Actor Darshan: ರೇಣುಕಾಸ್ವಾಮಿ ಸಾಯೋವರೆಗೂ ಶೆಡ್‌ನಲ್ಲೇ ಇದ್ದರಾ ನಟ ದರ್ಶನ್! ಚಾರ್ಜ್ ಶೀಟ್‌ನಲ್ಲಿ ಏನೆಲ್ಲ ಇದೆ ಗೊತ್ತಾ? - Vistara News

ಪ್ರಮುಖ ಸುದ್ದಿ

Actor Darshan: ರೇಣುಕಾಸ್ವಾಮಿ ಸಾಯೋವರೆಗೂ ಶೆಡ್‌ನಲ್ಲೇ ಇದ್ದರಾ ನಟ ದರ್ಶನ್! ಚಾರ್ಜ್ ಶೀಟ್‌ನಲ್ಲಿ ಏನೆಲ್ಲ ಇದೆ ಗೊತ್ತಾ?

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಮುಂದಿನ ಪ್ರಕ್ರಿಯೆಗಳು ಕೂಡ ಮುಂದುವರೆಯುತ್ತಿದ್ದು‌ ಕೊಲೆಯಲ್ಲಿ ಹದಿನೇಳು ಜನ ಆರೋಪಿಗಳಿದ್ದಾರೆ. ಇದರ ಡೀಟೇಲ್ಸ್ ಇಲ್ಲಿದೆ.

VISTARANEWS.COM


on

Actor Darshan to be questioned in Parappana Agrahara jail
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರೇಣುಕಾಸ್ವಾಮಿ ಕೊಲೆ (Actor Darshan) ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಮುಂದಿನ ಪ್ರಕ್ರಿಯೆಗಳು ಕೂಡ ಮುಂದುವರೆಯುತ್ತಿದೆ.‌ ಕೊಲೆಯಲ್ಲಿ ಹದಿನೇಳು ಜನ ಆರೋಪಿಗಳಿದ್ದಾರೆ. ಕ್ರಿಮಿನಲ್ ಕಾನ್‌ಸ್ಪಿರೆಸಿ ಮಾಡಿ ಪರ್ಪೆಕ್ಟ್ ಕ್ರೈಂ ಎನಿಸಿಕೊಂಡಿರುವವರ ಕೊಲೆ ಪ್ರಕರಣ ಇದಾಗಿದೆ.‌ ಕೊಲೆಯಾದ ಬಳಿಕ ಏನೆಲ್ಲಾ ಮಾಡಬೇಕು‌ ಎಂಬಷ್ಟರ ಮಟ್ಟಿಗೆ ಯೋಚನೆ ಮಾಡಿದ್ದ ಖದೀಮರು ಕೊನೆಗೆ ಪ್ಲಾನ್ ಉಲ್ಟಾ ಹೊಡೆದ ಬಳಿ ಅಷ್ಟೂ ಜನ ಸಿಕ್ಕಿ ಬಿದ್ದಿದ್ದಾರೆ. 17 ಜನ ಆರೋಪಿಗಳು ಯಾವ ರೀತಿ ಕೊಲೆ ಪ್ರಕರಣದಲ್ಲಿ ಪಾತ್ರ ವಹಿಸಿದರು ಎಂಬುದರ ಡಿಟೇಲ್ಸ್ ಇಲ್ಲಿದೆ.

ಪವಿತ್ರಾಗೌಡ

ಕೊಲೆ ಮಾಡಲು ಮೂಲ ಕಾರಣ ಪವಿತ್ರ ಗೌಡ. ಕೃತ್ಯ ನಡೆದ ಸಮಯದಲ್ಲಿ ಅಲ್ಲೇ ಇರುವುದಕ್ಕೆ ಸಾಕ್ಷಿ ಪತ್ತೆಯಾಗಿದೆ.,
ಸಿಸಿಟಿವಿಯಲ್ಲಿ ಪವಿತ್ರಗೌಡ ಸೆರೆಯಾಗಿದ್ದಾರೆ. ಪವಿತ್ರ ಗೌಡ ಮೊಬೈಲ್ ಕೃತ್ಯದ ಸ್ಥಳದಲ್ಲಿ ಆಕ್ಟಿವ್ ಆಗಿರುವುದು ಕಂಡುಬಂದಿದೆ.

ದರ್ಶನ್

ಕಿಡ್ನಾಪ್ ಮಾಡಿಸಿದ್ದು , ಹಲ್ಲೆ ಮಾಡಿದ್ದು, ಕೊಲೆ ನಂತರ ಮುಚ್ಚಿಹಾಕಲು ಹಣ ನೀಡಿದ್ದು ದರ್ಶನ್. ಕೊಲೆ ನಡೆದ ಸ್ಥಳದಲ್ಲಿ ಇರುವುದು ಪತ್ತೆಯಾಗಿದೆ. ಸಿಸಿಟಿವಿಯಲ್ಲಿ ಕೂಡ ದರ್ಶನ್ ಸೆರೆಯಾಗಿದ್ದಾರೆ. ಕೊಲೆ ಬಳಿಕ ಸ್ಥಳದಿಂದ ಪರಾರಿಯಾರಿಯಾಗುವ ದೃಶ್ಯ ಸಹ ಇದೆ. ದರ್ಶನ್ ಬಟ್ಟೆ ಮತ್ತು ಶೂನಲ್ಲಿ ರೇಣುಕಾ ಸ್ವಾಮಿ ರಕ್ತ ಇರುವುದು ಪತ್ತೆಯಾಗಿದ್ದು, ದರ್ಶನ್ ಹಲ್ಲೆ ಮಾಡಿರುವ ಬಗ್ಗೆ ಮತ್ತು ಕೊಲೆಯಲ್ಲಿ ಭಾಗಿರುವುದು ದೃಡವಾಗಿದೆ.

ಪವನ್

ಪವಿತ್ರ ಜೊತೆಗೆ ಇದ್ದು ,ಕಿಡ್ನಾಪ್ ಮಾಡುವಾಗ ರಾಘವೇಂದ್ರ ಜೊತೆಗೆ ಸಂಪರ್ಕದಲ್ಲಿ ಇದ್ದುಕೊಂಡು ನಂತ್ರ ಹಲ್ಲೆ ಮಾಡುವ ಸ್ಥಳಕ್ಕೆ ಹೋಗಿ ಹಲ್ಲೆ ಪವನ್ ಮಾಡಿದ್ದಾನೆ. ಬೇರೊಂದು ಇನ್ಸ್ಟಾಗ್ರಾಮ್ ಅಕೌಂಟ್ ಮಾಡಿ ರೇಣುಕಾಸ್ವಾಮಿ ಜೊತೆಗೆ ಚಾಟ್ ಮಾಡಿ ಕಿಡ್ನಾಪ್ ಮಾಡುವಂತೆ ಸೂಚಿನೆ ನಿಡಿದ್ದಾನೆ. ರೇಣುಕಾಸ್ವಾಮಿ ಗೆ ಹಲ್ಲೆ ಮಾಡಿದ್ದು, ಇದೆಲ್ಲದಕ್ಕು ಸಾಕ್ಷಿ ಲಭ್ಯ ವಿದೆ.

ರಾಘವೇಂದ್ರ

ಚಿತ್ರದುರ್ಗ ದರ್ಶನ್ ಅಭಿಮಾನಿಗಳ ಸಂಘದ ಅದ್ಯಕ್ಷ, ಕಿಡ್ನಾಪ್ ಮಾಡುವಲ್ಲಿ ಪ್ರಮುಖ ಪಾತ್ರ. ಕೊಲೆಯಾದ ಸ್ಥಳದಲ್ಲಿ ಹಾಜರಿದ್ದ. ಕೊಲೆ ಬಳಿಕ ರೇಣುಕಾಸ್ವಾಮಿ ಮೈ ಮೇಲಿದ್ದ ಆಭರಣ ತೆಗೆದಿದ್ದ. ಕೊಲೆ ಮಾಡುವ ಮೊದಲು ಕಿಡ್ನಾಪ್ ಮಾಡುವಲ್ಲಿ ಸಕ್ರಿಯವಾಗಿ ಕೆಲಸ ಮಾಡಿರುವುದಕ್ಕೆ ಸಾಕ್ಷಿ ಲಭ್ಯವಾಗಿದೆ.

ನಂದೀಶ

ಹಲ್ಲೆ ಮಾಡುವಾಗ ಜೊತೆಗೆ ಇದ್ದು , ರಣೇಕಾ ಸ್ವಾಮಿಗೆ ತೀವ್ರವಾಗಿ ಹಲ್ಲೆ ಮಾಡಿದವನು. ರೇಣುಕಾಸ್ವಾಮಿ ಬಳಸಿದ್ದ ಬಟ್ಟೆಯಲ್ಲಿ ರಕ್ತವಿದೆ. ಕೊಲೆ ಬಳಿಕ ವಾಹನದಲ್ಲಿ ಮೃತ ದೇಹ ಇಟ್ಟಿದ್ದು, ದೇಹ ಹೊತ್ತುಕೊಂಡು ಬಂದಿದ್ದ ದೃಶ್ಯ ಪತ್ತೆಯಾಗಿದೆ.

ಜಗದೀಶ್ ಅಲಿಯಾಸ್ ಜಗ್ಗ

ಕಿಡ್ನಾಪ್ ಮಾಡಿಕೊಂಡು ಚಿತ್ರದುರ್ಗದಿಂದ ಬಂದಿದ್ದ ತಂಡದ ಸದಸ್ಯ, ಚಿತ್ರದುರ್ಗದಿಂದ ಕರೆತಂದು ಕೊಲೆ ಮಾಡಿದ ಬಳಿಕ ಎಸ್ಕೇಪ್ ಆಗಿದ್ದನ್ನು. ರೇಣುಕಾಸ್ವಾಮಿ ಕಿಡ್ನಾಪ್ ನಂತರ ಕರೆತರುವಾಗ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅನುಕುಮಾರ್ ಅಲಿಯಾಸ್ ಅನು

ಕಿಡ್ನಾಪ್ ಮಾಡಿಕೊಂಡು ಚಿತ್ರದುರ್ಗದಿಂದ ಬಂದಿದ್ದ ತಂಡದ ಸದಸ್ಯ ಈ ಅನುಕುಮಾರ್. ಚಿತ್ರದುರ್ಗದಿಂದ ಕರೆತಂದ ಕೊಲೆ ಮಾಡಿದ ಬಳಿಕ ಎಸ್ಕೇಪ್ ಆಗಿದ್ದ. ಕಿಡ್ನಾಪ್ ಸಮಯದಲ್ಲಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರವಿ ಅಲಿಯಾಸ್ ರವಿಶಂಕರ್

ಕಾರು ಚಾಲಕ, ಈತ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದಿದ್ದ. ಕೊಲೆ ಬಳಿಕ ಕಾರಿನಲ್ಲಿ ಉಳಿದ ಆರೋಪಿಗಳ ಕರೆದುಕೊಂಡು ಹೋಗಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಾಜು ಅಲಿಯಾಸ್ ಧನರಾಜ್

ದರ್ಶನ್ ನಿವಾಸದಲ್ಲಿ ಕೆಲಸ ಮಾಡಿಕೊಂಡಿದ್ದ ರಾಜರಾಜೇಶ್ವರಿ ನಗರ ನಿವಾಸಿ. ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ನೀಡಿದ್ದು, ಮೃತ ದೇಹ ಸಾಗಾಣೆ ಈ ರಾಜು ಅಲಿಯಾಸ್ ಧನರಾಜ್.

ವಿನಯ್

ದರ್ಶನ್ ಆಪ್ತನಾಗಿದ್ದು ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಮಾಲಿಕ, ಈತ ಹಲ್ಲೆ ಮಾಡಿದ್ದವರ ಪೈಕಿ ಪ್ರಮುಖ ವ್ಯಕ್ತಿ. ಮನಸ್ಸಿಗೆ ಬಂದಹಾಗೆ ಹಲ್ಲೆ ಮಾಡಿದ್ದಾನೆ ಲಾಠಿ ಬೀಸಿ ಬೀಸಿ ಹೊಡೆದಿದ್ದಾನೆ. ಕೊಲೆಗು ಮೊದಲಿನಿಂದ ದರ್ಶನ್ ಜೊತೆಗೆ ಇದ್ದ. ಸ್ಟೋನಿ ಬ್ರೂಕ್‌ನಲ್ಲಿ ನಡೆದ ಕೊಲೆಗು ಮೊದಲ ಮಾತುಕತೆಯಲ್ಲಿ ಭಾಗಿದ್ದಾನೆ.

ನಾಗರಾಜು ಅಲಿಯಾಸ್ ನಾಗ

ನಟ ದರ್ಶನ್‌ನ ಅನಧಿಕೃತ ಮ್ಯಾನೇಜರ್ ಇವನನು. ಪಾರ್ಟಿ ಕುಡಿತ ಸೇರಿ ಎಲ್ಲಾ ಕಡೆ ಇರುತ್ತಿದ್ದ. ಹಲ್ಲೆ ಮಾಡುವಾಗ ಜೊತೆಗೆ ಇದ್ದು ಹಲ್ಲೆ ಮಾಡಿ ಕಾಲಿನಿಂದಲೂ ಒದ್ದಿದ್ದ. ಬೇರೆಯವರಿಗೆ ಶರಣಾಗುವಂತೆ ವ್ಯವಸ್ಥೆ ಮಾಡುವಲ್ಲಿಯೂ ಪಾತ್ರ ನಿರ್ವಹಿಸಿದ್ದಾನೆ.

ಲಕ್ಷ್ಮಣ್

ದರ್ಶನ್ ಕಾರು ಚಾಲಕ. ಕೊಲೆ ಮಾಡುವಾಗ ಸ್ಥಳದಲ್ಲಿ ಇದ್ದು ಹಲ್ಲೆ ಮಾಡಿದ್ದು, ಮೃತ ದೇಹವನ್ನು ಎಸೆಯಲು ಬೇಕಾದ ವ್ಯವಸ್ಥೆ ಮಾಡಿದ್ದು ಕೊಲೆಗೆ ಮೊದಲೆ ಜೊತೆಗೆ ಇದ್ದಿದ್ದು ಈ ಲಕ್ಷ್ಮಣ್. ಕೊಲೆಯ ನಂತ್ರ ಎ2 ಆರೋಪಿ ಜೊತೆಗೆ ಪರಾರಿಯಾಗಲು ಸಹಾಯ ಸಹ ಮಾಡಿದ್ದಾನೆ.

ದೀಪಕ್

ದರ್ಶನ್ ಆಪ್ತ. ಹಲ್ಲೆ ಮಾಡಿದ್ದು ನಂತರ ದರ್ಶನ್, ಪ್ರದೋಶ್ ಹೇಳಿದಂತೆ ಹಣವನ್ನು ನಿಕಿಲ್, ಕೇಶವಮೂರ್ತ, ಮತ್ತು ಕಾರ್ತಿಕ್‌ಗೆ ಹೇಳಿ ಒಪ್ಪಿಸಿ ಹಣ ನೀಡಿದ್ದ ತಲಾ ಐದು ಲಕ್ಷ ಹಣ ನೀಡಿದ್ದ. ಕೊಲೆ ನಡೆದ ಶೆಡ್ ಸ್ಥಳದ ಜವಾಬ್ದಾರಿ ಹೊಂದಿದ್ದ.

ಪ್ರದೂಶ್

ದರ್ಶನ್ ಜೊತೆಗೆ ಇದ್ದುಕೊಂಡು ಹಲ್ಲೆ ಮಾಡಿದವನು, ನಂತರ ದರ್ಶನ್ ಜೊತೆಗೆ ವ್ಯವಹಾರ, ಕೊಲೆ ಮಾಡಿದ್ದವರ ಖರ್ಚಿಗಾಗಿ ಮೂವತ್ತು ಲಕ್ಷ ಹಣವನ್ನು ಪಡೆದುತಂದಿದ್ದ. ಆರೋಪಿಗಳು ಭಯ ಪಟ್ಟಾಗ ಮತ್ತೆ ದರ್ಶನ್ ಬೇಟಿ ಮಾಡಿಸಿ ಮೂವರನ್ನ ಸರಂಡರ್ ಮಾಡಿಸಿದ್ದ.

ಕಾರ್ತಿಕ್ ಅಲಿಯಾಸ್ ಕಪ್ಪೆ

ಶೆಡ್‌ನಲ್ಲಿ ಕೆಲಸ ಮಾಡಿಕೊಂಡಿದ್ದ, ಹಣ ನೀಡಿದ ಬಳಿಕ ಶವ ಸಾಗಿಸಿದ್ದ. ನಂತರ ಪೊಲೀಸರ ಮುಂದೆ ಸರಂಡರ್ ಆಗಿದ್ದನು.

ಕೇಶವಮೂರ್ತಿ

ಕೊಲೆ ಮಾಡಿದ್ದ ಬಳಿಕ ಐದು ಲಕ್ಷ ಹಣ ಪಡೆದುಕೊಂಡು ಮೃತ ದೇಹವನ್ನು ಸಾಗಿಸುವ ಕೆಲಸ ಮಾಡಿದ್ದ. ಆಮೇಲೆ ಪೊಲೀಸರ ಎದುರು ಸರಂಡರ್ ಆಗಿದ್ದನು.

ನಿಕಿಲ್

ಕೊಲೆ ಮಾಡಿದ್ದ ಬಳಿಕ ಐದು ಲಕ್ಷ ಹಣ ಪಡೆದುಕೊಂಡು ಮೃತ ದೇಹವನ್ನು ಸಾಗಿಸುವ ಕೆಲಸ ಮಾಡಿದ್ದ. ಅಮೇಲೆ ಪೊಲೀಸರ ಎದುರು ಸರಂಡರ್ ಆಗಿದ್ದನು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಭವಿಷ್ಯ

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಒತ್ತಡ ಇದ್ದರೂ ಸ್ನೇಹಿತರ ಜತೆ ಕಾಲ ಕಳೆಯುವಿರಿ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷದ ಪಾಡ್ಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಬುಧವಾರ ಮಧ್ಯಾಹ್ನ 12:11ಕ್ಕೆ ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಮೇಷ, ಕಟಕ, ಕನ್ಯಾ, ವೃಶ್ಚಿಕ, ಧನಸ್ಸು, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮೇಷ ರಾಶಿಯವರು ಆರ್ಥಿಕವಾಗಿ ಬಲಿಷ್ಠತೆ ಇರಲಿದೆ. ಹೂಡಿಕೆ ವ್ಯವಹಾರಗಳಲ್ಲಿ ಪ್ರಗತಿ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಒತ್ತಡ ಇರಲಿದೆ. ಹಳೆಯ ಸ್ನೇಹಿತರ ಜತೆ ಕಾಲ ಕಳೆಯುವ ಸಾಧ್ಯತೆ ಇದೆ. ವೃಷಭ ರಾಶಿಯವರು ಪ್ರಯಾಣ ಮಾಡುವ ಸಾಧ್ಯತೆ ಇದೆ. ಅನಿರೀಕ್ಷಿತ ಲಾಭಗಳನ್ನು ಪಡೆಯುವಿರಿ. ಕುಟುಂಬದ ಸದಸ್ಯರ ಬೆಂಬಲ ದೊರೆಯಲಿದೆ. ಸಂಗಾತಿಯೊಂದಿಗೆ ಮಾತಿಗೆ ಮಾತು ಬೆಳೆಸುವುದು ಬೇಡ. ಸಾಮಾಜಿಕ ಕಾರ್ಯಗಳಲ್ಲಿ ತೊಡಗುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಒತ್ತಡ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (4-09-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ.
ತಿಥಿ: ಪಾಡ್ಯ 09:46 ವಾರ: ಬುಧವಾರ
ನಕ್ಷತ್ರ: ಉತ್ತರ ಪಾಲ್ಗುಣಿ 30:13 ಯೋಗ: ಸಾಧ್ಯ 20:01
ಕರಣ: ಭವ 09:46 ಅಮೃತಕಾಲ: ರಾತ್ರಿ 10:07 ರಿಂದ 11:55
ದಿನದ ವಿಶೇಷ: ಚಂದ್ರ ದರ್ಶನ

ಸೂರ್ಯೋದಯ : 06:09   ಸೂರ್ಯಾಸ್ತ : 06:28

ರಾಹುಕಾಲ: ಮಧ್ಯಾಹ್ನ 12.00 ರಿಂದ 1.30
ಗುಳಿಕಕಾಲ: ಬೆಳಗ್ಗೆ 10.30 ರಿಂದ 12.00
ಯಮಗಂಡಕಾಲ: ಬೆಳಗ್ಗೆ 7.30 ರಿಂದ 9.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಆರ್ಥಿಕವಾಗಿ ಬಲಿಷ್ಠತೆ ಇರಲಿದೆ. ಹೂಡಿಕೆ ವ್ಯವಹಾರಗಳಲ್ಲಿ ಪ್ರಗತಿ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಒತ್ತಡ ಇರಲಿದೆ. ಹಳೆಯ ಸ್ನೇಹಿತರ ಜತೆ ಕಾಲ ಕಳೆಯುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 3

Horoscope Today

ವೃಷಭ: ಪ್ರಯಾಣ ಮಾಡುವ ಸಾಧ್ಯತೆ ಇದೆ. ಅನಿರೀಕ್ಷಿತ ಲಾಭಗಳನ್ನು ಪಡೆಯುವಿರಿ. ಕುಟುಂಬದ ಸದಸ್ಯರ ಬೆಂಬಲ ದೊರೆಯಲಿದೆ. ಸಂಗಾತಿಯೊಂದಿಗೆ ಮಾತಿಗೆ ಮಾತು ಬೆಳೆಸುವುದು ಬೇಡ. ಸಾಮಾಜಿಕ ಕಾರ್ಯಗಳಲ್ಲಿ ತೊಡಗುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಒತ್ತಡ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 2

Horoscope Today

ಮಿಥುನ: ಬಲವಂತವಾಗಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಪ್ರಸಂಗ ಬರಬಹುದು. ಇಂದಿನ ದಿವಸ ಗಾಬರಿಯಿಂದ ಇರುವ ಸಾಧ್ಯತೆ ಇದೆ. ಅವಘಡ ಸಂಭವ ನಿಧಾನವಾಗಿ ವಾಹನ ಚಾಲನೆ ಮಾಡಿ. ಕುಟುಂಬದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವಿರಿ. ಉದ್ಯೋಗಿಗಳಿಗೆ ಶುಭ ಫಲ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 8

Horoscope Today

ಕಟಕ: ಒತ್ತಡದ ಜೀವನಕ್ಕೆ ವಿಶ್ರಾಂತಿ ಸಿಗಲಿದೆ. ಹಣಕಾಸಿನ ಸಮಸ್ಯೆಗಳು ಪರಿಹಾರವಾಗಲಿವೆ. ಅಗತ್ಯ ವಸ್ತುಗಳ ಖರೀದಿ ಮಾಡುವಿರಿ. ಸಹದ್ಯೋಗಿಗಳ ಬೆಂಬಲ ಸಿಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

Horoscope Today

ಸಿಂಹ: ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಮಾನಸಿಕ ಆರೋಗ್ಯ ಸದೃಢವಾಗಿರಲಿದೆ. ಅತಿ ಅವಶ್ಯಕ ಕೆಲಸದ ಕಾರಣ ದೈಹಿಕ ಶ್ರಮವಾಗಲಿದೆ. ಉದ್ಯೋಗಿಗಳಿಗೆ ಸಹಕಾರ ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕ ಕಲಹಗಳಿಗೆ ಧ್ವನಿ ಆಗುವುದು ಬೇಡ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 2

Horoscope Today

ಕನ್ಯಾ: ಅನಿರೀಕ್ಷಿತ ಲಾಭಗಳನ್ನು ನಿರೀಕ್ಷಿಸಬಹುದು. ದೀರ್ಘಕಾಲದ ಪ್ರಯಾಣ ಬೆಳೆಸುವಿರಿ. ನಿರೀಕ್ಷೆಗೆ ತಕ್ಕಂತೆ ಫಲ ಸಿಗಲಿದೆ. ಆಪ್ತರೊಂದಿಗೆ ಸಮಯ ಹಂಚಿಕೊಳ್ಳುವ ಅವಕಾಶ ಇದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 9

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ದೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಸಿಗಲಿದೆ. ಕುಟುಂಬದಲ್ಲಿನ ಹಿರಿಯರೊಂದಿಗೆ ವಾದಕ್ಕೆ ಇಳಿಯುವುದು ಬೇಡ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಹರಟೆಯಿಂದ ಕಾಲ ಹರಣ ಮಾಡುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 3

Horoscope Today

ವೃಶ್ಚಿಕ: ಬಾಕಿ ಇರುವ ಕೆಲಸ ಕಾರ್ಯಗಳು ಪೂರ್ಣವಾಗುವುದು. ಸಕರಾತ್ಮಕ ಆಲೋಚನೆ ಮಾಡುವಿರಿ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ ಇದೆ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 5

Horoscope Today

ಧನಸ್ಸು: ಉದ್ಯೋಗದಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ. ಆತ್ಮವಿಶ್ವಾಸ ಹೆಚ್ಚಲಿದೆ. ಕುಟುಂಬ ಸದಸ್ಯರ ಮೇಲೆ ಕೋಪಗೊಳ್ಳುವುದು ಬೇಡ. ಆರೋಗ್ಯ ಮಧ್ಯಮವಾಗಿರಲಿದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಉದ್ಯೋಗಿಗಳಿಗೆ ಉತ್ತಮ ಫಲ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 2

Horoscope Today

ಮಕರ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ, ಪ್ರಯಾಣ ಮಾಡುವ ಸಾಧ್ಯತೆಇದೆ. ಆರ್ಥಿಕ ಪ್ರಗತಿ ಉತ್ತಮವಾಗಿರಲಿದೆ. ಪ್ರಮುಖ ಯೋಜನೆ ಕೈಗೊಳ್ಳುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 2

Horoscope Today

ಕುಂಭ: ನಿಮ್ಮ ವರ್ತನೆ ಇತರರಿಗೆ ಮುಜುಗರ ಉಂಟು ಮಾಡುವ ಸಾಧ್ಯತೆ ಇದೆ. ಯಾರೊಂದಿಗೂ ಅತಿಯಾದ ಸಲುಗೆ ಬೇಡ. ಆತುರದ ಮಾತುಗಳು ಅಪಾಯ ತರುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಮೀನ: ಒತ್ತಡದ ಕೆಲಸದಿಂದ ಮುಕ್ತಿ ಸಿಗಲಿದೆ. ದೀರ್ಘಕಾಲದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ. ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ ಸಿಗುವುದು. ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 6

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಹುಬ್ಬಳ್ಳಿ

Physical Abuse : ನೌಕರಿ ಆಮಿಷ ತೋರಿಸಿ ಮಂಚಕ್ಕೆ ಕರೆದ ಹುಬ್ಬಳ್ಳಿಯ ರೈಲ್ವೆ ಇಲಾಖೆ ಕ್ಲರ್ಕ್!

Physical Abuse : ರೈಲ್ವೆ ನೌಕರಿ ಬೇಕು ಎಂದರೆ ಮಂಚ ಏರಬೇಕೆಂದು ಕ್ಲರ್ಕ್‌ವೊಬ್ಬ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಗೆಸ್ಟ್‌ಹೌಸ್‌ಗೆ ಬರುವಂತೆ ಹೇಳಿದ್ದ ಕಾಮುಕನನ್ನು ಸ್ಥಳೀಯರು ಕೂಡಿ ಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.

VISTARANEWS.COM


on

By

Koo

ಹುಬ್ಬಳ್ಳಿ: ಹುಬ್ಬಳ್ಳಿಯ ರೈಲ್ವೆ ಇಲಾಖೆ (physical Abuse) ಕ್ಲರ್ಕ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿದೆ. ನೌಕರಿ ಆಮಿಷ ತೋರಿಸಿ ಮಂಚಕ್ಕೆ ಕರೆದಿರುವುದಾಗಿ ಸಂತ್ರಸ್ತೆ ಆರೋಪಿಸಿದ್ದಾರೆ. ಕ್ಲರ್ಕ್ ನದೀಂ ಎಂಬಾತ ವಿರುದ್ಧ ಕೇಶ್ವಾಪುರದ ಮಹಿಳೆ ದೂರು ನೀಡಿದ್ದಾರೆ.

Yoga guru arrested in Chikmagalur

ರೈಲ್ವೆ ಇಲಾಖೆ ನೌಕರಿ ಬೇಕು ಅಂದರೆ ಮಂಚ ಏರಬೇಕೆಂದು ಕಿರುಕುಳ ನೀಡಿದ್ದಾನೆ. ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳ ಗೆಸ್ಟ್ ಹೌಸ್‌ಗೆ ಈ ನದೀಂ ಕರೆದಿದ್ದನಂತೆ. ಸದ್ಯ ನದೀಂ ವಿರುದ್ಧ ಕೇಶ್ವಾಪುರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ. ಗೆಸ್ಟ್ ಹೌಸ್‌ನಲ್ಲಿದ್ದ ನದೀಂನನ್ನು ಸ್ಥಳೀಯರು ಕೂಡಿಹಾಕಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಕೇಶ್ವಾಪುರ ಠಾಣೆ ಪೊಲೀಸರು ನದೀಂನನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಅತ್ಯಾಚಾರ ಆರೋಪ ವಿದೇಶಿ ಮಹಿಳೆಯಿಂದ ದೂರು

ಚಿಕ್ಕಮಗಳೂರು: ಅತ್ಯಾಚಾರದ ಆರೋಪದ (Physical Abuse) ಮೇಲೆ ಯೋಗ ಗುರು ಬಂಧನವಾಗಿದೆ. ಪ್ರದೀಪ್ ಉಲ್ಲಾಳ್ (53) ಬಂಧಿತ ಆರೋಪಿ. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರದೀಪ್ ಉಲ್ಲಾಳ್ ಮಲ್ಲೇನಹಳ್ಳಿಯಲ್ಲಿ ಯೋಗ ಶಾಲೆ ನಡೆಸುತ್ತಿದ್ದ. ಯೋಗ ತರಬೇತಿಗೆಂದು ಕ್ಯಾಲಿಫೋರ್ನಿಯಾದಿಂದ ಮಹಿಳೆಯೊಬ್ಬರು ಬಂದಿದ್ದರು.

ಕಳೆದ 4 ವರ್ಷದಿಂದಲೂ ಯೋಗ ಗುರು ಜತೆ ಮಹಿಳೆ ಸಂಬಂಧ ಹೊಂದಿದ್ದರು. ಬೇರೆ ಮಹಿಳೆಯರ ಜತೆಯೂ ಗುರುವಿನ ಸಂಬಂಧ ತಿಳಿದ ಮಹಿಳೆ ಜಗಳವಾಡಿದ್ದರು. ವಿದೇಶಿ ಮಹಿಳೆಯಿಂದ ಯೋಗ ಗುರು ಪ್ರದೀಪ್‌ ಸುಮಾರು 20 ಲಕ್ಷ ರೂ. ಹಣ ಕಿತ್ತಿದ್ದ ಎಂಬ ಆರೋಪವು ಇದೆ. ಇದೇ ವಿಚಾರವಾಗಿ ಯೋಗ ಗುರು ಹಾಗು ಕ್ಯಾಲಿಫೋರ್ನಿಯಾ ಮಹಿಳೆಗೂ ಜಗಳವಾಗಿತ್ತು.


Yoga guru arrested in Chikmagalur
Yoga guru arrested in Chikmagalur

ವಿದೇಶಿ ಮಹಿಳೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಗ ಗುರುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Gold Smuggling: ಗುದದ್ವಾರದಲ್ಲಿತ್ತು ಕೋಟಿ ಮೌಲ್ಯದ ಚಿನ್ನ; ಶ್ರೀಲಂಕಾದಿಂದ ಬಂದವರು ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಲಾಕ್‌

ಅರ್ಥವಾಗದ ಪಾಠವನ್ನು ಹೇಳಿಕೊಡುವುದಾಗಿ ವಿದ್ಯಾರ್ಥಿನಿಯನ್ನು ಕರೆಸಿ ಅತ್ಯಾಚಾರವೆಸಗಿದ ಉಪನ್ಯಾಸಕ

ಶಿವಮೊಗ್ಗ : ವಿದ್ಯಾರ್ಥಿನಿಯನ್ನು ಪುಸಲಾಯಿಸಿದ ಉಪನ್ಯಾಸಕನೊಬ್ಬ ಮದುವೆ ಆಗುವುದಾಗಿ (Physical Abuse) ನಂಬಿಸಿ ಅತ್ಯಾಚಾರವೆಸಗಿದ್ದಾನೆ. ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ಉಪನ್ಯಾಸಕನನ್ನು ಪೊಲೀಸರು ಬಂಧಿಸಿದ್ದಾರೆ. ಸಾಗರದ ಖಾಸಗಿ ಕಾಲೇಜಿನ ಉಪನ್ಯಾಸಕನಾಗಿರುವ ಪುನೀತ್ ಬಂಧಿತ ಆರೋಪಿಯಾಗಿದ್ದಾನೆ.

ಅರ್ಥವಾಗದ ವಿಷಯದ ಬಗ್ಗೆ ಅರ್ಥ ಮಾಡಿಸಿಕೊಡ್ತೇನೆ ಅಂತೇಳಿ ವಿದ್ಯಾರ್ಥಿನಿ ಜತೆ
ಸ್ನೇಹ ಬೆಳೆಸಿದ್ದ. ಸ್ನೇಹ ನಂತರ ಮದುವೆಯಾಗುವುದಾಗಿ ನಂಬಿಸಿದ್ದ ಉಪನ್ಯಾಸಕ ತದನಂತರ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ. ಸದ್ಯ ಅತ್ಯಾಚಾರ ಕುರಿತು ಶಿವಮೊಗ್ಗ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ಉಪನ್ಯಾಸಕ ಪುನೀತ್ ವಶಕ್ಕೆ ಪಡೆದ ಪೊಲೀಸರು ವಿಚಾರಣೆಯನ್ನು ಮುಂದುವರಿಸಿದ್ದಾರೆ.

Continue Reading

ಆರೋಗ್ಯ

Dengue Fever : ಮಹಾಮಾರಿ ಡೆಂಗ್ಯೂ ಈಗ ಸಾಂಕ್ರಾಮಿಕ ರೋಗ; ಸೊಳ್ಳೆಗಳ ನಿಯಂತ್ರಣ ಮಾಡದಿದ್ದರೆ ದಂಡಾಸ್ತ್ರ ಪ್ರಯೋಗ

Dengue Fever : ಮಹಾಮಾರಿ ಡೆಂಗ್ಯೂ ಈಗ ಸಾಂಕ್ರಾಮಿಕ ರೋಗ; ಸೊಳ್ಳೆಗಳ ನಿಯಂತ್ರಣ ಮಾಡದಿದ್ದರೆ ದಂಡಾಸ್ತ್ರ ಪ್ರಯೋಗ

VISTARANEWS.COM


on

By

Dengue is now an epidemic
Koo

ಬೆಂಗಳೂರು: ಡೆಂಗ್ಯೂ ಜ್ವರವನ್ನು (Dengue Fever) ಸಾಂಕ್ರಾಮಿಕ ರೋಗ (Epidemic Diseases) ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಸಾಂಕ್ರಾಮಿಕ ರೋಗಗಳ ಕಾಯಿದೆ 2020 ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ. ಅಧಿಸೂಚನೆ ಉಲ್ಲಂಘನೆಗೂ ದಂಡ ನಿಗದಿ ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಸೂಚನೆ ನೀಡಿದೆ. ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯ ಕ್ರಮವಹಿಸಲಾಗಿದೆ. ಸೊಳ್ಳೆಗಳ ನಿಯಂತ್ರಣ ಮಾಡದಿದ್ದರೆ ದಂಡಾಸ್ತ್ರ ಪ್ರಯೋಗ ಮಾಡಲಾಗುತ್ತದೆ.

ಡಿಸಿಗಳಿಗೆ ಅಧಿಕಾರ

ಡೆಂಗ್ಯೂ ರೋಗವನ್ನು ಸಾಂಕ್ರಾಮಿಕ ರೋಗ ಪಟ್ಟಿಗೆ ಸೇರಿಸಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಜನರಿಗೆ ಇದುವರೆಗೆ ಜಾಗೃತಿ ಮೂಡಿಸಿ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿದ್ದವಿ. ಆದರೆ ಇದುವರೆಗೆ ನಮಗೆ ಯಾವ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಮಂಗಳೂರು, ಬೆಂಗಳೂರಿನಲ್ಲಿ ಮಾತ್ರ ಪಾಲಿಕೆಗಳು ಕೆಲ ಕ್ರಮ ತೆಗೆದುಕೊಳ್ಳುವ ಅವಕಾಶ ಇತ್ತು, ಬೇರೆ ಕಡೆ ಇರಲಿಲ್ಲ. ಇದೀಗ ಡೆಪ್ಯುಟಿ ಕಮೀಷನರ್‌, ಡಿಸಿಗಳು ಇನ್ನು ಮುಂದೆ ಕ್ರಮ ತೆಗೆದುಕೊಳ್ಳುವ ಅಧಿಕಾರ ನೀಡಿದ್ದೇವೆ. ಮನೆ, ಸಂಸ್ಥೆ, ಕಟ್ಟಡಗಳು, ನಿರ್ಮಾಣ ಹಂತದ ಸೈಟ್, ಹೋಟೆಲ್ ಹೀಗೆ ಹಲವು ಸ್ಥಳಗಳ ಸುತ್ತಮುತ್ತ ಸರಿಯಾದ ನಿರ್ವಹಣೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ.

ಆ ಪ್ರಕಾರ ಗ್ರಾಮೀಣ ಪ್ರದೇಶಗಳ ಮನೆಗಳಿಗೆ 200 ರೂ. ದಂಡ, ನಗರ ಪ್ರದೇಶಗಳ ಮನೆಗಳಿಗೆ 400 ರೂ., ನಗರ ಪ್ರದೇಶದ ವಾಣಿಜ್ಯ ಪ್ರದೇಶ, ಮಾಲ್, ಮಾರುಕಟ್ಟೆಗಳಿಗೆ 1 ಸಾವಿರ ರೂ, ಗ್ರಾಮೀಣ ಪ್ರದೇಶಗಳಲ್ಲಿ 500 ರೂವರೆಗೆ ದಂಡ ಇರಲಿದೆ. ಖಾಲಿ ಸ್ಥಳ, construction ಸೈಟ್ ( ನಗರ ಪ್ರದೇಶ) 2 ಸಾವಿರ ರೂ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 1 ಸಾವಿರ ರೂ ದಂಡ ಇರಲಿದೆ.

ಡೆಂಗ್ಯೂ ಹೇಗೆ ಹರಡುತ್ತದೆ?

ಡೆಂಗ್ಯೂ ಜ್ವರ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು ಆಗಿದೆ. ಇದು ಈಡಿಪಸ್‌ ಎಂಬ ಹೆಣ್ಣು ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಸೊಳ್ಳೆ ಕಚ್ಚಿದ 4-7 ದಿನಗಳ ನಂತರ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಇದರ ಪ್ರಭಾವ 10 ದಿನಗಳವರೆಗೆ ಇರುತ್ತದೆ. ಹೀಗಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು ಉತ್ತಮವಾಗಿದೆ.

ಡೆಂಗ್ಯೂ ಜ್ವರ ತಲೆನೋವಿನಂತಹ ರೋಗಲಕ್ಷಣಗಳನ್ನು ಉಂಟು ಮಾಡಬಹುದು. ಡೆಂಗ್ಯೂವನ್ನು ಹೆಮರಾಜಿಕ್ ಜ್ವರ ಎಂದೂ ಕರೆಯಲಾಗುತ್ತದೆ. ಡೆಂಗ್ಯೂ ಜ್ವರದ ತೀವ್ರ ಸ್ವರೂಪವು ತೀವ್ರ ರಕ್ತಸ್ರಾವ, ರಕ್ತದೊತ್ತಡ ಹಾಗೂ ರಕ್ತಕಣಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿ ವ್ಯಕ್ತಿಯ ಸಾವಿಗೂ ಕಾರಣವಾಗಬಹುದು. ಅಧಿಕ ಜ್ವರ, ತೀವ್ರ ತಲೆನೋವು, ವಾಂತಿ, ದೇಹದ ವಿವಿಧ ಭಾಗಗಳಲ್ಲಿ ದದ್ದುಗಳು, ಗ್ರಂಥಿಗಳಲ್ಲಿ ಊತ, ಮೂಳೆ ಮತ್ತು ಕೀಲು ನೋವು, ರಕ್ತಸ್ರಾವವಾಗವುದು ರೋಗ ಲಕ್ಷಣಗಳಾಗಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಉಡುಪಿ

Forced Conversion : ಪ್ರೀತಿ ಹೆಸರಿನಲ್ಲಿ ಇಸ್ಲಾಂಗೆ ಮತಾಂತರ! ಒಲ್ಲೆ ಎಂದವಳ ಕಪಾಳಕ್ಕೆ ಹೊಡೆದು ಕಿರುಕುಳ ಕೊಟ್ಟ ವೈದ್ಯ

Forced Conversion : ಪ್ರೀತಿ ಹೆಸರಿನಲ್ಲಿ ಇಸ್ಲಾಂಗೆ ಮತಾಂತರಕ್ಕೆ ಯತ್ನಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಮತಾಂತಕ್ಕೆ ಒಲ್ಲೆ ಎಂದವಳ ಕಪಾಳಕ್ಕೆ ಹೊಡೆದು ಕಿರುಕುಳ ಕೊಟ್ಟ ವೈದ್ಯನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

VISTARANEWS.COM


on

By

Conversion to Islam in the name of love
Koo

ಉಡುಪಿ: ಇಸ್ಲಾಂಗೆ ಮತಾಂತರವಾಗುವಂತೆ (Forced Conversion) ವೈದ್ಯನಿಂದ ಕಿರುಕುಳ ಆರೋಪ ಕೇಳಿ ಬಂದಿದೆ. ಸಹಪಾಠಿ ವೈದ್ಯ ವಿದ್ಯಾರ್ಥಿನಿಯಿಂದಲೇ ಈ ಸಂಬಂಧ ದೂರು ದಾಖಲಾಗಿದೆ. ಸದ್ಯ ಕಿರುಕುಳ ನೀಡಿದ ಆರೋಪದಲ್ಲಿ ಮಹಮ್ಮದ್ ಡ್ಯಾನಿಷ್ ಖಾನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸ್ನಾತಕೋತ್ತರ ಪದವಿಗಾಗಿ ವೈದ್ಯ ವಿದ್ಯಾರ್ಥಿಗಳು ದೆಹಲಿ ಮತ್ತು ರಾಜಸ್ಥಾನದಿಂದ ಮಣಿಪಾಲಕ್ಕೆ ಬಂದಿದ್ದರು. ಈ ನಡುವೆ ವೈದ್ಯ ವಿದ್ಯಾರ್ಥಿಗಳು ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿಯಲ್ಲಿದ್ದಾಗಲೇ ಮಹಮ್ಮದ್‌ ಡ್ಯಾನಿಷ್‌ ಮದುವೆಯ ಪ್ರಸ್ತಾಪ ಮುಂದಿಟ್ಟಿದ್ದ. ಆದರೆ ಇಸ್ಲಾಂಗೆ ಮತಾಂತರವಾಗಬೇಕೆಂದು ಸಂತ್ರಸ್ತೆಗೆ ಷರತ್ತು ಹಾಕಿದ್ದ. ಈ ಬಗ್ಗೆ ಉಡುಪಿ ಮಹಿಳಾ ಠಾಣೆಯಲ್ಲಿ ಆ.31ರಂದು ದೂರು ದಾಖಲಾಗಿತ್ತು.

ಮಹಮ್ಮದ್ ಡ್ಯಾನಿಷ್ ಖಾನ್ ಮತ್ತು ಸಂತ್ರಸ್ತೆ ಒಂದೇ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಇವರಿಬ್ಬರು ಕ್ಯಾಂಪಸ್‌ನಲ್ಲಿ ಪರಿಚಯವಾಗಿದ್ದರು. ಬಳಿಕ ಮಹಮ್ಮದ್‌ ಡ್ಯಾನಿಷ್‌ ಸಂತ್ರಸ್ತೆಯ ಫೋನ್ ನಂಬರ್ ಪಡೆದುಕೊಂಡು ಗೆಳೆತನ ಬೆಳೆಸಿದ್ದ. ನಂತರ 2024ರ ಜ.22 ರಂದು ಮಾತುಕತೆ ವೇಳೆ ಹಿಂದೂ ಧರ್ಮ ಹಾಗೂ ರಾಮ ಮಂದಿರದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದನಂತೆ.

ಇದನ್ನೂ ಓದಿ:Fraud Case: ಟ್ರೇಡಿಂಗ್‌ ಹೆಸ್ರಲ್ಲಿ ಕೋಟಿ ಕೋಟಿ ಗುಳುಂ; ಗುಜರಿ ವ್ಯಾಪಾರಿಗೆ ಖೋಟಾ ನೋಟು ಕೊಟ್ಟು ವಂಚನೆಗೆ ಯತ್ನ

2024ರ ಮಾ.11ರಂದು ಸಂತ್ರಸ್ತೆ ಯುವತಿ ಆರೋಪಿ ಮಹಮ್ಮದ್‌ ರೂಮಿಗೆ ತೆರಳಿದ್ದಳಂತೆ. ಆಗ ಆತ ಮತಾಂತರಕ್ಕೆ ಒತ್ತಾಯಿಸಿದ್ದನಂತೆ. ಮತಾಂತಕ್ಕೆ ನಿರಾಕರಿಸಿದಾಗ ಆರೋಪಿ ಮಹಮ್ಮದ್‌ ಸಂತ್ರಸ್ತೆಯ ಕೆನ್ನೆಗೆ ಹೊಡೆದು, ಕೂದಲು ಹಿಡಿದು ಎಳೆದಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಸಿದ್ದಾಳೆ. ಜತೆಗೆ ದೇಹದ ಖಾಸಗಿ ಭಾಗವನ್ನು ಮುಟ್ಟಿ ಲೈಂಗಿಕತೆಗೆ ಬೇಡಿಕೆ ಇಟ್ಟಿದ್ದ ಎಂಬ ಆರೋಪವೂ ಇದೆ.

2024ರ ಆ.28 ರವರೆಗೂ ಫೋನ್‌ನಲ್ಲಿ ತನ್ನನ್ನು ಸಂಪರ್ಕಿಸಿ ನಿರಂತರ ಕಿರುಕುಳ ನೀಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ಪ್ರಕರಣದ ಸಂಬಂಧ ಆರೋಪಿ ಮಹಮ್ಮದ್ ಡ್ಯಾನಿಷ್ ಖಾನ್ (27) ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಕೋರ್ಟ್‌ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Actor Darshan to be questioned in Parappana Agrahara jail
ಪ್ರಮುಖ ಸುದ್ದಿ2 mins ago

Actor Darshan: ರೇಣುಕಾಸ್ವಾಮಿ ಸಾಯೋವರೆಗೂ ಶೆಡ್‌ನಲ್ಲೇ ಇದ್ದರಾ ನಟ ದರ್ಶನ್! ಚಾರ್ಜ್ ಶೀಟ್‌ನಲ್ಲಿ ಏನೆಲ್ಲ ಇದೆ ಗೊತ್ತಾ?

Murder Case
ಬೆಳಗಾವಿ39 mins ago

Murder Case : ಮಲಗಿದ್ದವನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಕಟುಕ

Murder Case
ಕೊಪ್ಪಳ2 hours ago

Murder Case : ದಲಿತ ಯುವತಿಯನ್ನು ವಿಷವಿಟ್ಟು ಕೊಲೆಗೈದ ಪಾಪಿಗಳು

Murder case
ಕೊಡಗು2 hours ago

Murder Case : ಕುಡಿದ ಮತ್ತಿನಲ್ಲಿ ಕತ್ತಿಯಿಂದ ಕಡಿದು ಕೊಂದು ಹಾಕಿದ ಪಾಪಿ

murder case
ಬೆಳಗಾವಿ4 hours ago

Murder Case: ಸಾಲಗಾರ ಪತಿಯನ್ನು ಚಟ್ಟಕ್ಕೇರಿಸಿದ ಪತ್ನಿ-ಅತ್ತೆ

heart attack
ಚಿಕ್ಕೋಡಿ5 hours ago

Heart Attack: ದೂರವಾಣಿಯಲ್ಲಿ ಮಾತನಾಡುತ್ತ ಹೃದಯಾಘಾತದಿಂದ ಸಾವನ್ನಪ್ಪಿದ ಯುವಕ

State Best Teacher Award
ಬೆಂಗಳೂರು9 hours ago

State Best Teacher Award: 31 ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ; ಶಿಕ್ಷಣ ಇಲಾಖೆಯಿಂದ ಪಟ್ಟಿ ಬಿಡುಗಡೆ

cet exam karnataka exam authority
ಬೆಂಗಳೂರು10 hours ago

CET-NEET: ಸಿಇಟಿ-ನೀಟ್; ಛಾಯ್ಸ್ ದಾಖಲು ಸೆ.4ರ ಮಧ್ಯಾಹ್ನ 12ಗಂಟೆಗೆ ಕೊನೆ

karnataka weather Forecast
ಮಳೆ14 hours ago

Karnataka Weather : ಗುಡುಗು ಸಹಿತ ಭಾರಿ ಮಳೆ; ಆರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Dina Bhavishya
ಭವಿಷ್ಯ14 hours ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಒತ್ತಡ ಇದ್ದರೂ ಸ್ನೇಹಿತರ ಜತೆ ಕಾಲ ಕಳೆಯುವಿರಿ

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್4 days ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್6 days ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 weeks ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ4 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 month ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 month ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌