ದೇಶಾದ್ಯಂತ Halal ಉತ್ಪನ್ನ ಬ್ಯಾನ್‌ ಮಾಡಿ: ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ - Vistara News

ದೇಶ

ದೇಶಾದ್ಯಂತ Halal ಉತ್ಪನ್ನ ಬ್ಯಾನ್‌ ಮಾಡಿ: ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ

ಬರಬರುತ್ತ ಹಲಾಲ್‌ ಪ್ರಮಾಣಪತ್ರ ನೀಡುವಿಕೆ ಆಹಾರ ಕ್ಷೇತ್ರವನ್ನು ಮೀರಿ ವೈದ್ಯಕೀಯ, ವಸ್ತ್ರ ಕ್ಷೇತ್ರಗಳಿಗೂ ಕಾಲಿಟ್ಟಿತ್ತು. ಈ ವಿಚಾರವನ್ನು ಅನೇಕ ಹಿಂದುಪರ ಸಂಘಟನೆಗಳು ವಿರೋಧಿಸಿದವು.

VISTARANEWS.COM


on

supreme court
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಕರ್ನಾಟಕದಲ್ಲಿ ಭಾರೀ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿ ಇನ್ನೇನು ತಣ್ಣಗಾಗಿರುವ ಹಲಾಲ್‌ (Halal) ವಿಚಾರ ಮತ್ತೊಮ್ಮೆ ಜೀವ ಪಡೆಯುವ ಮುನೂಚನೆ ಲಭಿಸಿದ್ದು, ದೇಶಾದ್ಯಂತ ಹಲಾಲ್‌ ಉತ್ಪನ್ನಗಳನ್ನು ನಿಷೇಧಿಸಬೇಕು ಎಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.

ಇಸ್ಲಾಂ ಸಂಪ್ರದಾಯಕ್ಕೆ ಅನುಗುಣವಾಗಿ ಪ್ರಾಣಿಗಳ ಮಾಂಸವನ್ನು ಕತ್ತಿರುಸುವುದನ್ನು ಹಲಾಲ್‌ ಎನ್ನಲಾಗುತ್ತದೆ. ಮುಸ್ಲಿಮರು ಹಲಾಲ್‌ ಆಹಾರವನ್ನೇ ಸೇವಿಸಬೇಕು ಎಂದು ತಿಳಿಸಲಾಗಿದೆ. ಯಾವ ಹೋಟೆಲ್‌ ಹಾಗೂ ಆಹಾರ ಪದಾರ್ಥಗಳು ಹಲಾಲ್‌ ಸಂಪ್ರದಾಯಕ್ಕೆ ಅನುಗುಣವಾಗಿವೆ ಎನ್ನುವುದನ್ನು ಸೂಚಿಸಲು ಇತ್ತೀಚಿನ ವರ್ಷಗಳಲ್ಲಿ ಹಲಾಲ್‌ ಸರ್ಟಿಫಿಕೇಷನ್‌ ನೀಡಲಾಗುತ್ತಿತ್ತು.

ಬರಬರುತ್ತ ಈ ಪ್ರಮಾಣಪತ್ರ ನೀಡುವಿಕೆ ಆಹಾರ ಕ್ಷೇತ್ರವನ್ನು ಮೀರಿ ವೈದ್ಯಕೀಯ, ವಸ್ತ್ರ ಕ್ಷೇತ್ರಗಳಿಗೂ ಕಾಲಿಟ್ಟಿತ್ತು. ಈ ವಿಚಾರವನ್ನು ಅನೇಕ ಹಿಂದುಪರ ಸಂಘಟನೆಗಳು ವಿರೋಧಿಸಿದವು. ಕರ್ನಾಟಕದಲ್ಲಿ ಹಲಾಲ್‌ ಕಟ್‌ಗೆ ವಿರುದ್ಧವಾಗಿ ಝಟ್ಕಾ ಕಟ್‌ ಮಾಂಸ ಮಾರಾಟ ಮಾಡುವ ಅಭಿಯಾನ ನಡೆಯಿತು. ಝಟ್ಕಾ ಕಟ್‌ ಉದ್ಯಮವನ್ನು ಕೆಲವರು ಆರಂಭಿಸಿದರು. ಕರ್ನಾಟಕದಲ್ಲಿ ಕೆಲ ದಿನಗಳಿಂದ ಈ ವಿವಾದ ತಣ್ಣಗಾಗಿದೆ.

ಇದೀಗ ಸುಪ್ರೀಂಕೋರ್ಟ್‌ನಲ್ಲಿ ವಕೀಲ ವಿಭರ್‌ ಆನಂದ್‌ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ಹಲಾಲ್‌ ಮಾಂಸವನ್ನು ದೇಶದ 85% ಜನರ ಮೇಲೆ ಹೇರಲಾಗುತ್ತಿದ್ದು, ಅವರೆಲ್ಲರ ಪರವಾಗಿ ತಾವು ಈ ಅರ್ಜಿ ಸಲ್ಲಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

“ಕೇವಲ 15% ಇರುವ ಮುಸ್ಲಿಂ ಅಲ್ಪಸಂಖ್ಯಾತರಿಗಾಗಿ ಎಲ್ಲರೂ ಹಲಾಲ್‌ ಆಹಾರವನ್ನು ಸೇವಿಸಬೇಕೆಂದು ಬಯಸಲಾಗುತ್ತಿದೆ. 85% ಜನರ ಮೇಲೆ ಇದು ಹೇರಿಕೆಯಾಗಿದೆ” ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಅರ್ಜಿದಾರರ ಪ್ರಕಾರ ಇದು ಸಂವಿಧಾನದತ್ತವಾದ ಕಲಂ 14 ಹಾಗೂ 21ರ ಸ್ಪಷ್ಟ ಉಲ್ಲಂಘನೆಯಾಗಿದೆ.

“ಸಂವಿಧಾನದತ್ತವಾದ ಕಲಂ 14 ಹಾಗೂ 21ನ್ನು ಉಲ್ಲಂಘನೆ ಮಾಡಲಾಗುತ್ತಿದೆ. ಸಂವಿಧಾನವನ್ನೇ ಉಲ್ಲಂಘನೆ ಮಾಡಲಾಗುತ್ತಿದೆ” ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ಅರ್ಜಿದಾರರು ಹೇಳುವಂತೆ ಭಾರತದಲ್ಲಿ ಹಲಾಲ್‌ ಪ್ರಕ್ರಿಯೆ 1974ರಿಂದ ಆರಂಭವಾಯಿತು. ಇಂದು ಇದು ಹಲಾಲ್‌ ಸ್ನೇಹಿ ಪ್ರವಾಸೋದ್ಯಮ, ವೈದ್ಯಕೀಯ ಪ್ರವಾಸೋದ್ಯಮ, ಗೋದಾಮು ಪ್ರಮಾಣಪತ್ರ, ರೆಸ್ಟೋರೆಂಟ್‌ ಪ್ರಮಾಣೀಕರಣ ಸೇರಿ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ. ಇನ್ನೂ ಮುಂದುವರಿದು ಸಾರಿಗೆ, ಮಾಧ್ಯಮ, ಬ್ರ್ಯಾಂಡಿಂಗ್‌ ಹಾಗೂ ಮಾರ್ಕೆಟಿಂಗ್‌ಗೂ ಕಾಲಿಟ್ಟಿದೆ”.

ವಕೀಲ ರವಿಕುಮಾರ್‌ ತೋಮರ್‌ ಎಂಬವರ ಮೂಲಕ ಸಲ್ಲಿಕೆಯಾಗಿರುವ ಈ ಅರ್ಜಿಯು, ಪ್ರತಿವಾದಿಗಳಾದ ಜಮೀಯತ್‌ ಉಲೇಮಾ ಎ ಮಹಾರಾಷ್ಟ್ರ, ಹಲಾಲ್‌ ಸರ್ಟಿಫಿಕೇಷನ್‌ ಸರ್ವೀಸಸ್‌ ಆಫ್‌ ಇಂಡಿಯಾ ಪ್ರೈವೇಟ್‌ ಇಂಡಿಯಾ, ಜಮೀಯತ್‌ ಉಲೇಮಾ ಐ ಹಿಂದ್‌ ಹಲಾಲ್‌ ಟ್ರಸ್ಟ್‌ ಹಾಗೂ ಹಲಾಲ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ಗಳಿಂದ ಈಗಾಗಲೆ ವಿತರಣೆ ಮಾಡಲಾಗಿರುವ ಹಲಾಲ್‌ ಪ್ರಮಾಣಪತ್ರಗಳನ್ನು ಕೇಂದ್ರ ಸರ್ಕಾರ ರದ್ದು ಮಾಡಬೇಕು ಎಂದು ಕೋರಿದೆ.

ಇದರ ಜತೆಗೆ, ಕೆಫ್‌ಸಿ, ನೆಸ್ಟ್ಲೆ, ಬ್ರಿಟಾನಿಯಾ ಮುಂತಾದ, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಸ್ಥಳೀಯ ಕಂಪನಿಗಳು ತಮ್ಮ ಹಲಾಲ್‌ ಪ್ರಮಾಣೀಕೃತ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಬೇಕು ಎಂದು ಕೋರಿದ್ದಾರೆ. ಮುಸ್ಲಿಮೇತರರೆಲ್ಲರೂ ಹಲಾಲ್‌ ಪ್ರಮಾಣೀಕೃತ ಉತ್ಪನ್ನಗಳ ಖರೀದಿಯನ್ನು ಸ್ಥಗಿತಗೊಳಿಸಬೇಕು ಎಂದು ಕೋರಿಕೆ ಸಲ್ಲಿಸಲಾಗಿದೆ.

ಇದನ್ನೂ ಓದಿ: Explainer: ಕಾಂಗ್ರೆಸ್‌ ಉಳಿಸೋಕೆ ಪ್ರಶಾಂತ್‌ ಕಿಶೋರ್‌ ಪ್ಲಾನ್‌ ಏನು?

ಮುಕ್ತ ಮಾರುಕಟ್ಟೆಯಲ್ಲಿ ಗ್ರಾಹಕರು ಉತ್ಪನ್ನಗಳ ಆಯ್ಕೆಯನ್ನು ನಿರ್ಧಾರ ಮಾಡುವಂತಾಗಬೇಕು. ಮುಸ್ಲಿಮೇತರರು ತಮಗೆ ಮೋಸವಾಗಿದೆ ಹಾಗೂ ಒತ್ತಾಯ ಮಾಡಲಾಗುತ್ತಿದೆ ಎಂದು ಭಾವಿಸಿದರೆ ಅವರಿಗೆ ಹಲಾಲ್‌ ಅಲ್ಲದ ಉತ್ಪನ್ನಗಳ ಖರೀದಿಗೆ ಆಯ್ಕೆ ನೀಡಬೇಕು. ಆದರೆ ಸರಬರಾಜು ವ್ಯವಸ್ಥೆಯ ವೆಚ್ಚವನ್ನು ನಿಭಾಯಿಸಲು ಬಹುತೇಕ ಕಂಪನಿಗಳು ಕೇವಲ ಹಲಾಲ್‌ ಪ್ರಮಾಣೀಕೃತ ಉತ್ಪನ್ನಗಳನ್ನಷ್ಟೆ ನೀಡುತ್ತಿವೆ. ಹಲಾಲ್‌ ಆಹಾರ ಬೇಡ ಎನ್ನುವವರು ಹಾಗೂ ಝಟ್ಕಾ ಆಹಾರ ಮಾತ್ರ ಸೇವಿಸಬೇಕಿರುವ ಸಂಪ್ರದಾಯದವರಿಗೆ ಯಾವುದೇ ಆಯ್ಕೆಗಳು ಲಭಿಸುತ್ತಿಲ್ಲ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಂತಹ (FSSAI) ಸರ್ಕಾರಿ ಏಜೆನ್ಸಿಗಳು ಇದ್ದರೂ 100 ಕೋಟಿಗೂ ಹೆಚ್ಚು ಭಾರತೀಯರ ಮೇಲೆ ಹಲಾಲ್‌ ಪ್ರಮಾಣಪತ್ರವನ್ನು ಹೇರಿಕೆ ಮಾಡಲಾಗುತ್ತಿದೆ. ಎಲ್ಲರ ನಂಬಿಕೆಗಳ ಮೇಲೆ ಹೇರಿಕೆ ಮಾಡುವುದನ್ನು ಜಾತ್ಯಾತೀತತೆ ಎನ್ನಲು ಆಗುವುದಿಲ್ಲ ಎಂದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Narendra Modi: ತಾಯಂದಿರ ದಿನದಂದು ಮೋದಿಗೆ ವಿಶೇಷ ಉಡುಗೊರೆ ಕೊಟ್ಟ ಫ್ಯಾನ್ಸ್; ಏನದು ನೋಡಿ!

Narendra Modi: ಪಶ್ಚಿಮ ಬಂಗಾಳದಲ್ಲಿ ನರೇಂದ್ರ ಮೋದಿ ಅವರಿಗೆ ಎರಡು ವಿಶೇಷ ಉಡುಗೊರೆಗಳು ದೊರೆತಿವೆ. ತಾಯಂದಿರ ದಿನದ ಹಿನ್ನೆಲೆಯಲ್ಲಿ ಮೋದಿ ಅವರ ಇಬ್ಬರು ಅಭಿಮಾನಿಗಳು ಮೋದಿ ಹಾಗೂ ಅವರ ತಾಯಿ ಹೀರಾಬೆನ್‌ ಮೋದಿ ಇರುವ ಚಿತ್ರ ಬಿಡಿಸಿ, ಅವುಗಳನ್ನು ಉಡುಗೊರೆ ನೀಡಿದ್ದಾರೆ. ಇದಕ್ಕೆ ಮೋದಿ ಧನ್ಯವಾದ ತಿಳಿಸಿದ್ದಾರೆ.

VISTARANEWS.COM


on

Narendra Modi
Koo

ಕೋಲ್ಕೊತಾ: ಭಾನುವಾರ (ಮೇ 12) ವಿಶ್ವ ತಾಯಂದಿರ (Mother’s Day) ದಿನ. ಭಾರತ ಸೇರಿ ಜಗತ್ತಿನಾದ್ಯಂತ ಎಲ್ಲರೂ ತಮ್ಮ ತಾಯಂದಿರಿಗೆ ಶುಭ ಕೋರುವ ಮೂಲಕ ಖುಷಿ, ಧನ್ಯತಾ ಭಾವ ವ್ಯಕ್ತಪಡಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಪಶ್ಚಿಮ ಬಂಗಾಳದಲ್ಲಿ (West Bengal) ತಾಯಂದಿರ ದಿನದಂದು ವಿಶೇಷ ಉಡುಗೊರೆಗಳು ದೊರೆತಿವೆ. ಹೌದು, ತಾಯಂದಿರ ದಿನದ ಹಿನ್ನೆಲೆಯಲ್ಲಿ ಮೋದಿ ಅವರ ಇಬ್ಬರು ಅಭಿಮಾನಿಗಳು ಮೋದಿ ಹಾಗೂ ಅವರ ತಾಯಿ ಹೀರಾಬೆನ್‌ ಮೋದಿ ಇರುವ ಚಿತ್ರ ಬಿಡಿಸಿ, ಅವುಗಳನ್ನು ಉಡುಗೊರೆ ನೀಡಿದ್ದಾರೆ. ಇದಕ್ಕೆ ಮೋದಿ ಧನ್ಯವಾದ ತಿಳಿಸಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ಮಾತನಾಡಿದರು. ಇದೇ ವೇಳೆ, ಮೋದಿ ಅವರು ತಾಯಿ ಜತೆ ಇರುವ ಚಿತ್ರವನ್ನು ಬಿಡಿಸಿ, ಅದಕ್ಕೆ ಫ್ರೇಮ್‌ ಹಾಕಿಸಿ, ಸಮಾವೇಶದಲ್ಲಿ ಇಬ್ಬರು ಯುವಕರು ಅವುಗಳನ್ನು ಹಿಡಿದುಕೊಂಡು ನಿಂತಿದ್ದರು. ಮೋದಿ ಅವರು ಉಡುಗೊರೆ ನೋಡಿ ಖುಷಿ ಪಟ್ಟರು. “ನನ್ನ ತಾಯಿಯ ಫೋಟೊ ಉಡುಗೊರೆ ನೀಡಿರುವುದು ಖುಷಿ ತಂದಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಒಂದೇ ದಿನ ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ, ಭಾರತದಲ್ಲಿ ನಾವು ತಾಯಿ, ದುರ್ಗಾ ಮಾತೆ, ಕಾಳಿ ಮಾತೆ ಹಾಗೂ ಭಾರತ ಮಾತೆಯನ್ನು ವರ್ಷವಿಡೀ ಆರಾಧಿಸುತ್ತೇವೆ” ಎಂದರು.

5 ಗ್ಯಾರಂಟಿ ಘೋಷಿಸಿದ ಮೋದಿ

ಪಶ್ಚಿಮ ಬಂಗಾಳದ ಬರಾಕ್‌ಪುರದಲ್ಲಿ ನಡೆದ ಚುನಾವಣೆ ಸಮಾವೇಶದಲ್ಲಿ ಮಾತನಾಡಿದ ಅವರು 5 ಗ್ಯಾರಂಟಿ ಘೋಷಣೆ ಮಾಡಿದರು., “ನಾನು ಪಶ್ಚಿಮ ಬಂಗಾಳದ ಜನರಿಗೆ ಐದು ಗ್ಯಾರಂಟಿಗಳನ್ನು ನೀಡುತ್ತಿದ್ದೇನೆ. ನಾನು ಇರುವವರೆಗೆ ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡಲು ಬಿಡಲ್ಲ. ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಮೀಸಲಾತಿಯನ್ನು ರದ್ದುಗೊಳಿಸಲು ಬಿಡುವುದಿಲ್ಲ. ನೀವು ರಾಮನವಮಿಯನ್ನು ಆಚರಿಸುವುದನ್ನು ತಡೆಯಲು ಯಾರಿಂದಲೂ ಆಗಲ್ಲ. ಪಶ್ಚಿಮ ಬಂಗಾಳದಲ್ಲಿ ಸಿಎಎ ಜಾರಿಯನ್ನು ತಡೆಯಲು ಬಿಡುವುದಿಲ್ಲ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಯಾರಿಂದಲೂ ಬದಲಿಸಲು ಬಿಡಲ್ಲ” ಎಂದು ಮೋದಿ ಅವರು ಐದು ಗ್ಯಾರಂಟಿಗಳನ್ನು ಘೋಷಿಸಿದರು.

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ

ಭಾಷಣದ ವೇಳೆ ಮೋದಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. “ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್‌ನ ಒಂದು ಕುಟುಂಬದ ಸದಸ್ಯರು ದೇಶವನ್ನು ದಶಕಗಳವರೆಗೆ ಆಳಿದರು. ಆದರೆ, ಅವರು ಪೂರ್ವ ಭಾರತದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದರು. ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್‌, ಒಡಿಶಾ ಸೇರಿ ಹಲವು ರಾಜ್ಯಗಳ ಅಭಿವೃದ್ಧಿಯನ್ನು ಕಾಂಗ್ರೆಸ್‌ ಕಡೆಗಣಿಸಿತು. ಆದರೆ, ನೀವು 2014ರಲ್ಲಿ ಮೋದಿಯನ್ನು ಆಯ್ಕೆ ಮಾಡಿದಿರಿ. ಹಾಗಾಗಿ, ಈಗ ಇಡೀ ದೇಶವೇ ಏಳಿಗೆ ಹೊಂದುತ್ತಿದೆ. ಆರ್ಥಿಕತೆಯಲ್ಲಿ ನಾವು ದಾಪುಗಾಲು ಇಡುತ್ತಿದ್ದೇವೆ” ಎಂದರು.

ಇದನ್ನೂ ಓದಿ: Narendra Modi: ಚುನಾವಣೆ ಪ್ರಚಾರದ ವೇಳೆ 5 ಗ್ಯಾರಂಟಿಗಳನ್ನು ಘೋಷಿಸಿದ ಮೋದಿ; ಏನವು?

Continue Reading

ದೇಶ

Lok Sabha Election: 10 ರಾಜ್ಯಗಳ 96 ಕ್ಷೇತ್ರಗಳಲ್ಲಿ ನಾಳೆ ಮತದಾನ; ಕಣದಲ್ಲಿರುವ ಪ್ರಮುಖರು ಯಾರು?

Lok Sabha Election: 10 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 96 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಇದಕ್ಕಾಗಿ ಚುನಾವಣೆ ಆಯೋಗವು ಸಕಲ ಸಿದ್ಧತೆ ಮಾಡಿಕೊಂಡಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಜನ ಹಕ್ಕು ಚಲಾವಣೆ ಮಾಡಲಿದ್ದು, 1,717 ಅಭ್ಯರ್ಥಿಗಳ ಭವಿಷ್ಯವು ಮತಯಂತ್ರಗಳಲ್ಲಿ ಭದ್ರವಾಗಲಿದೆ. ಆಂಧ್ರಪ್ರದೇಶದ ವಿಧಾನಸಭೆ ಚುನಾವಣೆಯೂ ಸೋಮವಾರ ನಡೆಯಲಿದ್ದು, 175 ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಹೋರಾಟವಿದೆ.

VISTARANEWS.COM


on

Lok Sabha Election
Koo

ನವದೆಹಲಿ: ಲೋಕಸಭೆ ಚುನಾವಣೆಯ (Lok Sabha Election) ನಾಲ್ಕನೇ ಹಂತದ ಮತದಾನವು (Voting) ಸೋಮವಾರ (ಮೇ 12) ನಡೆಯಲಿದೆ. 10 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 96 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಇದಕ್ಕಾಗಿ ಚುನಾವಣೆ ಆಯೋಗವು (Election Commission) ಸಕಲ ಸಿದ್ಧತೆ ಮಾಡಿಕೊಂಡಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಜನ ಹಕ್ಕು ಚಲಾವಣೆ ಮಾಡಲಿದ್ದು, 1,717 ಅಭ್ಯರ್ಥಿಗಳ ಭವಿಷ್ಯವು ಮತಯಂತ್ರಗಳಲ್ಲಿ ಭದ್ರವಾಗಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

ಯಾವ ರಾಜ್ಯಗಳ ಎಷ್ಟು ಕ್ಷೇತ್ರಗಳಲ್ಲಿ ಮತದಾನ?

ನಾಲ್ಕನೇ ಹಂತದಲ್ಲಿ ಆಂಧ್ರಪ್ರದೇಶದ 25, ಬಿಹಾರ 5, ಜಮ್ಮು-ಕಾಶ್ಮೀರ 1, ಜಾರ್ಖಂಡ್ 4, ಮಧ್ಯಪ್ರದೇಶ 8, ಮಹಾರಾಷ್ಟ್ರ 11, ಒಡಿಶಾ 4, ತೆಲಂಗಾಣ 17, ಉತ್ತರ ಪ್ರದೇಶ 13 ಹಾಗೂ ಪಶ್ಚಿಮ ಬಂಗಾಳದ 8 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮೇ 13 ರಂದು ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯೂ ನಡೆಯಲಿದೆ. ಆಂಧ್ರಪ್ರದೇಶದ 175 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಆಂಧ್ರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ

ಆಂಧ್ರಪ್ರದೇಶದಲ್ಲಿ ಸೋಮವಾರ ವಿಧಾನಸಭೆ ಚುನಾವಣೆಯೂ ನಡೆಯಲಿದೆ. ಆಂಧ್ರಪ್ರದೇಶದ 175 ವಿಧಾನಸಭೆ ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಸತತ ಎರಡನೇ ಬಾರಿಗೆ ಸಿಎಂ ಗಾದಿಗೇರಲು ವೈ.ಎಸ್.‌ ಜಗನ್‌ಮೋಹನ್‌ ರೆಡ್ಡಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಮತ್ತೆ ಅಧಿಕಾರಕ್ಕೇರಲು ಟಿಡಿಪಿಯೂ ಸಜ್ಜಾಗಿದ್ದು, ಚುನಾವಣೆ ರಣಕಣವು ತೀವ್ರ ಜಿದ್ದಾಜಿದ್ದಿನಿಂದ ಕೂಡಿದೆ.

Y S Jagan Mohan Reddy

ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು

ಮೊಹುವಾ ಮೊಯಿತ್ರಾ: ಕೃಷ್ಣನಗರ ಕ್ಷೇತ್ರ
ಪಶ್ಚಿಮ ಬಂಗಾಳದ ಕೃಷ್ಣನಗರದಿಂದ ಸ್ಪರ್ಧೆ. ಟಿಎಂಸಿ ಅಭ್ಯರ್ಥಿ. ಸಂಸತ್ ನಲ್ಲಿ ಪ್ರಶ್ನೆಗಾಗಿ ಹಣ ಆರೋಪ ಹೊತ್ತಿರುವ ಸಂಸದೆ.

ಅಮೃತ ರಾಯ್: ಕೃಷ್ಣನಗರ ಕ್ಷೇತ್ರ
ಪಶ್ಚಿಮಬಂಗಾಳದ ಕೃಷ್ಣನಗರದ ಬಿಜೆಪಿ ಅಭ್ಯರ್ಥಿ. ರಾಜ ವಂಶಸ್ಥೆ, ಮೊಹುವಾ ಮೊಯಿತ್ರಾ ವಿರುದ್ಧ ಸ್ಪರ್ಧೆ.

ಅಧಿರ್ ರಂಜನ್ ಚೌಧರಿ : ಬೆಹರಾಮಪುರ್ ಕ್ಷೇತ್ರ
ಪಶ್ಚಿಮ ಬಂಗಾಳದ ಬೆಹರಾಂಪುರ ಕ್ಷೇತ್ರದಿಂದ ಸ್ಪರ್ಧೆ. ಕಾಂಗ್ರೆಸ್ ಅಭ್ಯರ್ಥಿ

ಯೂಸುಫ್ ಪಠಾಣ್ : ಬೆಹರಾಮಪುರ್ ಕ್ಷೇತ್ರ
ಮಾಜಿ ಕ್ರಿಕೆಟಿಗ ಯೂಸುಫ್ ಬೆಹರಾಂಪುರ ಕ್ಷೇತ್ರದಿಂದ ಟಿ ಎಂ ಸಿ ಅಭ್ಯರ್ಥಿ. ಅಧಿರ್ ರಂಜನ್ ಚೌಧರಿ ವಿರುದ್ಧ ಸ್ಪರ್ಧೆ

ಅಖಿಲೇಶ್ ಯಾದವ್: ಕನೌಜ್ ಕ್ಷೇತ್ರ
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಉತ್ತರ ಪ್ರದೇಶದ ಕನೌಜ್ ಕ್ಷೇತ್ರದಿಂದ ಸ್ಪರ್ಧೆ. ಈ ಕ್ಷೇತ್ರದಲ್ಲಿ ಸದ್ಯ ಬಿಜೆಪಿಯಿಂದ ಸುಬ್ರತಾ ಪಾಠಕ್ ಸಂಸದರಾಗಿದ್ದಾರೆ. 2019 ರ ಚುನಾವಣೆಯಲ್ಲಿ ಯಾದವ್, ಪತ್ನಿ ಡಿಂಪಲ್ ಅವರನ್ನು ಸೋಲಿಸುವ ಮೂಲಕ ಪಾಠಕ್ ಗೆಲುವು ಸಾಧಿಸಿದ್ದರು

ಗಿರಿರಾಜ್ ಸಿಂಗ್: ಬೇಗುಸರಾಯ್‌ ಕ್ಷೇತ್ರ
ಬಿಹಾರದ ಬೇಗುಸರಾಯ್‌ ಕ್ಷೇತ್ರದಿಂದ ಸ್ಪರ್ಧೆ. ಬಿಜೆಪಿಯ ಉಸ್ತುವಾರಿ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್. 2019ರ ಚುನಾವಣೆಯಲ್ಲಿ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್ ವಿರುದ್ಧ ಸಿಂಗ್ ವಿಜಯಶಾಲಿಯಾಗಿದ್ದರು

ವೈ.ಎಸ್. ಶರ್ಮಿಳಾ: ಕಡಪ ಕ್ಷೇತ್ರ
ಆಂಧ್ರದ ಮಾಜಿ ಸಿಎಂ ವೈಎಸ್ಆರ್ ಅವರ ಪುತ್ರಿ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ ವೈಎಸ್ ಶರ್ಮಿಳಾ, ತಮ್ಮ ಸೋದರ ಸಂಬಂಧಿ, ಎರಡು ಬಾರಿ ಹಾಲಿ ಸಂಸದ ವೈಎಸ್ ಅವಿನಾಶ್ ರೆಡ್ಡಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಶರ್ಮಿಳಾ ಸಹೋದರ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ

ಅಸಾದುದ್ದೀನ್ ಓವೈಸಿ: ಹೈದರಾಬಾದ್
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಈ ಕ್ಷೇತ್ರದಿಂದ ಸ್ಪರ್ಧೆ

ಮಾಧವಿ ಲತಾ: ಹೈದರಾಬಾದ್
ಅಸಾದುದ್ದೀನ್ ಓವೈಸಿ ವಿರುದ್ಧ ಸ್ಪರ್ಧೆ ಮಾಡುತ್ತಿರುವ ಬಿಜೆಪಿ ಅಭ್ಯರ್ಥಿ. ಹಿಂದುತ್ವದ ಫೈರ್ ಬ್ರಾಂಡ್ ಎಂದೇ ಖ್ಯಾತಿ ಪಡೆದಿರುವ ಮಾಧವಿ ಲತಾ‌

Madhavi Lata Kompella And Asaduddin Owaisi

ಅರ್ಜುನ್ ಮುಂಡ : ಖುಂತಿ ಕ್ಷೇತ್ರ
ಮೂರು ಬಾರಿ ಜಾರ್ಖಂಡ್‌ನಲ್ಲಿ ಮುಖ್ಯಮಂತ್ರಿ ಹಾಗೂ ಕೇಂದ್ರದಲ್ಲಿ ಪ್ರಸ್ತುತ ಸಚಿವರಾಗಿ ಕಾರ್ಯ ನಿರ್ವಹಿಸಿತ್ತಿರುವ ಅರ್ಜುನ್ ಮುಂಡ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಬಂಡಿ ಸಂಜಯ್ ಕುಮಾರ್: ಕರೀಂನಗರ ಕ್ಷೇತ್ರ
ಮಾಜಿ ಬಿಜೆಪಿ ರಾಜ್ಯಧ್ಯಕ್ಷ ಹಾಗೂ ಹಾಲಿ ಸಂಸದ ಬಂಡಿ ಸಂಜಯ್ ಕುಮಾರ್ ಕರೀಂನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಶತ್ರುಘ್ನ ಸಿನ್ಹಾ: ಅಸನ್ಸೋಲ್ ಕ್ಷೇತ್ರ
ಪಶ್ಚಿಮ ಬಂಗಾಳ ಅಸನ್ನೋಲ್ ಕ್ಷೇತ್ರದಿಂದ ಬಾಲಿವುಡ್ ನಟ ಹಾಗೂ ರಾಜಕಾರಣಿ, ಬಿಹಾರ್ ಬಾಬು ಎಂದೇ ಪ್ರಸಿದ್ದಿಯಾಗಿರುವ ಶತ್ರುಘ್ನ ಸಿನ್ಹಾ ಸ್ಪರ್ಧೆ. ಟಿ ಎಂ ಸಿ ಪಕ್ಷದ ಅಭ್ಯರ್ಥಿ

ಕಿಶನ್ ರೆಡ್ಡಿ : ಸಿಕಂದರಾಬಾದ್ ಕ್ಷೇತ್ರ
ಪ್ರಸ್ತುತ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಕಿಶನ್ ರೆಡ್ಡಿ ಸ್ಪರ್ಧೆಸುತ್ತಿರುವ ಕ್ಷೇತ್ರ.

ಇದನ್ನೂ ಓದಿ: Lok Sabha Election: 3ನೇ ಹಂತದಲ್ಲಿ 65% ಮತದಾನ; ಕರ್ನಾಟಕದಲ್ಲಿ ಶೇ.71.84ರಷ್ಟು ಹಕ್ಕು ಚಲಾವಣೆ

Continue Reading

ಪ್ರಮುಖ ಸುದ್ದಿ

PoK Crisis: ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ದಂಗೆಯೆದ್ದ ಜನ, ಗಲಾಟೆ; ಭಾರತದ ಜತೆ ವಿಲೀನಕ್ಕೆ ಆಗ್ರಹ!

PoK Crisis: ಜಮ್ಮು-ಕಾಶ್ಮೀರ ಜಾಯಿಂಟ್‌ ಅವಾಮಿ ಆಕ್ಷನ್‌ ಕಮಿಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಇದರ ಹತ್ತಾರು ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗ, ಲಾಠಿ ಚಾರ್ಜ್‌ ಮಾಡಿದರೂ ನಿಯಂತ್ರಿಸಲು ಆಗುತ್ತಿಲ್ಲ ಎನ್ನಲಾಗಿದೆ.

VISTARANEWS.COM


on

PoK
Koo

ಶ್ರೀನಗರ:‌ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ (PoK Crisisi) ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಸರ್ಕಾರ, ಅಧಿಕಾರಿಗಳ ವಿರುದ್ಧವೇ ಜನ ದಂಗೆ ಎದ್ದಿದ್ದಾರೆ. ಹಣದುಬ್ಬರ ಏರಿಕೆ (Inflation), ಹೆಚ್ಚಿನ ತೆರಿಗೆ ಹಾಗೂ ವಿದ್ಯುತ್‌ ಪೂರೈಕೆಯ ಕೊರತೆಯಿಂದಾಗಿ ಬೇಸತ್ತಿರುವ ಜನ ಸರ್ಕಾರದ ಕಚೇರಿಗಳು, ಪೊಲೀಸ್‌ ಅಧಿಕಾರಿಗಳ ಮೇಲೆಯೇ ದಾಳಿ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ, ಪಾಕ್‌ ಆಕ್ರಮಿತ ಕಾಶ್ಮೀರವನ್ನು ಭಾರತದ ಜತೆ ವಿಲೀನಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ. ಹಾಗಾಗಿ, ಪಿಒಕೆ ಮೇಲೆ ಪಾಕಿಸ್ತಾನದ (Pakistan) ನಿಯಂತ್ರಣವು ಪೂರ್ತಿ ಕೈತಪ್ಪಿಹೋಗಿದೆ ಎಂದು ಹೇಳಲಾಗುತ್ತಿದೆ.

ಹೌದು, ಕಳೆದ ಎರಡು ದಿನಗಳಿಂದ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಸುಮಾರು 10 ಜಿಲ್ಲೆಗಳಲ್ಲಿ ಜನ ಅಕ್ಷರಶಃ ದಂಗೆಯೆದ್ದಿದ್ದಾರೆ. ಮುಜಫರಾಬಾದ್‌ನಿಂದ ರಾವಲ್‌ಕೋಟ್‌ವರೆಗೆ ಜನ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾರೆ. ಸೇನೆ ಹಾಗೂ ಪೊಲೀಸರ ವಾಹನಗಳ ಮೇಲೆ ಕಲ್ಲುತೂರಾಟ, ಸರ್ಕಾರಿ ಕಚೇರಿಗಳ ಮೇಲೆ ದಾಳಿ, ಪೊಲೀಸರ ಮೇಲೆ ಹಲ್ಲೆ ಸೇರಿ ಹಲವು ರೀತಿಯ ಹಿಂಸಾಚಾರ ಭುಗಿಲೆದ್ದಿದೆ. ಈಗಾಗಲೇ ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನವು ಪಿಒಕೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಭಾರತದ ಜತೆ ವಿಲೀನಕ್ಕೆ ಬೇಡಿಕೆ

ಭಾರತದ ಜತೆ ಪಾಕ್‌ ಆಕ್ರಮಿತ ಕಾಶ್ಮೀರವನ್ನು ವಿಲೀನಗೊಳಿಸಬೇಕು ಎಂಬುದು ಕೂಡ ಪ್ರತಿಭಟನಾಕಾರರ ಬೇಡಿಕೆಯಾಗಿದೆ. ಭಾರತದ ಪರ ಘೋಷಣೆಗಳು, ಭಾರತದ ಧ್ವಜ ಪ್ರದರ್ಶನಗಳು ಕೂಡ ನಡೆದಿವೆ. ಇನ್ನು, ಸ್ವಾತಂತ್ರ್ಯ ಬೇಕು, ಸ್ವಾತಂತ್ರ್ಯಕ್ಕಾಗಿ ಹೋರಾಟ ಎಂಬ ಘೋಷಣೆಗಳು ಕೂಡ ಕೇಳಿಬಂದಿವೆ. ಪೊಲೀಸರು, ಭದ್ರತಾ ಸಿಬ್ಬಂದಿ ಹಾಗೂ ಜನರ ನಡುವಿನ ಸಂಘರ್ಷಕ್ಕೆ ಒಬ್ಬ ಪೊಲೀಸ್‌ ಅಧಿಕಾರಿ ಬಲಿಯಾಗಿದ್ದಾರೆ. ಪೊಲೀಸರು, ಸೈನಿಕರು ಸೇರಿ ಸುಮಾರು 90 ಜನ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಯಾವುದೇ ಕಾರಣಕ್ಕೂ ಜನರನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿಗೆ ಆಗುತ್ತಿಲ್ಲ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊಗಳಿಂದ ಮಾಹಿತಿ ಲಭ್ಯವಾಗಿದೆ.

ಜಮ್ಮು-ಕಾಶ್ಮೀರ ಜಾಯಿಂಟ್‌ ಅವಾಮಿ ಆಕ್ಷನ್‌ ಕಮಿಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಇದರ ಹತ್ತಾರು ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗ, ಲಾಠಿ ಚಾರ್ಜ್‌ ಮಾಡಿದರೂ ನಿಯಂತ್ರಿಸಲು ಆಗುತ್ತಿಲ್ಲ ಎನ್ನಲಾಗಿದೆ. ಈಗಾಗಲೇ ಪಿಒಕೆ ನಮ್ಮದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಪಿಒಕೆ ಜನರೇ ಭಾರತದ ಜತೆ ವಿಲೀನಗೊಳ್ಳಲು ಬಯಸುತ್ತಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ಇದರ ಬೆನ್ನಲ್ಲೇ, ಬಲೂಚಿಸ್ತಾನದ ಜತೆಗೆ ಪಿಒಕೆಯಲ್ಲೂ ದಂಗೆ ಶುರುವಾಗಿದೆ.

ಇದನ್ನೂ ಓದಿ: Pakistan Occupied Kashmir: ಪಾಕ್‌ ದಿವಾಳಿ, ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಹಿಂಸೆಯ ಹಾವಳಿ; ನಾಗರಿಕ ದಂಗೆ ಶುರು?

Continue Reading

ದೇಶ

Arvind Kejriwal: ಚೀನಾದಿಂದ ಭಾರತದ ನೆಲ ವಾಪಸ್‌ ಸೇರಿ 10 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್

Arvind Kejriwal: ಜೈಲಿನಿಂದ ಬಿಡುಗಡೆಯಾಗಿ ಬಂದಿರುವ ಅರವಿಂದ್‌ ಕೇಜ್ರಿವಾಲ್‌ ಅವರು ಕೇಂದ್ರ ಸರ್ಕಾರ, ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಅಬ್ಬರದ ಭಾಷಣಗಳ ಮೂಲಕ ಜನರ ವಿಶ್ವಾಸ ಗಳಿಸಲು ಯತ್ನಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಅವರು 10 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ.

VISTARANEWS.COM


on

Arvind Kejriwal
Koo

ನವದೆಹಲಿ: ಅಬಕಾರಿ ನೀತಿ ಜಾರಿ ವೇಳೆ ಹಗರಣ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ತಿಹಾರ ಜೈಲುಪಾಲಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರು ಮಧ್ಯಂತರ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ. ಇದರ ಬೆನ್ನಲ್ಲೇ ಅವರು, ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಜನರಿಗಾಗಿ 10 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ. ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ (India Bloc) ಅಧಿಕಾರಕ್ಕೆ ಬಂದರೆ ಇಷ್ಟೆಲ್ಲ ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುವುದು ಎಂದಿದ್ದಾರೆ.

“ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾನಿಂದು 10 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೇನೆ. ನನ್ನ ಬಂಧನದಿಂದಾಗಿ ಘೋಷಣೆ ಮಾಡುವುದು ವಿಳಂಬವಾಯಿತು. ಆದರೂ, ದೇಶದಲ್ಲಿ ಇನ್ನೂ ಹಲವು ಹಂತಗಳ ಮತದಾನ ಬಾಕಿ ಇದೆ. ಹಾಗಂತ, ಇಂಡಿಯಾ ಒಕ್ಕೂಟದ ಪಕ್ಷಗಳ ಜತೆ ಚರ್ಚಿಸಿ ಗ್ಯಾರಂಟಿಗಳನ್ನು ಘೋಷಣೆ ಮಾಡಿಲ್ಲ. ಇದರಿಂದ ಅವರಿಗೆ ಯಾವುದೇ ತೊಂದರೆ ಇಲ್ಲ ಎಂದು ಭಾವಿಸಿದ್ದೇನೆ. ಇಂಡಿಯಾ ಒಕ್ಕೂಟವು ದೇಶದಲ್ಲಿ ಅಧಿಕಾರಕ್ಕೆ ಬಂದರೆ ಈ 10 ಗ್ಯಾರಂಟಿಗಳನ್ನು ಜಾರಿಗೆ ತರಲಾಗುವುದು” ಎಂದು ಹೇಳಿದರು.

ಕೇಜ್ರಿವಾಲ್‌ ಘೋಷಿಸಿದ ಪ್ರಮುಖ ಗ್ಯಾರಂಟಿಗಳು

  1. ದೇಶಾದ್ಯಂತ 24 ಗಂಟೆ ವಿದ್ಯುತ್‌ ಪೂರೈಸುವುದು. ಇದರಿಂದ ಬಡವರಿಗೆ, ಉದ್ಯಮಿಗಳಿಗೆ ಅನುಕೂ ಮಾಡಿಕೊಡುವುದು.
  2. ಕೇಂದ್ರ ಹಾಗೂ ರಾಜ್ಯಗಳ ಸಹಕಾರದೊಂದಿಗೆ 5 ಲಕ್ಷ ಕೋಟಿ ರೂ. ವೆಚ್ಚದಲ್ಲಿ ದೇಶಾದ್ಯಂತ ಶಾಲೆ ನಿರ್ಮಿಸಿ, ಬಡವರಿಗೆ ಶಿಕ್ಷಣ ನೀಡುವುದು
  3. ದೇಶಾದ್ಯಂತ ಮೊಹಲ್ಲಾ ಕ್ಲಿನಿಕ್‌ಗಳನ್ನು ಸ್ಥಾಪಿಸಿ, ಉಚಿತವಾಗಿ ಚಿಕಿತ್ಸೆ ನೀಡಲಾಗುವುದು
  4. ಚೀನಾದ ಹಿಡಿತದಲ್ಲಿರುವ ಭಾರತದ ಜಾಗವನ್ನು ವಾಪಸ್‌ ಪಡೆಯುವುದು
  5. ಅಗ್ನಿವೀರ ಯೋಜನೆಯನ್ನು ರದ್ದುಗೊಳಿಸಿ, ಸೇನೆಯನ್ನು ಇನ್ನಷ್ಟು ಬಲಪಡಿಸುವುದು
  6. ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಖಾತರಿ ನೀಡುವುದು
  7. ದೆಹಲಿಗೆ ರಾಜ್ಯ ಸ್ಥಾನಮಾನ ನೀಡುವ ಮೂಲಕ ಏಳಿಗೆಗೆ ಇನ್ನಷ್ಟು ಶ್ರಮಿಸುವುದು

ಗ್ಯಾರಂಟಿ ಘೋಷಿಸಿದ ಬಳಿಕ ಮಾತನಾಡಿದ ಕೇಜ್ರಿವಾಲ್‌, “ದೇಶದ ಬಡವರು ಹಾಗೂ ರೈತರನ್ನು ಗಮನದಲ್ಲಿಟ್ಟುಕೊಂಡು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೇವೆ. ಕೇಂದ್ರದಲ್ಲಿ ಇಂಡಿಯಾ ಒಕ್ಕೂಟದ ಸರ್ಕಾರ ಬಂದರೆ, ಬಡವರಿಗೆ ಆರೋಗ್ಯ, ಶಿಕ್ಷಣ, ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು. ಇದಕ್ಕಾಗಿಯೇ ಗ್ಯಾರಂಟಿಗಳನ್ನು ಘೋಷನೆ ಮಾಡಿದ್ದೇವೆ” ಎಂದು ತಿಳಿಸಿದರು.

ಇದನ್ನೂ ಓದಿ: Narendra Modi: ಚುನಾವಣೆ ಪ್ರಚಾರದ ವೇಳೆ 5 ಗ್ಯಾರಂಟಿಗಳನ್ನು ಘೋಷಿಸಿದ ಮೋದಿ; ಏನವು?

Continue Reading
Advertisement
ಕರ್ನಾಟಕ12 mins ago

MLC Election: ಪರಿಷತ್‌ ಚುನಾವಣೆಗೂ ಮುನ್ನ ಒಪಿಎಸ್‌ ಮರು ಜಾರಿಗೆ ಮುಂದಾಯ್ತಾ ಕಾಂಗ್ರೆಸ್‌ ಸರ್ಕಾರ?

Queen's Premier League start
ಕ್ರಿಕೆಟ್36 mins ago

Queen’s Premier League: ಕಿರುತೆರೆ ,ಹಿರಿತೆರೆ ಹೆಣ್ಮಕ್ಕಳಿಗಾಗಿ ಶುರುವಾಯ್ತು ಕ್ವೀನ್ಸ್‌ ಪ್ರೀಮಿಯರ್ ಲೀಗ್!

Prajwal Revanna Case What was plan of advocate Devaraje Gowda Why did you leave for Delhi
ಕ್ರೈಂ37 mins ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ಕೇಸ್‌; ವಕೀಲ ದೇವರಾಜೇಗೌಡ ಪ್ಲ್ಯಾನ್‌ ಏನಿತ್ತು? ದೆಹಲಿಗೆ ಹೊರಟಿದ್ದು ಏಕೆ?

Mental Health Awareness Month
ಆರೋಗ್ಯ37 mins ago

Mental Health Awareness Month: ಮಾನಸಿಕ ಆರೋಗ್ಯ ಜಾಗೃತಿ ಮಾಸ; ಮತ್ತೆ ಮಗುವಿನಂತಾಗಲು ಪ್ರಯತ್ನಿಸಿ!

Narendra Modi
ದೇಶ39 mins ago

Narendra Modi: ತಾಯಂದಿರ ದಿನದಂದು ಮೋದಿಗೆ ವಿಶೇಷ ಉಡುಗೊರೆ ಕೊಟ್ಟ ಫ್ಯಾನ್ಸ್; ಏನದು ನೋಡಿ!

Murder case
ಕ್ರೈಂ40 mins ago

Murder Case : ಪತಿಯ ಡೆಡ್ಲಿ ಅಟ್ಯಾಕ್‌ಗೆ ಪತ್ನಿ ಸಾವು; ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ

Kannada New Movie Moorane Krishnappa trailer Out
ಸ್ಯಾಂಡಲ್ ವುಡ್50 mins ago

Kannada New Movie: ಮನರಂಜನೆಯ ರಸದೌತಣ ಬಡಿಸಲು ಬಂದ ʻಮೂರನೇ ಕೃಷ್ಣಪ್ಪʼ: ಟ್ರೈಲರ್‌ ಔಟ್‌!

Vimala Raman confirms her relationship with this villan actor
ಸ್ಯಾಂಡಲ್ ವುಡ್57 mins ago

Vimala Raman: ಖಳನಟನ ಜತೆ ಪ್ರೀತಿಲಿ ಬಿದ್ದ ʻಆಪ್ತರಕ್ಷಕʼ ನಟಿ

Money Guide
ಮನಿ-ಗೈಡ್1 hour ago

Money Guide: ಎಫ್‌ಡಿ V/S ಆರ್‌ಡಿ; ಯಾವುದು ಉತ್ತಮ? ಯಾವುದರಲ್ಲಿ ಹೂಡಿಕೆ ಮಾಡಬೇಕು?

Lok Sabha Election
ದೇಶ1 hour ago

Lok Sabha Election: 10 ರಾಜ್ಯಗಳ 96 ಕ್ಷೇತ್ರಗಳಲ್ಲಿ ನಾಳೆ ಮತದಾನ; ಕಣದಲ್ಲಿರುವ ಪ್ರಮುಖರು ಯಾರು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ4 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case Two people of pen drive allottees arrested
ಕ್ರೈಂ5 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ13 hours ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು1 day ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ2 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ2 days ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ2 days ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ3 days ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ3 days ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

ಟ್ರೆಂಡಿಂಗ್‌