ಕಣ್ಣು, ಬಾಯಿಯಿಂದ ರಕ್ತಸ್ರಾವ, ಕುತ್ತಿಗೆ ಮೂಳೆ ತುಂಡು: ಹತ್ಯೆಯಾದ ಟ್ರೈನಿ ವೈದ್ಯೆಯ ಮರಣೋತ್ತರ ಪರೀಕ್ಷಾ ವರದಿಯಲ್ಲಿದೆ ಬೆಚ್ಚಿ ಬೀಳಿಸುವ ಸತ್ಯ - Vistara News

ದೇಶ

ಕಣ್ಣು, ಬಾಯಿಯಿಂದ ರಕ್ತಸ್ರಾವ, ಕುತ್ತಿಗೆ ಮೂಳೆ ತುಂಡು: ಹತ್ಯೆಯಾದ ಟ್ರೈನಿ ವೈದ್ಯೆಯ ಮರಣೋತ್ತರ ಪರೀಕ್ಷಾ ವರದಿಯಲ್ಲಿದೆ ಬೆಚ್ಚಿ ಬೀಳಿಸುವ ಸತ್ಯ

Kolkata Doctor Murder Case: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದಲ್ಲಿ ದೇಶವೇ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, 31 ವರ್ಷದ ಮಹಿಳಾ ಟ್ರೈನಿ ವೈದ್ಯರೊಬ್ಬರ ಮೇಲೆ ಅತ್ಯಾಚಾರ ಎಸಗಿ ಕ್ರೂರವಾಗಿ ಹತ್ಯೆ ನಡೆಸಲಾಗಿದೆ. ಸಂತ್ರಸ್ತೆಯ ಕಣ್ಣು ಮತ್ತು ಬಾಯಿಯಿಂದ ರಕ್ತಸ್ರಾವವಾಗಿತ್ತು. ಮುಖ ಮತ್ತು ಉಗುರುಗಳ ಮೇಲೆ ಗಾಯಗಳಾಗಿವೆ. ಸಂತ್ರಸ್ತೆಯ ಖಾಸಗಿ ಭಾಗಗಳಿಂದಲೂ ರಕ್ತಸ್ರಾವವಾಗಿದೆ. ಮಾತ್ರವಲ್ಲ ಹೊಟ್ಟೆ, ಎಡಗಾಲಿಗೆ ಗಾಯಗಳಾಗಿವೆ. ಕುತ್ತಿಗೆ, ಬಲಗೈ, ಉಂಗುರ ಬೆರಳು ಮತ್ತು ತುಟಿ ಹೀಗೆ ಎಲ್ಲ ಅಂಗಗಳಲ್ಲಿಯೂ ಗಾಯದ ಗುರುತುಗಳಿವೆ ಎಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿದೆ.

VISTARANEWS.COM


on

Kolkata Doctor Murder Case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದಲ್ಲಿ ದೇಶವೇ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, 31 ವರ್ಷದ ಮಹಿಳಾ ಟ್ರೈನಿ ವೈದ್ಯರೊಬ್ಬರ ಮೇಲೆ ಅತ್ಯಾಚಾರ ಎಸಗಿ ಕ್ರೂರವಾಗಿ ಹತ್ಯೆ ನಡೆಸಲಾಗಿದೆ. ಆರ್​ಜಿ ಕರ್ ಸರ್ಕಾರಿ ಆಸ್ಪತ್ರೆ (RG Kar Medical Hospital)ಯಲ್ಲಿನ ಟ್ರೈನಿ ವೈದ್ಯೆಯ ಮೇಲೆ ಈ ದೌರ್ಜನ್ಯ ಎಸಗಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಕೊಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಇದೀಗ ಘಟನೆಗೆ ಸಂಬಂಧಿಸಿದ ಭಯಾನಕ ವಿಚಾರಗಳು ಒಂದೊಂದಾಗಿ ಹೊರ ಬೀಳತೊಡಗಿದೆ (Kolkata Doctor Murder Case).

ಅತ್ಯಾಚಾರಕ್ಕೊಳಗಾಗಿ ಕೊಲೆಯಾದ 31 ವರ್ಷದ ವೈದ್ಯೆಯ ದೇಹದಲ್ಲಿ ಅತೀ ಕ್ರೂರವಾಗಿ ಹಲ್ಲೆ ನಡೆಸಿದ್ದನ್ನು ಸೂಚಿಸುವ ಅನೇಕ ಗಾಯದ ಗುರುತುಗಳಿವೆ ಎನ್ನುವುದನ್ನು ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗಪಡಿಸಿದೆ. ʼʼಸಂತ್ರಸ್ತೆಯ ಕಣ್ಣು ಮತ್ತು ಬಾಯಿಯಿಂದ ರಕ್ತಸ್ರಾವವಾಗಿತ್ತು. ಮುಖ ಮತ್ತು ಉಗುರುಗಳ ಮೇಲೆ ಗಾಯಗಳಾಗಿವೆ. ಸಂತ್ರಸ್ತೆಯ ಖಾಸಗಿ ಭಾಗಗಳಿಂದಲೂ ರಕ್ತಸ್ರಾವವಾಗಿದೆ. ಮಾತ್ರವಲ್ಲ ಹೊಟ್ಟೆ, ಎಡಗಾಲಿಗೆ ಗಾಯಗಳಾಗಿವೆ. ಕುತ್ತಿಗೆ, ಬಲಗೈ, ಉಂಗುರ ಬೆರಳು ಮತ್ತು ತುಟಿ ಹೀಗೆ ಎಲ್ಲ ಅಂಗಗಳಲ್ಲಿಯೂ ಗಾಯದ ಗುರುತುಗಳಿವೆʼʼ ಎಂದು ಮೂಲಗಳು ತಿಳಿಸಿವೆ.

“ಇದು ಖಂಡಿತವಾಗಿಯೂ ಆತ್ಮಹತ್ಯೆಯಲ್ಲ. ಲೈಂಗಿಕ ದೌರ್ಜನ್ಯದ ನಂತರ ಕೊಲೆ ಮಾಡಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಆಕೆಯ ಕುತ್ತಿಗೆಯ ಮೂಳೆ ಕೂಡ ಮುರಿದಿರುವುದು ಕಂಡುಬಂದಿದೆ. ಸಂತ್ರಸ್ತೆಯ ಕತ್ತು ಹಿಸುಕಿ ನಂತರ ಉಸಿರುಗಟ್ಟಿಸಿ ಕೊಲ್ಲಲಾಗಿದೆ. ಶವಪರೀಕ್ಷೆಯ ಸಂಪೂರ್ಣ ವರದಿಗಾಗಿ ನಾವು ಕಾಯುತ್ತಿದ್ದೇವೆ” ಎಂದು ಅವರು ಮಾಹಿತಿ ನೀಡಿದ್ದಾರೆ.

ಟಿಎಂಸಿ ಸರ್ಕಾರದ ವಿರುದ್ಧ ಆಕ್ರೋಶ

ಸದ್ಯ ಈ ಘಟನೆ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ. ಆರೋಪಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಶಿಕ್ಷೆ ನೀಡಬೇಕೆಂದು ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಪಕ್ಷಗಳು ಆಡಳಿತರೂಢ ತೃಣಮೂಲ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕೆಂಡ ಕಾರಿವೆ. ಇನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. “ಸಂತ್ರಸ್ತೆಯ ಕುಟುಂಬದ ಜತೆ ನಾನು ಮಾತನಾಡಿದ್ದು, ಸೂಕ್ತ ಕ್ರಮದ ಭರವಸೆಯನ್ನು ಅವರಿಗೆ ನೀಡಿದ್ದೇನೆ. ಪ್ರಕರಣದ ವಿಚಾರಣೆಯನ್ನು ಫಾಸ್ಟ್‌ಟ್ರ್ಯಾಕ್‌ ನ್ಯಾಯಾಲಯದಲ್ಲಿ ನಡೆಸಲು ನಿರ್ದೇಶನ ನೀಡಿದ್ದೇನೆ. ನಾನು ಮರಣದಂಡನೆ ಪರವಾಗಿ ಇಲ್ಲದಿದ್ದರೂ, ಅಗತ್ಯಬಿದ್ದರೆ ಆರೋಪಿಯನ್ನು ಗಲ್ಲಿಗೇರಿಸಲಾಗುತ್ತದೆ” ಎಂದು ಹೇಳಿದ್ದಾರೆ. ಪ್ರತಿಭಟನೆ ಹೆಸರಲ್ಲಿ ರೋಗಿಗಳನ್ನು ನಿರ್ಲಕ್ಷಿಸಬೇಡಿ ಎಂದೂ ಅವರು ಪ್ರತಿಭಟನಾನಿರತ ವೈದ್ಯರಿಗೆ ಮನವಿ ಮಾಡಿದ್ದಾರೆ.

ಏನಿದು ಘಟನೆ?

ಕೋಲ್ಕತಾದಲ್ಲಿನ ಸರ್ಕಾರಿ ಸ್ವಾಮ್ಯದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಶುಕ್ರವಾರ ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಯಾಗಿದ್ದ ಆಕೆ, ಗುರುವಾರ ರಾತ್ರಿ ತಡವಾಗಿ ಊಟ ಮುಗಿಸಿ ಕ್ಯಾಂಪಸ್‌ನ ಮೂರನೇ ಮಹಡಿಯಲ್ಲಿನ ಸೆಮಿನಾರ್ ಹಾಲ್‌ಗೆ ಓದುವ ಸಲುವಾಗಿ ತೆರಳಿದ್ದರು. ಶುಕ್ರವಾರ ಬೆಳಿಗ್ಗೆ ಅವರ ಶವ ಪತ್ತೆಯಾಗಿತ್ತು.

ಆಸ್ಪತ್ರೆಯ ವೈದ್ಯರೊಬ್ಬರು ಮಾಹಿತಿ ನೀಡಿ, ʼʼಸಂತ್ರಸ್ತೆ ಶುಕ್ರವಾರ ಮುಂಜಾನೆ 2 ಗಂಟೆ ಸುಮಾರಿಗೆ ತಮ್ಮ ಸಹೋದ್ಯೋಗಿಗಳೊಂದಿಗೆ ಊಟ ಮಾಡಿದ್ದಾರೆ. ಬಳಿಕ ಸೆಮಿನಾರ್ ಹಾಲ್‌ಗೆ ತೆರಳಿದ್ದರು. ನಂತರ ಸೆಮಿನಾರ್‌ ಹಾಲ್‌ನಲ್ಲಿ ಅವರ ಶವ ಪತ್ತೆಯಾಗಿತ್ತುʼʼ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Kashmir Encounter: ಕಾಶ್ಮೀರದಲ್ಲಿ ಮುಂದುವರಿದ ಉಗ್ರರ ಅಟ್ಟಹಾಸ; ಇಬ್ಬರು ಯೋಧರು ಹುತಾತ್ಮ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Bomb threat : ಏರ್​ಪೋರ್ಟ್​​ ಬ್ಯಾಗ್ ಚೆಕಿಂಗ್​ ವೇಳೆ ತಮಾಷೆಗೆ ‘ಬಾಂಬ್​ ಇದೆ’ ಅಂದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು!

Bomb threat:

VISTARANEWS.COM


on

Bomb threat
Koo

ಬೆಂಗಳೂರು : ಏರ್​ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಕಾಗಿದ್ದ ವ್ಯಕ್ತಿಯೊಬ್ಬರು ಬ್ಯಾಗೇಜ್ ಚೆಕಿಂಗ್ ವೇಳೆ ತಮಾಷೆಗಾಗಿ ತಮ್ಮ ಬ್ಯಾಗ್​ನಲ್ಲಿ ಬಾಂಬ್​ ಇದೆ (Bomb threat) ಎಂದು ಹೇಳಿ ಜೈಲು ಸೇರುವಂತಾಗಿದೆ. ಕೇರಳದ ಕೊಚ್ಚಿನ್​ ಏರ್​ಪೋರ್ಟ್​​ನಲ್ಲಿ ಈ ಪ್ರಸಂಗ ನಡೆದಿದೆ. ಸೆಕ್ಯುರಿಟಿ ಚೆಕ್​ಇನ್ ಅಧಿಕಾರಿಗಳು ತಮ್ಮ ಬ್ಯಾಗ್ ತಪಾಸಣೆ ಮಾಡುತ್ತಿದ್ದ ವೇಳೆ, ತನ್ನ ಬ್ಯಾಗ್​ನಲ್ಲಿ ಏನೂ ಬಾಂಬ್ ಇಲ್ವಲ್ಲಾ, ಎಂದು ಹೇಳುವ ಮೂಲಕ ತಾನೇ ಅನಾಹುತ ಸೃಷ್ಟಿಸಿಕೊಂಡಿದ್ದಾನೆ.

ಆಗಸ್ಟ್ 11 ರಂದು ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ಸಮಯದಲ್ಲಿ ಹೇಳಿಕೆ ನೀಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ. 42 ವರ್ಷದ ಮನೋಜ್ ಕುಮಾರ್ ಕೊಚ್ಚಿಯಿಂದ ಮುಂಬೈಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಅವರ ಹೇಳಿಕೆ ಕಳವಳಕ್ಕೆ ಕಾರಣವಾಯಿತು. ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (ಬಿಡಿಡಿಎಸ್) ಅವರ ಕ್ಯಾಬಿನ್ ಮತ್ತು ಸಾಮಾನುಗಳನ್ನು ಸಂಪೂರ್ಣವಾಗಿ ಶೋಧಿಸಿತು. ಅನುಮಾನಾಸ್ಪದವಾಗಿ ಏನೂ ಪತ್ತೆಯಾಗದಿದ್ದರೂ, ಕುಮಾರ್ ಅವರನ್ನು ವಿಮಾನದಿಂದ ಇಳಿಸಿ ಕರೆದೊಯ್ದು ವಿಚಾರಣೆಗಾಗಿ ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಮಾನ ಹೊರಟರೂ ಅವರಿಗೆ ಪ್ರಯಾಣ ಮಾಡಲು ಅವಕಾಶ ಕೊಡಲಿಲ್ಲ.!

ಹೆಚ್ಚು ಭದ್ರತೆಗೆ ಒಳಪಡುವ ಪ್ರದೇಶದಲ್ಲಿ ಬಾಂಬ್ ನಂತಹ ಅಪಾಯಕಾರಿ ವಿಷಯದ ಬಗ್ಗೆ ಮಾತನಾಡಬಾರದು ಎಂಬುದಕ್ಕೆ ಇದೊಂದು ಉದಾಹರಣೆ. ಇಂಥ ಮಾತುಗಳನ್ನು ಹೇಳುವುದು ಕಾನೂನುಬಾಹಿರ ಮತ್ತು ಗಂಭೀರ ಅಪರಾಧ. ಭಾರತದಲ್ಲಿ ವಿಮಾನ ಭದ್ರತಾ ಮಾನದಂಡಗಳನ್ನು ನಿಗದಿಪಡಿಸುವ ಜವಾಬ್ದಾರಿಯನ್ನು ಹೊಂದಿರುವ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ ಇಂಥವುಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ. ತಮಾಷೆಯೂ ಗಮನಾರ್ಹ ವಿಳಂಬಕ್ಕೆ ಕಾರಣವಾಗಬಹುದು ಎಂಬ ಕಾರಣಕ್ಕೆ ಅಂಥವರನ್ನು ತಕ್ಷಣವೇ ಬಂಧಿಸುತ್ತಾರೆ.

ಪ್ರಯಾಣ ಮಾಡುವಾಗ ಜತೆಗಿರುವ ಮಗು ಆ ರೀತಿ ಹೇಳಿದರೂ, ಅದು ಇಡೀ ವಿಮಾನ ಹಾರಾಟವನ್ನು ವಿಳಂಬವನ್ನು ಉಂಟುಮಾಡಬಹುದು. ಪ್ರಮುಖವಾಗಿ ವಿಮಾನ ನಿಲ್ದಾಣಗಳಲ್ಲಿ “ಬಾಂಬ್” ಅಥವಾ “ಹೈಜಾಕ್” ನಂತಹ ಪದಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುತ್ತದೆ.

ಸಿಎಸ್ಎಂಟಿಗೆ ಬಾಂಬ್ ಬೆದರಿಕೆ

ಆಗಸ್ಟ್ 9 ರಂದು ಮುಂಬೈ ಪೊಲೀಸರಿಗೆ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್ಎಂಟಿ) ನಲ್ಲಿ ಬಾಂಬ್​ಗಳನ್ನು ಇರಿಸಲಾಗಿದೆ ಎಂದು ಬೆದರಿಕೆ ಕರೆ ಬಂದಿತ್ತು. ಈ ಪ್ರದೇಶವನ್ನು ತ್ವರಿತವಾಗಿ ಶೋಧಿಸಿದ ನಂತರ ಅಧಿಕಾರಿಗಳು ಯಾವುದೇ ಸ್ಫೋಟಕಗಳನ್ನು ಪತ್ತೆ ಮಾಡಿಲರಿಲ್ಲ. ಪೊಲೀಸರು ಕರೆ ಮಾಡಿದವರನ್ನು ಪತ್ತೆಹಚ್ಚುವ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: veg vs non veg : ಮಕ್ಕಳ ಬಾಕ್ಸ್​​ನಲ್ಲಿ ಮಾಂಸಾಹಾರ ಕಳುಹಿಸಬಾರದು; ವಿವಾದ ಸೃಷ್ಟಿಸಿದ ಶಾಲೆಯ ನೋಟಿಸ್​​

“ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್​ನಲ್ಲಿ (ಸಿಎಸ್ಎಂಟಿ) ಆರ್ಡಿಎಕ್ಸ್ ಇರಿಸಿರುವ ಬಗ್ಗೆ ಜಿಆರ್​​ಪಿ ನಿಯಂತ್ರಣ ಕೊಠಡಿಗೆ ಕರೆ ಬಂದಿದೆ. ಸಿಎಸ್ಎಂಟಿಯಲ್ಲಿ ಆರ್​ಡಿಎಕ್ಸ್​ ಇರಿಸಲಾಗಿದೆ ಎಂದು ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿದ್ದಾರೆ ಎಂದು ಮುಂಬೈ ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಕರೆ ಸ್ವೀಕರಿಸಿದ ನಂತರ ರೈಲ್ವೆ ಪೊಲೀಸರು ಸ್ಥಳೀಯ ಪೊಲೀಸರು ಮತ್ತು ಬಾಂಬ್ ಸ್ಕಾಡ್​ಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ.

Continue Reading

ಪ್ರಮುಖ ಸುದ್ದಿ

veg vs non veg : ಮಕ್ಕಳ ಬಾಕ್ಸ್​​ನಲ್ಲಿ ಮಾಂಸಾಹಾರ ಕಳುಹಿಸಬಾರದು; ವಿವಾದ ಸೃಷ್ಟಿಸಿದ ಶಾಲೆಯ ನೋಟಿಸ್​​

veg vs non veg : ಘಟನೆ ನಡೆದಿರುವುದು ನೋಯ್ಡಾದ ಖಾಸಗಿ ಶಾಲೆಯೊಂದರಲ್ಲಿ, ಮಕ್ಕಳ ಟಿಫಿನ್​ ಬಾಕ್ಸ್​ಗಳಲ್ಲಿ ಮಾಂಸಾಹಾರಿ ಆಹಾರವನ್ನು ಪ್ಯಾಕ್ ಮಾಡಬೇಡಿ ಎಂದು ವಾಟ್ಸಾಪ್ ಮೂಲಕ ಪೋಷಕರಿಗೆ ಸುತ್ತೋಲೆ ಕಳುಹಿಸಲಾಗಿದೆ. ನೋಯ್ಡಾದ ಸೆಕ್ಟರ್ 132 ರಲ್ಲಿರುವ ದೆಹಲಿ ಪಬ್ಲಿಕ್ ಶಾಲೆಯ (ಡಿಪಿಎಸ್) ಪ್ರಾಂಶುಪಾಲರು ಈ ಸುತ್ತೋಲೆ ಹೊರಡಿಸಿದ್ದಾರೆ. ಇದು ಬಿಸಿ ಚರ್ಚೆ ಕಾರಣವಾಗಿದ್ದು, ವಿವಾದ ಭುಗಿಲೆದ್ದ ನಂತರ ಇದು ಕೇವಲ “ವಿನಂತಿ” ಎಂದು ಶಾಲಾ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

VISTARANEWS.COM


on

veg vs non veg
Koo

ಬೆಂಗಳೂರು : ಮಾಂಸಾಹಾರ ಶ್ರೇಷ್ಠವೇ, ಸಸ್ಯಾಹಾರ ಉತ್ತಮವೇ (veg vs non veg) ಎಂಬ ಚರ್ಚೆ ಭಾರತೀಯರಲ್ಲಿ ಮಾಮೂಲು. ಇದಕ್ಕೆ ಕಾರಣ ಇಲ್ಲಿನ ವೈವಿಧ್ಯಮಯ ಆಹಾರ ಶೈಲಿ. ಅಪ್ಪಟ ಸಸ್ಯಾಹಾರಿಗಳು ಇದ್ದಷ್ಟೇ. ನಾನ್​ವೆಜ್​ ಇಲ್ಲದೇ ಊಟ ಸೇರುವುದೇ ಇಲ್ಲ ಎಂದು ಹೇಳುವ ಮಂದಿಯೂ ಇದ್ದಾರೆ. ಇಲ್ಲಿ ಯಾವುದೇ ಉತ್ತಮ ಎಂಬ ಚರ್ಚೆಗೆ ತುದಿ, ಮೊದಲಿಲ್ಲ. ಹೀಗಾಗಿ ಈ ಕುರಿತ ಸಣ್ಣ ಹೇಳಿಕೆಯೂ ವಿವಾದಕ್ಕೆ ಕಾರಣವಾಗುತ್ತವೆ. ಎಲ್ಲವೂ ವಾದಕ್ಕೆ ಸೀಮಿತವಾಗುವುದೇ ಹೊರತು ಅದಕ್ಕೊಂದು ತಾರ್ಕಿಕ ಅಂತ್ಯ ತರಲು ಸಾಧ್ಯವೇ ಇಲ್ಲ. ಅಂತೆಯೇ ಖಾಸಗಿ ಶಾಲೆಯೊಂದರ ಮುಖ್ಯಸ್ಥರು ಮಕ್ಕಳ ಬುತ್ತಿಯಲ್ಲಿ ಮಾಂಸಾಹಾರದ ಅಡುಗೆಯನ್ನು ಕಳುಹಿಸಬಾರದು ಎಂದು ಪೋಷಕರಿಗೆ ಕಳುಹಿಸಿದ ಸಂದೇಶವೊಂದು ವಿವಾದಕ್ಕೆ ಕಾರಣವಾಗಿದೆ.

ಘಟನೆ ನಡೆದಿರುವುದು ನೋಯ್ಡಾದ ಖಾಸಗಿ ಶಾಲೆಯೊಂದರಲ್ಲಿ, ಮಕ್ಕಳ ಟಿಫಿನ್​ ಬಾಕ್ಸ್​ಗಳಲ್ಲಿ ಮಾಂಸಾಹಾರಿ ಆಹಾರವನ್ನು ಪ್ಯಾಕ್ ಮಾಡಬೇಡಿ ಎಂದು ವಾಟ್ಸಾಪ್ ಮೂಲಕ ಪೋಷಕರಿಗೆ ಸುತ್ತೋಲೆ ಕಳುಹಿಸಲಾಗಿದೆ. ನೋಯ್ಡಾದ ಸೆಕ್ಟರ್ 132 ರಲ್ಲಿರುವ ದೆಹಲಿ ಪಬ್ಲಿಕ್ ಶಾಲೆಯ (ಡಿಪಿಎಸ್) ಪ್ರಾಂಶುಪಾಲರು ಈ ಸುತ್ತೋಲೆ ಹೊರಡಿಸಿದ್ದಾರೆ. ಇದು ಬಿಸಿ ಚರ್ಚೆ ಕಾರಣವಾಗಿದ್ದು, ವಿವಾದ ಭುಗಿಲೆದ್ದ ನಂತರ ಇದು ಕೇವಲ “ವಿನಂತಿ” ಎಂದು ಶಾಲಾ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಸುತ್ತೋಲೆಯು ಬಗ್ಗೆ ಶಾಲೆಯ ಆಡಳಿತ ಮಂಡಳಿ ಎರಡು ಕಾರಣಗಳನ್ನು ಉಲ್ಲೇಖಿಸಿದೆ. ಆರೋಗ್ಯ ಮತ್ತು ಸುರಕ್ಷತೆ ಪ್ರಾಥಮಿಕ ಕಾಳಜಿ ಎಂದು ಹೇಳಿದೆ. ಮಧ್ಯಾಹ್ನದ ಊಟಕ್ಕಾಗಿ ಬೆಳಗ್ಗೆ ತಯಾರಿಸಿದ ಮಾಂಸಾಹಾರವನ್ನು ಕೊಟ್ಟರೆ ಅದು ಹಾಳಾಗಬಹುದು. ಅದು ಆರೋಗ್ಯಕ್ಕೆ ಅಪಾಯವಾಗಬಹುದು ಎಂದು ಹೇಳಿದೆ. ಅದೇ ರಿತಿ ಎಲ್ಲರನ್ನೂ ಒಳಗೊಳ್ಳುವಿಕೆ ಮತ್ತು ಗೌರವ”ದ ಮಹತ್ವ ಎಂದು ಹೇಳಿದೆ. ಪ್ರತಿಯೊಬ್ಬರೂ ಆರಾಮದಾಯಕ ವಾತಾವರಣವನ್ನು ಒದಗಿಸುವತ್ತ ಗಮನ ಹರಿಸಲಾಗಿದೆ. ಇದರಿಂದಾಗಿ ಎಲ್ಲಾ ವಿದ್ಯಾರ್ಥಿಗಳು ತಮ್ಮ ಆಹಾರ ಆದ್ಯತೆಗಳನ್ನು ಲೆಕ್ಕಿಸದೆ ಒಟ್ಟಿಗೆ ಕುಳಿತು ತಮ್ಮ ಊಟ ತಿನ್ನಲು ಸಾಧ್ಯ ಎಂದು ಹೇಳಲಾಗಿದೆ.

ಇದನ್ನೂ ಓದಿ: Claudia Mancinelli : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಕಂಡ ಈ ಸುಂದರಿ ಜಿಮ್ನಾಸ್ಟಿಕ್​ ಕೋಚ್​​ ಈಗ ಇಂಟರ್ನೆಟ್​ ಸೆನ್ಷೇಷನ್​

ಈ ಸುತ್ತೋಲೆಯು ಪೋಷಕರಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ವರದಿಗಳ ಪ್ರಕಾರ, ಕೆಲವರು ಸಾಂಸ್ಕೃತಿಕ ಮತ್ತು ಆರೋಗ್ಯ ಪರಿಗಣನೆಗಳನ್ನು ಉಲ್ಲೇಖಿಸಿ ಇದರ ಪರವಾಗಿದ್ದಾರೆ, ಇತರರು ಇದು ತಮ್ಮ ಸ್ವಾತಂತ್ರ್ಯವನ್ನು ಉಲ್ಲಂಘಿಸಲಾಗಿದೆ ಎಂದು ವಾದಿಸಿದ್ದಾರೆ.

Continue Reading

ದೇಶ

Hindenburg: ಹಿಂಡನ್‌ಬರ್ಗ್‌ ಸ್ಫೋಟಕ ವರದಿ: ಆರೋಪ ತಳ್ಳಿ ಹಾಕಿದ ಅದಾನಿ ಗ್ರೂಪ್‌

Hindenburg: ಶನಿವಾರ ರಾತ್ರಿ ಈ ಕುರಿತು 106 ಪುಟಗಳ ವರದಿ ಬಿಡುಗಡೆ ಮಾಡಿರುವ ಹಿಂಡನ್ಬರ್ಗ್‌, ಅದಾನಿಯ ಬೇನಾಮಿ ಕಂಪೆನಿಗಳಲ್ಲಿ ತಾವೇ ಷೇರುಗಳನ್ನು ಹೊಂದಿರುವ ಕಾರಣಕ್ಕೆ ಸೆಬಿ ಮುಖ್ಯಸ್ಥೆಯಾಗಿರುವ ಮಾಧವಿ ಬುಚ್, ಅದಾನಿ ಗ್ರೂಪ್ ವಿರುದ್ಧದ ಷೇರು ಅವ್ಯವಹಾರ ಕುರಿತು ಸರಿಯಾಗಿ ತನಿಖೆ ಮಾಡಿಲ್ಲ ಎಂದು ಆಪಾದಿಸಿದೆ.

VISTARANEWS.COM


on

Hindenburg
Koo

ನವದೆಹಲಿ: ವಿದೇಶದಲ್ಲಿರುವ ಗೌತಮ್‌ ಅದಾನಿ (Gautam Adani) ನೇತೃತ್ವದ ಅದಾನಿ ಗ್ರೂಪ್‌ ಕಂಪನಿಗಳಲ್ಲಿ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ (SEBI) ಮುಖ್ಯಸ್ಥೆ ಮಾಧಬಿ ಪುರಿ ಬುಚ್‌ ಅವರ ಪಾಲಿದೆ ಎಂದು ಸ್ಫೋಟಕ ವರದಿ ಬಹಿರಂಗಗೊಂಡಿರುವ ಬೆನ್ನಲ್ಲೇ ಕಂಪನಿಗೆ ಪ್ರತಿಕ್ರಿಯಿಸಿದೆ. ಅದಾನಿ ಗ್ರೂಪ್‌ ಅಮೆರಿಕದ ಶಾರ್ಟ್‌ಸೆಲ್ಲರ್ ಸಂಸ್ಥೆ ಹಿಂಡನ್‌ಬರ್ಗ್‌(Hindenburg) ರಿಸರ್ಚ್‌ ವರದಿಯನ್ನು ತಳ್ಳಿ ಹಾಕಿದೆ.

ಶನಿವಾರ ರಾತ್ರಿ ಈ ಕುರಿತು 106 ಪುಟಗಳ ವರದಿ ಬಿಡುಗಡೆ ಮಾಡಿರುವ ಹಿಂಡನ್ಬರ್ಗ್‌, ಅದಾನಿಯ ಬೇನಾಮಿ ಕಂಪೆನಿಗಳಲ್ಲಿ ತಾವೇ ಷೇರುಗಳನ್ನು ಹೊಂದಿರುವ ಕಾರಣಕ್ಕೆ ಸೆಬಿ ಮುಖ್ಯಸ್ಥೆಯಾಗಿರುವ ಮಾಧವಿ ಬುಚ್, ಅದಾನಿ ಗ್ರೂಪ್ ವಿರುದ್ಧದ ಷೇರು ಅವ್ಯವಹಾರ ಕುರಿತು ಸರಿಯಾಗಿ ತನಿಖೆ ಮಾಡಿಲ್ಲ ಎಂದು ಆಪಾದಿಸಿದೆ. ಮಾಧವಿ ಬುಚ್ ಮತ್ತು ಅವರ ಪತಿ ಬರ್ಮುಡಾ ಮತ್ತು ಮಾರಿಷಸ್ನಲ್ಲಿರುವ ನಕಲಿ ಕಂಪೆನಿಗಳಲ್ಲಿ ಹೂಡಿಕೆಗಳನ್ನು ಹೊಂದಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿತ್ತು.

ಈ ಬಗ್ಗೆ ಅದಾನಿ ಗ್ರೂಪ್‌ ಪ್ರಕಟಣೆ ಹೊರಡಿಸಿದ್ದು, ಸಾಗರೋತ್ತರದ ವ್ಯವಹಾರಗಳು ಸಂಪೂರ್ಣವಾಗಿ ಪಾರದರ್ಶಕವಾಗಿದೆ. ನಾವು ಅದಾನಿ ಗ್ರೂಪ್ ವಿರುದ್ಧದ ಈ ಆರೋಪಗಳನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ, ಇವುಗಳನ್ನು ಸಂಪೂರ್ಣವಾಗಿ ತನಿಖೆ ಮಾಡಲಾಗಿದೆ, ಆಧಾರರಹಿತವೆಂದು ಸಾಬೀತುಪಡಿಸಲಾಗಿದೆ ಮತ್ತು ಜನವರಿ 2024 ರಲ್ಲಿ ಗೌರವಾನ್ವಿತ ಸುಪ್ರೀಂ ಕೋರ್ಟ್ ಈಗಾಗಲೇ ವಜಾಗೊಳಿಸಿದೆ ಎಂದು ಅದಾನಿ ಗ್ರೂಪ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

2023ರ ಹಿಂಡನ್‌ಬರ್ಗ್‌ ವರದಿಯಲ್ಲಿ ಏನಿತ್ತು?

ಗೌತಮ್‌ ಅದಾನಿ ನೇತೃತ್ವದ ಅದಾನಿ ಗ್ರೂಪ್‌ ಅಕ್ರಮ ಎಸಗಿದೆ ಎಂದು ಅಮೆರಿಕದ ಹಿಂಡನ್‌ಬರ್ಗ್‌ ಸಂಸ್ಥೆಯು 2023ರ ಜನವರಿಯಲ್ಲಿ ಪ್ರಕಟಿಸಿದ ವರದಿಯು ದೇಶದಲ್ಲಿ ವ್ಯಾಪಕ ಚರ್ಚೆ ಹುಟ್ಟು ಹಾಕಿತ್ತು. “ಹೂಡಿಕೆದಾರರಿಗೆ ಅದಾನಿ ಗ್ರೂಪ್‌ ವಂಚನೆ ಮಾಡದೆ. ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್‌ ಷೇರು ಮೌಲ್ಯಗಳನ್ನು ಹೆಚ್ಚು ತೋರಿಸಿರುವುದು ವಂಚನೆಯಾಗಿದೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದಾದ ಬಳಿಕ ಅದಾನಿ ಗ್ರೂಪ್‌ ಷೇರು ಮೌಲ್ಯವು ದಿಢೀರನೆ ಕುಸಿದು ಭಾರಿ ನಷ್ಟವಾಗಿತ್ತು. ಅಲ್ಲದೆ ಅದಾನಿ ಗ್ರೂಪ್‌ ದಿವಾಳಿಯಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು.

ಹಿಂಡನ್‌ಬರ್ಗ್‌ ವರದಿ ಕುರಿತು ತನಿಖೆಯಾಗಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಹಲವರು ಮೊರೆ ಹೋಗಿದ್ದರು. ಅಲ್ಲದೆ ಅದಾನಿ ಗ್ರೂಪ್‌ ಅಕ್ರಮ ಪತ್ತೆಹಚ್ಚುವಲ್ಲಿ ಸೆಬಿ ವಿಫಲವಾಗಿದೆ. ಹಾಗಾಗಿ ತನಿಖೆಗೆ ಎಸ್‌ಐಟಿ ರಚಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ಹಾಗಾಗಿ ಸರ್ವೋಚ್ಚ ನ್ಯಾಯಾಲಯವು 2023ರ ಮಾರ್ಚ್‌ನಲ್ಲಿ ಸೆಬಿ ತನಿಖೆ ಮೇಲೆ ನಿಗಾ ಇರಿಸಲು, ತನಿಖೆಯಲ್ಲಿ ದೋಷ ಪತ್ತೆಹಚ್ಚಲು ಆರು ಸದಸ್ಯರ ತನಿಖಾ ಸಮಿತಿ ರಚಿಸಿತ್ತು. ಇದಾದ ಎರಡು ತಿಂಗಳ ಬಳಿಕ ಸೆಬಿಯು ಸುಪ್ರೀಂ ಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಿತ್ತು. “ಅದಾನಿ ಗ್ರೂಪ್‌ ವಂಚನೆ ಮಾಡಿದೆ ಎಂಬುದನ್ನು ಸಾಬೀತುಪಡಿಸಲು ಈ ಹಂತದಲ್ಲಿ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ” ಎಂದು ಉಲ್ಲೇಖಿಸಿತ್ತು.

ಅದಾನಿ ಗ್ರೂಪ್‌, ವಿದೇಶಗಳಲ್ಲಿ ನಕಲಿ ಕಂಪನಿಗಳ ಮೂಲಕ ತನ್ನ ಕಂಪನಿಗಳ ಷೇರು ದರವನ್ನು ಕೃತಕವಾಗಿ ಏರಿಸಿದೆ ಎಂದು ಅಮೆರಿಕ ಮೂಲದ ಶಾರ್ಟ್‌ ಸೆಲ್ಲರ್ ಹಿಂಡೆನ್‌ ಬರ್ಗ್‌ ತನ್ನ ವರದಿಯಲ್ಲಿ ಆರೋಪಿಸಿತ್ತು. ಆದರೆ ಅದಾನಿ ಗ್ರೂಪ್‌ ಮಾರುಕಟ್ಟೆ ನಿಯಮಗಳನ್ನು ಉಲ್ಲಂಘಿಸಿರುವುದು ಹಾಗೂ ಮಾರುಕಟ್ಟೆ ನಿಯಂತ್ರಜ ಸೆಬಿ ಅದನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿಲ್ಲ ಎಂದು ಸಮಿತಿಯ ವರದಿ ತಿಳಿಸಿದೆ.

ಗೌತಮ್‌ ಅದಾನಿ-ಹಿಂಡನ್‌ಬರ್ಗ್‌ ವರದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಬಿ ನಡೆಸುತ್ತಿರುವ ತನಿಖೆಯ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿತ್ತು. “ಸೆಬಿಯು ತನಿಖೆ ಹಾಗೂ ನಿಯಂತ್ರಕ ಸಂಸ್ಥೆಯಾಗಿರುವುದರಿಂದ ಅದರ ತನಿಖೆಯಲ್ಲಿ ಸುಪ್ರೀಂ ಕೋರ್ಟ್‌ ಹಸ್ತಕ್ಷೇಪ ಮಾಡಲು ಆಗುವುದಿಲ್ಲ” ಎಂದು ಸುಪ್ರೀಂ ಕೋರ್ಟ್‌ ತಿಳಿಸಿತ್ತು. ಇದರಿಂದಾಗಿ ಗೌತಮ್‌ ಅದಾನಿ ನೇತೃತ್ವದ ಗ್ರೂಪ್‌ಗೆ ರಿಲೀಫ್‌ ಸಿಕ್ಕಿತ್ತು.

ಇದನ್ನೂ ಓದಿ: Hindenburg: ಶೀಘ್ರದಲ್ಲೇ ಭಾರತದಲ್ಲಿ ಬಹುದೊಡ್ಡ ಸಂಚಲನ ಸೃಷ್ಟಿಯಾಗಲಿದೆ; ಹೊಸದೊಂದು ಬಾಂಬ್‌ ಸಿಡಿಸಿದ ಹಿಂಡನ್‌ಬರ್ಗ್‌

Continue Reading

ದೇಶ

Serial Killer: ಚಿಕ್ಕಮ್ಮನ ಮೇಲಿನ ದ್ವೇಷಕ್ಕೆ 9 ಅಮಾಯಕ ಮಹಿಳೆಯರನ್ನು ಕೊಂದ! ಇಲ್ಲಿದೆ ವಿಲಕ್ಷಣ ಹಂತಕನ unusual story!

Serial Killer: ಹಂತಕ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಕೊಲೆ ಮಾಡಿದ ಬಳಿಕ ಅವರ ಬಳಿಯಿಂದ ಬಿಂದಿ ಮತ್ತು ಲಿಪ್‌ಸ್ಟಿಕ್‌ ಅನ್ನು ಎತ್ತಿಡುತ್ತಿದ್ದ ಎಂಬ ವಿಚಾರವೂ ಬೆಳಕಿಗೆ ಬಂದಿದೆ. ಇದೀಗ ಆತನ ಹೆಡೆಮುರಿ ಕಟ್ಟಿರುವ ಪೊಲೀಸರು ಈ ಎಲ್ಲಾ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

VISTARANEWS.COM


on

Serial Killer
Koo

ಲಖನೌ: ಉತ್ತರಪ್ರದೇಶ(Uttar Pradesh)ದಲ್ಲಿ ಅರೆಸ್ಟ್‌ ಆಗಿರುವ ಸೀರಿಯಲ್‌ ಕಿಲ್ಲರ್‌(Serial Killer)ಬಗ್ಗೆ ಅನೇಕ ವಿಚಾರಗಳು ಬಯಲಾಗುತ್ತಿದೆ. ಈತನ ಪತ್ತೆಗಾಗಿ 22 ಪೊಲೀಸರ ತಂಡ ಬಲೆ ಬೀಸಿತ್ತು. ಮತ್ತು ಬರೋಬ್ಬರಿ 1.50 ಲಕ್ಷ ಮೊಬೈಲ್‌ ಫೋನ್‌ ನಂಬರ್‌ಗಳನ್ನು ಟ್ರ್ಯಾಕ್‌ ಮಾಡಲಾಗಿದೆ. ಇನ್ನು ಕಿರುಕುಳ ನೀಡುತ್ತಿದ್ದ ಚಿಕ್ಕಮ್ಮನ ಮೇಲಿನ ದ್ವೇಷಕ್ಕೆ 9 ಅಮಾಯಕ ಮಹಿಳೆಯರನ್ನು ಕೊಂದಿದ್ದಾನೆ ಎಂಬ ವಿಚಾರ ತನಿಖೆ ವೇಳೆ ಬಯಲಾಗಿದೆ.

ಜೂನ್ 2023 ಮತ್ತು ಜುಲೈ 2024 ರ ನಡುವೆ ಬರೇಲಿ ಶಾಹಿ ಮತ್ತು ಶಿಶ್‌ಗಢ ಪೊಲೀಸ್ ವೃತ್ತದ ಅಡಿಯಲ್ಲಿ ಸುಮಾರು ಒಂಬತ್ತು ಮಹಿಳೆಯರನ್ನು ಗುರಿಯಾಗಿಸಿಕೊಂಡು ಸೈಕೋ ಕಿಲ್ಲರ್ ಅನ್ನು ನಾವು ಬಂಧಿಸಿದ್ದೇವೆ. ನಾವು 22 ತಂಡಗಳನ್ನು ರಚಿಸಿದ್ದೇವೆ ಮತ್ತು ಆತನನ್ನು ಪತ್ತೆಹಚ್ಚಲು ‘ತಲಾಶ್’ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದೆವು ಎಂದು ಬರೇಲಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಹೇಳಿದ್ದಾರೆ. ಬಂಧಿತನನ್ನು 38 ವರ್ಷದ ಕುಲದೀಪ್‌ ಕುಮಾರ್‌ ಗಂಗ್ವಾರ್‌ ಎಂದು ಗುರುತಿಸಲಾಗಿದೆ.

ಕೊಲೆ ಮಾಡಿ ಬಿಂದಿ, ಲಿಪ್‌ಸ್ಟಿಕ್‌ ಎತ್ತಿಡುತ್ತಿದ್ದ

ಇನ್ನು ಕೊಲೆಗಾರ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಕೊಲೆ ಮಾಡಿದ ಬಳಿಕ ಅವರ ಬಳಿಯಿಂದ ಬಿಂದಿ ಮತ್ತು ಲಿಪ್‌ಸ್ಟಿಕ್‌ ಅನ್ನು ಎತ್ತಿಡುತ್ತಿದ್ದ ಎಂಬ ವಿಚಾರವೂ ಬೆಳಕಿಗೆ ಬಂದಿದೆ. ಇದೀಗ ಆತನ ಹೆಡೆಮುರಿ ಕಟ್ಟಿರುವ ಪೊಲೀಸರು ಈ ಎಲ್ಲಾ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಕುಲದೀಪ್‌ ಬಾಲ್ಯ ಅಷ್ಟೊಂದು ಸುಖಮಯವಾಗಿರಲಿಲ್ಲ. ತಾಯಿ ಬಾಲ್ಯದಲ್ಲೇ ಸಾವನ್ನಪ್ಪಿದ ಬಳಿಕ ತಂದೆ ಇನ್ನೊಂದು ಮದುವೆಯಾಗಿದ್ದ. ಮಲತಾಯಿಯ ಕಿರುಕುಳದಿಂದ ಬೇಸತ್ತಿದ್ದ ಕುಲದೀಪ್‌ಗೆ ಮಹಿಳೆಯರ ಮೇಲೆ ಒಂದು ರೀತಿಯ ದ್ವೇಷ ಬೆಳೆದಿತ್ತು ಎಂಬುದು ಪೊಲೀಸ್‌ ತನಿಖೆ ವೇಳೆ ಬಯಲಾಗಿದೆ. ಸದ್ಯ ಆತನನ್ನು ವೈದ್ಯಕೀಯ ಚಿಕಿತ್ಸೆಗೊಳಪಡಿಸಲಾಗಿದೆ.

ಇದನ್ನೂ ಓದಿ: Serial Killer: 9 ಮಹಿಳೆಯರ ಕೊಂದ ಸರಣಿ ಹಂತಕ ಸೆರೆ; ಆತ ಹೇಗೆ ಕೊಲೆ ಮಾಡುತ್ತಿದ್ದ? ವಿಡಿಯೊ ಇಲ್ಲಿದೆ

Continue Reading
Advertisement
PR Sreejesh
ಕ್ರೀಡೆ19 mins ago

PR Sreejesh : ಮಲ್ಲು ಸ್ಟೈಲಲ್ಲಿ ಮುಂಡು ಉಟ್ಟು ಐಫೆಲ್ ಟವರ್ ಮುಂದೆ ಫೋಟೋ ತೆಗಿಸಿಕೊಂಡ ಪಿ.ಆರ್​ ಶ್ರೀಜೇಶ್​​

Vinesh Phogat
ಕ್ರೀಡೆ41 mins ago

Vinesh Phogat : ವಿನೇಶ್​ಗೆ ಬೆಳ್ಳಿಯ ಪದಕ ನೀಡಬೇಕು; ಸೌರವ್​ ಗಂಗೂಲಿ ಆಗ್ರಹ

Tungabhadra Dam
ಕರ್ನಾಟಕ44 mins ago

Tungabhadra Dam: ತುಂಗಭದ್ರಾ ಡ್ಯಾಂ ಗೇಟು ದುರಸ್ತಿಗೆ ಉನ್ನತ ಮಟ್ಟದ ತಂತ್ರಜ್ಞರ ತಂಡ: ಡಿ.ಕೆ. ಶಿವಕುಮಾರ್

Paris Olympics 2024
ಕ್ರೀಡೆ1 hour ago

Paris Olympics 2024 : ನಮ್ಮ ರಾಜಕಾರಣಿಗಳು ಕ್ರೀಡಾಕ್ಷೇತ್ರದಲ್ಲೂ ರಾಜಕೀಯ ಮಾಡ್ತಾರೆ; ಉಕ್ರೇನ್​ ಸಂಸದ ದೇಶಕ್ಕಾಗಿ ಪದಕಗಳನ್ನು ಗೆದ್ದಿದ್ದಾರೆ!

Yakshagana Dance
ಬೆಂಗಳೂರು2 hours ago

Yakshagana Dance : ಯಕ್ಷಗಾನ ಕಲೆ ಪುರುಷರಿಗಷ್ಟೇ ಸೀಮಿತವಲ್ಲ: ಡಾ. ಧರಣೀದೇವಿ ಮಾಲಗತ್ತಿ

Road Accident
ಕರ್ನಾಟಕ2 hours ago

Road Accident: ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿ ಟೆಂಪೋಗೆ ಕ್ಯಾಂಟರ್‌ ಡಿಕ್ಕಿ; ಮೂವರ ದುರ್ಮರಣ, ಐವರ ಸ್ಥಿತಿ ಗಂಭೀರ

Bomb threat
ಪ್ರಮುಖ ಸುದ್ದಿ2 hours ago

Bomb threat : ಏರ್​ಪೋರ್ಟ್​​ ಬ್ಯಾಗ್ ಚೆಕಿಂಗ್​ ವೇಳೆ ತಮಾಷೆಗೆ ‘ಬಾಂಬ್​ ಇದೆ’ ಅಂದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು!

theft Case
ಬೆಂಗಳೂರು2 hours ago

Theft Case : ಲಡ್ಡು ಬಂದು ಬಾಯಿಗೆ ಬಿತ್ತು! ಕೀ ಸಮೇತ ಸ್ಕೂಟರ್‌ ಬಿಟ್ಟು ಹೋದ ಮಹಿಳೆ, ಕ್ಷಣಾರ್ಧದಲ್ಲೇ ಎಗರಿಸಿದ ಚಾಲಾಕಿ

Tungabhadra Dam
ಪ್ರಮುಖ ಸುದ್ದಿ3 hours ago

Tungabhadra Dam: ಟಿಬಿ ಡ್ಯಾಂ ನಿರ್ವಹಣೆಯಲ್ಲಿ ನಿರ್ಲಕ್ಷ್ಯ; ಶೀಘ್ರ ಕ್ರಸ್ಟ್ ಗೇಟ್ ದುರಸ್ತಿಗೆ ವಿಜಯೇಂದ್ರ ಆಗ್ರಹ

veg vs non veg
ಪ್ರಮುಖ ಸುದ್ದಿ3 hours ago

veg vs non veg : ಮಕ್ಕಳ ಬಾಕ್ಸ್​​ನಲ್ಲಿ ಮಾಂಸಾಹಾರ ಕಳುಹಿಸಬಾರದು; ವಿವಾದ ಸೃಷ್ಟಿಸಿದ ಶಾಲೆಯ ನೋಟಿಸ್​​

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ3 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ3 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು5 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ5 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌