂಡಿದ್ದಾರೆ. ಎರಡು ತಿಂಗಳ ಹಿಂದೆ ಸಿಸಿಬಿಗೆ (CCB) ಟ್ರಾನ್ಸ್‌ಫರ್‌ (Tarnsfer) ಆಗಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ತಿಮ್ಮೇಗೌಡ (Thimmegowda) ಆತ್ಮಹತ್ಯೆ ಮಾಡಿಕೊಂಡವರು. ಬೆಂಗಳೂರು ಸಿಸಿಬಿಯ ಆರ್ಥಿಕ ಅಪರಾಧ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಇವರು ಬಿಡದಿಯಲ್ಲಿ ಆತ್ಮಹತ್ಯೆಗೆ (Self harming) ಶರಣಾಗಿದ್ದಾರೆ.

ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಿರ್ಜನ ಪ್ರದೇಶದಲ್ಲಿ ಮರಕ್ಕೆ ನೇಣು ಹಾಕಿಕೊಂಡು ತಿಮ್ಮೇಗೌಡ ಸಾವಿಗೆ ಶರಣಾಗಿದ್ದಾರೆ. ಈ ಹಿಂದೆ ಕುಂಬಳಗೋಡಿನ ಇನ್‌ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅವರು ಎರಡು ತಿಂಗಳ ಹಿಂದೆ ಸಿಸಿಬಿಗೆ ವರ್ಗಾವಣೆಗೊಂಡಿದ್ದರು. ತಮ್ಮ ತೋಟದ ಜಾಗದಲ್ಲಿ ಮರಕ್ಕೆ ನೇಣು ಬಿಗಿದುಕೊಂಡಿದ್ದಾರೆ.

1998ರ ರೂರಲ್ ಬ್ಯಾಚ್ ಇನ್ಸ್‌ಪೆಕ್ಟರ್ ತಿಮ್ಮೇಗೌಡ, ಚನ್ನಪಟ್ಟಣದ ಹಳ್ಳಿಯೊಂದರ ನಿವಾಸಿ. ಗ್ರಾಮೀಣ ಕೃಪಾಂಕದಲ್ಲಿ ಆಯ್ಕೆಯಾಗಿದ್ದ ತಿಮ್ಮೇಗೌಡ ವಿಧಾನಸಭೆ ಚುನಾವಣೆ ವೇಳೆಗೆ ಬಿಡದಿಯಿಂದ ಅತ್ತಿಬೆಲೆಗೆ ವರ್ಗಾವಣೆಯಾಗಿದ್ದರು. 2023ರ ಸೆಪ್ಟೆಂಬರ್‌ನಲ್ಲಿ ಅತ್ತಿಬೆಲೆಯಲ್ಲಿ ಪಟಾಕಿ ದುರಂತ ನಡೆದ ಬಳಿಕ ಆ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದರು. ನಂತರ ಕುಂಬಳಗೋಡು ಠಾಣೆಗೆ ವರ್ಗಾವಣೆಯಾಗಿದ್ದು, ಇತ್ತೀಚೆಗೆ ಸಿಸಿಬಿಗೆ ವರ್ಗಾವಣೆಯಾಗಿತ್ತು.

ಯಾದಗಿರಿಯಲ್ಲಿ ಪಿಎಸ್‌ಐ ಪರಶುರಾಮ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ರಾಜ್ಯ ಸರ್ಕಾರಕ್ಕೆ ಮುಜುಗರ ಸೃಷ್ಟಿಸುವ ಬೆನ್ನಲ್ಲೇ ಇನ್ನೊಬ್ಬ ಎಸ್‌ಐ ಆತ್ಮಹತ್ಯೆ ಪ್ರಕರಣ ನಡೆದಿದೆ. ಪಿಎಸ್‌ಐ ಪರಶುರಾಮ್ ಅವರ ಟ್ರಾನ್ಸ್‌ಫರ್‌ಗಾಗಿ ಲಂಚ ಕೇಳಿದ ಸ್ಥಳೀಯ ಶಾಸಕ ಹಾಗೂ ಆತನ ಪುತ್ರನ ಮೇಲೆ ದೂರು ದಾಖಲಾಗಿದೆ.

ಉಸಿರಾಟದ ತೊಂದರೆಯಿಂದ ಯೋಧ ಸಾವು

ಬಾಗಲಕೋಟೆ: ಉಸಿರಾಟದ ತೊಂದರೆಯಿಂದ‌ ಚಿಕಿತ್ಸೆ ಫಲಿಸದೇ ಬಾಗಲಕೋಟೆಯ (Bagalakote news) ಯೋಧರೊಬ್ಬರು ರಾಜಸ್ಥಾನದಲ್ಲಿ (Soldier Death) ಸಾವಿಗೀಡಾಗಿದ್ದಾರೆ. ಬಾಗಲಕೋಟೆ ತಾಲ್ಲೂಕಿನ ಖಜ್ಜಿಡೋಣಿ ಗ್ರಾಮದ ನಿವಾಸಿ ಹನುಮಂತ ಬಸಪ್ಪ ತಳವಾರ (32) ಮೃತ ಯೋಧ.

12 ವರ್ಷದಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಹನುಮಂತ, ಉಸಿರಾಟದ ತೊಂದರೆಯಿಂದ ರಾಜಸ್ಥಾನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಹನುಮಂತ ತಳವಾರ ಮೃತಪಟ್ಟಿದ್ದಾರೆ. ಅವರು ರಾಜಸ್ಥಾನದ ಜೋಧಪುರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೃತ ಯೋಧ ತಂದೆ, ಪತ್ನಿ ವಿಜಯಲಕ್ಷ್ಮಿ, ಪುಟ್ಟ ಮಗಳು, ಮಗ, ಸಹೋದರರನ್ನು ಅಗಲಿದ್ದಾರೆ. ಹುತಾತ್ಮ ಯೋಧನ ಗ್ರಾಮ ಹಾಗೂ ಮನೆಯಲ್ಲಿ ಶೋಕದ ವಾತಾವರಣ ನೆಲೆಸಿದ್ದು, ಇವತ್ತು ಮಧ್ಯಾಹ್ನ ನಂತರ ಯೋಧನ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸಲಿದೆ.

ಬೆಂಗಳೂರಿನಲ್ಲಿ ವಿದೇಶಿ ಪ್ರಜೆ ಆತ್ಮಹತ್ಯೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bangalore crime) ವಿದೇಶಿ ಪ್ರಜೆಯ (Foreigner) ಶವ (Body) ಕೊಳೆತ ಸ್ಥಿತಿಯಲ್ಲಿ (UDR Case) ಪತ್ತೆಯಾಗಿದೆ. ಯುಕೆ ಮೂಲದ ಪ್ರಜೆ ಗೇವಿನ್ ಜೇಮ್ಸ್ ಯಂಗ್ (59) ಮೃತದೇಹ ಪತ್ತೆಯಾಗಿದ್ದು, ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಶಂಕೆ ಇದೆ.

ಕೋರಮಂಗಲ 7ನೇ ಬ್ಲಾಕ್‌ಲ್ಲಿ ಘಟನೆ ನಡೆದಿದೆ. ಮೃತ ಜೇಮ್ಸ್‌ ಡೆತ್ ನೋಟ್ ಬರೆದಿಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಜುಲೈ 1ರಂದು ಬೆಂಗಳೂರಿಗೆ ಬಂದಿದ್ದ ಜೇಮ್ಸ್ ಯಂಗ್, ಆಪ್ ಮೂಲಕ ಕೋರಮಂಗಲದಲ್ಲಿ ಮನೆ ಬಾಡಿಗೆಗೆ ಪಡೆದಿದ್ದ. ಜನಾರ್ದನ್ ಎಂಬವರ ಮನೆಯಲ್ಲಿ ಬಾಡಿಗೆಗೆ ಇದ್ದ. ಶೆಫ್ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದ.

ಜೇಮ್ಸ್‌ ಹೆಂಡತಿಯಿಂದ ಡೈವೋರ್ಸ್‌ ಕೂಡ ಪಡೆದಿದ್ದು, ಖಿನ್ನತೆಗೊಳಗಾಗಿದ್ದ ಎನ್ನಲಾಗಿದೆ. ಅನಾರೋಗ್ಯದಿಂದ ಕೂಡ ಬಳಲುತ್ತಿದ್ದ ಜೇಮ್ಸ್‌ಗೆ ಬಿಪಿ, ಶುಗರ್ ಕೂಡ ಇತ್ತು. ಶುಗರ್ ಹಿನ್ನೆಲೆಯಲ್ಲಿ ಮಾತ್ರೆ ಹಾಗೂ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದ. ಓವರ್ ಡೋಸ್ ಟ್ಯಾಬ್ಲೆಟ್ ಹಾಗೂ ಇನ್ಸುಲಿನ್ ತಗೆದುಕೊಂಡು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಅನುಮಾನಿಸಲಾಗಿದೆ.

ಕಳೆದ ತಿಂಗಳ 27ರಂದು ಮನೆ ಓನರ್‌ಗೆ ಕರೆ ಮಾಡಿದ್ದ ಜೇಮ್ಸ್, ಆಗಸ್ಟ್ 1ರವರೆಗೂ ನನ್ನನ್ನು ಡಿಸ್ಟರ್ಬ್‌ ಮಾಡಬೇಡಿ ಎಂದು ಹೇಳಿದ್ದ. ಶನಿವಾರ ಮನೆ ಮಾಲೀಕ ಎಷ್ಟೇ ಕರೆ ಮಾಡಿದರೂ ಜೇಮ್ಸ್ ಸ್ವೀಕರಿಸಿರಲಿಲ್ಲ. ಹೀಗಾಗಿ ಅನುಮಾನಗೊಂಡು ಮನೆ ಬಳಿ ಹೋಗಿ ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಕೂಡಲೇ ಕೋರಮಂಗಲ ಪೊಲೀಸರಿಗೆ ಮನೆ ಮಾಲೀಕ ಜನಾರ್ದನ್ ಮಾಹಿತಿ ನೀಡಿದ್ದಾರೆ. ಕೋರಮಂಗಲ ಪೊಲೀಸರು ಹಾಗೂ ಎಫ್ಎಸ್ಎಲ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಾವಿನ ಬಗ್ಗೆ ತನಿಖೆ ಕೈಗೊಂಡಿರುವ ಪೊಲೀಸರು, ಈ ಬಗ್ಗೆ ಎಫ್ಆರ್‌ಆರ್‌ಓಗೆ ಮಾಹಿತಿ ನೀಡಿದ್ದಾರೆ. ಕೋರಮಂಗಲ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Road Accident : ಅಮಾವಾಸ್ಯೆಗೆಂದು ದೇವಸ್ಥಾನಕ್ಕೆ ತೆರಳುತ್ತಿದ್ದ ಬೈಕ್‌ ಸವಾರ ಅಪಘಾತಕ್ಕೆ ಬಲಿ

Continue Reading

ತುಮಕೂರು

Road Accident : ಬಲ ತಿರುವು ಪಡೆಯುವಾಗ ಬೈಕ್‌ ಸವಾರನ ಮೇಲೆ ಹರಿದ ಕೆಎಸ್‌ಆರ್‌ಟಿಸಿ ಬಸ್‌; ಸಿಸಿ ಕ್ಯಾಮೆರಾದಲ್ಲಿ ಅಪಘಾತ ಸೆರೆ

Road Accident : ಯಮರೂಪಿಯಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್‌ವೊಂದು ಬೈಕ್‌ ಸವಾರನ ಪ್ರಾಣವನ್ನೇ ತೆಗೆದಿದೆ. ತಿರುವು ಪಡೆಯುವಾಗ ಎದುರಿಗೆ ಬಂದ ಬಸ್‌ ಡಿಕ್ಕಿ ಹೊಡೆದಿದೆ.

VISTARANEWS.COM

on

By

Road Accident
Koo

ತುಮಕೂರು: ಕೆಎಸ್‌ಆರ್‌ಟಿಸಿ ಬಸ್‌ಗೆ (KSRTC Bus) ಸಿಲುಕಿ ಬೈಕ್ ಸವಾರನೊಬ್ಬ ದಾರುಣವಾಗಿ ಮೃತಪಟ್ಟಿದ್ದಾರೆ. ತುಮಕೂರು ನಗರದ ಶಿವಕುಮಾರ್ ಸ್ವಾಮೀಜಿ ವೃತ್ತದಲ್ಲಿ ಅಪಘಾತ (Road Accident) ಸಂಭವಿಸಿದೆ. ತುಮಕೂರು ನಗರದ ಚೇತನ ಬಡಾವಣೆ ನಿವಾಸಿ ಚಂದ್ರಶೇಖರ್ (49) ಮೃತ ದುರ್ದೈವಿ.

ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಂದ್ರಶೇಖರ್‌ ಬೈಕ್‌ನಲ್ಲಿ ಬಟವಾಡಿ ಕಡೆಯಿಂದ ಮಹಾತ್ಮ ಗಾಂಧಿ ಸ್ಟೇಡಿಯಂ ಕಡೆಗೆ ಹೋಗುತ್ತಿದ್ದರು. ಬಲ ತಿರುವು ಪಡೆದು ಮುಂದೆ ಹೋಗಬೇಕು ಎನ್ನುವಾಗ ಕೆಎಸ್‌ಆರ್‌ಟಿಸಿ ಬಸ್‌ವೊಂದು ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ಸಮೇತ ಕೆಳಗೆ ಬಿದ್ದ ಚಂದ್ರಶೇಖರ್‌ ಅವರ ಮೇಲೆ ಬಸ್‌ ಹರಿದಿದೆ. ಬಸ್‌ ನಡಿ ಸಿಲುಕಿ ಗಂಭೀರ ಗಾಯಗೊಂಡಿದ್ದ ಚಂದ್ರಶೇಖರ್‌ ಅವರನ್ನು ಸ್ಥಳೀಯರು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ತುಮಕೂರಿನ ಎನ್‌ಇಪಿಎಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ: Electrocution: ಡಿಜೆ ವಾಹನಕ್ಕೆ ಹೈಟೆನ್ಷನ್‌ ವಿದ್ಯುತ್‌ ತಂತಿ ತಗುಲಿ ಆಘಾತ; 8 ಮಂದಿ ಭಕ್ತರ ಸಾವು

ಲಾರಿಯ ಹಿಂಬದಿ ಚಕ್ರಕ್ಕೆ ಸಿಲುಕಿ ಕ್ಲೀನರ್ ಸಾವು

ಬೆಂಗಳೂರಿನ ಚಿಕ್ಕಬಾಣವಾರ ಸಮೀಪದ ಬ್ಯಾಲಕೆರೆ ರಸ್ತೆಯಲ್ಲಿ ಲಾರಿಯ ಹಿಂಬದಿ ಚಕ್ರಕ್ಕೆ ಸಿಲುಕಿ ಕ್ಲೀನರ್‌ರೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಲಾರಿ ಕ್ಲೀನರ್‌ ರಾಮನಂದ್ ಸಿಂಗ್ (42) ಮೃತ ದುರ್ದೈವಿ.

ಲಾರಿ ರಿವರ್ಸ್ ತೆಗೆಯಬೇಕಾದರೆ ಈ ದುರ್ಘಟನೆ ನಡೆದಿದೆ. ಸದ್ಯ ಲಾರಿ ಹಾಗೂ ಚಾಲಕನನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಳಗಾವಿ

Pot Holes: ರಾಜ್ಯ ಹೆದ್ದಾರಿಯ ಯಮಸ್ವರೂಪಿ ರಸ್ತೆ ಗುಂಡಿಗೆ ಗ್ರಾಪಂ ಸದಸ್ಯ ಬಲಿ

Pot holes : ಯಮಸ್ವರೂಪಿ ರಸ್ತೆ ಗುಂಡಿಗೆ ಗ್ರಾಮ ಪಂಚಾಯತ್‌ ಸದಸ್ಯರೊಬ್ಬರು ಬಲಿಯಾಗಿದ್ದಾರೆ. ಬೈಕ್‌ನಲ್ಲಿ ಹೋಗುತ್ತಿದ್ದಾಗ ರಸ್ತೆ ಗುಂಡಿ ತಪ್ಪಿಸಲು ಹೋಗಿ ಪ್ರಾಣ ತೆತ್ತಿದ್ದಾರೆ.

VISTARANEWS.COM

on

By

Pot holes in Belgavi
ಮೊಳಕಾಲುದ್ದ ಗುಂಡಿಗಳಿಗೆ ಬೈಕ್‌ ಸವಾರ ಸಾವು
Koo

ಬೆಳಗಾವಿ: ರಾಜ್ಯ ಹೆದ್ದಾರಿಯೋ ಗುಂಡಿಗಳ (Pot holes) ರಹದಾರಿಯೋ? ಎಂಬ ಅನುಮಾನ ಶುರುವಾಗಿದೆ. ಖಾನಾಪುರದ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳ ದರ್ಬಾರ್‌ ಓರ್ವ ವ್ಯಕ್ತಿ ಬಲಿಯಾಗಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿಯವರ ಸ್ವಂತ ಜಿಲ್ಲೆಯಲ್ಲಿಯೇ ಇಂತಹ ಅದ್ವಾನ ಕಂಡು ಬಂದಿದೆ.

ಮೊಳಕಾಲುದ್ದ ಗುಂಡಿಗಳು ಬಿದ್ದರೂ ಸಹ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಇಟಗಿ ‌ಗ್ರಾಮ ಪಂಚಾಯತ್‌ ಸದಸ್ಯ ಭೀಮಪ್ಪ‌ ಭೋವಿ ಮೃತ ದುರ್ದೈವಿ. ಭೀಮಪ್ಪ ಬೈಕ್‌ ಓಡಿಸಿಕೊಂಡು ಬರುವಾಗ ರಸ್ತೆ ಗುಂಡಿ ಮಧ್ಯೆ ನಿಯಂತ್ರಣ ಸಿಗದೆ ಕೆಳಗೆ ಬಿದ್ದು ಪ್ರಾಣ ತೆತ್ತಿದ್ದಾರೆ. ಕಳೆದ ಎರಡು ‌ದಿನಗಳ ಹಿಂದೆ ಬಿದ್ದು ಭೀಮಪ್ಪ ‌ಮೊಳಕಾಲು ಪೆಟ್ಟು ಮಾಡಿಕೊಂಡಿದ್ದರು.

ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಭೀಮಪ್ಪ ಮೃತಪಟ್ಟಿದ್ದಾರೆ. ಇತ್ತ ಅಪಘಾತಗಳು ಜರುಗುತ್ತಲೇ ಎಚ್ಚೆತ್ತ ನಂದಗಡ ಪೊಲೀಸರು ಇಟ್ಟಿಗೆಗಳನ್ನು ಗಾಡಿಯಲ್ಲಿ ತಂದು ಗುಂಡಿ ಮುಚ್ಚಿದ್ದಾರೆ. ಖಾನಾಪುರದಿಂದ ಲಿಂಗನಮಠದವರೆಗೆ ಸಂಪೂರ್ಣ ರಸ್ತೆ ಹದಗೆಟ್ಟಿದೆ.

ಇದನ್ನೂ ಓದಿ: Rameshwaram Cafe Blast: ಬಾಂಬ್‌ ಇರಿಸಿದ ಉಗ್ರನನ್ನು ರಾಮೇಶ್ವರಂ ಕೆಫೆಗೆ ಕರೆತಂದು ಸೀನ್‌ ರಿಕ್ರಿಯೇಟ್‌ ಮಾಡಿದ ಎನ್‌ಐಎ

ಬೈಕ್‌ ಸವಾರನ ಮೇಲೆ ಹರಿದ ಕೆಎಸ್‌ಆರ್‌ಟಿಸಿ ಬಸ್‌

ತುಮಕೂರು: ಕೆಎಸ್‌ಆರ್‌ಟಿಸಿ ಬಸ್‌ಗೆ (KSRTC Bus) ಸಿಲುಕಿ ಬೈಕ್ ಸವಾರನೊಬ್ಬ ದಾರುಣವಾಗಿ ಮೃತಪಟ್ಟಿದ್ದಾರೆ. ತುಮಕೂರು ನಗರದ ಶಿವಕುಮಾರ್ ಸ್ವಾಮೀಜಿ ವೃತ್ತದಲ್ಲಿ ಅಪಘಾತ (Road Accident) ಸಂಭವಿಸಿದೆ. ತುಮಕೂರು ನಗರದ ಚೇತನ ಬಡಾವಣೆ ನಿವಾಸಿ ಚಂದ್ರಶೇಖರ್ (49) ಮೃತ ದುರ್ದೈವಿ.

ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಂದ್ರಶೇಖರ್‌ ಬೈಕ್‌ನಲ್ಲಿ ಬಟವಾಡಿ ಕಡೆಯಿಂದ ಮಹಾತ್ಮ ಗಾಂಧಿ ಸ್ಟೇಡಿಯಂ ಕಡೆಗೆ ಹೋಗುತ್ತಿದ್ದರು. ಬಲ ತಿರುವು ಪಡೆದು ಮುಂದೆ ಹೋಗಬೇಕು ಎನ್ನುವಾಗ ಕೆಎಸ್‌ಆರ್‌ಟಿಸಿ ಬಸ್‌ವೊಂದು ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ಸಮೇತ ಕೆಳಗೆ ಬಿದ್ದ ಚಂದ್ರಶೇಖರ್‌ ಅವರ ಮೇಲೆ ಬಸ್‌ ಹರಿದಿದೆ. ಬಸ್‌ ನಡಿ ಸಿಲುಕಿ ಗಂಭೀರ ಗಾಯಗೊಂಡಿದ್ದ ಚಂದ್ರಶೇಖರ್‌ ಅವರನ್ನು ಸ್ಥಳೀಯರು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ತುಮಕೂರಿನ ಎನ್‌ಇಪಿಎಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Gold Rate Today
ಚಿನ್ನದ ದರ6 mins ago

Gold Rate Today: ಸತತ ಎರಡನೆ ದಿನವೂ ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ

Actor Darshan wife Vijayalakshmi darshan temple run
ಸ್ಯಾಂಡಲ್ ವುಡ್6 mins ago

Actor Darshan: ದರ್ಶನ್‌ ಬಿಡುಗಡೆಗಾಗಿ ವಿಜಯಲಕ್ಷ್ಮಿ ಹಾಗೂ ಅಳಿಯ ಟೆಂಪಲ್ ರನ್‌

Road Accident
ಬೆಂಗಳೂರು21 mins ago

Road Accident: ಲಾರಿಯ ಹಿಂಬದಿ ಚಕ್ರಕ್ಕೆ ಸಿಲುಕಿ ಕ್ಲೀನರ್ ಸಾವು; ಬೈಕ್‌ ಅಪಘಾತದಲ್ಲಿ ಸವಾರರಿಬ್ಬರು ಮೃತ್ಯು

Rahul Gandhi
ವೈರಲ್ ನ್ಯೂಸ್29 mins ago

Rahul Gandhi: ರಾಹುಲ್ ಗಾಂಧಿ ಅಲ್ಲ, ರಾಹುಲ್ ಖಾನ್! ಪಾಕಿಸ್ತಾನದ ಟಿವಿಯಲ್ಲಿ ಬಿಸಿಬಿಸಿ ಚರ್ಚೆ!

police inspector death thimmegowda
ಬೆಂಗಳೂರು42 mins ago

Inspector Death: ಮತ್ತೊಬ್ಬ ಪೊಲೀಸ್‌ ಇನ್‌ಸ್ಪೆಕ್ಟರ್‌ ಆತ್ಮಹತ್ಯೆ, ಎರಡು ತಿಂಗಳ ಹಿಂದೆ ಟ್ರಾನ್ಸ್‌ಫರ್‌ ಆಗಿದ್ದ ಸಿಸಿಬಿ ಎಸ್‌ಐ

Road Accident
ತುಮಕೂರು42 mins ago

Road Accident : ಬಲ ತಿರುವು ಪಡೆಯುವಾಗ ಬೈಕ್‌ ಸವಾರನ ಮೇಲೆ ಹರಿದ ಕೆಎಸ್‌ಆರ್‌ಟಿಸಿ ಬಸ್‌; ಸಿಸಿ ಕ್ಯಾಮೆರಾದಲ್ಲಿ ಅಪಘಾತ ಸೆರೆ

Pot holes in Belgavi
ಬೆಳಗಾವಿ45 mins ago

Pot Holes: ರಾಜ್ಯ ಹೆದ್ದಾರಿಯ ಯಮಸ್ವರೂಪಿ ರಸ್ತೆ ಗುಂಡಿಗೆ ಗ್ರಾಪಂ ಸದಸ್ಯ ಬಲಿ

Double Ismart Trailer Ram Pothineni Sanjay Dutt
ಟಾಲಿವುಡ್51 mins ago

Double iSmart Trailer:  ಡಬಲ್ ಇಸ್ಮಾರ್ಟ್ ಟ್ರೈಲರ್‌ ಔಟ್‌; ಅಬ್ಬರಿಸಿದ ಸಂಜಯ್ ದತ್‌!

thawar chand gehlot cm siddaramaiah Governor versus state
ಪ್ರಮುಖ ಸುದ್ದಿ1 hour ago

CM Siddaramaiah: ಸಿಎಂ ವಿರುದ್ಧ ಪ್ರಾಸಿಕ್ಯೂಶನ್‌? ಇಂದು ರಾಜ್ಯಪಾಲರಿಂದ ನಿರ್ಧಾರ

Indian 2 Ott release official date announced
ಒಟಿಟಿ1 hour ago

Indian 2 Ott: ಇಂಡಿಯನ್ 2 ಒಟಿಟಿ ಸ್ಟ್ರೀಮಿಂಗ್ ಡೇಟ್ ಅನೌನ್ಸ್!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ22 hours ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ4 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ4 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ4 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ6 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ6 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ7 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ7 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌