Spandana Vijay Raghavendra: ಸ್ಪಂದನ ಅಗಲಿ ಒಂದು ವರ್ಷ, ಭಾವುಕ ಪೋಸ್ಟ್‌ ಮಾಡಿದ ವಿಜಯ್‌ ರಾಘವೇಂದ್ರ - Vistara News

ಸಿನಿಮಾ

Spandana Vijay Raghavendra: ಸ್ಪಂದನ ಅಗಲಿ ಒಂದು ವರ್ಷ, ಭಾವುಕ ಪೋಸ್ಟ್‌ ಮಾಡಿದ ವಿಜಯ್‌ ರಾಘವೇಂದ್ರ

Spandana Vijay Raghavendra: ಕಳೆದ ವರ್ಷ ಹೃದಯಾಘಾತದಿಂದ ನಿಧನರಾಗಿದ್ದ ಪತ್ನಿಯನ್ನು ನೆನೆದು ವಿಜಯ್​ ರಾಘವೇಂದ್ರ ಇಂದು ಸೋಶಿಯಲ್​ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಪ್ರೀತಿಯ ಸಂದೇಶ ಹಾಗೂ ಫೋಟೋ ಪೋಸ್ಟ್‌ ಮಾಡಿದ್ದಾರೆ. ʼಐ ಲವ್ ಯು ಚಿನ್ನ.. ಮೌನದಲಿ ಅರಳಿದ ನಗು ನಿನ್ನದು.. ನೀ ನಡೆದ ಹಾದಿಯ ನೆನಪಿನ ಬೆಳಕು ನನ್ನದುʼ ಎಂದು ಇನ್​​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.

VISTARANEWS.COM


on

spandana vijay raghavendra
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಟ (Sandalwood Actor) ವಿಜಯ್​ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನ (Spandana Spandana Vijay Raghavendra) ಅವರು ಮೃತಪಟ್ಟು (Spandana Death) ಒಂದು ವರ್ಷವೇ ಕಳೆದಿದ್ದು, ಅಗಲಿದ ಪತ್ನಿಯನ್ನು ನೆನೆದುಕೊಂಡು ವಿಜಯ್‌ ರಾಘವೇಂದ್ರ ಸೋಶಿಯಲ್‌ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಮಾಡಿದ್ದಾರೆ.

ಕಳೆದ ವರ್ಷ ಹೃದಯಾಘಾತದಿಂದ ನಿಧನರಾಗಿದ್ದ ಪತ್ನಿಯನ್ನು ನೆನೆದು ವಿಜಯ್​ ರಾಘವೇಂದ್ರ ಇಂದು ಸೋಶಿಯಲ್​ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಪ್ರೀತಿಯ ಸಂದೇಶ ಹಾಗೂ ಫೋಟೋ ಪೋಸ್ಟ್‌ ಮಾಡಿದ್ದಾರೆ. ʼಐ ಲವ್ ಯು ಚಿನ್ನ.. ಮೌನದಲಿ ಅರಳಿದ ನಗು ನಿನ್ನದು.. ನೀ ನಡೆದ ಹಾದಿಯ ನೆನಪಿನ ಬೆಳಕು ನನ್ನದುʼ ಎಂದು ಇನ್​​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.

ಸ್ಪಂದನಾ ಅವರು ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ ಶಿವರಾಮ್ ಅವರ ಪುತ್ರಿ. ವಿಜಯ್ ರಾಘವೇಂದ್ರ ಮತ್ತು ಸ್ಪಂದನಾ ಅವರು 2007ರ ಆಗಸ್ಟ್ 26ರಂದು ಮದುವೆ ಆಗಿದ್ದರು. ಈ ದಂಪತಿಗೆ ಶೌರ್ಯ ಹೆಸರಿನ ಮಗ ಇದ್ದಾನೆ.

ಕಳೆದ ವರ್ಷ ಬ್ಯಾಂಕಾಕ್ ಪ್ರವಾಸದಲ್ಲಿದ್ದ ವೇಳೆ ಸ್ಪಂದನಾ ಅವರಿಗೆ ಹೃದಯಾಘಾತವಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲು ಮಾಡುವ ಪ್ರಯತ್ನ ಮಾಡಲಾಯಿತು. ಆದರೆ ಅಷ್ಟರಲ್ಲಿ ಅವರು ನಿಧನರಾಗಿದ್ದರು. ಅವರ ಪಾರ್ಥಿವ ಶರೀರವನ್ನು ಆ.8ರಂದು ಬೆಂಗಳೂರಿಗೆ ತಂದು ಅತ್ಯಸಂಸ್ಕಾರಗಳನ್ನು ಮಾಡಲಾಗಿತ್ತು. ಸ್ಪಂದನಾ ಅವರ ನಿಧನ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಆಘಾತವನ್ನು ಉಂಟು ಮಾಡಿತ್ತು. ಹಲವು ಗಣ್ಯರು ಭೇಟಿ ನೀಡಿ ಅಂತಿಮ ದರ್ಶನ ಪಡೆದು ವಿಜಯ್‌ ರಾಘವೇಂದ್ರಗೆ ಸಾಂತ್ವನ ಹೇಳಿದ್ದರು.

ಧರ್ಮಸ್ಥಳದಲ್ಲಿ ರಾಕಿಂಗ್ ಸ್ಟಾರ್ ಯಶ್, ಟಾಕ್ಸಿಕ್‌ ಶೂಟಿಂಗ್‌ಗೂ ಮುನ್ನ ಟೆಂಪಲ್‌ ರನ್

ಧರ್ಮಸ್ಥಳ: ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ (Dharmasthala) ಇಂದು ರಾಕಿಂಗ್‌ ಸ್ಟಾರ್‌ ಯಶ್‌ (Rocking Star, Actor Yash) ಭೇಟಿ ನೀಡಿದರು. ಹೊಸ ಚಿತ್ರ ʼಟಾಕ್ಸಿಕ್ʼನ (Toxic) ಶೂಟಿಂಗ್‌ ಇನ್ನು ಮೇಲೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಪುಣ್ಯಕ್ಷೇತ್ರ ದರ್ಶನ ಮಾಡಿದ್ದಾರೆ ಎನ್ನಲಾಗಿದೆ.

ಮಳೆಯಿಂದ ಧರ್ಮಸ್ಥಳಕ್ಕೆ ಭೇಟಿ ನೀಡುವ ಭಕ್ತಾದಿಗಳ ಜನಸಂದಣಿ ಕಡಿಮೆಯಾಗಿರುವ ಸಮಯದಲ್ಲಿ ರಾಕಿಭಾಯ್ ಟೆಂಪಲ್ ರನ್ (Temple Run) ನಡೆಸಿದ್ದಾರೆ. ಇಂದು ಧರ್ಮಸ್ಥಳದ ಶ್ರೀ ಮಂಜುನಾಥ ದೇವರ ದರ್ಶನ ಮಾಡಿದ್ದು, ನಂತರ ಬೆಳ್ತಂಗಡಿಯ ಸೂರ್ಯ ದೇವಸ್ಥಾನಕ್ಕೆ ವಿಸಿಟ್ ಕೊಡಲಿದ್ದಾರೆ ಎಂದು ತಿಳಿದುಬಂದಿದೆ.

ʼಟಾಕ್ಸಿಕ್ʼ ಹೊಸಚಿತ್ರದ ಶೂಟಿಂಗ್ ಸದ್ಯದಲ್ಲೇ ಆರಂಭವಾಗುವ ಹಿನ್ನೆಲೆಯಲ್ಲಿ ಧರ್ಮಸ್ಥಳಕ್ಕೆ ಭೇಟಿ ಕೊಟ್ಟು ಮಂಜುನಾಥನ ದರ್ಶನ ಪಡೆದಿದ್ದಾರೆ. ಜೊತೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ (Dr Veerendra Heggade) ಅವರನ್ನೂ ಭೇಟಿಯಾಗಿ ಆಶೀರ್ವಾದ ಪಡೆದರು.

ಈ ನಡುವೆ, ‘ಟಾಕ್ಸಿಕ್’ ಸಿನಿಮಾ ತಂಡದ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ‘ಟಾಕ್ಸಿಕ್’ ಚಿತ್ರೀಕರಣಕ್ಕಾಗಿ ​ಅನಧಿಕೃತವಾಗಿ ಸಿನಿಮಾ ಸೆಟ್ ನಿರ್ಮಿಸಲಾಗಿದೆ ಎಂದು ನಿರ್ಮಾಪಕರ ವಿರುದ್ಧ ದೂರು ನೀಡಲಾಗಿದ್ದು, ಟಾಕ್ಸಿಕ್ ಚಿತ್ರಕ್ಕೆ ಸಂಕಷ್ಟ ಶುರುವಾಗಿದೆ. ಪೀಣ್ಯ ಪ್ಲಾಂಟೇಶನ್ ಜಮೀನಿನ ಬಳಿ ಸುಮಾರು 20 ಎಕರೆ ಜಾಗದಲ್ಲಿ ‘ಟಾಕ್ಸಿಕ್’ ಸಿನಿಮಾಕ್ಕಾಗಿ ಬೃಹತ್ ಸೆಟ್ ಹಾಕಲಾಗಿದೆ. ಆದರೆ ಈ ಸೆಟ್ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಹಾಕಲಾಗಿದೆ ಎಂದು ಆರೋಪಿಸಿ ವಕೀಲ ಜಿ. ಬಾಲಾಜಿ ನಾಯ್ಡು ಅವರು ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದಾರೆ.

ಇದನ್ನೂ ಓದಿ: Spandana Vijay Raghavendra: ಸ್ಪಂದನಾ ಉತ್ತರ ಕ್ರಿಯೆಗೆ ಸಿದ್ಧತೆ; ಸರ್ವರಿಗೂ ಆಹ್ವಾನಿಸಿದ ವಿಜಯ ರಾಘವೇಂದ್ರ ಕುಟುಂಬ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Kannada New Movie: ಇದು ʼಎʼ ಅಲ್ಲ ʼಬಿʼ ಅಲ್ಲ ‘ಸಿ’ ಸಾಂಗ್‌! ಹಾಡು ರಿಲೀಸ್‌ ಮಾಡಿದ ಲೂಸ್ ಮಾದ

Kannada New Movie: ‘ಸಿ’ ಸಿನಿಮಾದಿಂದ ‘ಇದು ಎ ಅಲ್ಲ ಬಿ ಅಲ್ಲ ಸಿ…’ ಎನ್ನುವ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ. ಎಬಿ ಮುರಳಿಧರನ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಶಶಾಂಕ್ ಶೇಷಗಿರಿ, ಸುರಭಿ ಭಾರದ್ವಜ್ ಹಾಗೂ ಜ್ಞಾನ ಹಾಡಿದ್ದಾರೆ. ಈ ಹಾಡಿಗೆ ಖ್ಯಾತ ಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ಇದು ಕಿರಣ್ ಸುಬ್ರಮಣಿ ಅವರ ಚೊಚ್ಚಲ ನಿರ್ದೇಶನದ ಸಿನಿಮಾವಾಗಿದ್ದು, ಕಿರಣ್ ನಿರ್ದೇಶನದ ಜತೆಗೆ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

VISTARANEWS.COM


on

C Kannada movie release on August 23
Koo

ಬೆಂಗಳೂರು: ʼಸಿʼ ಸ್ಯಾಂಡಲ್‌ವುಡ್‌ನಲ್ಲಿ ರಿಲೀಸ್‌ಗೆ ರೆಡಿಯಾಗಿರುವ ಸಿನಿಮಾ. ಚಂದನವನದಲ್ಲಿ ಒಂದೇ ಅಕ್ಷರದ ಸಿನಿಮಾಗಳು ತೀರಾ ಅಪರೂಪ. ಇದೀಗ ಹೊಸಬರ ತಂಡವೊಂದು ‘ಸಿ’ ಎನ್ನುವ ಒಂದೇ ಅಕ್ಷರದ ಟೈಟಲ್ ಇಟ್ಟುಕೊಂಡು ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ. ಒಂದೇ ಅಕ್ಷರದ ಟೈಟಲ್ ಮೂಲಕ ಗಮನ ಸೆಳೆಯುತ್ತಿರುವ ಈ ಸಿನಿಮಾ (Kannada New Movie) ಈಗಾಗಲೇ ಟೀಸರ್ ಮತ್ತು ಕಂದಾ ಕಂದಾ ಎನ್ನುವ ಹಾಡಿನ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಇದರ ಜತೆಗೆ ಸಿ ಸಿನಿಮಾಗೆ ನಟ ಯೋಗಿ ಮತ್ತು ಖ್ಯಾತ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಅವರ ಬೆಂಬಲ ಕೂಡ ಸಿಕ್ಕಿದೆ‌.

ಅಂದಹಾಗೆ ‘ಸಿ’ ಕಿರಣ್ ಸುಬ್ರಮಣಿ ಚೊಚ್ಚಲ ನಿರ್ದೇಶನದ ಸಿನಿಮಾ. ಕಿರಣ್ ನಿರ್ದೇಶನದ ಜತೆಗೆ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಸಿನಿಮಾದಿಂದ ‘ಇದು ಎ ಅಲ್ಲ ಬಿ ಅಲ್ಲ ಸಿ…’ ಎನ್ನುವ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ. ಎಬಿ ಮುರಳಿಧರನ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಶಶಾಂಕ್ ಶೇಷಗಿರಿ, ಸುರಭಿ ಭಾರದ್ವಜ್ ಹಾಗೂ ಜ್ಞಾನ ಹಾಡಿದ್ದಾರೆ. ಈ ಹಾಡಿಗೆ ಖ್ಯಾತ ಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ.

ವಿಶೇಷ ಎಂದರೆ ಈ ಹಾಡನ್ನು ಲೂಸ್ ಮಾದ ಖ್ಯಾತಿಯ ನಟ ಯೋಗಿ ರಿಲೀಸ್ ಮಾಡಿದ್ದಾರೆ. ಹಾಡಿನ್ನು ರಿಲೀಸ್ ಮಾಡಿ ಸಿನಿಮಾ ತಂಡಕ್ಕೆ ಶುಭ ಹಾರೈಸಿದ್ದಾರೆ. ಯೋಗಿ ಹೊಸ ಸಿನಿಮಾ ತಂಡದ ಬೆನ್ನಿಗೆ ನಿಂತಿರುವುದು ಸಿ ಚಿತ್ರತಂಡಕ್ಕೆ ಖುಷಿ ತಂದಿದೆ. ಇನ್ನು ಖ್ಯಾತ ಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಕೂಡ ಸಿ ಸಿನಿಮಾದ ಹಾಡನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಇಡೀ ಸಿನಿಮಾಗೆ ಒಳ್ಳೆದಾಗಲಿ, ಕನ್ನಡ ಚಿತ್ರರಂಗ ಬೆಳೆಯಲಿ ಎಂದು ಅವರು ಹಾರೈಸಿದ್ದಾರೆ.

‘ಸಿ’ ಚಿತ್ರವು ಕಣ್ಣು ಕಾಣದ ಮಗಳು ಹಾಗೂ ಅಪ್ಪನ ನಡುವಿನ ಬಾಂಧವ್ಯದ ಬಗ್ಗೆ ಇದೆ. ಕಣ್ಣು ಕಾಣದ ಮಗಳ ಆಸೆಯನ್ನು ನೆರವೇರಿಸಲು ಅಪ್ಪ ಎಷ್ಟೆಲ್ಲ ಕಷ್ಟ ಪಡುತ್ತಾರೆ, ಮಗಳಿಗಾಗಿ ಅಪ್ಪನ ಹೋರಾಟದ ಕಥೆಯನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಕಿರಣ್ ಸುಬ್ರಮಣಿ.

ನಿರ್ದೇಶಕ, ನಾಯಕ ಕಿರಣ್ ಅವರಿಗೆ ಇದು ಮೊದಲ ಸಿನಿಮಾ. ಹಾಗಂತ ಸಿನಿಮಾರಂಗ ಏನು ಹೊಸದೇನಲ್ಲ. ಈಗಾಗಲೇ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿದ್ದಾರೆ. ಇದೀಗ ಸಿ ಸಿನಿಮಾ ಮೂಲಕ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ.

ಇದನ್ನೂ ಓದಿ: Gold Rate Today: ಕೊನೆಗೂ ಇಳಿಯಿತು ಬಂಗಾರದ ದರ; ಇಂದು ಚಿನ್ನ ಇಷ್ಟು ಅಗ್ಗ

ಸಿ ಸಿನಿಮಾ ತಂದೆ- ಮಗಳ ಬಾಂಧವ್ಯದ ಜತೆಗೆ ಮೆಡಿಕಲ್ ಮಾಫಿಯಾದ ಬಗ್ಗೆ ಇದೆ. ಎಜಿಎಸ್ ಪ್ರೊಡಕ್ಷನ್ ನಡಿ ನಿರ್ದೇಶಕ, ನಾಯಕ ಕಿರಣ್ ಅವರ ತಂದೆ ಸುಬ್ರಮಣಿ ಅವರು ನಿರ್ಮಾಣ ಮಾಡಿದ್ದಾರೆ. ಸದ್ಯ ಟೀಸರ್ ಮೂಲಕ ಗಮನ ಸೆಳೆಯುತ್ತಿರುವ ಸಿ ಸಿನಿಮಾ ಆಗಸ್ಟ್‌ 23ಕ್ಕೆ ತೆರೆಗೆ ಬರುತ್ತಿದೆ.

Continue Reading

ಸಿನಿಮಾ

Actor Yash: ಧರ್ಮಸ್ಥಳದಲ್ಲಿ ರಾಕಿಂಗ್ ಸ್ಟಾರ್ ಯಶ್, ಟಾಕ್ಸಿಕ್‌ ಶೂಟಿಂಗ್‌ಗೂ ಮುನ್ನ ಟೆಂಪಲ್‌ ರನ್

Actor Yash: ʼಟಾಕ್ಸಿಕ್’ ಹೊಸಚಿತ್ರದ ಶೂಟಿಂಗ್ ಸದ್ಯದಲ್ಲೇ ಆರಂಭವಾಗುವ ಹಿನ್ನೆಲೆಯಲ್ಲಿ ಧರ್ಮಸ್ಥಳಕ್ಕೆ ಭೇಟಿ ಕೊಟ್ಟು ಮಂಜುನಾಥನ ದರ್ಶನ ಪಡೆದಿದ್ದಾರೆ. ಜೊತೆಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ (Dr Veerendra Heggade) ಅವರನ್ನೂ ಭೇಟಿಯಾಗಿ ಆಶೀರ್ವಾದ ಪಡೆದರು.

VISTARANEWS.COM


on

actor yash 1
Koo

ಧರ್ಮಸ್ಥಳ: ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ (Dharmasthala) ಇಂದು ರಾಕಿಂಗ್‌ ಸ್ಟಾರ್‌ ಯಶ್‌ (Rocking Star, Actor Yash) ಭೇಟಿ ನೀಡಿದರು. ಹೊಸ ಚಿತ್ರ ʼಟಾಕ್ಸಿಕ್ʼನ (Toxic) ಶೂಟಿಂಗ್‌ ಇನ್ನು ಮೇಲೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಪುಣ್ಯಕ್ಷೇತ್ರ ದರ್ಶನ ಮಾಡಿದ್ದಾರೆ ಎನ್ನಲಾಗಿದೆ.

ಮಳೆಯಿಂದ ಧರ್ಮಸ್ಥಳಕ್ಕೆ ಭೇಟಿ ನೀಡುವ ಭಕ್ತಾದಿಗಳ ಜನಸಂದಣಿ ಕಡಿಮೆಯಾಗಿರುವ ಸಮಯದಲ್ಲಿ ರಾಕಿಭಾಯ್ ಟೆಂಪಲ್ ರನ್ (Temple Run) ನಡೆಸಿದ್ದಾರೆ. ಇಂದು ಧರ್ಮಸ್ಥಳದ ಶ್ರೀ ಮಂಜುನಾಥ ದೇವರ ದರ್ಶನ ಮಾಡಿದ್ದು, ನಂತರ ಬೆಳ್ತಂಗಡಿಯ ಸೂರ್ಯ ದೇವಸ್ಥಾನಕ್ಕೆ ವಿಸಿಟ್ ಕೊಡಲಿದ್ದಾರೆ ಎಂದು ತಿಳಿದುಬಂದಿದೆ.

ʼಟಾಕ್ಸಿಕ್ʼ ಹೊಸಚಿತ್ರದ ಶೂಟಿಂಗ್ ಸದ್ಯದಲ್ಲೇ ಆರಂಭವಾಗುವ ಹಿನ್ನೆಲೆಯಲ್ಲಿ ಧರ್ಮಸ್ಥಳಕ್ಕೆ ಭೇಟಿ ಕೊಟ್ಟು ಮಂಜುನಾಥನ ದರ್ಶನ ಪಡೆದಿದ್ದಾರೆ. ಜೊತೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ (Dr Veerendra Heggade) ಅವರನ್ನೂ ಭೇಟಿಯಾಗಿ ಆಶೀರ್ವಾದ ಪಡೆದರು.

ಟಾಕ್ಸಿಕ್‌ ಸಿನಿಮಾ ತಂಡದ ವಿರುದ್ಧ ಪ್ರಕರಣ

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ (Actor Yash) ನಟನೆಯ ಟಾಕ್ಸಿಕ್‌ ಸಿನಿಮಾ ಆಗಾಗ ಸುದ್ದಿಯಾಗುತ್ತಲೇ ಇದೆ. ಇದೀಗ ಕಿ ‘ಟಾಕ್ಸಿಕ್’ ಸಿನಿಮಾ ತಂಡದ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ‘ಟಾಕ್ಸಿಕ್’ ಚಿತ್ರೀಕರಣಕ್ಕಾಗಿ ಬೃಹತ್ ಸೆಟ್ ನಿರ್ಮಿಸಲಾಗಿದೆ. ​ಅನಧಿಕೃತವಾಗಿ ಸಿನಿಮಾ ಸೆಟ್ ನಿರ್ಮಿಸಲಾಗಿದೆ ಎಂದು ನಿರ್ಮಾಪಕರ ವಿರುದ್ಧ ದೂರು ನೀಡಲಾಗಿದ್ದು, ಟಾಕ್ಸಿಕ್ ಚಿತ್ರಕ್ಕೆ ಸಂಕಷ್ಟ ಶುರುವಾಗಿದೆ.

ಪೀಣ್ಯ ಪ್ಲಾಂಟೇಶನ್ ಜಮೀನಿನ ಬಳಿ ಸುಮಾರು 20 ಎಕರೆ ಜಾಗದಲ್ಲಿ ‘ಟಾಕ್ಸಿಕ್’ ಸಿನಿಮಾಕ್ಕಾಗಿ ಬೃಹತ್ ಸೆಟ್ ಹಾಕಲಾಗಿದೆ. ಆದರೆ ಈ ಸೆಟ್ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಹಾಕಲಾಗಿದೆ ಎಂದು ಆರೋಪಿಸಿ ವಕೀಲ ಜಿ. ಬಾಲಾಜಿ ನಾಯ್ಡು ಅವರು ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದಾರೆ.

ಅಕ್ರಮವಾಗಿ ನಿರ್ಮಿಸಲಾಗಿರುವ ಈ ಸೆಟ್​ ಅನ್ನು ಕೂಡಲೇ ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಅರ್ಜಿ ವಿಚಾರಣೆಗೆ ಅರ್ಹವೆಂದು ಪರಿಗಣಿಸಿರುವ ಹೈಕೋರ್ಟ್ ‘ಟಾಕ್ಸಿಕ್’ ಸಿನಿಮಾದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಎಚ್​ಎಂಟಿ ಸಂಸ್ಥೆಗೆ ನೊಟೀಸ್ ನೀಡಿದೆ. ಕೆಲವು ದಾಖಲೆಗಳ ಪ್ರಕಾರ, ಎಚ್​ಎಂಟಿ ಸಂಸ್ಥೆಯು ಈ ಜಮೀನನ್ನು ಕೆನರಾ ಬ್ಯಾಂಕ್​ಗೆ ನೀಡಿತ್ತು. ಬಳಿಕ ಕೆನರಾ ಬ್ಯಾಂಕ್, ಕೆವಿಎನ್​ಗೆ ನೀಡಿತ್ತು. ಇದೀಗ ಕೆವಿಎನ್​ ನವರು 20.07 ಎಕರೆ ಜಾಗವನ್ನು ಸಿನಿಮಾ ಸೆಟ್ ನಿರ್ಮಾಣಕ್ಕೆ ಬಳಸಿಕೊಂಡಿದ್ದಾರೆ. ಆದರೆ ಇದು ಅರಣ್ಯ ಪ್ರದೇಶ ಎಂದು ಅರ್ಜಿದಾರರು ವಾದಿಸಿದ್ದಾರೆ. ವಿಚಾರಣೆ ಬಳಿಕವೇ ಸತ್ಯಾಂಶ ಹೊರಬರಲಿದೆ.

20 ಎಕರೆ ಜಾಗದಲ್ಲಿ ಕೋಟಿ ವೆಚ್ಚ ಮಾಡಿ ಸೆಟ್ ನಿರ್ಮಾಣ ಮಾಡಲಾಗಿದ್ದು, ಒಂದೊಮ್ಮೆ ಸೆಟ್ ತೆರವು ಮಾಡಬೇಕು ಎಂದರೆ ಟಾಕ್ಸಿಕ್​ ಚಿತ್ರತಂಡಕ್ಕೆ ಭಾರಿ ನಷ್ಟವಾಗಲಿದೆ. ಸಿನಿಮಾವು 70-80ರ ಕಾಲದಲ್ಲಿ ನಡೆಯಲಿದೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಇದೇ ಕಾರಣಕ್ಕೆ ಸಿನಿಮಾವನ್ನು ಸೆಟ್​ಗಳಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಹಾಗಾಗಿ ಸಿನಿಮಾಕ್ಕಾಗಿ ಬೃಹತ್ ಸೆಟ್ ಅನ್ನು ನಿರ್ಮಿಸಲಾಗಿದೆ.

ಇದನ್ನೂ ಓದಿ: Back Benchers Movie: ಬ್ಯಾಕ್ ಬೆಂಚರ್ಸ್‌ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕ ಖುಷಿ!

Continue Reading

ಪ್ರಮುಖ ಸುದ್ದಿ

Gowri Movie: ‘ಗೌರಿ’ ಚಿತ್ರದ ಟ್ರೈಲರ್ ಅನಾವರಣ ಮಾಡಿದ ಕಿಚ್ಚ ಸುದೀಪ್

Gowri Movie: ಸಮರ್ಜಿತ್ ಲಂಕೇಶ್, ಸಾನ್ಯ ಅಯ್ಯರ್ ಅಭಿನಯದ ‘ಗೌರಿ’ ಚಿತ್ರ ಆಗಸ್ಟ್ 15ರಂದು ರಾಜ್ಯಾದ್ಯಂತ ಗ್ರ್ಯಾಂಡ್ ರಿಲೀಸ್ ಆಗಲಿದೆ.

VISTARANEWS.COM


on

Koo

ಬೆಂಗಳೂರು: ಸಮರ್ಜಿತ್ ಲಂಕೇಶ್, ಸಾನ್ಯ ಅಯ್ಯರ್ ಅಭಿನಯದ ‘ಗೌರಿ’ ಚಿತ್ರ ಆಗಸ್ಟ್ 15ರಂದು ರಾಜ್ಯಾದ್ಯಂತ ಗ್ರ್ಯಾಂಡ್ ರಿಲೀಸ್ ಅಗಲು ಸಿದ್ಧವಾಗಿದ್ದು, ಪತ್ರಕರ್ತ, ನಿರ್ದೇಶಕ ಹಾಗೂ ನಿರ್ಮಾಪಕ ಇಂದ್ರಜಿತ್ ಲಂಕೇಶ್ ನಿರ್ಮಿಸಿ, ನಿರ್ದೇಶಿಸಿರುವ ಗೌರಿ ಚಿತ್ರದ (Gowri Movie) ಟ್ರೈಲರ್‌ ಅನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರು ಸೋಮವಾರ ಅನಾವರಣ ಮಾಡಿದ್ದಾರೆ.

ಟ್ರೈಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಸುದೀಪ್‌ ಬಗ್ಗೆ ಇಂದ್ರಜಿತ್ ಲಂಕೇಶ್ ಮಾತನಾಡಿ, ಸುದೀಪ್ ಅವರು ಹೀರೋ ಆಗುವುದಕ್ಕೂ ಮುಂಚೆ ನನಗೆ ಪರಿಚಯ. ಅವರಿಗೂ ನನಗೂ 25 ವರ್ಷಗಳ ಪರಿಚಯವಿದೆ. ಹುಚ್ಚ ದೊಡ್ಡ ಹಿಟ್ ಆಗಿತ್ತು, ಆ ಸಮಯದಲ್ಲಿ ತುಂಟಾಟದಲ್ಲಿ ಭಾಗಿ ಆಗಿ ಶೂಟ್ ಮುಗಿಸಿದರು. ಸುದೀಪ್ ಮಗಳಿಗೆ ಡೈಮಂಡ್ ನೆಕ್ಲೆಸ್ ಗಿಫ್ಟ್ ಕೊಟ್ಟಿದ್ದೆ. ಆದರೆ ಸುದೀಪ್ ಬೈದು ಡೈಮಂಡ್ ನೆಕ್ಲೆಸ್ ವಾಪಸ್ ಕೊಟ್ಟರು, ಸುದೀಪ್ ಅವರಿಗೆ ಗಿಫ್ಟ್ ಕೊಟ್ರೆ ತೆಗೆದುಕೊಳ್ಳಲ್ಲ. ಅವರಿಗೆ ಕ್ರಿಕೆಟ್ ಅಂದ್ರೆ ತುಂಬಾ ಇಷ್ಟ, ಹೀಗಾಗಿ ಕ್ರಿಕೆಟ್ ಆಡಲು ಬ್ಯಾಟ್ ಉಡುಗೊರೆ ಆಗಿ ಕೊಡಬೇಕು ಅನಿಸಿದೆ, ಕೊಡುತ್ತಿದ್ದೇನೆ ಎಂದರು.

ಇಂದ್ರಜಿತ್ ಅದ್ಭುತ ಸಿನಿಮಾ ಮೇಕರ್: ಪ್ರಿಯಾಂಕಾ ಉಪೇಂದ್ರ

ನಟಿ ಪ್ರಿಯಾಂಕಾ ಉಪೇಂದ್ರ ಮಾತನಾಡಿ, ಇಂದ್ರಜಿತ್ ಅದ್ಭುತ ಸಿನಿಮಾ ಮೇಕರ್, ಸಮರ್ಜಿತ್ ಮಾತಿನಲ್ಲಿ ಮುಗ್ಧತೆ ಕಾಣುತ್ತದೆ, ಆದರೆ ದೊಡ್ಡ ಸ್ಟಾರ್ ಆದಮೇಲೆ ಅದು ಕಳೆದುಹೋಗುತ್ತೆ. ಇಂದ್ರಜಿತ್ ಸೋಲೋದನ್ನು ಕಲಿತಿದ್ದಾರೆ, ತಲೆ ಬಾಗೋದನ್ನು ಕಲಿತಿದ್ದಾರೆ. ಅವರು ನನ್ನ ಫ್ರೆಂಡ್ ಆಗಿರೋದಕ್ಕೆ ಖುಷಿ ಇದೆ ಎಂದು ತಿಳಿಸಿದರು.

ಸಾನ್ಯ ಅವರನ್ನು ಪುಟ್ಟಗೌರಿ ಧಾರಾವಾಹಿಯಿಂದ ನೋಡಿದ್ದೇನೆ. ಸಾನ್ಯಗೆ ಬರವಣಿಗೆ ಕಲೆ ಇದೆ, ಸಿನಿಮಾ ರಿಲೀಸ್ ಆದಮೇಲೆ ಲೈಫ್ ಏನಾಗುತ್ತೆ ಗೊತ್ತಿಲ್ಲ, ಎಲ್ಲದಕ್ಕೂ ಸಿದ್ಧರಾಗಿರಬೇಕು ಎಂದು ಸಲಹೆ ನೀಡಿದರು.

ಗೌರಿ ಟ್ರೈಲರ್ ಲಾಂಚ್ ಇವೆಂಟ್‌ನಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ ಮತ್ತಿತರರು ಭಾಗಿಯಾಗಿದ್ದರು.

ಇಂದ್ರಜಿತ್​ ಲಂಕೇಶ್ (Indrajit Lankesh)​ ಅವರ ಪುತ್ರ ಸಮರ್ಜಿತ್​ ಲಂಕೇಶ್​ (Samarjit Lankesh) ಅವರು ಹೀರೊ ಆಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಇಂದ್ರಜಿತ್‌ ಲಂಕೇಶ್ ಅವರು ತಮ್ಮ ಮಗನ ಮೊದಲ ಸಿನಿಮಾಕ್ಕೆ ‘ಗೌರಿ’ ಎಂದು ಟೈಟಲ್ ಇಟ್ಟಿದ್ದಾರೆ. ಈ ಚಿತ್ರಕ್ಕೆ ‘ಗೌರಿ’ ಎನ್ನುವ ಶೀರ್ಷಿಕೆ ಇಟ್ಟಿದ್ದು ಏಕೆ ಎನ್ನುವ ಪ್ರಶ್ನೆಗೆ ಇಂದ್ರಜಿತ್ ಅವರು, ʻನನ್ನ ಅಕ್ಕನ ಮೇಲಿ ಪ್ರೀತಿ ಹಾಗೂ ಅಭಿಮಾನಕ್ಕಾಗಿ ಗೌರಿ ಎನ್ನುವ ಶೀರ್ಷಿಕೆ ಇಟ್ಟಿದ್ದೇನೆʼʼಎಂದಿದ್ದರು. ಈ ಸಿನಿಮಾಗಾಗಿ ಸಮರ್ಜಿತ್​ ಲಂಕೇಶ್​ ಅವರು ಡ್ಯಾನ್ಸ್​, ಫೈಟಿಂಗ್​, ಕುದುರೆ ಸವಾರಿ ಸೇರಿದಂತೆ ಅನೇಕ ಕಲೆಗಳನ್ನು ಕಲಿತು ಬಂದಿದ್ದಾರೆ. ಗೌರಿ’ ಚಿತ್ರದಲ್ಲಿ ಸಮರ್ಜಿತ್​ ಲಂಕೇಶ್​ಗೆ ಜೋಡಿಯಾಗಿ ‘ಬಿಗ್​ ಬಾಸ್​’ ಖ್ಯಾತಿಯ ಸಾನ್ಯಾ ಅಯ್ಯರ್​ ಅವರು ನಟಿಸಿದ್ದಾರೆ.

ಇದನ್ನೂ ಓದಿ | Martin Trailer: ಪ್ಯಾನ್‌ ವರ್ಲ್ಸ್‌ ಮಾರ್ಟಿನ್‌ ಸಿನಿಮಾ ಟ್ರೈಲರ್‌ ಔಟ್;‌ ಪಾಕ್‌ನಲ್ಲಿ ಧ್ರುವ ಸರ್ಜಾ ಆ್ಯಕ್ಷನ್‌ಗೆ ಫ್ಯಾನ್ಸ್‌ ಫಿದಾ!

ಈ ಚಿತ್ರಕ್ಕೆ ಎಜೆ ಶೆಟ್ಟಿ ಛಾಯಾಗ್ರಹಣವಿದ್ದು, ಬಿ.ಎ.ಮಧು, ರಾಜಶೇಖರ್, ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಕೆ.ಕಲ್ಯಾಣ್, ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಸಾಹಿತ್ಯ ಬರೆದಿದ್ದಾರೆ.

Continue Reading

ಸಿನಿಮಾ

Independence Day 2024: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಕಥೆ ಹೇಳುವ ಟಾಪ್‌ 10 ಹಿಂದಿ ಸಿನೆಮಾಗಳಿವು

78ನೇ ಸ್ವಾತಂತ್ರ್ಯ ದಿನಾಚರಣೆಯ (Independence Day 2024) ಸಂಭ್ರಮದಲ್ಲಿ ನಾವಿದ್ದೇವೆ. ಈ ಸಂದರ್ಭದಲ್ಲಿ ಮತ್ತೊಮ್ಮೆ ನೋಡಬೇಕು, ನಮ್ಮ ಮಕ್ಕಳಿಗೂ ತೋರಿಸಬೇಕು ಎಂದೆನಿಸುವ ಹಲವು ಹಿಂದಿ ಸಿನಿಮಾಗಳಿವೆ. ನಮ್ಮೊಳಗಿನ ದೇಶಭಕ್ತಿಯನ್ನು ಜಾಗೃತಗೊಳಿಸಲು, ಮಕ್ಕಳಲ್ಲಿ ದೇಶಭಕ್ತಿಯನ್ನು ಚಿಗುರಿಸಲು ನೆರವಾಗಬಲ್ಲ ಈ ಸಿನಿಮಾಗಳನ್ನು ನಾವು ಮತ್ತೊಮ್ಮೆ ನೋಡಬೇಕು. ಈ ಎಲ್ಲ ಚಿತ್ರಗಳು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಭಾರತೀಯರು ತೋರಿದ ಅದಮ್ಯ ಚೇತನಕ್ಕೆ ಸಂದ ಗೌರವವಾಗಿದೆ. ದೇಶ ಸ್ವಾತಂತ್ರ್ಯ ಪಡೆಯಲು ಅವರೆಲ್ಲ ಮಾಡಿರುವ ತ್ಯಾಗ ಮತ್ತು ಬಲಿದಾನವನ್ನು ನೆನಪಿಸುತ್ತದೆ.

VISTARANEWS.COM


on

By

Independence Day 2024
Koo

78ನೇ ಸ್ವಾತಂತ್ರ್ಯೋತ್ಸವ ದಿನವನ್ನು ಆಚರಿಸಲು (Independence Day 2024) ನಾವೆಲ್ಲ ಸಿದ್ಧರಾಗಿದ್ದೇವೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯವು ಸಾಕಷ್ಟು ಮಂದಿಯ ಹೋರಾಟದ ಫಲವಾಗಿ ಬಂದಿದೆ. ಇಂಥವರ (freedom fighter story) ಸ್ಫೂರ್ತಿದಾಯಕ ಕಥೆಗಳನ್ನು ಆಧರಿಸಿ ಹಲವು ಚಲನಚಿತ್ರಗಳು (film) ಬಂದಿವೆ. ಈ ಚಿತ್ರಗಳು ನಮ್ಮಲ್ಲಿ ದೇಶ ಪ್ರೇಮವನ್ನು ಬಡಿದೆಬ್ಬಿಸುತ್ತದೆ. ಈ ಚಿತ್ರಗಳನ್ನು (Indian film) ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಮತ್ತೊಮ್ಮೆ ನಾವು ನೋಡಬೇಕು, ನಮ್ಮ ಮಕ್ಕಳಿಗೂ ತೋರಿಸಬೇಕು. ನಮ್ಮೊಳಗಿನ ದೇಶಭಕ್ತಿಯನ್ನು ಜಾಗೃತಗೊಳಿಸಲು, ಮಕ್ಕಳಲ್ಲಿ ದೇಶಭಕ್ತಿಯನ್ನು ಚಿಗುರಿಸಲು ನೆರವಾಗಬಲ್ಲ ಪ್ರಮುಖ ಹತ್ತು ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.

ಗಾಂಧಿ: (1982ರಲ್ಲಿ ನಿರ್ಮಾಣ)

ರಿಚರ್ಡ್ ಅಟೆನ್‌ಬರೋ ಅವರ ಈ ಚಲನಚಿತ್ರ “ಗಾಂಧಿ” ಭಾರತದ ಅಹಿಂಸಾತ್ಮಕ ಸ್ವಾತಂತ್ರ್ಯ ಚಳವಳಿಯ ನಾಯಕ ಮಹಾತ್ಮ ಗಾಂಧಿಯವರ ಜೀವನವನ್ನು ವಿವರಿಸುತ್ತದೆ. ಗಾಂಧಿಯವರ ಅಹಿಂಸೆ ಮತ್ತು ಅಸಹಕಾರ ಚಳವಳಿಯ ಅಸ್ತ್ರದ ಪರಿಣಾಮವನ್ನು ಸುಂದರವಾಗಿ ಸೆರೆಹಿಡಿದಿದೆ. ಇದು 8 ಆಸ್ಕರ್‌ ಅಕಾಡೆಮಿ ಪ್ರಶಸ್ತಿಗಳನ್ನು ಗಳಿಸಿದೆ.


ಲಗಾನ್: (2001ರಲ್ಲಿ ನಿರ್ಮಾಣ)

ಅಶುತೋಷ್ ಗೋವಾರಿಕರ್ ನಿರ್ದೇಶಿಸಿದ “ಲಗಾನ್” ಚಿತ್ರ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಲ್ಲಿ ನಡೆದ ಕ್ರಿಕೆಟ್‌ ಪಂದ್ಯದ ಕಥೆಯಾಗಿದೆ. ಇದು ಭಾರತದ ಹಳ್ಳಿಯ ಜನರ ಸುತ್ತ ಹೆಣೆದ ಕಥೆಯಾಗಿದೆ. ಬ್ರಿಟಿಷ್ ದಬ್ಬಾಳಿಕೆ ಮತ್ತು ಅಮಾನವೀಯ ತೆರಿಗೆಯಿಂದ ತಪ್ಪಿಸಿಕೊಳ್ಳಲು ಹಳ್ಳಿಯ ಜನರು ಕ್ರಿಕೆಟ್ ಪಂದ್ಯದ ಸವಾಲು ಹಾಕುತ್ತಾರೆ. ಈ ಚಿತ್ರವು ಬ್ರಿಟಿಷರ ವಿರುದ್ಧದ ಭಾರತೀಯರ ಏಕತೆ, ಬದ್ಧತೆ ಮತ್ತು ಧೈರ್ಯ-ಸಾಹಸವನ್ನು ಪ್ರತಿಬಿಂಬಿಸಿದೆ.


ರಂಗ್ ದೇ ಬಸಂತಿ: (2006ರಲ್ಲಿ ನಿರ್ಮಾಣ)

ರಾಕೇಶ್ ಓಂಪ್ರಕಾಶ್ ಮೆಹ್ರಾ ಅವರ “ರಂಗ್ ದೇ ಬಸಂತಿ” ಸಮಕಾಲೀನ ಭಾರತೀಯ ಯುವಕರ ಕಥೆಯನ್ನು ಒಳಗೊಂಡಿದೆ. ಇದು ಸ್ವಾತಂತ್ರ್ಯ ಹೋರಾಟಗಾರರ ಕಥೆಗಳೊಂದಿಗೆ ಹೆಣೆದುಕೊಂಡಿದೆ. ಈ ಚಲನಚಿತ್ರವು ಹಿಂದಿನ ಮತ್ತು ವರ್ತಮಾನದ ನಡುವಿನ ಕಥೆಯನ್ನು ಹೆಣೆದು ಪರಿಣಾಮಕಾರಿಯಾಗಿ ನಿರೂಪಿಸಲಾಗಿದೆ. ಭ್ರಷ್ಟಾಚಾರ ಮತ್ತು ಅನ್ಯಾಯದ ವಿರುದ್ಧ ಹೋರಾಡಲು ಹೊಸ ಪೀಳಿಗೆಯನ್ನು ಪ್ರೇರೇಪಿಸುವ ಕಥಾ ಹಂದರವನ್ನು ಇದು ಒಳಗೊಂಡಿದೆ.

1942 ಎ ಲವ್ ಸ್ಟೋರಿ (1994ರಲ್ಲಿ ಬಿಡುಗಡೆ)

ವಿಧು ವಿನೋದ್ ಚೋಪ್ರಾ ಅವರ ರೊಮ್ಯಾಂಟಿಕ್ ಚಿತ್ರ “1942: ಎ ಲವ್ ಸ್ಟೋರಿ” ಸಾರ್ವಕಾಲಿಕ ಶ್ರೇಷ್ಠ ಸಿನಿಮಾ ಆಗಿದೆ. ಕ್ವಿಟ್ ಇಂಡಿಯಾ ಚಳವಳಿಯ ಹಿನ್ನೆಲೆಯನ್ನು ಒಳಗೊಂಡಿದೆ. ಈ ಚಿತ್ರವು ಸ್ವಾತಂತ್ರ್ಯದ ಹೋರಾಟದೊಂದಿಗೆ ಅರಳುವ ಪ್ರೇಮಕಥೆಯನ್ನು ಹೊಂದಿದೆ. ಬ್ರಿಟಿಷರ ವಿರುದ್ಧ ಹೋರಾಟ ಮತ್ತು ಯುವ ಜೋಡಿಯ ಪ್ರೀತಿಯ ಕಥಾನಕ ಪರಿಣಾಮಕಾರಿಯಾಗಿ ಮೂಡಿ ಬಂದಿದೆ.


ಮಂಗಲ್ ಪಾಂಡೆ: ದಿ ರೈಸಿಂಗ್ (2005ರಲ್ಲಿ ನಿರ್ಮಾಣ)

ಕೇತನ್ ಮೆಹ್ತಾ ಅವರ ಐತಿಹಾಸಿಕ ಜೀವನಚರಿತ್ರೆಯ “ಮಂಗಲ್ ಪಾಂಡೆ: ದಿ ರೈಸಿಂಗ್”ನಲ್ಲಿ ಆಮೀರ್ ಖಾನ್ ಮನೋಜ್ಞವಾಗಿ ನಟಿಸಿದ್ದಾರೆ. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ 1857ರ ಸಿಪಾಯಿ ದಂಗೆಯನ್ನು ಹೊತ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಿಪಾಯಿ ಮಂಗಲ್ ಪಾಂಡೆಯ ಜೀವನವನ್ನು ಇದು ಬಿಂಬಿಸಿದೆ.

ನೇತಾಜಿ ಸುಭಾಸ್ ಚಂದ್ರ ಬೋಸ್: ದಿ ಫಾರ್ಗಾಟನ್ ಹೀರೋ (2004ರಲ್ಲಿ ನಿರ್ಮಾಣ)

ಶ್ಯಾಮ್ ಬೆನಗಲ್ ಅವರ ಈ ಚಿತ್ರವು ಪ್ರಭಾವಿ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜೀವನ ಕಥೆಯನ್ನು ಒಳಗೊಂಡಿದೆ. ಇದು ಬೋಸ್ ಅವರ ಇಂಡಿಯನ್ ನ್ಯಾಷನಲ್ ಆರ್ಮಿ (ಐಎನ್‌ಎ) ಸ್ಥಾಪನೆ ಮತ್ತು ಬ್ರಿಟಿಷ್ ಆಳ್ವಿಕೆಯನ್ನು ಉರುಳಿಸಲು ಅವರು ನಡೆಸಿದ ಸಾಹಸಮಯ ಹೋರಾಟದ ಮೇಲೆ ಬೆಳಕು ಚೆಲ್ಲುತ್ತದೆ.


ದಿ ಲೆಜೆಂಡ್ ಆಫ್ ಭಗತ್ ಸಿಂಗ್ (2002ರಲ್ಲಿ ನಿರ್ಮಾಣ)

ರಾಜ್‌ಕುಮಾರ್ ಸಂತೋಷಿ ನಿರ್ದೇಶನದ ʼದಿ ಲೆಜೆಂಡ್ ಆಫ್ ಭಗತ್ ಸಿಂಗ್ʼ ಚಿತ್ರದಲ್ಲಿ ಅಜಯ್ ದೇವಗನ್ ಭಾರತದ ಸ್ವಾತಂತ್ರ್ಯಕ್ಕಾಗಿ ವೀರಾವೇಶದಿಂದ ಹೋರಾಡಿದ ಕ್ರಾಂತಿಕಾರಿ ಭಗತ್ ಸಿಂಗ್ ಪಾತ್ರದಲ್ಲಿ ನಟಿಸಿದ್ದಾರೆ. ಬ್ರಿಟಿಷ್ ಆಡಳಿತಗಾರರ ವಿರುದ್ಧ ಭಗತ್‌ ಸಿಂಗ್ ಅವರ ಅಚಲ ಬದ್ಧತೆ ಮತ್ತು ಧೈರ್ಯದ ನಿಲುವನ್ನು ಚಲನಚಿತ್ರವು ಎತ್ತಿ ತೋರಿಸುತ್ತದೆ.


ಶಹೀದ್ (1965ರಲ್ಲಿ ನಿರ್ಮಾಣ)

ಎಸ್. ರಾಮ್ ಶರ್ಮಾ ಅವರ “ಶಹೀದ್” ಚಿತ್ರ ಭಗತ್ ಸಿಂಗ್, ಸುಖದೇವ್ ಥಾಪರ್ ಮತ್ತು ಶಿವರಾಮ್ ರಾಜಗುರು ಅವರ ಜೀವನವನ್ನು ಚಿತ್ರಿಸುತ್ತದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಈ ಮೂವರು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರ ದೇಶಭಕ್ತಿ ಮತ್ತು ನಿಸ್ವಾರ್ಥತೆಯನ್ನು ಚಿತ್ರದ ಮೂಲಕ ಗೌರವಿಸಲಾಗಿದೆ.


ಚಿತ್ತಗಾಂಗ್ (2012ರಲ್ಲಿ ನಿರ್ಮಾಣ)

ವೇದವ್ರತ ಪೈನ್ ಅವರ “ಚಿತ್ತಗಾಂಗ್” ಚಿತ್ರವು 1930ರ ಚಿತ್ತಗಾಂಗ್ ದಂಗೆಯ ಸಮಯದಲ್ಲಿ ಬ್ರಿಟಿಷ್ ಸೈನ್ಯಕ್ಕೆ ಸವಾಲೆಸೆದ ಹದಿಹರೆಯದ ಶಾಲಾ ಹುಡುಗರ ಕಥೆಯನ್ನು ಹೇಳುತ್ತದೆ. ಈ ಯುವ ದೇಶಭಕ್ತರ ಗಮನಾರ್ಹ ಶೌರ್ಯ ಮತ್ತು ಸಂಕಲ್ಪವನ್ನು ಚಲನಚಿತ್ರವು ಸಮರ್ಥವಾಗಿ ಎತ್ತಿ ತೋರಿಸುತ್ತದೆ.

ಇದನ್ನೂ ಓದಿ: Indian 2 Ott: ಇಂಡಿಯನ್ 2 ಒಟಿಟಿ ಸ್ಟ್ರೀಮಿಂಗ್ ಡೇಟ್ ಅನೌನ್ಸ್!


ಬೋಸ್: ದಿ ಫಾರ್ಗಾಟನ್ ಹೀರೊ (2005ರಲ್ಲಿ ನಿರ್ಮಾಣ)

ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜೀವನದ ಮತ್ತೊಂದು ಚಿತ್ರ ಇದು. ಶ್ಯಾಮ್ ಬೆನಗಲ್ ನಿರ್ದೇಶಿಸಿದ “ಬೋಸ್: ದಿ ಫಾರ್ಗಾಟನ್ ಹೀರೋ” ಚಿತ್ರವು ಭಾರತದ ಸ್ವಾತಂತ್ರ್ಯ ಹೋರಾಟಕ್ಕಾಗಿ ಬೋಸ್ ಅವರ ಅಂತಾರಾಷ್ಟ್ರೀಯ ಮಟ್ಟದ ಪ್ರಯತ್ನಗಳು ಮತ್ತು ಇಂಡಿಯನ್‌ ನ್ಯಾಷನಲ್‌ ಆರ್ಮಿಯನ್ನು ಸಜ್ಜುಗೊಳಿಸುವಲ್ಲಿ ಅವರು ತೋರಿದ ಚಾಣಾಕ್ಷತೆಯನ್ನು ಮನೋಜ್ಞವಾಗಿ ಕಟ್ಟಿ ಕೊಟ್ಟಿದೆ.

ಈ ಎಲ್ಲ ಚಿತ್ರಗಳು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಭಾರತೀಯರು ತೋರಿದ ಅದಮ್ಯ ಚೇತನಕ್ಕೆ ಸಂದ ಗೌರವವಾಗಿದೆ. ದೇಶ ಸ್ವಾತಂತ್ರ್ಯ ಪಡೆಯಲು ಅವರೆಲ್ಲ ಮಾಡಿರುವ ತ್ಯಾಗ ಮತ್ತು ಬಲಿದಾನವನ್ನು ನೆನಪಿಸುತ್ತದೆ.

Continue Reading
Advertisement
SSC Recruitment 2024
ಉದ್ಯೋಗ20 mins ago

SSC Recruitment 2024: ಗುಡ್‌ನ್ಯೂಸ್‌; 2,006 ಸ್ಟೆನೋಗ್ರಾಫರ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

Paris Olympics
ಕ್ರೀಡೆ30 mins ago

Paris Olympics: ಸೆಮಿ ಫೈನಲ್​ ಪ್ರವೇಶಿಸಿದ ವಿನೇಶ್ ಫೋಗಟ್

Money Guide
ಮನಿ-ಗೈಡ್44 mins ago

Money Guide: ಆನ್‌ಲೈನ್‌ ಶಾಪಿಂಗ್‌ ವೇಳೆ ಮೋಸ ಹೋಗದಿರಲು ಈ ಟಿಪ್ಸ್‌ ಪಾಲೋ ಮಾಡಿ

Lalbagh Flower Show
ಕರ್ನಾಟಕ48 mins ago

Lalbagh Flower Show: ಆ.8ರಿಂದ 19ವರೆಗೆ ಲಾಲ್‌ಬಾಗ್‌ ಫ್ಲವರ್‌ ಶೋ; ಅನಾವರಣವಾಗಲಿದೆ ಭೀಮ ಸಂದೇಶ

Physical Abuse
ಬೆಂಗಳೂರು51 mins ago

Physical Abuse : ಬೆಂಗಳೂರಿನಲ್ಲಿ ಶಾಲಾ ಬಾಲಕಿ ಮೇಲೆ ನಿರಂತರ ಅತ್ಯಾಚಾರವೆಸಗಿದ ಯುವಕ

Paris Olympics
ಕ್ರೀಡೆ1 hour ago

Paris Olympics: ಫೈನಲ್​ ಪ್ರವೇಶಿಸಿದ ನೀರಜ್​ ಚೋಪ್ರಾ; ಕುಸ್ತಿಯಲ್ಲಿ ವಿನೇಶ್ ಕ್ವಾರ್ಟರ್​ ಫೈನಲ್​ಗೆ

LK advani
ದೇಶ1 hour ago

L K Advani: ಬಿಜೆಪಿ ಹಿರಿಯ ನಾಯಕ ಎಲ್‌ ಕೆ ಅಡ್ವಾಣಿ ಮತ್ತೆ ಆಸ್ಪತ್ರೆಗೆ ದಾಖಲು

women PG bangalore
ಪ್ರಮುಖ ಸುದ್ದಿ2 hours ago

Women PG: ಬೆಂಗಳೂರಿನಲ್ಲಿ ಮಹಿಳಾ ಪಿಜಿಗಳಿಗೆ ಇನ್ನು ಮುಂದೆ ಕಟ್ಟುನಿಟ್ಟಿನ ರೂಲ್ಸ್! ಫಾಲೋ ಮಾಡದಿದ್ದರೆ ಕೇಸ್

IND vs SL
ಕ್ರೀಡೆ2 hours ago

IND vs SL: ಮೂರನೇ ಏಕದಿನ ಪಂದ್ಯಕ್ಕೆ ರಾಹುಲ್​ ಅನುಮಾನ​; ಪಂತ್​ಗೆ ಅವಕಾಶ?

Gadag News
ಗದಗ2 hours ago

Gadag News : ಮಕ್ಕಳ ಕೂದಲು ಕಟ್ ಮಾಡಿದ ಕಂಪ್ಯೂಟರ್ ಶಿಕ್ಷಕನಿಗೆ ಧರ್ಮದೇಟು!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ2 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ5 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ5 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ5 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ7 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ1 week ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ1 week ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌