Repo Rate: ಗೃಹಸಾಲದ ಇಎಂಐ ಭಾರ ಇಳಿಕೆ ಇಲ್ಲ; ರೆಪೋ ದರ ಯಥಾಸ್ಥಿತಿ - Vistara News

ವಾಣಿಜ್ಯ

Repo Rate: ಗೃಹಸಾಲದ ಇಎಂಐ ಭಾರ ಇಳಿಕೆ ಇಲ್ಲ; ರೆಪೋ ದರ ಯಥಾಸ್ಥಿತಿ

Repo Rate: ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷೆಯಂತೆ ರಿಪೋ ದರವನ್ನು ಶೇ. 6.5ರಲ್ಲಿ ಮುಂದುವರಿಸಲು ನಿರ್ಧರಿಸಿದೆ. ಹಣದುಬ್ಬರ ಇನ್ನೂ ಅಧಿಕ ಮಟ್ಟದಲ್ಲಿ ಇರುವುದರಿಂದ ರಿಪೋ ದರ ಇಳಿಕೆ ಸದ್ಯಕ್ಕೆ ಬೇಡ ಎಂಬುದು ಮಾನಿಟರಿ ಪಾಲಿಸಿ ಕಮಿಟಿಯ ಹೆಚ್ಚಿನ ಸದಸ್ಯರ ಅಭಿಮತದ ಹಿನ್ನಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಇದರಿಂದ ರಿಯಲ್ ಎಸ್ಟೇಟ್ ಅಥವಾ ಗೃಹ ಸಾಲದ ಇಎಂಐಗಳ ಮೇಲೆ ಯಾವುದೇ ಬದಲಾವಣೆ ಆಗುವುದಿಲ್ಲ.

VISTARANEWS.COM


on

Repo Rate
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರೀಕ್ಷೆಯಂತೆ ರಿಪೋ ದರ (Repo Rate) ಅಥವಾ ಬಡ್ಡಿದರವನ್ನು ಶೇ. 6.5ರಲ್ಲಿ ಮುಂದುವರಿಸಲು ನಿರ್ಧರಿಸಿದೆ. ಹಣದುಬ್ಬರ ಇನ್ನೂ ಅಧಿಕ ಮಟ್ಟದಲ್ಲಿ ಇರುವುದರಿಂದ ರಿಪೋ ದರ ಇಳಿಕೆ ಸದ್ಯಕ್ಕೆ ಬೇಡ ಎಂಬುದು ಮಾನಿಟರಿ ಪಾಲಿಸಿ ಕಮಿಟಿ (Monetary Policy Committee)ಯ ಹೆಚ್ಚಿನ ಸದಸ್ಯರ ಅಭಿಮತದ ಹಿನ್ನಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಎಂಪಿಸಿ ಸಭೆಯಲ್ಲಿ ಕೈಗೊಂಡ ಈ ತೀರ್ಮಾನದ ಬಗ್ಗೆ ಇಂದು ಪತ್ರಿಕಾಗೋಷ್ಠಿಯಲ್ಲಿ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಮಾಹಿತಿ ನೀಡಿದರು. ಇದರಿಂದ ರಿಯಲ್ ಎಸ್ಟೇಟ್ ಅಥವಾ ಗೃಹ ಸಾಲದ ಇಎಂಐಗಳ ಮೇಲೆ ಯಾವುದೇ ಬದಲಾವಣೆ ಆಗುವುದಿಲ್ಲ.

ʼʼಬಡ್ಡಿ ದರ ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಲಾಗಿದೆ. ಎಂಪಿಸಿ ಸಭೆಯಲ್ಲಿ ಆರು ಸದಸ್ಯರಲ್ಲಿ ನಾಲ್ವರು ಬಡ್ಡಿದರ ಯಥಾಸ್ಥಿತಿ ಮುಂದುವರಿಸುವ ಇಚ್ಛೆ ವ್ಯಕ್ತಪಡಿಸಿದ್ದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆʼʼ ಎಂದು ಶಕ್ತಿಕಾಂತ ದಾಸ್ ತಿಳಿಸಿದರು. ಆರ್‌ಬಿಐ ಕೊನೆಯ ಬಾರಿಗೆ 2023ರ ಫೆಬ್ರವರಿಯಲ್ಲಿ ರೆಪೋ ದರವನ್ನು ಶೇ. 6.25ರಿಂದ ಶೇ. 6.50ಕ್ಕೆ ಏರಿಕೆ ಮಾಡಿತ್ತು.

ಗೃಹ ಸಾಲದ ಮೇಲೆ ಪರಿಣಾಮ ಬೀರುವುದಿಲ್ಲ

ರೆಪೋ ದರ ಯಥಾಸ್ಥಿಯಲ್ಲಿರುವುದರಿಂದ ರಿಯಲ್ ಎಸ್ಟೇಟ್ ಅಥವಾ ಗೃಹ ಸಾಲದ ಇಎಂಐಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರೆಪೋ ದರವು ಬದಲಾಗದೆ ಉಳಿದಿರುವುದರಿಂದ ಬ್ಯಾಂಕ್‌ಗಳು ಶೀಘ್ರದಲ್ಲೇ ತಮ್ಮ ಸಾಲದ ದರಗಳನ್ನು ಬದಲಾಯಿಸುವ ಸಾಧ್ಯತೆಯಿಲ್ಲ. ಅಂದರೆ ನಿಮ್ಮ ಇಎಂಐ ಸದ್ಯ ಏರಿಕೆ ಅಥವಾ ಇಳಿಕೆಯಾಗುವುದಿಲ್ಲ.

ಹಣದುಬ್ಬರ ನಿಯಂತ್ರಣದ ಗುರಿ

ಹಣದುಬ್ಬರವನ್ನು ನಿಯಂತ್ರಿಸುವುದೇ ಆರ್‌ಬಿಐಯ ಹಣಕಾಸು ನೀತಿಯ ಪ್ರಮುಖ ಗುರಿ. ಪ್ರಸ್ತುತ ಹಣದುಬ್ಬರ ದರ ಆರ್‌ಬಿಐಯ ಗುರಿಯಾದ ಶೇ. 4ಕ್ಕಿಂತ ಹೆಚ್ಚಾಗಿದೆ. ರೆಪೋ ದರವನ್ನು ಕಡಿಮೆ ಮಾಡುವುದು ಆರ್ಥಿಕತೆಯಲ್ಲಿ ಹಣದುಬ್ಬರದ ಒತ್ತಡದ ಹೆಚ್ಚಳಕ್ಕೆ ಕಾರಣವಾಗಬಹುದು. ಪ್ರಸ್ತುತ ದರವನ್ನು ಕಾಯ್ದುಕೊಳ್ಳುವುದು ಹಣದುಬ್ಬರವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಸ್ವಲ್ಪ ಆರ್ಥಿಕ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ ಎನ್ನುವುದು ಆರ್‌ಬಿಐಯ ಅಭಿಮತ. ʼʼರೆಪೋ ದರ ಕಡಿತವು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಬಹುದಾದರೂ ಆರ್‌ಬಿಐ ಈ ಹಂತದಲ್ಲಿ ಹಣದುಬ್ಬರವನ್ನು ನಿಯಂತ್ರಿಸಲು ಆದ್ಯತೆ ನೀಡುತ್ತಿದೆʼʼ ಎಂದು ಮೂಲಗಳು ತಿಳಿಸಿವೆ.

ರೆಪೋ ದರ ಎಂದರೇನು?

ದೇಶದ ವಾಣಿಜ್ಯ ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಸಾಲಕ್ಕೆ ವಿಧಿಸುವ ಬಡ್ಡಿದರವೇ ರೆಪೋದರ ಆಗಿದೆ. ಹಣದ ಕೊರತೆ ಸೇರಿ ಯಾವುದೇ ತುರ್ತು ಸಂದರ್ಭಗಳಲ್ಲಿ ವಾಣಿಜ್ಯ ಬ್ಯಾಂಕ್‌ಗಳು ಆರ್‌ಬಿಐನಿಂದ ಸಾಲ ಪಡೆಯುತ್ತವೆ. ಈ ಸಾಲಕ್ಕೆ ಆರ್‌ಬಿಐ ಬಡ್ಡಿ ವಿಧಿಸುತ್ತದೆ. ಇದನ್ನೇ ರೆಪೋ ರೇಟ್‌ ಎನ್ನುತ್ತಾರೆ. ಕೆಲವೊಮ್ಮೆ, ವಾಣಿಜ್ಯ ಬ್ಯಾಂಕ್‌ಗಳಿಂದ ಆರ್‌ಬಿಐ ಸಾಲ ಪಡೆಯತ್ತದೆ. ಆ ಸಾಲದ ಮೇಲಿನ ಬಡ್ಡಿಗೆ ರಿವರ್ಸ್‌ ರೆಪೋ ದರ ಎನ್ನುತ್ತಾರೆ. ರೆಪೋ ದರ ಏರಿಕೆಯಾದರೆ, ಬ್ಯಾಂಕುಗಳು ಕೂಡ ಗ್ರಾಹಕರಿಗೆ ನೀಡುವ ಸಾಲದ ಮೇಲಿನ ಬಡ್ಡಿಯನ್ನು ಏರಿಕೆ ಮಾಡುತ್ತವೆ. ಹಾಗಾಗಿ, ರೆಪೋ ದರವು ಸಾಲಗಾರರಿಗೆ ಪ್ರಮುಖ ಎನಿಸುತ್ತದೆ.

ಇದನ್ನೂ ಓದಿ: Bangladesh Unrest: ಬಾಂಗ್ಲಾ ಹಿಂಸಾಚಾರ; ಬಹುರಾಷ್ಟ್ರೀಯ ಕಂಪನಿಗಳು ತತ್ತರ; ಭಾರತದ ಉದ್ಯಮಗಳ ಮೇಲೇನು ಪರಿಣಾಮ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

UPI Transaction Limit: ಯುಪಿಐ ಟ್ಯಾಕ್ಸ್ ಪೇಮೆಂಟ್ ಮಿತಿ 5 ಲಕ್ಷ ರೂ.ಗೆ ಏರಿಕೆ

UPI Transaction Limit: ಯುಪಿಐ ಟ್ಯಾಕ್ಸ್ ಪೇಮೆಂಟ್ ಮಿತಿಯನ್ನು 1 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಸುವುದಾಗಿ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. ಮಿತಿಯ ಹೆಚ್ಚಳವು ಗ್ರಾಹಕರಿಗೆ ಹೆಚ್ಚಿನ ಮೌಲ್ಯದ ತೆರಿಗೆ ವಹಿವಾಟುಗಳನ್ನು ಸರಳಗೊಳಿಸುವ ಮತ್ತು ಸುಗಮಗೊಳಿಸುವ ಗುರಿಯನ್ನು ಹೊಂದಿದೆ. ʼʼಸದ್ಯಕ್ಕೆ ಯುಪಿಐ ಮೂಲಕ 1 ಲಕ್ಷ ರೂ.ವರೆಗೆ ಹಣ ಕಳುಹಿಸಬಹುದು. ಇನ್ನು ಮುಂದೆ ತೆರಿಗೆ ಪಾವತಿಗಾಗಿ ಯುಪಿಐ ಮೂಲಕ 5 ಲಕ್ಷ ರೂ.ವರೆಗೆ ಹಣ ಕಳುಹಿಸಲು ಸಾಧ್ಯ. ಅಂದರೆ ಒಂದು ವಹಿವಾಟಿನಲ್ಲಿ ನೀವು 5 ಲಕ್ಷ ರೂ.ವರೆಗೆ ತೆರಿಗೆ ಪಾವತಿ ಮಾಡಲು ಸಾಧ್ಯವಾಗಲಿದೆʼʼ ಎಂದು ಅವರು ಹೇಳಿದ್ದಾರೆ. ಆದರೆ ಇದು ತೆರಿಗೆ ಪಾವತಿಗೆ ಮಾತ್ರ ಅನ್ವಯವಾಗುತ್ತದೆ.

VISTARANEWS.COM


on

UPI Transaction Limit
Koo

ನವದೆಹಲಿ: ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಮೂಲಕ ತೆರಿಗೆ ಪಾವತಿಸುವವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಗುಡ್‌ನ್ಯೂಸ್‌ ನೀಡಿದೆ. ಯುಪಿಐ ಟ್ಯಾಕ್ಸ್ ಪೇಮೆಂಟ್ ಮಿತಿಯನ್ನು 1 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಸುವುದಾಗಿ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ತಿಳಿಸಿದ್ದಾರೆ (UPI Transaction Limit).

ಮಿತಿಯ ಹೆಚ್ಚಳವು ಗ್ರಾಹಕರಿಗೆ ಹೆಚ್ಚಿನ ಮೌಲ್ಯದ ತೆರಿಗೆ ವಹಿವಾಟುಗಳನ್ನು ಸರಳಗೊಳಿಸುವ ಮತ್ತು ಸುಗಮಗೊಳಿಸುವ ಗುರಿಯನ್ನು ಹೊಂದಿದೆ. ʼʼಸದ್ಯಕ್ಕೆ ಯುಪಿಐ ಮೂಲಕ 1 ಲಕ್ಷ ರೂ.ವರೆಗೆ ಹಣ ಕಳುಹಿಸಬಹುದು. ಇನ್ನು ಮುಂದೆ ತೆರಿಗೆ ಪಾವತಿಗಾಗಿ ಯುಪಿಐ ಮೂಲಕ 5 ಲಕ್ಷ ರೂ.ವರೆಗೆ ಹಣ ಕಳುಹಿಸಲು ಸಾಧ್ಯ. ಅಂದರೆ ಒಂದು ವಹಿವಾಟಿನಲ್ಲಿ ನೀವು 5 ಲಕ್ಷ ರೂ.ವರೆಗೆ ತೆರಿಗೆ ಪಾವತಿ ಮಾಡಲು ಸಾಧ್ಯವಾಗಲಿದೆʼʼ ಎಂದು ಅವರು ಹೇಳಿದ್ದಾರೆ. ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ)ನ ದ್ವೈಮಾಸಿಕ ಹಣಕಾಸು ನೀತಿ ಸಮಿತಿ (MPC)ಯ ಸಭೆಯ ಬಳಿಕ ಅವರು ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದ್ದಾರೆ. ಆದರೆ ಇದು ತೆರಿಗೆ ಪಾವತಿಗೆ ಮಾತ್ರ ಅನ್ವಯವಾಗುತ್ತದೆ.

“ಪ್ರಸ್ತುತ ಕೆಲವೊಂದು (ಉದಾಹರಣೆಗೆ ಆಸ್ಪತ್ರೆ, ಶಿಕ್ಷಣ ಸಂಸ್ಥೆ) ಕ್ಷೇತ್ರಗಳಿಗೆ ಹೊರತುಪಡಿಸಿ ಯುಪಿಐ ವಹಿವಾಟು 1 ಲಕ್ಷ ರೂ. ಮಿತಿಯನ್ನು ಹೊಂದಿದೆ. ಇದೀಗ ಯುಪಿಐ ಮೂಲಕ ತೆರಿಗೆ ಪಾವತಿಯ ಮಿತಿಯನ್ನು ಪ್ರತಿ ವಹಿವಾಟಿಗೆ 5 ಲಕ್ಷ ರೂ.ಗೆ ಹೆಚ್ಚಿಸಲು ನಾವು ನಿರ್ಧರಿಸಿದ್ದೇವೆ. ಇದರಿಂದ ಯುಪಿಐ ಬಳಸಿ ತೆರಿಗೆ ಪಾವತಿಸುವ ಗ್ರಾಹಕರಿಗೆ ಅನುಕೂಲವಾಗುತ್ತದೆʼʼ ಎಂದು ಅವರು ವಿವರಿಸಿದ್ದಾರೆ.

ಡೆಲಿಗೇಟೆಡ್ ಪೇಮೆಂಟ್ಸ್ ವಿಧಾನ

ಇದರ ಜತೆಗೆ ಆರ್‌ಬಿಐ ‘ಡೆಲಿಗೇಟೆಡ್ ಪೇಮೆಂಟ್ಸ್’ ಎಂಬ ಹೊಸ ಯುಪಿಐ ವೈಶಿಷ್ಟ್ಯವನ್ನು ಪರಿಚಯಿಸಿದೆ. ಒಬ್ಬ ವ್ಯಕ್ತಿಯ ಬ್ಯಾಂಕ್ ಖಾತೆಯನ್ನು ಮತ್ತೊಬ್ಬ ವ್ಯಕ್ತಿ ಬಳಸಲು ಅನುವು ಮಾಡಿಕೊಡುವ ಫೀಚರ್ ಇದಾಗಿದೆ. ಇದರಲ್ಲಿ ಪ್ರಾಥಮಿಕ ಬಳಕೆದಾರರ ಬ್ಯಾಂಕ್ ಖಾತೆಯಿಂದ ನಿರ್ದಿಷ್ಟ ಮಿತಿಯವರೆಗೆ ಯುಪಿಐ ವಹಿವಾಟುಗಳನ್ನು ನಡೆಸಲು ದ್ವಿತೀಯ ಬಳಕೆದಾರನಿಗೆ ಅನುಮತಿ ನೀಡಲಾಗುತ್ತದೆ. ಇದಕ್ಕಾಗಿ ದ್ವಿತೀಯ ಬಳಕೆದಾರರಿಗೆ ಪ್ರತ್ಯೇಕ ಯುಪಿಐ-ಲಿಂಕ್ ಮಾಡಿದ ಬ್ಯಾಂಕ್ ಖಾತೆಯ ಅಗತ್ಯವಿಲ್ಲ. ಈ ವೈಶಿಷ್ಟ್ಯವು ಡಿಜಿಟಲ್ ಪಾವತಿಗಳನ್ನು ಇನ್ನಷ್ಟು ಸುಗಮಗೊಳಿಸಲಿದೆ.

ರೆಪೋ ದರಲ್ಲಿ ಯಾವುದೇ ಬದಲಾವಣೆ ಇಲ್ಲ

ಇದೇ ವೇಳೆ ರೆಪೋ ದರವನ್ನೂ ಪ್ರಕಟಿಸಲಾಗಿದೆ. ರೆಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ರೆಪೋ ದರ ಸತತ 9ನೇ ಬಾರಿಯೂ ಶೇ. 6.50ರಲ್ಲಿಯೇ ಮುಂದುವರಿಯಲಿದೆ. ಜತೆಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಪ್ರಗತಿ ದರವನ್ನು ಶೇ. 7.2 ಎಂದು ಆರ್‌ಬಿಐ ಅಂದಾಜಿಸಿದೆ. ಮಾತ್ರವಲ್ಲ ಕೆಲವೇ ಗಂಟೆಗಳಲ್ಲಿ ಚೆಕ್‌ ವಿಲೇವಾರಿ ಆಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. ಪ್ರಸ್ತುತ ಚೆಕ್‌ ಹಾಕಿದರೆ ಕ್ಲಿಯರ್‌ ಆಗಲು ಎರಡು ದಿನಗಳು ಬೇಕಾಗುತ್ತವೆ. ಅದನ್ನು ಕೆಲವೇ ಗಂಟೆಗಳಿಗೆ ಇಳಿಯಲಿದೆ.

ಇದನ್ನೂ ಓದಿ: Indian Currency: 2000 ರೂ. ನೋಟು ತಯಾರಿಸಲು 4 ರೂ. ಖರ್ಚು; 10 ರೂ. ನೋಟು ಮುದ್ರಿಸಲು 96 ಪೈಸೆ ಬೇಕು!

Continue Reading

ಚಿನ್ನದ ದರ

Gold Rate Today: ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ; ಬಂಗಾರ ಇಂದು ಇಷ್ಟು ಅಗ್ಗ

Gold Rate Today: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಚಿನ್ನದ ದರ ಕೊಂಚ ಇಳಿಕೆಯಾಗಿದೆ. ಮಂಗಳವಾರದಿಂದ ಬೆಲೆ ಸತತವಾಗಿ ಇಳಿಕೆಯಾಗುತ್ತಿರುವುದರಿಂದ ಗ್ರಾಹಕರ ಮೊಗದಲ್ಲಿ ನಗು ಮೂಡಿದೆ. ಇಂದು ಬೆಂಗಳೂರಿನಲ್ಲಿ 1 ಗ್ರಾಂ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಚಿನ್ನಕ್ಕೆ ತಲಾ ₹ 1 ಕಡಿಮೆಯಾಗಿದೆ. 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,349 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 6,926 ಇದೆ.

VISTARANEWS.COM


on

Gold Rate Today
Koo

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಆಗಸ್ಟ್‌ 8) ಚಿನ್ನದ ದರ ಕೊಂಚ ಇಳಿಕೆಯಾಗಿದೆ (Gold Rate Today). ಮಂಗಳವಾರದಿಂದ ಬೆಲೆ ಸತತವಾಗಿ ಇಳಿಕೆಯಾಗುತ್ತಿರುವುದರಿಂದ ಗ್ರಾಹಕರ ಮೊಗದಲ್ಲಿ ನಗು ಮೂಡಿದೆ. ಇಂದು ಬೆಂಗಳೂರಿನಲ್ಲಿ 1 ಗ್ರಾಂ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಚಿನ್ನಕ್ಕೆ ತಲಾ ₹ 1 ಕಡಿಮೆಯಾಗಿದೆ.

ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,349 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 6,926 ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ ₹ 50,792 ಇದೆ. ಇನ್ನು 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹ 63,490 ಮತ್ತು ₹ 6,34,900 ದರದಲ್ಲಿ ಖರೀದಿಸಬಹುದು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ ₹ 55,408 ಇದೆ. 10 ಗ್ರಾಂ ಮತ್ತು 100 ಗ್ರಾಂನ 24 ಕ್ಯಾರಟ್‌ ಚಿನ್ನದ ಬೆಲೆ ₹ 69,260 ಮತ್ತು ₹ 6,92,600 ತಲುಪಿದೆ.

ನಗರ22 ಕ್ಯಾರಟ್ (1 ಗ್ರಾಂ)24 ಕ್ಯಾರಟ್ (1 ಗ್ರಾಂ)
ದಿಲ್ಲಿ₹ 6,364 ₹ 6,941
ಮುಂಬೈ₹ 6,349 ₹ 6,926
ಬೆಂಗಳೂರು₹ 6,349 ₹ 6,926
ಚೆನ್ನೈ₹ 6,329 ₹ 6,905

ಬೆಳ್ಳಿ ಧಾರಣೆ

ಇತ್ತ ಬೆಳ್ಳಿಯ ಬೆಲೆಯಲ್ಲಿಯೂ ಕೊಂಚ ಇಳಿಕೆಯಾಗಿದೆ. ಬೆಳ್ಳಿ 1 ಗ್ರಾಂಗೆ ₹ 80.90 ಹಾಗೂ 8 ಗ್ರಾಂಗೆ ₹ 647.20 ಇದೆ. 10 ಗ್ರಾಂ ₹ 809 ಹಾಗೂ 1 ಕಿಲೋಗ್ರಾಂ ₹ 80,900 ಬೆಲೆ ಬಾಳುತ್ತದೆ.

ಚಿನ್ನ ಖರೀದಿಸುವ ಮುನ್ನ ಈ ಅಂಶಗಳನ್ನು ಗಮನಿಸಿ

ಮೇಕಿಂಗ್‌ ಚಾರ್ಜಸ್‌: ಚಿನ್ನಾಭರಣ ಬೆಲೆಯಲ್ಲಿ ಮೇಕಿಂಗ್‌ ಚಾರ್ಜಸ್‌ (Making Charges) ಪ್ರಧಾನ ಪಾತ್ರ ವಹಿಸುತ್ತದೆ. ಚಿನ್ನದ ತೂಕ ಮತ್ತು ಪರಿಶುದ್ಧತೆಯ ಜತೆಗೆ ಆಭರಣಗಳನ್ನು ತಯಾರಿಸುವ ಶುಲ್ಕವನ್ನೂ ಖರೀದಿ ಸಂದರ್ಭದಲ್ಲಿ ವಿಧಿಸಲಾಗುತ್ತದೆ. ಇದನ್ನು ಮೇಕಿಂಗ್‌ ಚಾರ್ಜಸ್‌ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಚಿನ್ನದ ಬೆಲೆಯನ್ನು ಆಧರಿಸಿ ತಯಾರಿಕಾ ಶುಲ್ಕವನ್ನು ನಿರ್ಧರಿಸಲಾಗುತ್ತದೆ. ತಯಾರಿಕಾ ಶುಲ್ಕಗಳಲ್ಲಿ ಹಣವನ್ನು ಉಳಿಸಲು ಅವುಗಳನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಉದಾಹರಣೆಗೆ 8 ಗ್ರಾಂ ಚಿನ್ನದ ಸರದ ಬೆಲೆ 40,000 ರೂ. ಎಂದಿಟ್ಟುಕೊಳ್ಳೋಣ. ಪ್ರತಿ ಗ್ರಾಂಗೆ 300 ರೂ. ಫ್ಲಾಟ್ ದರದಲ್ಲಿ ತಯಾರಿಕಾ ಶುಲ್ಕವು 2,400 ರೂ. ಆಗಿರುತ್ತದೆ. 12%ದಂತೆ ಲೆಕ್ಕ ಹಾಕಿದರೆ ಇದು ಗರಿಷ್ಠ 4,800 ರೂ.ವರೆಗೆ ಹೆಚ್ಚಾಗುತ್ತದೆ.

ಬೆಲೆ ಲೆಕ್ಕ ಹಾಕಿ: ಚಿನ್ನದ ದರ ಅದರ ಶುದ್ಧತೆಯ ಮೇಲೆ ನಿರ್ಧಾರವಾಗುತ್ತದೆ. ಮಾರುಕಟ್ಟೆಯ ದರಕ್ಕೆ ಅನುಗುಣವಾಗಿ ಚಿನ್ನದ ಬೆಲೆ ಪ್ರತಿದಿನ ಬದಲಾಗುತ್ತಿರುತ್ತದೆ. ಜ್ಯುವೆಲ್ಲರಿಗಳು ದಿನಂಪ್ರತಿ ಆಯಾ ದಿನದ ಬೆಲೆ ಪ್ರದರ್ಶಿಸುತ್ತವೆ. ಇದನ್ನು ಗಮನಿಸಿ. ಆಭರಣದ ವಿನ್ಯಾಸವೂ ಬೆಲೆಯ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶ. ಹೀಗಾಗಿ ಖರೀದಿಗೆ ತೆರಳುವ ಮುನ್ನ ಈ ಎಲ್ಲ ಅಂಶಗಳತ್ತ ಗಮನ ಹರಿಸುವುದು ಮುಖ್ಯ.

ಬೆಲೆಗಳನ್ನು ಹೋಲಿಸಿ: ಮೊದಲೇ ಹೇಳಿದಂತೆ ಆಭರಣದ ಬೆಲೆಯಲ್ಲಿ ತಯಾರಿಕಾ ವೆಚ್ಚವೂ ಸೇರಿರುತ್ತದೆ. ಸಾಮಾನ್ಯವಾಗಿ ಯಂತ್ರದಿಂದ ತಯಾರಿಸಿದ ಆಭರಣಗಳು ಅಥವಾ ಕಡಿಮೆ ವಿನ್ಯಾಸವನ್ನು ಹೊಂದಿರುವ ಆಭರಣಗಳಿಗೆ ಕಡಿಮೆ ಮೇಕಿಂಗ್ ಚಾರ್ಜ್ ಇರುತ್ತದೆ. ಪ್ರಸ್ತುತ ಭಾರತದಲ್ಲಿ ಮೇಕಿಂಗ್ ಚಾರ್ಜಸ್ ಶೇ. 6ರಿಂದ ಶೇ. 20ರವರೆಗೆ ಇದೆ. ಆದ್ದರಿಂದ ವಿವಿಧ ಹಂತಗಳಲ್ಲಿನ ಶುಲ್ಕಗಳನ್ನು ಹೋಲಿಸಿ ಎನ್ನುವುದು ತಜ್ಞರು ನೀಡುವ ಟಿಪ್ಸ್‌.

ಇದನ್ನೂ ಓದಿ: Gautam Adani: ಅಧಿಕಾರ ತೊರೆದು ನಿವೃತ್ತರಾಗಲಿದ್ದಾರಾ ಗೌತಮ್ ಅದಾನಿ? ಈ ಬಗ್ಗೆ ಅವರು ಹೇಳಿದ್ದೇನು?

Continue Reading

ವಿದೇಶ

Bangladesh Unrest: ಬಾಂಗ್ಲಾ ಹಿಂಸಾಚಾರ; ಬಹುರಾಷ್ಟ್ರೀಯ ಕಂಪನಿಗಳು ತತ್ತರ; ಭಾರತದ ಉದ್ಯಮಗಳ ಮೇಲೇನು ಪರಿಣಾಮ?

ಬಾಂಗ್ಲಾದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆಯು (Bangladesh Unrest) ಹಲವು ಭಾರತೀಯ ಕಂಪನಿಗಳ ತೀವ್ರ ಪರಿಣಾಮ ಬೀರಿದೆ. ಇದರಿಂದ ಕಂಪನಿಗಳಿಗಾಗುವ ಆಗುವ ನಷ್ಟು ಎಷ್ಟು, ಇದು ಭಾರತದ ವ್ಯಾಪಾರ ವಹಿವಾಟಿನ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ, ಯಾವ ಉದ್ಯಮಕ್ಕೆ ಹೆಚ್ಚಿನ ನಷ್ಟ ಉಂಟಾಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Bangladesh Unrest
Koo

ಉದ್ಯೋಗ ಮೀಸಲಾತಿ (Job reservation) ವಿರೋಧದ ನೆಪದಲ್ಲಿ ನಡೆದ ಪ್ರತಿಭಟನೆ ಹಿಂಸಾತ್ಮಕ ರೂಪ ತಳೆದ ಬಳಿಕ ಬಾಂಗ್ಲಾದಲ್ಲಿ (Bangladesh Unrest) ಪ್ರಧಾನಮಂತ್ರಿ ಶೇಖ್ ಹಸೀನಾ (PM Sheikh Hasina) ಅವರ ಸರ್ಕಾರ ಪತನಗೊಂಡಿತ್ತು. ಇದರಿಂದ ನೆರೆಯ ದೇಶಗಳಲ್ಲೂ ಆತಂಕ ಉಂಟಾಗಿದೆ. ಇದಕ್ಕೆ ಮುಖ್ಯ ಕಾರಣ ಹಲವು ಸುಪ್ರಸಿದ್ಧ ಕಂಪನಿಗಳ ದೈನಂದಿನ ಕೆಲಸಕ್ಕೆ ಅಡ್ಡಿಯಾಗಿರುವುದು.

ಮಾರಿಕೋ, ಡಾಬರ್, ಹಿಂದೂಸ್ತಾನ್ ಯೂನಿಲಿವರ್, ನೆಸ್ಲೆ, ಪೆಪ್ಸಿಕೋ ಮತ್ತು ಕೋಕಾ-ಕೋಲಾದಂತಹ ಎಫ್‌ಎಂಸಿಜಿ ಕಂಪನಿಗಳು ಈಗ ಬಾಂಗ್ಲಾದಲ್ಲಿ ತೊಂದರೆಗೆ ಸಿಲುಕಿಕೊಂಡಿದೆ. ಕೆಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯೊಳಗೆ ಇರಲು ಮತ್ತು ಮನೆಯಿಂದಲೇ ಕೆಲಸ ಮಾಡಲು ಸಲಹೆ ನೀಡಿವೆ. ಇನ್ನು ಕೆಲವರು ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೆ ಮಾರಾಟ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಾರೆ.

ಪ್ರಮುಖ ಕಂಪನಿಗಳಿಗೆ ಆತಂಕ

ಮಾರಿಕೊ, ಡಾಬರ್, ಇಮಾಮಿ ಮತ್ತು ಎಚ್‌ಯುಎಲ್ ಸೇರಿದಂತೆ ಭಾರತೀಯ ಎಫ್‌ಎಂಸಿಜಿ ಕಂಪೆನಿಗಳು ಬಾಂಗ್ಲಾದೇಶದಲ್ಲಿ ಶೇ. 1-5ರಷ್ಟು ಆದಾಯವನ್ನು ಹೊಂದಿವೆ. ಹೆಚ್‌ಯುಎಲ್ ಮ್ಯಾನೇಜಿಂಗ್ ಡೈರೆಕ್ಟರ್ ರೋಹಿತ್ ಜಾವಾ ಅವರು ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ ಪರಿಸ್ಥಿತಿ ಶೀಘ್ರದಲ್ಲೇ ಸ್ಥಿರಗೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ. ಯಾಕೆಂದರೆ ಇದು ಯೂನಿಲಿವರ್‌ಗೆ ಬಹಳ ಮುಖ್ಯವಾದ ದೇಶವಾಗಿದೆ. ಪರಿಸ್ಥಿತಿಯು ಸಹಜವಾದ ತಕ್ಷಣ ನಾವು ಮತ್ತೆ ಕಾರ್ಯಾಚರಣೆಗೆ ಮರಳುತ್ತೇವೆ. ಯಾಕೆಂದರೆ ಹೆಚ್ಯುಎಲ್ ನಲ್ಲಿರುವಂತೆ ನಾವು ಬಾಂಗ್ಲಾದೇಶದಲ್ಲಿ ಸಾಕಷ್ಟು ದೈನಂದಿನ ಸರಕು ಮತ್ತು ಅಗತ್ಯ ವಸ್ತುಗಳನ್ನು ಮಾರಾಟ ಮಾಡುತ್ತೇವೆ. ಆದ್ದರಿಂದ ನಾವು ಎಷ್ಟು ಬೇಗನೆ ಕಾರ್ಯಾಚರಣೆಗೆ ಹಿಂತಿರುಗಬಹುದು ಅಷ್ಟು ಶೀಘ್ರದಲ್ಲೇ ನಾವು ಮತ್ತೆ ಪೂರೈಕೆಯನ್ನು ಪ್ರಾರಂಭಿಸಬಹುದು. ಇದು ಗ್ರಾಹಕರಿಗೆ ಸಹ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.

Bangladesh Unrest
Bangladesh Unrest


ಗಣನೀಯ ಆದಾಯ

ಮಾರಿಕೊದ ವ್ಯವಸ್ಥಾಪಕ ನಿರ್ದೇಶಕ ಸೌಗತಾ ಗುಪ್ತೋ ಅವರು ಪ್ರತಿಕ್ರಿಯಿಸಿ, ಅಂತಾರಾಷ್ಟ್ರೀಯ ಆದಾಯದ ಶೇ. 44ರಷ್ಟು ಬಾಂಗ್ಲಾದೇಶದಿಂದ ಬರುತ್ತದೆ. ಬಾಂಗ್ಲಾದೇಶದ ವ್ಯವಹಾರವು ವಿಶಾಲ ಮತ್ತು ದೃಢವಾಗಿದೆ. ಪ್ರಸ್ತುತ ಪರಿಸ್ಥಿತಿ ಹಿನ್ನೆಲೆಯಲ್ಲಿ ನಾವು ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಪ್ರಧಾನಿ ಹಸೀನಾ ಬಾಂಗ್ಲಾದೇಶದಿಂದ ಪಲಾಯನ ಮಾಡಿದ ತಕ್ಷಣ ಮಾರಿಕೊ ಆದಾಯ ಶೇಕಡಾ 5ಕ್ಕಿಂತ ಹೆಚ್ಚು ಕುಸಿದಿದೆ.

ತಜ್ಞರು ಏನು ಹೇಳುತ್ತಾರೆ?

ಬಾಂಗ್ಲಾದೇಶವು ಭಾರತಕ್ಕೆ ಪ್ರಮುಖ ವ್ಯಾಪಾರ ಪಾಲುದಾರನಾಗಿದ್ದರೂ, ತೀವ್ರ ರಾಜಕೀಯ ಬಿಕ್ಕಟ್ಟಿನ ಪರಿಣಾಮವು ಭಾರತದ ಒಟ್ಟಾರೆ ವ್ಯಾಪಾರದ ಮೇಲೆ ಸೀಮಿತ ಪರಿಣಾಮವನ್ನು ಮಾತ್ರ ಬೀರುತ್ತದೆ. ಬಾಂಗ್ಲಾದೇಶಕ್ಕೆ ರಫ್ತು ಪ್ರಮಾಣ ಭಾರತದ ಒಟ್ಟು ಸರಕು ರಫ್ತಿನ ಕೇವಲ ಶೇ. 2.5ರಷ್ಟಿದೆ.

ಇದನ್ನೂ ಓದಿ: Bangladesh Unrest: ಶೇಖ್‌ ಹಸೀನಾ ಅವರ ಪಕ್ಷದ ಮುಖಂಡರು, ಕಾರ್ಯಕರ್ತರೇ ಟಾರ್ಗೆಟ್‌; ಒಂದೇ ದಿನ 29 ಜನ ಬಲಿ

ಬಾಂಗ್ಲಾಕ್ಕೆ ರಫ್ತು ಮಾಡುವ ನಿರ್ದಿಷ್ಟ ಉದ್ಯಮ ವಿಭಾಗದಲ್ಲಿ ಹತ್ತಿ ನೂಲು ದೊಡ್ಡ ಪಾಲನ್ನು ಹೊಂದಿದೆ. ಇದರ ಮೇಲೆ ಕೊಂಚ ಪರಿಣಾಮ ಉಂಟಾಗಬಹುದು. ಮತ್ತೊಂದೆಡೆ ಬಾಂಗ್ಲಾದೇಶಕ್ಕೆ ಈ ಹಿಂದೆ ರಫ್ತು ಮಾರುಕಟ್ಟೆಯನ್ನು ಕಳೆದುಕೊಂಡಿದ್ದ ಭಾರತೀಯ ಆರ್‌ಎಂಜಿಗೆ ಇದು ಅವಕಾಶವಾಗಿದೆ.

ಭಾರತೀಯ ಉತ್ಪಾದನೆ ಮತ್ತು ಮೂಲಸೌಕರ್ಯ ಕಂಪನಿಗಳ ವ್ಯಾಪಾರ ಅಥವಾ ಯೋಜನಾ ಕಾರ್ಯಾಚರಣೆಗಳಲ್ಲಿ ಕೊಂಚ ಅಡ್ಡಿ ಮತ್ತು ಅನಿಶ್ಚಿತತೆ ಉಂಟಾಗಬಹುದು. ಮುಖ್ಯವಾಗಿ ಹೊಸದಾಗಿ ಹೂಡಿಕೆ ಮಾಡಲು ನಿರ್ಧರಿಸುವ ಭಾರತೀಯ ಕಂಪನಿಗಳು ಹೂಡಿಕೆಗಳನ್ನು ಮುಂದೂಡುವ ಅಥವಾ ವಿಳಂಬಗೊಳಿಸುವ ಸಾಧ್ಯತೆ ಇದೆ ಎನ್ನುತ್ತಾರೆ ಅಕ್ಯೂಟ್ ರೇಟಿಂಗ್ಸ್ ಆಂಡ್ ರಿಸರ್ಚ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಮತ್ತು ಮುಖ್ಯಸ್ಥ ಸುಮನ್ ಚೌಧರಿ.

Continue Reading

Latest

Viral News: ಚಹಾ ಮಾರಾಟದಿಂದ ಇವರಿಗೆ ಪ್ರತಿ ತಿಂಗಳು 2 ಲಕ್ಷ ರೂ. ಆದಾಯ!

Viral News: ಚಹಾ ಎಂದರೆ ಬಹಳ ಇಷ್ಟಪಡುವಂತಹ ಸ್ಥಳವಾದ ಮಹಾರಾಷ್ಟ್ರದ ಧಾರಾಶಿವ್‌ನ ಸ್ಥಳೀಯ ಚಹಾ ಮಾರಾಟಗಾರರೊಬ್ಬರು ತಮ್ಮ ವಿಶಿಷ್ಟ ವ್ಯವಹಾರದಿಂದಾಗಿ ಹೆಚ್ಚು ಗಮನ ಸೆಳೆದಿದ್ದಾರೆ. ತೇರ್ ಗ್ರಾಮದ ನಿವಾಸಿ ಮಹಾದೇವ್ ನಾನಾ ಮಾಲಿ, ಚಹಾ ಮಾರಾಟಕ್ಕೆ ವಿಶಿಷ್ಟ ವಿಧಾನವನ್ನು ಬಳಸಿಕೊಂಡಿದ್ದಾರೆ. ಅದು ಹೆಚ್ಚು ಲಾಭದಾಯಕವೆಂದು ಸಾಬೀತುಪಡಿಸಿದ್ದಾರೆ. ಫೋನ್ ಮೂಲಕ ಆರ್ಡರ್‌ಗಳನ್ನು ತೆಗೆದುಕೊಂಡು ಚಹಾ ಪೂರೈಸುತ್ತ ಭಾರಿ ಲಾಭ ಗಳಿಸುತ್ತಿದ್ದಾರೆ.

VISTARANEWS.COM


on

Viral News
Koo


ಚಹಾ ಹೆಚ್ಚಿನವರಿಗೆ ಪ್ರಿಯವಾದ ಪಾನೀಯವಾಗಿದೆ. ಹೆಚ್ಚಿನ ಜನರು ತಮ್ಮ ದಿನವನ್ನು ಚಹಾ ಕುಡಿಯುವ ಮೂಲಕ ಪ್ರಾರಂಭಿಸುತ್ತಾರೆ. ಕೆಲವರು ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಚಹಾ ಕುಡಿದರೆ ಇಡೀ ದಿನ ಲವಲವಿಕೆಯಿಂದ ಕೆಲಸ ಮಾಡುತ್ತಾರೆ. ಇದೇ ಚಹಾವನ್ನು ಬಂಡವಾಳವಾಗಿಟ್ಟುಕೊಂಡು ಮಹಾರಾಷ್ಟ್ರದಲ್ಲಿ ಒಬ್ಬ ಚಹಾ ಮಾರಾಟಗಾರರೊಬ್ಬರು ತಿಂಗಳಿಗೆ ಲಕ್ಷಗಟ್ಟಲೆ ಹಣ ಸಂಪಾದಿಸುತ್ತಿದ್ದಾರೆ. ಒಂದು ಕಪ್ ಚಹಾಕ್ಕೆ 5-10 ರೂ. ಪಡೆದು ಅದು ಹೇಗೆ ಆತ ಲಕ್ಷಾಗಟ್ಟಲೆ ಸಂಪಾದಿಸುತ್ತಾನೆ ಎಂದು ನಿಮಗೆ ಕೇಳಿ ಆಶ್ಚರ್ಯವಾಗಬಹುದು. ಅದರ ಬಗ್ಗೆ ಮಾಹಿತಿ ಈಗ ವೈರಲ್‌ (Viral News) ಆಗಿದೆ.

ಚಹಾ ಎಂದರೆ ಬಹಳ ಇಷ್ಟಪಡುವಂತಹ ಸ್ಥಳವಾದ ಮಹಾರಾಷ್ಟ್ರದ ಧಾರಾಶಿವ್‌ನ ಸ್ಥಳೀಯ ಚಹಾ ಮಾರಾಟಗಾರರೊಬ್ಬರು ತಮ್ಮ ವಿಶಿಷ್ಟ ವ್ಯವಹಾರದಿಂದಾಗಿ ಹೆಚ್ಚು ಗಮನ ಸೆಳೆದಿದ್ದಾರೆ. ತೇರ್ ಗ್ರಾಮದ ನಿವಾಸಿ ಮಹಾದೇವ್ ನಾನಾ ಮಾಲಿ ಅವರು ಚಹಾ ಮಾರಾಟಕ್ಕೆ ವಿಶಿಷ್ಟ ವಿಧಾನವನ್ನು ಬಳಸಿಕೊಂಡಿದ್ದಾರೆ. ಅದು ಹೆಚ್ಚು ಲಾಭದಾಯಕವೆಂದು ಸಾಬೀತುಪಡಿಸಿದ್ದಾರೆ. ಕೇವಲ ಮೂರನೇ ಕ್ಲಾಸ್‍ವರೆಗೆ ಓದಿದ್ದ ಮಹಾದೇವ್ ಮಾಲಿ ಕಳೆದ 20 ವರ್ಷಗಳಿಂದ ಚಹಾ ಮಾರಾಟ ಮಾಡುತ್ತಿದ್ದಾರೆ. ಫೋನ್ ಮೂಲಕ ಆರ್ಡರ್‌ಗಳನ್ನು ತೆಗೆದುಕೊಳ್ಳುವ ಹೊಸ ವಿಧಾನದ ಮೂಲಕ ಅವರ ಈ ಚಹಾ ಮಾರಾಟ ವ್ಯವಹಾರವು ತುಂಬಾ ಲಾಭದಾಯಕವಾಗಿ ನಡೆಯುತ್ತಿದೆ. ಬಿಸಿಲು ಮಳೆ ಎನ್ನದೇ ಮಾಲಿ ತಮಗೆ ಬಂದ ಆರ್ಡರ್ ಗಳನ್ನು ಸ್ವೀಕರಿಸಿ ಸಮಯಕ್ಕೆ ಸರಿಯಾಗಿ ಚಹಾವನ್ನು ತಲುಪಿಸುತ್ತಾರೆ.

ಈ ಪ್ರದೇಶದ ಸುಮಾರು 15,000 ಗ್ರಾಮಸ್ಥರ ಚಹಾ ಬೇಡಿಕೆಯನ್ನು ಪೂರೈಸಲು, ಮಾಲಿಗೆ ಪ್ರತಿದಿನ 50ರಿಂದ 60 ಲೀಟರ್ ಹಾಲು ಬೇಕಾಗುತ್ತದೆ. ಅವರು ತಮ್ಮ ಪತ್ನಿ ಮತ್ತು ಇಬ್ಬರು ಪುತ್ರರ ಸಹಾಯದಿಂದ ಈ ಕೆಲಸ ಮಾಡುತ್ತಿದ್ದಾರೆ ಮತ್ತು 2ರಿಂದ 3 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಟೆರ್ ಮತ್ತು ನೆರೆಯ ಹಳ್ಳಿಗಳಿಗೆ ಸೇವೆ ಸಲ್ಲಿಸುತ್ತಾರೆ. ಪ್ರತಿ ಕಪ್ ಚಹಾದ ಬೆಲೆ ಕೇವಲ 5 ರೂ. ಮಾತ್ರ.

ಇದನ್ನೂ ಓದಿ: ʼಮೇಡಂ ನನಗೆ ಪಿರಿಯಡ್ಸ್‌ʼ ಎಂದರೂ ಬಿಡದೆ ವಿದ್ಯಾರ್ಥಿನಿಯನ್ನು ನಗ್ನಗೊಳಿಸಿದ ಶಿಕ್ಷಕಿ!

ಮಾಲಿಯು ಈ ವ್ಯವಹಾರದಲ್ಲಿ ಪ್ರತಿದಿನ 1,500ರಿಂದ 2,000 ಕಪ್ ಚಹಾದವರೆಗೆ ಮಾರಾಟ ಮಾಡುತ್ತಾರೆ. ಇದರಿಂದ ಅವರ ದಿನದ ಗಳಿಕೆ ಸುಮಾರು 7,000ರಿಂದ 10,000 ರೂ. ಆಗಿದೆ. ಈ ಆದಾಯದಿಂದ ಮಾಲಿ ಮತ್ತು ಅವರ ಕುಟುಂಬ ಹಣಕಾಸಿನ ಸಮಸ್ಯೆಯಿಲ್ಲದೇ ಸುಖಕರವಾದ ಜೀವನ ನಡೆಸುತ್ತಿದೆ. ಪ್ರತಿ ತಿಂಗಳು ಅವರು ಚಹಾ ಮಾರಾಟದಿಂದ ಸುಮಾರು 2 ಲಕ್ಷ ರೂ. ಗಳಿಸುತ್ತಾರೆ.

Continue Reading
Advertisement
Shobha Karandlaje
ದೇಶ11 mins ago

Shobha Karandlaje: ತಮಿಳಿಗರಿಗೆ ಅವಮಾನ- ಕ್ಷಮೆಯಾಚಿಸಿದರೆ ಕೇಸ್‌ ರದ್ದು; ಹೈಕೋರ್ಟ್‌ನಲ್ಲಿ ಎಜಿ ಮಾಹಿತಿ

Dog bite
ಬೆಂಗಳೂರು12 mins ago

Dog Bite : ಬೀದಿ ನಾಯಿಗಳ ಕಾಟಕ್ಕೆ ಮನೆ ಮಾರಾಟಕ್ಕೆ ಮುಂದಾದ ಜನ್ರು!

International Cat Day
ಪರಿಸರ28 mins ago

International Cat Day: ಇಂದು ಬೆಕ್ಕಿನ ದಿನ; ಇದರ ಆಯುಷ್ಯ, ನಿದ್ದೆ, ಶೃಂಗಾರ ಇತ್ಯಾದಿ ಸಂಗತಿಗಳು ಕುತೂಹಲಕರ!

Gautam Gambhir
ಕ್ರೀಡೆ40 mins ago

Gautam Gambhir: 27 ವರ್ಷದ ಬಳಿಕ ಲಂಕಾ ವಿರುದ್ಧ ಸೋಲು; ಗಂಭೀರ್​ ಫುಲ್​ ಟ್ರೋಲ್​

rave party telugu actress hema
ಕ್ರೈಂ44 mins ago

Rave Party: ರೇವ್‌ ಪಾರ್ಟಿಯಲ್ಲಿ ಭಾಗವಹಿಸಿದ 85 ಜನರ ಮೇಲೆ ಚಾರ್ಜ್‌ಶೀಟ್, ಸುಳ್ಳು ಹೇಳಿದ ನಟಿ ಹೇಮಾ ಮೇಲೂ ಚಾರ್ಜ್

Divorce Case
Latest49 mins ago

Divorce Case: ಪ್ರತಿ ಬಾರಿ ʼಸರಸʼ ಆಡಿದಾಗಲೂ ಕಾಸು ಕೊಡಲೇಬೇಕು! ಹೆಂಡತಿಯ ಡಿಮ್ಯಾಂಡ್‌ ಕೇಳಿ ಡಿವೋರ್ಸ್‌ ಪಡೆದ ಗಂಡ!

Maravoor bridge in danger Vehicular traffic suspended
ದಕ್ಷಿಣ ಕನ್ನಡ53 mins ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Naga Chaitanya Sobhita Love Story REVEALED age gap
ಟಾಲಿವುಡ್58 mins ago

Naga Chaitanya: ನಾಗ ಚೈತನ್ಯ- ಶೋಭಿತಾ ಲವ್ ಸ್ಟೋರಿ ಶುರುವಾಗಿದ್ದು ಹೇಗೆ? ಇಬ್ಬರ ನಡುವಿನ ಏಜ್ ಗ್ಯಾಪ್ ಎಷ್ಟು?

Murder Case
Latest1 hour ago

Murder Case: ಒಂದೇ ಹುಡುಗಿಯನ್ನು ಪ್ರೀತಿಸಿದ ಸಹೋದರರು; ಈ ತ್ರಿಕೋನ ಪ್ರೇಮ ಕಥೆ ಕೊಲೆಯಲ್ಲಿ ಅಂತ್ಯ!

vinesh phogat
ದೇಶ1 hour ago

Vinesh Phogat: ವಿನೇಶ್‌ ಪೋಗಟ್‌ ಅನರ್ಹತೆ ಬಗ್ಗೆ ಹಗುರವಾಗಿ ಮಾತ್ನಾಡಿದ್ರಾ ಸುಧಾ ಮೂರ್ತಿ?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Wild Animals Attack
ಚಿಕ್ಕಮಗಳೂರು2 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ5 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ1 week ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

ಟ್ರೆಂಡಿಂಗ್‌