ಡೆಸ್ಟಿನೇಶನ್‌ ವೆಡ್ಡಿಂಗ್‌ | ಟಾಪ್‌ 5 ಐಷಾರಾಮಿ ಮದುವೆಗಳ ತಾಣಗಳು! - Vistara News

ಪ್ರವಾಸ

ಡೆಸ್ಟಿನೇಶನ್‌ ವೆಡ್ಡಿಂಗ್‌ | ಟಾಪ್‌ 5 ಐಷಾರಾಮಿ ಮದುವೆಗಳ ತಾಣಗಳು!

ಐಷಾರಾಮಿ ಡೆಸ್ಟಿನೇಶನ್‌ ವೆಡ್ಡಿಂಗ್‌ಗಳು ಇತ್ತೀಚೆಗೆ ಭಾರತದಲ್ಲಿ ಜನಪ್ರಿಯ ಆಗುತ್ತಿವೆ. ಅಂಥ ಐದು ವಿಲಾಸಿ ಮದುವೆಯ ತಾಣಗಳು ಇಲ್ಲಿವೆ ನೋಡಿ.

VISTARANEWS.COM


on

destination
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿದೇಶಗಳಲ್ಲಿ ಈಗಾಗಲೇ ಭಾರೀ ಜನಪ್ರಿಯವಾಗಿರುವ, ಉಳ್ಳವರ ಸಂಸ್ಕೃತಿಯಾದ ʻಡೆಸ್ಟಿನೇಷನ್‌ ವೆಡ್ಡಿಂಗ್‌ʼ ಭಾರತೀಯರಿಗೆ, ಭಾರತದಂತಹ ದೇಶಕ್ಕೆ ಸ್ವಲ್ಪ ಹೊಸತು. ಆದರೂ, ಸಿರಿವಂತ ಕುಟುಂಬಗಳು, ಈಗಿನ ಮಂದಿ ಇಂತಹ ಹೊಸ ಕಾನ್ಸೆಪ್ಟ್‌ಗೆ ಫಿದಾ ಆಗಿದ್ದಾರೆ. ಕುಟುಂಬದ ಕೆಲವೇ ಕೆಲವು ಆಪ್ತರು, ಆತ್ಮೀಯ ಗೆಳೆಯರಷ್ಟೇ ಆಹ್ವಾನಿತರಾಗಿರುವ ಖಾಸಗಿ ಕಾರ್ಯಕ್ರಮ ಎಂಬ ಹೆಸರಿನಲ್ಲಿ ನಡೆಯುವ ಗ್ರ್ಯಾಂಡ್‌ ಡೆಸ್ಟಿನೇಶನ್‌ ವೆಡ್ಡಿಂಗ್‌ಗಳು ಯಾವ ಐಶಾರಾಮಿ ರಾಯಲ್‌ ಮದುವೆಗೂ ಕಡಿಮೆಯಿರುವುದಿಲ್ಲ. ಜನ ಕಡಿಮೆಯಿದ್ದರೂ, ನಮ್ಮೊಳಗಿನವರಿಗೆ ಮಾತ್ರ ಎಂಬ ಟ್ಯಾಗ್‌ಲೈನ್‌ ಜೊತೆಗಿದ್ದರೂ ಇಲ್ಲಿ ಮೋಜು ಮಸ್ತಿ ಹೆಚ್ಚು. ಮದುವೆಯೆಂಬ ಜೀವಮಾನದ ಅತ್ಯಮೂಲ್ಯ ಗಳಿಗೆಯನ್ನು ಪ್ರತಿಕ್ಷಣವೂ ಅನುಭವಿಸುವ, ಎಲ್ಲವನ್ನೂ ತೂಕದಲ್ಲೇ ಮಾಡುವ ಅತ್ಯದ್ಭುತ ಸೆಟ್‌ನಲ್ಲಿ ಅತ್ಯಾಕರ್ಷಕ ಫೋಟೋಶೂಟ್‌ ಮಾಡಿಸಿಕೊಳ್ಳುತ್ತಾ ಆಕಾಶವೇ ಚಪ್ಪರ ಹಾಕಿದೆ ಎಂಬಂತೆ ನೀಲಾಕಾಶದಡಿಯಲ್ಲಿ ಚಂದದ ಜಾಗದಲ್ಲಿ ಅತ್ಯದ್ಭುತ ಅಲಂಕಾರದಲ್ಲಿ ಎಲ್ಲರ ಮುಂದೆ ಸಪ್ತಪದಿ ತುಳಿಯುವ ಕನಸು ಯಾರಿಗಿಲ್ಲ ಹೇಳಿ! ಅಂತೆಯೇ ಸದ್ಯ ಚಿಗಿತುಕೊಳ್ಳುತ್ತಿರುವ ಡೆಸ್ಟಿನೇಶನ್‌ ವೆಡ್ಡಿಂಗ್‌ಗಳಿಗೆ ಹೆಸರಾದ ಬಹುಬೇಡಿಕೆಯ ಜಾಗಗಳ್ಯಾವುವು ನೋಡೋಣ.

udaipur

೧. ಉದಯ್‌ಪುರ, ರಾಜಸ್ಥಾನ: ಅರಮನೆಗಳ ನಗರಿ ಎಂದೇ ಹೆಸರುವಾಸಿಯಾದ ರಾಜಸ್ಥಾನದ ಅತ್ಯಂತ ಸುಂದರ ಜಾಗವಿದು. ಸರೋವರಗಳು, ಐಷಾರಾಮಿ ಅರಮನೆಗಳು, ಎಲ್ಲೆಲ್ಲೂ ಕೋಟೆ ಕೊತ್ತಲಗಳಿರುವ ಈ ನಗರಿಯಲ್ಲಿ ಯಾವುದಾದರೊಂದು ಅರಮನೆಯಲ್ಲಿ ಮದುವೆಯಾದರೆ, ಸ್ವರ್ಗಕ್ಕೆ ಮೂರೇ ಗೇಣಂತೆ. ಸೆಲೆಬ್ರಿಟಿಗಳಿಂದ ಹಿಡಿದು ಎಲ್ಲರನ್ನೂ ಆಕರ್ಷಿಸುವ ಈ ಸ್ಥಳ ಭಾರತದ ಡೆಸ್ಟಿನೇಶನ್‌ ವೆಡ್ಡಿಂಗ್‌ಗಳ ಲಿಸ್ಟಿನಲ್ಲಿ ಸದಾ ಒಂದನೇ ಸ್ಥಾನ ಗಿಟ್ಟಿಸುವ ಜಾಗ.

jaipur

೨. ಜೈಪುರ್‌, ರಾಜಸ್ಥಾನ: ಮದುವೆಯ ಕನಸಿಗೆ ರಂಗೇರಿಸುವ ಉದಯಪುರವನ್ನೇ ಹೋಲುವಂಥ ಇನ್ನೊಂದು ಜಾಗ. ಪಿಂಕ್‌ ಸಿಟಿ ಹೆಸರಿನ ಅರಮನೆಗಳ ನಗರಿ. ಒಂಟೆಗಳ ಲೋಕ. ಐಷಾರಾಮಿ ರಾಯಲ್‌ ಲುಕ್.‌ ಮದುವೆಯೊಂದರ ಕಲ್ಪನೆಯಲ್ಲಿ ಏನೆಲ್ಲ ಇರಬೇಕೋ ಅವೆಲ್ಲ ಇರುವ ಭರ್ಜರಿ ಜಾಗ. ಹೀಗಾಗಿ ಜೈಪುರ್‌ ಕೂಡಾ ಯುವ ಜೋಡಿಗಳ ಮನಗೆಲ್ಲುವ ಊರು.

aleppy

೩. ಅಲೆಪ್ಪಿ, ಕೇರಳ: ಸ್ವಲ್ಪ ಆಫ್‌ಬೀಟ್‌ ವೆಡ್ಡಿಂಗ್‌ ಡೆಸ್ಟಿನೇಶನ್‌ ಇದಾಗಿದ್ದರೂ, ಶಾಂತವಾಗಿ, ಪ್ರಕೃತಿಯ ಮಡಿಲಲ್ಲಿ, ಒಂದಿಷ್ಟೇ ಆಪ್ತರನ್ನು ಕಲೆ ಹಾಕಿಕೊಂಡು ಮದುವೆಯಾಗಬೇಕು, ಆಕಾಶವೇ ಚಪ್ಪರ, ಹಸಿರೇ ಹಾಸಿಗೆ ಎಂಬ ಕಲ್ಪನೆಯ ಜೋಡಿಗಳಿಗೆ ಹೇಳಿ ಮಾಡಿಸಿದ ಜಾಗ. ಫೋಟೋಶೂಟ್‌ಗೂ ಸಾಕಷ್ಟು ಅವಕಾಶಗಳಿರುವ, ಹೌಸ್‌ಬೋಟ್‌ನಲ್ಲಿ ರೊಮ್ಯಾಂಟಿಕ್‌ ರಸಗಳಿಗೆಗಳನ್ನು ಕಳೆಯಬಹುದಾದ ಹಲವು ಸಾಧ್ಯತೆಗಳನ್ನೂ ಇದು ಒದಗಿಸುತ್ತದೆ. ಹೀಗಾಗಿ, ಕೇರಳದ ಹಿನ್ನೀರಿನ ಅದ್ಭುತ ಪರಿಸರವೂ ಕೂಡಾ ವಡೆಸ್ಟಿನೇಶನ್‌ ವೆಡ್ಡಿಂಗ್‌ ಲಿಸ್ಟಿನಲ್ಲಿ ಮುಂಚೂಣಿಯಲ್ಲಿದೆ.

ಇದನ್ನೂ ಓದಿ | Jungle safari tips | ಕಾಡಿನ ಸಫಾರಿಗೆ ಹೊರಡುವ ಮುನ್ನ ಇವಿಷ್ಟು ಗೊತ್ತಿರಲಿ!

andaman

೪. ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು: ಇದೂ ಕೂಡಾ ಲಿಸ್ಟಿನಲ್ಲಿ ಮುಂಚೂಣಿಯಲ್ಲಿರುವ ಜಾಗ. ಅದ್ಭುತ ನಿಸರ್ಗ ಸೌಂದರ್ಯವಿರುವ ಇಂತಹ ಜಾಗ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ. ನೀಲಿ ಸಮುದ್ರಕ್ಕೆ ತಾಕಿಕೊಂಡಂತಿರುವ ಯಾವುದಾದರೊಂದು ಐಷಾರಾಮಿ ರೆಸಾರ್ಟನ್ನು ಹಿಡಿದು, ಅಲ್ಲಿ ಆಕಾಶದ ನೀಲಿಯನ್ನೇ ಚಪ್ಪರವನ್ನಾಗಿಸಿ, ಬ್ಯಾಕ್‌ಗ್ರಂಡ್‌ನಲ್ಲಿ ಸಮುದ್ರದ ನೀಲಿಯನ್ನೂ ಇಟ್ಟುಕೊಂಡು ಹಸೆಮಣೆಯೇರಲು ಬಯಸುವ ಜೋಡಿಗಳೂ ಇದ್ದಾರೆ. ಅಂಥವರೆಲ್ಲರ ಫೇವರಿಟ್‌ ಆಯ್ಕೆ ಅಂಡಮಾನ್.‌

ganga river

೫. ಗಂಗಾನದಿ ತಟ: ಕಾಶಿಯೋ, ಹೃಷಿಕೇಶವೋ ಯಾವುದಾದರೊಂದು ಗಂಗಾ ನದಿಯ ದಂಡೆಯ ಮೇಲಿರುವ ಅದ್ಭುತ ರೆಸಾರ್ಟೊಂದನ್ನು ಹುಡುಕಿ, ತೀರದಲ್ಲೊಂದು ಚಪ್ಪರ ಹಾಕಿ, ಹರಿವ ಜುಳುಜುಳು ನಾದವನ್ನೇ ಸಂಗೀತವನ್ನಾಗಿಸಿಕೊಂಡು ನಡೆಯುವ ಮದುವೆಗಳೂ ಇವೆ. ಇವು ಕೇವಲ ಟಿವಿ ಸೀರಿಯಲ್ಲಿನಲ್ಲೋ, ಸಿನಿಮಾದಲ್ಲೋ ಮಾತ್ರ ನಡೆಯುವುದಲ್ಲ. ನಿಜ ಜೀವನದಲ್ಲೂ ಸಾಮಾನ್ಯರ ಜೀವನದೊಳಕ್ಕೆ ನಿಧಾನವಾಗಿ ತೆವಳುತ್ತಾ ಕಾಲಿಟ್ಟಿದೆ. ಧಾರ್ಮಿಕ ಸ್ಥಳದ ಹತ್ತಿರದಲ್ಲೇ ನಡೆಸಿ, ದೇವರ ಆಶೀರ್ವಾದವನ್ನೂ ಪಡೆದು, ಕುಟುಂಬದ ಆಪ್ತರೊಡನೆ ಸಂತೋಷವಾಗಿ ಕಳೆವ, ಸುಮಧುರ ಮದುವೆಯೊಂದನ್ನು ನಡೆಸ ಬಯಸುವ ಮಂದಿ ಇಂತಹ ಜಾಗಗಳನ್ನರಸಿ ಬರುತ್ತಾರೆ.

ಇದನ್ನೂ ಓದಿ | Travel Story | ಈ ಅಜ್ಜಿ ಮೊಮ್ಮಗ ಏಳು ವರ್ಷಗಳಲ್ಲಿ ತಿರುಗಾಡಿದ್ದು 50 ಸಾವಿರ ಮೈಲಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Araku Valley Tour: ಆಂಧ್ರಪ್ರದೇಶದ ಅರಕು ವ್ಯಾಲಿ; ಹಲವು ಅದ್ಭುತಗಳ ಸಂಗಮ

Araku Valley Tour: ಆಂಧ್ರಪ್ರದೇಶದಲ್ಲಿರುವ ಅರಕು ಕಣಿವೆಯು ವಾರಾಂತ್ಯದಲ್ಲಿ ಭೇಟಿ ನೀಡುವವರಿಗೆ ಉತ್ತಮವಾದ ಸ್ಥಳವಾಗಿದೆ. ಇಲ್ಲಿನ ರಮಣೀಯವಾದ ಪ್ರಕೃತಿ ಸೌಂದರ್ಯವು ನಿಮ್ಮನ್ನು ಬೇರೊಂದು ಜಗತ್ತಿಗೆ ಕರೆದುಕೊಂಡು ಹೋಗುತ್ತದೆ.

VISTARANEWS.COM


on

Araku Valley Tour
Koo

ಜೀವನದ ಜಂಜಾಟದಿಂದ ಬೇಸತ್ತ ಜನರು ತಮ್ಮ ಕುಟುಂಬದ ಜೊತೆಗೆ ಪ್ರವಾಸಕ್ಕೆ ಹೋಗಲು ಇಷ್ಟಪಡುತ್ತಾರೆ. ಅದಕ್ಕಾಗಿ ಸುಂದರವಾದ, ಪ್ರಶಾಂತವಾದ ಸ್ಥಳಗಳನ್ನು ಹುಡುಕುತ್ತಿರುತ್ತಾರೆ. ಅಂಥವರು ಒಮ್ಮೆ ಭಾರತದ ಸುಂದರವಾದ ಮತ್ತು ರಮಣೀಯವಾದ ಪೂರ್ವ ಘಟ್ಟಗಳ ನಡುವಿನ ಶಾಂತಿಯುತವಾದ ಸ್ಥಳ ಅರಕು ಕಣಿವೆಗೆ (Araku Valley Tour) ಭೇಟಿ ನೀಡಬಹುದು.

ಆಂಧ್ರಪ್ರದೇಶದಲ್ಲಿರುವ ಈ ಸಣ್ಣ ಕಣಿವೆಯು ನೈಸರ್ಗಿಕ ಸೌಂದರ್ಯದ ಮೂಲಕ ನಿಮ್ಮನ್ನು ರೋಮಾಂಚನಗೊಳಿಸುವಂತಹ ಸ್ಥಳವಾಗಿದೆ. ಇಲ್ಲಿನ ಹಸಿರು ತಾಣಗಳು, ಜಲಪಾತಗಳು ಮತ್ತು ಇಲ್ಲಿ ಸಿಗುವಂತಹ ರುಚಿಕರವಾದ ತಿನಿಸು ಪ್ರಯಾಣಿಕರನ್ನು ಈ ಸ್ಥಳಕ್ಕೆ ಸೆಳೆಯುತ್ತದೆ. ಹಾಗಾಗಿ ಅರಕು ಕಣಿವೆಯ ಈ ರಮಣೀಯ ಸ್ಥಳಗಳ ಬಗ್ಗೆ ತಿಳಿಯಿರಿ. ಇದು ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ 111 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ಇಲ್ಲಿಗೆ 20 ಗಂಟೆಗಳ ಪ್ರಯಾಣ.

Araku Valley Tour

ಬೊರ್ರಾ ಗುಹೆಗಳು

ಇದು ಭಾರತದ ಅತಿದೊಡ್ಡ ಗುಹೆಗಳಲ್ಲಿ ಒಂದು. ಇದು ಸಾಹಸಿಗಳಿಗೆ ಹೇಳಿ ಮಾಡಿಸಿದ ಸ್ಥಳ. ಇದು ಸುಣ್ಣದ ಕಲ್ಲುಗಳಿಂದ ಮಾಡಿದ ಗುಹೆಯಾಗಿದೆ. ಇದು ಸುಂದರವಾದ ಸ್ಟಾಲಾಕ್ಟೈಟ್ ಗಳು ಮತ್ತು ಸ್ಟಾಲಗ್ಮೈಟ್ ಗಳಿಂದ ಅಲಂಕರಿಸಲ್ಪಟ್ಟಿದೆ. ಇವುಗಳ ಮೂಲಕ ಗುಹೆಗೆ ಪ್ರವೇಶಿಸುವಾಗ ನೀವು ಮಂತ್ರಮುಗ್ಧರಾಗುವುದಂತು ಖಂಡಿತ.

Araku Valley Tour

ಕಟಿಕಿ ಜಲಪಾತ

ಸೊಂಪಾದ ಕಾಡುಗಳ ಆಳದಲ್ಲಿ ಅಡಗಿರುವ ಈ ಜಲಪಾತ ನಿಮಗೆ ಉಲ್ಲಾಸದಾಯಕ ಅನುಭವವನ್ನು ನೀಡುತ್ತದೆ. ಈ ಜಲಪಾತಕ್ಕೆ ಹೋಗಲು ಕಾಡುಗಳ ನಡುವೆ ನೀವು ಚಾರಣ ಮಾಡಬೇಕಾಗುತ್ತದೆ. ಇದು ಪ್ರಕೃತಿ ಪ್ರಿಯರಿಗೆ ಖುಷಿಯನ್ನು ನೀಡುತ್ತದೆ. ಇಲ್ಲಿನ ಜಲಪಾತದ ಕೆಳಗಿನ ಕೊಳದಲ್ಲಿ ಜಲಕ್ರೀಡೆ ಆಡಬಹುದು.

Araku Valley Tour

ಪದ್ಮಪುರಂ ಉದ್ಯಾನ

ಅರಕು ಕಣಿವೆಯ ಹೃದಯ ಭಾಗದಲ್ಲಿರಿವ ಪದ್ಮಪುರಂ ಉದ್ಯಾನದಲ್ಲಿ ಪರಿಮಳಯುಕ್ತವಾದ ಬಣ್ಣ ಬಣ್ಣದ ಹೂಗಳನ್ನು ನೋಡಬಹುದು. ಇದನ್ನು ನೋಡಿದರೆ ಸ್ವರ್ಗವೇ ಭೂಮಿಗೆ ಬಂದಂತೆ ಭಾಸವಾಗುತ್ತದೆ. ಇಲ್ಲಿನ ಸುಂದರವಾದ ಉದ್ಯಾನ, ಸಸ್ಯಗಳು, ಮತ್ತು ನಡೆಯಲು ನಿರ್ಮಿಸಿದ ಆಕರ್ಷಕವಾದ ಫುಟ್ ಪಾತ್ ಗಳಲ್ಲಿ ನಿಮ್ಮ ಕುಟುಂಬದವರ ಜೊತೆ ವಾಕ್ ಮಾಡಬಹುದು. ಇಲ್ಲಿ ಆಟಿಕೆ ರೈಲಿನಲ್ಲಿ ಸವಾರಿ ಮಾಡುವ ಮೂಲಕ ಉದ್ಯಾನವನದ ನೋಟವನ್ನು ಕಣ್ತುಂಬಿಕೊಳ್ಳಬಹುದು.

Araku Valley Tour

ಬುಡಕಟ್ಟು ವಸ್ತು ಸಂಗ್ರಹಾಲಯ (ಟ್ರೈಬಲ್ ಮ್ಯೂಸಿಯಂ)

ಈ ಬುಡಕಟ್ಟು ವಸ್ತು ಸಂಗ್ರಹಾಲಯವು ಬುಡಕಟ್ಟು ಪರಂಪರೆಯನ್ನು ಸಾರುತ್ತದೆ. ಇದು ಸ್ಥಳೀಯ ಜನರ ಜೀವನ ಮತ್ತು ಪದ್ಧತಿಗಳನ್ನು ಪ್ರತಿನಿಧಿಸುತ್ತದೆ. ಈ ವಸ್ತು ಸಂಗ್ರಾಹಾಲಯದಲ್ಲಿ ಬುಡಕಟ್ಟು ಆಚರಣೆಗಳು, ಸಂಪ್ರದಾಯಗಳು ಮತ್ತು ಕೌಶಲ್ಯಗಳನ್ನು ಒಳಗೊಂಡ ಕಲಾಕೃತಿಗಳು ಮತ್ತು ಕರಕುಶಲ ವಸ್ತುಗಳನ್ನು ಕಾಣಬಹುದು.

Araku Valley Tour

ಅನಂತಗಿರಿ ಬೆಟ್ಟಗಳು

ಇಲ್ಲಿ ದಟ್ಟವಾದ ಕಾಡುಗಳು ಮತ್ತು ಮಂಜಿನ ಮೋಡಗಳಿಂದ ಆವೃತವಾದ ಬೆಟ್ಟಗಳಿಂದ ಸುತ್ತುವರಿದ ಗಿರಿಧಾಮವಿದೆ. ಇಲ್ಲಿ ಸಾಹಸಮಯ ಚಾರಣವನ್ನು ಮಾಡಬಹುದು. ಇಲ್ಲಿ ವಿವಿಧ ರೀತಿಯ ಸಸ್ಯಗಳು ಮತ್ತು ಪ್ರಾಣಿಗಳನ್ನು ನೋಡಬಹುದಂತೆ.

ಇದನ್ನೂ ಓದಿ: Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Araku Valley Tour

ಚಾಪಾರೈ ವಾಟರ್ ಕ್ಯಾಸ್ಕೇಡ್

ಪ್ರಕೃತಿಯ ಮಧ್ಯೆ ಶಾಂತಿಯುತವಾಗಿ ಇರಲು ಬಯಸುವವರು ಈ ಸ್ಥಳಕ್ಕೆ ಭೇಟಿ ನೀಡಿ. ಇಲ್ಲಿ ಹರಿಯುವ ನೀರು ಮತ್ತು ಸೊಂಪಾದ ಹಸಿರು ನಿಮ್ಮ ಮನಸ್ಸಿಗೆ ಮುದವನ್ನು ನೀಡುತ್ತದೆ. ಇದು ವಿಶ್ರಾಂತಿ ಪಡೆಯಲು ಸೂಕ್ತವಾದ ಸ್ಥಳ.
ಹಾಗಾಗಿ ಕುಟುಂಬದೊಂದಿಗೆ ಅರಕು ಕಣಿವೆಯ ಈ ಸ್ಥಳಕ್ಕೆ ಭೇಟಿ ನೀಡಿ ನಿಮ್ಮ ಪ್ರವಾಸವನ್ನು ಸ್ಮರಣೀಯವಾಗಿಸಿ.

Continue Reading

ದೇಶ

Joshimath Teshil Now Jyotirmath: ಉತ್ತರಾಖಂಡದ ಜೋಶಿಮಠ ಈಗ ಜ್ಯೋತಿರ್ಮಠ!

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಕಳೆದ ವರ್ಷ ನಡೆದ ಕಾರ್ಯಕ್ರಮವೊಂದರಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಅವರು ಜೋಶಿಮಠ ತಹಸಿಲ್ (Joshimath Teshil Now Jyotirmath) ಅನ್ನು ಮರುನಾಮಕರಣ ಮಾಡುವುದಾಗಿ ಭರವಸೆ ನೀಡಿದ್ದರು. ಆ ಮಾತನ್ನು ಅವರು ಈಗ ಪೂರ್ಣಗೊಳಿಸಿದ್ದಾರೆ.

VISTARANEWS.COM


on

By

Joshimath Teshil Now Jyotirmath
Koo

ಉತ್ತರಾಖಂಡದ (Uttarakhand) ಚಮೋಲಿ (Chamoli) ಜಿಲ್ಲೆಯಲ್ಲಿರುವ ಜೋಶಿಮಠ ತಾಲೂಕು (Joshimath tehsil) ಅನ್ನು ‘ಜ್ಯೋತಿರ್ಮಠ’ (Joshimath Teshil Now Jyotirmath) ಎಂಬ ಹೊಸ ಹೆಸರಿನಿಂದ ಕರೆಯಲಾಗುವುದು ಎಂದು ಮುಖ್ಯಮಂತ್ರಿ (Chief Minister) ಪುಷ್ಕರ್ ಸಿಂಗ್ ಧಮಿ (Pushkar Singh Dhami) ಘೋಷಣೆ ಮಾಡಿದ್ದಾರೆ. ಜ್ಯೋತಿರ್ಮಠವು ಜೋಶಿಮಠದ ಪ್ರಾಚೀನ ಹೆಸರಾಗಿದೆ.

ತಹಸಿಲ್‌ನ ಹೆಸರು ಬದಲಾವಣೆ ಕುರಿತು ಉತ್ತರಾಖಂಡ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಯನ್ನು ಕೇಂದ್ರವು ಅನುಮೋದಿಸಿದೆ.

ಸ್ಥಳೀಯರಿಂದ ಸ್ವಾಗತ

ಜೋಶಿಮಠ ತಹಸಿಲ್ ಅನ್ನು ‘ಜ್ಯೋತಿರ್ಮಠ’ ಎಂದು ಹೆಸರು ಬದಲಾವಣೆ ಮಾಡಿರುವುದನ್ನು ಜೋಶಿಮಠದ ನಿವಾಸಿಗಳು ಸ್ವಾಗತಿಸಿದ್ದಾರೆ. ಯಾಕೆಂದರೆ ತಹಸಿಲ್ ಅನ್ನು ಅದರ ಮೂಲ ಹೆಸರಿಗೆ ಹಿಂತಿರುಗಿಸುವುದರಿಂದ ಅದರ ಪ್ರಾಚೀನ ಮೂಲವನ್ನು ಎತ್ತಿ ತೋರಿಸುತ್ತದೆ. ಮಾತ್ರವಲ್ಲದೆ ಅದರ ವಿಶಾಲವಾದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಗೆ ಗೌರವ ಸಲ್ಲಿಸುತ್ತದೆ ಎಂದಿದ್ದಾರೆ.

ಕಳೆದ ವರ್ಷ ಚಮೋಲಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ತಹಸಿಲ್ ಅನ್ನು ಮರುನಾಮಕರಣ ಮಾಡುವ ಸರ್ಕಾರದ ನಿರ್ಣಯದ ಬಗ್ಗೆ ಸಾರ್ವಜನಿಕ ಪ್ರಕಟಣೆಯನ್ನು ಮಾಡಿದರು. ಆ ಮೂಲಕ ಅದರ ಐತಿಹಾಸಿಕ ವೈಭವವನ್ನು ಮರುಸ್ಥಾಪನೆಗೆ ಯೋಚಿಸಿರುವುದಾಗಿ ಹೇಳಿದ್ದರು.

ಬಹುಕಾಲದ ಬೇಡಿಕೆ

ಜೋಶಿ ಮಠದ ಸ್ಥಳೀಯರು ಬಹಳ ಹಿಂದಿನಿಂದಲೂ ಹೆಸರು ಬದಲಾವಣೆಗೆ ಒತ್ತಾಯಿಸುತ್ತಿದ್ದರು. ಜನರ ಭಾವನೆಗಳಿಗೆ ಸ್ಪಂದಿಸಿ ಧಾಮಿ ಸರ್ಕಾರ ತಹಸಿಲ್ ಹೆಸರನ್ನು ಮರುನಾಮಕರಣ ಮಾಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಬುಧವಾರ ಅನುಮೋದನೆ ಪಡೆದಿದೆ.

ಇದನ್ನೂ ಓದಿ: Jagannath Temple: 4 ವರ್ಷದ ಬಳಿಕ ಜಗನ್ನಾಥ ದೇಗುಲದ ಬಾಗಿಲು ಓಪನ್;‌ ಇದಕ್ಕೂ ಬಿಜೆಪಿ ಪ್ರಣಾಳಿಕೆಗೂ ಇದೆ ಸಂಬಂಧ!


ಶಂಕರಾಚಾರ್ಯರಿಗೂ ಇದೆ ನಂಟು

8ನೇ ಶತಮಾನದಲ್ಲಿ ಆದಿ ಗುರು ಶಂಕರಾಚಾರ್ಯರು ಈ ಕ್ಷೇತ್ರಕ್ಕೆ ಬಂದಿದ್ದರು ಎಂಬುದು ಸ್ಥಳೀಯರ ನಂಬಿಕೆ. ಅವರು ಅಮ6ರ ಕಲ್ಪ ವೃಕ್ಷದ ಕೆಳಗೆ ತಪಸ್ಸು ಕೈಗೊಂಡರು ಎಂದು ಹೇಳಲಾಗುತ್ತದೆ. ಇದರಿಂದಾಗಿ ದೈವಿಕ ಜ್ಞಾನೋದಯ ಮತ್ತು ಜ್ಞಾನವನ್ನು ಸಾಧಿಸಿದರು. ಈ ಸ್ಥಳವನ್ನು ಮೂಲತಃ ಜ್ಯೋತಿರ್ಮಠ ಎಂದು ಕರೆಯಲಾಗುತ್ತಿತ್ತು. ಆದರೆ ಕಾಲಾನಂತರದಲ್ಲಿ ಇದು ಜೋಶಿಮಠ ಎಂಬ ಬೇರೆ ಹೆಸರಿನಲ್ಲಿ ಜನಪ್ರಿಯತೆಯನ್ನು ಗಳಿಸಿತು.

ಜ್ಯೋತಿರ್ಮಠವು 6,150 ಅಡಿ ಅಂದರೆ ಸರಿಸುಮಾರು 1,875 ಮೀಟರ್ ಎತ್ತರದಲ್ಲಿದೆ. ಹಲವಾರು ಹಿಮಾಲಯ ಪರ್ವತಾರೋಹಣ, ಚಾರಣ ಮತ್ತು ಬದರಿನಾಥದಂತಹ ಯಾತ್ರಾ ಕೇಂದ್ರಗಳಿಗೆ ಇದು ಹೆಬ್ಬಾಗಿಲಾಗಿದೆ.

Continue Reading

Latest

Bhubaneswar Tour: ಭುವನೇಶ್ವರಕ್ಕೆ ಪ್ರವಾಸ ಮಾಡಿದಾಗ ಏನೆಲ್ಲ ನೋಡಬಹುದು?

Bhubaneswar Tour: ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ಮಾತಿನಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿದಾಗ ನಾವು ಸಾಕಷ್ಟು ವಿಷಯಗಳನ್ನು ಕಲಿಯಬಹುದು. ಕೆಲವೊಂದು ಪ್ರದೇಶಗಳ ಆಹಾರ, ಸಂಪ್ರದಾಯ, ಆಚರಣೆಗಳು ಎಲ್ಲವೂ ವಿಭಿನ್ನವಾಗಿರುತ್ತದೆ. ಪ್ರವಾಸಕ್ಕೆ ಹೋಗುವಾಗ ಈ ಅಂಶಗಳ ಕುರಿತು ನಾವು ಹೆಚ್ಚಿನ ನಿಗಾ ವಹಿಸಬೇಕು. ಇಲ್ಲಿ ಒಡಿಶಾದ ಭುವನೇಶ್ವರಕ್ಕೆ ಭೇಟಿ ನೀಡುವಾಗ ಗಮನಿಸಬೇಕಾದ ವಿಷಯಗಳ ಕುರಿತ ಮಾಹಿತಿ ಇದೆ.

VISTARANEWS.COM


on

Bhubaneswar Tour
Koo

ಭುವನೇಶ್ವರ ಇದು ಒಡಿಶಾ ರಾಜ್ಯದ ರಾಜಧಾನಿಯಾಗಿದೆ. ಮಹಾನದಿ ಮುಖಜಭೂಮಿಯ ಉದ್ದಕ್ಕೂ ನೆಲೆಸಿರುವ ಭುವನೇಶ್ವರ ಪುರಾತನ ದೇವಾಲಯಗಳ ನಗರವಾಗಿದೆ. ಇದು ಕಳಿಂಗ ರಾಜವಂಶದ ಕುಶಲತೆಯಿಂದ ಪ್ರೇರಿತವಾದ ಸಂಕೀರ್ಣವಾದ ಕಲಾತ್ಮಕ ಪಾಂಡಿತ್ಯವನ್ನು ಚಿತ್ರಿಸುವ ಭವ್ಯವಾದ ಕಲ್ಲಿನ ದೇವಾಲಯಗಳನ್ನು ಹೊಂದಿದೆ. ಇಲ್ಲಿಗೆ ಭೇಟಿ ನೀಡುವವರು ಒಮ್ಮೆ ಈ ಸ್ಥಳದ ಬಗೆಗಿನ ವಿವರಗಳನ್ನು ತಿಳಿದುಕೊಳ್ಳಿ. ಇಲ್ಲಿನ ಹವಾಮಾನದ ವಿವರ, ದೇವಾಲಯಗಳು, ಪಾಕವಿಧಾನಗಳ ಬಗ್ಗೆ ತಿಳಿದುಕೊಂಡು ಈ ಸ್ಥಳಕ್ಕೆ ಭೇಟಿ ನೀಡಿದರೆ ಉತ್ತಮ. ಇದರಿಂದ ನಿಮ್ಮ ಪ್ರವಾಸ ಆರಾಮದಾಯಕವಾಗಿರುತ್ತದೆ.

ಭುವನೇಶ್ವರದ ಹವಾಮಾನದ ವಿವರ

ಈ ಸ್ಥಳ ಆರ್ದ್ರ ಉಪೋಷ್ಣವಲಯದ ಹವಾಮಾನ ವಲಯದ ಅಡಿಯಲ್ಲಿ ಬರುತ್ತದೆ. ಇದು ಬಿಸಿ ಆರ್ದ್ರ ಬೇಸಿಗೆ, ಮಧ್ಯಮ ಮಳೆ ಹಾಗೂ ಹದವಾದ ಚಳಿಯನ್ನು ಹೊಂದಿರುವ ಪ್ರದೇಶವಾಗಿದೆ. ಬೇಸಿಗೆ(ಏಪ್ರಿಲ್- ಜೂನ್ )ಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಯಾಗಿರುತ್ತದೆ. ಮಳೆಗಾಲ(ಜುಲೈ-ಸೆಪ್ಟೆಂಬರ್)ದಲ್ಲಿ ಧಾರಾಕಾರ ಮಳೆಯಾಗುತ್ತದೆ. ಬಿಸಿಲಿನ ಬೇಗೆಯಿಂದ ಸುಟ್ಟ ಮರಗಳು ಮಳೆಗಾಲದಲ್ಲಿ ಚಿಗುರಿ ಹಸಿರಾಗುತ್ತವೆ. ಚಳಿಗಾಲ(ನವೆಂಬರ್- ಫೆಬ್ರವರಿ)ದಲ್ಲಿ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ನಷ್ಟು ಇರುತ್ತದೆ. ಡಿಸೆಂಬರ್,ಜನವರಿಯಲ್ಲಿ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಕ್ಕೆ ಇಳಿಯುತ್ತದೆ. ಹಾಗಾಗಿ ಭುವನೇಶ್ವರಗೆ ಭೇಟಿ ನೀಡಲು ಅಕ್ಟೋಬರ್‌ನಿಂದ ಮಾರ್ಚ್ ಅತ್ಯುತ್ತಮ ಸಮಯವಾಗಿದೆ.

ಭುವನೇಶ್ವರದ ಪ್ರಮುಖ ದೇವಾಲಯಗಳು

Bhubaneswar Tour

ಅತ್ಯಂತ ಪುರಾತನ ನಗರಗಳಲ್ಲಿ ಒಂದಾದ ಭುವನೇಶ್ವರದಲ್ಲಿ ರಾಜವಂಶಸ್ಥರು ನಿರ್ಮಿಸಿದ ಹಲವು ದೇವಾಲಯಗಳನ್ನು ನೋಡಬಹುದು. ಲಿಂಗರಾಜ ದೇವಾಲಯ, ರಾಜರಾಣಿ ದೇವಾಲಯ, ಮುಕ್ತೇಶ್ವರ ದೇವಾಲಯ, ಅನಂತ ವಾಸುದೇವ ದೇವಾಲಯಗಳಲ್ಲಿ ಸಂಕೀರ್ಣವಾದ ಕೆತ್ತನೆಗಳನ್ನು ನೋಡಬಹುದು.

ಬಾಯಿಯಲ್ಲಿ ನೀರುಣಿಸುವ ಪಾಕವಿಧಾನ

ಇಲ್ಲಿನ ಆಹಾರವು ನದಿ ಅಥವಾ ಸರೋವರದ ಸಿಹಿ ನೀರಿನ ಪದಾರ್ಥಗಳೊಂದಿಗೆ ಗಿಡಮೂಲಿಕೆಗಳು ಅಥವಾ ಕಾಡುಗಳ ಮಧ್ಯೆ ಬೆಳೆದ ಖಾದ್ಯ ಹೂಗಳನ್ನು ಒಳಗೊಂಡಿದೆ. ಇಲ್ಲಿನ ಒಂದೊಂದು ಅಡುಗೆಗಳು ವಿಭಿನ್ನ ರುಚಿಯನ್ನು ಹೊಂದಿದೆ. ಇಲ್ಲಿನ ಸಾಂಪ್ರದಾಯಿಕ ಭಕ್ಷ್ಯಗಳು ಹೀಗಿವೆ:

  • ಪಾಖಾಲಾ ಭಾತ್ – ಅನ್ನದ ಜೊತೆಗೆ ಪ್ಯಾನ್ ಫ್ರೈಡ್ ತರಕಾರಿಗಳು ಮತ್ತು ಮೊಸರನ್ನು ನೀಡಲಾಗುತ್ತದೆ.
  • ದಹಿ ಬೈಗಾನಾ – ಮೊಸರು ಮತ್ತು ಮಸಾಲೆ ಗ್ರೇವಿಯಲ್ಲಿ ಬೇಯಿಸಿದ ಬದನೆಕಾಯಿಯ ಖಾದ್ಯ ಇದಾಗಿದೆ
  • ಆಲೂ ಪೊಟಾಲ ರಸ – ಹುಣಸೆಹಣ್ಣು ಮತ್ತು ಬೆಲ್ಲದ ರುಚಿಯ ಗ್ರೇವಿಯಲ್ಲಿ ಆಲೂಗಡ್ಡೆಯನ್ನು ಮಸಾಲೆಯೊಂದಿಗೆ ಬೆರೆಸಿದ ಕರಿಯಾಗಿದೆ.

ಸಿಹಿ ಪದಾರ್ಥಗಳು:

  • ಪಿತಾ – ಬೆಲ್ಲ, ರವೆ ಮತ್ತು ಒಣ ಹಣ್ಣುಗಳಿಂದ ತುಂಬಿದ ಮೃದುವಾದ ಅಕ್ಕಿಯ ಕೇಕ್ ಗಳಾಗಿವೆ.
  • ಚೆನಾ ಪೋಡಾ – ನಯಾಗರ್ ಪ್ರದೇಶದ ಬೇಯಿಸಿದ ಚೀಸ್ ನ ಸಿಹಿತಿಂಡಿ ಇದಾಗಿದೆ.
  • ರಸಬಲಿ – ಸುವಾಸನೆಯಿಂದ ಕೂಡಿದ ಸಿಹಿಯಾದ ಕೇಸರಿ ಸಿಹಿ ಸಿರಪ್‌ ಗೆ ಹಾಲು ಮತ್ತು ಚೀಸ್ ನ ಉಂಡೆಗಳನ್ನು ಸೇರಿಸಿ ಮಾಡುವ ಖಾದ್ಯ

ಇದನ್ನೂ ಓದಿ: Indian Chutneys: ವಿಶ್ವದ ಟಾಪ್ 50 ಅಚ್ಚುಮೆಚ್ಚಿನ ತಿನಿಸುಗಳಲ್ಲಿ ಭಾರತದ ಈ ಎರಡು ಚಟ್ನಿಗಳು!

ಈ ಎಲ್ಲಾ ಮಾಹಿತಿಗಳ ಮೂಲಕ ನೀವು ಭುವನೇಶ್ವರಕ್ಕೆ ಭೇಟಿ ನೀಡಿದರೆ ನಿಮಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆರಾಮವಾಗಿ ನಿಮ್ಮ ಪ್ರವಾಸವನ್ನು ಮುಗಿಸಬಹುದು.

Continue Reading

ಲೈಫ್‌ಸ್ಟೈಲ್

Himachal Tour: ರೋಮಾಂಚನ ಉಂಟುಮಾಡುವ ಹಿಮಾಚಲ ಪ್ರದೇಶದ ಡಾಲ್ ಹೌಸಿ ಗಿರಿಧಾಮ!

Himachal tour: ಡಾಲ್ ಹೌಸಿ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿರುವ ಒಂದು ಸುಂದರವಾದ ಗಿರಿಧಾಮವಾಗಿದೆ. ಈ ಗಿರಿಧಾಮವನ್ನು 1850ರಲ್ಲಿ ಲಾರ್ಡ್ ಡಾಲ್ ಹೌಸಿ ಅಭಿವೃದ್ಧಿ ಪಡಿಸಿದ ಕಾರಣ ಈ ಗಿರಿಧಾಮಕ್ಕೆ ಆತನ ಹೆಸರನ್ನೇ ಇಡಲಾಗಿದೆ.

VISTARANEWS.COM


on

Himachal tour
Koo

ದೆಹಲಿ: ಒಬ್ಬರೇ ಪ್ರವಾಸಕ್ಕೆ ಹೋಗುವುದಕ್ಕಿಂತ ಕೆಲವರಿಗೆ ಕುಟುಂಬದ ಜೊತೆ ಪ್ರವಾಸಕ್ಕೆ ಹೋಗುವುದೆಂದರೆ ಬಹಳ ಇಷ್ಟ. ಇದು ನಿಮಗೆ ಹೆಚ್ಚಿನ ಮನೋರಂಜನೆಯನ್ನು ನೀಡುತ್ತದೆ. ಮತ್ತು ಸ್ಥಳದ ಬಗ್ಗೆ ನಿಮ್ಮ ಅಭಿಪ್ರಾಯ ಮತ್ತು ಅವರ ವಿಚಾರಗಳನ್ನು ಹಂಚಿಕೊಳ್ಳಬಹುದು. ಹಾಗೇ ಮೋಜು, ಮಸ್ತಿ ಮಾಡಲು, ಅಲ್ಲಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಖುಷಿಯಾಗುತ್ತದೆ. ಹಾಗಾಗಿ ಕುಟುಂಬದ ಜೊತೆ ಪ್ರವಾಸ ಮಾಡಲು ಹಿಮಾಚಲ ಪ್ರದೇಶದ (Himachal Tour)ಡಾಲ್ ಹೌಸಿಗೆ ಭೇಟಿ ನೀಡಿ.

ಡಾಲ್ ಹೌಸಿ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿರುವ ಒಂದು ಸುಂದರವಾದ ಗಿರಿಧಾಮವಾಗಿದೆ. ಈ ಗಿರಿಧಾಮವನ್ನು 1850ರಲ್ಲಿ ಲಾರ್ಡ್ ಡಾಲ್ ಹೌಸಿ ಅಭಿವೃದ್ಧಿ ಪಡಿಸಿದ ಕಾರಣ ಈ ಗಿರಿಧಾಮಕ್ಕೆ ಆತನ ಹೆಸರನ್ನೇ ಇಡಲಾಗಿದೆ. ಈ ಸ್ಥಳ ಹಚ್ಚಹಸಿರಾದ ಸಸ್ಯಗಳಿಂದ ಆವೃತ್ತವಾಗಿದೆ. ಇಲ್ಲಿ ಕಣಿವೆಗಳು, ಜಲಪಾತಗಳು ಮುಂತಾದವುಗಳನ್ನು ನೋಡಬಹುದು. ಹಾಗಾಗಿ ನಿಮ್ಮ ಕುಟುಂಬದ ಜೊತೆ ಈ ಸ್ಥಳಕ್ಕೆ ಬನ್ನಿ.

Himachal tour

ಖಜ್ಜಿಯಾರ್

“ಮಿನಿ ಸ್ವಿಟ್ಜರ್‌ಲ್ಯಾಂಡ್” ಎಂದು ಕರೆಯಲ್ಪಡುವ ಈ ಸ್ಥಳದಲ್ಲಿ ದಟ್ಟವಾದ ಕಾಡುಗಳು, ಹುಲ್ಲುಗಾವಲು ಮತ್ತು ಪ್ರಶಾಂತವಾದ ಸರೋವರವಿದೆ. ಈ ಸ್ಥಳವು ರಮಣೀಯವಾದ ಪ್ರಕೃತಿ ಸೌಂದರ್ಯವನ್ನು ಹೊಂದಿದೆ. ಇಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರೂ ಕುದುರೆ ಸವಾರಿ ಮಾಡಬಹುದು, ಪ್ರಕೃತಿ ಸೌಂದರ್ಯದ ಮಧ್ಯದಲ್ಲಿ ವಾಕಿಂಗ್ ಮಾಡಬಹುದು ಮತ್ತು ಕುಟುಂಬದವರ ಜೊತೆ ಕುಳಿತು ಹಚ್ಚ ಹಸಿರಿನ ನಡುವೆ ಊಟ ಮಾಡಲು ಅವಕಾಶವಿದೆ.

ಡೈನ್ಕುಂಡ್ ಶಿಖರ

ಇದು ಹಿಮಾಚಲ ಪ್ರದೇಶದ ಅತ್ಯುನ್ನತ ಶಿಖರಗಳಲ್ಲಿ ಒಂದಾಗಿದೆ. ಕಣಿವೆಯ ನೋಟ ಮತ್ತು ಹಿಮದಿಂದ ಆವೃತವಾದ ಹಿಮಾಲಯ ಶಿಖರಗಳನ್ನು ನೋಡಲು ಬಯಸಿದ್ದರೆ ಈ ಸ್ಥಳಕ್ಕೆ ಭೇಟಿ ನೀಡಿ. ಇಲ್ಲಿ ಹಚ್ಚಹಸಿರಾದ ಪ್ರಕೃತಿಯ ಸೌಂದರ್ಯವನ್ನು ನೋಡಬಹುದು. ಟ್ರೆಕ್ಕಿಂಗ್ ಮತ್ತು ಇತರ ಸಾಹಸ ಚಟುವಟಿಕೆಗಳಿಗೆ ಇದು ಅತ್ಯುತ್ತಮ ಸ್ಥಳವಾಗಿದೆ

Himachal tour

ಪಂಚಪುಲ

ಪಂಚಪುಲ ಎಂದರೆ ಐದು ಸೇತುವೆಗಳು ಎಂದರ್ಥ. ಇಲ್ಲಿ ಬಂಡೆಗಳ ಮೇಲೆ ಬೀಳುವ ಆಕರ್ಷಕ ಜಲಪಾತಗಳನ್ನು ಕಾಣಬಹುದು. ಇದು ಪ್ರಪಂಚದಾದ್ಯಂತ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿ ಹೊಳೆಗಳಲ್ಲಿ ನಿಧಾನವಾಗಿ ನಡೆಯಬಹುದು. ಇಲ್ಲಿ ತಿನ್ನಲು ಆಹಾರಗಳು ಕೂಡ ದೊರೆಯುತ್ತದೆ.

ಸತ್ಧಾರ ಜಲಪಾತ

ಹಚ್ಚಹಸುರಿನ ಕಾಡುಗಳಿಂದ ಸುತ್ತುವರಿದಿರುವ ಏಳು ಬುಗ್ಗೆಗಳಲ್ಲಿ ಚಿಮ್ಮುವ ಸತ್ಧಾರ ಜಲಪಾತ ಒಂದು ಅದ್ಭುತ ಪ್ರವಾಸಿ ತಾಣವಾಗಿದೆ. ನೀವು ಇಲ್ಲಿಗೆ ಕುಟುಂಬದ ಜೊತೆ ಆಗಮಿಸಿದರೆ ಜಲಪಾತದ ಸೊಬಗನ್ನು ನೋಡಬಹುದು. ಇಲ್ಲಿ ಸ್ಟ್ರೀಮ್ ಸೈಡ್ ನಲ್ಲಿ ಪಿಕ್ನಿಕ್ ಗಳನ್ನು ಮಾಡಬಹುದು ಅಥವಾ ಪ್ರಕೃತಿಯ ಸೌಂದರ್ಯವನ್ನು ಪ್ರಶಾಂತವಾಗಿ ಸವಿಯಬಹುದು.

Himachal tour

ಚಮೇರಾ ಸರೋವರ

ಡಾಲ್ ಹೌಸಿ ಪಟ್ಟಣದಿಂದ ಸುಮಾರು 25ಕಿಮೀ ದೂರದಲ್ಲಿರುವ ಚಮೇರಾ ಸರೋವರವು ಕುಟುಂಬದ ಜೊತೆಗಿನ ವಿಹಾರಕ್ಕೆ ಬಹಳ ಸೂಕ್ತವಾದ ಸ್ಥಳವಾಗಿದೆ. ಇಲ್ಲಿ ನೀವು ಕುಟುಂಬದ ಜೊತೆ ದೋಣಿ ವಿಹಾರ ಮಾಡಬಹುದು. ಹಾಗೇ ಮೀನುಗಾರಿಕೆ, ಛಾಯಗ್ರಹಣ ಮುಂತಾದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು.

ಸೇಂಟ್ ಜಾನ್ ಚರ್ಚ್

ಇದು ಈ ಪಟ್ಟಣದಲ್ಲಿರುವ ಹಳೆಯ ಚರ್ಚ್ ಗಳಲ್ಲಿ ಒಂದಾಗಿದೆ. ಇದು ಆಧ್ಯಾತ್ಮಕ ಮತ್ತು ಐತಿಹಾಸಿಕ ಮಹತ್ವವನ್ನು ಸಾರುತ್ತದೆ. ಇಲ್ಲಿ ನೀವು ಅದರ ವಾಸ್ತುಶಿಲ್ಪಗಳನ್ನು ನೋಡಬಹುದು. ಇಲ್ಲಿ ಪ್ರಾರ್ಥನೆಗೂ ಹಾಜರಾಗಬಹುದು.

ಗಂಜಿ ಪಹಾರಿ

ಡಾಲ್ ಹೌಸ್ ನಿಂದ ಕೇವಲ 5 ಕಿ.ಮೀ ದೂರದಲ್ಲಿರುವ ಗಂಜಿ ಪಹಾರಿ ಬೆಟ್ಟಗಳಲ್ಲಿ ಒಂದಾಗಿದೆ. ಇಲ್ಲಿ ಸುತ್ತಮುತ್ತಲಿನ ಕಣಿವೆಗಳ ವ್ಯಾಪಕ ನೋಟಗಳ ಜೊತೆಗೆ ಕೆಲವು ರೋಮಾಂಚಕಾರಿ ಚಾರಣಗಳನ್ನು ಮಾಡಬಹುದು. ಇಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ವೀಕ್ಷಿಸಬಹುದು.

ಸುಭಾಷ್ ಬಾವೊಲಿ

ಇದಕ್ಕೆ ಭಾರತದ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಹೆಸರನ್ನು ಇಡಲಾಗಿದೆ. ಇಲ್ಲಿ ನೀವು ನೈಸರ್ಗಿಕ ಚಿಲುಮೆಗಳು ಮತ್ತು ಪ್ರಶಾಂತವಾದ ವಾತಾವರಣವನ್ನು ಕಾಣಬಹುದು. ಇದು ಔಷಧೀಯ ಗುಣಗಳನ್ನು ಹೊಂದಿದ್ದು, ಸ್ವಾತಂತ್ರ್ಯ ಹೋರಾಟಗಾರನ ಅನಾರೋಗ್ಯವನ್ನು ಗುಣಪಡಿಸಿದೆ ಎಂದು ನಂಬಲಾಗಿದೆ. ಹಾಗಾಗಿ ಹಚ್ಚ ಹಸಿರಾದ ಪ್ರಕೃತಿ ಸೌಂದರ್ಯದ ಜೊತೆ ಸಮಯ ಕಳೆಯಲು ನಿಮ್ಮ ಕುಟುಂಬದ ಜೊತೆ ಇಲ್ಲಿಗೆ ಬನ್ನಿ.

Himachal tour

ಡಾಲ್ ಹೌಸಿ ಮಾಲ್ ರಸ್ತೆ

ಡಾಲ್ ಹೌಸಿ ಪಟ್ಟಣವು ತನ್ನದೇ ಆದ ಮಾಲ್ ರಸ್ತೆಗಳನ್ನು ಹೊಂದಿದೆ. ಇಲ್ಲಿ ಶಾಪಿಂಗ್ ಮಾಲ್ ಮತ್ತು ರೆಸ್ಟೋರೆಂಟ್ ಗಳಿವೆ. ಜೊತೆಗೆ ಇಲ್ಲಿ ಪ್ರಪಂಚದಾದ್ಯಂತ ಅನೇಕ ರೀತಿಯ ಭಕ್ಷ್ಯಗಳು ಸಿಗುತ್ತವೆ. ಹಾಗೇ ಸ್ಮಾರಕಗಳು ಮತ್ತು ಸ್ಥಳೀಯ ಕರಕುಶಲ ವಸ್ತುಗಳನ್ನು ನೋಡಲು ಬಯಸಿದ್ದರೆ ಈ ಸ್ಥಳಕ್ಕೆ ಭೇಟಿ ನೀಡಿ.

ಇದನ್ನೂ ಓದಿ: Viral News: ರೈಲಿನಲ್ಲಿ ಜನಿಸಿದ ತಮ್ಮ ಮಗುವಿಗೆ ʼಮಹಾಲಕ್ಷ್ಮಿʼ ಎಂದು ಹೆಸರಿಟ್ಟಿದ್ದೇಕೆ ಮುಸ್ಲಿಂ ದಂಪತಿ?

ಕಲಾಟಾಪ್ ವನ್ಯಜೀವಿ ಅಭಯಾರಣ್ಯ

ಈ ಸುಂದರವಾದ ಅಭಯಾರಣ್ಯವು ಡಾಲ್ ಹೌಸಿ ಮತ್ತು ಖಜ್ಜಿಯಾರ್ ನಡುವೆ ಇದೆ. ಇಲ್ಲಿ ಜಿಂಕೆಗಳು , ಕಪ್ಪು ಕರಡಿಗಳು, ನರಿ, ಚಿರತೆ, ಕಾಡು ಬೆಕ್ಕುಗಳು ಇತರ ಜಾತಿಯ ಪ್ರಾಣಿಗಳು ಹಾಗೂ ಪಕ್ಷಿಗಳನ್ನು ನೋಡಬಹುದು. ಇಲ್ಲಿ ನೀವು ಅಳಿವಿನಂಚಿನಲ್ಲಿರುವ ಪ್ರಾಣಿಗಳು ಮತ್ತು ಪಕ್ಷಿಗಳನ್ನು ನೋಡಬಹುದು.

Continue Reading
Advertisement
Teachers Transfer
ಪ್ರಮುಖ ಸುದ್ದಿ3 hours ago

Teachers Transfer: ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ಪ್ರಕಟ; ಕಡ್ಡಾಯ, ಹೆಚ್ಚುವರಿ‌ ಟ್ರಾನ್ಸ್‌ಫರ್ ಇಲ್ಲ, ಕೋರಿಕೆ ವರ್ಗ ಮಾತ್ರ

T20 World Cup 2024
T20 ವಿಶ್ವಕಪ್4 hours ago

T20 World Cup 2024: ಭಾರತ-ಕೆನಡಾ ಪಂದ್ಯ ಮಳೆಯಿಂದ ರದ್ದು; ಅಗ್ರಸ್ಥಾನಿಯಾಗಿ ರೋಹಿತ್‌ ಪಡೆ ಸೂಪರ್‌ 8ಕ್ಕೆ ಎಂಟ್ರಿ

Hiriya vidwamsa Sagri Raghavendra Upadhyaya passed away
ಶ್ರದ್ಧಾಂಜಲಿ5 hours ago

Sagri Raghavendra Upadhyaya: ಹಿರಿಯ ವಿದ್ವಾಂಸ ಸಗ್ರಿ ರಾಘವೇಂದ್ರ ಉಪಾಧ್ಯಾಯ ನಿಧನ

Government has no money to clean tankers no ability to provide clean drinking water says R Ashok
ಪ್ರಮುಖ ಸುದ್ದಿ5 hours ago

R Ashok: ಟ್ಯಾಂಕರ್ ಸ್ವಚ್ಛಗೊಳಿಸಲೂ ಸಿದ್ದು ಸರ್ಕಾರದ ಬಳಿ ಹಣವಿಲ್ಲ; ಆರ್. ಅಶೋಕ್‌ ಆಕ್ರೋಶ

Union Minister Pralhad Joshi statement about increase in petrol and diesel prices in the state
ಕರ್ನಾಟಕ5 hours ago

Pralhad Joshi: ತೈಲ ಬೆಲೆ ಏರಿಸಿ ಕರ್ನಾಟಕದವರ ಕೈಗೆ ಗ್ಯಾರಂಟಿ ಚೊಂಬು ಕೊಟ್ಟ ಕಾಂಗ್ರೆಸ್: ಪ್ರಲ್ಹಾದ್‌ ಜೋಶಿ

Bribe Case
ಕ್ರೈಂ5 hours ago

Bribe Case: ಕಸ ಗುಡಿಸುತ್ತಲೇ ಉನ್ನತ ಹುದ್ದೆಗೇರಿದ್ದ ಮಹಿಳೆ ಕಸ ಗುಡಿಸುವವರಿಂದಲೇ ಲಂಚ ಸ್ವೀಕರಿಸುವಾಗ ಬಂಧನ!

Minister dr G Parameshwar inaugurated the hasiru grama programme in Koratagere
ತುಮಕೂರು5 hours ago

Koratagere News: ಹಸಿರೇ ಉಸಿರು, ಹಸಿರಿದ್ದೆಡೆ ಮಾನವನ ಸರ್ವಾಂಗಿಣ ಪ್ರಗತಿ: ಸಚಿವ ಜಿ. ಪರಮೇಶ್ವರ್‌

Giorgia Meloni
ವಿದೇಶ5 hours ago

Giorgia Meloni: ಇಟಲಿ ಪ್ರಧಾನಿ ಮೆಲೋನಿ ಕಾರ್ಮಿಕ ಮಹಿಳೆಯ ಮಗಳು! ಅವರ ಕುರಿತ ಕುತೂಹಲಕರ ಸಂಗತಿಗಳಿವು

Sapthami Gowda
ಪ್ರಮುಖ ಸುದ್ದಿ5 hours ago

Sapthami Gowda: ಯುವ ಪತ್ನಿ ವಿರುದ್ಧ ಸಪ್ತಮಿಗೌಡ ಮಾನಹಾನಿ ಕೇಸ್; ನಟಿ ಹೆಸರು ಎಲ್ಲಿಯೂ ಬಳಸದಂತೆ ಕೋರ್ಟ್ ಆದೇಶ

Gold Heist
ವಿದೇಶ5 hours ago

Gold Heist: ಜ್ಯುವೆಲರಿ ಶಾಪ್‌ಗೆ ನುಗ್ಗಿ ಚಿನ್ನ ಕದ್ದ 20 ಕಳ್ಳರು; ಸಿನಿಮಾ ಸ್ಟೈಲಲ್ಲೇ ದರೋಡೆ ಮಾಡಿದ ವಿಡಿಯೊ ಇಲ್ಲಿದೆ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಯಾದಗಿರಿ12 hours ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 day ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು1 day ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು1 day ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ1 day ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ4 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ4 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ5 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ5 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

ಟ್ರೆಂಡಿಂಗ್‌