Viral Video: ಅಣೆಕಟ್ಟಿನ ಅಂಚಿನಲ್ಲಿ ನಿಂತು ಸ್ಟಂಟ್ ಮಾಡಿದ; ನೀರಿನಲ್ಲಿ ಮುಳುಗಿ ಜೀವ ಕಳೆದುಕೊಂಡ! - Vistara News

Latest

Viral Video: ಅಣೆಕಟ್ಟಿನ ಅಂಚಿನಲ್ಲಿ ನಿಂತು ಸ್ಟಂಟ್ ಮಾಡಿದ; ನೀರಿನಲ್ಲಿ ಮುಳುಗಿ ಜೀವ ಕಳೆದುಕೊಂಡ!

Viral Video: ಮಹಾರಾಷ್ಟ್ರದ ನಾಗ್ಪುರದಲ್ಲಿ ಅಣೆಕಟ್ಟಿನ ಅಂಚಿನಲ್ಲಿ ನಿಂತು ಸ್ಟಂಟ್ ಮಾಡಲು ಪ್ರಯತ್ನಿಸಿದ ಯುವಕನೊಬ್ಬ ನೀರಿಗೆ ಬಿದ್ದು ದುರಂತವಾಗಿ ಮುಳುಗಿ ಸಾವನಪ್ಪಿದ ಆಘಾತಕಾರಿ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ ಆಗಿದೆ. ಈ ಕುರಿತ ವರದಿ ಮತ್ತು ವಿಡಿಯೊ ಇಲ್ಲಿದೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಯುವಕರಿಗೆ ಸ್ಟಂಟ್ ಮಾಡುವ ಹುಚ್ಚು ಹೆಚ್ಚಾಗಿರುತ್ತದೆ. ಈ ರೀತಿ ಸ್ಟಂಟ್ ಮಾಡಲು ಹೋಗಿ ಅನೇಕರು ಅಪಾಯಕ್ಕೆ ಸಿಲುಕಿದ್ದಾರೆ. ಹಾಗೇ ಇನ್ನೂ ಅನೇಕರು ಸಾವನಪ್ಪಿದ್ದಾರೆ. ಇಷ್ಟಾದರೂ ಯುವ ಜನರು ಸ್ಟಂಟ್ ಮಾಡುವ ಹುಚ್ಚು ಬಿಡುತ್ತಿಲ್ಲ. ಈ ಸ್ಟಂಟ್ ಹುಚ್ಚಿನಿಂದ ಇತ್ತೀಚೆಗೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಅಣೆಕಟ್ಟಿನ ಅಂಚಿನಲ್ಲಿ ನಿಂತು ಸ್ಟಂಟ್ ಮಾಡಲು ಪ್ರಯತ್ನಿಸಿದ ಯುವಕನೊಬ್ಬ ನೀರಿಗೆ ಬಿದ್ದು ದುರಂತವಾಗಿ ಮುಳುಗಿ ಸಾವನಪ್ಪಿದ ಆಘಾತಕಾರಿ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ (Viral Video)ಆಗಿದೆ.

ವರದಿಗಳ ಪ್ರಕಾರ, ನಾಗ್ಪುರ ಜಿಲ್ಲೆಯ ಉಮ್ರೆಡ್ ಸಿಟಿ ಬಳಿಯ ಮಕರ್ಧೋಕಡ ಅಣೆಕಟ್ಟಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಜೆ (ಆಗಸ್ಟ್ 15) ಈ ಘಟನೆ ನಡೆದಿದೆ. 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಮಕರಧೋಕಡ ಅಣೆಕಟ್ಟಿನಲ್ಲಿ ಅನೇಕ ಪ್ರವಾಸಿಗರು ಬಂದಿದ್ದರು. ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರಿದ್ದರು. ಅವರಲ್ಲಿ ಒಬ್ಬ ಯುವಕ ಡ್ಯಾಮ್ ಮೇಲೆ ಹತ್ತಲು ಪ್ರಯತ್ನಿಸಿದ್ದಾನೆ. ಆದರೆ ಯುವಕ ಸಾಹಸ ಮಾಡಲು ಹೋಗಿ ದುರದೃಷ್ಟಕರವಾಗಿ ಸಾವಿಗೀಡಾಗಿದ್ದಾನೆ.

ಇದನ್ನು ಅಲ್ಲಿಗೆ ಬಂದಿದ್ದ ಪ್ರವಾಸಿಗರೊಬ್ಬರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ಈಗ ವೈರಲ್ ಆಗಿದೆ. ಈ ವೈರಲ್ ವಿಡಿಯೊ 27 ಸೆಕೆಂಡುಗಳ ಕಾಲವಿದ್ದು, ಇದರಲ್ಲಿ ವ್ಯಕ್ತಿಯೊಬ್ಬರು ಅಣೆಕಟ್ಟಿನ ಗೋಡೆಯ ಮೇಲೆ ನಿಂತಿದ್ದಾನೆ. ಆಗ ಇಬ್ಬರು ಯುವಕರು ಅವನನ್ನು ರಕ್ಷಿಸಲು ಪ್ರಯತ್ನಿಸಿದರು, ಒಬ್ಬರು ಅವನನ್ನು ಕೆಳಗಿಳಿಸಲು ಸಹಾಯ ಮಾಡಲು ಕೈ ಚಾಚಿದರು. ಆದಾಗ್ಯೂ, ಅವನು ಅವರ ಸಹಾಯವನ್ನು ನಿರಾಕರಿಸಿದ. ನಂತರ ಸಹಾಯಕ್ಕೆ ಬಂದ ಯುವಕರು ಕೆಳಗೆ ಜಾರಿ ಬಿದ್ದಿದ್ದಾರೆ. ಆಮೇಲೆ ಆ ವ್ಯಕ್ತಿ ಇದ್ದಕ್ಕಿದ್ದಂತೆ ಸಮತೋಲನವನ್ನು ಕಳೆದುಕೊಂಡು ಅಣೆಕಟ್ಟಿನ ಇನ್ನೊಂದು ಬದಿಯಲ್ಲಿ, ನದಿಗೆ ಬಿದ್ದು ಮುಳುಗಿ ಸಾವಿಗೀಡಾಗಿದ್ದಾನೆ. ಘಟನಾ ಸ್ಥಳದಲ್ಲಿ ನೂರಾರು ಜನರಿದ್ದರೂ, ಯುವಕನನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ.

ಇದನ್ನೂ ಓದಿ:ಚಂದ್ರ ಮತ್ತು ದೆಹಲಿ; ಇವುಗಳಲ್ಲಿ ಯಾವುದು ದೂರದಲ್ಲಿದೆ? ಈ ಹುಡುಗನ ಉತ್ತರವನ್ನೊಮ್ಮೆ ಕೇಳಿ ಬಿಡಿ!

ಕೆಲವು ಸಮಯದ ಹಿಂದೆ ಮಹಾರಾಷ್ಟ್ರದ ಸತಾರಾದಲ್ಲಿ ಮಹಿಳೆಯೊಬ್ಬರು ಬೆಟ್ಟದ ಮೇಲೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಕಾಲು ಜಾರಿ 100 ಅಡಿ ಆಳದ ಕಮರಿಗೆ ಬಿದ್ದದ್ದಳು. ಆಶ್ಚರ್ಯಕರ ಸಂಗತಿಯೆಂದರೆ, ಮಹಿಳೆಯನ್ನು ಸ್ಥಳೀಯರು ರಕ್ಷಿಸಿದ್ದರಿಂದ ಸಾವಿನಿಂದ ಪಾರಾಗಿದ್ದಾರೆ ಮತ್ತು ಅದರ ವಿಡಿಯೊ ವೈರಲ್ ಆಗಿತ್ತು. ಮಹಾರಾಷ್ಟ್ರದ ಸತಾರಾದ ಉಂಗರ್ ರಸ್ತೆಯ ಬೋರ್ನ್ ಘಾಟ್ ನಲ್ಲಿ ಈ ಘಟನೆ ನಡೆದಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

sexual abuse: ಪ್ರತಿ ಗಂಟೆಗೆ ನಡೆಯುವ 4 ಅತ್ಯಾಚಾರದಲ್ಲಿ 3 ಪ್ರಕರಣಗಳ ಆರೋಪಿಗಳು ಪರಿಚಿತರೇ! ಆಘಾತಕಾರಿ ಅಂಕಿಅಂಶ

ಕೋಲ್ಕತ್ತಾದಲ್ಲಿ 31 ವರ್ಷದ ಟ್ರೈನಿ ವೈದ್ಯೆಯ ಅತ್ಯಾಚಾರ (sexual abuse) ಮತ್ತು ಹತ್ಯೆಯ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಹೆಣ್ಣು ಮಕ್ಕಳು, ಇವರ ಪೋಷಕರು ಆತಂಕ ಪಡುವ ಸುದ್ದಿಯೊಂದನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಬಿಡುಗಡೆ ಮಾಡಿದೆ. ಅದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

sexual abuse
Koo

ಹೆಣ್ಣು ಮಕ್ಕಳು, ಇವರ ಪೋಷಕರು ಆತಂಕ ಪಡುವ (sexual abuse) ಸುದ್ದಿಯೊಂದಿದೆ. ದೇಶದಲ್ಲಿ ಪ್ರತಿ ಗಂಟೆಗೆ ನಾಲ್ಕು ಅತ್ಯಾಚಾರ (Rape Case) ಪ್ರಕರಣಗಳು ನಡೆಯುತ್ತಿದ್ದು, ಶೇ. 95 ಪ್ರಕರಣಗಳಲ್ಲಿ ತಿಳಿದಿರುವ ವ್ಯಕ್ತಿಗಳಿಂದಲೇ (Known person) ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿರುವುದು ಆತಂಕದ ಸಂಗತಿಯಾಗಿದೆ. ಅದರಲ್ಲೂ 18ರಿಂದ 30 ವರ್ಷದೊಳಗಿನವರೇ ಹೆಚ್ಚಿನ ಪ್ರಕರಣಗಳಲ್ಲಿ ಬಲಿಪಶುಗಳಾಗಿದ್ದಾರೆ. 2017ರಿಂದ 2022ರ ನಡುವೆ ಪ್ರತಿದಿನ ಸರಾಸರಿ 86 ಅತ್ಯಾಚಾರ ಪ್ರಕರಣಗಳು ವರದಿಯಾಗಿದೆ. ಇದರಲ್ಲಿ 82 ಪ್ರಕರಣಗಳಲ್ಲಿ ಸಂತ್ರಸ್ತ ಮಹಿಳೆಗೆ ಗೊತ್ತಿರುವವರಿಂದಲೇ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ.

ಗಂಟೆಗೆ ನಾಲ್ಕು ಪ್ರಕರಣ

ದೇಶದಲ್ಲಿ ಪ್ರತಿ ಗಂಟೆಗೆ ಸುಮಾರು ನಾಲ್ಕು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿದ್ದು, ಇವುಗಳಲ್ಲಿ ಮೂರಕ್ಕೂ ಹೆಚ್ಚು ಪ್ರಕರಣಗಳಲ್ಲಿ ಸಂತ್ರಸ್ತೆಯು ಅತ್ಯಾಚಾರ ನಡೆಸಿದವರನ್ನು ಬಲ್ಲವಳಾಗಿದ್ದಳು ಎಂದು ದಾಖಲೆಗಳು ಹೇಳಿವೆ.

ವಾರ್ಷಿಕ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿಯ ಪ್ರಕಾರ 2017ರಿಂದ 2022ರ ನಡುವೆ ಭಾರತದಲ್ಲಿ ಒಟ್ಟು 1.91 ಲಕ್ಷ ಅತ್ಯಾಚಾರ ಪ್ರಕರಣಗಳು ನಡೆದಿದೆ ಎನ್ನಲಾಗಿದ್ದು, 1.89 ಲಕ್ಷ ಅತ್ಯಾಚಾರ ಪ್ರಕರಣಗಳು ವರದಿಯಾಗಿದೆ. ಕನಿಷ್ಠ 1.79 ಲಕ್ಷ ಪ್ರಕರಣಗಳಲ್ಲಿ ಅತ್ಯಾಚಾರಿ ತಿಳಿದಿರುವ ವ್ಯಕ್ತಿಯಾಗಿದ್ದು, 9,670 ಪ್ರಕರಣಗಳಲ್ಲಿ ಅಷ್ಟೇ ಬಲಿಪಶುವಿಗೆ ತಿಳಿದಿಲ್ಲ.

18ರಿಂದ 30 ವರ್ಷದೊಳಗಿನವರೇ ಹೆಚ್ಚಿನ ಬಲಿಪಶುಗಳು

1.89 ಲಕ್ಷ ಪ್ರಕರಣಗಳಲ್ಲಿ 1.13 ಲಕ್ಷ ಅತ್ಯಾಚಾರ ಸಂತ್ರಸ್ತರು 18ರಿಂದ 30 ವರ್ಷ ವಯಸ್ಸಿನವರಾಗಿದ್ದಾರೆ. ಹೀಗಾಗಿ ಪ್ರತಿದಿನ ದಾಖಲಾಗುವ 86 ಅತ್ಯಾಚಾರ ಪ್ರಕರಣದಲ್ಲಿ 52 ಮಂದಿ 18ರಿಂದ 30 ವರ್ಷದೊಳಗಿನವರು. ಉಳಿದ ಪ್ರಕರಣಗಳು ದಿನಕ್ಕೆ 35 ಆಗಿದ್ದು, ಇತರ ವಯಸ್ಸಿನವರು ಎನ್ನಲಾಗಿದೆ.

ಕೆಲಸದ ಸ್ಥಳ ಸುರಕ್ಷಿತವೇ?

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ಪ್ರಕರಣಗಳು ಬಹಳ ಕಡಿಮೆಯಾದರೂ ಸರಾಸರಿಯಾಗಿ ಪ್ರತಿದಿನ ಕನಿಷ್ಠ ಒಬ್ಬ ಮಹಿಳೆ ಕೆಲಸದಲ್ಲಿ ಅಥವಾ ಕಚೇರಿ ಆವರಣದಲ್ಲಿ ಲೈಂಗಿಕ ಕಿರುಕುಳವನ್ನು ಎದುರಿಸುತಿದ್ದರೆ ಎನ್ನುವುದನ್ನು ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಅಂಕಿ ಅಂಶ ತಿಳಿಸಿದೆ. 2014ರಿಂದ ಎನ್‌ಸಿಆರ್‌ಬಿ ಕಚೇರಿಯು ಐಪಿಸಿಯ ಸೆಕ್ಷನ್ 509 ಅವಮಾನದ ವರ್ಗದ ಅಡಿಯಲ್ಲಿ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ಕುರಿತು ಡೇಟಾವನ್ನು ಸಂಗ್ರಹಿಸಲು ಪ್ರಾರಂಭಿಸಿತು.

ಆರಂಭಿಕ ವರ್ಷಗಳಲ್ಲಿ ಅಂದರೆ 2014 ಮತ್ತು 2015ರಲ್ಲಿ ಕಚೇರಿ ಆವರಣದಲ್ಲಿ ಲೈಂಗಿಕ ಕಿರುಕುಳ ಮತ್ತು ಇನ್ನೊಂದು ಕೆಲಸಕ್ಕೆ ಸಂಬಂಧಿಸಿದ ಸ್ಥಳಗಳು ಎಂಬ ಎರಡು ವಿಭಿನ್ನ ವಿಭಾಗಗಳನ್ನು ಹೊಂದಿದ್ದವು. ಆದರೆ 2016 ರ ಅನಂತರ ಈ ವರ್ಗಗಳನ್ನು ಲೈಂಗಿಕ ಕಿರುಕುಳ ‘ಕೆಲಸ ಅಥವಾ ಕಚೇರಿ ಆವರಣದಲ್ಲಿ’ ಎಂಬುದಾಗಿ ವಿಲೀನಗೊಳಿಸಲಾಗಿದೆ.

2014 ಮತ್ತು 2022ರ ನಡುವೆ ಕೆಲಸ ಅಥವಾ ಕಚೇರಿ ಆವರಣದಲ್ಲಿ ಕನಿಷ್ಠ 4,231 ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿವೆ. ಆರಂಭದಲ್ಲಿ ಕಚೇರಿ ಆವರಣದಲ್ಲಿ ಲೈಂಗಿಕ ಕಿರುಕುಳದ ಪ್ರಕರಣಗಳ ಸಂಖ್ಯೆಯು ಕಡಿಮೆಯಿತ್ತು. ಆದರೆ 2017 ರ ಅನಂತರ ಪ್ರತಿ ವರ್ಷ 400 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತವೆ.

2014, 2015 ಮತ್ತು 2016 ರಲ್ಲಿ ಎನ್‌ಸಿಆರ್‌ಬಿ ಉದ್ಯೋಗದಾತರು ಅಥವಾ ಸಹೋದ್ಯೋಗಿಗಳಿಂದ ಅತ್ಯಾಚಾರಗಳ ಸಂಖ್ಯೆಯನ್ನು ಬಹಿರಂಗಪಡಿಸಿದೆ. ಆರಂಭದ ಮೂರು ವರ್ಷಗಳಲ್ಲಿ ಉದ್ಯೋಗದಾತರು ಅಥವಾ ಸಹೋದ್ಯೋಗಿಗಳಿಂದ 1,795 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಪ್ರತಿದಿನ ಸುಮಾರು ಎರಡು ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Child Trafficking: ಗೋವಾಗೆ ಕಳ್ಳಸಾಗಣೆ ಮಾಡುತ್ತಿದ್ದ ಹೆಣ್ಣು ಶಿಶು ರಕ್ಷಣೆ ವೇಳೆ ಅಧಿಕಾರಿಗಳ ಮೇಲೆ‌ ಹಲ್ಲೆ

ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ ಕಾಯಿದೆಯ ಅಡಿಯಲ್ಲಿ 2013ರಿಂದ ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳದ ದೂರುಗಳನ್ನು ಸ್ವೀಕರಿಸಲು 10ಕ್ಕಿಂತ ಹೆಚ್ಚು ಕೆಲಸಗಾರರನ್ನು ಹೊಂದಿರುವ ಎಲ್ಲಾ ಕೆಲಸದ ಸ್ಥಳಗಳಲ್ಲಿ ಆಂತರಿಕ ಸಮಿತಿಗಳನ್ನು ರಚಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ನೊಂದ ಮಹಿಳೆ ಅಥವಾ ಆಕೆಯ ಪರವಾಗಿ ಅಧಿಕಾರ ಹೊಂದಿರುವ ಯಾವುದೇ ವ್ಯಕ್ತಿ ಲೈಂಗಿಕ ಕಿರುಕುಳದ ಲಿಖಿತ ದೂರನ್ನು ಸಲ್ಲಿಸಬಹುದು.

Continue Reading

ಬೆಂಗಳೂರು

Bengaluru Power Cut: ಗಮನಿಸಿ… ಬೆಂಗಳೂರಿನ ಈ ಪ್ರದೇಶಗಳಲ್ಲಿ ಆ.18ರಂದು ಕರೆಂಟ್‌ ಇರಲ್ಲ

Bengaluru Power Cut: ಬೆಂಗಳೂರು ನಗರದ ʼ220/66/11ಕೆವಿ ಎಸ್‌ಆರ್‌ಎಸ್ ಪೀಣ್ಯʼ ವಿದ್ಯುತ್‌ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಆ.18ರಂದು ಭಾನುವಾರ ಬೆಳಗ್ಗೆ 9.30 ಗಂಟೆಯಿಂದ ಮಧ್ಯಾಹ್ನ 3.30 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Bengaluru Power Cut
Koo

ಬೆಂಗಳೂರು: ನಗರದ ʼ220/66/11ಕೆವಿ ಎಸ್‌ಆರ್‌ಎಸ್ ಪೀಣ್ಯʼ ವಿದ್ಯುತ್‌ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು (Bengaluru Power Cut) ನಗರದ ಹಲವೆಡೆ ಆ.18 ರಂದು ಭಾನುವಾರ ಬೆಳಗ್ಗೆ 9.30 ಗಂಟೆಯಿಂದ ಮಧ್ಯಾಹ್ನ 3.30 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಬೆಂಗಳೂರು ಉತ್ತರ ವೃತ್ತದ ಅಧೀಕ್ಷಕ ಎಂಜಿನಿಯರ್‌ ತಿಳಿಸಿದ್ದಾರೆ.

ಇದನ್ನೂ ಓದಿ: Pralhad Joshi: ಭಾರತ-ಅರ್ಜೆಂಟೀನಾ; ಆಹಾರ ಹಂಚಿಕೆ ಹೆಚ್ಚಳ ಕುರಿತು ಸಚಿವ ಪ್ರಲ್ಹಾದ್‌ ಜೋಶಿ ಚರ್ಚೆ

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ನಗರದ ಎಚ್‌ಎಂಟಿ ರಸ್ತೆ, ಆರ್‌ಎನ್‌ಎಸ್ ಅಪಾರ್ಟ್‌ಮೆಂಟ್, ಸಿಎಂಟಿಐ, ಬೋರ್ಲಿಂಗಪ್ಪ ಗಾರ್ಡನ್, ಪೀಣ್ಯ ಪೊಲೀಸ್ ಠಾಣೆ ರಸ್ತೆ, ಟೆಲಿಫೋನ್ ಎಕ್ಸ್‌ಚೇಂಜ್, 6ನೇ ಕ್ರಾಸ್, ರಿಲಯನ್ಸ್ ಕಮ್ಯುನಿಕೇಷನ್, ಗಣಪತಿನಗರ ಮುಖ್ಯ ರಸ್ತೆ, ಪೊಲೀಸ್ ಠಾಣೆ ರಸ್ತೆ, ಚಾಮುಂಡಿಪುರ, ಮುನೇಶ್ವರ ದೇವಸ್ಥಾನ ರಸ್ತೆ, ಎಂಇಸಿ ಲೇಔಟ್, ಮಲಯಾಳಿ ಅತಿಥಿ ಗೃಹ ರಸ್ತೆ, ಕೆಎಚ್‌ಬಿ, ರಾಜೇಶ್ವರಿನಗರ, ಆಕಾಶ್ ಥೇಟರ್ ರಸ್ತೆ, ಫ್ರೆಂಡ್ಸ್ ಸರ್ಕಲ್, ವಿಜ್ಞಾನ ಪಬ್ಲಿಕ್ ಸ್ಕೂಲ್ ರಸ್ತೆ. ಭೈರವೇಶ್ವರ ನಗರ, ಬ್ಯಾಂಕ್ ಕಾಲೋನಿ, 6ನೇ ಮುಖ್ಯ ರಸ್ತೆ, ವಿಭಾಗ ರಸ್ತೆ, 5ನೇ ಮುಖ್ಯ ರಸ್ತೆ, ಯುಕೊ ಬ್ಯಾಂಕ್ ರಸ್ತೆ, ಥರ್ಲಾಕ್ ರಸ್ತೆ, 7ನೇ ಮುಖ್ಯ ರಸ್ತೆ, 3ನೇ ಹಂತ, ರಾಜಗೋಪಾಲ ನಗರ, ಕಸ್ತೂರಿ ಬಡಾವಣೆ, ಜಿಕೆಡಬ್ಲ್ಯೂ ಲೇಔಟ್, ಬೈರವೇಶ್ವರ ನಗರ, ಇಎಸ್‌ಐ ಆಸ್ಪತ್ರೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಇದನ್ನೂ ಓದಿ: Kannada New Movie: ‘ರಕ್ಕಸಪುರದೋಳ್’ ರಾಜ್ ಬಿ ಶೆಟ್ಟಿ; ರವಿ ಸಾರಂಗ ನಿರ್ದೇಶನದ ಈ ಚಿತ್ರಕ್ಕೆ ರಕ್ಷಿತ-ಪ್ರೇಮ್ ಸಾಥ್

ವಿದ್ಯುತ್ ಸಂಬಂಧಿತ ದೂರುಗಳಿಗಾಗಿ ಬೆ.ವಿ.ಕಂ ಸಹಾಯವಾಣಿ ಸಂಖ್ಯೆ ‘1912’ ಸಂಪರ್ಕಿಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Continue Reading

Latest

Viral Video: 12 ವರ್ಷದ ಬಾಲಕಿಯನ್ನು ಬಲವಂತವಾಗಿ ಮದುವೆಯಾದ 62ರ ಮುದುಕ! ಹೃದಯ ಕರಗಿಸುತ್ತದೆ ಈ ವಿಡಿಯೊ

Viral Video: 12 ವರ್ಷದ ಬಾಲಕಿಗೆ ಆಕೆಯ ಮನೆಯವರು 62ರ ವೃದ್ಧನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಸಹಿ ಹಾಕುವಂತೆ ಬಾಲಕಿಗೆ ಹಿಂಸಿಸುತ್ತಿದ್ದಾರೆ. ಆಕೆ ನನಗೆ ಈ ಮದುವೆ ಬೇಡ ಎಂದು ಅತ್ತು ಕರೆದು ಕೇಳಿಕೊಂಡರೂ ಆಕೆಯ ಮನೆಯವರು ಅದನ್ನು ಕೇಳದೆ ಸಹಿ ಹಾಕುವಂತೆ ಬಲವಂತ ಮಾಡುತ್ತಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

VISTARANEWS.COM


on

Viral Video
Koo


ದೇಶ ಎಷ್ಟೇ ಮುಂದುವರಿದಿದ್ದರೂ ಕೆಲವು ಜನರಿಗೆ ಮಾತ್ರ ಬುದ್ಧಿ ಬರುವುದಿಲ್ಲ. ಯಾಕೆಂದರೆ ಬಾಲ್ಯವಿವಾಹ ಪದ್ಧತಿಯಂತಹ ಅನಿಷ್ಟ ಪದ್ಧತಿಗಳನ್ನು ತೊಲಗಿಸಲು ಅನೇಕ ಹೋರಾಟಗಾರರು ಹೋರಾಡಿ ಅದರ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಅಲ್ಲದೇ ಈ ಅನಿಷ್ಟ ಪದ್ಧತಿಯನ್ನು ಕಾನೂನಿನ ಪ್ರಕಾರ ಅಪರಾಧವೆಂದು, ಇದನ್ನು ಪಾಲಿಸಿದವರಿಗೆ ಕಠಿಣ ಜೈಲು ಶಿಕ್ಷೆ ವಿಧಿಸುವುದಾಗಿ ನ್ಯಾಯಾಲಯದಲ್ಲಿ ತಿಳಿಸಿದರೂ ಕೂಡ ಇನ್ನೂ ಈ ಅನಿಷ್ಟ ಪದ್ಧತಿ ನಮ್ಮನ್ನು ಬಿಟ್ಟು ತೊಲಗಲಿಲ್ಲ. ಕೆಲವು ಕಡೆ ಯಾರಿಗೂ ತಿಳಿಯದಂತೆ ಬಾಲಕಿಯರನ್ನು ಈ ಅನಿಷ್ಟ ಪದ್ಧತಿಗೆ ಬಲಿ ಕೊಡುತ್ತಿದ್ದಾರೆ. ಇದೀಗ ಅಂತಹದೊಂದು ಆಘಾತಕಾರಿ ಘಟನೆ ನಡೆದಿದ್ದು, 12 ವರ್ಷದ ಬಾಲಕಿಗೆ 62 ವರ್ಷದ ವೃದ್ಧನ ಜೊತೆ ಆಕೆಯ ಕುಟುಂಬದವರು ಬಲವಂತವಾಗಿ ಮದುವೆ ಮಾಡಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ (Viral Video)ಆಗುತ್ತಿದೆ.

ವೈರಲ್ ವಿಡಿಯೊದಲ್ಲಿ 12 ವರ್ಷದ ಬಾಲಕಿಗೆ ಆಕೆಯ ಮನೆಯವರು 62ರ ವೃದ್ಧನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಾರೆ. ಮತ್ತು ಅದಕ್ಕಾಗಿ ಸಹಿ ಮಾಡುವಂತೆ ಹಿಂಸಿಸುತ್ತಿದ್ದಾರೆ. ಆಕೆ ನನಗೆ ಈ ಮದುವೆ ಬೇಡಾ ಎಂದು ಅತ್ತು ಕರೆದು ಕೇಳಿಕೊಂಡರೂ ಆಕೆಯ ಮನೆಯವರು ಅದನ್ನು ಕೇಳದೆ ಸಹಿ ಹಾಕುವಂತೆ ಬಲವಂತ ಮಾಡುತ್ತಿದ್ದಾರೆ. ಅವರೆಲ್ಲರೂ ಮುಸ್ಲಿಂ ಸಮುದಾಯದವರು ಎಂಬುದು ತಿಳಿಯುತ್ತದೆ. ಈ ಘೋರ ದೃಶ್ಯವನ್ನು ಅಲ್ಲಿದ್ದವರಲ್ಲಿ ಒಬ್ಬರು ವಿಡಿಯೊ ರೆಕಾರ್ಡ್ ಮಾಡಿದ್ದಾರೆ.

TaraBull ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದ್ದು, “12 ವರ್ಷದ ಬಾಲಕಿಯನ್ನು ಆಕೆಯ ಮನೆಯವರೇ 62 ವರ್ಷದ ವ್ಯಕ್ತಿಯೊಂದಿಗೆ ಮದುವೆಯಾಗುವಂತೆ ಒತ್ತಾಯಿಸಿದ್ದಾರೆ. ಇದಕ್ಕೆಲ್ಲ ಆಕ್ರೋಶ ಎಲ್ಲಿದೆ?” ಎಂಬ ಶೀರ್ಷಿಕೆಯನ್ನು ಬರೆದಿದ್ದಾರೆ. ಆಗಸ್ಟ್ 15 ರಂದು ಹಂಚಿಕೊಳ್ಳಲಾದ ಈ ವಿಡಿಯೊ 5.6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್‍ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಇದು ಅಪರಾಧವಾಗಿದ್ದು, ನಾವೆಲ್ಲರೂ ಇದರ ವಿರುದ್ಧ ಧ್ವನಿ ಎತ್ತಬೇಕಿದೆ’ ಎಂಬ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಕೋಲ್ಕತ್ತಾ ವೈದ್ಯೆಯ ಅತ್ಯಾಚಾರಿಗೆ ಮರಣದಂಡನೆ ವಿಧಿಸುವಂತೆ ಬಾಲಿವುಡ್ ತಾರೆಯರ ಆಗ್ರಹ

ಇನ್ನೊಬ್ಬ ಬಳಕೆದಾರರು ‘ಇದಕ್ಕಿಂತ ದುಷ್ಟತನ ಮತ್ತೊಂದಿಲ್ಲ” ಎಂದು ಹೇಳಿದ್ದಾರೆ. ಆದರೆ ಈ ಘಟನೆ ಎಲ್ಲಿ ನಡೆದಿದ್ದು ಎಂಬ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಆದರೆ ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿ ಇನ್ನೂ ನಮ್ಮನ್ನ ಬಿಟ್ಟು ತೊಲಗಿಲ್ಲ ಎಂಬುದು ಇದರಿಂದ ತಿಳಿಯುತ್ತದೆ. ಇದು ಇನ್ನೂ ಎಷ್ಟು ಮಂದಿ ಬಾಲಕಿಯರನ್ನು ಬಲಿತೆಗೆದುಕೊಳ್ಳಲಿದೆಯೋ ತಿಳಿಯುತ್ತಿಲ್ಲ.

Continue Reading

Latest

Crorepati Sweeper: ಕಸ ಗುಡಿಸುವ ಕಾರ್ಮಿಕನ ಬಳಿ ಇತ್ತು ಐಷಾರಾಮಿ ಕಾರುಗಳು, ಕೋಟಿ ಮೌಲ್ಯದ ಆಸ್ತಿ! ಆತ ಸಂಪಾದಿಸಿದ್ದು ಹೇಗೆ?

Crorepati Sweeper: ವಿಭಾಗೀಯ ಆಯುಕ್ತರ ಕಚೇರಿಯಲ್ಲಿ ನೈರ್ಮಲ್ಯ ಕಾರ್ಮಿಕನಾಗಿ ನೇಮಕಗೊಂಡಿರುವ ಜೈಸ್ವಾಲ್ ಎಂಬುವವನ ಬಳಿ ಅಕ್ರಮವಾಗಿ ಸಂಪಾದಿಸಿದ ಐಷಾರಾಮಿ ಕಾರುಗಳು, ಕೋಟಿ ಮೌಲ್ಯದ ಆಸ್ತಿ ಇದೆ ಎಂಬ ಮಾಹಿತಿ ಹೊರಬಿದ್ದಿದೆ.ಆತ ಅಧಿಕೃತ ದಾಖಲೆಗಳನ್ನು ನಕಲಿ ಮಾಡುವ ಮೂಲಕ ಅಕ್ರಮ ಆಸ್ತಿಗಳನ್ನು ಸಂಪಾದಿಸಿದ್ದಾನೆ. ಆತನ ಬಳಿ ಅನೇಕ ಐಷಾರಾಮಿ ಕಾರುಗಳು ಇರುವುದು ತಿಳಿದು ಬಂದಿದೆ. ತನಿಖಾಧಿಕಾರಿಗಳು ಈಗ ಅವನ ಆದಾಯದ ಮೂಲವನ್ನು ಪರಿಶೀಲಿಸಲು ಬ್ಯಾಂಕ್ ಖಾತೆಯ ವಿವರಗಳನ್ನು ಕಲೆಹಾಕುತ್ತಿದ್ದಾರೆ. ದಾಖಲೆಗಳನ್ನು ಪಡೆದ ನಂತರ, ಆರೋಪಿ ನೈರ್ಮಲ್ಯ ಕಾರ್ಮಿಕ ಸಂತೋಷ್ ಕುಮಾರ್ ಜೈಸ್ವಾಲ್ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

VISTARANEWS.COM


on

Crorepati Sweeper
Koo


ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ನೈರ್ಮಲ್ಯ ಕಾರ್ಮಿಕ ಸಂತೋಷ್ ಜೈಸ್ವಾಲ್ ಎಂಬಾತನನ್ನು ನೋಡಿದರೆ ತುಂಬಾ ವಿನಮ್ರ ಸ್ವಭಾವದ ಪಾಪದ ವ್ಯಕ್ತಿ ಎಂಬ ಭಾವನೆ ಮೂಡುತ್ತದೆ. ಆದರೆ, ಇವನೊಬ್ಬ ಗೋಮುಖ ವ್ಯಾಘ್ರನಂತೆ. ಇವನ ಬಗ್ಗೆ ತನಿಖೆ ಮಾಡಿದ ಪೊಲೀಸರು ಆತನ ಅಸಲಿ ಮುಖ ನೋಡಿ ದಂಗಾಗಿದ್ದಾರೆ. ಯಾಕೆಂದರೆ ಜೈಸಲ್ ಅಕ್ರಮವಾಗಿ ಐಷಾರಾಮಿ ಕಾರುಗಳು, ಕೋಟಿ (Crorepati Sweeper) ಮೌಲ್ಯದ ಆಸ್ತಿಯನ್ನು ಹೊಂದಿದ್ದಾನೆ. ಆತ ಅಧಿಕೃತ ದಾಖಲೆಗಳನ್ನು ನಕಲಿ ಮಾಡುವ ಮೂಲಕ ಅಕ್ರಮ ಆಸ್ತಿಗಳನ್ನು ಸಂಪಾದಿಸಿದ್ದಾನೆ ಮತ್ತು ಆತನ ಬಳಿ ಅನೇಕ ಐಷಾರಾಮಿ ಕಾರುಗಳು ಇರುವುದು ತಿಳಿದುಬಂದಿದೆ.

ವಿಭಾಗೀಯ ಆಯುಕ್ತರ ಕಚೇರಿಯಲ್ಲಿ ನೈರ್ಮಲ್ಯ ಕಾರ್ಮಿಕರಾಗಿ ನೇಮಕಗೊಂಡಿರುವ ಜೈಸ್ವಾಲ್ ಮೊದಲು ನಜೀರ್ ಎಂಬ ಹೆಸರಿನಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಸಂಪಾದಿಸಿದ್ದರಿಂದ ಈಗ ಆತನ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಜೈಸ್ವಾಲ್ ತನ್ನ ಆಸ್ತಿಗೆ ಸಂಬಂಧಪಟ್ಟ ಫೈಲ್‍ಗಳನ್ನು ತಿರುಚಿದ್ದಾನೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಆಗಿನ ಆಯುಕ್ತ ಯೋಗೇಶ್ವರ್ ರಾಮ್ ಮಿಶ್ರಾ ತನಿಖೆ ನಡೆಸಿದ್ದರು. ಅದರ ತನಿಖೆಯ ವರದಿ ಈಗ ಬಹಿರಂಗವಾದ ಕಾರಣ ಆತನನ್ನು ಅಮಾನತುಗೊಳಿಸಲಾಯಿತು ಮತ್ತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಇದಲ್ಲದೆ, ಆರೋಪಿ ನೈರ್ಮಲ್ಯ ಕಾರ್ಮಿಕ ಕಾನೂನುಬಾಹಿರವಾಗಿ ಸ್ವಾಧೀನಪಡಿಸಿಕೊಂಡಿರುವ ಆಸ್ತಿಗಳ ಬಗ್ಗೆ ತನಿಖೆ ನಡೆಸುವಂತೆ ಸದರ್ ತಹಶೀಲ್ದಾರ್ ದೇವೇಂದ್ರ ಯಾದವ್ ಅವರಿಗೆ ಸೂಚನೆ ನೀಡಲಾಯಿತು. ಆಯುಕ್ತರಾಗಿದ್ದ ಯೋಗೇಶ್ವರ್ ರಾಮ್ ಮಿಶ್ರಾ ಅವರ ಆದೇಶದ ಮೇರೆಗೆ ಸದರ್ ತಹಶೀಲ್ದಾರ್ ಅವರು ಜೈಸ್ವಾಲ್ ಒಡೆತನದ ಐಷಾರಾಮಿ ವಾಹನಗಳ ಬಗ್ಗೆ ಮಾಹಿತಿ ಪಡೆಯಲು ಸಾರಿಗೆ ಅಧಿಕಾರಿಗೆ ಪತ್ರ ಬರೆದಿದ್ದರು. ಆಮೇಲೆ ದೇವಿಪಟನ್ ಮಂಡಲದ ಪ್ರಸ್ತುತ ಆಯುಕ್ತ ಶಶಿ ಭೂಷಣ್ ಲಾಲ್ ಸುಶೀಲ್ ಅವರು ಅಧಿಕಾರ ವಹಿಸಿಕೊಂಡ ನಂತರ ವಾಹನಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಹಾಯಕ ವಿಭಾಗೀಯ ಸಾರಿಗೆ ಅಧಿಕಾರಿಗೆ ಸೂಚನೆ ನೀಡಿದ್ದರು. ವಾಹನಗಳನ್ನು ಪರಿಶೀಲಿಸಿದ ನಂತರ ಸಹಾಯಕ ವಿಭಾಗೀಯ ಸಾರಿಗೆ ಅಧಿಕಾರಿ ಸಲ್ಲಿಸಿದ ವರದಿಯಲ್ಲಿ ಆಘಾತಕಾರಿ ಸಂಗತಿ ಬಹಿರಂಗವಾಗಿದೆ. ನೈರ್ಮಲ್ಯ ಕಾರ್ಮಿಕನು ಒಂದಲ್ಲ, ಒಂಬತ್ತು ಐಷಾರಾಮಿ ವಾಹನಗಳನ್ನು ಹೊಂದಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಮತ್ತು ಅವುಗಳು ಅವನ, ಅವನ ಸಹೋದರ ಮತ್ತು ಅವನ ಹೆಂಡತಿಯ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.

ಆರೋಪಿ ಸಂತೋಷ್ ಜೈಸ್ವಾಲ್ ಸ್ವಿಫ್ಟ್ ಡಿಜೈರ್, ಎರ್ಟಿಗಾ ಮಾರುತಿ ಸುಜುಕಿ, ಮಹೀಂದ್ರಾ ಸ್ಕಾರ್ಪಿಯೋ, ಇನ್ನೋವಾ ಮತ್ತು ಮಹೀಂದ್ರಾ ಕ್ಸೈಲೋ ಹೊಂದಿದ್ದರೆ, ಅವರ ಸಹೋದರ ಉಮಾಶಂಕರ್ ಜೈಸ್ವಾಲ್ ಎರ್ಟಿಗಾ ಮಾರುತಿ ಸುಜುಕಿ ಮತ್ತು ಅವರ ಪತ್ನಿ ಬೇಬಿ ಜೈಸ್ವಾಲ್ ಟೊಯೋಟಾ ಇನ್ನೋವಾ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಇವಿಷ್ಟು ಮಾಹಿತಿ ಬಹಿರಂಗವಾದ ನಂತರ, ತನಿಖಾಧಿಕಾರಿಗಳು ಈಗ ಅವನ ಆದಾಯದ ಮೂಲವನ್ನು ಪರಿಶೀಲಿಸಲು ಬ್ಯಾಂಕ್ ಖಾತೆಯ ವಿವರಗಳನ್ನು ಕಲೆಹಾಕುತ್ತಿದ್ದಾರೆ. ದಾಖಲೆಗಳನ್ನು ಪಡೆದ ನಂತರ, ಆರೋಪಿ ನೈರ್ಮಲ್ಯ ಕಾರ್ಮಿಕ ಸಂತೋಷ್ ಕುಮಾರ್ ಜೈಸ್ವಾಲ್ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಪಿಸ್ತೂಲ್ ಹಿಡಿದು ಚಿನ್ನ ದೋಚಲು ಬಂದವರನ್ನು ಕೋಲು ಹಿಡಿದು ಓಡಿಸಿದ ಅಂಗಡಿ ಮಾಲೀಕ!

ಜೈಸ್ವಾಲ್ ಅವರು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ಸಂಪಾದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಈ ನೈರ್ಮಲ್ಯ ಕಾರ್ಮಿಕನಾಗಿ ಕೆಲಸ ಮಾಡುವಾಗ ಜೈಸ್ವಾಲ್ ಕಡಿಮೆ ವೇತನದೊಂದಿಗೆ ಅಕ್ರಮ ಆಸ್ತಿಯನ್ನು ಹೇಗೆ ಸಂಪಾದಿಸಿದರು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

Continue Reading
Advertisement
CM Siddaramaiah Ashok
ಪ್ರಮುಖ ಸುದ್ದಿ11 mins ago

CM Siddaramaiah: ರಾಜ್ಯಪಾಲರ ಆದೇಶ ಬಿಜೆಪಿ ಪಾದಯಾತ್ರೆಗೆ ದೊರೆತ ಯಶಸ್ಸು, ಮುಡಾ ತನಿಖೆ ಸಿಬಿಐಗೆ ಕೊಡಲಿ: ಆರ್‌. ಅಶೋಕ್

sexual abuse
ಕ್ರೈಂ16 mins ago

sexual abuse: ಪ್ರತಿ ಗಂಟೆಗೆ ನಡೆಯುವ 4 ಅತ್ಯಾಚಾರದಲ್ಲಿ 3 ಪ್ರಕರಣಗಳ ಆರೋಪಿಗಳು ಪರಿಚಿತರೇ! ಆಘಾತಕಾರಿ ಅಂಕಿಅಂಶ

Bajrang Punia
ಕ್ರೀಡೆ33 mins ago

Bajrang Punia: ತ್ರಿವರ್ಣ ಧ್ವಜದ ಪೋಸ್ಟರ್​ ಮೇಲೆ ಕಾಲಿಟ್ಟ ಬಜರಂಗ್ ಪೂನಿಯಾ; ವಿಡಿಯೊ ವೈರಲ್

DK Shivakumar and CM Siddaramaiah
ಪ್ರಮುಖ ಸುದ್ದಿ34 mins ago

CM Siddaramaiah: ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೀತಾರಾ? ಡಿಕೆ ಶಿವಕುಮಾರ್ ಏನಂದ್ರು?

cm siddaramaiah 1
ಪ್ರಮುಖ ಸುದ್ದಿ38 mins ago

CM Siddaramaiah: ಸರ್ಕಾರಿ ನೌಕರರ ಹಿತಾಸಕ್ತಿ ಕಾಯಲು ನಾನು ಸದಾ ಸಿದ್ಧ: ಸಿಎಂ ಸಿದ್ದರಾಮಯ್ಯ

Bengaluru Power Cut
ಬೆಂಗಳೂರು42 mins ago

Bengaluru Power Cut: ಗಮನಿಸಿ… ಬೆಂಗಳೂರಿನ ಈ ಪ್ರದೇಶಗಳಲ್ಲಿ ಆ.18ರಂದು ಕರೆಂಟ್‌ ಇರಲ್ಲ

Viral Video
Latest44 mins ago

Viral Video: 12 ವರ್ಷದ ಬಾಲಕಿಯನ್ನು ಬಲವಂತವಾಗಿ ಮದುವೆಯಾದ 62ರ ಮುದುಕ! ಹೃದಯ ಕರಗಿಸುತ್ತದೆ ಈ ವಿಡಿಯೊ

Amrutha Prem gave sweet news on Varamahalakshmi festival!
ಸ್ಯಾಂಡಲ್ ವುಡ್51 mins ago

Amrutha Prem: ವರಮಹಾಲಕ್ಷ್ಮೀ ಹಬ್ಬದಂದೇ ಸಿಹಿ ಸುದ್ದಿ ಕೊಟ್ಟ ಅಮೃತಾ ಪ್ರೇಮ್!

BMRCL Recruitment 2024
ಉದ್ಯೋಗ58 mins ago

BMRCL Recruitment 2024: ನಮ್ಮ ಮೆಟ್ರೋದಲ್ಲಿದೆ ಉದ್ಯೋಗಾವಕಾಶ; ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

Pakistan Cricket
ಕ್ರೀಡೆ1 hour ago

Pakistan Cricket: ಬಾಡಿಗೆ ಫ್ಲಡ್‌ಲೈಟ್‌ ಅಳವಡಿಸಿ ಚಾಂಪಿಯನ್‌ ಟ್ರೋಫಿ ನಡೆಸಲು ಮುಂದಾದ ಪಾಕಿಸ್ತಾನ

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌