ಇದು ಅಪ್ಪ ಮಗಳ ಕಥೆ | ಸಿಂಗಲ್‌ ಅಪ್ಪ ಮಗಳಿಗೆ ಅಡುಗೆ ಕಲಿಸಿದ್ದೇ ಈಗ ಸಮಸ್ಯೆ! - Vistara News

ಮಹಿಳೆ

ಇದು ಅಪ್ಪ ಮಗಳ ಕಥೆ | ಸಿಂಗಲ್‌ ಅಪ್ಪ ಮಗಳಿಗೆ ಅಡುಗೆ ಕಲಿಸಿದ್ದೇ ಈಗ ಸಮಸ್ಯೆ!

ಆ ತಂದೆ ಮಗಳು ಬಲು ಖುಷಿಯಾಗಿ ಜತೆಯಾಗಿ ಅಡುಗೆ ಮಾಡುತ್ತಿದ್ದರು. ಆದರೆ ಇದು ಮಗಳ ಶಾಲೆಯ ಟೀಚರ್‌ಗಳಿಗೆ ಸಮಸ್ಯೆಯಾಗಿ ಪರಿಣಮಿಸಿತು. ಟೀಕಿಸಿದರು. ತಂದೆಯ ತಲೆಯೀಗ ಗೊಂದಲದ ಗೂಡಾಯಿತು.

VISTARANEWS.COM


on

cooking skill
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತಂದೆಯೊಬ್ಬ ತನ್ನ ಮಗಳಿಗೆ ಬದುಕಲು ಅಗತ್ಯ ಬೇಕಾಗಿರುವ ಅಡುಗೆಯೆಂಬ ಲೈಫ್‌ ಸ್ಕಿಲ್‌ ಕಲಿಸಿದ್ದೇ ಆತನಿಗೀಗ ದೊಡ್ಡ ಸಮಸ್ಯೆಯಾಗಿದೆ. ಮಗಳಿಗೆ ಅಡುಗೆ ಕಲಿಸಿದ್ದಕ್ಕಾಗಿ ಈಗ ತಂದೆ ಯದ್ವಾತದ್ವಾ ತನ್ನ ಮಗಳ ಶಾಲೆಯಿಂದ ಬೈಗಳು ತಿಂದಿದ್ದಾನಂತೆ! ಹಾಗಂತ ಆ ಅಪ್ಪ ಈಗ ಸಾಮಾಜಿಕ ಜಾಲತಾಣದಲ್ಲಿ ತನ್ನ ಸಂಕಟ ತೋಡಿಕೊಂಡಿದ್ದಾನೆ.

ಇದು ಓದಲು ಸಣ್ಣ ಸಮಸ್ಯೆಯಂತೆ ಕಂಡರೂ ವಿಷಯ ಗಂಭೀರವೇ! ವಿಷಯ ನಡೆದುದಿಷ್ಟು. ಆತನೇ ಹೇಳುವಂತೆ, “ನಾನೊಬ್ಬ ಸಿಂಗಲ್‌ ಅಪ್ಪ. ನನಗೆ ಮೇರಿ ಎಂಬ ಮಗಳೊಬ್ಬಳಿದ್ದಾಳೆ. ಮೇರಿಯ ಅಮ್ಮ ಆಕೆ ಎರಡು ವರ್ಷದವಳಿದ್ದಾಗ ತೀರಿಕೊಂಡಳು. ಅಷ್ಟರವರೆಗೆ ಮೇರಿಯ ಎಲ್ಲ ಕೆಲಸಗಳನ್ನೂ ನನ್ನ ಹೆಂಡತಿಯೇ ನೋಡಿಕೊಳ್ಳುತ್ತಿದ್ದಳು. ಆಕೆಯ ಸಾವಿನ ನಂತರ ಇದು ಸಂಪೂರ್ಣವಾಗಿ ನನ್ನ ಹೆಗಲಿಗೆ ಬಂತು. ನನಗೆ ತಿಳಿವಿರುವ ಹಾಗೆ ನಾನು ನನ್ನ ೧೪ನೇ ವಯಸ್ಸಿನಲ್ಲಿ ಅಡುಗೆ ಮಾಡಲು ಕಲಿತಿದ್ದೆ. ನಮ್ಮನ್ನು ಹಾಗೂ ನಮ್ಮ ಜೊತೆ ಇರುವವರನ್ನು ಸಂತೋಷವಾಗಿ ಇಡಲು ಅಡುಗೆ ಗೊತ್ತಿರುವುದು ಅತ್ಯಂತ ಅವಶ್ಯಕ. ನನ್ನ ಮಗಳು ಸಣ್ಣವಳಿದ್ದಾಗಿಂದ ನಾನು ಅಡುಗೆ ಮಾಡುವುದನ್ನು ನೋಡಿ ಆಕೆಯೂ, ಆಕೆಯ ನಾಲ್ಕನೇ ವಯಸ್ಸಿನಲ್ಲಿಯೇ ಆಸಕ್ತಿ ತೋರಿಸಿ ಸಣ್ಣಪುಟ್ಟ ಸಹಾಯ ಮಾಡಲು ಆರಂಭಿಸಿದ್ದಳು. ಹೀಗಾಗಿ ಸುಮಾರು ೧೨ ವರ್ಷ ಆಕೆಗೆ ನಾನೇ ಪ್ರತಿ ಬುಧವಾರ, ಒಂದಿಷ್ಟು ಹಣ ಕೊಟ್ಟು ಅಂಗಡಿಗೆ ಹೋಗಿ ಸಾಮಾನುಗಳನ್ನುಖರೀದಿಸಲು ತಿಳಿಸಿ, ರಾತ್ರಿಯ ಅಡುಗೆ ಮಾಡಲು ಹೇಳಲು ಆರಂಭಿಸಿದೆ. ಅದನ್ನವಳು ಪ್ರೀತಿಯಿಂದಲೇ ಮಾಡುತ್ತಾಳೆ. ಅವಳು ಅಡುಗೆಯಲ್ಲಿ ಈಗೆಷ್ಟು ಪರಿಣತಿ ಹೊಂದಿದ್ದಾಳೆಂದರೆ, ರಾತ್ರಿಯ ಊಟಕ್ಕೆ ಪರ್ಫೆಕ್ಟ್‌ ಆಗಿ ಇದ್ದ ಸಾಮಾನುಗಳ ಬಳಕೆಯಿಂದ ರುಚಿಕಟ್ಟಾಗಿ ಅಡುಗೆ ಮಾಡುತ್ತಾಳೆ. ಜೊತೆಗೆ ಕೊನೆಯಲ್ಲಿ ತಿನ್ನಲು ಸಿಹಿತಿನಿಸನ್ನೂ ಮಾಡಿಡುತ್ತಾಳೆ.

ಅವಳು ತುಂಬ ಸಣ್ಣವಳಿದ್ದಾಗ ಅಡುಗೆಯ ಬಗ್ಗೆ ನನ್ನ ಬಳಿ ಮಾತಾಡುತ್ತಾ, ʻಅಪ್ಪಾ, ನೀನೇಕೆ ಯಾವಾಗಲೂ ಅಡುಗೆ ಮಾಡುತ್ತಿ?ʼ ಎಂದು ಪ್ರಶ್ನೆ ಕೇಳಿದ್ದಳು. ಆಗ ನಾನು, ʻನಮ್ಮ ಜೊತೆಗಿರುವವರನ್ನು ಸಂತೋಷವಾಗಿಡಲು, ಆರೋಗ್ಯವಾಗಿಡಲು ಅಡುಗೆ ಮಾಡ್ತೇನೆ ಪುಟ್ಟಾʼ ಎಂದಿದ್ದೆ. ಹಾಗೆ ನೋಡಿದರೆ, ನನ್ನ ಹೆಂಡತಿಯನ್ನು ಮದುವೆಗೂ ಮೊದಲು ಇಂಪ್ರೆಸ್‌ ಮಾಡಲು ಅಡುಗೆಯನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಂಡಿದ್ದೆ.

ಹೀಗಾಗಿ, ನಮ್ಮ ಮನೆಯಲ್ಲಿ ಆಕೆ ಏನೇ ಹೊಸ ರೆಸಿಪಿ ಟ್ರೈ ಮಾಡಿದರೂ, ನಾನು ಬಾಯಿ ಚಪ್ಪರಿಸಿ ತಿಂದರೆ ಆಕೆ, ʻಅಪ್ಪಾ, ನಿನಗೆ ಇಷ್ಟವಾದರೆ ನನ್ನ ಅವನಿಗೂ (ಆಕೆಯ ಕ್ರಶ್)‌ ಇಷ್ಟವಾದೀತು ಅಲ್ವಾʼ ಎಂದು ನಗುತ್ತಾಳೆ. ಆಗ ನಾವಿಬ್ಬರೂ ಮನಸೋ ಇಚ್ಛೆ ನಗುತ್ತಿದ್ದೆವು. ಇಂತಹ ಸುಂದರ ಗಳಿಗೆಗಳು ಸಾಗುತ್ತಿದ್ದ ಸಂದರ್ಭ ಇತ್ತೀಚೆಗೆ ಆಕೆಯ ಶಾಲೆಯಲ್ಲಿ ವಿಷಯವೊಂದನ್ನು ಆಯ್ಕೆ ಮಾಡಬೇಕಿದ್ದಾಗ ಆಕೆ, ʻಹೋಮ್‌ ಕುಕ್ಕಿಂಗ್‌ʼ ಆಯ್ಕೆ ಮಾಡಿದ್ದಳು. ಆಗ ಟೀಚರ್‌, ʻನೀವು ಯಾಕೆ ಅಡುಗೆ ಕಲಿಯಬೇಕು?ʼ ಎಂದು ಕೇಳಿದಾಗ ನನ್ನ ಮಗಳು, ʻನನ್ನ ಭವಿಷ್ಯದ ಗಂಡ ಹಾಗೂ ಮಕ್ಕಳನ್ನು ಸಂತೋಷವಾಗಿಡಲು ನಾನು ಅಡುಗೆ ಕಲಿಯುತ್ತೇನೆʼ ಎಂದಿದ್ದಳಂತೆ. ಇದು ದೊಡ್ಡ ಸುದ್ದಿಯಾಗಿ, ಟೀಚರು ಪ್ರಾಂಶುಪಾಲರಿಗೂ ಈ ವಿಷಯ ಮುಟ್ಟಿಸಿ, ಈ ಬಗ್ಗೆ ಸಾಕಷ್ಟು ಮೀಟಿಂಗ್‌ ನಡೆದು ಕೊನೆಗೆ ಮರುದಿನ ನನಗೆ ಶಾಲೆಯಿಂದ ಕರೆ ಬಂತು.

ʻನೀವು ನಿಮ್ಮ ಮಗಳನ್ನು ಕೆಟ್ಟದಾಗಿ ಬೆಳೆಸಿದ್ದೀರಿ. ಮಗಳನ್ನು ಗಂಡನ ಮನೆಯಲ್ಲಿ ಅಡುಗೆ ಮಾಡಿಕೊಂಡು ಬಿದ್ದಿರು ಎಂದು ಹೇಳಿದ್ದೀರಿʼ ಎಂದು ಆ ಮಹಿಳಾವಾದಿ ಟೀಚರ್‌ ನನ್ನ ಜೊತೆ ವಾಗ್ವಾದ ಮಾಡಿದ್ದಾರೆ. ಶಾಲೆಯಲ್ಲಿ ಇದೀಗ ಇದೇ ವಿಷಯ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಇದು ನನ್ನ ನೆಮ್ಮದಿಯನ್ನು ಹಾಳು ಮಾಡಿದೆ. ಈಗ ಹೇಳಿ ನಾನು ನನ್ನ ಮಗಳಿಗೆ ಅಡುಗೆ ಕಲಿಸಿದ್ದು ತಪ್ಪೇ?” ಎಂದು ಪ್ರಶ್ನೆ ಕೇಳಿದ್ದಾನೆ.‌

ಇದನ್ನೂ ಓದಿ | Life guide | ಜೀವನದಲ್ಲಿ ಸಫಲರಾಗಲು ಬೆನ್ನಿಗೆ ಬೇಕು ಇಂಥ ಮಾರ್ಗದರ್ಶಕರು!

ಇದಕ್ಕೆ ಹಲವರು ಉತ್ತರ ನೀಡಿದ್ದು, ಒಬ್ಬರು, ʻಇಲ್ಲಿ ಟೀಚರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ನೀವು ಮಗಳನ್ನು ಅಡುಗೆ ಕಲಿಯಲು ಒತ್ತಾಯಿಸಿದ್ದೀರಿ ಹಾಗೂ ಇದು ಹೆಣ್ಣುಮಕ್ಕಳು ಗಂಡನ ಮನೆಗೆ ಹೋಗುವಾಗ ಅವಶ್ಯ ಬೇಕಾಗುತ್ತದೆ ಎಂದು ಆಕೆಯ ತಲೆಯಲ್ಲಿ ತುಂಬಿದ್ದೀರಿ ಎಂಬಂತೆ ಟೀಚರ್‌ ಅರ್ಥ ಮಾಡಿಕೊಂಡಿದ್ದಾರೆ. ಆದರೆ ನಿಮ್ಮ ಮಗಳು ಸಣ್ಣವಳಿದ್ದಾಗಿಂದ ಗಂಡಸಾಗಿ ನೀವೇ ಅಡುಗೆಯಿಂದ ಹಿಡಿದು ಎಲ್ಲವನ್ನೂ ನಿಭಾಯಿಸಿರುವ ಕಾರಣ ಇಲ್ಲಿ ಅಂತಹ ಪ್ರಶ್ನೆಗಳೇ ಬರುವುದಿಲ್ಲ. ತಲೆಕೆಡಿಸಿಕೊಳ್ಳಬೇಡಿʼ ಎಂದಿದ್ದಾರೆ.

ಇನ್ನೊಬ್ಬರು, ʻಇಲ್ಲಿ ನಿಮ್ಮ ಮಗಳು ಅಡುಗೆಯನ್ನು ಇಷ್ಟಪಟ್ಟು ಮಾಡಿದರೆ ಅದರಲ್ಲಿ ಯಾವ ಸಮಸ್ಯೆಯೂ ಇಲ್ಲ. ಅದಲ್ಲದೆ, ಕೆಲವು ಮಹಿಳೆಯರು, ಮದುವೆಯಾದ ಮೇಲೆ ಕೆಲಸಕ್ಕೆ ಹೋಗಲು ಇಷ್ಟಪಡುವುದಿಲ್ಲ ಕೂಡಾ. ಮನೆಯಲ್ಲೇ ಇದ್ದು, ಮನೆಯ ಸಮಾಚಾರಗಳನ್ನು ನೋಡಿಕೊಳ್ಳಲು ಬಯಸುತ್ತಾರೆ. ಅದರಲ್ಲೇನೂ ತಪ್ಪಿಲ್ಲ, ಅವರವರ ಇಷ್ಟಕ್ಕೆ ಬಿಟ್ಟಿದ್ದುʼ ಎಂದಿದ್ದಾರೆ.

ಮತ್ತೊಬ್ಬರು, ʻಮನೆಯವರಿಗಾಗಿ ಅಡುಗೆ ಮಾಡುವುದು, ಎಲ್ಲರೂ ಸಂತೋಷದಿಂದಿರುವುದು ಬದುಕಿನಲ್ಲಿ ಬಹಳ ಮುಖ್ಯ. ನಾವು ಮಾಡಿದ ಅಡುಗೆಯನ್ನು ಮನೆಯವರು ಇಷ್ಟಪಟ್ಟು ತಿನ್ನುತ್ತಿದ್ದರೆ ಎಷ್ಟು ಖುಷಿ ಆಗುತ್ತದಲ್ಲವೇ? ಹಾಗಾಗಿ ಹೆಚ್ಚು ತಲೆಬಿಸಿ ಬೇಡ. ಬದುಕು ಸಿಂಪಲ್‌, ಅಡುಗೆ ಮಾಡಿ, ಮನೆಯವರಿಗೂ ಕೊಡಿ, ನೀವೂ ತಿನ್ನಿ, ಸಂತೋಷದಿಂದಿರಿ” ಎಂದಿದ್ದಾರೆ ಎಂಬಲ್ಲಿಗೆ ಸಿಂಗಲ್‌ ಅಪ್ಪ ಈಗ ಶಾಂತನಾಗಿದ್ದಾನೆ.

ಇದನ್ನೂ ಓದಿ | ವರ್ಕ್‌ ಫ್ರಂ ಮೌಂಟೇನ್:‌ ಇಲ್ಲೆಲ್ಲಾ ಪ್ರವಾಸ ಮಾಡುತ್ತಾ ಕೆಲಸ ಮಾಡಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ಮುಖವೇ ಇಲ್ಲದ ಆಕೆಗೆ ತನ್ನ ಹೆಸರೇ ಮರೆತು ಹೋಗಿತ್ತು!

ರಾಜಮಾರ್ಗ ಅಂಕಣ: ಮದುವೆಯ ನಂತರ ಆಕೆಗೆ ಇನ್ನೂ ಕೆಲವು ಐಡೆಂಟಿಟಿಗಳು ಸೇರಿದವು. ಇಂತವನ ಹೆಂಡತಿ, ಇಂತವನ ಅತ್ತಿಗೆ, ಇಂತವರ ಸೊಸೆ, ಇಂತವರ ತಾಯಿ, ಇಂತವರ ನಾದಿನಿ……. ಹೀಗೆ! ಅಲ್ಲಿಯೂ ಯಾರೂ ಆಕೆಯ ಹೆಸರು ಹಿಡಿದು ಕರೆಯಲಿಲ್ಲ. ಸಂಪ್ರದಾಯಸ್ಥರ ಮನೆ ಎಂಬ ನೆಪದಲ್ಲಿ ತಿಂಗಳ ಮೂರು ದಿನ ಹೊರಗೆ ಕುಳಿತುಕೊಳ್ಳುವುದು ತಪ್ಪಲಿಲ್ಲ.

VISTARANEWS.COM


on

ರಾಜಮಾರ್ಗ ಅಂಕಣ she 1
Koo

ಈಗಲೂ ಆಕೆಗೆ ಕಾಡುವ ಪ್ರಶ್ನೆ – ನಾನು ಯಾರು?

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಮನೆಯೊಳಗೆ ಆಕೆಯನ್ನು (she) ಎಲ್ಲರೂ ಅತ್ತಿಗೆ, ಮಾಮಿ, ಅಕ್ಕ ಎಂದೆಲ್ಲ ಕರೆಯುತ್ತಾರೆ. ಆಕೆಯ ಮಕ್ಕಳು (children) ಅಮ್ಮ (mother) ಎಂದು ಕರೆಯುತ್ತಾರೆ. ಮೊಮ್ಮಕ್ಕಳು ಅವರನ್ನು ಅಜ್ಜಿ ಎನ್ನುತ್ತಾರೆ. ಮೊಮ್ಮಕ್ಕಳ ಗೆಳೆಯರು ಮನೆಗೆ ಬಂದರೆ ಅವರೂ ಅಜ್ಜಿ ಎನ್ನುತ್ತಾರೆ. ಹೊರಗಿನವರು ಯಾರು ಬಂದರೂ ಆಕೆಯನ್ನು ಆಂಟಿ (Aunty) ಎಂದೇ ಕರೆಯುತ್ತಾರೆ. ಕೈ ಹಿಡಿದ ಗಂಡ (Husband) ಆಕೆಯನ್ನು ‘ಓ ಇವಳೇ’ ಎಂದು ಕರೆಯುತ್ತಾನೆ. ಮನೆಯ ಹೊರಗೆ ಬಂದರೆ ಅಲ್ಲಿ ಕೂಡ ಆಕೆಯು ಇಂತವನ ಹೆಂಡತಿ (wife) ಎಂದೇ ರಿಜಿಸ್ಟರ್ ಆಗಿದ್ದಾಳೆ. ಅವಳಿಗೆ ತನ್ನ ಸ್ವಂತ ಹೆಸರೇ ಮರೆತು ಹೋಗಿದೆ! ಅವಳಿಗೆ ಸ್ವಂತ ಐಡೆಂಟಿಟಿಯು (Identity) ಇಲ್ಲದೆ ಎಷ್ಟೋ ವರ್ಷಗಳೇ ಆಗಿ ಹೋಗಿವೆ.

ಆಕೆಯ ಬಾಲ್ಯವೂ ಹಾಗೇ ಇತ್ತು!

ಆಕೆ ಮೊದಲ ಬಾರಿಗೆ ಕಣ್ಣು ತೆರೆದು ಈ ಜಗತ್ತಿಗೆ ಬಂದಾಗ ಕೇಳಿದ ಮೊದಲ ಉದ್ಗಾರ – ಛೇ! ಈ ಬಾರಿಯೂ ಹೆಣ್ಣು! ಆಗ ಅದು ಅವಳಿಗೆ ಅರ್ಥ ಆಗದ ವಯಸ್ಸು.

ಅವಳನ್ನು ತೊಟ್ಟಿಲಲ್ಲಿ ಮಲಗಿಸಿ ಆಕೆಯ ಕಿವಿಯಲ್ಲಿ ಯಾವುದೋ ಒಂದು ಹೆಸರನ್ನು ಹೆತ್ತವರು ಉಸಿರಿದ್ದರು. ಅದೂ ಅವಳಿಗೆ ನೆನಪಿಲ್ಲ. ಮನೆಯವರು ಅಪ್ಪ, ಅಮ್ಮ ಎಲ್ಲರೂ ಆಕೆಯನ್ನು ಪೂರ್ತಿ ಹೆಸರಿನಿಂದ ಕರೆದದ್ದು ಇಲ್ಲವೇ ಇಲ್ಲ. ಅಮ್ಮಿ, ಅಮ್ಮು, ಪುಟ್ಟಿ, ಚಿನ್ನು…. ಹೀಗೆ ತರಹೇವಾರಿ ಹೆಸರುಗಳು. ಮನೆಯಲ್ಲಿ ತುಂಬಾ ಹೆಣ್ಣು ಮಕ್ಕಳಿದ್ದ ಕಾರಣ ಆಕೆಗೇ ಕೆಲವು ಬಾರಿ ಗೊಂದಲ ಆದದ್ದು ಇದೆ.

ಶಾಲೆಯಲ್ಲಿಯೂ ಆಕೆಗೆ ಐಡೆಂಟಿಟಿ ಇರಲಿಲ್ಲ!

ಆಕೆಯನ್ನು ಶಾಲೆಗೆ ಸೇರಿಸುವಾಗ ಯಾವುದೋ ಒಂದು ಹೆಸರು ಇಟ್ಟಿದ್ದರು. ಆದರೆ ಆ ಹೆಸರು ಶಾಲೆಯಲ್ಲಿ ಬಳಕೆ ಆದದ್ದು ಕಡಿಮೆ. ಹಾಜರಿಯನ್ನು ಕರೆಯುವಾಗ ಟೀಚರ್ ನಂಬರ್ ಕರೆಯುತ್ತಿದ್ದರು. ಪೇಪರ್ ಕೊಡುವಾಗಲೂ ನಂಬರ್. ಅಸೆಂಬ್ಲಿಯಲ್ಲಿಯೂ ನಂಬರ್. ಅಲ್ಲಿ ಕೂಡ ಟೀಚರ್ ಇಂತವರ ಮಗಳು, ಇಂತವರ ತಂಗಿ ಎಂದು ಪರಿಚಯ ಮಾಡುತ್ತಿದ್ದರು. ಸ್ಪರ್ಧೆಗೆ ಹೆಸರು ಕೊಟ್ಟಾಗಲೂ ನಂಬರ್ ಕರೆಯುತ್ತಿದ್ದರು. ಆಕೆಯು ಅವಳ ಅಣ್ಣನಷ್ಟು, ಅಕ್ಕನಷ್ಟು ಪ್ರತಿಭಾವಂತೆ ಆಗಿರಲಿಲ್ಲ. ಮಾರ್ಕ್ಸ್ ಕಡಿಮೆ ಬಂದಾಗ ಶಿಕ್ಷಕರು ‘ ನಿನಗೆ ಅಣ್ಣನಷ್ಟು ಯಾಕೆ ಮಾರ್ಕ್ ಬಂದಿಲ್ಲ? ಅಕ್ಕನ ಹಾಗೆ ಯಾಕೆ ಮಾರ್ಕ್ ಬರೋದಿಲ್ಲ?’ ಎಂದು ಕೇಳಿದಾಗ ಆಕೆಗೆ ಸಿಟ್ಟು ಬರುತ್ತಿತ್ತು.

‘ನಾನು ನಾನೇ ‘ಎಂದು ಕಿರುಚಿ ಹೇಳಬೇಕು ಎಂದು ಹಲವು ಬಾರಿ ಅನ್ನಿಸುತ್ತಿತ್ತು. ಆದರೆ ಆಗುತ್ತಲೇ ಇರಲಿಲ್ಲ. ಆಗಲೇ ಆಕೆಯು ಐಡೆಂಟಿಟಿ ಕಳೆದುಕೊಂಡಾಗಿತ್ತು.

ರಾಜಮಾರ್ಗ ಅಂಕಣ she 1

ಮುಂದೆ ಹೈಸ್ಕೂಲಿಗೆ ಬಂದಾಗಲೂ ಐಡೆಂಟಿಟಿ ಇರಲಿಲ್ಲ!

ಹೈಸ್ಕೂಲ್ ವಿದ್ಯಾಬ್ಯಾಸಕ್ಕೆ ಆಕೆ ಬಂದಾಗ ಇನ್ನೂ ಕೆಲವು ಕಿರುಕುಳಗಳು ಆರಂಭ ಆದವು. ಮೂರು ದಿನ ಹೊರಗೆ ಕೂರಲೇಬೇಕು ಎಂದು ಅಮ್ಮ ಅಪ್ಪಣೆ ಕೊಡಿಸಿದರು. ಆಗ ಶಾಲೆಗೆ ಬಂದಾಗಲೂ ಆಕೆಯು ಮೈಯನ್ನು ಮುದ್ದೆ ಮಾಡಿ ಕುಳಿತುಕೊಳ್ಳುತ್ತಿದ್ದಳು. ಆಗೆಲ್ಲ ಕೀಳರಿಮೆ ಹೆಚ್ಚಾಯಿತು. ಭಯ ಹೆಚ್ಚಾಯಿತು. ಮಾರ್ಕ್ ಮತ್ತೂ ಕಡಿಮೆ ಆಯಿತು.

ಒಮ್ಮೆ ಒಬ್ಬ ಓರಗೆಯ ಹುಡುಗ ಟಿಫಿನ್ ಬಾಕ್ಸನಲ್ಲಿ ಒಂದು ಲವ್ ಲೆಟರ್ ಇಟ್ಟು ನನ್ನನ್ನು ಪ್ರೀತಿ ಮಾಡುತ್ತಿಯಾ? ಎಂದು ಬರೆದಿದ್ದ. ಆಗ ಇನ್ನೂ ಭಯವು ಹೆಚ್ಚಾಯಿತು. ಮದುವೆ ಆಗ್ತೀಯಾ ಎಂದು ಕೇಳಿದಾಗ ಅವನು ʼಅದೆಲ್ಲ ಬೇಡ, ಪ್ರೀತಿ ಮಾತ್ರ ಮಾಡೋಣ’ ಅಂದನು. ಆಕೆಗೆ ಅದೆಲ್ಲ ಅರ್ಥವೇ ಆಗಲಿಲ್ಲ. ಮನೆಗೆ ಬಂದಾಗ ಅಮ್ಮ ಪ್ರತೀ ದಿನ ಆಕೆಯ ಶಾಲೆಯ ಬ್ಯಾಗ್ ಚೆಕ್ ಮಾಡುತ್ತಾ ಇದ್ದರು. ಜೋರಾಗಿ ಪ್ರತಿಭಟಿಸಬೇಕು ಅನ್ನಿಸಿದರೂ ಆಕೆಗೆ ಧ್ವನಿಯೇ ಬರಲಿಲ್ಲ.

ಎಲ್ಲರೂ ಡಾಮಿನೇಟ್ ಮಾಡುವವರು!

ಆಕೆಯ ತಿಂಗಳ ಆ ಡೇಟ್ ಆಕೆಗೆ ಮರೆತು ಹೋದರೂ ಅಮ್ಮನಿಗೆ ನೆನಪು ಇರುತ್ತಿತ್ತು. ಆಕೆಯ ತಂಗಿ, ತಮ್ಮ ಕೂಡ ಆಕೆಯ ಮೇಲೆ ಡಾಮಿನೇಟ್ ಮಾಡ್ತಾ ಇದ್ದರು. ಆಕೆಗೆ ಸ್ವಾಭಿಮಾನ ಎಂಬ ಶಬ್ದದ ಅರ್ಥವೇ ಮರೆತುಹೋಗಿತ್ತು.

ಕಡಿಮೆ ಮಾರ್ಕ್ ಬಂದ ಕಾರಣ ಆಕೆಯು ಕಾಲೇಜಿನ ಮೆಟ್ಟಲು ಹತ್ತಲಿಲ್ಲ. ‘ಗಂಡನ ಮನೆಗೆ ಹೋದ ನಂತರ ಅಡುಗೆ ಮಾಡಬೇಕಲ್ಲ’ ಎಂದು ಆಕೆಯ ಅಮ್ಮ ಅದನ್ನೇ ಚಂದ ಮಾಡಿ ಕಲಿಸಿದರು. ಮನೆಯ ನಾಲ್ಕು ಕೋಣೆಗಳ ನಡುವೆ ಆಕೆಯ ಧ್ವನಿ ಮತ್ತು ಐಡೆಂಟಿಟಿಗಳು ನಿರಂತರ ಉಸಿರುಗಟ್ಟುತ್ತಿದ್ದವು.

ಮದುವೆಯ ನಂತರ…

ಮದುವೆಯ ನಂತರ ಆಕೆಗೆ ಇನ್ನೂ ಕೆಲವು ಐಡೆಂಟಿಟಿಗಳು ಸೇರಿದವು. ಇಂತವನ ಹೆಂಡತಿ, ಇಂತವನ ಅತ್ತಿಗೆ, ಇಂತವರ ಸೊಸೆ, ಇಂತವರ ತಾಯಿ, ಇಂತವರ ನಾದಿನಿ……. ಹೀಗೆ! ಅಲ್ಲಿಯೂ ಯಾರೂ ಆಕೆಯ ಹೆಸರು ಹಿಡಿದು ಕರೆಯಲಿಲ್ಲ. ಸಂಪ್ರದಾಯಸ್ಥರ ಮನೆ ಎಂಬ ನೆಪದಲ್ಲಿ ತಿಂಗಳ ಮೂರು ದಿನ ಹೊರಗೆ ಕುಳಿತುಕೊಳ್ಳುವುದು ತಪ್ಪಲಿಲ್ಲ.

ಚಂದ ಅಡುಗೆ ಮಾಡ್ತೀ ಎಂಬ ಪ್ರಶಸ್ತಿ ಕೊಟ್ಟು ಆಕೆಯನ್ನು ಅಡುಗೆ ಮನೆಯ ಮಹಾರಾಣಿಯನ್ನಾಗಿ ಮಾಡಿಬಿಟ್ಟರು. ‘ಅನ್ನಪೂರ್ಣೆ ‘ ಎಂಬ ಬಿರುದು ಆಕೆಗೆ ಮುಳ್ಳಿನ ಕಿರೀಟ ಆಗಿ ಬಿಟ್ಟಿತು. ಇಡೀ ದಿನ ಊಟ, ತಿಂಡಿ, ಪಾತ್ರೆ, ಬಟ್ಟೆ, ಸ್ವಚ್ಛತೆ, ಒಂದಿಷ್ಟು ನೆಂಟರು, ಹಬ್ಬಗಳು, ಮದುವೆ, ಮುಂಜಿ, ಗೃಹ ಪ್ರವೇಶ, ಸೀಮಂತ ಇಷ್ಟರಲ್ಲಿ ಆಕೆಯ ದಿನಚರಿಯು ಮುಗಿದು ಹೋಗುತ್ತಿತ್ತು. ಒಂದೆರಡು ಧಾರಾವಾಹಿಗಳು ಸ್ವಲ್ಪ ರಿಲೀಫ್ ಕೊಡುತ್ತಿದ್ದವು. ಆಗೆಲ್ಲ ನನ್ನ ಬದುಕು ಆ ಧಾರಾವಾಹಿಗಳ ಕಥೆಯ ಹಾಗೆ ಇಲ್ಲವಲ್ಲ ಎಂಬ ದುಃಖವೂ ಆಕೆಯನ್ನು ಕಾಡುತ್ತಿತ್ತು.

ರಾಜಮಾರ್ಗ ಅಂಕಣ she 1

ಈಗಲೂ ಆಕೆಗೆ ಐಡೆಂಟಿಟಿ ಇಲ್ಲ!

ಮೊಮ್ಮಕ್ಕಳು ಅಜ್ಜಿ ಅಂತ ಕರೆದು ತಿಂಡಿಗಾಗಿ ಓಡಿ ಬರುತ್ತಾರೆ. ಈ ಪಾಠ ಹೇಳಿಕೊಡು, ಈ ಪಾಠ ಹೇಳಿಕೊಡು ಎಂದು ದುಂಬಾಲು ಬೀಳುತ್ತಾರೆ. ಆಗ ಆಕೆಗೆ ಅರ್ಥ ಆಗದೆ ಹೋದಾಗ ‘ ಏನಜ್ಜಿ? ನಿನಗೆ ಏನೂ ಗೊತ್ತಿಲ್ಲ. ಹೋಗಜ್ಜಿ’ ಎಂದು ಅಣಕಿಸಿದಾಗ ನೋವಾಗುತ್ತದೆ. ನೆರೆಹೊರೆಯವರ ಜೊತೆಗೆ ಮಾತಿಗೆ ನಿಂತರೆ ಸಿನೆಮಾ, ಗಾಸಿಪ್, ಫ್ಯಾಷನ್ ಎಂದೆಲ್ಲ ಮಾತಾಡುತ್ತಾರೆ. ಆಗೆಲ್ಲ ಆಕೆಯ ಅಜ್ಞಾನವು ಆಕೆಯನ್ನು ಅಣಕಿಸುತ್ತದೆ. ಆಕೆ ಈಗ ಮನೆಯಿಂದ ಹೊರಗೆ ಹೋಗೋದನ್ನು ಬಿಟ್ಟಿದ್ದಾರೆ. ತವರು ಮನೆಗೆ ಹೋಗದೆ ಎಷ್ಟೋ ವರ್ಷಗಳು ಕಳೆದಿವೆ.

ಆಕೆಯ ಗಂಡ ವಿ ಆರ್ ಎಸ್ ತೆಗೆದುಕೊಂಡು ಈಗ ಮನೆಯಲ್ಲಿಯೇ ಇದ್ದಾರೆ. ಪ್ರತೀ ಅರ್ಧ ಘಂಟೆಗೆ ಒಮ್ಮೆ ‘ ಓ ಇವಳೇ, ಒಂದು ಲೋಟ ಟೀ ಮಾಡಿ ಕೊಡು’ ಎಂದು ಕರೆಯುತ್ತಲೆ ಇರುತ್ತಾರೆ. ಮಗ, ಸೊಸೆ ಸಂಜೆ ಆಫೀಸ್ ಮುಗಿಸಿ ಬಂದು ಲ್ಯಾಪ್ ಟಾಪ್ ಕುಟ್ಟುತ್ತಾ ಕೂರುತ್ತಾರೆ. ಸೊಸೆ ಒಮ್ಮೆ ಕೂಡ ತಿಂಗಳಲ್ಲಿ ಮೂರು ದಿನ ಹೊರಗೆ ಕೂತದ್ದು ಅವಳು ನೋಡಲೇ ಇಲ್ಲ! ಆಗೆಲ್ಲ ನಾನೆಷ್ಟು ಕಳೆದುಕೊಂಡೆ ಎಂಬ ದುಃಖ ಆಕೆಯನ್ನು ಆವರಿಸುತ್ತದೆ. ಮೊಮ್ಮಕ್ಕಳು ಹೊಮ್ ವರ್ಕ್, ಪ್ರಾಜೆಕ್ಟ್, ವಿಡಿಯೋ ಗೇಮ್ ಎಂದು ಮುಳುಗಿರುತ್ತಾರೆ.

ಆಕೆ ʼಇವತ್ತಿನ ಊಟ, ತಿಂಡಿಯ ಮೆನು ಮುಗಿಯಿತು, ನಾಳೆ ಎಂತ ಅಡಿಗೆ ಮಾಡುವುದು?’ ಎಂದು ಲೆಕ್ಕ ಹಾಕುತ್ತ ತಡರಾತ್ರಿ ಹಾಸಿಗೆಗೆ ಒರಗುತ್ತಾರೆ.

ಆಗಲೂ ಆಕೆಗೆ ಕಾಡುವ ಪ್ರಶ್ನೆ – ನಾನು ಯಾರು?

ಇದನ್ನೂ ಓದಿ: ರಾಜಮಾರ್ಗ ಅಂಕಣ : ನನ್ನ ಬದುಕೇ ಬೇರೆ, ನನ್ನ ಸಿನಿಮಾನೇ ಬೇರೆ ಅಂದರೆ ಹೀಗೇ ಆಗೋದು!

Continue Reading

ತುಮಕೂರು

Koratagere News: ಗ್ರಾಮೀಣ ಹೆಣ್ಣುಮಕ್ಕಳಿಗೆ ಮೂಲಸೌಕರ್ಯ ಒದಗಿಸುವುದು ಮೊದಲ ಆದ್ಯತೆ: ಮಹಿಳಾ ಆಯೋಗದ ಅಧ್ಯಕ್ಷೆ

Koratagere News: ಕೊರಟಗೆರೆ ತಾಲೂಕಿನ ತೋವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಸಾಡಿಹಟ್ಟಿ ಗ್ರಾಮದಲ್ಲಿ ಸೋಮವಾರ ಮೌಢ್ಯಾಚರಣೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.

VISTARANEWS.COM


on

Womens Commission president Dr Nagalakshmi Chaudhary visit bisaadihatti village
Koo

ಕೊರಟಗೆರೆ: ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಮೂಲಸೌಕರ್ಯಗಳನ್ನು ಒದಗಿಸುವುದು ಮೊದಲ ಆದ್ಯತೆಯಾಗಿದೆ. ಹೆಣ್ಣು ಮಕ್ಕಳು ವಿದ್ಯಾವಂತರಾಗಿ, ಆರೋಗ್ಯವಂತರಾಗಿ ಮೌಢ್ಯರಹಿತ ಸಮಾಜದಲ್ಲಿ ಸಂತೋಷದಿಂದ ಬದುಕಬೇಕು ಎಂಬುದೇ ಆಯೋಗದ ಆಶಯವಾಗಿದೆ. ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ (Koratagere News) ತಿಳಿಸಿದರು.

ತಾಲೂಕಿನ ತೋವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಸಾಡಿಹಟ್ಟಿ ಗ್ರಾಮದಲ್ಲಿ ಸೋಮವಾರ ಮೌಢ್ಯಾಚರಣೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಹಿಳೆಯರಿಗೆ ಕುಡಿಯುವ ನೀರು ಮತ್ತು ಶೌಚಾಲಯ ಅತಿ ಮುಖ್ಯ. ಶುದ್ಧ ಕುಡಿಯುವ ನೀರು ಮತ್ತು ಸ್ವಚ್ಛ ಶೌಚಾಲಯದ ವ್ಯವಸ್ಥೆಯಿದ್ದಲ್ಲಿ ಗ್ರಾಮೀಣ ಭಾಗದ ಮಹಿಳೆಯರು ನೆಮ್ಮದಿಯಿಂದ ಇರಲು ಸಾಧ್ಯ ಎಂದು ಹೇಳಿದರು.

ಇದನ್ನೂ ಓದಿ: Parliament Session 2024: ಜೂನ್‌ 24ರಿಂದ ಸಂಸತ್‌ ವಿಶೇಷ ಅಧಿವೇಶನ; ಸ್ಪೀಕರ್‌ ಆಯ್ಕೆ ಸೇರಿ ಏನೆಲ್ಲ ತೀರ್ಮಾನ?

ರಾಜ್ಯ ಸರ್ಕಾರವು ಬಾಣಂತಿ ಮತ್ತು ಮಗುವಿಗಾಗಿ, ಕೃಷ್ಣ ಕುಟೀರ ನಿರ್ಮಿಸಿದ್ದು .ಈ ಕುಟೀರದಲ್ಲಿ ಬಾಣಂತಿಯರಿಗೆ ಅಗತ್ಯವಾದ ಬಿಸಿನೀರು, ಶುದ್ಧ ಕುಡಿಯುವ ನೀರು ಮತ್ತು ಇತರೆ ಮೂಲ ಸೌಕರ್ಯಗಳು ಹೆಚ್ಚು ಹೆಚ್ಚು ದೊರೆಯಬೇಕು, ಈ ವಿಷಯವನ್ನು ತಾವು ಸರ್ಕಾರದ ಗಮನಕ್ಕೆ ತರುವುದಾಗಿ ಅವರು ತಿಳಿಸಿದರು.

ಮನೆಯಲ್ಲಿ ದೌರ್ಜನ್ಯ ನಡೆದ ಸಂದರ್ಭ ಹೆಣ್ಣು ಮಕ್ಕಳು 112 ಸಹಾಯವಾಣಿಗೆ ಕರೆ ಮಾಡಬೇಕು. ಆಗ ತಕ್ಷಣ ಪೊಲೀಸರ ಪ್ರವೇಶವಾಗುವುದು. ಠಾಣೆಯಲ್ಲಿ ಹೆಣ್ಣು ಮಕ್ಕಳನ್ನು ಸರಿಯಾಗಿ ನಡೆಸಿಕೊಳ್ಳದಿದ್ದಲ್ಲಿ ಅಥವಾ ಸ್ಪಂದಿಸದಿದ್ದಲ್ಲಿ ಮಹಿಳಾ ಆಯೋಗವನ್ನು ಸಂಪರ್ಕಿಸಬಹುದು. ಮಹಿಳೆಯರು ಯಾವುದೇ ಸಂದರ್ಭದಲ್ಲೂ ಸಹ ಸಮಸ್ಯೆ ಉಂಟಾದಲ್ಲಿ ತಮಗೆ ಮೆಸೇಜ್ ಮಾಡುವ ಮೂಲಕ ಅಥವಾ ವಾಟ್ಸಪ್ ಮೂಲಕ ಧೈರ್ಯವಾಗಿ ಸಂಪರ್ಕಿಸಬಹುದಾಗಿರುತ್ತದೆ ಎಂದರು.

ಗ್ರಾಮೀಣ ಪ್ರದೇಶದ ಬಹುತೇಕ ಬಡ ಹೆಣ್ಣು ಮಕ್ಕಳು ವಾಸಿಸುವ ಮನೆಗಳು ಸೋರುತ್ತವೆ, ಯಾವಾಗ ಬಿದ್ದು ಹೋಗುತ್ತವೆ ತಿಳಿಯುವುದಿಲ್ಲ. ಆದುದರಿಂದ ಮೊದಲಿಗೆ ಅರ್ಹ ಮಹಿಳಾ ಫಲಾನುಭವಿಗಳಿಗೆ ವಸತಿ ವ್ಯವಸ್ಥೆಯಾಗಬೇಕು. ಶುದ್ಧ ಕುಡಿಯುವ ನೀರು ಉತ್ತಮ ರಸ್ತೆ, ವಿದ್ಯುತ್‌ ಕಂಬಗಳು ಮುಂತಾದ ಮೂಲ ಸೌಕರ್ಯಗಳನ್ನು ಅಧಿಕಾರಿಗಳು ಕಲ್ಪಿಸಿ ಕೊಡಬೇಕು ಎಂದು ತಿಳಿಸಿದರು.

ಬಿಸಾಡಿಹಟ್ಟಿ ದತ್ತು

ಬಿಸಾಡಿ ಹಟ್ಟಿಯ ಹೆಣ್ಣು ಮಕ್ಕಳಿಗೆ ಮೂಲಸೌಕರ್ಯ ಒದಗಿಸಿ ಅವರನ್ನು ಮೌಢ್ಯಾಚರಣೆಗಳಿಂದ ಹೊರತರುವ ನಿಟ್ಟಿನಲ್ಲಿ ದತ್ತು ಪಡೆಯುವುದಾಗಿ ಘೋಷಿಸಿದರು. ಇದಕ್ಕೂ ಮುನ್ನ ಹಟ್ಟಿಯ ಕೃಷ್ಣ ಕುಟೀರದಲ್ಲಿ ಇದ್ದಂತಹ ಬಾಣಂತಿ ಮಕ್ಕಳನ್ನು ಭೇಟಿಯಾದ ಅವರು, ಅಲ್ಲಿ ಒದಗಿಸಲಾಗಿರುತ್ತಿರುವ ಮೂಲ ಸೌಕರ್ಯ ಮುಂತಾದ ವ್ಯವಸ್ಥೆಯನ್ನು ಪರಿಶೀಲಿಸಿದರು.

ಇದನ್ನೂ ಓದಿ: Gold Rate Today: ಚಿನ್ನದ ದರದಲ್ಲಿ ತುಸು ಇಳಿಕೆ; ಇಷ್ಟಿದೆ ಇಂದಿನ ಬೆಲೆ

ಈ ಸಂದರ್ಭದಲ್ಲಿ ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಶ್ರೀಧರ್, ಇಒ ಅಪೂರ್ವ , ತಹಸೀಲ್ದಾರ್ ಮಂಜುನಾಥ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

ಬೆಂಗಳೂರು

Electric Airport Taxi : ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಇನ್ಮುಂದೆ ಮಹಿಳೆಯರಿಗಾಗಿ ಗುಲಾಬಿ ಟ್ಯಾಕ್ಸಿ

Electric Airport Taxi : ಪರಿಸರಕ್ಕೆ ಪೂರಕವಾಗುವ ದೃಷ್ಟಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲೆಕ್ಟ್ರಿಕ್‌ ಏರ್‌ಪೋರ್ಟ್‌ ಟ್ಯಾಕ್ಸಿಗಳಿಗೆ ಚಾಲನೆ ನೀಡಲಾಗಿದೆ. ಎರಡು ಬಣ್ಣದ ಟ್ಯಾಕ್ಸಿಗಳಲ್ಲಿ ಒಂದು ಗುಲಾಬಿ ಟ್ಯಾಕ್ಸಿಯು ವಿಶೇಷವಾಗಿ ಮಹಿಳೆಯರಿಗಾಗಿಯೇ ಮೀಸಲಿಡಲಾಗಿದೆ. ಈ ಟ್ಯಾಕ್ಸಿಗಳನ್ನು ಮಹಿಳಾ ಚಾಲಕಿಯರೇ ಚಲಾಯಿಸಲಿದ್ದಾರೆ.

VISTARANEWS.COM


on

By

Electric airport taxis introduced at Kempegowda International Airport
Koo

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (BLR ವಿಮಾನ ನಿಲ್ದಾಣ) ರಿಫೆಕ್ಸ್‌ ಇವೀಲ್ಜ್‌ (Refex eVeelz) ಸಹಯೋಹದೊಂದಿಗೆ ಈ ಬಾರಿ ವಿಶ್ವ ಪರಿಸರ ದಿನದ ಪ್ರಯುಕ್ತ ನೂತನವಾಗಿ ಎಲೆಕ್ಟ್ರಿಕ್‌ ಏರ್‌ಪೋರ್ಟ್‌ ಟ್ಯಾಕ್ಸಿಗಳನ್ನು (Electric Airport Taxi) ಪರಿಚಯಿಸಲಾಗಿದೆ.

ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಒಟ್ಟು 75 ಕಾಂಪ್ಯಾಕ್ಟ್‌ SUV ಎಲೆಕ್ಟ್ರಿಕ್‌ ಟ್ಯಾಕ್ಸಿಗಳಿಗೆ ವಿಮಾನ ನಿಲ್ದಾಣದ ಆವರಣದಲ್ಲಿ ಬಿಐಎಎಲ್‌ನ ಸಿಇಒ ಹರಿ ಮರಾರ್, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಪ್ರಧಾನ ಕಾರ್ಯದರ್ಶಿ ರವಿ ಬಿ.ಪಿ. ಚಾಲನೆ ನೀಡಿದರು.

ಬಳಿಕ ಮಾತನಾಡಿದ ಬಿಐಎಎಲ್‌ನ ಸಿಇಒ ಹರಿ ಮರಾರ್, ಏರ್‌ಪೋರ್ಟ್‌ನಲ್ಲಿ ಪರಿಸರಯುಕ್ತ ವಾತಾವರಣ ನಿರ್ಮಾಣ ಮಾಡಲು ಈ ಪರಿಸರ ದಿನದಂದೇ ಬಹುತೇಕ ಇಂಧನಯುಕ್ತ ಟ್ಯಾಕ್ಸಿಗಳನ್ನು ಎಲೆಕ್ಟ್ರಿಕ್‌ ಟ್ಯಾಕ್ಸಿಗಳಾಗಿ ಪರಿವರ್ತಿಸಲಾಗಿದೆ. ಇದೀಗ 75 ಕಾಂಪ್ಯಾಕ್ಟ್‌ SUV ಎಲೆಕ್ಟ್ರಿಕ್‌ ಟ್ಯಾಕ್ಸಿಗಳು ಸೇರಿದಂತೆ ಶೇ.50 ಟ್ಯಾಕ್ಸಿಗಳು ಎಲೆಕ್ಟ್ರಿಕ್‌ ವಾಹನಗಳಾಗಿ ಪರಿವರ್ತಿಸಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲಿದ್ದೇವೆ ಎಂದರು.

ರಿಫೆಕ್ಸ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಜೈನ್ ಮಾತನಾಡಿ, ರಿಫೆಕ್ಸ್‌ನ ಗ್ರೀನ್, ರಿಫೆಕ್ಸ್ ಇವೀಲ಼್ ಮೂಲಕ ಏರ್‌ಪೋರ್ಟ್‌ನಲ್ಲಿ ಇವಿ ಟ್ಯಾಕ್ಸಿ ಒದಗಿಸುವ ಅವಕಾಶ ನಮಗೆ ದೊರೆತಿದೆ. ಈ ನೂತನ EV ಏರ್‌ಪೋರ್ಟ್‌ ಟ್ಯಾಕ್ಸಿಗಳನ್ನು ಪ್ರಯಾಣಿಕರು ಸುಲಭವಾಗಿ ಬುಕ್ ಮಾಡಬಹುದು. ವಿಮಾನ ನಿಲ್ದಾಣದ ಟ್ಯಾಕ್ಸಿ ನಿಲ್ದಾಣಗಳ ಎರಡೂ ಟರ್ಮಿನಲ್‌ಗಳಲ್ಲಿ ಹಾಗೂ ಬಳಕೆದಾರ ಸ್ನೇಹಿ BLR ಪಲ್ಸ್ ಮೊಬೈಲ್ ಅಪ್ಲಿಕೇಶನ್ ಮೂಲಕವೂ ಬುಕ್‌ ಮಾಡಬಹುದು.

Electric airport taxi

ಇದನ್ನೂ ಓದಿ: Aishwarya Arjun: ಅರ್ಜುನ್ ಸರ್ಜಾ ಪುತ್ರಿ ವಿವಾಹ; ಅದ್ಧೂರಿಯಾಗಿ ನಡೆಯಲಿದೆ ಆರತಕ್ಷತೆ ಕಾರ್ಯಕ್ರಮ

ಮಹಿಳೆಯರಿಗಾಗಿ ಗುಲಾಬಿ ಟ್ಯಾಕ್ಸಿ

ಇನ್ನು, ಮರುವಿನ್ಯಾಸಗೊಳಿಸಲಾದ EV ಟ್ಯಾಕ್ಸಿಗಳು ತಿಳಿನೀಲಿ ಬಣ್ಣ ಹಾಗೂ ಗುಲಾಬಿ ಬಣ್ಣ ಈ ಎರಡು ವಿಶಿಷ್ಟ ಬಣ್ಣಗಳಲ್ಲಿ ಇರಲಿವೆ. ತಿಳಿನೀಲಿ ಬಣ್ಣದ ಎಲೆಕ್ಟ್ರಿಕ್‌ ಟ್ಯಾಕ್ಸಿಗಳು ಎಲ್ಲರೂ ಬಳಸಬಹುದಾಗಿದ್ದು, ಈ ಬಣ್ಣವು ಸುಸ್ಥಿರತೆಯನ್ನು ಒತ್ತಿ ಹೇಳುತ್ತದೆ. ಇನ್ನು, ಗುಲಾಬಿ ಬಣ್ಣದ ಎಲೆಕ್ಟ್ರಿಕ್‌ ಟ್ಯಾಕ್ಸಿಗಳು ಮಹಿಳೆಯರಿಗಾಗಿ ಮೀಸಲಿಟ್ಟಿದ್ದು, ಈ ಟ್ಯಾಕ್ಸಿಗಳನ್ನು ಮಹಿಳಾ ಚಾಲಕಿಯರೇ ಚಲಾಯಿಸಲಿರುವುದು ವಿಶೇಷವಾಗಿದೆ.

Electric airport taxi

ತುರ್ತು ಸಂಪರ್ಕಕ್ಕೆ ಪಿಂಕ್‌ ಕಾರ್ಡ್‌

ಇನ್ನು, ಪ್ರತಿ ಪ್ರಯಾಣಿಕರಿಗೆ ಡ್ಯೂಟಿ ಮ್ಯಾನೇಜರ್, ಸ್ಥಳೀಯ ಪೊಲೀಸ್ ಮತ್ತು ಆಂಬ್ಯುಲೆನ್ಸ್ ಸೇವೆಗಳಿಗೆ ತುರ್ತು ಸಂಪರ್ಕ ಸಂಖ್ಯೆಗಳನ್ನು ಒಳಗೊಂಡಿರುವ ಪೂರಕ “ಪಿಂಕ್ ಕಾರ್ಡ್” ಅನ್ನು ಸಹ ಒದಗಿಸಲಾಗುತ್ತದೆ. ಇದರಿಂದ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಹೆಚ್ಚಿಸಿದಂತಾಗಿದೆ. ಅರೆ-ರೊಬೊಟಿಕ್ ವಿಮಾನ ಟೋಯಿಂಗ್ ವಾಹನಗಳು ಮತ್ತು EV ವಾಹನಗಳನ್ನು ಏರ್‌ಸೈಡ್ ಮತ್ತು ಲ್ಯಾಂಡ್‌ಸೈಡ್ ಎರಡೂ ಕಡೆಯಲ್ಲೂ ಅನುಷ್ಠಾನಗೊಳಿಸಲಾಗಿದೆ. ಹೀಗಾಗಿ BLR ಏರ್‌ಪೋರ್ಟ್‌ನಲ್ಲಿರುವ ಎಲ್ಲಾ ವಾಹನಗಳನ್ನು ಸಮರ್ಥನೀಯ ಆಯ್ಕೆಗಳಿಗೆ ಪರಿವರ್ತಿಸುವ ದೀರ್ಘಾವಧಿಯ ದೃಷ್ಟಿಯೊಂದಿಗೆ BIAL ಹೊಂದಾಣಿಕೆಯನ್ನು ಮುಂದುವರೆಸಿದೆ. ಕಾರ್ಯಕ್ರಮದಲ್ಲಿ ವಿಶ್ವ ಪರಿಸರ ದಿನದ ನೆನಪಿನಾರ್ಹ, ವಿಮಾನ ನಿಲ್ದಾಣದ ಕ್ಯಾಂಪಸ್‌ನಲ್ಲಿ 100 ಸಸಿಗಳನ್ನು ನೆಡಲಾಯಿತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆರೋಗ್ಯ

Vijayanagara News: ಹೊಸಪೇಟೆಯಲ್ಲಿ ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ

Vijayanagara News: ಹೊಸಪೇಟೆ ನಗರದ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮ ಜರುಗಿತು.

VISTARANEWS.COM


on

World Menstrual Hygiene Day in Hosapete
Koo

ಹೊಸಪೇಟೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಗರದ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಮಂಗಳವಾರ ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮ (Vijayanagara News) ಜರುಗಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಂಕರ್ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, 11 ರಿಂದ 14 ವರ್ಷದ ಹೆಣ್ಣುಮಕ್ಕಳಲ್ಲಿ ಪ್ರಾರಂಭವಾಗುವ ಋತುಚಕ್ರದ ಕುರಿತು ಪ್ರತಿಯೊಬ್ಬ ಕಿಶೋರಿಯಿಂದ ಹಿಡಿದು ಎಲ್ಲ ಮಹಿಳೆಯರು ಜಾಗೃತಿ ಹೊಂದಬೇಕು.

ಋತುಸ್ರಾವವಾದಾಗ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಹೊಸದಾದ ಘೋಷಣೆಯೊಂದಿಗೆ ತಿಳಿಸುವ ವಿಶ್ವ ಋತುಚಕ್ರದ ನೈರ್ಮಲ್ಯ ದಿನದ ಮಹತ್ವವನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ಸಲಹೆ ಮಾಡಿದರು.

ಇದನ್ನೂ ಓದಿ: Credit Card Safety Tips: ಕ್ರೆಡಿಟ್‌ ಕಾರ್ಡ್ ವಂಚನೆಯಿಂದ ಪಾರಾಗಲು ಇಲ್ಲಿದೆ 9 ಸಲಹೆ

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ ಮಾತನಾಡಿ, ಪ್ರತಿಯೊಬ್ಬ ಪ್ರಜೆ ಋತುಚಕ್ರದ ಕುರಿತು ಅರಿವು ಪಡೆದು ಜ್ಞಾನವಂತರಾಗಬೇಕು. ಮೂಢನಂಬಿಕೆಯನ್ನು ಹೋಗಲಾಡಿಸಬೇಕು. ಕಿಶೋರಿಯರು ಮತ್ತು ಮಹಿಳೆಯರು ಋತುಸ್ರಾವ ಉಂಟಾದಾಗ ವೈಯಕ್ತಿಕ ಕಾಳಜಿ, ಸಂತಾನೋತ್ಪತ್ತಿ, ಪೌಷ್ಟಿಕ ಆಹಾರದ ಸೇವನೆಯ ಬಗ್ಗೆ ತಿಳುವಳಿಕೆ ಹೊಂದಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಡಿಎಂಒ ಕಾರ್ಯಕ್ರಮದ ಅಧಿಕಾರಿ ಡಾ. ಕಮಲಮ್ಮ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಋತುಚಕ್ರ ಅಥವಾ ಋತುಸ್ರಾವ ಎಂದರೆ ಹದಿಹರೆಯದ ಹೆಣ್ಣುಮಕ್ಕಳು ಪ್ರೌಢಾವಸ್ಥೆ ತಲುಪುವ ಹಂತವಾಗಿದೆ. ಈ ಸಂದರ್ಭದಲ್ಲಿ ಮಹಿಳೆಯರು ಪೌಷ್ಠಿಕ ಆಹಾರ ಸೇವನೆ ಮಾಡಬೇಕು. ಋತುಸ್ರಾವ ಉಂಟಾದಾಗ ಹಳೆಯದಾದ ಉಪಯೋಗಿಸಿದ ಬಟ್ಟೆಗಳನ್ನು ಬಳಸಬಾರದು. ವಿಶೇಷವಾಗಿ ಋತುಚಕ್ರದ ಶುಚಿತ್ವ ನಿರ್ವಹಣೆಯ ಬಗ್ಗೆ ಗ್ರಾಮೀಣ ಭಾಗದ ಮಹಿಳೆಯರು ಹೆಚ್ಚಿನ ತಿಳುವಳಿಕೆ ಹೊಂದಬೇಕಿದೆ ಎಂದು ಸಲಹೆ ನೀಡಿದರು.

ಆರ್‌ಬಿಎಸ್‌ಕೆ ವೈದ್ಯಾಧಿಕಾರಿ ಡಾ.ಆಶಾ, ಮುಟ್ಟಿನ ನೈರ್ಮಲ್ಯ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ಆರ್‌ಸಿಎಚ್ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ, ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು, ತುಂಗಭದ್ರಾ ಸ್ಕೂಲ್ ಆಫ್ ನರ್ಸಿಂಗ್ ಹೋಂನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.

ಇದನ್ನೂ ಓದಿ: Child Trafficking Racket: ಅಂತಾರಾಜ್ಯ ಮಕ್ಕಳ ಕಳ್ಳಸಾಗಣೆ ದಂಧೆ ಪತ್ತೆ; 11 ಮಕ್ಕಳ ರಕ್ಷಣೆ

ಕಾರ್ಯಕ್ರಮದಲ್ಲಿ ಎಲ್ಲರಿಗೂ ಮುಟ್ಟಿನ ನೈರ್ಮಲ್ಯದ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ ಪ್ರಾಸಾವಿಕ ಮಾತನಾಡಿದರು. ಧರ್ಮನಗೌಡ ವಂದಿಸಿದರು.

Continue Reading
Advertisement
Karnataka Weather
ಕರ್ನಾಟಕ5 mins ago

Karnataka Weather: ಇಂದು ಹಾಸನ, ಕೊಡಗು, ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ

David Warner
ಪ್ರಮುಖ ಸುದ್ದಿ35 mins ago

David Warner : ವಿಶ್ವ ಕಪ್​ನಿಂದ ಹೊರಬಿದ್ದ ಬೇಸರ; ಬಿಯರ್ ಕುಡಿತಾ ಕುಳಿತ ಆಸ್ಟ್ರೇಲಿಯಾದ ಆಟಗಾರರು

Fatty Lever Disease
ಆರೋಗ್ಯ35 mins ago

Fatty Lever Disease: ಎಚ್ಚರ ವಹಿಸಿ, ಮಕ್ಕಳನ್ನು ಸದ್ದಿಲ್ಲದೆ ಕಾಡುತ್ತಿದೆ ಫ್ಯಾಟಿ ಲಿವರ್‌ ಕಾಯಿಲೆ!

Karnataka Milk Federation
ಪ್ರಮುಖ ಸುದ್ದಿ2 hours ago

ವಿಸ್ತಾರ ಸಂಪಾದಕೀಯ: ಹಾಲು ದರ ಏರಿಕೆ ಬಳಕೆದಾರನಿಗೆ ಹೊರೆಯಾಗದಿರಲಿ

Dina Bhavishya
ಭವಿಷ್ಯ2 hours ago

Dina Bhavishya: ಈ ರಾಶಿಯವರಿಗೆ ದೀರ್ಘಕಾಲದ ಪ್ರಯತ್ನ ಇಂದು ಯಶಸ್ಸು ತಂದುಕೊಡಲಿದೆ

Women's Asia Cup
ಪ್ರಮುಖ ಸುದ್ದಿ7 hours ago

Women’s Asia Cup 2024 : ಮಹಿಳೆಯರ ಏಷ್ಯಾ ಕಪ್​ ಕ್ರಿಕೆಟ್​ನ ವೇಳಾಪಟ್ಟಿ ಬಿಡುಗಡೆ, ಜುಲೈ 19ಕ್ಕೆ ಭಾರತ- ಪಾಕ್ ಪಂದ್ಯ

minister mb patil visit japan and discuss about investment in Karnataka
ಕರ್ನಾಟಕ7 hours ago

Foreign Investment: 100 ಕೋಟಿ ರೂ. ವೆಚ್ಚದ ತ್ಯಾಜ್ಯ ನೀರು ನಿರ್ವಹಣಾ ಉಪಕರಣಗಳ ತಯಾರಿಕಾ ಘಟಕ ಸ್ಥಾಪನೆಗೆ ಒಪ್ಪಂದ

Arvind Kejriwal
ಪ್ರಮುಖ ಸುದ್ದಿ8 hours ago

Arvind Kejriwal : ಜಾಮೀನು ಅರ್ಜಿ ವಿಚಾರಣೆಗೂ ಮುನ್ನ ಅರವಿಂದ್ ಕೇಜ್ರಿವಾಲ್ ಬಂಧಿಸಿದ ಸಿಬಿಐ

Kodagu News
ಕೊಡಗು8 hours ago

Kodagu News: ಕಳೆದುಕೊಂಡಿದ್ದ ಚಿನ್ನದ ನಾಣ್ಯ ವಾರಸುದಾರನ ಕೈ ಸೇರುವಂತೆ ಮಾಡಿದ ಪೊಲೀಸರು!

Lok Sabha Speaker
ಪ್ರಮುಖ ಸುದ್ದಿ8 hours ago

Lok Sabha Speaker : ಸ್ಪೀಕರ್​ ಚುನಾವಣೆಯಲ್ಲಿ ವೈಎಸ್​ಆರ್​ ಪಕ್ಷದಿಂದ ಬಿಜೆಪಿಗೆ ಬೆಂಬಲ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ1 day ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ4 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌