Viral post | ರಾವಣನ ಜೊತೆ ಇಲ್ಲಿ ವ್ಯಾಯಾಮ ಮಾಡಿ: ಪೌರಾಣಿಕ ಪಾತ್ರಗಳ ಜಿಮ್ಮಿದು! - Vistara News

ವೈರಲ್ ನ್ಯೂಸ್

Viral post | ರಾವಣನ ಜೊತೆ ಇಲ್ಲಿ ವ್ಯಾಯಾಮ ಮಾಡಿ: ಪೌರಾಣಿಕ ಪಾತ್ರಗಳ ಜಿಮ್ಮಿದು!

ಈ ವಿಚಿತ್ರ ಜಿಮ್‌ನಲ್ಲಿ ಜಿಮ್‌ ಮೆಶಿನ್‌ಗಳ ಜೊತೆಗೆ ಪೌರಾಣಿಕ ಪಾತ್ರಗಳೂ ವ್ಯಾಯಾಮ ಮಾಡುವವರ ಬೆವರಿಳಿಸುವಂತೆ ಮಾಡುವುದು ಜನರಿಗೆ ಮಜಾ ಕೊಡುತ್ತಿದೆ.

VISTARANEWS.COM


on

viral gym post
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜಿಮ್‌ ಒಂದರ ಚಿತ್ರಣ ಅಬ್ಬಬ್ಬಾ ಅಂದರೆ ಹೇಗಿದ್ದೀತು? ಒಂದಿಷ್ಟು ತರಬೇತುದಾರರಿರುವ ಹಲವಾರು ವರ್ಕೌಟ್‌ ಸಾಧನಗಳಿರುವ, ಒಳಹೊಕ್ಕ ತಕ್ಷಣ ಎನರ್ಜಿ ಬರುವ ಮ್ಯೂಸಿಕ್‌, ಚುರುಕಿನ ವಾತಾವರಣ. ಇಷ್ಟು ಬಿಟ್ಟರೆ ಜಿಮ್‌ ಎಂದರೆ ದೇಹ ದಂಡಿಸುವ ಬೆವರಿಳಿಸುವ ಕೋಣೆ. ಈಗೆಲ್ಲಾ ಬಹುತೇಕ ಪಾರ್ಕುಗಳು, ಉದ್ಯಾನವನಗಳಲ್ಲಿ ಒಂದಿಷ್ಟು ಬೆವರಿಳಿಸಬಹುದಾದ ಸಾಧನಗಳನ್ನು ಅಳವಡಿಸಿ, ಜನರು ವಾಕ್‌ ಜೊತೆಗೆ ಕೊಂಚ ವ್ಯಾಯಾಮವನ್ನೂ ಮಾಡಲೆಂದು ತೆರೆದ ಜಿಮ್‌ಗಳ ವ್ಯವಸ್ಥೆಯೂ ಈಗ ಸರ್ವೇಸಾಮಾನ್ಯ. ಗೋವಾದಲ್ಲಿ ಇಂತಹ ತೆರೆದ ಜಿಮ್‌ ಒಂದು ಎಲ್ಲರ ಆಕರ್ಷಣೆಯ ಕೇಂದ್ರವಾಗಿ ಇದೀಗ ಗಮನ ಸೆಳೆಯುತ್ತಿದೆ!

ಈ ಜಿಮ್‌ನಲ್ಲಿ ನೀವು ವ್ಯಾಯಾಮ ಮಾಡುವ ಯಂತ್ರದ ಮೇಲೆ ಕುಳಿತು ಹಿಡಿಕೆ ಹಿಡಿದು ಜಗ್ಗಿದರೆ, ನಿಮ್ಮ ವ್ಯಾಯಾಮದ ಜೊತೆಜೊತೆಗೇ, ರಾವಣವೂ ಹತ್ತು ತಲೆಗಳನ್ನು ಹೊತ್ತುಕೊಂಡು ವ್ಯಾಯಾಮ ಮಾಡುತ್ತಾನೆ! ಕೇವಲ ಒಂದೇ ಇಲ್ಲ ಇಂತಹ ಹಲವು ಪಾತ್ರಗಳು ಅಲ್ಲಿ ನಿಮ್ಮ ಜೊತೆಗೇ ಬೆವರಿಳಿಸುತ್ತದೆ. ಆದರೆ, ಬೆವರಿಳಿಸಿದ್ದು ಗೊತ್ತೇ ಆಗದಷ್ಟು ಮಜಾವೂ ಬರುತ್ತದೆ!

ಗೋವಾದಲ್ಲಿ ನಡೆಯುತ್ತಿರುವ ಸೆರೆಂಡಿಪಿಟಿ ಆರ್ಟ್‌ ಫೆಸ್ಟಿವಲ್‌ನಲ್ಲೊಂದು ತೆರೆದ ಜಿಮ್‌ ವ್ಯವಸ್ಥೆಯೀಗ ಸಾಕಷ್ಟು ಸುದ್ದಿ ಮಾಡುತ್ತಿದೆ. ಈ ಉತ್ಸವವೀಗ ಕಲಾವಿದರಿಗೆ ಸಾಕಷ್ಟು ಪ್ರಯೋಗಗಳನ್ನು ನಡೆಸಲು ವೇದಿಕೆ ಹಾಸಿದೆ. ಇದರ ಪರಿಣಾಮ ಕಲಾವಿದರೊಬ್ಬರು ತೆರೆದ ಜಿಮ್‌ ಅನ್ನು ಪೌರಾಣಿಕ ಕಥೆಯಾಧಾರಿತ ಅವತಾರಗಳ ಉದ್ಯಾನವಾಗಿ ಬದಲಾಯಿಸಿ ಬಿಟ್ಟಿದ್ದಾರೆ, ಕಲಾವಿದನ ಈ ವಿನೂತನ ಐಡಿಯಾ, ಪ್ರಯೋಗಶೀಲತೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಕಲಾವಿದ ದೀಪ್‌ತೇಜ್‌ ವರ್ನೇಕರ್‌ ಎಂಬವರು ಹೊರಾಂಗಣ ತೆರೆದ ಜಿಮ್‌ ಪ್ರದೇಶವನ್ನು ಸ್ಥಳೀಯ ಕಲಾವಿದರನ್ನು ಹಾಗೂ ಕಲೆಯನ್ನು ಬಳಸಿಕೊಂಡು ವಿವಿಧ ಪೌರಾಣಿಕ ಪಾತ್ರಗಳ, ಅವತಾರಗಳನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ. ಜಿಮ್‌ ಮೆಶಿನ್‌ಗಳ ಜೊತೆಗೆ ಪೌರಾಣಿಕ ಪಾತ್ರಗಳೂ ವ್ಯಾಯಾಮ ಮಾಡುವವರ ಬೆವರಿಳಿಸುವಂತೆ ಮಾಡುವುದು ಜನರಿಗೆ ಮಜಾ ಕೊಡುತ್ತಿದೆ. ಕಲೆಯ ಜೊತೆಗೆ ತಂತ್ರಜ್ಞಾನವನ್ನೂ ಬಳಸಿಕೊಂಡು ಪೌರಾಣಿಕ ಪಾತ್ರಗಳ ಗೊಂಬೆಗಳು ಏಳುವುದು, ಕೂರುವುದು ಹಾರುವುದು, ನಾಲಿಗೆ ಹೊರಹಾಕುವುದು ಇತ್ಯಾದಿ ತಮಾಷೆಯ ಮನರಂಜನೆಯನ್ನೂ ಜನರಿಗೆ ನೀಡುತ್ತಿದೆ.

ಇದನ್ನೂ ಓದಿ | Viral post | ಎದುರು ಮನೆಯ ಹುಂಜದ ಕೂಗಿನಿಂದ ನಿದ್ದೆಯಿಲ್ಲ, ಪೊಲೀಸರೇ ಕ್ರಮ ತಗೊಳ್ಳಿ!

ದೀಪ್‌ತೇಜ್‌ ಅವರ ಸಾಮಾಜಿಕ ಜಾಲತಾಣದ ಪೋಸ್ಟ್‌ ಹೇಳುವಂತೆ, ಪೌರಾಣಿಕ ಪಾತ್ರಗಳು ಹಾಗೂ ಅವುಗಳನ್ನು ಮಾಡುವವರ ಕಲೆ ಹೆಚ್ಚು ಜನರನ್ನು ತಲುಪುವಂತಾಗಲು ಜಿಮ್‌ನ ಮೂಲಕ ಬಳಸಿಕೊಂಡೆ ಎಂದು ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟನ್ನು ಸಾವಿರಾರು ಜನ ನೋಡಿ ಇಷ್ಟಪಟ್ಟಿದ್ದು, ಬಹುತೇಕರು ಈ ಇಡೀ ಐಡಿಯಾಕ್ಕೇ ಮನಸೋತಿದ್ದಾರೆ, ಹಲವರು ಇದೊಂದು ಭರ್ಜರಿ ಆಲೋಚನೆಯೆಂದು ಕಾಮೆಂಟ್‌ ಮಾಡಿದ್ದಾರೆ.

ಈ ಉತ್ಸವದ ಅಧಿಕೃತ ವೆಬ್‌ಸೈಟ್‌ ಈ ವಿಶೇಷ ಥೀಮ್‌ ಬಗ್ಗೆ ವಿವರಣೆ ನೀಡಿದೆ. ನಾವು ಹಲವು ಜಾಗಗಳಿಂದ ಇಂತಹ ಪೌರಾಣಿಕ ಪಾತ್ರಗಳ ಕಲಾಕೃತಿಗಳನ್ನು ಪಡೆದಿದ್ದು ಅದು ಇಂತಹ ತೆರೆದ ಜಿಮ್‌ನಲ್ಲಿ ಬಳಸಲಾಗಿದೆ. ಇದರ ಮುಖ್ಯ ಉದ್ದೇಶ, ಕಲಾವಿದರ ಕಲಾಕೃತಿಗಳು ನೇರವಾಗಿ ಸುಲಭವಾಗಿ ಎಲ್ಲ ಜನರಿಗೂ ತಲುಪುವಂತಾಗಬೇಕು. ತೆರೆದ ಜಿಮ್‌ ಮೂಲಕ ಜನರು ಕೊಂಚ ತಮಾಷೆಯ ಮಜವಾದ ಸಮಯ ಕಳೆಯುವುದರ ಜೊತೆಗೆ ನಮ್ಮ ಕಲೆ ಸಂಸ್ಕೃತಿಗಳ ಪರಿಚಯ ನೇರವಾಗಿ ಮಾಡಿಸುವುದೂ ಇಲ್ಲಿ ಮುಖ್ಯವೆನಿಸಿ ಮಾಡಿದ್ದೇವೆ ಎಂದು ವರ್ನೇಕರ್‌ ಹೇಳಿದ್ದಾರೆ.

ಸೆರೆಂಡಿಪಿಟಿ ಕಲಾ ಉತ್ಸವ ಗೋವಾದಲ್ಲಿ ಇದೇ ಡಿಸೆಂಬರ್‌ ೧೫ಕ್ಕೆ ಆರಂಭವಾಗಿದ್ದು ಇದು ಡಿಸೆಂಬರ್‌ ೨೩ರವರೆಗೂ ನಡೆಯಲಿದೆ. ದಕ್ಷಿಣ ಏಷ್ಯಾದಲ್ಲೇ ಇದು ಅತೀ ದೊಡ್ಡ ಕಲಾ ಉತ್ಸವವಾಗಿದ್ದು, ಈ ಬಾರಿ ಕಲೆಯ ಜೊತೆಗೆ ತಂತ್ರಜ್ಞಾನವೂ ಇದರ ಬಹುಮುಖ್ಯ ವಿಷಯವಾಗಿ ಪ್ರಾಮುಖ್ಯತೆ ನೀಡಲಾಗುತ್ತಿದೆ.

ಇದನ್ನೂ ಓದಿ | Viral Video | ಭಗವಾನ್​ ವಿಷ್ಣುವನ್ನು ಮದುವೆಯಾಗಿ, ‘ಅವನೇ ನನ್ನ ಪತಿ’ ಎಂದ ಯುವತಿ; ಲಕ್ಷ್ಮಿಗೊಬ್ಬಳು ಸವತಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Viral Video: ಬಕ್ರೀದ್ ಬಲಿ ಕೊಡುವ ಮೇಕೆಯ ಮೈಮೇಲೆ ʼರಾಮʼ ನಾಮ; ಹಿಂದೂಗಳನ್ನು ಕೆಣಕಿದ ವ್ಯಕ್ತಿ ಅರೆಸ್ಟ್

Viral Video: ದೇಶದಲ್ಲಿ ಸಾಮರಸ್ಯ ಕದಡುವ ಘಟನೆ ಆಗಾಗ ನಡೆಯುತ್ತಲೇ ಇರುತ್ತವೆ. ಅದರಲ್ಲೂ ಈ ಧಾರ್ಮಿಕ ಹಬ್ಬಗಳು ಬಂದಾಗ ಏನಾದರೊಂದು ಘಟನೆ ಮಾಡಿ ನೆಮ್ಮದಿ ಹಾಳು ಮಾಡುತ್ತಿರುತ್ತಾರೆ. ಬಕ್ರೀದ್ ಹಬ್ಬದ ಹಿನ್ನೆಲೆ ಮಟನ್ ಅಂಗಡಿ ಮಾಲೀಕನೊಬ್ಬ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವಂತಹ ಕೆಲಸ ಮಾಡಿದ್ದಾನೆ. ಬಿಳಿ ಬಣ್ಣದ ಮೇಕೆಯ ಮೈ ಮೇಲೆ ಹಳದಿ ಬಣ್ಣದಲ್ಲಿ ರಾಮ್ ಎಂದು ಬರೆದು ಮಾಂಸದ ಅಂಗಡಿಯ ಹೊರಗೆ ಆ ಮೇಕೆಯನ್ನು ಕಟ್ಟಿಹಾಕಿದ್ದಾನೆ. ಇದು ಹಿಂದೂಗಳ ಕಣ್ಣಿಗೆ ಬಿದ್ದು ಕೋಲಾಹಲಕ್ಕೆ ಕಾರಣವಾಗಿದೆ ಇದಕ್ಕೆ ಸಂಬಂಧಿಸಿದ ವಿಡಿಯೊ ಈ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

VISTARANEWS.COM


on

Viral Video
Koo

ಮುಂಬೈ : ಮುಸ್ಲಿಮರಿಗೆ ಬಕ್ರೀದ್ ಹಬ್ಬ ತುಂಬಾ ವಿಶೇಷವಾದದ್ದು. ಹಾಗಾಗಿ ಈ ದಿನ ಅವರ ಸಂಪ್ರದಾಯದಂತೆ ಮೇಕೆಗಳನ್ನು ಬಲಿಕೊಡಲಾಗುತ್ತದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರಗಳೂ ಕೂಡ ಇತರರ ಭಾವನೆಗಳಿಗೆ ಧಕ್ಕೆಯುಂಟುಮಾಡುವ ಯಾವುದೇ ದುರ್ಘಟನೆಗಳು ನಡೆಯಬಾರದೆಂದು ಮುಸ್ಲಿಂರಿಗೆ ಹಾಗೂ ಆಡಳಿತ ಅಧಿಕಾರಿಗೂ ಸೂಚಿಸಿದೆ. ಆದರೂ ಇದರ ನಡುವೆ ಮಟನ್ ಅಂಗಡಿ ಮಾಲೀಕನೊಬ್ಬ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವಂತಹ ಕೆಲಸ ಮಾಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೊ ವೈರಲ್
(Viral Video )ಆಗಿದೆ.

ಮುಂಬೈನ ಬೆಲಾಪುರದ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ ನಲ್ಲಿರುವ ಗುಡ್ ಲಕ್ ಮಟನ್ ಅಂಗಡಿ ಮಾಲೀಕ ಮಹಮ್ಮದ್ ಶಾಫಿ ಎಂಬುವವನು ಬಲಿದಾನದ ಬಿಳಿ ಬಣ್ಣದ ಮೇಕೆಯ ಮೈ ಮೇಲೆ ಹಳದಿ ಬಣ್ಣದಲ್ಲಿ ರಾಮ್ ಎಂದು ಬರೆದು ಮಾಂಸದ ಅಂಗಡಿಯ ಹೊರಗೆ ಆ ಮೇಕೆಯನ್ನು ಕಟ್ಟಿಹಾಕಿದ್ದ. ಇದು ಹಿಂದೂಗಳ ಕಣ್ಣಿಗೆ ಬಿದ್ದು ಕೋಲಾಹಲಕ್ಕೆ ಕಾರಣವಾಗಿದೆ. ಜೂನ್ 15ರಂದು ಈ ಘಟನೆ ನಡೆದಿದ್ದು, ರಾಮ ಎನ್ನುವುದು ಹಿಂದೂಗಳ ದೇವರಾದ ಕಾರಣ ಹಿಂದೂ ಸಂಘಟನೆಯ ಕೆಲವು ಜನರು ಅಲ್ಲಿಗೆ ಬಂದು ಗಲಾಟೆ ಮಾಡಿದ್ದಾರೆ. ಹಾಗೇ ಈ ದೃಶ್ಯವನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ವಿಡಿಯೊದಲ್ಲಿ ಹಿಂದೂಗಳು ಅಂಗಡಿಗೆ ನುಗ್ಗಿ ಮಾಲೀಕನ ಜೊತೆ ಗಲಾಟೆ ನಡೆಸಿದ್ದು, ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಹಾಗೂ ಆತನ ಅಂಗಡಿಯನ್ನು ಮುಚ್ಚಲಾಗಿದೆ. ಸೋಶಿಯಲ್ ಮೀಡಿಯಾದ ಬಳಕೆದಾರರು, ಹಿಂದೂ ಸಂಘಟನೆಗಳು ಸೇರಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:  ಬಕ್ರೀದ್ ಹಿನ್ನೆಲೆಯಲ್ಲಿ ಮಾರಾಟಕ್ಕಿಟ್ಟಿದ್ದ ಈ ಮೇಕೆಯ ಬೆಲೆ 69 ಲಕ್ಷ ರೂ!

ಹಿಂದುತ್ವ ನೈಟ್ ಎಂಬ ಬಳಕೆದಾರರು ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ನಲ್ಲಿ ತಮ್ಮ ಕೋಪವನ್ನು ಹೊರಹಾಕಿದ್ದಾರೆ. “ಇದು ಅತಿರೇಕವಾಗಿದೆ. ಗುಡ್ ಲಕ್ ಮಟನ್ ಸ್ಟೋರ್ ಮಾರಾಟ ಮಾಡುವ ಮೇಕೆಯ ಮೇಲೆ ರಾಮ್ ಹೆಸರನ್ನು ಬರೆಯಲಾಗಿದೆ. ಬಕ್ರೀದ್ ದಿನದಂದು ಈ ಮೇಕೆಯನ್ನು ಬಹಿರಂಗವಾಗಿ ಕೊಲ್ಲುವುದರ ಮೂಲಕ ಹಿಂದೂ ಸಮುದಾಯವನ್ನು ಉದ್ದೇಶಪೂರ್ವಕವಾಗಿ ಪ್ರಚೋದಿಸುತ್ತಿದ್ದಾರೆ. ಈ ಮೂಲಕ ಅವರು ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿದ್ದಕ್ಕಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಮುಂಬೈ ಪೊಲೀಸರಲ್ಲಿ ವಿನಂತಿಸುತ್ತೇವೆ” ಎಂದು ಪೋಸ್ಟ್ ಮಾಡಿದ್ದಾರೆ.

Continue Reading

ವೈರಲ್ ನ್ಯೂಸ್

Reasi Terror Attack: ಪಾಕಿಸ್ತಾನದಲ್ಲಿ ರಿಯಾಸಿ ಭಯೋತ್ಪಾದಕ ದಾಳಿಯ ಮಾಸ್ಟರ್‌ ಮೈಂಡ್‌ನ ಹತ್ಯೆ; ವಿಡಿಯೊ ವೈರಲ್‌

Reasi Terror Attack: ಮಹತ್ವದ ಬೆಳವಣಿಗೆಯೊಂದರಲ್ಲಿ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಭಯೋತ್ಪಾದಕ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಅನ್ನು ಪಾಕಿಸ್ತಾನದಲ್ಲಿ ‘ಅಪರಿಚಿತ ವ್ಯಕ್ತಿಗಳು’ ಹತ್ಯೆ ಮಾಡಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ಮತ್ತು ಯೂಟ್ಯೂಬರ್‌ಗಳು ಹೇಳಿದ್ದಾರೆ. ಜೂನ್ 9ರಂದು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ನಡೆದ ಭೀಕರ ಭಯೋತ್ಪಾದಕರ ದಾಳಿಗೆ ಪುಟ್ಟ ಕಂದಮ್ಮನೂ ಸೇರಿ ಒಟ್ಟು 9 ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

VISTARANEWS.COM


on

Reasi Terror Attack
Koo

ಶ್ರೀನಗರ: ಮಹತ್ವದ ಬೆಳವಣಿಗೆಯೊಂದರಲ್ಲಿ ಜಮ್ಮು ಮತ್ತು ಕಾಶ್ಮೀರದ (Jammu & Kashmir) ರಿಯಾಸಿ ಭಯೋತ್ಪಾದಕ ದಾಳಿ (Reasi Terror Attack)ಯ ಹಿಂದಿನ ಮಾಸ್ಟರ್ ಮೈಂಡ್ ಅನ್ನು ಪಾಕಿಸ್ತಾನದಲ್ಲಿ ‘ಅಪರಿಚಿತ ವ್ಯಕ್ತಿಗಳು’ ಹತ್ಯೆ ಮಾಡಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ಮತ್ತು ಯೂಟ್ಯೂಬರ್‌ಗಳು ಹೇಳಿದ್ದಾರೆ. ಜೂನ್ 9ರಂದು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ನಡೆದ ಭೀಕರ ಭಯೋತ್ಪಾದಕರ ದಾಳಿಗೆ ಪುಟ್ಟ ಕಂದಮ್ಮನೂ ಸೇರಿ ಒಟ್ಟು 9 ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇದೀಗ ಈ ಕೃತ್ಯಕ್ಕೆ ಸಂಚು ರೂಪಿಸಿದವನ ವಿರುದ್ಧ ಪ್ರತಿಕಾರ ಕೈಗೊಳ್ಳಲಾಗಿದೆ ಎನ್ನಲಾಗಿದ್ದು, ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral Video).

ಇಬ್ಬರು ವ್ಯಕ್ತಿಗಳು ಈ ಬಗ್ಗೆ ಮಾಹಿತಿ ನೀಡುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಈ 16 ಸೆಕೆಂಡುಗಳ ಈ ಪುಟ್ಟ ವಿಡಿಯೊ ಇದೀಗ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಇಬ್ಬರು ಕ್ಯಾಮೆರಾ ಮುಂದೆ ನಿಂತು ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಗಳ ಬಗ್ಗೆ ಚರ್ಚಿಸುತ್ತಾರೆ. ಬಳಿಕ ಪಾಕಿಸ್ತಾನದಲ್ಲಿ ಅಪರಿಚಿತ ವ್ಯಕ್ತಿಗಳು ಈ ಕೃತ್ಯದ ಮಾಸ್ಟರ್ ಮೈಂಡ್ ಅನ್ನು ಹತ್ಯೆ ಮಾಡಿದ್ದಾರೆ ಎಂದು ಹೇಳುತ್ತಾರೆ. ಸದ್ಯ ಈ ಬಗ್ಗೆ ಚರ್ಚೆ ನಡೆಯುತ್ತಿದೆ.

ಪಾಕಿಸ್ತಾನದಲ್ಲಿ ಹೆಚ್ಚುತ್ತಿದೆ ಉಗ್ರರ ಹತ್ಯೆ

ವಿಶೇಷ ಎಂದರೆ ಪಾಕಿಸ್ತಾನದಲ್ಲಿ ಉಗ್ರರ ಹತ್ಯೆ ಹೆಚ್ಚುತ್ತಿದೆ. ಅಪರಿಚಿತರ ಗುಂಡಿನ ದಾಳಿಗೆ ಉಗ್ರರು ಬಲಿಯಾಗುತ್ತಿದ್ದಾರೆ. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಬೇಹುಗಾರಿಕೆ ಆರೋಪ ಹೊತ್ತು ಪಾಕಿಸ್ತಾನದ ಜೈಲಿನಲ್ಲಿದ್ದ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ಅವರನ್ನು ಹತ್ಯೆ ಮಾಡಿದ್ದ ಅಮೀರ್ ಸರ್ಫರಾಜ್ ಅಲಿಯಾಸ್ ತಾಂಬಾ ಎಂಬಾತನನ್ನು ಏಪ್ರಿಲ್‌ 14ರಂದು ಪಾಕಿಸ್ತಾನದ ಲಾಹೋರ್‌ನಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದರು.

ಬಂಧಿತರ ಸಂಖ್ಯೆ 50ಕ್ಕೆ ಏರಿಕೆ

ಈತನ್ಮಧ್ಯೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿಯ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಇದುವರೆಗೆ ಸುಮಾರು 50 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 9ರಂದು ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಶಿವ ಖೋರಿ ದೇವಸ್ಥಾನಕ್ಕೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ದಾಳಿ ನಡೆಸಿದ್ದರು. ಇದರಿಂದ ಚಾಲಕನ ನಿಯಂತ್ರಣ ತಪ್ಪಿದ ಬಸ್‌ ಆಳವಾದ ಕಂದಕಕ್ಕೆ ಬಿದ್ದಿತ್ತು. ʼʼಈ ಘಟನೆ ಬಗ್ಗೆ ಕಾಂಡಾ ಪ್ರದೇಶ ಪೊಲೀಸ್ ಠಾಣೆಯ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದ್ದು, ಈವರೆಗೆ 50 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆʼʼ ಎಂದು ರಿಯಾಸಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮೋಹಿತಾ ಶರ್ಮಾ ಹೇಳಿದ್ದಾರೆ.

ಮತ್ತೆ ಕಣಿವೆ ರಾಜ್ಯದಲ್ಲಿ ಗುಂಡಿನ ಮೊರೆತ

ಇದುವರೆಗೆ ಶಾಂತವಾಗಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರ ಉಪಟಳ ಆರಂಭವಾಗಿದೆ. ರಿಯಾಸಿ ಜತೆಗೆ ಭಯೋತ್ಪಾದಕರು ಇತರ ಎರಡು ಕಡೆ ದಾಳಿ ನಡೆಸಿದ್ದಾರೆ. ಕಥುವಾ ಮತ್ತು ದೋಡಾದಲ್ಲಿ ಉಗ್ರರು ದಾಂಧಲೆ ಎಬ್ಬಿಸಿದ್ದಾರೆ. ಈ ಪೈಕಿ 3 ಉಗ್ರರನ್ನು ಹತ್ಯೆ ಮಾಡಲಾಗಿದೆ.

ಇದನ್ನೂ ಓದಿ: All Eyes on Raesi: ಹಿಂದೂ ಯಾತ್ರಿಕರ ಹತ್ಯೆ: ಆಲ್ ಐಸ್ ಆನ್ ರಿಯಾಸಿ; ರಫಾ ರಫಾ ಅನ್ನುತ್ತಿದ್ದ ಸೆಲೆಬ್ರಿಟಿಗಳು ಈಗೆಲ್ಲಿ?

Continue Reading

Latest

Bakrid: ಬಕ್ರೀದ್ ಹಿನ್ನೆಲೆಯಲ್ಲಿ ಮಾರಾಟಕ್ಕಿಟ್ಟಿದ್ದ ಈ ಮೇಕೆಯ ಬೆಲೆ 69 ಲಕ್ಷ ರೂ!

Bakrid ಬಕ್ರೀದ್ ಹಬ್ಬದಂದು ಬಲಿದಾನದ ಫಲ ಸಿಗಬೇಕೆಂದರೆ ಮೇಕೆಯನ್ನು ಮುಸ್ಲಿಂರು ಅವರ ಸ್ವಂತ ಹಣದಿಂದ ಖರೀದಿಸಬೇಕಂತೆ. ಈ ರೀತಿ ಮಾಡುವುದರಿಂದ ಅವರಿಗೆ ಬಲಿದಾನದ ಸಂಪೂರ್ಣ ಫಲ ಸಿಗುತ್ತದೆ ಎನ್ನುವುದು ಅವರ ನಂಬಿಕೆ. ಹಾಗಾಗಿ ಮುಸ್ಲಿಂರು ಮೇಕೆಗಳನ್ನು ಕಷ್ಟಪಟ್ಟು ದುಡಿದ ಹಣದಿಂದ ಖರೀದಿಸುತ್ತಾರಂತೆ. ಆದರೆ ಬಕ್ರೀದ್ ದಿನ ಮೇಕೆಗಳ ಬೆಲೆ ಮಾತ್ರ ಕೇಳಿದ್ರೆ ಎಲ್ಲರೂ ಶಾಕ್ ಆಗುತ್ತಾರೆ. ಇನ್ನು ಒಂದೊಂದು ಮೇಕೆಗೂ ಒಂದೊಂದು ಬೆಲೆ ಇರುತ್ತದೆ. ಆದರೆ ಈ ಮೇಕೆಗಳಲ್ಲಿ ಒಂದು ಬಹಳ ದುಬಾರಿ ಮೇಕೆ ಇದೆ.ಅದುವೇ ಬ್ರಾಡ್ ಹೆಸರಿನ ಮೇಕೆ.

VISTARANEWS.COM


on

Bakrid
Koo

ಬೆಂಗಳೂರು : ಬಕ್ರೀದ್‌ ಮುಸ್ಲಿಂ ಭಾಂದವರು ಆಚರಿಸುವ ಹಬ್ಬ. ಬಕ್ರೀದ್‌ (Bakrid) ಹಬ್ಬದಂದು ಮೇಕೆಗಳನ್ನು ಬಲಿಕೊಡುವುದು ಅವರ ಸಂಪ್ರದಾಯ. ಇನ್ನು ವಿಶೇಷವೆಂದರೆ ಈ ಬಕ್ರೀದ್‌ ಹಬ್ಬದಂದು ಬಲಿದಾನದ ಫಲ ಸಿಗಬೇಕೆಂದರೆ ಮೇಕೆಯನ್ನು ಅವರ ಸ್ವಂತ ಹಣದಿಂದ ಖರೀದಿಸಬೇಕಂತೆ. ಈ ರೀತಿ ಮಾಡುವುದರಿಂದ ಅವರಿಗೆ ಬಲಿದಾನದ ಸಂಪೂರ್ಣ ಫಲ ಸಿಗುತ್ತದೆ ಎನ್ನುವುದು ಅವರ ನಂಬಿಕೆ. ಹಾಗಾಗಿ ಮುಸ್ಲಿಂರು ಮೇಕೆಗಳನ್ನು ಕಷ್ಟಪಟ್ಟು ದುಡಿದ ಹಣದಿಂದ ಖರೀದಿಸುತ್ತಾರಂತೆ. ಆದರೆ ಬಕ್ರೀದ್ ದಿನ ಮೇಕೆಗಳ ಬೆಲೆ ಮಾತ್ರ ಗಗನಕ್ಕೇರಿರುತ್ತದೆ.

ಇನ್ನು ಈ ಸಂದರ್ಭದಲ್ಲಿ ಲಕ್ಷಾಂತರ ಬೆಲೆಗೆ ಮೇಕೆಗಳು ಮಾರಾಟವಾಗುತ್ತವೆ. ಒಂದೊಂದು ಮೇಕೆಗೂ ಒಂದೊಂದು ಬೆಲೆ ಇರುತ್ತದೆ. ಆದರೆ ಈ ಮೇಕೆಗಳಲ್ಲಿ ಒಂದು ಬಹಳ ದುಬಾರಿ ಮೇಕೆ ಇದೆ. ಅದರ ಬಗ್ಗೆ ತಿಳಿದುಕೊಳ್ಳಿ.
ಬ್ರಾಡ್ ಎಂಬ ಹೆಸರಿನ ಮೇಕೆ ವಿಶ್ವದಲ್ಲಿ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗುತ್ತದೆ. ಹಾಗಾಗಿ ಅದರ ಹೆಸರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ.. ವರ್ಲ್ಡ್ ರೆಕಾರ್ಡ್ಸ್ ನ ಪ್ರಕಾರ, ಈ ಮೇಕೆಯ ಬೆಲೆ 82,600 ಯುಎಸ್ ಡಿ ಆಗಿದೆ. ಅಂದರೆ ಭಾರತೀಯ ರೂಪಾಯಿಗಳಲ್ಲಿ ಹೇಳುವುದಾದರೆ ಇದರ ಬೆಲೆ ಅಂದಾಜು 69 ಲಕ್ಷ ರೂ.ಗಳಾಗಿವೆ. ಇಂತಹ ಅತ್ಯಂತ ದುಬಾರಿ ಬೆಲೆಯ ಮೇಲೆ ಬ್ರಿಟನ್ ನಲ್ಲಿ ಹೆಚ್ಚು ಮಾರಾಟವಾಗುತ್ತದೆಯಂತೆ. ಇದಕ್ಕೆ ಇತ್ತೀಚಿನ ದಿನಗಳಲ್ಲಿ ಈ ಬೆಲೆ ನಿಗದಿಯಾಗಿಲ್ಲ ಬಹಳ ಹಿಂದೆ ಅಂದರೆ 1985ರಲ್ಲಿಯೇ ಈ ಮೇಕೆಗೆ ದುಬಾರಿ ಬೆಲೆ ನೀಡಲಾಗುತ್ತಿತ್ತಂತೆ.

ಅಂಗೋರಾ ಮೇಕೆಯ ವಿಶೇಷತೆಗಳು:

ಬಿಳಿ ಬಣ್ಣದ ಕೂದಲನ್ನು ಹೊಂದಿರುವ ಈ ಅಂಗೋರಾ ಮೇಕೆಗಳು ವಿಶ್ವದ ಅತ್ಯುತ್ತಮ ಮೇಕೆ ತಳಿಗಳಲ್ಲಿ ಒಂದಾಗಿದೆ. ಈ ಮೇಕೆಗಳನ್ನು ಉಣ್ಣೆಗಳಿಗಾಗಿ ಹೆಚ್ಚಿನ ಜನರು ಸಾಕುತ್ತಾರೆ. ಇದರಿಂದ ದೊರೆಯುವ ಉಣ್ಣೆಗಳಿಗೆ ಮೊಹೇರ್ ಎಂದು ಕರೆಯುತ್ತಾರೆ. ಇದರ ಉಣ್ಣೆ ಉತ್ತಮ ಗುಣಮಟ್ಟದಾಗಿರುತ್ತದೆ. ಹಾಗಾಗಿ ಈ ಮೇಕೆಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಬಕ್ರೀದ್ ಸಮಯದಲ್ಲಿ ಅನೇಕ ಜನರು ಹಣಕ್ಕಾಗಿ ಅವುಗಳನ್ನು ಮಾರಾಟ ಮಾಡುತ್ತಾರೆ.
ಮೇಕೆಗಳು ಅವುಗಳ ತಳಿಗಳ ಆಧಾರದ ಮೇಲೆ ವಿಶೇಷತೆಯನ್ನು ಹೊಂದಿರುತ್ತವೆ. ಮೇಕೆಗಳಲ್ಲಿ ಕೆಲವು ಕಪ್ಪು, ಬಿಳಿ ಬಣ್ಣದಲ್ಲಿದ್ದರೆ ಕೆಲವು ತಳಿಗಳ ಮೇಕೆಗಳ ಮೈಮೇಲೆ ವಿಶಿಷ್ಟವಾದ ಗುರುತುಗಳಿರುತ್ತದೆ. ಹಾಗಾಗಿ ಅವುಗಳನ್ನು ವಿಶೇಷವಾದವು ಎನ್ನಲಾಗುತ್ತದೆ.

ಇದನ್ನೂ ಓದಿ:ಸೇಬು ಹಣ್ಣುಗಳ ಮೇಲೆ ಸ್ಟಿಕ್ಕರ್; ಏನಿದರ ಹಿಂದಿರುವ ರಹಸ್ಯ?

ಇದೇ ರೀತಿ 2023ರಲ್ಲಿ ಮೈಮೇಲೆ ವಿಶಿಷ್ಟ ಗುರುತುಗಳನ್ನು ಹೊಂದಿರುವ ಮೇಕೆಯೊಂದು ಬಹಳ ಪ್ರಸಿದ್ಧವಾಗಿತ್ತು. ಅದು ಮೈಮೇಲೆ ವಿಶಿಷ್ಟ ಗುರುತುಗಳನ್ನು ಹೊಂದಿರುವ ಕಾರಣ ಅದರ ಮಾಲೀಕ 1 ಕೋಟಿ 12 ಲಕ್ಷದ 786 ರೂ. ಎಂಬುದಾಗಿ ತಿಳಿಸಿದ್ದ. ಈ ಮೇಕೆಯ ಹೆಸರು ಶೇರು. ಮಹಾರಾಷ್ಟ್ರದಲ್ಲಿ ವಾಸಿಸುತ್ತಿರುವ ಮೇಕೆ ಮಾಲೀಕನೊಬ್ಬನ ಬಳಿ ಇದು ಇತ್ತು. ಇದರ ದೇಹದ ಮೇಲೆ ಇದ್ದ ಗುರುತುಗಳನ್ನು ಹತ್ತಿರದಿಂದ ನೋಡಿದರೆ ಅದು “ ಅಲ್ಲಾ” ಮತ್ತು “ಮೊಹಮ್ಮದ್” ಎಂದು ಉರ್ದುವಿನಲ್ಲಿ ಬರೆದಿರುವುದನ್ನು ಕಾಣಬಹುದು. ಆದರೆ ಈ ಮೇಕೆ ಮಾರಾಟವಾಗುವ ಮುನ್ನವೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

Continue Reading

ಕ್ರೀಡೆ

BAN vs NEP: ಸ್ವಿಮ್ಮಿಂಗ್ ಪೂಲ್​ಗೆ ಜಿಗಿದು ಸಂಭ್ರಮಿಸಿದ ನೇಪಾಳ ಅಭಿಮಾನಿ; ವಿಡಿಯೊ ವೈರಲ್​

BAN vs NEP: ನೇಪಾಳ ತಂಡದ ಬೌಲಿಂಗ್​ ಇನಿಂಗ್ಸ್​ನ 5ನೇ ಓವರ್​ ನಾಯಕ ರೋಹಿತ್ ಪೌಡೆಲ್ ಎಸೆದರು. ಈ ಓವರ್​ನ 4ನೇ ಎಸೆತಕ್ಕೆ ಬಾಂಗ್ಲಾದೇಶದ ಬ್ಯಾಟರ್​ ತೌಹಿದ್ ಹೃದಯೋಯ್ ಸಿಕ್ಸರ್​ ಬಾರಿಸುವ ಯತ್ನದಲ್ಲಿ ಸಂದೀಪ್ ಲಮಿಚಾನೆಗೆ ಕ್ಯಾಚ್​ ನೀಡಿ ವಿಕೆಟ್​ ಕಳೆದುಕೊಂಡರು. ಈ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ನೇಪಾಳದ ಅಭಿಮಾನಿಯೊಬ್ಬ ಸಂತಸದಲ್ಲಿ ಸ್ಟೇಡಿಯಂನ ಮುಂದೆ ಇದ್ದ ಸ್ವಿಮ್ಮಿಂಗ್ ಪೂಲ್​ಗೆ ಜಿಗಿದ್ದಾನೆ.

VISTARANEWS.COM


on

BAN vs NEP
Koo

ಕಿಂಗ್‌ಸ್ಟನ್‌: ಸೋಮವಾರ ನಡೆದ ಟಿ20 ವಿಶ್ವಕಪ್​ನ(T20 World Cup 2024) ಲೀಗ್​ ಪಂದ್ಯದಲ್ಲಿ ನೇಪಾಳ(BAN vs NEP) ತಂಡ ಬಾಂಗ್ಲಾದೇಶ ವಿರುದ್ಧ ಸೋಲು ಕಂಡರೂ ಕೂಡ ಅಭಿಮಾನಿಯೊಬ್ಬ ನೇಪಾಳ ತಂಡಕ್ಕೆ ಬೆಂಬಲ ಸೂಚಿಸಿದ ರೀತಿ ಎಲ್ಲರ ಗಮನಸೆಳೆದಿದೆ. ಬಾಂಗ್ಲಾದೇಶದ ವಿಕೆಟ್​ ಪತನಗೊಂಡ ವೇಳೆ ಈ ಅಭಿಮಾನಿ ಸ್ಟೇಡಿಯಂನಲ್ಲಿದ್ದ ಸ್ವಿಮ್ಮಿಂಗ್ ಪೂಲ್​ಗೆ(Nepal Fan Jumps in Swimming Pool) ಜಿಗಿದು ಸಂಭ್ರಮಿಸಿದ್ದಾನೆ. ಈ ವಿಡಿಯೊವನ್ನು ಐಸಿಸಿ ತನ್ನ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದೆ. ವಿಡಿಯೊ ಎಲ್ಲೆಡೆ ವೈರಲ್​ ಆಗಿದೆ.

ನೇಪಾಳ ತಂಡದ ಬೌಲಿಂಗ್​ ಇನಿಂಗ್ಸ್​ನ 5ನೇ ಓವರ್​ ನಾಯಕ ರೋಹಿತ್ ಪೌಡೆಲ್ ಎಸೆದರು. ಈ ಓವರ್​ನ 4ನೇ ಎಸೆತಕ್ಕೆ ಬಾಂಗ್ಲಾದೇಶದ ಬ್ಯಾಟರ್​ ತೌಹಿದ್ ಹೃದಯೋಯ್ ಸಿಕ್ಸರ್​ ಬಾರಿಸುವ ಯತ್ನದಲ್ಲಿ ಸಂದೀಪ್ ಲಮಿಚಾನೆಗೆ ಕ್ಯಾಚ್​ ನೀಡಿ ವಿಕೆಟ್​ ಕಳೆದುಕೊಂಡರು. ಈ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ನೇಪಾಳದ ಅಭಿಮಾನಿಯೊಬ್ಬ ಸಂತಸದಲ್ಲಿ ಸ್ಟೇಡಿಯಂನ ಮುಂದೆ ಇದ್ದ ಸ್ವಿಮ್ಮಿಂಗ್ ಪೂಲ್​ಗೆ ಜಿಗಿದ್ದಾನೆ. ಈ ವಿಡಿಯೊವನ್ನು ಐಸಿಸಿ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳುವುದರ ಜತೆಗೆ ಈ ದೃಶ್ಯಕ್ಕೆ ಉತ್ತಮ ಎಸೆತ, ಉತ್ತಮ ಕ್ಯಾಚ್, ಉತ್ತಮ ಪೂಲ್ ಆಚರಣೆ ಎಂದು ಇನ ಬರೆದುಕೊಂಡಿದೆ.


ಇಲ್ಲಿನ ಸೇಂಟ್ ವಿನ್ಸೆಂಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಬಾಂಗ್ಲಾದೇಶ 19.3 ಓವರ್​ಗಳಲ್ಲಿ ಕೇವಲ 106 ರನ್​ಗೆ ಕುಸಿತ ಕಂಡಿತು. ಈ ಮೊತ್ತವನ್ನು ನೋಡುವಾಗ ಬಾಂಗ್ಲಾ ಸೋಲು ಕಾಣಬಹುದೆಂದು ಊಹಿಸಲಾಯಿತು. ಆದರೆ, ಬಾಂಗ್ಲಾ ಬೌಲರ್​ಗಳು ಉತ್ಕೃಷ್ಟ ಮಟ್ಟದ ಬೌಲಿಂಗ್​ ದಾಳಿ ನಡೆಸಿ ನೇಪಾಳವನ್ನು 85 ರನ್​ಗೆ ಕಟ್ಟಿಹಾಕಿ ಅಮೋಘ ಗೆಲುವು ಸಾಧಿಸಿದರು. ಈ ಗೆಲುವಿನೊಂದಿಗೆ ಬಾಂಗ್ಲಾ ಸೂಪರ್​-8 ಹಂತಕ್ಕೂ ಪ್ರವೇಶ ಪಡೆಯಿತು. ಭಾರತ, ಆಸ್ಟ್ರೇಲಿಯಾ, ಅಫಘಾನಿಸ್ತಾನ ತಂಡದ ಜತೆ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ.

ಇದನ್ನೂ ಓದಿ T20 World Cup 2024: ಸೂಪರ್​-8 ಹಂತದ ವೇಳಾಪಟ್ಟಿ ಪ್ರಕಟ; 8 ತಂಡಗಳ ಮಾಹಿತಿ ಹೀಗಿದೆ

ಸಣ್ಣ ಮೊತ್ತವನ್ನು ಚೇಸಿಂಗ್​ ನಡೆಸಿದ ನೇಪಾಳ ಆರಂಭಿಕ ಆಘಾತ ಎದುರಿಸಿದರೂ ಕೂಡ ಮಧ್ಯಮ ಕ್ರಮಾಂಕದಲ್ಲಿ ಕುಶಾಲ್ ಮಲ್ಲ ಮತ್ತು ದೀಪೇಂದ್ರ ಸಿಂಗ್ ಐರಿ ಉತ್ತಮ ಜತೆಯಾಟವೊಂದನ್ನು ಸಂಘಟಿಸಿದ ಕಾರಣ ತಂಡ ಚೇತರಿಕೆಯ ಹಾದಿಗೆ ಮರಳಿ ಗೆಲುವು ಕಾಣುವ ಸ್ಥಿತಿಯಲ್ಲಿತ್ತು. ಆದರೆ, ಮುಸ್ತಫಿಜುರ್​ ರೆಹಮಾನ್​ ಅವರು ಉಭತ ಆಟಗಾರರ ವಿಕೆಟ್​ ಬೇಟೆಯಾಡಿ ಬಾಂಗ್ಲಾಗೆ ಯಶಸ್ಸು ತಂದುಕೊಟ್ಟರು. ಕುಶಾಲ್ ಮಲ್ಲ 27 ರನ್​ ಬಾರಿಸಿದರೆ, ದೀಪೇಂದ್ರ ಸಿಂಗ್ 25 ರನ್​ ಗಳಿಸಿದರು. ಇವರಿಬ್ಬರ ವಿಕೆಟ್​ ಪತನಗೊಳ್ಳುತ್ತಿದ್ದಂತೆ ನೆಪಾಳ ಸೋಲು ಕೂಡ ಖಚಿತಗೊಂಡಿತು.

ಬಾಂಗ್ಲಾದೇಶದ ಪರ ಘಾತಕ ಬೌಲಿಂಗ್​ ದಾಳಿ ನಡೆಸಿದ ತಂಜಿಮ್ ಹಸನ್ ಸಾಕಿಬ್ 4 ಓವರ್​ ಎಸೆದು 2 ಮೇಡನ್​ ಸಹಿತ ಕೇವಲ 7 ರನ್​ಗೆ 4 ವಿಕೆಟ್​ ಕಿತ್ತು. ಜೀವನಶ್ರೇಷ್ಠ ಬೌಲಿಂಗ್​ ಪ್ರದರ್ಶನ ತೋರಿದರು. ಮುಸ್ತಫಿಜುರ್ ರೆಹಮಾನ್ 7 ರನ್​ಗೆ 3 ವಿಕೆಟ್​ ಪಡೆದರು. ನಾಯಕ ಶಕೀಬ್​ 2 ವಿಕೆಟ್​ ಕಿತ್ತು ಮಿಂಚಿದರು. ಮುಂದಿನ ಪಂದ್ಯದಲ್ಲಿ ಶಕೀಬ್​ ಮೊದಲ ಎಸೆತದಲ್ಲೇ ವಿಕೆಟ್​ ಕಿತ್ತರೆ ಬ್ರೋಕನ್​ ಹ್ಯಾಟ್ರಿಕ್​ ವಿಕೆಟ್​ ಕಿತ್ತ ದಾಖಲೆ ಮಾಡಲಿದ್ದಾರೆ.

Continue Reading
Advertisement
Actor Darshan Police To Serve Notice To sandalwood comedy actor
ಸ್ಯಾಂಡಲ್ ವುಡ್6 mins ago

Actor Darshan: ದರ್ಶನ್ ಪ್ರಕರಣ; ಸ್ಯಾಂಡಲ್‌ವುಡ್‌ ಖ್ಯಾತ ಹಾಸ್ಯ ನಟ ಚಿಕ್ಕಣ್ಣಗೂ ನೋಟಿಸ್‌?

Viral Video
ಪ್ರಮುಖ ಸುದ್ದಿ9 mins ago

Viral Video: ಬಕ್ರೀದ್ ಬಲಿ ಕೊಡುವ ಮೇಕೆಯ ಮೈಮೇಲೆ ʼರಾಮʼ ನಾಮ; ಹಿಂದೂಗಳನ್ನು ಕೆಣಕಿದ ವ್ಯಕ್ತಿ ಅರೆಸ್ಟ್

Sandeep Lamichhane
ಕ್ರೀಡೆ10 mins ago

Sandeep Lamichhane: ಪಾಕ್​ ಆಟಗಾರನನ್ನು ಹಿಂದಿಕ್ಕಿ ಟಿ20 ಕ್ರಿಕೆಟ್​ನಲ್ಲಿ ದಾಖಲೆ ಬರೆದ ನೇಪಾಳ ಸ್ಪಿನ್ನರ್​

Yogi Adithyanath
Latest12 mins ago

Yogi Adithyanath: ಎರಡು ವರ್ಷಗಳ ಬಳಿಕ ತಾಯಿಯನ್ನು ಭೇಟಿಯಾದ ಯೋಗಿ ಆದಿತ್ಯನಾಥ್

Reasi Terror Attack
ವೈರಲ್ ನ್ಯೂಸ್23 mins ago

Reasi Terror Attack: ಪಾಕಿಸ್ತಾನದಲ್ಲಿ ರಿಯಾಸಿ ಭಯೋತ್ಪಾದಕ ದಾಳಿಯ ಮಾಸ್ಟರ್‌ ಮೈಂಡ್‌ನ ಹತ್ಯೆ; ವಿಡಿಯೊ ವೈರಲ್‌

Bakrid 2024
ಬೆಂಗಳೂರು36 mins ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Actor Darshan Please leave Pavitra Darshan request to police
ಸಿನಿಮಾ48 mins ago

Actor Darshan: ಪ್ಲೀಸ್‌ ಪವಿತ್ರಾಳನ್ನು ಬಿಟ್ಟು ಬಿಡಿ ಎಂದು ಅಂಗಲಾಚುತ್ತಿರುವ ದರ್ಶನ್‌?

Bakrid
Latest49 mins ago

Bakrid: ಬಕ್ರೀದ್ ಹಿನ್ನೆಲೆಯಲ್ಲಿ ಮಾರಾಟಕ್ಕಿಟ್ಟಿದ್ದ ಈ ಮೇಕೆಯ ಬೆಲೆ 69 ಲಕ್ಷ ರೂ!

Real Estate
ವಾಣಿಜ್ಯ54 mins ago

Real Estate: ಹಲವರಿಗೆ ಮನೆ ಇಲ್ಲ, ಇದ್ದವರು ಬಳಸುತ್ತಿಲ್ಲ! ದೇಶದಲ್ಲಿ 1 ಕೋಟಿಗೂ ಹೆಚ್ಚು ಫ್ಲ್ಯಾಟ್ ಗಳು ಖಾಲಿ ಬಿದ್ದಿವೆ!

Smriti Mandhana
ಕ್ರೀಡೆ56 mins ago

Smriti Mandhana: ಶತಕ ಬಾರಿಸಿ ವಿಶೇಷ ದಾಖಲೆ ಬರೆದ ಸ್ಮೃತಿ ಮಂಧಾನ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bakrid 2024
ಬೆಂಗಳೂರು36 mins ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ19 hours ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ20 hours ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 day ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ3 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ3 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

ಟ್ರೆಂಡಿಂಗ್‌