ಕೃಷಿ
Krishi Khajane : ಹೂವು ಬೆಳೆದು ಹಣ ಗಳಿಸಿ; ಒಂದು ಎಕರೆಯಲ್ಲಿ ಮಲ್ಲಿಗೆ ಬೆಳೆದರೆ 3 ಲಕ್ಷ ರೂ. ಆದಾಯ!
Krishi Khajane : ಇಂಗ್ಲಿಷ್‌ನಲ್ಲಿ ಜಾಸ್ಮೀನ್ ಎಂದು ಕರೆಯಲ್ಪಡುವ ಮಲ್ಲಿಗೆ ದೀರ್ಘಕಾಲಿಕ ಪುಷ್ಪ ಬೆಳೆ. ಇದನ್ನು ಪೂಜೆಗೆ, ಮುಡಿಯಲು ಮಾತ್ರವಲ್ಲದೆ, ಸುಗಂಧಿತ ತೈಲ, ಅತ್ತರ್ ತಯಾರಿಸಲೂ ಬಳಸಲಾಗುತ್ತದೆ. ಈ ಕೃಷಿಯ ಕುರಿತು ಮಾಹಿತಿ ನೀಡುವ ವಿಡಿಯೋ ಇಲ್ಲಿದೆ.
ಇದನ್ನೂ ಓದಿ : Krishi Khajane : ಲಕ್ಷ ಲಕ್ಷ ಲಾಭ ತರುವ ಡ್ರ್ಯಾಗನ್ ಫ್ರೂಟ್ ಕೃಷಿ!
ಕರ್ನಾಟಕ
Farmers problem : ಸೇವಂತಿಗೆ ಹೂವಿನ ದರ ಕುಸಿತ ಹಿನ್ನೆಲೆ; ಟ್ರ್ಯಾಕ್ಟರ್ ಓಡಿಸಿ ಬೆಳೆಯನ್ನೇ ನಾಶ ಮಾಡಿದ ಹತಾಶ ರೈತ
Farmers problem: ರೈತರು ಎದುರಿಸುತ್ತಿರುವ ಸಮಸ್ಯೆಗಳು ಒಂದೆರಡಲ್ಲ. ಕೆಲವೊಮ್ಮೆ ಬೆಳೆಯೇ ನಾಶವಾಗಿತ್ತದೆ. ಬೆಲೆ ಚೆನ್ನಾಗಿರುತ್ತದೆ. ಕೆಲವೊಮ್ಮೆ ಬೆಳೆ ಚೆನ್ನಾಗಿರುತ್ತದೆ. ಬೆಲೆ ಬಿದ್ದು ಹೋಗಿರುತ್ತದೆ. ಇಲ್ಲಿನ ಒಂದು ಸುದ್ದಿ ಇದಕ್ಕೆ ನಿದರ್ಶನ.
ಮಂಡ್ಯ: ರೈತರ ಬದುಕು ಎಷ್ಟು ಅನಿಶ್ಚಿತ (Life is uncertain for farmers) ಎನ್ನುವುದಕ್ಕೆ ನಮ್ಮ ಮುಂದೆ ಹಲವು ಉದಾಹರಣೆಗಳು ಎದ್ದು ನಿಲ್ಲುತ್ತವೆ. ಮೊನ್ನೆ ಮೊನ್ನೆಯಷ್ಟೆ ಒಂದು ಕೆಜಿ ಟೊಮ್ಯಾಟೊವನ್ನು 200 ರೂಪಾಯಿಗೆ (Tomato price) ಮಾರಿದ ರೈತ ಎನ್ನುವ ಸುದ್ದಿಯನ್ನು (Farmers problem) ಓದಿರುತ್ತೇವೆ. ಆದರೆ, ಈಗ. ಎರಡು ರೂಪಾಯಿಗೂ ಕೇಳುವವರಿಲ್ಲ! ಹಲವು ತರಕಾರಿ, ಹೂವು, ಹಣ್ಣುಗಳ ಕಥೆ ಇಷ್ಟೇ
ಈಗ ಸೇವಂತಿಗೆ ಹೂವಿನ (Sevanthige flower) ಸರದಿ. ಒಮ್ಮೊಮ್ಮೆ ಕೇಜಿಗೆ 200 ರೂ.ವರೆಗೆ ಏರುವ ಸೇವಂತಿಗೆ ಈಗ 20 ರೂ.ಗೆ ಕೊಟ್ಟರೂ ಬೇಡ. ಅಷ್ಟು ಇಳಿದಿದೆ ದರ. ಒಂದು ಕೆಜಿ ಸೇವಂತಿಗೆಯನ್ನು ಬೆಳೆಯಲು ರೈತರು ಎಷ್ಟು ಕಷ್ಟಪಟ್ಟಿರುತ್ತಾರೆ ಎನ್ನುವುದು ಅವರಿಗೇ ಗೊತ್ತು. ಹೊಲ ಹದ ಮಾಡಿ, ಬೀಜ ಹಾಕಿ, ಬೆಳೆದು, ಬರುವ ಕ್ರಿಮಿಕೀಟಗಳನ್ನು ನಿಯಂತ್ರಿಸಿ, ನೀರುಣಿಸಿ ಕೊನೆಗೆ ಹೂವು ಬೆಳೆದಾಗ ಬೆಲೆ ಇಲ್ಲ ಎಂದರೆ ಎಂಥವರ ಹೃದಯವೂ ಚೂರಾಗುವುದು ನಿಶ್ಚಿತವೇ. ಈ ದರ ಈಗ ಎಷ್ಟು ಕಡಿಮೆಯಾಗಿದೆ ಎಂದು ರೈತರ (Sevanthige grower) ಕೈಯಿಂದ ಐದು-ಹತ್ತು ರೂ.ಗೂ ಖರೀದಿಸುವವರಿಲ್ಲ.
ಸೇವಂತಿಗೆಯಂಥ ಹೂವನ್ನು ಅದು ಹಾಳಾಗದಂತೆ ಕೊಯ್ದು ಜೋಪಾನ ಮಾಡಿ ಮಾರುಕಟ್ಟೆಗೆ ತಲುಪಿಸುವುದು ಕೂಡ ಒಂದು ಸಾಹಸವೇ. ಅದಕ್ಕೇ ಸಾಕಷ್ಟು ಖರ್ಚು ತಗಲುತ್ತದೆ. ಹಾಗೆ ಹೂವು ಕೊಯ್ಯಲು ಖರ್ಚು ಮಾಡಿದ ಹಣವೂ ವಾಸ್ ಬರುವುದಿಲ್ಲ ಎಂಬ ಸ್ಥಿತಿಯಲ್ಲಿ ರೈತರು ಏನು ಮಾಡಬಹುದು?
ಬೆಳೆದ ಹೂವನ್ನು ಸ್ವತಃ ನಾಶ ಮಾಡಿದ ರೈತ.!
ಹೌದು ತನೇ ಪ್ರೀತಿಯಿಂದ ಬೆಳೆದ, ಅತ್ಯಂತ ಮನೋಹರವಾಗಿ ಬೆಳೆದು ನಿಂತ ಹೂವಿನ ಗದ್ದೆಯ ಬೆಳೆಯನ್ನೇ ಇಲ್ಲೊಬ್ಬ ರೈತರು ನಾಶ ಮಾಡಿದ್ದಾರೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕಂಚನಹಳ್ಳಿ ರೈತ ಯೋಗರಾಜ್ ಎಂಬವರೇ ಹೀಗೆ ಬೆಳೆಯನ್ನು ನಾಶ ಮಾಡಿದವರು. ಪಾಂಡವಪುರ ಮತ್ತು ಕೆ.ಆರ್.ಪೇಟೆ ಭಾಗದಲ್ಲಿ ಹೂ ಕೃಷಿ ಮಾಡಿದ ರೈತ ಕುಟುಂಬ ಈಗ ಬೆಲೆ ಇಲ್ಲದೆ ಕಂಗಾಲಾಗಿದೆ.
ಸೇವಂತಿ ಹೂ ಬೆಳೆದು ಬೀದಿಗೆ ಬಿದ್ದ ಹೂವು ಬೆಳೆಗಾರ ಈ ಸೇವಂತಿ ಹೂವಿನದರ ಕುಸಿತ ಕಂಗಾಲಾಗಿ ಬೆಳೆದ ಹೂವಿನ ಬೆಳೆ ನಾಶ ಮಾಡಿದ್ದಾರೆ.
ಇದು ಇವರೊಬ್ಬರ ಕಥೆಯಲ್ಲ ಹೂ ಕೀಳಿಸಿದ ಕೂಲಿಯೂ ಸಿಗದ ಕಾರಣಕ್ಕೆ ಹಲವಾರು ರೈತರು ಹೂವಿನ ಬೆಳೆ ನಾಶ ಮಾಡಿದ್ದಾರೆ. ಹೂವು ಕಿತ್ತು ಮಾರುಕಟ್ಟೆಗೆ ಹಾಕಿ ಮತ್ತಷ್ಟು ಲಾಸ್ ಆಗುವ ಬದಲು ಭೂಮಿಗೇ ಗೊಬ್ಬರವಾಗಲಿ ಎಂದು ಅವರು ಆಲೋಚಿಸುತ್ತಿದ್ದಾರೆ.
ಕರ್ನಾಟಕ
Power Point with HPK : ಬರ ಘೋಷಣೆಯಲ್ಲಿ ನಾವೇ ಮುಂದು; ಬಿಜೆಪಿಗೆ ಇನ್ನೊಂದು ತಿಂಗಳಾದರೂ ಆಗದು!
Power Point with HPK : ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ನಡೆಸಿಕೊಡುವ “ಪವರ್ ಪಾಯಿಂಟ್ ವಿತ್ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಬರ ತಾಲೂಕುಗಳ ಘೋಷಣೆ ಬಗ್ಗೆ ಬಿಜೆಪಿ ಮಾಡಿರುವ ಟೀಕೆಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರು: ಬರ ಘೋಷಣೆಯನ್ನು ನಾವು ವಿಳಂಬ ಮಾಡಿಯೇ ಇಲ್ಲ. ನಮ್ಮ ಸರ್ಕಾರವೇ ಬೇಗ ಘೋಷಣೆ ಮಾಡಿದೆ. ಅದೇ ಬಿಜೆಪಿಯವರಾಗಿದ್ದರೆ ಇನ್ನೂ ಒಂದು ತಿಂಗಳು ಘೋಷಣೆ ಮಾಡಲು ಆಗುತ್ತಿರಲಿಲ್ಲ. ಬರ ಘೋಷಣೆಯನ್ನು ಮಾಡುತ್ತಲೂ ಇರಲಿಲ್ಲ. 195 ಅಲ್ಲ 100 ತಾಲೂಕನ್ನೂ ಬರಪೀಡಿತ ಎಂದು ಬಿಜೆಪಿಯವರಿಂದ ಘೋಷಣೆ ಮಾಡಲು ಆಗುತ್ತಿರಲಿಲ್ಲ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ (Agriculture Minister N Chaluvarayaswamy) ಅವರು ಪವರ್ ಪಾಯಿಂಟ್ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.
ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್ ಪಾಯಿಂಟ್ ವಿತ್ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಬಿಜೆಪಿಯವರ ವಿರೋಧಕ್ಕೆ ಏನು ಮಾಡುವುದು? ನಮ್ಮ ಬಗ್ಗೆ ಹೇಳಲು ಅವರಿಗೆ ಏನೂ ಇಲ್ಲದೇ ಇರುವುದರಿಂದ ಇಂತಹ ಆರೋಪ ಮಾಡುತ್ತಾರೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಸರ್ಕಾರ ಯಾವಾಗ ಅಧಿಕಾರಕ್ಕೆ ಬರುತ್ತದೋ ಆವಾಗೆಲ್ಲ ಬರ ಬರುತ್ತದೆ. ಎಸ್ ಎಂ ಕೃಷ್ಣ ಕಾಲದಲ್ಲೂ ಹೀಗೇ ಆಯಿತು, ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೂ ಬರ ಕಾಡಿತು ಎಂದು ಟೀಕೆ ಮಾಡುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಚಲುವರಾಯಸ್ವಾಮಿ, ಬಿಜೆಪಿಯವರಿಗೆ ಯಾವುದೇ ರೀತಿಯ ವಿಷಯ ಇಲ್ಲ. ಮುಂದೆ ಚುನಾವಣೆ ಸಹ ಇರುವುದರಿಂದ ಹೀಗೆಲ್ಲಾ ಹೇಳುತ್ತಿದ್ದಾರೆ. ಅವರಿಗೆ ವಿರೋಧ ಪಕ್ಷದ ನಾಯಕನನ್ನು ಮಾಡಲು ಆಗಿಲ್ಲ. ಪಕ್ಷದ ಅಧ್ಯಕ್ಷರ ಬದಲಾವಣೆ ಆಗಿಲ್ಲ. ಒಂದು ಕಡೆ ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರನ್ನು ಅವಲಂಬಿಸುತ್ತಾರೆ. ಕುಮಾರಸ್ವಾಮಿಯವರೂ ಇನ್ನೊಮ್ಮೆ ಬಿಜೆಪಿಯವರನ್ನು ಅಬಲಂಬಿಸುತ್ತಾರೆ. ಆದರೆ, ವಿರೋಧ ಪಕ್ಷಗಳು ಏನಾದರೂ ಹೇಳಬೇಕು ಎಂಬ ಕಾರಣಕ್ಕೆ ಹೀಗೆ ಆರೋಪ ಮಾಡುತ್ತಿವೆ ಎಂದು ಎನ್. ಚಲುವರಾಯಸ್ವಾಮಿ ಹೇಳಿದರು.
ರೈತರ ಪರ ಇದ್ದಿದ್ದಕ್ಕೇ ಬರ ತಾಲೂಕು ಘೋಷಣೆ
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಕಂದಾಯ ಸಚಿವ ಕೃಷ್ಣಬೈರೇಗೌಡ ಹಾಗೂ ನಾನು ಸೇರಿದಂತೆ ನಮ್ಮ ರಾಜ್ಯ ಸರ್ಕಾರವು ರೈತರ ಪರ ಇರುವುದರಿಂದ ಮಾತ್ರ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲು ಸಾಧ್ಯವಾಯಿತು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಸಂಕಷ್ಟವನ್ನು ಪರಿಗಣಿಸಿದ್ದೇವೆ
195 ತಾಲೂಕುಗಳು ಬರಪೀಡಿತವಾಗಿದ್ದರೂ ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ 161 ತಾಲೂಕುಗಳು ಮಾತ್ರ ಬರಪೀಡಿತ ಎಂದು ಘೋಷಣೆ ಮಾಡಲು ಸಾಧ್ಯವಾಯಿತು. ಇನ್ನು 34 ತಾಲೂಕುಗಳು ಕೇಂದ್ರದ ಅನುಸಾರ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲು ಬರುವುದಿಲ್ಲ. ಆದರೆ, ಅಲ್ಲಿ ಸಂಕಷ್ಟ ಇರುವುದನ್ನು ಅರಿತು ನಾವು ಇವುಗಳನ್ನೂ ಸೇರಿಸಿ ಘೋಷಣೆ ಮಾಡಿದ್ದೇವೆ. ಅಲ್ಲದೆ, ಇವುಗಳ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೂ ಕೊಡುತ್ತೇವೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಇದನ್ನೂ ಓದಿ: Power Point with HPK : ಪುತ್ರ ಕಾಂತೇಶ್ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಉತ್ಸುಕನಾಗಿದ್ದಾನೆ!
ವರದಿ ಕೊಡಲು ಡಿಸಿಗಳಿಗೆ ಸೂಚಿಸಿದ್ದೇವೆ
ರಾಜ್ಯದ ಹಲವು ಕಡೆ ಮೇವು ಇದೆಯೇ? ಬೀಜದ ಕೊರತೆ ಇದೆಯೇ? ಮತ್ತೇನು ಸಮಸ್ಯೆಗಳಿವೆ ಎಂಬುದರ ಬಗ್ಗೆ ವರದಿ ಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಆ ವರದಿಯನ್ವಯ ಒಂದು ಮೆಮೋರಂಡಮ್ ಅನ್ನು ಸಿದ್ಧಪಡಿಸಿ ಕೇಂದ್ರಕ್ಕೆ ಕಳುಹಿಸುತ್ತೇವೆ. ನಾವು ಸಹ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಕರ್ನಾಟಕ
Toor dal growers : ನೆಟೆ ರೋಗದಿಂದ ನಷ್ಟ ಅನುಭವಿಸಿದ್ದ ರೈತರಿಗೆ Good News : ಸರಕಾರದಿಂದ ಬಾಕಿ ಪರಿಹಾರ ಬಿಡುಗಡೆ
Toor dal Growers : ಕಳೆದ ಅವಧಿಯಲ್ಲಿ ಮಳೆಯಿಂದ ತೊಗರಿ ಬೆಳೆ ಹಾಳಾಗಿತ್ತು. ಬಳಿಕ ನೆಟೆ ರೋಗ ಅಮರಿಕೊಂಡಿತ್ತು. ಅವಳಿ ಹೊಡೆತದಿಂದ ಕಂಗಾಲಾದ ರೈತರಿಗೆ ನೀಡಬೇಕಾಗಿದ್ದ ಪರಿಹಾರದ ಮತ್ತೊಂದು ಕಂತು ಬಿಡುಗಡೆಯಾಗಿದೆ.
ಬೆಂಗಳೂರು: ಕಳೆದ ವರ್ಷ ಉತ್ತರ ಕರ್ನಾಟಕದ ಕಲಬುರಗಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನೆಟೆ ರೋಗದಿಂದ (Starch disease) ತೊಗರಿ ಬೆಳೆಗೆ (Toor dal) ಭಾರಿ ಹಾನಿ ಆಗಿತ್ತು. ಆಗ ನಷ್ಟ ಅನುಭವಿಸಿದ್ದ ರೈತರಿಗೆ (Toor dal growers) ಸರ್ಕಾರ ಪರಿಹಾರ (Compensation from government) ಘೋಷಿಸಿತ್ತು. ಅದರಲ್ಲಿ ಬಾಕಿ ಇದ್ದ ಪರಿಹಾರ ಹಣವನ್ನು ರಾಜ್ಯ ಸರ್ಕಾರ ಈಗ ಬಿಡುಗಡೆ ಮಾಡುವ ಮೂಲಕ ಒಂದಿಷ್ಟು ನೆಮ್ಮದಿ ನೀಡಿದೆ.
ಕಳೆದ ಸಾಲಿನಲ್ಲಿ ತೊಗರಿ ಬೆಳೆಗಾರರಿಗೆ ಭಾರಿ ನಷ್ಟ ಉಂಟಾಗಿತ್ತು. ಒಂದು ಕಡೆ ಅತಿವೃಷ್ಟಿಯಿಂದ ಆರಂಭದಲ್ಲೇ ತೊಗರಿ ಬೆಳೆ ನಾಶವಾಗಿತ್ತು. ಸಾವಿರಾರು ರೂ. ಖರ್ಚು ಮಾಡಿ ಬಿತ್ತನೆ ಮಾಡಿದ್ದ ತೊಗರಿ ನೀರುಪಾಲಾಗಿತ್ತು.
ಅತಿವೃಷ್ಟಿಯಿಂದ ಆರಂಭದಲ್ಲಿಯೇ ತೊಗರಿ ಹಾಳಾಗಿದ್ದರಿಂದ ರೈತರು ಮತ್ತೆ ಭೂಮಿ ಹಸನು ಮಾಡಿ ತೊಗರಿ ಬಿತ್ತನೆ ಮಾಡಿದ್ದರು. ತೊಗರಿ ಬೆಳೆ ಕೂಡಾ ಚೆನ್ನಾಗಿ ಬಂದಿತ್ತು. ಆದರೆ ತೊಗರಿ ಕಾಳಾಗುವ ಹಂತದಲ್ಲಿ, ನಟೆ ರೋಗ ಒಕ್ಕರಿಸಿಕೊಂಡಿತ್ತು. ನಟೆ ರೋಗದಿಂದ ತೊಗರಿ ಗೊಡ್ಡಾಗಿದ್ದು, ಕಾಳಾಗುವ ಮುನ್ನವೇ ಒಣಗಲು ಶುರುವಾಗಿತ್ತು.
ನಟೆರೋಗದಿಂದ ಸಂತ್ರಸ್ತರಾದ ರೈತರು ಪರಿಹಾರಕ್ಕಾಗಿ ಸರ್ಕಾರದ ಮೊರೆ ಹೋಗಿದ್ದರು. ಕಳೆದ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಗೆ ಬಂದಾಗಲೂ ಜನರು ಪ್ರತಿಭಟನೆಯ ಮೂಲಕ ಅವರ ಗಮನ ಸೆಳೆಯಲು ಪ್ರಯತ್ನ ಮಾಡಿದ್ದರು.
ಮೂರು ಜಿಲ್ಲೆಗಳಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ತೊಗರಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿತ್ತು. ಇದು ರೈತರಿಗೆ ಭಾರಿ ಸಂಕಷ್ಟವನ್ನು ತಂದಿತ್ತು.
ಇದನ್ನೂ ಓದಿ: Rain News : ಮೋಡ ಬಿತ್ತನೆ ಇಲ್ಲ; 100ಕ್ಕೂ ಹೆಚ್ಚು ಬರಪೀಡಿತ ತಾಲೂಕು ಘೋಷಣೆಗೆ ಕೇಂದ್ರಕ್ಕೆ ಮನವಿ: ಚಲುವರಾಯಸ್ವಾಮಿ
ಇದೀಗ ಬಾಕಿ ಪರಿಹಾರ ಬಿಡುಗಡೆ
ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರ ಮನವಿ ಮೇರೆಗೆ ನೆಟೆ ರೋಗ ಸಂತ್ರಸ್ತರಿಗೆ ಬಾಕಿ ಇದ್ದ 223 ಕೋಟಿ ರೂ.ಗಳನ್ನು ಸರ್ಕಾರ ಮಂಜೂರು ಮಾಡಿ, ಅದರಲ್ಲಿ 74 ಕೊಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು. ಇದೀಗ 2ನೇ ಕಂತಿನಲ್ಲಿ 74 ಕೋಟಿ ರೂ ಬಿಡುಗಡೆಗೊಳಿಸಲಾಗಿದೆ.
ಬಾಕಿ ಉಳಿದ ರೂ 75 ಕೋಟಿ ಹಣವನ್ನು ಸಹ ಶೀಘ್ರವಾಗಿ ಬಿಡುಗಡೆ ಮಾಡಲಾಗುವುದು ಎಂದು ಪ್ರಕಟಣೆ ಮೂಲಕ ತಿಳಿಸಿರುವ ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಹಣ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಸಮರ್ಪಿಸಿದ್ದಾರೆ.
ಕರ್ನಾಟಕ
Farmers suicide : ಲವ್ ಕೇಸಲ್ಲಿ ಸತ್ತಿದ್ದೆಲ್ಲ ರೈತರ ಆತ್ಮಹತ್ಯೆ ಆಗಲ್ಲ, 5 ಲಕ್ಷ ಪರಿಹಾರಕ್ಕೆ ಸುಸೈಡ್ ಜಾಸ್ತಿ ಆಗ್ತಿದೆ ಅಂದ ಸಚಿವ!
Farmers suicide : ಸಿಕ್ಕ ಸಿಕ್ಕ ಸಾವಿಗೆಲ್ಲ ಆತ್ಮಹತ್ಯೆ, ರೈತರ ಆತ್ಮಹತ್ಯೆ ಎನ್ನುವ ಹಣೆಪಟ್ಟಿ ಕಟ್ಟಬೇಡಿ ಎಂದು ಹೇಳಿದ್ದಾರೆ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್. ಪರಿಹಾರ ಸಿಗುತ್ತೆ ಅಂತ ಸುಸೈಡ್ ಜಾಸ್ತಿ ಆಗ್ತಿದೆ ಎಂಬ ಅವರ ಹೇಳಿಕೆ ಆಕ್ರೋಶಕ್ಕೆ ಕಾರಣವಾಗಿದೆ.
ಹಾವೇರಿ: ರಾಜ್ಯದಲ್ಲಿ ಬರಗಾಲದಿಂದ ರೈತರು ಕಂಗೆಟ್ಟಿದ್ದಾರೆ (Farmer suicide), ಬೆಳೆ ಹಾನಿಯಿಂದ ತತ್ತರಿಸಿದ್ದಾರೆ, ಉತ್ಪನ್ನಗಳಿಗೆ ಸರಿಯಾದ ಧಾರಣೆ ಸಿಗದೆ ಸಾಲದ ಸುಳಿಗೆ ಬಿದ್ದಿದ್ದಾರೆ. ಇಂಥ ಹೊತ್ತಿನಲ್ಲಿ ರೈತರು ಹತಾಶರಾಗಿ ಮಾಡಿಕೊಳ್ಳುವ ಆತ್ಮಹತ್ಯೆಯನ್ನು ಸಂಶಯದಿಂದ ನೋಡುವ, ಅವಹೇಳನ ಮಾಡುವ ರೀತಿಯಲ್ಲಿ ಹೇಳಿಕೆ ನೀಡುವ ಮೂಲಕ ಕೃಷಿ ಮಾರುಕಟ್ಟೆ ಸಚಿವ (Agricuture Marketing Minister) ಶಿವಾನಂದ ಪಾಟೀಲ್ ಅವರು ವಿವಾದದ ಸುಳಿಗೆ ಸಿಲುಕಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಆ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಶಿವಾನಂದ ಪಾಟೀಲ್ ಅವರು ಐದು ಲಕ್ಷ ಪರಿಹಾರ ಘೋಷಣೆ ಬಳಿಕ ರೈತರ ಆತ್ಮಹತ್ಯೆ ಜಾಸ್ತಿ ಆಗುತ್ತಿದೆ, ಪ್ರೇಮ ಪ್ರಕರಣದಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡವರನ್ನು ಕೂಡಾ ಪರಿಹಾರಕ್ಕಾಗಿ ರೈತರ ಆತ್ಮಹತ್ಯೆ ಪಟ್ಟಿಗೆ ಸೇರಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಸತ್ತ ಕೂಡಲೇ ರೈತರ ಆತ್ಮಹತ್ಯೆ ಎಂದು ಹೇಳಬೇಡಿ
ಯಾರಾದರೂ ಸತ್ತ ಕೂಡಲೇ ರೈತರ ಆತ್ಮಹತ್ಯೆ ಎಂದು ಷರಾ ಬರೆಯಬೇಡಿ. ಸಾವಿಗೆ ಅವರ ಕೃಷಿ ಹಾನಿ, ಸಾಲಗಳಷ್ಟೇ ಕಾರಣವಾಗಿರುವುದಿಲ್ಲ. ವೈಯಕ್ತಿಕವಾದ ಸಂಗತಿಗಳೂ ಇರುತ್ತವೆ ಎಂದು ಮಾಧ್ಯಮಗಳಿಗೆ ಕೃಷಿ ಸಚಿವರು ಕಿವಿಮಾತು ಹೇಳಿದಾಗ ಈ ವಿವಾದ ಹುಟ್ಟಿಕೊಂಡಿದೆ.
ಹಾವೇರಿ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಇಂದು ನಿನ್ನೆಯದೇನಲ್ಲ. 2020ರಲ್ಲಿ 500 ಜನ ಆತ್ಮಹತ್ಯೆ ಮಾಡಿಕೊಂಡಿದ್ದರು. 2021ರಲ್ಲಿ 595 ಜನ, 2022ರಲ್ಲಿ 651 ಜನ, 2023ರಲ್ಲಿ 412 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಇದು ಈ ಜಿಲ್ಲೆಯ ಸ್ವಾಭಾವಿಕ ಆತ್ಮಹತ್ಯೆಗಳು. ನೀವು ಲವ್ ಕೇಸ್ ನಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನೂ ರೈತ ಆತ್ಮಹತ್ಯೆ ಎಂದು ವರದಿ ಮಾಡಿದ್ದೀರಿ ಎಂದು ಶಿವಾನಂದ ಪಾಟೀಲ್ ಹೇಳಿದರು.
ಎಫ್‌ಐಆರ್ ಆದ ತಕ್ಷಣ ನೀವು ರೈತ ಆತ್ಮಹತ್ಯೆ ಎಂದು ವರದಿ ಮಾಡೋದು ತಪ್ಪು. ಹೃದಯಾಘಾತವಾಗಿದ್ದು, ಹಾವು ಕಡಿದು ಸತ್ತಿದ್ದು ರೈತ ಆತ್ಮಹತ್ಯೆ ಎಂದು ಪ್ರಕರಣ ದಾಖಲಾಗಿದೆ. ಎಫ್‌ಎಸ್‌ಎಲ್ ವರದಿ ಬರುವವರೆಗೂ ಕಾಯಿರಿ. ಜನರಲ್ಲಿ ಆತಂಕ ಮೂಡಿಸುವ ರೀತಿಯಲ್ಲಿ ವರದಿ ಮಾಡಿದರೆ ಕಷ್ಟ ಎಂದು ಶಿವಾನಂದ ಪಾಟೀಲ್ ಹೇಳಿದರು.
ಪರಿಹಾರ ಸಿಗುತ್ತದೆ ಎಂದು ಎಲ್ಲ ಪ್ರಕರಣ ರೈತರ ಆತ್ಮಹತ್ಯೆ ಆಗುತ್ತಿದೆ
ʻʻರಾಜ್ಯ ಸರ್ಕಾರ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ ಬಳಿಕ ರೈತರ ಆತ್ಮಹತ್ಯೆ ಜಾಸ್ತಿ ಆಗುತ್ತಿದೆ. ರೈತ ಆತ್ಮಹತ್ಯೆ ಎಂದು ಕಂಪ್ಲೆಂಟ್ ಕೊಟ್ಟಾಗಲೇ ಪರಿಹಾರ ಸಿಗುತ್ತೆ ಎನ್ನುವ ದುರಾಶೆ ಮನಸ್ಸಿನಲ್ಲಿ ಇರುತ್ತದೆʼʼ ಎಂದು ಹೇಳಿದ ಶಿವಾನಂದ ಪಾಟೀಲ್, ʻʻವಿರೇಶ ಕಮಿಟಿ ವರದಿ ಬರುವವರೆಗೂ ರೈತ ಆತ್ಮಹತ್ಯೆ ಕಡಿಮೆ ಇತ್ತು. ಯಾವಾಗ 2015ರಲ್ಲಿ ಐದು ಲಕ್ಷ ರೂ. ಪರಿಹಾರ ಕೊಡಲು ಪ್ರಾರಂಭ ಮಾಡಿದೆವೋ ಅಂದಿನಿಂದ ವರದಿ ಆಗೋದು ಹೆಚ್ಚಾಗುತ್ತಿದೆʼʼ ಎಂದು ಹೇಳಿದರು.
5 ಲಕ್ಷ ಪರಿಹಾರ ಘೋಷಣೆ ಬಳಿಕ ರೈತರ ಆತ್ಮಹತ್ಯೆ ಜಾಸ್ತಿ ಆಗುತ್ತಿದೆ. ಪರಿಹಾರ ಸಿಗಬಹುದು ಎನ್ನುವ ಆಸೆಯಿಂದ ರೈತ ಆತ್ಮಹತ್ಯೆ ಎಂದು ತಪ್ಪು ಪ್ರಕರಣ ದಾಖಲಿಸುತ್ತಿದ್ದಾರೆ. 2015ಕ್ಕಿಂತ ಮುಂಚೆ ರೈತರ ಆತ್ಮಹತ್ಯೆ ವರದಿ ಕಡಿಮೆ ಆಗ್ತಿತ್ತು, ಪರಿಹಾರದ ಮೊತ್ತವು ಕಡಿಮೆ ಇತ್ತು ಎಂದು ವಿವರಿಸಿದರು.
ಇದನ್ನೂ ಓದಿ : Farmer suicide : ಸಹಕಾರ ಬ್ಯಾಂಕ್‌ನಿಂದ ಸಾಲ ಪಾವತಿಗೆ ನೋಟಿಸ್; ಆತಂಕಗೊಂಡು ರೈತ ಆತ್ಮಹತ್ಯೆ
50 ಲಕ್ಷ ಕೊಡ್ತೀವಿ, ಆತ್ಮಹತ್ಯೆ ಮಾಡಿಕೊಳ್ಳಿ: ಸಚಿವರಿಗೆ ಸವಾಲು
ಈ ನಡುವೆ ಸಚಿವರ ಉದ್ಧಟತನದ ಹೇಳಿಕೆಗೆ ಆಕ್ರೋಶ ಭುಗಿಲೆದ್ದಿದೆ. ಹಾವೇರಿಯಲ್ಲಿ ಸಿಡಿದೆದ್ದ ರೈತರು ಸಚಿವರ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಶಿವಾನಂದ ಪಾಟೀಲ್ ಅವರನ್ನು ಕೈ ಬಿಡಬೇಕು ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದ್ದಾರೆ.
ʻʻರೈತ ಸಂಘದಿಂದ 50 ಲಕ್ಷ ರೂ. ಪರಿಹಾರ ಕೊಡಲು ನಿರ್ಧಾರ ಮಾಡಿದ್ದೇವೆ. ಈಗ ಶಿವಾನಂದ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳಲಿʼʼ ಎಂದು ಹೇಳಿರುವ ಅವರು, ಯಾವುದೇ ರೈತರು ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ ಎಂದರು.
ಇನ್ನು ಮುಂದೆ ಶಿವಾನಂದ ಪಾಟೀಲ್ ಹೋದಲ್ಲೆಲ್ಲ ಘೇರಾವ್ ಹಾಕಲಾಗುವುದು ಎಂದು ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಕೆ ನೀಡಿದರು.
-
ವಿದೇಶ19 hours ago
Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
-
ಕರ್ನಾಟಕ17 hours ago
PSI Scam : ಪಿಎಸ್ಐ ನೇಮಕಾತಿ ಅಕ್ರಮ; ಕೊನೆಗೂ ಅಮೃತ್ ಪಾಲ್ಗೆ ಜಾಮೀನು
-
ದೇಶ12 hours ago
Swara Bhasker: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸ್ವರಾ ಭಾಸ್ಕರ್, ಮಗಳ ಹೆಸರು ‘ರಾಬಿಯಾ’
-
ಕರ್ನಾಟಕ13 hours ago
Weather Update: ಭಾರತದಲ್ಲಿ ಮುಗೀತು ಮಳೆಗಾಲ! ಎಷ್ಟು ಮಳೆ ಕೊರತೆ, ಬರಗಾಲ ಪಕ್ಕಾ?
-
South Cinema15 hours ago
Darshan Thoogudeepa: ನಟ ದರ್ಶನ್ ವಿರುದ್ಧ ಮಂಡ್ಯದಲ್ಲಿ ರೈತರ ಆಕ್ರೋಶ; ಕ್ಷಮೆಗೆ ಆಗ್ರಹ
-
ಅಂಕಣ19 hours ago
ವಿಧಾನಸೌಧ ರೌಂಡ್ಸ್: ಜೆಡಿಎಸ್ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ; ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ?
-
ದೇಶ17 hours ago
Army Jawan: ಯೋಧನ ಮೇಲೆ ಹಲ್ಲೆ ನಡೆಸಿ, ಬೆನ್ನಿನ ಮೇಲೆ ‘ಪಿಎಫ್ಐ’ ಎಂದು ಬರೆದ ದುರುಳರು!
-
ದೇಶ9 hours ago
Lawyer Sara Sunny: ಸುಪ್ರೀಂ ಕೋರ್ಟ್‌ನಲ್ಲಿ ಮೊದಲ ಬಾರಿಗೆ ಸಂಜ್ಞೆ ಭಾಷೆಯಲ್ಲಿ ವಾದ ಮಂಡನೆ! ಇತಿಹಾಸ ಸೃಷ್ಟಿಸಿದ ಸಾರಾ