Real Estate: ಹಲವರಿಗೆ ಮನೆ ಇಲ್ಲ, ಇದ್ದವರು ಬಳಸುತ್ತಿಲ್ಲ! ದೇಶದಲ್ಲಿ 1 ಕೋಟಿಗೂ ಹೆಚ್ಚು ಫ್ಲ್ಯಾಟ್ ಗಳು ಖಾಲಿ ಬಿದ್ದಿವೆ! - Vistara News

ವಾಣಿಜ್ಯ

Real Estate: ಹಲವರಿಗೆ ಮನೆ ಇಲ್ಲ, ಇದ್ದವರು ಬಳಸುತ್ತಿಲ್ಲ! ದೇಶದಲ್ಲಿ 1 ಕೋಟಿಗೂ ಹೆಚ್ಚು ಫ್ಲ್ಯಾಟ್ ಗಳು ಖಾಲಿ ಬಿದ್ದಿವೆ!

ಖರೀದಿ ಮಾಡಿರುವ ಒಂದು ಕೋಟಿಗೂ ಹೆಚ್ಚು ಫ್ಲ್ಯಾಟ್ ಗಳು ದೇಶದಲ್ಲಿ ಖಾಲಿ ಇವೆ. ಮಾತ್ರವಲ್ಲದೆ ದೇಶದಲ್ಲಿ ಅಗ್ಗದ ಮನೆಗಳಿಗೆ ಬೇಡಿಕೆ ವೇಗವಾಗಿ ಕುಸಿಯುತ್ತಿದ್ದು, ದುಬಾರಿ ಮನೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರ ಅರ್ಥ ಎಲ್ಲರೂ ಶ್ರೀಮಂತರಾಗಿದ್ದಾರೆ ಎಂದಲ್ಲ. ರಿಯಲ್ ಎಸ್ಟೇಟ್ (Real Estate) ಉದ್ಯಮಿಗಳು ಶೇ. 10ರಷ್ಟಿರುವ ಶ್ರೀಮಂತರಿಗೆ ತಮ್ಮ ಆಸ್ತಿ ಮಾರಾಟಕ್ಕೆ ಆಸಕ್ತಿ ವಹಿಸಿರುವುದು ಇದಕ್ಕೆ ಮುಖ್ಯ ಕಾರಣ ಎಂದಿದ್ದಾರೆ ಭಾರತದ ರಾಷ್ಟ್ರೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಮಂಡಳಿ (ನರೆಡ್ಕೊ) ಅಧ್ಯಕ್ಷ ಜಿ. ಹರಿಬಾಬು.

VISTARANEWS.COM


on

Real Estate
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಳಕೆಯಾಗದ ಆಸ್ತಿಯನ್ನು (assets) ಇಟ್ಟುಕೊಳ್ಳುವುದು ಒಂದು ರಾಷ್ಟ್ರೀಯ ಅಪರಾಧ (national crime) ಎಂದು ನಾನು ಭಾವಿಸುತ್ತೇನೆ. ದೇಶದಲ್ಲಿ ಒಂದೆಡೆ ವಸತಿ ಕೊರತೆಯಿದೆ. ಇನ್ನೊಂದೆಡೆ 1.14 ಕೋಟಿ ಫ್ಲಾಟ್‌ಗಳು ಖಾಲಿ ಇವೆ ಎಂದು ಭಾರತದ ರಾಷ್ಟ್ರೀಯ ರಿಯಲ್ ಎಸ್ಟೇಟ್ (Real Estate) ಅಭಿವೃದ್ಧಿ ಮಂಡಳಿ (NAREDCO) ಅಧ್ಯಕ್ಷ ಜಿ. ಹರಿಬಾಬು (G. Haribabu) ತಿಳಿಸಿದ್ದಾರೆ.

ಪ್ರಸ್ತುತ ದೇಶದಲ್ಲಿ ಸುಮಾರು ಒಂದು ಕೋಟಿ ಮನೆಗಳು ಖಾಲಿ ಬಿದ್ದಿವೆ. ಒಂದೆಡೆ ದುಬಾರಿ ಮನೆಗಳಿಗೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಮತ್ತೊಂದೆಡೆ ದೇಶದ ದೊಡ್ಡ ನಗರಗಳಲ್ಲಿ ಅಗ್ಗದ ಮನೆಗಳ ಬೇಡಿಕೆ ವೇಗವಾಗಿ ಕುಸಿಯುತ್ತಿದೆ ಎಂದು ಅವರು ಹೇಳಿದ್ದಾರೆ.

ಅಂಕಿಅಂಶಗಳ ಪ್ರಕಾರ 2019 ಮತ್ತು 2023 ರ ನಡುವೆ 1.5 ಕೋಟಿ ರೂ. ಗಿಂತ ಹೆಚ್ಚು ವೆಚ್ಚದ ಮನೆಗಳ ಬೇಡಿಕೆಯು ಸುಮಾರು 1000 ಪ್ರತಿಶತದಷ್ಟು ಹೆಚ್ಚಾಗಿದೆ. ಶ್ರೀಮಂತರು ಮತ್ತು ಸಾಂಸ್ಥಿಕ ಹೂಡಿಕೆದಾರರು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಜಿಗಿದಿರುವುದರಿಂದ ಈ ರೀತಿಯಾಗಿದೆ. ಆದರೆ, ದೇಶಕ್ಕೆ ಅಗ್ಗದ ಮನೆಗಳ ಅಗತ್ಯವಿದ್ದು, ರಿಯಲ್ ಎಸ್ಟೇಟ್ ಕ್ಷೇತ್ರದ ಅಭಿವೃದ್ಧಿಗೆ ಅವರ ಬೇಡಿಕೆಯನ್ನು ಹೆಚ್ಚಿಸಬೇಕು ಎಂದು ತಿಳಿಸಿದ್ದಾರೆ.


ಬಿಲ್ಡರ್‌ ಗಳಿಗೆ ಕೇವಲ ಶೇ. 10ರಷ್ಟು ಜನರಷ್ಟೇ ಗುರಿ

2022ರಲ್ಲಿ ಹೈದರಾಬಾದ್‌ನಲ್ಲಿ 5,300 ಅಗ್ಗದ ಮನೆಗಳನ್ನು ಮಾರಾಟ ಮಾಡಲಾಗಿದೆ. 2023ರಲ್ಲಿ ಈ ಸಂಖ್ಯೆ ಕೇವಲ 3,800 ಕ್ಕೆ ಇಳಿಕೆಯಾಗಿದೆ. ಕೆಲವೇ ಜನರಲ್ಲಿ ಹಣವು ವೇಗವಾಗಿ ಹೆಚ್ಚುತ್ತಿದೆ. ದೇಶದ ಜನಸಂಖ್ಯೆಯ ಶೇ. 10ರಷ್ಟು ಮಂದಿಯಲ್ಲಿ ಶೇ. 63ರಷ್ಟು ಸಂಪತ್ತು ಸಂಗ್ರಹವಾಗಿದೆ. ಈ ಸಂಖ್ಯೆ 14 ಕೋಟಿ ಜನರದ್ದು. ಈ ಸಮಯದಲ್ಲಿ ಹೆಚ್ಚಿನ ಬಿಲ್ಡರ್‌ಗಳು ಈ ಜನರನ್ನು ಗುರಿಯಾಗಿಸಿಕೊಂಡಿದ್ದಾರೆ. ಸುಮಾರು 1.14 ಕೋಟಿ ಮನೆಗಳು ಖಾಲಿ ಬಿದ್ದಿರುವುದಕ್ಕೆ ಇದೇ ಮುಖ್ಯ ಕಾರಣ ಎಂದು ಅವರು ಹೇಳಿದ್ದಾರೆ.

ಖರೀದಿಸಿ ಬಳಕೆಯಾಗದ ಮನೆಗಳು

ಹೂಡಿಕೆದಾರರು ಖರೀದಿಸುವ ಮನೆಗಳನ್ನು ಬಳಸುತ್ತಿಲ್ಲ ಎಂದು ತಿಳಿಸಿರುವ ಹರಿಬಾಬು, ಈ ಮನೆಗಳನ್ನು ಬಾಡಿಗೆಗೆ ಸಹ ನೀಡುತ್ತಿಲ್ಲ. ಒಂದೆಡೆ ಜನ ಮನೆ ಹುಡುಕಿಕೊಂಡು ಅಲೆದಾಡುತ್ತಿದ್ದರೆ, ಮತ್ತೊಂದೆಡೆ ಈ ಮನೆಗಳು ಖಾಲಿ ಬಿದ್ದಿವೆ. ಹೂಡಿಕೆಗಾಗಿ ಖರೀದಿಸಿದ ಈ ಮನೆಗಳು ಬಳಕೆಯಾಗುತ್ತಿಲ್ಲ. ಇದೊಂದು ರೀತಿಯ ಅಪರಾಧ. ಅಂತಹ ಮನೆಗಳ ಮೇಲಿನ ಆಸ್ತಿ ತೆರಿಗೆಯನ್ನು ಎರಡು ಅಥವಾ ಮೂರು ಪಟ್ಟು ಹೆಚ್ಚಿಸಬೇಕು. ಇದರಿಂದ ಈ ಆಸ್ತಿಯನ್ನು ಬಳಸಬಹುದು. ನಮ್ಮ ಜನಸಂಖ್ಯೆಯ ಶೇ.60ರಷ್ಟು ಮಂದಿಗೆ ಮನೆ ಖರೀದಿಸಲು ಸಾಧ್ಯವಾಗುತ್ತಿಲ್ಲ. ಅವರು ಸಂಪೂರ್ಣವಾಗಿ ಸರ್ಕಾರದ ಯೋಜನೆಗಳ ಮೇಲೆ ಅವಲಂಬಿತರಾಗಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: Water Price Hike : ತೈಲ ದರ ಬಳಿಕ ಕುಡಿಯುವ ನೀರು ದುಬಾರಿ! ನೀರಿನ ದರ ಏರಿಕೆಗೆ ಜಲಮಂಡಳಿ ಪ್ರಸ್ತಾವನೆ!

ಶುಲ್ಕಗಳಲ್ಲಿ ರಿಯಾಯಿತಿ

ಕೈಗೆಟಕುವ ದರದಲ್ಲಿ ಮನೆ ನಿರ್ಮಿಸಲು ಬಿಲ್ಡರ್ ಗಳ ಮೇಲೆ ಸರಕಾರ ಒತ್ತಡ ಹೇರಬೇಕು ಎಂದ ಅವರು, ಕೈಗೆಟಕುವ ಬೆಲೆಯ ಮನೆಗಳಿಗೆ ಜಿಎಸ್‌ಟಿ, ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕವನ್ನು ಮನ್ನಾ ಮಾಡಬೇಕು. ಈ ಬದಲಾವಣೆಗಳು ಕೈಗೆಟುಕುವ ದರದ ವಸತಿ ವಲಯದಲ್ಲಿ ಶೇ. 25ರಷ್ಟು ಬೆಳವಣಿಗೆಯನ್ನು ತರುವ ನಿರೀಕ್ಷೆಯಿದೆ. ಕೆಳಮಧ್ಯಮ ಮತ್ತು ಮಧ್ಯಮ ವರ್ಗದವರ ಬಗ್ಗೆ ಸರಕಾರ ಚಿಂತನೆ ನಡೆಸಬೇಕಿದೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪದೊಂದಿಗೆ ನಾವು ಸಾಗುತ್ತಿದ್ದೇವೆ. ನಮ್ಮ ಜನಸಂಖ್ಯೆಯ ಶೇ. 40ರಷ್ಟು ಮಂದಿ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದರೆ, ನಾವು ಅಭಿವೃದ್ಧಿ ಹೊಂದಿದ ದೇಶ ಎಂದು ಹೇಗೆ ಕರೆಯಬಹುದು ಎಂದು ಅವರು ಪ್ರಶ್ನಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Liquor Price Karnataka: ಶ್ರೀಮಂತರಿಗೆ ಮತ್ತು, ಬಡವರಿಗೆ ಕುತ್ತು! ಪ್ರೀಮಿಯಂ ಮದ್ಯ ದರ ಇಳಿಕೆ, ಬಡವರ ಎಣ್ಣೆ ರೇಟ್‌ ಏರಿಕೆ?

Liquor Price Karnataka: ಈ ಹಿಂದೆ ಜನವರಿ 1ರಂದು ಕಂಪನಿಗಳು ಮದ್ಯದ ದರ ಏರಿಕೆ ಮಾಡಿದ್ದವು. ಓಲ್ಡ್‌ ಟ್ಯಾವರ್ನ್‌(ಒಟಿ), ಬ್ಲೆಂಡರ್ಸ್‌ ಪ್ರೈಡ್‌ (ಬಿಪಿ), 8 ಪಿಎಂ ಲಿಕ್ಕರ್ ದರಗಳನ್ನು 20 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಇದೀಗ ಮತ್ತೆ ಮದ್ಯದ ದರಗಳನ್ನು ಸರ್ಕಾರ ಏರಿಸಲು ಮುಂದಾಗಿದೆ. ಅದರಲ್ಲೂ ರಾಜ್ಯದ ಕೂಲಿ ಕಾರ್ಮಿಕರು, ಬಡ ವರ್ಗದ ಜನ ಅತೀ ಹೆಚ್ಚು ಸೇವಿಸುವ ಎಣ್ಣೆಗಳ ದರವೇ ಏರಿಕೆಯಾಗಲಿದೆ.

VISTARANEWS.COM


on

Liquor Price karnataka
Koo

ಬೆಂಗಳೂರು: ಜುಲೈ 1ರಿಂದ ಮದ್ಯದ ಹೊಸ ದರಗಳನ್ನು (Liquor Price Karnataka) ಜಾರಿ ಮಾಡಲು ರಾಜ್ಯದ ಸಿಎಂ ಸಿದ್ದರಾಮಯ್ಯ (CM Siddaramaiah) ಸರಕಾರ ಮುಂದಾಗಿದೆ. ಗ್ಯಾರಂಟಿ ಯೋಜನೆಗಳಿಗೆ (Guarantee schemes) ಹಣ ಹೊಂಚಲು ಸಿಕ್ಕ ಸಿಕ್ಕಲ್ಲೆಲ್ಲಾ ದರ ಏರಿಕೆ (Price hike) ಮಾಡುತ್ತಿರುವ ಸರಕಾರ, ಇದೀಗ ಬಡವರ ಎಣ್ಣೆ ರೇಟ್‌ ಏರಿಸಲು ಯೋಚಿಸಿದೆ. ಅದೇ ಸಮಯಕ್ಕೆ, ಶ್ರೀಮಂತರು ಸೇವಿಸುವ ಪ್ರೀಮಿಯಂ ಬ್ರಾಂಡ್‌ಗಳ (Premium liquor) ಮದ್ಯಗಳ ಬೆಲೆ ಇಳಿಕೆಗೂ ಚಿಂತಿಸುತ್ತಿದೆ.

ಈ ಹಿಂದೆ ಜನವರಿ 1ರಂದು ಕಂಪನಿಗಳು ಮದ್ಯದ ದರ ಏರಿಕೆ ಮಾಡಿದ್ದವು. ಓಲ್ಡ್‌ ಟ್ಯಾವರ್ನ್‌(ಒಟಿ), ಬ್ಲೆಂಡರ್ಸ್‌ ಪ್ರೈಡ್‌ (ಬಿಪಿ), 8 ಪಿಎಂ ಲಿಕ್ಕರ್ ದರಗಳನ್ನು 20 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಇದೀಗ ಮತ್ತೆ ಮದ್ಯದ ದರಗಳನ್ನು ಸರ್ಕಾರ ಏರಿಸಲು ಮುಂದಾಗಿದೆ. ಅದರಲ್ಲೂ ರಾಜ್ಯದ ಕೂಲಿ ಕಾರ್ಮಿಕರು, ಬಡ ವರ್ಗದ ಜನ ಅತೀ ಹೆಚ್ಚು ಸೇವಿಸುವ ಎಣ್ಣೆಗಳ ದರವೇ ಏರಿಕೆಯಾಗಲಿದೆ.

ಹಾಲಿ ಒಟಿ ವಿಸ್ಕಿ 180 mlಗೆ 123 ರೂಪಾಯಿ ಇದೆ. ಜುಲೈ 1ರಿಂದ ಒಟಿ ಬೆಲೆ 130 ರೂಪಾಯಿ ನಿಗದಿಯಾಗಲಿದೆ. 8 ಪಿಎಂ ವಿಸ್ಕಿ 123 ರೂ. ಯಿಂದ 130ಕ್ಕೇರಿಕೆ ಸಾಧ್ಯತೆ ಇದೆ. ಚಾಯ್ಸ್ 80 ರೂಪಾಯಿ ಇದ್ದು ಜುಲೈನಿಂದ 83 ರೂಪಾಯಿ, ಹೈವರ್ಡ್ಸ್ 80 ರೂಪಾಯಿಯಿಂದ 83 ರೂಪಾಯಿ, ಬಿಪಿ ವಿಸ್ಕಿ ದರ ಹಾಲಿ 159 ರೂಪಾಯಿ ಇದ್ದು, ಜುಲೈನಿಂದ 154 ರೂಪಾಯಿ ಆಗುವ ಸಾಧ್ಯತೆ ಇದೆ.

ಇದೇ ವೇಳೆಗೆ ಬೆಲೆಬಾಳುವ ಪ್ರೀಮಿಯಂ ಮದ್ಯಗಳ ದರಗಳಲ್ಲಿ ಇಳಿಕೆಯಾಗುತ್ತಿದೆ. ಕ್ವಾರ್ಟರ್‌ಗೆ 300 ರೂಪಾಯಿ ಮೇಲಿರುವ ಬ್ರ್ಯಾಂಡ್‌ಗಳ ದರ 60ರಿಂದ 100 ರೂಪಾಯಿ ಇಳಿಕೆಯಾಗಲಿದೆ. 383 ರೂಪಾಯಿ ಬೆಲೆ ಬಾಳುವ ಮದ್ಯ 295 ರೂ.ಗೆ, 680 ರೂ. ಬೆಲೆ ಬಾಳುವ ಮದ್ಯ 595 ರೂಪಾಯಿಗೆ ಇಳಿಕೆ ಆಗುವ ಸಾಧ್ಯತೆ ಇದೆ.

ಈಗ 750 ಎಂ.ಎಲ್. ಗಾತ್ರದ ಬಾಟಲಿಗೆ ₹2,000 ದರ ಇರುವ ಬ್ರಾಂಡ್‌ಗಳ ಮದ್ಯದ ದರವು ಜುಲೈ 1ರಿಂದ ₹1,700ರಿಂದ ₹1,800ಕ್ಕೆ ಇಳಿಕೆಯಾಗಲಿದೆ. ಪ್ರತಿ ಬಾಟಲಿಗೆ ₹5,000 ದರ ಇರುವ ಬ್ರಾಂಡ್ ಮದ್ಯಗಳ ದರ ₹3,600ರಿಂದ 23,700ಕ್ಕೆ ಇಳಿಯಲಿದೆ. ಪ್ರತಿ ಬಾಟಲಿಗೆ 27,100 ಇರುವ ಮದ್ಯದ ದರ 5,200ರ ಅಸುಪಾಸಿಗೆ ಕಡಿಮೆಯಾಗುವ ಸಾಧ್ಯತೆಯೂ ಇದೆ.

ಸೆಮಿ ಪ್ರೀಮಿಯಂ ಮತ್ತು ಪ್ರೀಮಿಯಂ ಸ್ಲ್ಯಾಬ್‌ಗಳ ಮದ್ಯದ ದರ ಸಾಕಷ್ಟು ದುಬಾರಿಯೇ ಇದೆ. ಈ ಹಿನ್ನೆಲೆಯಲ್ಲಿ ಕರಡು ಅಧಿಸೂಚನೆ ಪ್ರಕಟಿಸಿದ ಸರಕಾರ, ಜುಲೈ 1ರಿಂದ ಪರಿಷ್ಕೃತ ಮದ್ಯ ದರ ಅನ್ವಯಿಸಲಿದೆ ಎಂದು ಗೊತ್ತಾಗಿದೆ. ಗ್ಯಾರಂಟಿಗಳಿಗೆ ಹಣ ಹೊಂಚಬೇಕಾದ ಸ್ಥಿತಿಯಲ್ಲಿರುವ ಸರಕಾರ, ವರಮಾನ ಹೆಚ್ಚಳಕ್ಕಾಗಿ ಹೆಚ್ಚುವರಿ ಅಬಕಾರಿ ತೆರಿಗೆ (ಎಇಡಿ) ಇಳಿಕೆಗೆ ಮುಂದಾಗಿದೆ ಎಂದು ತಿಳಿದುಬಂದಿದೆ.

ಟಾರ್ಗೆಟ್‌ ಮೀರಿ ಹೋದ ಅಬಕಾರಿ ಇಲಾಖೆ; 15 ಪರ್ಸೆಂಟ್‌ ಹೆಚ್ಚು ವರಮಾನ

ಸರ್ಕಾರದ ಬೊಕ್ಕಸಕ್ಕೆ ಮದ್ಯಪ್ರಿಯರು ಭರ್ಜರಿ ಕಿಕ್ ಕೊಟ್ಟಿದ್ದಾರೆ. ರಾಜ್ಯದಲ್ಲಿ ದರ ಏರಿಕೆ ನಡುವೆಯೂ ಮದ್ಯ ಮಾರಾಟ ಬಾರಿ ಹೆಚ್ಚಳ ಕಂಡಿದೆ. 2023-24ನೇ ಸಾಲಿನಲ್ಲಿ ಸಾವಿರಾರು ಕೋಟಿ ರೂಪಾಯಿ ರಾಜ್ಯ ಸರ್ಕಾರದ ಖಜಾನೆ ಸೇರಿದೆ.

ಅಬಕಾರಿ ಇಲಾಖೆಗೆ ವಾರ್ಷಿಕ 34,500 ಕೋಟಿ ರೂಪಾಯಿ ಟಾರ್ಗೆಟ್ ಅನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಡಿತ್ತು. ಈಗ 2023-24ನೇ ಸಾಲಿನಲ್ಲಿ ಅಬಕಾರಿ ಇಲಾಖೆಯು ಟಾರ್ಗೆಟ್ ರೀಚ್ ಮಾಡಿದೆ. ಕಳೆದ ಏಪ್ರಿಲ್‌ನಿಂದ ಮಾರ್ಚ್‌ವರೆಗೆ ಹೆಚ್ಚುವರಿ 128 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಸಂಗ್ರಹವಾಗಿದೆ.

2023-24ನೇ ಸಾಲಿನಲ್ಲಿ 34,628 ಕೋಟಿ ರೂಪಾಯಿ ಆದಾಯವು ಅಬಕಾರಿ ಇಲಾಖೆಗೆ ಹರಿದುಬಂದಿದೆ. ಕಳೆದ ವರ್ಷ 29,920 ಕೋಟಿ ರೂಪಾಯಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಸಂಗ್ರಹ ಮಾಡಿದ್ದರು. ಕಳೆದ ಒಂದು ವರ್ಷದಲ್ಲಿ ಮೂರು ಬಾರಿ ಮದ್ಯ ದರ ಪರಿಷ್ಕರಣೆ ಮಾಡಲಾಗಿದೆ. ಆದರೂ, ತಲೆಕೆಡಿಸಿಕೊಳ್ಳದೆ ಮದ್ಯ ಪ್ರಿಯರು ಮದ್ಯ ಖರೀದಿ ಮಾಡಿದ್ದಾರೆ.

ಇದನ್ನೂ ಓದಿ: CM Siddaramaiah: ಅಬಕಾರಿ ಪರವಾನಗಿ ನವೀಕರಣಕ್ಕೆ ಕಿರುಕುಳ ನೀಡಬೇಡಿ: ಅಧಿಕಾರಿಗಳಿಗೆ ಸಿಎಂ ಖಡಕ್‌ ಸೂಚನೆ

Continue Reading

ಚಿನ್ನದ ದರ

Gold Rate Today: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌; ಚಿನ್ನದ ದರ ಇಳಿಕೆ

Gold Rate Today: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ (ಜೂನ್‌ 26) ಚಿನ್ನದ ಬೆಲೆ ಇಳಿಕೆಯಾಗಿದೆ. ಶನಿವಾರ ಬೆಲೆ ಇಳಿಕೆಯಾಗಿದ್ದರೆ ಭಾನುವಾರ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಸೋಮವಾರ ಮತ್ತೆ ದರ ಇಳಿಕೆಯಾಗಿತ್ತು. ಮಂಗಳವಾರ ಅದೇ ದರ ಕಾಯ್ದುಕೊಂಡಿದ್ದರೆ ಇಂದು ಮತ್ತೆ ಇಳಿಕೆಯಾಗಿದೆ. ಹಾಗಾದರೆ ಬೆಲೆ ಎಷ್ಟಿದೆ? ಇಲ್ಲಿ ಚೆಕ್‌ ಮಾಡಿ.

VISTARANEWS.COM


on

Gold Rate Today
Koo

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ (ಜೂನ್‌ 26) ಚಿನ್ನದ ಬೆಲೆ ಇಳಿಕೆಯಾಗಿದೆ (Gold Rate Today). ಶನಿವಾರ ಬೆಲೆ ಇಳಿಕೆಯಾಗಿದ್ದರೆ ಭಾನುವಾರ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಸೋಮವಾರ ಮತ್ತೆ ದರ ಇಳಿಕೆಯಾಗಿತ್ತು. ಮಂಗಳವಾರ ಅದೇ ದರ ಕಾಯ್ದುಕೊಂಡಿದ್ದರೆ ಇಂದು ಮತ್ತೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ ₹ 25 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ ₹ 23 ಕಡಿಮೆಯಾಗಿದೆ.

ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,600 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,200 ಇದೆ. 22 ಕ್ಯಾರೆಟ್‌ನ ಎಂಟು ಗ್ರಾಂ ಚಿನ್ನದ ಬೆಲೆ ₹ 52,800. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹ 66,000 ಮತ್ತು ₹ 6,60,000 ದರದಲ್ಲಿ ಖರೀದಿಸಬಹುದು. 24 ಕ್ಯಾರಟ್‌ ಎಂಟು ಗ್ರಾಂ ಚಿನ್ನದ ಬೆಲೆ ₹ 57,600 ಇದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹ 72,000 ಮತ್ತು ₹ 7,20,000 ವೆಚ್ಚವಾಗಲಿದೆ.

ನಗರ22 ಕ್ಯಾರಟ್ (1 ಗ್ರಾಂ)24 ಕ್ಯಾರಟ್ (1 ಗ್ರಾಂ)
ದಿಲ್ಲಿ₹ 6,615 ₹ 7,215
ಮುಂಬೈ₹ 6,600 ₹ 7,200
ಬೆಂಗಳೂರು₹ 6,600₹ 7,200
ಚೆನ್ನೈ₹ 6,660 ₹ 7,266

ಬೆಳ್ಳಿ ಧಾರಣೆ

ಬೆಳ್ಳಿಯ ಬೆಲೆಯೂ ಕೊಂಚ ಇಳಿಮುಖವಾಗಿದೆ. ಬೆಳ್ಳಿ ಒಂದು ಗ್ರಾಂಗೆ ₹ 90.95 ಹಾಗೂ 8 ಗ್ರಾಂಗೆ ₹ 727.60 ಇದೆ. 10 ಗ್ರಾಂಗೆ ₹ 909.50 ಹಾಗೂ 1 ಕಿಲೋಗ್ರಾಂಗೆ ₹ 90,950 ಬೆಲೆ ಬಾಳುತ್ತದೆ.

ಚಿನ್ನದ ದರದ ಮೇಲೆ ಪರಿಣಾಮ ಬೀರುವ ಅಂಶಗಳು

ಬೇಡಿಕೆ ಮತ್ತು ಪೂರೈಕೆ: ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಮತ್ತು ಪೂರೈಕೆಯಿಂದ ಚಿನ್ನದ ದರವನ್ನು ಹೆಚ್ಚಾಗಿ ನಿರ್ಧರಿಸಲಾಗುತ್ತದೆ. ಚಿನ್ನಕ್ಕೆ ಬೇಡಿಕೆ ಹೆಚ್ಚಾದರೆ ದರವೂ ಹೆಚ್ಚಾಗಲಿದೆ. ವ್ಯತಿರಿಕ್ತವಾಗಿ, ಚಿನ್ನದ ಪೂರೈಕೆ ಹೆಚ್ಚಾದರೆ, ದರ ಕಡಿಮೆಯಾಗುತ್ತದೆ.

ಜಾಗತಿಕ ಆರ್ಥಿಕ ಪರಿಸ್ಥಿತಿಗಳು: ಚಿನ್ನದ ದರದ ಮೇಲೆ ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಕೂಡ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಜಾಗತಿಕ ಆರ್ಥಿಕತೆಯು ಕಳಪೆಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಕಾಣಬಹುದು. ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ರಾಜಕೀಯ ಅಸ್ಥಿರತೆ: ರಾಜಕೀಯ ಅಸ್ಥಿರತೆ ಚಿನ್ನದ ದರದ ಮೇಲೂ ಪರಿಣಾಮ ಬೀರಬಹುದು. ಉದಾಹರಣೆಗೆ, ಒಂದು ದೊಡ್ಡ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದರೆ, ಹೂಡಿಕೆದಾರರು ಅನಿಶ್ಚಿತತೆಯ ವಿರುದ್ಧ ಸುರಕ್ಷಿತರಾಗಲು ಚಿನ್ನವನ್ನು ಖರೀದಿಸಬಹುದು, ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ಇದಲ್ಲದೆ, ಭಾರತದಲ್ಲಿನ ಚಿಲ್ಲರೆ ಚಿನ್ನದ ಬೆಲೆಯು ಭಾರತದಲ್ಲಿ ಗ್ರಾಹಕರಿಗೆ ಚಿನ್ನವನ್ನು ಮಾರಾಟ ಮಾಡುವ ಬೆಲೆಯಾಗಿದೆ. ಜಾಗತಿಕ ಚಿನ್ನದ ಬೆಲೆ, ಭಾರತೀಯ ರೂಪಾಯಿ, ಮತ್ತು ಚಿನ್ನದ ಆಭರಣಗಳ ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕ ಮತ್ತು ಸಾಮಗ್ರಿಗಳ ವೆಚ್ಚ ಸೇರಿದಂತೆ ಹಲವಾರು ಅಂಶಗಳಿಂದ ಇದನ್ನು ನಿರ್ಧರಿಸಲಾಗುತ್ತದೆ. ಭಾರತದಲ್ಲಿ ಚಿಲ್ಲರೆ ಚಿನ್ನದ ಬೆಲೆಯು ಸಾಮಾನ್ಯವಾಗಿ ಜಾಗತಿಕ ಚಿನ್ನದ ಬೆಲೆಗಿಂತ ಹೆಚ್ಚಾಗಿರುತ್ತದೆ, ಏಕೆಂದರೆ ಇದು ಆಭರಣ ಮತ್ತು ಇತರ ವೆಚ್ಚ ಒಳಗೊಂಡಿರುತ್ತದೆ.

ಇದನ್ನೂ ಓದಿ: Nita Ambani: ಕಾಶಿಯಲ್ಲಿ ಮದುವೆ ಆಮಂತ್ರಣ ಪೂಜೆ; ಚಾಟ್‌ ಅಂಗಡಿಗೂ ಭೇಟಿ ನೀಡಿದ ನೀತಾ ಅಂಬಾನಿ

Continue Reading

ಬೆಂಗಳೂರು

Tata Motors: ಬಜಾಜ್ ಫೈನಾನ್ಸ್ ಜತೆ ಪಾಲುದಾರಿಕೆ ಮಾಡಿಕೊಂಡ ಟಾಟಾ ಮೋಟಾರ್ಸ್

Tata Motors: ಟಾಟಾ ಮೋಟಾರ್ಸ್, ದೇಶದ ಅತಿದೊಡ್ಡ ಹಣಕಾಸು ಸೇವಾ ಗುಂಪುಗಳಲ್ಲಿ ಒಂದಾದ ಬಜಾಜ್ ಫಿನ್‌ಸರ್ವ್ ಲಿಮಿಟೆಡ್‌ನ ಭಾಗವಾಗಿರುವ ಬಜಾಜ್ ಫೈನಾನ್ಸ್ ಲಿಮಿಟೆಡ್‌ನೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ (ಎಂಓಯು) ಸಹಿ ಹಾಕಿದೆ. ಈ ಮೂಲಕ ಬಜಾಜ್ ಫೈನಾನ್ಸ್ ಸಂಸ್ಥೆ ಟಾಟಾ ಮೋಟಾರ್ಸ್‌ನ ಸಂಪೂರ್ಣ ವಾಣಿಜ್ಯ ವಾಹನ ಉತ್ಪನ್ನಗಳಿಗೆ ಹಣಕಾಸು ವ್ಯವಸ್ಥೆ ಒದಗಿಸುತ್ತದೆ.

VISTARANEWS.COM


on

Tata Motors has partnered with Bajaj Finance
Koo

ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್, ದೇಶದ ಅತಿದೊಡ್ಡ ಹಣಕಾಸು ಸೇವಾ ಗುಂಪುಗಳಲ್ಲಿ ಒಂದಾದ ಬಜಾಜ್ ಫಿನ್‌ಸರ್ವ್ ಲಿಮಿಟೆಡ್‌ನ ಭಾಗವಾಗಿರುವ ಬಜಾಜ್ ಫೈನಾನ್ಸ್ ಲಿಮಿಟೆಡ್‌ನೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ (ಎಂಓಯು) ಸಹಿ ಹಾಕಿದೆ. ಈ ಮೂಲಕ ಬಜಾಜ್ ಫೈನಾನ್ಸ್ ಸಂಸ್ಥೆ ಟಾಟಾ ಮೋಟಾರ್ಸ್‌ನ (Tata Motors) ಸಂಪೂರ್ಣ ವಾಣಿಜ್ಯ ವಾಹನ ಉತ್ಪನ್ನಗಳಿಗೆ ಹಣಕಾಸು ವ್ಯವಸ್ಥೆ ಒದಗಿಸುತ್ತದೆ ಮತ್ತು ಗ್ರಾಹಕರು ಕಂಪನಿಯ ವಿಸ್ತಾರವಾದ ವ್ಯಾಪ್ತಿ, ಸ್ಪರ್ಧಾತ್ಮಕ ಬಡ್ಡಿ ದರಗಳು, ಫ್ಲೆಕ್ಸಿ ಲೋನ್ ಮತ್ತು ಡಿಜಿಟಲ್ ಆಧರಿತ ಸಾಲ ಪ್ರಕ್ರಿಯೆಗಳ ಪ್ರಯೋಜನಗಳನ್ನು ಪಡೆಯುತ್ತಾರೆ.

ಈ ಕುರಿತು ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ ಟ್ರಕ್ಸ್ ವೈಸ್ ಪ್ರೆಸಿಡೆಂಟ್ ಮತ್ತು ಬಿಸಿನೆಸ್ ಹೆಡ್ ರಾಜೇಶ್ ಕೌಲ್ ಮಾತನಾಡಿ, ಗ್ರಾಹಕರ ಸಂತೋಷಕ್ಕಾಗಿ ಉನ್ನತ ದರ್ಜೆಯ ಉತ್ಪನ್ನಗಳನ್ನು ಒದಗಿಸುವ ನಮ್ಮ ದೃಷ್ಟಿಯನ್ನು ಹೊಂದಿರುವ ಕಂಪನಿಯಾದ ಬಜಾಜ್ ಫೈನಾನ್ಸ್ ಜತೆ ಪಾಲುದಾರಿಕೆ ಹೊಂದಲು ನಾವು ಸಂತೋಷ ಪಡುತ್ತೇವೆ. ವಾಣಿಜ್ಯ ವಾಹನಗಳ ಫೈನಾನ್ಸಿಂಗ್‌ ಕ್ಷೇತ್ರದ ಅವರ ಈ ಆರಂಭಿಕ ಹೆಜ್ಜೆಯು ಸಾರಿಗೆ ವಲಯದ ಅಗಾಧ ಸಾಮ್ರಾಜ್ಯವನ್ನು ಅವರದನ್ನಾಗಿ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ನಾವಂದು ಕೊಂಡಿದ್ದೇವೆ.

ಇದನ್ನೂ ಓದಿ: Bengaluru News: ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡ ಉದ್ಘಾಟನೆ ಜೂ.30ಕ್ಕೆ

ಜತೆಗೆ ಈ ಪಾಲುದಾರಿಕೆಯು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಬಜಾಜ್ ಫೈನಾನ್ಸ್‌ನ ದೊಡ್ಡ ನೆಟ್‌ವರ್ಕ್‌ನ ಪ್ರಯೋಜನವನ್ನು ನೀಡುತ್ತದೆ. ಗ್ರಾಹಕರು ಅವಶ್ಯಕತೆಗಳಿಗೆ ಅನುಗುಣವಾಗಿ ಹಣಕಾಸು ಪರಿಹಾರಗಳನ್ನು ಸುಲಭವಾಗಿ ಪಡೆಯಬಹುದಾಗಿದೆ. ನಮ್ಮ ಮೌಲ್ಯಯುತ ಗ್ರಾಹಕರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಬಜಾಜ್ ಫೈನಾನ್ಸ್‌ನ ಉಪ ವ್ಯವಸ್ಥಾಪಕ ನಿರ್ದೇಶಕ ಅನುಪ್ ಸಹಾ ಮಾತನಾಡಿ, ಬಜಾಜ್ ಫೈನಾನ್ಸ್‌ನಲ್ಲಿನ ನಮ್ಮ ವ್ಯವಹಾರದ ನೀತಿಯಲ್ಲಿ ಗ್ರಾಹಕರ ಕೇಂದ್ರಿತತೆ ಬೇರೂರಿದೆ. ನಾವು ಗ್ರಾಹಕರಿಗೆ ಅನುಕೂಲಕರ ಹಣಕಾಸು ಪರಿಹಾರಗಳನ್ನು ಒದಗಿಸುತ್ತೇವೆ. ಆ ಮೂಲಕ ಅವರು ಮಾಲೀಕತ್ವದ ಸಂತೋಷಕರ ಅನುಭವವನ್ನು ಹೊಂದುತ್ತಾರೆ. ಟಾಟಾ ಮೋಟಾರ್ಸ್ ಜತೆಗಿನ ನಮ್ಮ ಪಾಲುದಾರಿಕೆಯು ಈ ಬದ್ಧತೆಗೆ ಪುರಾವೆಯಾಗಿದೆ. ಇಂಡಿಯಾ ಸ್ಟಾಕ್ ಅನ್ನು ಬಳಸಿಕೊಂಡು ನಮ್ಮ ಅತ್ಯುತ್ತಮ- ದರ್ಜೆಯ ವ್ಯವಸ್ಥೆಯ ಮೂಲಕ ಗ್ರಾಹಕರಿಗೆ ವಾಣಿಜ್ಯ ವಾಹನವನ್ನು ಖರೀದಿಸುವ ಪ್ರಕ್ರಿಯೆಯನ್ನು ಸುಲಭ ಮತ್ತು ತೊಂದರೆ- ಮುಕ್ತಗೊಳಿಸುವ ಗುರಿಯನ್ನು ಹೊಂದಿದ್ದೇವೆ. ಪಾಲುದಾರಿಕೆಯು ಹೆಚ್ಚಿನ ವಾಣಿಜ್ಯ ವಾಹನ ಮಾಲೀಕರಿಗೆ ಹಣಕಾಸು ಪರಿಹಾರಗಳನ್ನು ಒದಗಿಸಿ ಸಶಕ್ತಗೊಳಿಸುತ್ತದೆ ಎಂದು ನಮಗೆ ವಿಶ್ವಾಸವಿದೆ ಎಂದು ಹೇಳಿದರು.

ಟಾಟಾ ಮೋಟಾರ್ಸ್ 1-ಟನ್‌ನಿಂದ 55-ಟನ್ ತೂಕದ ಸರಕು ವಾಹನಗಳು ಮತ್ತು 10-ಆಸನಗಳಿಂದ 51-ಆಸನಗಳ ಸಮೂಹ ಚಲನಶೀಲತೆ ಪರಿಹಾರಗಳು ಅಂದರೆ ಪ್ರಯಾಣಿಕರನ್ನು ಕರೆದೊಯ್ಯುವ ವಾಹನಗಳನ್ನು ಒದಗಿಸುತ್ತದೆ. ಸಣ್ಣ ವಾಣಿಜ್ಯ ವಾಹನಗಳು ಮತ್ತು ಪಿಕಪ್‌ಗಳು, ಟ್ರಕ್‌ಗಳು ಮತ್ತು ಬಸ್‌ಗಳನ್ನು ಒದಗಿಸುವ ಮೂಲಕ ಸರಕು ಸಾಗಣೆ ಮತ್ತು ಪ್ರಯಾಣಿಕರ ಪ್ರಯಾಣ ವಿಭಾಗದ ಅಗತ್ಯತೆಗಳನ್ನು ಪೂರೈಸುತ್ತದೆ. ಕಂಪನಿಯು ತನ್ನ 2500+ ಟಚ್‌ಪಾಯಿಂಟ್‌ಗಳ ವ್ಯಾಪಕ ನೆಟ್‌ವರ್ಕ್ ಮೂಲಕ ಅತ್ಯುತ್ತಮ ಗುಣಮಟ್ಟ ಮತ್ತು ಸರ್ವೀಸ್ ಅನ್ನು ಒದಗಿಸುತ್ತದೆ. ಈ ಟಚ್ ಪಾಯಿಂಟ್‌ಗಳು ತರಬೇತಿ ಪಡೆದ ಪರಿಣಿತರಿಂದ ನಿರ್ವಹಿಸಲ್ಪಡುತ್ತದೆ ಮತ್ತು ಅಲ್ಲಿ ಟಾಟಾದ ಅಸಲಿ ಭಾಗಗಳು ಲಭ್ಯವಾಗುತ್ತವೆ.

ಇದನ್ನೂ ಓದಿ: Kannada New Movie: ಅದ್ಧೂರಿಯಾಗಿ ನಡೆದ ’ದ ಪ್ರಸೆಂಟ್’ ಚಿತ್ರದ ಮುಹೂರ್ತ

ಬಜಾಜ್ ಫೈನಾನ್ಸ್ ಭಾರತದಲ್ಲಿನ ಅತ್ಯಂತ ವೈವಿಧ್ಯಮಯ ಎನ್‌ಬಿಎಫ್‌ಸಿಗಳಲ್ಲಿ ಒಂದಾಗಿದೆ. ಇದು ಸಾಲ, ಠೇವಣಿ (ಡಿಪಾಸಿಟ್) ಮತ್ತು ಪಾವತಿ ವಿಭಾಗಗಳಲ್ಲಿ 83.64 ಮಿಲಿಯನ್ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. ಮಾರ್ಚ್ 31, 2024ರ ಪ್ರಕಾರ ಕಂಪನಿಯ ಅಸೆಟ್ ಅಂಡರ್ ಮ್ಯಾನೇಜ್ಮೆಂಟ್ (ಎಯುಎಂ) ₹3,30,615 ಕೋಟಿಗಳಷ್ಟಿದೆ.

Continue Reading

ಪ್ರಮುಖ ಸುದ್ದಿ

Share Market : ಷೇರು ಮಾರುಕಟ್ಟೆಯಲ್ಲಿ ನೂತನ ದಾಖಲೆ; ಮೊದಲ ಬಾರಿಗೆ 78,000 ಮಟ್ಟವನ್ನು ದಾಟಿದ ಸೆನ್ಸೆಕ್ಸ್

share market : 30 ಕಂಪನಿಗಳ ಷೇರುಗಳ ಬಿಎಸ್ಇ ಸೆನ್ಸೆಕ್ಸ್ 712.44 ಪಾಯಿಂಟ್ಸ್ ಅಥವಾ ಶೇಕಡಾ 0.92 ರಷ್ಟು ಏರಿಕೆ ಕಂಡು, 78,053.52ರಲ್ಲಿತ್ತು . ದಿನದ ವಹಿವಾಟಿನ ಬೆಂಚ್ ಮಾರ್ಕ್ 823.63 ಪಾಯಿಂಟ್ ಅಥವಾ ಶೇಕಡಾ 1 ರಷ್ಟು ಏರಿಕೆಯಾಗಿ 78,164.71 ಅಂಕಗಳಿಗೆ ತಲುಪಿದೆ.

VISTARANEWS.COM


on

share market
Koo

ಬೆಂಗಳೂರು ; ಏಷ್ಯಾದ ಷೇರು ಮಾರುಕಟ್ಟೆಗಳಲ್ಲಿನ (Share Market ) ಸದೃಢ ಪ್ರವೃತ್ತಿಯ ನಡುವೆ ಬ್ಲೂ-ಚಿಪ್ ಬ್ಯಾಂಕ್ ಷೇರುಗಳು ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳಿಗೆ ಮಂಗಳವಾರ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಚ್ ಮಾರ್ಕ್ ಸೆನ್ಸೆಕ್ಸ್ ಮೊದಲ ಬಾರಿಗೆ ಐತಿಹಾಸಿಕ 78,000 ಮಟ್ಟವನ್ನು ದಾಟಿದರೆ, ನಿಫ್ಟಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತ್ತು.

30 ಕಂಪನಿಗಳ ಷೇರುಗಳ ಬಿಎಸ್ಇ ಸೆನ್ಸೆಕ್ಸ್ 712.44 ಪಾಯಿಂಟ್ಸ್ ಅಥವಾ ಶೇಕಡಾ 0.92 ರಷ್ಟು ಏರಿಕೆ ಕಂಡು, 78,053.52ರಲ್ಲಿತ್ತು . ದಿನದ ವಹಿವಾಟಿನ ಬೆಂಚ್ ಮಾರ್ಕ್ 823.63 ಪಾಯಿಂಟ್ ಅಥವಾ ಶೇಕಡಾ 1 ರಷ್ಟು ಏರಿಕೆಯಾಗಿ 78,164.71 ಅಂಕಗಳಿಗೆ ತಲುಪಿದೆ. ನಿಫ್ಟಿ 183.45 ಪಾಯಿಂಟ್ ಅಥವಾ ಶೇಕಡಾ 0.78 ರಷ್ಟು ಏರಿಕೆ ಕಂಡು 23,721.30 ಕ್ಕೆ ತಲುಪಿದೆ. ದಿನದ ವಹಿವಾಟಿನಲ್ಲಿ ಇದು 216.3 ಪಾಯಿಂಟ್ ಅಥವಾ ಶೇಕಡಾ 0.91 ರಷ್ಟು ಏರಿಕೆಯಾಗಿ ಹೊಸ ಸಾರ್ವಕಾಲಿಕ ಗರಿಷ್ಠ 23,754.15 ಅಂಕಗಳಿಗೆ ತಲುಪಿದೆ.

ಇದನ್ನೂ ಓದಿ: Karnataka Weather: ನಾಳೆ ಶಿವಮೊಗ್ಗ, ಚಿಕ್ಕಮಗಳೂರು ಸೇರಿ ವಿವಿಧೆಡೆ ಭಾರಿ ಮಳೆ; ಕರಾವಳಿಯಲ್ಲಿ ಮೀನುಗಾರರಿಗೆ ಎಚ್ಚರಿಕೆ!

ಸೆನ್ಸೆಕ್ಸ್ ನ 30 ಕಂಪನಿಗಳಲ್ಲಿ ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್, ಟೆಕ್ ಮಹೀಂದ್ರಾ, ಲಾರ್ಸನ್ ಆ್ಯಂಡ್​ ಟರ್ಬೋ, ಬಜಾಜ್ ಫಿನ್ ಸರ್ವ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಇನ್ಫೋಸಿಸ್ ಅತಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿವೆ. ಪವರ್ ಗ್ರಿಡ್, ಏಷ್ಯನ್ ಪೇಂಟ್ಸ್, ಟಾಟಾ ಸ್ಟೀಲ್, ನೆಸ್ಲೆ, ಮಾರುತಿ ಮತ್ತು ಜೆಎಸ್​​ಡಬ್ಲ್ಯೂ ಸ್ಟೀಲ್ ನಷ್ಟ ಅನುಭವಿಸಿದವು.

ಏಷ್ಯಾದ ಮಾರುಕಟ್ಟೆಗಳಾದ ಸಿಯೋಲ್, ಟೋಕಿಯೊ ಮತ್ತು ಹಾಂಗ್ ಕಾಂಗ್ ನಲ್ಲಿಯೂ ಏರಿಕೆ ಕಂಡು ಬಂದಿದ್ದರೆ ಶಾಂಘೈ ಮಾರಕಟ್ಟೆಯಲ್ಲಿ ಕಡಿಮೆ ವಹಿವಾಟು ನಡೆಯಿತು. ಇವೆಲ್ಲದರ ನಡುವೆ ಯುರೋಪಿಯನ್ ಮಾರುಕಟ್ಟೆಗಳು ನಕಾರಾತ್ಮಕ ವಹಿವಾಟು ನಡೆಸಿವೆ. ಇನ್ನು ಯುಎಸ್ ಮಾರುಕಟ್ಟೆಗಳು ಮಿಶ್ರ ಫಲ ಉಂಡವು.

ಮಾರ್ಚ್ ತ್ರೈಮಾಸಿಕದಲ್ಲಿ ಭಾರತವು 5.7 ಬಿಲಿಯನ್ ಡಾಲರ್ ಅಥವಾ ಜಿಡಿಪಿಯ ಶೇಕಡಾ 0.6 ರಷ್ಟು ಆಮದು ಮತ್ತು ರಪ್ತು ವಹಿವಾಟಿನಲ್ಲಿ (ಚಾಲ್ತಿ ಖಾತೆ) ಮಿಗತೆಯಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೋಮವಾರ ತಿಳಿಸಿದೆ. ಹತ್ತು ತ್ರೈಮಾಸಿಕಗಳಲ್ಲಿ ಇದೇ ಮೊದಲ ಬಾರಿಗೆ ಈ ಸರ್​​ಪ್ಲಸ್​ ಮೋಡ್​ಗೆ ಬದಲಾಗಿದೆ ಎಂದು ಆರ್​ಬಿಐ ಹೇಳಿದೆ.

“ಮಾರುಕಟ್ಟೆ ದೃಷ್ಟಿಕೋನದಿಂದ ಸಕಾರಾತ್ಮಕ ಸುದ್ದಿಯೆಂದರೆ ಚಾಲ್ತಿ ಖಾತೆಯು 2024 ರ ನಾಲ್ಕನೇ ತ್ರೈಮಾಸಿಕದಲ್ಲಿ ಸರ್​​ಪ್ಲಸ್​ ಆಗಿದೆ. ಇದು ರೂಪಾಯಿ ಮೇಲಿನ ಒತ್ತಡ ಕಡಿಮೆ ಮಾಡಲಿದೆ. ಮತ್ತು ಫೆಡ್ ದರ ಕಡಿತದ ಬಗ್ಗೆ ಸ್ಪಷ್ಟತೆ ಇದ್ದಾಗ ಎಫ್ಐಐ (ವಿದೇಶಿ ಸಾಂಸ್ಥಿಕ ಹೂಡಿಕೆದಾರರು ) ಆಸಕ್ತಿಗೆ ದಾರಿ ಮಾಡಿಕೊಡುತ್ತದೆ “ಎಂದು ಮುಖ್ಯ ಹೂಡಿಕೆ ತಂತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಂಚ್​ಮಾರ್ಕ್ ದರವು 0.44 ರಷ್ಟು ಇಳಿದು ಬ್ಯಾರೆಲ್​​ಗೆ 85.63 ಡಾಲರ್​ಗೆ ತಲುಪಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಸೋಮವಾರ 653.97 ಕೋಟಿ ರೂ.ಗಳ ಈಕ್ವಿಟಿಗಳನ್ನು ಮಾರಾಟ ಮಾಡಿದ್ದಾರೆ ಎಂದು ಷೇರು ವಿನಿಮಯ ದಾಖಲೆಗಳು ತಿಳಿಸಿವೆ.

ಬಿಎಸ್ಇ ಬೆಂಚ್ ಮಾರ್ಕ್ ಸೋಮವಾರ 131.18 ಪಾಯಿಂಟ್ ಅಥವಾ ಶೇಕಡಾ 0.17 ರಷ್ಟು ಏರಿಕೆ ಕಂಡು 77,341.08 ಕ್ಕೆ ತಲುಪಿತ್ತು. ನಿಫ್ಟಿ 36.75 ಪಾಯಿಂಟ್ ಅಥವಾ ಶೇಕಡಾ 0.16 ರಷ್ಟು ಏರಿಕೆ ಕಂಡು 23,537.85 ಕ್ಕೆ ತಲುಪಿತ್ತು.

Continue Reading
Advertisement
Viral Video
Latest19 seconds ago

Viral Video: ಮುಂದಿನ ಐದು ಸಾಲಿನಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ! ಇದು ಸ್ವಾಮೀಜಿಯೊಬ್ಬರ ಕಂಡೀಷನ್‌!

AFG vs SA Semi Final
ಕ್ರೀಡೆ8 mins ago

AFG vs SA Semi Final: ಚೊಚ್ಚಲ ಫೈನಲ್​ ನಿರೀಕ್ಷೆಯಲ್ಲಿ ಆಫ್ಘನ್​-ದಕ್ಷಿಣ ಆಫ್ರಿಕಾ; ಯಾರಿಗೆ ಒಲಿಯಲಿದೆ ಗೆಲುವಿನ ಲಕ್?​

Development of Gaanagapura kshethra on Pandharpur, Thulajapur model says DC Fauzia Tarannum
ಕಲಬುರಗಿ14 mins ago

Kalaburagi News: ಪಂಢರಪುರ, ತುಳಜಾಪುರ ಮಾದರಿಯಲ್ಲಿ ಗಾಣಗಾಪುರ ಕ್ಷೇತ್ರ ಅಭಿವೃದ್ಧಿ

CM Siddaramaiah
ಪ್ರಮುಖ ಸುದ್ದಿ14 mins ago

CM Siddaramaiah: ಗಣಿ ಪರಿಸರ ಪುನಶ್ಚೇತನ ನಿಗಮದ ಸಭೆ; ಅಧಿಕಾರಿಗಳ ವಿಳಂಬ ಧೋರಣೆಗೆ ಸಿಎಂ ಗರಂ

Job Alert
ಉದ್ಯೋಗ17 mins ago

Job Alert: ಗ್ರಾಮೀಣ ಬ್ಯಾಂಕ್‌ಗಳಲ್ಲಿ 586 ಹುದ್ದೆ; ಗಮನಿಸಿ-ಅರ್ಜಿ ಸಲ್ಲಿಸಲು ನಾಳೆಯೇ ಅಂತಿಮ ದಿನ

Parliament Sessions
ದೇಶ26 mins ago

Parliament Sessions: ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಸದನ; ಶೇಕ್‌ ಹ್ಯಾಂಡ್‌ ಮಾಡಿದ ಪ್ರಧಾನಿ ಮೋದಿ, ರಾಹುಲ್‌

Pavithra Gowda lipstick case Notice to PSI
ಕ್ರೈಂ42 mins ago

Pavithra Gowda: ಪವಿತ್ರಾಗೆ ಲಿಪ್‌ಸ್ಟಿಕ್‌ ಹಚ್ಚಲು ಅವಕಾಶ ಮಾಡಿಕೊಟ್ಟಿದ್ದ ಮಹಿಳಾ `PSI’ಗೆ ನೋಟಿಸ್‌!

PGCET 2024
ಕರ್ನಾಟಕ53 mins ago

PGCET 2024: ಪಿಜಿಸಿಇಟಿ ಪರೀಕ್ಷೆ ಮುಂದೂಡಿಕೆ; ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟ

Liquor Price karnataka
ಕರ್ನಾಟಕ54 mins ago

Liquor Price Karnataka: ಶ್ರೀಮಂತರಿಗೆ ಮತ್ತು, ಬಡವರಿಗೆ ಕುತ್ತು! ಪ್ರೀಮಿಯಂ ಮದ್ಯ ದರ ಇಳಿಕೆ, ಬಡವರ ಎಣ್ಣೆ ರೇಟ್‌ ಏರಿಕೆ?

Lok Sabha Speaker
ದೇಶ1 hour ago

Lok Sabha Speaker: ಎರಡನೇ ಬಾರಿ ಸ್ಪೀಕರ್‌ ಆದ ಓಂ ಬಿರ್ಲಾಗೆ ಮೋದಿ, ರಾಹುಲ್‌ ಅಭಿನಂದನೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌