Viral Video: ಚಂದ್ರ ಮತ್ತು ದೆಹಲಿ; ಇವುಗಳಲ್ಲಿ ಯಾವುದು ದೂರದಲ್ಲಿದೆ? ಈ ಹುಡುಗನ ಉತ್ತರವನ್ನೊಮ್ಮೆ ಕೇಳಿ ಬಿಡಿ! - Vistara News

Latest

Viral Video: ಚಂದ್ರ ಮತ್ತು ದೆಹಲಿ; ಇವುಗಳಲ್ಲಿ ಯಾವುದು ದೂರದಲ್ಲಿದೆ? ಈ ಹುಡುಗನ ಉತ್ತರವನ್ನೊಮ್ಮೆ ಕೇಳಿ ಬಿಡಿ!

Viral Video: ಶಾಲೆಯ ಮೇಷ್ಟೊಬ್ಬರು ಪುಟ್ಟ ಬಾಲಕನ ಬಳಿ ಮಗು ನಮಗೆ ಚಂದ್ರ ದೂರದಲ್ಲಿದಾನಾ? ಅಥವಾ ದೆಹಲಿ ದೂರದಲ್ಲಿದೆಯೇ ಎಂದು ಪ್ರಶ್ನೆ ಕೇಳಿದಾಗ ಈ ಪ್ರಶ್ನೆಗೆ ಥಟ್ಟನೆ ಉತ್ತರಿಸಿದ ಬಾಲಕ ಚಂದ್ರನಿಗಿಂತ ದೆಹಲಿಯೇ ದೂರ ಎಂದು ಹೇಳುತ್ತಾನೆ. ಅದು ಹೇಗೆ ಸಾಧ್ಯ ಎಂದು ಮೇಷ್ಟ್ರು ಮರು ಪ್ರಶ್ನಿಸಿದಾಗ ಚಂದ್ರನನ್ನು ಇಲ್ಲೇ ನಿಂತು ನಾವು ನೋಡಬಹುದು ಸರ್, ಆದ್ರೆ ದೆಹಲಿಯನ್ನು ಇಲ್ಲಿಂದಲೇ ನಿಂತು ನೋಡಲು ಸಾಧ್ಯವಿಲ್ಲ ಅಲ್ವಾ ಸರ್ ಎಂದು ಉತ್ತರಿಸಿದ್ದಾನೆ. ಅವನ ಆ ಸ್ಮಾರ್ಟ್ ಉತ್ತರ ಕೇಳಿದರೆ ಎಂಥವರಿಗೂ ನಗು ಬರುವುದು ಖಂಡಿತ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಹಲವಾರು ವಿಡಿಯೊಗಳನ್ನು ಪೋಸ್ಟ್ ಮಾಡಲಾಗುತ್ತದೆ. ಅದರಲ್ಲಿ ಕೆಲವೊಂದು ನಮಗೆ ಬೇಸರವನ್ನುಂಟು ಮಾಡಿದರೆ, ಕೆಲವೊಂದು ವಿಡಿಯೊಗಳನ್ನು ನೋಡಿದರೆ ನಾವು ಬಿದ್ದು ಬಿದ್ದು ನಗುತ್ತೇವೆ. ಅದರಲ್ಲೂ ಮಕ್ಕಳು ಮಾತನಾಡುವ ವಿಡಿಯೊ, ಪ್ರಶ್ನೆಗಳಿಗೆ ಅವರು ಉತ್ತರಿಸುವ ರೀತಿ ತುಂಬಾ ತಮಾಷೆಯಾಗಿರುತ್ತದೆ. ಅದನ್ನು ಕೇಳಿದವರ ಮುಖದಲ್ಲಿ ನಗುವು ಮೂಡುವುದು ಖಂಡಿತ. ಇದೀಗ ಶಾಲಾ ಬಾಲಕನೊಬ್ಬನ ತಮಾಷೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿ ಭಾರೀ ಸುದ್ದಿ ಮಾಡುತ್ತಿದೆ. ಮೇಷ್ಟ್ರು ಕೇಳಿದ ಪ್ರಶ್ನೆಗೆ ಆತನ ಉತ್ತರ ಕೇಳಿ ಜನರು ನಗುವಿನಲ್ಲಿ ಮುಳುಗಿದ್ದಾರೆ.

ಈ ವೈರಲ್ ವಿಡಿಯೊದಲ್ಲಿ ಶಾಲೆಯ ಮೇಷ್ಟ್ರು ಪುಟ್ಟ ಬಾಲಕನ ಬಳಿ ಮಗು ನಮಗೆ ಚಂದ್ರ ದೂರದಲ್ಲಿದಾನಾ? ಅಥವಾ ದೆಹಲಿ ದೂರದಲ್ಲಿದೆಯೇ? ಎಂದು ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ ಥಟ್ಟನೆ ಉತ್ತರಿಸಿದ ಬಾಲಕ ಚಂದ್ರನಿಗಿಂತ ದೆಹಲಿಯೇ ದೂರ ಎಂದು ಹೇಳುತ್ತಾನೆ. ಅದು ಹೇಗೆ ಸಾಧ್ಯ ಎಂದು ಮೇಷ್ಟ್ರು ಮರು ಪ್ರಶ್ನಿಸಿದಾಗ ಚಂದ್ರನನ್ನು ಇಲ್ಲೇ ನಿಂತು ನಾವು ನೋಡಬಹುದು ಸರ್, ಆದ್ರೆ ದೆಹಲಿಯನ್ನು ಇಲ್ಲಿಂದಲೇ ನಿಂತು ನೋಡಲು ಸಾಧ್ಯವಿಲ್ಲ ಅಲ್ವಾ ಸರ್ ಎಂದು ಉತ್ತರಿಸಿದ್ದಾನೆ. ಅವನ ಆ ಸ್ಮಾರ್ಟ್ ಉತ್ತರ ಕೇಳಿದರೆ ಎಂತವರಿಗೂ ನಗು ಬರುವುದು ಖಂಡಿತ.

ಈ ವಿಡಿಯೊವನ್ನು ದೀಪಕ್ (Putkuuu) ಎಂಬವರು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್‌ನಲ್ಲಿ ಆಗಸ್ಟ್ 14ರಂದು ಹಂಚಿಕೊಂಡಿದ್ದಾರೆ ಈ ಪೋಸ್ಟ್ 18 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಏನ್ ಲಾಜಿಕ್ ಗುರು ನಿಂದೂ’ ಎಂದು ಆಶ್ಚರ್ಯದಿಂದ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ತುಂಬಾ ಬುದ್ದಿವಂತ, ಸರಿಯಾದ ಉತ್ತರವನ್ನೇ ನೀಡಿದ್ದಾನೆ’ ಎಂದು ಹೊಗಳಿದ್ದಾರೆ.

ಇದೇ ರೀತಿಯಲ್ಲಿ ಪುಟ್ಟ ಬಾಲಕರ ಬಳಿ ಪ್ರಶ್ನೆ ಕೇಳಿದಾಗ ಅದಕ್ಕೆ ಅವರು ತಮಾಷೆ ಉತ್ತರ ನೀಡುವಂತಹ ವಿಡಿಯೊಗಳು ಈ ಹಿಂದೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ಕಂಡುಬಂದಿವೆ. ಅದರಲ್ಲಿ ಹೆಚ್ಚು ಗಮನ ಸೆಳೆದ ವಿಡಿಯೊ ಅಂದರೆ ತೊದಲು ಮಾತನಾಡುವ ಪುಟ್ಟ ಮಗುವಿನ ಬಳಿ ಸಿಎಂ ಅಂದ್ರೆ ಯಾರು? ಎಂದು ಪ್ರಶ್ನೆ ಕೇಳಿದ ವಿಡಿಯೊ ತುಣುಕು. ಕನ್ನಡ ಮೀಮ್ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಪೋಸ್ಟ್ ಮಾಡಲಾದ ವಿಡಿಯೊದಲ್ಲಿ ಮಹಿಳೆ ಪುಟ್ಟ ಬಾಲಕನ ಬಳಿ ಸಿಎಂ ಅಂದ್ರೆ ಯಾರು ಎಂದು ಪ್ರಶ್ನೆ ಕೇಳುತ್ತಾರೆ.

ಇದನ್ನೂ ಓದಿ:ಕೋಲ್ಕತ್ತಾ ವೈದ್ಯೆಯ ಅತ್ಯಾಚಾರಿಗೆ ಮರಣದಂಡನೆ ವಿಧಿಸುವಂತೆ ಬಾಲಿವುಡ್ ತಾರೆಯರ ಆಗ್ರಹ

ಆ ಹುಡುಗ ತಕ್ಷಣ ಸಿಎಂ ನನ್ನ ಅಮ್ಮ ಅಂತ ತೊದಲು ನುಡಿಯುತ್ತಾ ಹೇಳುತ್ತಾನೆ. ಈ ಮಗುವಿನ ಉತ್ತರ ಕೇಳಿ ಅಲ್ಲಿದ್ದವರೆಲ್ಲ ಜೋರಾಗಿ ನಗುವುದನ್ನು ತೋರಿಸುತ್ತದೆ. ಆ ಪುಟ್ಟ ಹುಡುಗನ ತಮಾಷೆಯ ಉತ್ತರದ ವಿಡಿಯೊ ಅಂದು ವೈರಲ್ ಆಗಿತ್ತು. ನೆಟ್ಟಿಗರ ಮನಗೆದ್ದ ಈ ವೈರಲ್ ವಿಡಿಯೊ 374 ಸಾವಿರ ವೀಕ್ಷಣೆಯನ್ನು ಪಡೆದುಕೊಂಡಿದೆ. ಹಾಗೂ ಹೆಚ್ಚಿನ ಸಂಖ್ಯೆಯ ಲೈಕ್ಸ್ ಮತ್ತು ಕಾಮೆಂಟ್ಸ್ ಕೂಡಾ ಪಡೆದುಕೊಂಡಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

CM Siddaramaiah: ಆಪಲ್‌ ಫೋನ್‌ ಬಿಡಿಭಾಗ ತಯಾರಕ ಫಾಕ್ಸ್‌ಕಾನ್ ಸಂಸ್ಥೆ ಅಧ್ಯಕ್ಷರೊಂದಿಗೆ ಸಿದ್ದರಾಮಯ್ಯ ಚರ್ಚೆ

CM Siddaramaiah: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೈವಾನ್ ಮೂಲದ ಆಪಲ್ ಫೋನ್ ಕಂಪನಿ ಫಾಕ್ಸ್‌ಕಾನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಅಧ್ಯಕ್ಷ ಯಂಗ್ ಲಿಯು ಅವರ ಜತೆ ಚರ್ಚೆ ನಡೆಸಿದರು.ಈ ವೇಳೆ ಫಾಕ್ಸ್‌ಕಾನ್ ಕಂಪನಿಗೆ ರಾಜ್ಯದಲ್ಲಿ ಕಾರ್ಯನಿರ್ವಹಿಸಲು ಅಗತ್ಯವಾದ ಎಲ್ಲಾ ರೀತಿಯ ಸಹಕಾರ, ನೆರವು ಒದಗಿಸಲಾಗುವುದು ಎಂದು ಸಿಎಂ ಭರವಸೆ ನೀಡಿದರು.

VISTARANEWS.COM


on

CM Siddaramaiah
Koo

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ತೈವಾನ್ ಮೂಲದ ಆಪಲ್ ಫೋನ್ ಕಂಪನಿ ಫಾಕ್ಸ್‌ಕಾನ್ (Foxconn) ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಅಧ್ಯಕ್ಷ ಯಂಗ್ ಲಿಯು ಅವರ ಜತೆ ಚರ್ಚೆ ನಡೆಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಭೋಜನ ಕೂಟದ ವೇಳೆ ಫಾಕ್ಸ್‌ಕಾನ್ ಕಂಪನಿಗೆ ರಾಜ್ಯದಲ್ಲಿ ಕಾರ್ಯನಿರ್ವಹಿಸಲು ಅಗತ್ಯವಾದ ಎಲ್ಲಾ ರೀತಿಯ ಸಹಕಾರ, ನೆರವು ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಸಾಂಸ್ಕೃತಿಕವಾಗಿ ಉನ್ನತ ಮೌಲ್ಯಗಳನ್ನು ಆಚರಿಸುತ್ತಿರುವ ರಾಜ್ಯದಲ್ಲಿ ಕೈಗಾರಿಕೆಗಳಿಗೆ ಅತ್ಯಗತ್ಯವಾದ ಕಾನೂನು ಮತ್ತು ಸುವ್ಯವಸ್ಥೆಯೂ ಉತ್ತಮವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Government Employees Sports: ಆ.17ರಂದು ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

ಈ ಸಂದರ್ಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಏಕ್ ರೂಪ್ ಕೌರ್ ಸೇರಿದಂತೆ ಕೈಗಾರಿಕೆ ಮತ್ತು ಐಟಿ ಬಿಟಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

ಬೆಂಗಳೂರು

Government Employees Sports: ಆ.17ರಂದು ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

Government Employees Sports: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಆ. 17ರಂದು ಶನಿವಾರ ಸಂಜೆ 5 ಗಂಟೆಗೆ ಬೆಂಗಳೂರು ನಗರದ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ “ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು-2024” ಆಯೋಜಿಸಲಾಗಿದೆ.

VISTARANEWS.COM


on

Government Employees Sports
ಸಾಂದರ್ಭಿಕ ಚಿತ್ರ.
Koo

ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಆ. 17ರಂದು ಶನಿವಾರ ಸಂಜೆ 5 ಗಂಟೆಗೆ ನಗರದ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ “ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು-2024” (Government Employees Sports) ಆಯೋಜಿಸಲಾಗಿದೆ.

ಇದನ್ನೂ ಓದಿ: Kannada New Movie: ತೆರೆಯ‌ ಮೇಲೆ‌ ಚಿತ್ರವಾಗಿ ಬರಲಿದೆ ಡಿ.ವಿ.ಜಿ ಅವರ ʼಮಂಕುತಿಮ್ಮನ ಕಗ್ಗʼ; ಮೊದಲ ಹಾಡು ರಿಲೀಸ್‌

ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರೀಡಾಕೂಟವನ್ನು ಉದ್ಘಾಟಿಸುವರು. ಕೇಂದ್ರ ಹಣಕಾಸು ಹಾಗೂ ಕಾರ್ಪೋರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಉಪಸ್ಥಿತರಿರುವರು. ಡಿಸಿಎಂ ಡಿ.ಕೆ. ಶಿವಕುಮಾರ್ ಧ್ವಜಾರೋಹಣ ಮತ್ತು ಕ್ರೀಡಾ ಜ್ಯೋತಿ ಸ್ವೀಕಾರ ಮಾಡುವರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉಪಸ್ಥಿತರಿರುವರು.

ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಆ.17ರಂದು ಪವರ್‌ ಕಟ್‌!

ಕಾರ್ಯಕ್ರಮದಲ್ಲಿ ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಹರ್ಷದ್ ಅಧ್ಯಕ್ಷತೆ ವಹಿಸುವರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಪ್ರಾಸ್ತಾವಿಕವಾಗಿ ಮಾತನಾಡುವರು.

Continue Reading

ಕರ್ನಾಟಕ

Government Employees: 7ನೇ ವೇತನ ಆಯೋಗ; ಸರ್ಕಾರಿ ನೌಕರರ ಸಂಘದಿಂದ ಆ.17ರಂದು ಸಿಎಂ, ಡಿಸಿಎಂಗೆ ಸನ್ಮಾನ

Government Employees: ರಾಜ್ಯ 7ನೇ ವೇತನ ಆಯೋಗದ ವರದಿ ಜಾರಿ ಮಾಡಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಅಭಿನಂದನೆ ಸಲ್ಲಿಸಲು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಎಲ್ಲಾ ಇಲಾಖೆಗಳ ವೃಂದ ಸಂಘಗಳ ವತಿಯಿಂದ ಆ.17ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರು ನಗರದ ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ “ನಮ್ಮಭಿಮಾನದ ಅಭಿನಂದನಾ ಸಮಾರಂಭ” ಆಯೋಜಿಸಲಾಗಿದೆ.

VISTARANEWS.COM


on

Government Employees
Koo

ಬೆಂಗಳೂರು: ರಾಜ್ಯ 7ನೇ ವೇತನ ಆಯೋಗದ ವರದಿ ಜಾರಿ ಮಾಡಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಅಭಿನಂದನೆ ಸಲ್ಲಿಸಲು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಎಲ್ಲಾ ಇಲಾಖೆಗಳ ವೃಂದ ಸಂಘಗಳ ವತಿಯಿಂದ (Government Employees)‌ ಆ.17 ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ನಗರದ ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ “ನಮ್ಮಭಿಮಾನದ ಅಭಿನಂದನಾ ಸಮಾರಂಭ” ಆಯೋಜಿಸಲಾಗಿದೆ.

ಇದನ್ನೂ ಓದಿ: Teachers Transfer: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಗುಡ್‌ ನ್ಯೂಸ್‌; ನಾಳೆಯಿಂದ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ

ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸಹಕಾರ ಸಚಿವ ಕೆ.ಎನ್. ರಾಜಣ್ಣ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧುಬಂಗಾರಪ್ಪ, ವಿಶೇಷ ಆಹ್ವಾನಿತರಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಆರ್ಥಿಕ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಆರ್ಥಿಕ ಇಲಾಖೆಯ (ಬಿ&ಆರ್) ಸರ್ಕಾರದ ಕಾರ್ಯದರ್ಶಿ ಡಾ. ಪಿ.ಸಿ. ಜಾಫರ್, ಆರ್ಥಿಕ ಇಲಾಖೆ (ವೆಚ್ಚ) ಯ ಸರ್ಕಾರದ ಕಾರ್ಯದರ್ಶಿ ಡಾ. ಎಂ.ಟಿ. ರೇಜು ಪಾಲ್ಗೊಳ್ಳುವರು.

ಇದನ್ನೂ ಓದಿ: Kannada New Movie: ತೆರೆಯ‌ ಮೇಲೆ‌ ಚಿತ್ರವಾಗಿ ಬರಲಿದೆ ಡಿ.ವಿ.ಜಿ ಅವರ ʼಮಂಕುತಿಮ್ಮನ ಕಗ್ಗʼ; ಮೊದಲ ಹಾಡು ರಿಲೀಸ್‌

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

Continue Reading

ವಿದೇಶ

Matthew Perry Death Case: ಅಮೆರಿಕನ್ ನಟನ ಸಾವಿಗೆ ಕಾರಣವಾಗಿದ್ದು ಲಾಸ್‌ ಏಂಜಲೀಸ್‌ನ ಈ ʼಮಾದಕದ್ರವ್ಯಗಳ ರಾಣಿʼ!

“ಕೆಟಮೈನ್ ಕ್ವೀನ್ ಆಫ್ ಲಾಸ್ ಏಂಜಲೀಸ್” ಎಂದು ಕರೆಯಲ್ಪಡುವ ಉಭಯ ಬ್ರಿಟಿಷ್ ಮತ್ತು ಅಮೆರಿಕನ್ ಪ್ರಜೆ ಜಸ್ವೀನ್ ಕಳೆದ ವರ್ಷ ಮೃತಪಟ್ಟಿದ್ದ 54 ವರ್ಷದ ಅಮೆರಿಕನ್ ನಟ ಮ್ಯಾಥ್ಯೂ ಪೆರ್ರಿ ಸಾವಿಗೆ ಕಾರಣವಾಗುವ (Matthew Perry Death Case) ಕೆಟಮೈನ್‌ನ ಮಾರಕ ಡೋಸ್ ಅನ್ನು ಪೂರೈಸಿದ್ದಳು ಎಂದು ಆರೋಪಿಸಲಾಗಿದೆ.

VISTARANEWS.COM


on

By

Matthew Perry Death Case
Koo

ಕಳೆದ ವರ್ಷ ಮೃತಪಟ್ಟಿದ್ದ ಅಮೆರಿಕನ್ ನಟ (American actor) ಮ್ಯಾಥ್ಯೂ ಪೆರ್ರಿ (Matthew Perry Death case) ಸಾವಿನ ಹಿಂದೆ “ಕೆಟಮೈನ್ ಕ್ವೀನ್ ಆಫ್ ಲಾಸ್ ಏಂಜಲೀಸ್” (Ketamine Queen of Los Angeles) ಎಂದು ಕರೆಯಲ್ಪಡುವ ಜಸ್ವೀನ್ ಸಂಘಾ ಅವರ ಕೈವಾಡ ಇರುವುದಾಗಿ ತನಿಖೆಯಿಂದ ತಿಳಿದು ಬಂದಿದೆ. ಮ್ಯಾಥ್ಯೂ ಪೆರ್ರಿ ಸಾವಿಗೆ ಕಾರಣವಾದ ಡ್ರಗ್ಸ್ ಅನ್ನು ಜಸ್ವೀನ್ ಸಂಘಾ ಪೂರೈಸಿರುವ ಆರೋಪವಿದೆ. 41 ವರ್ಷದ ಜಸ್ವೀನ್ ಸಂಘಾ ಎಂಬ ಮಹಿಳೆ ಸ್ನೇಹಿತನಾಗಿದ್ದ ನಟ ಮ್ಯಾಥ್ಯೂ ಪೆರ್ರಿ ಸಾವಿನ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದಾರೆ. ವಿಚಾರಣೆಯನ್ನು ನಡೆಸಲಾಗುತ್ತಿದೆ.

“ಕೆಟಮೈನ್ ಕ್ವೀನ್ ಆಫ್ ಲಾಸ್ ಏಂಜಲೀಸ್” ಎಂದು ಕರೆಯಲ್ಪಡುವ ಉಭಯ ಬ್ರಿಟಿಷ್ ಮತ್ತು ಅಮೆರಿಕನ್ ಪ್ರಜೆ ಜಸ್ವೀನ್ ಕಳೆದ ವರ್ಷ ಮೃತಪಟ್ಟಿದ್ದ 54 ವರ್ಷದ ಅಮೆರಿಕನ್ ನಟ ಮ್ಯಾಥ್ಯೂ ಪೆರ್ರಿ ಸಾವಿಗೆ ಕಾರಣವಾಗುವ ಕೆಟಮೈನ್‌ನ ಮಾರಕ ಡೋಸ್ ಅನ್ನು ಪೂರೈಸಿದ್ದಳು ಎಂದು ಆರೋಪಿಸಲಾಗಿದೆ.

Matthew Perry Death Case
Matthew Perry Death Case


ಸಂಘಾ ತನ್ನ ಮನೆಯಿಂದಲೇ ಡ್ರಗ್ ಸಾಮ್ರಾಜ್ಯವನ್ನು ನಡೆಸುತ್ತಿದ್ದಳು. ಅಲ್ಲಿ ಅವಳು ಮೆಥಾಂಫೆಟಮೈನ್‌, ಕೊಕೇನ್ ಮತ್ತು ಪ್ರಿಸ್ಕ್ರಿಪ್ಷನ್ ಡ್ರಗ್ಸ್ ಅನ್ನು ಸಂಗ್ರಹಿಸಿ, ಪ್ಯಾಕ್ ಮಾಡಿ ಮತ್ತು ಮಾರಾಟ ಮಾಡುತ್ತಿದ್ದಳು ಎನ್ನಲಾಗಿದೆ. ಆಕೆಯ ಮನೆಯ ಮೇಲೆ ದಾಳಿ ನಡೆಸಿದ ಫೆಡರಲ್ ಏಜೆಂಟ್‌ ಗಳಿಗೆ 79 ಬಾಟಲಿಗಳ ದ್ರವ ಕೆಟಮೈನ್ ಮತ್ತು ಸುಮಾರು 2,000 ಮೆಥ್ ಮಾತ್ರೆಗಳು ಸಿಕ್ಕಿವೆ. ಸಂಘಾ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಎರಡು ಬೇರೆಬೇರೆ ಸಂದರ್ಭಗಳಲ್ಲಿ ಪೆರ್ರಿಗಾಗಿ ಕೆಟಮೈನ್‌ನ 50 ಬಾಟಲುಗಳನ್ನು ತನ್ನ ಸಹಾಯಕನ ಮೂಲಕ ನೀಡಿದ್ದಳು ಎಂದು ಆರೋಪಿಸಲಾಗಿದೆ.

ಅಕ್ಟೋಬರ್ 13ರಂದು ಪೆರ್ರಿಗೆ ಮೊದಲು ಕೆಟಮೈನ್ ಅನ್ನು ಪೂರೈಸಲಾಗಿತ್ತು. ಒಂದು ವಾರದ ಅನಂತರ ಮತ್ತೆ 25 ಬಾಟಲಿಗಳನ್ನು ಪೂರೈಕೆ ಮಾಡಲಾಗಿತ್ತು. ಪೆರ್ರಿ ಮೂರು ದಿನಗಳಲ್ಲಿ ಆರು ಡೋಸ್‌ ಪಡೆದಿದ್ದು, ಬಳಿಕ ಮೃತಪಟ್ಟಿದ್ದ. ಆತನ ಶವ ಒಳಾಂಗಣ ಪೂಲ್‌ನಲ್ಲಿ ಪತ್ತೆಯಾಗಿತ್ತು.

ಇದನ್ನೂ ಓದಿ: Techie Missing: ಕಾಣೆಯಾದ ಟೆಕ್ಕಿ ಪತ್ತೆ, ಪ್ರಕರಣಕ್ಕೆ ಟ್ವಿಸ್ಟ್‌; ಜೈಲಿಗಾದ್ರೂ ಹಾಕಿ, ಆದ್ರೆ ಹೆಂಡತಿ ಹತ್ರ ಹೋಗಲ್ಲ ಎಂದು ರೋದನ!

ಪೆರ್ರಿಯ ಮರಣದ ಬಳಿಕ ಈಕೆ ತನ್ನ ಸಹಾಯಕನಿಗೆ ಪೆರ್ರಿಯ ನಡುವಿನ ಸಂದೇಶಗಳನ್ನು ಅಳಿಸಲು ಹೇಳಿದ್ದಳು. ಆದರೆ ಅದು ಆನ್‌ಲೈನ್ ಪಾವತಿಗಳನ್ನು ಕೇಳುತ್ತಿರುವುದನ್ನು ತೋರಿಸಿತ್ತು. ಕೆಲವು ದಿನಗಳ ಬಳಿಕ ಪೆರ್ರಿ ಸಾವಿಗೆ ಕೆಟಮೈನ್ ಕಾರಣ ಎನ್ನುವುದು ದೃಢ ಪಟ್ಟ ಹಿನ್ನೆಲೆಯಲ್ಲಿ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಆಕೆ ಒಂದು ವೇಳೆ ತಪ್ಪಿತಸ್ಥಳೆಂದು ದೃಢಪಟ್ಟರೆ ಕನಿಷ್ಠ 10 ವರ್ಷಗಳ ಗರಿಷ್ಠ ಜೀವಾವಧಿ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎನ್ನಲಾಗಿದೆ. ಹಿಟ್ ಟಿವಿ ಸಿಟ್‌ಕಾಮ್ ಫ್ರೆಂಡ್ಸ್‌ನಲ್ಲಿ ವ್ಯಂಗ್ಯಾತ್ಮಕ ಚಾಂಡ್ಲರ್ ಬಿಂಗ್ ಪಾತ್ರದಲ್ಲಿ ವಿಶ್ವಾದ್ಯಂತ ಖ್ಯಾತಿಯನ್ನು ಗಳಿಸಿದ ಪೆರ್ರಿ ಮಾದಕ ವ್ಯಸನ ಮತ್ತು ಖಿನ್ನತೆಗೆ ಒಳಗಾಗಿದ್ದರು.

Continue Reading
Advertisement
CM Siddaramaiah
ಬೆಂಗಳೂರು2 mins ago

CM Siddaramaiah: ಆಪಲ್‌ ಫೋನ್‌ ಬಿಡಿಭಾಗ ತಯಾರಕ ಫಾಕ್ಸ್‌ಕಾನ್ ಸಂಸ್ಥೆ ಅಧ್ಯಕ್ಷರೊಂದಿಗೆ ಸಿದ್ದರಾಮಯ್ಯ ಚರ್ಚೆ

Shivamogga News
ಕರ್ನಾಟಕ5 mins ago

Shivamogga News: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಾಲಯದಲ್ಲಿ ವಿಶೇಷ ಪೂಜೆ

Viral News
ಕ್ರೀಡೆ23 mins ago

Viral News: ಮಾವ ಎಮ್ಮೆ ಬದಲು ಆ ಗಿಫ್ಟ್​ ಕೊಡುತ್ತಿದ್ದರೆ ಸಂತಸವಾಗುತ್ತಿತ್ತು ಎಂದ ಒಲಿಂಪಿಕ್ಸ್ ಚಿನ್ನ​ ವಿಜೇತ ಅರ್ಷದ್​ ನದೀಮ್

Kolkata Doctor Murder Case
ದೇಶ37 mins ago

Kolkata Doctor murder case: ವೈದ್ಯೆ ಕೊಲೆ ಕೇಸ್‌; ಪ್ರತಿಭಟನಾಕಾರರ ಮೇಲೆ ವಾಹನ ಹರಿಸಲು ಪೊಲೀಸ್‌ ಯತ್ನ?

Bangalore Rain
ಮಳೆ52 mins ago

Bangalore Rain: ರಾಜಧಾನಿಯ ಹಲವೆಡೆ ಅಬ್ಬರಿಸಿದ ವರುಣ; ಆಟೋ ಮೇಲೆ ಮರ ಬಿದ್ದು ಚಾಲಕ ಸೇರಿ ಮೂವರಿಗೆ ಗಾಯ

MS Dhoni Fans
ಕ್ರಿಕೆಟ್1 hour ago

MS Dhoni Fans: ಧೋನಿ ಅಭಿಮಾನಿಗಳಿಗೆ ಗುಡ್ ನ್ಯೂಸ್; ಹಳೆಯ ಐಪಿಎಲ್​ ನಿಯಮ ಜಾರಿಗೆ ಮುಂದಾದ ಬಿಸಿಸಿಐ

Government Employees Sports
ಬೆಂಗಳೂರು2 hours ago

Government Employees Sports: ಆ.17ರಂದು ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

Government Employees
ಕರ್ನಾಟಕ2 hours ago

Government Employees: 7ನೇ ವೇತನ ಆಯೋಗ; ಸರ್ಕಾರಿ ನೌಕರರ ಸಂಘದಿಂದ ಆ.17ರಂದು ಸಿಎಂ, ಡಿಸಿಎಂಗೆ ಸನ್ಮಾನ

Saarthi AI
ವಿದೇಶ2 hours ago

Saarthi AI: ಕೆಲ್ಸ ಕಳ್ಕೊಂಡ ಕೋಪಕ್ಕೆ ಬಾಸ್‌ನ ಪಾಸ್‌ಪೋರ್ಟ್‌, ವೀಸಾಕ್ಕೆ ಕನ್ನ- ಉದ್ಯೋಗಿಯ ಕಿತಾಪತಿಗೆ ಬೆಂಗಳೂರು ಸಿಇಒ ಹೈರಾಣ

Paralympics 2024
ಕ್ರೀಡೆ3 hours ago

Paralympics 2024: ಪ್ಯಾರಾಲಿಂಪಿಕ್ಸ್​ನಲ್ಲಿ ಭಾಗ್ಯಶ್ರೀ, ಸುಮಿತ್ ತ್ರಿವರ್ಣ ಧ್ವಜಧಾರಿಗಳು

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌