ISIS terror | ಭಾರತದ ಯುವಕರಿಗೆ ತರಬೇತಿ ನೀಡುತ್ತಿದ್ದ ಐಸಿಸ್‌ ಉಗ್ರ ವಾರಾಣಸಿಯಲ್ಲಿ ಬಂಧನ - Vistara News

ದೇಶ

ISIS terror | ಭಾರತದ ಯುವಕರಿಗೆ ತರಬೇತಿ ನೀಡುತ್ತಿದ್ದ ಐಸಿಸ್‌ ಉಗ್ರ ವಾರಾಣಸಿಯಲ್ಲಿ ಬಂಧನ

ಐಸಿಸ್‌ ಉಗ್ರನೊಬ್ಬನನ್ನು ವಾರಾಣಸಿಯಲ್ಲಿ ಬಂಧಿಸಲಾಗಿದ್ದು, ಇಸ್ಲಾಮಿಕ್‌ ಸ್ಟೇಟ್‌ನ ಬೇರುಗಳು ಭಾರತದಾದ್ಯಂತ ವ್ಯಾಪಕವಾಗಿ ಚಾಚಿವೆ ಎಂಬುದು ಖಚಿತವಾಗಿದೆ.

VISTARANEWS.COM


on

NIA Arrests Student Over ISS Links
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಇಸ್ಲಾಮಿಕ್‌ ಉಗ್ರಗಾಮಿ ಸಂಘಟನೆ ಐಸಿಸ್‌ ಭಾರತದಲ್ಲಿ ತೀವ್ರ ಕಾರ್ಯಾಚರಣೆ ನಡೆಸುತ್ತಿದೆ ಎಂಬುದಕ್ಕೆ ಇನ್ನೊಂದು ಪುರಾವೆ ಸಿಕ್ಕಿದೆ. ವಾರಾಣಸಿ ಹಾಗೂ ದೆಹಲಿಯಲ್ಲಿ ರೈಡ್‌ ನಡೆಸಿದ ಸಂದರ್ಭದಲ್ಲಿ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಸದಸ್ಯರು ಐಸಿಸ್‌ನ ತೀವ್ರವಾದಿಯೊಬ್ಬನನ್ನು ಹಿಡಿದಿದ್ದಾರೆ.

ಬಸಿತ್‌ ಕಲಾಮ್‌ ಸಿದ್ದಿಕಿ (24) ಹೆಸರಿನ ಈತ ಐಸಿಸ್‌ನ ʼವಾಯಿಸ್‌ ಆಫ್‌ ಹಿಂದ್‌ʼ ಘಟಕದ ಕಾರ್ಯಕರ್ತ ಎಂಬುದು ತಿಳಿದುಬಂದಿದೆ. ಸರ್ಕಾರದ ವಿರುದ್ಧ ಷಡ್ಯಂತ್ರ ರಚಿಸಿ ಉಗ್ರಗಾಮಿ ಕಾರ್ಯಾಚರಣೆಗಳ ಮೂಲಕ ಅದನ್ನು ಸಾಧಿಸುವುದು, ಮುಸ್ಲಿಂ ಯುವಕರ ಬ್ರೈನ್‌ವಾಶ್‌ ಮಾಡಿ ಅವರನ್ನು ತೀವ್ರವಾದಿಗಳನ್ನಾಗಿ ಪರಿವರ್ತಿಸುವುದು ಈತನ ಕಾರ್ಯವೈಖರಿಯಾಗಿತ್ತು.

ಟೆಲಿಗ್ರಾಮ್‌ನಲ್ಲಿ ಹಲವು ತೀವ್ರವಾದಿ ಸಂಘಟನೆಗಳನ್ನು ಒಟ್ಟುಗೂಡಿಸಿ ಉಗ್ರ ಕಾರ್ಯಾಚರಣೆ ನೀಡಿದ ಆರೋಪದಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದಾನೆ. ಐಸಿಸ್‌ನ ಅಂತಾರಾಷ್ಟ್ರೀಯ ಸಂಘಟನೆಯ ಮುಖಂಡರೊಂದಿಗೆ ಈತ ಸಂಪರ್ಕದಲ್ಲಿದ್ದು, ಅದರ ಮುಖವಾಣಿಯಾದ ʼವಾಯಿಸ್‌ ಆಫ್‌ ಖುರಾಸಾನ್‌ʼಗೆ ಕಂಟೆಂಟ್‌ ಸೃಷ್ಟಿಸುವ, ಬರೆಯುವ, ಪ್ರಚಾರ ಮಾಡುವ ಕಾರ್ಯದಲ್ಲೂ ತೊಡಗಿಕೊಂಡಿದ್ದ.

ಆಫ್ಘಾನಿಸ್ತಾನದಿಂದ ಈತನಿಗೆ ಉಗ್ರ ಚಟುವಟಿಕೆಯ ನಿರ್ದೇಶನ ದೊರೆಯುತ್ತಿತ್ತು. ಭಾರತದಲ್ಲಿ ಈತ ಸುಧಾರಿತ ಸ್ಫೋಟಕ ಸಾಧನಗಳನ್ನು ತಯಾರಿಸಲು ಯುವಕರಿಗೆ ತರಬೇತಿ ನೀಡುತ್ತಿದ್ದ. ʼಬ್ಲ್ಯಾಕ್‌ ಪೌಡರ್‌ʼ ಹೆಸರಿನ ಸುಧಾರಿತ ಸ್ಫೋಟಕ ಸಾಮಗ್ರಿಯನ್ನು ಈತ ತಯಾರಿಸಿದ್ದು, ವಾಹನಗಳಲ್ಲಿ ಅಳವಡಿಸಿ ಸ್ಫೋಟಕ್ಕೆ ಮುಂದಾಗಿದ್ದ ಎಂಬುದು ಕೂಡ ಬಯಲಾಗಿದೆ.

ಬಾಂಬ್‌ ಸ್ಫೋಟಗಳ ಮೂಲಕ ನಾಗರಿಕರಲ್ಲಿ ಭೀತಿ ಮೂಡಿಸುವುದು, ಸರ್ಕಾರಿ ಸಂಸ್ಥೆಗಳಲ್ಲಿ ದಾಳಿ ನಡೆಸಿ ಕಂಗೆಡಿಸುವುದು ಈತನ ಗುರಿಯಾಗಿತ್ತು. ಈ ಕುರಿತು ಆತನಿಂದ ವಶಪಡಿಸಿಕೊಂಡ ಲ್ಯಾಪ್‌ಟಾಪ್‌, ಪೆನ್‌ಡ್ರೈವ್‌, ಮೊಬೈಲ್‌ ಇತ್ಯಾದಿಗಳಲ್ಲಿ ಸಾಕ್ಷ್ಯ ಲಭ್ಯವಾಗಿವೆ.‌

ಇದನ್ನೂ ಓದಿ | Shivamogga terror | ಶಿವಮೊಗ್ಗದಲ್ಲೂ ಬಾಂಬ್‌ ಸ್ಫೋಟಕ್ಕೆ ಸಂಚು ನಡೆಸಿದ್ದ ಐಸಿಸ್‌ ಉಗ್ರ ಮತೀನ್‌

ಐಸಿಸ್‌ ಹಲವಾರು ಸಾಮಾಜಿಕ ಜಾಲತಾಣಗಳನ್ನು ಉಗ್ರ ತರಬೇತಿಗಾಗಿ ಬಳಸಿಕೊಳ್ಳುತ್ತಿರುವುದು ಕಂಡುಬಂದಿದ್ದು, ಈ ಬಗ್ಗೆ ಸೈಬರ್‌ ಅಪರಾಧ ದಳದ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ. ದಕ್ಷಿಣ ಭಾರತದ ತೆಲಂಗಾಣ, ಕೇರಳ, ತಮಿಳುನಾಡು, ಕರ್ನಾಟಕಗಳಲ್ಲಿ ಐಸಿಸ್‌ನ ತರಬೇತಿ ಮಾದರಿಗಳು ಎನ್‌ಐಎ ಅಧಿಕಾರಿಗಳಿಗೆ ಲಭ್ಯವಾಗಿದ್ದವು. 100ಕ್ಕೂ ಹೆಚ್ಚು ಇಸ್ಲಾಮಿಕ್‌ ಉಗ್ರರನ್ನು ಬಂಧಿಸಲಾಗಿತ್ತು. ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ, ರಾಜಸ್ಥಾನ, ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶ, ಜಮ್ಮು ಕಾಶ್ಮೀರಗಳಲ್ಲಿ ಐಸಿಸ್‌ ಅತ್ಯಂತ ಸಕ್ರಿಯವಾಗಿದೆ ಎಂದು ಎನ್‌ಐಎ ತಿಳಿಸಿದೆ.

ಇದನ್ನೂ ಓದಿ | Shivamogga terror | ಎಂಥಾ ಅಪ್ಪನಿಗೆ ಎಂಥಾ ಮಗ: ಐಸಿಸ್‌ ಉಗ್ರ ಮತೀನ್‌ನ ತಂದೆ 26 ವರ್ಷ ಸೇನೆಯಲ್ಲಿದ್ದರು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Parliament Sessions: ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಸದನ; ಶೇಕ್‌ ಹ್ಯಾಂಡ್‌ ಮಾಡಿದ ಪ್ರಧಾನಿ ಮೋದಿ, ರಾಹುಲ್‌

Parliament Sessions: ಓಂ ಬಿರ್ಲಾ ಅವರು ಸ್ಪೀಕರ್‌ ಆಗಿ ಚುನಾಯಿತರಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿಪಕ್ಷ ನಾಯಕರ ರಾಹುಲ್‌ ಗಾಂಧಿ ತಮ್ಮ ತಮ್ಮ ಸ್ಥಾನಗಳಿಂದ ಎದ್ದು ಬಂದು ಓಂ ಬಿರ್ಲಾ ಅವರನ್ನು ಸ್ವಾಗತಿಸಿದರು. ಈ ವೇಳೆ ಪರಸ್ಪರ ಶೇಕ್‌ ಹ್ಯಾಂಡ್‌ ಮಾಡಿಕೊಂಡರು. ಬಳಿಕ ಓಂ ಬಿರ್ಲಾ ಅವರನ್ನು ಅವರ ಸೀಟ್‌ವರೆಗೆ ಕರೆದೊಯ್ದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

VISTARANEWS.COM


on

Parliament Sessions
Koo

ನವದೆಹಲಿ: 18ನೇ ಲೋಕಸಭೆಯ ಮೊದಲ ಅಧಿವೇಶನ(Parliament Sessions)ದ ಮೂರನೇ ದಿನವಾದ ಇಂದು ಹಲವು ಮಹತ್ವದ ಘಟನೆಗಳಿಗೆ ಸಾಕ್ಷಿಯಾಯಿತು. ಇಂದು ಸ್ಪೀಕರ್‌ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಓಂ ಬಿರ್ಲಾ(Om Birla) ಅವರು ಎರಡನೇ ಬಾರಿ ಲೋಕಸಭೆಯ ಸ್ಪೀಕರ್‌ ಆಗಿ ಚುನಾಯಿತರಾಗಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಮತ್ತು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಪರಸ್ಪರ ಹಸ್ತಾಲಾಘವ(Shake Hand) ಮಾಡಿದ ಅಪರೂಪದ ಕ್ಷಣಗಳಿಗೆ ಇಡೀ ಸದನವೇ ಸಾಕ್ಷಿ ಆಯಿತು.

ಓಂ ಬಿರ್ಲಾ ಅವರು ಸ್ಪೀಕರ್‌ ಆಗಿ ಚುನಾಯಿತರಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿಪಕ್ಷ ನಾಯಕರ ರಾಹುಲ್‌ ಗಾಂಧಿ ತಮ್ಮ ತಮ್ಮ ಸ್ಥಾನಗಳಿಂದ ಎದ್ದು ಬಂದು ಓಂ ಬಿರ್ಲಾ ಅವರನ್ನು ಸ್ವಾಗತಿಸಿದರು. ಈ ವೇಳೆ ಪರಸ್ಪರ ಶೇಕ್‌ ಹ್ಯಾಂಡ್‌ ಮಾಡಿಕೊಂಡರು. ಬಳಿಕ ಓಂ ಬಿರ್ಲಾ ಅವರನ್ನು ಅವರ ಸೀಟ್‌ವರೆಗೆ ಕರೆದೊಯ್ದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

18ನೇ ಲೋಕಸಭೆಯ ಸ್ಪೀಕರ್‌ ಯಾರಾಗುತ್ತಾರೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಎನ್‌ಡಿಎಯಿಂದ ಕಣಕ್ಕಿಳಿದ ಬಿಜೆಪಿ ಸಂಸದ ಓಂ ಬಿರ್ಲಾ (Om Birla) ಅವರು ಸ್ಪೀಕರ್‌ ಆಗಿ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ (Lok Sabha Speaker). ಸಾಮಾನ್ಯವಾಗಿ ಅವಿರೋಧವಾಗಿ ಸ್ಪೀಕರ್‌ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ಈ ಬಾರಿ ಆಡಳಿತ ರೂಢ ಎನ್‌ಡಿಎ ಮತ್ತು ಪ್ರತಿಪಕ್ಷಗಳ ಇಂಡಿ ಬಣದ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಹಲವು ದಶಕಗಳ ಬಳಿಕ ಚುನಾವಣೆ ನಡೆಸಲಾಯಿತು. ಇಂಡಿ ಬಣದಿಂದ ಕಾಂಗ್ರೆಸ್‌ ಸಂಸದ ಕೊಂಡಿಕುನಾಲ್ ಸುರೇಶ್ (Kondikunal Suresh) ಕಣಕ್ಕಿಳಿದಿದ್ದರು. ಭಾರೀ ಕುತೂಹಲ ಮೂಡಿಸಿದ್ದ ಈ ಐತಿಹಾಸಿಕ ಚುನಾವಣೆಯಲ್ಲಿ ಇದೀಗ ಓಂ ಬಿರ್ಲಾ ಗೆಲುವಿನ ನಗೆ ಬೀರಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ಸುಮಾರಿಗೆ ಆರಂಭವಾದ ಚುನಾವಣಾ ಪ್ರಕ್ರಿಯೆಯಲ್ಲಿ ಓಂ ಬಿರ್ಲಾ ಅವರು ಬಹುಮತಗಳನ್ನು ಪಡೆದುಕೊಂಡರು. ಓಂ ಬಿರ್ಲಾ ಅವರನ್ನು ಸ್ಪೀಕರ್‌ ಆಗಿ ಆಯ್ಕೆ ಮಾಡುವ ಪ್ರಸ್ತಾಪವನ್ನು ಪ್ರಧಾನಿ ನರೇಂದ್ರ ಮೋದಿ ಮಂಡಿಸಿದರು. ಬಳಿಕ ಹಲವು ನಾಯಕರು ಅನುಮೋದಿಸಿದರು. ಧ್ವನಿ ಮತದ ಮೂಲಕ ಸದಸ್ಯರು ಮತ ಚಲಾಯಿಸಿದರು. ಈ ಮೂಲಕ ಓಂ ಬಿರ್ಲಾ ಅವರು ಬಲರಾಮ್ ಜಖರ್ (1980-89) ನಂತರ ಎರಡು ಪೂರ್ಣ ಅವಧಿಗೆ ಆಯ್ಕೆಯಾದ ಎರಡನೇ ಸ್ಪೀಕರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಲೋಕಸಭೆಯ ಎರಡನೇ ಸ್ಪೀಕರ್ ಎಂ.ಎ.ಅಯ್ಯಂಗಾರ್ ಮತ್ತು ಗುರ್ದಿಯಾಲ್ ಸಿಂಗ್ ಧಿಲ್ಲಾನ್ ಈ ಹಿಂದೆ ಎರಡು ಬಾರಿ ಈ ಹುದ್ದೆಯನ್ನು ಆಯ್ಕೆಯಾಗಿದ್ದರೂ ಅವರ ಎರಡನೇ ಅವಧಿ ಒಂದೂವರೆ ವರ್ಷಕ್ಕಿಂತ ಹೆಚ್ಚು ಕಾಲ ಉಳಿದಿರಲಿಲ್ಲ. ಹಂಗಾಮಿ ಸ್ಪೀಕರ್‌ ಭಾರ್ತೃಹರಿ ಮಹತಾಬ್‌ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು

ಇದನ್ನೂ ಓದಿ:Life threat: ಹುಬ್ಬಳ್ಳಿ ಏರ್‌ಪೋರ್ಟ್‌ ನಿರ್ದೇಶಕರಿಗೆ ಜೀವ ಬೆದರಿಕೆ; ʼಲಾಂಗ್ ಲಿವ್ ಪ್ಯಾಲೆಸ್ತೀನ್ʼ ಮೇಲ್‌ ಐಡಿಯಿಂದ ಸಂದೇಶ

Continue Reading

ದೇಶ

Lok Sabha Speaker: ಎರಡನೇ ಬಾರಿ ಸ್ಪೀಕರ್‌ ಆದ ಓಂ ಬಿರ್ಲಾಗೆ ಮೋದಿ, ರಾಹುಲ್‌ ಅಭಿನಂದನೆ

Lok Sabha Speaker:ಇದೇ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಸದನದ ಪರವಾಗಿ ನಾನು ನಿಮ್ಮನ್ನು ಅಭಿನಂದಿಸಲು ಬಯಸುತ್ತೇನೆ. ಅಮೃತ ಕಾಲದ ಸಮಯದಲ್ಲಿ ನೀವು ಎರಡನೇ ಬಾರಿಗೆ ಈ ಜವಾಬ್ದಾರಿಯುತ ಹುದ್ದೆ ಅಲಂಕರಿಸಿರುವುದು ಬಹಳ ಸಂತಸ ತಂದಿದೆ. ನಿಮ್ಮ ಅನುಭವದೊಂದಿಗೆ, ಮುಂದಿನ 5 ವರ್ಷಗಳವರೆಗೆ ನೀವು ನಮಗೆ ಮಾರ್ಗದರ್ಶನ ನೀಡುತ್ತೀರಿ ಎಂದು ನಾವು ಭಾವಿಸುತ್ತೇವೆ. ನಿಮ್ಮ ಮುಖದ ಮೇಲಿನ ಸಿಹಿಯಾದ ನಗು ಇಡೀ ಸದನವನ್ನು ಸಂತೋಷವನ್ನಾಗಿರಿಸುತ್ತದೆ ಎಂದು ಹೇಳಿದರು.

VISTARANEWS.COM


on

Lok Sabha Speaker
Koo

ನವದೆಹಲಿ: 18ನೇ ಲೋಕಸಭೆಯ ಸ್ಪೀಕರ್‌ ಆಗಿ ಎನ್‌ಡಿಎಯಿಂದ ಕಣಕ್ಕಿಳಿದ ಬಿಜೆಪಿ ಸಂಸದ ಓಂ ಬಿರ್ಲಾ (Om Birla) ಅವರು ಆಯ್ಕೆಯಾಗಿದ್ದಾರೆ (Lok Sabha Speaker). ಸಾಮಾನ್ಯವಾಗಿ ಅವಿರೋಧವಾಗಿ ಸ್ಪೀಕರ್‌ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ಈ ಬಾರಿ ಆಡಳಿತ ರೂಢ ಎನ್‌ಡಿಎ ಮತ್ತು ಪ್ರತಿಪಕ್ಷಗಳ ಇಂಡಿ ಬಣದ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಹಲವು ದಶಕಗಳ ಬಳಿಕ ಚುನಾವಣೆ ನಡೆಸಲಾಯಿತು. ಇದೀಗ ಎರಡನೇ ಬಾರಿ ಲೋಕಸಭೆ ಸ್ಪೀಕರ್‌ ಆಗಿ ಆಯ್ಕೆ ಆಗಿರುವ ಓಂ ಬಿರ್ಲಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಎಲ್ಲಾ ಸಂಸತ್‌ ಸದಸ್ಯರು ಪಕ್ಷಾತೀತ ಅಭಿನಂದನೆ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಸದನದ ಪರವಾಗಿ ನಾನು ನಿಮ್ಮನ್ನು ಅಭಿನಂದಿಸಲು ಬಯಸುತ್ತೇನೆ. ಅಮೃತ ಕಾಲದ ಸಮಯದಲ್ಲಿ ನೀವು ಎರಡನೇ ಬಾರಿಗೆ ಈ ಜವಾಬ್ದಾರಿಯುತ ಹುದ್ದೆ ಅಲಂಕರಿಸಿರುವುದು ಬಹಳ ಸಂತಸ ತಂದಿದೆ. ನಿಮ್ಮ ಅನುಭವದೊಂದಿಗೆ, ಮುಂದಿನ 5 ವರ್ಷಗಳವರೆಗೆ ನೀವು ನಮಗೆ ಮಾರ್ಗದರ್ಶನ ನೀಡುತ್ತೀರಿ ಎಂದು ನಾವು ಭಾವಿಸುತ್ತೇವೆ. ನಿಮ್ಮ ಮುಖದ ಮೇಲಿನ ಸಿಹಿಯಾದ ನಗು ಇಡೀ ಸದನವನ್ನು ಸಂತೋಷವನ್ನಾಗಿರಿಸುತ್ತದೆ ಎಂದು ಹೇಳಿದರು.

ಸ್ವಾತಂತ್ರ್ಯದ 70 ವರ್ಷಗಳಲ್ಲಿ ನಡೆಯದ ಕೆಲಸಗಳು ನಿಮ್ಮ ಅಧ್ಯಕ್ಷತೆಯಲ್ಲಿ ಈ ಸದನದಲ್ಲಿ ಸಾಧ್ಯವಾಗಿವೆ. ಹಲವು ಮೈಲಿಗಲ್ಲುಗಳಿಗೆ ಈ ಸದನ ಸಾಕ್ಷಿಯಾಗಿತ್ತು. 17 ನೇ ಲೋಕಸಭೆಯ ಸಾಧನೆಗಳ ಬಗ್ಗೆ ದೇಶವು ಹೆಮ್ಮೆಪಡುತ್ತದೆ ಎಂದು ಹೇಳಿದರು.

ಇದು ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, “ಪ್ರತಿಪಕ್ಷಗಳಿಗೆ ಮಾತನಾಡಲು ಅವಕಾಶ ನೀಡಿ ಭಾರತದ ಜನರನ್ನು ಪ್ರತಿನಿಧಿಸಲು ಅವಕಾಶ ನೀಡುವ ಮೂಲಕ, ನೀವು ಭಾರತದ ಸಂವಿಧಾನವನ್ನು ರಕ್ಷಿಸುವ ನಿಮ್ಮ ಕರ್ತವ್ಯವನ್ನು ನೀವು ಸರಿಯಾಗಿ ನಿರ್ವಹಿಸುತ್ತೀರಿ ಎಂಬ ಬಗ್ಗೆ ನಮಗೆ ವಿಶ್ವಾಸವಿದೆ. ನಾನು ಮತ್ತೊಮ್ಮೆ ನಿಮ್ಮನ್ನು ಅಭಿನಂದಿಸಲು ಬಯಸುತ್ತೇನೆ ಎಂದರು.

ಇದನ್ನೂ ಓದಿ: Life threat: ಹುಬ್ಬಳ್ಳಿ ಏರ್‌ಪೋರ್ಟ್‌ ನಿರ್ದೇಶಕರಿಗೆ ಜೀವ ಬೆದರಿಕೆ; ʼಲಾಂಗ್ ಲಿವ್ ಪ್ಯಾಲೆಸ್ತೀನ್ʼ ಮೇಲ್‌ ಐಡಿಯಿಂದ ಸಂದೇಶ

Continue Reading

ದೇಶ

Asaduddin Owais: ಪ್ರಮಾಣ ವಚನ ಸ್ವೀಕರಿಸಿ ‘ಜೈ ಪ್ಯಾಲೆಸ್ತೀನ್​’ ಘೋಷಣೆ ಕೂಗಿದ ಓವೈಸಿ ಸದಸ್ಯತ್ವ ರದ್ದು? ಕಾನೂನು ಏನು ಹೇಳುತ್ತದೆ?

Asaduddin Owais: ಎಐಎಂಐಎಂ ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಮಂಗಳವಾರ 18ನೇ ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ʼಜೈ ಪ್ಯಾಲೆಸ್ತೀನ್​’ ಎಂದು ಘೋಷಣೆ ಕೂಗಿದ್ದು, ವಿವಾದ ಎಬ್ಬಿಸಿದೆ. ಓವೈಸಿ ನಡೆಗೆ ಕಿಡಿಕಾರಿರುವ ಬಿಜೆಪಿ ಅವರ ಸದಸ್ಯತ್ವವನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದೆ. ಹಾಗಾದರೆ ಓವೈಸಿ ಸದಸ್ಯತ್ವ ರದ್ದಾಗುತ್ತ? ಕಾನೂನು ಏನು ಹೇಳುತ್ತದೆ? ಇಲ್ಲಿದೆ ವಿವರ.

VISTARANEWS.COM


on

Asaduddin Owais
Koo

ನವದೆಹಲಿ: ಎಐಎಂಐಎಂ (AIMIM) ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ಮಂಗಳವಾರ 18ನೇ ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ʼಜೈ ಪ್ಯಾಲೆಸ್ತೀನ್​’ ಎಂದು ಘೋಷಣೆ ಕೂಗಿದ್ದು, ವಿವಾದ ಎಬ್ಬಿಸಿದೆ. ಓವೈಸಿ ನಡೆಗೆ ಕಿಡಿಕಾರಿರುವ ಬಿಜೆಪಿ ಅವರ ಸದಸ್ಯತ್ವವನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದೆ. ಹಾಗಾದರೆ ಓವೈಸಿ ಸದಸ್ಯತ್ವ ರದ್ದಾಗುತ್ತ? ಕಾನೂನು ಏನು ಹೇಳುತ್ತದೆ? ಮುಂತಾದ ಪ್ರಶ್ನೆಗೆ ಇಲ್ಲಿದೆ ಉತ್ತರ.

ಉರ್ದುವಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಓವೈಸಿ ಕೊನೆಗೆ, ‘ಜೈ ಭೀಮ್, ಜೈ ಮೀಮ್, ಜೈ ತೆಲಂಗಾಣ, ಜೈ ಪ್ಯಾಲೆಸ್ತೀನ್​’ ಎಂದು ಘೋಷಣೆ ಕೂಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಹೈದರಾಬಾದ್‌ನಿಂದ ಕಣಕ್ಕಿಳಿದಿದ್ದ ಓವೈಸಿ ತಮ್ಮ ಪ್ರಬಲ ಸ್ಪರ್ಧಿ ಬಿಜೆಪಿಯ ಮಾಧವಿ ಲತಾ ಕೊಂಪೆಲ್ಲಾ ಅವರನ್ನು ಸೋಲಿಸಿ ಸತತ ಐದನೇ ಬಾರಿಗೆ ಲೋಕಸಭೆಗೆ ಪ್ರವೇಶಿಸಿದ್ದಾರೆ.

ಸಮರ್ಥಿಸಿಕೊಂಡ ಓವೈಸಿ

ʼಜೈ ಪ್ಯಾಲೆಸ್ತೀನ್​’ ಘೋಷಣೆಗೆ ಬಿಜೆಪಿ ತೀವ್ರ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿದ ಓವೈಸಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸದನದ ಹೊರಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು, “ಜೈ ಭೀಮ್, ಜೈ ಮೀಮ್, ಜೈ ತೆಲಂಗಾಣ, ಜೈ ಪ್ಯಾಲೆಸ್ತೀನ್ ಎಂದು ಹೇಳುವುದರಲ್ಲಿ ಯಾವುದೇ ತಪ್ಪಿಲ್ಲʼʼ ಎಂದಿದ್ದಾರೆ. “ಇತರ ಸದಸ್ಯರು ಸಹ ವಿವಿಧ ರೀತಿಯ ಘೋಷಣೆ ಕೂಗುತ್ತಾರೆ. ಅದು ಹೇಗೆ ತಪ್ಪಾಗುತ್ತದೆ? ನಾನು ಏನು ಹೇಳಬೇಕೋ ಅದನ್ನು ಹೇಳಿದೆ. ಪ್ಯಾಲೆಸ್ತೀನ್ ಬಗ್ಗೆ ಮಹಾತ್ಮ ಗಾಂಧಿ ಹೇಳಿದ್ದನ್ನು ಓದಿ” ಎಂದು ಓವೈಸಿ ಹೇಳಿದ್ದಾರೆ.

ಓವೈಸಿ ಅವರ ಪ್ರಮಾಣ ವಚನದ ವಿಡಿಯೊ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಪ್ರಮಾಣ ವಚನ ಸ್ವೀಕರಿಸಲು ವೇದಿಕೆಯತ್ತ ಸಾಗುತ್ತಿದ್ದ ಓವೈಸಿ ಅವರನ್ನು ಬಿಜೆಪಿ ಸಂಸದರು ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗುವ ಮೂಲಕ ಪ್ರಚೋದಿಸಿದ್ದಾರೆ ಎಂದು ಕೆಲವರು ಅವರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಯಾವೆಲ್ಲ ಕಾರಣಕ್ಕೆ ಸದಸ್ಯತ್ವ ರದ್ದಾಗುತ್ತದೆ?

ಇದೀಗ ಓವೈಸಿ ಅವರ ಸದಸ್ಯತ್ವ ರದ್ದಾಗುತ್ತ ಎನ್ನುವ ಪ್ರಶ್ನೆ ಎದ್ದಿದೆ. ಕಾನೂನು ಪ್ರಕಾರ ಯಾವೆಲ್ಲ ಕಾರಣಗಳಿಗೆ ಸದಸ್ಯತ್ವ ರದ್ದುಪಡಿಸಲಾಗುತ್ತದೆ ಎನ್ನುವ ವಿವರ ಇಲ್ಲಿದೆ.

  • ಭಾರತ ಸರ್ಕಾರ ಅಥವಾ ರಾಜ್ಯ ಸರ್ಕಾರದ ಅಡಿಯಲ್ಲಿ ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿದ್ದರೆ
  • ನ್ಯಾಯಾಲಯವು ಅಭ್ಯರ್ಥಿಯನ್ನು ಮಾನಸಿಕ ಅಸ್ವಸ್ಥ ಎಂದು ಘೋಷಿಸಿದ್ದರೆ
  • ಸ್ವಯಂಪ್ರೇರಿತವಾಗಿ ವಿದೇಶಿ ಪೌರತ್ವವನ್ನು ಪಡೆದಿದ್ದರೆ
  • ಸಂಸತ್ತಿನ ಯಾವುದೇ ಕಾನೂನಿನ ಅಡಿಯಲ್ಲಿ ಅನರ್ಹಗೊಂಡಿದ್ದರೆ ಅಂತಹವರ ಸದಸ್ಯತ್ವ ರದ್ದುಗೊಳಿಸಲಾಗುತ್ತದೆ.

ಈ ಪ್ರಕರಣವನ್ನು ಲೋಕಸಭೆಯ ನೈತಿಕ ಸಮಿತಿಗೆ ಕಳುಹಿಸಲಾಗುವುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಮಿತಿ ಸದಸ್ಯರು ತನಿಖೆ ನಡೆಸಿ ಓವೈಸಿ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಲಿದ್ದಾರೆ. ಅದಾಗ್ಯೂ ಓವೈಸಿ ಅವರ ಸದಸ್ಯತ್ವ ರದ್ದಾಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

ಇದನ್ನೂ ಓದಿ: Chhatrapal Singh Gangwar: ಪ್ರಮಾಣ ವಚನದ ವೇಳೆ ʼಜೈ ಹಿಂದೂ ರಾಷ್ಟ್ರʼ ಘೋಷಣೆ ಮೊಳಗಿಸಿದ ಬಿಜೆಪಿ ಸಂಸದ!

2018ರಲ್ಲಿ, ನ್ಯಾಷನಲ್ ಕಾನ್ಫರೆನ್ಸ್ ಶಾಸಕ ಮೊಹಮ್ಮದ್ ಅಕ್ಬರ್ ಲೋನ್ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ʼಪಾಕಿಸ್ತಾನ್ ಜಿಂದಾಬಾದ್ʼ ಎಂಬ ಘೋಷಣೆಯನ್ನು ಕೂಗಿದ್ದರು. ಇದರ ಹೊರತಾಗಿಯೂ ಅವರು ತಮ್ಮ ಸದಸ್ಯತ್ವವನ್ನು ಕಳೆದುಕೊಂಡಿರಲಿಲ್ಲ.

Continue Reading

ದೇಶ

IRCTC: ಆನ್‌ಲೈನ್‌ನಲ್ಲಿ ರೈಲ್ವೇ ಟಿಕೆಟ್‌ ಬುಕ್ಕಿಂಗ್‌ ಮಾಡೋ ಮುನ್ನ ಹೊಸ ನಿಯಮದ ಬಗ್ಗೆ ಇರಲಿ ಗಮನ!

IRCTC: ಹೊಸ ನಿಯಮದ ಪ್ರಕಾರ ಒಬ್ಬ ವ್ಯಕ್ತಿ ತನ್ನ ಖಾತೆಯಿಂದ ಪ್ರತಿ ತಿಂಗಳು 12ವರೆಗೆ ಟಿಕೆಟ್‌ ಬುಕ್ಕಿಂಗ್‌ ಮಾಡಬಹುದಾಗಿದೆ. ಖಾತೆದಾರರು ಆಧಾರ್-ದೃಢೀಕರಣವನ್ನು ಹೊಂದಿದ್ದರೆ, ಅವರು ತಿಂಗಳಿಗೆ 24 ಟಿಕೆಟ್‌ಗಳನ್ನು ಕಾಯ್ದಿರಿಸಬಹುದು. ವೈಯಕ್ತಿಕ ಬಳಕೆದಾರ ID ಗಳನ್ನು ಬಳಸಿ ಬುಕ್ ಮಾಡಲಾದ ಟಿಕೆಟ್‌ಗಳು ಕೇವಲ ವೈಯಕ್ತಿಕ ಬಳಕೆಗಾಗಿ ಕಟ್ಟು ನಿಟ್ಟುಗೊಳಿಸಲಾಗಿದೆ. ಈ ಟಿಕೆಟ್‌ಗಳ ಯಾವುದೇ ವಾಣಿಜ್ಯ ಮಾರಾಟವನ್ನು ರೈಲ್ವೆ ಕಾಯಿದೆ, 1989 ರ ಸೆಕ್ಷನ್ 143 ರ ಅಡಿಯಲ್ಲಿ ಅಪರಾಧವೆಂದು ಪರಿಗಣಿಸಲಾಗುತ್ತದೆ.

VISTARANEWS.COM


on

IRCTC
Koo

ಹೊಸದಿಲ್ಲಿ: ನಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ ಆನ್‌ಲೈನ್‌ನಲ್ಲಿ ರೈಲ್ವೆ ಟಿಕೆಟ್‌ ಬುಕ್ಕಿಂಗ್‌(Online Ticket Booking) ಮಾಡುವ ಅವಕಾಶವನ್ನು ತೆಗೆದು ಹಾಕಲಾಗಿದೆ ಎಂಬ ಸುದ್ದಿಯನ್ನು ರೈಲ್ವೇ ಸಚಿವಾಲಯ(Railway Ministry) ತಿರಸ್ಕರಿಸಿದೆ. ರೈಲ್ವೇ ಸಚಿವಾಲಯದ ವಕ್ತಾರ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಸುದ್ದಿ ಸುಳ್ಳು ಮತ್ತು ದಾರಿ ತಪ್ಪಿಸುವಂತ ವಿಚಾರ ಎಂದು ಸ್ಪಷ್ಟಪಡಿಸಿದೆ. ಬೇರೆ ಬೇರೆ ಸರ್‌ನೇಮ್‌ಗಳಿರುವವರೂ ಪರಸ್ಪರ ಟಿಕೆಟ್‌ ಬುಕ್ಕಿಂಗ್‌ ಮಾಡಿಕೊಳ್ಳಬಹುದು ಎಂದು ಹೇಳಿದೆ. ಇದರ ಜೊತೆಗೆ ರೈಲ್ವೇ ಇಲಾಖೆ(IRCTC) ವೆಬ್‌ಸೈಟ್‌ನಲ್ಲಿ ಇ ಟಿಕೆಟ್‌ ಬುಕ್ಕಿಂಗ್‌ ಮಾಡಲು ಕೆಲವೊಂದು ನಿಯಮಗಳನ್ನು ಜಾರಿಗೊಳಿಸಲಾಗಿದೆ. ಅದು ಸ್ನೇಹಿತರು, ಕುಟುಂಬಸ್ಥರ ಮತ್ತು ಸಂಬಂಧಿಕರಿಗೆ ವೈಯಕ್ತಿಕ ಯೂಸರ್‌ ಐಡಿ ಬಳಸಿ ಟಿಕೆಟ್‌ ಬುಕ್‌ ಮಾಡಬಹುದಾಗಿದೆ.

ಪ್ರತಿ ವ್ಯಕ್ತಿ ಎಷ್ಟು ಟಿಕೆಟ್‌ ಬುಕ್‌ ಮಾಡಬಹುದು?

ಹೊಸ ನಿಯಮದ ಪ್ರಕಾರ ಒಬ್ಬ ವ್ಯಕ್ತಿ ತನ್ನ ಖಾತೆಯಿಂದ ಪ್ರತಿ ತಿಂಗಳು 12ವರೆಗೆ ಟಿಕೆಟ್‌ ಬುಕ್ಕಿಂಗ್‌ ಮಾಡಬಹುದಾಗಿದೆ. ಖಾತೆದಾರರು ಆಧಾರ್-ದೃಢೀಕರಣವನ್ನು ಹೊಂದಿದ್ದರೆ, ಅವರು ತಿಂಗಳಿಗೆ 24 ಟಿಕೆಟ್‌ಗಳನ್ನು ಕಾಯ್ದಿರಿಸಬಹುದು. ವೈಯಕ್ತಿಕ ಬಳಕೆದಾರ ID ಗಳನ್ನು ಬಳಸಿ ಬುಕ್ ಮಾಡಲಾದ ಟಿಕೆಟ್‌ಗಳು ಕೇವಲ ವೈಯಕ್ತಿಕ ಬಳಕೆಗಾಗಿ ಕಟ್ಟು ನಿಟ್ಟುಗೊಳಿಸಲಾಗಿದೆ. ಈ ಟಿಕೆಟ್‌ಗಳ ಯಾವುದೇ ವಾಣಿಜ್ಯ ಮಾರಾಟವನ್ನು ರೈಲ್ವೆ ಕಾಯಿದೆ, 1989 ರ ಸೆಕ್ಷನ್ 143 ರ ಅಡಿಯಲ್ಲಿ ಅಪರಾಧವೆಂದು ಪರಿಗಣಿಸಲಾಗುತ್ತದೆ.

ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಮಾಡುವುದು ಹೇಗೆ?

  1. IRCTC ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ.
    “ಬುಕ್ ಯುವರ್ ಟಿಕೆಟ್” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
    ಬೋರ್ಡಿಂಗ್ ಮತ್ತು ಡೆಸ್ಟಿನೇಶನ್‌ ವಿಳಾಸಗಳನ್ನು ಭರ್ತಿ ಮಾಡಿ.
    ಪ್ರಯಾಣದ ದಿನಾಂಕವನ್ನು ಆಯ್ಕೆಮಾಡಿ.
    ಪ್ರಯಾಣದ ವರ್ಗವನ್ನು ಆಯ್ಕೆಮಾಡಿ.
    ಲಭ್ಯವಿರುವ ರೈಲು ಆಯ್ಕೆಗಳನ್ನು ವೀಕ್ಷಿಸಿ.
    “ಬುಕ್ ನೌ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
    ಪ್ರಯಾಣಿಕರ ವಿವರಗಳನ್ನು ಭರ್ತಿ ಮಾಡಿ.
    ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.

ಟಿಕೆಟ್‌ ಕ್ಯಾನ್ಸಲ್‌ ಮಾಡೋದು ಹೇಗೆ?

  1. IRCTC ವೆಬ್‌ಸೈಟ್‌ಗೆ ಹೋಗಿ ಮತ್ತು ನಿಮ್ಮ ಬಳಕೆದಾರಹೆಸರು ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.
    “ನನ್ನ ಖಾತೆ” ವಿಭಾಗದ ಮೇಲೆ ಸುಳಿದಾಡಿ ಮತ್ತು ಡ್ರಾಪ್-ಡೌನ್ ಮೆನುವಿನಿಂದ “ಬುಕ್ ಮಾಡಿದ ಟಿಕೆಟ್ ಇತಿಹಾಸ” ಆಯ್ಕೆಮಾಡಿ.
    ನೀವು ರದ್ದುಗೊಳಿಸಲು ಬಯಸುವ ಬುಕಿಂಗ್ ಅನ್ನು ಹುಡುಕಿ ಮತ್ತು “ಟಿಕೆಟ್ ರದ್ದುಗೊಳಿಸು” ಆಯ್ಕೆಯನ್ನು ಕ್ಲಿಕ್ ಮಾಡಿ.
    ಒಂದು ಪಾಪ್-ಅಪ್ ವಿಂಡೋ ಕಾಣಿಸುತ್ತದೆ.
    ನೀವು ರದ್ದುಗೊಳಿಸಲು ಬಯಸುವ ಪ್ರಯಾಣಿಕರನ್ನು ಆಯ್ಕೆ ಮಾಡಿ ಮತ್ತು ಮುಂದಿನ ಪೆಟ್ಟಿಗೆಯನ್ನು ಪರಿಶೀಲಿಸಿ

ಇದನ್ನೂ ಓದಿ: Manoj Kalyane: ಬಿಜೆಪಿ ಮುಖಂಡ, ಮಧ್ಯ ಪ್ರದೇಶ ಸಚಿವರ ಆಪ್ತನ ಹತ್ಯೆ; ಬೈಕ್‌ನಲ್ಲಿ ಬಂದು ಗುಂಡಿನ ಮಳೆಗೆರೆದ ದುಷ್ಕರ್ಮಿಗಳು

Continue Reading
Advertisement
Job Alert
ಉದ್ಯೋಗ42 seconds ago

Job Alert: ಗ್ರಾಮೀಣ ಬ್ಯಾಂಕ್‌ಗಳಲ್ಲಿ 586 ಹುದ್ದೆ; ಗಮನಿಸಿ-ಅರ್ಜಿ ಸಲ್ಲಿಸಲು ನಾಳೆಯೇ ಅಂತಿಮ ದಿನ

Parliament Sessions
ದೇಶ10 mins ago

Parliament Sessions: ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಸದನ; ಶೇಕ್‌ ಹ್ಯಾಂಡ್‌ ಮಾಡಿದ ಪ್ರಧಾನಿ ಮೋದಿ, ರಾಹುಲ್‌

Pavithra Gowda lipstick case Notice to PSI
ಕ್ರೈಂ26 mins ago

Pavithra Gowda: ಪವಿತ್ರಾಗೆ ಲಿಪ್‌ಸ್ಟಿಕ್‌ ಹಚ್ಚಲು ಅವಕಾಶ ಮಾಡಿಕೊಟ್ಟಿದ್ದ ಮಹಿಳಾ `PSI’ಗೆ ನೋಟಿಸ್‌!

PGCET 2024
ಕರ್ನಾಟಕ37 mins ago

PGCET 2024: ಪಿಜಿಸಿಇಟಿ ಪರೀಕ್ಷೆ ಮುಂದೂಡಿಕೆ; ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟ

Liquor Price karnataka
ಕರ್ನಾಟಕ39 mins ago

Liquor Price Karnataka: ಶ್ರೀಮಂತರಿಗೆ ಮತ್ತು, ಬಡವರಿಗೆ ಕುತ್ತು! ಪ್ರೀಮಿಯಂ ಮದ್ಯ ದರ ಇಳಿಕೆ, ಬಡವರ ಎಣ್ಣೆ ರೇಟ್‌ ಏರಿಕೆ?

Lok Sabha Speaker
ದೇಶ54 mins ago

Lok Sabha Speaker: ಎರಡನೇ ಬಾರಿ ಸ್ಪೀಕರ್‌ ಆದ ಓಂ ಬಿರ್ಲಾಗೆ ಮೋದಿ, ರಾಹುಲ್‌ ಅಭಿನಂದನೆ

Tharun Sudhir and sonal monteiro love story support By Darshan
ಸ್ಯಾಂಡಲ್ ವುಡ್57 mins ago

Tharun Sudhir: ದರ್ಶನ್‌ ತಮಾಷೆಯಿಂದಲೇ ಹುಟ್ಟಿತು ತರುಣ್‌- ಸೋನಲ್‌ ಪ್ರೀತಿ? ಇಬ್ಬರ ಲವ್ ಸ್ಟೋರಿ ಶುರುವಾಗಿದ್ದೇಗೆ?

Kenya Violence
ವಿದೇಶ1 hour ago

Kenya Violence: ಕೀನ್ಯಾದಲ್ಲಿ ಭುಗಿಲೆದ್ದ ಹಿಂಸಾಚಾರ; ಭಾರತೀಯರಿಗೆ ಎಚ್ಚರಿಕೆ ನೀಡಿದ ಹೈಕಮಿಷನ್

ಕಥೆಕೂಟ literature meet
ಕಲೆ/ಸಾಹಿತ್ಯ1 hour ago

ಕಥೆ ನಿಜ, ಕಥೆಗಾರ ಸುಳ್ಳು: ಕಥೆಕೂಟ ಸಮಾವೇಶದಲ್ಲಿ ಟಿಎನ್‌ ಸೀತಾರಾಮ್‌

CM Siddaramaiah
ಕರ್ನಾಟಕ1 hour ago

CM Siddaramaiah: ರಾಹುಲ್ ಗಾಂಧಿ ವಿಪಕ್ಷ ನಾಯಕರಾಗಿರೋದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು ಎಂದ ಸಿಎಂ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌