Tumkur accident | ಕಂಬನಿ ಮಿಡಿದ ಸಿಎಂ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ, ಗಾಯಾಳುಗಳಿಗೆ ಉಚಿತ ಚಿಕಿತ್ಸೆ - Vistara News

Latest

Tumkur accident | ಕಂಬನಿ ಮಿಡಿದ ಸಿಎಂ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ, ಗಾಯಾಳುಗಳಿಗೆ ಉಚಿತ ಚಿಕಿತ್ಸೆ

ತುಮಕೂರು ಜಿಲ್ಲೆಯ ಕಳ್ಳಂಬೆಳ್ಳದಲ್ಲಿ ನಡೆದ ಅಪಘಾತದಲ್ಲಿ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ.

VISTARANEWS.COM


on

Tumkur accident
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ 10 ಮಂದಿ ಪ್ರಾಣ ಕಳೆದುಕೊಂಡು ಹಲವರು ಗಾಯಗೊಂಡಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನೆಯಿಂದ ತೀವ್ರ ದುಃಖಿತನಾಗಿದ್ದೇನೆ ಎಂದಿರುವ ಅವರು ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ.

ಈ ನಡುವೆ, ರಾಜ್ಯ ಸರಕಾರದಿಂದ ಮೃತರ ಕುಟುಂಬಗಳಿಗೆ ತಲಾ ೫ ಲಕ್ಷ ರೂ. ಮತ್ತು ಗಾಯಗೊಂಡಿರುವವರ ಚಿಕಿತ್ಸೆಯ ವೆಚ್ಚವನ್ನು ಸರಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ನಾಳೆ ಮನೆಗಳಿಗೆ ಭೇಟಿ ನೀಡುವ ಸಾಧ್ಯತೆ
ಶಿರಾ ಅಪಘಾತದಲ್ಲಿ ಮೃತಪಟ್ಟವರು ಮತ್ತು ಗಾಯಕ್ಕೊಳಗಾದವರೆಲ್ಲರೂ ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ನಿವಾಸಿಗಳು. ನಾಳೆ ರಾಯಚೂರು ಜಿಲ್ಲೆಯ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಮೃತರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳುವ ಸಾಧ್ಯತೆ ಇದೆ. ವಡವಟ್ಟಿ, ಕುರುಕುಂದ, ಶಾಂತಗಲ್ ಗ್ರಾಮಕ್ಕೆ ಭೇಟಿ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಎಚ್‌ಡಿಕೆ ಕಂಬನಿ
ʻʻತುಮಕೂರು ಜಿಲ್ಲೆಯ ಶಿರಾ ಬಳಿ ಸಂಭವಿಸಿರುವ ಭೀಕರ ರಸ್ತೆ ಅಪಘಾತದಲ್ಲಿ 9 ಜನರು ದುರ್ಮರಣಕ್ಕಾಗಿ, 13ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಸುದ್ದಿ ಕೇಳಿ ತೀವ್ರ ಆಘಾತವಾಯಿತು. ಮೃತಪಟ್ಟವರು ಕೂಲಿಕಾರ್ಮಿಕರು, ಬದುಕು ಕಟ್ಟಿಕೊಳ್ಳಲು ಅವರೆಲ್ಲರೂ ರಾಯಚೂರಿನಿಂದ ಬೆಂಗಳೂರಿಗೆ ಬರುತ್ತಿದ್ದರೆಂದು ತಿಳಿದು ನನಗೆ ಅತೀವ ದುಃಖವಾಗಿದೆ.ʼʼ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಕಂಬನಿ ಮಿಡಿದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಶಿಕ್ಷಣ

NEET Paper Leak: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ರೂವಾರಿ ಸಂಜೀವ್ ಮುಖಿಯಾ; ಈತ ನಟೋರಿಯಸ್‌!

ನೀಟ್ ಪತ್ರಿಕೆ ಸೋರಿಕೆ (NEET Paper Leak) ಆರೋಪಿ ಸಂಜೀವ್ ಮುಖಿಯಾ ಎರಡು ದಶಕಗಳಿಂದ ಪರೀಕ್ಷೆಯ ವಂಚನೆಯಲ್ಲಿ ತೊಡಗಿದ್ದಾನೆ ಎನ್ನಲಾಗಿದೆ. ಈ ಹಿಂದೆ ನಳಂದ ಕಾಲೇಜಿನ ನೂರ್ಸರಾಯ್ ಶಾಖೆಯಲ್ಲಿ ತಾಂತ್ರಿಕ ಸಹಾಯಕನಾಗಿ ನೇಮಕಗೊಂಡ ಮುಖಿಯಾನನ್ನು 2016ರ ಬಿಹಾರ ಸಾರ್ವಜನಿಕ ಸೇವಾ ಆಯೋಗದ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಬಂಧಿಸಲಾಗಿತ್ತು. ಸೇವೆಯಿಂದ ವಜಾಗೊಳಿಸಲಾಗಿತ್ತು. ಆದರೂ ಈತ ಈ ದಂಧೆ ಮುಂದುವರಿಸಿದ್ದಾನೆ.

VISTARANEWS.COM


on

By

NEET Paper Leak
Koo

ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ (NEET Paper Leak) ಉತ್ತರ ಪತ್ರಿಕೆ ಸೋರಿಕೆ ಮತ್ತು ಇತರ ಅಕ್ರಮಗಳ ಆರೋಪದ ಬಗ್ಗೆ ರಾಷ್ಟ್ರದಾದ್ಯಂತ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದಾರೆ. ಉತ್ತರ ಪತ್ರಿಕೆ ಸೋರಿಕೆಯ ಕುರಿತು ಹೊಸಹೊಸ ಮಾಹಿತಿಗಳು ಹೊರಬೀಳುತ್ತಿದೆ. ಈ ನಡುವೆ, ಬಿಹಾರದ (bihar) ಸಂಜೀವ್ ಮುಖಿಯಾ (Sanjeev Mukhiya) ಈ ಹಗರಣದ ಮುಖ್ಯ ರೂವಾರಿ ಎನ್ನುವುದು ಈಗ ಬಯಲಾಗಿದೆ. ಈತ ಇಂಥ ಕೃತ್ಯಗಳಿಗೆ ನಟೋರಿಯಸ್‌ ಆಗಿದ್ದಾನೆ. ಬಿಹಾರದ ನಳಂದಾ ಜಿಲ್ಲೆಯ ಸಂಜೀವ್ ಸಿಂಗ್ ಎಂದು ಕರೆಯಲ್ಪಡುವ ಸಂಜೀವ್ ಮುಖಿಯಾ ಇತ್ತೀಚಿನ ವೈದ್ಯಕೀಯ ಪ್ರವೇಶ ಪರೀಕ್ಷೆಯ ಹಗರಣದ ಹಿಂದಿನ ಮಾಸ್ಟರ್‌ಮೈಂಡ್ ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಈತ ಈಗ ನೇಪಾಳಕ್ಕೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಈತನಿಗಿದೆ ವಂಚನೆಯ ಇತಿಹಾಸ

ಸಂಜೀವ್ ಮುಖಿಯಾ ಎರಡು ದಶಕಗಳಿಂದ ಪರೀಕ್ಷೆಯ ವಂಚನೆಯಲ್ಲಿ ತೊಡಗಿದ್ದಾನೆ ಎನ್ನಲಾಗಿದೆ. ಈ ಹಿಂದೆ ನಳಂದ ಕಾಲೇಜಿನ ನೂರ್ಸರಾಯ್ ಶಾಖೆಯಲ್ಲಿ ತಾಂತ್ರಿಕ ಸಹಾಯಕನಾಗಿ ನೇಮಕಗೊಂಡ ಮುಖಿಯಾ 2016ರ ಬಿಹಾರ ಸಾರ್ವಜನಿಕ ಸೇವಾ ಆಯೋಗದ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಅನೇಕ ಘಟನೆಗಳಲ್ಲಿ ಆರೋಪಿಯಾಗಿದ್ದು, ಬಳಿಕ ಆತನನ್ನು ವಜಾಗೊಳಿಸಲಾಗಿತ್ತು.

ರವಿ ಅತ್ರಿ ಎಂಬ ಮತ್ತೊಬ್ಬ ಕುಖ್ಯಾತನೊಂದಿಗೆ ‘ಸಾಲ್ವರ್ ಗ್ಯಾಂಗ್’ ನಡೆಸುತ್ತಿದ್ದ ಸಂಜೀವ್ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಿ ಮಾರುತ್ತಾನೆ. ಅಷ್ಟೇ ಅಲ್ಲ, ಪರೀಕ್ಷೆಯನ್ನು ತೆಗೆದುಕೊಳ್ಳಲು ನಕಲಿ ಅಭ್ಯರ್ಥಿಗಳನ್ನೂ ನೀಡುತ್ತಾನೆ ಎಂದು ಆರೋಪಿಸಲಾಗಿದೆ. ತನಿಖೆಯು ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಗಳಿಂದ ಹಿಡಿದು ಅನೇಕ ರಾಜ್ಯಗಳಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆಗಳವರೆಗೆ ವಿಸ್ತರಿಸಿರುವ ಜಾಲವನ್ನು ಬಹಿರಂಗಪಡಿಸಿದೆ. ಇದು ಕಾರ್ಯಾಚರಣೆಯ ಪ್ರಮಾಣ ಮತ್ತು ವ್ಯಾಪ್ತಿಯನ್ನು ವಿವರಿಸುತ್ತದೆ.

ಈತನಿಗೆ ಕುಟುಂಬ ಮತ್ತು ರಾಜಕೀಯ ಸಂಪರ್ಕಗಳು

ಮುಖಿಯಾ ಅವರ ಪತ್ನಿ ಮಮತಾ ದೇವಿ ಅವರು ‘ಮುಖಿಯಾ’ ಅಥವಾ ಭೂತಾಖರ್ ಪಂಚಾಯತ್‌ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಲೋಕ ಜನಶಕ್ತಿ ಪಕ್ಷದಿಂದ ಟಿಕೆಟ್ ಪಡೆದ ಅನಂತರ ಈ ಸ್ಥಾನವನ್ನು ಪಡೆದರು. ಬಿಹಾರದ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಂಬಂಧಿಸಿದ ಮತ್ತೊಂದು ಪರೀಕ್ಷೆಯ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಅವರ ಮಗ ಶಿವಕುಮಾರ್ ವಿಚಾರಣೆ ಎದುರಿಸಿದ್ದ. ಹಳ್ಳಿಯಲ್ಲಿ ಮುಖಿಯಾ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಸಾಮಾನ್ಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾನೆ. ಆದರೆ ಈತನ ಅಕ್ರಮದ ಜಾಲ ದೇಶವ್ಯಾಪಿ ವ್ಯಾಪಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: NEET UG Retest: ನೀಟ್‌ ಮರುಪರೀಕ್ಷೆಗೆ ಅರ್ಧದಷ್ಟು ಅಭ್ಯರ್ಥಿಗಳು ಗೈರು; ಇವರ ಭವಿಷ್ಯದ ಗತಿ ಏನು?

ನೀಟ್ ಸೋರಿಕೆಯಲ್ಲಿ ಭಾಗಿ

ನೀಟ್ ಯುಜಿ ಪರೀಕ್ಷೆಯಲ್ಲಿ ಅಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪರಿಪೂರ್ಣ 720 ಅಂಕಗಳನ್ನು ಗಳಿಸಿದ ಅನಂತರ ವಿವಾದ ಭುಗಿಲೆದ್ದಿತ್ತು. ಆರಂಭದಲ್ಲಿ ದೋಷಯುಕ್ತ ಪ್ರಶ್ನೆ ಮತ್ತು ಲಾಜಿಸ್ಟಿಕಲ್ ಸಮಸ್ಯೆಗಳಿಂದ ಗ್ರೇಸ್ ಅಂಕಗಳು ನೀಡಲಾಯಿತು ಎನ್ನಲಾಗಿತ್ತು. ಆದರೆ ಬಿಹಾರ ಪೊಲೀಸರಿಂದ ನಡೆದ ತನಿಖೆಗಳು ವಿಭಿನ್ನ ಅಂಶವನ್ನು ಬಹಿರಂಗಪಡಿಸಿದವು. ಪರೀಕ್ಷೆಯ ಒಂದು ದಿನ ಮೊದಲು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಅಂಶ ಬೆಳಕಿಗೆ ಬಂದಿತ್ತು.

ತನಿಖಾ ಅಧಿಕಾರಿಗಳ ಪ್ರಕಾರ, ಸಂಜೀವ್ ಮುಖಿಯಾ 2024ರ ಪರೀಕ್ಷೆಗೆ ನೀಟ್ ಯುಜಿ ಪ್ರಶ್ನೆ ಪತ್ರಿಕೆಗಳು ಮತ್ತು ಉತ್ತರ ಪತ್ರಿಕೆಗಳ ವಿತರಣೆಗೆ ವ್ಯವಸ್ಥೆ ಮಾಡಿದ್ದಾನೆ. ಅವನ ಮೊಬೈಲ್‌ನಲ್ಲಿ ಕೆಲವು ದಾಖಲೆಗಳು ಪತ್ತೆಯಾಗಿವೆ. ಈತನ ಅಕ್ರಮ ದಂಧೆ ಮತ್ತು ಸರ್ಕಾರಗಳ ಬೇಜವಾಬ್ದಾರಿಯಿಂದಾಗಿ ದೇಶದ ಕೋಟ್ಯಂತರ ವಿದ್ಯಾರ್ಥಿಗಳು ಸಂಕಟ ಪಡುವಂತಾಗಿದೆ.

Continue Reading

ಪ್ರಮುಖ ಸುದ್ದಿ

David Warner : ವಿಶ್ವ ಕಪ್​ನಿಂದ ಹೊರಬಿದ್ದ ಬೇಸರ; ಬಿಯರ್ ಕುಡಿತಾ ಕುಳಿತ ಆಸ್ಟ್ರೇಲಿಯಾದ ಆಟಗಾರರು

David Warner : ಆಸ್ಟ್ರೇಲಿಯಾ ತಂಡ ಮಿಚೆಲ್ ಮಾರ್ಷ್​ ನೇತೃತ್ವದಲ್ಲಿ ವಿಶ್ವಾಸದಿಂದಲೇ ವೆಸ್ಟ್​ ಇಂಡೀಸ್​ಗೆ ತೆರಳಿತ್ತು. ಆದರೆ, ಅಪಘಾನಿಸ್ತಾನ ವಿರುದ್ಧ ಸೂಪರ್​ ಪಂದ್ಯವನ್ನು ಸೋತ ಬಳಿಕ ನಡುಗಿತು. ಬಳಿಕ ಭಾರತ ವಿರುದ್ಧವೂ ಹೀನಾಯವಾಗಿ ಪರಾಭವಗೊಂಡಿತು.

VISTARANEWS.COM


on

David Warner
Koo

ಬೆಂಗಳೂರು: ದುರಂಹಕಾರಿ ಆಸ್ಟ್ರೇಲಿಯಾ ತಂಡ ವಿಶ್ವ ಕಪ್​ನ ಸೂಪರ್ 8 ಹಂತದಿಂದ ಹೊರಕ್ಕೆ ಬಿದ್ದಿದೆ. ಹೀಗಾಗಿ ಆ ತಂಡಕ್ಕೆ ಆಘಾತವಾಗಿದೆ. 2021ರ ಆವೃತ್ತಿಯ ಚಾಂಪಿಯನ್ ಹಾಗೂ 2023ರ ಏಕ ದಿನ ವಿಶ್ವ ಕಪ್ ಚಾಂಪಿಯನ್ ತಂಡಕ್ಕೆ ಇದು ನಿಜವಾಗಿಯೂ ದುಃಖದ ವಿಚಾರ. ಹೀಗಾಗಿ ಸೋಲಿನ ಬಳಿಕ ಆಟಗಾರರು ಬಿಯರ್​ ಕುಡಿತಾ ಬೇಸರ ಹೊರಹಾಕಿದ್ದಾರೆ ಎಂಬುದಾಗಿ ವರದಿಯಾಗಿದೆ. ಬಿಯರ್ ಅಲ್ಲಿ ಸಾಮಾನ್ಯ ಸಂಸ್ಕೃತಿಯಾಗಿರುವ ಕಾರಣ ಅದು ಎಷ್ಟು ಸತ್ಯ ಎಂಬುದು ಗೊತ್ತಿಲ್ಲ. ಆದರೆ, ಜೇಕ್ ಫ್ರೇಸರ್ ಮೆಗ್​ಕುರ್ಕ್​ ಹಾಗೂ ಡೇವಿಡ್​ ವಾರ್ನರ್ (David Warner ) ಬಿಯರ್​ ಕುಡಿತಾ ಕುಳಿತಿರುವ ಫೋಟೊಗಳನ್ನು ಹಾಕಿಕೊಂಡಿದ್ದಾರೆ.

ಆಸ್ಟ್ರೇಲಿಯಾ ತಂಡ ಮಿಚೆಲ್ ಮಾರ್ಷ್​ ನೇತೃತ್ವದಲ್ಲಿ ವಿಶ್ವಾಸದಿಂದಲೇ ವೆಸ್ಟ್​ ಇಂಡೀಸ್​ಗೆ ತೆರಳಿತ್ತು. ಆದರೆ, ಅಪಘಾನಿಸ್ತಾನ ವಿರುದ್ಧ ಸೂಪರ್​ ಪಂದ್ಯವನ್ನು ಸೋತ ಬಳಿಕ ನಡುಗಿತು. ಬಳಿಕ ಭಾರತ ವಿರುದ್ಧವೂ ಹೀನಾಯವಾಗಿ ಪರಾಭವಗೊಂಡಿತು. ಗೆದ್ದೇ ಗೆಲ್ಲುತ್ತೇವೆ ಎಂಬ ಅತ್ಯುತ್ಸಾಹದಲ್ಲಿ ಸಾಗುವ ಕಾಂಗಾರೂ ಪಡೆಗಳಿಗೆ ಇದು ಸಂಪೂರ್ಣ ನಿರಾಸೆಯ ಸಂಗತಿಯಾಗಿದೆ. ಹೀಗಾಗಿ ಬಿಯರ್​ ಕುಡಿಯದೇ ವಿಧಿಯಿಲ್ಲ

ಮೆಗ್​ಕುರ್ಕ್​ ವಿಶ್ವ ಕಪ್​​ ಆಸ್ಟ್ರೇಲಿಯಾ ತಂಡದ ಪರ ಬ್ಯಾಟಿಂಗ್ ಮಾಡುವ ಮೂಲಕ ಅದ್ಭುತ ಪ್ರದರ್ಶನ ನೀಡಿದ್ದಾರೆ. ಯುವ ಬ್ಯಾಟ್ಸ್ಮನ್ ಅನ್ನು ಆಸ್ಟ್ರೇಲಿಯಾ ತಂಡದ ಮುಂದಿನ ಸಂಭಾವ್ಯ ಆರಂಭಿಕ ಆಟಗಾರ ಎಂದು ಪರಿಗಣಿಸಲಾಗಿದೆ. ಆಸ್ಟ್ರೇಲಿಯಾದ ಮಾಜಿ ಆರಂಭಿಕ ಬ್ಯಾಟರ್​​ ಡೇವಿಡ್ ವಾರ್ನರ್ ಈ ಯುವ ಆಟಗಾರನಿಗೆ ಪ್ರೇರಣೆ.

ವಿಶೇಷವೆಂದರೆ, ಇಬ್ಬರೂ ಕ್ರಿಕೆಟಿಗರು ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಡ್ರೆಸ್ಸಿಂಗ್ ಕೊಠಡಿಯನ್ನು ಹಂಚಿಕೊಂಡಿದ್ದಾರೆ. 2024 ರ ಟಿ 20 ವಿಶ್ವ ಕಪ್​ನಿಂದ ಆಸೀಸ್​ ಬಳಗ ಹೊರಬಿದ್ದ ನಂತರ ಅವರಿಬ್ಬರೂ ಮೈದಾನದಿಂದ ದೂರವಿದ್ದರು. ಅವರಿಬ್ಬರೂ ಜತೆಯಾಗಿ ಬಿಯರ್​ ಕುಡಿದಿದ್ದಾರೆ.

ಮೆಗ್​ಕುರ್ಕ್​ ಒಂದೇ ಒಂದು ಪಂದ್ಯವನ್ನು ಆಡಲು ಸಾಧ್ಯವಾಗದಿದ್ದರೂ ಆಸೀಸ್​ ತಂಡದ ಟ್ರೋಫಿಗೆ ಸವಾಲೊಡ್ಡುವ ವಾತಾವರಣಕ್ಕೆ ಅವರು ತೆರೆದುಕೊಂಡರು. ಡೇವಿಡ್ ವಾರ್ನರ್ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಮೆಗ್​ಕುರ್ಕ್​ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇಬ್ಬರೂ ತಮ್ಮ ಕೆರಿಬಿಯನ್ ವಾಸ್ತವ್ಯದ ಮುಕ್ತಾಯದ ನಂತರ ಬಿಯರ್ ಕುಡಿತಾ ಕುಳಿತಿದ್ದರು.

ಮೆಗ್​ಕುರ್ಕ್​ ಪ್ರಶ್ನೆಗಳನ್ನು ಕೇಳುತ್ತಾರೆ : ವಾರ್ನರ್

ಆಸ್ಟ್ರೇಲಿಯಾ ತಂಡದಲ್ಲಿ ಜೇಕ್ ಫ್ರೇಸರ್ ಮೆಕ್ಗುರ್ಕ್ ಅವರ ಸಂಭಾವ್ಯ ಸ್ಥಾನದ ಬಗ್ಗೆ ವಾರ್ನರ್ ಮಾತನಾಡಿದ್ದಾರೆ. ಜಾಗತಿಕ ಟೂರ್ನಿಯಿಂದ ದುರದೃಷ್ಟವಶಾತ್ ನಿರ್ಗಮಿಸಿದ ನಂತರ ಆಸ್ಟ್ರೇಲಿಯಾ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ ಮತ್ತು ಮೆಕ್ಗುರ್ಕ್ ಸ್ಥಾನ ಪಡೆಯುವ ವಿಶ್ವಾಸವನ್ನು ಅವರು ತೋರಿಸಿದ್ದಾರೆ. ಮೆಕ್ಗುರ್ಕ್, ವಿಶೇಷವಾಗಿ, ಡೆಲ್ಲಿ ಕ್ಯಾಪಿಟಲ್ಸ್​ ತಂಡ ಪರವಾಗಿ ಅಸಾಧಾರಣ ಪ್ರದರ್ಶನ ನೀಡಿದ್ದರು. ಅವರನ್ನು ಪಂದ್ಯಾವಳಿಯ ಫೈನಲ್​ ಸ್ಟ್ರೈಕರ್ ಎಂದು ಕರೆಯಲಾಗಿತ್ತು. ಅವರ ಸ್ಟ್ರೈಕ್ ರೇಟ್ 200 ರ ಗಡಿಯನ್ನು ಮೀರಿತ್ತು.

ಇದನ್ನೂ ಓದಿ: Women’s Asia Cup 2024 : ಮಹಿಳೆಯರ ಏಷ್ಯಾ ಕಪ್​ ಕ್ರಿಕೆಟ್​ನ ವೇಳಾಪಟ್ಟಿ ಬಿಡುಗಡೆ, ಜುಲೈ 19ಕ್ಕೆ ಭಾರತ- ಪಾಕ್ ಪಂದ್ಯ

” ಮೆಗ್​ಕುರ್ಕ್​ ಅವರ ಅನುಭವವು ಉತ್ತಮವಾಗಿರುತ್ತದೆ. ಅವರು ಆಗಸ್ಟ್ ಅಂತ್ಯದಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಹೋಗುತ್ತಾರೆ ಎಂದು ನಾನು ಭಾವಿಸುತ್ತೇನೆ. ಚಿಕ್ಕ ಮಗುವಾಗಿ, ಆಟದ ಬಗ್ಗೆ, ತಂಡದ ಆಟಗಾರನಾಗಿ ಗುಂಪಿನ ಸುತ್ತಲೂ ಇರುವುದು ಹೇಗೆ ಎಂಬುದನ್ನು ಅವರು ಅರ್ಥಮಾಡಿಕೊಂಡಿದ್ದಾರೆ. ಅವರು ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ಅವರು ಆಟವನ್ನು ಪ್ರೀತಿಸುತ್ತಾರೆ” ಎಂದು ವಾರ್ನರ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Women’s Asia Cup 2024 : ಮಹಿಳೆಯರ ಏಷ್ಯಾ ಕಪ್​ ಕ್ರಿಕೆಟ್​ನ ವೇಳಾಪಟ್ಟಿ ಬಿಡುಗಡೆ, ಜುಲೈ 19ಕ್ಕೆ ಭಾರತ- ಪಾಕ್ ಪಂದ್ಯ

Women’s Asia Cup 2024 : ಏಷ್ಯಾದ ಅಗ್ರ 8 ಮಹಿಳಾ ಕ್ರಿಕೆಟ್ ತಂಡಗಳನ್ನು ಒಳಗೊಂಡ ಪಂದ್ಯಾವಳಿಗೆ ನಿಮ್ಮನ್ನು ಸಜ್ಜುಗೊಳಿಸಿಕೊಳ್ಳಿ. ನಿಮ್ಮ ಕ್ಯಾಲೆಂಡರ್​ನಲ್ಲಿ ದಿನಾಂಕಗಳನ್ನು ಮಾರ್ಕ್ ಮಾಡಿ. ಏಕೆಂದರೆ ಇದು ಜುಲೈ 19, 2024 ರಂದು ಶ್ರೀಲಂಕಾದ ಡಂಬುಲ್ಲಾದಲ್ಲಿ ಟೂರ್ನಿ ಪ್ರಾರಂಭವಾಗಲಿದೆ, ಕಾಂಟಿನೆಂಟಲ್ ಕ್ರಿಕೆಟ್ ಆಡಳಿತ ಮಂಡಳಿಯಾಗಿರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮಂಗಳವಾರ ತನ್ನ ‘ಎಕ್ಸ್’ ಹ್ಯಾಂಡಲ್​ನಲ್ಲಿ ಬರೆದುಕೊಂಡಿದೆ.

VISTARANEWS.COM


on

Women's Asia Cup
Koo

ಬೆಂಗಳೂರು : ಇತ್ತೀಚೆಗೆ ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ 3-0 ಸರಣಿ ಗೆಲುವಿನೊಂದಿಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಉತ್ಸಾಹದಲ್ಲಿದೆ. ಇದೀಗ ಮತ್ತೊಂದು ಪ್ರಮುಖ ಪಂದ್ಯಾವಳಿಗಾಗಿ ಶೀಘ್ರದಲ್ಲೇ ಸಿದ್ಧಗೊಳ್ಳಬೇಕಾಗಿದೆ. ಅದುವೇ ಮಹಿಳೆಯರ ಏಷ್ಯಾ ಕಪ್ ಕ್ರಿಕೆಟ್ (Women’s Asia Cup 2024 )​. ಅಲ್ಲಿ ಏಷ್ಯಾದ ಅಗ್ರ ತಂಡಗಳು ಖಂಡಾಂತರ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.

ಮುಂಬರುವ ಮಹಿಳಾ ಏಷ್ಯಾ ಕಪ್ 2024 ಖಂಡದ ಅಗ್ರ ಎಂಟು ತಂಡಗಳು ಭಾಗವಹಿಸಲಿವೆ. ಜುಲೈ 19ರಿಂದ ಆರಂಭವಾಗಲಿರುವ ಈ ರೋಚಕ ಕ್ರಿಕೆಟ್ ಪಂದ್ಯ ಜುಲೈ 28ರಂದು ಮುಕ್ತಾಯಗೊಳ್ಳಲಿದೆ. ಶ್ರೀಲಂಕಾ ಟೂರ್ನಿಗೆ ಆತಿಥ್ಯ ವಹಿಸಲಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಏಷ್ಯಾದ ಅಗ್ರ 8 ಮಹಿಳಾ ಕ್ರಿಕೆಟ್ ತಂಡಗಳನ್ನು ಒಳಗೊಂಡ ಪಂದ್ಯಾವಳಿಗೆ ನಿಮ್ಮನ್ನು ಸಜ್ಜುಗೊಳಿಸಿಕೊಳ್ಳಿ. ನಿಮ್ಮ ಕ್ಯಾಲೆಂಡರ್​ನಲ್ಲಿ ದಿನಾಂಕಗಳನ್ನು ಮಾರ್ಕ್ ಮಾಡಿ. ಏಕೆಂದರೆ ಇದು ಜುಲೈ 19, 2024 ರಂದು ಶ್ರೀಲಂಕಾದ ಡಂಬುಲ್ಲಾದಲ್ಲಿ ಟೂರ್ನಿ ಪ್ರಾರಂಭವಾಗಲಿದೆ, ಕಾಂಟಿನೆಂಟಲ್ ಕ್ರಿಕೆಟ್ ಆಡಳಿತ ಮಂಡಳಿಯಾಗಿರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮಂಗಳವಾರ ತನ್ನ ‘ಎಕ್ಸ್’ ಹ್ಯಾಂಡಲ್ನಲ್ಲಿ ಬರೆದುಕೊಂಡಿದೆ.

ಭಾರತ ಮತ್ತು ಪಾಕಿಸ್ತಾನ ಮುಖಾಮುಖಿ

ಮಹಿಳಾ ಏಷ್ಯಾ ಕಪ್ 2024 ರ ವೇಳಾಪಟ್ಟಿಯ ಬಗ್ಗೆ ಮಾತನಾಡುವುದಾದರೆ, ಜುಲೈ 21 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮಹಿಳಾ ವಿರುದ್ಧ ಭಾರತ ಮಹಿಳಾ ತಂಡವನ್ನು ಆಡಲು ನಿರ್ಧರಿಸಲಾಗಿತ್ತು. ಆದಾಗ್ಯೂ, ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಎಸಿಸಿ ಆಟವನ್ನು ಜುಲೈ 19 ಕ್ಕೆ ನಿಗದಿ ಮಾಡಿದೆ. ವಿಶೇಷವೆಂದರೆ, ಅಪೇಕ್ಷಿತ ಪಂದ್ಯಾವಳಿಯಲ್ಲಿ ಎಂಟು ತಂಡಗಳು ಕೇಂದ್ರ ಸ್ಥಾನವನ್ನು ಪಡೆಯುತ್ತಿರುವುದು ಇದೇ ಮೊದಲು. ಕಾಂಟಿನೆಂಟಲ್ ಈವೆಂಟ್​​ನಲ್ಲಿ ಇಲ್ಲಿಯವರೆಗೆ ಕೇವಲ ಏಳು ತಂಡಗಳು ಆಡಿದ್ದವು.

ಇದನ್ನೂ ಓದಿ: T20 World Cup : ಅಫಘಾನಿಸ್ತಾನ ತಂಡದ ನಾಯಕ ರಶೀದ್​ ಗೆ ಕರೆ ಮಾಡಿ ಶುಭಾಶಯ ತಿಳಿಸಿದ ತಾಲಿಬಾನ್ ನಾಯಕ

ಏಷ್ಯನ್ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಆಯಾ ಗುಂಪುಗಳ ಅಗ್ರ ಎರಡು ತಂಡಗಳು ಜುಲೈ 26 ರಂದು ನಡೆಯಲಿರುವ ಸೆಮಿಫೈನಲ್​ಗೆ ಅರ್ಹತೆ ಪಡೆಯುತ್ತವೆ. ಫೈನಲ್ ಪಂದ್ಯ ಜುಲೈ 28ರಂದು ನಡೆಯಲಿದೆ. ಇದಲ್ಲದೆ, ಸಾಂಪ್ರದಾಯಿಕ ಎದುರಾಳಿಗಳ ಜೊತೆಗೆ ನೇಪಾಳ ಮತ್ತು ಯುಎಇ ತಂಡಗಳನ್ನು ಟೀಮ್ ಇಂಡಿಯಾದೊಂದಿಗೆ ಗುಂಪು ಮಾಡಲಾಗಿದೆ. ಬಾಂಗ್ಲಾದೇಶ, ಶ್ರೀಲಂಕಾ, ಥಾಯ್ಲೆಂಡ್ ಮತ್ತು ಮಲೇಷ್ಯಾ ತಂಡಗಳು ‘ಬಿ’ ಗುಂಪಿನಲ್ಲಿವೆ.

ಮಹಿಳಾ ಏಷ್ಯಾ ಕಪ್ ಅನ್ನು ಕೊನೆಯ ಬಾರಿಗೆ 2022 ರಲ್ಲಿ ಬಾಂಗ್ಲಾದೇಶದಲ್ಲಿ ಆಡಿಸಲಾಗಿತ್ತು. ಅಲ್ಲಿ ಫೈನಲ್​​ನಲ್ಲಿ ಶ್ರೀಲಂಕಾ ಮಹಿಳೆಯರನ್ನು ಎಂಟು ವಿಕೆಟ್​ಗಳಿಂ ಸೋಲಿಸಿದ ಭಾರತ ಮಹಿಳೆಯರು ಏಳನೇ ಪ್ರಶಸ್ತಿ ಗೆದ್ದುಕೊಂಡಿದ್ದರು ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಏಷ್ಯಾ ಕಪ್ ಅನ್ನು ಎರಡು ವರ್ಷಗಳ ಕಾಲ ಮುಂದೂಡಲಾಗಿತ್ತು.

Continue Reading

ಪ್ರಮುಖ ಸುದ್ದಿ

Arvind Kejriwal : ಜಾಮೀನು ಅರ್ಜಿ ವಿಚಾರಣೆಗೂ ಮುನ್ನ ಅರವಿಂದ್ ಕೇಜ್ರಿವಾಲ್ ಬಂಧಿಸಿದ ಸಿಬಿಐ

Arvind Kejriwal : ಸೋಮವಾರ ಸಿಬಿಐ ಅರವಿಂದ್ ಕೇಜ್ರಿವಾಲ್ ಅವರನ್ನು ತಿಹಾರ್ ಜೈಲಿನಲ್ಲಿ ಪರೀಕ್ಷಿಸಿತ್ತು. ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅವರ ಹೇಳಿಕೆ ದಾಖಲಿಸಿತ್ತು. ಸಿಬಿಐ ಅರವಿಂದ್ ಕೇಜ್ರಿವಾಲ್ ಅವರನ್ನು ನಾಳೆ ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ.

VISTARANEWS.COM


on

Arvind Kejriwal
Koo

ನವದೆಹಲಿ: ಮದ್ಯ ನೀತಿ ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಕೇಂದ್ರ ತನಿಖಾ ದಳದ (ಸಿಬಿಐ) ಅಧಿಕಾರಿಗಳು ಮಂಗಳವಾರ ತಿಹಾರ್ ಜೈಲಿನಿಂದ ಬಂಧಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುವ ಒಂದು ದಿನ ಮೊದಲು ಈ ಬೆಳವಣಿಗೆ ನಡೆದಿದೆ.

ಸೋಮವಾರ ಸಿಬಿಐ ಅರವಿಂದ್ ಕೇಜ್ರಿವಾಲ್ ಅವರನ್ನು ತಿಹಾರ್ ಜೈಲಿನಲ್ಲಿ ಪರೀಕ್ಷಿಸಿತ್ತು. ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅವರ ಹೇಳಿಕೆ ದಾಖಲಿಸಿತ್ತು. ಸಿಬಿಐ ಅರವಿಂದ್ ಕೇಜ್ರಿವಾಲ್ ಅವರನ್ನು ನಾಳೆ ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ.

ಸುದ್ದಿ ಸಂಸ್ಥೆಗಳ ಜತೆ ಮಾತನಾಡಿದ ಎಎಪಿಯ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ “ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್​​ನಿಂದ ಜಾಮೀನು ಸಿಗುವ ನೂರಕ್ಕೆ ನೂರರಷ್ಟು ಸಾಧ್ಯತೆ ಇರುವ ಸಮಯದಲ್ಲಿ ದೆಹಲಿ ಸಿಬಿಐ ಮೂಲಕ ಕೇಂದ್ರ ಪಿತೂರಿ ನಡೆಸುತ್ತಿದೆ ಎಂದು ಮೂಲಗಳು ನನಗೆ ತಿಳಿಸಿವೆ. ಇಡೀ ದೇಶ ಇದನ್ನು ನೋಡುತ್ತಿದೆ. ಅರವಿಂದ್ ಕೇಜ್ರಿವಾಲ್ ಅವರ ಪರವಾಗಿ ಒಗ್ಗಟ್ಟಾಗಿ ನಿಂತಿದೆ ಎಂದು ಹೇಳಿದರು.

ಇದನ್ನೂ ಓದಿ: Lok Sabha Speaker : ಸ್ಪೀಕರ್​ ಚುನಾವಣೆಯಲ್ಲಿ ವೈಎಸ್​ಆರ್​ ಪಕ್ಷದಿಂದ ಬಿಜೆಪಿಗೆ ಬೆಂಬಲ

ಅಕ್ರಮನ ಹಣ ವರ್ಗಾವಣೆ ಪ್ರಕರಣದಲ್ಲಿ ಎಎಪಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿದ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ದೆಹಲಿ ಹೈಕೋರ್ಟ್ ಮಂಗಳವಾರ ತಡೆ ನೀಡಿತ್ತು. ಆದೇಶವನ್ನು ಪ್ರಕಟಿಸುವಾಗ, ದೆಹಲಿ ಹೈಕೋರ್ಟ್, “ವಿಚಾರಣಾ ನ್ಯಾಯಾಲಯವು ಹೈಕೋರ್ಟ್​​ನ ತೀರ್ಮಾನಕ್ಕೆ ವಿರುದ್ಧವಾದ ಯಾವುದೇ ತೀರ್ಪು ನೀಡಬಾರದಿತ್ತು. ದಾಖಲೆಗಳು ಮತ್ತು ವಾದಗಳನ್ನು ಸರಿಯಾಗಿ ಮಾಡಿಲ್ಲ ಎಂದು ಹೇಳಿದ್ದರು.

Continue Reading
Advertisement
Health Tips Kannada
ಆರೋಗ್ಯ5 mins ago

Health Tips Kannada: ಕುಂಬಳಕಾಯಿ ಬೀಜದಲ್ಲಿದೆ ನಮ್ಮ ಆರೋಗ್ಯದ ಗುಟ್ಟು!

NEET Paper Leak
ಶಿಕ್ಷಣ5 mins ago

NEET Paper Leak: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ರೂವಾರಿ ಸಂಜೀವ್ ಮುಖಿಯಾ; ಈತ ನಟೋರಿಯಸ್‌!

Karnataka Weather
ಕರ್ನಾಟಕ35 mins ago

Karnataka Weather: ಇಂದು ಹಾಸನ, ಕೊಡಗು, ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ

David Warner
ಪ್ರಮುಖ ಸುದ್ದಿ1 hour ago

David Warner : ವಿಶ್ವ ಕಪ್​ನಿಂದ ಹೊರಬಿದ್ದ ಬೇಸರ; ಬಿಯರ್ ಕುಡಿತಾ ಕುಳಿತ ಆಸ್ಟ್ರೇಲಿಯಾದ ಆಟಗಾರರು

Fatty Lever Disease
ಆರೋಗ್ಯ1 hour ago

Fatty Lever Disease: ಎಚ್ಚರ ವಹಿಸಿ, ಮಕ್ಕಳನ್ನು ಸದ್ದಿಲ್ಲದೆ ಕಾಡುತ್ತಿದೆ ಫ್ಯಾಟಿ ಲಿವರ್‌ ಕಾಯಿಲೆ!

Karnataka Milk Federation
ಪ್ರಮುಖ ಸುದ್ದಿ2 hours ago

ವಿಸ್ತಾರ ಸಂಪಾದಕೀಯ: ಹಾಲು ದರ ಏರಿಕೆ ಬಳಕೆದಾರನಿಗೆ ಹೊರೆಯಾಗದಿರಲಿ

Dina Bhavishya
ಭವಿಷ್ಯ2 hours ago

Dina Bhavishya: ಈ ರಾಶಿಯವರಿಗೆ ದೀರ್ಘಕಾಲದ ಪ್ರಯತ್ನ ಇಂದು ಯಶಸ್ಸು ತಂದುಕೊಡಲಿದೆ

Women's Asia Cup
ಪ್ರಮುಖ ಸುದ್ದಿ8 hours ago

Women’s Asia Cup 2024 : ಮಹಿಳೆಯರ ಏಷ್ಯಾ ಕಪ್​ ಕ್ರಿಕೆಟ್​ನ ವೇಳಾಪಟ್ಟಿ ಬಿಡುಗಡೆ, ಜುಲೈ 19ಕ್ಕೆ ಭಾರತ- ಪಾಕ್ ಪಂದ್ಯ

minister mb patil visit japan and discuss about investment in Karnataka
ಕರ್ನಾಟಕ8 hours ago

Foreign Investment: 100 ಕೋಟಿ ರೂ. ವೆಚ್ಚದ ತ್ಯಾಜ್ಯ ನೀರು ನಿರ್ವಹಣಾ ಉಪಕರಣಗಳ ತಯಾರಿಕಾ ಘಟಕ ಸ್ಥಾಪನೆಗೆ ಒಪ್ಪಂದ

Arvind Kejriwal
ಪ್ರಮುಖ ಸುದ್ದಿ8 hours ago

Arvind Kejriwal : ಜಾಮೀನು ಅರ್ಜಿ ವಿಚಾರಣೆಗೂ ಮುನ್ನ ಅರವಿಂದ್ ಕೇಜ್ರಿವಾಲ್ ಬಂಧಿಸಿದ ಸಿಬಿಐ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌