Shraddha Kapoor: ಪ್ರಧಾನಿ ಮೋದಿಯನ್ನು ಹಿಂದಿಕ್ಕಿದ ನಟಿ ಶ್ರದ್ಧಾ;‌ ಸ್ತ್ರೀ-2 ಸಕ್ಸೆಸ್‌ ಬೆನ್ನಲ್ಲೇ ಹೊಸ ದಾಖಲೆ - Vistara News

ದೇಶ

Shraddha Kapoor: ಪ್ರಧಾನಿ ಮೋದಿಯನ್ನು ಹಿಂದಿಕ್ಕಿದ ನಟಿ ಶ್ರದ್ಧಾ;‌ ಸ್ತ್ರೀ-2 ಸಕ್ಸೆಸ್‌ ಬೆನ್ನಲ್ಲೇ ಹೊಸ ದಾಖಲೆ

Shraddha Kapoor: ಶ್ರದ್ಧಾ ಕಪೂರ್ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ ಬರೋಬ್ಬರಿ 91.4 ಮಿಲಿಯನ್‌ಗೆ ಎರಿಕೆಯಾಗಿದೆ. ಪ್ರಧಾನಿ ಮೋದಿ ಇನ್‌ಸ್ಟಾಗ್ರಾಂನಲ್ಲಿ 91.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಟ್ವಿಟರ್‌ನಲ್ಲಿ ಮೋದಿ 101.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಆಮೂಲಕ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿರುವ ಸೆಲೆಬ್ರಿಟಿಗಳಲ್ಲಿ ಶ್ರದ್ಧಾ ಮೂರನೇ ಸ್ಥಾನದಲ್ಲಿದ್ದಾರೆ.

VISTARANEWS.COM


on

Shraddha Kapoor
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೈದರಾಬಾದ್: ಇತ್ತೀಚೆಗಷ್ಟೇ ತೆರೆ ಕಂಡು ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿರುವ ಸ್ತ್ರೀ 2 ಸಿನಿಮಾದ ಸಕ್ಸೆಸ್‌ ಸಂಭ್ರಮದಲ್ಲಿರುವ ಬಾಲಿವುಡ್‌ ಸ್ಟಾರ್‌ ನಟಿ ಶ್ರದ್ಧಾ ಕಪೂರ್‌(Shraddha Kapoor) ಹೊಸ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ. ಸಿನಿಮಾ ಯಶಸ್ಸಿನ ಬೆನ್ನಲ್ಲೇ ಅವರ ಇನ್‌ಸ್ಟಾಗ್ರಾಂ ಫಾಲೋವರ್ಸ್‌ ಸಂಖ್ಯೆಯೂ ಭಾರೀ ಏರಿಕೆ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ(Narendra Modi)ಯವರನ್ನೇ ಹಿಂದಿಕ್ಕಿದ್ದಾರೆ.

ಶ್ರದ್ಧಾ ಕಪೂರ್ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ ಬರೋಬ್ಬರಿ 91.4 ಮಿಲಿಯನ್‌ಗೆ ಎರಿಕೆಯಾಗಿದೆ. ಪ್ರಧಾನಿ ಮೋದಿ ಇನ್‌ಸ್ಟಾಗ್ರಾಂನಲ್ಲಿ 91.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಟ್ವಿಟರ್‌ನಲ್ಲಿ ಮೋದಿ 101.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಆಮೂಲಕ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿರುವ ಸೆಲೆಬ್ರಿಟಿಗಳಲ್ಲಿ ಶ್ರದ್ಧಾ ಮೂರನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಬರೋಬ್ಬರಿ 271 ಮಿಲಿಯನ್ ಇನ್‌ಸ್ಟಾ ಫಾಲೋವರ್ಸ್ ಹೊಂದಿದ್ದಾರೆ. ಎರಡನೇ ಸ್ಥಾನದಲ್ಲಿರುವ ನಟಿ ಪ್ರಿಯಾಂಕಾ ಚೋಪ್ರಾ 91.8 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಮೂರನೇ ಸ್ಥಾನವವನ್ನು ಇದೀಗ ಶ್ರದ್ಧ ಕಪೂರ್ ಆಕ್ರಮಿಸಿಕೊಂಡರೆ, ನರೇಂದ್ರ ಮೋದಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಬಾಲಿವುಡ್ ನಟಿ ಅಲಿಯಾ ಭಟ್ 85.1 ಮಿಲಿಯನ್ ಫಾಲೋವರ್ಸ್ ಹೊಂದಿದ್ದರೆ, ದೀಪಿಕಾ ಪಡುಕೋಣೆ 79.8 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಕತ್ರಿನಾ ಕೈಪ್ 80.4 ಮಿಲಿಯನ್, ಗಾಯಕಿ ನೇಹಾ ಕಕ್ಕರ್ 78.7 ಮಿಲಿಯನ್, ಊರ್ವಶಿ ರೌಟೇಲಾ 73 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಭಾರತದ ಗರಿಷ್ಠ ಇನ್‌ಸ್ಟಾಗ್ರಾಂ ಫಾಲೋವರ್ಸ್ ಪಟ್ಟಿಯಲ್ಲಿ ನರೇಂದ್ರ ಮೋದಿ 4ನೇ ಸ್ಥಾನದಲ್ಲಿದ್ದಾರೆ. ಆದರೆ ವಿಶ್ವದ ಜನಪ್ರಿಯ ನಾಯಕರ ಪೈಕಿ ನರೇಂದ್ರ ಮೋದಿ ಮೊದಲ ಸ್ಥಾನದಲ್ಲಿದ್ದಾರೆ. ಟ್ವಿಟರ್‌ನಲ್ಲೂ ಪ್ರಧಾನಿ ನರೇಂದ್ರ ಮೋದಿ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

ಸೂಪರ್ ಹಿಟ್ ಸಿನಿಮಾಗಳ ಮೂಲಕ ಚೆಲುವೆ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ದೊಡ್ಡಮಟ್ಟದಲ್ಲಿ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. 14 ವರ್ಷಗಳ ಹಿಂದೆ ‘ತೀನ್ ಪತ್ತಿ’ ಸಿನಿಮಾ ಮೂಲಕ ಆಕೆ ಬಾಲಿವುಡ್ ಪ್ರವೇಶಿಸಿದ್ದರು. ತಂದೆ ಶಕ್ತಿ ಕಪೂರ್ ಬಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದರು. ಪೋಷಕ ನಟನಾಗಿ, ಖಳನಟನಾಗಿ ಅಬ್ಬರಿಸಿದ್ದರು. ಹಾಗಾಗಿ ಶ್ರದ್ಧಾ ಕಪೂರ್ ಚಿತ್ರರಂಗಕ್ಕೆ ಬರುವುದು ಕಷ್ಟವಾಗಲಿಲ್ಲ. ಬಂದ ಬಳಿಕ ತಮ್ಮದೇ ವಿಭಿನ್ನ ಅಭಿನಯದಿಂದ ಮೋಡಿ ಮಾಡುತ್ತಾ ಬಂದರು. ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡರು. ಚಿತ್ರದಿಂದ ಚಿತ್ರಕ್ಕೆ ಜನಪ್ರಿಯತೆ ಹೆಚ್ಚಿಸಿಕೊಂಡರು.

ಇದನ್ನೂ ಓದಿ: Stree 2 Box Office Day 5: ಕಲ್ಕಿ, ಫೈಟರ್ ದಾಖಲೆ ಮುರಿದ ಶ್ರದ್ಧಾ ಕಪೂರ್‌ ಅಭಿನಯದ ಸ್ತ್ರೀ 2

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Census: ಮುಂದಿನ ತಿಂಗಳಿಂದ ಜನಗಣತಿ ಆರಂಭ ಸಾಧ್ಯತೆ; ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ

Census: ಈ ಪ್ರಕ್ರಿಯೆಯಲ್ಲಿ ನೇರವಾಗಿ ಭಾಗಿಯಾಗಿರುವ ಇಬ್ಬರು ಸರ್ಕಾರಿ ಅಧಿಕಾರಿಗಳು ಸಮಗ್ರ ಸಮೀಕ್ಷೆಯು ಪೂರ್ಣಗೊಳ್ಳಲು ಸುಮಾರು 18 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಎಂದು ದೃಢಪಡಿಸಿದರು, ಮಾರ್ಚ್ 2026 ರ ವೇಳೆಗೆ ಫಲಿತಾಂಶಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ಜನಗಣತಿಯ ವಿಳಂಬವು ಮುಂದುವರೆದಿರುವ ವಿಚಾರ ಅನೇಕ ಟೀಕೆಗೆ ಗುರಿಯಾಗಿದೆ.

VISTARANEWS.COM


on

Census
Koo

ನವದೆಹಲಿ: ಹಲವು ವರ್ಷಗಳಿಂದ ಬಾಕಿ ಉಳಿದಿರುವ ಭಾರತದ ಜನಗಣತಿ(Census)ಪ್ರಕ್ರಿಯೆಯನ್ನು ಸೆಪ್ಟೆಂಬರ್‌ನಲ್ಲಿ ನಡೆಸಲು ಕೇಂದ್ರ ಸರ್ಕಾರ(Union Government) ಮುಂದಾಗಿದೆ ಎನ್ನಲಾಗಿದೆ. ಈ ವಿಷಯದ ಬಗ್ಗೆ ತಿಳಿದಿರುವ ಇಬ್ಬರು ವ್ಯಕ್ತಿಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. ಈ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿಯನ್ನು 2021 ರಂದು ನಡೆಸಲು ನಿಗದಿಪಡಿಸಲಾಗಿತ್ತು. ಆದರೆ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲಾಗಿತ್ತು. ಇದೀಗ ಮುಂದಿನ ತಿಂಗಳು ಜನಗಣತಿ ನಡೆಯುವ ಸಾಧ್ಯತೆ ಇದ್ದು, ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ಮೂರನೇ ಅವಧಿಯ ಅಧಿಕಾರದಲ್ಲಿ ಗಮನಾರ್ಹ ದತ್ತಾಂಶ ಅಂತರವನ್ನು ಪರಿಹರಿಸಲು ಸಹಾಯ ಮಾಡುತ್ತದೆ.

ರಾಯಿಟರ್ಸ್ ಪ್ರಕಾರ, ಈ ಪ್ರಕ್ರಿಯೆಯಲ್ಲಿ ನೇರವಾಗಿ ಭಾಗಿಯಾಗಿರುವ ಇಬ್ಬರು ಸರ್ಕಾರಿ ಅಧಿಕಾರಿಗಳು ಸಮಗ್ರ ಸಮೀಕ್ಷೆಯು ಪೂರ್ಣಗೊಳ್ಳಲು ಸುಮಾರು 18 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಎಂದು ದೃಢಪಡಿಸಿದರು, ಮಾರ್ಚ್ 2026 ರ ವೇಳೆಗೆ ಫಲಿತಾಂಶಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ಜನಗಣತಿಯ ವಿಳಂಬವು ಮುಂದುವರೆದಿರುವ ವಿಚಾರ ಅನೇಕ ಟೀಕೆಗೆ ಗುರಿಯಾಗಿದೆ. ಈ ವಿಳಂಬವು ಆರ್ಥಿಕ ದತ್ತಾಂಶ, ಹಣದುಬ್ಬರ ಮತ್ತು ಉದ್ಯೋಗದ ಅಂದಾಜುಗಳು ಸೇರಿದಂತೆ ವಿವಿಧ ಅಂಕಿಅಂಶಗಳ ಸಮೀಕ್ಷೆಗಳ ನಿಖರತೆ ಮತ್ತು ಪ್ರಸ್ತುತತೆಗೆ ಧಕ್ಕೆ ತಂದಿದೆ ಎಂದು ಅರ್ಥಶಾಸ್ತ್ರಜ್ಞರು ವಾದಿಸಿದ್ದಾರೆ.

ಪ್ರಸ್ತುತ, ಈ ಡೇಟಾ ಸೆಟ್‌ಗಳಲ್ಲಿ ಹೆಚ್ಚಿನವು ಹಳೆಯದಾದ 2011 ರ ಜನಗಣತಿಯ ಮೇಲೆ ಅವಲಂಬಿತವಾಗಿದೆ, ಇದು ಅನೇಕ ಸರ್ಕಾರಿ ಯೋಜನೆಗಳು ಮತ್ತು ನೀತಿಗಳ ಮೇಲೆ ಪರಿಣಾಮ ಬೀರುತ್ತಿದೆ. ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ವರದಿಯ ಪ್ರಕಾರ ಜನಗಣತಿಗಾಗಿ ವಿವರವಾದ ಟೈಮ್‌ಲೈನ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಪ್ರಧಾನಿ ಕಾರ್ಯಾಲಯದಿಂದ ಅಂತಿಮ ಅನುಮೋದನೆಗೆ ಕಾಯಲಾಗುತ್ತಿದೆ.

ಕೇಂದ್ರ ಸರ್ಕಾರವು 2021 ರ ಜನಗಣತಿಗಾಗಿ ಈ ವರ್ಷದ ಬಜೆಟ್ ಅನ್ನು ಕಡಿಮೆ ಮಾಡಿದೆ. ಮೂಲತಃ, ಕೇಂದ್ರ ಸಚಿವ ಸಂಪುಟವು ಜನಗಣತಿಗಾಗಿ ₹ 8,754.23 ಕೋಟಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ಅನ್ನು ನವೀಕರಿಸಲು ಹೆಚ್ಚುವರಿ ₹ 3,941.35 ಕೋಟಿ ಬಜೆಟ್‌ಗೆ ಅನುಮೋದನೆ ನೀಡಿತ್ತು. ಆದಾಗ್ಯೂ, 2024-25 ರ ಕೇಂದ್ರ ಬಜೆಟ್‌ನಲ್ಲಿ, ಹಂಚಿಕೆಯನ್ನು ₹ 1,309 ಕೋಟಿಗೆ ಕಡಿತಗೊಳಿಸಲಾಯಿತು.

ಕಳೆದ ತಿಂಗಳು, ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ವಿತ್ತ ಸಚಿವರ ಬಜೆಟ್ ಘೋಷಣೆಗಳಲ್ಲಿ ಜನಗಣತಿಗೆ ಸಮರ್ಪಕವಾಗಿ ಹಣ ನೀಡುವ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿಲ್ಲ ಎಂದು ನಿರಾಶೆ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿಗೆ ಸರ್ಕಾರ ಸಕಾಲದಲ್ಲಿ ಜನಗಣತಿ ನಡೆಸಲು ವಿಫಲವಾಗಿದೆ ಎಂದಿದ್ದರು.

ಇದನ್ನೂ ಓದಿ: ಲೋಕಸಭೆ ಚುನಾವಣೆ ನಂತರವೇ ಜನಗಣತಿ; ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ಸೇರಿ ಜನರಿಗೆ ಕೇಳುವ ಪ್ರಶ್ನೆ ಯಾವವು?

Continue Reading

ದೇಶ

Air store released: ಪೋಖ್ರಾನ್‌ ಬಳಿ ತಪ್ಪಿದ ಭಾರೀ ಅವಘಡ; ಏಕಾಏಕಿ ಏರ್‌ಸ್ಟೋರ್‌ ರಿಲೀಸ್‌ ಮಾಡಿದ ಯುದ್ಧ ವಿಮಾನ

Air store Released: ಏರ್ ಸ್ಟೋರ್ ಫೈಟರ್ ಜೆಟ್‌ನ ಗಟ್ಟಿಯಾದ ಬಿಂದುಗಳಿಗೆ ಜೋಡಿಸಲಾದ ಬಾಹ್ಯ ಉಪಕರಣಗಳು ಅಥವಾ ಯುದ್ಧಸಾಮಗ್ರಿಗಳನ್ನು ಹೊಂದಿರುತ್ತದೆ. ಅದು ಜೆಟ್‌ನ ಕೆಳಭಾಗದಲ್ಲಿ ಅಥವಾ ಬದಿಗಳಲ್ಲಿದೆ. ಯುದ್ಧ ಕಾರ್ಯಾಚರಣೆಯ ಸಮಯದಲ್ಲಿ ಈ ಏರ್ ಸ್ಟೋರ್‌ಗಳನ್ನು ಹೊರತೆಗೆಯಬಹುದಾಗಿದೆ. ಇದು ಯುದ್ಧಸಾಮಗ್ರಿಗಳು, ಬಾಂಬ್‌ಗಳು ಅಥವಾ ವಿಮಾನದ ಮೂಲಕ ಸಾಗಿಸುವ ಇತರ ಮಿಲಿಟರಿ ಉಪಕರಣಗಳನ್ನು ಹೊಂದಿರುತ್ತದೆ.

VISTARANEWS.COM


on

Air store Released
Koo

ನವದೆಹಲಿ: ಭಾರತೀಯ ವಾಯುಪಡೆ (IAF) ಬುಧವಾರ ತನ್ನ ಯುದ್ಧ ವಿಮಾನವೊಂದು(IAF fighter jet) ತಾಂತ್ರಿಕ ದೋಷದಿಂದಾಗಿ ಪೋಖ್ರಾನ್(Pokhran) ಫೈರಿಂಗ್ ರೇಂಜ್ ಬಳಿ ಏರ್ ಸ್ಟೋರ್(Air store Released) ಅನ್ನು ಅಜಾಗರೂಕತೆಯಿಂದ ಬಿಡುಗಡೆ ಮಾಡಿದೆ ಎಂದು ಹೇಳಿದೆ. ಐಎಎಫ್ ಈ ಘಟನೆಯನ್ನು ಎಕ್ಸ್‌ನಲ್ಲಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ದೃಢಪಡಿಸಿದೆ, ಯಾವುದೇ ಜೀವ ಅಥವಾ ಆಸ್ತಿಗೆ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಏರ್ ಸ್ಟೋರ್ ಅನ್ನು-ಸಾಮಾನ್ಯವಾಗಿ ಯುದ್ಧಸಾಮಗ್ರಿಗಳು, ಬಾಂಬ್‌ಗಳು ಅಥವಾ ವಿಮಾನದ ಮೂಲಕ ಸಾಗಿಸುವ ಇತರ ಮಿಲಿಟರಿ ಉಪಕರಣಗಳನ್ನು ಹೊಂದಿರುತ್ತದೆ. ನಿತ್ಯದ ಕಾರ್ಯಾಚರಣೆ ವೇಳೆ ಈ ದುರ್ಘಟನೆ ಸಂಭವಿಸಿದೆ. ತಾಂತ್ರಿಕ ದೋಷದ ಕಾರಣವನ್ನು ತನಿಖೆ ಮಾಡಲು ತನಿಖೆಗೆ ಆದೇಶಿಸಲಾಗಿದೆ ಎಂದು ಐಎಎಫ್ ತಿಳಿಸಿದೆ.

ಭಾರತೀಯ ವಾಯುಪಡೆಯು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, “ಭಾರತೀಯ ವಾಯುಪಡೆಯ (ಐಎಎಫ್) ಯುದ್ಧ ವಿಮಾನದಿಂದ ಏರ್ ಸ್ಟೋರ್‌ನ ಅಜಾಗರೂಕತೆಯ ಬಿಡುಗಡೆಯು ಪೋಖ್ರಾನ್ ಫೈರಿಂಗ್ ರೇಂಜ್ ಪ್ರದೇಶದ ಬಳಿ ಇಂದು ತಾಂತ್ರಿಕ ದೋಷದಿಂದಾಗಿ ಸಂಭವಿಸಿದೆ. ಘಟನೆಯ ಬಗ್ಗೆ ತನಿಖೆ ನಡೆಸಲು ಐಎಎಫ್‌ನಿಂದ ತನಿಖೆಗೆ ಆದೇಶಿಸಲಾಗಿದೆ. ಯಾವುದೇ ಜೀವ ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ ಎಂದಿದೆ.

ಏನಿದು ಏರ್‌ಸ್ಟೋರ್‌?

ಏರ್ ಸ್ಟೋರ್ ಫೈಟರ್ ಜೆಟ್‌ನ ಗಟ್ಟಿಯಾದ ಬಿಂದುಗಳಿಗೆ ಜೋಡಿಸಲಾದ ಬಾಹ್ಯ ಉಪಕರಣಗಳು ಅಥವಾ ಯುದ್ಧಸಾಮಗ್ರಿಗಳನ್ನು ಹೊಂದಿರುತ್ತದೆ. ಅದು ಜೆಟ್‌ನ ಕೆಳಭಾಗದಲ್ಲಿ ಅಥವಾ ಬದಿಗಳಲ್ಲಿದೆ. ಯುದ್ಧ ಕಾರ್ಯಾಚರಣೆಯ ಸಮಯದಲ್ಲಿ ಈ ಏರ್ ಸ್ಟೋರ್‌ಗಳನ್ನು ಹೊರತೆಗೆಯಬಹುದಾಗಿದೆ. ಇದು ಯುದ್ಧಸಾಮಗ್ರಿಗಳು, ಬಾಂಬ್‌ಗಳು ಅಥವಾ ವಿಮಾನದ ಮೂಲಕ ಸಾಗಿಸುವ ಇತರ ಮಿಲಿಟರಿ ಉಪಕರಣಗಳನ್ನು ಹೊಂದಿರುತ್ತದೆ.

ಇದನ್ನೂ ಓದಿ: National Technology Day ಪೋಖ್ರಾನ್‌ ಅಣು ಪರೀಕ್ಷೆ ಯಶಸ್ವಿಯಾಗಿ ನಡೆದ ಹೆಮ್ಮೆಯ ದಿನ

Continue Reading

ವಿಜ್ಞಾನ

Fetus In Baby: ಏಳು ತಿಂಗಳ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆ!

ಅಸಹಜವಾಗಿ ಮಗುವಿನ ಹೊಟ್ಟೆ ಬೆಳವಣಿಗೆಯಾಗುತ್ತಿರುವುದನ್ನು ಗಮನಿಸಿದ ತಾಯಿ ಹಿಮಾಲಯನ್ ಆಸ್ಪತ್ರೆ ಜಾಲಿಗ್ರಾಂಟ್‌ನ ಹಿರಿಯ ಮಕ್ಕಳ ಶಸ್ತ್ರಚಿಕಿತ್ಸಕ ಡಾ. ಸಂತೋಷ್ ಸಿಂಗ್ ಅವರನ್ನು ಸಂಪರ್ಕಿಸಿದಾಗ ಮಗುವಿನ ಹೊಟ್ಟೆಯೊಳಗೆ ಮಾನವ ಭ್ರೂಣವು (Fetus In Baby) ಬೆಳವಣಿಗೆಯಾಗುತ್ತಿರುವುದನ್ನು ಎಕ್ಸ್ ರೇ ಬಹಿರಂಗಪಡಿಸಿತು. ಬಳಿಕ ಶಸ್ತ್ರಚಿಕಿತ್ಸೆ ನಡೆಸಿ ಭಾಗಶಃ ಬೆಳವಣಿಗೆಯಾಗಿದ್ದ ಭ್ರೂಣವನ್ನು ಹೊರತೆಗೆಯಲಾಗಿದೆ.

VISTARANEWS.COM


on

By

Fetus In Baby
Koo

ಡೆಹ್ರಾಡೂನ್: ಏಳು ತಿಂಗಳ ಮಗುವಿನ (7 month baby) ಹೊಟ್ಟೆಯಲ್ಲಿ ಮಾನವನ ಭ್ರೂಣ (Fetus In Baby) ಪತ್ತೆಯಾಗಿರುವ ಅಪರೂಪದ ಘಟನೆ ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ (Uttarakhand Dehradun) ನಡೆದಿದೆ. ಹಿಮಾಲಯನ್ ಆಸ್ಪತ್ರೆ (Himalayan Hospital) ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ಮಗುವಿನ ಹೊಟ್ಟೆಯಲ್ಲಿದ್ದ ಭ್ರೂಣವನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.

ಏಳು ತಿಂಗಳ ಮಗುವಿನ ಹೊಟ್ಟೆ ಬೆಳೆಯುತ್ತಿರುವುದನ್ನು ತಾಯಿ ಗಮನಿಸಿದ್ದು, ಪ್ರಾರಂಭದಲ್ಲಿ ನಿರ್ಲಕ್ಷಿಸಿದ್ದಳು. ಆದರೆ ಹೊಟ್ಟೆಯ ಬೆಳವಣಿಗೆ ಹೆಚ್ಚಾಗುತ್ತಾ ಹೋದಂತೆ ಹಲವು ವೈದ್ಯರನ್ನು ಸಂಪರ್ಕಿಸಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.

ಬಳಿಕ ಅವರು ಹಿಮಾಲಯನ್ ಆಸ್ಪತ್ರೆ ಜಾಲಿಗ್ರಾಂಟ್‌ನ ಹಿರಿಯ ಮಕ್ಕಳ ಶಸ್ತ್ರಚಿಕಿತ್ಸಕ ಡಾ. ಸಂತೋಷ್ ಸಿಂಗ್ ಅವರನ್ನು ಸಂಪರ್ಕಿಸಿದರು. ಮಗುವಿನ ಆರಂಭಿಕ ಪರೀಕ್ಷೆಯಲ್ಲಿ ಡಾ. ಸಿಂಗ್ ಹೊಟ್ಟೆಯಲ್ಲಿ ಅಸಹಜ ದ್ರವ್ಯರಾಶಿಯನ್ನು ಶಂಕಿಸಿದ್ದರು. ಆದರೆ ಮಗುವಿನ ಹೊಟ್ಟೆಯೊಳಗೆ ಮಾನವ ಭ್ರೂಣವು ಬೆಳವಣಿಗೆಯಾಗುತ್ತಿರುವುದನ್ನು ಎಕ್ಸ್ ರೇ ಬಹಿರಂಗಪಡಿಸಿತು.

ಈ ಸ್ಥಿತಿಯನ್ನು ವೈದ್ಯಕೀಯವಾಗಿ “ಫೆಟಸ್-ಇನ್-ಫೀಟು” ಎಂದು ಹೇಳಿರುವ ಡಾ. ಸಂತೋಷ್ ಸಿಂಗ್, ಮಗುವಿನ ಪೋಷಕರಿಗೆ ಈ ಕುರಿತು ಸಂಪೂರ್ಣ ಮಾಹಿತಿ ನೀಡಿ ಶಸ್ತ್ರಚಿಕಿತ್ಸೆ ನಡೆಸಬೇಕಿರುವುದಾಗಿ ತಿಳಿಸಿದರು.

ಕಳೆದ ವಾರ ಮಗುವಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಭಾಗಶಃ ಅಭಿವೃದ್ಧಿ ಹೊಂದಿದ್ದ ಮಾನವ ಭ್ರೂಣವನ್ನು ಮಗುವಿನ ಹೊಟ್ಟೆಯಿಂದ ಹೊರತೆಗೆಯಲಾಗಿದೆ. ಶಸ್ತ್ರಚಿಕಿತ್ಸೆಯ ನಾಲ್ಕು ದಿನಗಳ ಅನಂತರ ಮಗು ಚೇತರಿಸಿಕೊಂಡಿದ್ದು, ಮಗುವನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಡಾ. ಸಂತೋಷ್ ಸಿಂಗ್ ತಿಳಿಸಿದ್ದಾರೆ.


ಫೀಟಸ್-ಇನ್-ಫೀಟು ಎಂದರೇನು?

ಹಿಮಾಲಯನ್ ಆಸ್ಪತ್ರೆ ಜಾಲಿಗ್ರಾಂಟ್‌ನ ಮಕ್ಕಳ ಶಸ್ತ್ರಚಿಕಿತ್ಸಕ ಡಾ. ಸಂತೋಷ್ ಸಿಂಗ್ ಅವರು “ಫಿಟಸ್-ಇನ್-ಫೀಟು” ಬಗ್ಗೆ ವಿವರಿಸಿದ್ದು, ಇದೊಂದು ಅತ್ಯಂತ ಅಪರೂಪದ ವಿದ್ಯಮಾನವಾಗಿದೆ. ಅಜ್ಞಾತ ಕಾರಣಗಳಿಂದ ಒಂದು ಭ್ರೂಣವು ಇನ್ನೊಂದರೊಳಗೆ ಪರಾವಲಂಬಿಯಂತೆ ಬೆಳವಣಿಗೆಯಾಗಲು ಪ್ರಾರಂಭಿಸುತ್ತದೆ. ಈ ಸ್ಥಿತಿಯನ್ನು ತಾಯಿಯ ಗರ್ಭಾವಸ್ಥೆಯಲ್ಲಿ ಅಲ್ಟ್ರಾಸೌಂಡ್ ಮೂಲಕ ಕಂಡುಹಿಡಿಯಬಹುದು. ಆದರೂ ಹೆಚ್ಚಿನ ಸಂದರ್ಭಗಳಲ್ಲಿ ಇದು ಜನನದ ನಂತರ ಪತ್ತೆಯಾಗುತ್ತದೆ.

ಇದನ್ನೂ ಓದಿ: Viral Video: ಆಟಿಕೆ ಎಂದು ತಿಳಿದು ಹಾವನ್ನೇ ಕಚ್ಚಿದ ಮಗು! ಕಚ್ಚಿಸಿಕೊಂಡ ಹಾವು ಸಾವು!

5 ಲಕ್ಷದಲ್ಲಿ ಒಂದು ಪ್ರಕರಣ

ಡಾ. ಸಂತೋಷ್ ಕುಮಾರ್ ಅವರ ಪ್ರಕಾರ ಇದು 5 ಲಕ್ಷಕ್ಕಿಂತಲೂ ಹೆಚ್ಚು ಗರ್ಭಧಾರಣೆಗಳಲ್ಲಿ ಒಂದರಲ್ಲಿ ಉಂಟಾಗಬಹುದು. ವಿಶಿಷ್ಟವಾಗಿ, ಮಗುವಿನ ಹೊಟ್ಟೆಯು ಒಂದರಿಂದ ಎರಡು ವರ್ಷಗಳ ನಡುವೆ ಅಸಹಜವಾಗಿ ಹಿಗ್ಗಿದಾಗ ಈ ಪ್ರಕರಣಗಳನ್ನು ಗಮನಿಸಬಹುದು. ಈ ಸ್ಥಿತಿಯು ಸಾಮಾನ್ಯವಾಗಿ ಮಗುವಿನ ಜೀವಕ್ಕೆ ತೊಂದರೆಯನ್ನು ಉಂಟು ಮಾಡುವುದಿಲ್ಲವಾದರೂ ಇದು ಇತರ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಸ್ಥಿತಿಯ ಏಕೈಕ ಚಿಕಿತ್ಸೆಯು ಶಸ್ತ್ರಚಿಕಿತ್ಸೆಯಾಗಿದೆ. ಇದನ್ನು ಸಾಧ್ಯವಾದಷ್ಟು ಬೇಗ ನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.

Continue Reading

ದೇಶ

Pharma Company Blast: ಫಾರ್ಮಾ ಕಂಪನಿಯಲ್ಲಿ ಭಾರೀ ಬ್ಲಾಸ್ಟ್‌- 17ಮಂದಿ ಬಲಿ; ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಭೀತಿ

Pharma Company Blast: ಆರಂಭದಲ್ಲಿ ಈ ದುರಂತ ರಿಯಾಕ್ಟರ್‌ ಬ್ಲಾಸ್ಟ್‌ನಿಂದ ಸಂಭವಿಸಿದೆ ಎನ್ನಲಾಗಿತ್ತು. ಆದರೆ ರಿಯಾಕ್ಟರ್‌ ಬ್ಲಾಸ್ಟ್‌ ಆಗಿಲ್ಲ. ಇದು ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಸಂಭವಿಸಿದ ದುರ್ಘಟನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನು ಈ ಸ್ಥಾವರದಲ್ಲಿ ಸುಮಾರು 380 ಉದ್ಯೋಗಿಗಳು ಎರಡು ಪಾಳಿಗಳಲ್ಲಿ ಕೆಲಸ ಮಾಡುತ್ತಾರೆ. ಊಟದ ವೇಳೆ ಈ ಅವಘಡ ಸಂಭವಿಸಿದ್ದು, ಭಾರೀ ಅನಾಹುತ ತಪ್ಪಿದೆ. ಸ್ಥಳದಿಂದ ಬಂದ ದೃಶ್ಯಗಳು ಹೊಗೆಯಿಂದ ಸುತ್ತುವರಿದ ಮತ್ತು ಸುತ್ತಮುತ್ತಲಿನ ಹಳ್ಳಿಗಳನ್ನು ಆವರಿಸಿದೆ.

VISTARANEWS.COM


on

Pharma Company Blast
Koo

ಹೈದರಾಬಾದ್‌: ಆಂಧ್ರಪ್ರದೇಶ(Andra Pradesh)ದ ಅನಕಪಲ್ಲಿಯಲ್ಲಿ ಸಂಭವಿಸಿದ ಸ್ಫೋಟ(Pharma Company Blast)ದಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದು, 41 ಮಂದಿ ಗಾಯಗೊಂಡಿದ್ದಾರೆ. ಅಚ್ಯುತಪುರಂ ವಿಶೇಷ ಆರ್ಥಿಕ ವಲಯದಲ್ಲಿ ಸ್ಫೋಟ ಸಂಭವಿಸಿದೆ. ದುರ್ಘಟನೆಯಲ್ಲಿ ಗಾಯಗೊಂಡಿರುವ ಅನೇಕನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಶೇಷ ಆರ್ಥಿಕ ವಲಯದಲ್ಲಿರುವ ಎಸ್ಸೆಂಟಿಯಾ ಕಂಪನಿ, ಫಾರ್ಮಾ ಕಂಪನಿಯ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಎನ್‌ಟಿಆರ್‌ ಆಸ್ಪತ್ರೆಗೆ ರವಾನಿಸಲಾಗಿದೆ.

ಇನ್ನು ಆರಂಭದಲ್ಲಿ ಈ ದುರಂತ ರಿಯಾಕ್ಟರ್‌ ಬ್ಲಾಸ್ಟ್‌ನಿಂದ ಸಂಭವಿಸಿದೆ ಎನ್ನಲಾಗಿತ್ತು. ಆದರೆ ರಿಯಾಕ್ಟರ್‌ ಬ್ಲಾಸ್ಟ್‌ ಆಗಿಲ್ಲ. ಇದು ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಸಂಭವಿಸಿದ ದುರ್ಘಟನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನು ಈ ಸ್ಥಾವರದಲ್ಲಿ ಸುಮಾರು 380 ಉದ್ಯೋಗಿಗಳು ಎರಡು ಪಾಳಿಗಳಲ್ಲಿ ಕೆಲಸ ಮಾಡುತ್ತಾರೆ. ಊಟದ ವೇಳೆ ಈ ಅವಘಡ ಸಂಭವಿಸಿದ್ದು, ಭಾರೀ ಅನಾಹುತ ತಪ್ಪಿದೆ. ಸ್ಥಳದಿಂದ ಬಂದ ದೃಶ್ಯಗಳು ಹೊಗೆಯಿಂದ ಸುತ್ತುವರಿದ ಮತ್ತು ಸುತ್ತಮುತ್ತಲಿನ ಹಳ್ಳಿಗಳನ್ನು ಆವರಿಸಿದೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ನಾಳೆ ಸ್ಥಳಕ್ಕೆ ಭೇಟಿ ನೀಡಲಿದ್ದು, ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಮುಖ್ಯಮಂತ್ರಿಗಳು ತನಿಖೆಗೆ ಆದೇಶಿಸಿದ್ದಾರೆ. ಬೆಂಕಿ ನಂದಿಸಲು ಆರು ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದ್ದು, ಜನರನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗೆ ಕರೆ ನೀಡಲಾಗಿದೆ. ಘಟಕದೊಳಗೆ ಸಿಲುಕಿದ್ದ 13 ಮಂದಿಯನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇಂತಹದ್ದೇ ಒಂದು ಘಟನೆ ಕೆಲವು ತಿಂಗಳ ಹಿಂದೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿತ್ತು. ಪಟಾಕಿ ಕಾರ್ಖಾನೆಯೊಂದರಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ನಾಲ್ವರು ಮೃತಪಟ್ಟಿದ್ದರು. ಘಟನೆಯಲ್ಲಿ ಸುಮಾರು 15 ಮಂದಿ ಗಾಯಗೊಂಡಿದ್ದರು. ದೊಂಬಿವಿಲಿ ಬಳಿಯ ಎಂಐಡಿಸಿ ಫೇಸ್‌ 2ರಲ್ಲಿರುವ ಕಾರ್ಖಾನೆಯಲ್ಲಿ ಕಾರ್ಮಿಕರು ಮೇ 23ರ ಮಧ್ಯಾಹ್ನ ಕೆಲಸ ಮಾಡುವಾಗಲೇ ಬಾಯ್ಲರ್‌ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದಾದ ಕ್ಷಣಮಾತ್ರದಲ್ಲೇ ಭೀಕರ ಸ್ಫೋಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಅಮುದನ್‌ ಕೆಮಿಕಲ್‌ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿತ್ತು. ಸ್ಫೋಟ ಸಂಭವಿಸಿದ ಕೆಲವೇ ನಿಮಿಗಳಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಅಗ್ನಿ ನಂದಿಸಿತ್ತು.

ಇದನ್ನೂ ಓದಿ: Cooker Blast: ಅಡುಗೆ ಮಾಡುವಾಗ ಕುಕ್ಕರ್ ಸ್ಫೋಟವಾಗಿ ಯುವಕ ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ

Continue Reading
Advertisement
Census
ದೇಶ6 mins ago

Census: ಮುಂದಿನ ತಿಂಗಳಿಂದ ಜನಗಣತಿ ಆರಂಭ ಸಾಧ್ಯತೆ; ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ

Air store Released
ದೇಶ34 mins ago

Air store released: ಪೋಖ್ರಾನ್‌ ಬಳಿ ತಪ್ಪಿದ ಭಾರೀ ಅವಘಡ; ಏಕಾಏಕಿ ಏರ್‌ಸ್ಟೋರ್‌ ರಿಲೀಸ್‌ ಮಾಡಿದ ಯುದ್ಧ ವಿಮಾನ

Indian hockey team
ಕ್ರೀಡೆ48 mins ago

Indian hockey team: ಭುವನೇಶ್ವರದಲ್ಲಿ ಭಾರತೀಯ ಹಾಕಿ ತಂಡದಿಂದ ರೋಡ್ ಶೋ

Fetus In Baby
ವಿಜ್ಞಾನ2 hours ago

Fetus In Baby: ಏಳು ತಿಂಗಳ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆ!

CEAT Cricket Awards
ಕ್ರೀಡೆ2 hours ago

CEAT Cricket Awards: ವರ್ಷದ ಅತ್ಯುತ್ತಮ ಏಕದಿನ ಬ್ಯಾಟರ್​ ಪ್ರಶಸ್ತಿ ಗೆದ್ದ ವಿರಾಟ್​ ಕೊಹ್ಲಿ

Pharma Company Blast
ದೇಶ2 hours ago

Pharma Company Blast: ಫಾರ್ಮಾ ಕಂಪನಿಯಲ್ಲಿ ಭಾರೀ ಬ್ಲಾಸ್ಟ್‌- 17ಮಂದಿ ಬಲಿ; ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಭೀತಿ

Starbucks CEO
ವಿದೇಶ2 hours ago

Starbucks CEO: ಸಿಕ್ರೆ ಇಂಥಾ ಕೆಲ್ಸ ಸಿಗ್ಬೇಕಪ್ಪಾ! 1600 ಕಿ.ಮೀ ದೂರ ಆಫೀಸ್‌..ದಿನಾ ಓಡಾಡೋಕೆ ಕಂಪನಿ ಜೆಟ್‌! ಈತ ಪುಣ್ಯವಂತನೇ ಸರಿ

Viral News
ಕ್ರಿಕೆಟ್3 hours ago

Viral News: ಸಿದ್ಧಿ ವಿನಾಯಕನ ಸನ್ನಿಧಿಯಲ್ಲಿ ಟಿ20 ವಿಶ್ವಕಪ್​ ಟ್ರೋಫಿಗೆ ಪೂಜೆ ಸಲ್ಲಿಸಿದ ರೋಹಿತ್​ ಶರ್ಮ, ಜಯ್​ ಶಾ

ಕರ್ನಾಟಕ3 hours ago

Almatti Dam: ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ

Danish Kaneria
ಕ್ರಿಕೆಟ್3 hours ago

Danish Kaneria: ರಕ್ಷಾ ಬಂಧನ ಆಚರಿಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌