Arecanut Price | ಕುಸಿಯುತ್ತಲೇ ಇರುವ ಅಡಿಕೆ ಧಾರಣೆ; 2 ತಿಂಗಳಿನಲ್ಲಿ 20 ಸಾವಿರ ರೂ. ಇಳಿಕೆ - Vistara News

ಕೃಷಿ

Arecanut Price | ಕುಸಿಯುತ್ತಲೇ ಇರುವ ಅಡಿಕೆ ಧಾರಣೆ; 2 ತಿಂಗಳಿನಲ್ಲಿ 20 ಸಾವಿರ ರೂ. ಇಳಿಕೆ

ಅಡಿಕೆ ಕೊಯ್ಲು ಪ್ರಾರಂಭವಾದಾಗಿನಿಂದ ಅಡಿಕೆಯ ಧಾರಣೆ ಕುಸಿಯುತ್ತಾ ಬಂದಿದ್ದು, ಈಗ ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಇಡಿಯ ಬೆಲೆ (Arecanut Price ) 20 ಸಾವಿರ ರೂ.ಗಳಷ್ಟು ಕುಸಿತ ಕಂಡಿದೆ. ಇದು ಅಡಿಕೆ ಬೆಳೆಗಾರರಲ್ಲಿ ಆತಂಕಕ್ಕೆ ಕಾರಣವಾಗಿದೆ.

VISTARANEWS.COM


on

areca news
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

| ವಿವೇಕ ಮಹಾಲೆ
ಶಿವಮೊಗ್ಗ: ಎಲೆ ಚುಕ್ಕಿ ರೋಗ, ಹಳದಿ ಎಲೆ ರೋಗ, ಕೊಳೆ ರೋಗ ಬಾಧೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಅಡಿಕೆ ಬೆಳೆಗಾರರಿಗೆ ಮತ್ತೊಂದು ಶಾಕ್ ಎದುರಾಗಿದೆ. ಕಳೆದ ಎರಡು ವರ್ಷಗಳಿಂದ ಉತ್ತಮ ಧಾರಣೆಯಿಂದ ಸ್ಥಿರತೆ ಕಾಯ್ದುಕೊಂಡಿದ್ದ ಅಡಿಕೆ ಮಾರುಕಟ್ಟೆ ಈಗ ಮತ್ತೆ ಏರು-ಪೇರಾಗುತ್ತಿದ್ದು (Arecanut Price), ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ಬಂಗಾರದ ಬೆಳೆ ಎಂದೇ ಖ್ಯಾತಿ ಪಡೆದಿರುವ ಅಡಿಕೆಗೆ ಇದುವರೆಗೆ ಉತ್ತಮ ಧಾರಣೆಯೇ ಮಾರುಕಟ್ಟೆಯಲ್ಲಿತ್ತು. ಅಡಿಕೆ ಕೊಯ್ಲು ಅರಂಭವಾಗುತ್ತಿದ್ದಂತೆಯೇ ಬೆಲೆ ಇಳಿಕೆ ಆರಂಭವಾಗಿದೆ. ಅಡಿಕೆ ಕೊಯ್ಲು ಮುಗಿಸಿ ಬೆಳೆಗಾರರು ಹೊಸ ಅಡಿಕೆ ಮಾರಾಟ ಮಾಡುವ ಸಂದರ್ಭದಲ್ಲಿ ಧಾರಣೆ ಕುಸಿತ ಆಗುತ್ತಿರುವುದರಿಂದ “ಕೈಗೆ ಬಂದ ತುತ್ತು ಬಾಯಿಗಿಲ್ಲʼʼ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಅಡಿಕೆ ಧಾರಣೆಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಕ್ವಿಂಟಲ್‌ಗೆ‌ 20,000 ರೂ. ಗಳವರೆಗೆ ಕುಸಿತ ಕಂಡಿದೆ. ಸೆಪ್ಟೆಂಬರ್ ಮೊದಲ ವಾರ ರಾಶಿ ಇಡಿ ಬೆಲೆ ಕ್ವಿಂಟಲ್ ಗೆ 58,000 ರೂ.ವರೆಗೂ ಇತ್ತು. ಅಕ್ಟೋಬರ್‌ನಲ್ಲಿ 50.000 ರೂ.ಗೆ ಇಳಿದು ನಂತರ ಕಡಿಮೆಯಾಗುತ್ತಾ ಬಂದಿದ್ದು, ಡಿಸೆಂಬರ್ ಎರಡನೇ ವಾರದಲ್ಲಿ 39 ಸಾವಿರ ರೂ.ಗೆ ಇಳಿಕೆ ಕಂಡಿದೆ.

2014 -15ರಲ್ಲಿ ರಾಶಿ ಇಡಿ ಅಡಿಕೆ ದರ ಒಂದು ಲಕ್ಷ ರೂ.ವರೆಗೂ ತಲುಪಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದು, ನಂತರ ದಿನಗಳಲ್ಲಿ ಕುಸಿತ ಕಂಡು ಕಳೆದ ನಾಲ್ಕು ವರ್ಷಗಳಿಂದ 50 ಸಾವಿರ ರೂ. ಆಸುಪಾಸಿನಲ್ಲಿತ್ತು. ಆದರೆ ಈ ವರ್ಷ ಸುಗ್ಗಿ ಕಾಲದಲ್ಲಿಯೇ ಅಡಿಕೆ ಧಾರಣೆ ಕುಸಿದಿರುವುದು ರೈತರನ್ನು ಕಂಗಾಲಾಗಿಸಿದೆ.

ಭೂತಾನ್‌ ಅಡಿಕೆ ಕಾರಣವೇ?
ಅಡಿಕೆ ಬೆಲೆ ಕುಸಿತಕ್ಕೆ ಕಾರಣ ಏನೆಂಬುದು ಸ್ಪಷ್ಟವಾಗುತ್ತಿಲ್ಲ. ಆದರೆ ನಿರೀಕ್ಷೆಗೂ ಮೀರಿ ಹೆಚ್ಚುತ್ತಿರುವ ಅಡಿಕೆ ಉತ್ಪಾದನೆ ಮತ್ತು ವಿದೇಶದಿಂದ ಅಡಿಕೆ ಆಮದು ಕಾರಣದಿಂದ ಬೆಲೆ ಕುಸಿತವಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇತ್ತೀಚೆಗೆ ಭೂತಾನ್ ಸೇರಿದಂತೆ ಕೆಲವು ದೇಶಗಳಿಂದ ಅಡಿಕೆ ಆಮದಿಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಾಗ ರೈತ ಸಂಘಟನೆಗಳು ವಿರೋಧಿಸಿದ್ದವು. ಪ್ರತಿಪಕ್ಷಗಳೂ ಇದನ್ನು ಖಂಡಿಸಿದ್ದವು. ಆದರೆ ಆಡಳಿತ ಪಕ್ಷದವರು ಇದನ್ನು ಸಮರ್ಥಿಸಿಕೊಂಡಿದ್ದರು. ಹಸಿ ಅಡಿಕೆ ಆಮದಿಗೆ ಮಾತ್ರ ಅವಕಾಶ ಕೊಟ್ಟಿರುವುದರಿಂದ ದೇಶದ ಅಡಿಕೆ ಬೆಳೆಗಾರರಿಗೆ ಯಾವುದೇ ತೊಂದರೆ ಆಗದು ಎಂದು ಹೇಳಿಕೊಂಡಿದ್ದರು. ಆದರೀಗ ಆಗುತ್ತಿರುವುದೇ ಬೇರೆ. ಅಡಿಕೆ ಧಾರಣೆ ನಿರಂತರ ಕುಸಿಯುತ್ತ ಸಾಗಿದೆ. ಹಸಿ ಅಡಿಕೆ ಆಮದು ಹೆಸರಿನಲ್ಲಿ ಒಣ ಅಡಿಕೆ ಆಮದು ಆಗುತ್ತಿದೆ ಎಂದು ರೈತ ಸಂಘದ ಮುಖಂಡರು ಆರೋಪಿಸುತ್ತಿದ್ದಾರೆ.

“ಒಣ ಅಡಿಕೆಗಳ ಮೇಲೆ ಹಸಿ ಅಡಿಕೆ ಸುರಿದು ಆಮದು ಮಾಡಿಕೊಳ್ಳಲಾಗುತ್ತಿದೆ. ಅಧಿಕಾರಿಗಳು ಇದು ಗೊತ್ತಿದ್ದೂ ಸುಮ್ಮನಿದ್ದಾರೆ. ಕೇಂದ್ರ ಸರ್ಕಾರ ಕೂಡ ಜಾಣ ಮೌನ ವಹಿಸಿದೆ. ಕಡಿಮೆ ಬೆಲೆ ಕಳಪೆ ಅಡಿಕೆ ದೊರೆಯುತ್ತಿರುವುದರಿಂದ ನಮ್ಮ ಅಡಿಕೆಗೆ ಬೇಡಿಕೆ ಕಡಿಮೆಯಾಗುತ್ತಿದೆʼʼ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಸವರಾಜಪ್ಪ ಹೇಳಿದ್ದಾರೆ.

ಅಡಿಕೆ ಧಾರಣೆ ಕುಸಿತಕ್ಕೆ ಕೇಂದ್ರ ಸರ್ಕಾರದ ಆಮದು ನೀತಿ ಕಾರಣ ಎಂದು ಕಾಂಗ್ರೆಸ್‌ ಆರೋಪಿಸಿದೆ. ದೇಶದಲ್ಲಿ 10 ಲಕ್ಷ ಮೆಟ್ರಿಕ್ ಟನ್ ಅಡಿಕೆ ಉತ್ಪಾದನೆ ಆಗುತ್ತಿದೆ. ಶೇ. 80 ರಷ್ಟು ಬೆಳೆ ಕರ್ನಾಟಕದ ಅಡಿಕೆ ಉತ್ಪಾದನೆಯಿಂದ ಪೂರೈಸಲಾಗುತ್ತಿದೆ. 13 ಸಾವಿರ ಮೆಟ್ರಿಕ್ ಟನ್ ಭೂತಾನ್ ನಿಂದ ಪ್ರತಿ ವರ್ಷ ಆಮದಿಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ರಾಜ್ಯದ ಅಡಿಕೆಗೆ ಬೆಲೆ ಕುಸಿಯುವಂತಾಗಿದೆ ಎಂದು ಕಾಂಗ್ರೆಸ್ ಮುಖಂಡ ರಮೇಶ್ ಹೆಗ್ಡೆ ಹೇಳಿದ್ದಾರೆ.

59 ಸಾವಿರ ರೂ. ಇದ್ದ ಅಡಿಕೆ ಬೆಲೆ ಇಂದು 39 ಸಾವಿರ ರೂ. ಕ್ವಿಂಟಾಲ್‌ಗೆ ಕುಸಿದಿದೆ. ಮಿಜೋರಾಂ, ಮಣಿಪುರದ ಮೂಲಕ ಅಡಿಕೆ ಕಳ್ಳಸಾಗಾಣಿಕೆ ಆಗುತ್ತಿದೆ. ಮಿಜೋರಾಂನ ಕಾಂಗ್ರೆಸ್ ನಾಯಕರು ಮೋದಿಗೆ ಪತ್ರೆ ಬರೆದು ಇದನ್ನು ತಡೆಯಲು ಕೋರಿದ್ದರು. ಆದರೆ ಉತ್ತರ ಭಾರತ ಅದರಲ್ಲೂ ಗುಜರಾತ್, ರಾಜಸ್ಥಾನ ಮೊದಲಾದ ರಾಜ್ಯಗಳ ಗುಟ್ಕಾ ಮಾರಾಟಗಾರರ ಬೆಂಬಲಕ್ಕೆ ನಿಂತ ಬಿಜೆಪಿ ಸರ್ಕಾರ ಕಳ್ಳ ಮಾಲುಗಳನ್ನ ತಡೆಯಲು ವಿಫಲವಾಗಿದೆ. ಇಂಡೋನೇಷಿಯಾದ ಕಳಪೆ ಗುಣಮಟ್ಟದ ಅಡಿಕೆಗಳು ಶ್ರೀಲಂಕಾದಿಂದ ಭಾರತಕ್ಕೆ ಲಗ್ಗೆ ಇಡುತ್ತಿವೆ ಎಂದು ರಮೇಶ್‌ ಹೆಗ್ಡೆ ಆರೋಪಿಸಿದ್ದಾರೆ.

ಸದ್ಯ ಹೊಸ ಅಡಿಕೆ ಈಗ ಮಾರುಕಟ್ಟೆಗೆ ಬರುತ್ತಿದೆ. ಅಡಿಕೆ ಧಾರಣೆಯ ಏರಳಿತದಿಂದಾಗಿ ಅಡಿಕೆ ಈಗ ಮಾರಾಟ ಮಾಡಬೇಕೋ ಸ್ವಲ್ಪ ದಿನ ಕಾಯಬೇಕೋ ಎಂಬ ಗೊಂದಲ ಬೆಳೆಗಾರರಲ್ಲಿದೆ. ಬೆಲೆ ಕುಸಿತದಿಂದಾಗಿ ಅಡಿಕೆ ವ್ಯಾಪಾರಾಸ್ಥರೂ ದಿಕ್ಕು ಕಾಣದಂತಾಗಿದ್ದಾರೆ. ಈ ನಡುವೆ, ಅಡಿಕೆ ಕೊಯ್ಲಿನ ಸಮಯದಲ್ಲಿ ಹೀಗೆ ಬೆಲೆ ಇಳಿಸಿ, ಬೆಳೆಗಾರರನ್ನು ವಂಚಿಸುವ ಕೆಲಸವನ್ನು ವ್ಯಾಪಾರಿ ವರ್ಗ ಮಾಡಿಕೊಂಡು ಬಂದಿದ್ದು, ಈಗಲೂ ಇದೇ ಆಗಿದೆ ಎಂದು ಕೆಲ ಬೆಳೆಗಾರರು ಆರೋಪಿಸುವುದೂ ನಡೆದಿದೆ.

ಇದನ್ನೂ ಓದಿ | Leaf Spot Disease | ಅಡಿಕೆ ಎಲೆ ಚುಕ್ಕಿ ರೋಗದ ಕುರಿತು ಇಸ್ರೇಲ್‌ ವಿಜ್ಞಾನಿಗಳ ಜತೆ ಚರ್ಚಿಸಲಿರುವ ಸಚಿವ ಮುನಿರತ್ನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Miyazaki Mango: ಧಾರವಾಡಕ್ಕೆ ಬಂತು 2.7 ಲಕ್ಷ ರೂ. ಬೆಲೆಯ ಮಾವು!

ಧಾರವಾಡ ಮಾವಿನ ಮೇಳದಲ್ಲಿ 2.7 ಲಕ್ಷ ರೂ. ಮೌಲ್ಯದ ಮಾವು ಎಲ್ಲರ ಗಮನ ಸೆಳೆಯಿತು. ವಿಶ್ವದ ಮಾವಿನ ತಳಿಗಳಲ್ಲಿಯೇ ಅತೀ ದುಬಾರಿಯಾದ ಮೀಯಾಝಾಕಿ ತಳಿಯ ಮಾವು (Miyazaki Mango) ಅನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. ಧಾರವಾಡದ ಪ್ರಮೋದ ಗಾಂವ್ಕರ್ ಎಂಬವರು ತಮ್ಮ ತೋಟದಲ್ಲಿ ಈ ಮಾವನ್ನು ಬೆಳೆದಿದ್ದಾರೆ.

VISTARANEWS.COM


on

Miyazaki Mango
Koo

ಧಾರವಾಡ: ಮಾವಿಗೆ ʼಹಣ್ಣುಗಳ ರಾಜʼ ಎನ್ನುವುದು ಸುಮ್ಮನೇ ಅಲ್ಲ. ಇದು ಯಾವತ್ತೂ ದುಬಾರಿಯೇ. ಆದರೆ ಧಾರವಾಡದಲ್ಲಿ (Dharwad news) ನಡೆಯುತ್ತಿರುವ ಮಾವು ಮೇಳದಲ್ಲಿ, ವಿಶ್ವದಲ್ಲಿಯೇ ಅತಿ ದುಬಾರಿಯಾದ ಮಾವಿನ ಹಣ್ಣು ಕಂಡುಬಂತು. ಜನ ಇದನ್ನು ನೋಡಿ (Miyazaki Mango) ನಿಬ್ಬೆರಗಾದರು.

ಧಾರವಾಡ ಮಾವಿನ ಮೇಳದಲ್ಲಿ 2.7 ಲಕ್ಷ ರೂ. ಮೌಲ್ಯದ ಮಾವು ಎಲ್ಲರ ಗಮನ ಸೆಳೆಯಿತು. ವಿಶ್ವದ ಮಾವಿನ ತಳಿಗಳಲ್ಲಿಯೇ ಅತೀ ದುಬಾರಿಯಾದ ಮೀಯಾಝಾಕಿ ತಳಿಯ ಮಾವು (Miyazaki Mango) ಅನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. ಧಾರವಾಡದ ಪ್ರಮೋದ ಗಾಂವ್ಕರ್ ಎಂಬವರು ತಮ್ಮ ತೋಟದಲ್ಲಿ ಈ ಮಾವನ್ನು ಬೆಳೆದಿದ್ದಾರೆ.

ಧಾರವಾಡದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಮಾವಿನ ಮೇಳದಲ್ಲಿ ಜಪಾನ್ ಮೂಲದ ಈ ವಿಶೇಷ ಮಾವಿನ ತಳಿ ನೋಡಿ ಜನ ಚಕಿತರಾದರು. ಮೀಯಾಝಾಕಿ ಹಣ್ಣಿನ ಪ್ರತಿ ಕೆಜಿಗೆ ಸುಮಾರು 2.7 ಲಕ್ಷ ರೂಪಾಯಿ ಬೆಲೆ ಇದೆ. ಕೇವಲ ಒಂದೇ ಒಂದು ಹಣ್ಣಿಗೆ ಸುಮಾರು 10 ಸಾವಿರ ರೂಪಾಯಿ ಬೆಲೆಬಾಳುತ್ತದೆ. ಈ ಮಾವನ್ನು ನೋಡಲೆಂದೇ ಮೇಳಕ್ಕೆ ವಿದ್ಯಾರ್ಥಿಗಳು, ಸಾರ್ವಜನಿಕರು ಆಗಮಿಸುತ್ತಿದ್ದಾರೆ.

Miyazaki Mango

ಮೀಯಾಝಾಕಿ ಪ್ರಭೇದವು ಮೂಲತಃ ಜಪಾನಿನ ತಳಿಯಾಗಿದೆ. ಅದರ ವಿಶಿಷ್ಟ ಸುವಾಸನೆ ಮತ್ತು ಔಷಧೀಯ ಮೌಲ್ಯಕ್ಕಾಗಿ ಇದು ವಿದೇಶಗಳಲ್ಲಿ ಭಾರಿ ಬೇಡಿಕೆಯನ್ನು ಹೊಂದಿದೆ. ಇವು ಚೆನ್ನಾಗಿ ಹಣ್ಣಾದಾಗ ಗಾಢ ಕೆಂಪು ಬಣ್ಣಕ್ಕೆ ತಿರುಗುತ್ತವೆ. ಜಪಾನಿಯರ ಪ್ರಕಾರ, ವಿಶ್ವದ ಅತ್ಯಂತ ದುಬಾರಿ ಮಾವಿನ ಮೂಲ ಹೆಸರು “ತೈಯೊ ನೋ ತಮಾಗೊ” (Taiyo no Tamago) ಅಥವಾ ಸೂರ್ಯನ ಮೊಟ್ಟೆ (Egg of the Sun).

ಇದಕ್ಕೆ ಹೆಸರಾಂತ ಜಪಾನಿನ ವಿಜ್ಞಾನಿ ಯಮಶಿತಾ ಮೀಯಾಝಾಕಿ ಅವರ ಹೆಸರನ್ನು ಇಡಲಾಗಿದೆ. ಇದರ ಅಭಿವೃದ್ಧಿ ಮತ್ತು ಕೃಷಿಗೆ ಅವರು ಗಮನಾರ್ಹವಾಗಿ ಕೊಡುಗೆ ನೀಡಿದ್ದರು. ಮೀಯಾಝಾಕಿ ಪ್ರಿಫೆಕ್ಚರ್‌ನಲ್ಲಿ ಇದರ ಕೃಷಿ ಮಾಡಲಾಗುತ್ತಿದೆ. ಹೀಗಾಗಿ ಜಗತ್ತು ಈ ರುಚಿಕರವಾದ ಮಾವಿನಹಣ್ಣುಗಳನ್ನು “ಮೀಯಾಝಾಕಿ” ಎಂದು ಕರೆಯಲು ಪ್ರಾರಂಭಿಸಿತು.

70 ರ ದಶಕದ ಕೊನೆಯಲ್ಲಿ ಮತ್ತು 80 ರ ದಶಕದ ಆರಂಭದಲ್ಲಿ ಈ ಮಿಯಾಜಾಕಿ ಮಾವಿನ ಉತ್ಪಾದನೆಯು ಮಿಯಾಜಾಕಿಯಲ್ಲಿ ಆರಂಭಿಸಲಾಯಿತು. ಈ ನಗರದ ಬೆಚ್ಚನೆಯ ವಾತಾವರಣ, ಅದರ ದೀರ್ಘಾವಧಿಯ ಸೂರ್ಯನ ಬೆಳಕು ಮತ್ತು ಹೇರಳವಾದ ಮಳೆಯಿಂದಾಗಿ ರೈತರು ಮಾವು ಕೃಷಿಗೆ ಆಕರ್ಷಣೆಗೊಳ್ಳಲು ಕಾರಣವಾಯಿತು. ಏಪ್ರಿಲ್ ಮತ್ತು ಆಗಸ್ಟ್ ನಡುವೆ ಈ ಮಾವಿನ ಸುಗ್ಗಿ ನಡೆಯುತ್ತದೆ.

ಇತ್ತೀಚೆಗೆ ಭಾರತದಲ್ಲೂ ಕೆಲವರು ಕೃಷಿಕರು ಇದನ್ನು ಬೆಳೆಯಲು ಯತ್ನಿಸುತ್ತಿದ್ದಾರೆ. ಆದರೆ ಇದು ಅತ್ಯಂತ ದುಬಾರಿಯಾದ ಆರೈಕೆ, ಒಳಸುರಿಗಳ ಪೂರೈಕೆಯನ್ನು ಬೇಡುತ್ತದೆ. ಈ ಮಾವಿನಹಣ್ಣುಗಳು ವ್ಯಾಪಕ ರೋಗ ನಿರೋಧಕ ಶಕ್ತಿಯನ್ನು ಹೊಂದಿವೆ. ಬೀಟಾ-ಕ್ಯಾರೋಟಿನ್ ಮತ್ತು ಫೋಲಿಕ್ ಆಮ್ಲವನ್ನು ಒಳಗೊಂಡಿವೆ. ಇದು ಕಣ್ಣಿನ ಆರೋಗ್ಯಕ್ಕೆ ಹೆಚ್ಚು ಉಪಯೋಗಕಾರಿಯಾಗಿದೆ. ದೃಷ್ಟಿ ಹೀನತೆಯನ್ನು ತಪ್ಪಿಸುವಲ್ಲಿ ಈ ಮಾವು ಪರಿಣಾಮಕಾರಿಯಾಗಿದೆ ಎಂದು ಹೇಳಲಾಗುತ್ತಿದೆ. ಮಿಯಾಜಾಕಿ ಮಾವನ್ನು ಭಾರತ, ಬಾಂಗ್ಲಾದೇಶ, ಥಾಯ್ಲೆಂಡ್ ಮತ್ತು ಫಿಲಿಪ್ಪಿನ್ಸ್‌ ರಾಷ್ಟ್ರಗಳಲ್ಲಿ ಕೆಲವೆಡೆ ಬೆಳೆಯಲಾಗುತ್ತದೆ. ಭಾರತದಲ್ಲಿ ಪಶ್ಚಿಮ ಬಂಗಾಳ ಮಾತ್ರವಲ್ಲದೇ, ಮಧ್ಯಪ್ರದೇಶದ ಜಬಲ್ಪುರ ನಗರದಲ್ಲಿ ಬೆಳೆಯಲಾಗಿದೆ ಎಂದು ಮಾಧ್ಯಮಗಳ ವರದಿಗಳು ಹೇಳುತ್ತವೆ.

ಇದನ್ನೂ ಓದಿ: Mango Season: ಮಾರುಕಟ್ಟೆಗೆ ಬಂತು ಉತ್ತರ ಕನ್ನಡದ ಪ್ರಸಿದ್ಧ ಕರಿಈಶಾಡು ಮಾವು; ಡಜನ್‌ಗೆ 700 ರೂ.!

Continue Reading

ಉತ್ತರ ಕನ್ನಡ

Uttara Kannada News: ಯಲ್ಲಾಪುರ ಕ್ಷೇತ್ರದ ರೈತರಿಗೆ 35 ಕೋಟಿ ರೂ. ಬೆಳೆ ಹಾನಿ ವಿಮೆ ಜಮಾ: ಶಿವರಾಮ ಹೆಬ್ಬಾರ್‌

Uttara Kannada News: ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ಗೆ (ಕೆ.ಡಿ.ಸಿ.ಸಿ. ಬ್ಯಾಂಕ್‌) 2023-24 ನೇ ಸಾಲಿನ ಭತ್ತ ಹಾಗೂ ಗೋವಿನ ಜೋಳದ ಬೆಳೆ ಹಾನಿ ವಿಮೆ ಸುಮಾರು 41 ಕೋಟಿ ರೂಪಾಯಿ ಜಮಾವಾಗಿದೆ. ವಿಶೇಷವಾಗಿ ಈ ಸಾಲಿನಲ್ಲಿ ಬಿಡುಗಡೆಯಾದ ಬೆಳೆ ಹಾನಿ ವಿಮೆಯಲ್ಲಿ ನನ್ನ ಮತ ಕ್ಷೇತ್ರದ ಯಲ್ಲಾಪುರ ತಾಲೂಕಿಗೆ 84,85,610 ರೂಪಾಯಿ, ಮುಂಡಗೋಡ ತಾಲೂಕಿಗೆ 18,41,53,186 ರೂಪಾಯಿ ಹಾಗೂ ಬನವಾಸಿ ಹೋಬಳಿ ವ್ಯಾಪ್ತಿಯಲ್ಲಿ 15,90,59,753 ರೂಪಾಯಿ ಒಟ್ಟು 35 ಕೋಟಿ ರೂಪಾಯಿ ರೈತರಿಗೆ ಲಭಿಸಿರುವುದು ಅತ್ಯಂತ ಸಂತಸ ತಂದಿದೆ ಎಂದು ಕೆ.ಡಿ.ಸಿ.ಸಿ ಬ್ಯಾಂಕ್‌ನ ಅಧ್ಯಕ್ಷ ಹಾಗೂ ಶಾಸಕ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.

VISTARANEWS.COM


on

35 crore crop damage insurance deposit for farmers of Yallapur constituency says MLA Shivaram Hebbar
Koo

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ (Uttara Kannada News) ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ಗೆ (ಕೆ.ಡಿ.ಸಿ.ಸಿ. ಬ್ಯಾಂಕ್‌) 2023-24 ನೇ ಸಾಲಿನ ಭತ್ತ ಹಾಗೂ ಗೋವಿನ ಜೋಳದ ಬೆಳೆ ಹಾನಿ ವಿಮೆ ಸುಮಾರು 35 ಕೋಟಿ ರೂಪಾಯಿ ಜಮೆಯಾಗಿದೆ ಎಂದು ಕೆ.ಡಿ.ಸಿ.ಸಿ ಬ್ಯಾಂಕ್‌ನ ಅಧ್ಯಕ್ಷ ಹಾಗೂ ಶಾಸಕ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ಕಳೆದ ಸಾಲಿನಲ್ಲಿ ಮುಂಗಾರು ಮಳೆ ಕೊರತೆಯಿಂದ ಭತ್ತ, ಗೋವಿನ ಜೋಳದ ಬೆಳೆಗೆ ಹಾನಿಯಾಗಿ ರೈತ ಸಮುದಾಯಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಈಗ ಬೆಳೆ ವಿಮೆಯ ಬಿಡುಗಡೆಯಿಂದಾಗಿ ಭತ್ತ, ಗೋವಿನ ಜೋಳ ಬೆಳೆದು ಜೀವನ ಜೀವನ ಸಾಗಿಸುತ್ತಿದ್ದ ಹಲವಾರು ರೈತರಿಗೆ ಆರ್ಥಿಕ ಶಕ್ತಿ ಬಂದಂತಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Bengaluru News: ಮಹಿಳೆಯರು ಸೋಷಿಯಲ್‌ ಮೀಡಿಯಾ ಬಳಸುವಾಗ ಎಚ್ಚರ ವಹಿಸಬೇಕು ಎಂದ ಮಹಿಳಾ ಆಯೋಗದ ಅಧ್ಯಕ್ಷೆ

ವಿಶೇಷವಾಗಿ ಈ ಸಾಲಿನಲ್ಲಿ ಬಿಡುಗಡೆಯಾದ ಬೆಳೆ ಹಾನಿ ವಿಮೆಯಲ್ಲಿ ನನ್ನ ಮತ ಕ್ಷೇತ್ರದ ಯಲ್ಲಾಪುರ ತಾಲೂಕಿಗೆ 84,85,610 ರೂಪಾಯಿ, ಮುಂಡಗೋಡ ತಾಲೂಕಿಗೆ 18,41,53,186 ರೂಪಾಯಿ ಹಾಗೂ ಬನವಾಸಿ ಹೋಬಳಿ ವ್ಯಾಪ್ತಿಯಲ್ಲಿ 15,90,59,753 ರೂಪಾಯಿ. ಹೀಗೆ ಒಟ್ಟು 35 ಕೋಟಿ ರೂಪಾಯಿ ರೈತರಿಗೆ ಲಭಿಸಿರುವುದು ಅತ್ಯಂತ ಸಂತಸ ತಂದಿದೆ. ನನ್ನ ಕ್ಷೇತ್ರಕ್ಕೆ ಹೆಚ್ಚಿನ ವಿಮೆ ಪರಿಹಾರವನ್ನು ನೀಡಲು ಸಹಕರಿಸಿದ ಕೃಷಿ ಇಲಾಖೆಯ ಅಧಿಕಾರಿಗೆ, ವಿಮೆ ಕಂಪನಿಯ ಸಿಬ್ಬಂದಿಗಳಿಗೆ ಹಾಗೂ ಸರ್ಕಾರಕ್ಕೆ ಕ್ಷೇತ್ರದ ರೈತರ ಪರವಾಗಿ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಇದನ್ನೂ ಓದಿ: Vijayanagara News: ವಿಜೃಂಭಣೆಯಿಂದ ನಡೆದ ಉಜ್ಜಯಿನಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವ

ಸರ್ಕಾರದ ಮಟ್ಟದಲ್ಲಿ ವಿಶೇಷ ಪ್ರಯತ್ನವನ್ನು ನಡೆಸಿ ಈ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಹೆಚ್ಚಿನ ಪರಿಹಾರವನ್ನು ಒದಗಿಲಾಗಿದೆ. ವಿಮೆ ಕಂಪನಿಯ ಮಾನದಂಡದ ಅನ್ವಯವಾಗಿ ಉತ್ತರ ಕನ್ನಡ ಜಿಲ್ಲೆಯ ಭತ್ತ ಹಾಗೂ ಗೋವಿನ ಜೋಳವನ್ನು ಬೆಳೆದ ರೈತರಿಗೆ ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ (ಕೆ.ಡಿ.ಸಿ.ಸಿ ಬ್ಯಾಂಕ್‌) ನ ಮೂಲಕವಾಗಿ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಫಲಾನುಭವಿಗಳ ಖಾತೆಗೆ ಪರಿಹಾರದ ಮೊತ್ತವನ್ನು ನೇರವಾಗಿ ವರ್ಗಾಯಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Continue Reading

ಕರ್ನಾಟಕ

Yadgiri News: ಬರಡು ಭೂಮಿಯಲ್ಲಿ ಈ ರೈತ ಬಂಪರ್ ಮಾವು ಬೆಳೆದಿದ್ದು ಹೇಗೆ?

Yadgiri News: ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬಿಳ್ಹಾರ ಗ್ರಾಮದ ರೈತ ಮಲ್ಲಿಕಾರ್ಜುನರೆಡ್ಡಿಗೌಡ ತಮ್ಮ ಐದು ಎಕರೆ ಭೂಮಿಯಲ್ಲಿ ಯಾವುದೇ ಕ್ರಿಮಿನಾಶಕ ಬಳಸದೇ ಸಾವಯವ ಕೃಷಿ ಮಾಡಿ ಮಾವು ಬೆಳೆದು ಯಶಸ್ವಿಯಾಗಿದ್ದಾರೆ. ಬರಡು ಭೂಮಿಯಲ್ಲಿ ಏನಾದರು ಕೃಷಿ ಮಾಡಿ ಯಶಸ್ಸು ಸಾಧಿಸಬೇಕೆಂದು ಕನಸು ಕಟ್ಟಿಕೊಂಡಿದ್ದ‌ ರೈತ, ಬಂಪರ್ ಮಾವು ಬೆಳೆದು ಇತರರಿಗೆ ಮಾದರಿಯಾಗಿದ್ದಾನೆ.

VISTARANEWS.COM


on

Bilhara village farmer grew bumper mango on barren land
Koo

ಯಾದಗಿರಿ: ಆ ಭೂಮಿ ಕೃಷಿ (Agriculture) ಮಾಡಲು ಯೋಗ್ಯವಿಲ್ಲದಂತಾಗಿತ್ತು. ಯಾವ ಬೆಳೆಯೂ ಬೆಳೆಯುತ್ತಿರಲಿಲ್ಲ. ಇಂತಹ ಭೂಮಿಯಲ್ಲಿ ಏನಾದರು ಕೃಷಿ ಮಾಡಿ ಯಶಸ್ಸು ಸಾಧಿಸಬೇಕೆಂದು ಕನಸು ಕಟ್ಟಿಕೊಂಡಿದ್ದ‌ ರೈತ, ಬರಡು ಭೂಮಿಯಲ್ಲಿ ಬಂಪರ್ ಮಾವು ಬೆಳೆದು ಇತರರಿಗೆ (Yadgiri News) ಮಾದರಿಯಾಗಿದ್ದಾನೆ.

ಹೌದು, ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬಿಳ್ಹಾರ ಗ್ರಾಮದ ರೈತ ಮಲ್ಲಿಕಾರ್ಜುನರೆಡ್ಡಿ ಗೌಡ ತಮ್ಮ ಐದು ಎಕರೆ ಭೂಮಿಯಲ್ಲಿ ಯಾವುದೇ ಕ್ರಿಮಿನಾಶಕ ಬಳಸದೇ ಸಾವಯವ ಕೃಷಿ ಮಾಡಿ ಮಾವು ಬೆಳೆದು ಯಶಸ್ವಿಯಾಗಿದ್ದಾರೆ.

ರೈತ ಮಲ್ಲಿಕಾರ್ಜುನರೆಡ್ಡಿಗೌಡ ಅವರ ಐದು ಎಕರೆ ಭೂಮಿಯಲ್ಲಿ ಯಾವುದೇ ಬೇರೆ ಬೆಳೆ ಬೆಳೆಯುತ್ತಿರಲಿಲ್ಲ. ಹೀಗಾಗಿ ಮಾವು ಬೆಳೆಯಲು ಯೋಜನೆ ರೂಪಿಸಿ, 5 ಎಕರೆ ಭೂಮಿಯಲ್ಲಿ 2011ರಲ್ಲಿ 500 ಮಾವಿನ ಗಿಡಗಳನ್ನು ನಾಟಿ ಮಾಡಿದ್ದು, ಮೂರು ವರ್ಷಗಳ ನಂತರ ಮಾವು ಉತ್ತಮ ಫಲ ಕೊಡುತ್ತಿದೆ. ಇನ್ನು ನೀರಿಗಾಗಿ ಭೀಮಾನದಿ ಮೂಲಕ ಪೈಪ್ ಲೈನ್ ಹಾಕಿಕೊಂಡು ಹಾಗೂ ಜಮೀನಿನಲ್ಲಿ ಒಂದು ಬೋರ್‌ವೆಲ್ ಕೊರೆಸಿ ಮಾವಿನ ಗಿಡಕ್ಕೆ ನೀರು ಹರಿಸಲಾಗುತ್ತಿದೆ.

ಇದನ್ನೂ ಓದಿ: Vijayanagara News: ವಿಜೃಂಭಣೆಯಿಂದ ನಡೆದ ಉಜ್ಜಯಿನಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವ

ಸಾವಯವ ಗೊಬ್ಬರ ಬಳಕೆ

ಮಾವಿನ ಬೆಳೆಗೆ ಯಾವುದೇ ಕ್ರಿಮಿನಾಶಕ ಬಳಕೆ ಮಾಡಿಲ್ಲ. ಸಾವಯವ ಗೊಬ್ಬರ ಬಳಸಿ, ಮಾವು ಬೆಳೆದಿದ್ದಾರೆ. ಕೇಸರಿ, ರಸಪುರಿ, ಬೆನಿಶ್ಯಾನ್, ಮಲ್ಲಿಕಾ ಸೇರಿದಂತೆ ಹಲವು ತಳಿಯ ಮಾವು ಬೆಳೆದಿದ್ದು, ಉತ್ತಮ ಫಸಲು ಬಂದಿದೆ.

ಈ ಕುರಿತು ರೈತ ಮಲ್ಲಿಕಾರ್ಜುನರೆಡ್ಡಿ ಗೌಡ ಮಾತನಾಡಿ, ಬರಡುಭೂಮಿಯಲ್ಲಿ ಯಾವುದೇ ಬೆಳೆ ಬೆಳೆಯುತ್ತಿರಲಿಲ್ಲ. 5 ಎಕರೆ ಭೂಮಿಯಲ್ಲಿ 500 ಕ್ಕೂ ಹೆಚ್ಚು ಮಾವು ಬೆಳೆದಿದ್ದು, ಯಾವುದೇ ಕ್ರಿಮಿನಾಶಕ ಹಾಕುವುದಿಲ್ಲ. ಸಾವಯವ ಗೊಬ್ಬರ ಬಳಸಿ ಮಾವು ಬೆಳೆಯಲಾಗಿದೆ. ಈಗ ಹೆಚ್ಚು ಮಾವು ಫಸಲು ಬಂದಿದೆ ಎಂದು ತಿಳಿಸಿದ್ದಾರೆ.

ಮಾವಿನ ಹಣ್ಣುಗಳು ಪೌಷ್ಟಿಕಾಂಶವುಳ್ಳ ಹಣ್ಣು ಆಗಿದ್ದು, ಅದರಲ್ಲೂ ಸಾವಯವ ಮಾವಿನ ಹಣ್ಣಿಗೆ ಭಾರೀ ಬೇಡಿಕೆ ಇದೆ. ಇನ್ನು ಸಾವಯವ ಮಾವು ಬೆಳೆದ ಹಿನ್ನೆಲೆಯಲ್ಲಿ ರೈತ, ಮಾವು ಮಾರಾಟ ಮಾಡಲು ಯಾವುದೇ ಮಾರುಕಟ್ಟೆಗೆ ಅಲೆದಾಡುವುದು ತಪ್ಪಿದೆ. ಖರೀದಿದಾರರೇ ಖುದ್ದಾಗಿ ಜಮೀನಿಗೆ ಆಗಮಿಸಿ ಒಂದು ಸ್ಯಾಂಪಲ್ ಮಾವಿನ ಹಣ್ಣು ಸೇವಿಸಿ, ಮಾವು ಖರೀದಿ ಮಾಡುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿ ಮಾವಿನ ಹಣ್ಣುಗಳನ್ನು ಖರೀದಿ ಮಾಡಿ, ಬಳಿಕ ಅವುಗಳನ್ನು ಗುಜರಾತ್, ಮುಂಬೈ, ಬೆಂಗಳೂರು ಸೇರಿದಂತೆ ವಿವಿಧೆಡೆಗೆ ಕಳುಹಿಸುತ್ತಾರೆ.

ಇದನ್ನೂ ಓದಿ: Moringa Leaves Health Benefits: ನುಗ್ಗೆ ಸೊಪ್ಪು ಏಕೆ ತಿನ್ನಬೇಕು? ಏನಿದೆ ಇದರಲ್ಲಿ ವಿಶೇಷ ಗುಣ?

ವಡಗೇರಾ ತಾಲೂಕಿನ ಬಿಳ್ಹಾರ ಗ್ರಾಮದ ಈ ಸಾವಯವ ಮಾವಿನ ಹಣ್ಣಿಗೆ ಭಾರೀ ಡಿಮ್ಯಾಂಡ್ ಇದ್ದು, ರೈತ ಮಲ್ಲಿಕಾರ್ಜುನರೆಡ್ಡಿಗೌಡ ಉತ್ತಮ ಆದಾಯ ಗಳಿಸಿದ್ದಾರೆ.

Continue Reading

ವಿಜಯನಗರ

Vijayanagara News: ವಿಜಯನಗರ ಜಿಲ್ಲೆಗೆ 130 ಕೋಟಿ ರೂ. ಬೆಳೆ ಪರಿಹಾರ: ಡಿಸಿ

Vijayanagara News: ಹೊಸಪೇಟೆ ತಾಲೂಕಿನ 3,880 ರೈತರಿಗೆ 3,45,51,946 ರೂ., ಹಗರಿಬೊಮ್ಮನಹಳ್ಳಿ ತಾಲೂಕಿನ 15,813 ರೈತರಿಗೆ 19,24,12,902 ರೂ., ಕೂಡ್ಲಿಗಿ ತಾಲೂಕಿನ 19,010 ರೈತರಿಗೆ 23,12,23,100 ರೂ., ಕೊಟ್ಟೂರು ತಾಲೂಕಿನ 12,833 ರೈತರಿಗೆ 14,04,56,255 ರೂ., ಹಡಗಲಿ ತಾಲೂಕಿನ 20,925 ರೈತರಿಗೆ 26,93,01,607 ರೂ. ಮತ್ತು ಹರಪನಹಳ್ಳಿ ತಾಲೂಕಿನ 37,082 ರೈತರಿಗೆ 42,28,62,000 ರೂ. ನಂತೆ ವಿಜಯನಗರ ಜಿಲ್ಲೆಯಲ್ಲಿ ತಾಲೂಕುವಾರು ಬೆಳೆ ಪರಿಹಾರ ಮೊತ್ತ ಸಂದಾಯವಾಗಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್‌ ತಿಳಿಸಿದ್ದಾರೆ.

VISTARANEWS.COM


on

130 crore crop compensation amount paid to Vijayanagara district says DC m S Diwakar
ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್‌.
Koo

ಹೊಸಪೇಟೆ: 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿಜಯನಗರ ಜಿಲ್ಲೆಯಲ್ಲಿ (Vijayanagara News) ಬರ ಪರಿಸ್ಥಿತಿಯಿಂದ ಉಂಟಾದ ಬೆಳೆಹಾನಿಗೆ ಎಸ್.ಡಿ.ಆರ್.ಎಫ್ ಹಾಗೂ ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಅರ್ಹತೆಯ ಅನುಗುಣವಾಗಿ ಈಗಾಗಲೇ ಅರ್ಹ ರೈತರಿಗೆ ಗರಿಷ್ಟ 2000 ರೂ. ವರೆಗೆ ಪಾವತಿಸಿರುವ ಬೆಳೆಹಾನಿ ಪರಿಹಾರ ಮೊತ್ತವನ್ನು ಪರಿಗಣನೆಗೆ ತೆಗೆದುಕೊಂಡು ಅರ್ಹತೆಯಂತೆ ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರ ಮೊತ್ತವನ್ನು ಪಾವತಿಸಲು ಅನುದಾನ ಬಿಡುಗಡೆ ಮಾಡಿ, ಸರ್ಕಾರದಿಂದ ಆದೇಶಿಸಲಾಗಿದೆ.

ಅದರಂತೆ ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯ ಆಧಾರದ ಮೇಲೆ ಪ್ರೂಟ್ಸ್ ಐಡಿ ಹೊಂದಿರುವ ರೈತರಿಗೆ ಪರಿಹಾರ ತಂತ್ರಾಂಶದ ಮೂಲಕ ಹಂತಹಂತವಾಗಿ ಪರಿಹಾರ ವಿತರಣೆ ಮಾಡಲಾಗುತ್ತಿದ್ದು, ವಿಜಯನಗರ ಜಿಲ್ಲೆಯಲ್ಲಿ ಈವರೆಗೂ ಹತ್ತು ಹಂತಗಳಲ್ಲಿ ಒಟ್ಟು 1,09,543 ರೈತರಿಗೆ 130,08,07,810 ರೂ. ಇನ್ಪುಟ್ ಸಬ್ಸಿಡಿಯನ್ನು ಜಮಾ ಮಾಡಲು ಅನುಮೋದನೆ ನೀಡಲಾಗಿದ್ದು, ಸರ್ಕಾರದಿಂದ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನವನ್ನು ಜಮಾ ಮಾಡಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ICMR Dietary Guidelines: ನಿಮ್ಮ ಆರೋಗ್ಯ ಚೆನ್ನಾಗಿರಬೇಕೆ? ತಜ್ಞ ಸಮಿತಿಯ ಈ ಆಹಾರ ಸಲಹೆ ಪಾಲಿಸಿ

ಬಾಕಿ ಉಳಿದ ಅರ್ಹ ರೈತರಿಗೆ ಹಂತ-ಹಂತವಾಗಿ ಪರಿಹಾರ ಪಾವತಿಸುವ ಕಾರ್ಯವು ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಜಮಾ ಮಾಡಲಾಗುವುದು. ಈಗಾಗಲೇ ಅನುಮೋದನೆ ನೀಡಿರುವ ರೈತರ ಮಾಹಿತಿಯ ಪಟ್ಟಿಯನ್ನು ನಾಡ ಕಚೇರಿಗಳು, ಗ್ರಾಮ ಪಂಚಾಯಿತಿಗಳು ಹಾಗೂ ರೈತ ಸಂಪರ್ಕ ಕೇಂದ್ರಗಳು ಹಾಗೂ ತಹಸೀಲ್ದಾರರ ಕಚೇರಿಯ ಸೂಚನಾ ಫಲಕಗಳಲ್ಲಿ ಪ್ರಚುರಪಡಿಸಲಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಹೊಸಪೇಟೆ ತಾಲೂಕು ಕಚೇರಿ, ಹಗರಿಬೊಮ್ಮನಹಳ್ಳಿ ತಾಲೂಕು ಕಚೇರಿ, ಕೂಡ್ಲಿಗಿ ತಾಲೂಕು ಕಚೇರಿ, ಕೊಟ್ಟೂರು ತಾಲೂಕು ಕಚೇರಿ, ಹಡಗಲಿ ತಾಲೂಕು ಕಚೇರಿ ಮತ್ತು ಹರಪನಹಳ್ಳಿ ತಾಲೂಕು ಕಚೇರಿಗಳಲ್ಲಿನ ಸಹಾಯವಾಣಿಗಳಿಗೆ ಕಚೇರಿ ಸಮಯದಲ್ಲಿ ರೈತರು ಫ್ರೂಟ್ಸ್ ಐಡಿ ಸಂಖ್ಯೆಯೊಂದಿಗೆ ಸಂಬಂಧಪಟ್ಟ ತಾಲೂಕು ಕಚೇರಿಯ ಸಹಾಯವಾಣಿಗೆ ಭೇಟಿ ನೀಡಿ ಬೆಳೆ ಪರಿಹಾರ ಮಾಹಿತಿ ಪಡೆಯಬಹುದಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

ಇದನ್ನೂ ಓದಿ: Dwarka Tour: ದ್ವಾರಕೆಗೆ ಹೋದಾಗ ಏನೇನು ನೋಡಬಹುದು?

ತಾಲೂಕುವಾರು ಮಾಹಿತಿ

ಹೊಸಪೇಟೆ ತಾಲೂಕಿನ 3,880 ರೈತರಿಗೆ 3,45,51,946 ರೂ., ಹಗರಿಬೊಮ್ಮನಹಳ್ಳಿ ತಾಲೂಕಿನ 15,813 ರೈತರಿಗೆ 19,24,12,902 ರೂ., ಕೂಡ್ಲಿಗಿ ತಾಲೂಕಿನ 19,010 ರೈತರಿಗೆ 23,12,23,100 ರೂ., ಕೊಟ್ಟೂರು ತಾಲೂಕಿನ 12,833 ರೈತರಿಗೆ 14,04,56,255 ರೂ., ಹಡಗಲಿ ತಾಲೂಕಿನ 20,925 ರೈತರಿಗೆ 26,93,01,607 ರೂ. ಮತ್ತು ಹರಪನಹಳ್ಳಿ ತಾಲೂಕಿನ 37,082 ರೈತರಿಗೆ 42,28,62,000 ರೂ. ನಂತೆ ವಿಜಯನಗರ ಜಿಲ್ಲೆಯಲ್ಲಿ ತಾಲೂಕುವಾರು ಬೆಳೆ ಪರಿಹಾರ ಮೊತ್ತ ಸಂದಾಯವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Continue Reading
Advertisement
Dangerous Bike Stunt
ಕರ್ನಾಟಕ2 mins ago

Dangerous Bike Stunt: ಯುವತಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಬೈಕ್‌ ಓಡಿಸಿದ ಯುವಕ ಅರೆಸ್ಟ್‌

Narendra Modi
ದೇಶ46 mins ago

Narendra Modi: ಮುಸ್ಲಿಮರ ವೋಟಿಗಾಗಿ ಮಮತಾ ಬ್ಯಾನರ್ಜಿ ಹಿಂದು ಸಂಘಟನೆಗಳ ವಿರುದ್ಧ ಆರೋಪ; ಮೋದಿ ಟೀಕೆ

SRH vs PBKS
ಕ್ರೀಡೆ1 hour ago

SRH vs PBKS: ಆರ್​ಸಿಬಿಯ ಸಿಕ್ಸರ್​ ದಾಖಲೆ ಮುರಿದ ಹೈದರಾಬಾದ್​

Drowned in Lake
ಕರ್ನಾಟಕ1 hour ago

Drown in Lake: ಮೀನು ಹಿಡಿಯಲು ಕೆರೆಗೆ ಹೋಗಿದ್ದ ಇಬ್ಬರು ನೀರು ಪಾಲು

Bengaluru Rain
ಕರ್ನಾಟಕ2 hours ago

Bengaluru Rain: ಬೆಂಗಳೂರಿನಲ್ಲಿ ಮುಂದುವರಿದ ಮಳೆ ಆರ್ಭಟ; ರಸ್ತೆಗಳು ಜಲಾವೃತ, ಹಲವೆಡೆ ಸಂಚಾರ ಅಸ್ತವ್ಯಸ್ತ

Kantara Movie
ಸಿನಿಮಾ2 hours ago

Kantara Movie: ದಾಖಲೆ ಮೊತ್ತಕ್ಕೆ ಕಾಂತಾರ ಸಿನಿಮಾದ ಡಿಜಿಟಲ್‌ ರೈಟ್ಸ್‌ ಮಾರಾಟ; ಅಬ್ಬಾ ಇಷ್ಟು ಕೋಟಿನಾ!

SRH vs PBKS
ಕ್ರೀಡೆ2 hours ago

SRH vs PBKS: ಒಂದು ದಿನ ಕಳೆಯುವ ಮುನ್ನವೇ ಕೊಹ್ಲಿಯ ಸಿಕ್ಸರ್​ ದಾಖಲೆ ಮುರಿದ ಅಭಿಷೇಕ್

Harish Poonja
ಕರ್ನಾಟಕ3 hours ago

Harish Poonja: ಪೊಲೀಸರಿಗೆ ಧಮ್ಕಿ; ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್

Ebrahim Raisi
ವಿದೇಶ3 hours ago

Ebrahim Raisi: ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನ

PBKS vs SRH
ಕ್ರೀಡೆ3 hours ago

PBKS vs SRH: ಸೋಲಿನ ಮೂಲಕ ಅಭಿಯಾನ ಮುಗಿಸಿದ ಪಂಜಾಬ್​; ಹೈದರಾಬಾದ್​​ಗೆ 4 ವಿಕೆಟ್​ ಜಯ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ7 hours ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ7 hours ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ9 hours ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ2 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ3 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು3 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ5 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

ಟ್ರೆಂಡಿಂಗ್‌